ಮಂಗಳವಾರ, ಮಾರ್ಚ್ 21, 2017

"ಚೋಮನ ದುಡಿ" ಕಥೆಯ ಸಾರಾಂಶ

* ಕಥೆಯ ಸಾರಾಂಶ:*

*ಚೋಮ ಮತ್ತು ಅವನ ಕುಟುಂಬ ಭೋಗನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಅವನ ಮಕ್ಕಳು ಚನಿಯ, ಗುರುವ, ಕಾಳ, ನೀಲ ಮತ್ತು ಬೆಳ್ಳಿ.. ಚೋಮನಿಗೆ ಬಹಳ ಇಷ್ಟವಾದ ವಸ್ತುಗಳು ಎರಡು, ಒಂದು ದುಡಿ ಮತ್ತೊಂದು ಸೇಂದಿ(ಹೆಂಡ). ಇವೆರಡೂ ಇಲ್ಲದೆ ಅವನಿಗೆ ಜೀವನ ನಡೆಸಲು ಬಹಳ ಕಷ್ಟ. ಅವನು ಜೀವನದಲ್ಲಿ ನೊಂದಾಗ ದುಡಿಯನ್ನು ಬಾರಿಸಿ ತನ್ನ ನೋವನ್ನು ನೀಗಿಕೊಳ್ಳುವನು. ಚೋಮನ ಹೆಂಡತಿ ಈಗಾಗಲೆ ತೀರಿಕೊಂಡಿರುತ್ತಾಳೆ. ಚೋಮ ಸಂಕಪ್ಪಯ್ಯನವರ ಬಳಿ ಕೆಲಸ ಮಾಡುತ್ತಿರುವುದಾಗಿಯೂ ಹಾಗೂ ಮಕ್ಕಳು ಹೊರೆ-ಸೊಪ್ಪನ್ನು ತರುವುದರಿಂದಾಗಿಯೂ ಅವರಿಗೆ ಎರಡು ಪಾವು ಅಕ್ಕಿ ಮತ್ತು ಐದು ಪಾವು ಭತ್ತ ದೊರೆಯುತ್ತಿರುತ್ತದೆ. ಮನೆಯಲ್ಲಿ ಬಾಡು ಎಂಬ ನಾಯಿಯೂ ಇರುತ್ತದೆ. ಹೀಗೆ ಎಲ್ಲ ಕಷ್ಟಗಳ ನಡುವೆ ಅವರು ಜೀವನ ನಡೆಸುತ್ತಿರುತ್ತಾರೆ.
ಮನುಷ್ಯನಿಗೆ ಆಸೆ ಅನ್ನುವುದು ಸಹಜ. ಚೋಮನಿಗೂ ಹೀಗೊಂದು ಆಸೆ ಇತ್ತು. ಅದು ಆತ ಬೇಸಾಯಗಾರನಾಗಬೇಕೆಂದು. ಅವನ ಬಳಿ ಎರಡು ಎತ್ತುಗಳೂ ಸಹ ಇದ್ದವು. ಆದರೆ ಕಡು ಬಡತನದಿಂದಾಗಿ ಅವನ ಬಳಿ ಬೇಸಾಯಕ್ಕಾಗಿ ಇದ್ದ ತುಂಡು ಭೂಮಿಯನ್ನು ಸಂಕಪ್ಪಯ್ಯನ ಬಳಿ ಅಡ ಇಟ್ಟಿರುತ್ತಾನೆ. ಸಾಲ ತೀರಿಸಿ ಭೂಮಿಯನ್ನು ಮತ್ತೆ ಪಡೆಯಲು ಸಂಕಪ್ಪ ಯ್ಯನ ಬಳಿಯೇ ಜೀತಗಾರನಾಗಿ ಸೇರಿಕೊಂಡಿರುತ್ತಾನೆ. ಆ ದಿನಗಳಲ್ಲಿ ಕೀಳು ಜಾತಿಗೆ ಸೇರಿದವರು ವ್ಯವಸಾಯ ಮಾಡುವುದನ್ನು ನಿಷೇಧಿಸಿದ್ದರು. ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆಸುತ್ತಿದ್ದ.
ಚೋಮ ಬಹಳ ವರ್ಷಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡಲು ಹೋಗಿರುತ್ತಾನೆ. ಆಗ ಆತ ಮಾಡಿದ್ದ ೪-೫.ರೂ ಸಲ ಈಗ ೨೦.ರೂ ಆಗಿದೆ ಎಂದು ಅದಕ್ಕಾಗಿ ಅವನನ್ನು ಅರಸುತ್ತಾ ತೋಟದ ದೊರೆಗಳು ಕಳುಹಿಸಿ ಕೊಟ್ಟಿದ್ದ ಮನ್ವೇಲ ಸಾಹೇಬ ಬರುತ್ತಾನೆ. ತೋಟಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಎಷ್ಟೇ ಬೆವರು ಸುರಿಸಿದರೂ ಅವರ ಕೈಗೆ ಹಣ ಬರುವುದು ಆಣೆಗಳ ರೂಪದಲ್ಲಿ ಮಾತ್ರ. ಅದಕ್ಕಾಗಿ ಅವರು ಮಾಡುವ ಸಾಲ ಎಂದಿಗೂ ತೀರುವಂತಿಲ್ಲ.
ಹೀಗಿರುವಾಗ ವಿಧಿ ಇಲ್ಲದೆ ತನ್ನ ಇಬ್ಬರು ಮಕ್ಕಳಾದ ಚನಿಯ ಮತ್ತು ಗುರುವನನ್ನು ತೋಟದ ಕೆಲಸಕ್ಕೆಂದು ಕಳುಹಿಸಿಕೊಡಲು ನಿರ್ಣಯಿಸುತ್ತಾನೆ. ಅವರು ಅಲ್ಲಿಗೆ ಹೋಗಲು ಬಹಳಷ್ಟು ತೊಂದರೆಗಳ್ನ್ನು ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ

* ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ ವಿಧವಾದ ಕಷ್ಟಗಳನ್ನು ಅನುಭವಿಸುತ್ತಾರೆ. ಇತ್ತ ಚೋಮ ಮತ್ತು ಇತರರಿಗೂ ಅವರನ್ನು ಬಿಟ್ಟು ಇರುವ ಮನಸ್ಸಿಲ್ಲ. ಅಲ್ಲಿಗೆ ಹೋದ ಅವರು ತಮ್ಮ ಸಹ ಆಳುಗಳ ಜೊತೆ ಸೇರಿ ಅವರ ಅಪ್ಪನಂತೆಯೆ ಹೆಂಡ ಕುಡಿಯುವುದನ್ನೂ ಕಲಿಯುತ್ತಾರೆ. ಹೆಂಡಕ್ಕೆ ದಾಸರಾಗಿ ಅವರು ದುಡಿಯುವ ಹಣವನ್ನು ಅದಕ್ಕಾಗಿ ಸುರಿಯಲು ಪ್ರಾರಂಭಿಸುವರು. ಹೀಗಾಗಿ ಅಪ್ಪನ ಸಾಲ ತೀರಿಸಲು ಹೋಗಿ ಇನ್ನೂ ಹೆಚ್ಚಿನ ಸಲ ಮಾಡುವಂತಾಯಿತು. ಇದೆಲ್ಲ ಸಾಲದಂತೆ ಗುರುವ ಅಲ್ಲಿ ಮಾರಿ ಎಂಬ ಹುಡುಗಿಯನ್ನು ಇಷ್ಟ ಪಡುತ್ತಾನೆ. ಆ ಹುಡುಗಿ ಇಗರ್ಜಿಯವಳು. ಆದರೆ ಇತ್ತ ಚೋಮ ತನ್ನ ಮಕ್ಕಳು ತನ್ನ ಸಾಲ ತೀರಿಸಲು ಹೋಗಿದ್ದಾರೆ, ಅವರನ್ನು ಒಂದು ಮನೆಯವರನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುತ್ತಾನೆ.
ಕಾಫಿ ತೋಟದಲ್ಲಿ ನಡೆಯುತ್ತಿರುವ ವಿಷಯವನ್ನು ತಿಳಿಯದ ಚೋಮ ಧನಿಗಳ ಬಳಿ ಕೆಲಸಕ್ಕೆ ಹೋಗುವಾಗ ತನಗೊಂದು ಸಣ್ಣ ಭೂಮಿಯನ್ನು ಕೊಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಧಣಿಗಳು ಒಪ್ಪಿದರೂ, ಧಣಿಗಳ ವಯಸ್ಸಾದ ತಾಯಿ ಅದಕ್ಕೆ ಒಪ್ಪುವುದಿಲ್ಲ. ಅವರಿಗೆ ಕೊಡುವ ಮನಸ್ಸಿದ್ದರೂ ಅವರ ತಾಯಿಯ ಮನಸ್ಸನ್ನು ನೋಯಿಸಲು ಇಷ್ಟ ಪಡದೆ ಚೋಮನಿಗೆ ಭೂಮಿ ಕೊಡಲು ನಿರಾಕರಿಸಿ ಬಿಡುತ್ತಾನೆ. ಅವರ ಪ್ರಕಾರ ಕೆಳ ವರ್ಗದ ಜನರು ವ್ಯವಸಾಯ ಮಾಡುವಂತಿಲ್ಲ. ಅದು ಹಿಂದಿನಿಂದಲೂ ಬಂದಿರುವ ಆಚಾರವಂತೆ. ಕೀಳು ವರ್ಗದವರು ವ್ಯವಸಾಯ ಮಾಡಿದರೆ ಮೇಲ್ವರ್ಗದವರಿಗೆ ಅವಮಾನವಲ್ಲವೇ? ಎಂಬುದು ಆಕೆಯ ವಾದವಾಗಿತ್ತು. ಹೀಗಾಗಿ ಸಂಕಪ್ಪಯ್ಯನವರಿಗೆ ಇಷ್ಟವಿದ್ದರೂ ತಾಯಿಯ ಮಾತು ಮೀರುವಂತಿರಲ್ಲಿಲ್ಲ. ಇದನ್ನೆಲ್ಲಾ ಕೇಳಿದ ಚೋಮನ ಮನಸ್ಸ್ಸು ನೋವಿನಿಂದ ತುಂಬಿತ್ತು. ಆ ದಿನವೆಲ್ಲಾ ತನ್ನ ಧಣಿಯ ಹೊಲವನ್ನು ಎತ್ತುಗಳನ್ನು ಹೊಡೆಯುತ್ತಾ ಸಮ ಮಾಡುತ್ತಾನೆ.*

* ಇಷ್ಟು ಹೊತ್ತಿಗಾಗಲೆ ಗುರುವ ಮಾರಿಯ ಪ್ರೇಮಲೋಕದಲ್ಲಿ ತೇಲಿಯಾಡುತಿದ್ದ. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ಹುಡುಗರಿಬ್ಬರೂ ವಾಪಸ್ ಊರಿಗೆ ತೆರಳ ಬೇಕಿತ್ತು. ಆದರೆ ಗುರುವ ಮಾರಿಯವರ ಕುಟುಂಬದೊಂದಿಗೆ ಪರಾರಿಯಾದ ಕಾರಣ, ಚನಿಯನು ಮಾತ್ರ ಊರಿಗೆ ಹೊರಟು ಬಂದ. ಎಲ್ಲರೂ ಜಾತ್ರೆಯ ಸಂಭ್ರಮದಲ್ಲಿದ್ದರೆ ಚೋಮನ ಮನಸ್ಸಿನಲ್ಲಿ ಕಾರ್ಕತ್ತಲೇ ಮೂಡಿತ್ತು. ಅವರ್ಯಾರಿಗೂ ಜಾತ್ರೆಯ ಸಂತಸವಿರಲಿಲ್ಲ. ಇದ್ದ ಕಷ್ಟಗಳು ಸಾಲದೆಂಬಂತೆ, ಚನಿಯನು ಆ ಬೆಟ್ಟ ಪ್ರದೇಶದಲ್ಲಿದ್ದೂ, ಅನಾರೋಗ್ಯಕ್ಕೆ ಒಳಗಾಗ ಬೇಕಾಯಿತು. ಬೆಳ್ಳಿಯು ಎಷ್ಟೇ ಪ್ರಯತ್ನಿಸಿದರೂ ಅವಳಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೂ ಚನಿಯನು ಅನಾರೋಗ್ಯದ ಕಾರಣದಿಂದಾಗಿ ಸಾಯುವ ಪರಿಸ್ಥಿತಿ ಬಂತು. ಒಂದೇ ಸಮನೆ ದುಃಖದ ಮಹಾಪೂರವನ್ನೇ ಚೋಮನ ಕುಟುಂಬ ಅನುಭವಿಸಬೇಕಾಯಿತು. ಒಂದೇ ಕಾಲದಲ್ಲಿ ಎರಡೂ ಮಕ್ಕಳನ್ನು ಕಳೆದುಕೊಂಡ ಚೋಮನು ದುಡಿಯನ್ನು ಬಾರಿಸುವುದನ್ನಲ್ಲದೆ ಬೇರೆ ಏನನ್ನೂ ಮಾಡಲು ಸಾಧ್ಯವಾಗಲ್ಲಿಲ್ಲ. ಹೀಗಿರುವಾಗಲೇ ಧನಿಗಳು ಚೋಮನನ್ನು ಮಳೆಗಾಲ ಬಂದಿದೆ ನನಗೆ ನಿನ್ನ ಎತ್ತುಗಳನ್ನು ಮಾರಿಬಿಡು ಎಂದರು. ಇದರಿಂದ ಮತ್ತಷ್ಟು ಸಿಟ್ಟಿಗೇರಿದ ಚೋಮ ಚೆನ್ನಾಗಿ ಹೆಂಡವನ್ನು ಕುಡಿದು ತಾನು ದುಡಿ ಬಾರಿಸುತ್ತಾ ತನ್ನ ಸಣ್ಣದಾದ ಎರಡೂ ಮಕ್ಕಳನ್ನೂ ಅದರ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಹೊಡೆದು ಬಡೆಯತ್ತಾನೆ. ಆಗ ಬೆಳ್ಳಿ ಅವರನ್ನು ರಕ್ಷಿಸುತ್ತಾಳೆ. ಚೋಮನ ಸಿಟ್ಟು ಇನ್ನೂ ಕಡಿಮೆ ಆಗುವುದಿಲ್ಲ. ಕೊನೆಗೆ ತನಗೆ ಆ ಎತ್ತುಗಳಿಂದ ವ್ಯವಸಾಯ ಮಾಡಲು ಸಾಧ್ಯವಿಲ್ಲವೆಂದು, ಅದು ಪರರಿಗೂ ದೊರಕಬಾರದೆಂದು ಆ ಎತ್ತುಗಳ ಕಾಲು ಮುರಿಯುತ್ತಾನೆ. ನಂತರ ಬೆಳ್ಳಿ ಧಣಿಗಳ ಬಳಿ ಮಾತನಾಡಿ ಅಪ್ಪನಿಗೆ ಬುದ್ಧಿ ಕಲಿಸುವಂತೆ ನಿರ್ಣಯಿಸುತ್ತಾಳೆ.*

