ಭಾನುವಾರ, ಫೆಬ್ರವರಿ 19, 2023

ಐಎಎಸ್‌, ಕೆಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಚಲಿತ ವಿದ್ಯಮಾನ ‘ಭಾಷಿಣಿ’– ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ವೇದಿಕೆ ಕುರಿತ ಮಾಹಿತಿ ಇಲ್ಲಿದೆ.

ಗುಜರಾತಿನ ಗಾಂಧಿನಗರದಲ್ಲಿ ಕಳೆದ ವರ್ಷ ನಡೆದ ‘ಡಿಜಿಟಲ್ ಇಂಡಿಯಾ ಸಪ್ತಾಹ 2022’ ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಡಿಜಿಟಲ್ ಇಂಡಿಯಾ ಭಾಷಿಣಿ’ ಯನ್ನು ಉದ್ಘಾಟಿಸಿದರು.

ಡಿಜಿಟಲ್ ಇಂಡಿಯಾ ಭಾಷಿಣಿ

ಇದು ಭಾರತೀಯ ಭಾಷೆಗಳಲ್ಲಿ ಜ್ಞಾನ ಹಂಚುವಿಕೆಯ ಡಿಜಿಟಲ್ ಭಾಷಾಂತರ ವೇದಿಕೆ. ಇದು ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳಿಗೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸುಲಭ ಪ್ರವೇಶಾವಕಾಶ ನೀಡುತ್ತದೆ. ಅಲ್ಲದೇ, ಧ್ವನಿ ಆಧಾರದಲ್ಲಿಯೂ ಮಾಹಿತಿಯನ್ನು ಗ್ರಹಿಸುತ್ತದೆ. ಈ‌ ಮೂಲಕ ಬಹುತೇಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮಾಹಿತಿ ಹಂಚಿಕೆ ಮತ್ತು ಬರಹ ಕಾರ್ಯಗಳನ್ನು ಸುಲಭವಾಗಿಸಲು ಪ್ರಯತ್ನಿಸುತ್ತದೆ.

ಭಾಷಿಣಿ (ಭಾಷಾ ಇಂಟರ್ಫೇಸ್ ಫಾರ್ ಇಂಡಿಯಾ)

* ಡಿಜಿಟಲ್ ಇಂಡಿಯಾ ಭಾಷಿಣಿ, ಭಾರತದ ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ವೇದಿಕೆ. ಇದು ‘ಭಾಷಾದಾನ್’ ಎಂಬ (ಜನರಿಂದಲೇ ಜ್ಞಾನವನ್ನು ಕ್ರೋಡೀಕರಿಸುವ ಮೂಲಕ ಅದನ್ನು ಬೆಳೆಸುವುದು) ಉಪಕ್ರಮದ ಮೂಲಕ ಬಹುಭಾಷೆಗಳ ಡೇಟಾಗಳ ಸೆಟ್‌ಗಳನ್ನು ನಿರ್ಮಿಸಲು ಭಾರತದ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸುತ್ತದೆ.

* ಇದು ರಾಷ್ಟ್ರೀಯ ಭಾಷಾ ಅನುವಾದ ಮಿಷನ್‌ನ ಒಂದು ಭಾಗವಾಗಿದ್ದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರೂಪಿಸಿದ ಉಪಕ್ರಮವಾಗಿದೆ.

ಡಿಜಿಟಲ್ ಇಂಡಿಯಾ ಭಾಷಿಣಿಯ ಗುರಿ: ಈ ಯೋಜನೆಯು ಭಾರತೀಯ ನಾಗರಿಕರನ್ನು ಅವರ ಮಾತೃಭಾಷೆ ಅಥವಾ ಆಡುಭಾಷೆಗಳಲ್ಲಿ ದೇಶದ ಡಿಜಿಟಲ್ ಜಗತ್ತಿಗೆ ಸಂಪರ್ಕಿಸುವುದು. ಈ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದು ಜನಸಾಮಾನ್ಯರು ಸುಲಭವಾಗಿ ಡಿಜಿಟಲ್ ಲೋಕ ಪ್ರವೇಶಿಸಲು ಕಾರಣವಾಗುತ್ತದೆ.

ಭಾಷಿಣಿ ವೇದಿಕೆ ಒಂದು ಸಂಪೂರ್ಣ ಡಿಜಿಟಲ್ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡು, ಸರ್ಕಾರವನ್ನು ಡಿಜಿಟಲೀಕರಣಗೊಳಿಸುವತ್ತಲೂ ಒಂದು ಬೃಹತ್ ಹೆಜ್ಜೆಯಾಗಿದೆ.

ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಈ ವೇದಿಕೆಯು ನಾಗರಿಕರಿಗೆ ಎಲ್ಲಾ ರೀತಿಯ ಸೇವೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಮಾತ್ರವಲ್ಲ, ಭಾರತದ ಎಲ್ಲಾ ಭಾಷೆಗಳಿಗೆ ಅನ್ವಯವಾಗುವಂತೆ ರಾಷ್ಟ್ರೀಯ ಸಾರ್ವಜನಿಕ ಡಿಜಿಟಲ್ ವೇದಿಕೆ ನಿರ್ಮಿಸುವ ಗುರಿಯನ್ನೂ ಭಾಷಿಣಿ ಹೊಂದಿದೆ.

ಭಾಷಿಣಿಯು ಸಾರ್ವಜನಿಕರ ಆಸಕ್ತಿಗೆ ಪೂರಕವಾಗಿ, ಆಡಳಿತ ಮತ್ತು ನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ನಿರ್ದಿಷ್ಟ ವಿಷಯಗಳ ಬಗೆಗಿನ ಸಾಕಷ್ಟು ಮಾಹಿತಿಗಳನ್ನು, ಎಲ್ಲಾ ಭಾರತೀಯ ಭಾಷೆಗಳಲ್ಲಿ ಅಂತರ್ಜಾಲದಲ್ಲಿ ಲಭ್ಯವಾಗಿಸುವ ಗುರಿ ಹೊಂದಿದೆ. ಈ‌ ಮೂಲಕ ನಾಗರಿಕರು ತಮ್ಮ ಮಾತೃಭಾಷೆಯಲ್ಲಿ ಇಂಟರ್ನೆಟ್ ಬಳಸಲು ಭಾಷಿಣಿ ಉತ್ತೇಜಿಸುತ್ತದೆ.


ಪ್ರಮುಖ ಅಂಶಗಳು:

* ಉದ್ಯಮವಲಯ, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ತಮ್ಮ ಎಲ್ಲಾ ಕೊಡುಗೆಗಳನ್ನು ‘ಭಾಷಿಣಿ ವೇದಿಕೆ’ಯೊಳಗೆ ತರುವಂತೆ ದೊಡ್ಡ ನೆಟ್‌ವರ್ಕ್‌ ಅನ್ನು ರೂಪಿಸಲು ಭಾಷಿಣಿಯು ಸರ್ಕಾರವನ್ನು ಪ್ರೇರೇಪಿಸುತ್ತದೆ.

* ಯಾವುದೇ ಜ್ಞಾನಾಧಾರಿತ ವಿಷಯಗಳಿಗೆ ಸಾರ್ವತ್ರಿಕ ಪ್ರವೇಶ ಒದಗಿಸಲು ಭಾಷಿಣಿ ರಾಷ್ಟ್ರೀಯ ಡಿಜಿಟಲ್ ಸಾರ್ವಜನಿಕ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಈ ಮೂಲಕ ಜ್ಞಾನ ಆಧಾರಿತ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ. ಇಲ್ಲಿ ಮಾಹಿತಿಯು ಮುಕ್ತ ಮತ್ತು ಸುಲಭವಾಗಿ ಲಭ್ಯವಿರುತ್ತದೆ.

* ನಾಗರಿಕರಿಗೆ ಬಳಸಲು ಸುಲಭವಾಗುವ ರೀತಿಯಲ್ಲಿ‌ ಈ ವೇದಿಕೆ ರೂಪಿಸಲಾಗಿದೆ. ಜನ ಸಮೂಹಕ್ಕೆ ಈ ವೇದಿಕೆಯ ಮೂಲಕ ಅವರ ಇಷ್ಟದ ಭಾಷೆಗಳಿಗೆ ಕೊಡುಗೆ ನೀಡಲು ಭಾಷಿಣಿಯು ಪ್ರೇರೇಪಿಸುತ್ತದೆ. ಸಾಮಾನ್ಯ ನಾಗರಿಕರು ಈ ಉಪಕ್ರಮದ ಪ್ರಧಾನ ಫಲಾನುಭವಿಗಳಾಗುತ್ತಾರೆ.

* ಭಾಷಣಿಯು ಸಂಪನ್ಮೂಲಗಳನ್ನು ಬಳಸುವ ಹೊಸ ಅಪ್ಲಿಕೇಶನ್‌ಗಳನ್ನು ರಚಿಸಲು ಸ್ಟಾರ್ಟ್‌ ಅಪ್‌ ಗಳನ್ನು ಪ್ರೋತ್ಸಾಹಿಸುತ್ತದೆ.

ಚಿತ್ರ ಕೃಪೆ:bhashini.gov.in

ಭಾಷಾದಾನ್:

* ಭಾಷಾದಾನ್ ಎನ್ನುವುದು ಭಾಷಿಣಿ ಯೋಜನೆಯ ಭಾಗವಾಗಿ ಭಾರತದ ಜನಸಮೂಹ ನಿರ್ಮಿತ ಭಾಷೆಗಳ ಬೆಳವಣಿಗೆಯ ನಿಟ್ಟಿನಲ್ಲಿ ಹೊರತಂದ ಉಪಕ್ರಮ. ವ್ಯಕ್ತಿಯು ತನ್ನ ಸ್ವಂತ ಭಾಷೆಯನ್ನು ಡಿಜಿಟಲ್ ರೂಪದಲ್ಲಿ ಉತ್ಕೃಷ್ಟಗೊಳಿಸಲು, ದತ್ತಾಂಶದ ಮುಕ್ತ ಭಂಡಾರ ನಿರ್ಮಾಣಕ್ಕೆ ಸಹಾಯ ಮಾಡಲು ನಾಗರಿಕರನ್ನು ಆಹ್ವಾನಿಸುತ್ತದೆ.

* ಭಾರತೀಯ ಭಾಷೆಗಳಲ್ಲಿ ದೊಡ್ಡ ಡೇಟಾ ಸೆಟ್‌(ಸಮಗ್ರ ಮಾಹಿತಿ ಭಂಡಾರ)ಗಳನ್ನು ರಚಿಸುವುದು ಇದರ ಗುರಿಯಾಗಿದೆ. ಈ ಮೂಲಕ ಸಮಾಜವನ್ನು ಇನ್ನಷ್ಟು ಉತ್ತಮಗೊಳಿಸುವ ಸಲುವಾಗಿ ಉತ್ಪನ್ನಗಳು ಅಥವಾ ಸೇವೆಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯ ಮಾದರಿಗಳಿಗೆ (AI Mode*s) ತರಬೇತಿ ನೀಡಲು ಈ ಮಾಹಿತಿಗಳನ್ನು ಬಳಸಬಹುದು. ಈ ವೇದಿಕೆಗೆ ಯಾವುದೇ ಸಾಮಾನ್ಯ ವ್ಯಕ್ತಿಗಳೂ ಕೊಡುಗೆ ನೀಡಬಹುದು.

ಭಾಷಾದಾನ್ ವರ್ಗಗಳು:

ಸುನೊ ಇಂಡಿಯಾ: ಯಾವುದೇ ವ್ಯಕ್ತಿ ತಾನು ಆಲಿಸಿದ ಆಡಿಯೊಗಳನ್ನು ಬರಹರೂಪಕ್ಕಿಳಿಸುವ ಮೂಲಕ ಅಥವಾ ಇತರರು ಬರೆದಿರುವ ಪಠ್ಯವನ್ನು ಮೌಲ್ಯೀಕರಿಸುವ ಮೂಲಕ ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತ ಗೊಳಿಸಬಹುದು.

ಬೋಲೊ ಇಂಡಿಯಾ: ಬರೆದಿರುವ ವಾಕ್ಯಗಳನ್ನು ಧ್ವನಿರೂಪದಲ್ಲಿ ಮುದ್ರಿಸುವ ಮೂಲಕ ಆ ಭಾಷೆಯನ್ನು ತನ್ನದೇ ಆದ ಉಚ್ಛಾರಣಾ ರೀತಿಯೊಂದಿಗೆ (Accent)ಬಳಸುವುದು ಹೇಗೆಂದು ತಿಳಿಸಿ ತನ್ನ ಭಾಷೆಯನ್ನು ಶ್ರೀಮಂತ ಗೊಳಿಸಬಹುದು. ಅದಾಗಲೇ ರೆಕಾರ್ಡ್ ಮಾಡಿದ ಆಡಿಯೊಗಳನ್ನೂ ಮತ್ತಷ್ಟು ಮೌಲ್ಯೀಕರಿಸಬಹುದು.

ಲಿಖೊ ಇಂಡಿಯಾ: ಇರುವ ಪಠ್ಯವನ್ನು ತಮ್ಮ ಭಾಷೆಗಳಿಗೆ ಅನುವಾದಿಸುವ ಮೂಲಕ ತಮ್ಮ ಕೊಡುಗೆಗಳನ್ನು ನೀಡಬಹುದು ಮತ್ತು ಬೇರೆಯವರ ಭಾಷಾಂತರಗಳನ್ನು ಕೂಡಾ ಮೌಲ್ಯೀಕರಿಸಬಹುದು.

ದೇಖೊ ಇಂಡಿಯಾ: ನೋಡಿದ ಪಠ್ಯವನ್ನು ಟೈಪ್ ಮಾಡುವ ಮೂಲಕ ಅಥವಾ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅಂಟಿಸುವ ಮೂಲಕ ಭಾಷೆಯನ್ನು ಶ್ರೀಮಂತ ಗೊಳಿಸಬಹುದು ಅಥವಾ ಚಿತ್ರವಿದ್ದರೆ ಅದಕ್ಕೆ ಹೆಸರು‌ ನೀಡಬಹುದು. ಇತರರು ಕೊಡುಗೆ ನೀಡಿದ ಚಿತ್ರಗಳನ್ನು ಸಹ ಮೌಲ್ಯೀಕರಿಸಬಹುದು.

ಭಾನುವಾರ, ಫೆಬ್ರವರಿ 12, 2023

ಮಾಧ್ಯಮಗಳು ಸಮಾಜ ರಕ್ಷಕರಾಗಲಿ: ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಸಮೀರ್‌ಜೈನ್ ಅಭಿಮತ


samir jain10


Times Litfest-ಮಾಧ್ಯಮಗಳು ಸಮಾಜ ರಕ್ಷಕರಾಗಲಿ: ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಸಮೀರ್‌ಜೈನ್ ಅಭಿಮತ

Edited by Ganesh Prasad Kumble | Vijaya Karnataka Web | Updated: 11 Feb 2023, 11:36 pm

ಮಾಧ್ಯಮಗಳು ಕೇವಲ ಕಾವಲುನಾಯಿಗಳಾಗಿದ್ದರಷ್ಟೇ ಸಾಲದು, ಅವು ಸಮಾಜ ರಕ್ಷಕರಾಗಿಯೂ ಕಾರ್ಯ ನಿರ್ವಹಿಸಬೇಕಿದೆ ಎಂದು ಟೈಮ್ಸ್ ಗ್ರೂಪ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು‘‘ನಾಯಿಯನ್ನು ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಜನ ನಂಬಿದ್ದಾರೆ. ಹಾಗಂದು ಮಾಧ್ಯಮಗಳು ಕೇವಲ ಬೊಗಳುವ ನಾಯಿ ಆಗಿರಬಾರದು. ರಚನಾತ್ಮಕ ಕೆಲಸ ಮಾಡುವ ಮೂಲಕ ಪತ್ರಿಕೆ ಓದುವ ಜನರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು ಎಂದು ಸಲಹೆ ನೀಡಿದ್ದಾರೆ.

 
samir jain10
ಸಮೀರ್ ಜೈನ್

ಹೈಲೈಟ್ಸ್‌:

  • ದಿಲ್ಲಿಯಲ್ಲಿ ನಡೆಯುತ್ತಿರುವ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಮೀರ್ ಜೈನ್
  • ಮಾಧ್ಯಮಗಳೇ ಕಾವಲುನಾಯಿಗಳಾಗಿದ್ದರಷ್ಟೇ ಸಾಲುವುದಿಲ್ಲ, ಅವು ಸಮಾಜ ರಕ್ಷಕರಾಗಿಯೂ ಕಾರ್ಯ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯ
  • ಪತ್ರಿಕೆಗಳು ರಚನಾತ್ಮಕ ಕಾರ್ಯಗಳ ಮೂಲಕ ಓದುರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು ಎಂದು ಸಲಹೆ
ಹೊಸದಿಲ್ಲಿ: ‘‘ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಕೇವಲ ಕಾವಲುನಾಯಿ (ವಾಚ್‌ಡಾಗ್)ಗಳಾಗಿದ್ದರಷ್ಟೇ ಸಾಲದು, ಅವು ಸಮಾಜ ರಕ್ಷಕರ (ವಾಚ್‌ಗಾಡ್) ಪಾತ್ರವನ್ನೂ ನಿರ್ವಹಿಸಬೇಕಿದೆ,’’ ಎಂದು ಟೈಮ್ಸ್ ಗ್ರೂಪ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ವಿಸಿಎಂಡಿ) ಸಮೀರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ದಿಲ್ಲಿಯಲ್ಲಿ ಶನಿವಾರ ಆರಂಭವಾದ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಮೀರ್ ಜೈನ್,‘‘ಶ್ವಾನವನ್ನು ಮಾನವನ ಆತ್ಮೀಯ ಸ್ನೇಹಿತ ಎಂದು ಜನ ನಂಬಿದ್ದಾರೆ. ಹಾಗಂತ ಮಾಧ್ಯಮಗಳು ಕೇವಲ ಬೊಗಳುವ ನಾಯಿಯಾಗಿರಬಾರದು. ಕೇವಲ ಟೀಕೆ ಟಿಪ್ಪಣಿ ಮಾಡದೇ ರಚನಾತ್ಮಕ ಕೆಲಸ ಮಾಡುವ ಮೂಲಕ ಪತ್ರಿಕೆ ಓದುವ ಜನರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಆ ಮೂಲಕ ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು,’’ ಎಂದು ಹೇಳಿದರು.

ವಿಶ್ವವಿದ್ಯಾಲಯಗಳ ಕುರಿತು ಪ್ರಸ್ತಾಪಿಸಿದ ಅವರು, ‘‘ವಿಶ್ವವಿದ್ಯಾಲಯಗಳು ಉದ್ಯೋಗ ಅರಸುವ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ ಹೊರತು ಅವರಲ್ಲಿ ತಾಂತ್ರಿಕ ಅಥವಾ ವೃತ್ತಿ ಕೌಶಲ್ಯ ತುಂಬುತ್ತಿಲ್ಲ. ವಿದ್ಯಾರ್ಥಿಗಳನ್ನು ಏಕ ಆಯಾಮದ ವ್ಯಕಿತ್ವ ಹೊಂದಿರುವ ವ್ಯಕ್ತಿಗಳಾಗಿ ಮಾತ್ರ ರೂಪಿಸುತ್ತಿವೆ,’’ ಎಂದು ವಿಷಾದಿಸಿದರು.

Times Litfest-ಯುವ ಓದುಗರಿಗೆ ಆಧ್ಯಾತ್ಮಿಕತೆ ಮಿಳಿತಗೊಂಡಿರುವ ಸಾಹಿತ್ಯ ಪಠ್ಯಗಳನ್ನು ಪರಿಚಯಿಸಬೇಕಿದೆ: ಟೈಮ್ಸ್ ಸಮೂಹದ ಉಪಾಧ್ಯಕ್ಷ ಸಮೀರ್ ಜೈನ್
ಟೈಮ್ಸ್ ಸಾಹಿತ್ಯೋತ್ಸವದ ಮೂಲಕ ನಾವು ಸಾಹಿತ್ಯವನ್ನು ಕೋಟ್ಯಂತರ ಜನರ ಬಳಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಕಾರಣ ಪುಸ್ತಕಗಳನ್ನು ಕೋಟಿಗಟ್ಟಲೆ ಜನ ಓದಲಾರರು. ಅವುಗಳಲ್ಲಿನ ಸಾರಾಂಶವನ್ನು ಪತ್ರಿಕಾ ಸಾಹಿತ್ಯದ ಮೂಲಕ ಎಲ್ಲರಿಗೂ ತಲುಪಿಸಲು ಸಾಧ್ಯ ಸಮೀರ್ ಜೈನ್ ತಿಳಿಸಿದರು.

ಟೈಮ್ಸ್ ಫೆಸ್ಟ್ ಗೆ ಚಾಲನೆ ನೀಡಿದ ಅಶ್ನಿನಿ ವೈಷ್ಣವ್

ಉತ್ತಮ ಸಾಹಿತ್ಯ ಹಾಗೂ ಸಾಹಿತ್ಯದೊಂದಿಗೆ ಗುರುತಿಸಿಕೊಂಡ ಮಹನೀಯರ ವಿಚಾರಧಾರೆಗಳೊಂದಿಗೆ ದಿಲ್ಲಿಯಲ್ಲಿ ಟೈಮ್ಸ್ ಸಾಹಿತ್ಯೋತ್ಸವ ಶನಿವಾರ ಚಾಲನೆ ಪಡೆಯಿತು.

ಕೇಂದ್ರ ಎಲೆಕ್ಟ್ರಾನಿಕ್ಸ್ , ತಂತ್ರಜ್ಞಾನ, ಸಂಚಾರ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ವಿದ್ಯಾರ್ಥಿಗಳು ವಿಜ್ಞಾನದೊಂದಿಗೆ ಸಾಹಿತ್ಯದ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕು,’’ ಎಂದು ಕರೆ ನೀಡಿದರು.
ವಂದೇ ಭಾರತ್ ರೈಲನ್ನು ಉದಾಹರಿಸಿದ ಸಚಿವರು, ‘‘ಯುವ ಪೀಳಿಗೆ ಭವಿಷ್ಯದಲ್ಲಿ ಸಂಪೂರ್ಣ ಅಭಿವೃದ್ಧಿಗೊಂಡ ದೇಶದಲ್ಲಿ ವಾಸಿಸುವ ಅವಕಾಶ ಲಭಿಸುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ,’’ ಎಂದರು.

