ನಳಂದಾ ಮಾದರಿಯಲ್ಲೇ ವಿಕ್ರಮಶಿಲಾ ವಿವಿ ಪುನಾರಂಭ: ಪ್ರಧಾನಿಯೊಂದಿಗೆ ಮಾತನಾಡುತ್ತೇನೆಂದ ರಾಷ್ಟ್ರಪತಿ
ಭಗಲ್ ಪುರ: ನಳದಂಬಾ ಮಾದರಿಯಲ್ಲೇ ವಿಶ್ವದ ಪುರಾತನ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ವಿಕ್ರಮಶಿಲಾ ವಿಶ್ವವಿದ್ಯಾನಿಲಯವನ್ನೂ ಪುನಾರಂಭ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವುದಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ವಿಕ್ರಮಶಿಲಾ ವಿಶ್ವವಿದ್ಯಾನಿಲಯವಿದ್ದ ಭಗಲ್ ಪುರಕ್ಕೆ ಭೇಟಿ ನೀಡಿ ಮಾತನಾಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಕ್ರಮಶಿಲಾ ವಿಶ್ವವಿದ್ಯಾನಿಲಯ ಅತ್ಯಂತ ಪುರಾತ, ವಿಶ್ವ ಪ್ರಸಿದ್ಧ ವಿಶ್ವವಿದ್ಯಾನಿಲಯವಾಗಿದ್ದು, ದೇಶಕ್ಕೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೇ ಸಂಶೋಧನೆಗೂ ಉತ್ತೇಜನಕಾರಿ ವಿಶ್ವವಿದ್ಯಾನಿಲಯವಾಗಿತ್ತು. ಅದನ್ನು ಪುನಾರಂಭ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನಳಂದ, ತಕ್ಷಶಿಲಾ, ವಿಕ್ರಮಶಿಲಾದಂತಹ ಪುರಾತನ ವಿಶ್ವವಿದ್ಯಾನಿಲಯಗಳು ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಇಂತಹ ಪುರಾತನ ವಿಶ್ವವಿದ್ಯಾನಿಲಯಗಳೆಡೆಗೆ ಕಾಲೇಜು ದಿನಗಳಿಂದಲೂ ಆಕರ್ಷಿತನಾಗಿದ್ದು ವಿಕ್ರಮಶಿಲಾ ವಿಶ್ವವಿದ್ಯಾನಿಲಯದ ಪುನಾರಂಭಕ್ಕಾಗಿ ಜನರ ಉತ್ಸಾಹವನ್ನು ಕಂಡು ಅಪಾರ ಸಂತೋಷ ಉಂಟಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