* ಹಾಗೆಂದು ಯೋಚಿಸಿ ಮನೆಗೆ ತೆರಳಿದ ಬೆಳ್ಳಿಗೆ ಆಶ್ಚರ್ಯವೆಂದರೆ ಅವರ ಮನೆಗೆ ನೆಂಟರು ಬಂದಿದ್ದರು. ಅವಳು ಹಲವು ದಿನಗಳಿಂದ ಕೂಡಿಟ್ಟಿದ್ದ ಗೆಣಸು ಅಕ್ಕಿ ಎಲ್ಲವೂ ಖಾಲಿಯಾಗ ತೊಡಗಿತು. ಚೋಮನು ಎಲ್ಲವನ್ನೂ ಮರೆತು ಅವರೊಂದಿಗೆ ಸಂತಸದಿಂದ ಕಾಲಕಳೆಯತ್ತಾನೆ. ಅವರೊಂದಿಗೆ ಬೇಟೆಗೆ ಹೋಗಿ ಮೊಲಗಳನ್ನು ತಂದು ತಿಂದು,ಕುಡಿದು ಕುಪ್ಪಳಿಸುತ್ತಾರೆ. ಯಾರದೋ ಮನೆಯಲ್ಲಿ ಎಮ್ಮೆ ಸತ್ತರೆ ಅದನ್ನೂ ತಿಂದು, ಮನೆಯ ಮುಂದೆ ಬೆಂಕಿಯನ್ನು ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಕೆಲವು ದಿನಗಳ ನಂತರ ಅವರೂ ಹೊರಟರು. ಆದರೆ ಈಗ ಚೋಮನ ಎದುರಿನಲ್ಲಿದ್ದ ಮತ್ತೊಂದು ಸವಾಲೆಂದರೆ ಮತ್ತೆ ಮನ್ವೇಲನು ಬಂದಾಗ ಅವನೊಂದಿಗೆ ಯಾರನ್ನಾದರು ಕರೆದುಕೊಂಡು ಹೋಗುತ್ತಾನೆ. ಆದರೆ ಹೋಗಲಿಕ್ಕೆ ಯಾರಿದ್ದಾರೆ? ಎಂಬುದು. ಕೊನೆಗೆ ಮುದಿ ತಂದೆಯನ್ನು ಕಷ್ಟಗಳ ಪಾಲು ಮಾಡಲು ಇಷ್ಟವಿಲ್ಲದೆ ಕೊನೆಗೆ ಬೆಳ್ಳಿಯೇ ಮನ್ವೇಲನ ಕೂಡ ಹೊರಡುವಂತೆ ನಿಶ್ಚಯವಾಯಿತು. ಇಷ್ಟವಿಲ್ಲದ ಮನಸ್ಸು ಹಾಗೂ ಮನ್ವೇಲನ ಒತ್ತಡದಿಂದಾಗಿ ಚೋಮನೂ ಅವಳನ್ನು ಕಣ್ಣೀರಿನಿಂದ ಬೀಳ್ಕೊಡಬೇಕಾಗಿ ಬಂತು.
ಕೊನೆಗೆ ಬೆಳ್ಳಿಯ ತೋಟದ ಯಾತ್ರೆ ಸಾಗಿತು. ಅವಳಿಗೂ ಆ ಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂತು. ಅವಳೊಂದಿಗೆ ನೀಲನೂ ಹೊರಟಿದ್ದ. ಅಲ್ಲಿ ಅವರಿಗೆ ಉಳಿಯಲು ವ್ಯವಸ್ಥೆ ಆಯಿತು. ನೀಲನು ಅನಾರೋಗ್ಯಕ್ಕೆ ಒಳಗಾದ ಕಾರಣ ಅವಳಿಗೆ ಬರುತ್ತಿದ್ದ ಹಣವನ್ನು ಅವನ ಔಷಧಿಯನ್ನು ಖರೀದಿಸಲು ಸಾಲುತಿತ್ತೇ ಹೊರೆತು ಸಾಲ ತೀರಿಸಲು ಆಗುತ್ತಿರಲಿಲ್ಲ. ಹೀಗಾಗಿ ಮನ್ವೇಲನ ಒತ್ತಡದ ಮೇರೆಗೆ ಅವನ ಮನೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಳು. ಆದರೆ ಅಲ್ಲಿ ನಡೆದದ್ದೆ ಬೇರೆಯದ್ದೊಂದು ವಿಷಯ. ಹೆಂಡತಿ ಮನೆಯಲ್ಲಿಲ್ಲದ ಕಾರಣ ಅವನಲ್ಲಿನ ಕಾಮ ಪ್ರೇರಣೆ ಹಾಗೂ ಕಾಯದ ದೌರ್ಬಲ್ಯ ಅವಳನ್ನು ಆತನ ಕಾಮದ ದಾಸಿಯನ್ನಾಗಿ ಮಾಡಿತು.*