Times Litfest
ಟೈಮ್ಸ್ ಗ್ರುಪ್ ಬಿಸಿನೆಸ್ ವಿಭಾಗದ ಮುಖ್ಯಸ್ಥ ಸಿ.ಕೆ. ಶರ್ಮಾ ಮಾತನಾಡಿ, ‘‘ಟೈಮ್ಸ್ ಸಾಹಿತ್ಯೋತ್ಸವ ಒಂದು ಆರಂಭಿಕ ಹಂತವಾಗಿದೆ. ಸಾಹಿತ್ಯ ಎಂಬುದು ಮಾನವನ ರಚನಾತ್ಮಕತೆಯ ಭಾವ. ‘ಒಂದು ಜಗತ್ತು, ಹಲವು ಶಬ್ದಗಳು’ ಎಂಬುದು ಈ ಬಾರಿಯ ಸಾಹಿತ್ಯೋತ್ಸವದ ಘೋಷವಾಕ್ಯವಾಗಿದೆ. ಹಲವು ಯೋಚನೆಗಳು, ಆಸಕ್ತಿಗಳು, ವಿಚಾರಗಳು, ಸವಾಲುಗಳು ಸೇರಿ ಸಂವಾದವಾಗುತ್ತದೆ ಎಂದರಲ್ಲದೆ ಸಾಹಿತ್ಯ ವಾಸ್ತವಿಕತೆಯಲ್ಲಿ ಲೀನವಾಗುತ್ತದೆ’’, ಎಂದು ಹೇಳಿದರು.
ಸಚಿವ ಅಶ್ವಿನಿಕುಮಾರ್ ವೈಷ್ಣವ್, ಸಮೀರ್ ಜೈನ್, ಟೈಮ್ಸ್ ಗ್ರೂಪ್ ನಿರ್ದೇಶಕರಾದ ಅತುಲ್ ಜೈನ್ ಅವರು ಟೈಮ್ಸ್ ಸಾಹಿತ್ಯೋತ್ಸವದ ಲೊಗೊ ಅನಾವರಣಗೊಳಿಸಿದರು.

ಉತ್ಸವದ ಮೊದಲ ದಿನದ ಮೊದಲ ಗೋಷ್ಠಿಯಲ್ಲಿ ‘ವೈ ಫಿಯರ್ ಎ ಧಾರ್ಮಿಕ್ ನೇಶನ್?’ ಕುರಿತು ಆರ್. ಜಗನ್ನಾಥ್, ಅಶ್ವಿನ್ ಸಾಂಘಿ, ಪವನ್ ವರ್ಮಾ, ಸುಧೀಂದ್ರ ಕುಲಕರ್ಣಿ ಮಾತನಾಡಿದರು. ‘ಈಸ್ ದಿಸ್ ಎ ಗುಡ್ ಟೈಮ್ ಬಿ ಕ್ಲೀಯರ್ ಇನ್ ಇಂಡಿಯಾ’, ‘ಹೌ ಮಚ್ ಮೈಥಾಲಜಿ ಈಸ್ ಪಾರ್ಟ್ ಆಫ್ ಹಿಸ್ಟರಿ’, ‘ಚೇಂಜಿಂಗ್ ಫೇಸ್ ಆಫ್ ಬುಕ್ಸ್’ ಇತ್ಯಾದಿ ವಿಷಯಗಳ ಕುರಿತು ಚರ್ಚೆಗಳು ನಡೆದವು. ಶಿವ ಖೋಡಾ ಅವರು ‘ಯೂ ಕ್ಯಾನ್ ಅಚೀವ್ ಮೋರ್’ ಕುರಿತು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ವೈ ಕಾಶ್ಮೀರ್ ಫೈಲ್ ಮ್ಯಾಟರ್ಸ್‌’ ಕುರಿತು ಮಾತನಾಡಿದರು.

ಭಾನುವಾರ, ಜನವರಿ 29, 2023

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡ ಬೆಲಾರೂಸ್‌ನ ಅರಿನಾ ಸಬಲೆಂಕಾ


ಮೆಲ್ಬರ್ನ್‌: ಬೆಲಾರೂಸ್‌ನ ಅರಿನಾ ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡರು.

ರಾಡ್‌ ಲೇವರ್‌ ಅರೆನಾದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ, ಸೆಟ್‌ ಹಿನ್ನಡೆಯಿಂದ ಪುಟಿದೆದ್ದ ಅವರು 4-6, 6-3, 6-4ರಿಂದ ಕಜಕಸ್ತಾನದ ಎಲೆನಾ ರಿಬಾಕಿನಾ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದರು.

ತೀವ್ರ ಕುತೂಹಲ ಕೆರಳಿಸಿದ್ದ ಹಣಾಹಣಿಯು 2 ತಾಸು 28 ನಿಮಿಷಗಳ ಕಾಲ ನಡೆಯಿತು. ಹಾಲಿ ವಿಂಬಲ್ಡನ್‌ ಚಾಂಪಿಯನ್‌ಗೆ ಸೋಲುಣಿಸಿದ ಸಂತಸದಲ್ಲಿ ಸಬಲೆಂಕಾ ಆನಂದಬಾಷ್ಪ ಸುರಿಸಿದರು.

ಬಿರುಸಿನ ಗ್ರೌಂಡ್‌ಸ್ಟ್ರೋಕ್‌ಗಳು, ನಿಖರ ಸರ್ವ್‌ಗಳು ಮತ್ತು ಅದ್ಭುತ ರ‍್ಯಾಲಿಗಳು ಪಂದ್ಯದ ಮೆರುಗು ಹೆಚ್ಚಿಸಿದವು.

ಕೇವಲ 34 ನಿಮಿಷಗಳಲ್ಲಿ ಮೊದಲ ಸೆಟ್‌ ಗೆದ್ದುಕೊಂಡ ರಿಬಾಕಿನಾ, ಪ್ರಶಸ್ತಿ ಜಯಿಸುವ ನಿರೀಕ್ಷೆ ಮೂಡಿಸಿದ್ದರು. ಆದರೆ ಎರಡನೇ ಸೆಟ್‌ಅನ್ನು 57 ನಿಮಿಷಗಳಲ್ಲಿ ತಮ್ಮದಾಗಿಸಿಕೊಂಡ ಸಬಲೆಂಕಾ, ನಿರ್ಣಾಯಕ ಸೆಟ್‌ನ ಕುತೂಹಲ ಹೆಚ್ಚುವಂತೆ ಮಾಡಿದರು.

ಮೂರನೇ ಸೆಟ್‌ನಲ್ಲಿ 3–3 ಗೇಮ್‌ಗಳಿಂದ ಸಮಬಲವಾಗಿದ್ದಾಗ ರಿಬಾಕಿನಾ ಎರಡು ಬ್ರೇಕ್ ಪಾಯಿಂಟ್ಸ್ ಉಳಿಸಿಕೊಂಡರು. ಏಸ್‌ ಸಿಡಿಸಿದ ಸಬಲೆಂಕಾ 5–3ರಿಂದ ಮುನ್ನಡೆದರು. ಬಳಿಕ ಅದೇ ಲಯದೊಂದಿಗೆ ಸೆಟ್‌ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಪಂದ್ಯದಲ್ಲಿ ರಿಬಾಕಿನಾ ಒಂಬತ್ತು ಮತ್ತು ಸಬಲೆಂಕಾ 17 ಏಸ್‌ಗಳನ್ನು ಸಿಡಿಸಿದರು. ಬೆಲಾರೂಸ್‌ ಆಟಗಾರ್ತಿ ಏಳು ಡಬಲ್ ಫಾಲ್ಟ್ಸ್ ಎಸಗಿದರು. ರಿಬಾಕಿನಾ ಒಂದು ಡಬಲ್ ಫಾಲ್ಟ್ ಮಾತ್ರ ಮಾಡಿದರು. ಇಲ್ಲಿ ಟ್ರೋಫಿ ಜಯಿಸುವುದರೊಂದಿಗೆ ಸಬಲೆಂಕಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಎರಡನೇ ಸ್ಥಾನಕ್ಕೇರಲಿದ್ದಾರೆ.

ಏಳು ತಿಂಗಳ ಅವಧಿಯಲ್ಲಿ ಎರಡನೇ ಗ್ರ್ಯಾನ್‌ಸ್ಲಾಮ್‌ ಫೈನಲ್ ತಲುಪಿದ ರಿಬಾಕಿನಾ ಮೊದಲ ಬಾರಿಗೆ ಅಗ್ರ 10ರೊಳಗಿನ ರ‍್ಯಾಂಕಿಂಗ್‌ ಪಡೆಯಲಿದ್ದಾರೆ.

ಡಿ ಗ್ರೂಟ್‌ ಸತತ ಒಂಬತ್ತನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: ನೆದರ್ಲೆಂಡ್ಸ್ ದಂತಕತೆ ಡಿಯೆಡ್‌ ಡಿ ಗ್ರೂಟ್‌ ಅವರು ಮಹಿಳೆಯರ ವೀಲ್‌ಚೇರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಇದರೊಂದಿಗೆ ಸತತ ಒಂಬತ್ತು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಕಿರೀಟ ಧರಿಸಿದ ಸಾಧನೆ ಮಾಡಿದರು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಡಿಗ್ರೂಟ್‌ 0-6, 6-2, 6-2ರಿಂದ ಜಪಾನ್‌ನ ಯುಯಿ ಕಮಿಜಿ ಅವರನ್ನು ಪರಾಭವಗೊಳಿಸಿದರು. ಡಿ ಗ್ರೂಟ್ ಅವರಿಗೆ ಇದು ಐದನೇ ಆಸ್ಟ್ರೇಲಿಯಾ ಓಪನ್ ಕಿರೀಟ. ಒಟ್ಟಾರೆ 17ನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಗರಿಯಾಗಿದೆ.

ನಡಾಲ್ ದಾಖಲೆ ಸರಿಗಟ್ಟಿದ ಜೋಕೊವೀಚ್ ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

ಮೆಲ್ಬರ್ನ್‌: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಚಾಂಪಿಯನ್ ಆಗಿದ್ದಾರೆ.

ಈ ಮೂಲಕ ಸ್ಪೇನ್‌ನ ರಫೆಲ್ ನಡಾಲ್ ಅವರ ದಾಖಲೆಯ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸಾಧನೆಯನ್ನು ಸರಿಗಟ್ಟಿದ್ದಾರೆ.

ಅಷ್ಟೇ ಅಲ್ಲದೆ ದಾಖಲೆಯ 10ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿ ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ.

ಭಾನುವಾರ ರಾಡ್‌ ಲೇವರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಮುಖಾಮುಖಿಯಲ್ಲಿ ಜೊಕೊವಿಚ್ ಅವರು ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ ವಿರುದ್ಧ 6-3, 7-6 (7-4), 7-6 (7-5)ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಪಂದ್ಯದುದ್ಧಕ್ಕೂ ಎದುರಾಳಿ ವಿರುದ್ಧ ಸವಾರಿ ಮಾಡಿದ 35 ವರ್ಷದ ಜೊಕೊವಿಚ್ ನೂತನ ಇತಿಹಾಸ ಸೃಷ್ಟಿಸಿದರು.

ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಜೊಕೊವಿಚ್‌ ಅವರು ಕಳೆದ ಆವೃತ್ತಿಯ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಈ ಗೆಲುವಿನೊಂದಿಗೆ ಜೊಕೊವಿಚ್ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

24 ವರ್ಷದ ಸಿಟ್ಸಿಪಸ್‌, 2021ರ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದರು. ಆಗ ಪ್ರಶಸ್ತಿ ಸುತ್ತಿನಲ್ಲಿ ಜೊಕೊವಿಚ್‌ ಎದುರೇ ಸೋತಿದ್ದರು.‌


ಗರ್ಭಕಂಠ ಕ್ಯಾನ್ಸರ್ ಲಸಿಕೆ ಖರೀದಿ: ಜಾಗತಿಕ ಟೆಂಡರ್ ಸಾಧ್ಯತೆ.

ಗರ್ಭಕಂಠ ಕ್ಯಾನ್ಸರ್ ಲಸಿಕೆ ಖರೀದಿ: ಜಾಗತಿಕ ಟೆಂಡರ್ ಸಾಧ್ಯತೆ.
ನವದೆಹಲಿ: ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ನೀಡಲಾಗುವ ಲಸಿಕೆಯ (ಎಚ್‌ಪಿವಿ ಲಸಿಕೆ) ಖರೀದಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ಏಪ್ರಿಲ್‌ನಲ್ಲಿ ಜಾಗತಿಕ ಟೆಂಡರ್‌ ಆಹ್ವಾನಿಸಲು ನಿರ್ಧರಿಸಿದೆ.

‘2026ರ ವೇಳೆಗೆ, ಲಸಿಕೆಯ 16.02 ಕೋಟಿಯಷ್ಟು ಡೋಸ್‌ಗಳು ಲಭ್ಯವಾಗಬೇಕು. ಹೀಗಾಗಿ, ಜಾಗತಿಕ ಟೆಂಡರ್‌ ಕರೆಯಲಾಗುತ್ತಿದೆ. ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಅಲ್ಲದೇ, ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಮೆರ್ಕ್‌ ಕಂಪನಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

9ರಿಂದ 14 ವರ್ಷ ವಯೋಮಾನದ ಬಾಲಕಿಯರಿಗೆ ಈ ಲಸಿಕೆ ನೀಡಲಾಗುತ್ತದೆ. ಅಲ್ಲದೇ, ಈ ಲಸಿಕೆಯನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಲಾಗಿದ್ದು, ಬರುವ ಜೂನ್‌ನಲ್ಲಿ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಗುತ್ತದೆ.

ಎಸ್‌ಐಐ ಉತ್ಪಾದಿಸುವ ಎಚ್‌ಪಿವಿ ಲಸಿಕೆ ‘ಸರ್ವಾವ್ಯಾಕ್‌’ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.24ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಎಸ್‌ಐಐ ಸಿಇಒ ಅದಾರ್‌ ಪೂನಾವಾಲಾ ಹಾಗೂ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಣ ಪ್ರಾಧಿಕಾರದ ವ್ಯವಹಾರಗಳ ವಿಭಾಗ) ಪ್ರಕಾಶ್ ಸಿಂಗ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ಬುಧವಾರ, ಜನವರಿ 25, 2023

ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ....

ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ....

ಮೀರ್ ಸಾದಿಕ್

ಹೈದರಾಲಿಯ ಕಾಲದ ಮೈಸೂರು ಸಂಸ್ಥಾನದ ಅಧಿಕಾರಿಗಳಲ್ಲೊಬ್ಬ. ಪ್ರೀತಿ, ವಿಶ್ವಾಸಗಳಿಗೆ ಪಾತ್ರನಾಗಿದ್ದುದರಿಂದ ಟಿಪ್ಪುಸುಲ್ತಾನ್ ಇವನನ್ನೇ ತನ್ನ ದಿವಾನನಾಗಿ ನೇಮಿಸಿದ. ಈತ ಕಂದಾಯ ಮತ್ತು ಹಣಕಾಸಿನ ಅಧ್ಯಕ್ಷನೂ ಆಗಿದ್ದ.

ಟಿಪ್ಪುವಿಗೆ ಕಾದಿದ್ದ ಕರಾಳ ಭವಿಷ್ಯ ಮನಗಂಡ ಈತ ಬ್ರಿಟಿಷರೊಂದಿಗೆ ಸಹಕರಿಸಲು ಆರಂಭಿಸಿದ. ಬ್ರಿಟಿಷ್ ಗವರ್ನರ್ ಜನರಲ್ ಕಾರ್ನ್‍ವಾಲೀಸ್ ಮೈಸೂರಿನ ಮೇಲೆ ದಂಡೆತ್ತಿ ಬಂದ ಕಾಲದಿಂದಲೇ ಅವರೊಂದಿಗೆ ಸಂಪರ್ಕ ಬೆಳೆಸಿದ. ಶ್ರೀರಂಗಪಟ್ಟಣದ ಒಪ್ಪಂದದ ತನಕ ಮಾತ್ರ (1792) ಟಿಪ್ಪುವಿಗೆ ನಿಷ್ಠೆಯಿಂದಿದ್ದ. ದಿವಾನನ ಇಂಗಿತ ಅರಿತ ಟಿಪ್ಪು ಇವನನ್ನು ಬಂಧಿಸಿ ಸೆರೆಯಲ್ಲಿಟ್ಟ. ವಿಧೇಯನಾಗಿರುವ ಭರವಸೆಯ ಮೇಲೆ ಮೊದಲಿನ ಸ್ಥಾನದಲ್ಲಿ ನೇಮಿಸಿದ. ಆದರೆ ಇವನು ಸ್ವಾಮಿದ್ರೋಹಿಯಾಗಿಯೇ ಮುಂದುವರೆದ. ಇವನೊಂದಿಗೆ ಅನೇಕ ಅಧಿಕಾರಿಗಳು ಬ್ರಿಟಿಷರು ಹೂಡಿದ ಒಳಸಂಚಿನಲ್ಲಿ ಭಾಗಿಯಾಗಿದ್ದರು. ಇದನ್ನು ಅರಿತ ಟಿಪ್ಪು ಗಲ್ಲಿಗೇರಿಸಬೇಕಾಗಿದ್ದ ದೇಶದ್ರೋಹಿಗಳ ಪಟ್ಟಿ ತಯಾರಿಸಿದ. ಆ ಪಟ್ಟಿಯಲ್ಲಿ ಮೊದಲ ಹೆಸರು ಮೀರ್ ಸಾದಿಕ್‍ನದು. ದರ್ಬಾರಿನ ಸೇವಕನೊಬ್ಬ ಇದನ್ನು ಅರಿತು ವಿಷಯವನ್ನು ಸಾದಿಕ್‍ನಿಗೆ ತಿಳಿಸಿದ. ಆಗ ಈತ ಟಿಪ್ಪುವಿನ ಆಜ್ಞೆ ಕಾರ್ಯಗತಗೊಳ್ಳುವುದಕ್ಕೆ ಮುನ್ನವೇ ಕೋಟೆಯನ್ನು ಬ್ರಿಟಿಷರಿಗೆ ಒಪ್ಪಿಸಲು ಏರ್ಪಾಡುಮಾಡಿದ. ಜೊತೆಗೆ ಟಿಪ್ಪು ತಪ್ಪಿಸಿಕೊಳ್ಳದಂತೆಯೂ ಕ್ರಮ ಕೈಗೊಂಡ.

ಈತ ಬ್ರಿಟಿಷರೊಂದಿಗೆ ನಡೆಸಿದ ಒಳಸಂಚಿನಂತೆ 1799 ಮೇ 2ರಂದು ಕೋಟೆಯನ್ನು ಕಾಯುತ್ತಿದ್ದ ಮೈಸೂರಿನ ಸೈನಿಕರನ್ನು ವೇತನ ಹೆಚ್ಚಳದ ನೆಪದಲ್ಲಿ ಹಿಂದಕ್ಕೆ ಕರೆಯಿಸಿಕೊಂಡ. ಕಾವಲು ಸೈನಿಕರ ನಿರ್ಗಮನದ ವಿರುದ್ಧ ಪ್ರತಿಭಟಿಸುವವರಾರೂ ಇರಲಿಲ್ಲ. ಸುಲ್ತಾನನ ನಿಷ್ಠಾವಂತ ಸೇನಾನಿ ಸಯಿದ್ ಗಫಾರ್ ಫಿರಂಗಿ ಗುಂಡಿಗೆ ಬಲಿಯಾಗಿದ್ದ. ಅತನು ಮರಣಹೊಂದಿದ ಕೂಡಲೇ ಮೀರ್ ಸಾದಿಕ್ ಕೋಟೆಯ ಮೇಲಿಂದ ಬಿಳಿಕರವಸ್ತ್ರ ಹಿಡಿದಾಗ ಕಂದಕದಲ್ಲಿ ಅಡಗಿಕೊಂಡಿದ್ದ ಬ್ರಿಟಿಷ್ ಯೋಧರು ಮುನ್ನೆಡೆದು ಕೋಟೆಯ ಸಂಧಿಯೊಂದರಲ್ಲಿ ತಮ್ಮ ಧ್ವಜ ನೆಟ್ಟರು. ಮೀರ್ ಸಾದಿಕನ ಕುತಂತ್ರ ತನ್ನ ಒಡಯನನ್ನೇ ಬಲಿತೆಗೆದುಕೊಂಡಿತು. ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಟಿಪ್ಪುವಿನ ಸೊಕ್ಕನ್ನಡಗಿಸುವ ಆಸೆ ಫಲಿಸಿತು. ಸಾದಿಕ್ ತನ್ನ ಕುತಂತ್ರದ ಫಲವನ್ನುಣ್ಣಲು ಬಹಳ ಕಾಲ ಬಾಳಲಿಲ್ಲ. ಬ್ರಿಟಿಷರೊಂದಿಗೆ ಸೇರಿಕೊಳ್ಳಲು ರಹಸ್ಯವಾಗಿ ಪಲಾಯನಕ್ಕೆ ಯತ್ನಿಸಿದಾಗ ಮೈಸೂರಿನ ಸೈನಿಕರೇ ಇವನನ್ನು ಕೊಲೆಗೈದರು. ಇವನ ದುಷ್ಕøತದ ಬಗ್ಗೆ ತಿಳಿದ ಅವರು ಶವವನ್ನು ಹೂತ ಮೇಲೂ ಹೊರತೆಗೆದು ಅವಮಾನ ಪಡಿಸಿದರು. ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಶವವನ್ನು ಸುತ್ತುವರಿದು ಅದರ ಮೇಲೆ ಹೊಸಲು ಚೆಲ್ಲಿದರು. ಎರಡು ವಾರಗಳ ಅನಂತರ ಪರಿಸ್ಥಿತಿ ಸುಧಾರಿಸಲು ಬ್ರಿಟಿಷರೇ ಮಧ್ಯೆ ಪ್ರವೇಶಿಸಬೇಕಾಯಿತು. ಟಿಪ್ಪುವಿನ ಸ್ಮರಣಾರ್ಥ ಶ್ರೀರಂಗಪಟ್ಟಣ ಸಂದರ್ಶಿಸುವವರು ಇಂದಿಗೂ ಮೀರ್ ಸಾದಿಕ್ ಕೊಲೆಗೀಡಾದ ಜಾಗದಲ್ಲಿ ಕಲ್ಲೆಸೆಯುತ್ತಾರೆ. (ಸಿ.ಬಿ.ಆರ್.)

ಕೃಪೆ:- ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶ

ಶನಿವಾರ, ಡಿಸೆಂಬರ್ 10, 2022

ಮಾಂಡೂಸ್‌ ಚಂಡಮಾರುತಕ್ಕೆ ಅರೆಬಿಕ್‌ ಹೆಸರು

ಮಾಂಡೂಸ್‌’ ಚಂಡಮಾರುತಕ್ಕೆ ಅರೆಬಿಕ್‌ ಹೆಸರು

‘ಮಾಂಡೂಸ್‌’ ಅರೆಬಿಕ್‌ ಮೂಲದ ಪದ. ಮಾಂಡೂಸ್‌ ಎಂದರೆ ‘ಟ್ರೆಷರ್‌ ಬಾಕ್ಸ್ (ಖಜಾನೆ ಪೆಟ್ಟಿಗೆ)’ ಎನ್ನುವ ಅರ್ಥವಿದೆ. ‘ಮ್ಯಾನ್-ಡೌಸ್’ ಎಂದೂ ಉಚ್ಚರಿಸಲಾಗುತ್ತದೆ. ಇದು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ನಿಧಾನವಾಗಿ ಚಲಿಸುವ ಮತ್ತು ಬಹಳಷ್ಟು ತೇವಾಂಶ ಹೀರಿಕೊಳ್ಳುವ ಈ ಚಂಡಮಾರುತಕ್ಕೆ ‘ಮಾಂಡೂಸ್‌’ ಹೆಸರನ್ನು ಅರಬ್ ಸಂಯುಕ್ತ ಸಂಸ್ಥಾನವು (ಯುಎಇ) ಸೂಚಿಸಿದೆ.

