ಈಜಿಪ್ಟ್ ಚರ್ಚ್ ನಲ್ಲಿ ಬಾಂಬ್ ಸ್ಪೋಟ, ಸಾವಿನ ಸಂಖ್ಯೆ 21ಕ್ಕೆ ಏರಿಕೆ
ಕೈರೊ, ಏಪ್ರಿಲ್ 9: ಈಜಿಪ್ಟ್ ನ ತಂಟ ನಗರದ ಕಾಪ್ಟಿಕ್ ಚರ್ಚ್ ನಲ್ಲಿ ಭೀಕರ ಬಾಂಬ್ ಸ್ಪೋಟಿಸಿದ್ದು ಸಾವಿಗೀಡಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಈಜಿಪ್ಟ್ ನ ರಾಜಧಾನಿ ಕೈರೋದಿಂದ ಉತ್ತರಕ್ಕಿರುವ ನೈಲ್ ನದಿ ತಟದ ತಂಟಾದಲ್ಲಿ ಈ ಬಾಂಬ್ ಸ್ಪೋಟ ಸಂಭವಿಸಿದೆ. 50ಕ್ಕೂ ಹೆಚ್ಚು ಜನ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕ್ರಿಸ್ತ ಜೆರುಸಲೆಂಗೆ ಕಾಲಿಟ್ಟ ದಿನವನ್ನು ಸಂಭ್ರಮಿಸಲು 'ಪಾಮ್ ಡೇ' ಹೆಸರಿನಲ್ಲಿ ಕ್ರಿಶ್ಚಿಯನ್ ಸಮುದಾಯದವರು ಸೈಂಟ್ ಜಾರ್ಜ್ ಚರ್ಚ್ ನಲ್ಲಿ ಸೇರಿದ್ದರು. ಈ ವೇಳೆ ಬಾಂಬ್ ಸ್ಪೋಟಿಸಿದೆ.ಈಜಿಪ್ಟ್ ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ನಿರಂತರ ದಾಳಿಗಳು ನಡೆಯುತ್ತಿದ್ದು ಅದರ ಮುಂದುವರಿದ ದಾಳಿ ಇದಾಗಿದೆ.
ಮುಂದಿನ ವಾರ ಈಜಿಪ್ಟ್ ಗೆ ಪೋಪ್ ಫ್ರಾನ್ಸಿಸ್ ಭೇಟಿ ನೀಡಲಿದ್ದು ಭೇಟಿಗೂ ಮೊದಲು ಈ ದಾಳಿ ನಡೆದಿದೆ.
ಕಳೆದ ಡಿಸೆಂಬರಿನಲ್ಲಿ ಕೈರೋದ ಕಾಪ್ಟಿಕ್ ಕ್ಯಾಥೆಡ್ರಲ್ ಚರ್ಚಿನಲ್ಲಿ ನಡೆದ ಸ್ಪೋಟದಲ್ಲಿ 25 ಜನ ಸಾವನ್ನಪ್ಪಿದ್ದು 49 ಜನ ಗಾಯಗೊಂಡಿದ್ದನ್ನು ಸ್ಮರಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