ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ 2020-21ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಶನಿವಾರ ಮಂಡಿಸಿದರು. ಬಜೆಟ್ ಮುಖ್ಯಾಂಶಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...
ಮೇ 2019ರಲ್ಲಿ ಪ್ರಧಾನಿ ಮೋದಿ ಭಾರಿ ಜನಮತದೊಂದಿಗೆ ಸರ್ಕಾರ ರಚಿಸಿದರು. ಮಾನವೀಯತೆ ಮತ್ತು ಬದ್ಧತೆಯ ಸರ್ಕಾರ ನಮ್ಮದು. ಜನರು ಕೇವಲ ರಾಜಕೀಯ ಸ್ಥಿರತೆಗಾಗಿ ಜನಾದೇಶ ಕೊಡಲಿಲ್ಲ. ಅವರು ತಮ್ಮ ಆಶೋತ್ತರ ಬಿಂಬಿಸಬೇಕು ಎಂದು ಸೂಚಿಸಿದರು ಎನ್ನುವ ಮೂಲಕ ಬಜೆಟ್ ಭಾಷಣ ಆರಂಭಿಸಿದರು.
* ಭಾರತದ ಆಕಾಂಕ್ಷೆ: ಎಲ್ಲರ ಜೊತೆಗೆ, ಎಲ್ಲರ ವಿಕಾಸ ಎನ್ನುವ ಮಂತ್ರದೊಂದಿಗೆ ನಮ್ಮ ಪ್ರಧಾನಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದಾರೆ. ನೇರ ನಗದು ವರ್ಗಾವಣೆಯಿಂದ ಜನರಿಗೆ ಲಾಭವಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ಆರೋಗ್ಯ ವಿಮೆ, ಅಪಘಾತ ವಿಮೆ, ಯುಪಿಐ, ಪೇಮೆಂಟ್ ಗೇಟ್ ವೇ, ವಸತಿ ಯೋಜನೆ ಸೇರಿದಂತೆ ಹಲವು ಸಮಾಜ ಕಲ್ಯಾಣ ಯೋಜನೆಗಳು ಜನರಿಗೆ ತಲುಪಿದ್ದು ಭಾರತದ ಸದೃಢವೇ ನಮ್ಮ ಆಕಾಂಕ್ಷೆ ಎಂದರು.
* ಮೂರು ಮೂಲಸೂತ್ರಗಳು: ಈ ಬಾರಿ ಬಜೆಟ್ಗೆ ಮೂರು ಮೂಲಸೂತ್ರಗಳನ್ನು ಹೊಂದಿದೆ ಎಂದು ನಿರ್ಮಲಾ ಹೇಳಿದರು. 1) ಭಾರತದ ಆಕಾಂಕ್ಷೆ 2) ಆರ್ಥಿಕ ಪ್ರಗತಿ 3) ಸಾಮಾಜಿಕ ಕಾಳಜಿ
ಕೃಷಿ
* ತಾಲೂಕು ಹೋಬಳಿ ಮಟ್ಟದಲ್ಲಿ ಆಹಾರ ಸಂಸ್ಕರಣ ಘಟಗಳನ್ನು ಸ್ಥಾಪಿಸಲು ರಾಜ್ಯ ಸರಕಾರಗಳಿಗೆ ಕೇಂದ್ರ ಹಣಕಾಸು ಸಹಾಯ
* ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಕೃಷಿ ಉಡಾನ್ ಯೋಜನೆ
* ಪ್ರತ್ಯೇಕ ವಿಮಾನದ ಮೂಲಕ ಕೃಷಿ ಉತ್ಪನ್ನಗಳ ಸಾಗಾಟ
* ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕೃಷಿ ವಿಮಾನಯಾನಕ್ಕೆ ಸರಕಾರದ ಮನ್ನಣೆ
* ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ಕಾರ್ಡ್ ಸ್ಕೀಮ್ ಗೆ 15 ಲಕ್ಷ ಕೋಟಿ ಮೀಸಲು
* ಹಾಲು ಉತ್ಪಾದನೆ ದ್ವಿಗುಣಗೊಳಿಸಲು ಸರಕಾರದ ಆದ್ಯತೆ
* ರೈತರ ಆದಾಯ 2022ರವೇಳೆಗೆ ದ್ವಿಗುಣಗೊಳಿಸಲು ಕ್ರಮ
* ಜಲಕ್ಷಾಮ ಸಮಸ್ಯೆಯುಳ್ಳ 100 ಜಿಲ್ಲೆಗಳಿಗೆ ಸಮಗ್ರ ಕಾರ್ಯ ಸೂಚಿ
* 20 ಲಕ್ಷ ರೈತರಿಗೆ ಪಂಪ್ಸೆಟ್ ವಿತರಣೆ ಮಾಡಲಾಗುವುದು ಅಂಥ ಹೇಳಿದರು.