ಬುಧವಾರ, ಅಕ್ಟೋಬರ್ 26, 2022

ವಿಶ್ಲೇಷಣೆ, ಮೀಸಲಾತಿ ಹೆಚ್ಚಳ ಲಕ್ಷ್ಮಣರೇಖೆ ದಾಟಲಾಗದೆ?- ಕೆಚ್ ಕಾಂತರಾಜ

ವಿಶ್ಲೇಷಣೆ, ಮೀಸಲಾತಿ ಹೆಚ್ಚಳ ಲಕ್ಷ್ಮಣರೇಖೆ ದಾಟಲಾಗದೆ?
- ಕೆಚ್ ಕಾಂತರಾಜ

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮೀಸಲಾತಿಯು ಶೇಕಡ 15 ಇದ್ದಿದ್ದನ್ನು ಶೇ 17 ಹಾಗೂ ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾತಿಯು ಶೇ 3ರಷ್ಟು ಇದ್ದಿದ್ದನ್ನು ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ತಮಗೆ ತಮ್ಮ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬುದು ಸಮುದಾಯಗಳ ಬೇಡಿಕೆ. ಎಸ್‌ಟಿ ಸಮುದಾಯಗಳಿಂದ ಈ ಬೇಡಿಕೆ ಬಂದ ನಂತರದಲ್ಲಿ ರಾಜ್ಯ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತು.


ಆಯೋಗವು ಮೀಸಲಾತಿ ಹೆಚ್ಚಿಸುವ ಶಿಫಾರಸು ಮಾಡಿತು. ಅದನ್ನು ಆಧರಿಸಿ ರಾಜ್ಯ ಸರ್ಕಾರವು ಮೀಸಲಾತಿ ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ. ಇದೇ ಸಂದರ್ಭದಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಇರುವ ಶೇ 32ರ ಮೀಸಲಾತಿಯನ್ನು ಯಾವುದೇ ಬದಲಾವಣೆಗೆ ಒಳಪಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ.




ಇದು ಸ್ವಾಗತಾರ್ಹ. ಸರ್ಕಾರದ ಸುಗ್ರೀವಾಜ್ಞೆಯನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದಲ್ಲಿ, ಮೀಸಲಾತಿ ಹೆಚ್ಚಳವು ಊರ್ಜಿತವಾಗಬೇಕು ಎಂದಾದರೆ ಸರ್ಕಾರವು ಕೆಲವು ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಬೇಕು.


ಮೀಸಲಾತಿ ಹೆಚ್ಚಿಸುವುದಕ್ಕೆ ಸಮುದಾಯಗಳ ಜನಸಂಖ್ಯೆಯ ನಿಖರ ಅಂಕಿ–ಅಂಶಗಳು ಬೇಕು. ಹಾಗೆಯೇ, ಸಮುದಾಯಗಳ ಸಾಮಾಜಿಕ ಹಿಂದುಳಿದಿರುವಿಕೆ ಖಚಿತವಾಗಬೇಕು. ನಾಗಮೋಹನದಾಸ್ ಆಯೋಗದ ವರದಿಯು ಬಹಿರಂಗವಾಗಿಲ್ಲ. ಜನಸಂಖ್ಯೆ ಪ್ರಮಾಣ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವುದರಲ್ಲಿ ತಪ್ಪಿಲ್ಲ.


ಮೀಸಲಾತಿ ಹೆಚ್ಚಿಸುವ ವಿಚಾರ ಬಂದಾಗಲೆಲ್ಲ ಪ್ರಸ್ತಾಪ ಆಗುವುದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು. ಅಂದರೆ, ಒಟ್ಟು ಮೀಸಲಾತಿಯು ಲಭ್ಯ ಹುದ್ದೆಗಳ ಶೇಕಡ 50ರಷ್ಟನ್ನು ಮೀರಬಾರದು ಎಂಬ ನಿಯಮ. ಈ ಮಾತನ್ನು ಸುಪ್ರೀಂ ಕೋರ್ಟ್‌ 1963ರ ಬಾಲಾಜಿ ಪ್ರಕರಣದಲ್ಲಿಯೂ ಹೇಳಿದೆ. 1992ರ ಮಂಡಲ್ ತೀರ್ಪಿನಲ್ಲಿಯೂ (ಇಂದಿರಾ ಸಹಾನಿ ಪ್ರಕರಣ) ಒಂಬತ್ತು ನ್ಯಾಯಮೂರ್ತಿಗಳ ಪೀಠವು ಈ ಮಾತು ಹೇಳಿದೆ. ಬಾಲಾಜಿ ಪ್ರಕರಣದ ತೀರ್ಪಿನಲ್ಲಿ ಹೇಳಿರುವಂತೆಯೇ, ಶೇ 50ರ ಮಿತಿ ಮೀರಬಾರದೆಂದು ಹೇಳುತ್ತಿರುವುದಾಗಿ ಮಂಡಲ್ ತೀರ್ಪಿನಲ್ಲಿ ಕೋರ್ಟ್ ಹೇಳಿ, ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ ಮೀಸಲಾತಿ ಶೇ 50ರಷ್ಟು ಇರಬೇಕು ಎಂದು ತೀರ್ಮಾನಿಸಿದೆ. ಮೀಸಲಾತಿಯನ್ನು ಹೆಚ್ಚಿಸಬೇಕು ಎಂದಾದರೆ ಅದಕ್ಕೆ ವಿಶಿಷ್ಟವಾದ ಸಂದರ್ಭ ಇರಬೇಕು ಎಂದು ಅರ್ಥೈಸಬಹುದು.


ಅಂದರೆ, ಮೀಸಲಾತಿ ವಿಚಾರವಾಗಿ ಶೇ 50ರ ಮಿತಿಯನ್ನು ಮೀರಲೇಬಾರದು ಎಂದೇನೂ ಇಲ್ಲ. ಶೇ 50 ಎಂಬುದು ಲಕ್ಷ್ಮಣರೇಖೆ ಅಲ್ಲ. ವಿಶೇಷ ಸಂದರ್ಭಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಬಹುದು.


2021ರಲ್ಲಿ ಜೈಶ್ರೀ ಲಕ್ಷ್ಮಣರಾವ್ ಪಾಟೀಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಮಹಾರಾಷ್ಟ್ರ ಸರ್ಕಾರವು ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದರಿಂದಾಗಿ ಒಟ್ಟು ಮೀಸಲಾತಿಯು ಶೇ 50ರ ಗಡಿಯನ್ನು ಮೀರಿದ್ದು, ಹಾಗೆ ಮಿತಿ ಮೀರುವುದಕ್ಕೆ ಬೇಕಿದ್ದ ಅಸಾಧಾರಣ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂಬ ಕಾರಣ ನೀಡಿ ಆ ಮೀಸಲಾತಿಯನ್ನು ಅನೂರ್ಜಿತಗೊಳಿಸಿತು. ಈ ಪ್ರಕರ ಣದಲ್ಲಿ ಮರಾಠಾ ಸಮುದಾಯಕ್ಕೆ ಅಷ್ಟು ಮೀಸಲಾತಿ (ಶೇ 16) ಕಲ್ಪಿಸಲು ಆಧಾರ ಏನು ಎಂಬುದು ಸ್ಪಷ್ಟವಿರಲಿಲ್ಲ, ಅಲ್ಲಿ ಅಂಕಿ–ಅಂಶಗಳ ಕೊರತೆ ಇತ್ತು ಎಂಬುದನ್ನು ಗಮನಿಸಬೇಕು. ಅಲ್ಲದೆ, ಶೇ 50ರ ಮಿತಿಯನ್ನು ಮೀರಬಹುದಾದ ಅಸಾಧಾರಣ ಪರಿಸ್ಥಿತಿ ಯಾವುದು ಎಂಬುದಕ್ಕೆ ಸ್ಪಷ್ಟವಾದ ವಿವರಣೆ ಯಾವ ತೀರ್ಪಿನಲ್ಲಿಯೂ ಈವರೆಗೆ ಬಂದಿಲ್ಲ ಎಂಬ ವಾದ ಇದೆ. ಅಂದರೆ, ಶೇ 50ರ ಮಿತಿ ಎಂಬ ಗಡಿಯನ್ನು ದಾಟುವಂತೆಯೇ ಇಲ್ಲ ಎನ್ನುವಂತಿಲ್ಲ. ಒಟ್ಟಿನಲ್ಲಿ, ಸಂವಿಧಾನ ಬಯಸುವ ಸಮಾನತೆಯ ಆಶಯ ಈಡೇರುವುದು ಮುಖ್ಯ.


ನಮ್ಮಲ್ಲಿ ಶೇ 50ರ ಮಿತಿಯನ್ನು ಮೀರಿರುವ ನಿದರ್ಶನಗಳು ಹಲವು ಇವೆ. ಮೀಸಲಾತಿಯು ಶೇ 50ರಷ್ಟೇ ಇರಬೇಕು ಎಂದು ಕೋರ್ಟ್‌ ಈ ಹಿಂದೆ ಹೇಳಲು ಒಂದು ಕಾರಣ, ಸಮುದಾಯಗಳ ಜನಸಂಖ್ಯೆ ಮತ್ತು ಸಮುದಾಯಗಳ ಹಿಂದುಳಿದಿರುವಿಕೆ ವಿಚಾರವಾಗಿ ಕೋರ್ಟ್‌ ಮುಂದೆ ನಿಖರ ಅಂಕಿ–ಅಂಶಗಳು ಇರದಿದ್ದುದು. ನಿಖರವಾದ ಅಂಕಿ–ಅಂಶಗಳು ಸಿಗುವುದು ಜನಗಣತಿ ಅಥವಾ ಸಮೀಕ್ಷೆಗಳ ಮೂಲಕ. 1931ರ ನಂತರದ ಜಾತಿವಾರು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಕುರಿತ ವಿವರ ಲಭ್ಯವಿಲ್ಲ. ಕರ್ನಾಟಕದಲ್ಲಿ 2015ರಲ್ಲಿ ಜಾತಿವಾರು ಸಮೀಕ್ಷೆ ನಡೆದಿದೆ. ಆದರೆ ಅದರ ವಿವರ ಬಹಿರಂಗವಾಗಿಲ್ಲ.




ಯಾವ ಜಾತಿ ಎಷ್ಟು ಹಿಂದುಳಿದಿದೆ ಅಥವಾ ಮುಂದೆ ಬಂದಿದೆ ಎಂಬ ಬಗ್ಗೆ ಅನುಭವಗಮ್ಯ ಅಂಕಿ–ಅಂಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ. 2010ರಲ್ಲಿ ಕೆ. ಕೃಷ್ಣಮೂರ್ತಿ ಪ್ರಕರಣದಲ್ಲಿಯೂ ಅಂಕಿ–ಅಂಶಗಳ ಕೊರತೆ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನಾವು ಮೀಸಲಾತಿ ನಿಗದಿ ಮಾಡುವುದು ಅಂಕಿ–ಅಂಶ ಆಧರಿಸಿದ್ದರೆ ಶೇ 50ರ ಗಡಿಯನ್ನು ಮೀರಲು ಅವಕಾಶ ಇದೆ.


ಮೀಸಲಾತಿಯ ಮೂಲ ಇರುವುದು ಸಂವಿಧಾನದಲ್ಲಿ. ಮೀಸಲಾತಿಯು ಇಂತಿಷ್ಟೇ ಪ್ರಮಾಣದಲ್ಲಿ ಇರಬೇಕು ಎಂದು ಸಂವಿಧಾನವು ಹೇಳಿಲ್ಲ. ಮೀಸಲಾತಿ ಇರಬೇಕು ಎಂದಷ್ಟೇ ಸಂವಿಧಾನ ಹೇಳುತ್ತದೆ. ಸಂವಿಧಾನದ ಉದ್ದೇಶ ಸಮಾನತೆಯ ಸಾಕಾರ. ಹಿಂದುಳಿದವರು, ಅಶಕ್ತರಿಗೆ ಶಕ್ತಿ ತುಂಬಿದಾಗ ಮಾತ್ರ ಸಮಾನತೆ ಸಾಧ್ಯ ಎಂಬುದು ಅದರ ಆಶಯ. ಸಮಾನತೆಯನ್ನು ತರಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಿ ಎಂದು ಸಂವಿಧಾನ ಹೇಳುತ್ತದೆ. 1985ರ ಕೆ.ಸಿ. ವಸಂತಕುಮಾರ್ ಪ್ರಕರಣ ದಲ್ಲಿ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿಯವರು, ‘ಮೀಸಲಾತಿ ಪ್ರಮಾಣಕ್ಕೆ ಮಿತಿ ಹೇರುವುದು ನ್ಯಾಯಾಲಯದ ಕೆಲಸವಲ್ಲ. ಆದರೆ ಅದು ಜನರ ಹಕ್ಕು. ಅಷ್ಟೇ ಅಲ್ಲ, ಮೀಸಲಾತಿ ಪ್ರಮಾಣ ನಿಗದಿಪಡಿಸಲು ಅಗತ್ಯ ಆಧಾರ ಇಲ್ಲದಿದ್ದಾಗ ಮೀಸಲಾತಿಯು ಶೇ 40, 50, 60 ಅನ್ನು ಮೀರಬಾರದು ಎಂದು ಹೇಳಿದರೆ ಅದು ಇಚ್ಛಾನುಸಾರ ವರ್ತನೆಯಾಗುತ್ತದೆ. ಅದಕ್ಕೆ ಸಂವಿಧಾನ ಅವಕಾಶ ಕೊಡುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇವನ್ನೆಲ್ಲ ಆಧಾರವಾಗಿ ಇರಿಸಿಕೊಂಡು, ಜಾತಿಗಳ ಹಿಂದುಳಿದಿರುವಿಕೆಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ನಿಖರವಾಗಿ ಇಟ್ಟುಕೊಂಡು ಮುನ್ನಡೆದರೆ ಶೇ 50ರ ಮಿತಿಯನ್ನು ಮೀರಲು ಆಗದ ಸನ್ನಿವೇಶ ಎದುರಾಗುವು ದಿಲ್ಲ. ಕರ್ನಾಟಕದಲ್ಲಿ ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿ ಕಲ್ಪಿಸಬೇಕಾದ ಸಂದರ್ಭ ಇದೆ ಎಂಬುದನ್ನು ಸಾಬೀತು ಪಡಿಸಬೇಕು. ಆಗ ಮೀಸಲಾತಿ ಹೆಚ್ಚಿಸಿದ ಕ್ರಮವು ಉಳಿದುಕೊಳ್ಳುತ್ತದೆ.


ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನವು ನ್ಯಾಯಾಲಯದಲ್ಲಿ ‍ಪ್ರಶ್ನೆಗೆ ಒಳಗಾದರೆ, ಮೀಸಲಾತಿ ಪ್ರಮಾಣವನ್ನು ಎಸ್‌ಸಿ ಸಮುದಾಯಗಳಿಗೆ ಶೇ 2ರಷ್ಟು, ಎಸ್‌ಟಿ ಸಮುದಾಯಗಳಿಗೆ ಶೇ 4ರಷ್ಟು ಜಾಸ್ತಿ ಮಾಡಲು ಅಂಕಿ–ಅಂಶ ಏನಿದೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಸೂಕ್ತ ವಿವರಣೆ ನೀಡಿದಲ್ಲಿ ಕ್ರಮ ಸಿಂಧುವಾಗುವ ಸಾಧ್ಯತೆ ಇರುತ್ತದೆ. ಇಂದಿರಾ ಸಹಾನಿ ಪ್ರಕರಣದ ಮರು ‍‍ಪರಿಶೀಲನೆಗೆ ಕೂಡ ಸರ್ಕಾರ ಮನವಿ ಮಾಡಬಹುದು. ಅಥವಾ ಮೀಸಲಾತಿ ಹೆಚ್ಚಿಸಲು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು.


ಮೀಸಲಾತಿ ಹೆಚ್ಚಿಸುವ ಕ್ರಮವನ್ನು ಸಂವಿಧಾನದ 9ನೆಯ ಪರಿಚ್ಛೇದಕ್ಕೆ ಸೇರಿಸಿದ ಮಾತ್ರಕ್ಕೆ ಅದು ಸಿಂಧುವಾಗುತ್ತದೆ ಎನ್ನಲಾಗದು. ಏಕೆಂದರೆ, ಹಾಗೆ 9ನೆಯ ಪರಿಚ್ಛೇದಕ್ಕೆ ಸೇರಿಸುವ ಕ್ರಮ ಕಾನೂನು ಪ್ರಕಾರ ಇತ್ತೇ, ಹಾಗೆ ಸೇರಿಸುವುದಕ್ಕೆ ಅಂಕಿ–ಅಂಶಗಳ ಆಧಾರ ಇದೆಯೇ, ಪರಿಚ್ಛೇದಕ್ಕೆ ಸೇರಿಸಿದ್ದರಿಂದ ಸಂವಿಧಾನದ ಮೂಲತತ್ವಗಳಿಗೆ ಧಕ್ಕೆ ಬಂದಿದೆಯೇ ಎಂಬ ನೆಲೆಯಲ್ಲಿ ನ್ಯಾಯಾಲಯದಲ್ಲಿ ಅದನ್ನು ‍ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಹೇಳಿರುವುದು ಗಮನಾರ್ಹ. ಮೀಸಲಾತಿ ಹೆಚ್ಚಳದ ತೀರ್ಮಾನವನ್ನು 9ನೇ ಪರಿಚ್ಛೇದಕ್ಕೆ ಸೇರಿಸಿದ ಮಾತ್ರಕ್ಕೆ ಅದು ಪ್ರಶ್ನಾತೀತ ಆಗುವುದಿಲ್ಲ. ಮೇಲೆ ವಿವರಿಸಿರುವ ನಿರ್ದಿಷ್ಟ ಕ್ರಮಗಳ ಮೂಲಕ, ಮೀಸಲಾತಿ ಹೆಚ್ಚಳವನ್ನು ಊರ್ಜಿತವಾಗಿಸಬಹುದು. ಹಾಗೆ ಮಾಡಿದಾಗ ಮಾತ್ರ ಸರ್ಕಾರ ಈಗ ಕೈಗೊಂಡಿರುವ ಕ್ರಮಕ್ಕೆ ಭವಿಷ್ಯ ಇರುತ್ತದೆ.


ಲೇಖಕ: ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ, ರಾಜ್ಯ ⇒ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ

ಗುರುವಾರ, ಸೆಪ್ಟೆಂಬರ್ 15, 2022

ನಿವೃತ್ತಿ ಘೋಷಿಸಿದ ಟೇನಿಸ್ ಲೋಕದ ದಂತಕಥೆ ರೋಜರ್ ಪೆಡರರ್

ಲಾಸೆನ್, ಸ್ವಿಟ್ಜರ್‌ಲೆಂಡ್: ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್(41) ಅವರು ವೃತ್ತಿಪರ ಟೆನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ.

ಸುದೀರ್ಘ ಬರಹವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಫೆಡರರ್, ‘ಲೇವರ್ ಕಪ್–2022’ರ ನಂತರ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿನ ಪ್ರತಿಸ್ಪರ್ಧಿಗಳು ಹಾಗೂ ಅಭಿಮಾನಿಗಳಿಗೆ ಫೆಡರರ್ ಧನ್ಯವಾದ ಅರ್ಪಿಸಿದ್ದಾರೆ.

ರೋಜರ್ ಫೆಡರರ್ ಅವರು 24 ವರ್ಷಗಳ ಕಾಲ ಸ್ವಿಟ್ಜರ್‌ಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ.

ಶನಿವಾರ, ಜೂನ್ 11, 2022

ರಾಜ್ಯದ ವಿವಿಗಳಿಗೆ `UGC' ನಿವೃತ್ತಿ ವಯೋಮಿತಿ ಕಡ್ಡಾಯವಲ್ಲ : ಹೈಕೋರ್ಟ್ ಮಹತ್ವದ ಆದೇಶ

ರಾಜ್ಯದ ವಿವಿಗಳಿಗೆ `UGC' ನಿವೃತ್ತಿ ವಯೋಮಿತಿ ಕಡ್ಡಾಯವಲ್ಲ : ಹೈಕೋರ್ಟ್ ಮಹತ್ವದ ಆದೇಶ

10 Jun 2022.06:55 AM

ಬೆಂಗಳೂರು : ವಿಶ್ವವಿದ್ಯಾಲಯಗಳ ಬೋಧಕರ ನಿವೃತ್ತಿಯ ವಯಸ್ಸನ್ನು 62 ವರ್ಷದಿಂದ 65 ವರ್ಷಕ್ಕೆ ಹೆಚ್ಚಳ ಮಾಡಿ ಯುಜಿಸಿ (UGC) ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವುದು ರಾಜ್ಯ ಸರ್ಕಾರಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.


ಧಾರವಾಡದ ಕೃಷಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಚಿದಾನಂದ ಪಿ. ಮನ್ಸೂರ್, ಯುಜಿಸಿ ನಿಯಮಾವಳಿ ಅನ್ವಯಿಸುವ ಮೂಲಕ 65 ವರ್ಷದವರೆಗೆ ಸೇವೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಇದ್ದ ಪೀಠ ವಿವಿಗಳ ಬೋಧಕರ ನಿವೃತ್ತಿಯ ವಯಸ್ಸನ್ನು 62 ವರ್ಷದಿಂದ 65 ವರ್ಷಕ್ಕೆ ಹೆಚ್ಚಳ ಮಾಡಿ ಯುಜಿಸಿ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವುದು ರಾಜ್ಯದ ವಿವಿಗಳಿಗೆ ಕಡ್ಡಾಯವಲ್ಲ ಎಂದು ಆದೇಶಿಸಿದೆ.


ಇನ್ನು ಯುಜಿಸಿ 2018 ರ ನಿಯಮಗಳ ಕುರಿತು ರಾಜ್ಯ ವಿವಿಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ನಿವೃತ್ತಿಯ ವಯೋಮಿತಿ ನಿಗದಿಯ ವಿಚಾರವನ್ನು ರಾಜ್ಯ ವಿಶ್ವವಿದ್ಯಾಲಯಗಳಿಗೆ ವಿವೇಚನೆಗೆ ಬಿಟ್ಟಿದೆ ಎಂದು ಹೈಕೋರ್ಟ್ ತಿಳಿಸಿದೆ.