*ಅವರಿಬ್ಬರ ನಡುವಿನ ಸಂಬಂಧ ಎಲ್ಲರಿಗೂ ತಿಳಿಯಲಾರಂಭವಾಯಿತು. ಅವಳ ಮೇಲೆ ದೊರೆಗಳಿಗೂ ಆಸೆಯಾಯಿತು. ಕೊನೆಗೆ ಮನ್ವೇಲನು ಅವಳನ್ನು ಅವನ ಬಳಿಯೂ ಕಳುಹಿಸಿ ಕೊಟ್ಟನು. ಹಣದ ಆಸೆ ಅವಳನ್ನು ಈ ರೀತಿಯ ಕೆಲಸವನ್ನೂ ಮಾಡದೆ ಬಿಡಲಿಲ್ಲ. ಕೊನೆಗೆ ಮನ್ವೇಲನು ಅವಳನ್ನು ಅಲ್ಲಿಂದ ಪಾರು ಮಾಡುವನು. ಅವಳು ವಾಪಸ್ಸ್ಸು ಮನೆಗೆ ತೆರಳಿದ ಕಾರಣ ಚೋಮನಿಗೆ ಹಿಡಿಸಲಾರದಷ್ಟು ಸಂತೋಷ. ನನ್ನ ಗಂಡು ಮಕ್ಕಳು ಮಾಡಲಾರದ ಕೆಲಸ ತನ್ನ ಮಗಳು ಮಾಡಿದ್ದಾಳೆಂದು ಅವನ ಸಂಭ್ರಮ. ಆದರೆ ಪಾಪ ಚೋಮನಿಗೆ ತನ್ನ ಮಗಳು ಆತನ ಸಾಲ ತೀರಿಸಿದ ಬಗೆ ತಿಳಿಯದು. ಮತ್ತೆ ಊರಿನ ಜಾತ್ರೆ ಬಂದೇ ಬಂತು. ಬೆಳ್ಳಿ ತನಗೆ ಮನ್ವೇಲನು ಕೊಟ್ಟಿರುವ ಸೀರೆ ಉಟ್ಟು ಜಾತ್ರೆಗೆ ಹೋಗುತ್ತಾಳೆ. ಆದರೆ ಅಲ್ಲಿ ಮನ್ವೇಲನೂ ಬಂದಿರುವುದನ್ನು ಕಂಡು ಭಯದಿಂದ ಮನೆಗೆ ತೆರಳಿದಳು. ಅತ್ತ ಚೋಮ ತನ್ನ ಮಗಳಿಗೆ ತಕ್ಕ ವರನನ್ನು ಹುಡುಕುತ್ತಿದ್ದನು. ನಂತರ ಆ ಸಂತಸದಲ್ಲಿಯೇ ಗೆಳೆಯರೊಡನೆ ಕುಣಿದು ಹರ್ಷಿಸುತ್ತಿದ್ದ.
ಮರುದಿನ ತನ್ನ ಮಕ್ಕಳಿಗೆ ಸ್ನಾನ ಮಾಡಿಸಲೆಂದು ಕೆರೆಯ ಬಳಿ ಹೋದಾಗ ಅಲ್ಲಿ ನೀಲ ನೀರಿನಲ್ಲಿ ಮುಳುಗಿ ಹೋಗುತ್ತಿರುತ್ತಾನೆ. ಚೋಮ ಆ ಸಮಯದಲ್ಲಿ ಅಲ್ಲಿ ಇರುವುದಿಲ್ಲ. ಕಾಳ ಇನ್ನೂ ಚಿಕ್ಕವ, ಆದರೆ ಅಲ್ಲಿಯ ದಡೆಯ ಮೇಲಿನ ಜನರು ಅವನನ್ನು ಕಾಪಾಡಬಹುದಾಗಿತ್ತು. ಆದರೆ ಅವರು ಮೇಲ್ವರ್ಗದವರು ಹಾಗು ನೀಲ ಕೆಳ ವರ್ಗದವನು ಎಂಬ ಒಂದೇ ಒಂದು ಕಾರಣ ಅವರನ್ನು ನೀಲನನ್ನು ಮೂಟ್ಟಬಾರದೆಂದು ಕಟ್ಟು ಹಾಕಿತ್ತು. ಇಲ್ಲದಿದ್ದಲ್ಲಿ ನೀಲ ಉಳಿಯುತ್ತಿದ್ದ. ಹೀಗೆ ಚೋಮನಿಗೆ ಒಂದರ ನಂತರ ಮತ್ತೊಂದು ಹೃದಯ ಹಿಂಡುವ ಕಷ್ಟಗಳು ಕಾದಿರುತ್ತಿದ್ದವು. ಮರುದಿನ ಮನ್ವೇಲನು ಅವರ ಮನೆಗೆ ಬರುತ್ತಾನೆ. ಆತ ಅವರ ಕ್ಷೇಮ ಸಮಾಚಾರ ತಿಳಿದು ಗುರುವನ ಬಗ್ಗೆ ತಿಳಿಸುತ್ತಾನೆ. ಜೀವನದಲ್ಲಿ ಎಲ್ಲವನ್ನು ಕಳೆದು ಕೊಂಡು ಸಾಧಿಸುವುದಾದರೂ ಏನು? ಹೋಗಿ ನಿನ್ನ ಮಗನನ್ನು ವಾಪಸ್ಸು ಕರೆತಾ ಎಂದು ಆತನಿಗೆ ಮನ್ವೇಲನು ಸಲಹೆ ನೀಡುತ್ತಾನೆ. ಅದರಿಂದಾಗಿ ತಾನೂ ಮತ ಪರಿವರ್ತಿಸಿ ಕೊಳ್ಳುವುದಾಗಿ ನಿರ್ಧರಿಸುತ್ತಾನೆ. ನಾಳೆ ಬೆಳಿಗ್ಗೆ ತನ್ನ ಮಗನ ಬಳಿ ಹೋಗುವುದಾಗಿ ಅವನನ್ನು ಕರೆತರುವುದಾಗಿ ಚರ್ಚಿಸಿರುತ್ತಾರೆ.*

* ಬೆಳಗ್ಗೆ ನಿರ್ಧಿಸಿದಂತೆಯೇ ಚೋಮನು ಗುರುವನ ಬಳಿ ಹೋದಾಗ ಅವರ ಮನೆಗೆ ಮನ್ವೇಲನು ಬರುತ್ತಾನೆ. ಮನೆಯಲ್ಲಿ ಬೆಳ್ಳಿಯು ಒಬ್ಬಳೇ ಇರುವ ಕಾರಣ ಅವರ ಹಿಂದಿನ ಕಾಮ ಪ್ರೇರಣೆ ಅವರನ್ನು ಮತ್ತೆ ಸಲುಗೆಯಿಂದ ಮಾತನಾಡಲು ಆಸ್ಪದ ನೀಡುತ್ತದೆ. ಇತ್ತ ಚೋಮನು ಹೋಗುವ ದಾರಿಯಲ್ಲಿ ತನ್ನ ಮನೆ ದೇವರನ್ನು ಕಂಡು ಯಾಕೋ ಮತ ಪರಿವರ್ತನೆ ತಪ್ಪು ಎಂದನಿಸಿ ಮನೆಗೆ ಬಂದು ನೋಡಿದರೆ ಚಾಪೆಯ ಮೇಲೆ ಅವರಿಬ್ಬರೂ. ಚೋಮನಿಗೆ ಆಗ ಎಲ್ಲವೂ ಅರ್ಥವಾಯಿತು. ತನ್ನ ಮಗಳು ಆತನ ಸಾಲ ತೀರಿಸಿದ ಬಗೆ! ಆಗಿನ ಚೋಮನ ಆವೇಶ ಅಷ್ಟಿಷ್ಟಲ್ಲ. ಅಸಹಾಯಕತೆಯಿಂದ ಹುಚ್ಚನಂತೆ ವರ್ತಿಸುತ್ತಾನೆ. ಅವರನ್ನು ಹೊರಗೆ ಹಾಕಿ ತನಗೆ ಮಕ್ಕಳೇ ಇಲ್ಲ ಎಂದು ಉಣ್ಣದೆ, ತಿನ್ನದೆ ದುಡಿಯನ್ನು ಕೈಗೆ ತೆಗೆದುಕೊಂಡು ಅದನ್ನು ಬಾರಿಸುತ್ತಾ ಮೂಲೆಯಲ್ಲಿ ಕೂರುವನು. ಅತ್ತ ಅವನು ವ್ಯವಸಾಯಗಾರನೂ ಆಗಲಿಲ್ಲ. ಇತ್ತ ತನ್ನ ಎಲ್ಲಾ ಮಕ್ಕಳನ್ನೂ ಕಳೆದು ಕೊಂಡ ದುಃಖದಲ್ಲಿ ದುಡಿಯನ್ನು ಬಾರಿಸುತ್ತಲೇ ಸಾವಿಗೆ ಶರಣಾಗುತ್ತಾನೆ.

*ಮುಕ್ತಾಯ:
ಹೀಗೆ ಈ ಒಟ್ಟು ಕಥೆಯಲ್ಲಿ ಚೋಮ, ಅವನ ಕನಸು, ಕುಟುಂಬ, ಅವನು ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಮೇಲ್ವರ್ಗದವರ ಕಾರಣದಿಂದ ಎದುರಿಸಬೇಕಾದಂತ ಕಷ್ಟಗಳನ್ನು ಕುರಿತು ನಮಗೆ ತಿಳಿಸುತ್ತದೆ. ತನ್ನ ಒಂದೇ ಒಂದು ಆಸೆಯೂ ತೀರಿಸಿಕೊಳ್ಳಲು ಚೋಮನ ಕೈಲಿ ಸಾಧ್ಯವಾಗುವುದಿಲ್ಲ. ಸಂಕಪ್ಪಯ್ಯ,ಅವರ ತಾಯಿ, ದಡದ ಮೇಲಿದ್ದ ಮೇಲ್ವರ್ಗದವರು, ಮನ್ವೇಲ, ಆತನ ಮಕ್ಕಳನ್ನು ಒಳಗೊಂಡು ಹೀಗೆ ಎಲ್ಲರೂ ಚೋಮನ ಜೀವನದಲ್ಲಿ ಕತ್ತಲೆಯನ್ನು ಉಳಿಸಿದ ಬಗೆಯನ್ನು ಕಾರಂತರು ಬರೆದಿರುವ ಈ ಕಾದಂಬರಿಯಲ್ಲಿ ನಾವು ಕಾಣಬಹುದಾಗಿದೆ.*

