ಎಟಿಎಂ ಕಾರ್ಡ್ ಹೊಂದಿದವರು ಓದಲೇಬೇಕಾದ ಸುದ್ದಿ
ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಡೇಟಾ ಸೋರಿಕೆ ಕಳೆದ ವರ್ಷ ಸಂಭವಿಸಿತ್ತು. ದೇಶದ 19 ಬ್ಯಾಂಕ್ ಗಳ ಸುಮಾರು 32 ಲಕ್ಷ ಡೆಬಿಟ್ ಕಾರ್ಡ್ ಗಳನ್ನು ಹ್ಯಾಕ್ ಮಾಡಲಾಗಿತ್ತು. ಎಸ್ ಬಿ ಐ, ಆ್ಯಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಐಸಿಐಸಿಐ ಹೀಗೆ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳ ಗ್ರಾಹಕರ ಡೆಬಿಟ್ ಕಾರ್ಡ್ ಗಳನ್ನೂ ಹ್ಯಾಕ್ ಮಾಡಲಾಗಿತ್ತು.
ಹ್ಯಾಕ್ ಆಗಿರೋ ಎಟಿಎಂ ಮಷಿನ್ ಗಳಲ್ಲಿ ಡೆಬಿಟ್ ಕಾರ್ಡ್ ಬಳಸಿದ್ರಿಂದ ಈ ಅಕ್ರಮದ ಜಾಲ ಇನ್ನಷ್ಟು ವಿಸ್ತರಿಸಿತ್ತು. ಎಟಿಎಂಗಳಲ್ಲಿ ಗ್ರಾಹಕರಿಗೆ ವಂಚಿಸಲು ಹ್ಯಾಕರ್ ಗಳು ಹತ್ತಾರು ಮಾರ್ಗಗಳನ್ನು ಅನುಸರಿಸ್ತಾರೆ. ಕ್ರಿಮಿನಲ್ ಗಳು ಎಟಿಎಂ ಹ್ಯಾಕ್ ಮಾಡಲು ಬಳಸುವ 6 ಸಂಚುಗಳು ಯಾವುದು ಅನ್ನೋದನ್ನು ನೋಡೋಣ.
ಕಾರ್ಡ್ ಸ್ಕಿಮ್ಮರ್ :
ಎಟಿಎಂ ಕಾರ್ಡ್ ಮೇಲಿರುವ ಮ್ಯಾಗ್ನೆಟಿಕ್ ಸ್ಟ್ರಿಪ್ ಮೇಲಿರುವ ಮಾಹಿತಿಯನ್ನು ಕಾಪಿ ಮಾಡಲು, ಕದಿಯಲು ಈ ಡಿವೈಸ್ ಗಳನ್ನು ಕಾರ್ಡ್ ರೀಡರ್ ಸ್ಲಾಟ್ ನಲ್ಲಿ ಅಳವಡಿಸಲಾಗುತ್ತದೆ.
ದೊಡ್ಡ ಕಾರ್ಡ್ ಸ್ಲಾಟ್ :
ಕಾರ್ಡ್ ಸ್ಲಾಟ್ ದೊಡ್ಡದಾಗಿದ್ರೆ, ಅಥವಾ ಕೊಂಚ ಬದಲಾಗಿದ್ರೆ ಅಸಲಿ ಸ್ಲಾಟ್ ನ ಮೇಲ್ಭಾಗದಲ್ಲಿ ಹೆಚ್ಚುವರಿ ಕಾರ್ಡ್ ರೀಡರ್ ಸ್ಲಾಟ್ ಒಂದನ್ನು ಅಳವಡಿಸಲಾಗಿದೆ ಎಂದರ್ಥ.
ಸಡಿಲ ಸ್ಲಾಟ್ :
ಸ್ಲಾಟ್ ಸಡಿಲವಾಗಿದ್ರೆ ಅದು ಕೂಡ ಎಟಿಎಂ ಹ್ಯಾಕ್ ನ ಸೂಚನೆ. ಮಶಿನ್ ನಲ್ಲಿ ಕಾರ್ಡ್ ಹ್ಯಾಕ್ ಮಾಡಲೆಂದೇ ಪ್ಲಾಸ್ಟಿಕ್ ಡಿವೈಸ್ ಒಂದನ್ನು ಹಾಕಲಾಗಿರುತ್ತದೆ. ಅದು ನಿಮ್ಮ ಕಾರ್ಡನ್ನು ಒಳಕ್ಕೆ ಸೆಳೆದುಕೊಳ್ಳುತ್ತದೆ. ಕಾರ್ಡ್ ಸ್ಟ್ರಕ್ ಆಗಿದೆ ಎಂದೇ ಗ್ರಾಹಕರು ಭಾವಿಸುತ್ತಾರೆ.
ಫಾಲ್ಸ್ ಫ್ರಂಟ್ :
ನಿಮ್ಮ ಎಟಿಎಂ ಕಾರ್ಡ್ ಪಿನ್ ನಂಬರ್ ಹಾಗೂ ಹಣವನ್ನು ನುಂಗಿಹಾಕಲು ಮಷಿನ್ ನ ಮೇಲ್ಭಾಗದಲ್ಲಿ ಹ್ಯಾಕಿಂಗ್ ಡಿವೈಸ್ ಅಳವಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಅಸಲಿ ಮಷಿನ್ ಅನ್ನು ಕವರ್ ಮಾಡುವುದರಿಂದ ಹ್ಯಾಕರ್ ಗಳ ಕೃತ್ಯದ ಬಗ್ಗೆ ಸುಳಿವೇ ಸಿಗುವುದಿಲ್ಲ.
ನಕಲಿ ಕೀಪ್ಯಾಡ್ :
ಅಸಲಿ ಕೀಪ್ಯಾಡ್ ನ ಮೇಲ್ಭಾಗದಲ್ಲಿ ನಕಲಿ ಕೀಪ್ಯಾಡ್ ಅಳವಡಿಸಲಾಗುತ್ತದೆ. ಸ್ಪಂಜನ್ನು ಮುಟ್ಟಿದ ಅನುಭವವಾದ್ರೆ ಕೀಪ್ಯಾಡ್ ಸಡಿಲವಾಗಿದ್ರೆ ನಿಮ್ಮ ಡೆಬಿಟ್ ಕಾರ್ಡ್ ನ ಪಿನ್ ನಂಬರ್ ಹಾಕಬೇಡಿ.
ರಹಸ್ಯ ಕ್ಯಾಮರಾ :
ಅತ್ಯಂತ ಚಿಕ್ಕದಾದ ರಹಸ್ಯ ಕ್ಯಾಮರಾವನ್ನು ಎಟಿಎಂ ಮಷಿನ್ ನಲ್ಲಿ ಹ್ಯಾಕರ್ ಗಳು ಅಳವಡಿಸಿರುತ್ತಾರೆ. ಅದು ನಿಮ್ಮ ಪಿನ್ ನಂಬರ್ ಅನ್ನು ಸೆರೆಹಿಡಿಯುತ್ತದೆ. ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಚ್ಚರದಿಂದಿದ್ರೆ ಹ್ಯಾಕರ್ ಗಳಿಂದ ನೀವು ಪಾರಾಗಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