ಮಂಗಳವಾರ, ಜೂನ್ 7, 2022

ಪ್ರಮುಖ ಸಾಹಿತ್ಯಿಕ ಆಧಾರಗಳು

💐 ಪ್ರಮುಖ ಸಾಹಿತ್ಯಿಕ ಆಧಾರಗಳು💐 

📌 ಅರ್ಥಶಾಸ್ತ್ರ= ಚಾಣಕ್ಯ
( "ಮೌರ್ಯರ ಆಡಳಿತ", ಬಗ್ಗೆ ತಿಳಿಸುವ ಕೃತಿ. )

📌 ಮುದ್ರಾರಾಕ್ಷಸ= ವಿಶಾಖದತ್ತ ( "ಚಂದ್ರಗುಪ್ತ ಮೌರ್ಯನ ಬಗ್ಗೆ" ವಿವರ. )

📌 ಹರ್ಷಚರಿತೆ= ಬಾಣಭಟ್ಟ ( "ಹರ್ಷವರ್ಧನನ ಜೀವನ ಸಾಧನೆಗಳು")

📌 ರಾಮಚರಿತ= ಸಂಧ್ಯಾ ಕರನಂದಿ ( "ಬಂಗಾಳದ ಅರಸ ರಾಮಪಾಲನ ಆಳ್ವಿಕೆ ಬಗ್ಗೆ",)

📌 ರಾಜತರಂಗಿಣಿ= ಕಲ್ಹಣ ( "ಕಾಶ್ಮೀರದ ಇತಿಹಾಸದ ಬಗ್ಗೆ")

📌 ಕವಿರಾಜಮಾರ್ಗ= ಶ್ರೀವಿಜಯ ( "ರಾಷ್ಟ್ರಕೂಟರ ಬಗ್ಗೆ")

📌 ಚಾವುಂಡರಾಯ ಪುರಾಣ= ಚಾವುಂಡರಾಯ ( "ಗಂಗರ ಆಳ್ವಿಕೆ ಬಗ್ಗೆ".)

📌 ಆದಿಪುರಾಣ= ಪಂಪ ( "ಅರಿಕೇಸರಿ ಮತ್ತು ಅವನ ಉತ್ತರಾಧಿಕಾರಿಗಳ ಆಳ್ವಿಕೆ ಬಗ್ಗೆ",)

📌 ಅಜಿತನಾಥ ಪುರಾಣ= ರನ್ನ ( "ಎರಡನೇ ತೈಲಪನ ಬಗ್ಗೆ.")

📌 ಗದಾಯುದ್ಧ= ರನ್ನ ( "ಇರುವ ಬೆಡಂಗ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಕೆ".)

📌 ವಿಕ್ರಮಂಕದೇವಚರಿತ= ಬಿಲ್ಹಣ ( 6ನೇ ವಿಕ್ರಮಾದಿತ್ಯನ ಆಳ್ವಿಕೆ ಬಗ್ಗೆ.)
(SDA-2019)

📌 ಕುಮಾರರಾಮನ ಸಾಂಗತ್ಯ= ನಂಜುಂಡ ಕವಿ ( "ಕುಮಾರರಾಮನ ಬಗ್ಗೆ.")

📌 ಪೃಥ್ವಿರಾಜ ರಾಸೋ= ಚಾಂದ್ ಬರ್ದಾಯ್ ( "ಪೃಥ್ವಿರಾಜನ ಸಂಯುಕ್ತೇ ವಿವಾಹ ಬಗ್ಗೆ.")

📌 "ಮಧುರಾವಿಜಯಂ"= ಗಂಗಾದೇವಿ ( "ಕಂಪನ ಸಾಧನೆ, ಮಧುರೆಯ ದಿಗ್ವಿಜಯ ಬಗ್ಗೆ",)

📌 "ಪಾರಿಜಾತಾಪಹರಮ್"= ನಂದಿ ತಿಮ್ಮಣ್ಣ ( ಕೃಷ್ಣದೇವರಾಯ ಮತ್ತು ಪ್ರತಾಪ ರುದ್ರನ ಯುದ್ಧದ ವಿವರ,)

📌" ಅಮುಕ್ತಮೌಲ್ಯ"= ಕೃಷ್ಣದೇವರಾಯ ( ಆಡಳಿತಾತ್ಮಕ ವಿವರಗಳ ಮಾರ್ಗದರ್ಶಿ,)

📌 "ತಾಜಿಕ-ರಾತ್- ಮುಲ್ಕಿ"= ಸಿರಾಜಿ ( ಬಹುಮನಿ ಗಳ ಬಗ್ಗೆ,)

📌 "ತಾಜ್-ಉಲ್-ಮಾಸಿತ್"= ನಿಜಾಮೀ ( ದೆಹಲಿ ಸುಲ್ತಾನರ ಬಗ್ಗೆ)

📌"ತಾರೀಕ್-ಇ-ಯಾಮಿನಿ"= ಉತ್ಬ್ ( ಸಬಕ್ತಗಿನ್, ಮತ್ತು ಗೋರಿಯ ಮಹಮ್ಮದನ ಬಗ್ಗೆ,)

📌"ಜೈನ್-ಉಲ್- -ಅಕ್ಬರ್"= ಅಬುಸೈದ್ ( ಗಜನಿ ಮೊಹಮ್ಮದ್ ಬಗ್ಗೆ ವಿವರ,)

ಸೋಮವಾರ, ಜೂನ್ 6, 2022

ವಿಟಾಮಿನ್ ( vitamin)ಗಳ ಅಥವಾ ಜೀವಸತ್ವಗಳ ಕುರಿತ ಪ್ರಮುಖ ಪ್ರಶ್ನೆಗಳು

ವಿಟಾಮಿನ್ ( vitamin)ಗಳ ಅಥವಾ ಜೀವಸತ್ವಗಳ ಕುರಿತ ಪ್ರಮುಖ ಪ್ರಶ್ನೆಗಳು

ಜೀವಸತ್ವಗಳು ಯಾವುವು?

ವಿಟಮಿನ್‌ಗಳು ಸಾಮಾನ್ಯ ಆರೋಗ್ಯ ಮತ್ತು ಪ್ರಾಣಿಗಳ ಉನ್ನತ ರೂಪಗಳ ಬೆಳವಣಿಗೆಗೆ ಸಣ್ಣ ಪ್ರಮಾಣದಲ್ಲಿ ಅಗತ್ಯವಿರುವ ಹಲವಾರು ಸಾವಯವ ಪದಾರ್ಥಗಳಾಗಿವೆ. ವಿಟಮಿನ್ ಸಿ ಯಲ್ಲಿರುವಂತೆ ಅವುಗಳನ್ನು ಸಾಮಾನ್ಯವಾಗಿ ವರ್ಣಮಾಲೆಯ ಆಯ್ದ ಅಕ್ಷರಗಳಿಂದ ಗೊತ್ತುಪಡಿಸಲಾಗುತ್ತದೆ, ಆದರೂ ಅವುಗಳನ್ನು ರಾಸಾಯನಿಕ ಹೆಸರುಗಳಿಂದ ಗೊತ್ತುಪಡಿಸಲಾಗುತ್ತದೆ.

ಜೀವಸತ್ವಗಳ ಎರಡು ಮುಖ್ಯ ಗುಂಪುಗಳು ಯಾವುವು?

ಸಾಂಪ್ರದಾಯಿಕವಾಗಿ ವಿಟಮಿನ್‌ಗಳನ್ನು ನೀರಿನಲ್ಲಿ ಕರಗುವ ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳೆಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನೀರಿನಲ್ಲಿ ಕರಗುವ ಜೀವಸತ್ವಗಳೆಂದರೆ ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್ ಬಿ 6 , ಫೋಲಿಕ್ ಆಮ್ಲ, ವಿಟಮಿನ್ ಬಿ 12 , ಪಾಂಟೊಥೆನಿಕ್ ಆಮ್ಲ, ಬಯೋಟಿನ್ ಮತ್ತು ವಿಟಮಿನ್ ಸಿ. ಕೊಬ್ಬು ಕರಗುವ ವಿಟಮಿನ್‌ಗಳು ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಡಿ ಮತ್ತು ವಿಟಮಿನ್ ಕೆ. .

ಜೀವಸತ್ವಗಳ ಮೂಲಗಳು ಯಾವುವು?

ಸಸ್ಯಗಳು ಮತ್ತು ಪ್ರಾಣಿಗಳೆರಡೂ ವಿಟಮಿನ್ಗಳಿಗೆ ಪ್ರಮುಖ ನೈಸರ್ಗಿಕ ಮೂಲಗಳಾಗಿವೆ. ಎಲ್ಲಾ ಜೀವಸತ್ವಗಳನ್ನು ಆಹಾರ ಮೂಲಗಳಿಂದ ಸಂಶ್ಲೇಷಿಸಬಹುದು ಅಥವಾ ವಾಣಿಜ್ಯಿಕವಾಗಿ ಉತ್ಪಾದಿಸಬಹುದು ಮತ್ತು ಔಷಧೀಯ ಸಿದ್ಧತೆಗಳಲ್ಲಿ ಮಾನವ ಬಳಕೆಗೆ ಲಭ್ಯವಿದೆ.

ವಿಟಮಿನ್ ಕೊರತೆಯಿಂದ ಯಾವ ಸಾಮಾನ್ಯ ರೋಗಗಳು ಉಂಟಾಗುತ್ತವೆ?

ನಿರ್ದಿಷ್ಟ ಜೀವಸತ್ವಗಳ ಅಸಮರ್ಪಕ ಸೇವನೆಯು ವಿಶಿಷ್ಟವಾದ ಕೊರತೆಯ ಕಾಯಿಲೆಗೆ ಕಾರಣವಾಗಬಹುದು (ಹೈಪೋವಿಟಮಿನೋಸಿಸ್), ಮತ್ತು ತೀವ್ರತೆಯು ವಿಟಮಿನ್ ಕೊರತೆಯ ಮಟ್ಟವನ್ನು ಅವಲಂಬಿಸಿರುತ್ತದೆ. ರೋಗಲಕ್ಷಣಗಳು ನಿರ್ದಿಷ್ಟವಾಗಿರಬಹುದು (ಉದಾಹರಣೆಗೆ, ವಿಟಮಿನ್ ಎ ಕೊರತೆಯೊಂದಿಗೆ ಕ್ರಿಯಾತ್ಮಕ ರಾತ್ರಿ ಕುರುಡುತನ), ಅನಿರ್ದಿಷ್ಟ (ಉದಾಹರಣೆಗೆ, ಹಸಿವಿನ ಕೊರತೆ, ಬೆಳವಣಿಗೆಯಲ್ಲಿ ವಿಫಲತೆ) ಅಥವಾ ಬದಲಾಯಿಸಲಾಗದ (ಉದಾ, ಕಣ್ಣಿನ ಕಾರ್ನಿಯಾ, ನರ ಅಂಗಾಂಶ, ಕ್ಯಾಲ್ಸಿಫೈಡ್ ಮೂಳೆಗೆ ಹಾನಿ).

ಮಾನವರಲ್ಲಿ ವಿಟಮಿನ್ ಅವಶ್ಯಕತೆಗಳು ಯಾವುವು?

ಮಾನವರಿಗೆ ವಿಟಮಿನ್ ಅವಶ್ಯಕತೆಗಳ ಬಗ್ಗೆ ಯಾವುದೇ ಏಕರೂಪದ ಒಪ್ಪಂದವಿಲ್ಲ, ಆದರೆ ಶಿಫಾರಸು ಮಾಡಲಾದ ದೈನಂದಿನ ವಿಟಮಿನ್ ಸೇವನೆಯು ವೈಯಕ್ತಿಕ ವ್ಯತ್ಯಾಸಗಳು ಮತ್ತು ಸಾಮಾನ್ಯ ಪರಿಸರ ಒತ್ತಡಗಳನ್ನು ಗಣನೆಗೆ ತೆಗೆದುಕೊಳ್ಳಲು ಸಾಕಷ್ಟು ಹೆಚ್ಚು.

ಈ ವಿಷಯದ ಸಂಕ್ಷಿಪ್ತ ಸಾರಾಂಶವನ್ನು ಓದಿ

ವಿಟಮಿನ್ , ಸಾಮಾನ್ಯ ಆರೋಗ್ಯ ಮತ್ತು ಹೆಚ್ಚಿನ ಪ್ರಾಣಿಗಳ ಜೀವನದ ಬೆಳವಣಿಗೆಗೆ ಸಣ್ಣ ಪ್ರಮಾಣದಲ್ಲಿ ಅಗತ್ಯವಿರುವ ಹಲವಾರು ಸಾವಯವ ಪದಾರ್ಥಗಳಲ್ಲಿ ಯಾವುದಾದರೂ. ವಿಟಮಿನ್‌ಗಳು ಪ್ರೋಟೀನ್‌ಗಳು , ಕಾರ್ಬೋಹೈಡ್ರೇಟ್‌ಗಳು ಮತ್ತು ಲಿಪಿಡ್‌ಗಳಂತಹ ಇತರ ಜೈವಿಕವಾಗಿ ಪ್ರಮುಖ ಸಂಯುಕ್ತಗಳಿಂದ ಹಲವಾರು ವಿಧಗಳಲ್ಲಿ ವಿಭಿನ್ನವಾಗಿವೆ . ಈ ನಂತರದ ಪದಾರ್ಥಗಳು ಸರಿಯಾದ ದೈಹಿಕ ಕ್ರಿಯೆಗಳಿಗೆ ಅನಿವಾರ್ಯವಾಗಿದ್ದರೂ, ಬಹುತೇಕ ಎಲ್ಲವನ್ನು ಪ್ರಾಣಿಗಳು ಸಾಕಷ್ಟು ಪ್ರಮಾಣದಲ್ಲಿ ಸಂಶ್ಲೇಷಿಸಬಹುದು. ಮತ್ತೊಂದೆಡೆ, ವಿಟಮಿನ್‌ಗಳನ್ನು ಸಾಮಾನ್ಯವಾಗಿ ದೈಹಿಕ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಸಂಶ್ಲೇಷಿಸಲಾಗುವುದಿಲ್ಲ ಮತ್ತು ಆದ್ದರಿಂದ ಆಹಾರದಿಂದ ಅಥವಾ ಕೆಲವು ಸಂಶ್ಲೇಷಿತದಿಂದ ಪಡೆಯಬೇಕು.ಮೂಲ. ಈ ಕಾರಣಕ್ಕಾಗಿ, ಜೀವಸತ್ವಗಳನ್ನು ಅಗತ್ಯ ಪೋಷಕಾಂಶಗಳು ಎಂದು ಕರೆಯಲಾಗುತ್ತದೆ. ಜೀವಸತ್ವಗಳು ಇತರ ಜೈವಿಕ ಸಂಯುಕ್ತಗಳಿಗಿಂತ ಭಿನ್ನವಾಗಿರುತ್ತವೆ, ಅವುಗಳ ಕಾರ್ಯಗಳನ್ನು ಪೂರ್ಣಗೊಳಿಸಲು ತುಲನಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿ ಬೇಕಾಗುತ್ತದೆ. ಸಾಮಾನ್ಯವಾಗಿ ಈ ಕಾರ್ಯಗಳು ವೇಗವರ್ಧಕ ಅಥವಾ ನಿಯಂತ್ರಕ ಸ್ವಭಾವವನ್ನು ಹೊಂದಿರುತ್ತವೆ, ದೇಹದ ಜೀವಕೋಶಗಳಲ್ಲಿ ಪ್ರಮುಖ ರಾಸಾಯನಿಕ ಪ್ರತಿಕ್ರಿಯೆಗಳನ್ನು ಸುಗಮಗೊಳಿಸುತ್ತದೆ ಅಥವಾ ನಿಯಂತ್ರಿಸುತ್ತದೆ. ಒಂದು ವಿಟಮಿನ್ ಆಹಾರದಲ್ಲಿ ಇಲ್ಲದಿದ್ದರೆ ಅಥವಾ ದೇಹದಿಂದ ಸರಿಯಾಗಿ ಹೀರಲ್ಪಡದಿದ್ದರೆ, ನಿರ್ದಿಷ್ಟ ಕೊರತೆಯ ರೋಗವು ಬೆಳೆಯಬಹುದು.

ವಿಟಮಿನ್‌ಗಳನ್ನು ಸಾಮಾನ್ಯವಾಗಿ ವರ್ಣಮಾಲೆಯ ಆಯ್ದ ಅಕ್ಷರಗಳಿಂದ ಗೊತ್ತುಪಡಿಸಲಾಗುತ್ತದೆ, ವಿಟಮಿನ್ ಡಿ ಅಥವಾ ವಿಟಮಿನ್ ಸಿ ಯಂತೆ , ಅವುಗಳನ್ನು ರಾಸಾಯನಿಕ ಹೆಸರುಗಳಾದ ನಿಯಾಸಿನ್ ಮತ್ತು ಫೋಲಿಕ್ ಆಮ್ಲದಿಂದಲೂ ಗೊತ್ತುಪಡಿಸಲಾಗುತ್ತದೆ . ಜೀವರಸಾಯನಶಾಸ್ತ್ರಜ್ಞರು ಸಾಂಪ್ರದಾಯಿಕವಾಗಿ ಅವುಗಳನ್ನು ನೀರಿನಲ್ಲಿ ಕರಗುವ ಜೀವಸತ್ವಗಳು ಮತ್ತು ಕೊಬ್ಬು-ಕರಗಬಲ್ಲ ಜೀವಸತ್ವಗಳು ಎಂದು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ಎರಡೂ ಗುಂಪುಗಳ ಜೀವಸತ್ವಗಳ ಸಾಮಾನ್ಯ ಮತ್ತು ರಾಸಾಯನಿಕ ಹೆಸರುಗಳು, ಅವುಗಳ ಮುಖ್ಯ ಜೈವಿಕ ಕಾರ್ಯಗಳು ಮತ್ತು ಕೊರತೆಯ ಲಕ್ಷಣಗಳೊಂದಿಗೆ ಪಟ್ಟಿಮಾಡಲಾಗಿದೆಟೇಬಲ್.