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ:- 1

ಸಾಮಾನ್ಯ ಜ್ಞಾನ

1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ
ಒಟ್ಟು ಎಷ್ಟು ಸಾಲುಗಳಿವೆ?
●13

2) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
●527

3) ಇತಿಹಾಸದ ಪಿತಾಮಹ 'ಹೆರೋಡೊಟಸ್' ಯಾವ ದೇಶದವನು?
●ಗ್ರೀಕ್

4) ಇಂಗ್ಲಿಷನಲ್ಲಿ ಒಟ್ಟು" ಅಲ್ಪಾಬೆಟ್"
ಎಷ್ಟು?
● 1

5) "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
● ಫೆಭೃವರಿ-28

6) ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
●2

7) ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
●ಭಾರತ

8) ಕರ್ನಾಟಕದ ಪಂಜಾಬ್
(ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
●ವಿಜಯಪುರ

9) "ವಿಶ್ವ ಭೂ ದಿವಸ" ವನ್ನು ಯಾವ
ದಿನ ಆಚರಿಸುತ್ತಾರೆ?
●ಎಪ್ರಿಲ್-22

10)ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
●ಹಂಪಿ

11) L.P.G ಸೋರುವಿಕೆಯನ್ನು ಪತ್ತೆಹಚ್ಚಲು ಉಪಯೋಗಿಸುವ ರಸಾಲಯನಿಕ:
●ಈಥೈಲ್ ಆಲ್ಕೊಹಾಲ್.

12) ಖೈಬರ್ ಕಣಿವೆ (ಖೈಬರ್ ಪಾಸ್) ಎಲ್ಲಿದೆ?
●ಪಾಕಿಸ್ತಾನ.

13) ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ :
●ಆಪತ್.

14) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:
●38ನೇ ಪ್ಯಾರಲಲ್.

15) ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:
●ಅ.ನ.ಕೃ.

16) ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು?
●ಚಂದ್ರಹಾಸ ಕಥೆ.

17) ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:
● 6.

18) ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
● ಬೆಳಗಾವಿ.

19) ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:
● ದೈನಿಕ್ ಜಾಗರಣ್.

20) ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು?
●ಕಂಪ್ಯೂಟರ್ ಸಾಫ್ಟವೇರ್.

21) ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ :
● 30 ಮತ್ತು 5627.

22) ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು?
● ಕ್ಯಾಬಿನೆಟ್ ಮಿಷನ್ ಯೋಜನೆ.

23) ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು?
●ALMA.(ಅಟಕಾಮಾ ಮರುಭೂಮಿಯಲ್ಲಿದೆ)

24) ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?
●ನಂದನ್ ಕಣ್ಣನ್.

25) ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ ?
● ಕೋಲಾರ -ಹೊರಮಾವು.

26) ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?
●ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ - ಚಂಬೂರ್ ಪ್ರದೇಶಗಳ ಮಧ್ಯೆ)

27) 'ಕಿಸಾನ್ ದಿವಸ್' ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ?
● ಮಾಜಿ ಪ್ರಧಾನಿ ಚರನ್ ಸಿಂಗ್. (ಡಿಸೆಂಬರ್ 23)

28) ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?
●ಚೀನಾ.

29) 'ರಾಮನಾಥ್ ಗೋಯೆಂಕಾ ಪ್ರಶಸ್ತಿ' ಯನ್ನು ಕೊಡಲಾಗುವ ಕ್ಷೇತ್ರ:
● ಪತ್ರಿಕೋದ್ಯಮ

30) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ?
● ಯುನೈಟೆಡ್ ಸ್ಟೇಟ್ಸ್.

31) ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ?
● ಪೆರಿಸ್ಕೋಪ್.

32) ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು ?
● ಲಾರ್ಡ್ ಹಾರ್ಡಿಂಜ್.

33) ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ ?
●E.L. ಥಾರ್ನ್ ಡೈಕ್.

34) ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ?
● ಅನ್ನಾ ಬೆಲ್ಲಿಲ್ಯಾಂಡ್.

35) ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ :
● ಪಿ.ವಿ. ನರಸಿಂಹರಾವ್.

36) ವಿಶ್ವದಲ್ಲೇ ಅತಿದೊಡ್ಡದಾದ 'ತ್ರಿ ಗೊಜರ್ಸ್ ಜಲಾಶಯ' ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ ?
● ಯಾಂಗ್ಜಿ ನದಿ.

37) ಪರಿಸರ ಸಂರಕ್ಷಣೆಗೊಸ್ಕರ 'ಗ್ರೀನ್ ಟ್ರ್ಯಾಕ್' ನ್ನು ವಿಧಿಸಿದ ಮೊದಲ ರಾಷ್ಟ್ರ ?
●ನ್ಯೂಜಿಲೆಂಡ್.

38) ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ, ಉದ್ದವಾದ ಪರ್ವತ ಶ್ರೇಣಿ ಯಾವುದು ?
●ಆಂಡೀಸ್ ಪರ್ವತಗಳು

39) ಪವಿತ್ರ ಪರ್ವತ (Holy Mountain) ಎಂದು ಯಾವುದನ್ನು ಕರೆಯುತ್ತಾರೆ ?
●ಫ್ಯೂಜಿಯಾಮಾ (ಜಪಾನ್)

40) ವಿಶ್ವ ಬ್ಯಾಂಕ್ ನ 'ಆಣೆಕಟ್ಟು ಪುನಶ್ಚೇತನ ಯೋಜನೆ'ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ:
● ಕೇರಳ

41) ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ:
●ಥೋರಿಯಂ

42) ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ?
●32ನೇ ವಿಧಿ.

43) 'ಸಂವಿಧಾನದ ಪೀಠಿಕೆ' ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
●ಬೇರುಬೆರಿ ಪ್ರಕರಣದಲ್ಲಿ.

44) ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?
●ಫಜಲ್ ಅಲಿ.

45) ನೂತನ ಶತಮಾನದ ಮೊದಲ ಸೂರ್ಯಕಿರಣಗಳು ಸ್ಪರ್ಶಿಸಿದ "ಕಚಲ್ " ದ್ವೀಪ ಎಲ್ಲಿ ಕಂಡುಬರುತ್ತದೆ ?
●ನಿಕೋಬಾರ್ ಸಮುದಾಯ.

46) ಭಾರತದಲ್ಲಿ ಸೂರ್ಯ ಉದಯಿಸುವ ಅರುಣಾಚಲ ಪ್ರದೇಶ, ಗುಜರಾತ್ ರಾಷ್ಟ್ರಗಳ ನಡುವೆ ಇರುವ ವ್ಯತ್ಯಾಸ ಎಷ್ಟು ?
●2 ಗಂಟೆಗಳು.

47)'ಅಂತರ್ರಾಷ್ಟ್ರೀಯ ಓಝೊನ್ ' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
●ಸೆಪ್ಟೆಂಬರ್ 16.

48) ನ್ಯಾಟೋ (NATO) ದ ಪ್ರಧಾನ ಕಾರ್ಯಾಲಯ ಎಲ್ಲಿದೆ ?
● ಬ್ರಸ್ಸೆಲ್ಸ್ (ಬೆಲ್ಜಿಯಂ)

49) ಅಂತರ್ರಾಷ್ಟ್ರೀಯ ಒಲಂಪಿಕ್ ಸಮಿತಿ ಯ ಪ್ರಧಾನ ಕಾರ್ಯಾಲಯ  ಎಲ್ಲಿದೆ ?
●ಲುಸ್ಸಾನೆ  50) ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407 ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ?
●ವಿಶ್ವಬ್ಯಾಂಕ್

51) RTE ಇದರ ವಿಸ್ತ್ರತ ರೂಪ?
● (Right to Education)

52) ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಸೇರುವ ನಗರಗಳಾವವು?
● ಕೊಲ್ಕತ್ತಾ -ಅಮೃತಸರ.