* ರೈತರಿಗಾಗಿ ಕಿಸಾನ್ ರೈಲು ಘೋಷಣೆ, ಪಿಪಿಪಿ ಮಾದರಿಯಲ್ಲಿ ನಿರ್ಮಾಣ
* 20 ಲಕ್ಷ ರೈತರಿಗೆ ಸೋಲಾರ್ ಪಂಪ್ ಸೆಟ್ ವಿತರಣೆ,
* ರೈಲ್ವೇ ಟ್ರ್ಯಾಕ್ ನ ಬದಿಯಲ್ಲಿ ಖಾಲಿ ಜಾಗದಲ್ಲಿ ಸೋಲಾರ್ ಫಲಕಗಳ ಅಳವಡಿಕೆ ಗೆ ಹೊಸ ಯೋಜನೆ ವಿದ್ಯುತ್ ಬಿಲ್ ಗಾಗಿ 3 ವರ್ಷದ ಒಳಗೆ ಪ್ರೀ ಪೈಡ್ ಸ್ಮಾರ್ಟ್ Energy meter ಅಳವಡಿಕೆಗೆ ರಾಜ್ಯಗಳಿಗೆ ಸಲಹೆ
* ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ 6.11 ಕೋಟಿ ರೈತರಿಗೆ ವಿಮೆ ಪ್ರಯೋಜನೆ ಸಿಕ್ಕಿದೆ
*ಕುಸುಮ್ ಯೋಜನೆ : ರೈತರು ಅನ್ನದಾತರಷ್ಟೇ ಅಲ್ಲ ವಿದ್ಯುತ್ ಉತ್ಪಾದಕರು ಆಗುತ್ತಾರೆ. ಪಂಪ್ಸೆಟ್ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ ಕುಸುಮ್ ಯೋಜನೆ ಘೋಷಣೆ ಮಾಡಿದ್ದು ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ ಮೂಲಕ ಸರ್ಕಾರವೇ ಖರೀದಿಸಲಿದೆ. ಈ ಮೂಲಕ ಬರಡು ಭೂಮಿಯಲ್ಲಿಯೂ ರೈತರು ಹಣ ಗಳಿಸಬಹುದು.
* ಸಾವಯವ ಉತ್ಪನ್ನಗಳ ಆನ್ಲೈನ್ ಮರಾಟ: ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಆನ್ಲೈನ್ ಮರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.
* ಕೃಷಿ ಸಾಲ: ಕೃಷಿಗೆ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು. 2020–21ರ ಸಾಲಿಗೆ ₹15 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ ಹೊಂದಲಾಗಿದ್ದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಎಲ್ಲ ರೈತರನ್ನು ಸೇರ್ಪಡೆ ಮಾಡಲಾಗುವುದು.
* ₹1.6 ಲಕ್ಷ ಕೋಟಿ ಮೀಸಲು: ಕೃಷಿ ಮತ್ತು ಸಂಬಂಧಿತ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ ₹2.83 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಘೋಷಣೆ ಮಾಡಲಾಗಿದೆ. ಕೃಷಿಗಾಗಿ ₹1.6 ಲಕ್ಷ ಕೋಟಿ ಮೀಸಲಿರಿಸಲಾಗಿದೆ.