ಜೀವಸತ್ವಗಳು
ವಿಟಮಿನ್ಪರ್ಯಾಯ ಹೆಸರುಗಳು/ರೂಪಗಳುಜೈವಿಕ ಕಾರ್ಯಕೊರತೆಯ ಲಕ್ಷಣಗಳು
ನೀರಿನಲ್ಲಿ ಕರಗುವ
ಥಯಾಮಿನ್ವಿಟಮಿನ್ ಬಿ 1ಕಾರ್ಬೋಹೈಡ್ರೇಟ್ ಚಯಾಪಚಯ ಕ್ರಿಯೆಯಲ್ಲಿ ಕೋಎಂಜೈಮ್ನ ಅಂಶ; ಸಾಮಾನ್ಯ ನರಗಳ ಕಾರ್ಯವನ್ನು ಬೆಂಬಲಿಸುತ್ತದೆನರಗಳ ದುರ್ಬಲತೆ ಮತ್ತು ಹೃದಯ ಸ್ನಾಯುವಿನ ಕ್ಷೀಣತೆ
ರೈಬೋಫ್ಲಾವಿನ್ವಿಟಮಿನ್ ಬಿ 2ಶಕ್ತಿ ಉತ್ಪಾದನೆ ಮತ್ತು ಲಿಪಿಡ್, ವಿಟಮಿನ್, ಖನಿಜ, ಮತ್ತು ಔಷಧ ಚಯಾಪಚಯಕ್ಕೆ ಅಗತ್ಯವಿರುವ ಸಹಕಿಣ್ವಗಳ ಘಟಕ; ಉತ್ಕರ್ಷಣ ನಿರೋಧಕಚರ್ಮ, ನಾಲಿಗೆ ಮತ್ತು ತುಟಿಗಳ ಉರಿಯೂತ; ಕಣ್ಣಿನ ಅಡಚಣೆಗಳು; ನರ ಲಕ್ಷಣಗಳು
ನಿಯಾಸಿನ್ನಿಕೋಟಿನಿಕ್ ಆಮ್ಲ, ನಿಕೋಟಿನಮೈಡ್ಸೆಲ್ಯುಲಾರ್ ಚಯಾಪಚಯ, ಇಂಧನ ಅಣುಗಳ ಆಕ್ಸಿಡೀಕರಣ ಮತ್ತು ಕೊಬ್ಬಿನಾಮ್ಲ ಮತ್ತು ಸ್ಟೀರಾಯ್ಡ್ ಸಂಶ್ಲೇಷಣೆಯಲ್ಲಿ ವ್ಯಾಪಕವಾಗಿ ಬಳಸುವ ಸಹಕಿಣ್ವಗಳ ಘಟಕಚರ್ಮದ ಗಾಯಗಳು, ಜಠರಗರುಳಿನ ತೊಂದರೆಗಳು, ನರಗಳ ಲಕ್ಷಣಗಳು
ವಿಟಮಿನ್ ಬಿ 6ಪಿರಿಡಾಕ್ಸಿನ್, ಪಿರಿಡಾಕ್ಸಲ್, ಪಿರಿಡಾಕ್ಸಮೈನ್ಅಮೈನೋ ಆಮ್ಲಗಳು ಮತ್ತು ಇತರ ಸಾರಜನಕ-ಒಳಗೊಂಡಿರುವ ಸಂಯುಕ್ತಗಳ ಚಯಾಪಚಯ ಕ್ರಿಯೆಯಲ್ಲಿ ಸಹಕಿಣ್ವಗಳ ಘಟಕ; ಹಿಮೋಗ್ಲೋಬಿನ್, ನರಪ್ರೇಕ್ಷಕಗಳ ಸಂಶ್ಲೇಷಣೆ; ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ನಿಯಂತ್ರಣಡರ್ಮಟೈಟಿಸ್, ಮಾನಸಿಕ ಖಿನ್ನತೆ, ಗೊಂದಲ, ಸೆಳೆತ, ರಕ್ತಹೀನತೆ
ಫೋಲಿಕ್ ಆಮ್ಲಫೋಲೇಟ್, ಫೋಲಾಸಿನ್, ಪ್ಟೆರಾಯ್ಲ್ಗ್ಲುಟಾಮಿಕ್ ಆಮ್ಲಡಿಎನ್ಎ ಸಂಶ್ಲೇಷಣೆಯಲ್ಲಿ ಸಹಕಿಣ್ವಗಳ ಘಟಕ, ಅಮೈನೋ ಆಮ್ಲಗಳ ಚಯಾಪಚಯ; ಕೋಶ ವಿಭಜನೆ, ಕೆಂಪು ರಕ್ತ ಕಣಗಳ ಪಕ್ವತೆಗೆ ಅಗತ್ಯಕೆಂಪು ರಕ್ತ ಕಣಗಳ ದುರ್ಬಲ ರಚನೆ, ದೌರ್ಬಲ್ಯ, ಕಿರಿಕಿರಿ, ತಲೆನೋವು, ಬಡಿತ, ಬಾಯಿಯ ಉರಿಯೂತ, ಭ್ರೂಣದಲ್ಲಿ ನರ ಕೊಳವೆಯ ದೋಷಗಳು
ವಿಟಮಿನ್ ಬಿ 12ಕೋಬಾಲಾಮಿನ್, ಸೈನೊಕೊಬಾಲಾಮಿನ್ಅಮೈನೋ ಆಮ್ಲಗಳ (ಫೋಲಿಕ್ ಆಮ್ಲವನ್ನು ಒಳಗೊಂಡಂತೆ) ಮತ್ತು ಕೊಬ್ಬಿನಾಮ್ಲಗಳ ಚಯಾಪಚಯ ಕ್ರಿಯೆಯಲ್ಲಿ ಕಿಣ್ವಗಳಿಗೆ ಸಹಕಾರಿ; ಹೊಸ ಕೋಶ ಸಂಶ್ಲೇಷಣೆ, ಸಾಮಾನ್ಯ ರಕ್ತ ರಚನೆ ಮತ್ತು ನರವೈಜ್ಞಾನಿಕ ಕ್ರಿಯೆಗೆ ಅಗತ್ಯವಿದೆನಾಲಿಗೆನ ಮೃದುತ್ವ, ಜೀರ್ಣಾಂಗವ್ಯೂಹದ ಅಡಚಣೆಗಳು, ನರಗಳ ಲಕ್ಷಣಗಳು
ಪಾಂಟೊಥೆನಿಕ್ ಆಮ್ಲಕಾರ್ಬೋಹೈಡ್ರೇಟ್, ಪ್ರೊಟೀನ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಗೆ ಅಗತ್ಯವಾದ ಕೋಎಂಜೈಮ್ ಎ ಘಟಕವಾಗಿ; ಕೊಬ್ಬಿನಾಮ್ಲಗಳ ವಿಸ್ತರಣೆಗೆ ಸಹಕಾರಿದೌರ್ಬಲ್ಯ, ಜಠರಗರುಳಿನ ತೊಂದರೆಗಳು, ನರಗಳ ಲಕ್ಷಣಗಳು, ಆಯಾಸ, ನಿದ್ರಾ ಭಂಗ, ಚಡಪಡಿಕೆ, ವಾಕರಿಕೆ
ಬಯೋಟಿನ್ಕಾರ್ಬೋಹೈಡ್ರೇಟ್, ಕೊಬ್ಬಿನಾಮ್ಲ ಮತ್ತು ಅಮೈನೋ ಆಸಿಡ್ ಚಯಾಪಚಯ ಕ್ರಿಯೆಯಲ್ಲಿ ಸಹಕಾರಿಡರ್ಮಟೈಟಿಸ್, ಕೂದಲು ನಷ್ಟ, ಕಾಂಜಂಕ್ಟಿವಿಟಿಸ್, ನರವೈಜ್ಞಾನಿಕ ಲಕ್ಷಣಗಳು
ವಿಟಮಿನ್ ಸಿಆಸ್ಕೋರ್ಬಿಕ್ ಆಮ್ಲಉತ್ಕರ್ಷಣ ನಿರೋಧಕ; ಕಾಲಜನ್, ಕಾರ್ನಿಟೈನ್, ಅಮೈನೋ ಆಮ್ಲಗಳು ಮತ್ತು ಹಾರ್ಮೋನುಗಳ ಸಂಶ್ಲೇಷಣೆ; ಪ್ರತಿರಕ್ಷಣಾ ಕಾರ್ಯ; ಹೀಮ್ ಅಲ್ಲದ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ (ಸಸ್ಯ ಆಹಾರಗಳಿಂದ)ಒಸಡುಗಳು ಊದಿಕೊಂಡ ಮತ್ತು ರಕ್ತಸ್ರಾವವಾಗುವುದು, ಕೀಲುಗಳು ಮತ್ತು ಕೆಳ ತುದಿಗಳ ನೋವು ಮತ್ತು ಠೀವಿ, ಚರ್ಮದ ಅಡಿಯಲ್ಲಿ ಮತ್ತು ಆಳವಾದ ಅಂಗಾಂಶಗಳಲ್ಲಿ ರಕ್ತಸ್ರಾವ, ನಿಧಾನ ಗಾಯ ಗುಣವಾಗುವುದು, ರಕ್ತಹೀನತೆ
ಕೊಬ್ಬು ಕರಗುವ
ವಿಟಮಿನ್ ಎರೆಟಿನಾಲ್, ರೆಟಿನಾಲ್, ರೆಟಿನೊಯಿಕ್ ಆಮ್ಲ, ಬೀಟಾ-ಕ್ಯಾರೋಟಿನ್ (ಸಸ್ಯ ಆವೃತ್ತಿ)ಸಾಮಾನ್ಯ ದೃಷ್ಟಿ, ಎಪಿತೀಲಿಯಲ್ ಕೋಶಗಳ ಸಮಗ್ರತೆ (ಲೋಳೆಯ ಪೊರೆಗಳು ಮತ್ತು ಚರ್ಮ), ಸಂತಾನೋತ್ಪತ್ತಿ, ಭ್ರೂಣದ ಬೆಳವಣಿಗೆ, ಬೆಳವಣಿಗೆ, ಪ್ರತಿರಕ್ಷಣಾ ಪ್ರತಿಕ್ರಿಯೆಕುರುಡುತನ, ಬೆಳವಣಿಗೆ ಕುಂಠಿತ, ಒಣ ಚರ್ಮ, ಅತಿಸಾರ, ಸೋಂಕಿನ ದುರ್ಬಲತೆಗೆ ಕಾರಣವಾಗುವ ಕಣ್ಣಿನ ಅಡಚಣೆಗಳು
ವಿಟಮಿನ್ ಡಿಕ್ಯಾಲ್ಸಿಫೆರಾಲ್, ಕ್ಯಾಲಟ್ರಿಯೋಲ್ (1,25-ಡೈಹೈಡ್ರಾಕ್ಸಿ ವಿಟಮಿನ್ ಡಿ 1 ಅಥವಾ ವಿಟಮಿನ್ ಡಿ ಹಾರ್ಮೋನ್), ಕೊಲೆಕ್ಯಾಲ್ಸಿಫೆರಾಲ್ (ಡಿ 3 ; ಸಸ್ಯ ಆವೃತ್ತಿ), ಎರ್ಗೋಕ್ಯಾಲ್ಸಿಫೆರಾಲ್ (ಡಿ 2 ; ಪ್ರಾಣಿ ಆವೃತ್ತಿ)ರಕ್ತದ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಮಟ್ಟಗಳ ನಿರ್ವಹಣೆ, ಮೂಳೆಗಳ ಸರಿಯಾದ ಖನಿಜೀಕರಣಮಕ್ಕಳಲ್ಲಿ ದೋಷಯುಕ್ತ ಮೂಳೆ ಬೆಳವಣಿಗೆ, ವಯಸ್ಕರಲ್ಲಿ ಮೃದುವಾದ ಮೂಳೆಗಳು
ವಿಟಮಿನ್ ಇಆಲ್ಫಾ-ಟೊಕೊಫೆರಾಲ್, ಟೊಕೊಫೆರಾಲ್, ಟೊಕೊಟ್ರಿಯೆನಾಲ್ಉತ್ಕರ್ಷಣ ನಿರೋಧಕ; ಸ್ವತಂತ್ರ ರಾಡಿಕಲ್ ಸರಣಿ ಪ್ರತಿಕ್ರಿಯೆಗಳ ಅಡಚಣೆ; ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳ ರಕ್ಷಣೆ, ಜೀವಕೋಶ ಪೊರೆಗಳುಬಾಹ್ಯ ನರರೋಗ, ಕೆಂಪು ರಕ್ತ ಕಣಗಳ ವಿಭಜನೆ
ವಿಟಮಿನ್ ಕೆಫಿಲೋಕ್ವಿನೋನ್, ಮೆನಾಕ್ವಿನೋನ್, ಮೆನಾಡಿಯೋನ್, ನಾಫ್ತೋಕ್ವಿನೋನ್ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆ ಚಯಾಪಚಯ ಕ್ರಿಯೆಯಲ್ಲಿ ಒಳಗೊಂಡಿರುವ ಪ್ರೋಟೀನ್‌ಗಳ ಸಂಶ್ಲೇಷಣೆದುರ್ಬಲಗೊಂಡ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಆಂತರಿಕ ರಕ್ತಸ್ರಾವ

ಜೀವಸತ್ವಗಳ ಜೈವಿಕ ಪ್ರಾಮುಖ್ಯತೆ

ಡಚ್ ವೈದ್ಯ ಮತ್ತು ರೋಗಶಾಸ್ತ್ರಜ್ಞರ ಕೆಲಸದಿಂದ 19 ನೇ ಶತಮಾನದ ಅಂತ್ಯದಲ್ಲಿ ವಿಟಮಿನ್‌ಗಳ ಅಸ್ತಿತ್ವಕ್ಕೆ ಕೆಲವು ಮೊದಲ ಪುರಾವೆಗಳು ಹೊರಹೊಮ್ಮಿದವು.ಕ್ರಿಸ್ಟಿಯಾನ್ ಐಕ್ಮನ್ . 1890 ರಲ್ಲಿ ಅವನ ಪ್ರಯೋಗಾಲಯದ ಕೋಳಿಗಳಲ್ಲಿ ನರಗಳ ಕಾಯಿಲೆ (ಪಾಲಿನ್ಯೂರಿಟಿಸ್) ಕಾಣಿಸಿಕೊಂಡಿತು. ಈ ರೋಗವು ಪೌಷ್ಟಿಕಾಂಶದ ಅಸ್ವಸ್ಥತೆಗೆ ಸಂಬಂಧಿಸಿದ ಪಾಲಿನ್ಯೂರಿಟಿಸ್ಗೆ ಹೋಲುತ್ತದೆ ಎಂದು ಅವರು ಗಮನಿಸಿದರುಬೆರಿಬೆರಿ _ 1897 ರಲ್ಲಿ ಅವರು ಪಾಲಿನ್ಯೂರಿಟಿಸ್ ಅನ್ನು ಕೋಳಿಗಳಿಗೆ ಪಾಲಿಶ್ ಮಾಡಿದ ಬಿಳಿ ಅಕ್ಕಿಯನ್ನು ತಿನ್ನುವುದರಿಂದ ಉಂಟಾಗುತ್ತದೆ ಎಂದು ತೋರಿಸಿದರು ಆದರೆ ಪ್ರಾಣಿಗಳಿಗೆ ಪಾಲಿಶ್ ಮಾಡದ ಅಕ್ಕಿಯನ್ನು ನೀಡಿದಾಗ ಅದು ಕಣ್ಮರೆಯಾಯಿತು. 1906-07 ರಲ್ಲಿ ಬ್ರಿಟಿಷ್ ಜೀವರಸಾಯನಶಾಸ್ತ್ರಜ್ಞಸರ್ ಫ್ರೆಡ್ರಿಕ್ ಗೌಲ್ಯಾಂಡ್ ಹಾಪ್ಕಿನ್ಸ್ ಪ್ರಾಣಿಗಳು ಕೆಲವು ಅಮೈನೋ ಆಮ್ಲಗಳನ್ನು ಸಂಶ್ಲೇಷಿಸಲು ಸಾಧ್ಯವಿಲ್ಲ ಎಂದು ಗಮನಿಸಿದರು ಮತ್ತು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಮತ್ತು ಲವಣಗಳು ಬೆಳವಣಿಗೆಯನ್ನು ಬೆಂಬಲಿಸುವುದಿಲ್ಲ ಎಂದು ತೀರ್ಮಾನಿಸಿದರು.

1913 ರಲ್ಲಿ ಅಮೇರಿಕನ್ ಸಂಶೋಧಕ ಎಲ್ಮರ್ ಮೆಕೊಲಮ್ ವಿಟಮಿನ್ಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದರು: "ಕೊಬ್ಬು ಕರಗುವ ಎ" ಮತ್ತು "ನೀರಿನಲ್ಲಿ ಕರಗುವ ಬಿ." ಇತರ ಜೀವಸತ್ವಗಳ ಆವಿಷ್ಕಾರದ ಹಕ್ಕುಗಳು ಗುಣಿಸಿದಾಗ, ಸಂಶೋಧಕರು ಹೊಸ ಪದಾರ್ಥಗಳನ್ನು ಸಿ, ಡಿ, ಇತ್ಯಾದಿ ಎಂದು ಕರೆದರು. ನೀರಿನಲ್ಲಿ ಕರಗುವ ಬೆಳವಣಿಗೆಯ ಅಂಶ , ವಿಟಮಿನ್ ಬಿ, ಒಂದು ಘಟಕವಲ್ಲ , ಆದರೆ ಕನಿಷ್ಠ ಎರಡು ಎಂದು ನಂತರ ಅರಿತುಕೊಂಡಿತು- ಇದರಲ್ಲಿ ಒಂದು ಮಾತ್ರ ಪಾರಿವಾಳಗಳಲ್ಲಿ ಪಾಲಿನ್ಯೂರಿಟಿಸ್ ಅನ್ನು ತಡೆಯುತ್ತದೆ. ಪಾರಿವಾಳಗಳಿಗೆ ಅಗತ್ಯವಾದ ಅಂಶವನ್ನು ವಿಟಮಿನ್ ಬಿ 1 ಎಂದು ಕರೆಯಲಾಯಿತು ಮತ್ತು ಇಲಿಗಳಿಗೆ ಅಗತ್ಯವಾದ ಇತರ ಅಂಶವನ್ನು ವಿಟಮಿನ್ ಬಿ 2 ಎಂದು ಗೊತ್ತುಪಡಿಸಲಾಯಿತು . ಜೀವಸತ್ವಗಳ ರಾಸಾಯನಿಕ ರಚನೆಗಳು ತಿಳಿದಿರುವಂತೆ, ಅವುಗಳಿಗೆ ರಾಸಾಯನಿಕ ಹೆಸರುಗಳನ್ನು ಸಹ ನೀಡಲಾಯಿತು, ಉದಾ.ವಿಟಮಿನ್ ಬಿ 1 ಗಾಗಿ ಥಯಾಮಿನ್ ಮತ್ತುವಿಟಮಿನ್ ಬಿ 2 ಗಾಗಿ ರಿಬೋಫ್ಲಾವಿನ್ .


ಭಾನುವಾರ, ಜೂನ್ 5, 2022

05 ಜೂನ್ 2022 ♻️ ವಿಶ್ವ ಪರಿಸರ ದಿನ

🗓 05 ಜೂನ್ 2022

 ♻️ ವಿಶ್ವ ಪರಿಸರ ದಿನ

 ▪️ಥೀಮ್ 2022 - "only one earth"

 ♦️ ಮೊದಲ ಬಾರಿಗೆ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯು ಆಚರಿಸಿತು.

 🍄 ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)

♦️1971 ಫೆಬ್ರವರಿ 2 ಜೌಗುಪ್ರದೇಶ  ಸಂರಕ್ಷಣೆಗಾಗಿ ರಾಮ್ಸರ್ ಒಪ್ಪಂದ.

♦️ ಸೆಪ್ಟೆಂಬರ್ 16- 1987 ಒಝೋನ್ ಸಂರಕ್ಷಣೆಗಾಗಿ ಮಾಂಟ್ರಿಯೋ ಪ್ರೋಟೋಕಾಲ್.

 ▪️ರಚನೆ - 5 ಜೂನ್ 1972
 ▪️HQ - ನೈರೋಬಿ, ಕೀನ್ಯಾ
 ▪️ನಿರ್ದೇಶಕ - ಇಂಗರ್ ಆಂಡರ್ಸನ್

ಮುಖ್ಯವಾದ ಮರುನಾಮಕರಣಗೊಂಡ ರೈಲು ನಿಲ್ದಾಣಗಳು

🚂ಮುಖ್ಯವಾದ ಮರುನಾಮಕರಣಗೊಂಡ ರೈಲು ನಿಲ್ದಾಣಗಳು👇👇

 🚇ಹಬೀಬ್‌ಗಂಜ್ ರೈಲು ನಿಲ್ದಾಣ, ಭೋಪಾಲ್, ಮಧ್ಯಪ್ರದೇಶ - ರಾಣಿ ಕಮಲಾಪತಿ ರೈಲು ನಿಲ್ದಾಣ

 🚇ಫೈಜಾಬಾದ್ ಜಂಕ್ಷನ್ ರೈಲು ನಿಲ್ದಾಣ - ಅಯೋಧ್ಯೆ, ಉತ್ತರ ಪ್ರದೇಶ - ಅಯೋಧ್ಯೆ ಕ್ಯಾಂಟ್.

 🚇ಅಲಹಾಬಾದ್ ಜಂಕ್ಷನ್ - ಉತ್ತರ ಪ್ರದೇಶ, ಪ್ರಯಾಗ್ರಾಜ್ ಜಂಕ್ಷನ್

 🚇ಮುಘಲ್ಸರಾಯ್ ರೈಲ್ವೆ ಜಂಕ್ಷನ್, ಉತ್ತರ ಪ್ರದೇಶ - ದೀನ್ ದಯಾಳ್ ಪಾಧ್ಯಾಯ ಜಂಕ್ಷನ್ ರೈಲು ನಿಲ್ದಾಣ

 🚇ಝಾನ್ಸಿ ರೈಲು ನಿಲ್ದಾಣ, ಉತ್ತರ ಪ್ರದೇಶ - ವೀರಾಂಗಣ ಲಕ್ಷ್ಮೀಬಾಯಿ ರೈಲು ನಿಲ್ದಾಣ

 🚇ಮಂಡುವಾಡಿಹ್ ನಿಲ್ದಾಣ - ಉತ್ತರ ಪ್ರದೇಶ, ಬನಾರಸ್ ನಿಲ್ದಾಣ

 🚇ಹುಬ್ಬಳ್ಳಿ ರೈಲು ನಿಲ್ದಾಣ, ಕರ್ನಾಟಕ - ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ

 🚇ನೌಗಢ್ ರೈಲು ನಿಲ್ದಾಣ - ಉತ್ತರ ಪ್ರದೇಶ, ಸಿದ್ಧಾರ್ಥನಗರ ರೈಲು ನಿಲ್ದಾಣ

 🚇ಪಾತಲ್ಪಾನಿ ರೈಲು ನಿಲ್ದಾಣ, ಇಂದೋರ್ - ತಾಂತ್ಯ ಭಿಲ್ ರೈಲು ನಿಲ್ದಾಣ

 🚇ಕೇವಾಡಿಯಾ ರೈಲು ನಿಲ್ದಾಣ, ಗುಜರಾತ್ - ಏಕತಾ ನಗರ ರೈಲು ನಿಲ್ದಾಣ

=====================

ಪ್ರಮುಖ ಜೀವಸತ್ವಗಳ ರಾಸಾಯನಿಕ ಹೆಸರುಗಳು.

✅ಪ್ರಮುಖ ಜೀವಸತ್ವಗಳ ರಾಸಾಯನಿಕ ಹೆಸರುಗಳು.

 ವಿಟಮಿನ್ ಎ ಯ ರಾಸಾಯನಿಕ ಹೆಸರೇನು ?
 ರೆಟಿನಾಲ್ Retinol (1913) ✅

 ವಿಟಮಿನ್ ಬಿ1 ರಾಸಾಯನಿಕ ಹೆಸರೇನು ?
 ಥಯಾಮಿನ್ Thiamine (1910)✅

 ವಿಟಮಿನ್ ಬಿ2 ರಾಸಾಯನಿಕ ಹೆಸರೇನು ?
 ರಿಬೋಫ್ಲಾವಿನ್ Riboflavin (1920)✅

 ವಿಟಮಿನ್ ಬಿ3 ರಾಸಾಯನಿಕ ಹೆಸರೇನು ?
 ನಿಯಾಸಿನ್ Niacin (1939)✅

 ವಿಟಮಿನ್ B5 ನ ರಾಸಾಯನಿಕ ಹೆಸರೇನು ?
 ಪ್ಯಾಂಟೊಥೆನಿಕ್ ಆಮ್ಲ Pantothenic Acid (1931) ✅

 ವಿಟಮಿನ್ ಬಿ6 ನ ರಾಸಾಯನಿಕ ಹೆಸರೇನು ?
 ಪಿರಿಡಾಕ್ಸಿನ್ Pyridoxine (1934)✅

 ವಿಟಮಿನ್ B7 ನ ರಾಸಾಯನಿಕ ಹೆಸರೇನು ?
 ಬಯೋಟಿನ್ Biotin (1931)✅

 ವಿಟಮಿನ್ ಬಿ12 ರಾಸಾಯನಿಕ ಹೆಸರೇನು ?
 ಸೈನೊಕೊಬಾಲಮಿನ್ Cyanocobalamin (1926)✅

 ವಿಟಮಿನ್ ಸಿ ಯ ರಾಸಾಯನಿಕ ಹೆಸರೇನು ?
 ಆಸ್ಕೋರ್ಬಿಕ್ ಆಮ್ಲ  Ascorbic Acid (1920)✅

 ವಿಟಮಿನ್ ಡಿ ಯ ರಾಸಾಯನಿಕ ಹೆಸರೇನು ?
 ಕ್ಯಾಲ್ಸಿಫೆರಾಲ್ Calciferol (1920)✅

 ವಿಟಮಿನ್ ಇ ರಾಸಾಯನಿಕ ಹೆಸರೇನು ?
 ಎಟೋಕೊಫೆರಾಲ್ Etocopherol (1922)✅

 ವಿಟಮಿನ್ ಕೆ ರಾಸಾಯನಿಕ ಹೆಸರೇನು ?
 ಫಿಲೋಕ್ವಿನೋನ್ phylloquinone (1929)

ಕುಂಭ ಮೇಳ ಎಂದರೆ?


👉 ಕುಂಭ ಮೇಳ ಎಂದರೆ? 
 'ಮಕರ ಸಂಕ್ರಾಂತಿ ಎಂದರ್ಥ'
> ಕುಂಭ ಮೇಳ ಜರಗುವ ಸ್ಥಳ - ಅಲಹಾಬಾದ್( 12 ವರ್ಷಕೊಮ್ಮೆ ನಡೆಯುತ್ತದೆ)
> ಅಲಹಾಬಾದ್ ಈಗಿನ ಹೆಸರು?
 - ಪ್ರಯಾಗ್ ರಾಜ್
============
👉 ಕರ್ನಾಟಕದಲ್ಲಿ ಕುಂಭ ಮೇಳ ಜರಗುವ ಸ್ಥಳ - ಟಿ ನರಸೀಪುರ ( ಮೈಸೂರು ಜಿಲ್ಲೆ )
> ಅಲ್ಲಿ ಸಂಗಮವಾಗುವ ನದಿಗಳು - 
ಕಾವೇರಿ, ಕಪಿಲಾ, ಗುಪ್ತಗಾಮಿನಿ
(ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ)

ಗುರುವಾರ, ಜೂನ್ 2, 2022

FAQs About OTT Platforms

FAQs About OTT Platforms

1) Define OTT?

OTT is abbreviated as "Over The Top". It is a streaming service that connects viewers directly using the internet as a medium. You can browse for live events,  web-series and movies of all genres.

2) Which are the best OTT platforms in India?

Netflix, Disney+Hotstar, and Amazon Prime are the leading OTT platforms in India due to the HD streaming content in multiple languages. They allow multiple device compatibility with a single subscription plan.

3) Can I use OTT apps on multiple devices?

Yes, It is possible for the users to stream the content on laptops, desktops, mobile devices without any hassle.

4) What are the top 10 popular OTT apps in India 2022?

