ವಿಶ್ವದ ಅತಿ ದೊಡ್ಡ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಉದ್ಘಾಟನೆ
Motera Stadium: ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ.
- TV9 Web Team
- Publish Date - 1:35 pm, Wed, 24 February 21
ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ. ಇದರ ನಂತರ 2ನೇ ಸ್ಥಾನವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಪಡೆದುಕೊಂಡಿದ್ದು, ಅದು ಸುಮಾರು 1 ಲಕ್ಷ ಜನ ಕೂರುವ ಆಸನಗಳ ಸಾಮರ್ಥ್ಯ ಹೊಂದಿದೆ. ಸದ್ಯ ಕೊವಿಡ್-19 ನಿಯಮಾವಳಿಗಳಿಂದಾಗಿ ಕ್ರೀಡಾಂಗಣದ ಸಾಮರ್ಥ್ಯವನ್ನು 50% ರಷ್ಟು ಮುಚ್ಚಲಾಗಿದ್ದರೂ, 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಡುವ ನಿರೀಕ್ಷೆಯಿದೆ.
The President of India Ram Nath Kovind, Home Minister @AmitShah, and MOS, Youth Affairs & Sports @KirenRijiju arrive at the Sardar Vallabhbhai Patel Cricket Stadium at Motera, Ahmedabad for performing the Bhumi Pujan.@rashtrapatibhvn #MoteraCricketStadium pic.twitter.com/IMcyswrn0OWatch Live: President Ram Nath Kovind inaugurates the world’s largest Sardar Vallabhbhai Patel Cricket Stadium at Motera in Ahmedabad, Gujarat.@rashtrapatibhvn https://t.co/wsBDnAv7mw
— Prasar Bharati News Services पी.बी.एन.एस. (@PBNS_India) February 24, 2021
— Prasar Bharati News Services पी.बी.एन.एस.
ಅಹಮದಾಬಾದ್ : ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ಇಲ್ಲಿಯ ನವೀಕೃತ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸಿದರು. ಇನ್ನು ಮುಂದೆ ಈ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಿಂದ ಕರೆಯಲಾಗುತ್ತದೆ.
ಅತ್ಯಾಧುನಿಕ ಸೌಲಭ್ಯವುಳ್ಳ ಈ ಕ್ರೀಡಾಂಗಣವು 1.32 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ್ದಾಗಿದೆ.
‘ಇದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿತ್ತು. ಕ್ರೀಡಾಂಗಣವನ್ನು ಇನ್ನು ಅವರ ಹೆಸರಿನಿಂದಲೇ ಕರೆಯಲು ನಿರ್ಧರಿಸಲಾಗಿದೆ‘ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಫುಟ್ಬಾಲ್, ಹಾಕಿ, ಬ್ಯಾಸ್ಕೆಟ್ಬಾಲ್, ಕಬಡ್ಡಿ, ಬಾಕ್ಸಿಂಗ್, ಲಾನ್ ಟೆನಿಸ್ ಮುಂತಾದ ವಿಭಾಗಗಳುಳ್ಳ ಸರ್ದಾರ್ ಪಟೇಲ್ ಹೆಸರಿನ ಕ್ರೀಡಾ ಸಂಕೀರ್ಣವನ್ನು ಇದೇ ವೇಳೆ ಕೋವಿಂದ್ ಲೋಕಾರ್ಪಣೆ ಮಾಡಿದರು.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇಲ್ಲಿ ನಡೆಯುತ್ತಿದೆ. ಮಾರ್ಚ್ 4ರಿಂದ ನಡೆಯುವ ನಾಲ್ಕನೇ ಪಂದ್ಯಕ್ಕೂ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
63 ಎಕರೆ ವಿಸ್ತಾರವುಳ್ಳ ಈ ಕ್ರೀಡಾಂಗಣವನ್ನು ಅಂದಾಜು ₹ 800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಅಂಗಣದ ಆಸನ ಸಾಮರ್ಥ್ಯ 90 ಸಾವಿರ ಆದರೆ ಈ ಕ್ರೀಡಾಂಗಣದ್ದು 1.32 ಲಕ್ಷ.
‘ಕ್ರೀಡಾಂಗಣದ ಒಟ್ಟು ವಿಸ್ತಾರವು 32 ಒಲಿಂಪಿಕ್ ಗಾತ್ರದ ಫುಟ್ಬಾಲ್ ಅಂಗಣಗಳಿಗೆ ಸಮನಾಗಿದೆ‘ ಎಂದು ಮಾಧ್ಯಮ ಮಾಹಿತಿ ವಿಭಾಗ ತಿಳಿಸಿದೆ.
ಮೆಲ್ಬರ್ನ್ ಕ್ರಿಕೆಟ್ ಅಂಗಣ ವಿನ್ಯಾಸಗೊಳಿಸಿರುವ ಆಸ್ಟ್ರೇಲಿಯಾದ ವಾಸ್ತುಶಿಲ್ಪಿ ಫರ್ಮ್ ಪಾಪ್ಯುಲಸ್ ಅವರ ಕೈಚಳಕವೇ ಅಹಮದಾಬಾದ್ನ ಈ ಕ್ರೀಡಾಂಗಣದ ನವೀಕರಣದಲ್ಲಿ ಅಡಗಿದೆ.
ಕೆಂಪು ಮತ್ತು ಕಪ್ಪು ಎರಡೂ ಮಣ್ಣಿನಿಂದ ಸಿದ್ಧಪಡಿಸಲಾಗಿರುವ 11 ಪಿಚ್ಗಳು ಈ ಅಂಗಣದಲ್ಲಿರುವುದು ವಿಶೇಷ.
ಕ್ರೀಡಾಂಗಣದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತಿತರರಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