ಈಜಿಪ್ಟ್'ನಲ್ಲಿ 3,700 ವರ್ಷಗಳ ಪ್ರಾಚೀನ ಪಿರಮಿಡ್ ಪತ್ತೆ..!
ಕೈರೋ, ಏ.7- ಅನೇಕ ರಹಸ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈಜಿಪ್ಟ್ ನಲ್ಲಿ ಸುಮಾರು 3,700 ವರ್ಷಗಳಷ್ಟು ಪ್ರಾಚೀನ ಪಿರಮಿಡ್‍ನ ಅವಶೇಷಗಳು ಪತ್ತೆಯಾಗಿವೆ. ಈಜಿಪ್ಟ್‍ನ ನೈಕ್ರೊಪೊಲಿಸ್‍ನಲ್ಲಿ ಉತ್ಖನನ ನಡೆಸಿದ ತಂಡ ಇದನ್ನು ಪತ್ತೆ ಮಾಡಿದೆ ಎಂದು ಪ್ರಾಚ್ಯವಸ್ತು ಅಧಿಕಾರಿಗಳು ತಿಳಿಸಿದ್ದಾರೆ. 13ನೇ ರಾಜವಂಶಕ್ಕೆ ಸೇರಿದ ಪಿರಮಿಡ್ ಇದಾಗಿದೆ ಎಂದು ಅಂದಾಜು ಮಾಡಲಾಗಿದೆ. ನೈಕ್ರೋಪೊಲಿಸ್‍ನಲ್ಲಿರುವ ಸ್ಲೈಫರ್ ದೊರೆಯ ಪಿರಮಿಡ್ ಬಳಿ ಇದರ ಒಳಭಾಗದ ಆವಶೇಷಗಳು ಪತ್ತೆಯಾಗಿವೆ.
ಆಗಿನ ಚಕ್ರವರ್ತಿಗಳು ಮತ್ತು ಅವರ ವಂಶಸ್ಥರ ಜೀವನ ಶೈಲಿ, ಅವರು ಬಳಸುತ್ತಿದ್ದ ಪ್ರಾಚೀನ ವಸ್ತುಗಳು ಮೊದಲಾದ ಸಂಗತಿಗಳ ಮೇಲೆ ಇದು ಬೆಳಕು ಚೆಲ್ಲಲಿದೆ ಎಂದು ಈಜಿಪ್ಟ್‍ನ ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಮಹ್ಮೂದ್ ಅಫಿಫಿ ತಿಳಿಸಿದ್ದಾರೆ.
ಈಜಿಪ್ಟ್‍ನ ಅರಮನೆಯ ಮಂತ್ರಿಗಳು, ಸಭಾಸದಸ್ಯರು ಮತ್ತು ಉನ್ನತಾಧಿಕಾರಿಗಳ ಶವ ಸಂಸ್ಕಾರ ನಡೆಸುವ ಸ್ಥಳವನ್ನು ನೈಕ್ರೋ ಪೊಲಿಸ್ ಎನ್ನುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