Here is the list of top 10 popular OTT applications in India 2022. Have a glimpse:

    1. Netflix
    2. Amazon Prime
    3. Disney+Hotstar
    4. Zee 5
    5. SonyLIV
    6. ALTBalaji
    7. Aha
    8. Voot
    9. Viu
    10. Hoichoi

ಸೋಮವಾರ, ಮೇ 30, 2022

2022 ರ 15 ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗುಜರಾತ್ ಟೈಟಾನ್ಸ್ ಗೆದ್ದುಕೊಂಡಿತು.

ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡವು ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೇ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ 15ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ 7 ವಿಕೆಟ್‌ಗಳಿಂದ ಜಯಿಸಿತು. 2008ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡದ ಕನಸು ಕಮರಿತು. ನಾಯಕ ಹಾರ್ದಿಕ್ ಪಾಂಡ್ಯ (17ಕ್ಕೆ3 ಮತ್ತು 34 ರನ್ ) ಆಲ್‌ರೌಂಡ್ ಆಟದ ಬಲದಿಂದ ಗುಜರಾತ್ ತಂಡವು ವಿಜಯೋತ್ಸವ ಆಚರಿಸಿತು.

131 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಟೈಟನ್ಸ್‌ 18.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿತು. 19ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆತ್ತಿದ ಯುವ ಬ್ಯಾಟರ್ ಶುಭಮನ್ ಗಿಲ್ ಗೆಲುವಿನ ಕೇಕೆ ಹಾಕಿದರು. ಸುಡ್ಡು

ಮದ್ದುಗಳ ಬೆಳಕು ಪ್ರಜ್ವಲಿಸಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಪುಟಿದೆದ್ದಿತು. ಗಣ್ಯರ ಗ್ಯಾಲರಿಯಿಂದ ಓಡಿಬಂದ ನತಾಶಾ ಸ್ಟಾಂಕೊವಿಚ್ ತಮ್ಮ ಪತಿ ಹಾರ್ದಿಕ್ ಅವರನ್ನು ಆಲಂಗಿಸಿಕೊಂಡು ಅಭಿನಂದಿಸಿದರು.

ಹಾರ್ದಿಕ್ ಬೌಲಿಂಗ್: ಪಂದ್ಯದಲ್ಲಿ ಟಾಸ್‌ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 130 ರನ್‌ ಗಳಿಸಿತು. ಹಾರ್ದಿಕ್ (17ಕ್ಕೆ3) ಪರಿಣಾಮಕಾರಿ ದಾಳಿಯಿಂದಾಗಿ ರಾಜಸ್ಥಾನ ಬ್ಯಾಟಿಂಗ್ ಪಡೆಯು ವೈಫಲ್ಯ ಅನುಭವಿಸಿತು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿಮ್ರೊನ್ ಹೆಟ್ಮೆಯರ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿದ ಪಾಂಡ್ಯ ತಮ್ಮ ತಂಡದ ಮೇಲುಗೈಗೆ ಕಾರಣರಾದರು.

ಎರಡನೇ ಕ್ವಾಲಿಫೈಯರ್‌ನಲ್ಲಿ ರನ್‌ಗಳ ಹೊಳೆ ಹರಿಸಿದ್ದ ರಾಜಸ್ಥಾನ ತಂಡವು ಇಲ್ಲಿ ನೂರು ರನ್‌ಗಳ ಮೊತ್ತ ದಾಟಲು ಪರದಾಡಿತು. ಸಾಯಿ ಕಿಶೋರ್, ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಮುಂದೆ ದೊಡ್ಡ ಮೊತ್ತ ಗಳಿಸಲು ರಾಜಸ್ಥಾನಕ್ಕೆ ಸಾಧ್ಯವಾಗಲಿಲ್ಲ.

ಗಿಲ್‌ ಕ್ಯಾಚ್ ಕೈಬಿಟ್ಟರು: ಶುಭಮನ್ ಗಿಲ್‌ ಅವರಿಗೆ ಎರಡು ಬಾರಿ ಕ್ಯಾಚ್ ಕೈಚೆಲ್ಲಿದ್ದು ರಾಯಲ್ಸ್‌ ತಂಡಕ್ಕೆ ದುಬಾರಿಯಾಯಿತು. ಮೊದಲ ಮತ್ತು ಆರಣೇ ಓವರ್‌ನಲ್ಲಿ ಅವರಿಗೆ ಜೀವದಾನ ಲಭಿಸಿತ್ತು.

ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಎರಡನೇ ಓವರ್‌ನಲ್ಲಿಯೇ ಪ್ರಸಿದ್ಧ ಕೃಷ್ಣ ಪೆಟ್ಟು ಕೊಟ್ಟರು. ವೃದ್ಧಿಮಾನ್ ಸಹಾ ವಿಕೆಟ್ ಎಗರಿಸಿದ ಪ್ರಸಿದ್ಧ ಸಂಭ್ರಮಿಸಿದರು. ಐದನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಗಳಿಸಿದ ಟ್ರೆಂಟ್‌ ಬೌಲ್ಟ್ ಮತ್ತೊಂದು ಯಶಸ್ಸು ಗಳಿಸಿಕೊಟ್ಟರು. ಆದರೆ, ಈ ಸಂಭ್ರಮಕ್ಕೆ ಗಿಲ್ (45; 43ಎ) ಮತ್ತು ಪಾಂಡ್ಯ ತಣ್ಣೀರು ಎರಚಿದರು.

ಮೂರನೇ ವಿಕೆಟ್ ಗೆ 63 ರನ್‌ ಸೇರಿಸಿದ ಈ ಜೊತೆಯಾಟವನ್ನು ಲೆಗ್‌ಸ್ಪಿನ್ನರ್ ಚಾಹಲ್ ಮುರಿದರು. ಹಾರ್ದಿಕ್ ವಿಕೆಟ್ ಗಳಿಸಿದ ಚಾಹಲ್ ತಂಡದಲ್ಲಿ ಮತ್ತೆ ನಿರೀಕ್ಷೆ ಮೂಡಿಸಿದರು. ಆದರೆ ಗಿಲ್ ಜೊತೆ ಸೇರಿದ ಡೇವಿಡ್ ಮಿಲ್ಲರ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಶನಿವಾರ, ಮೇ 28, 2022

ಲೇಖಕಿ ಗೀತಾಂಜಲಿ ಶ್ರೀ ಅವರ ‘ಟೂಮ್‌ ಆಫ್ ಸ್ಯಾಂಡ್-ಮರಳಿನ ಸಮಾಧಿ' (Tomb of Sand) ಕಾದಂಬರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ.


ಲಂಡನ್: 
ಲೇಖಕಿ ಗೀತಾಂಜಲಿ ಶ್ರೀ ಅವರ ‘ಟೂಮ್‌ ಆಫ್ ಸ್ಯಾಂಡ್’(ಮರಳಿನ ಸಮಾಧಿ) (Tomb of Sand) ಕಾದಂಬರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.

ಇದರೊಂದಿಗೆ ಹಿಂದಿ ಪುಸ್ತಕವೊಂದು ಬೂಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಇದೇ ಮೊದಲು ಎಂಬ ಹೆಗ್ಗಳಿಕೆಗೆ ‘ಟೂಮ್‌ ಆಫ್ ಸ್ಯಾಂಡ್’(ಮರಳಿನ ಸಮಾಧಿ) ಪಾತ್ರವಾಗಿದೆ.

ಗುರುವಾರ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಪ್ರಶಸ್ತಿಯೂ 50,000 ಸಾವಿರ ಪೌಂಡ್ (ಸುಮಾರು ₹50 ಲಕ್ಷ) ಮೌಲ್ಯದ ಬಹುಮಾನವನ್ನು ಒಳಗೊಂಡಿದ್ದು, ಡೈಸಿ ರಾಕ್‌ವೆಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

‘ನಾನು ಬೂಕರ್ ಪ್ರಶಸ್ತಿ ಬಗ್ಗೆ ಕನಸು ಕಂಡಿರಲಿಲ್ಲ. ಎಂದಿಗೂ ಯೋಚನೆಯನ್ನೂ ಮಾಡಿರಲಿಲ್ಲ. ಎಂತಹ ದೊಡ್ಡ ಮನ್ನಣೆ, ನಾನು ಆಶ್ಚರ್ಯಚಕಿತಳಾಗಿದ್ದೇನೆ. ಗೌರವ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ’ ಎಂದು ಗೀತಾಂಜಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ವಿಶ್ವದ 13 ಪುಸ್ತಕಗಳಲ್ಲಿ ‘ಟೂಮ್‌ ಆಫ್ ಸ್ಯಾಂಡ್’(ಮರಳಿನ ಸಮಾಧಿ) ಒಂದಾಗಿತ್ತು. ಈ ಹಿಂದಿ ಕಾದಂಬರಿಯನ್ನು ಡೈಸಿ ರಾಕ್‌ವೆಲ್ ಅವರು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದರು.

ಈ ಪುಸ್ತಕ ₹50 ಲಕ್ಷ ಮೌಲ್ಯದ ಪ್ರಶಸ್ತಿ ವಿಭಾಗದಲ್ಲಿ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಇದೀಗ ಈ ಪುಸ್ತಕ ಬೂಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಅದರಿಂದ ಬಂದ ಹಣವು ಲೇಖಕಿ ಮತ್ತು ಅನುವಾದಕಾರರ ಮಧ್ಯೆ ಹಂಚಿಕೆಯಾಗಿದೆ.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಜನಿಸಿದ ಗೀತಾಂಜಲಿ ಅವರು ಮೂರು ಕಾದಂಬರಿ ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಇದರಲ್ಲಿ ಹಲವು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಜರ್ಮನಿ ಹಾಗೂ ಕೊರಿಯಾ ಭಾಷೆಗಳಿಗೆ ಭಾಷಾಂತರಗೊಂಡಿವೆ.

‘ಟೂಮ್‌ ಆಫ್ ಸ್ಯಾಂಡ್‌(ಮರಳಿನ ಸಮಾಧಿ)' ಕಾದಂಬರಿಯು ಉತ್ತರ ಭಾರತದ 80 ವರ್ಷದ ವೃದ್ಧೆ ತನ್ನ ಪತಿಯನ್ನು ಕಳೆದುಕೊಂಡ ಬಳಿಕ ತೀವ್ರ ಖಿನ್ನತೆಗೆ ಒಳಗಾಗುವುದು ಮತ್ತು ಅದರಿಂದ ಹೊರಬರುವುದು ಸೇರಿದಂತೆ ಹಲವು ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ.


ಸೋಮವಾರ, ಮೇ 23, 2022

ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ -ಸಚಿವ ಬಿ ಸಿ ನಾಗೇಶ ಭರವಸೆ.

*ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ,*
*ಸಚಿವ ಬಿ ಸಿ ನಾಗೇಶ ಭರವಸೆ*

ಈ ಗೊಂದಲ ನಿವಾರಣೆ ಆಗಬೇಕು. ಸುತ್ತೋಲೆ ಮೂಲಕ‌ ಆಡಳಿತ ನಡೆಸುವುದು ಆರೋಗ್ಯಕರ ಆಡಳಿತವಲ್ಲ, ಸುತ್ತೋಲೆ ನಮ್ಮ ಅನುಕೂಲಕ್ಕೆ ಮಾತ್ರ ಇವೆ. ಹಾಗಾಗಿ, ನೇಮಕಾತಿ ವಿಚಾರದಲ್ಲಿ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳನ್ನೂ ಹಿಂದಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕು ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿದರು..

ಬೆಂಗಳೂರು : ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ರ ಪ್ರಕಾರ ಅನರ್ಹರಾಗಿದ್ದು, ಇವರನ್ನೂ ಪರಿಗಣಿಸುವ ಕುರಿತು ಆದಷ್ಟು ಬೇಗ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್​​ನಲ್ಲಿ ನಿಯಮ‌ 72ರ ಅಡಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಮಂಡಿಸಿದ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವಿ ಸಂಕನೂರು, ಆಯನೂರು ಮಂಜುನಾಥ್ ಹಾಗೂ ಶಶೀಲ್ ಜಿ. ನಮೋಶಿ ಅವರು, ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ರ ಪ್ರಕಾರ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುವರು.

ಇದರಿಂದ 2016ರ ಪೂರ್ವದಲ್ಲಿ ಹಿಂದಿ ಬಿ.ಇಡಿ ಪಡೆದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬೀದಿ ಪಾಲಾಗಿರುವ ಸನ್ನಿವೇಶ ಉಂಟಾಗಿದೆ. ಕೂಡಲೇ ಇವರಿಗೂ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕರ್ನಾಟಕ ಉನ್ನತ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 2772/ 2011 69822-69826/2012 ಯಡಿ ನೀಡಿರುವ ತೀರ್ಪಿನಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು 20020 ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ on N.C.T.E (National Council for Teacher Education) F ಪಡಿಸಿರುವ ವಿದ್ಯಾರ್ಹತೆಗಿಂತ ಕಡಿಮೆ ಇರುವ ಕಾರಣ 2002ರ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ರದ್ದುಪಡಿಸಿರುತ್ತದೆ ಎಂದರು.

ಸಂಸತ್ತಿನ ಶಾಸನದ ಪ್ರಕಾರ ಸ್ಥಾಪಿತವಾದ ಸಂಸ್ಥೆಯಾದ ಎನ್‌ಸಿಟಿಇಯಿಂದ ಮಾನ್ಯತೆ ಪಡೆಯದ ಸಂಸ್ಥೆಗಳಿಂದ ಪಡೆದ ಬಿ.ಇಡಿ ಪದವಿಯು ಶಿಕ್ಷಕರ ಹುದ್ದೆಗೆ ನೇಮಕಾತಿ ಹೊಂದಲು ಅನರ್ಹವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ-2016ರ ಪ್ರಕಾರ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ. ಸದರಿ ಪರೀಕ್ಷೆ/ಪದವಿಗಳಿಗೆ ತತ್ಸಮಾನತೆ ಪರಿಗಣಿಸಿ ನೀಡಿರುವ ಸರ್ಕಾರದ ಆದೇಶಗಳನ್ನು ಸರ್ಕಾರ 18/04/2017ರಲ್ಲಿ ರದ್ದುಪಡಿಸಿದೆ ಎಂದು ಮಾಹಿತಿ ನೀಡಿದರು.

ಪುಸ್ತುತ ಚಾಲ್ತಿಯಲ್ಲಿರುವ 2016ರ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಅನುಸರಿಸಿ ಪ್ರೌಢ ಶಾಲಾ ಹಿಂದಿ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

*ಹಿಂದಿ ರಾಷ್ಟ್ರಭಾಷೆ ಚರ್ಚೆ :* ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಶಿಲ್‌ ನಮೋಷಿ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಲೇಬೇಕು, ಅದರಲ್ಲಿ ಎರಡು ಮಾತಿಲ್ಲ. ‌ಆದರೆ, ಹಿಂದಿ ರಾಷ್ಟ್ರಭಾಷೆ ಆಗಿದೆ. ಅದಕ್ಕೂ ಕೊಡಬೇಕಾದ ಆದ್ಯತೆ ಕೊಡಬೇಕಿದೆ. ನೇಮಕಾತಿ ವಿಚಾರದಲ್ಲಿ ಆಗಿರುವ ಲೋಪ ಸರಿಪಡಿಸಬೇಕು ಎಂದರು.


ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಹಿಂದಿ ನಮ್ಮ ರಾಷ್ಟ್ರದಲ್ಲಿ ಅಧಿಕೃತ ಭಾಷೆ ಅಷ್ಟೇ ಹೊರತು ರಾಷ್ಟ್ರ ಭಾಷೆ ಅಲ್ಲ. ಎಲ್ಲಾ ಭಾಷೆಗಳ ರೀತಿ ಅದು ಒಂದು ಭಾಷೆ ಅಷ್ಟೇ ಎಂದರು.

*ಸುತ್ತೋಲೆಗಳ ಆಡಳಿತವಾಗಬಾರದು :* ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸುತ್ತೋಲೆಗಳ ಮೇಲೆ ಅಧಿಕಾರಿಗಳು ಆಡಳಿತ ನಡೆಸಲು ಹೊರಟಿದ್ದಾರೆ. ಸುತ್ತೋಲೆ ಆಡಳಿತ ನಡೆಯಬಾರದು ಕಾಯ್ದೆಗಳ,ಕಾನೂನುಗಳ ಆಡಳಿತ ನಡೆಯಬೇಕು. ಒಂದು ಕಡೆ ಅವಕಾಶ ಕೊಡಲಾಗುತ್ತದೆ, ಮತ್ತೊಂದು ಕಡೆ ನಿರಾಕರಿಸಲಾಗುತ್ತದೆ.

ಈ ಗೊಂದಲ ನಿವಾರಣೆ ಆಗಬೇಕು. ಸುತ್ತೋಲೆ ಮೂಲಕ‌ ಆಡಳಿತ ನಡೆಸುವುದು ಆರೋಗ್ಯಕರ ಆಡಳಿತವಲ್ಲ, ಸುತ್ತೋಲೆ ನಮ್ಮ ಅನುಕೂಲಕ್ಕೆ ಮಾತ್ರ ಇವೆ. ಹಾಗಾಗಿ, ನೇಮಕಾತಿ ವಿಚಾರದಲ್ಲಿ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳನ್ನೂ ಹಿಂದಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕು ಎಂದರು.

*ನೇಮಕಾತಿ ಕಾಯ್ದೆಗೆ ತಿದ್ದುಪಡಿ ತನ್ನಿ :* ಜೆಡಿಎಸ್‌ನ ಶ್ರೀಕಂಠೇಗೌಡ ಮಾತನಾಡಿ, ಹತ್ತು ಇಪ್ಪತ್ತು ವರ್ಷದಿಂದ ಪಾಠ ಮಾಡುತ್ತಿರುವ ಹಿಂದಿ ಶಿಕ್ಷಕರು ಬೀದಿಗೆ ಬೀಳಲಿದ್ದಾರೆ. ಭವಿಷ್ಯದಲ್ಲಿ ಬೇಕಾದರೂ ಹೊಸ ಕಾನೂನಿನಂತೆ ನೇಮಕ ಮಾಡಿಕೊಳ್ಳಿ. ಆದರೆ, ಈಗ ಇರುವವರಿಗೆ ಅವಕಾಶ ಕಲ್ಪಿಸಲೇಬೇಕು, ಅಗತ್ಯವಾದಲ್ಲಿ ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ಕ್ಕೆ ತಿದ್ದುಪಡಿಯನ್ನು ತನ್ನಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ನಾಗೇಶ್, ಸಿ ಅಂಡ್ ಆರ್ ರೂಲ್ ಅನ್ನು ಹೈಕೋರ್ಟ್ ನಿರ್ದೇಶನದ ಆಧಾರದಲ್ಲಿ 2016ರಲ್ಲಿ ತಂದಿದ್ದಾರೆ. ಮುಂದಿನ ದಿನದಲ್ಲಿ ಈ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಎಸ್.ವಿ ಸಂಕನೂರು, ಕೂಡಲೇ ಇದಕ್ಕೊಂದು ಸಮಿತಿ ರಚನೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆಯಿರಿ, ಪರಿಷತ್ ಸದಸ್ಯರ ಅಹವಾಲು ಆಲಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ನಿರ್ದೇಶಿಸಿದರು. ಸಭಾಪತಿ ನೀಡಿದ ನಿರ್ದೇಶನಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ನಾಗೇಶ್, ಆದಷ್ಟು ಬೇಗ ಸಭೆ ನಡೆಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಗುರುವಾರ, ಏಪ್ರಿಲ್ 28, 2022

ನೀಲಿ ಆಧಾರ್ ಕಾರ್ಡ್ ಎಂದರೇನು?

ನೀಲಿ ಆಧಾರ್ ಕಾರ್ಡ್ ಎಂದರೇನು?

ಇಂಡಿಯಾಟೈಮ್ಸ್
 27ನೇ ಏಪ್ರಿಲ್, 2022 16:11 IST

 ಭಾರತದಲ್ಲಿನ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದೆಂದು ಪರಿಗಣಿಸಲಾದ ಆಧಾರ್ ಇತ್ತೀಚೆಗೆ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದು ಅದು ಅನೇಕ ನೋಂದಾಯಿತ ಬಳಕೆದಾರರಿಗೆ ಪರಿಹಾರವನ್ನು ತರುತ್ತದೆ.

 ಆಧಾರ್ ಪೂರ್ಣ ಹೆಸರು, ಶಾಶ್ವತ ವಿಳಾಸ ಮತ್ತು ಜನ್ಮ ದಿನಾಂಕ ಸೇರಿದಂತೆ ನಾಗರಿಕರ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ, ಎಲ್ಲವನ್ನೂ ಯುಐಡಿಎಐ ನೀಡುವ ವಿಶಿಷ್ಟ 12-ಅಂಕಿಯ ಸಂಖ್ಯೆಗೆ ಲಿಂಕ್ ಮಾಡಲಾಗಿದೆ.

 ಆಧಾರ್ ಅನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿನ ಪುರಾವೆಯಾಗಿ ಬಳಸುವುದಕ್ಕಾಗಿ ಪ್ರಮುಖ ದಾಖಲೆ ಎಂದು ಪರಿಗಣಿಸಲಾಗುತ್ತದೆ.

 ಎರಡು ರೀತಿಯ ಆಧಾರ್ ಕಾರ್ಡ್‌ಗಳಿವೆ - ಒಂದು ವಯಸ್ಕರಿಗೆ ಮತ್ತು ಇನ್ನೊಂದು ಮಕ್ಕಳಿಗೆ, ಇದನ್ನು 'ಬಾಲ್ ಆಧಾರ್' ಎಂದು ಕರೆಯಲಾಗುತ್ತದೆ.  ನವಜಾತ ಶಿಶುವಿಗೆ ಪಾಲಕರು ಸಹ ಬಾಲ್ ಆಧಾರ್‌ಗಾಗಿ ಅರ್ಜಿ ಸಲ್ಲಿಸಬಹುದು.  ನೀಲಿ ಆಧಾರ್ ಕಾರ್ಡ್‌ಗಾಗಿ ನೋಂದಾಯಿಸಲು ಕೆಳಗೆ ನೀಡಲಾದ ಹಂತ-ಹಂತದ ಮಾರ್ಗದರ್ಶಿಯನ್ನು ಅನುಸರಿಸಿ:

 ಯುಐಡಿಎಐ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ನೀಲಿ ಆಧಾರ್ ಕಾರ್ಡ್‌ಗೆ ದಾಖಲಿಸಲು, ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್ ಸಂಖ್ಯೆ ಅಗತ್ಯವಿದೆ.

 ನೀಲಿ ಆಧಾರ್ ಕಾರ್ಡ್ ಎಂದರೇನು? 

