ಎಸ್ಎಎಸ್ಇಸಿ ಗೆ ಮಾಯನ್ಮಾರ್ ಹೊಸ ಸೇರ್ಪಡೆ: ಅರುಣ್ ಜೇಟ್ಲಿಯಿಂದ ಸ್ವಾಗತ
ನವದೆಹಲಿ: ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರ ಸಂಘಟನೆ(ಎಸ್ಎಎಸ್ಇಸಿ)ಗೆ ಮಾಯನ್ಮಾರ್ ಹೊಸ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸ ಸದಸ್ಯ ರಾಷ್ಟ್ರವನ್ನು ಸ್ವಾಗತಿಸಿದ್ದಾರೆ.
ಎಸ್ಎಎಸ್ಇಸಿ ರಾಷ್ಟ್ರಗಳ ಹಣಕಾಸು ಸಚಿವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಜೇಟ್ಲಿ, ಮಾಯನ್ಮಾರ್ ಸೇರ್ಪಡೆ ದಕ್ಷಿಣ ಏಷ್ಯಾವನ್ನು ಪೂರ್ವ ಏಷ್ಯಾ ಹಾಗೂ ಆಗ್ನೇಯ ಏಷ್ಯಾದೊಂದಿಗೆ ಬೆಸೆಯಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರದ ಭಾಗವಾಗಿದ್ದು, ಮಾಯನ್ಮಾರ್ ಸೇರ್ಪಡೆಯಿಂದ ಈಶಾನ್ಯ ಪ್ರದೇಶಕ್ಕೂ ಎಸ್ಎಎಸ್ಇಸಿ ವಿಸ್ತರಣೆಯಾಗಿದೆ. ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ರಾಷ್ಟ್ರಗಳೊಂದಿಗೆ ಈಗ ಹೊಸದಾಗಿ ಮಾಯನ್ಮಾರ್ ಸೇರ್ಪಡೆಯಾಗಿದ್ದು, ಎಸ್ಎಎಸ್ಇಸಿ ಸದಸ್ಯ ರಾಷ್ಟ್ರಗಳ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.
ಸಾಮೂಹಿಕ ದೂರದೃಷ್ಟಿ ಉಪ ಪ್ರಾಂತೀಯ ಅಭಿವೃದ್ಧಿಗೆ ನೆರವಾಗಲಿದ್ದು, ಸುಧಾರಿತ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