* ಪಶುಸಂಗೋಪನೆ: ರಾಸುಗಳಲ್ಲಿ ಕಾಲುಬಾಯಿ ರೋಗ, ಕುರಿ ಮತ್ತು ಮೇಕೆಗಳಲ್ಲಿ ಪಿಪಿಪಿ ಕಾಯಿಲೆ ಮುಕ್ತ ಭಾರತದ ಘೋಷಣೆ. ಹಾಲು ಉತ್ಪಾದನೆಯನ್ನು 53.5 ಟನ್ನಿಂದ 108 ಟನ್ಗೆ ಹೆಚ್ಚಿಸುವ ಗುರಿಯನ್ನು ಈ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಮೀನುಗಾರಿಕೆ
* ₹1 ಲಕ್ಷ ಕೋಟಿ ಮೀನು ರಫ್ತಿನ ಗುರಿ (2025ರವರೆಗೆ)
*200 ಲಕ್ಷ ಟನ್ ಮೀನು ಉತ್ಪಾದನೆ ಗುರಿ.
* ಸಾಗರ್ ಮಿತ್ರ ಯೋಜನೆ ಮತ್ತು ಮೀನು ಉತ್ಪಾದಕ ಸಂಸ್ಥೆಗಳ ಮೂಲಕ ಗ್ರಾಮೀಣ ನಿರುದ್ಯೋಗಿ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಗಳಿಕೆ.
ಆರೋಗ್ಯ ಮತ್ತು ನೈರ್ಮಲ್ಯ
* ಆರೋಗ್ಯ ಮತ್ತು ನೈರ್ಮಲ್ಯಕ್ಕೆ ₹ 69,000 ಕೋಟಿ ಮೀಸಲು
* ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಾಗಿ ₹6400 ಕೋಟಿ
* ಜನ ಔಷಧಿ ಕೇಂದ್ರಗಳ ವಿಸ್ತರಣೆ, ನೂತನ 2000 ಔಷಧಿಗಳ ಸೇರ್ಪಡೆ
* ಸ್ವಚ್ಛ ಭಾರತ ಯೋಜನೆಗಾಗಿ ₹12.300 ಕೋಟಿ
* ನೀರಿನ ಸಮಸ್ಯೆಗೆ ಪರಿಹಾರ: ನೀರಿನ ಸಮಸ್ಯೆ ಇರುವ ದೇಶದ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.
* 112 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಡೆಯಡಿ ಆಸ್ಪತ್ರೆ ನಿರ್ಮಾಣ. 2024ರ ವೇಳೆಗೆ ದೇಶದೆಲ್ಲೆಡೆ ಜನೌಷಧ ಕೇಂದ್ರಗಳನ್ನು ವಿಸ್ತರಿಸಲು ಬದ್ಧ
* ಇಂದ್ರಧನುಷ್: ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆಯ ವಿಸ್ತರಣೆ.
* ಜನ ಆರೋಗ್ಯ ಯೋಜನೆ: ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ತಾಲ್ಲೂಕು ಮತ್ತು ಹೋಬಳಿ ಹಂತದ ಅಸ್ಪತ್ರೆಗಳಿಗೂ ಸೌಲಭ್ಯ ಒದಗಿಸಲು ಚಿಂತನೆ. ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ.
* ಕ್ಷಯ ರೋಗ ನಿರ್ಮೂಲನೆ: ಕ್ಷಯರೋಗ ಹೋದರೆ ದೇಶ ಬಲಿಷ್ಠವಾಗುತ್ತೆ. 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಪಣ. 2024ರ ಹೊತ್ತಿಗೆ ದೇಶದ ಎಲ್ಲ ಜಿಲ್ಲೆಗಳಿಗೆ ಜನ ಆರೋಗ್ಯ ಯೋಜನೆ ವಿಸ್ತರಣೆ ಮಾಡಲಾಗುವುದು.
ಶಿಕ್ಷಣ ಮತ್ತು ಕೌಶಲ
ಶಿಕ್ಷಣಕ್ಕೆ ₹99,300 ಕೋಟಿ. ಕೌಶಲಾಭಿವೃದ್ದಿಗೆ ₹3,000 ಕೋಟಿ ಅನುದಾನ.
