*🌻💐ರವಿ ಕೆರೆಗೊಂಡ💐🌻*
*ರಾಜ್ಯದಲ್ಲಿ ವಸತಿ ಯೋಜನೆ*
ಪ್ರತಿಯೊಬ್ಬ ನಾಗರಿಕನಿಗೂ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರಗಳ ಪ್ರಾಥಮಿಕ ಕರ್ತವ್ಯಗಳಲ್ಲಿ ಒಂದಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ‘ಸರ್ವರಿಗೂ ಸೂರು’ ಕನಸಿನ ಹಲವು ಯೋಜನೆಗಳು ಅನೇಕ ಕಾರಣಗಳಿಗೆ ಗುರಿ ತಲುಪುವಲ್ಲಿ ಹಿಂದೆ ಬಿದ್ದಿವೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಳದ ಜತೆಗೆ ವಸತಿ ಸೌಲಭ್ಯದ ಬೇಡಿಕೆಯೂ ಏರುಗತಿಯಲ್ಲಿ ಇದೆ.
ವಸತಿ ಬೇಡಿಕೆ ಸಮೀಕ್ಷೆ
ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳ ಸಮೀಕ್ಷೆಯನ್ನು ನಿಗಮವು 2003ರಲ್ಲಿ ಕೈಗೊಂಡಿತ್ತು. ಅದರಂತೆ ರಾಜ್ಯದಲ್ಲಿ ಒಟ್ಟು 12,99,789 ವಸತಿ ಮತ್ತು 12,98,813 ನಿವೇಶನ ರಹಿತರನ್ನು ಗುರುತಿಸಲಾಗಿತ್ತು. ನಂತರ 2009ರಲ್ಲಿ ರಾಜ್ಯವನ್ನು ಗುಡಿಸಲು ಮುಕ್ತವಾಗಿಸಲು ಗುಡಿಸಲುವಾಸಿಗಳ ಸಮೀಕ್ಷೆ ನಡೆಸಲಾಯಿತು. ಸುಮಾರು 10.50 ಲಕ್ಷ ಗುಡಿಸಲುವಾಸಿಗಳು ಇರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಹೆಚ್ಚುತ್ತಿರುವ ಯೋಜನೆಗಳ ವೆಚ್ಚ
2000–01 ರಿಂದ 2015–16ವರೆಗೆ ವಸತಿ ಯೋಜನೆಯಡಿ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯ ಸರ್ಕಾರ ₹14,774 ಕೋಟಿ ಅನುದಾನವನ್ನು ಖರ್ಚು ಮಾಡಿದ್ದರೆ, ಇದರಲ್ಲಿ ₹5,243 ಕೋಟಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಿಂದ ಮತ್ತು ₹9,531 ಕೋಟಿ ರಾಜ್ಯ ಸರ್ಕಾರದಿಂದ ಪ್ರಾಯೋಜಿತ ವಿವಿಧ ಯೋಜನೆಗಳಿಗೆ ಖರ್ಚು ಮಾಡಲಾಗಿದೆ.
ಯೋಜನೆಯ ಮುಖ್ಯ ಅಂಶಗಳು
* ಬಡ ಜನರ ಜೀವನ ಮಟ್ಟ ಸುಧಾರಣೆ
* ನೇರವಾಗಿ 1,746 ಲಕ್ಷ ಮಂದಿಗೆ, ಪರೋಕ್ಷವಾಗಿ 873 ಜನರಿಗೆ ಉದ್ಯೋಗ
* ಪರೋಕ್ಷವಾಗಿ ದೇಶದ ಆರ್ಥಿಕ ಬೆಳವಣಿಗೆ
ಸವಾಲುಗಳು
* ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ
* ಹೆಚ್ಚುತ್ತಿರುವ ಜಮೀನಿನ ಬೆಲೆ ಮತ್ತು ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ ನಿರೀಕ್ಷಿತ ಮಟ್ಟದ ಪ್ರಗತಿ ಸಾಧ್ಯವಾಗುತ್ತಿಲ್ಲ.
ವಿವಿಧ ವಸತಿ ಯೋಜನೆಗಳು
* ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ
* ಅಂಬೇಡ್ಕರ್ ವಸತಿ ಯೋಜನೆ
* ಇಂದಿರಾ ಆವಾಸ್ ಯೋಜನೆ
* ನಗರ ಆಶ್ರಯ ಯೋಜನೆ /ವಾಜಪೇಯಿ ನಗರ ವಸತಿ ಯೋಜನೆ
ವಿವಿಧ ಯೋಜನೆಗಳಡಿ (2015ರ ಡಿಸೆಂಬರ್ ಅಂತ್ಯಕ್ಕೆ )
* 3 ಲಕ್ಷ -ಮನೆ ನಿರ್ಮಾಣ ಗುರಿ
* 1,40,664 -ನಿರ್ಮಿಸಿರುವ ಮನೆಗಳು
* 20 ಸಾವಿರ -ನಿವೇಶನ ಹಂಚಿಕೆಯ ಗುರಿ
* 4,472 -ಹಂಚಿರುವ ನಿವೇಶನಗಳು
ಅನುದಾನ
* ₹3,260 ಕೋಟಿ -2015–16ರಲ್ಲಿ ವಿವಿಧ ವಸತಿ ಯೋಜನೆಗಳಿಗೆ
* ₹2,652 ಕೋಟಿ -2015ರ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ
* ₹1,702 ಕೋಟಿ -2015ರ ಡಿಸೆಂಬರ್ ಅಂತ್ಯಕ್ಕೆ ವೆಚ್ಚ
ಮನೆಗಳ ನಿರ್ಮಾಣ 2015–16
* 70,716 -ಬಸವ ವಸತಿ ಯೋಜನೆ
* 61,628 -ಇಂದಿರಾ ಆವಾಸ್ ಯೋಜನೆ
* 2,222 -ಅಂಬೇಡ್ಕರ್ ವಸತಿ ಯೋಜನೆ
* 6,098 -ವಾಜಪೇಯಿ ನಗರ ವಸತಿ ಯೋಜನೆ
ಸರ್ ನಮ್ಮಗೆ ಬಸವ ವಸತಿ ಮನೆ ಆಗಿದೆ ಆಂತ ಮೂರು ತಿಂದೆ ಕಾಲಿಜಗಾ ಜಿಪಿಯಸ್ ಆಗಿದೆ ಆದರೆ ಇನ್ನು ವರ್ಕ ಕಾರ್ಡ ಬಂದಿಲ ಇದು ನನ್ನ ನಂಬರ್ 9945476489
ಪ್ರತ್ಯುತ್ತರಅಳಿಸಿ