 ಐದು ವರ್ಷಕ್ಕಿಂತ ಮೊದಲು ಮಕ್ಕಳಿಗೆ ಬಯೋಮೆಟ್ರಿಕ್ಸ್ ಅಭಿವೃದ್ಧಿಪಡಿಸದ ಕಾರಣ, ಮಗುವಿನ ನೀಲಿ ಬಣ್ಣದ ಆಧಾರ್ ಡೇಟಾವು ಫಿಂಗರ್‌ಪ್ರಿಂಟ್‌ಗಳು ಮತ್ತು ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿರುವುದಿಲ್ಲ.  UIDAI ಅಧಿಕಾರಿಯ ಪ್ರಕಾರ ಮಗುವಿಗೆ ಐದು ವರ್ಷ ದಾಟಿದ ನಂತರ, ಬಯೋಮೆಟ್ರಿಕ್ಸ್ ಅನ್ನು ನವೀಕರಿಸಬೇಕು.

 ನೀಲಿ ಆಧಾರ್ ಕಾರ್ಡ್ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 12-ಅಂಕಿಯ ಸಂಖ್ಯೆಯನ್ನು ಸಹ ಹೊಂದಿರುತ್ತದೆ.  ಮಗುವಿಗೆ ಐದು ವರ್ಷ ದಾಟಿದ ನಂತರ ಅದು ಅಮಾನ್ಯವಾಗುತ್ತದೆ. ಈ ಐದು ವರ್ಷ ದಾಟಿದ ನಂತರ ಮತ್ತೆ ಹೋಸ ಆಧಾರ ಕಾರ್ಡ್ ಅನ್ನು ಮೊದಲಿನ ಆಧಾರ ಸಂಖ್ಯೆಯೊಂದಿಗೆ ಆ ಮಗುವಿನ ಕೈಬೆರೆಳು ಗುರುತು, ಕಣ್ಣಿನ ಗುರುತು, ಮುಖಚರ್ಹೆಯ ಪೊಟೊಗಳನ್ನು ಮತ್ತೊಮ್ಮೆ ಬದಲಾಯಿಸಬೇಕಾಗುತ್ತದೆ. 


What Is a Blue Aadhaar Card?

What Is a Blue Aadhaar Card? 

27th April, 2022 16:11 IST

Aadhaar, considered one of the most important identification documents in India, recently announced a new feature that will bring relief to many registered users.

The Aadhaar includes important details of citizens including full name, permanent address, and date of birth, all linked to a unique 12-digit number which is issued by UIDAI.

The Aadhaar is considered an important document for its usage as an identity proof across different sectors.
What Is a Blue Aadhaar Card?

For enrolling a child below the age of 5 for the Blue Aadhaar card, the child's birth certificate and the Aadhaar card number of one of the parents are required, according to UIDAI.

imageWhat Is a Blue Aadhaar Card? | lokmat.com

As Biometrics is not developed for children before five years of age, a child's blue-coloured Aadhaar data does not include biometric information like fingerprints and iris scans. Once the child crosses the age of five, biometrics should be updated, according to the UIDAI official.

Blue Aadhar Card will also carry a 12-digit number for children below five years of age. It will become invalid once the child crosses the age of five.


ಗುರುವಾರ, ಏಪ್ರಿಲ್ 7, 2022

ಹಂಪಿ ಕನ್ನಡ ವಿವಿ: ಗೊರುಚ, ಭಾಷ್ಯಂ ಸ್ವಾಮಿ, ವೆಂಕಟಾಚಲಶಾಸ್ತ್ರಿಗೆ ನಾಡೋಜ ಗೌರವ

ಹಂಪಿ ಕನ್ನಡ ವಿವಿ: ಗೊರುಚ, ಭಾಷ್ಯಂ ಸ್ವಾಮಿ, ವೆಂಕಟಾಚಲಶಾಸ್ತ್ರಿಗೆ ನಾಡೋಜ ಗೌರವ

ಹೊಸಪೇಟೆ (ವಿಜಯನಗರ): ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

ಜಿ. ಕೃಷ್ಣಪ್ಪ, ಮಲೆಯೂರು ಗುರುಸ್ವಾಮಿ, ಡಾ. ಎಸ್.ಸಿ. ಶರ್ಮಾ, ಗುರುಲಿಂಗ ಕಾಪಸೆ, ಡಾ. ಶಿವಾನಂದ ನಾಯಕ, ರಮೇಶ ಎಂ.ಕೆ,., ನಾಸೀರ್ ಅಹಮ್ಮದ್ ಸೇರಿದಂತೆ ಒಟ್ಟು ಹತ್ತು ಜನರ ಹೆಸರು ನಾಡೋಜಕ್ಕೆ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು ಮೂವರ ಹೆಸರಿಗೆ ಅಂಕಿತ ಹಾಕಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ, ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಏಪ್ರಿಲ್ 12ರಂದು ಸಂಜೆ 5.30ಕ್ಕೆ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ನುಡಿಹಬ್ಬದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ನಾಡೋಜ ಪ್ರದಾನ ಮಾಡುವರು. ಚಿತ್ರದುರ್ಗದ ಮುರುಘಾ ಶರಣರು, ಪತ್ರಕರ್ತ ಪದ್ಮರಾಜ ದಂಡಾವತಿ, ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಎಸ್. ಪುಟ್ಟಸ್ವಾಮಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗಡೆ ಅವರಿಗೆ ಡಿ.ಲಿಟ್ ಹಾಗೂ 1387 ವಿದ್ಯಾರ್ಥಿಗಳಿಗೆ ವಿವಿಧ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.. ಸಿ.ಎನ್. ಅಶ್ವತ್ಥನಾರಾಯಣ ಪ್ರದಾನ ಮಾಡುವರು. ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಘಟಿಕೋತ್ಸವ ಭಾಷಣ ಮಾಡುವರು ಎಂದು ವಿವರಿಸಿದರು.

ಭ್ರಷ್ಟಾಚಾರದ ಆರೋಪ, ಸಿಬ್ಬಂದಿ ಆಡಳಿತದ ನಡುವಿನ ಸಂಘರ್ಷ ದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕುಲಪತಿ ಉತ್ತರಿಸಲು ನಿರಾಕರಿಸಿದರು. ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಹಾಗೂ ಹಿರಿಯ ಪ್ರಾಧ್ಯಾಪಕರು ಇದ್ದರು.


ಭಾನುವಾರ, ಏಪ್ರಿಲ್ 3, 2022

ಏಳನೇ ಬಾರಿಗೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ

ಏಳನೇ ಬಾರಿಗೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ

ಕ್ರೈಸ್ಟ್ ಚರ್ಚ್‌:
 ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಅಭೂತಪೂರ್ವ ಜಯಸಾಧಿಸಿದೆ. ಈ ಮೂಲಕ ಏಳನೇ ಬಾರಿಗೆ ಮಹಿಳಾ ವಿಶ್ವಕಪ್‌ ಅನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 356 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಅಲಿಸಾ ಹೀಲಿ ಶತಕ (170) ಸಿಡಿಸಿ ಸಂಭ್ರಮಿಸಿದರು.

ಈ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ತಂಡವು 43.4 ಓವರ್​ನಲ್ಲಿ 285 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್‌ ಅನ್ನು ಮಣಿಸಿದ ಆಸ್ಟ್ರೇಲಿಯಾದ ಮಹಿಳಾ ತಂಡವು 7ನೇ ಬಾರಿಗೆ ವಿಶ್ವಕಪ್‌ ಅನ್ನು ತನ್ನದಾಗಿಸಿಕೊಳ್ಳುವ ಮೂಲಕ ದಾಖಲೆ ಬರೆದಿದೆ.

ಮಂಗಳವಾರ, ಮಾರ್ಚ್ 29, 2022

ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ 'ಬೇರುಗಳ ಸೇತುವೆ' ಸೇರ್ಪಡೆ


ಶಿಲ್ಲಾಂಗ್: ಮೇಘಾಲಯದ ಸುಮಾರು 70 ಗ್ರಾಮಗಳಲ್ಲಿ ಇರುವ, ಪ್ರಕೃತಿ ಸಹಜವಾಗಿ ಮೂಡಿರುವ ‘ಬೇರುಗಳ ತೂಗುಸೇತುವೆ’ಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳು ಕುರಿತ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಪ್ರಕೃತಿ ಸಹಜವಾಗಿ ಮೂಡಿರುವ ಈ ತೂಗು ಸೇತುವೆಗಳು ಸಾಮಾಜಿಕ, ಸಾಂಸ್ಕೃತಿಕವಾಗಿ ಸ್ಥಳೀಯ ಜನರು ಪ್ರಕೃತಿಯ ಜೊತೆಗೆ ಬೆಸೆದುಕೊಂಡಿರುವುದರ ಸಂಕೇತವಾಗಿ ಹೆಸರಾಗಿವೆ.

‘ಮೇಘಾಲಯದ ಸಾಂಸ್ಕೃತಿಕ ಹೆಗ್ಗುರುತು ‘ಬೇರುಗಳ ಸೇತುವೆಗಳು’ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿರುವುದು ಸಂತಸ ಮೂಡಿಸಿದೆ’ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.

ಈ ಕುರಿತು ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ಯಶಸ್ಸಿಗಾಗಿ ಎಲ್ಲ ಭಾಗಿದಾರ ಸಂಸ್ಥೆಗಳು, ಜನರಿಗೆ ಅಭಿನಂದಿಸುತ್ತೇನೆ ಎಂದಿದ್ದಾರೆ. ಪ್ರಸ್ತುತ 72 ಗ್ರಾಮಗಳ ವ್ಯಾಪ್ತಿಯಲ್ಲಿ ಇಂತಹ ಬೇರುಗಳ ಸೇತುವೆಗಳು 100ಕ್ಕೂ ಹೆಚ್ಚಿವೆ.

ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಗೆ ಬೆಡಿಕೆ; ರಷ್ಯಾದಿಂದ ದಾಖಲೆಯ ಬೆಲೆಗೆ ಖರೀದಿ.


ಭಾರತ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳು:

* ಸೂರ್ಯಕಾಂತಿ ಎಣ್ಣೆ: ಉಕ್ರೇನ್, ರಷ್ಯಾ

* ತಾಳೆ ಎಣ್ಣೆ: ಇಂಡೊನೇಷ್ಯಾ, ಮಲೇಷ್ಯಾ

* ಸೋಯಾಬಿನ್‌ ಎಣ್ಣೆ: ಅರ್ಜೆಂಟಿನಾ, ಬ್ರೆಜಿಲ್‌


ಮುಂಬೈ: ಉಕ್ರೇನ್‌ನಿಂದ ಖಾದ್ಯ ತೈಲದ ಪೂರೈಕೆ ನಿಂತಿರುವುದರಿಂದ ದೇಶದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡುಗೆಗೆ ಬಳಕೆಯಾಗುವ ತೈಲ ದರ ಏರಿಕೆಯಾಗಿದೆ. ಈಗ ಭಾರತವು ರಷ್ಯಾದಿಂದ 45,000 ಟನ್‌ ಸೂರ್ಯಕಾಂತಿ ಎಣ್ಣೆಯನ್ನು ಅತ್ಯಧಿಕ ಬೆಲೆಗೆ ಖರೀದಿಸಿರುವುದಾಗಿ ವರದಿಯಾಗಿದೆ.

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಅಲ್ಲಿಂದ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಸ್ಥಗಿತಗೊಂಡಿದೆ. ಭಾರತ ಹೊರ ದೇಶಗಳಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತಿದೆ. ತಾಳೆ ಎಣ್ಣೆ ಪೂರೈಕೆಯ ಮೇಲೆ ಇಂಡೊನೇಷ್ಯಾ ಮಿತಿ ಹೇರಿದೆ ಹಾಗೂ ದಕ್ಷಿಣ ಅಮೆರಿಕದಲ್ಲಿ ಸೋಯಾಬಿನ್‌ ಬೆಳೆ ಇಳುವರಿ ಕಡಿಮೆಯಾಗಿರುವುದು ದೇಶದಲ್ಲಿ ಸಸ್ಯ ಮೂಲದ ತೈಲಗಳ ಲಭ್ಯತೆಯಲ್ಲಿ ಕೊರತೆ ಸೃಷ್ಟಿಸಿಯಾಗಿದೆ.

ಉಕ್ರೇನ್‌ನಿಂದ ಅಡುಗೆ ಎಣ್ಣೆ ರವಾನಿಸುವುದು ಸಾಧ್ಯವಾಗದಿರುವ ಕಾರಣದಿಂದಾಗಿ ಖರೀದಿದಾರರು ರಷ್ಯಾದಿಂದ ತೈಲ ಖರೀದಿ ವ್ಯವಹಾರ ನಡೆಸುತ್ತಿರುವುದಾಗಿ ಜೆಮಿನಿ ಎಡಿಬಲ್ಸ್ ಅಂಡ್‌ ಫ್ಯಾಟ್ಸ್‌ ಇಂಡಿಯಾ ಪ್ರೈ.ಲಿ.,ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಚೌಧರಿ ಹೇಳಿದ್ದಾರೆ. ಜೆಮಿನಿ ಸಂಸ್ಥೆಯು ಏಪ್ರಿಲ್‌ನಲ್ಲಿ ರಷ್ಯಾದಿಂದ 12,000 ಟನ್‌ ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ.

ರಿಫೈನರಿಗಳು ಸೂರ್ಯಕಾಂತಿ ಕಚ್ಚಾ ತೈಲವನ್ನು ಪ್ರತಿ ಟನ್‌ಗೆ 2,150 ಡಾಲರ್‌ (₹1.63 ಲಕ್ಷ) ದಾಖಲೆಯ ಬೆಲೆಗೆ ಖರೀದಿಸಿವೆ. ಅದು ತೈಲ ಬೆಲೆ, ಇನ್ಶ್ಯುರೆನ್ಸ್‌ ಹಾಗೂ ಸರಕು ಸಾಗಣೆ ವೆಚ್ಚವನ್ನು (ಸಿಐಎಫ್‌) ಒಳಗೊಂಡಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿಗೂ ಮುನ್ನ ಪ್ರತಿ ಟನ್‌ ಸೂರ್ಯಕಾಂತಿ ಕಚ್ಚಾ ತೈಲವನ್ನು 1,630 ಡಾಲರ್‌ಗಳಿಗೆ (₹1.23 ಲಕ್ಷ) ಖರೀದಿಸಲಾಗುತ್ತಿತ್ತು ಎಂದು ಡೀಲರ್‌ಗಳು ಹೇಳಿದ್ದಾರೆ.

ಉಕ್ರೇನ್‌–ರಷ್ಯಾ ಸಂಘರ್ಷಕ್ಕೂ ಮುನ್ನ ತಾಳೆ ಎಣ್ಣೆ ಮತ್ತು ಸೋಯಾಬಿನ್‌ ಎಣ್ಣೆಗಿಂತಲೂ ಕಡಿಮೆ ಬೆಲೆಗೆ ಸೂರ್ಯಕಾಂತಿ ಎಣ್ಣೆ ದೊರೆಯುತ್ತಿತ್ತು. ಆದರೆ, ಸೂರ್ಯಕಾಂತಿ ಎಣ್ಣೆಯ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿರುವ ಉಕ್ರೇನ್‌ನಿಂದ ಪೂರೈಕೆ ಸ್ಥಗಿತವಾಗಿರುವುದರಿಂದ ರಿಫೈನರಿಗಳು ದೊಡ್ಡ ಮೊತ್ತ ತೆರಬೇಕಾಗಿದೆ ಎಂದು ಚೌಧರಿ ಹೇಳಿದ್ದಾರೆ.

ಜಗತ್ತಿನಾದ್ಯಂತ ಉತ್ಪಾದನೆಯಾಗುವ ಶೇಕಡ 60ರಷ್ಟು ಸೂರ್ಯಕಾಂತಿ ಎಣ್ಣೆ ಹಾಗೂ ಒಟ್ಟು ರಫ್ತು ಪ್ರಮಾಣದಲ್ಲಿ ಶೇಕಡ 76ರಷ್ಟು ಯುರೋಪ್‌ ಮತ್ತು ಏಷ್ಯಾ ನಡುವಿನ ಕಪ್ಪು ಸಮುದ್ರದ ಮಾರ್ಗದಲ್ಲಿ ರವಾನೆಯಾಗುತ್ತದೆ.

ಹಡಗುಗಳ ಮೂಲಕ ಉಕ್ರೇನ್‌ನಿಂದ ಭಾರತಕ್ಕೆ ತಲುಪಬೇಕಿದ್ದ 3,00,000 ಟನ್‌ಗೂ ಹೆಚ್ಚಿನ ಪ್ರಮಾಣದ ಸೂರ್ಯಕಾಂತಿ ಎಣ್ಣೆ ಸಾಗಣೆಗೆ ಅಡ್ಡಿಯಾಗಿದೆ. ಈಗ ಭಾರತದ ಖರೀದಿದಾರರು ರಷ್ಯಾಗೆ ಡಾಲರ್‌ಗಳ ರೂಪದಲ್ಲಿ ಪಾವತಿಸುತ್ತಿದ್ದಾರೆ ಹಾಗೂ ಸರಕು ಸಾಗಣೆ ಮಾಡುವ ಹಡಗುಗಳಿಗೆ ದೇಶದ ವಿಮಾ ಕಂಪನಿಗಳು ವಿಮೆ ನೀಡುತ್ತಿವೆ.

ದೇಶದಲ್ಲಿ ಸುಮಾರು 2 ಲಕ್ಷ ಟನ್‌ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತಿದ್ದು, ರಿಫೈನರಿಗಳು ಪ್ರಸ್ತುತ 80,000 ಟನ್‌ಗಳಷ್ಟು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ದೆಹಲಿ ಮೂಲದ ವಿತರಕರೊಬ್ಬರು ಹೇಳಿದ್ದಾರೆ.

ಸೂರ್ಯಕಾಂತಿ ಎಣ್ಣೆಯ ಕೊರತೆಯಿಂದಾಗಿ ಜನರು ಸೋಯಾ, ಕಡಲೆಕಾಯಿ ಎಣ್ಣೆ ಹಾಗೂ ಸಾಸಿವೆ ಎಣ್ಣೆ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರತ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳು:

* ಸೂರ್ಯಕಾಂತಿ ಎಣ್ಣೆ: ಉಕ್ರೇನ್, ರಷ್ಯಾ

* ತಾಳೆ ಎಣ್ಣೆ: ಇಂಡೊನೇಷ್ಯಾ, ಮಲೇಷ್ಯಾ

* ಸೋಯಾಬಿನ್‌ ಎಣ್ಣೆ: ಅರ್ಜೆಂಟಿನಾ, ಬ್ರೆಜಿಲ್‌

ಶನಿವಾರ, ಮಾರ್ಚ್ 12, 2022

15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ

ಹಣಕಾಸು ಆಯೋಗ

15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ

Posted On: 09 NOV 2020 1:00PM

ಶ್ರೀ ಎನ್.ಕೆ. ಸಿಂಗ್ ನೇತೃತ್ವದ ಹದಿನೈದನೇ ಹಣಕಾಸು ಆಯೋಗ (XVFC) ಇಂದು 2021-22 ರಿಂದ 2025-26ನೇ ಸಾಲಿನ ತನ್ನ ವರದಿಯನ್ನು ಭಾರತದ ಮಾನ್ಯ ರಾಷ್ಟ್ರಪತಿಯವರಿಗೆ ಸಲ್ಲಿಸಿತು. ಆಯೋಗದ ಸದಸ್ಯರಾದ ಶ್ರೀ ಅಜಯ್ ನಾರಾಯಣ್ ಝಾ, ಪ್ರೊ. ಅನೂಪ್ ಸಿಂಗ್, ಡಾ. ಅಶೋಕ್ ಲಹಿರಿ ಮತ್ತು ಡಾ. ರಮೇಶ್ ಚಂದ್ ಅವರೊಂದಿಗೆ ಆಯೋಗದ ಕಾರ್ಯದರ್ಶಿ ಶ್ರೀ ಅರವಿಂದ್ ಮೆಹ್ತಾ ಅವರು ಅಧ್ಯಕ್ಷರ ಜೊತೆಗಿದ್ದರು.

ಉಲ್ಲೇಖಿತ ನಿಯಮಗಳ (ಟಿಓಆರ್) ಅನ್ವಯ, 2021-22 ರಿಂದ 2025-26ರ ಸಾಲಿನವರೆಗೆ ಐದು ವರ್ಷಗಳ ಕಾಲದ ತನ್ನ ಶಿಫಾರಸುಗಳನ್ನು 2020ರ ಅಕ್ಟೋಬರ್ 30ರೊಳಗೆ ಸಲ್ಲಿಸುವುದು ಆಯೋಗಕ್ಕೆ ಕಡ್ಡಾಯವಾಗಿತ್ತು. ಕಳೆದ ವರ್ಷ, ಆಯೋಗವು 2020-21ರ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿತ್ತು, ಕೇಂದ್ರ ಸರ್ಕಾರ ಅದನ್ನು ಅಂಗೀಕರಿಸಿತ್ತು ಹಾಗೂ 2020 ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿತ್ತು.

ಉಲ್ಲೇಖಿತ ನಿಯಮಗಳನ್ವಯ ಅನನ್ಯ ಮತ್ತು ವಿಸ್ತೃತ ಶ್ರೇಣಿಯ ವಿಚಾರಗಳ ಕುರಿತಂತೆ ತನ್ನ ಶಿಫಾರಸುಗಳನ್ನು ನೀಡಲು ಆಯೋಗಕ್ಕೆ ಕೇಳಲಾಗಿತ್ತು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯಗಳೊಳಗಿನ ತೆರಿಗೆ ಹಂಚಿಕೆ,  ಸ್ಥಳೀಯ ಸರ್ಕಾರಗಳ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ವಲಯ, ಡಿಬಿಟಿ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ ಇತ್ಯಾದಿ  ಹಲವು ಕ್ಷೇತ್ರಗಳಲ್ಲಿ ರಾಜ್ಯಗಳಿಗೆ ಕಾರ್ಯಕ್ಷಮತೆ ಪ್ರೋತ್ಸಾಹಕ ಪರೀಕ್ಷೆ ಮತ್ತು ಶಿಫಾರಸು ಮಾಡಲು ಆಯೋಗವನ್ನು ಕೇಳಲಾಗಿತ್ತು. ರಕ್ಷಣಾ ಮತ್ತು ಆಂತರಿಕ ಭದ್ರತೆಗೆ ಧನ ಸಹಾಯಕ್ಕಾಗಿ ಪ್ರತ್ಯೇಕ ಕಾರ್ಯವಿಧಾನವನ್ನು ಸ್ಥಾಪಿಸಬೇಕೇ ಎಂದು ಪರಿಶೀಲಿಸಲು ಮತ್ತು ಹಾಗಿದ್ದಲ್ಲಿ ಅಂತಹ ಕಾರ್ಯವಿಧಾನವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂದೂ ಕೇಳಲಾಗಿತ್ತು. ಆಯೋಗವು ಈ ವರದಿಯಲ್ಲಿ ತನ್ನ ಎಲ್ಲಾ ಅಭಿಮತವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿದೆ.

