ಸೋಮವಾರ, ಫೆಬ್ರವರಿ 13, 2017

ಅರ್ಥಶಾಸ್ರ್ತದ ಮಾಹಿತಿ ಕಣಜ (ಭಾರತದ ರೂಫಾಯಿ)

#ಭಾರತದ_ರೂಪಾಯಿ
"ಅಥ೯ಶಾಸ್ತ್ರ ಮಾಹಿತಿ ಕಣಜ":
#‎ಭಾರತದ_ರೂಪಾಯಿ
💰ಭಾರತದಲ್ಲಿ ಮೊದಲ ಬಾರಿಗೆ "ಶೇರ್ ಷಾ ಸೂರಿ" ರೂಪಾಯಿ ಚಲಾವಣೆ ಮಾಡಿದನೆಂದು ಹೇಳಲಾಗಿದೆ.
💰1861 ರಲ್ಲಿ ಬ್ರಿಟಿಷ್ ಇಂಡಿಯಾವು ಕಾಗದದ ಕರೆನ್ಸಿಯನ್ನು ಮೊದಲ ಬಾರಿಗೆ ಪರಿಚಯಿಸಿತು.
💰ಭಾರತೀಯ ನೋಟುಗಳಲ್ಲಿ 15 ಭಾಷೆಗಳಿದ್ದು ಅದ್ರಲ್ಲಿ ಕನ್ನಡ 4 ನೇ ಭಾಷೆಯಾಗಿದೆ.
💰ಭಾರತದ ನೋಟಿನಲ್ಲಿ 1996 ರಿಂದ ಮಹಾತ್ಮ ಗಾಂಧೀಜಿಯ ಭಾವಚಿತ್ರವನ್ನು ಬಳಸಲಾಗುತ್ತಿದೆ.
💰ಜೂನ್ 30,2011 ರಿಂದ 50 ಪೈಸೆಗಿಂತ ಕಡಿಮೆ ಮೌಲ್ಯದ ನಾಣ್ಯಗಳ ಚಲಾವಣೆ ನಿಲ್ಲಿಸಲಾಗಿದೆ.
💰ಭಾರತದ ರೂಪಾಯಿಯ ಹೊಸ ಚಿಹ್ನೆಯನ್ನು ಜುಲೈ 15,2010 ರಂದು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
💰ಜೂನ್ 1966 ರಂದು ಭಾರತದ ನಾಣ್ಯವು ಅಪಮೌಲ್ಯವಾಗಿತ್ತು ಮತ್ತು 1991 ಜುಲೈ ನಲ್ಲಿ ಶೇ 18-19 ರಷ್ಟು ಅಪಮೌಲ್ಯವಾಗಿತ್ತು.
©ಅಪಮೌಲ್ಯ/Devaluation©
👉ಹಣದ ಅಪಮೌಲ್ಯವೆಂದರೆ ದೇಶೀಯ ಹಣದ ಬಾಹ್ಯ ಮೌಲ್ಯವನ್ನು ಇಚ್ಛಾ ಪೂರ್ವಕವಾಗಿ ಕಡಿಮೆ ಮಾಡುವುದು.ಇದರಿಂದ ದೇಶೀಯ ಸರಕುಗಳ ಬಾಹ್ಯ ಬೆಲೆಗಳು ಕುಸಿದು ವಿದೇಶೀಯರಿಗೆ ಅಗ್ಗವಾಗುತ್ತವೆ.ಇದು ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ.
💰ಭಾರತದ ರೂಪಾಯಿ ಚಿಹ್ನೆಯನ್ನು (ಹೊಸ-₹) ತಮಿಳ್ನಾಡಿನ "ಉದಯ್ ಕುಮಾರ್ ಧರ್ಮಲಿಂಗಮ್" (ಗೌಹತಿಯ IIT ಫ್ರೋಫೆಸರ್) ವಿನ್ಯಸಗೊಳಿಸಿದ್ದಾರೆ.
💶ಭಾರತದಲ್ಲಿ 4 ನೋಟು ಮುದ್ರಣಾಲಯಗಳಿವೆ💶
1). ಕರೆನ್ಸಿ ನೋಟು ಮುದ್ರಣಾಲಯ (CNP)
ಸ್ಥಾಪನೆ:1928
ಸ್ಥಳ :ಮಹರಾಷ್ಟ್ರದ ನಾಸಿಕ್
2).ಬ್ಯಾಂಕಿಂಗ್ ನೋಟುಗಳ ಮುದ್ರಣಾಲಯ (BNP)
ಸ್ಥಳ :ಮಧ್ಯಪ್ರದೇಶದ ದೇವಾಸ್
👉ಇದು RBI ನೋಟುಗಳನ್ನು ಮುದ್ರಿಸುತ್ತದೆ.
👉1995 ರಲ್ಲಿ RBI ಬೇಡಿಕೆಯನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ. ಲಿಮಿಟೆಡ್ ನ್ನು ಸ್ಥಾಪಿಸಲಾಯಿತು.
👉ಇದರಡಿಯಲ್ಲಿ 2 ಮುದ್ರಣಾಲಯ ಕಾರ್ಯ ನಿರ್ವಹಿಸುತ್ತವೆ.
1.ಮೈಸೂರು(ಕರ್ನಾಟಕ)
2.ಸಲಬೋನಿ(ವೆಸ್ಟ್ ಬೆಂಗಾಲ್)
3).ಭದ್ರತಾ ಅಚ್ಚು ಮುದ್ರಣಾಲಯ(Security Printing Press)
👉ಇದು ಹೈದ್ರಾಬಾದ್ ನಲ್ಲಿದೆ.
👉ಅಂಚೆಕಛೇರಿ ಸಲಕರಣೆಗಳು,ಕೇಂದ್ರೀಯ ಅಬಕಾರಿ ಸ್ಟಾಂಪ್ ಗಳು,ಪೋಸ್ಟ್ ಕಾರ್ಡ್ ಗಳು,ಇನ್ ಲ್ಯಾಂಡ್ ಲೆಟರ್ ಗಳು,ಎನವಲಪ್ ಗಳು,ಪ್ರಯಾಣದ ದಾಖಲೆಗಳು ಸೇರಿದಂತೆ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುದ್ರಿಸುತ್ತದೆ.
4).ಭಾರತದ ಭದ್ರತಾ ಮುದ್ರಣಾಲಯ(INDIA Security Press)
👉ಇದು ಮಹರಾಷ್ಟ್ರದ ನಾಸಿಕ್ ನಲ್ಲದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