53) ಭಾರತದ ಅಶಾಂತಿ ಪಿತಾಮಹ (Father of Indian unrest) ಎಂದು ಖ್ಯಾತಿ ಪಡೆದವರು ?
● ಬಾಲ ಗಂಗಾಧರ ತಿಲಕ.

54)ಒಂದು ಟನ್ ಕಾಗದವನ್ನು ಉತ್ಪಾದಿಸಲು ಬಳಸಲಾಗುವ ನೀರಿನ ಪ್ರಮಾಣ ?
●55,000 ಲೀಟರ್.

55) ಪ್ರಾಥಮಿಕ ಬಣ್ಣಗಳು ಯಾವುವು ?
●ನೀಲಿ, ಹಸಿರು ಮತ್ತು ಕೆಂಪು.

56) ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ ಕಲ್ಪಿಸಿದೆ ?
● 7ನೇ  ತಿದ್ದುಪಡಿ(1956).

57) ಭಾರತದ ಯಾವ ರಾಜ್ಯದಲ್ಲಿ ಸೂರ್ಯ ಕೊನೆಯದಾಗಿ ಉದಯಿಸುತ್ತಾನೆ ?
●ಗುಜರಾತ್.

58) ಯಾವ ವಿಟಮಿನ್ ಲೋಪದಿಂದ ಬಂಜೆತನ ಬರುತ್ತದೆ? ●ವಿಟಮಿನ್ E.

59) ರಕ್ತ ಹೆಪ್ಪುಗಟ್ಟಲು ಸಹಾಯವಾಗುವ ವಿಟಮಿನ್ ಯಾವುದು ?
● ವಿಟಮಿನ್ K.

60) ಸಿರಿಯಾದ ರಾಜಧಾನಿ :
● ಡಮಾಸ್ಕಸ್

61)ಭಾರತದ ಪ್ರಪ್ರಥಮ ಸಮರ್ಪಿತ ಮಿಲಿಟರಿ ಉಪಗ್ರಹ GSAT -7 ರ ಹೆಸರು?
● ರುಕ್ಮಿಣಿ

62) ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು ನೀಡುತ್ತಿರುವ ಯೋಜನೆ?
●ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.

63) ಬೆಂಗಳೂರಿನಿಂದ ಹೊರಗೆ ವಿಧಾನಸಭೆ ಅಧಿವೇಶನ ನಡೆಯುವ ಸ್ಥಳ?
●ಬೆಳಗಾವಿ

64) ಹಾರಬಲ್ಲ ಏಕೈಕ ಸಸ್ತನಿ ಯಾವುದು?
●ಬಾಬಾವಲಿ

65) ಕರ್ನಾಟಕದ 30 ನೇ ಜಿಲ್ಲೆ ಯಾವುದು?
●ಯಾದಗಿರಿ

66) ನಟ ವಿಷ್ಣುವಿನ ಮೊದಲ ಹೆಸರೇನು?
●ಸಂಪತ್ ಕುಮಾರ್

67)"ನೇಗಿಲು ಹಿಡಿದು ಹೊಲದೊಳು ಉಳುವ....ಎಂಬ ರೈತ ಗೀತೆ ರಚನೆಕಾರರು ಯಾರು?
●ಕುವೆಂಪು

68) "ಘಮ ಘಮ ಘಮಾಡಿಸತಾವ
ಮಲ್ಲಿಗೆ...ಭಾವಗೀತೆ ರಚಿಸಿದವರು?
● ದ.ರಾ.ಬೇಂದ್ರೆ

69) ಭಾರತದ ಲೋಕಸಭಾ ಚುನಾಯಿತ ಸದಸ್ಯರ ಸಂಖ್ಯೆ?
●544

70) ಕಾವೇರಿ ನದಿಯ ಉಗಮ ಸ್ಥಾನ ಯಾವ ಜಿಲ್ಲೆಯಲ್ಲಿದೆ?
●ಕೊಡಗು

71) ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು ಯಾರು?
● ನಾರಾಯಣಮೂರ್ತಿ

72) ನೀಲಗಿರಿ ಮರವನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು ಯಾರು?
●ಟಿಪ್ಪು ಸುಲ್ತಾನ್

73) ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಮೊದಲ ಅಧ್ಯಕ್ಷರಾರು?
● ಡಬ್ಲ್ಯೂ. ಸಿ. ಬಾನರಜಿ

74) ಭಾರತದ ಸಂಸತ್ತಿಗೆ ರಾಷ್ಟ್ರಪತಿಗಳು ಎಷ್ಟು ಜನರನ್ನು ನಾಮಕರಣ ಮಾಡುತ್ತಾರೆ?
●14

75) ಕರ್ನಾಟಕದ ಪ್ರಸ್ತುತ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
● 224

76) ಲಕ್ಷದ್ವೀಪ ಗಳು ಯಾವ ಸಮುದ್ರ ದಲ್ಲಿ ಕಂಡು ಬರುತ್ತವೆ?
● ಅರಬ್ಬಿ ಸಮುದ್ರ

77) "ಭಾರತದ ನೆಫೋಲಿಯನ್" ಎಂದು ಕರೆಯಲ್ಪಡುವ ಗುಪ್ತ ದೊರೆ ಯಾರು?
●ಸಮುದ್ರ ಗುಪ್ತ

78) ಗಣಕಯಂತ್ರ ದ ಪಿತಾಮಹ ಯಾರು?
●ಚಾರ್ಲ್ಸ್ ಬಾಬೇಜ

79) ಬೆಳಿಯ ರಾಸಾಯನಿಕ ಸಂಕೇತವೇನು?
● ಎ ಜಿ

80) ತಿಮಿಂಗಿಲಗಳ ಉಸಿರಾಟದ ಅಂಗ ಯಾವುದು?
●ಶ್ವಾಸಕೋಶ

81)ಜೀವಕೋಶ ವನ್ನು ಕಂಡು ಹಿಡಿದವರಾರು?
● ರಾಬರ್ಟ್ ಹುಕ್

82)'ಸಸ್ಯಗಳಿಗೆ ಜೀವವಿದೆ" ಎಂದು ಹೇಳಿದ ಭಾರತೀಯ ವಿಜ್ಞಾನಿ ಯಾರು?
●ಜಗದೀಶ್ ಚಂದ್ರಬೋಸ್

83) ಸಂಕಲನದ ಅನನ್ಯತಾ ಅಂಶ ಯಾವುದು?
● 0

84) ಘಣ ಮತ್ತು ವರ್ಗ ಎರಡನ್ನೂ ಹೊಂದಿರುವ ಸಂಖ್ಯೆ ಯಾವುದು?
● 1 ಅಥವಾ 64

85) ಕರ್ನಾಟಕದ ಮೊದಲ ರಾಷ್ಟ್ರ ಕವಿ ಯಾರು?
● ಎಂ.ಗೋವಿಂದ ಪೈ

86) ರಗಳೆ ಯ ಕವಿ ಯಾರು?
● ಹರಿಹರ

87) ಗದ್ಯ- ಪದ್ಯ ಮಿಶ್ರಿತ ಕಾವ್ಯವನ್ನು ಏನೆಂದು ಕರೆಯುತ್ತಾರೆ? ● ಚಂಪೂ

88)" ಕರ್ನಾಟಕ ಕವಿ ಚೂತವನ ಚೈತ್ರ" ಎಂಬ ಬಿರುದು ಯಾರಿಗಿದೆ?
●ಲಕ್ಷ್ಮೀಶ

89) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
●ವಡಾರಾಧನೆ

90) ಶ್ರೀಗಂಧವನ್ನು ಅತಿ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
● ಕರ್ನಾಟಕ