* ಶಿಕ್ಷಣ ಕ್ಷೇತ್ರದಲ್ಲಿ FDI ( Foreign direct investment) ಗೆ ಅವಕಾಶ
* ಹೊರ ದೇಶದ ವಿಧ್ಯಾರ್ಥಿಗಳು ಭಾರತದಲ್ಲಿ ಕಲಿಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹೊಸ ಸ್ಕಾಲರ್ಶಿಪ್ ಯೋಜನೆ ಜಾರಿ
* ಹೊಸ ಶಿಕ್ಷಣ ನೀತಿ: 2030ರ ಹೊತ್ತಿಗೆ ಜಗತ್ತಿನ ಅತಿಹೆಚ್ಚು ಉದ್ಯೋಗಕ್ಕೆ ಸಿದ್ಧರಿರುವ ಜನರು ನಮ್ಮ ದೇಶದಲ್ಲಿ ಇರುತ್ತಾರೆ. ಹೊಸ ಶಿಕ್ಷಣ ನೀತಿಗೆ 2 ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿದ್ದು ಶೀಘ್ರ ಹೊಸ ಶಿಕ್ಷಣ ನೀತಿ ಘೋಷಣೆ ಮಾಡಲಾಗುತ್ತದೆ.
* ಇಂಟರ್ನ್ಶಿಪ್: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರಿಗೆ ಇಂಟರ್ನ್ಶಿಪ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
* ಆನ್ಲೈನ್ನಲ್ಲಿ ಪದವಿ: ಶಿಕ್ಷಣವಂಚಿತರಿಗಾಗಿ ಆನ್ಲೈನ್ನಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ನೀಡಲಾಗುತ್ತದೆ.
* ಪೊಲೀಸ್ ವಿಶ್ವವಿದ್ಯಾಲಯ: ನ್ಯಾಷನಲ್ ಪೊಲೀಸ್ ವಿಶ್ವವಿದ್ಯಾಲಯ ಮತ್ತು ಫೊರೆನ್ಸಿಕ್ ವಿಶ್ವವಿದ್ಯಾಲಯಗಳ ಪ್ರಸ್ತಾವ ಮಂಡನೆಯಾಗಿದ್ದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು.
* ನರ್ಸ್ಗಳ ಕೌಶಲ ವೃದ್ಧಿ: ನರ್ಸ್ಗಳ ಕೌಶಲ ವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲಾಗಿದೆ. ಭಾರತ ಸಂಜಾತ ನರ್ಸ್ಗಳಿಗೆ ವಿದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ವಿಶೇಷ ಯೋಜನೆ ರೂಪಿಸಲಾಗುವುದು.
ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ
* ಈ ಸಾಲಿನಲ್ಲಿ ₹ 27,300 ಕೋಟಿ ಮೀಸಲಿಡಲಾಗಿದೆ.
* ಸ್ಮಾರ್ಟ್ಫೋನ್, ಎಲೆಕ್ಟಾನಿಕ್ ಸಾಧನಗಳ ಉತ್ಪಾದನೆ ಹಾಗೂ ಸೆಮಿ ಕಂಡಕ್ಟರ್ ಪ್ಯಾಕಿಂಗ್ ವಿಶೇಷ ಯೋಜನೆ ಇದಕ್ಕಾಗಿ ₹1,480 ಕೋಟಿ ವೆಚ್ಚ. ನಾಲ್ಕು ವರ್ಷಗಳಲ್ಲಿ ಸಾಧನೆಯ ಗುರಿ.
* ರಾಷ್ಟ್ರೀಯ ಜವಳಿ ಮಿಷನ್ ಸ್ಥಾಪನೆ
ಮಹಿಳೆ ಮತ್ತು ಮಕ್ಕಳು
ಬೇಟಿ ಬಚಾವೋ ಬೇಟಿ ಪಡಾವೋ: ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು ಒಟ್ಟಾರೆ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಾಗಿದೆ. ಪ್ರೌಢಶಿಕ್ಷಣದಲ್ಲಿಯೂ ಪರಿಸ್ಥಿತಿ ಸುಧಾರಿಸುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್: 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್ ಒದಗಿಸುವ ಮೂಲಕ ಮಹಿಳೆಯರು, ಮಕ್ಕಳ ಸ್ಥಿತಿಗತಿ ಅರಿತು ಸ್ಪಂದಿಸಲು ಸಾಧ್ಯವಾಯಿತು.
ಪೌಷ್ಟಿಕಾಂಶ ಕೊರತೆ ನೀಗಿಸಲು ₹35,600 ಕೋಟಿ: ಪೌಷ್ಟಿಕಾಂಶ ಕೊರತೆ ನೀಗಿಸಲು ಸರ್ಕಾರ ₹35,600 ಕೋಟಿ ರೂಪಾಯಿ ಒದಗಿಸುವ ಘೋಷಣೆ ಮಾಡಿದೆ.
