ಬುಧವಾರ, ಏಪ್ರಿಲ್ 26, 2017

'ಕುಸುಮಾಗ್ರಜ' ಪ್ರಶಸ್ತಿಗೆ ಶಿವಪ್ರಕಾಶ ಆಯ್ಕೆ.

'ಕುಸುಮಾಗ್ರಜ' ಪ್ರಶಸ್ತಿಗೆ ಶಿವಪ್ರಕಾಶ್‌ ಆಯ್ಕೆ

ನವದೆಹಲಿ:  ಪ್ರಸಕ್ತ ಸಾಲಿನ (2017-18) ಪ್ರತಿಷ್ಠಿತ ‘ಕುಸುಮಾಗ್ರಜ ರಾಷ್ಟ್ರೀಯ ಭಾಷಾ ಸಾಹಿತ್ಯ ಪುರಸ್ಕಾರ’ಕ್ಕೆ ಕನ್ನಡದ ಹಿರಿಯ ಕವಿ- ನಾಟಕಕಾರ-  ವಿಮರ್ಶಕ ಪ್ರೊ. ಎಚ್.ಎಸ್.ಶಿವಪ್ರಕಾಶ್ ಆಯ್ಕೆಯಾಗಿದ್ದಾರೆ.

‘ಕುಸುಮಾಗ್ರಜ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಮರಾಠಿ ಲೇಖಕ ದಿವಂಗತ ವಿಷ್ಣು ವಾಮನ ಶಿರ್ವಾಡ್ಕರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಮರಾಠಿಯೇತರ ಭಾರತೀಯ ಭಾಷಾ ಬರಹಗಾರರಿಗೆ ನೀಡಲಾಗುತ್ತದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ಸಮ್ಮಾನ ಚಿಹ್ನೆ- ಸನ್ಮಾನ ಪತ್ರವನ್ನು ಒಳಗೊಂಡ ಈ ಪ್ರಶಸ್ತಿಯನ್ನು ಮುಂಬರುವ ಮೇ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