ಜಮೈಕಾದ 117 ವರ್ಷದ ವೃದ್ಧೆ ಜಗತ್ತಿನ ಅತಿ ಹಿರಿಯ ವ್ಯಕ್ತಿ
ಕಿಂಗ್ಸ್‌ಟನ್: ಜಮೈಕಾದ ವಯಲೆಟ್ ಬ್ರೌನ್ ಜಗತ್ತಿನ ಅತಿ ಹಿರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 1899ರ ನ.29ನಲ್ಲಿ ಜನಿಸಿದ ಇವರಿಗೆ ಈಗ 117 ವರ್ಷ. ಈವರೆಗೆ ಜಗತ್ತಿನ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಇಟಲಿಯ ಎಮ್ಮಾ ಮೊರಾನೊ ಇತ್ತೀಚೆಗಷ್ಟೇ ನಿಧನರಾದರು. ಬಳಿಕ ವಯಲೆಟ್‌ರನ್ನು ಜನ್ಮ ದಿನಾಂಕದ ದಾಖಲೆಗಳ ಆಧಾರದಲ್ಲಿ ಅವರನ್ನು ಹಿರಿಯ ವ್ಯಕ್ತಿ ಎಂದು ಆರಿಸಲಾಗಿದೆ. ಕಳೆದ ತಿಂಗಳಷ್ಟೇ ಇವರು 117ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಪಶ್ವಿಮ ಜಮೈಕಾದಲ್ಲಿ ನೆಲೆಸಿರುವ ವಯಲೆಟ್ ತಮ್ಮ ಜೀವನವೆಲ್ಲಾ ಕಬ್ಬಿನ ಗದ್ದೆಯಲ್ಲಿ ದುಡಿಯುತ್ತಾ ಕಳೆದಿದ್ದಾರೆ. ಈ ಮುಪ್ಪಿನಲ್ಲೂ ಅವರು ನಡೆದಾಡುವ, ಹೇಳಿದ್ದನೆಲ್ಲಾ ಸರಿಯಾಗಿ ಗ್ರಹಿಸುವ, ಸ್ಪಷ್ಟವಾಗಿ ಮಾತನಾಡುವ ಶಕ್ತಿ ಹೊಂದಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