ಧಾನ್ಯ ಲಕ್ಷ್ಮಿ ಯೋಜನೆ: ಸ್ವ ಸಹಾಯ ಗುಂಪುಗಳಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ. ಈ ಗುಂಪುಗಳನ್ನು ಧಾನ್ಯ ಲಕ್ಷ್ಮಿ ಎಂದು ಕರೆಯಲಾಗುವುದು. ನಬಾರ್ಡ್, ಮುದ್ರಾ ಯೋಜನೆಯಡಿ ನೆರವು ನೀಡಲಾಗುವುದು.
ಮೂಲ ಸೌಕರ್ಯ
* ₹100 ಲಕ್ಷ ಕೋಟಿ ಹೂಡಿಕೆ (ಮುಂದಿನ 5 ವರ್ಷಗಳಲ್ಲಿ)
* ದೇಶದಾದ್ಯಂತ 6500 ಯೋಜನೆಯ ಕಾಮಗಾರಿಗಳು ನಡೆಯುತ್ತಿವೆ
* ರಾಷ್ಟ್ರೀಯ ಸರಕು ಸಾಗಣೆ ಪಾಲಿಸಿಯನ್ನು ಶೀಘ್ರದಲ್ಲೇ ಮಂಡಿಸಲಾಗುವುದು.
* ಹೊಸದಾಗಿ ನವೋದ್ಯಮ ಸ್ಥಾಪಿಸುವವರಿಗೆ ಮೂಲಸೌಕರ್ಯದಲ್ಲಿ ರಿಯಾಯಿತಿ ( ಭೂಮಿ, ಇಂಧನ ಇತ್ಯಾದಿ)
* ದೆಹಲಿ– ಮುಂಬೈ ಎಕ್ಸ್ಪ್ರೆಸ್ವೇ ಯೋಜನೆ 2023ಕ್ಕೆ ಅಂತ್ಯ
* ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ವೇ ಯೋಜನೆ ಘೋಷಣೆ
ವಿಮಾನಯಾನ
* 2024 ರ ಒಳಗೆ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು 1.7 ಲಕ್ಷ ಕೋಟಿ ಮೀಸಲು
* ವಿಮಾನಗಳ ಸಂಖ್ಯೆ ದುಪ್ಪಟ್ಟು ಮಾಡಲಾಗುವುದು
* ಉಡಾನ್ ಯೋಜನೆ ಆಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣ ಸೇರ್ಪಡೆ.
ಸಮಾಜ ಕಲ್ಯಾಣ ಮತ್ತು ಹಿರಿಯ ನಾಗರಿಕ
* ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ವಿವಿಧ ಯೋಜನೆಗಳಿಗೆ 85000 ಕೋಟಿ ಮೀಸಲು
* ಮಕ್ಕಳ ಪೋಷಣೆ ಮತ್ತು ಆಹಾರಕ್ಕಾಗಿ 35600 ಕೋಟಿ ಮೀಸಲು
* ಹಿರಿಯ ನಾಗರಿಕರ ಮತ್ತು ವಿಕಲಚೇತನರ ಯೋಜನೆಗಳಿಗೆ 9500 ಕೋಟಿ ಮೀಸಲು
ರೈಲ್ವೆ ಬಜೆಟ್
* ಬೆಂಗಳೂರಿಗೆ ಸಬ್ ಅರ್ಬನ್ ರೈಲು ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ₹18,600 ಕೋಟಿ ಮೀಸಲು ಇರಿಸಲಾಗಿದೆ.
* 11,000 ಟ್ರ್ಯಾಕ್ ವಿದ್ಯುದ್ದೀಕರಣ ಮಾಡಲಾಗುವುದು
* ರೈಲ್ವೆ ನಿಲ್ದಾಣಗಳಲ್ಲಿ 550 ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು
* ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಹೆಚ್ಚು ಒತ್ತು ನೀಡಲಾಗುವುದು
* ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸಲು ಹೆಚ್ಚಿನ ತೇಜಸ್ ರೈಲುಗಳ ನಿಯೋಜಿಸಲಾಗುವುದು
* ತೇಜಸ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಎಲ್ಲ ರಾಜ್ಯಗಳಿಗೆ ವಿಸ್ತರಿಸಲಾಗುವುದು