ಈ ವರದಿಯನ್ನು ನಾಲ್ಕು ಸಂಪುಟಗಳಲ್ಲಿ ಸಂಯೋಜಿಸಲಾಗಿದೆ. ಸಂಪುಟ 1 ಮತ್ತು 2 ಈ ಹಿಂದಿನಂತೆಯೇ ಪ್ರಮುಖ ವರದಿ ಮತ್ತು ಅದಕ್ಕೆ ಪೂರಕವಾದ ಪರಿವಿಡಿಗಳನ್ನು ಒಳಗೊಂಡಿದೆ. ಸಂಪುಟ 3 ಕೇಂದ್ರ ಸರ್ಕಾರಕ್ಕೆ ಮೀಸಲಾಗಿದ್ದು,  ಮಧ್ಯಮ-ಅವಧಿಯ ಸವಾಲುಗಳು ಮತ್ತು ಮಾರ್ಗಸೂಚಿಯೊಂದಿಗೆ ಪ್ರಮುಖ ವಿಭಾಗಗಳನ್ನು ಹೆಚ್ಚು ಆಳವಾಗಿ ಪರಿಶೀಲಿಸುತ್ತದೆ. ಸಂಪುಟ 4 ಸಂಪೂರ್ಣವಾಗಿ ರಾಜ್ಯಗಳಿಗೆ ಮೀಸಲಾಗಿದ್ದು, ಆಯೋಗವು ಪ್ರತಿ ರಾಜ್ಯದ ಹಣಕಾಸನ್ನು ಬಹಳ ಆಳವಾಗಿ ವಿಶ್ಲೇಷಿಸಿದೆ ಮತ್ತು ಪ್ರತ್ಯೇಕವಾಗಿ ರಾಜ್ಯಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಎದುರಿಸಲು ರಾಜ್ಯ-ನಿರ್ದಿಷ್ಟ ಪರಿಗಣನೆಗಳನ್ನೂ ಒಳಗೊಂಡಿದೆ.

ಕೇಂದ್ರ ಸರ್ಕಾರ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ತರುವಾಯ ವರದಿಯಲ್ಲಿರುವ ಶಿಫಾರಸುಗಳ ಬಗ್ಗೆ ವಿವರಣಾತ್ಮಕ ಜ್ಞಾಪನಾ ಪತ್ರ / ಕೈಗೊಂಡ ಕ್ರಮದ ವರದಿಯೊಂದಿಗೆ ಇದು ಸಾರ್ವಜನಿಕ ತಾಣಗಳಲ್ಲಿ ಲಭ್ಯವಾಗಲಿದೆ. ವರದಿಯ ಮುಖಪುಟ ಮತ್ತು ಶೀರ್ಷಿಕೆ ಈ ವರದಿಯಲ್ಲಿ ವಿಶಿಷ್ಟವಾಗಿವೆ- “ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ” ಹಾಗೂ ರಾಜ್ಯಗಳು ಮತ್ತು ಒಕ್ಕೂಟದ ನಡುವಿನ ಸಮತೋಲನವನ್ನು ಸೂಚಿಸುವ ರಕ್ಷಾಪುಟದಲ್ಲಿ ಮಾಪಕ ಬಳಸಲಾಗಿದೆ.


ಶುಕ್ರವಾರ, ಮಾರ್ಚ್ 4, 2022

ಡಿಜಿ ಯಾತ್ರಾ:- ವಿಮಾನಯಾನದ ಪ್ರಯಾಣಕ್ಕೆ ಸಂಬಂಧಿಸಿದಂತೆ ಇರುವ ಮಾಹಿತಿ.

ಭಾರತದಲ್ಲಿ ಉಡಾನ್‌ ಯೋಜನೆಯಿಂದಾಗಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ವಿಮಾನಯಾನ ಮಾಡುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಉದಾಹರಣೆಗೆ, ಪ್ರತಿದಿನ ಸರಾಸರಿ ಮೂವತ್ತು ಸಾವಿರ ಪ್ರಯಾಣಿಕರು ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ. ಕೋವಿಡ್‌-19ರಿಂದ ಸ್ಥಗಿತವಾಗಿರುವ ಅಂತರರಾಷ್ಟ್ರೀಯ ವಿಮಾನಯಾನ ಪೂರ್ಣ ಪ್ರಮಾಣದಲ್ಲಿ ಮತ್ತೆ ಪ್ರಾರಂಭವಾದರೆ, ಪ್ರತಿದಿನ ಬೆಂಗಳೂರಿನ ವಿಮಾನ ನಿಲ್ದಾಣವನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ವಿಮಾನ ಹೊರಡುವ ಸಮಯಕ್ಕಿಂತ ಕೆಲವು ಗಂಟೆಗಳ ಕಾಲ ಮೊದಲು ವಿಮಾನ ನಿಲ್ದಾಣವನ್ನು ತಲುಪಬೇಕು. ವಿಮಾನ ನಿಲ್ದಾಣ ಪ್ರವೇಶಿಸಲು, ಸರತಿಸಾಲಿನಲ್ಲಿ ನಿಂತು ಸುರಕ್ಷತಾ ಸಿಬ್ಬಂದಿಗೆ ಐಡಿ, ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ತೋರಿಸಬೇಕು. ಲಗೇಜ್‌ ಚೆಕ್‌ ಇನ್‌ ಮಾಡಲು, ಬೋರ್ಡಿಂಗ್‌ ಪಾಸ್‌ ಪಡೆಯಲು ಮತ್ತೊಮ್ಮೆ ಸರತಿಸಾಲಿನಲ್ಲಿ ನಿಲ್ಲಬೇಕು. ಇದಾದ ನಂತರ ಬೋರ್ಡಿಂಗ್‌ ಏರಿಯಾ ಪ್ರವೇಶಿಸುವ ಮೊದಲು ಸೆಕ್ಯೂರಿಟಿ ತಪಾಸಣೆಗಾಗಿ ಸರತಿಸಾಲಿನಲ್ಲಿ ನಿಲ್ಲಬೇಕು. ವಿಮಾನ ಹೊರಡಲು ಸಿದ್ಧವಾದಾಗ, ಬೋರ್ಡಿಂಗ್‌ ಏರಿಯಾದಿಂದ ವಿಮಾನದ ಹತ್ತಿರ ಹೋಗಲು ಸರತಿಸಾಲಿನಲ್ಲಿ ನಿಂತು ವಿಮಾನಯಾನ ಸಿಬ್ಬಂದಿಗೆ ಬೋರ್ಡಿಂಗ್‌ ಪಾಸ್‌ ತೋರಿಸಬೇಕು. ವಿಮಾನ ಪ್ರವೇಶಿಸುವ ಮೊದಲು ಮತ್ತೊಮ್ಮೆ ಸರತಿಸಾಲಿನಲ್ಲಿ ನಿಂತು ಬೋರ್ಡಿಂಗ್‌ ಪಾಸ್‌ ತೋರಿಸಿ, ಸೆಕ್ಯುರಿಟಿ ಚೆಕ್‌ಗೆ ಒಳಪಡಬೇಕು.

ಇಷ್ಟೊಂದು ಸರತಿಸಾಲಿನಲ್ಲಿ ನಿಲ್ಲುವುದು ಮತ್ತು ಇಷ್ಟೊಂದು ಹಂತದಲ್ಲಿ ಸೆಕ್ಯುರಿಟಿ ತಪಾಸಣೆಗಾಗಿ ಪ್ರಯಾಣಿಕರ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಮತ್ತೊಂದು ಕಡೆ, ವಿವಿಧ ಹಂತದಲ್ಲಿ ಪ್ರಯಾಣಿಕರಿಗೆ ನೆರವಾಗಲು ಸಾಕಷ್ಟು ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆ ನಿಯೋಜಿಸಬೇಕಾಗುತ್ತದೆ.

ಪ್ರಯಾಣಿಕರಿಗೆ ಸುಲಭವಾಗಿ ವಿಮಾನಯಾನ ಮಾಡಲು ಸಾಧ್ಯವಾಗಲು, ಭಾರತ ಸರ್ಕಾರ ಕಂಪ್ಯೂಟರ್‌ ವಿಷನ್‌ ತಂತ್ರಜ್ಞಾನ ಆಧಾರಿತ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಹಂತಹಂತವಾಗಿ ಭಾರತದ ಎಲ್ಲ ವಿಮಾನ ನಿಲ್ದಾಣದಲ್ಲಿ ಜಾರಿಗೊಳಿಸುತ್ತಿದೆ.

ಈ ಸೌಲಭ್ಯವನ್ನು ಪಡೆಯುವ ಇಚ್ಛಿಸುವ ಪ್ರಯಾಣಿಕರು, ಈ ಉದ್ದೇಶಕ್ಕಾಗಿ ಲಭ್ಯವಾಗುವ ಜಾಲತಾಣದಲ್ಲಿ ತಮ್ಮ ಹೆಸರು, ಇ-ಮೇಲ್‌ ವಿಳಾಸ, ಮೊಬೈಲ್‌ ಫೋನ್‌ ಸಂಖ್ಯೆ ಹಾಗೂ ಐಡಿ ಮಾಹಿತಿ (ಆಧಾರ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್‌ ಇತ್ಯಾದಿ) ನೀಡಿದರೆ ಅವರಿಗೊಂದು ಡಿಜಿಯಾತ್ರಾ ಐಡಿ ದೊರೆಯುತ್ತದೆ.

ವಿಮಾನಯಾನಕ್ಕಾಗಿ ಟಿಕೆಟ್‌ ಖರೀದಿಸುವಾಗ ಈ ಡಿಜಿ ಯಾತ್ರಾ ಐಡಿಯನ್ನು ಪ್ರಯಾಣಿಕರು ನೀಡಬೇಕು. ಅವರು ವಿಮಾನಯಾನ ಪ್ರಾರಂಭಿಸುವ ವಿಮಾನ ನಿಲ್ದಾಣಕ್ಕೆ ಡಿಜಿ ಯಾತ್ರಾ ಐಡಿಯನ್ನು ಹಾಗೂ ಟಿಕೆಟ್‌ ಮಾಹಿತಿಯನ್ನು ವಿಮಾನಯಾನ ಸಂಸ್ಥೆ ತಲುಪಿಸುತ್ತದೆ.

ಮೊದಲ ಸಲ ಡಿಜಿ ಯಾತ್ರಾ ಐಡಿ ಪ್ರಯಾಣ ಮಾಡುವಾಗ ಮಾತ್ರ ವಿಮಾನ ನಿಲ್ದಾಣದಲ್ಲಿರುವ ನೊಂದಣಿ ಕಿಯೋಸ್ಕ್‌ನಲ್ಲಿ ಪ್ರಯಾಣಿಕರ ಐಡಿಯನ್ನು ಪರಿಶೀಲಿಸಲಾಗುತ್ತದೆ. ಪರಿಶೀಲನೆ ಯಶಸ್ವಿಯಾದರೆ, ಪ್ರಯಾಣಿಕರ ಫೋಟೊವನ್ನು ಅವರ ಡಿಜಿ ಯಾತ್ರಾ ಐಡಿಯಲ್ಲಿ ಸೇರಿಸಲಾಗುತ್ತದೆ.‌

ಇಷ್ಟು ಮಾಡಿದ ನಂತರ, ಎಷ್ಟು ಬಾರಿ ವಿಮಾನಯಾನ ಮಾಡಿದರೂ, ಪ್ರಯಾಣಿಕರನ್ನು ‘ಐಡಿ ತೋರಿಸಿ’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಅಥವಾ ಸುರಕ್ಷತಾ ಸಿಬ್ಬಂದಿ ಕೇಳುವುದಿಲ್ಲ.

ಡಿಜಿ ಯಾತ್ರಾ ಐಡಿ ಹೊಂದಿರುವ ಪ್ರಯಾಣಿಕರು ವಿಮಾನಯಾನ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಾಗ, ಸ್ವಯಂಚಾಲಿತ ದ್ವಾರದಲ್ಲಿ ತಮ್ಮ ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರ ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ಮಾಹಿತಿಯನ್ನು ಹಾಗೂ ಡಿಜಿ ಯಾತ್ರಾ ಐಡಿಯಲ್ಲಿರುವ ಫೋಟೊದ ಜೊತೆಗೆ ಪ್ರಯಾಣಿಕರ ಹೋಲಿಕೆಯನ್ನು ಮಾಡಿ ಪರಿಶೀಲಿಸಲಾಗುತ್ತದೆ. ಮಾಹಿತಿ ಮತ್ತು ಫೋಟೊ ಹೋಲಿಕೆಯಾದರೆ, ಸ್ವಯಂಚಾಲಿತ ದ್ವಾರ ತೆರೆದುಕೊಳ್ಳುತ್ತದೆ ಮತ್ತು ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಪ್ರವೇಶಿಸಬಹುದು.

ಅಲ್ಲಿಂದ ಪ್ರಯಾಣಿಕರು ನೇರವಾಗಿ ಸೆಕ್ಯೂರಿಟಿ ತಪಾಸಣ ವಲಯಕ್ಕೆ ಹೋಗಬಹುದು; ಅಲ್ಲಿ ತಪಾಸಣೆಯ ನಂತರ ಬೋರ್ಡಿಂಗ್‌ ಏರಿಯಾವನ್ನು ಪ್ರವೇಶಿಸಬಹುದು.

ಪ್ರಯಾಣಿಕರಿಗೆ ಹಲವು ಬಾರಿ ಸರತಿಸಾಲಿನಲ್ಲಿ ನಿಲ್ಲುವುದು ಡಿಜಿ ಯಾತ್ರಾ ಸೌಲಭ್ಯದಿಂದ ತಪ್ಪುತ್ತದೆ; ಐಡಿ ಮತ್ತು ಬೋರ್ಡಿಂಗ್‌ ಪಾಸ್‌ ತೋರಿಸುವುದೂ ತಪ್ಪುತ್ತದೆ. ಅಧಿಕೃತ ಪ್ರಯಾಣಿಕರು ಮತ್ತು ಸಿಬ್ಬಂದಿಯ ಹೊರತಾಗಿ ಬೇರೆ ಯಾರಿಗೂ ವಿಮಾನ ನಿಲ್ದಾಣ ಪ್ರವೇಶಿಸುವ ಅವಕಾಶ ಇರುವುದಿಲ್ಲವಾದ ಕಾರಣ ವಿಮಾನ ನಿಲ್ದಾಣ ಮತ್ತು ವಿಮಾನಯಾನದ ಸುರಕ್ಷತೆಯೂ ಹೆಚ್ಚಾಗುತ್ತದೆ.

ಡಿಜಿ ಯಾತ್ರಾ ಸೌಲಭ್ಯವನ್ನು ಮೊದಲು ಪ್ರಾಯೋಗಿಕವಾಗಿ ಬೆಂಗಳೂರು ಮತ್ತು ಹೈದರಾಬಾದಿನ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗಿತ್ತು. ಈಗ ಮೊದಲ ಹಂತವಾಗಿ ಪುಣೆ, ವಿಜಯವಾಡ, ಕೋಲ್ಕತ್ತಾ ಮತ್ತು ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಅನುಷ್ಠಾನಗೊಳಿಸಲಾಗುತ್ತದೆ.

ಭಾನುವಾರ, ಫೆಬ್ರವರಿ 27, 2022

"ಆಪರೇಷನ್ ಗಂಗಾ" ಬುಡಾಪೆಸ್ಟ್ ನಿಂದ 240 ಭಾರತೀಯರು ತಾಯ್ನಾಡಿಗೆ

ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ ಹಂಗೇರಿಗೆ ಸ್ಥಳಾಂತರಗೊಂಡಿದ್ದ 240 ಮಂದಿ ಭಾರತೀಯರನ್ನು ಒಳಗೊಂಡ ವಿಮಾನ ಭಾನುವಾರ ನಸುಕಿನಲ್ಲಿ ನವದೆಹಲಿಯತ್ತ ಪ್ರಯಾಣ ಬೆಳೆಸಿದೆ.

ಹಂಗೇರಿಯ ಬುಡಾಪೆಸ್ಟ್‌ನಿಂದ 240 ಮಂದಿ ಭಾರತೀಯರನ್ನೊಳಗೊಂಡ ವಿಮಾನ ದೆಹಲಿಯತ್ತ ಪ್ರಯಾಣ ಬೆಳೆಸಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: 

ಇದಕ್ಕೂ ಮುನ್ನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ 250 ಮಂದಿ ಭಾರತೀಯರು ಭಾನುವಾರ ಮುಂಜಾನೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇವರನ್ನು ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ವಾಗತಿಸಿದ್ದಾರೆ.

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ನೆರೆ ರಾಷ್ಟ್ರಗಳ ಮೂಲಕ ಭಾರತಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಭಾರತ ಸರ್ಕಾರವು ‘ಆಪರೇಷನ್ ಗಂಗಾ’ ತೆರವು ಕಾರ್ಯಾಚರಣೆ ಹಮ್ಮಿಕೊಂಡಿದೆ. ಇದರ ಮೊದಲ ಹಂತದಲ್ಲಿ 219 ಮಂದಿಯನ್ನು ಶನಿವಾರ ಮುಂಬೈಗೆ ಕರೆತರಲಾಗಿತ್ತು.


ರಾತ್ರಿ 2 ಗಂಟೆಗೆ ಅಧಿವೇಶನ ನಡೆಸಲು ಪ.ಬಂಗಾಳ ರಾಜ್ಯಪಾಲರ ಪಟ್ಟು; ದೀದಿ ನಾಡಲ್ಲಿ ಆಗ್ತಿರೋದೇನು?

ರಾತ್ರಿ 2 ಗಂಟೆಗೆ ಅಧಿವೇಶನ ನಡೆಸಲು ಪ.ಬಂಗಾಳ ರಾಜ್ಯಪಾಲರ ಪಟ್ಟು; ದೀದಿ ನಾಡಲ್ಲಿ ಆಗ್ತಿರೋದೇನು?

26th February, 2022 23:10 IST

ಕೋಲ್ಕೊತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನಕರ್‌ ಅವರು ರಾತ್ರಿ 2 ಗಂಟೆಗೆ ವಿಧಾನಸಭೆ ಅಧಿವೇಶನ ನಡೆಸುವ ವಿಚಾರದಲ್ಲಿ ಯಾವುದೇ ಬದಲಾವಣೆಗೆ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. 

ಸಮಯ ಬದಲಾವಣೆ ಮಾಡುವಂತೆ ಸರಕಾರ ಮಾಡಿರುವ ಮನವಿಯನ್ನು ತಳ್ಳಿ ಹಾಕಿರುವ ಅವರು, ಮನವಿಯನ್ನು ಪರಿಗಣಿಸಲು ಸಚಿವ ಸಂಪುಟ ಸಭೆಯ ಅನುಮೋದನೆ ಬೇಕು ಎಂದು ಹೇಳಿದ್ದಾರೆ. ಫೆ.24ರಂದು ಮುಖ್ಯ ಕಾರ್ಯದರ್ಶಿ ಎಚ್‌.ಕೆ. ದ್ವಿವೇದಿ ಅವರು ವಿಧಾನಸಭೆ ಅಧಿವೇಶನ ಕರೆಯುವ ಅಧಿಕಾರ ಹೊಂದಿರುವ ರಾಜ್ಯಪಾಲರಿಗೆ ಪತ್ರ ಬರೆದು ಮಾ.7ರಂದು ಅಧಿವೇಶನ ಕರೆಯುವಂತೆ ಮನವಿ ಮಾಡಿದ್ದರು. ಆದರೆ ಪತ್ರದಲ್ಲಿ ಟೈಪಿಂಗ್‌ ತಪ್ಪಿನಿಂದಾಗಿ ಮಧ್ಯಾಹ್ನ 2 ಗಂಟೆ ಬದಲಿಗೆ ರಾತ್ರಿ 2 ಗಂಟೆ (2 ಎಎಂ) ಎಂದು ಮುದ್ರಣವಾಗಿತ್ತು. ಇದನ್ನು ನೋಡದೆ ಹಾಗೆಯೇ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. 

ಸಚಿವ ಸಂಪುಟದ ಶಿಫಾರಸಿನ ಮೇರೆಗೆ ಅಂದು ಆ ಸಮಯಕ್ಕೆ ಅಧಿವೇಶನ ಕರೆಯಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿತ್ತು. ಈ ತಪ್ಪಿನ ಅರಿವಾಗುತ್ತಲೇ ಕಾರ್ಯದರ್ಶಿಯವರು ಮತ್ತೆ ರಾಜ್ಯಪಾಲರಿಗೆ ಪತ್ರ ಬರೆದು, ಮೊದಲು ಬರೆದ ಪತ್ರದಲ್ಲಿ ಆದ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಧಿವೇಶನ ಕರೆಯಬೇಕಾದ ಸಮಯವನ್ನು ರಾತ್ರಿ ಬದಲಿಗೆ ಮಧ್ಯಾಹ್ನ 2 ಗಂಟೆ ಎಂದು ಬದಲಾಯಿಸಲು ಮನವಿ ಮಾಡಿದ್ದಾರೆ. ಆದರೆ ರಾಜ್ಯಪಾಲರು ಇದಕ್ಕೆ ನಿರಾಕರಿಸಿದ್ದಾರೆ. 

‘ರಾಜ್ಯಪಾಲರು ಅಧಿವೇಶನದ ಅವಧಿಯನ್ನು ಬದಲಾಯಿಸಿ ಹೊಸ ಪ್ರಕಟಣೆ ಹೊರಡಿಸಬೇಕಾದರೆ ಅದಕ್ಕೆ ಸಚಿವ ಸಂಪುಟ ಸಭೆಯ ಅನುಮೋದನೆ ಅತ್ಯಗತ್ಯ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸಿನಂತೆ ಮಾತ್ರ ಕೆಲಸ ಮಾಡುತ್ತಾರೆ. ಇಂತಹ ವಿಚಾರದಲ್ಲಿ ಯಾರೋ ಒಬ್ಬರನ್ನು ಸಚಿವ ಸಂಪುಟದ ಪ್ರತಿನಿಧಿ ಎಂದು ಪರಿಗಣಿಸಲಾಗದು. ಮತ್ತೆ ಸಂಪುಟ ಸಭೆ ಕರೆದು, ಶಿಫಾರಸು ಪತ್ರವನ್ನು ಅಧಿಕೃತವಾಗಿ ರವಾನಿಸಿದರೆ ಮಾತ್ರ ಸಮಯ ಬದಲಾಯಿಸಲಾಗುವುದು’ ಎಂದು ರಾಜಭವನ ಸ್ಪಷ್ಟಪಡಿಸಿದೆ. 

‘ಸಂವಿಧಾನದ 163ನೇ ವಿಧಿಯ ಪ್ರಕಾರ ರಾಜ್ಯಪಾಲರು ನಡೆದು ಕೊಂಡಿದ್ದಾರೆ. ಈ ವಿಧಿ ಅನುಸಾರ ಅಧಿವೇಶನ ಕರೆಯುವ ವಿಚಾರದಲ್ಲಿ ಯಾವುದೇ ಬದಲಾವಣೆಗೆ ಸಂಪುಟದ ಶಿಫಾರಸು ಅತ್ಯಗತ್ಯ’ ಎಂದು ರಾಜಭವನ ತಿಳಿಸಿದೆ.