91) ಸುಂದರಬನ ದಲ್ಲಿ ಕಂಡುಬರುವ ಪ್ರಾಣಿ?
● ಹುಲಿ

92) "ಜಿಂದಾಫೀರ್" ಎಂದು ಯಾರನ್ನು ಕರೆಯುತ್ತಾರೆ?
● ಔರಂಗಜೇಬ್

93) "ನಾಣ್ಯಗಳ ರಾಜಕುಮಾರ"
ಎಂದು ಯಾರನ್ನು ಕರೆಯುತ್ತಾರೆ?
● ಮಹಮ್ಮದ್ ಬಿನ್ ತುಘಲಕ್

94) ಯಾರು "ಆಧುನಿಕ ಕರ್ನಾಟಕದ ಶಿಲ್ಪಿ" ಎಂದು ಹೆಸರಾಗಿದ್ದಾರೆ?
● ಎಂ. ವಿಶ್ವೇಶ್ವರಯ್ಯ.

95) ಯಾವ ದಿನವನ್ನು " ವಿಶ್ವ ಪರಿಸರ ದಿನ" ಎಂದು ಆಚರಿಸಲಾಗುತ್ತದೆ?
● ಜೂನ್-5

96)" ದಂಡಿಯಾತ್ರೆ" ಗೆ ಇರುವ ಇನ್ನೊಂದು ಹೆಸರು?
● ಉಪ್ಪಿನ ಸತ್ಯಾಗ್ರಹ

97) "ದತ್ತು ಮಕ್ಕಳಿಗೆ ಹಕ್ಕಿಲ್ಲ" ನೀತಿಯನ್ನು ಜಾರಿಗೆ ತಂದವರಾರು?
● ಲಾರ್ಡ್ ಡಾಲಹೌಸಿ

98) 1857 ರಲ್ಲಿ ಮುಂಡರಗಿ ಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದ್ದವರು ಯಾರು?
●ಭೀಮರಾವ್

99) ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನ ನಡೆದ ವರ್ಷ?
● 1924

100) ಕರ್ನಾಟಕದ" ಜಲಿಯನ್ ವಾಲಾಬಾಗ್ " ಎಂದು ಲೋಕ ಪ್ರಚಲಿತವಾಗಿರುವ ಸತ್ಯಾಗ್ರಹ
∆ ವಿಧುರಾಶ್ವಥ್ವ ದುರಂತ

