ಅರುಣಾಚಲದ ಆರು ಪ್ರದೇಶಗಳಿಗೆ ಹೆಸರಿಟ್ಟ ಚೀನಾ
ಬೀಜಿಂಗ್ :
ಚೀನಾವು ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಅಧಿಕೃತವಾಗಿ ಹೆಸರಿಟ್ಟಿದೆ. ದಲಾಯಿ ಲಾಮಾ ಇತ್ತೀಚೆಗೆ ಅರುಣಾಚಲ ಭೇಟಿಗೆ ಚೀನಾವು ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತೀಕಾರವೆಂಬಂತೆ ಅಲ್ಲಿನ ಪ್ರದೇಶಗಳಿಗೆ ಹೆಸರಿಡುವ ಕ್ರಮಕ್ಕೆ ಮುಂದಾಗಿದೆ.
ಭಾರತದ ಅರುಣಾಚಲ ಪ್ರದೇಶವನ್ನು ಚೀನಾವು ದಕ್ಷಿಣ ಟಿಬೇಟ್ ಎಂದು ಹೇಳುತ್ತಾ ಬಂದಿದೆ. ಹಾಗಾಗಿ ಆರು ಸ್ಥಳಗಳಿಗೆ ಚೈನೀಸ್, ಟಿಬೆಟಿಯನ್ ಹಿನ್ನಲೆಯಲ್ಲಿ ರೋಮನ್ ಅಕ್ಷರಗಳನ್ನು ಒಳಗೊಂಡು ಹೆಸರಿಟ್ಟಿರುವುದಾಗಿ ಚೀನಾವು ಏ.14 ರಂದು ಪ್ರಕಟಿಸಿತ್ತು.
ಭಾರತ ಮತ್ತು ಚೀನಾದ ನಡುವೆ 3.488 ಕಿ.ಮೀ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದ ವಿವಾದವಿತ್ತು, 1962 ರಯುದ್ಧ ವೇಳೆ ಅಕ್ಸೈಚಿನ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದಾಗಿ ಭಾರತ ವಾದಿಸುತ್ತಿದೆ.
ಈ ವಿವಾದ ಇತ್ಯಾರ್ಥಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಪ್ರತಿನಿಧಿಗಳು 19 ಸುತ್ತಿನ ಮಾತುಕತೆ ನಡೆಸಿದ್ದಾರೆ.
ದಲಾಯಿ ಲಾಮಾ ಅವರ ಭಾರತ ಭೇಟಿ ಹಿನ್ನಲೆಯಲ್ಲಿ ಚೀನಾವು, ತನ್ನ ಪ್ರಾದೇಶಿಕ ಸಾರ್ವಭೌಮತೆ ಮತ್ತು ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