ಸಾಮಾನ್ಯ ವಿಜ್ಞಾನದ ಪ್ರಶ್ನೋತ್ತರಗಳು

ಜಿಕೆಕನ್ನಡ
1) ವಿಶ್ವದಲ್ಲಿ ಅತಿ ಹೆಚ್ಚಿನಪ್ರಮಾಣದಲ
್ಲಿರುವ ಮೂಲವಸ್ತು ಯಾವುದು?
* ಜಲಜನಕ.
2) ಅತಿ ಹಗುರವಾದ ಲೋಹ
ಯಾವುದು?
* ಲಿಥಿಯಂ.
3) ಅತಿ ಭಾರವಾದ ಲೋಹ
ಯಾವುದು?
* ಒಸ್ಮೆನೆಯಂ.
4) ಚಿನ್ನವನ್ನು ಶುದ್ಧೀಕರಿಸುವ
ವಿಧಾನಯಾವುದು?
* ಸೈನೈಡೇಶನ್.
5) ಅತಿ ಹಗುರವಾದ ಮೂಲವಸ್ತು
ಯಾವುದು?
* ಜಲಜನಕ.
6) ಭೂಮಿಯವಾತಾವರಣದಲ್ಲಿ
ಅತಿಹೆಚ್ಚಿನ ಪ್ರಮಾಣದಲ್ಲಿರುವ
ಮೂಲವಸ್ತು ಯಾವುದು?
* ಸಾರಜನಕ.
7) ಪ್ರೋಟಾನ್ ಕಂಡು ಹಿಡಿದವರು
ಯಾರು?
* ರುದರ್ ಫರ್ಡ್.
8) ಭೂಮಿಯ ಮೇಲ್ಪದರಲ್ಲಿ ಅತಿ
ಹೆಚ್ಚಿನಪ್ರಮಾಣದಲ್ಲಿರುವ
ಮೂಲವಸ್ತು ಯಾವುದು?
* ಆಮ್ಲಜನಕ.
9) ನ್ಯೂಟ್ರಾನ್ ಗಳನ್ನು ಕಂಡು
ಹಿಡಿದವರುಯಾರು?
* ಜೇಮ್ಸ್ ಚಾಡ್ ವಿಕ್.
10) ಎಲೆಕ್ಟ್ರಾನ್ ಗಳನ್ನು ಕಂಡು
ಹಿಡಿದವರುಯಾರು?
* ಜೆ.ಜೆ.ಥಾಮ್ಸನ್.
11) ಒಂದು ಪರಮಾಣುವಿನಲ್ಲಿರು
ವಪ್ರೋಟಾನ್ ಅಥವಾ ಎಲೆಕ್ಟ್ರಾನ್
ಗಳಸಂಖ್ಯೆಯೇ -----?
* ಪರಮಾಣು ಸಂಖ್ಯೆ.
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ
2ನೇಮೂಲವಸ್ತು ಯಾವುದು?
* ಹಿಲಿಯಂ.
13) ಮೂರ್ಖರ ಚಿನ್ನ ಎಂದು
ಯಾವುದನ್ನುಕರೆಯುತ್ತಾರೆ?*
ಕಬ್ಬಿಣದ ಪೈರೆಟ್ಸ್.
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು
-----ಬಳಸುತ್ತಾರೆ?
* ಒಸ್ಮೆನಿಯಂ.
15) ಪ್ರಾಚೀನ ಕಾಲದ ಮಾನವ
ಮೊದಲಬಳಸಿದ ಲೋಹ ಯಾವುದು?
* ತಾಮ್ರ.
16) ಉದು ಕುಲುಮೆಯಿಂದ ಪಡೆದ
ಕಬ್ಬಿಣಯಾವುದು?
* ಬೀಡು ಕಬ್ಬಿಣ.
17) ಚಾಲ್ಕೋಪೈರೇಟ್ ಎಂಬುದು
------- ದಅದಿರು.
* ತಾಮ್ರದ.
18) ಟಮೋಟದಲ್ಲಿರುವ ಆಮ್ಲ
ಯಾವುದು?
* ಅಕ್ಸಾಲಿಕ್.
20) "ಆಮ್ಲಗಳ ರಾಜ" ಎಂದು
ಯಾವಆಮ್ಲವನ್ನು ಕರೆಯುವರು?
* ಸಲ್ಫೂರಿಕ್ ಆಮ್ಲ.
21) ಕಾಸ್ಟಿಕ್ ಸೋಡದ
ರಾಸಾಯನಿಕಹೆಸರೇನು?
* ಸೋಡಿಯಂ ಹೈಡ್ರಾಕ್ಸೈಡ್.
22) "ಮಿಲ್ಖ್ ಆಫ್ ಮೆಗ್ನಿಷಿಯಂ"
ಎಂದುಯಾವುದನ್ನು ಕರೆಯುವರು?
* ಮೆಗ್ನಿಷಿಯಂ ಹೈಡ್ರಾಕ್ಸೈಡ್.
23) ಅಡುಗೆ ಉಪ್ಪುವಿನ
ರಾಸಾಯನಿಕಹೆಸರೇನು?
* ಸೋಡಿಯಂ ಕ್ಲೋರೈಡ್.
24) ಗಡಸು ನೀರನ್ನು ಮೃದು
ಮಾಡಲು -----ಬಳಸುತ್ತಾರೆ?*
ಸೋಡಿಯಂ ಕಾರ್ಬೋನೆಟ್.
25) ಕೆಂಪು ಇರುವೆ ಕಚ್ಚಿದಾಗ
ಉರಿಯಲುಕಾರಣವೇನು?
* ಪಾರ್ಮಿಕ್ ಆಮ್ಲ.
26) ಗೋಧಿಯಲ್ಲಿರುವ ಆಮ್ಲ
ಯಾವುದು?
* ಗ್ಲುಮಟಿಕ್.
27) ಪಾಲಾಕ್ ಸೊಪ್ಪುವಿನಲ್ಲಿರುವ
ಆಮ್ಲಯಾವುದು?
* ಪೋಲಿಕ್.
28) ಸಾರಜನಕ ಕಂಡು ಹಿಡಿದವರು
ಯಾರು?
* ರುದರ್ ಪೊರ್ಡ್.
29) ಆಮ್ಲಜನಕ ಕಂಡು ಹಿಡಿದವರು
ಯಾರು?
* ಪ್ರಿಸ್ಟೆ.
30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* ಹೈಗ್ರೋಮೀಟರ್.
31) ಹೈಗ್ರೋಮೀಟರ್ ಅನ್ನು -----
ಎಂದುಕರೆಯುತ್ತಾರೆ?
* ಸೈಕೋಮೀಟರ್.
32) ಯಾವುದರ ವಯಸ್ಸು ಪತ್ತೆಗೆ
ಸಿ-14ಪರೀಕ್ಷೆ ನಡೆಸುತ್ತಾರೆ?
* ಪಳೆಯುಳಿಕೆಗಳ.
33) ಕೋಬಾಲ್ಟ್ 60 ಯನ್ನು
ಯಾವಚಿಕಿತ್ಸೆಯಲ್ಲಿ ಬಳಸುತ್ತಾರೆ?
* ಕ್ಯಾನ್ಸರ್.
34) ಡುರಾಲು ಮಿನಿಯಂ
ಲೋಹವನ್ನುಯಾವುದರ
ತಯಾರಿಕೆಯಲ್ಲಿ ಬಳಸುತ್ತಾರೆ?
* ವಿಮಾನ.
35) ನೀರಿನಲ್ಲಿ ಕರಗುವ ವಿಟಮಿನ್
ಗಳುಯಾವುವು?
* ಬಿ & ಸಿ.
36) ರಿಕೆಟ್ಸ್ ರೋಗ ಯಾರಲ್ಲಿ
ಕಂಡುಬರುವುದು?
* ಮಕ್ಕಳಲ್ಲಿ.
37) ಕಾಮನ ಬಿಲ್ಲಿನಲ್ಲಿ ಅತಿ
ಹೆಚ್ಚುಬಾಗಿರುವ ಬಣ್ಣ ಯಾವುದು?
* ನೇರಳೆ.
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ
ಬಾಗಿರುವಬಣ್ಣ ಯಾವುದು?
* ಕೆಂಪು.
39) ಆಲೂಗಡ್ಡೆ
ಯಾವುದರರೂಪಾಂತರವಾಗಿದೆ?
* ಬೇರು.
40) ಮಾನವನ ದೇಹದ ಉದ್ದವಾದ
ಮೂಳೆಯಾವುದು?* ತೊಡೆಮೂಳೆ
(ಫೀಮರ್).
41) ವಯಸ್ಕರಲ್ಲಿ ಕೆಂಪು
ರಕ್ತಕಣಗಳುಹುಟ್ಟುವ ಸ್ಥಳ
ಯಾವುದು?
* ಅಸ್ಥಿಮಜ್ಜೆ.
42) ಲಿವರ್(ಯಕೃತ್)ನಲ್ಲಿ
ಸಂಗ್ರಹವಾಗುವವಿಟಮಿನ್ ಯಾವು?
* ಎ & ಡಿ.
43) ರಿಕೆಟ್ಸ್ ರೋಗ ತಗುಲುವ
ಅಂಗಯಾವುದು?
* ಮೂಳೆ.
44) ವೈರಸ್ ಗಳು -----
ಯಿಂದರೂಪಗೊಂಡಿರುತ್ತವೆ?
* ಆರ್.ಎನ್.ಎ.
45) ತಾಮ್ರ & ತವರದ ಮಿಶ್ರಣ
ಯಾವುದು?
* ಕಂಚು.
46) ತಾಮ್ರ & ಸತುಗಳ ಮಿಶ್ರಣ
ಯಾವುದು?
* ಹಿತ್ತಾಳೆ.
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ
ಅನಿಲಗಳುಯಾವುವು?
* ಬ್ಯೂಟೆನ್ & ಪ್ರೋಫೆನ್.
48) ಚೆಲುವೆ ಪುಡಿಯ ರಾಸಾಯನಿಕ
ಹೆಸರೇನು?
* ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.
49) ವನಸ್ಪತಿ ತುಪ್ಪ
ತಯಾರಿಕೆಯಲ್ಲಿಬಳಸುವ ಅನಿಲ
ಯಾವುದು?
* ಜಲಜನಕ.
50) ಕಾಯಿಗಳನ್ನು ಹಣ್ಣು ಮಾಡಲು
ಬಳಸುವರಾಸಾಯನಿಕ ಯಾವುದು?
* ಎಥಲಿನ್.
51) ಆಳಸಾಗರದಲ್ಲಿ ಉಸಿರಾಟಕ್ಕೆಆಮ್ಲಜ
ನಕದೊಂದಿಗೆ ಬಳಸುವ
ಅನಿಲಯಾವುದು?:
* ಸಾರಜನಕ.
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ
ಲೋಹಯಾವುದು?*
ಅಲ್ಯೂಮೀನಿಯಂ.
53) ಹಾರುವ ಬಲೂನ್ ಗಳಲ್ಲಿ ಬಳಸುವ
ಅನಿಲಯಾವುದು?
* ಹೀಲಿಯಂ.
54) ಪರಿಶುದ್ಧವಾದ ಕಬ್ಬಿಣ
ಯಾವುದು?
* ಮ್ಯಾಗ್ನಟೈಟ್.
55) ಅಗ್ನಿಶಾಮಕಗಳಲ್ಲಿಬಳಸುವ
ಅನಿಲಯಾವುದು?
* ಕಾರ್ಬನ್ ಡೈ ಆಕ್ಸೈಡ್.
56) ಮೃದು ಪಾನಿಯಗಳಲ್ಲಿ ಬಳಸುವ
ಅನಿಲಯಾವುದು?
* ಕಾರ್ಬೋನಿಕ್ ಆಮ್ಲ.
57) ಹಣ್ಣಿನ ರಸ ಸಂರಕ್ಷಿಸಲು
ಬಳಸುವರಾಸಾಯನಿಕ ಯಾವುದು?
* ಸೋಡಿಯಂ ಬೆಂಜೋಯಿಟ್.
58) "ಆತ್ಮಹತ್ಯಾ ಚೀಲ"ಗಳೆಂದು
------ಗಳನ್ನು ಕರೆಯುತ್ತಾರೆ?
* ಲೈಸೋಜೋಮ್.
59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
* ಇರುಳು ಕುರುಡುತನ.
60) ಐಯೋಡಿನ್ ಕೊರತೆಯಿಂದ ಬರುವ
ರೋಗಯಾವುದು?
* ಗಳಗಂಡ (ಗಾಯಿಟರ್).