ಮಂಗಳವಾರ, ಜೂನ್ 30, 2015

ಇತಿಹಾಸ ಭೊಧನಾ ವಿಧಾನ ಶಾಸ್ತ್ರ

ರಚನಾ ಸಮಾಜ ವಿಜ್ಞಾನ 9 ವಿಮರ್ಶಾತ್ಮಕ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ



12. ವಿಮರ್ಶಾತ್ಮಕ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ
ಎ) ಇತಿಹಾಸ ವಿಭಾಗ: ಉದಾಹರಣೆ: 1
1. ಪಾಠದ ಹೆಸರು : ಮಧ್ಯಯುಗದ ಯೂರೋಪ್
2. ಜ್ಞಾನ ರಚನೆಗೆ ಇರುವ ಅವಕಾಶಗಳು:
> ಮಧ್ಯಯುಗದ ಯೂರೋಪಿನ ಸಮಾಜದ ಸ್ಥಿತಿಗತಿಗಳು
> ಊಳಿಗ ಮಾನ್ಯ ಪದ್ಧತಿ ಅರ್ಥ
> ಊಳಿಗ ಮಾನ್ಯ ಪದ್ಧತಿಯ ವಿವಿಧ ರೂಪಗಳು
> ಊಳಿಗ ಮಾನ್ಯ ಪದ್ಧತಿಯ ಗುಣಗಳು ಮತ್ತು ದೋಷಗಳು
> ಊಳಿಗ ಮಾನ್ಯ ಪದ್ಧತಿಯ ಅವನತಿ
> ಪ್ರಸ್ತುತ ಜನತಂತ್ರ ವ್ಯವಸ್ಥೆಯೊಂದಿಗೆ ಊಳಿಗಮಾನ್ಯ ಪದ್ಧತಿ ಹೋಲಿಕೆ
> ಭೂ ಒಡೆತನದ ಹಕ್ಕನ್ನು (ಆಸ್ತಿಯ ಹಕ್ಕು) ಪಡೆಯುವ ಬಗೆ
> ವರ್ಗ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳ ಅರಿವು.
3. ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು
 ಮಧ್ಯಯುಗದ ಯೂರೋಪಿನಲ್ಲಿ ವರ್ಗ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ವಿಮರ್ಶಾಯುಕ್ತವಾಗಿ ಅರ್ಥೈಸಿಕೊಳ್ಳುವುದು.
ಇಂದಿನ ಪ್ರಜಾತಂತ್ರ ವ್ಯವಸ್ಥೆಯೇ ಊಳಿಗಮಾನ್ಯ ಪದ್ಧತಿಗಿಂತ ಅತ್ಯಂತ ಶ್ರೇಷ್ಠವಾದುದೆಂಬ ತೀರ್ಮಾನವನ್ನು ಕಂಡುಕೊಳ್ಳುವುದು.
ಊಳಿಗಮಾನ್ಯ ಪದ್ಧತಿಯ ಅವನತಿಗೆ ಕಾರಣವಾದ ನಿರಂಕುಶ ರಾಜ ಪ್ರಭುತ್ವ, ಭಾಷೆ, ರಾಷ್ಟ್ರೀಯ ಮನೋಭಾವನೆಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುವುದು.
ಊಳಿಗಮಾನ್ಯ ವ್ಯವಸ್ಥೆಯೊಳಗೆ ಉನ್ನತ ವರ್ಗಗಳಿಗೆ ದೊರೆಯುತ್ತಿದ್ದ ಸವಲತ್ತುಗಳ ಬಗ್ಗೆ ಚರ್ಚಿಸಿ ಇಲ್ಲಿನ ತಾರತಮ್ಯವನ್ನು ತಿರಸ್ಕರಿಸುವುದು.
ಸಮಾಜದ ರಕ್ಷಣೆಗೆ ಊಳಿಗ ಮಾನ್ಯ ವ್ಯವಸ್ಥೆಯಲ್ಲಿ ತೆಗೆದುಕೊಳ್ಳುತ್ತಿದ್ದ ಕ್ರಮ ಹಾಗೂ ಈ ಕಾಲದ ಬಾರ್ಬೇರಿಯನ್ನರು ಅಟ್ಟಹಾಸವನ್ನು ಮಟ್ಟ ಹಾಕುವಲ್ಲಿ ವಹಿಸಿದ ಪಾತ್ರವನ್ನು ವಿಮರ್ಶಿಸುವುದು.
4. ಜ್ಞಾನದ ಪುನರ್ರಚನೆಗೆ ಇರುವ ಅವಕಾಶಗಳು
 ಕ್ರೌರ್ಯ, ಹಿಂಸೆ, ಅಶಾಂತಿ, ದಬ್ಬಾಳಿಕೆ, ಆಕ್ರಮಣಕಾರಿ ಅಂಶಗಳನ್ನು ತಿರಸ್ಕರಿಸಿ, ಸಹನೆ, ದಯೆ, ಶಾಂತಿ, ಸಮಾನತೆ ಎಂಬ ಸಮಾಜಮುಖಿಯಾದ ಮಾನವೀಯ ಮೌಲ್ಯಗಳ ಅರಿವು ತನ್ನದಾಗಿಸಿಕೊಳ್ಳುವುದು.
ಉದಾ: - ಅಮೇರಿಕಾದಲ್ಲಾದ ಜನಾಂಗೀಯ ಕಲಹ
- ಭಾರತದ ಸ್ಪೃಷ್ಯ, ಅಸ್ಪೃಷ್ಯ ತಾರತಮ್ಯ
- ಆಫ್ರಿಕಾದ ವರ್ಣ ವ್ಯತ್ಯಾಸ
 ಸಮಾಜ ಮತ್ತು ದೇಶದ ಕಣ್ಣು ತೆರೆಸುವಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳು ವಹಿಸಿದ ಪಾತ್ರದ ಮಹತ್ವವನ್ನು ಸ್ವೀಕರಿಸಿ ತೀರ್ಮಾನಕ್ಕೆ ಬರುವುದು.
ಉದಾ: ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಭಾಷೆ/ಸಾಹಿತ್ಯಗಳಲ್ಲಾದ ವಿಕಾಸ ವಚನಗಳು, ಕೀರ್ತನೆಗಳು/ದಾಸರ ಪದಗಳು, ಜನಪದ ಗೀತೆಗಳು, ಶಿಶುನಾಳ ಷರೀಪ ಮತ್ತು ಏಸುವಿನ ಜೀವನ ಸಂದೇಶ ಕುರಿತ ಸಾಹಿತ್ಯ ರಚನೆಗಳು.
ವರ್ಗರಹಿತ ಸಮಾಜದ ಅನಿವಾರ್ಯತೆಯನ್ನು ಅರ್ಥೈಸಿಕೊಂಡು ಭಾರತದಂತಹ ರಾಷ್ಟ್ರಗಳಲ್ಲಿನ ಸ್ವಾತಂತ್ರ್ಯ ಸಮಾನತೆ, ಸಹೋದರತೆಯಂತಹ ಭಾವನೆಯನ್ನು ಬೆಳೆಸಿಕೊಳ್ಳುವುದು.
ಉಳುವವನಿಗೆ ಭೂಮಿಯ ಒಡೆತನ ಬಂದಿರುವ ಹಿನ್ನಲೆಯಲ್ಲಿ ಊಳಿಗಮಾನ್ಯ ಪದ್ಧತಿಯಲ್ಲಿನ ಭೂ ಒಡೆತನದ ನಿಯಮವೂ ಕಾರಣವಾಗಿದೆ ಎಂಬ ನಿರ್ಣಯಕ್ಕೆ ಬರುವುದು.
5. ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನ ಅವಳಡಿಸಿಕೊಳ್ಳಲು ಇರುವ ಅವಕಾಶಗಳು
 ಊಳಿಗಮಾನ್ಯ ಪದ್ಧತಿ ವ್ಯವಸ್ಥೆಗೆ ಪೂರ್ವದಲ್ಲಿ ಬರ್ಬರ ಜನಾಂಗದ ಕ್ರೂರತನದಿಂದ ಕೂಡಿದ ದಾಳಿಕೋರತನವನ್ನು ಮೂಕಾಭಿನಯ ಮೂಲಕ ಅಂದಿನ ಸಮಾಜದ ಸ್ಥಿತಿಯನ್ನು ಪ್ರದರ್ಶಿಸುವುದು.
ಸರ್ವ ಸಮಾನತೆಯನ್ನು ಬಿಂಬಿಸುವ ದೃಶ್ಯಾವಳಿಗಳನ್ನು ಒಳಗೊಂಡ ನಾಟಕಾಭಿನಯ.
ಊಳಿಗಮಾನ್ಯ ಪದ್ಧತಿಯೊಳಗಿನ ವರ್ಗ ವ್ಯವಸ್ಥೆ ಮತ್ತು ಜನತಂತ್ರ ವ್ಯವಸ್ಥೆಯಲ್ಲಿನ ವರ್ಗರಹಿತ ಸಂದರ್ಭವನ್ನು ಗುಂಪು ಚರ್ಚೆ ಮೂಲಕ ತೀರ್ಮಾನ ಕೈಗೊಳ್ಳುವುದು.
ಊಳಿಗ ಮಾನ್ಯ ಪದ್ಧತಿಯ ಗುಣದೋಷಗಳು ಮತ್ತು ಜನತಂತ್ರ ವ್ಯವಸ್ಥೆಯಲ್ಲಿನ ಗುಣ ದೋಷಗಳನ್ನು ಕುರಿತು ಚಾರ್ಟ್ ತಯಾರಿಕೆ.
ಊಳಿಗ ಮಾನ್ಯ ವ್ಯವಸ್ಥೆಯನ್ನು ಕುರಿತ ಪ್ರಬಂಧ ರಚನೆ.
ಊಳಿಗ ಮಾನ್ಯ ಪದ್ಧತಿಯ ವರ್ಗ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಚಿತ್ರಗಳ ರಚನೆ.
ಸಂದರ್ಭೋಚಿತ ಮೌಖಿಕ/ಲಿಖಿತ ಪ್ರಶ್ನಾವಳಿಗಳು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
1. ನಾಟಕ ಅಥವಾ ನಾಟಕಾಭಿನಯ ವಿಧಾನ
 ಊಳಿಗ ಮಾನ್ಯ ವ್ಯವಸ್ಥೆಯಲ್ಲಿನ ವರ್ಗ ಪದ್ಧತಿಯ ದೃಶ್ಯಾವಳಿ
 ಬರ್ಬರ ಜನಾಂಗದ ದಾಳಿಕೋರಿತನದ ದೃಶ್ಯಾವಳಿ ಕುರಿತು
2. ಕಥನ ವಿಧಾನ
 ಬರ್ಬರ ಜನಾಂಗದ ಆಕ್ರಮಣಕಾರಿ ನೀತಿ ಕುರಿತು ಕಥೆ ಹೇಳುವುದು ಹಾಗೆಯೇ ಊಳಿಗಮಾನ್ಯ ಪದ್ಧತಿಯನ್ನು ಕುರಿತು ಕಥೆ ಹೇಳುವುದು.
3. ಚರ್ಚಾ ವಿಧಾನ
 ಊಳಿಗಮಾನ್ಯ ವ್ಯವಸ್ಥೆಯ ಗುಣಾವಗುಣಗಳ ಗುಂಪು ಚರ್ಚೆ.
4. ಟಕ ಪದ್ಧತಿ - ಬರ್ಬರ ದಾಳಿ, ಊಳಿಗಮಾನ್ಯ ಪದ್ಧತಿಗಳು.
ಊಳಿಗ ಮಾನ್ಯ ವ್ಯವಸ್ಥೆಯಲ್ಲಿನ ಗುಣದೋಷಗಳು.
ಊಳಿಗ ಮಾನ್ಯ ವ್ಯವಸ್ಥೆಯ ಅವನತಿಗೆ ಕಾರಣ.
5. ವಿಶ್ಲೇಷಣಾ ವಿಧಾನ
 ಊಳಿಗಮಾನ್ಯ ವ್ಯವಸ್ಥೆ ಮತ್ತು ಜನತಂತ್ರ ವ್ಯವಸ್ಥೆಯ ಹೋಲಿಕೆ, ವ್ಯತ್ಯಾಸವನ್ನು ವಿಶ್ಲೇಷಿಸುವುದು.
6. ಸಂಪನ್ಮೂಲಗಳ ಕ್ರೂಢೀಕರಣ
 ಚಿತ್ರದಲ್ಲಿ ಚರಿತ್ರೆ
 ಯೂರೋಪಿನ ಮಧ್ಯಕಾಲೀನ ಇತಿಹಾಸ ಪಾಲಕ್ಷ, ಅಕಬರಾಲಿ
 ವಿಶ್ವಕೋಶ
 ವೀಕಿ ಪೀಡಿಯಾ, ಎನ್ಸೈಕ್ಲೋಪೀಡಿಯಾ
 ಅಂತರ್ಜಾಲ - Google ಬಳಕೆ
7. ಬಳಸಬಹುದಾದ ಬೋಧನೋಪಕರಣಗಳು
 ಬರ್ಬರ ಜನಾಂಗದ ದಾಳಿ ಕುರಿತ ಚಿತ್ರಪಟ
 ವರ್ಗ ವ್ಯವಸ್ಥೆಯ ಚಿತ್ರಗಳು
 ಭೂಮಾಲೀಕತ್ವದ ದಾಖಲಾತಿಗಳು (ಪಹಣಿ, ಪಟ್ಟಿ)
ಯೂರೋಪ್ ಖಂಡ/ಪ್ರಪಂಚದ ಭೂಪಟ.
ಪಠ್ಯ ಪುಸ್ತಕ
8. ಮನನ ಮಾಡಿಕೊಳ್ಳಲೇಬೇಕಾದ ಅಂಶಗಳು
 ಸಮಾನತೆ
 ಭ್ರಾತೃತ್ವ
 ಶ್ರಮ ಮತ್ತು ದುಡಿಮೆ
 ದಬ್ಬಾಳಿಕೆ ಮತ್ತು ಶೋಷಣೆ ವಿರುದ್ಧದ ಹೋರಾಟ
 ರಾಷ್ಟ್ರೀಯ ಪ್ರಜ್ಞೆ.
ಉದಾಹರಣೆ: 2
1) ಪಾಠದ ಹೆಸರು : ವಿಜಯನಗರ ಮತ್ತು ಬಹಮನಿರಾಜ್ಯ
2) ಜ್ಞಾನ ರಚನೆಗೆ ಇರುವ ಅವಕಾಶಗಳು:
ವಿಜಯನಗರ ಮತ್ತು ಬಹುಮನಿರಾಜ್ಯಗಳ ಉಗಮ.
ವಿಜಯನಗರ ಹಾಗೂ ಬಹಮನಿರಾಜ್ಯಗಳ ರಾಜವಂಶಗಳು.
ಕೃಷ್ಣದೇವರಾಯನ ಕೊಡುಗೆಗಳು.
ವಿಜಯನಗರ ಸಾಮ್ರಾಜ್ಯದ ಕಲೆ ವಾಸ್ತುಶಿಲ್ಪ, ಸಂಸ್ಕೃತಿಗಳ ಪರಿಚಯ.
ಬಹಮನಿ ಅರಸರ ಆಡಳಿತಾತ್ಮಕ ಕೊಡುಗೆಗಳು.
ಬಹಮನಿ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯಿಕ ಕೊಡುಗೆಗಳು.
ವಿಜಯನಗರ ಸಾಮ್ರಾಜ್ಯದ ಅವನತಿ/ತಾಳಿಕೋಟೆ ಕದನ.
ಬಹಮನಿ ಸಾಮ್ರಾಜ್ಯದ ಅಂತ್ಯ.
3) ವಿಮರ್ಶಾಯುಕ್ತ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು
 ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಒಂದು ಯುಗ ಪ್ರವರ್ತಕ ಟನೆ ಎಂಬುದನ್ನು ತಾರ್ಕಿಕವಾಗಿ ಚರ್ಚಿಸಿ ಕಾರಣವನ್ನು ಅರ್ಥೈಸಿಕೊಳ್ಳುವುದು.
ಸಂಗಮ, ಸಾಳುವ, ತುಳುವ ಮತ್ತು ಅರವೀಡು ರಾಜವಂಶಗಳು ವಿಜಯನಗರದ ಖ್ಯಾತಿಯನ್ನು ಜಗದ್ವಿಖ್ಯಾತಗೊಳಿಸಿದ ಸಂದರ್ಭಗಳನ್ನು ಚರ್ಚಿಸುವುದು.
ಕೃಷ್ಣದೇವರಾಯನ ಆಡಳಿತಾತ್ಮಕ ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸೈನಿಕ ಕೊಡುಗೆಗಳ ಮಹತ್ವವನ್ನು ವಿದೇಶೀಯರ ಬಣ್ಣಿಸಿರುವ ಹಿನ್ನಲೆಯಲ್ಲಿ ಒಪ್ಪಿಕೊಂಡು, ಪ್ರಸ್ತುತ ಕಾಲ ಸಂದರ್ಭದ ಆಧುನಿಕ ಸರ್ಕಾರಗಳ ಕಾರ್ಯ ವೈಖರಿಯ ಬಗ್ಗೆ ಹೋಲಿಸಿ, ತೀರ್ಮಾನ ಕೈಗೊಳ್ಳುವುದು.
ಒಂದು ದೇಶದ/ಸಾಮ್ರಾಜ್ಯದ ಸಾಂಸ್ಕೃತಿಕ ಹಿರೆಮೆಗೆ ಅಲ್ಲಿನ ರಾಜರ/ಸರಕಾರದ ಸಾಹಿತ್ಯದ ಪ್ರೋತ್ಸಾಹವನ್ನು ಹೇಗೆ ಅವಲಂಬಿಸಿರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳುವರು.
ದೇಶದ ಜನರ ನೆಮ್ಮದಿ ಅಲ್ಲಿನ ರಕ್ಷಣೆಯನ್ನು ಅವಲಂಬಿಸಿರುತ್ತದೆ ಎನ್ನುವ ಹಿನ್ನಲೆಯಲ್ಲಿ ರಾಷ್ಟ್ರರಕ್ಷಣೆಗೆ ಕೃಷ್ಣದೇವರಾಯನೂ ಸೇರಿದಂತೆ ವಿಜಯನಗರದ ಅರಸರು ಹೇಗೆ ಯುವ ಶಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದರು ಎಂಬುದನ್ನು ಸ್ಮರಿಸಿಕೊಂಡು ಇಂದಿನ ಭಾರತದಂತಹ ರಾಷ್ಟ್ರದ ರಕ್ಷಣೆಯಲ್ಲಿ ಯುವಶಕ್ತಿಯ ಮಹತ್ವವನ್ನು ಗಮನಕ್ಕೆ ತಂದುಕೊಳ್ಳುವರು.
ವಿಜಯನಗರ ಸಾಮ್ರಾಜ್ಯದಲ್ಲಿನ ಸಾಮಾಜಿಕ, ಧಾರ್ಮಿಕ, ಆಕ ಸಮಾನತೆಯು ಅಂದಿನ ಆ ಸಮಾಜದ ಏಳಿಗೆ ಕಾರಣವಾಗಿದ್ದು ಈ ಕಾಲಟ್ಟದ ಅಸಮಾನತೆಯ ಪ್ರಸ್ತುತ ಸಂದರ್ಭಕ್ಕೆ ವಿಜಯನಗರದ ಇಂತಹ ಸಂದೇಶದ ಅನುಷ್ಠಾನದ ಅನಿವಾರ್ಯತೆಯನ್ನು ತೀರ್ಮಾನಕ್ಕೆ ತಂದುಕೊಳ್ಳುವರು.
ವಿಜಯನಗರ ಸರ್ವಧರ್ಮ ಸಹಿಷ್ಣುತೆಯು ಇಂದಿನ ಸಮಾಜದ ಒಡಕುಗಳಿಗೆ ಹೇಗೆ ಮಾದರಿಯಾಗಿ ನಿಲ್ಲಬಲ್ಲದು ಮತ್ತು ಸರ್ವಧರ್ಮಗಳನ್ನು ಸಮಾನತೆಯಿಂದ ಕಾಣುವ ಮನೋಭಾವನೆ ವಿಜಯನಗರದ ಅರಸರ ಇಂತಹ ನೀತಿಗಳು ಪಾಠವಾಗಲಿ ಎಂದು ಹೆಮ್ಮೆಯೆಂದು ತಿಳಿದುಕೊಳ್ಳುವರು.
ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈವಿಧ್ಯತೆಗೆ ಸಂಬಂಧಿಸಿದಂತೆ ಆ ಕಾಲದ ಶಿಲ್ಪಗಳ ಕಲಾ ನೈಪುಣ್ಯ ಅವರ ಕುಶಲತೆ, ತಾಳ್ಮೆಯನ್ನು ಮೆಚ್ಚಿಕೊಳ್ಳುವರು.
ದ್ವೇಷದಿಂದ ದ್ವೇಷವೇ ಬೆಳೆಯುತ್ತದೆ ಎಂಬ ಸಂದೇಶದಂತೆ ರಾಮರಾಯನು ಬಹಮನಿ ಸುಲ್ತಾನರ ಮೇಲೆ ತೀರಿಸಿಕೊಂಡ ಪ್ರತೀಕಾರ ಭಾವನೆ ಹೇಗೆ ಒಂದು ಭವ್ಯ ಸಾಮ್ರಾಜ್ಯವನ್ನು ಸರ್ವನಾಶ ಮಾಡಿತು ಎಂಬ ಎಚ್ಚರವನ್ನು ತಮ್ಮದಾಗಿಸಿ ಕೊಳ್ಳುವರು.
ದ್ರಾವಿಡ ಶೈಲಿಯ ಶ್ರೇಷ್ಠ ವಿಕಸಿತ ರೂಪದಂತಿರುವ ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಇಂದಿನ ಎಲ್ಲಾ ಸಂಗೀತ, ನೃತ್ಯದ ಮೂಲ ನೆಲೆಯಂತಿರುವ ವಿಜಯನಗರ ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಮೆಚ್ಚಿಕೊಳ್ಳುವರು.
ಒಬ್ಬ ಶ್ರೇಷ್ಠ ಪ್ರಧಾನ ಮಂತ್ರಿಯಿಂದ ಅಲ್ಲಿನ ಆಳರಸರ ಅದಕ್ಷತೆ ನಡುವೆಯೂ ಒಂದು ವಿಶಾಲ ಸಾಮ್ರಾಜ್ಯದ ಸ್ಥಾಪನೆಗೊಳ್ಳಲು ಸಾಧ್ಯವಾಗುವ ಬಗೆಯನ್ನು ಬಹಮನಿ ಸುಲ್ತಾನರ ಪ್ರಧಾನಮಂತ್ರಿ ಮಹಮದ್ ಗವಾನರ ಸಾಧನೆಯ ಅಡಿಯಲ್ಲಿ ಅರ್ಥೈಸಿಕೊಳ್ಳುವರು.
ಇಂದಿನ ಸಮಾಜದೊಳಗಣ ಮತೀಯ ಗಲಬೆ ಮತ್ತು ಅಶಾಂತಿಯ ಸನ್ನಿವೇಶಗಳನ್ನು ಸರಿಪಡಿಸುವಲ್ಲಿ ಇಬ್ರಾಹಿಂ ಆದಿಲ್ ಷಾರವರ ಕಿತಾಬ್ -ಎ- ನವರಸ ಕೃತಿಯು ಎಲ್ಲಾ ಧರ್ಮೀಯರಲ್ಲಿ ಸಾಮರಸ್ಯದ ಬದುಕನ್ನು ಬಿಂಬಿಸುವಲ್ಲಿ ಕೃತಿಯೊಳಗಣ ಮತೀಯ ಉದಾರತೆಯ ಅಂಶಗಳು ಹೇಗೆ ಸಾಕ್ಷಿಯಾಗುತ್ತವೆ ಎಂಬುದನ್ನು ತಿಳಿಯುವರು.
ವಿಜಯನಗರದ ವೈಭವಯುತ ಸಾಮ್ರಾಜ್ಯದ ನಿದರ್ಶನವಾಗಿ ಮುತ್ತುರತ್ನ ಹವಳಗಳನ್ನು ಬೀದಿಗಳಲೆಲ್ಲಾ ಮಾರುತ್ತಿದ್ದು ವ್ಯವಸ್ಥೆಯೊಂದಿಗೆ ಇಂದಿನ ಚಿನ್ನ ಬೆಳ್ಳಿಯ ಬೆಲೆಯನ್ನು ಅರ್ಥೈಸಿಕೊಂಡು ಆ ಕಾಲದ ವೈಭವವನ್ನು ಕಲ್ಪಿಸಿಕೊಳ್ಳುವುದು.
ಇಂದಿನ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಬರುವ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಾಡಳಿತ ವ್ಯವಸ್ಥೆಯ ರಚನೆ ಬಹುತೇಕ, ಬಹುಮನಿ ಅರಸರ ಕಾಲದ ಪ್ರಾಂತ, ಸರ್ಕಾರ್ ಮತ್ತು ಗ್ರಾಮಗಳ ಆಡಳಿತ ವ್ಯವಸ್ಥೆಯಲ್ಲಿ ರೂಪುಗೊಂಡಿರು ವಂತಿದೆ ಎಂಬುದನ್ನು ಅಧಿಕಾರ ವಿಕೇಂದ್ರೀಕರಣದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಪರಿಕಲ್ಪನೆಯನ್ನು ಸ್ವೀಕರಿಸಿಕೊಳ್ಳುವರು.
ಪ್ರಸ್ತುತ ನಮ್ಮೊಳಗಿರುವ ಕಂದಾಯ, ಸೈನ್ಯ ಮತ್ತು ನ್ಯಾಯಾಂಗ ವ್ಯವಸ್ಥೆಯು ಬಹಮನಿ ಸುಲ್ತಾನರ, ಕಂದಾಯ, ಸೈನ್ಯ ನ್ಯಾಯಾಡಳಿತದ ಮುಂದುವರೆದ ಭಾಗದಂತಿದೆ ಎಂಬುದನ್ನು ಹೋಲಿಸಿ ತೀರ್ಮಾನ ಕೈಗೊಳ್ಳುವರು.
ಬಹಮನಿ ಸುಲ್ತಾನರಲ್ಲಿ ಕೃಷಿಯೇ ಪ್ರಮುಖ ಉದ್ಯೋಗವಾಗಿದ್ದು ಇಂದಿನಂತೆಯೇ ಅನೇಕ ಕುಲ ಕಸುಬುಗಳು, ಜನರ ಜೀವನೋಪಾಯಕ್ಕೆ ಪೂರಕವಾಗಿದ್ದವು. ಹಾಗೂ ಚಿನ್ನ ಬೆಳ್ಳಿಯ ನಾಣ್ಯಗಳ ಜೊತೆಗೆ ವಿದೇಶೀ ವ್ಯಾಪಾರ ಜಾತಿಪದ್ಧತಿ, ಪಿತೃಪ್ರಧಾನ ಕುಟುಂಬ ಮತ್ತು ಸ್ತ್ರೀ ಬದುಕಿನ ಬಗ್ಗೆ ಕೆಲವು ನಿಬಂಧನೆಗಳೂ ಇದ್ದವು ಎಂಬುದನ್ನು ಅರ್ಥೈಸಿಕೊಂಡು ಪ್ರಸಕ್ತ ಸಾಮಾಜಿಕ ಜೀವನ ಐತಿಹಾಸಿಕ ಹಿನ್ನಲೆಯಿಂದಲೇ ಮುಂದುವರೆದಿದೆ ಎಂಬ ತೀರ್ಮಾನಕ್ಕೆ ಬರುವರು.
ಬಹಮನಿ ಸುಲ್ತಾನರ ಆಡಳಿತದಲ್ಲಿ ರಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವಿದ್ದು, ಮತ, ಕಾನೂನು, ಕಾವ್ಯ, ಅಲಂಕಾರಶಾಸ್ತ್ರ, ಖಗೋಳಶಾಸ್ತ್ರ, ವ್ಯಾಕರಣ, ಗಣಿತ, ತತ್ವಶಾಸ್ತ್ರ, ಇತಿಹಾಸ, ರಾಜನೀತಿ ವಿಷಯಗಳ ಅಧ್ಯಯನದ ಮೂಲಕ ಬಾಗಿನ ಕಟ್ಟಿಕೊಳ್ಳುವುದಾಗಿತ್ತು ಎಂಬುದನ್ನು ಶೈಕ್ಷಣಿಕ ಮಹತ್ವದ ಹಿನ್ನಲೆಯಲ್ಲಿ ಸ್ಮರಿಸಿಕೊಳ್ಳುವರು.
4) ಜ್ಞಾನ ಪುನರ್ರಚನೆಗಿರುವ ಅವಕಾಶಗಳು
 ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಕಾರಣ ಉದಾ: 14ನೇ ಶತಮಾನದಲ್ಲಿ ದಕ್ಷಿಣ ಭಾರತದೊಳಗಣ ರಾಜಕೀಯ ಅಭದ್ರತೆ, ಅಸ್ಥಿರತೆ, ಕ್ಷೋಭೆ, ಭಯ ಮತ್ತು ಧಾರ್ಮಿಕ ವಿಪ್ಲವಗಳು ಹೇಗೆ ಕಾರಣವಾದವು ಎಂಬುದನ್ನು ತಿಳಿಸುವುದು.
ವಿಜಯನಗರ ಅರಸರುಗಳಲ್ಲಿ ಮುಖ್ಯರಾದಂತಹ ಹರಿಹರ, ಬುಕ್ಕರಾಯ, ಎರಡನೇ ದೇವರಾಯ ಮತ್ತು ಶ್ರೀಕೃಷ್ಣದೇವರಾಯ ಸಾಮ್ರಾಜ್ಯ ವಿಸ್ತರಣೆಯಲ್ಲಿ ಅವರು ಅನುಸರಿಸಿದ ನೀತಿ, ನಿಲವು ಮತ್ತು ಧೈರ್ಯ ಉತ್ಸಾಹಗಳನ್ನು ಮತ್ತು ರಾಜ್ಯ ರಕ್ಷಣೆಯ ಬದ್ಧತೆಯ ಜ್ಞಾನವನ್ನು ಕಟ್ಟಿಕೊಳ್ಳುವರು.
ರಾಜನಾದವನು ತನ್ನ ಸಮಕಾಲೀನ ರಾಜರನ್ನು ಹಾಗೂ ವಿದೇಶೀ ರಾಜರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಹಾಗೂ ಸಂಬಂಧವನ್ನು ಕಟ್ಟಿಕೊಳ್ಳುತ್ತಿದ್ದ ರೀತಿಯನ್ನು ಇಂದಿನ ವಿದೇಶಾಂಗ ನೀತಿಯ ಪರಿಕಲ್ಪನೆಯೊಂದಿಗೆ ಕಲ್ಪಿಸಿಕೊಳ್ಳಲು ಶ್ರೀಕೃಷ್ಣ ದೇವರಾಯನ ಆಡಳಿತ ಪದ್ದತಿಯು ನೈಪುಣ್ಯತೆಯ ಜ್ಞಾನವನ್ನು ವಿನೂತನವಾಗಿ ಕಟ್ಟಿಕೊಳ್ಳುವರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತದ ಸಮಲತ್ತುಗಳು ದೊರೆಯುವಂತಹ ವ್ಯವಸ್ಥೆಯ ಅಡಿಯಲ್ಲಿ ವಿಜಯನಗರ ಮತ್ತು ಬಹಮನಿ ಅರಸರ ಅಧಿಕಾರ ವಿಕೇಂದ್ರೀಕರಣದ ನೀತಿಯು ಮಾದರಿ ಆಡಳಿತದಂತೆ ಕಂಡುಬರುತ್ತಿದೆ ಎಂಬ ಜ್ಞಾನ ವಿದ್ಯಾಗಳದ್ದಾಗುವುದು.
ಜಾತಿ ವ್ಯವಸ್ಥೆಯ ಅಡಿಯಲ್ಲಿ ಬರುವ ಕುಲ ಕಸುಬುಗಳು, ಸಮಾಜದ ಶಾಂತಿಯುತ ಚಲನೆಗೆ ಸಹಾಯವಾಗುತ್ತವೆ ಎಂಬುದನ್ನು ವಿಜಯನಗರ ಮತ್ತು ಬಹಮನಿ ಅರಸರ ಕಾಲದ ಚಮ್ಮಾರ, ಬಡಗಿ, ಅಕ್ಕಸಾಲಿಗ, ನೇಕಾರ, ಕಂಚುಗಾರ, ಕಮ್ಮಾರರ, ಕಸುಬುಗಳ ಮೂಲಕ, ಆಕ ಸ್ವಾವಲಂಬನೆಯ ಮಹತ್ವಕ್ಕೆ ಉದ್ಯೋಗಗಳು ಮುಖ್ಯ ಎಂಬ ಜ್ಞಾನ ಕಟ್ಟಿಕೊಳ್ಳುವರು.
ವಿಜಯನಗರ ಮತ್ತು ಬಹಮನಿ ಅರಸರ ಆಡಳಿತ ಪದ್ಧತಿಯಲ್ಲಿ ಇದ್ದಂತಹ ತೆರಿಗೆ ವಸೂಲಾತಿ ಭೂ ಹಿಡುವಳಿ, ವಿದೇಶೀ ವ್ಯಾಪಾರ, ವ್ಯವಸ್ಥೆ ಬಗ್ಗೆ ಅರಿತುಕೊಂಡು, ಆಡಳಿತದ ಮೇಲೆ ಬೀರುವ ಪರಿಣಾಮದ ಸದುಪಯೋಗ ಜ್ಞಾನವನ್ನು ವಿದ್ಯಾಗೆ ಉದಾಹರಣೆ ಮೂಲ ವಿವರಿಸುವುದು.
ಉದಾ: ತೆರಿಗೆಯ ಹಣವನ್ನು ನೀರಾವರಿಗೆ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿತ್ತು.
ವಿದೇಶಿ ವ್ಯಾಪಾರ ಕೊಡು-ಕೊಳ್ಳುವ ಹಿನ್ನಲೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದವು. ಚಿನ್ನ ಬೆಳ್ಳಿ ಸಾಂಬಾರ ಪದಾರ್ಥಗಳನ್ನು ರಪ್ತು ಮಾಡಿ ಕುದುರೆ, ಮದ್ಯ, ಸೈನಿಕರು, ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು.
ವಿಜಯನಗರ ಮತ್ತು ಬಹಮನಿ ಸುಲ್ತಾನರ ಸಾಂಸ್ಕೃತಿಕ ಪರಂಪರೆ ಇಂದಿಗೂ ಮಾದರಿಯಾಗಿದೆ ಹಾಗೂ ಮುಂದುವರೆಯುತ್ತಲೇ ಇದೆ.
ಉದಾ: ಶ್ರೀಕೃಷ್ಣ ದೇವರಾಯನ ಆಮುಕ್ತ ಮೌಲ್ಯದ, ಎರಡನೇ ಇಬ್ರಾಹಿಂ ಆದಿಲ್ಶಾನ ಮತೀಯ ಉದಾರತೆ ಕುರಿತು ಜ್ಞಾನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು - ಸಾಂಸ್ಕೃತಿಕ ಸಾಮರಸ್ಯದ ಸಂಕೇತವಾಗಿ ಇಂದಿಗೂ ಹಂಪೆಯಲ್ಲಿ ಕಂಡುಬರುವ ಗುಡಿ, ಚರ್ಚು ಮಸೀದಿಗಳ ನಿರ್ಮಾಣ ಕುರಿತು ವೈಚಾರಿಕತೆ ಬೆಳೆಸುವುದು. 5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಳ್ಳಲು ಇರುವ ಅವಕಾಶಗಳು
 ವಿದ್ಯಾರಣ್ಯ ಮಹರ್ಷಿಗಳು ಹಕ್ಕ ಬುಕ್ಕರಿಗೆ ಉಪದೇಶ ಮಾಡುವುದರೊಂದಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಸಂದರ್ಭವನ್ನು ನಾಟಕಾಭಿನಯದ ಮೂಲಕ ಪ್ರದರ್ಶಿಸುವಂತೆ ತಿಳಿಸುವುದು.
ಎರಡನೇ ಪ್ರೌಢದೇವರಾಯ ಮತ್ತು ಕೃಷ್ಣದೇವರಾಯನ ಸಾಧನೆಗಳನ್ನು ಕುರಿತು ಪ್ರಬಂಧ ಮಂಡನೆ ಮಾಡುವುದು.
ವಿಜಯನಗರ ಮತ್ತು ಬಹಮನಿ ಸುಲ್ತಾನರ ಆಡಳಿತಾತ್ಮಕ ಅಂಶಗಳನ್ನು ತರಗತಿಯಲ್ಲಿ ಗುಂಪುಗಳ ಮೂಲಕ ಚರ್ಚಿಸಿ, ಸಾಮ್ಯತೆ ಕಂಡುಬರುವ ಅಂಶಗಳನ್ನು ಪಟ್ಟಿಮಾಡುವುದು.
ವಿಜಯನಗರ ಮತ್ತು ಬಹಮನಿ ಅರಸರ ಕಾಲದ ಕಲೆ ವಾಸ್ತುಶಿಲ್ಪಗಳ ವ್ಯತ್ಯಾಸಗಳನ್ನು ಕಲಿಕಾ ನಿಲ್ದಾಣಗಳಲ್ಲಿ ಚರ್ಚಿಸಿ, ತೀರ್ಮಾನಗಳನ್ನು ಕೈಗೊಳ್ಳುವುದು.
ತೆರಿಗೆ ಪದ್ಧತಿ, ಭೂಹಿಡುವಳಿ ಪದ್ಧತಿ, ಅಧಿಕಾರ ವಿಕೇಂದ್ರೀಕರಣ ಕುರಿತ ಪ್ರಶ್ನಾವಳಿಗಳನ್ನು ತಯಾರಿಸುವುದು.
ರಾಮರಾಯ ಅನುಸರಿಸಿದ ಬಹಮನಿ ಸುಲ್ತಾನರ ಬಗೆಗಿನ ಪ್ರತೀಕಾರ ನೀತಿಯೇ ವಿಜಯನಗರದ ಅವನತಿಗೆ ಕಾರಣವಾಯಿತು ಎಂಬ ವಿಚಾರವಾಗಿ ಚರ್ಚಾಸ್ಪರ್ಧೆ ಏರ್ಪಡಿಸುವುದು.
ಮಹಮದ್ ಗವಾನನ ನಿಷ್ಠೆ, ಸೇವೆ ಕುರಿತು ಟಿಪ್ಪಣಿ ರಚಿಸಲು ತಿಳಿಸುವುದು.
ರಸಪ್ರಶ್ನೆ, ಪರೀಕ್ಷೆಗಳನ್ನು ನಡೆಸುವುದು.
ವಿಜಯನಗರ ಮತ್ತು ಬಹಮನಿ ಸಾಮ್ರಾಜ್ಯದ ವ್ಯಾಪ್ತಿ ಎಲ್ಲವನ್ನು ಕುರಿತು ಭೂಪಟ ರಚಿಸುವುದು.
ವಿಜಯನಗರ ಮತ್ತು ಬಹಮನಿ ರಾಜರುಗಳ ಕಾಲದ ವಿದೇಶೀ ವ್ಯಾಪಾರದ ಬಂದರುಗಳನ್ನು ಭೂಪಟದಲ್ಲಿ ಗುರುತಿಸುವುದು.
ದೇಶ ಪ್ರೇಮ ರಾಷ್ಟ್ರ ರಕ್ಷಣೆ ಹಿಂದೂ ಮುಸ್ಲಿಂ ಸಾಮರಸ್ಯವನ್ನು ತೋರಿಸುವ ಟನೆಗಳನ್ನು ಸ್ವ ಅನುಭವಿಸಿದ ವಿದ್ಯಾಗಳಿಂದ ಹೇಳಿಸುವುದು.
6) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
> ಘಟಕ ಪದ್ಧತಿ: ವಿಜಯನಗರ ಮತ್ತು ಬಹಮನಿ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು ಪಾಠಭಾಗವನ್ನು ಟಕಗಳನ್ನಾಗಿ ವಿಭಾಗಿಸಿಕೊಂಡು ಕಲಿವನ್ನುಂಟು ಮಾಡುವುದು.
ಉದಾ : ವಿಜಯನಗರ ಸ್ಥಾಪನೆ
2ನೇ ಪ್ರೌಢದೇವರಾಯ
 ಕೃಷ್ಣದೇವರಾಯ
 ವಿಜಯನಗರ ಸಾಮ್ರಾಜ್ಯ ಪಥನ
 ವಿಜಯನಗರದ ಕೊಡುಗೆಗಳು
 ಮಹಮದ್ ಗವಾನ
 ಇಬ್ರಾಹಿಂ ಆದಿಲ್ಷಾ
 ಬಹಮನಿ ರಾಜ್ಯದ ಆಕ ಸಾಮಾಜಿಕ, ಧಾರ್ಮಿಕ ವ್ಯವಸ್ಥೆ.
> ವೀಕ್ಷಣಾ ವಿಧಾನ: ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಚಿತ್ರಪಟಗಳನ್ನು ತರಗತಿಯಲ್ಲಿ ಪ್ರದರ್ಶಿಸಿ ವೀಕ್ಷಿಸುವುದರ ಮೂಲಕ ಕಲಿವಿನ ಅವಕಾಶವನ್ನು ಕಲ್ಪಿಸುವುದು.
ಉದಾ : * ವಿರೂಪಾಕ್ಷ ದೇವಾಯಲದ ಚಿತ್ರಪಟ
 ಶ್ರೀ ಕೃಷ್ಣದೇವರಾಯನ ಚಿತ್ರ
 ಬಿಜಾಪುರದ ಗೋಲ್ಗುಂಬಸ್ ಚಿತ್ರ
 ಬೀದರ್ ಕೋಟೆ ಮತ್ತು ಜಾಮಿಯಾ ಮಸೀದಿಗಳ ಚಿತ್ರ
> ಪ್ರವಾಸ ವಿಧಾನ: ವಿಜಯನಗರ ಮತ್ತು ಬಹಮನಿ ಅರಸರು ಆಳ್ವಿಕೆ ನಡೆಸಿದ ಸ್ಥಳಗಳಾದ ಹಂಪಿ ಮತ್ತು ಬಿಜಾಪುರ, ಬೀದರ್ಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಮಾರಕಗಳನ್ನು ವೀಕ್ಷಿಸಿ ಕಲಿವನ್ನುಂಟು ಮಾಡುವುದು. ಈ ವಿಧಾನಗಳ ಜೊತೆಗೆ ಸಮಾಜ ವಿಜ್ಞಾನ ಕಲಿಕೆಯಲ್ಲಿ ಸಂಶೋಧನಾ ವಿಧಾನ ಮತ್ತು ಪ್ರಶ್ನೋತ್ತರ ವಿಧಾನಗಳನ್ನು ಬಳಸಿಕೊಳ್ಳಬಹುದು.
7) ಸಂಪನ್ಮೂಲಗಳ ಕ್ರೂಢೀಕರಣಗಳು
9ನೇ ತರಗತಿ ಪಠ್ಯಪುಸ್ತಕ
 ದಕ್ಷಿಣ ಭಾರತದ ಇತಿಹಾಸ - ಅಕಬರಾಲಿ
 ಚಿತ್ರದಲ್ಲಿ ಚರಿತ್ರೆ
 ಹಂಪಿ ಮತ್ತು ಬಿಜಾಪುರ ಬೀದರ್ನಲ್ಲಿರುವ ಐತಿಹಾಸಿಕ ಸ್ಮಾರಕಗಳ ಚಿತ್ರಪಟ.
ಮೋಹನ ತರಂಗಿಣಿ - ಕನಕದಾಸರು, ಕಾ.ತ. ಚಿಕ್ಕಣ್ಣ
 ಅಂತರ್ಜಾಲ. ಗೂಗಲ್.ಕಾಮ್
 ಎನ್ಸೈಕ್ಲೋಪೀಡೀಯ.
8) ಬೋಧನೋಪಕರಣಗಳು
- ದಕ್ಷಿಣ ಭಾರತದ ಭೂಪಟ
- ಪ್ರಪಂಚದ ಭೂಪಟ
- ಹಂಪಿಯ ಚಿತ್ರಪಟಗಳು
- ಬಿಜಾಪುರ/ಬೀದರ್ನ ಐತಿಹಾಸಿಕ ಸ್ಮಾರಕಗಳ ಚಿತ್ರಗಳು
- ಅಧಿಕಾರ ಶ್ರೇಣೀಕೃತ (ವಿಕೇಂದ್ರೀಕರಣ) ಕುರಿತ ಚಾರ್ಟ್ಗಳು
- ಸರ್ವಧರ್ಮ ಸಮನ್ವಯದ ಚಿತ್ರಪಟಗಳು
9) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಸಾಮರಸ್ಯದ ಆಡಳಿತ ಪದ್ಧತಿ
- ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ
- ವ್ಯಾಪಾರದ ಮಹತ್ವ
- ಕಲೆ ಮತ್ತು ವಾಸ್ತುಶಿಲ್ಪದ ಶ್ರೀಮಂತಿಕೆ
- ರಾಷ್ಟ್ರರಕ್ಷಣೆ, ದೇಶಪ್ರೇಮಗಳಲ್ಲಿ ಪ್ರಜೆಗಳ ಪಾತ್ರ.
- ಸಮಾಜಮುಖಿ ಸಾಹಿತ್ಯ ರಚನೆಯ ಮಹತ್ವ.
- ವಿಜಯನಗರ ವೈಭವದ ಪರಿಕಲ್ಪನೆ.
- ಪ್ರತೀಕಾರದ ರಾಜನೀತಿಯನ್ನು ಕೈಬಿಡುವುದು.
- ಸೋತ ಮನಸ್ಸುಗಳನ್ನು ಸಂತೈಸುವುದು.
- ಸಾಂಸ್ಕೃತಿಕ ಪರಂಪರೆಗಳನ್ನು ಪರಸ್ಪರ ಗೌರವಿಸುವುದು.
ಉದಾಹರಣೆ: 3
ಪಾಠದ ಹೆಸರು : ಆಧುನಿಕ ಯೂರೋಪ್
ಜ್ಞಾನಾರ್ಜನೆಗೆ ಇರುವ ಅವಕಾಶಗಳು:
- ಯೂರೋಪ್ ಖಂಡದ ಪರಿಕಲ್ಪನೆ
- ಪುನರುಜ್ಜೀವನಕ್ಕೆ ಅರ್ಥ
- ಪುನರಜ್ಜೀವನಕ್ಕೆ ಕಾರಣ ಮತ್ತು ಪರಿಣಾಮಗಳು
- ಪುನರುಜ್ಜೀವನದ ಲಕ್ಷಣಗಳು
- ಪುನರುಜ್ಜೀವನ ಕಾಲದ ಸಾಹಿತ್ಯ, ಕಲೆ, ವಾಸ್ತುಶಿಲ್ಪ, ವಿಜ್ಞಾನ
- ಭೌಗೋಳಿಕ ಅನ್ವೇಷಣೆ ಅರ್ಥ
- ಭೌಗೋಳಿಕ ಅನ್ವೇಷಣೆಗೆ ಕಾರಣಗಳು.
- ಭೌಗೋಳಿಕ ಅನ್ವೇಷಣೆಗಳು ಪರಿಣಾಮಗಳು
- ಮತ ಸುಧಾರಣೆ ಅರ್ಥ ಮತ್ತು ಮಾರ್ಟಿನ್ ಲೂಥರ್ಕಿಂಗ್
- ಮತ ಸುಧಾರಣೆಯ ಪರಿಣಾಮಗಳು
- ಪ್ರತಿ ಸುಧಾರಣೆ ಮತ್ತು ಇಗ್ನೇಷಿಯಸ್ ಲಯೋಲ
- ಕೈಗಾರಿಕಾ ಕ್ರಾಂತಿ, ಅರ್ಥ, ಕಾರಣಗಳು
- ಕೈಗಾರಿಕಾ ಕ್ರಾಂತಿಯ ಪರಿಣಾಮಗಳು
ವಿಮರ್ಶಾಯುಕ್ತ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು
- ಕಾನ್ಸ್ಟಾಂಟಿನೋಪಲ್ ಟನೆ ಹೇಗೆ ಯೂರೋಪಿನಲ್ಲಿ ಪುನರುಜ್ಜೀವನದೊಂದಿಗೆ ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣೆ ಮತ್ತು ಕೈಗಾರಿಕಾ ಕ್ರಾಂತಿಗೆ ಪ್ರೇರಣೆಯಾಯಿತು ಎಂಬುದನ್ನು ಅರ್ಥೈಸಿಕೊಳ್ಳವುದರೊಂದಿಗೆ ಪ್ರೇರಣೆಯಾಯಿತು ಎಂಬುದನ್ನು ಅರ್ಥೈಸಿಕೊಳ್ಳವುದರೊಂದಿಗೆ ಒಂದು ಟನೆ ಏನೆಲ್ಲಾ ಬದಲಾವಣೆಗೆ ಕಾರಣವಾಗಿರುತ್ತದೆ ಎಂಬುದನ್ನು ಕುತೂಹಲದಿಂದ ಚರ್ಚೆ ಮಾಡಿ ತಿಳಿಯುವರು.
- ಅಂದಿನ ಸಂದರ್ಭದಲ್ಲಿ ಮಾನವತಾವಾದ ಹುಟ್ಟಿಕೊಂಡ ಸಂದರ್ಭದೊಂದಿಗೆ, ಆಧುನಿಕ ಜಗತ್ತಿನ, ಗಾಂಧಿ, ಅಂಬೇಡ್ಕರ್, ನೆಲ್ಸನ್ ಮಂಡೇಲರವರು ಈ ಮಾನವತಾವಾದದ ಪರವಾಗಿ ಹೆಜ್ಜೆ ಇಡಲು ಕಾರಣವೇನೆಂಬುದನ್ನು ತಿಳಿಯುವರು.
- ಶ್ರೇಷ್ಠ ಸಂಸ್ಕೃತಿ ಎಂದರೇನು? ಎಂಬುದನ್ನು ನೈಜ ಟನಾವಳಿಗಳೊಂದಿಗೆ ಅರ್ಥೈಸಿಕೊಂಡು ಅನುಕರಣೆ ಮಾಡುವ ಸಾಮಥ್ರ್ಯವನ್ನು ಪಡೆಯುವುದು.
- ಇಟಲಿಯ ಜ್ಞಾನ ಪುನರುಜ್ಜೀವನದ ತವರೆನಿಸಿಕೊಳ್ಳಲು ಆ ಕಾಲಟ್ಟದಲ್ಲಿ ತಂಡ ತಂಡವಾಗಿ ಇಟಲಿಗೆ ವಲಸೆ ಬಂದ ಬುದ್ಧಿ ಜೀವಿಗಳು ಕಾರಣರಾದರು ಎಂಬುದನ್ನು ಅಧ್ಯಯನ ಮಾಡುವುದರೊಂದಿಗೆ ಒಂದು ಬುದ್ಧಿ ಜೀವಿ ಜನ ಸಮೂಹ ಆಯಾ ಕಾಲದ
ವರ್ತಮಾನದ ವಿಕಾಸ ನಿರಂತರವಾಗಿ ಕಾರಣವಾಗುತ್ತಲೇ ಬಂದಿದೆ ಎಂಬುದನ್ನು ಅರಿಯುವರು.
ಉದಾ: ಪೆಟ್ರಾಕ್ - ಆಫ್ರಿಕಾ
ಬಕಾಶಿಯಾ - ಡೆಕಾಮೆರಾನ್
ಡಾಂಟೆ - ಡಿವೈನ್ ಕಾಮಿಡಿ ಕೃತಿಗಳ ಮೂಲಕ ಈ ಬುದ್ಧಿ ಜೀವಿಗಳು ಪುನರುಜ್ಜೀವನದ ಕಣ್ಣು ತೆರೆಸಿದರು.
ಊಳಿಗಮಾನ್ಯ ಪದ್ಧತಿಯ ಆಡಳಿತದಿಂದ ನೊಂದಿದ್ದ ಯೂರೋಪಿನ ಸಾಮಾನ್ಯ ಜನ ಪುನರುಜ್ಜೀವನ ಸಂದರ್ಭವನ್ನು ಸ್ವೀಕರಿಸುವಲ್ಲಿ ವಹಿಸಿದ ಪಾತ್ರವನ್ನು ಒಂದು ಹೊಸ ಸ್ವತಂತ್ರ ಬೆಳವಣಿಗೆಯ ಪರಿಕಲ್ಪನೆ ಜಗತ್ತಿನ ವಿಕಾಸಕ್ಕೆ ಹೇಗೆ ಕಾರಣವಾಯಿತು ಎನ್ನುವುದನ್ನು ಪುನರುಜ್ಜೀವನದ ಕಾರಣಗಳೊಂದಿಗೆ ಚರ್ಚಾತ್ಮಕವಾಗಿ ತಿಳಿದುಕೊಳ್ಳುವರು.
ಜನರಾಡುವ ಭಾಷೆಗಳು (ಪ್ರಾದೇಶಿಕ ಭಾಷೆ) ಪ್ರಾಬಲ್ಯಕ್ಕೆ ಬಂದಾಗ ಆ ಭಾಷೆಯನ್ನಾಡುವವರು ತಮ್ಮ ಬೌದ್ಧಿಕ ವಿಕಾಸವನ್ನು ಬೆಳಸಿಕೊಳ್ಳುವುದರೊಂದಿಗೆ ಸಾಮಾಜಿಕ ಸ್ಥಿತ್ಯಂತರಗಳು ಉಂಟಾಗುವ ಬಗೆಯನ್ನು ಅರ್ಥೈಸಿಕೊಂಡು ಈ ಹಿನ್ನಲೆಯಲ್ಲಿ ಮಾತೃಭಾಷೆಯ ಮಹತ್ವವನ್ನು ಅರಿಯುವರು.
ಉದಾ: ಲ್ಯಾಟಿನ್ ಬದಲು ಪ್ರಾದೇಶಿಕ ಭಾಷೆಗಳಾದ ಇಂಗ್ಲೀಷ್, ಇಟಾಲಿಯನ್, ಫ್ರೆಂಚ್, ಜರ್ಮನ್ ಇತ್ಯಾದಿ.
ಮಾನವ ಸಹಜ ಭಾವನೆಗಳನ್ನು ಶಿಲ್ಪ ಚಿತ್ರಗಳಲ್ಲಿ ಮೂಡಿಸುವುದರೊಂದಿಗೆ, ಕಲೆಯೂ ಸಹ ಮಾನವ ನಿರ್ಮಿತ ಸಮಾಜವನ್ನು ಅರ್ಥೈಸುವಲ್ಲಿ ವಹಿಸುವ ಪಾತ್ರವನ್ನು ತಿಳಿಯುವರು.
16ನೆಯ ಶತಮಾನದಲ್ಲಿ ಬೆಳಕಿಗೆ ಬಂದ ವಿಜ್ಞಾನದ ಬೆಳವಣಿಗೆ ಪ್ರತಿಯೊಬ್ಬರಲ್ಲೂ ಏಕೆ? ಏನು? ಹೇಗೆ? ಎಂಬ ಪ್ರಶ್ನೆಗಳನ್ನು ಮೂಡಿಸಿ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯಾದ ಈ ಸಂದರ್ಭ ಪುನರುಜ್ಜೀವನ ಕಾಲದಲ್ಲಾಗಿರುವುದಕ್ಕೆ ಮೆಚ್ಚುಗೆ
ವ್ಯಕ್ತಪಡಿಸುವರು. ಹಾಗೂ ಪ್ರಸ್ತುತ ಸಂದರ್ಭದ ವಿಜ್ಞಾನದ ಮಹತ್ವವನ್ನು ಅರಿಯುವರು.
ಉದಾ: ಭೂಕೇಂದ್ರವಾದದ ಬಗ್ಗೆ ಇದ್ದಂತಹ ನಂಬಿಕೆ
ಸೂರ್ಯ ಕೇಂದ್ರವಾದ - ಕೆಪ್ಲರ್
ನ್ಯೂಟನ್ನನ - ಗುರುತ್ವಾಕರ್ಷಣೆ
ಹ್ಯಾಂಡೂವಸಾಲಯಿಸ್ನ - ಶರೀರಶಾಸ್ತ್ರ ಇತ್ಯಾದಿ.
ಪುನರುಜ್ಜೀವನವು ಸಮಾಜದಲ್ಲಿ ಮಾನವೀಯತೆಯ ಮಾರ್ಗ, ವೈಜ್ಞಾನಿಕ ಶೋಧ ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ರಾಂತಿಗೆ ಹೊಸ ಚಿಂತನೆಗೆ ನಾಂದಿ ಹಾಡಿತಲ್ಲದೆ ಮುಂದಿನ ಧಾರ್ಮಿಕ ಸುಧಾರಣೆಗಳಿಗೂ ಕಾರಣವಾದ ಸಂದರ್ಭವನ್ನು ಹಾಗೂ ಅದರ ಪರಿಣಾಮದ ಮಹತ್ವವನ್ನು ತಿಳಿಯುವರು.
16ನೇ ಶತಮಾನ ಭೌಗೋಳಿಕ ಅನ್ವೇಷಣೆಗಳ ಯುಗವಾಗಿ ಪ್ರಪಂಚದ ಅನೇಕ ಭಾಗಗಳಿಗೆ ಹೊಸ ಜಲಮಾರ್ಗಗಳನ್ನು ಕಂಡು ಹಿಡಿದ ಹಿನ್ನಲೆಯಲ್ಲಿ ಯುರೋಪಿಯನ್ನರ ಸಾಹಸ ಗಾಥೆಯನ್ನು ಕುತೂಹಲ ಮತ್ತು ಆಸಕ್ತಿಯಿಂದ ಅರ್ಥೈಸಿಕೊಳ್ಳುವರು.
ಯೂರೋಪಿಯನ್ನರ ಭೌಗೋಳಿಕ ಅನ್ವೇಷಣೆಗಳಿಗೆ ಬಹುಮುಖ್ಯ ಕಾರಣಗಳಾದ ವ್ಯಾಪಾರ, ಧರ್ಮಪ್ರಚಾರ, ಕುತೂಹಲ ಹಾಗೂ ಅರಬ್ಬರೊಂದಿಗೆ ಪೈಪೋಟಿಗಳು ಬಹು ಮುಖ್ಯ ಅಂಶಗಳಾಗಿದ್ದು ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ಇಲ್ಲಿನ
ಸಂಶೋಧನೆಗಳು ಹೊಸ ಜಲಮಾರ್ಗ ಕಂಡು ಹಿಡಿಯುವಲ್ಲಿ ವಹಿಸಿದ ಪಾತ್ರವನ್ನು ಟನೆಗಳ ಮೂಲಕ ಅರ್ಥೈಸಿಕೊಳ್ಳುವರು.
ಉದಾ: - ನಾವಿಕರ ದಿಕ್ಸೂಚಿ
- ಅಸ್ಪ್ರೋಲೋಬ್, ನಕ್ಷೆಗಳು, ಭೂಪಟಗಳ ಸಂಶೋಧನೆಗಳು.
- ಭೂಮಿಯ ಗೋಳಾಕೃತಿ ತಿಳಿಯಿತು.
ಭೌಗೋಳಿಕ ಅನ್ವೇಷಣೆಗಳ ಹಿನ್ನಲೆಯಲ್ಲಿ ಬೆಳಕಿಗೆ ಬಂದ ಭೂಶೋಧನೆಗಳನ್ನು ಮಕ್ಕಳು ಹೆಚ್ಚು ಕುತೂಹಲದಿಂದ ನಾವಿಕರ ಸಾಹಸಗಳನ್ನು ಮೆಚ್ಚಿಕೊಂಡು ತಾವು ಸಾಹಸ ಪ್ರವೃತ್ತಿಯನ್ನು ರೂಪಿಸಿಕೊಳ್ಳುವಲ್ಲಿ ತೊಡಿಗಿಸಿಕೊಳ್ಳುವರು.
ಭೂ ಶೋಧನೆಗಳು ಪ್ರಾರಂಭದಲ್ಲಿ ವ್ಯಾಪಾರ, ಧರ್ಮಪ್ರಚಾರ, ಪೈಪೋಟಿಯ ಹಿನ್ನಲೆಯಲ್ಲಿ ಚಲಿಸಿ, ಮುಂದೆ ಬಲಾಡ್ಯ ರಾಷ್ಟ್ರಗಳು, ಅಬಲ ರಾಷ್ಟ್ರಗಳ ಮೇಲೆ ಸಾಮ್ರಾಜ್ಯಶಾಹಿ ಮತ್ತು ವಸಾಹತು ಶಾಹಿಯ ಪ್ರಾಭಲ್ಯವನ್ನು ಬೆಳಸಿದವಲ್ಲದೆ, ಐರೋಪ್ಯ ರಾಷ್ಟ್ರಗಳಲ್ಲಿ ಕಟ್ಟುಕೊಂಡ ಕೈಗಾರಿಕಾ ಕ್ರಾಂತಿಯಿಂದ ಬಡರಾಷ್ಟ್ರಗಳು ಮಾರುಕಟ್ಟೆ ಕೇಂದ್ರಗಳಾಗಿ ಬದಲಾಗತೊಡಗಿದವು ಎಂಬುದನ್ನು ಕಾರಣಗಳ ಮೂಲಕ ಅರ್ಥೈಸಿಕೊಳ್ಳುವರು.
ಚರ್ಚಿನ ಏಕಸ್ವಾಮ್ಯವನ್ನು ಪ್ರಶ್ನಿಸಿ ನಡೆದ ಬಂಡಾಯವೇ ಮತಸುಧಾರಣೆಯಾಗಿದ್ದು ಇದು ಹೊಸಯುಗದ ಉದಯಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ಇಂದಿನ ಧರ್ಮ, ಜಾತಿಯಿಂದ ಬಂದೊದಗಿರುವ ಅಪಾಯಕಾರಿ ಸಮಾಜದ ಸುಸ್ಥಿತಿಗೆ ತಮ್ಮ ಪಾತ್ರವೇನು ಎಂಬುದನ್ನು ಈ ಮೂಲಕ ತಿಳಿಯಲೆತ್ನಿಸುವರು.
ಚರ್ಚ್ನ ಏಕಸ್ವಾಮ್ಯವನ್ನು ಪ್ರಶ್ನಿಸಿದ ಮಾರ್ಟಿನ್ ಲೂಥರ್ ಕ್ಯಾಥೋಲಿಕ್ಕರ ಬೋಧನೆಗಳನ್ನು ಖಂಡಿಸಿ ಚರ್ಚ್ನ ಅಧಿಕಾರಗಳನ್ನು ಅವರ ಹಣದಾಹ, ಅಧಿಕಾರದಾಹ, ಬಳಸಿಕೊಳ್ಳುತ್ತಿದ್ದ ಕ್ಷಮಾಪಣೆ ಎಂಬ ಹುನ್ನಾರವನ್ನು ದಿಕ್ಕರಿಸಿ ಚರ್ಚ್ ಯಾರೊಬ್ಬರ ಸ್ವತ್ತಲ್ಲ. ಸರ್ವರನ್ನು ಸಮಾನತೆಯಿಂದ ಕಾಣುವ ಧರ್ಮ ಪ್ರಚಾರವೇ ಶ್ರೇಷ್ಠವಾದದ್ದು, ಎಂದು ೋಶಿಸಿ ಆ ಮೂಲಕ ಪ್ರಾಟಸ್ಟೆಂಟ್ ಎಂಬ ಅನುಯಾಯಿಗಳ ತಂಡದೊಂದಿಗೆ ಚರ್ಚ್ಗೆ ಹೊಸ ಭಾಷ್ಯ ಬರೆದ ಮಾರ್ಟಿನ್ ಲೂಥರ್ ಸಾಹಸ ಮತ್ತು ಧೈರ್ಯವನ್ನು ಮನದಲ್ಲಿ ಮೆಚ್ಚಿ ಅಂತಹ ಗುಣಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳುವರು.
ಮತ ಸುಧಾರಣೆಯಿಂದ ಕ್ರೈಸ್ತ ಮತದ ಅಖಂಡತೆಗೆ ಭಾರೀ ಪೆಟ್ಟುಬಿದ್ದಿತು. ಈ ಹಿನ್ನಲೆಯಲ್ಲಿ ವಿಟನೆಗೊಂಡ ಕ್ಯಾಥೋಲಿಕ್ ಅರ್ಥೋಡಾಕ್ಸ್ ಮತ್ತು ಪ್ರಾಟಸ್ಟಂಟ್ ಗುಂಪುಗಳು ಬೆಳೆಯತೊಡಗಿ ರಾಜರು ಸ್ವತಂತ್ರರಾಗತೊಡಗಿ ರಾಷ್ಟ್ರೀಯ ಪ್ರಭುತ್ವಗಳು ಉದಯವಾಗತೊಡಗಿದ ಸಂದರ್ಭವನ್ನು ಇತಿಹಾಸದ ಮಹತ್ವ ವರ್ತಮಾನದ ಜೀವಂತಿಕೆಯ ಮೇಲೆ ಉಂಟು ಮಾಡುವ ಪರಿಣಾಮವನ್ನು ಆಶ್ಚರ್ಯದಿಂದ ಗ್ರಹಿಸಿಕೊಳ್ಳುವರು.
ಮತ ಸುಧಾರಣೆಯಿಂದಾದ ಪ್ರಾಟಸ್ಟಂಟರ ಪ್ರಭಾವನ್ನು ತಪ್ಪಿಸಲು ಮತ್ತೆ ಕ್ಯಾಥೋಲಿಕ್ ಗುಂಪು ಚರ್ಚ್ನಲ್ಲಿ ಆಂತರಿಕವಾದ ಸುಧಾರಣೆಗಳನ್ನು ಪರಿಹಾರಗಳನ್ನು ತರುವ ಪ್ರಯತ್ನ ಪ್ರಾರಂಭಿಸಿತು. ಈ ಸಂಬಂಧ ಇಗ್ನೇಷಿಯಸ್ ಲಯೋಲ ಎಂಬುವನು `ಜೀಸಸ್' ಎಂಬ ಸೊಸೈಟಿಯನ್ನು ಹುಟ್ಟು ಹಾಕುವುದರ ಮೂಲಕ, ಕಳೆದು ಹೋಗುತ್ತಿರುವ ಕ್ಯಾಥೋಲಿಕ್ ಚರ್ಚ್ನ ಖ್ಯಾತಿಯನ್ನು ಕಟ್ಟುವ ಪ್ರಯತ್ನದ ಮಾನವ ಸಹಜಗುಣದ ವರ್ತನೆಗಳನ್ನು ತಮ್ಮ ಸಮಾಜದ ಸುತ್ತಲ ಜನರೊಂದಿಗೆ ಹೋಲಿಸಿ ಕೊಳ್ಳುವರು.
ವಸಾಹತುಗಳ ಸ್ಥಾಪನೆಯಿಂದ ವ್ಯಾಪಾರ ಹೆಚ್ಚಿ, ಸಿದ್ಧಪಡಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಿ ಲಾಭಗಳಿಕೆಯ ಪ್ರಮಾಣವು ಹೆಚ್ಚಾಗತೊಡಗಲು ಕಾರಣ ಉತ್ಪಾದನೆಯಲ್ಲಿ ಹೊಸ ವಿಧಾನಗಳು ಸಾರಿಗೆ ಕ್ಷೇತ್ರಗಳ ಬದಲಾಣೆಗಳೇ ಇಂಗ್ಲೇಡ್ನಲ್ಲೂ ಕಂಡುಬಂದುದರಿಂದ ಕ್ರಿ.ಶ. 1760 ರಿಂದ 1830ರ ವರೆಗಿನ ಈ ಅವಧಿ ಕೈಗಾರಿಕಾ ಕ್ರಾಂತಿಯುಗವೆಂದು ಪರಿಗಣಿಸಲ್ಪಟ್ಟ ವಿಜ್ಞಾನದ ಬೆಳವಣಿಗೆ ಹಿನ್ನಲೆಯ ಸಂದರ್ಭವನ್ನು ಉದಾಹರಣೆಗಳ ಮೂಲಕ ತಿಳಿಯುವರು.
ಉದಾ: ಸ್ಯಾಮ್ಯುಯಲ್ ಕ್ರಾಮ್ಟನ್ - ಮ್ಯೂಲ್ಯಂತ್ರ
ಎಲಿವಿಟ್ನ - ಕಾಟನ್ಜಿನ್
ಜೇಮ್ಸ್ವ್ಯಾಟ್ - ಹಾವಿಯಯಂತ್ರ
ಜಾರ್ಚ್ ಸ್ಟೀವನ್ಸನ್ - ರೈಲು ಬಂಡಿ ಇತ್ಯಾದಿ.
ಕೈಗಾರಿಕಾ ಕ್ರಾಂತಿಯಿಂದ ಯಂತ್ರಗಳ ಬೇಡಿಕೆ ಹೆಚ್ಚಿ, ಆಕ ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆಗಳು ಉಂಟಾದವಲ್ಲದೆ ಹೊಸ ಕೈಗಾರಿಕೆಗಳು ಹುಟ್ಟುಕೊಂಡು ಉತ್ಪಾದನಾ ವೆಚ್ಚ ಕಡಿಮೆಯಾಗಿ ಜೀವನಾವಶ್ಯಕ ವಸ್ತುಗಳು ಅಗ್ಗವಾಗಿ ದೊರೆಯತೊಡಗಿ ಗುಡಿ ಕೈಗಾರಿಕೆಗಳು ನಾಶವಾಗತೊಡಗಿ ಸಮಾಜದಲ್ಲಿ ಲಾಭಾಂಶ, ಹಣ, ಕಾರ್ಮಿಕ, ಮಾಲಿಕರ ನಡುವೆ ಸಾಮಾಜಿಕ ಮತ್ತು ಆಕ ತಾರತಮ್ಯ ಉಂಟಾಗಲು ಇಂತಹ ಕ್ರಾಂತಿಗಳು ಕಾರಣವಾಗುವ ಸಂದರ್ಭವನ್ನು ತಾರ್ಕಿಕವಾಗಿ ಅರ್ಥೈಸಿಕೊಳ್ಳುವರು.
ಜ್ಞಾನ ಪುನರ್ರಚನೆಗಿರುವ ಅವಕಾಶಗಳು
- ಕ್ರಿ.ಶ. 1453ರ ಕಾನ್ಸ್ಟಾಂಟಿನೋಪಲ್ ಪತನದಿಂದಾಗಿ ಪ್ರಪಂಚದ ಇತಿಹಾಸದ 15 ಮತ್ತು 16ನೇ ಶತಮಾನ ಯೂರೋಪಿನಲ್ಲಿ ಪುನರುಜ್ಜೀವನ, ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣೆ, ಕೈಗಾರಿಕಾ ಕ್ರಾಂತಿಗೆ ಕಾರಣವಾದಂತೆಯೇ ಅಂದಿನ ಊಳಿಗಮಾನ್ಯ ಪದ್ದತಿಯ ಅವನತಿಗೂ ಕಾರಣವಾದುದನ್ನು ಸಾಮ್ರಾಜ್ಯಶಾಹಿ ಧೋರಣೆ ಇಂದಿನ ಟನಾವಳಿಗಳೊಂದಿಗೆ ತೌಲನಿಕ ಜ್ಞಾನವನ್ನು ಕಟ್ಟಿಕೊಳ್ಳುವರು.
ಉದಾ: - ಇಂದಿನ ಸಾಮ್ರಾಜ್ಯಶಾಹಿ ದೊರೆಗಳಂತೆ ಕಂಡು ಬರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಸ್ಥಾಪನೆ
- ಜ್ಞಾನಸ್ಪೋಟದ ಪರಿಣಾಮಗಳು
- ಚಂದ್ರ ಮತ್ತು ಮಂಗಳ, ಗುರು ಗ್ರಹಗಳ ಕುರಿತ ಅನ್ವೇಷಣೆ ಮತ್ತು ಹುಡುಕಾಟ
- ನಗರೀಕರಣ ವ್ಯವಸ್ಥೆ
- ವಿಶ್ವಭ್ರಾತೃತ್ವದ ಪರಿಕಲ್ಪನೆಗಳು
 ಯೂರೋಪಿನಲ್ಲುಂಟಾದ ಪುನರುಜ್ಜೀವನ ಸಂದರ್ಭವು ಹೆಚ್ಚಾಗಿ ಮಾನವತವಾದ, ಶ್ರೇಷ್ಠಾನುಕರಣೆಗೆ, ಜನರನ್ನು ತರಲೆತ್ನಿಸಲು ಅಂದಿನ ಸಾಹಿತ್ಯ, ಕಲೆ, ವಾಸ್ತುಶಿಲ್ಪ ಮತ್ತು ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸಿದ ವಿಷಯವನ್ನು ಅರ್ಥೈಸಿಕೊಳ್ಳುವಾಗ ಮಕ್ಕಳು ಈ 21ನೇ ಶತಮಾನದಲ್ಲಿ ಹಾಗೂ ಈ ಎಲ್ಲ ಬುದ್ಧಿಜೀವಿಗಳ ವಿಜ್ಞಾನ, ಸಾಹಿತ್ಯ ಕಲೆಯ ಬೆಳವಣಿಗೆಯಲ್ಲಿ ಮಾನವತಾವಾದದ ಕೊರಗುವಿಕೆಗೆ ಕಾರಣಗಳೇನೆಂಬುದನ್ನು ಪ್ರಶ್ನಿಸಿ ಉದಾಹರಣೆ ಮೂಲಕ ಕಂಡುಕೊಳ್ಳುವರು.
ಉದಾ: - ಷೇಕ್ಸ್ಪಿಯರ್ ವಿರಚಿತ ನಾಟಕಗಳ ಪ್ರಸ್ತುತತೆ
- ಲಿಯೋನಾರ್ಡೋಡ ವಿಂಚಿಯ ಐಣ ಖಣಠಿಠಿಜಡಿ ಮೊನಲಿಸಾ ಕಲಾಕೃತಿಗಳು.
- ವಿಜ್ಞಾನದ ಆವಿಷ್ಕಾರದಿಂದಾಗಿರುವ, ದಿಕ್ಸೂಚಿ, ಆಸ್ಟ್ರೋಲೋಬ್ ಈಗಿನ ಉಪಗ್ರಹ, ಬಾಂಬ್ ಬಳಕೆ, ಶಸ್ತ್ರಾಸ್ತ್ರಗಳ ತಯಾರಿ ಇತ್ಯಾದಿ.
ಜಗತ್ತಿನಲ್ಲಿ ಜ್ಞಾನವೇ ಪ್ರಬಲವಾದುದು. ಈ ಜ್ಞಾನವು ಮಾನವನ ವಿಕಾಸಕ್ಕೆ ಪೂರಕವಾಗಿರುತ್ತದೆ. ಆದ್ದರಿಂದಲೇ ಯೂರೋಪಿನಲ್ಲಿ ಜ್ಞಾನ ಪುನರುಜ್ಜೀವನ ಸಂದರ್ಭದಿಂದಾಗಿ ಇಡೀ ವಿಶ್ವದಲ್ಲಿಯೇ ವೈಜ್ಞಾನಿಕ ದೃಷ್ಟಿ ಬೆಳೆಯಿತು. ಸಾಗರ ಮಾರ್ಗಗಳ ಶೋಧನೆ, ತಂತ್ರಜ್ಞಾನ, ಕೈಗಾರಿಕಾಕ್ರಾಂತಿ ಹೊಸ ಚಿಂತನೆಗಳು, ಧಾರ್ಮಿಕ ಸುಧಾರಣೆಗಳಿಗೆ ನಾಂದಿಯಾಯಿತು ಎಂಬುದನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿಯೂ ಜ್ಞಾನದ ಮಹತ್ವವೇನು. ಇಂತಹ ಜ್ಞಾನವನ್ನು ಕಟ್ಟಿಕೊಳ್ಳಲು ತಮ್ಮ ಪಾತ್ರವೇನು ಎಂಬುದನ್ನು ಗ್ರಹಿಸಿಕೊಳ್ಳುವರು.
ಭೂ ಅನ್ವೇಷಣೆಗಳಿಂದಾಗಿ 15 ಮತ್ತು 16ನೇ ಶತಮಾನದಲ್ಲಿ ಹೊಸ ಖಂಡಗಳಾದ ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ ಮುಂತಾದ ಹೊಸ ಹೊಸ ಪ್ರದೇಶಗಳ ಪರಿಚಯವಾಯಿತು. ಈ ಹಿನ್ನಲೆಯಲ್ಲಿ ಸಾಹಸಮಯ ಪ್ರವೃತ್ತಿಯಿಂದ ಮನುಷ್ಯನು ಕಂಡು ಹಿಡಿದ ಹೊಸ ಖಂಡಗಳ ಪರಿಚಯವನ್ನು ಮಕ್ಕಳು ಮಾಡಿಕೊಳ್ಳುವುದರೊಂದಿಗೆ ತಮ್ಮ ಜೀವನದಲ್ಲಿ ಸಾಹಸ ಹಾಗೂ ಸಂಶೋಧನಾತ್ಮಕ ಗುಣಗಳನ್ನು ತಮ್ಮದಾಗಿಸಿಕೊಳ್ಳುವರು.
ಭೂ ಶೋಧನೆಗಳಿಂದಾಗಿ, ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಬೆಳವಣಿಗೆಗಳು ಅಸ್ತಿತ್ವಕ್ಕೆ ಬಂದು ಮುಂದೆ ಮಾನವ ಸಹಜ ಸ್ವಾತಂತ್ರ್ಯವನ್ನು ಕಳೆದುಕೊಂಡಂತಾಗಿ ಶ್ರೀಮಂತ ಹಾಗೂ ಬಡ ರಾಷ್ಟ್ರಗಳೆಂಬ ವೈಷಮ್ಯ, ತಾರತಮ್ಯ ಉಂಟಾಗಿ ಇಂದಿನ ಜಗತ್ತಿನ ಸ್ಥಿತಿಗೆ ಕಾರಣವಾಯಿತೆಂಬುದನ್ನು ತಿಳಿದುಕೊಂಡು ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುವರು.
ಚರ್ಚ್ನ ಏಕಸ್ವಾಮ್ಯವನ್ನು ಪ್ರಶ್ನಿಸುತ್ತಾ ಹುಟ್ಟಿಕೊಂಡ ಮತಸುಧಾರಣೆ ಮಾರ್ಟಿನ್ ಲೂಥರ್ನ ನೇತೃತ್ವದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಹೊಸಯುಗದ ಉದಯಕ್ಕೆ ಕಾರಣವಾದುದನ್ನು ತಿಳಿದುಕೊಂಡ ಮಕ್ಕಳು ತಮ್ಮ ಅಂತರಾಳದಲ್ಲಿ ವೈಜ್ಞಾನಿಕ ದೃಷ್ಟಿ ಕುತೂಹಲ ಸಮಾನತೆಯ ಅಂಶಗಳೆಂಬ ಮೌಲ್ಯಗಳನ್ನು ಗ್ರಹಿಸುವರು.
ಯೂರೋಪಿನಲ್ಲಿ ಸುಮಾರು 30 ವರ್ಷಗಳ ಕಾಲ ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಂಟರ ನಡುವೆ ನಡೆದ ಧಾರ್ಮಿಕ ಕಲಹ ದ್ವೇಶ, ಹೋರಾಟ, ಕಿರುಕುಳ, ಅಂಧಕಾರತ್ವಕ್ಕೆ ಕಾರಣವಾಗಿ, ಜನರಲ್ಲಿನ ಧಾರ್ಮಿಕ ಮನಸ್ಸುಗಳ ಅಶಾಂತಿಗೆ ನಾಂದಿಯಾಗಿ ಪ್ರಗತಿ ಶೂನ್ಯವಾಗುತ್ತದೆ. ಈ ರೂಪದ ಟನೆಗಳು ಬಹುಮತೀಯ ರಾಷ್ಟ್ರವಾಗಿರುವ ನಮ್ಮ ಭಾರತದಲ್ಲಿ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಅಂತಹ ಟನೆಗಳು ಮರುಕಳಿಸದಂತೆ ತಡೆಯಲು ತಮ್ಮ ಜವಾಬ್ದಾರಿ ಏನೆಂಬ ಜ್ಞಾನವನ್ನು ಕಟ್ಟುಕೊಳ್ಳುವರು.
ಉದಾ: ಸಿಕ್ ನರಮೇಧ
ಗೋದ್ರಾ ನರಮೇಧ, ಕ್ರೈಸ್ತರ ಚರ್ಚ್ಗಳ ಮೇಲಿನ ದಾಳಿ.
ಬಹು ಸೂಕ್ಷ್ಮವೆನಿಸಿಕೊಂಡಿರುವ ಧಾರ್ಮಿಕ ಅಪಮಾನತೆಗಳು, ಸಮಾಜದ ಏಕತೆಗೆ ಕುಂದುಂಟು ಮಾಡಿ, ಧಾರ್ಮಿಕ ಟನೆಗಳಿಗೆ ಕಾರಣವಾದ ಕ್ಯಾಥೋಲಿಕ್, ಪ್ರಾಟಿಸ್ಟಂಟ್ ಮತ್ತು ಆರ್ಥೋಡಾಕ್ಸ್ ಚರ್ಚ್ಗಳು ಹುಟ್ಟಿಕೊಂಡ ಈ ಟನೆ ಭಾರತದಂತಹ ರಾಷ್ಟ್ರಗಳಲ್ಲಿ ಇಲ್ಲಿನ ಅಖಂಡತೆಯನ್ನು ಎತ್ತಿಹಿಡಿಯುವ ಬದಲಾಗಿ ಇತ್ತೀಚೆಗೆ ಹಿಂದುಗಳೇ ಹಿಂದು ಧರ್ಮದಲ್ಲಿನ ಆಚರಣೆಗಳನ್ನು ಅನುಸರಿಸಲಾರದೆ ಮೇಲ್ಜಾತಿಯವರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲಾಗದೆ ಹಿಂದೂ ಧರ್ಮದಿಂದಲೇ ಮತಾಂತರಗೊಳ್ಳುವುದಕ್ಕೆ ಕಾರಣವೇನೆಂಬ ಜ್ಞಾನವನ್ನು ತಿಳಿದುಕೊಳ್ಳುವರು.
ಚರ್ಚಿನ ವಿಟನೆಯಿಂದ ಕ್ಯಾಥೋಲಿಕ್ ತಮ್ಮ ಪ್ರಭಾಲ್ಯವನ್ನು ಕಳೆದುಕೊಳ್ಳತೊಡಗಿದಾಗ, ಇಗ್ನೇಷಿಯಸ್ ಲಯೋಲ ಎಂಬಾತನ ನೇತೃತ್ವದಲ್ಲಿ `ಜೀಸಸ್' ಎಂಬ ಸೊಸೈಟಿ ಹುಟ್ಟಿಕೊಂಡು ಕ್ಯಾಥೋಲಿಕ್ ಚರ್ಚ್ನ ಕಳೆದು ಹೋದ ವೈಭವವನ್ನು ಮರಳಿ ಸ್ಥಾಪಿಸಲು ಯತ್ನಿಸಿದ ಸಂದರ್ಭದಿಂದ ಮಕ್ಕಳು ಮಾನವನ ಪಾರಂಪರಿಕ ಮನಸ್ಸು ತನ್ನ ಮೂಲ ನೆಲೆಯನ್ನು ಕಂಡುಕೊಳ್ಳಲು ಏನೆಲ್ಲಾ ಪ್ರಯತ್ನ/ಹೋರಾಟವನ್ನು ಇನ್ನಿಲ್ಲದಂತೆ ಮಾಡಬೇಕಾಗುತ್ತದೆ. ಹಾಗಾದ ಹೊಸದೊಂದನ್ನು ದಿಕ್ಕರಿಸಲು ಹವಣಿಸುವ ಹುನ್ನಾರದ ಮನಸ್ಥಿತಿಯನ್ನು ಅರ್ಥೈಸಿಕೊಂಡು ಪ್ರಸ್ತುತ ಸಂದರ್ಭದಲ್ಲಿಯೂ ಕೆಲವು ಧರ್ಮಗಳ ಕಠಿಣವಾದ ಆಚರಣೆಗಳೇ ಈ ರೂಪದ ವಿಟನೆಗಳಿಗೆ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಹೋಲಿಸುವ ಸಾಮಥ್ರ್ಯದ ಜ್ಞಾನವನ್ನು ಕಟ್ಟುಕೊಳ್ಳುವರು.
ಉದಾ: ದಯಾನಂದ ಸರಸ್ವತಿಯವರ `ವೇದಗಳಿಗೆ ಹಿಂತಿರುಗಿ' ೋಷಣೆ.
18ನೇ ಶತಮಾನದ ವಸಾಹತುಗಳ ಸ್ಥಾಪನೆ, ಕೈಗಾರಿಕಾ ಕ್ರಾಂತಿಯಂತಹ ಟನೆಗೆ ಕಾರಣವಾಗಿ ವೈಜ್ಞಾನಿಕ ಸಿದ್ಧ ವಸ್ತುಗಳ ಬೇಡಿಕೆ. ಪೂರೈಕೆಗಳಿಂದಾಗಿ ಗುಡಿ ಕೈಗಾರಿಕೆಗಳು ಅವನತಿಯ ಹಾದಿ ಹಿಡಿದ ಸಂದರ್ಭವನ್ನು ಗ್ರಹಿಸಿದ ಮಕ್ಕಳು ಗೃಹ ಕೈಗಾರಿಕೆಗಳ ವಿನಾಶವನ್ನು ಪಡೆಯುವಲ್ಲಿ ನಮ್ಮ ಮುಂದಿನ ಸವಾಲುಗಳೇನೆಂಬ ಜ್ಞಾನವನ್ನು ಕಟ್ಟುಕೊಳ್ಳುವರು.
ಇತ್ತೀಚೆಗೆ ಜಗತ್ತಿನಾದ್ಯಂತ ಸ್ಥಾಪನೆಯಾಗುತ್ತಿರುವ ಬೃಹತ್ ಕೈಗಾರಿಕೆಗಳಿಂದ ನಿರಂತರವಾಗಿ ಬಂಡವಾಳಶಾಹಿ ವರ್ಗವು ಉದಯವಾಗುತ್ತಲಿದ್ದು, ಅನೇಕ ರೀತಿಯ ವರ್ಗ ಸಂರ್ಷಗಳುಂಟಾಗುವುದಲ್ಲದೆ ಪರಿಸರ ಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಇನ್ನಿತರ ರೋಗರುಜಿನಗಳಿಗೆ ಕಾರಣವಾಗಿ ಗುಡಿಕೈಗಾರಿಕೆಗಳು ಕಳೆಗುಂದಿರುವ ಹಿನ್ನಲೆಯಲ್ಲಿ ವೈಜ್ಞಾನಿಕ ಆವಿಷ್ಕಾರದ ಯಂತ್ರಬಳಕೆಯ ಈ ಬೃಹತ್ ಕೈಗಾರಿಕೆಗಳನ್ನು ಹಾಗೂ ಅವುಗಳ ಸ್ಥಾಪನೆಯನ್ನು ಮಕ್ಕಳು ಪ್ರತಿರೋಧ ವ್ಯಕ್ತಪಡಿಸುವ ಸಾಮಥ್ರ್ಯ ಕಲ್ಪಿಸಿಕೊಳ್ಳುವರು.
ನಿರಂತರ ಮತ್ತು ವ್ಯಾಪಕ ಮೌಲ್ಯ ಮಾಪನಕ್ಕಿರುವ ಅವಕಾಶಗಳು
 ಪ್ರಶ್ನಾವಳಿಗಳ ಮೂಲಕ ಪುನರುಜ್ಜೀವನ, ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣೆ ಹಾಗೂ ಕೈಗಾರಿಕಾ ಕ್ರಾಂತಿಗಳಿಗೆ ಕಾರಣಗಳನ್ನು ಪಟ್ಟಿ ಮಾಡುವುದು.
ಚಿತ್ರಪಟಗಳನ್ನು ಪ್ರದರ್ಶಿಸುವುದರ ಮೂಲಕ ಜ್ಞಾನವನ್ನು ಸಂಗ್ರಹಿಸುವುದು.
ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಂಟ್ ಚರ್ಚ್ಗಳ ಧೋರಣೆಯನ್ನು ಗುಂಪುಗಳ ಮೂಲಕ ಚರ್ಚಿಸುವುದು.
ಪುನರುಜ್ಜೀವನ ಕಾಲದ ಸಾಹಿತ್ಯ, ಕಲೆ ಮತ್ತು ವಿಜ್ಞಾನಗಳನ್ನು ಕುರಿತು ಲಿಖಿತ ಪರೀಕ್ಷೆ ಆಯೋಜಿಸುವುದು.
(ಸೂಚನೆ : ಮಕ್ಕಳಿಗೆ ಪುಸ್ತಕನೀಡಿ ಓದಲು ಸೂಚಿಸುವುದು)
ಕೈಗಾರಿಕಾ ಕ್ರಾಂತಿಗೆ ಸಂಬಂಧಿಸಿದಂತೆ ಮೌಖಿಕ ಪರೀಕ್ಷೆಯ ಪ್ರಶ್ನೆಗಳನ್ನು ಜ್ಞಾನ ಪುನರ್ರಚನೆಗೆ ಸಂಬಂಧಿಸಿದ ಪ್ರಶ್ನೆ ಕೋಠಿಯನ್ನು ತಯಾರಿಸಿಕೊಳ್ಳುವುದು.
ಉದಾ: ಬೃಹತ್ ಕೈಗಾರಿಕೆಗಳನ್ನು ಪ್ರತಿರೋಧಿಸಲು ಕಾರಣಗಳೇನೆಂಬುದನ್ನು ಮಕ್ಕಳಿಂದ ಹೇಳಿಸುವುದು.
ಮಿಂಚು ಪಟ್ಟಿಗಳ ಬಳಕೆಯ ಮೂಲಕ ಮಕ್ಕಳು ಕಟ್ಟಿಕೊಂಡ ಜ್ಞಾನವನ್ನು ಪರೀಕ್ಷಿಸುವುದು.
ಉದಾ : ಮಾರ್ಟಿನ್ ಲೂಥರ್ - ಮತಸುಧಾರಣೆ
ಇಗ್ನೇಶಿಯಸ್ ಲಯೋಲ - ಪ್ರತಿ ಸುಧಾರಣೆ
 ಹೊಂದಿಸಿ ಬರೆಯುವ ವಿಧಾನ
ಉದಾ : ಲೇಖಕರ ಪಟ್ಟಿ - ಕೃತಿಗಳ ಪಟ್ಟಿ
 ವೀಕ್ಷಣಾ ವಿಧಾನ
- ಮಕ್ಕಳೊಂದಿಗೆ ಚರ್ಚ್ಗಳಿಗೆ ಭೇಟಿ ನೀಡುವುದು.
ಈ ಮೂಲಕ ಪ್ರಾಟಿಸ್ಟಂಟ್ ಮತ್ತು ಕ್ಯಾಥೋಲಿಕ್ ಚರ್ಚ್ ನಡುವಿನ ವ್ಯತ್ಯಾಸ ಗ್ರಹಿಸುವುದು.
ನಕ್ಷೆ ಮತ್ತು ಭೂಪಟಗಳನ್ನು ಬಳಸಿ ಪ್ರದೇಶಗಳನ್ನು ಗುರುತಿಸುವುದು.
ಉದಾ: ಇಟಲಿ, ಇಂಗ್ಲೆಂಡ್ ಗುಡ್ಹೋಪ್ ಭೂಶಿರ, ಅರಬ್ಬೀ ಸಮುದ್ರ. ಪನಾಮ ಕಾಲುವೆ ಇತ್ಯಾದಿ.
ಪಠ್ಯಪುಸ್ತಕದ ಪೂರ್ಣ ಟಕಾವಲೋಕನ ಕ್ರಮ
 ಭೌಗೋಳಿಕ ಅನ್ವೇಷಣೆಯನ್ನು ಕುರಿತ ಯೋಜನೆಯನ್ನು ತಯಾರಿಸುವುದು.
ತರಗತಿಯಲ್ಲಿ ಸರ್ವ ಧರ್ಮ ಸಮನ್ವಯ ಬಿಂಬಿಸುವಂತಹ ಕಥೆ, ನಾಟಕ, ಟನೆಗಳನ್ನು ಸಂಗ್ರಹಿಸುವುದು.
ಉದಾ: - ಸುದ್ಧಿ ಮಾಧ್ಯಮಗಳ ಮೂಲಗಳಿಂದ ಮಗು ತನ್ನ ಸುತ್ತ ನಡೆದ ಈ ತರದ ಟನೆಗಳನ್ನು ತರಗತಿಯಲ್ಲಿ ಹೇಳುವುದು.
- ಚಿತ್ರಪಟಗಳ ರಚನೆ
- ಚರ್ಚಾಸ್ಪರ್ಧೆ
- ಆಶುಭಾಷಣ ಸ್ಪರ್ಧೆ ಏರ್ಪಾಟು ಮಾಡುವುದು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
 ಪ್ರಶ್ನೋತ್ತರ ವಿಧಾನ: ಮಕ್ಕಳಿಗೆ ಟಕವನ್ನು ಅವಲೋಕನ ಮಾಡಲು ಮೊದಲೇ ಸೂಚಿಸಿ ತರಗತಿಯ ಸಂದರ್ಭದಲ್ಲಿ ಪ್ರಶ್ನೆಗಳನ್ನು ಮಕ್ಕಳ ಸಾಮಥ್ರ್ಯಕ್ಕನುಗುಣವಾಗಿ ಕೇಳಿ ಉತ್ತರಗಳನ್ನು ಪಡೆದುಕೊಳ್ಳುತ್ತಾ ಟಕದ ಬಗ್ಗೆ ಕುತೂಹಲ ಮೂಡುವಂತೆ ಮಾಡುವುದು.
ಉದಾ: ಭೌಗೋಳಿಕ ಸಂಶೋಧನೆಗಳು (ಟಕ) ಪ್ರಶ್ನಿಸಿ ಅಮೇರಿಕಾ ಎಂದು ಹೆಸರು ಬರಲು ಕಾರಣವೇನು?
ಸಮಸ್ಯಾ ಪರಿಹಾರ ವಿಧಾನ: ಪ್ರಸ್ತುತ ಸಮಸ್ಯೆಗಳನ್ನು ಎತ್ತಿಹಿಡಿದು ತಾವು ಕಲಿಯುತ್ತಿರುವ ಟಕದ ಹಿನ್ನಲೆಯಲ್ಲಿ ಪರಿಹಾರ ಕಂಡುಕೊಳ್ಳುವಂತಹ ವಿಧಾನವನ್ನು ಅನುಕೂಲಿಸುವುದು.
ಉದಾ: ಟಕ (ಕೈಗಾರಿಕಾ ಕ್ರಾಂತಿ)
ಸಮಸ್ಯೆ : ಪರಿಸರ ಮಾಲಿನ್ಯ
ಪರಿಹಾರ : ಗೃಹ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ
ಸಮಸ್ಯೆ : ನಗರೀಕರಣ
ಪರಿಹಾರ : ಕೈಗಾರಿಕಾ ವಿಕೇಂದ್ರೀಕರಣ
 ವಿಶ್ಲೇಷಣಾ ವಿಧಾನ: ಟಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನವನ್ನು ಮಕ್ಕಳಿಗೆ
ಉದಾ: ಕೆಪ್ಲರ್ ನಿಯಮ
ನ್ಯೂಟನ್ ನಿಯಮದ ಜೊತೆಗೆ
ಶರೀರ ಶಾಸ್ತ್ರ ವಿಚಾರಗಳು, ಕೊಪರ್ನಿಕಸ್,
ಟಾಲ್ಸ್ಟಾಯ್, ಥಾಮಸ್ ಅಲ್ವ ಎಡಿಸನ್ ವಿಚಾರಗಳನ್ನು ಪ್ರಸ್ತುತಪಡಿಸುವುದು.
ಚರ್ಚಾ ವಿಧಾನ: ತರಗತಿಗಳಲ್ಲಿ ಗುಂಪುಗಳನ್ನು ಮಾಡಿ ಒಂದೊಂದು ಗುಂಪಿಗೂ ಒಂದು ಅಂಶವನ್ನು ಚರ್ಚಿಸಲು ತಿಳಿಸುವುದು.
ಉದಾ: ಜ್ಞಾನ ಪುನರುಜ್ಜೀವನ
ಧಾರ್ಮಿಕ ಸುಧಾರಣೆ
ಪ್ರತಿ ಸುಧಾರಣೆ.
ಸಂಪನ್ಮೂಲಗಳ ಕ್ರೂಢೀಕರಣ
- 9ನೇ ತರಗತಿ ಪಠ್ಯ ಪುಸ್ತಕ
- ಯೂರೋಪಿನ ಇತಿಹಾಸ ಟಿ. ಪಾಲಾಕ್ಷ, ಅಕಬರಾಲಿ
- ಚಿತ್ರದಲ್ಲಿ ಚರಿತ್ರೆ
- ಅಂತರ್ಜಾಲ
- ವಿಶ್ವಕೋಶಗಳು
- ಪಿ.ಪಿ.ಟಿ. ತಯಾರಿಕೆ
- ವಿಜ್ಞಾನಿ, ಸಾಹಿತ್ಯ, ಕಲಾವಿದರುಗಳು, ಚರ್ಚ್ ಮಾದರಿ ಚಿತ್ರ ಸಂಪುಟ
- ಪ್ರಶ್ನಾವಳಿಗಳ ತಯಾರಿಕೆ ಉದಾ: ಮೌಖಿಕ ಪರೀಕ್ಷೆ
- ಸಮಸ್ಯೆಗಳನ್ನು ಗುರುತಿಸಿರುವ ಮಿಂಚುಪಟ್ಟಿ
- ತರಗತಿಯಲ್ಲಿ ಗುಂಪು ರಚನೆ
ಬೋಧನೋಪಕರಣಗಳು
- ಪ್ರಪಂಚದ ಭೂಪಟ
- ಯೂರೋಪ್ ಖಂಡದ ಭೂಪಟ
- ವಿಜ್ಞಾನಿ ಮತ್ತು ಬರಹಗಾರರ ಚಿತ್ರಪಟಗಳು
- ಪರಿಸರ ಮಾಲಿನ್ಯ ತೋರಿಸುವ ಅಂತರ್ಜಾಲ ಚಿತ್ರಗಳು
- ಮೊನಲಿಸಾ ಚಿತ್ರಪಟ
- ಮಿಂಚು ಪಟ್ಟಿಗಳು
- ಹೋಲಿಕೆ ವ್ಯತ್ಯಾಸಗಳ ಪಟ್ಟಿ
- ಗುರುತ್ವಾಕರ್ಷಣ ನಿಯಮದ ಚಿತ್ರ
- ಹಡಗಿನ ಚಿತ್ರ
- ದಿಕ್ಸೂಚಿ ಮತ್ತು ಆಸ್ಟ್ರೋಲ್ಯಾಬ್ ಮಾದರಿಗಳು
ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಜ್ಞಾನ ಪುನರುಜ್ಜೀವನ ಅರ್ಥ ಮತ್ತು ಪ್ರಾಮುಖ್ಯತೆ
- ಪುನರುಜ್ಜೀವನಕ್ಕೆ ಕಾರಣವಾದ ಅಂಶಗಳು
- ಧಾರ್ಮಿಕ ಅಸಮತೋಲನದಿಂದಾಗುವ ಪರಿಣಾಮಗಳು
- ಭೌಗೋಳಿಕ ಸಂಶೋಧನೆಗೆ ಕಾರಣಗಳು
- ಭೂ ಶೋಧನೆ ಪರಿಣಾಮಗಳು
- ವಸಾಹತುಶಾಹಿ ಮತ್ತು ಸಾಮ್ರಾಜ್ಯ ಶಾಹಿ ಸ್ಥಾಪನೆಗೆ ಕಾರಣ ಪರಿಣಾಮಗಳು.
- ವೈಜ್ಞಾನಿಕ ಸಂಶೋಧನೆ ಮತ್ತು ಪರಿಣಾಮಗಳು.
- ಕೈಗಾರಿಕಾ ಕ್ರಾಂತಿ ಮತ್ತು ನಗರೀಕರಣ
- ಗುಡಿ ಕೈಗಾರಿಕೆಗಳ ಪ್ರಾಮುಖ್ಯತೆ.
- ಗುಡಿ ಕೈಗಾರಿಕೆಗಳ ವಿನಾಶಕ್ಕೆ ಕಾರಣಗಳು
- ಸಮಾಜದ ವರ್ಗ ವ್ಯವಸ್ಥೆಗೆ ಕಾರಣಗಳು
- ಚರ್ಚ್ ಏಕಸ್ವಾಮ್ಯದ ವಿರುದ್ಧದ ನಿಲವುಗಳು
- ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧದ ನಿಲುವುಗಳು.
ಉದಾಹರಣೆ: 4
ಜ್ಞಾನ ರಚನೆಗೆ ಇರುವ ಅವಕಾಶಗಳು:
- ಭಾರತದ ಮತ ಪ್ರವರ್ತಕರುಗಳ ಪರಿಚಯ
- ಮತ ಪ್ರವರ್ತಕರುಗಳು ಪ್ರತಿಪಾದಿಸಿದ ತತ್ವಗಳು
- ಭಾರತದ ಮತ ಪ್ರವರ್ತಕರ ಬೋಧನೆಗಳು
- ಶಂಕರಾಚಾರ್ಯರ ಜೀವನ ಮತ್ತು ಆದರ್ಶಗಳು
- ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು
- ರಾಮಾನುಜಾಚಾರ್ಯರ ಹುಟ್ಟು ಮತ್ತು ಚಿಂತನೆಗಳು
- ಬಸವಣ್ಣನವರ ಬದುಕು, ಬರಹ, ಆಡಳಿತ ಮತ್ತು ಆಚರಣೆಗಳು.
- ಮತ ಪ್ರವರ್ತಕರು ಪ್ರತಿಪಾದಿಸಿದ ಸಿದ್ಧಾಂತಗಳು
ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು:
- ಭಾರತದಲ್ಲಿ 9 ರಿಂದ 14ನೇ ಶತಮಾನದಲ್ಲಿ ಆದಂತಹ ವೈಚಾರಿಕ ಆಂದೋಲ ಸನಾತನ ಧರ್ಮದೊಳಗಿನ ಜಾತಿ, ಸಂಪ್ರದಾಯ ಮತ್ತು ದರ್ಶನಗಳನ್ನು ಅರ್ಥೈಸಿಕೊಂಡ ಹಿನ್ನಲೆಯಲ್ಲಿ ಹುಟ್ಟಿಕೊಂಡ ಭಾವನೆಗಳೇಂಬುದನ್ನು ವಿಮರ್ಶಾಯುಕ್ತವಾಗಿ ವ್ಯಾಖ್ಯಾನಿಸುವುದು.
- ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿನ ತತ್ವ ಸಂಪತ್ತು, ಅಭಿವ್ಯಕ್ತಿ, ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸುಧಾರಣೆಯ ಆಂದೋಲನಗಳು ಧರ್ಮ ಸುಧಾರಕರ ವೈವಿಧ್ಯಮಯ ದೃಷ್ಟಿಕೋನಗಳಿಂದ ಹೊಸ ಪಂಥವಾದ ಭಕ್ತಿ ಚಳುವಳಿ ಉದಯವಾಗಲು ಕಾರಣವಾದ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವರು.
- ಅ್ವತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು `ಈ ಜಗತ್ತಿಗೆ ಬ್ರಹ್ಮನೊಬ್ಬನೇ ಸತ್ಯ, ಉಳದದ್ದು ಮಿತ್ಯ. ಜೀವನು ಮತ್ತು ಬ್ರಹ್ಮನು ಬೇರೆಯಲ್ಲ' ಎಂಬ ನಿರೂಪಣೆಯನ್ನು ತಮ್ಮ ಆಳವಾದ ಆಧ್ಯಯನದ ಮೂಲಕ ಪ್ರತಿಪಾದಿಸಿದುದನ್ನು ಜ್ಞಾನ ಮಾರ್ಗದ ಬೋಧನೆಗಳ ಅಡಿಯಲ್ಲಿ ಅರ್ಥೈಸಿಕೊಳ್ಳುವರು.
- ಜನಸಾಮಾನ್ಯರಿಗೆ ಮುಕ್ತಿ ಮಾರ್ಗವನ್ನು ತೋರಿಸುವ ಹಿನ್ನಲೆಯಲ್ಲಿ ಮುಂದೆ ಬಂದ ರಾಮಾನುಜಾಚಾರ್ಯರು ಭಕ್ತಿ ತತ್ವಕ್ಕೆ ಪ್ರಾಧಾನ್ಯತೆ ನೀಡುವುದರೊಂದಿಗೆ, ಜೀವ ಮತ್ತು ಪ್ರಕೃತಿ ಬ್ರಹ್ಮನ ಅಧೀನ, ಇದರಿಂದ ಆತ್ಮ, ಪರಮಾತ್ಮ ಏಕಕಾಲದಲ್ಲಿ ಒಂದಾಗಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿ ಜಾತಿ ಪದ್ಧತಿಯನ್ನು ಖಂಡಿಸುತ್ತಾ ಭಗವಂತನಿಗೆ ಶರಣಾಗತಿಯೆ ಮೋಕ್ಷ ಪಡೆಯುವ ಮಾರ್ಗ ಎನ್ನುವ ರಾಮಾನುಜಾಚಾರ್ಯರ ವಿಶಿಷ್ಟಾ್ವತ ಸಿದ್ಧಾಂತವನ್ನು ಮುಕ್ತಿಮಾರ್ಗದ ಚೌಕಟ್ಟಿನಲ್ಲಿ ಗ್ರಹಿಸುವರು.
- ್ವತ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ ಮಧ್ವಾಚಾರ್ಯರು ತಮ್ಮ ಆಳವಾದ ಧರ್ಮಶಾಸ್ತ್ರಗಳ ಅಧ್ಯಯನದ ಜ್ಞಾನದಿಂದಾಗಿ ಸ್ವತಂತ್ರ ವಿಚಾರ ಶಕ್ತಿಯನ್ನು ಬಳಸಿಕೊಂಡು, "`ಜೀವ' ಮತ್ತು `ಪರಮಾತ್ಮ' ಬೇರೆ ಬೇರೆ, ಈ ಜಗತ್ತು ಯಾವತ್ತೂ ಮಾಯೆಯಲ್ಲ ಅದು ಪರಮಾತ್ಮನಷ್ಟೆ ಸತ್ಯ. ಇಲ್ಲಿನ ಈಶ್ವರ ಮಾತ್ರ ಸ್ವತಂತ್ರ್ಯ, ಪರಮಾತ್ಮ ಹಾಗೂ ಜೀವಿಗಳ ಸಂಬಂಧ ಸ್ವಾಮಿ-ಸೇವಕ ಹಿನ್ನಲೆಯಲ್ಲಿ ಹುಟ್ಟಿಕೊಂಡವು ಎಂಬ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿ ನಾರಾಯಣನನ್ನು ಭಕ್ತಿಯಿಂದ ಪೂಜಿಸುವುದರಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ಪರಿಕಲ್ಪನೆಯನ್ನು ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳ ಹಿನ್ನಲೆಯಲ್ಲಿ ತಿಳಿಯುವರು. 
- `ಕಾಯಕ' ತತ್ವವನ್ನು ಪ್ರತಿಪಾದಿಸಿದ ಜಗಜ್ಯೋತಿ ಬಸವಣ್ಣನವರು ಕಾಯಕವೇ ಕೈಲಾಸ ಎಂಬ ತತ್ವದ ಅಡಿಗಲ್ಲಿನ ಮೇಲೆ ಶಕ್ತಿ ವಿಶಿಷ್ಟಾ್ವತ ಸಿದ್ಧಾಂತವನ್ನು ಪ್ರತಿಪಾದಿಸಿ, ಶಿವಭಕ್ತನೇ ಶರಣ ಶರಣನಾದವನು ಜಾತಿ ಬೇಧವನ್ನು ಮಾಡಬಾರದು, ಪರಿಶುದ್ಧ ಭಕ್ತಿಯೇ ಶಿವನನ್ನು ಸೇರುವ ನಿಜವಾದ ಮಾರ್ಗ ಹಾಗೂ ಪ್ರತಿಯೊಬ್ಬರೂ ದುಡಿದು ತಿನ್ನಬೇಕು. ವೃತ್ತಿಗಳಲ್ಲಿ ಹಿರಿದು - ಕಿರಿದು ಎಂಬ ಭೇದವಿಲ್ಲ ಎನ್ನುವ ಹಿನ್ನಲೆಯಲ್ಲಿ ದುಡಿಮೆ ಸಂಸ್ಕೃತಿಯನ್ನು ಬೆಳೆಸಿದ ರೀತಿಯನ್ನು ಗ್ರಹಿಸಿಕೊಂಡು ಜಾತಿ, ಮತ, ಲಿಂಗ ಭೇದ ಎಣಿಸದೆ ಸಾಮಾಜಿಕ, ಆಕ, ಧಾರ್ಮಿಕ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಹಾಗೂ ಸರ್ವರಿಗೂ ಸಮಾನತೆಯ ಅವಕಾಶ ಕಲ್ಪಿಸುತ್ತಿದ್ದ ಅನುಭವಮಂಟಪ ಎಂಬ ವಿಚಾರ ವೇದಿಕೆಯ ಪ್ರಾಮುಖ್ಯತೆಯನ್ನು ಮತ್ತು ಪರಿಶುದ್ಧ ಜೀವನಕ್ಕೆ ಬಸವಣ್ಣನವರ ಸಂದೇಶವೇನೆಂಬುದನ್ನು ತಿಳಿದುಕೊಳ್ಳುವರು.
ಜ್ಞಾನದ ಪುನರ್ರಚನೆಗೆ ಇರುವ ಅವಕಾಶಗಳು:
- ಭಾರತದ ಸಂದರ್ಭದಲ್ಲಿ 9 ರಿಂದ 14ನೇ ಶತಮಾನದ ಅವಧಿಯಲ್ಲಾದ ಧಾರ್ಮಿಕ ಸುಧಾರಣೆಗಳು ಪ್ರಬಲವಾಗಿ ಅನುಷ್ಠಾನಗೊಂಡರೂ, ಪ್ರಸ್ತುತ ಕಾಲಟ್ಟದಲ್ಲಿ ಇನ್ನೂ ಜಾತಿ, ಲಿಂಗ ವರ್ಗ ತಾರತಮ್ಯದ ಕರಿ ನೆರಳು ಹಾಗೆ ಇರುವುದನ್ನು ಗ್ರಹಿಸಿಕೊಂಡ ಮಕ್ಕಳು, ಧಾರ್ಮಿಕ ಕ್ಷೇತ್ರದೊಳಗಣ ತತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾನತೆಯ ಪರಿಕಲ್ಪನೆಯ ಸಮಾಜಮುಖಿ ಚಾಲನೆಯನ್ನು ಜನಮಾನಸದಲ್ಲಿ ತುಂಬಿಕೊಳ್ಳಲು ಮಕ್ಕಳು ತಮ್ಮ ಜವಾಬ್ದಾರಿಗಳೇನೆಂಬ ವೈಚಾರಿಕ ಜ್ಞಾನವನ್ನು ಕಟ್ಟಿಕೊಳ್ಳುವರು.
- ಮನುಷ್ಯನ ಮೋಕ್ಷ ಸಾಧನೆಗೆ ಜ್ಞಾನಮಾರ್ಗವನ್ನು ಬೋಧಿಸಿದ ಶಂಕರಾಚಾರ್ಯರ ತತ್ವನಿಷ್ಠೆಯನ್ನು ಅರ್ಥೈಸಿಕೊಂಡ ಮಕ್ಕಳು ಜಗತ್ತಿನಲ್ಲಿ ಸತ್ಯವೇ ಶ್ರೇಷ್ಠ ಈ ಸತ್ಯ ಬ್ರಹ್ಮನೊಡನೆ ನಮ್ಮೆಲ್ಲರ ಜೀವಾತ್ಮವನ್ನೂ ವಿಲೀನಗೊಳಿಸುವುದು ಹೇಗೆ? ಸತ್ಯವಲ್ಲದ ಜಗತ್ತಿನ ಅಪ್ರಸ್ತುತತೆಯ ನಿರ್ಗುಣಯುಕ್ತ ಲಕ್ಷಣಗಳನ್ನು ದೂರಮಾಡಿ. ಜೀವಾತ್ಮಕ್ಕೆ ಪ್ರತ್ಯೇಕ ಅಸ್ಥಿತ್ವವವೇ ಇಲ್ಲ. ಅದು ಸದಾ ಸತ್ಯವೆಂಬ ಬ್ರಹ್ಮನೊಡನೆ ವಿಲೀನ ಎಂಬುದನ್ನು ತಾರ್ಕಿಕವಾಗಿ ಚರ್ಚಿಸಿ, ನಾನೇ ಬ್ರಹ್ಮ, ಆಹಂಬ್ರಹ್ಮಾಸ್ಮಿ ಎಂಬ ಪ್ರತಿಪಾದನೆಯ ಮೂಲ ಸತ್ವದ ವಿಶೇಷ ಜ್ಞಾನವನ್ನು ಪಡೆದುಕೊಂಡು ಈ ಹಿನ್ನಲೆಯಲ್ಲಿಯೇ ಹುಟ್ಟಿಕೊಂಡು ಶಂಕರಾಚಾರ್ಯರ ಮಠಗಳ ಇಂದಿನ ಕಾರ್ಯಕ್ಷಮತೆ ವೈಖರಿಯನ್ನು ಹೋಲಿಸಿ ಕೊಳ್ಳುವರು.
- ಮನುಷ್ಯನು ತನ್ನ ಜೀವನದಲ್ಲಿ ಮೋಕ್ಷ ಪಡೆಯಲು ಭಕ್ತಿಯೇ ಶ್ರೇಷ್ಠಮಾರ್ಗ. ಭಗವಂತನಿಗೆ ಶರಣಾಗತಿಯೇ ನಿಜವಾದ ಭಕ್ತಿ ಎಂದು ಪ್ರತಿಪಾದಿಸಿದ ರಾಮನುಜಾಚಾರ್ಯರ ಬೋಧನೆಯನ್ನು ತಿಳಿದುಕೊಂಡು ಮಕ್ಕಳು ಧ್ಯಾನ ಮತ್ತು ಏಕಾಗ್ರತೆಯಿಂದ ಮಾತ್ರ ಭಕ್ತಿಯುಂಟಾಗಲು ಸಾಧ್ಯ. ಇದು ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಏಕೆಂದರೆ ಇಂದಿನ ಕಲುಶಿತ ಸಮಾಜದೊಳಗಣ ಜಾತಿಬೇಧ, ಲಿಂಗಭೇದ, ವರ್ಣಭೇದ, ಅಧಿಕಾರ, ಮೋಸ ವಂಚನೆಗಳಿಂದಾಗಿ ಇಡೀ ಮಾನವ ಕುಲವೇ ದಾರಿ ತಪ್ಪುತ್ತಿರುವ ಈ ಹೊತ್ತಿನಲ್ಲಿ ಭಕ್ತಿ ಪಾರಮ್ಯ ಅನಿವಾರ್ಯವಾಗಿದ್ದು ಇದರಿಂದ ಪರಮಾತ್ಮನ ಅಧೀನತೆಯನ್ನು ಪ್ರತಿಯೊಬ್ಬರು ಕಂಡುಕೊಳ್ಳಬೇಕು. ಆಗ ಮಾತ್ರ ಎಲ್ಲರಿಗೂ ಮೋಕ್ಷ ಎಂಬ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಜ್ಞಾನವನ್ನು ತಿಳಿದುಕೊಳ್ಳುವುದು.
- ಜಗತ್ತು ಮಾಯೆಯಲ್ಲ ಅದು ಪರಮಾತ್ಮನಷ್ಟೆ ಸತ್ಯ ಎಂಬ ತತ್ವದಲ್ಲಿ ಜಗತ್ತಿನೊಳಗೆ ಈಶ್ವರನನ್ನು ಕಂಡುಕೊಂಡ ಮಧ್ವಾಚಾರ್ಯರ ತತ್ವಾ ಪ್ರತಿಪಾಧನೆಯನ್ನು ಅರ್ಥೈಸಿಕೊಂಡ ಮಕ್ಕಳು ಈ ಜಗತ್ತಿನಲ್ಲಿ ದೇವರು ಒಬ್ಬನೇ ಎನ್ನುವ ಎಲ್ಲಾ ಧರ್ಮಗಳ ಸಾರವನ್ನು ಹೋಲಿಸಿಕೊಂಡು ಸರ್ವೋತ್ತಮನಾದ ನಾರಾಯಣನ ಅಂದರೆ ಮೋಕ್ಷ (ನೆಮ್ಮದಿ) ಸನ್ನಿದಿ ದೊರೆಯುವಂತಾಗಲು ಪ್ರತಿಯೊಬ್ಬರು ಈ ಜಗತ್ತಿನಲ್ಲಿ ಇರುವವರೆಗೆ ಸೇವಕನಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕು, ಆಗ ಮಾತ್ರ ಈ ಜೀವಾತ್ಮ ಪರಮಾತ್ಮನನ್ನು ಕಾಣಲು ಸಾಧ್ಯ ಎಂಬ ವಿನೂತನ ಜ್ಞಾನವನ್ನು ಕಟ್ಟುಕೊಳ್ಳುವರು.
- `ದುಡಿಮೆಯೇ ದೇವರು' ಎಂಬ ನೂತನ ಸಂಸ್ಕೃತಿಯನ್ನು ಆವಿಷ್ಕರಿಸಿಕೊಟ್ಟ ಬಸವಣ್ಣನವರ ಕಾಯಕನಿಷ್ಠೆಯ `ಕಾಯಕವೇ ಕೈಲಾಸ' ಎಂಬ ತತ್ವವನ್ನು ಗ್ರಹಿಸಿಕೊಂಡ ಮಕ್ಕಳು, ಶರಣನಾದವನಿಗೆ ಯಾವುದರ ಭೇದವಿಲ್ಲ. ಈತನ ಪರಿಶುದ್ಧ ಜೀವನ ಸಮಾನತೆಯ ಪರಿಕಲ್ಪನೆಯಲ್ಲಿ ಬೆಳೆದು, ನಡೆ-ನುಡಿಗಳು ಒಂದಾಗಿ, ಆಚಾರ ವಿಚಾರಗಳ ಪರಧಿಯೊಳಗೆ ಪ್ರತಿಯೊಬ್ಬನೂ ಕಾಯಕದಲ್ಲಿ ಭಗವಂತ (ಮೋಕ್ಷ)ನನ್ನು ಕಂಡುಕೊಂಡು ಪರಿಶುದ್ಧ ಜೀವನಕ್ಕೆ ಭಕ್ತಿಯೇ ಉದಾತ್ತ ಮಾರ್ಗ ಎಂದು ಪ್ರದಿಪಾದಿಸಿದ ಬಸವಣ್ಣನವರ ಬದುಕಿನ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವರು.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಇರುವ ಅವಕಾಶಗಳು
- ಮತ ಪ್ರವರ್ತಕರುಗಳ ತತ್ವ ಸಿದ್ಧಾಂತಗಳನ್ನು ಕುರಿತು ಪ್ರಬಂಧ ಮಂಡಿಸುವುದು.
ಉದಾ: * ಶಂಕರಾಚಾರ್ಯರು ಮತ್ತು ಅ್ವತ ಸಿದ್ಧಾಂತ
 ವಿಶಿಷ್ಟಾ್ವತ ಮತ್ತು ರಾಮಾನುಜಾಚಾರ್ಯರು
 ಶ್ರೀ ವೈಷ್ಣವ ಮಠಗಳನ್ನುಕುರಿತು ಮಾಹಿತಿ ಸಂಗ್ರಹ
 ಶಂಕರಾಚಾರ್ಯರ ಗುರು ಪೀಠಗಳು
 ಅಷ್ಟ ಮಠಗಳು
 ಉಡುಪಿಯ ಶ್ರೀಕೃಷ್ಣ
 ಬಸವಣ್ಣನವರ ಬದುಕು ಮತ್ತು ಕಾಯಕನಿಷ್ಠೆ
 ಮತ ಪ್ರವರ್ತಕರ ಕೃತಿ ದರ್ಶನ
- ಮತ ಪ್ರವರ್ತಕರ ತತ್ವ ಸಿದ್ಧಾಂತಗಳನ್ನು ಕುರಿತಂತೆ ಇಲ್ಲಿನ ಸಾಮ್ಯತೆ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳನ್ನು ಕುರಿತಂತೆ ಮಕ್ಕಳ ಗುಂಪು ಚರ್ಚೆ.
- ದುಡಿಮೆಯೇ ದೇವರು ಎಂದು ಕಾಯಕತತ್ವದ ಪ್ರತಿಪಾದನೆಯನ್ನು ನಿರೂಪಿಸಿದ ಬಸವಣ್ಣನವರ ಶಕ್ತಿ ವಿಶಿಷ್ಟಾ್ವತ ಸಿದ್ಧಾಂತದ ಪರಿಕಲ್ಪನೆ ಸಾರ್ವಕಾಲಿಕ ಸತ್ಯ ಎನ್ನುವ ಹಿನ್ನಲೆಯಲ್ಲಿ ಭಾಷಣ ಸ್ಪರ್ಧೆಗಳು.
- ಕಲಿಕಾ ನಿಲ್ದಾಣಗಳ ಮೂಲಕ ್ವತ, ಅ್ವತ, ವಿಶಿಷ್ಟಾ್ವತ ಶಕ್ತಿ ವಿಶಿಷ್ಟಾ್ವತಗಳ ನಡುವಿನ ವ್ಯತ್ಯಾಸ ಗುರುತಿಸುವುದು.
- ಮಿಂಚು ಪಟ್ಟಿಗಳನ್ನು ಬಳಸಿ, ಮತಪ್ರವರ್ತಕರ ಜೀವನ ಚರಿತ್ರೆಯನ್ನು ವಿಶ್ಲೇಷಿಸುವುದು.
- ಪ್ರಶ್ನಾವಳಿ, ಟಕ ಪರೀಕ್ಷೆ, ಕಿರು ಪರೀಕ್ಷೆಗಳನ್ನು ನಡೆಸಿ ಕಲಿಕಾ ಸಾಮಥ್ರ್ಯವನ್ನು ನಿರ್ಣಯಿಸುವುದು.
- ಮತ ಪ್ರವರ್ತಕರುಗಳ ಚಿಂತನೆಗಳನ್ನು ಪ್ರತ್ಯೇಕ ಚಾರ್ಟ್ ಮಾಡಿ ಪ್ರದರ್ಶಿಸುವುದು.
- ಮಕ್ಕಳನ್ನೇ ಶಂಕರ, ಮಧ್ವಾ, ರಾಮಾನುಜ ಹಾಗೂ ಬಸವಣ್ಣನವರ ಪಾತ್ರಧಾರಿಗಳಾಗಿಸಿ ಪ್ರದರ್ಶನ ಏರ್ಪಡಿಸುವುದು.
- ಭಕ್ತಿ, ಧ್ಯಾನ, ಏಕಾಗ್ರತೆ ಕುರಿತು ಟಿಪ್ಪಣಿ ಬರೆಸುವುದು.
- ಬಸವಣ್ಣನವರ ಬದುಕು ಕುರಿತ ನಾಟಕಾಭಿನಯ
- ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣ ಮತ್ತೆ ಹುಟ್ಟಿ ಬಂದರೆ ತಾನು ಸಮಾಜ ಸುಧಾರಣೆಗಳ ಬಗ್ಗೆ ಕಲ್ಪನೆಯ ಕಥೆ ಬರೆಸುವುದು.
- ಬಸವಣ್ಣನವರ ವಚನಗಳ ಸಂಗ್ರಹ.
- ವಚನಗಾಯನ ಮತ್ತು ವ್ಯಾಖ್ಯಾನ
- ಉಡುಪಿಯ ಕನಕಕಿಂಡಿ ಮಹತ್ವ ಕುರಿತು ಚಿಂತನಾ ಕಾರ್ಯಗಾರ ಏರ್ಪಡಿಸುವುದು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು:
ಕಥನ ವಿಧಾನ: - ಶಂಕರಾಚಾರ್ಯರ ಜೀವನ ಚರಿತ್ರೆ ಕುರಿತು
- ರಾಮಾನುಜಾಚಾರ್ಯರ ನಡೆ ನುಡಿ ಕುರಿತು
- ಬಸವಣ್ಣನವರ ಆಚಾರ ವಿಚಾರ
ಚರ್ಚಾ ವಿಧಾನ: - ತರಗತಿಯಲ್ಲಿ ಗುಂಪುಗಳ ರಚನೆ
- ್ವತ, ಅ್ವತ, ವಿಶಿಷ್ಟಾ್ವತ, ಶಕ್ತಿ ವಿಶಿಷ್ಠಾ್ವತ ಕುರಿತು ಚರ್ಚೆ, ತೀರ್ಮಾನ
ಟಕ ವಿಧಾನ: - ಶಂಕರಾಚಾರ್ಯರ ಬೋಧನೆಗಳು
- ಮಧ್ವಾಚಾರ್ಯರ ಜೀವನ ತತ್ವಗಳು
- ರಾಮಾನುಜಾಚಾರ್ಯರು ಮತ್ತು ವಿಶಿಷ್ಟಾ್ವತ
- ಕಾಯಕವೇ ಕೈಲಾಸ
ಪ್ರವಾಸ ವಿಧಾನ: - ಕೂಡಲಸಂಗಂಕ್ಕೆ ಕಾಲಡಿ, ಉಡುಪಿ, ಸ್ಥಳಗಳಿಗೆ ಭೇಟಿ, ಜ್ಞಾನ ಸಂಗ್ರಹ.
ಪಾತ್ರಾಭಿನಯ ವಿಧಾನ: - ಮಕ್ಕಳಿಂದಲೇ ಮತ ಪ್ರವರ್ತಕರ ಪಾತ್ರಗಳನ್ನು ನಿರ್ವಹಿಸು ವಂತೆಯೂ ಹಾಗೂ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳುವುದು.
ಉದಾ: - ಶಂಕರಾಚಾರ್ಯರು
- ಬಸವಣ್ಣ
- ಮಧ್ವಾಚಾರ್ಯರು
- ರಾಮಾನುಚಾರ್ಯರು
ಅವಲೋಕನ ವಿಧಾನ: - ಪಠ್ಯಪುಸ್ತಕದಲ್ಲಿನ ಸಂಬಂಧಿಸಿದ ಟಕಕ್ಕೆ ಪೂರಕ ಅಂಶಗಳನ್ನು ಅವಲೋಕನ ಮಾಡುವುದು.
ಉದಾ: - ಧರ್ಮಸುಧಾರಣೆ
- ಸ್ಪೃಷ್ಯ, ಅಸ್ಪೃಷ್ಯ
- ವರ್ಗ ತಾರತಮ್ಯ
- ಜಾತಿ ಭೇದ
- ಕಾಯಕದ ಮಹತ್ವವನ್ನು ಕುರಿತಂತೆ
ಪಠ್ಯ ಪುಸ್ತಕದ ಜ್ಞಾನವನ್ನು ಗ್ರಹಿಸುವುದು.
ಸಂಪನ್ಮೂಲಗಳ ಕ್ರೂಢೀಕರಣ:
- 9ನೇ ತರಗತಿ ಪಠ್ಯ ಪುಸ್ತಕ
- ಮಧ್ಯಕಾಲಿನ ಭಾರತದ ಇತಿಹಾಸ, ಪಾಲಕ್ಷ, ಅಕಬರಾಲಿ
- ಶಂಕರ, ರಾಮಾನುಜ, ಬಸವಣ್ಣ ಮಧ್ವರನ್ನು ಕುರಿತ ಜೀವನ ಚರಿತ್ರೆ ಕೃತಿಗಳ ಸಂಗ್ರಹ.
- ಬಸವಣ್ಣನವರ ವಚನಗಳ ಸಂಗ್ರಹ
- ಭಾವ ಚಿತ್ರಗಳು
- ಭಾರತದ ಭೂಪಟ
- ಉಡುಪಿಯ ಐತಿಹಾಸಿಕ ಹಿನ್ನಲೆ ಕುರಿತ ಮಾಹಿತಿ ಸಂಗ್ರಹ
- ಕೂಡಲ ಸಂಗಮದ ಚರಿತ್ರೆಯ ಮಹತ್ವ ಸಂಗ್ರಹ
- ಚಿತ್ರದಲ್ಲಿ ಚರಿತ್ರೆ
- ಅಂತರ್ಜಾಲ
- ವಿಶ್ವಕೋಶ ಬಳಕೆ
- ಮತ ಪ್ರವರ್ತಕರ ಚಾರ್ಟ್ ಸಂಗ್ರಹ
ಬೋಧನೋಪಕರಣಗಳು:
- ಕರ್ನಾಟಕ ಮತ್ತು ಭಾರತದ ಭೂಪಟ
- ಮಧ್ವ, ಬಸವ, ರಾಮಾನುಜ, ಶಂಕರರ ಭಾವ ಚಿತ್ರಗಳು, ಮಿಂಚು ಪಟ್ಟಿಗಳು
- ಚರ್ಚಾಂಶಗಳ ಪಟ್ಟಿ
- ಆಯಾ ಮತಪ್ರವರ್ತಕರ ನಂತರ ಬೆಳಕಿಗೆ ಬಂದ ಮಠಗಳ ಪಟ್ಟಿ
- ವಚನಕಾರರ ಹೆಸರುಗಳ ಸಂಗ್ರಹ
- ವಚನಗಳ ಸಂಗ್ರಹ
- ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಂ ಇವರುಗಳ ನಡುವೆ ಸಾಮ್ಯತೆ ಕುರಿತು ನಾಟಕ ರಚನೆ ಮತ್ತು ಅಭಿನಯ.
ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಧಾರ್ಮಿಕ ಸುಧಾರಣೆ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಭಕ್ತಿ, ಧ್ಯಾನ, ಏಕಾಗ್ರತೆಗಳ ಮಹತ್ವ.
- ಜಗತ್ತಿನಲ್ಲಿ ಅಮೂಲ್ಯವಾದುದು ಸತ್ಯ
- ಬದುಕಿನಲ್ಲಿ ಜ್ಞಾನಮಾರ್ಗವೇ ಶ್ರೇಷ್ಟವಾದುದು
- ಆತ್ಮೋದ್ಧಾರ ಭಕ್ತಿಯಿಂದ ಮಾತ್ರ ಸಾಧ್ಯ.
- ಕಾಯಕವೇ ಕೈಲಾಸ
- ಸಮಾನತೆ ಕಲ್ಪನೆಯ ಸರಳ ಜೀವನ ಶೈಲಿ
- ಕೆಲಸ ನಿರ್ವಹಿಸುವಲ್ಲಿನ ಸೇವಕತ್ವ
- ಸರ್ವರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಬೇಕು
- ದೇವರು ಒಬ್ಬನೇ
- ಮನುಜಮತ ವಿಶ್ವಪಥದ ಪರಿಕಲ್ಪನೆ.

ಶನಿವಾರ, ಜೂನ್ 27, 2015

ಹಣದುಬ್ಬರವಿಳಿತದ ಸಮಗ್ರ ಮಾಹಿತಿ 2

ಹಣದುಬ್ಬರವಿಳಿತದ ಸುರುಳಿಸಂಪಾದಿಸಿ

ಹಣದುಬ್ಬರವಿಳಿತದ ಸುರುಳಿ ಎಂಬುದೊಂದು ಸನ್ನಿವೇಶವಾಗಿದ್ದು, ಬೆಲೆಯಲ್ಲಿನ ಇಳಿಕೆಯು ಕಡಿಮೆ ಪ್ರಮಾಣದ ಉತ್ಪಾದನೆಗೆ ಕಾರಣವಾಗುವುದನ್ನು, ಅದು ಪ್ರತಿಯಾಗಿ ಕಡಿಮೆ ಮಜೂರಿಗಳು ಹಾಗೂ ಬೇಡಿಕೆಗೆ ಕಾರಣವಾಗುವುದನ್ನು, ಅದು ಪ್ರತಿಯಾಗಿ ಬೆಲೆಯಲ್ಲಿ ಮತ್ತಷ್ಟು ಇಳಿಕೆಗೆ ಕಾರಣವಾಗುವುದನ್ನು ಒಳಗೊಂಡಿರುತ್ತದೆ.[೭] ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿನ ಇಳಿಕೆಗಳು ಹಣದುಬ್ಬರವಿಳಿತ ಎಂದು ಕರೆಯಲ್ಪಡುವುದರಿಂದ, ಒಂದು ಸಮಸ್ಯೆಯು ಅದರ ಸ್ವಂತ ಕಾರಣವನ್ನೇ ಉಲ್ಬಣಗೊಳಿಸುವುದನ್ನು ಒಳಗೊಂಡಿರುವ ಒಂದು ವಿಷವರ್ತುಲಕ್ಕೆ ಬೆಲೆಯಲ್ಲಿನ ಇಳಿಕೆಗಳು ಕೊಂಡೊಯ್ದಾಗ ಅದನ್ನು ಒಂದು ಹಣದುಬ್ಬರವಿಳಿತದ ಸುರುಳಿ ಎಂದು ಕರೆಯಲಾಗುತ್ತದೆ. ಮಹಾನ್‌ ಆರ್ಥಿಕ ಮತ್ತು ಕೈಗಾರಿಕಾ ಕುಸಿತವು ಒಂದು ಹಣದುಬ್ಬರವಿಳಿತದ ಸುರುಳಿ ಎಂದು ಅನೇಕರಿಂದ ಕರೆಯಲ್ಪಟ್ಟಿತ್ತು. ಹಣದುಬ್ಬರವಿಳಿತದ ಸುರುಳಿಗಳು ವಾಸ್ತವವಾಗಿ ಸಂಭವಿಸುತ್ತವೆಯೇ ಎಂಬುದು ಒಂದು ವಿವಾದಾಸ್ಪದ ವಿಷಯವಾಗಿದೆ.
ಒಂದು ಹಣದುಬ್ಬರವಿಳಿತದ ಸುರುಳಿಯು 19ನೇ ಶತಮಾನದ ಸಾರ್ವತ್ರಿಕ ಅತಿಪೂರೈಕಾ ವಿವಾದದ ಒಂದು ಆಧುನಿಕ ಮಹದಾರ್ಥಿಕ ರೂಪವಾಗಿದೆ. ಇರ್ವಿಂಗ್ ಫಿಶರ್‌‌ನ ಸಿದ್ಧಾಂತವು ಇದಕ್ಕೆ ಸಂಬಂಧಿಸಿದ ಮತ್ತೊಂದು ಪರಿಕಲ್ಪನೆಯಾಗಿದ್ದು, ಹೆಚ್ಚುವರಿ ಪ್ರಮಾಣದ ಋಣಭಾರವು ಒಂದು ನಿರಂತರವಾದ ಹಣದುಬ್ಬರವಿಳಿತವನ್ನು ಉಂಟುಮಾಡಬಲ್ಲದು ಎಂಬುದನ್ನು ಅದು ಪ್ರತಿಪಾದಿಸುತ್ತದೆ.

ಅತಿ-ಹಣದುಬ್ಬರಕ್ಕೆ ಪ್ರತಿಕ್ರಿಯೆಸಂಪಾದಿಸಿ
ಅತಿ-ಹಣದುಬ್ಬರವು ಒಂದು ಚಲಾವಣಾ ಹಣವನ್ನು ನಾಶಪಡಿಸುತ್ತಿರುವಾಗ, ಇತರ ಚಲಾವಣಾ ಹಣಗಳಲ್ಲಿ ತಮ್ಮ ಉಳಿತಾಯದ ಹಣವನ್ನು ಸಾಗಿಸಲು ಜನರು ಮುನ್ನುಗ್ಗಿ ಹೋಗುತ್ತಾರೆ. ಇದರಿಂದಾಗಿ ಆ ಇತರ ಚಲಾವಣಾ ಹಣಗಳಲ್ಲಿ ಹಣದುಬ್ಬರವಿಳಿತವು ಕಂಡುಬರಬಹುದು. ಇದಕ್ಕೆ ಪರ್ಯಾಯವಾಗಿ, ಒಂದು ವೇಳೆ ಅತಿ-ಹಣದುಬ್ಬರವನ್ನು ಉಂಟುಮಾಡುತ್ತಿರುವ ಕಾರ್ಯನೀತಿಗಳು ಇದ್ದಕ್ಕಿದ್ದಂತೆ ಬದಲಾಯಿಸಲ್ಪಟ್ಟರೆ, ಚಲಾವಣಾ ಹಣದಲ್ಲಿ ಜನರು ದೃಢವಿಶ್ವಾಸವನ್ನು ಮತ್ತೆ ಗಳಿಸುವುದರಿಂದ, ಆಗ ಒಂದು ಸಂಕ್ಷಿಪ್ತವಾದ ಹಣದುಬ್ಬರವಿಳಿತವು ಸಂಭವಿಸಬಹುದು.

ಹಣದುಬ್ಬರವಿಳಿತದ ಕಾರಣಗಳುಸಂಪಾದಿಸಿ
ಮುಖ್ಯವಾಹಿನಿ ಅರ್ಥಶಾಸ್ತ್ರದಲ್ಲಿ, ಸರಕುಗಳಿಗಾಗಿರುವ ಪೂರೈಕೆ ಮತ್ತು ಬೇಡಿಕೆ ಹಾಗೂ ಹಣಕ್ಕಾಗಿರುವ ಪೂರೈಕೆ ಮತ್ತು ಬೇಡಿಕೆಯ ಒಂದು ಸಂಯೋಜನೆಯಿಂದ ಹಣದುಬ್ಬರವಿಳಿತವು ಕಂಡುಬರಬಹುದು. ಸ್ಪಷ್ಟವಾಗಿ ಹೇಳುವುದಾದರೆ, ಇದರಲ್ಲಿ ಹಣದ ಪೂರೈಕೆಯು ಕೆಳಗೆ ಹೋಗುತ್ತಿರುತ್ತದೆ ಮತ್ತು ಸರಕುಗಳ ಪೂರೈಕೆಯು ಮೇಲೆ ಹೋಗುತ್ತಿರುತ್ತದೆ. ಹಣದ ಪೂರೈಕೆಯಲ್ಲಿ ಒಂದು ಏರಿಕೆಯಿಲ್ಲದೆಯೇ ಸರಕುಗಳ ಪೂರೈಕೆಯು ಮೇಲೆಕ್ಕೆ ಹೋಗುವುದರೊಂದಿಗೆ (ಹೆಚ್ಚಳಗೊಂಡ ಉತ್ಪಾದಕತೆಯ ಕಾರಣದಿಂದಾಗಿ) ಅಥವಾ (ಮಹಾನ್‌ ಆರ್ಥಿಕ ಮತ್ತು ಕೈಗಾರಿಕಾ ಕುಸಿತದೊಂದಿಗೆ ಇದ್ದಂತೆ ಹಾಗೂ 1990ರ ದಶಕದ ಆರಂಭದಲ್ಲಿ ಜಪಾನ್‌ನಲ್ಲಿ ಕಂಡುಬಂದಂತೆ) ಹಣ ಪೂರೈಕೆಯಲ್ಲಿನ ಒಂದು ಇಳಿಕೆಯೊಂದಿಗೆ ಸಂಯೋಜಿತಗೊಂಡಿರುವ ಸರಕುಗಳಿಗಾಗಿರುವ ಬೇಡಿಕೆಯು ಕುಸಿಯುತ್ತಿರುವುದರೊಂದಿಗೆ ಹಣದುಬ್ಬರವಿಳಿತದ ಐತಿಹಾಸಿಕ ಪ್ರಸಂಗಗಳು ಅನೇಕ ವೇಳೆ ಸಂಬಂಧವನ್ನು ಹೊಂದಿರುತ್ತವೆ. ಬೆನ್‌ ಬೆರ್ನಾಂಕೆಯಿಂದ ಕೈಗೊಳ್ಳಲ್ಪಟ್ಟ, ಮಹಾನ್‌ ಆರ್ಥಿಕ ಹಾಗೂ ಕೈಗಾರಿಕಾ ಕುಸಿತದ ಅಧ್ಯಯನಗಳು ಸೂಚಿಸಿರುವ ಪ್ರಕಾರ, ಇಳಿಕೆಯಾದ ಬೇಡಿಕೆಗೆ ಪ್ರತಿಯಾಗಿ ಆ ಸಮಯದ ಫೆಡರಲ್‌ ರಿಸರ್ವ್‌ ವ್ಯವಸ್ಥೆಯು ಹಣ ಪೂರೈಕೆಯನ್ನು ತಗ್ಗಿಸಿದ್ದರಿಂದಾಗಿ ಅದು ಹಣದುಬ್ಬರವಿಳಿತಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿತು.
ಹಣದುಬ್ಬರವಿಳಿತದ ಮೂಲಭೂತ ವಿಧಗಳುಸಂಪಾದಿಸಿ
ಹಣದುಬ್ಬರವಿಳಿತವನ್ನು ನಾಲ್ಕು ವಿಧಗಳಾಗಿ ವಿಂಗಡಿಸಬಹುದು. ಇವುಗಳ ಪೈಕಿ ಎರಡು ಬೇಡಿಕೆಯ ಪಕ್ಷದಲ್ಲಿದ್ದರೆ, ಮತ್ತೆರಡು ಪೂರೈಕೆಯ ಪಕ್ಷದಲ್ಲಿವೆ:
◾ಬೆಳವಣಿಗೆಯ ಹಣದುಬ್ಬರವಿಳಿತ. (ಸರಕುಗಳ ಪೂರೈಕೆಯಲ್ಲಿನ ಏರಿಕೆ. CPIನಲ್ಲಿನ ಇಳಿಕೆ).
◾ನಗದು ನಿರ್ಮಿಸುವ (ಹಣ ಸಂಗ್ರಹಣೆ) ಹಣದುಬ್ಬರವಿಳಿತ (ನಗದಿನ ಹೆಚ್ಚು ಉಳಿತಾಯಗಳು. ಹಣದ ವೇಗದಲ್ಲಿನ ಇಳಿಕೆ. ಹಣಕ್ಕಾಗಿರುವ ಬೇಡಿಕೆಯಲ್ಲಿನ ಏರಿಕೆ)
◾ಬ್ಯಾಂಕಿನ ಖಾತೆಯಲ್ಲಿರುವ ಹಣದ ಹಣದುಬ್ಬರವಿಳಿತ. (ದಿವಾಳಿತನ ಅಥವಾ ಕೇಂದ್ರ ಬ್ಯಾಂಕಿನಿಂದ ಬರುವ ಹಣ ಪೂರೈಕೆಯಲ್ಲಿನ ಕುಗ್ಗುವಿಕೆಯಿಂದಾಗಿ ಬ್ಯಾಂಕಿನ ಖಾತೆಯಲ್ಲಿರುವ ಹಣದ ಪೂರೈಕೆಯಲ್ಲಿನ ಇಳಿತ)
◾ಜಫ್ತಿ ಮಾಡಬಲ್ಲ ಹಣದುಬ್ಬರವಿಳಿತ. (ಬ್ಯಾಂಕಿನ ಠೇವಣಿಗಳ ಜಫ್ತಿ ಅಥವಾ ತಡೆಹಿಡಿತಗೊಳಿಸುವಿಕೆ. ಹಣ ಪೂರೈಕೆಯ ಇಳಿಕೆ)
ಹಣ ಪೂರೈಕೆ ಪಕ್ಷದ ಬಗೆಯ ಹಣದುಬ್ಬರವಿಳಿತಸಂಪಾದಿಸಿ
ಒಂದು ಹಣ-ನಿಯಂತ್ರಣವಾದಿ ದೃಷ್ಟಿಕೋನದಿಂದ ಹೇಳುವುದಾದರೆ, ಹಣದ ವೇಗ ಮತ್ತು/ಅಥವಾ ತಲಾವ್ಯಕ್ತಿಗೆ ಹಣ ಪೂರೈಕೆಯ ಮೊತ್ತದಲ್ಲಿನ ಒಂದು ಇಳಿಕೆಯಿಂದಾಗಿ ಹಣದುಬ್ಬರವಿಳಿತವು ಮುಖ್ಯವಾಗಿ ಕಂಡುಬರುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಸಾಲದ ಹಣದುಬ್ಬರವಿಳಿತಸಂಪಾದಿಸಿ
ಆಧುನಿಕ ಸಾಲ-ಆಧರಿತ ಆರ್ಥಿಕತೆಗಳಲ್ಲಿ, (ಕೇಂದ್ರ ಬ್ಯಾಂಕು) ಹೆಚ್ಚಿನ ಬಡ್ಡಿದರಗಳನ್ನು (ಅಂದರೆ, ಹಣದುಬ್ಬರವನ್ನು 'ನಿಯಂತ್ರಿಸಲು') ಆರಂಭಿಸುವುದರಿಂದ ಒಂದು ಹಣದುಬ್ಬರವಿಳಿತದ ಸುರುಳಿಯು ಉಂಟಾಗಬಹುದು. ಇದರಿಂದಾಗಿ ಒಂದು ಸ್ವತ್ತಿನ ನಿರಾಧಾರವಾದ ಪ್ರಯತ್ನವನ್ನು ಒತ್ತೆಯಿಡುವ ಅಥವಾ ವಾಸ್ತವವಾಗಿ ತಾನು ಬೆಂಬಲಿಸಬಹುದಾದುದಕ್ಕಿಂತ ಒಂದು ಉತ್ಪಾದನೆಯ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದ್ದ ನಿಯಂತ್ರಣದ ಆರ್ಥಿಕತೆಯೊಂದರ ಕುಸಿತದ ಸಾಧ್ಯತೆ ಉಂಟಾಗುತ್ತದೆ. ಸಾಲ-ಆಧರಿತ ಆರ್ಥಿಕತೆಯೊಂದರಲ್ಲಿ, ಹಣ ಪೂರೈಕೆಯಲ್ಲಿನ ಒಂದು ಕುಸಿತವು ಗಮನಾರ್ಹವಾಗಿ ಕಡಿಮೆಯಾದ ಸಾಲನೀಡಿಕೆಗೆ ಕಾರಣವಾಗುತ್ತದೆ. ಹಣ ಪೂರೈಕೆಯಲ್ಲಿ ಮತ್ತಷ್ಟು ತೀಕ್ಷ್ಣವಾದ ಕುಸಿತ ಕಂಡುಬಂದರೆ, ತತ್ಪರಿಣಾಮವಾಗಿ ಸರಕುಗಳಿಗಾಗಿರುವ ಬೇಡಿಕೆಯಲ್ಲಿನ ಒಂದು ತೀಕ್ಷ್ಣವಾದ ಕುಸಿತವು ಸಂಭವಿಸುತ್ತದೆ. ಬೇಡಿಕೆ ಕುಸಿಯುತ್ತದೆ, ಮತ್ತು ಬೇಡಿಕೆಯ ಕುಸಿತದೊಂದಿಗೆ ಪೂರೈಕೆಯ ಮಿತಿಮೀರಿಕೆ ಬೆಳೆದಂತೆ ಬೆಳೆಗಳಲ್ಲಿನ ಒಂದು ಕುಸಿತ ಕಂಡುಬರುತ್ತದೆ. ಹಣಕಾಸು ನೆರವಿನ ಉತ್ಪಾದನೆಯ ವೆಚ್ಚಗಳಿಗಿಂತ ಕೆಳಗೆ ಬೆಲೆಗಳು ಕುಸಿದಾಗ ಇದು ಒಂದು ಹಣದುಬ್ಬರವಿಳಿತದ ಸುರುಳಿಯಾಗಿ ಪರಿಣಮಿಸುತ್ತದೆ. ತಾವು ಎಷ್ಟು ಕಡಿಮೆ ಮಟ್ಟದಲ್ಲಿ ಬೆಲೆಗಳನ್ನು ನಿಗದಿಪಡಿಸಿವೆ ಎಂಬುವಂತಿದ್ದರೂ ಸಾಕಷ್ಟು ಲಾಭವನ್ನು ಮಾಡಲು ಅಸಮರ್ಥವಾಗುವ ವ್ಯವಹಾರಗಳು ಆಗ ಮುಚ್ಚಿಹೋಗುತ್ತವೆ. (ಅಡಮಾನದ) ಸಾಲವನ್ನು ಮಾಡಿದಾಗಿನಿಂದ ಮೌಲ್ಯದಲ್ಲಿ ನಾಟಕೀಯವಾಗಿ ಕುಸಿತಕಂಡಿರುವ ಸ್ವತ್ತುಗಳನ್ನು ಬ್ಯಾಂಕುಗಳು ಪಡೆಯುತ್ತವೆ, ಮತ್ತು ಒಂದು ವೇಳೆ ಆ ಸ್ವತ್ತುಗಳನ್ನು ಅವು ಮಾರಿದರೆ ಅವು ಪೂರೈಕೆಯನ್ನು ಮತ್ತಷ್ಟು ಮಿತಿಮೀರಿಸುವುದರ ಜೊತೆಗೆ ಸನ್ನಿವೇಶವು ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತವೆ. ಹಣದುಬ್ಬರವಿಳಿತದ ಸುರುಳಿಯನ್ನು ನಿಧಾನಗೊಳಿಸಲು ಅಥವಾ ಸ್ವಲ್ಪ ನಿಲ್ಲಿಸಲು, ಬ್ಯಾಂಕುಗಳು ಕೆಲವೊಮ್ಮೆ ಕಳಪೆ ಮರುಪಾವತಿಯ ಸಾಲಗಳ ವಸೂಲಾತಿ ಕಾರ್ಯವನ್ನು (ತೀರಾ ಇತ್ತೀಚೆಗೆ ಜಪಾನ್‌ನಲ್ಲಿ ಆದಂತೆ) ತಡೆಹಿಡಿಯುತ್ತವೆ. ಹಲವು ವೇಳೆ ಇದು ತತ್ಕಾಲದ ಅವಶ್ಯಕತೆಯನ್ನು ಪೂರೈಸುವ ಒಂದು ವಿಧಾನಕ್ಕಿಂತ ಹೆಚ್ಚೇನೂ ಆಗಿರುವುದಿಲ್ಲ. ಏಕೆಂದರೆ ಸಾಲವನ್ನು ನೀಡಲು ಅವುಗಳ ಬಳಿಯಲ್ಲಿ ಹಣವಿರುವುದಿಲ್ಲವಾದ್ದರಿಂದ ಆಗ ಅವು ಸಾಲದ ನೀಡಿಕೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ. ಇದು ಬೇಡಿಕೆಯನ್ನು ಮತ್ತಷ್ಟು ತಗ್ಗಿಸುತ್ತದೆ, ಹಾಗೂ ಅದೇ ರೀತಿಯಲ್ಲಿ ಮುಂದುವರಿಯುತ್ತದೆ.
'ಅಧಿಕೃತ' ಹಣದ ಕೊರತೆಯ ಪರಿಣಾಮಗಳುಸಂಪಾದಿಸಿ
ಅಸ್ಥಿರ ಚಲಾವಣಾ ಹಣದ ಆರ್ಥಿಕತೆಗಳಲ್ಲಿ, ಪದಾರ್ಥ ವಿನಿಮಯ ಹಾಗೂ ಡಾಲರೀಕರಣದಂಥ ಇತರ ಪರ್ಯಾಯ ಚಲಾವಣಾ ಹಣದ ವ್ಯವಸ್ಥೆಗಳು ಸಾಮಾನ್ಯವಾಗಿವೆ. ಆದ್ದರಿಂದ ’ಅಧಿಕೃತ’ ಹಣದ ಕೊರತೆ ಕಂಡುಬಂದಾಗ (ಅಥವಾ ವಾಡಿಕೆಯಂತೆ ನೆಚ್ಚಲಾಗದ ಸ್ಥಿತಿಗೆ ಮುಟ್ಟಿದಾಗ), ವ್ಯವಹಾರವು ಇನ್ನೂ ಮುಂದುವರಿಯಬಲ್ಲದು (ತೀರಾ ಇತ್ತೀಚೆಗೆ ರಷ್ಯಾ ಮತ್ತು ಅರ್ಜೆಂಟೈನಾದಲ್ಲಿ ತಲೆದೋರಿದ ಸನ್ನಿವೇಶ ಇದಕ್ಕೆ ಉದಾಹರಣೆ).[ಸೂಕ್ತ ಉಲ್ಲೇಖನ ಬೇಕು] ಇಂಥ ಆರ್ಥಿಕತೆಗಳಲ್ಲಿ ಕೇಂದ್ರ ಸರ್ಕಾರವು ಅನೇಕ ಬಾರಿ ಅಸಮರ್ಥವಾಗಿರುತ್ತದೆಯಾದ್ದರಿಂದ, ಒಂದು ವೇಳೆ ಅದರ ಒಪ್ಪಿಗೆಯಿದ್ದರೂ, ಆಂತರಿಕ ಆರ್ಥಿಕತೆಯನ್ನು ಸಮರ್ಪಕವಾಗಿ ನಿಯಂತ್ರಿಸಲು, ಆಮದು ಸರಕುಗಳಿಗಾಗಿ ಪಾವತಿಸಬೇಕಾಗಿ ಬರುವುದನ್ನು ಹೊರತುಪಡಿಸಿ ಅಧಿಕೃತ ಚಲಾವಣಾ ಹಣವನ್ನು ಹೊಂದಬೇಕಾಗುವ ಬಲವಂತದ ಅಗತ್ಯವು ವ್ಯಕ್ತಿಗಳಿಗೆ ಎದುರಾಗುವುದಿಲ್ಲ. ವಾಸ್ತವವಾಗಿ, ಇಂಥ ಆರ್ಥಿಕತೆಗಳಲ್ಲಿ ಪದಾರ್ಥ ವಿನಿಮಯವು ಒಂದು ರಕ್ಷಣಾತ್ಮಕ ದರಪಟ್ಟಿಯಾಗಿ ಪಾತ್ರವಹಿಸುವುದರ ಜೊತೆಗೆ, ಸ್ಥಳೀಯ ಉತ್ಪಾದನೆಯ ಸ್ಥಳೀಯ ಬಳಕೆಯನ್ನು ಪ್ರೋತ್ಸಾಹಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಗಣಿಗಾರಿಕೆ ಮತ್ತು ಪರಿಶೋಧನೆಗೆ ಒಂದು ಪ್ರೇರಣೆಯಾಗಿಯೂ ಇದು ಪಾತ್ರವಹಿಸುತ್ತದೆ. ಏಕೆಂದರೆ ಇಂಥ ಒಂದು ಆರ್ಥಿಕತೆಯಲ್ಲಿ ಹಣವನ್ನು ಮಾಡಲು ಇರುವ ಒಂದು ಸುಲಭ ವಿಧಾನವೆಂದರೆ, ಅದನ್ನು ನೆಲದಿಂದ ಹೊರಗೆ ಅಗೆದು ತೆಗೆಯುವುದೇ ಆಗಿದೆ.
ವಿಶೇಷ ವ್ಯವಸ್ಥೆಗಳು (?)ಸಂಪಾದಿಸಿ
ಕೇಂದ್ರ ಬ್ಯಾಂಕು ಅತ್ಯಲ್ಪ ಮೊತ್ತದ ಬಡ್ಡಿದರಗಳನ್ನು ಪೂರ್ತಿಯಾಗಿ ಶೂನ್ಯಕ್ಕೆ ಇಳಿಸಿದಾಗ, ಬಡ್ಡಿ ದರಗಳನ್ನು ತಗ್ಗಿಸುವುದರಿಂದ ಬೇಡಿಕೆಯನ್ನು ಮತ್ತಷ್ಟು ಪ್ರಚೋದಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ಇದೇ ದ್ರವ್ಯತೆಯ ಜಾಲ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಹಣದುಬ್ಬರವಿಳಿತವು ನಿಯಂತ್ರಣವನ್ನು ಕೈಗೆತ್ತಿಕೊಂಡಾಗ, ಒಂದು ಶೂನ್ಯ ಅತ್ಯಲ್ಪ ಬಡ್ಡಿದರದಲ್ಲಿ (ಋಣಾತ್ಮಕ ಹಣದುಬ್ಬರ ದರದ ಕಾರಣದಿಂದಾಗಿ, ಇದು ಇನ್ನೂ ಅತಿ ಹೆಚ್ಚಿನ ಒಂದು ವಾಸ್ತವಿಕ ಬಡ್ಡಿದರವಾಗಿರಲು ಸಾಧ್ಯವಿದೆ) ಹಣವನ್ನು "ಸಾಲ ನೀಡಲು" ಅದಕ್ಕೆ "ವಿಶೇಷ ವ್ಯವಸ್ಥೆಗಳ" ಅಗತ್ಯ ಕಂಡುಬರುತ್ತದೆ. ಹಣದ ಪೂರೈಕೆಯನ್ನು (ಕೃತಕವಾಗಿ) ಏರಿಸಲು ಇದು ಅಗತ್ಯವಾಗಿರುತ್ತದೆ.
ಸಾಲದ ಹಣ ಹಣದುಬ್ಬರವಿಳಿತದ ಉದಾಹರಣೆಗಳುಸಂಪಾದಿಸಿ
ಮಹಾನ್‌ ಆರ್ಥಿಕ ಕುಸಿತದ ಅವಧಿಯಲ್ಲಿನ ವಿಸ್ತೃತ ಪ್ರಮಾಣಕ್ಕೆ ಸಂಬಂಧಿಸಿದಂತೆ ಈ ಚಕ್ರವನ್ನು ಪತ್ತೆಹಚ್ಚಲಾಗಿದೆ. ತೀಕ್ಷ್ಣವಾಗಿ ಕುಸಿದ ಅಂತರರಾಷ್ಟ್ರೀಯ ವ್ಯಾಪಾರವು, ಸರಕುಗಳಿಗಾಗಿರುವ ಬೇಡಿಕೆಯು ತೀವ್ರವಾಗಿ ಕುಸಿಯಲು ಕಾರಣವಾಯಿತು. ತನ್ಮೂಲಕ ಅದು ಸಾಮರ್ಥ್ಯದ ಒಂದು ಮಹಾನ್‌ ಪ್ರಮಾಣವನ್ನು ನಿರರ್ಥಕಗೊಳಿಸಿ, ಬ್ಯಾಂಕಿನ ವೈಫಲ್ಯತೆಯ ಒಂದು ಸರಣಿಯನ್ನೇ ಪ್ರಾರಂಭಿಸಿತು. 1990ರ ದಶಕದ ಆರಂಭದಲ್ಲಿ ಷೇರು ಮಾರುಕಟ್ಟೆ ಮತ್ತು ಸ್ಥಿರಾಸ್ತಿ ಮಾರುಕಟ್ಟೆಗಳು ಕುಸಿಯುವುದರೊಂದಿಗೆ ಪ್ರಾರಂಭಗೊಂಡು, ಜಪಾನ್‌ನಲ್ಲಿ ಇದೇ ತೆರನಾದ ಸನ್ನಿವೇಶ ಉದ್ಭವಗೊಂಡಿತ್ತು. ಆದರೆ ಬಹುತೇಕ ಬ್ಯಾಂಕುಗಳ ಕುಸಿಯುವಿಕೆಯನ್ನು ತಡೆಯುವ ಮೂಲಕ ಹಾಗೂ ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದ ಹಲವಾರು ಬ್ಯಾಂಕುಗಳನ್ನು ತನ್ನ ನೇರ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಜಪಾನ್‌ ಸರ್ಕಾರವು ಈ ಸನ್ನಿವೇಶಕ್ಕೆ ತಡೆಯೊಡ್ಡಿತು. ಈ ಸಂಗತಿಗಳು ಒಂದು ತೀವ್ರ ಸ್ವರೂಪದ ಚರ್ಚಾವಿಷಯಗಳಾಗಿ ಪರಿಣಮಿಸಿವೆ.
2000ರ ಹಿಂಜರಿತದ ನಂತರದ ಅವಧಿಯಲ್ಲಿನ ತೀವ್ರ ಹಣದುಬ್ಬರವಿಳಿತ ಅಪಾಯಸಂಪಾದಿಸಿ
ಕೆಲವೊಂದು ಅರ್ಥಶಾಸ್ತ್ರಜ್ಞರು ವಾದಿಸುವ ಪ್ರಕಾರ, 2000 ಹಿಂಜರಿತದ ನಂತರದ ಸನ್ನಿವೇಶವು US ತೀವ್ರ ಹಣದುಬ್ಬರವಿಳಿತದ ಅಪಾಯದಲ್ಲಿ ಸಿಲುಕಿಕೊಂಡಿದ್ದ ಅವಧಿಯನ್ನು ಒಳಗೊಂಡಿತ್ತು, ಮತ್ತು ಈ ಕಾರಣದಿಂದಾಗಿಯೇ ಫೆಡರಲ್‌ ರಿಸರ್ವ್‌ ಕೇಂದ್ರ ಬ್ಯಾಂಕು 2001ರಿಂದ ಪ್ರಾರಂಭಿಸಿ ಒಂದು "ಹೊಂದಾಣಿಕೆಯ" ದೃಷ್ಟಿಕೋನದಲ್ಲಿ ಬಡ್ಡಿದರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು ಸಮರ್ಥನೀಯವಾಗಿತ್ತು.

ಹಣದುಬ್ಬರವಿಳಿತವನ್ನು ನಿವಾರಿಸುವಿಕೆಸಂಪಾದಿಸಿ

Unbalanced scales.svg
 
1930ರ ದಶಕದವರೆಗೆ, ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ನಂಬಿಕೊಂಡಿದ್ದ ಪ್ರಕಾರ, ಹಣದುಬ್ಬರವಿಳಿತವು ತನಗೆ ತಾನೇ ಸರಿಯಾಗುತ್ತದೆ ಎಂಬುದೇ ಆಗಿತ್ತು. ಬೆಲೆಗಳು ಇಳಿದಂತೆ, ಬೇಡಿಕೆಯು ಸ್ವಾಭಾವಿಕವಾಗಿ ಏರುತ್ತದೆ ಮತ್ತು ಬಾಹ್ಯ ಹಸ್ತಕ್ಷೇಪವಿಲ್ಲದೆಯೇ ಆರ್ಥಿಕ ವ್ಯವಸ್ಥೆಯು ತನಗೆ ತಾನೇ ಸರಿಹೋಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು.
ಮಹಾನ್‌ ಆರ್ಥಿಕ ಕುಸಿತದ ಅವಧಿಯಲ್ಲಿನ 1930ರ ದಶಕದಲ್ಲಿ ಈ ದೃಷ್ಟಿಕೋನವು ನಿರಾಕರಣೆಗೆ ಒಳಗಾಯಿತು. ಕೇನ್ಸ್‌ ಪಂಥೀಯ ಅರ್ಥಶಾಸ್ತ್ರಜ್ಞರು ತಮ್ಮ ವಾದವನ್ನು ಮಂಡಿಸುತ್ತಾ, ಹಣದುಬ್ಬರವಿಳಿತಕ್ಕೆ ಸಂಬಂಧಿಸಿದಂತೆ ಆರ್ಥಿಕ ವ್ಯವಸ್ಥೆಯು ಸ್ವಯಂ-ತಿದ್ದಿಕೊಳ್ಳುವಂಥದ್ದಾಗಿಲ್ಲ ಮತ್ತು ಸರ್ಕಾರಗಳು ಹಾಗೂ ಕೇಂದ್ರ ಬ್ಯಾಂಕುಗಳು ತೆರಿಗೆಯ ಕಡಿತ ಅಥವಾ ಸರ್ಕಾರಿ ವೆಚ್ಚಗಳಲ್ಲಿನ ಏರಿಕೆಗಳ ಮೂಲಕ ಬೇಡಿಕೆಯನ್ನು ಏರಿಸಲು ಸಕ್ರಿಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಮರ್ಥಿಸಿದರು. ಕೇಂದ್ರ ಬ್ಯಾಂಕಿನಿಂದ ನಿಗದಿಪಡಿಸಲಾಗಿದ್ದ ಮೀಸಲು ಅಗತ್ಯತೆಗಳು ಹೆಚ್ಚಿನದಾಗಿದ್ದವು ಮತ್ತು ಈ ಮೀಸಲು ಅಗತ್ಯತೆಗಳನ್ನು ಹಾಗೆಯೇ ತಗ್ಗಿಸುವ ಮೂಲಕ ಹಾಗೂ ಸಾಲದ ಪ್ರಮಾಣದಲ್ಲಿನ (ಸಾಲವು ಹಣದ ಒಂದು ಸ್ವರೂಪವಾಗಿದೆ) ಕುಸಿತದ ಕಾರಣದಿಂದಾಗಿ ಖಾಸಗಿ ವಲಯಗಳಲ್ಲಿನ ಹಣ ಪೂರೈಕೆಯ ಕಡಿತವನ್ನು ಸರಿದೂಗಿಸಲು "ಮುಕ್ತ" ಮಾರುಕಟ್ಟೆಯ ಕಾರ್ಯಾಚರಣೆಗಳ (ಉದಾಹರಣೆಗೆ, ನಗದಿಗೆ ಪ್ರತಿಯಾಗಿ ಬೊಕ್ಕಸದ ಬಾಂಡ್‌ಗಳನ್ನು ಖರೀದಿಸುವುದು) ಮೂಲಕ ಹಣ ಪೂರೈಕೆಯನ್ನು ಕೇಂದ್ರ ಬ್ಯಾಂಕು ಆಗ ಪರಿಣಾಮಕಾರಿಯಾಗಿ ಏರಿಸಬಹುದಿತ್ತು ಎಂಬುದು ಅವರ ಸಮರ್ಥನೆಯಾಗಿತ್ತು.
ಹಣ-ನಿಯಂತ್ರಣವಾದಿ ಪರಿಕಲ್ಪನೆಗಳು ಹುಟ್ಟಿಕೊಳ್ಳುವುದರೊಂದಿಗೆ, ಹಣದುಬ್ಬರವಿಳಿತವನ್ನು ಎದುರಿಸುವೆಡೆಗಿನ ಗಮನವು ಬಡ್ಡಿದರಗಳನ್ನು ಕಡಿಮೆ ಮಾಡುವ (ಅಂದರೆ, ಹಣದ "ವೆಚ್ಚ"ವನ್ನು ತಗ್ಗಿಸುವ) ಮೂಲಕ ಬೇಡಿಕೆಯನ್ನು ವಿಸ್ತರಿಸುವ ಕಡೆಗೆ ಪ್ರಯೋಗಿಸಲ್ಪಟ್ಟಿತು. 1990ರ ದಶಕದ ಆರಂಭದಲ್ಲಿ ಹಾಗೂ 2000–2002ರಲ್ಲಿ ಸ್ಟಾಕ್‌ ಮಾರುಕಟ್ಟೆಯ ಆಘಾತಗಳು ಆದಾಗ, ಬೇಡಿಕೆಯನ್ನು ಉತ್ತೇಜಿಸಲು ಜಪಾನ್‌ ಮತ್ತು USಗಳೆರಡರಲ್ಲೂ ಕ್ರಮವಾಗಿ ಕೈಗೊಳ್ಳಲಾದ ಹೊಂದಾಣಿಕೆಯ ಕಾರ್ಯನೀತಿಗಳು ವಿಫಲಗೊಂಡುದನ್ನು ಲೆಕ್ಕಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ದೃಷ್ಟಿಕೋನಕ್ಕೆ ಒಂದು ಹಿನ್ನಡೆ ದೊರೆತಿದೆ. ಸ್ವತ್ತಿನ ಬೆಲೆಗಳ ಮೇಲೆ ಹಣಕಾಸಿನ ಕಾರ್ಯನೀತಿಗಳ (ಹಣದುಬ್ಬರದ) ಪ್ರಭಾವದ ಕುರಿತು ಅರ್ಥಶಾಸ್ತ್ರಜ್ಞರು ಈಗ ಚಿಂತಿತರಾಗಿದ್ದಾರೆ. ಹೆಚ್ಚಿನ ಮಟ್ಟದ ಸ್ವತ್ತು ಬೆಲೆಗಳು ಹಾಗೂ ಹೆಚ್ಚುವರಿ ಸಾಲದ ಸಂಗ್ರಹಣೆಗೆ ಸಮರ್ಥಿಸಲಾದ ಕಡಿಮೆ ವಾಸ್ತವಿಕ ಬೆಲೆಗಳು ನೇರ ಕಾರಣವಾಗಬಲ್ಲುದಾಗಿವೆ. ಆದರಿಂದ ದರಗಳನ್ನು ತಗ್ಗಿಸುವುದು ಕೇವಲ ಒಂದು ತಾತ್ಕಾಲಿಕ ಉಪಶಮನವಾಗಿ ಪರಿಣಮಿಸಿ, ಅದು ಅಂತಿಮವಾಗಿ ಭವಿಷ್ಯದ ಸಾಲದ ಒಂದು ಹಣದುಬ್ಬರವಿಳಿತದ ಬಿಕ್ಕಟ್ಟಿನ ಉಲ್ಬಣಕ್ಕೆ ಕಾರಣವಾಗುತ್ತದೆ.

ಹಣದುಬ್ಬರವಿಳಿತದ ಸಮಗ್ರ ಮಾಹಿತಿ


ಅರ್ಥಶಾಸ್ತ್ರದಲ್ಲಿ, ಹಣದುಬ್ಬರವಿಳಿತ ಎಂಬುದು ಸರಕುಗಳು ಮತ್ತು ಸೇವೆಗಳ ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿನ ಒಂದು ಇಳಕೆಯಾಗಿದೆ.[೧] ವಾರ್ಷಿಕ ಹಣದುಬ್ಬರ ದರವು ಶೂನ್ಯ ಶೇಕಡಾವಾರು ಪ್ರಮಾಣಕ್ಕಿಂತ (ಒಂದು ಋಣಾತ್ಮಕ ಹಣದುಬ್ಬರ ದರ) ಕೆಳಗೆ ಬಿದ್ದಾಗ ಹಣದುಬ್ಬರವಿಳಿತವು ಕಂಡುಬರುತ್ತದೆ. ಇದರಿಂದಾಗಿ ಹಣದ ವಾಸ್ತವಿಕ ಮೌಲ್ಯದಲ್ಲಿ ಒಂದು ಹೆಚ್ಚಳ ಕಂಡುಬರುವಂತಾಗಿ, ಅದೇ ಮೊತ್ತದ ಹಣದಿಂದ ಹೆಚ್ಚು ಸರಕುಗಳನ್ನು ಓರ್ವರು ಖರೀದಿಸಲು ಅದು ಅನುವುಮಾಡಿಕೊಡುತ್ತದೆ. ಹಣದುಬ್ಬರ ದರದಲ್ಲಿನ ಒಂದು ನಿಧಾನೀಕರಣವಾದ ಹಣದುಬ್ಬರ ತಗ್ಗಿಸುವಿಕೆಯೊಂದಿಗೆ ಇದನ್ನು ತಪ್ಪಾಗಿ ಗ್ರಹಿಸಬಾರದು (ಅಂದರೆ, ಹಣದುಬ್ಬರ ಇಳಿಕೆಯಾದರೂ, ಧನಾತ್ಮಕವಾಗಿಯೇ ಉಳಿಯುತ್ತದೆ).[೨] ಹಣದುಬ್ಬರವು ಕಾಲಾನಂತರದಲ್ಲಿ ಹಣದ ವಾಸ್ತವಿಕ ಮೌಲ್ಯವನ್ನು ತಗ್ಗಿಸುತ್ತದೆಯಾದ್ದರಿಂದ, ಇದಕ್ಕೆ ಪ್ರತಿಯಾಗಿ, ಒಂದು ರಾಷ್ಟ್ರೀಯ ಅಥವಾ ಪ್ರಾದೇಶಿಕ ಆರ್ಥಿಕತೆಯಲ್ಲಿ ಕಾರ್ಯಾರ್ಥಕ ಚಲಾವಣೆಯಾದ (ಮತ್ತು ಲೆಕ್ಕಪತ್ರದ ಹಣಕಾಸಿನ ಘಟಕವಾದ) ಹಣದ ವಾಸ್ತವಿಕ ಮೌಲ್ಯವನ್ನು ಹಣದುಬ್ಬರವಿಳಿತವು ಏರಿಸುತ್ತದೆ.
ಸದ್ಯದಲ್ಲಿ, ಮುಖ್ಯವಾಹಿನಿಯ ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ನಂಬುವ ಪ್ರಕಾರ, ಹಣದುಬ್ಬರವಿಳಿತ ಎಂಬುದು ಒಂದು ಆಧುನಿಕ ಆರ್ಥಿಕತೆಯಲ್ಲಿನ ಒಂದು ಸಮಸ್ಯೆಯಾಗಿದೆ. ಇದಕ್ಕೆ ಹಣದುಬ್ಬರವಿಳಿತದ ಸುರುಳಿಯೊಂದರ (ಕೆಳಗೆ ವಿವರಿಸಲಾಗಿದೆ ) ಅಪಾಯವೇ ಕಾರಣ ಎಂಬುದು ಅವರ ಅಭಿಮತ.[೩] ಬ್ಯಾಂಕುಗಳು ಠೇವಣಿದಾರರಿಗೆ ಸಂಬಂಧಿಸಿ ಬಾಕೀದಾರನಾಗುವುದರಿಂದ ಹಣದುಬ್ಬರವಿಳಿತವು ಹಿಂಜರಿತಗಳೊಂದಿಗೆ ಹಾಗೂ ಮಹಾನ್‌ ಕುಸಿತದೊಂದಿಗೂ ಸಂಬಂಧಹೊಂದಿರುತ್ತದೆ. ಇದರ ಜೊತೆಗೆ, ದ್ರವ್ಯತೆಯ ಜಾಲ ಎಂದು ಕರೆಯಲಾಗುವ ಒಂದು ಕಾರ್ಯವಿಧಾನದ ಕಾರಣದಿಂದಾಗಿ ಆರ್ಥಿಕತೆಯನ್ನು ಸ್ಥೀರೀಕರಿಸದಂತೆ ಹಣಕಾಸಿನ ನೀತಿಯನ್ನು ಹಣದುಬ್ಬರವಿಳಿತವು ತಡೆಯುತ್ತದೆ. ಆದಾಗ್ಯೂ, ಹಣದುಬ್ಬರವಿಳಿತದ ಎಲ್ಲಾ ನಿದರ್ಶನಗಳೂ ದುರ್ಬಲ ಆರ್ಥಿಕ ಬೆಳವಣಿಗೆಯ ಅವಧಿಗಳೊಂದಿಗೆ ಐತಿಹಾಸಿಕವಾಗಿ ಸಂಬಂಧ ಹೊಂದಿರುವುದಿಲ್ಲ.[೪]


ಸಾಂಪ್ರದಾಯಿಕ ಪದಸಂಪಾದಿಸಿ
ಹಣದ ಪೂರೈಕೆ ಹಾಗೂ ಖಾತೆಯಲ್ಲಿರುವ ಹಣದ ಮೊತ್ತದಲ್ಲಿನ ಒಂದು ಇಳಿಕೆಯನ್ನು ಉಲ್ಲೇಖಿಸಲು "ಹಣದುಬ್ಬರವಿಳಿತ" ಎಂಬ ಪದವು ಒಂದು ಪಯಾರ್ಯ ಅರ್ಥದೊಂದಿಗೆ ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರಿಂದ ಬಳಸಲ್ಪಟ್ಟಿತು; ಆಸ್ಟ್ರಿಯನ್‌-ಆರ್ಥಿಕ ಚಿಂತನಾ ಪಂಥದ ಅನೇಕ ಅರ್ಥಶಾಸ್ತ್ರಜ್ಞರೂ ಸೇರಿದಂತೆ ಕೆಲವೊಂದು ಅರ್ಥಶಾಸ್ತ್ರಜ್ಞರು ಇದೇ ಅರ್ಥದಲ್ಲಿ ಸದರಿ ಪದವನ್ನು ಬಳಸುತ್ತಾರೆ.[೫] ಹಣ ಪೂರೈಕೆಯಲ್ಲಿನ ಇಳಿಕೆಯು (ಹಣದ ವೇಗವು ಬದಲಾಗಿಲ್ಲ ಎಂದು ಭಾವಿಸುತ್ತಾ) ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿ ಒಂದು ಇಳಿಕೆಯನ್ನು ಉಂಟುಮಾಡುವ ಸಂಭವ ಇರುತ್ತದೆಯಾದರಿಂದ, ಎರಡೂ ಅರ್ಥಗಳು ಸಂಬಂಧವನ್ನು ಹೊಂದಿವೆ.

ಹಣದುಬ್ಬರವಿಳಿತದ ಪರಿಣಾಮಗಳುಸಂಪಾದಿಸಿ

Question book-new.svg
 


 
IS/LM ಮಾದರಿಯಲ್ಲಿ (ಅಂದರೆ, I ncome and S aving equilibrium/ L iquidity Preference and M oney Supply ಸಮತೋಲನದ ಮಾದರಿಯಲ್ಲಿ), ಸರಕುಗಳು ಮತ್ತು ಬಡ್ಡಿಗಾಗಿರುವ ಪೂರೈಕೆ ಮತ್ತು ಬೇಡಿಕೆಯ ವ್ಯತ್ಯಾಸಗೊಳ್ಳುವ ಪ್ರಮಾಣದ ಒಂದು ವರ್ಗಾವಣೆಯಿಂದ, ಅದರಲ್ಲೂ ನಿರ್ದಿಷ್ಟವಾಗಿ ಬೇಡಿಕೆಯ ಒಟ್ಟುಗೂಡಿದ ಮಟ್ಟದಲ್ಲಿನ ಒಂದು ಕುಸಿತದಿಂದಾಗಿ ಹಣದುಬ್ಬರವಿಳಿತವು ಉಂಟಾಗುತ್ತದೆ. ಅಂದರೆ, ಸಮಗ್ರ ಆರ್ಥಿಕತೆಯು ಎಷ್ಟರ ಮಟ್ಟಿಗೆ ಕೊಳ್ಳಲು ಒಪ್ಪಿದೆ ಎಂಬುದರಲ್ಲಿ, ಮತ್ತು ಸರಕುಗಳಿಗಾಗಿರುವ ಸದ್ಯದ ಬೆಲೆಯಲ್ಲಿ ಒಂದು ಕುಸಿತವಿರುತ್ತದೆ. ಸರಕುಗಳ ಬೆಲೆಯು ಕುಸಿಯುತ್ತಿರುತ್ತದೆಯಾದ್ದರಿಂದ, ಬೆಲೆಗಳು ಮತ್ತಷ್ಟು ಕುಸಿಯುವವರೆಗೆ ತಮ್ಮ ಖರೀದಿಗಳನ್ನು ಮತ್ತು ಬಳಕೆಯನ್ನು ವಿಳಂಬ ಮಾಡಲು ಗ್ರಾಹಕರಿಗೆ ಒಂದು ರೀತಿಯಲ್ಲಿ ಉತ್ತೇಜನ ಸಿಕ್ಕಿದಂತಾಗುತ್ತದೆ. ಇದು ಒಟ್ಟಾರೆ ಆರ್ಥಿಕ ಚಟುವಟಿಕೆಯು ತಗ್ಗಲು ಕಾರಣವಾಗಿ, ಹಣದುಬ್ಬರವಿಳಿತದ ಸುರುಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.
ಇದು ಸಾಮರ್ಥ್ಯವನ್ನು ವ್ಯಯಗೊಳಿಸುತ್ತದೆಯಾದ್ದರಿಂದ, ಹೂಡಿಕೆಯೂ ಕುಸಿಯುತ್ತದೆ. ಇದರಿಂದಾಗಿ ಒಟ್ಟುಗೂಡಿದ ಬೇಡಿಕೆಯಲ್ಲಿ ಮತ್ತಷ್ಟು ಇಳಿಕೆಗಳು ಉಂಟಾಗಲು ಕಾರಣವಾಗುತ್ತದೆ. ಇದೇ ಹಣದುಬ್ಬರವಿಳಿತದ ಸುರುಳಿ. ಕುಸಿಯುತ್ತಿರುವ ಒಟ್ಟುಗೂಡಿದ ಬೇಡಿಕೆಗೆ ಪ್ರಚೋದನೆಯು ಒಂದು ಉತ್ತರವಾಗಿದೆ. ಇದು ಕೇಂದ್ರ ಬ್ಯಾಂಕಿನಿಂದ ಮಾಡಲ್ಪಟ್ಟ ಹಣ ಪೂರೈಕೆಯ ವಿಸ್ತರಣೆಯಿಂದ ಬರಬಹುದು, ಅಥವಾ ಬೇಡಿಕೆಯನ್ನು ಹೆಚ್ಚಿಸಲು, ಮತ್ತು ಖಾಸಗಿ ಸಂಸ್ಥೆಗಳಿಗೆ ಲಭ್ಯವಿರುವುದಕ್ಕಿಂತ ಕೆಳಗಿರುವ ಬಡ್ಡಿಯ ದರಗಳಲ್ಲಿ ಸಾಲ ಪಡೆಯಲು ಹಣಕಾಸಿಗೆ ಸಂಬಂಧಿಸಿದ ಪ್ರಾಧಿಕಾರದಿಂದ ಬರಬಹುದು.
ಹಣದುಬ್ಬರವು ಪ್ರತಿಕೂಲ ಪರಿಣಾಮವನ್ನು ಹೊಂದಿರುವುದರಿಂದ ವಾಡಿಕೆಯಂತೆ ಹಿಂಜರಿತಕ್ಕೆ ಮುಂಚಿತವಾಗಿ ಬರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗೆ, ಈ ಅತ್ಯಗತ್ಯ ಅಂಶಗಳ ಬೆಲೆಗಳು 2008ರ ಹಿಂಜರಿತಕ್ಕೆ ಮುಂಚಿತವಾಗಿ ಮುಗಿಲುಮುಟ್ಟಿದ್ದವು.
ತೀರಾ ಇತ್ತೀಚಿನ ಆರ್ಥಿಕ ಚಿಂತನೆಯಲ್ಲಿ, ಹಣದುಬ್ಬರವಿಳಿತವು ಅಪಾಯದೊಂದಿಗೆ ಥಳಕುಹಾಕಿಕೊಂಡಿದೆ:  ಇಂಥ ಸಂದರ್ಭದಲ್ಲಿ ಸ್ವತ್ತುಗಳ ಮೇಲಿನ ಅಪಾಯ-ಹೊಂದಾಣಿಕೆಯ ಪ್ರತಿಫಲವು ಅಭಾವಾತ್ಮಕತೆಗೆ ಕುಸಿಯುತ್ತದೆ, ಮತ್ತು ಹೂಡಿಕೆದಾರರು ಹಾಗೂ ಖರೀದಿದಾರರು ಹಣವನ್ನು ಹೂಡುವುದಕ್ಕೆ ಬದಲಿಗೆ ಕೂಡಿಟ್ಟುಕೊಳ್ಳುತ್ತಾರೆ. ಭದ್ರತೆಗಳ ಸದೃಢ ಪರಿಸ್ಥಿತಿ ಇರುವಾಗಲೂ ಸಹ ಇದು ಕಂಡುಬರುತ್ತದೆ. ಹೆಚ್ಚು ಚರ್ಚೆಗೊಳಗಾದ ಅದರ ದ್ರವ್ಯತೆಯ ಜಾಲವೊಂದರ ಕಾರ್ಯಸಾಧ್ಯ ಸಂಭವನೀಯತೆಯ ಸೈದ್ಧಾಂತಿಕ ಸನ್ನಿವೇಶವನ್ನು ಇದು ನಿರ್ಮಿಸಬಲ್ಲದು. ಸಾಮಾನ್ಯವಾಗಿ ಕೇಂದ್ರ ಬ್ಯಾಂಕೊಂದು ಹಣಕ್ಕೆ ಸಂಬಂಧಿಸಿ ನಿಷೇಧ ರೂಪದ ಬಡ್ಡಿಯನ್ನು ವಿಧಿಸಲಾಗುವುದಿಲ್ಲ ಮತ್ತು ಒಂದು ವೇಳೆ ಶೂನ್ಯ ಬಡ್ಡಿಯನ್ನು ವಿಧಿಸಿದರೂ ಸಹ ಕೆಲವೊಮ್ಮೆ ಕೊಂಚವೇ ಹೆಚ್ಚಿನ ದರಗಳ ಬಡ್ಡಿಗಿಂತ ಕಡಿಮೆಯಿರುವ ಉತ್ತೇಜಕ ಪರಿಣಾಮವನ್ನು ಉಂಟುಮಾಡುತ್ತದೆ. ಮುಚ್ಚಿದ ಆರ್ಥಿಕತೆಯೊಂದರಲ್ಲಿ, ಇದು ಕಂಡುಬರಲು ಕಾರಣವೇನೆಂದರೆ, ಶೂನ್ಯ ಬಡ್ಡಿಯನ್ನು ವೀಧಿಸುವುದೆಂದರೆ ಸರ್ಕಾರಿ ಭದ್ರತೆಗಳ ಮೇಲೆ ಶೂನ್ಯ ಪ್ರತಿಫಲ ಹೊಂದುವುದು, ಅಥವಾ ಅಲ್ಪಾವಧಿಯ ವಾಯಿದೆ ತುಂಬಿರುವಿಕೆಯ ಮೇಲಿನ ನಿಷೇಧ ರೂಪದ ಪ್ರತಿಫಲವನ್ನು ಹೊಂದುವುದು ಎಂದೂ ಅರ್ಥಬರುತ್ತದೆ. ಮುಕ್ತ ಆರ್ಥಿಕತೆಯೊಂದರಲ್ಲಿ ಇದು ಸಾಗಣೆ ವ್ಯಾಪಾರವೊಂದನ್ನು ಸೃಷ್ಟಿಸುತ್ತದೆ, ಮತ್ತು ಚಲಾವಣೆಯ ಹಣವನ್ನು ಅಪಮೌಲ್ಯಗೊಳಿಸುತ್ತದೆ. ಇದರಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ರಫ್ತುಗಳಿಗೆ ಉತ್ತೇಜನ ಸಿಗದೆ ಆಮದುಗಳಿಗೆ ಹೆಚ್ಚಿನ ಬೆಲೆಗಳು ಉಂಟಾಗುತ್ತವೆ.
ಹಣ-ನಿಯಂತ್ರಣವಾದಿ ಸಿದ್ಧಾಂತದಲ್ಲಿ, ಹಣದುಬ್ಬರವಿಳಿತವು ಹಣದ ವೇಗ ಅಥವಾ ವ್ಯವಹಾರ ಕಾರ್ಯಗಳ ಸಂಖ್ಯೆಗಳಲ್ಲಿನ ಒಂದು ಅವಿಶ್ರಾಂತವಾದ ಇಳಿಕೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಹಣ ಪೂರೈಕೆಯ ಒಂದು ನಾಟಕೀಯ ಕುಗ್ಗುವಿಕೆಯು ಇದಕ್ಕೆ ಕಾರಣವಾಗಿದ್ದು, ಪ್ರಾಯಶಃ ಇದು ಕುಸಿಯುತ್ತಿರುವ ಒಂದು ವಿನಿಯ ದರಕ್ಕೆ ಪ್ರತಿಕ್ರಿಯೆಯಾಗಿರುತ್ತದೆ, ಅಥವಾ ಒಂದು ಸುವರ್ಣಮಾನ ಅಥವಾ ಇತರ ಬಾಹ್ಯ ಹಣಕಾಸಿನ ಮೂಲದ ಅಗತ್ಯತೆಗೆ ಅನುಸಾರವಾಗಿರಲು ಕಂಡುಬರುತ್ತದೆ.
ಹಣ ಕೂಡಿಡುವರ ಮತ್ತು ಪರಿವರ್ತಿಸಬಹುದಾದ ಸ್ವತ್ತುಗಳು ಹಾಗೂ ಚಲಾವಣೆ ಹಣವನ್ನು ಹೊಂದಿರುವವರ ಪ್ರಯೋಜನಕ್ಕಾಗಿ ಅಪರಿವರ್ತನೀಯ ಸ್ವತ್ತುಗಳ ಹಿಡುವಳಿದಾರಿಂದ ಹಾಗೂ ಸಾಲಗಾರರಿಂದ ಸಂಪತ್ತಿನ ವರ್ಗಾವಣೆಯಾಗಲು ಹಣದುಬ್ಬರವಿಳಿತವು ಕಾರಣವಾಗುತ್ತದೆಯಾದ್ದರಿಂದ, ಹಣದುಬ್ಬರವಿಳಿತವನ್ನು ಸಾಮಾನ್ಯವಾಗಿ ಋಣಾತ್ಮಕವಾಗಿ ಪರಿಗಣಿಸಲಾಗುತ್ತದೆ. ಈ ಅರ್ಥದಲ್ಲಿ ಇದು ಹಣದುಬ್ಬರಕ್ಕೆ (ಅಥವಾ ತೀರಾ ವಿಪರೀತ ಸನ್ನಿವೇಶದಲ್ಲಿ, ಅತಿ-ಹಣದುಬ್ಬರಕ್ಕೆ) ವಿರುದ್ಧವಾದುದಾಗಿದ್ದು, ಇದು ಸಾಲಗಾರರು ಹಾಗೂ ಅಲ್ಪಾವಧಿಯ ಬಳಕೆಯ ಪರವಾಗಿ ಚಲಾವಣಾ ಹಣವನ್ನು ಹೊಂದಿರುವವರು ಹಾಗೂ ಸಾಲದಾತರ (ಕೂಡಿಡುವವರ) ಮೇಲಿನ ಒಂದು ತೆರಿಗೆಯಾಗಿರುತ್ತದೆ. ಆಧುನಿಕ ಆರ್ಥಿಕತೆಗಳಲ್ಲಿ, ಬೇಡಿಕೆಯಲ್ಲಿನ ಒಂದು ಕುಸಿತದಿಂದಾಗಿ ಹಣದುಬ್ಬರವಿಳಿತವು ಉಂಟಾಗುತ್ತದೆ (ಸಾಮಾನ್ಯವಾಗಿ ಹೆಚ್ಚಿನ ಬಡ್ಡಿದರಗಳಿಂದ ಇದು ಉಂಟಾಗುತ್ತದೆ), ಮತ್ತು ಇದು ಹಿಂಜರಿತದೊಂದಿಗೆ ಹಾಗೂ (ತೀರಾ ಅಪರೂಪವಾಗಿ) ದೀರ್ಘಾವಧಿಯ ಆರ್ಥಿಕ ಕುಸಿತಗಳೊಂದಿಗೆ ಸಂಬಂಧಹೊಂದಿರುತ್ತದೆ.
ಆಧುನಿಕ ಆರ್ಥಿಕತೆಗಳಲ್ಲಿ, ಸಾಲದ ಅವಧಿಗಳು ದೀರ್ಘವಾಗಿ ಬೆಳೆದಿರುತ್ತವೆಯಾದ್ದರಿಂದ ಮತ್ತು ಸಾಲದ ನೆರವು ನೀಡುವುದು ಎಲ್ಲಾ ತೆರನಾದ ಹೂಡಿಕೆಗಳ ಪೈಕಿ ಸಾಮಾನ್ಯವಾಗಿರುವುದರಿಂದ, ಹಣದುಬ್ಬರವಿಳಿತದೊಂದಿಗೆ ಗುರುತಿಸಿಕೊಂಡಿರುವ ದಂಡ ಅಥವಾ ಜುಲ್ಮಾನೆಗಳು ಸಾಮಾನ್ಯವಾಗಿರುತ್ತದೆ. ಲಾಭಗಳಿಕೆಯ ನಿರೀಕ್ಷೆಯು ಋಣಾತ್ಮಕವಾಗಿ ಪರಿಣಮಿಸಬಹುದಾಗಿರುವಾಗ ಮತ್ತು ಭವಿಷ್ಯದ ಬೆಲೆಗಳ ನಿರೀಕ್ಷೆಯು ಕಡಿಮೆಯಾಗಿದ್ದಾಗ, ಭವಿಷ್ಯದ ಲಾಭಗಳಿಕೆಗಳ ಮೇಲಿನ ನಷ್ಟದಲ್ಲಿ ಸಿಲುಕುವುದಕ್ಕೆ ಯಾವುದೇ ಕಾರಣವಿಲ್ಲವಾದ್ದರಿಂದ ಹೂಡಿಕೆ ಮತ್ತು ಖರ್ಚುಮಾಡುವಿಕೆಯನ್ನು ಹಣದುಬ್ಬರವಿಳಿತ ಪ್ರೋತ್ಸಾಹಿಸುವುದಿಲ್ಲ. ಹೀಗಾಗಿ ಇದು ಒಟ್ಟುಗೂಡಿದ ಬೇಡಿಕೆಯಲ್ಲಿನ ಒಂದು ಕುಸಿತಕ್ಕೆ ಕೊಂಡೊಯ್ಯುತ್ತದೆ, ಅಥವಾ ಅದರೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. "ಹಣದುಬ್ಬರದ ಗುಪ್ತ ಅಪಾಯ"ವಿಲ್ಲದೆ, ಹಣವನ್ನು ಹಾಗೆಯೇ ಹಿಡಿದಿಟ್ಟುಕೊಳ್ಳುವುದು, ಮತ್ತು ಅದನ್ನು ಖರ್ಚುಮಾಡದೆ ಅಥವಾ ಹೂಡಿಕೆ ಮಾಡದೆ ಇರುವುದು ವಿವೇಚನಾಯುಕ್ತ ತೀರ್ಮಾನ ಎನಿಸಿಕೊಳ್ಳುತ್ತದೆ.
ಆದಾಗ್ಯೂ, ಧನಾತ್ಮಕ ಜನಸಂಖ್ಯಾ (ಮತ್ತು ಸಾರ್ವತ್ರಿಕ ಆರ್ಥಿಕ) ಬೆಳವಣಿಗೆಗೆ ಅನುಗುಣವಾಗಿರುವ ದರದಲ್ಲಿ ಹಣದ ಪೂರೈಕೆಯಲ್ಲಿನ ಏರಿಕೆಯ ದರವನ್ನು ಕಾಯ್ದುಕೊಳ್ಳದಿದ್ದಾಗ ಹಣದುಬ್ಬರವಿಳಿತವು ಪರಿವರ್ತನೀಯ ಹಣದ ಆರ್ಥಿಕತೆಗಳಲ್ಲಿನ ಸ್ವಾಭಾವಿಕ ಸ್ಥಿತಿಯಾಗಿರುತ್ತದೆ. ಇದು ಸಂಭವಿಸಿದಾಗ, ತಲಾ ವ್ಯಕ್ತಿಯ ಪರಿವರ್ತನೀಯ ಹಣದ ಲಭ್ಯ ಮೊತ್ತವು ಕುಸಿಯುತ್ತದೆ. ಇದರಿಂದಾಗಿ ಹಣದ ಹೆಚ್ಚಿನ ಪ್ರಮಾಣದಲ್ಲಿ ಹಣದ ಕೊರತೆಯ ಕಂಡುಬರುತ್ತದೆ; ಮತ್ತು ತತ್ಪರಿಣಾಮವಾಗಿ, ಚಲಾವಣಾ ಹಣದ ಏರಿಕೆಗಳ ಪ್ರತಿ ಘಟಕದ ಖರೀದಿ ಸಾಮರ್ಥ್ಯವು ಕಡಿಮೆಯಾಗುತ್ತದೆ. ಕಳೆದ 19ನೇ ಶತಮಾನವು ಈ ಸನ್ನಿವೇಶಗಳಡಿಯಲ್ಲಿನ ಆರ್ಥಿಕ ಅಭಿವೃದ್ಧಿಯೊಂದಿಗೆ ಸಂಯೋಜಿಸಲ್ಪಟ್ಟ ಸಮರ್ಥಿಸಲ್ಪಟ್ಟ ಹಣದುಬ್ಬರವಿಳಿತಕ್ಕೆ ಒಂದು ಉದಾಹರಣೆಯಾಗಿದೆ.
ಉತ್ಪಾದನಾ ಸಾಮರ್ಥ್ಯದಲ್ಲಿನ ಸುಧಾರಣೆಗಳು ಸರಕುಗಳ ಒಟ್ಟಾರೆ ಬೆಲೆಯನ್ನು ತಗ್ಗಿಸಿದಾಗಲೂ ಸಹ ಹಣದುಬ್ಬರವಿಳಿತವು ಕಂಡುಬರುತ್ತದೆ. ಸರಕುಗಳು ಮತ್ತು ಸೇವೆಗಳ ವ್ಯಾಪಾರೀ ಉತ್ಪಾದಕರು ತಾವು ಮಾಡುವ ಉತ್ಪಾದನಾ ಸುಧಾರಣೆಯಿಂದ ಹೊರಹೊಮ್ಮುವ ಏರಿಕೆಗೊಂದ ಲಾಭಾಂಶದ ಒಂದು ಭರವಸೆಯಿಂದ ಪ್ರೇರಿತರಾಗುವುದರಿಂದ ಉತ್ಪಾದನಾ ಸಾಮರ್ಥ್ಯದಲ್ಲಿನ ಸುಧಾರಣೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ವೆಚ್ಚದ ಉಳಿತಾಯಗಳಲ್ಲಿನ ಕಡೇಪಕ್ಷ ಸ್ವಲ್ಪ ಭಾಗವನ್ನು ತಮ್ಮ ಸರಕುಗಳಿಗಾಗಿರುವ ಮಾರಾಟದ ಬೆಲೆಯನ್ನು ತಗ್ಗಿಸುವಲ್ಲಿ ಅನ್ವಯಿಸಲೆಂದು ಅಂಥಾ ಉತ್ಪಾದಕರನ್ನು ಮಾರುಕಟ್ಟೆ ವಲಯದಲ್ಲಿ ಕಂಡುಬರುವ ಸ್ಪರ್ಧೆಯು ಹಲವು ಬಾರಿ ಪ್ರೇರೇಪಿಸುತ್ತದೆ. ಇದು ಸಂಭವಿಸಿದಾಗ, ಆ ಸರಕುಗಳಿಗೆ ಗ್ರಾಹಕರು ಕಡಿಮೆ ಹಣವನ್ನು ತೆರುತ್ತಾರೆ; ಮತ್ತು ಖರೀದಿ ಸಾಮರ್ಥ್ಯವು ಹೆಚ್ಚಳಗೊಂಡ ಕಾರಣದಿಂದಾಗಿ ಇದು ಹಣದುಬ್ಬರವಿಳಿತದಲ್ಲಿ ಪರಿಣಮಿಸುತ್ತದೆ.
ಓರ್ವನ ಹಣದ ಖರೀದಿಸುವ ಸಾಮರ್ಥ್ಯದಲ್ಲಿನ ಒಂದು ಹೆಚ್ಚಳವು ಪ್ರಯೋಜನಕಾರಿಯಾಗಿ ಕಂಡುಬಂದಲ್ಲಿ, ವಾಸ್ತವವಾಗಿ ಇದು ಅಭಾವವನ್ನು ತಂದೊಡ್ಡಬಲ್ಲದು. ಏಕೆಂದರೆ, ಓರ್ವನ ನಿವ್ವಳ ಗಳಿಕೆಯು ಮನೆಗಳು, ಭೂಮಿ, ಮತ್ತು ಖಾಸಗಿ ಸ್ವತ್ತಿನ ಇತರ ಸ್ವರೂಪಗಳಂಥ ಅಪರಿವರ್ತನೀಯ ಸ್ವತ್ತುಗಳಲ್ಲಿ ಹಿಡಿದಿಡಲ್ಪಡುತ್ತದೆ. ಇದು ಋಣಭಾರದ ಕೊರೆತವನ್ನೂ ವರ್ಧಿಸುತ್ತದೆ. ಏಕೆಂದರೆ ಗಣನೀಯ ಪ್ರಮಾಣದ ಹಣದುಬ್ಬರವಿಳಿತದ ಒಂದಷ್ಟು ಅವಧಿಯ ನಂತರ, ಋಣಭಾರವೊಂದರ ಸೇವೆಯಲ್ಲಿ ಓರ್ವನು ಮಾಡುತ್ತಿರುವ ಪಾವತಿಗಳು ಖರೀದಿ ಸಾಮರ್ಥ್ಯದ ಒಂದು ಬೃಹತ್ ಪ್ರಮಾಣವನ್ನು ಪ್ರತಿನಿಧಿಸುತ್ತವೆ. ಈ ಪ್ರಮಾಣವು ಋಣಭಾರಕ್ಕೆ ಮೊದಲು ಈಡಾದಾಗ ಮಾಡಿದುದಕ್ಕಿಂತ ಹೆಚ್ಚಿರುತ್ತದೆ. ಆದ್ದರಿಂದ, ಹಣದುಬ್ಬರವಿಳಿತವನ್ನು ಒಂದು ಸಾಲದ ಬಡ್ಡಿದರದ ಒಂದು ತೋರ್ಕೆಯ ವರ್ಧನೆ ಅಥವಾ ಉತ್ಪ್ರೇಕ್ಷೆಯ ರೀತಿಯಲ್ಲಿ ಭಾವಿಸಬಹುದು. ಒಂದು ವೇಳೆ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಮಹಾನ್‌ ಕುಸಿತದ ಅವಧಿಯಲ್ಲಿದ್ದಂತೆ ಹಣದುಬ್ಬರವಿಳಿತವು ವಾರ್ಷಿಕವಾಗಿ ಸರಾಸರಿ 10%ನಷ್ಟಿದ್ದರೆ, ಒಂದು 0% ಸಾಲವೂ ಕೂಡ ಅನಾಕರ್ಷಕವಾಗಿ ಪರಿಣಮಿಸಬಲ್ಲದು. ಏಕೆಂದರೆ ಅದನ್ನು 10% ಹೆಚ್ಚಿನ ಮೌಲ್ಯದ ಹಣದೊಂದಿಗೆ ಪ್ರತಿ ವರ್ಷ ಮರುಪಾವತಿ ಮಾಡಬೇಕಾಗುತ್ತದೆ.
ಏಕೆಂದರೆ

ಸಾಮಾನ್ಯ ಸನ್ನಿವೇಶಗಳಡಿಯಲ್ಲಿ, ಫೆಡರಲ್‌ ಮತ್ತು ಹೆಚ್ಚಿನ ಇತರ ಕೇಂದ್ರ ಬ್ಯಾಂಕುಗಳು ಒಂದು ಅಲ್ಪಾವಧಿಯ ಬಡ್ಡಿದರಕ್ಕಾಗಿರುವ ಗುರಿಯನ್ನು ಇರಿಸಿಕೊಂಡು ಕಾರ್ಯನೀತಿಯನ್ನು ಅಳವಡಿಸಿಕೊಳ್ಳುತ್ತವೆ--ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ರಾತ್ರೋರಾತ್ರಿಯ ಫೆಡರಲ್‌ ನಿಧಿಗಳ ದರದಂತೆ ಇದೂ ಇರುತ್ತದೆ--ಮತ್ತು ಮುಕ್ತ ಬಂಡವಾಳ ಮಾರುಕಟ್ಟೆಗಳಲ್ಲಿ ಖಾತರಿಗಳನ್ನು (ಅಂದರೆ ಸಾಲದ ಅಥವಾ ಬಂಡವಾಳದ ಪತ್ರಗಳನ್ನು) ಖರೀದಿಸುವ ಹಾಗೂ ಮಾರಾಟ ಮಾಡುವ ಮೂಲಕ ಆ ಗುರಿಯನ್ನು ಜಾರಿಗೆ ತರುತ್ತವೆ. ಅಲ್ಪಾವಧಿಯ ಬಡ್ಡಿದರವು ಶೂನ್ಯವನ್ನು ಮುಟ್ಟಿದಾಗ, ಕೇಂದ್ರ ಬ್ಯಾಂಕು ತನ್ನ ವಾಡಿಕೆಯ ಬಡ್ಡಿದರದ ಗುರಿಯನ್ನು ಕಡಿಮೆ ಮಾಡುವುದರಿಂದ ಕಾರ್ಯನೀತಿಯನ್ನು ಹೆಚ್ಚು ಕಾಲ ಸರಾಗಗೊಳಿಸಲಾಗುವುದಿಲ್ಲ.,

ಅಲ್ಪಾವಧಿ ಬಡ್ಡಿದರವನ್ನು ಶೂನ್ಯಕ್ಕೆ ಇಳಿಸಿದರೂ ಕೂಡ ಅದು ಒಂದು "ವಾಸ್ತವಿಕ" ಬಡ್ಡಿದರದಲ್ಲಿ ಪರಿಣಮಿಸಿ, ಸದರಿ ದರವು ಇನ್ನೂ ಹೆಚ್ಚಾಗಿ ಕಂಡುಬರಬಹುದಾದ್ದರಿಂದ, ಹಣ ಪೂರೈಕೆಯನ್ನು ನಿಯಂತ್ರಿಸುವ ವಾಡಿಕೆಯ ಕಾರ್ಯವಿಧಾನಗಳು ಪರಿಣಾಮಕಾರಿಯಾಗದೇ ಹೋಗಬಹುದು; ಹೀಗಾಗಿ, ಹಣದ ಪೂರೈಕೆಯನ್ನು ಹೆಚ್ಚಿಸಲು ಸ್ವತ್ತುಗಳು ಅಥವಾ ಪರಿಮಾಣಾತ್ಮಕ ಸರಾಗಗೊಳಿಸುವಿಕೆಯಂಥ (ಹಣವನ್ನು ಮುದ್ರಿಸುವಂಥ) ಇತರ ಕಾರ್ಯವಿಧಾನಗಳನ್ನು ಜಾರಿಗೆ ತರಬೇಕಾಗುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಫೆಡರಲ್‌ ರಿಸರ್ವ್‌ ವ್ಯವಸ್ಥೆಯ ಪ್ರಸಕ್ತ ಅಧ್ಯಕ್ಷನಾದ ಬೆನ್‌ ಬೆರ್ನಾಂಕೆ 2002ರಲ್ಲಿ ಹೇಳಿದಂತೆ, "...ಸಾಕಾಗುಷ್ಟು ಪ್ರಮಾಣದಲ್ಲಿ ಮಾಡಲಾಗುವ ಹಣದ ಒಳಸೇರಿಸುವಿಕೆಗಳು ಅಂತಿಮವಾಗಿ ಯಾವಾಗಲೂ ಹಣದುಬ್ಬರವಿಳಿತವೊಂದನ್ನು ಹಿಮ್ಮುಖವಾಗಿಸುತ್ತವೆ."[೬]
ಹಣದ ಕಟ್ಟಾ ಸಮರ್ಥಕರು ವಾದಿಸುವ ಪ್ರಕಾರ, ಒಂದು ವೇಳೆ ಆರ್ಥಿಕತೆಯೊಂದರಲ್ಲಿ ಯಾವುದೇ "ಕಟ್ಟುನಿಟ್ಟುಗಳು" ಇರದಿದ್ದಲ್ಲಿ, ಹಣದುಬ್ಬರವಿಳಿತವು ಒಂದು ಸ್ವಾಗತಾರ್ಹ ಪರಿಣಾಮವಾಗಿರಬೇಕಾಗಿರುತ್ತದೆ. ಏಕೆಂದರೆ ಇತರ ಚಟುವಟಿಕೆಯ ವಲಯಗಳಿಗೆ ಆರ್ಥಿಕತೆಯ ಹೆಚ್ಚಿನ ಪ್ರಯತ್ನವು ಸಾಗುವಂತೆ ಬೆಲೆಗಳ ತಗ್ಗಿಸುವಿಕೆಯು ಅನುವುಮಾಡಿಕೊಡುತ್ತದೆ. ಹೀಗಾಗಿ ಆರ್ಥಿಕತೆಯ ಒಟ್ಟಾರೆ ಉತ್ಪನ್ನ ಅಥವಾ ಫಲಿತಾಂಶವು ವರ್ಧಿಸುತ್ತದೆ. ಕೆಲವೊಂದು ಅರ್ಥಶಾಸ್ತ್ರಜ್ಞರು ಈ ಸಿದ್ಧಾಂತವನ್ನು ಟೀಕಿಸಿದ್ದಾರೆ. ಆರ್ಥಿಕತೆಯಲ್ಲಿ ಕಟ್ಟುನಿಟ್ಟುಗಳು ಇರದೇ ಹೋದಲ್ಲಿ, ಹಣದುಬ್ಬರವಾಗಲೀ ಅಥವಾ ಹಣದುಬ್ಬರವಿಳಿತವಾಗಲೀ ಯಾವುದೇ ಗಮನಾರ್ಹವಾದ ಪರಿಣಾಮವನ್ನು ಹೊಂದುವುದಿಲ್ಲ ಎಂಬುದು ಈ ಅರ್ಥಶಾಸ್ತ್ರಜ್ಞರ ಅಭಿಪ್ರಾಯ.
ಚಲಾವಣಾ ಹಣವನ್ನು ಯಾರು ಹೊಂದಿಲ್ಲವೋ ಅವನಿಗಿಂತ ಅದನ್ನು ಯಾರು ಹಿಡಿದಿಟ್ಟುಕೊಂಡಿದ್ದಾರೋ ಅಂಥವರನ್ನು ಹಣದುಬ್ಬರವಿಳಿತದ ಅವಧಿಗಳು ಓಲೈಸುತ್ತವೆಯಾದ್ದರಿಂದ, ಶ್ರೀಸಾಮಾನ್ಯನ ವರ್ಗದ ಹೆಚ್ಚುತ್ತಿರುವ ಭಾವನೆಯ ಅವಧಿಗಳೊಂದಿಗೆ ಅವನ್ನು ಹಲವು ಬಾರಿ ಹೋಲಿಸಲಾಗುತ್ತದೆ. 19ನೇ ಶತಮಾನದ ಅಂತ್ಯದ ವೇಳೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಶ್ರೀಸಾಮಾನ್ಯರು ಕಟ್ಟಾ ಹಣದ ಮಾನದಂಡಗಳಿಂದ ದೂರವಾಗಿ, ಹೆಚ್ಚು ಹಣದುಬ್ಬರದ ಲೋಹವಾದ ಬೆಳ್ಳಿಯನ್ನು (ಏಕೆಂದರೆ ಇದು ಹೆಚ್ಚು ಹೇರಳವಾಗಿ ಲಭ್ಯವಿತ್ತು) ಆಧರಿಸಿದ ಹಣದ ಮಾನದಂಡವೊಂದರ ಕಡೆಗೆ ಮರಳಲು ಬಯಸಿದಾಗ ಇಂಥದೇ ಸಂದರ್ಭವಿತ್ತು.

ಹೈದರಾಬಾದ್ ಕರ್ನಾಟಕ ವಿಮೋಚನಾ : ಹೋರಾಟ ಕೆಲವು ಟಿಪ್ಪಣಿಗಳು

ಹೈದರಾಬಾದ್ ಕರ್ನಾಟಕ ವಿಮೋಚನಾ : ಹೋರಾಟ ಕೆಲವು ಟಿಪ್ಪಣಿಗಳು*

[* ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು 2006ರಲ್ಲಿ ಪ್ರಕಟಿಸಿದ ‘‘ಹೈದ್ರಾಬಾದ್ ಕರ್ನಾಟಕದಲ್ಲಿ ರಾಜಕೀಯ ಚಳವಳಿಗಳು 1946-2000’’ ಎಂಬ ಕೃತಿಯಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ.ೊಪ್ರಸ್ತುತ ಲೇಖನವನ್ನು ಬಳಸಿಕೊಳ್ಳಲು ಅನುವು ಮಾಡಿದ ಡಾ.ಬಿ.ಸಿ. ಮಹಾಬಲೇಶ್ವರಪ್ಪ ಅವರಿಗೆ ಕೃತಜ್ಞತೆಗಳು. -ಸಂ.]
ಹೈದರಾಬಾದ್ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ ವೈವಿಧ್ಯಮಯ ವಾಗಿದ್ದು, ಸಂಶೋಧಕರಿಗೆ ಒಂದು ಚಿನ್ನದ ಗಣಿಯಾಗಿದೆ. ಈ ಭಾಗದ ಸನ್ನತಿ, ಗುರುಸಣಗಿ, ಹುಣಸಗಿ, ಮಸ್ಕಿ, ಕೊಪ್ಪಳ, ಕಾಳಗಿ, ನಾಗಾವಿ, ಅರಳನೂರು, ಸೇಡಂ ಪ್ರದೇಶಗಳು ಶಿಲಾಯುಗದ ಕುರುಹುಗಳಾಗಿವೆ. ಮೌರ್ಯರ ಕಾಲಕ್ಕೆ ಇವೆಲ್ಲವುಗಳು ಬೌದ್ಧ ಕೇಂದ್ರಗಳಾಗಿ ಕಂಗೊಳಿಸಿದವು. ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ವಚನಕಾರರು, ತತ್ವಪದಕಾರರು, ಸೂಫಿಸಂತರು, ವಿಜಯನಗರ, ಬಹಮನಿ ಮತ್ತು ನಿಜಾಮರು ಹೈದ್ರಾಬಾದ್ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಬೆಳವಣಿಗೆಯ ಪರಂಪರೆಗೆ ಕೊಡುಗೆ ಸಲ್ಲಿಸಿದ್ದಾರೆ. ಕೃಷ್ಣಾ, ಭೀಮಾ, ಕಾಗಿನ, ಕಾರಂಜಾ, ಬೆಣ್ಣೆತೊರಾ ಮುಂತಾದ ನದಿಗಳು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳು ಇಲ್ಲಿನ ಇತಿಹಾಸವನ್ನು ಶ್ರೀಮಂತಗೊಳಿಸಿವೆ. ಗುಲಬರ್ಗಾದ ಏಳು ಗುಮ್ಮಟಗಳ ಕೋಟೆ, ನಾಗಾವಿಯ ವಿಶ್ವವಿದ್ಯಾಲಯ, ಬೀದರಿನ ಮದರಸಾ, ಮುದಗಲ್ ಮತ್ತು ರಾಯಚೂರಿನ ಕೋಟೆ ಕೊತ್ತಲಗಳು, ಹಂಪಿಯ ಸ್ಮಾರಕಗಳು, ದಕ್ಷಿಣ ಕಾಶಿಯೆಂದು ಪ್ರಸಿದ್ಧವಾಗಿರುವ ಹಳೆಯ ದೇವಾಲಯಗಳು ಹೈದರಾಬಾದ್ ಕರ್ನಾಟಕ ಧರ್ಮ, ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಅಲ್ಲದೇ, ನೃಪತುಂಗನ ಆಸ್ಥಾನಕವಿ ಶ್ರೀವಿಜಯನ ‘ಕವಿರಾಜಮಾರ್ಗ’, ಭೀಮಕವಿಯ ‘ಬಸವಪುರಾಣ’, ಆರನೇ ವಿಕ್ರಮಾದಿತ್ಯನ ಕಾಲದ ವಿಜ್ಞಾನೇಶ್ವರನು ರಚಿಸಿತ ‘ಮಿತಾಕ್ಷರ’(ಹಿಂದೂ ಉತ್ಕೃಷ್ಟ ಕಾನೂನು ಗ್ರಂಥ), ಮಹಾವೀರಾಚಾರ್ಯರ ‘ಗಣಿತ ಶಾಸ್ತ್ರ’, ಆದಿಲ್‌ಶಾಹಿ ಕಾಲದ ರಫಿಉದ್ದೀನ್ ಸಿರಾಜ್ ರಚಿಸಿದ ‘ತಝರೆಂತುಲ್ ಮುಲಕ್’ ಎನ್ನುವ ಪರ್ಶಿಯನ್ ಕೃತಿ ಇತ್ಯಾದಿ ಗ್ರಂಥಗಳು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸಾಹಿತ್ಯ, ವಿಜ್ಞಾನ ಮತ್ತು ಇತಿಹಾಸದ ಆಕರಗಳಾಗಿವೆ. ಬೌದ್ಧ, ಜೈನ, ವೈಷ್ಣವ, ವೀರಶೈವ ಮತ್ತು ಇಸ್ಲಾಂ ಧರ್ಮಗಳ ಸಂಗಮ ಹೈದ್ರಾಬಾದ್ ಕರ್ನಾಟಕ ಪ್ರದೇಶವಾಗಿದೆ. ಇಲ್ಲಿನ ಸಿರಿ ‘ಬಿದರಿಕಲೆ’ ಮತ್ತು ಹನ್ನೆರಡನೇ ಶತಮಾನದಲ್ಲಿ ಸಮಾಜೋ-ಧಾರ್ಮಿಕ ಕ್ರಾಂತಿಗೆ ಭಕ್ತಿಭಂಡಾರಿ ಬಸವಣ್ಣ, ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ಅನುಭವಮಂಟಪವನ್ನು ಸ್ಥಾಪಿಸಿ, ಇಡೀ ಸಾಮಾನವ ಕುಲವನ್ನು ಅಂತಃಕರುಣೆಯಿಂದ ಕೂಡಿದ ಕಾಯಕ ನಿಷ್ಠೆಯನು ಮೆರೆಯುವ ದಾಸೋಹದ ಪ್ರಭಾವಕ್ಕೆ ತಂದು ವಿಶ್ವ ಸಂಸ್ಕೃತಿಯ ವಿಕಾಸದಲ್ಲಿ ಹೊಸಹೊಳಪು ನೀಡಿದ್ದು ವಿಶೇಷ. ಹೈದ್ರಾಬಾದ್ ಕರ್ನಾಟಕ ಪ್ರದೇಶವು ದಾಸ ಸಾಹಿತ್ಯದ ಮತ್ತು ಸೂಫಿಧರ್ಮದ ಕಣಜವಾಗಿದೆ. ಇದೇ ರೀತಿ ಕನ್ನಡ, ಸಂಸ್ಕೃತ ಸಾಹಿತ್ಯದ ಮೇರುಕೃತಿಗಳಿಗೂ ಸ್ಫೂರ್ತಿದಾಣ ಹೈದ್ರಾಬಾದ್ ಕರ್ನಾಟಕ ಪ್ರದೇಶ, ಪಂಪ, ಪೊನ್ನ, ಶಿವಕೋಟ್ಯಾಚಾರ್ಯ, ಲಕ್ಷ್ಮೀಶ, ದೇವರ ದಾಸಿಮಯ್ಯ, ವಿಜಯದಾಸರು ತಮ್ಮ ಏರು ಕೃತಿಗಳನ್ನು ನೀಡಿದ್ದು ಇದೇ ಪರಿಸರದಲ್ಲಿ. ಕಾಲಪ್ರಪಂಚದಲ್ಲಿ ಆಳಂದ ಶಂಕರರಾವ್, ಎಸ್.ಎಂ.ಪಂಡಿತ, ಕೃಷ್ಣಕಾಣಿಹಾಳ್ ಮುಂತಾದವರು ಕುಂಚಬ್ರಹ್ಮದಲ್ಲಿ ಮಾಡಿದ ಸೇವೆ ವಿಶ್ವಖ್ಯಾತಿಯಾಗಿದೆ. ವಿ.ಜಿ.ಅಂದಾನಿಯವರು ಮತ್ತು ಜಿ.ಎಸ್.ಖಂಡೇರಾವ್ ಕಲ್ಬುರ್ಗಿಯ ‘ಐಡಿಯಲ್ ಫೈನಾರ್ಟ್ ಸಂಸ್ಥೆ’ಯ ಮೂಲಕ ಈ ಪರಂಪರೆಯನ್ನು ಕಾಯ್ದುಕೊಂಡಿದ್ದಾರೆ. ಈ ಪ್ರದೇಶವು. 1347ರಲ್ಲಿ ಬಹಮನಿ ರಾಜ್ಯದ ಸ್ಥಾಪನೆಯನ್ನು ಕಂಡಿತು. ಇದರಿಂದಾಗಿ ಇಡೀ ಪ್ರದೇಶವು ಮುಸ್ಲಿಮರ ಆಳ್ವಿಕೆಗೆ ಒಳಗಾಯಿತು. ಮುಂದೆ ನಿಜಾಮರ ಆಳ್ವಿಕೆಗೆ(1724-1948) ತುತ್ತಾದಾಗ ಇಲ್ಲಿನ ಆಡಳಿತದ ಸ್ಥಿತಿಗತಿಯಲ್ಲಿ ತೀವ್ರವಾದ ಬದಲಾವಣೆಯಾಯಿತು. ಇಂದು ಈ ಪ್ರದೇಶವು ಹಿಂದೂ ಮುಸ್ಲಿಮ ಸಂಸ್ಕೃತಿಯ ಭಾವೈಕ್ಯದ ಪ್ರತೀಕವಾಗಿದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಕಾಡ್ಗಿಚ್ಚಿನಂತೆ ದೇಶಾದ್ಯಂತ ಹಬ್ಬಿದ ರಾಷ್ಟ್ರೀಯತೆಯ ಉನ್ಮಾದದ ಅನುಭವವು ಸ್ವಾತಂತ್ರ್ಯಾನಂತರ ಚಾರಿತ್ರಿಕ ಸಂಶೋಧ, ಚರಿತ್ರೆಯ ಪುನರ್‌ವ್ಯಾಖ್ಯಾನದ ಕೆಲಸದಲ್ಲಿ ಬಂದಷ್ಟು ಮತ್ತಾವ ಕೆಲಸದಲ್ಲೂ ಉಂಟಾ ಗಿಲ್ಲ. ಬ್ರಿಟಿಷ್ ಸಾಮ್ರಾಜ್ಯವು ಭಾರತದಲ್ಲಿ ಅಸ್ತಂಗತವಾದಿ ತಕ್ಷಣ ನಮ್ಮ ರಾಷ್ಟ್ರೀಯ ಇತಿಹಾಸಕಾರರು ಬ್ರಿಟಿಷ್ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಚರಿತ್ರೆಯನ್ನು ಪುನರ್ ರೂಪಿಸುವ ಚಳವಳಿಯನ್ನೇ ಪ್ರಾರಂಭಿಸಿದರು. ಭಾರತದ ರಾಷ್ಟ್ರೀಯ ಚಳವಳಿಯ ಸಂದೇಶ ಹಾಗೂ ಹೋರಾಟದ ಸ್ಫೂರ್ತಿಯ ಪ್ರವಾಹದೋಪಾದಿಯಲ್ಲಿ ಚಾರಿತ್ರಿಕ ಸಂಶೋಧನೆ ಕಾರ್ಯದೊಳಗೆ ಪ್ರವೇಶಿಸಿತು. ಈ ರೀತಿಯಲ್ಲಿ ಹರಿದುಬಂದ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ ಹಾಗೂ ದೇಶಭಕ್ತಿಯ ಕಿಚ್ಚು ಆಳವಾಗಿ ಬೇರೂರಿತ್ತು. ಅದು ಬ್ರಿಟಿಷ್ ಸಾಮ್ರಾಜ್ಯಶಾಹಿ, ವಸಾಹಾತುಶಾಹಿ ಕುರುಹುಗಳನ್ನೆಲ್ಲಾ ನೆಲಸಮ ಮಾಡಿತು.
ಇಂತಹ ಚಳವಳಿ ಹಾಗೂ ಪ್ರಜ್ಞೆ ಕೇವಲ ಸ್ವಾತಂತ್ರ್ಯಪೂರ್ವದ ಇತಿಹಾಸವನ್ನು ತಿರಸ್ಕರಿಸುವುದರಲ್ಲಿ ಸಮಾಧಾನಪಟ್ಟುಕೊಳ್ಳದೆ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಮತ್ತೊಮ್ಮೆ ಹೊಸದಾಗಿ ಹಾಗೂ ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪುನಃರೂಪಿಸುವ ಕೆಲಸ ದಲ್ಲೂ ತೊಡಗಿತು. ಸ್ವಾತಂತ್ರ್ಯ ನಂತರದ ಮೊದಲ ದಶಕದಲ್ಲಿ ಪಟ್ಟಾಭಿ ಸೀತಾರಾಮಯ್ಯ ಅವರು ‘ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಚರಿತ್ರೆ’, ತಾರಾಚಂದ್‌ರವರ ರಾಷ್ಟ್ರೀಯ ಭಾವ್ಯಕತೆ ಸ್ವರೂಪದ ಪ್ರಕಟಣೆಗಳು ಬೆಳಕು ಕಂಡವು. ಇತಿಹಾಸ ಸಂಶೋಧನೆಯ ಎರಡನೇ ಹಂತದಲ್ಲಿ ಭಾರತದ ಇತಿಹಾಸಕಾರರು ಸ್ವಾತಂತ್ರ್ಯ ಚಳವಳಿಯ ಪ್ರಾದೇಶಿಕ ಆಯಾಮವನ್ನು ಕುರಿತು ಬರೆದರು. ಚಾರಿತ್ರಿಕ ಸಂಶೋಧನೆಯ ಮೂರನೇ ಹಂತದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ಸ್ವರೂಪದ ತೀಕ್ಷ್ಣ ವಿಶ್ಲೇಷಣೆ ನಡೆಯಿತು. ನಾಲ್ಕನೇ ಹಂತದಲ್ಲಿ ಚಾರಿತ್ರಿಕ ಸಂಶೋಧನೆಯಲ್ಲಿ ದೊಡ್ಡ ಪ್ರವಾಹವೇ ಸಂಭವಿಸಿತು. ಚರಿತ್ರೆಯ ಪರಿಕಲ್ಪನೆ, ಅಧ್ಯಯನ ವಿಧಾನ ಅಧ್ಯಯನದ ಸಾಧನ, ಸ್ವಾತಂತ್ರ್ಯ ಚಳವಳಿಗಾರರು ಅನುಸರಿಸಿದ ವಿಧಾನ, ಮಾರ್ಗ ಮುಂತಾದವುಗಳನ್ನು ಕುರಿತು ಮುಕ್ತ ಚರ್ಚೆ ನಡೆಯಿತು ಹಾಗೂ ಅನೇಕ ಗ್ರಂಥಗಳು ಪ್ರಕಟಗೊಂಡವು. ಕೊನೆಯ ಹಂತದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಬಲಗೊಳಿಸಿದ ಉಪಚಳವಳಿಯನ್ನು ಕುರಿತು ಆಳವಾದ ಅಧ್ಯಯನಗಳು ನಡೆದವು.
ಅಧ್ಯಯನದ ಮಹತ್ವ ಹಾಗೂ ವ್ಯಾಪ್ತಿ
ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸವು ಒಂದು ಮಹಾಕಾವ್ಯವಾಗಿದೆ. ಚಳವಳಿಯಲ್ಲಿ ಭಾಗವಹಿಸಿದ್ದ ಮಹಾನ್ ವ್ಯಕ್ತಿಗಳು, ಅವರು ರೂಪಿಸಿದ ತತ್ವಗಳು, ಅವರು ರೂಪಿಸಿದ ಮಹಾ ಆದರ್ಶಗಳ, ಗುರಿಗಳ, ಮಹತ್ವದ ಘಟನೆಗಳ, ನಾಟಕೀಯ ಏರುಪೇರುಗಳ ಬೃಹತ್ ದಾಖಲೆ ಇದಾಗಿದೆ. ಪ್ರಾಯಶಃ ಸ್ವಾತಂತ್ರ್ಯ ಚಳವಳಿಯಲ್ಲಿ ಸಂಭವಿಸಿದ ಅಂತಹ ಒಂದು ನಾಟಕೀಯ ಘಟನೆಯೆಂದರೆ ಭಾರತದ ಗಣರಾಜ್ಯದಲ್ಲಿ ವಿಲೀನಗೊಳ್ಳದೆ ಸ್ವತಂತ್ರ ಸಂಸ್ಥಾನವಾಗಿ ಇರಲು ಬಯಸಿದ್ಧ ಹೈದ್ರಾಬಾದ್ ನಿಜಾಮನ ಹುಚ್ಚು ಸಾಹಸವಾಗಿದೆ. ಇಡೀ ಭಾರತದೇಶ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯಗಳಿಸಿದ ಮಹಾ ಸಂತೋಷ ಸಾಗರದಲ್ಲಿ ಮುಳುಗಿದ್ದಾಗ ನಿಜಾಮನ ಸಂಸ್ಥಾನದಲ್ಲಿ ಜನರು ಆಂತಕದಲ್ಲಿದ್ದರು. ಈ ಘಟನೆಯ ಸರ್ಕಾರ ಮತ್ತು ಜನತೆ ಹಾಗೂ ಸಂಸ್ಥಾನದ ಎರಡು ಕೋಮುಗಳ ನಡುವೆ ಘರ್ಷಣೆ ಸ್ಫೋಟಕ್ಕೆ ಕಾರಣವಾಯಿತು. ನಿಜಾಮನ ಸಂಸ್ಥಾನದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವು ರಾಜಕೀಯ ದಾಸ್ಯದಿಂದ ಬಿಡುಗಡೆಯನ್ನು ಗಳಿಸುವ ಜೊತೆಗೆ ವಿಚ್ಛಿದ್ರಕಾರಿ ಶಕ್ತಿಗಳ ದಮನದ ಗುರಿಯನ್ನೂ ಹೊಂದಿತ್ತು.
ದುರದೃಷ್ಟದ ಸಂಗತಿಯೆಂದರೆ ಇಂತಹ ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಯ ಚಾರಿತ್ರಿಕ ಹಾಗೂ ರಾಷ್ಟ್ರೀಯ ಮಹತ್ವವು ಇದುವರೆಗೂ ಬೆಳಕಿಗೆ ಬಂದಿಲ್ಲ ಎಂಬುದನ್ನು ಗಮನಿಸಬಹುದಾಗಿದೆ. ನಿಜಾಮ ಸಂಸ್ಥಾನದಲ್ಲಿ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಾದ ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಡೆದ ಹೋರಾಟವು ಭಾರತದ ಸ್ವಾತಂತ್ರ್ಯ ಹೋರಾಟದ ಅಂತಿಮ ಮಜಲಾಗಿದೆ. ಈ ಹೋರಾಟವು ಹಲವಾರು ದೃಷ್ಟಿಯಿಂದ ಮಹತ್ವದಾಗಿದೆ. ಭಾರತದ ಉಳಿದ ಭಾಗಗಳಲ್ಲಿ ನಡೆದದ್ದಕ್ಕಿಂತ ವಿಭಿನ್ನವಾಗಿ ಸಂಪ್ರದಾಯವಾದಿ ಹಾಗೂ ಸರ್ವಾಧಿಕಾರಿ ಸರ್ಕಾರ ಮತ್ತು ಮಂತಾಂಧತೆಯಿಂದ ಹುಚ್ಚಾಗಿದ್ದ ಕೋಮುಶಕ್ತಿಯ ವಿರುದ್ಧ ಇಲ್ಲಿ ಹೋರಾಟವು ನಡೆಯಿತು. ಈ ಪ್ರದೇಶದ ಜನರ ಸ್ವಾತಂತ್ರ್ಯದ ಬಗೆಗಿದ್ದ ಅದಮ್ಯವಾದ ಬಯಕೆ ಹಾಗೂ ಅದಕ್ಕಾಗಿ ಎಂತಹ ಬಲಿದಾನಕ್ಕೂ ಹೆದರದವರ ವೀರಗಾಥೆಯಾಗಿದೆ. ಗುಲಾಮಗಿರಿ ಹಾಗೂ ಮತಾಂಧತೆಯ ಸಂಕೋಲೆಯಲ್ಲಿ ಬಂಧಿಯಾಗಿದ್ದ ಭಾರತವನ್ನು ಬಿಡುಗಡೆ ಗೊಳಿಸಲು ಪಣತೊಟ್ಟು ಕೊನೆಯಿಲ್ಲದ ಕಷ್ಟ-ನಷ್ಟ, ನೋವು-ಸಂಕಟ ಅನುಭವಿಸಿದ ರಾಷ್ಟ್ರೀಯವಾದಿಗಳ ಹೋರಾಟ ಇದಾಗಿದೆ.
ಪ್ರಸ್ತುತ ಅಧ್ಯಯನಕ್ಕೆ ಕಾರಣವಾದ ಅಂಶಗಳು ಹಲವಾರು, ಮೊದಲನೆಯದಾಗಿ ಸ್ವಾತಂತ್ರ್ಯ ಚಳವಳಿಯ ಪರವಾಗಿ ಹಾಗೂ ವಿರುದ್ಧವಾಗಿ ಕೆಲಸ ಮಾಡಿದ ಶಕ್ತಿಗಳನ್ನು ಗುರುತಿಸುವುದು. ಎರಡನೆಯದಾಗಿ ಸ್ವಾತಂತ್ರ್ಯ ಸಂಪಾದನೆಯ ಸಾಧನೆಯಲ್ಲಿ ಕಾಂಗ್ರೆಸ್ ಸಂಸ್ಥೆಗೆ ಸಂಪೂರ್ಣ ಕೀರ್ತಿತರುವ ಉತ್ಸಾಹದಲ್ಲಿ ಇತಿಹಾಸಕರಾರರಿಂದ ಅಲಕ್ಷ್ಯಕ್ಕೆ ಗುರಿಯಾಗಿದ್ದ ಇತರ ಪ್ರಸಿದ್ಧ ಸಂಸ್ಥೆಗಳಾದ ಆರ್ಯಸಮಾಜ, ಹಿಂದೂ ಮಹಾಸಭಾ ಹಾಗೂ ನಾಗರಿಕ ಸ್ವಾತಂತ್ರ್ಯ ಸಂಘಗಳು ವಹಿಸಿದ ಪಾತ್ರವು ಇಲ್ಲಿ ಗಮನಾರ್ಹವಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ಸೌಮ್ಯವಾದಿ, ಅಹಿಂಸಾವಾದಿಯಾಗಿತ್ತೇ ಹೊರತು ಉಗ್ರವಾದಿಯಾಗಿರಲಿಲ್ಲ ಎಂಬುದು ಈ ಚಳವಳಿಯ ಒಂದು ವಿಶೇಷತೆಯಾಗಿದೆ. ಆದರೆ ಹೈದ್ರಾಬಾದ್ ರಾಜ್ಯದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯು ಸೌಮ್ಯವಾದಿಗಿಂತ ಹೆಚ್ಚಾಗಿ ಉಗ್ರ-ಹಿಂಸಾವಾದಿಯಾಗಿದ್ದು ಕ್ರಾಂತಿ ಸ್ವರೂಪ ಪಡೆದಿತ್ತು. ಹೈದ್ರಾಬಾದ್ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯು ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಉಳಿದ ಭಾಗಗಳಲ್ಲಿ ನಡೆದ ಚಳವಳಿಗಿಂತ ವಿಭಿನ್ನವಾಗಿತ್ತು. ಏಕೆಂದರೆ ಇಲ್ಲಿ ಜನರು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸಿದರು. ಭಾರತವು ಸ್ವಾತಂತ್ರ್ಯ ಗಳಿಸಲು ನಡೆಸಿದ ಮಹಾಸಂಗ್ರಾಮದಲ್ಲಿ ಇದು ‘ಅಂತಿಮ ಹೋರಾಟ’ ಎಂಬ ಹಿರಿಮೆಗೆ ಅರ್ಹವಾಗಿದೆ. ಇತಿಹಾಸಕಾರರ ಗಮನಕ್ಕೆ ಬಾರದೆ, ಕಣ್ಮರೆಯಾಗುತ್ತಿದ್ದ ಈ ಚಳವಳಿಗೆ ಸಂಬಂಧಿಸಿದ ವಿವರ ದಾಖಲೆ, ಆಕರ, ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಭಾರತದ ಗಣರಾಜ್ಯದಲ್ಲಿ ನಿಜಾಮನ ಸಂಸ್ಥಾನ ವಿಲೀನಗೊಂಡ ತಕ್ಷಣ ಹೋರಾಟ ನಿಲ್ಲಲಿಲ್ಲ. ಈ ಪ್ರದೇಶದಲ್ಲಿ, ಅದು ಭಾಷಾವಾರು ಪ್ರಾಂತ್ಯರಚನೆಯ ಚಳವಳಿಯಾಗಿ ರೂಪಾಂತರಗೊಂಡಿತು. ಅಂತಿಮವಾಗಿ ಈ ಹೋರಾಟವು ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನೊಳಗೊಂಡ ಅಖಂಡ ಕರ್ನಾಟಕದ ಉದಯದಲ್ಲಿ ಪರ್ಯಾವಸಾನಗೊಂಡಿತು.
ಹೈದ್ರಾಬಾದ್ ಕರ್ನಾಟಕ ಕುರಿತ ಅಧ್ಯಯನಗಳ ಒಂದು ಸಮೀಕ್ಷೆ
ಹೈದ್ರಾಬಾದ್ ಕರ್ನಾಟಕದ ಚರಿತ್ರೆ ಬಗ್ಗೆ ಈವರೆಗೆ ಪ್ರಕಟವಾದ ಗ್ರಂಥ ರಾಶಿಯನ್ನು ವಿವರವಾಗಿ ಅವಲಕೋಕಿಸಿದಾಗ ಈ ಪ್ರದೇಶದ ಸ್ವಾತಂತ್ರ್ಯ ಸಂಗ್ರಾಮದ ಆಳ ಹರವುಗಳನ್ನು ಚಾರಿತ್ರಿಕ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯವಾಗಿಲ್ಲ ಎಂದು ವಿದಿತವಾಗುತ್ತದೆ. ಜೀವನಚರಿತ್ರೆ, ಆತ್ಮಚರಿತ್ರೆ, ಲೇಖನಗಳು, ಕಥೆ, ಕಾದಂಬರಿ, ನಾಟಕ ಇತ್ಯಾದಿಗಳು ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾದ ಗ್ರಂಥಗಳು ಸಾಕಷ್ಟಿವೆ ಮುಖ್ಯವಾಗಿ ‘ಆರದ ದೀಪ’, ‘ಪ್ರಗತಿಗಾಗಿ ಸ್ವಾತಂತ್ರ್ಯ’, ಚಂದ್ರಶೇಖರ ಪಾಟೀಲರ ಪರಿಚಯ, ಡಾ.ಚುರ್ಚಿಹಾಳಮಠ ಸ್ಮರಣ ಸಂಚಿಕೆ, ‘ಪ್ರಭುರಾವ್ ಕಾಂಬ್ಲೆವಾಲೆ’, ‘ಶಿರೂರು ವೀರಭದ್ರಪ್ಪ’, ‘ಗವಿದೀಪ್ತಿ’, ‘ರಾಷ್ಟ್ರವೀರ’, ‘ರಾಯಚೂರಿನ ಸ್ವಾತಂತ್ರ್ಯ ಆಂದೋಳನ’, ‘ಪ್ರಾಂತಃಸ್ಮರಣೀಯರು’, ‘ಹೈದ್ರಾಬಾದ್ ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ್ ಔರ್ ಆರ್ಯಸಮಾಜ‘, ‘ಹೈದ್ರಾಬಾದ್ ಆರ್ಯೊಂಕಿ ಸಾಧನ್ ಔರ್ ಸಂಘರ್ಷ’, ‘ರಾಷ್ಟ್ರೀಯ ಶಿಕ್ಷಣ’, ‘ಹೈದ್ರಾಬಾದ್ ಕರ್ನಾಟಕದಲ್ಲಿ ರಾಷ್ಟ್ರೀಯತೆಯ ಉದಯ’, ‘ಬಡೆಸಾಬ್ ಪುರಾಣ’, ‘ನಾಯಿ ಮತ್ತು  ಪಿಂಚಣಿ’, ‘ಸ್ವಾತಂತ್ರ್ಯ ವೀರ ಮತ್ತು ಇತರ ಕಥೆಗಳು’, ವಿನಾಯಕರಾವ್ ಅಭಿನಂದನ ಗ್ರಂಥ ಮುಂತಾದವು ಹರಾಟದ ಕೆಲವು ಆಯ್ದ ಘಟನೆಗಳ ವಿವರವನ್ನು ಮಾತ್ರ ಒದಗಿಸುತ್ತವೆ. ಮೇಲಾಗಿ ಈ ಕೃತಿಗಳಲ್ಲಿ ಬಹಳಷ್ಟು ಕಥೆಯನ್ನು ಹೇಳುವ ಸಾಹಿತ್ಯ ಕೃತಿಗಳಾಗಿವೆ. ಈ ಬರಹಗಳಲ್ಲಿ ಘಟನೆ-ವಿವರಗಳಿಗೆ ಚಾರಿತ್ರಿಕ ಹಾಗೂ ಕಾಲಾನುಕ್ರಮಣಿಕೆಗೆ ಮಹತ್ವ ನೀಡಿಲ್ಲ. ಈ ಎಲ್ಲ ಬರಹಗಳನ್ನು ಕೇವಲ ನಮ್ಮ ಅಧ್ಯಯನದ ಒಂದು ಪ್ರಮೇಯವನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಬಹುದು. ಈ ಭಾಗದ ಮಹಾಸಂಗ್ರಾಮದ ಪೂರ್ಣಚಿತ್ರವನ್ನು ಇವು ನೀಡಲಾರವು. ಕೆಲವು ಬರಹಗಳಂತೂ ಕೇವಲ ಸಣ್ಣಪುಟ್ಟ ಘಟನೆಗಳನ್ನು ವಿವರಣೆಗೆ ತೃಪ್ತಿಪಟ್ಟುಕೊಂಡಿದೆ.
‘ಒಂದು ಯುಗದ ಅಂತ್ಯ’, ಸ್ವಾಮಿ ರಮಾನಂದತೀರ್ಥರ ‘ಆತ್ಮಚರಿತ್ರೆ’ ಹಾಗೂ ಎನ್ ರಮೇಶನ್‌ರವರ ಸಂಪಾದಕತ್ವದಲ್ಲಿ ರಚಿತವಾದ ಮೂರು ಸಂಪುಟಗಳ ಹೈದ್ರಾಬಾದ್ ಸ್ವಾತಂತ್ರ್ಯ ಸಂಗ್ರಾಮ, ಸೂರ್ಯನಾಥ ಕಾಮತ್ ಸಂಪಾದಿಸಿರುವ ‘ಸ್ಮೃತಿಗಳು’ ಮುಂತಾ ದವು ಸಹ ಈ ಪ್ರದೇಶದ ಮೂಲೆೆ ಮೂಲೆಗಳಲ್ಲಿ ಜನ ನಡೆಸಿದ್ದ ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ವಿವರವನ್ನು ಒಳಗೊಂಡಿಲ್ಲ. ಚರಿತ್ರೆಯಲ್ಲಿ ‘ವಸ್ತುನಿಷ್ಠತೆ’ಯನ್ನು ಕಾಯ್ದು ಕೊಳ್ಳುವ ದೃಷ್ಟಿಯಿಂದ ಹೈದ್ರಾಬಾದ್ ಕರ್ನಾಟಕದ ಚರಿತ್ರೆಗೆ ಸಂಬಂಧಿಸಿದ ಈ ಸ್ಮೃತಿಗಳು, ಕೃತಿಗಳನ್ನು ಸರಿಯಾಗಿ ಪರಾಮರ್ಶಿಸಬೇಕಾಗಿದೆ. ಹೋರಾಟಗಾರರು ಪ್ರತಿ ನಿಧಿಸಿದ್ದ ಸಂಸ್ಥೆ ಅಥವಾ ಅವರ ಮುಂದಾಳುಗಳ ಬಗೆಗಿನ ಭಾವನಾತ್ಮಕ ನಿಷ್ಠೆಯಿಂದ ಈ ಸ್ಮೃತಿಗಳು ಮುಕ್ತವಾಗಿಲ್ಲ. ವ್ಯಕ್ತಿಗಳ ವೈಯಕ್ತಿಕ ನಿಲುವು, ನಿರ್ಧಾರ, ಪೂರ್ವಗ್ರಹಪೀಡಿತ ವಿಚಾರಗಳ ಈ ಬರಹಗಳಲ್ಲ ವ್ಯಾಪಕವಾಗಿ ಕಂಡುಬರುತ್ತಿರುವುದರಿಂದ ಹೈದ್ರಾಬಾದ್ ಕರ್ನಾಟಕದ ಏಕೀಕರಣದ ಚರಿತ್ರೆಯನ್ನು ಪುನಃ ಹೊಸದಾಗಿ ಪರಿವೀಕ್ಷಿಸುವ ಅವಶ್ಯಕತೆ ಇದೆ.
ಅಧ್ಯಯನ ವಿಧಾನ ಮತ್ತು ಆಕರಗಳು
ಹೈದ್ರಾಬಾದ್ ಕರ್ನಾಟಕದ ಬಗ್ಗೆ ಸಂಶೋಧನೆ ಮಾಡುವ ಸಂಬಂಧದಲ್ಲಿ ಚಾರಿತ್ರಿಕ ವಿಧಾನವನ್ನು ಅನುಸರಿಸಬಹುದಾಗಿದೆ. ಸೂಕ್ತವೆಂದು ಕಂಡುಬರುವ ಘಟನೆಗಳನ್ನು ವಿವರಿಸಲು ಸರ್ವೆವಿಧಾನ ತಂತ್ರವನ್ನೂ ಬಳಸಲಾಗಿದೆ. ಚಾರಿತ್ರಿಕ ವಿಧಾನದ ಮೂಲ ನಿಯಮದಂತೆ ಈ ಅಧ್ಯಯನದಲ್ಲಿ ಸಮಕಾಲೀನ ಹಾಗೂ ತೀರ ಸಮಕಾಲೀನ ದಾಖಲೆ- ಕಡತಗಳನ್ನು ಆಕರವಾಗಿ ಬಳಸಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ವಿಲೀನದ ಇತಿಹಾಸದ ಪುನಃರಚನೆಯಲ್ಲಿ ಬಳಸಿದ ಆಕರಗಳನ್ನು ಮಾಹಿತಿಗಳನ್ನುೊಪ್ರಾಥಮಿಕ ಹಾಗೂ ದ್ವಿತೀಯ ಮೂಲಾಧರಗಳೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು.
ಪತ್ರವ್ಯವಹಾರ, ಶಾಸಕಾಂಗಗಳಲ್ಲಿನ ನಡವಳಿಕೆ, ವಾರ್ತಾಪತ್ರಿಕೆ, ವಾರಪತ್ರಿಕೆ, ಜನಪದ ಹಾಡುಗಳು, ನ್ಯಾಯಾಲಯದ ಕಡತ, ಹೈದ್ರಾಬಾದ್‌ನ ರಾಜ್ಯ ಪತ್ರಗಾರದಲ್ಲಿನ ದಾಖಲೆಗಳು, ರಾಜ್ಯಪುನಃರಚನೆ ಆಯೋಗದ ವರದಿ, ಸ್ವಹಸ್ತ ಲಿಖಿತ ವಿವರಗಳು, ಧ್ವನಿ ಸುರುಳಿಗಳು, ಆತ್ಮಚರಿತ್ರೆ, ಭಾವಚಿತ್ರಗಳು, ದಿನಚರಿಗಳು ಈ ಪ್ರದೇಶದ ಕರ್ನಾಟಕ ಸಂಘಟದ ಕಾರ್ಯಚಟುವಟಿಕೆಗಳ ವಿವರ, ಗುಲಬರ್ಗಾದ ಯುವಕ ಸಂಘ, ಉದ್‌ಗೀರ್‌ನ ವೀರಶೈವ ಪರಿಷತ್‌ನ ಗೊತ್ತುವಳಿಗಳು, ಗಡಿ ಚಳವಳಿಯ ಶಿಬಿರಾಧಿಪತಿಗಳ ವ್ಯಕ್ತಿಗತ ಕಡತಗಳು, ಸ್ಮೃತಿಗಳು, ಪ್ರಶಸ್ತಿ ಪತ್ರಗಳು ಮುಂತಾದವುಗಳು ಈ ಅಧ್ಯಯನದಲ್ಲಿ ಉಪಯೋಗಿಸಿದ ಪ್ರಾಥಮಿಕ ಅಥವಾ ಮೂಲಾಧಾರಗಳಾಗಿವೆ.
ಈ ಮೇಲೆ ವಿವರಿದ ವರ್ಗಿಕೃತ ಆಕರಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ನನ್ನ ಅಧ್ಯಯನ ಸಂದರ್ಭದಲ್ಲಿ ರಾಷ್ಟ್ರೀಯವಾದಿಗಳು ಹಾಗೂ ರಜಾಕಾರರು ತಮಗೆ ಸಂಬಂಧಿಸಿದವರಿಗೆ ಬರೆದ ಪತ್ರಗಳ ಮೂಲ ಪ್ರತಿಗಳು ದೊರಕಿವೆ. ಈ ಪತ್ರಗಳು ಅಂದಿನ ರಜಾಕಾರರು ನಡೆಸಿದ್ದ ಹತ್ಯಾಕಾಂಡದ ಮೇಲೆ ವಿವರವಾದ ಬೆಳಕು ಚೆಲ್ಲುತ್ತವೆ. ನಿಜಾಮ ಸರ್ಕಾರ ಹಾಗೂ ರಜಾಕಾರರ ವಿರುದ್ಧ ನಡೆದ ಗಡಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದ ಚಂದ್ರಶೇಖರ ಪಾಟೀಲ ಮಹಾಗಾಂ, ಅಳವಂಡಿ ಶಿವಮೂರ್ತಿಸ್ವಾಮಿ, ಶರಣಗೌಡ ಇನಾಂದಾರ್ ಮುಂತಾದವರು ನಡೆಸಿದ ಶೌರ್ಯಗಳನ್ನು ಕುರಿತು ರಚಿತವಾಗಿದ್ದ ಜನಪದ ಹಾಡುಗಳ ಸಂಗ್ರಹ ಈ ನಿಟ್ಟಿನಲ್ಲಿ ಮುಖ್ಯವಾದವು.
ಈ ಅಧ್ಯಯನದಲ್ಲಿ ದಿನಪತ್ರಿಕೆ ನಿಯತಕಾಲಿಕೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ. ಸಂಯುಕ್ತ ಕರ್ನಾಟಕ, ಲೋಕಮಾತಾ, ಲೋಕವಾಣಿ, ಶರಣ ಸಂದೇಶ, ದಿ ಹಿಂದೂ, ಡೆಕನ್ ಕ್ರಾನಿಕಲ್, ನಗರಿಕ, ಶಿಯಾಸತ್ ರಹಬರ್ ಐದಖನ್, ಇಮ್ರೋಜ್ ಮುಂತಾದ ಪತ್ರಿಕೆಗಳ ಹಳೇ ಸಂಚಿಕೆಗಳು ಗಮನಾರ್ಹವಾಗಿದೆ.
ಇಲ್ಲಿ ಬಳಸಿರುವ ಆಕರಗಳಲ್ಲಿ ಪ್ರಾಯಶಃ ಅತ್ಯಂತ ಮಹತ್ವದವುಗಳೆಂದರೆ ‘ಸ್ವಲಿಖಿತ ದಾಖಲೆಗಳು’, ಹೈದ್ರಾಬಾದ್ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಸುದೀರ್ಘವಾದ ಸಂದರ್ಶನಗಳನ್ನು ನಡೆಸಲಾಯಿತು. ಈ ಕಾಲದಲ್ಲಿ ಬಿತ್ತರಗೊಂಡ ವಿವರಗಳನ್ನು ಈ ಸಂಶೋಧಕ ಸ್ವಹಸ್ತದಿಂದ ಬರೆದುಕೊಂಡು ವಿಷಯ ಸತ್ಯತೆಯ ಬಗ್ಗೆ ಅವರುಗಳ ರುಜು ಪಡೆಯಲಾಗಿದೆ. ಈ ಬಗೆಯಲ್ಲಿ ಸಿದ್ಧವಾದ ಸಾಹಿತ್ಯವನ್ನೇ ಸ್ವಲಿಖಿತ ದಾಖಲೆಗಳು ಎಂದು ಕರೆಯಲಾಗಿದೆ. ಹೀಗೆ ಆಕರಗಳ ಸಂಗ್ರಹಕ್ಕೆ ವಸ್ತುನಿಷ್ಠೆ ವಿಧಾನಗಳನ್ನು ಅನುಸರಿಸಲಾಗಿದೆ. ಈ ಕಾರ್ಯದಲ್ಲಿ ಈ ಸಂಶೋಧಕನು  ಆರ್ಯಸಮಾಜ ಹಾಗೂ ಕಾಂಗ್ರೆಸ್ ಇನ್ನೂ ಮುಂತಾದ ಸಂಸ್ಥೆಗಳಿಗೆ ಸೇರಿದ್ದ ಮುಂದಾಳು ಗಳಾಗಿದ್ದ ಹಕಿಖತ್‌ರಾವ್, ಬಿಟಗುಪ್ಪಿಕರ್, ರಾಮಚಂದ್ರ ವೀರಪ್ಪ, ರಘುನಾಥ ಡಗೆ, ಎಸ್.ನಿಜಲಿಂಗಪ್ಪ, ಎಂ.ಚನ್ನಾರೆಡ್ಡಿ, ರಾಮಕೃಷ್ಣ ಹೆಗೆಡೆ, ವೀರೇಂದ್ರಪಾಟೀಲ್, ದತ್ತಾತ್ರೇಯರಾವ್ ಅವರಾದಿ, ಜಗನ್ನಾಥರಾವ್ ಚಂದ್ರಿಕಿ, ಕೊಲ್ಲೂರು ಮಲ್ಲಪ್ಪ ವಿಶ್ವನಾಥರೆಡ್ಡಿ ಮುದ್ನಾಳ, ವಿ.ವಿ.ದೇವಗಲಗಾಂವ್‌ಕರ್, ನಾರಾಯಣ ಕನ್ನಿಹಾಳ್, ವಿದ್ಯಾದರ ಗುರೂಜಿ, ಕಲ್ಯಾಣರಾವ್ ಮುರುಗತ್ತಿ, ಶಂಕರಶೆಟ್ಟಿ ಪಾಟೀಲ್, ಎ.ವಿ.ಪಾಟೀಲ್, ಸಂಗಪ್ಪ ರಟಗಲ್, ರಾಜಾವೆಂಕಟಪ್ಪ ನಾಯಕ, ಆರ್.ಜಿ.ಜೋಷಿ, ಎಚ್.ನಿಜಲಿಂಗಪ್ಪ, ಪಾಟೀಲ್ ಪುಟ್ಟಪ್ಪ, ಸಿ.ಎಂ.ಚುರ್ಚಿಹಾಳಮಠ್, ಸರದಾರ್ ಶರಣಗೌಡ ಇನಾಂದಾರ್, ಶಿವಮೂರ್ತಿಸ್ವಾಮಿ ಅಳವಂಡಿ, ಪೂಜ್ಯ ಶರಣಬಸಪ್ಪ ಅಪ್ಪ, ಹಜತ್ ಸಜ್ಜದ್ ನಶೀನ್ ಖಾಜಾ ನಿಜಾಮಿ, ಸಯ್ಯದ್ ಮೆಹಬುಲ್ಲಾಹಸನ್, ನ್ಯಾಯವಾದಿ ಅಲ್ಲಾವುದ್ದೀನ್, ಮಟಮಾರಿ ನಾಗಪ್ಪ, ಶಾಂತರಸ, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು ಮುಂತಾದವರನ್ನು ಸಂದರ್ಶಿಸಿದ ಪಠ್ಯಗಳು ಮಹತ್ವದ್ದಾಗಿದೆ.
ಹೀಗೆ ನಡೆಸಿದ ಸಂದರ್ಶನಗಳ ಮೂಲಕ ಸಿದ್ಧಪಡಿಸಿದ ಸಾಹಿತ್ಯವು ಸ್ವಲಿಖಿತ ದಾಖಲೆ, ಧ್ವನಿಸುರುಳಿ ಹಾಗೂ ಟಿಪ್ಪಣಿಗಳ ರೂಪದಲ್ಲಿ ಒಟ್ಟು ನಲವತ್ತು ಸ್ವಲಿಖಿತ ದಾಖಲೆಗಳು ಹಾಗೂ ಧ್ವನಿಸುರುಳಿಗಳಿದ್ದಾವೆ. ನಾವು ಸಂದರ್ಶಿಸಿದ ಹಾಗೂ ಸಂಪರ್ಕಿಸಿದ ವ್ಯಕ್ತಿಗಳು ಸಮಾಜದ ವಿವಿಧ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ದಾಖಲೆಗಳು ಈ ನಿಟ್ಟಿನಲ್ಲಿ ಗಮನಾರ್ಹವಾದುದು. ಈ ಅಂಶಗಳನ್ನು ಕೆಳಗಿನಂತೆ ವಿವರಿಸಬಹುದಾಗಿದೆ.
ನಿಜಾಮ ಸಂಸ್ಥಾನ ಹಾಗೂ ಬ್ರಿಟಿಷರು
ಸ್ವತಂತ್ರ ಅಧಿಕಾರವನ್ನು ಘೋಷಿಸಿಕೊಳ್ಳುವ ಒಂದೇ ಒಂದು ಅವಕಾಶವನ್ನು ನಿಜಾಮರು ಬಿಡುತ್ತಿರಲಿಲ್ಲ. ಪ್ರಾರಂಭದಿಂದಲೂ ತಮಗೆ ದೈವದತ್ತ ಅರಸೊತ್ತಿಗೆ ಅಧಿಕಾರವಿದೆ ಎಂದು ಅವರು ನಂಬಿದ್ದರು. ರಾಜಕೀಯ ಸಿದ್ಧಾಂತಗಳಲ್ಲಿ ನಿಜಾಮರು ಸ್ಟುವರ್ಟ್ ಲೂಯಿಸ್ ಮತ್ತು ಕೈಸರ ಅರಸರನ್ನು ಮೀರಿಸಿದ್ದರು. ವಿಸ್ತರಣಾವಾದಿಗಳು ಹಾಗೂ ಯುದ್ಧ ನಿಪುಣರಾದ ಪೇಶ್ವೆಗಳ ಅಧೀನದಲ್ಲಿದ್ದ ಮರಾಠರ, ಮೈಸೂರಿನ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಏಳ್ಗೆ ಬ್ರಿಟಿಷರಿಗೂ ಮತ್ತು ನಿಜಾಮರಿಗೂ ಶಾಂತಿಯಿಂದಿರಲು ಬಿಡಲಿಲ್ಲ. 1798ರಲ್ಲಿ ನಿಜಾಮನು ರಕ್ಷಣೆಗಾಗಾ ಸಹಾಯಕ ಸೈನಪದ್ಧತಿ ಒಪ್ಪಂದಕ್ಕೆ ಸಹಿ ಹಾಸಿದನು. ಭಾರತದಲ್ಲಿ ಬ್ರಿಟಿಷರು ತಮ್ಮ ಪರಮಾಧಿಕಾರವನ್ನು ಕಾಯ್ದುಕೊಳ್ಳಲು ಮತ್ತು ಮರಾಠ ಮತ್ತು ಮೈಸೂರು ಶಕ್ತಿಗಳನ್ನು ನಿಯಂತ್ರಿಸಲು ಹೈದ್ರಾಬಾದ್ ಸಂಸ್ಥಾನವನ್ನು ಒಂದು ಬಫೆರ್ ರಾಜ್ಯವನ್ನಾಗಿ ಬಳಸಿದನು. 1857 ಸ್ವಾತಂತ್ರ್ಯ ಸಂಗ್ರಾಮದ ಅಲೆಗಳನ್ನು ದಕ್ಷಿಣ ಭಾರತದಲ್ಲಿ ತಡೆದಿದ್ದನ್ನು ಗಮನಿಸಿದರೆ, ಬ್ರಿಟಿಷರಿಗೆ ನಿಜಾಂ ಶಕ್ತಿಯ ಅನಿವಾರ್ಯತೆ ಗೊತ್ತಾಗುತ್ತದೆ. ಪ್ರಥಮ ಮಹಾಯುದ್ಧದ ಸಮಯದಲ್ಲಿ ನಿಜಾಂನು ಬ್ರಿಟನ್ನಿಗೆ 375 ಲಕ್ಷ ಹಣ ಹಾಗೂ ಸೇನಾ ತುಕಡಿಗಳನ್ನು ಕಳಿಸಿದನು. ನಿಜಾಮನಿಗೆ ಸೈನ್ಯ ಯುರೋಪ್ ಮತ್ತು ಟರ್ಕಿಯ ರಣರಂಗದಲ್ಲಿ ಮುಸ್ಲಿಮ ವಿರುದ್ಧ ಹೋರಾಡಿತು ದ್ವಿತೀಯ ಮಹಾಯುದ್ಧದದಲ್ಲಿ ಹೈದ್ರಾಬಾದಿನ ಎಲ್ಲಾ ಉದ್ದಿಮೆಗಳು ಯುದ್ಧೋಪಕರಣ ಉತ್ಪಾದನೆಯಲ್ಲಿ ತೊಡಗಿದ್ದವು. ಹೀಗೆ ನಿಜಾಂ ಸಂಸ್ಥಾನ ತನ್ನ ಅಸ್ತಿತ್ವ ರಕ್ಷಿಸಿಕೊಳ್ಳಲು ಬ್ರಿಟಿಷ್ ಸಾಮ್ರಾಜ್ಯದ ಅನನ್ಯ ಭಕ್ತರಾಗಿದ್ದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ನಿಜಾಂರಿಗೆ ‘ಹೀಟ್ ಏಕ್ಸಾಲ್ಟೆಡ್ ಹೈನೆಸ್’ ಹಾಗೂ ‘ಫೇತ್‌ಫುಲ್ ಅಲೈ ಅಫ್ ದಿ ಬ್ರಿಟಿಷ್ ಗೌರ್ನಮೆಂಟ್’ ಎಂಬ ಬಿರುದುಗಳನ್ನು ನೀಡಿ ಗೌರವಿಸಿತು. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರ ನಿಜಾಮನಿಗೆ ಅನೇಕ ಸವಲತ್ತುಗಳನ್ನು ಮತ್ತು ಆಂತರಿಕ ಅಧಿಕಾರವನ್ನು ನೀಡಿತು. ನಿಜಾಮ ಸ್ವತಂತ್ರವಾದ ಧ್ವಜ, ರಾಷ್ಟ್ರಗೀತೆ, ಸೈನ್ಯ, ನಾಣ್ಯ, ಸಾರಿಗೆ, ರೈಲ್ವೆ, ಅಂಚೆ, ಅಕಾಶವಾಣಿ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದನು. ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಂಪತ್ತು ಮತ್ತು ಅಧಿಕಾರವನ್ನೇ ಬಯಸುತ್ತಿದ್ದ ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್, 1911ನೆಯ ಆಗಸ್ಟ್ 29ರಂದು ಅಧಿಕಾರಕ್ಕೆ ಬಂದನು. ಸ್ವಾತಂತ್ರ್ಯ ಸಂಗ್ರಾಮದ ಕಥಾವಸ್ತು ಇವರ ಆಳ್ವಿಕೆಯಾಗಿದೆ.
ಇವನು ಕೃಶ, ವಾಮನ ಆಕಾರ ಕನ್ನಡಕಧಾರಿ. ಹಲವಾರು ಭವ್ಯ ಅರಮನೆಗಳಿದ್ದರೂ ಅತಿ ಚಿಕ್ಕದಾದುರಲ್ಲಿ ಅವರ ವಾಸ, ತೆಳು ಕಡ್ಡಿಯ ಕನ್ನಡಕ, ತಾಜ ಮಹಲ್‌ದ ಗುಮ್ಮಟದಂತೆ ಕಾಣುವ ರುಮಾಲು ಸುತ್ತುತ್ತಿದ್ದರು. ಸರ್ಕಾರಿ ಸಮಾರಂಭಗಳಿಗೆ ಮಾತ್ರ ಬಿಳಿ ಬಣ್ಣದ ಉದ್ದನೆಯ ಕೋಟು ಧರಿಸುತ್ತಿದ್ದರು. ಅದಕ್ಕೆ ಪದಕ ಹಾಗೂ ಆರು ಹೆವನ್ಸಲೈಟು ಅವರ ಗೈಡು ಎಂಬ ಶಬ್ದಗಳುಳ್ಳ ಭಾರತೀಯ ಸಂಸ್ಥಾನಿಕರ ಲಾಂಛನ ಅಂಟಿಸಲಾಗಿರುತ್ತಿತ್ತು. ಸೂರ್ಯ ಕಿರಣಗಳು ಕ್ಷಿತಿಜವನ್ನು ಮುತ್ತುವುದಕ್ಕೆ ಮೊದಲೇ ನಿಜಾಮ ಏಳುತ್ತಿದ್ದನು. ಪ್ರಾರ್ಥನೆಯ ನಂತರದ ಸುಗಂಧ ಪರಿಮಳ ಭರಿತ ನೀರಿನಿಂದ ಸ್ನಾನ ಮಾಡುತ್ತಿದ್ದರು. ಸೋಪು ಉಪಯೋಗಿಸುತ್ತಿರಲಿಲ್ಲ. ಆದರೆ ‘ರಿತಾ’ ಎಂಬ ಕಾಯಿಯ ಪುಡಿ ಹಚ್ಚಿಕೊಳ್ಳುತ್ತಿದ್ದರು. ಹಾಲುಕುಡಿದನಂತರ ಚಿನ್ನದ ತಟ್ಟೆಯಲ್ಲಿ ಅತ್ಯಂತ ಸಾದಾ ಊಟ ಮಾಡುತ್ತಿದ್ದರು. ಸರ್ಕಾರಿ ಸಮಾರಂಭಗಳಲ್ಲಿ ಅತಿಥಿಗಳಿಗೆ ಅವರು ಹಿಂದಿನ ರಾತ್ರಿ ಮುತ್ತುಗಳನ್ನು ತಿಂದ ನವಿಲುಗಳ ಮಾಂಸವನ್ನು ಉಣಬಡಿಸುವಲ್ಲಿ ಬಹಳಷ್ಟು ಖುಷಿಪಡುತ್ತಿದ್ದರು. ಸಾಮಾನ್ಯವಾಗಿ ಅವರ ಪ್ರೀತಿಯ ಖಾದ್ಯಗಳೆಂದರೆ ಪರಿಮಳಭರಿತ ‘ಮುಗಲೈ ಪಿಲೆ’ ಹಾಗೂ ಚಿಗರೆ ಮಾಂಸದ ಕಬಾಬ್. ಇಡೀ ದಿನ ಸರ್ಕಾರಿ ಕಾಗದ ಪತ್ರಗಳೊಂದಿಗೆ ವ್ಯವಹರಿಸುತ್ತಿದ್ದರು. ಉರ್ದು ಮತ್ತು ಪರ್ಶಿಯನ್ ಭಾಷೆಯ ಉಪಾಸಕರಾಗಿದ್ದರು. ಇವರ ಕಾಲದಲ್ಲಿ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿಯಾಗಿತ್ತು.
ಹೈದ್ರಾಬಾದ್ ಸಂಸ್ಥಾನದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ನಡೆದ ಏಕೀಕರಣ ಹೋರಾಟದ ಚರಿತ್ರೆಯನ್ನು ಪೂರ್ಣವಾಗಿ ಅರಿಯಲು ಹಾಗೂ ಅದರ ಮಹತ್ವ ಗುರುತಿಸಲು ಈ ಸಂಸ್ಥಾನ ಹಾಗೂ ಪ್ರದೇಶಗಳಲ್ಲಿದ್ದ ಸರ್ಕಾರದ ಸ್ವರೂಪ ಮತ್ತು ಆಳ್ವಿಕೆಗಳ ಚಾರಿತ್ರಿಕ ಅರಿವು ಅಗತ್ಯ. ಭಾರತದಲ್ಲೇ ಅತ್ಯಂತ ಶ್ರೀಮಂತವೂ ಆಗಿದ್ದ ಹೈದ್ರಾಬಾದ್ ಸಂಸ್ಥಾನವನ್ನು ಮಿರ್ ಖಮರುದ್ದೀನ್ ಚಿನ್ ಖಲಿಚ್‌ಖಾನ್ ಎಂಬುವನು ಸ್ಥಾಪಿಸಿದನು. ಇವನು ಔರಂಗಜೇಬನ ಸೈನಾಧಿಪತಿಯಾಗಿದ್ದ ಖಾಜಿ ಉದ್ದೀನ್ ಖಾನ್ ಫರೋಜ್ ಜಂಗ್‌ನ ಮಗನಾಗಿದ್ದ ಫಿರೋಜ್ ಜಂಗ್‌ನು ಮೊದಲ ಖಲೀಪ ಅಬುಬಕರ್‌ನ ವಂಶಸ್ಥ ಎಂಬ ಪ್ರತೀತಿ ಇತ್ತು. ಔರಂಗಚೇಬನ ಮರಣಕ್ಕೆ ಆರುವರ್ಷ ಮೊದಲು ಅಂದರೆ 1713ರಲ್ಲಿ ಚಕ್ರವರ್ತಿ ಫರೂಕ್‌ಶಿಯಾರ್ ಮಿರ್ ಖಮರುದ್ದೀನ್‌ನನ್ನು ನಿಜಾಮ-ಉಲ್-ಮುಲ್ಕಫಿರೋಜ್ ಜಂಗ್ ಎಂಬ ಬಿರುದಿನೊಂದಿಗೆ ದಖ್ಖನ್‌ನ ಸುಬೇದಾರ್‌ನನ್ನಾಗಿ ನೇಮಿಸಿದ್ದ. ಇವನು ಉತ್ತರದ ಮಾಳವದಿಂದ ದಕ್ಷಿಣದ ತಿರುಚಿನಾಪಳ್ಳಿಯವರೆಗೆ ಹರಡಿದ್ದ ಇಡೀ ದಖನ್ ಭಾಗವನ್ನು ಆಳುತ್ತಿದ್ದ. ಮುಂದೆ ಮೊಗಲ್ ಸುಲ್ತಾನ ಮಹಮದ್ ಶಹಾ ಇವನಿಗೆ ‘ಅಸಪ್ ಜಹಾ’ ಎಂಬ ಬಿರುದನ್ನು ನೀಡಿದನು. ಇವನು ವಂಶಸ್ಥರು ಇಂದಿಗೂ ಇದೇ ‘ಅಸಪ್ ಜಹಾ’ ಎಂಬ ಬಿರುದಿನಿಂದಲೇ ಗುರುತಿಸಲ್ಪಡುತ್ತಾರೆ. 1724ರಲ್ಲಿ ಶಿಖಾರ್‌ಖೇಡ್ ಎಂಬ ಯುದ್ಧದಲ್ಲಿ ಮುಖೇರಿಜ್‌ಖಾನ್‌ನನ್ನು ಸೋಲಿಸಿ ನಿಜಾಮನು ಸ್ವತಂತ್ರ ಹೈದ್ರಾಬಾದ್ ಸಂಸ್ಥಾನವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಿದನು. ದೆಹಲಿಯ ಚಕ್ರವರ್ತಿ ಜೊತೆಗಿನ ಸಂಬಂಧವನ್ನು ಕಡಿದು ಹಾಕಿಕೊಂಡನು. ಹೀಗೆ ಸ್ವತಂತ್ರ ರಾಜ್ಯವನ್ನು ಘೋಷಿಸಿ ಹೈದ್ರಾಬಾದ್ ನಗರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಅರಮನೆ ನಿರ್ಮಿಸಿದ್ದನು. ಹೀಗೆ 1707ರಲ್ಲಿ ಔರಂಗಜೇಬನ ಮರಣದ ನಂತರ ಉಂಟಾದ ಮೊಗಲ್ ಸಾಮ್ರಾಜ್ಯದ ವಿಘಟನೆಯೊಂದಿಗೆ ಅಸಪ್‌ಜಹಾನ ವಂಶಸ್ಥರ ಆಳ್ವಿಕೆ ಪ್ರಾರಂಭವಾಯಿತು.
1724 ರಿಂದ ಸೆಪ್ಟೆಂಬರ್ 13, 1948ರ ಪೋಲಿಸ್ ಕಾರ್ಯಾಚರಣೆಯವರೆಗೆ ಹೈದ್ರಾಬಾದ್ ಸಂಸ್ಥಾನವನ್ನು ಆಳಿದ ಏಳು ನಿಜಾಮರ ವಿವರ ಹೀಗಿದೆ.
1. ಮಿರ್ ಖಮರುದ್ದೀನ್ ಚಿನ್ ಖಿಲಜಿ ಖಾನ್(1724-1748)
2. ನವಾಬ್ ನಿಜಾಮ್ ಅಲಿಖಾನ್ (1761-1903)
3. ನವಾಬ್ ಸಿಕಂದರ್ ಬಹಾದ್ದೂರ್ (1804-1828)
4. ನಸೀರು ದೌಲಾ ಬಹಾದ್ದೂರ್ (1829-2857)
5. ಅಪಜಾಲುದೌಲಾ ಬಹಾದ್ದೂರ್ (1857-1869)
6. ಮಿರ್ ಮೆಹಬೂಬ್ ಅಲಿಖಾನ್ ಬಹಾದ್ದೂರ್ (18679-1911)
7. ನವಾಬ್ ಮಿರ್ ಉಸ್ಮಾನ್ ಆಲಿಖಾನ್ ಬಹಾದ್ದೂರ್ (1911-1948)
ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಂಪತ್ತು ಮತ್ತು ಅರವನ್ನೇ ಒಲೈಸುತ್ತಿದ್ದ ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್ ಆಗಸ್ಟ್ 29, 1911ರಂದು ಅಧಿಕಾರಕ್ಕೆ ಬಂದನು. 1937ರಿಂದ 1948ರವರೆಗೆ ಈತನ ಆಸ್ಥಾನದಲ್ಲಿ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದವರ ವಿವರ ಹೀಗಿದೆ.
1. ಅಕ್ಬರ್ ಹೈದರಿ
2. ಸರ್ ಮಿರ್ಜಾಇಸ್ಮಾಯಿಲ್
3. ಚಟ್ಟಾರಿಯ ನವಾಬ
4. ಮಿರ್ ಲಿಯಾಕ್ ಅಲಿ
‘ಮಜ್ಲೀಸ್-ಎ-ಇಥ್ಥೈಹಾದ್-ಉಲ್-ಮುಸ್ಲಿಮೀನ್’ ಸಂಸ್ಥೆಯ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದವರೆಂದರೆ ನವಾಬ್ ಬಹಾದ್ದೂರ್ ಯಾರ್ ಜಂಗ್ ಮತ್ತು ಕಾಸಿಮ್ ರಜವಿ. ನಿಜಾಮನ ಆಶೀರ್ವಾದ ಹೊಂದಿದ್ದ ಇಥ್ಥೈಹಾದ್ ಸಂಸ್ಥಾನದ ರಾಜಕೀಯ ಹಾಗೂ ಧಾರ್ಮಿಕ ಹಿತಾಸಕ್ತಿಗಳನ್ನು ಪೋಷಿಸುತ್ತಿದ್ದ ಬಹುಮುಖ್ಯ ಕೋಮುಶಕ್ತಿಯಾಗಿತ್ತು.
ತನ್ನ ಸ್ವತಂತ್ರ್ಯ ಅಧಿಕಾರವನ್ನು ಘೋಷಿಸಿಕೊಳ್ಳುವ ಒಂದೇ ಒಂದು ಅವಕಾಶವನ್ನೂ  ನಿಜಾಮನು ಬಿಡುತ್ತಿರಲಿಲ್ಲ. ಬ್ರಿಟಿಷ್ ರೆಸಿಡೆಂಟ್‌ನ ಸಲಹೆಯನ್ನೂ ಧಿಕ್ಕರಿಸಿ ತನ್ನದೇ ‘ಫಸಲಿ’ಯಲ್ಲಿ ಪರಮಾನ್‌ಗಳನ್ನು ಜಾರಿಗೊಳಿಸುತ್ತಿದ್ದ. ಆದರೆ ವಿಸ್ತರಣಾವಾದಿಗಳು ಹಾಗೂ ಯುದ್ಧ ನಿಪುಣರಾದ ಪೇಶ್ವೆಗಳ ಅಧೀನದಲ್ಲಿದ್ದ ಮರಾಠರು ನಿಜಾಮನನ್ನು ಶಾಂತಿ ನೆಮ್ಮದಿಯಿಂದಿರಲು ಬಿಡಲಿಲ್ಲ. 1761ರ ಪಾಣಿಪತ್ ಕದನದ ವಿನಾಶಕಾರಿ ಪರಿಣಾಮ, ವಿದೇಶಿ ಆಕ್ರಮಣಕಾರರ ರಾಜಕೀಯ ಪ್ರಭುತ್ವ ಹಾಗೂ ಮೈಸೂರಿನಲ್ಲಿ ಹೈದಾರಾಲಿಯ ರಾಜಕೀಯ ಚಾಣಾಕ್ಷತನವಾಗಲಿ ಅಥವಾ ನಾನಾ ಫಡ್ನವೀಸ್‌ನ ರಾಜಕೀಯ ಮುತ್ಸದ್ದಿತನವಾಗಲಿ ಅಥವಾ ಮಿಲಿಟರಿ ಜ್ಞಾನವಾಗಲಿ ನಿಜಾಮನಿಗಿರಲಿಲ್ಲ. ಇದರಿಂದಾಗಿ ನೆರಹೊರೆಯ ರಾಜಕೀಯ ಶತ್ರುಗಳ ಆಕ್ರಮಣವನ್ನು ತಡೆಯಲು ಹಾಗೂ ತನ್ನ ಸ್ವಾತಂತ್ರ್ಯ ಮತ್ತು ಸೀಮಿತ ಸಾರ್ವಭೌಮತ್ವವನ್ನು ಕಾಯ್ದುಕೊಳ್ಳಲು ಅಂದು ಪ್ರವರ್ಧಮಾನಕ್ಕೆ ಬರುತ್ತಿದ್ದ ಬ್ರಿಟಿಷರ ನೆರವನ್ನು ಸಹಜವಾಗಿ ನಿಜಾಮನು ಬಯಸಿದನು. ಬ್ರಿಟಿಷ್ ಗೌವರ್ನರ್ ಜನರಲ್ ಲಾರ್ಡ್‌ವೆಲ್ಲೆಸ್ಲಿಯ ‘ಸಹಾಯಕ ಸೈನ್ಯ’ ಪದ್ಧತಿಯನ್ನು ಒಪ್ಪಂದಕ್ಕೆ 1798ರಲ್ಲಿ ನಿಜಾಮನು ಸಹಿ ಹಾಕಿದನು. ನಿಜಾಮನು ತನ್ನ ಸ್ವಾತಂತ್ರ್ಯವನ್ನು ಬ್ರಿಟಿಷರಲ್ಲಿ ಒತ್ತೆ ಇಟ್ಟನು. ಈ ಒಪ್ಪಂದದ ಪ್ರಕಾರ ನಿಜಾಮನು 6 ಬ್ಯಾಟಲಿಯನ್ ಸೈನಿಕರಿಂದ ಕೂಡಿದ್ದ ಸಹಾಯಕ ಸೈನ್ಯದ ವಾರ್ಷಿಕ ಖರ್ಚು 24,17,000 ರೂಪಾಯಿಗಳನ್ನು ಭರಿಸಬೇಕಾಯಿತು. ನಿಜಾಮ ಮತ್ತು ಪೇಶ್ವೆಯ ನಡುವಿನ ರಾಜಕೀಯ ಸಂಬಂಧವನ್ನು ನಿರ್ಧರಿಸುವ ಅಧಿಕಾರ ಬ್ರಿಟಿಷರ ಪಾಲಾಯಿತು.
ರಾಜಕೀಯ ನೀತಿಗಳು
ಪ್ರಾರಂಭವಾದ ದಿನಗಳನ್ನು ಬಿಟ್ಟರೆ ನಾಲ್ಕನೇ ನಿಜಾಮನು ನಾಸಿರುದೌಲನು 1826 ರಿಂದಲೂ ಬ್ರಿಟಿಷರ ಜೊತೆ ಸೌಹಾರ್ದಯುತ ರಾಜಕೀಯ ಸಂಬಂಧವನ್ನು ಕಾಯ್ದುಕೊಂಡಿದ್ದನು. ನಿಜಾಮನು ತನ್ನ ಬಾಹ್ಯ ಸಾರ್ವಭೌಮತ್ವವನ್ನು ಬ್ರಿಟಿಷರಿಗೆ ಒಪ್ಪಿಸಿ ಬಿಟ್ಟಿದ್ದನು. ನಿಜಾಮನ ಆಸ್ಥಾನದಲ್ಲಿ ಬ್ರಿಟಿಷರ ರೆಸಿಡೆಂಟನು ಚಕ್ರವರ್ತಿಯ ಸೈನ್ಯದ ಮೇಲಾಧಿಕಾರಿಯಾಗಿದ್ದನು. ದಮನ ಹಾಗೂ ಓಲೈಸುವ ನೀತಿಗೆ ಅನುಗುಣವಾಗಿ, ಮರಾಠ ಹಾಗೂ ಮೈಸೂರು ರಾಜಕೀಯ ಶಕ್ತಿಗಳ ಅಧಿಕಾರ ವಿಸ್ತರಿಸಿದಂತೆ, ತಮ್ಮ ಆರ್ಥಿಕ ಹಿತಾಸಕ್ತಿ ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪರಮಾಧಿಕಾರವನ್ನು ಕಾಯ್ದುಕೊಳ್ಳಲು ಹೈದ್ರಾಬಾದ್ ಸಂಸ್ಥಾನವನ್ನು ಬ್ರಿಟಿಷರು ಒಂದು ಬರಪ್ ರಾಜ್ಯವನ್ನಾಗಿ ಬಳಸಿದರು. ಈ ಕಾರಣದಿಂದಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಸಿಡಿದೆದ್ದ ಹೈದರಾಲಿ ಮತ್ತು ಮರಾಠರಿಗೆ ನಿಜಾಮನು ನೆರವು ನೀಡಲಿಲ್ಲ. ಟಿಪ್ಪುಸುಲ್ತಾನನು ಸೋತ ನಂತರ 1796ರಲ್ಲಿ ಬ್ರಿಟಿಷರು ಮತ್ತು ನಿಜಾಮನ ನಡುವೆ ಉಂಟಾದ ಒಪ್ಪಂದದ ಪ್ರಕಾರ ಇಂದು ಹೈದ್ರಾಬಾದ್ ಕರ್ನಾಟಕ ಎಂದು ಕರೆಯುವ ಬೀದರ್, ಗುಲಬರ್ಗಾ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬ್ರಿಟಿಷರು ನಿಜಾಮನಿಗೆ ಕಾಣಿಕೆಯಾಗಿ ನೀಡಿದರು. ಇದರಿಂದಾಗಿ ಹೈದ್ರಾಬಾದ್ ಸಂಸ್ಥಾನದ ಆಂತರಿಕ ವ್ಯವಹಾರದಲ್ಲಿ ನಿಜಾಮನಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು.
1857ರ ದಂಗೆ ಮತ್ತು ಪರಿಣಾಮ
ಐದನೇ ನಿಜಾಮನ ಪ್ರಧಾನಮಂತ್ರಿ ಒಂದನೇ ಸಾಲಾರ್ ಜಂಗನು ಮೌನವಾಗಿ ಬಿಟ್ಟಿದಂತೆ ಬ್ರಿಟಿಷರ ಆಳ್ವಿಕೆ ಮತ್ತು ದಾಸ್ಯದಿಂದ ಮುಕ್ತರಾಗಲು ಪೇಶ್ವೆ ನಾನಾ ಸಾಹೇಬನ ಕರೆಯಂತೆ ಹಮ್ಮಿಗೆ ಕೆಂಚನಗೌಡ, ಮುಂಡರಿಗೆ ಭೀಮರಾವ್, ಸುರುಪುರದ ರಾಜ ವೆಂಕಟಪ್ಪ ನಾಯಕ ಮುಂತಾದವರ ಜೊತೆಗೆ ಏಕಕಾಲದಲ್ಲಿ ಹೈದ್ರಾಬಾದ್, ಮದರಾಸು, ಮೈಸೂರು, ತಿರುವಾಂಕೂರು ಹಾಗೂ ಕೊಚ್ಚಿನ್ ರಾಜ್ಯಗಳೂ ಸಹ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದಾಗಿ ಸ್ಪಂದಿಸುತ್ತಿದ್ದವು. ಆದರೆ ನಿಜಾಮನು ಬ್ರಿಟಿಷರೆಂಬ ಅಂಕುಶ ವನ್ನು ಸಣ್ಣಪುಟ್ಟ ಸಂಸ್ಥಾನಗಳನ್ನು ಹತ್ತಿಕ್ಕಲು ಬಳಸುತ್ತಿದ್ದನು. ಇಷ್ಟಾದರೂ ಸಹ ಸುರಪುರದ ಮತ್ತು ಹಲಗಲಿಯ ಬೇಡರು ಮತ್ತು ಇತರ ವೀರರು ವೀರಾವೇಶದಿಂದ ಹೋರಾಡಿ ಬ್ರಿಟಿಷ್ ಸೈನ್ಯದಲ್ಲಿ ಉನ್ನತ ಅಧಿಪತಿಯಾಗಿದ್ದ ಕ್ಯಾಪ್ಟನ್ ನ್ಯೂಬರಿಯನ್ನು ಕೊಂದುಹಾಕಿದನು. ಬ್ರಿಟಿಷರು ಮತ್ತು ನಿಜಾಮನೂ ಒಂದುಗೂಡಿ ದೇಶಭಕ್ತಿ ಉನ್ಮಾದದಿಂದ ನಡೆಸಿದ ಜನರ ಹೋರಾಟವನ್ನು ದಮನ ಮಾಡಿದರು. ಇಷ್ಟಾದರೂ ಸಹ ಸುರಪುರದ ರಾಜಾ ವೆಂಕಟಪ್ಪ ನಾಯಕನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮನಾದನು.
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕೆಂಬ ದಕ್ಷಿಣ ಭಾರತದ ಜನತೆಯ ಅಭಿಲಾಷೆಯು ನಿಜಾಮ ನವಾಬ್ ಅಫ್‌ಜಾಲುದೌಲ ಮತ್ತು ದಿವಾನ ಸರ್ ಸಾಲಾರ್‌ಜಂಗ್‌ರವರ ಬ್ರಿಟಿಷ್ ಪರ ನೀತಿಯಿಂದಾಗಿ ಈಡೇರಿರಲಿಲ್ಲ. 1858ರಲ್ಲಿ ಬಾಂಬೆ ಪ್ರಾಂತದ ಗೌವರ್ನರನು ಗವರ್ನರ್ ಜನರಲ್‌ಗೆ ಬರೆದ ಒಂದು ಪತ್ರದಲ್ಲಿ ನಿಜಾಮನು ಕೈ ಬಿಟ್ಟರೆ ಎಲ್ಲವೂ ಕೈ ಬಿಟ್ಟಂತೆ ಎಂದು ಒಕ್ಕಣೆ ಬರೆದಿದ್ದ. ನಿಜಾಮನು ಬ್ರಿಟಿಷರ ಅತ್ಯಂತ ನಿಷ್ಟಾವಂತ ಹಿಂಬಾಲಕನಾಗಿದ್ದುದರಿಂದಲೇ 1857ರ ಸಂಗ್ರಾಮದ ಅಲೆಗಳು ದಕ್ಷಿಣ ಭಾರತದಲ್ಲಿ ಸಂಪೂರ್ಣ ಹರಡಲಿಲ್ಲ.
1857ರ ದಂಗೆಯ ನಂತರ ಬ್ರಿಟಿಷ್ ರೆಸಿಡೆಂಟನು ನಿಜಾಮನಿಗೆ ಅಸಪ್ ಜಹಾ ಧ್ವಜ ಹಾಗೂ ತನ್ನ ರಾಷ್ಟ್ರಗೀತೆಯೊಂದಿಗೆ ಕಂದಾಯ, ಹಣದ ಮುದ್ರಣ, ಪೋಲಿಸು, ಬ್ಯಾಂಕು, ಸಾರಿಗೆ, ಉದ್ದಿಮೆ ಮುಂತಾದ ಕ್ಷೇತ್ರಗಳಲ್ಲಿ ಪೂರ್ಣ ಅಧಿಕಾರವನ್ನು ನೀಡಲಾಗಿತ್ತು. ಆದರೆ ಸೇನಾಪಡೆ ಹಾಗೂ ರಾಜಕೀಯ ಸಂಬಂಧ ಕುರಿತಂತೆ ನಡೆಯಬೇಕಾಗಿತ್ತು.
1926ರಲ್ಲಿ ನಿಜಾಮನು ತನ್ನ ಸ್ವತಂತ್ರ ಅಧಿಕಾರ ಹಾಗೂ ಬ್ರಿಟಿಷರಿಗೆ ಸಮಾನವಾದ ಸ್ಥಾನಮಾನ ಪಡೆಯಲು ಮಾಡಿದ ಯತ್ನವನ್ನು ಗೌವರ್ನರ್ ಜನರಲ್ ಲಾರ್ಡ್ ರೀಡಿಂಗ್ ಸಮರ್ಥವಾಗಿ ಹತ್ತಿಕ್ಕಿದ್ದಲ್ಲದೆ. ಇಥ್ಥೆಹಾದ್‌ನ ಮತಾಂಧತೆಯಿಂದ ಮೆರೆಯುತ್ತಿದ್ದ  ನಿಜಾಮನ ದುರಾಡಳಿತವನ್ನು ನಿಯಂತ್ರಿಸಲು ಹಲವಾರು ಕ್ರಮ ಕೈಗೊಂಡನು. ಹೈದ್ರಾಬಾದ್ ಸಂಸ್ಥಾನದ ಆಂತರಿಕ ವ್ಯವಹಾರಗಳಲ್ಲಿ ನಿರ್ಣಾಯಕ ಹಸ್ತಕ್ಷೇಪ ನಡೆಸಲು ಬೇಕಾದ ತನ್ನ ಪರಮಾಧಿಕಾರವನ್ನು ಘೋಷಿಸುವುದರ ಜೊತೆಗೆ ಮಾರ್ಚ್ 27, 1927ರಂದು ಪರಿಸ್ಥಿತಿಯನ್ನು ಹತೋಟಿಗೆ ತರಲು ನಾಲ್ವರ ಬ್ರಿಟಿಷ್ ಅಧಿಕಾರಿಗಳನ್ನು ನೇಮಿಸಲಾಯಿತು. ವೈಸರಾಯನು ತನ್ನ ಒಂದು ಸಂದೇಶದಲ್ಲಿ ನಿಜಾಮನ ಸ್ಥಾನಮಾನವು ಭಾರತದ ಉಳಿದೆಲ್ಲಾ ಸಂಸ್ಥಾನಿಕರ ಸ್ಥಾನಮಾನಕ್ಕಿಂತ ಯಾವುದೇ ವಿಧದಲ್ಲಿ ಭಿನ್ನವಲ್ಲ ಎಂದು ಘೋಷಿಸಿದನು. ಬ್ರಿಟಿಷರ ನೇರ ಮೇಲ್ವಿಚಾರಣೆಯಲ್ಲಿ ನಿಜಾಮನು ಆಡಳಿತ ನಡೆಸಬೇಕಾಯಿತು.
ಇದೇ ವೇಳೆಗೆ 1930ರಲ್ಲಿ ಮಹಾತ್ಮಗಾಂಧಿಯವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಜನತೆಯ ಅಸಮಾಧಾನವು ಉಗ್ರಪ್ರತಿಭಟನೆ ರೂಪದಲ್ಲಿ ಸ್ಫೋಟಗೊಂಡಿತ್ತು. ಸುಮಾರ 80,000 ರೈತರು ಗುಜರಾತ್‌ನ ಬಾರ್ಡೋಲಿಯಲ್ಲಿ ಭೂಕಂದಾಯ ಕೊಡಲು ನಿರಾಕರಿಸಿ ಬ್ರಿಟಿಷ ಸರ್ಕಾರದ ದಮನಕಾರಿ ನೀತಿಯನ್ನು ಧೈರ್ಯದಿಂದ ಧಿಕ್ಕರಿಸಿದ್ದರು. ಅಸಹಕಾರ ಚಳವಳಿಯಲ್ಲಿ ‘ಜನತೆಗೆ ಪ್ರಾತಿನಿಧ್ಯ ಕೊಡುವವರೆಗೆ ತೆರಿಗೆ ನೀಡುವುದಿಲ್ಲ’ ಎಂದು ದೊಡ್ಡ ಧ್ವನಿಯಲ್ಲಿ ಜನತೆ ಘೋಷಿಸಿತು. ಹೈದ್ರಾಬಾದ್ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರದ ನೆರವು ಬೇಕೇ ಬೇಕು ಎಂಬುದು ನಿಜಾಮನಿಗೆ ಮನದಟ್ಟಾಯಿತು. ಇದರಿಂದಾಗಿ ನಿಜಾಮನು ಬ್ರಿಟಿಷರ ‘ನಿಷ್ಠಾವಂತ’ ಸಾಮಂತನಾಗಿ ಉಳಿದುಕೊಂಡು ತನ್ನ ಸಂಸ್ಥಾನದಲ್ಲಿ ‘ಕೋಮುವಾದಿ ಹಾಗೂ ದಮನಕಾರಿ’ ನೀತಿಯನ್ನು ನಿರ್ಭೀತಿಯಿಂದ ಜಾರಿಗೆ ತಂದನು. ಬ್ರಿಟಿಷರಿಗೆ ಬೇಕಾದುದು ಕೂಡ ಇದೇ ಆಗಿತ್ತು. ಬ್ರಿಟಿಷ್ ರೆಸಿಡೆಂಟರ್ ಹಾಗೂ ಇತ್ತೆಹಾದ್ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಕೊನೆಯ ನಿಜಾಮ ಮಿರ್ ಉಸ್ಮಾನ್ ಅಲಿಖಾನ್ ಬಹಾದ್ದೂರನು ಜನತೆಯ ಅಶೋತ್ತರಗಳಿಗೆ ಕಿವುಡನಾಗಿದ್ದನು. ಜನರು ನಿಜಾಮನ ನೇತೃತ್ವದಲ್ಲಿ ಜನಪ್ರಿಯ ಸರ್ಕಾರ ರಚಿಸುವ ಕನಸು ಕಟ್ಟಿದ್ದರು.
ಸಂವಿಧಾನಾತ್ಮಕ ಸುಧಾರಣೆಗಳು
ಭಾರತದಲ್ಲಿನ ಉಳಿದೆಲ್ಲಾ ಸಂಸ್ಥಾನಗಳಂತೆ ಹೈದ್ರಾಬಾದ್ ಸಂಸ್ಥಾನವೂ ಕೂಡ ಮಧ್ಯಯುಗೀನ ಪ್ರತಿಗಾಮಿ ಸರ್ವಾಧಿಕಾರಿ ಪರಂಪರೆಯ ಪಳೆಯುಳಿಕೆಯಾಗಿತ್ತು. ಆಡಳಿತ ವ್ಯವಸ್ಥೆಯ ಸಾರಸಗಟಾಗಿ ಸರ್ವಾಧಿಕಾರಿ ಸ್ವರೂಪದ್ದಾಗಿತ್ತು. ನಿಜಾಮನಿಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದ ಮತ್ತು ಆತನ ನೇರ ನಿಯಂತ್ರಣದಲ್ಲಿದ್ದ ಕಾರ್ಯಾಂಗ ನೌಕರಶಾಹಿ ಆಡಳಿತ ವ್ಯವಸ್ಥೆ ಮೇಲೆ ಸಂಪೂರ್ಣ ಅಧಿಕಾರ ಹೊಂದಿತ್ತು. ನಿಜಾಮನು ಆಸ್ಥಾನದಲ್ಲಿ ಬ್ರಿಟಿಷ್ ಸರ್ಕಾರದ ಒಬ್ಬ ಪ್ರತಿನಿಧಿಯು ಹೈದ್ರಾಬಾದ್‌ನಲ್ಲಿ ನೆಲೆಸಿರುತ್ತಿದ್ದನು. ಅವನನ್ನು ರೆಸಿಡೆಂಟ್ ಬಹಾದ್ದೂರ್ ಎಂದು ಸಂಬೋಧಿಸಲಾಗುತ್ತಿತ್ತು. ಹೈದ್ರಾಬಾದ್ ಸಂಸ್ಥಾನದ ಆಡಳಿತವು ಇವನ ಸಲಹೆ ಮಾರ್ಗದರ್ಶನಕ್ಕೆ ಅನುಗುಣವಾಗಿ ನಡೆಯುತ್ತಿತ್ತು. ವಾಸ್ತವವಾಗಿ ಹೈದ್ರಾಬಾದ್ ಸಂಸ್ಥಾನದಲ್ಲಿ  ಒಬ್ಬರಲ್ಲದೆ ಇಬ್ಬರು ಅಂದರೆ ನಿಜಾಮ ಮತ್ತು ಬ್ರಿಟಿಷರು ಅಧಿಕಾರ ನಡೆಸುತ್ತಿದ್ದರು.
ಮೊದಲನೆಯ ಮಹಾಯುದ್ಧವನ್ನು ಅನುಸರಿಸಿ ಸಂಭವಿಸಿದ ದೌಲತ್ ಶಾಸನ ಜಲಯನ್‌ವಾಲಾಬಾಗ್ ಹತ್ಯಾಕಾಂಡ, ಖಿಲಾಫತ್ ಚಳವಳಿಗಳ ಪರಿಣಾಮವಾಗಿ ಬ್ರಿಟಿಷರ ದಮನಕಾರಿ ನೀತಿಯು ಸ್ವಲ್ಪಟ್ಟಿಗೆ ಸೌಮ್ಯವಾಗಿಬಿಟ್ಟಿತು ಮತ್ತು ಅವರು ಮಾಂಟಿಗೋ ಚೇಮ್ಸ್‌ಪೋರ್ಡ್ ಸುಧಾರಣೆಗಳನ್ನು ಜಾರಿಗೆ ತಂದರು. ಭಾರತದಲ್ಲಿ ಜವಾಬ್ದಾರಿ ಸರ್ಕಾರ ರಚಿಸುವ ದಿಕ್ಕಿನಲ್ಲಿ ಬ್ರಿಟಿಷರು ತೆಗೆದುಕೊಂಡ ಪ್ರಥಮ ಹೆಜ್ಜೆ ಇದಾಗಿತ್ತು. ಬ್ರಿಟಿಷ್ ಭಾರತದಲ್ಲಿ ಜರುಗುತ್ತಿದ್ದ ಈ ಬದಲಾವಣೆಗಳ ಪರಿಣಾಮದಿಂದ ಹೈದ್ರಾಬಾದ್ ಸಂಸ್ಥಾನವು ಮುಕ್ತವಾಗಿರುವಂತಿಲ್ಲ. ಬದಲಾಗುತ್ತಿದ್ದ ರಾಜಕೀಯ ಏರುಪೇರುಗಳ ಗತಿ ದಿಕ್ಕುಗಳನ್ನು ಗಮನಿಸಿ 1919ರಲ್ಲಿ ನಿಜಾಮನು ಸಂಸ್ಥಾನದಲ್ಲಿ ರಾಜಕೀಯ ಸುಧಾರಣೆಗಳನ್ನು ತರಲು ಸಲಹೆ ಸೂಚನೆ ನೀಡಲು ಸರ್ ಅಲಿ ಇಮಾಮ್ ಆಯೋಗವನ್ನು ರಚಿಸಿದನು. ಈ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲೇ ಸರ್ ಅಲಿ ಇಮಾಮ್‌ರವರು ರಾಜೀನಾಮೆ ನೀಡಿದರು. ಅನಂತರ ನಿಜಾಮನು ಆರ್.ಬಿ.ಮುಗ್ದಮ್ ಆಯೋಗವನ್ನು ಅದೇ ಉದ್ದೇಶಕ್ಕಾಗಿ ನೇಮಿಸಿದನು. ಆಡಳಿತ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ಸಂಸ್ಥಾನದಲ್ಲಿ ರಾಜಕೀಯ ಸುಧಾರಣೆಗಳನ್ನು ಒತ್ತಾಯಿಸುವ ಸಲುವಾಗಿ 1921ರಲ್ಲಿ ರೂಪುಗೊಂಡಿದ್ದ ರಾಜಕೀಯ ಸುಧಾರಣಾ ಸಂಘದ ಸ್ಥಾಪನೆಗೆ ನಿಜಾಮನು ಅನುಮತಿ ನೀಡಲಿಲ್ಲ. ಆದ್ದರಿಂದ ಾಷ್ಟ್ರೀಯವಾದಿಗಳಾಗಿದ್ದ ವಾಮನ ನಾಯಕ್, ವೈ.ಎಂ.ಕಾಳೆ, ವಿನಾಯಕರಾವ್, ವಿದ್ಯಾಲಂಕಾರ್ ಮತ್ತು ಕಾಶಿನಾಥ ರಾವ್ ವೈದ್ಯ ಮುಂತಾದವರು ಸಂವಿಧಾನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸು ವಂತೆ ನಿಜಾಮನ ಮೇಲೆ ಒತ್ತಡ ಹೇರುವ ಸಲುವಾಗಿ ಸಂಸ್ಥಾನದದ್ಯಂತ ಜನರ ಗಮನ ಸೆಳೆಯಲು ಕರಪತ್ರ ಮುದ್ರಿಸುವ ಭೂಗತ ಚಟುವಟಿಕೆಗಳನ್ನು ಪ್ರಾರಂಭಿದರು. 1932ರಲ್ಲಿ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಸಲುವಾಗಿ ‘ಹಿಂದೂ ಉನ್ನತ ಸಮಿತಿ’ಯನ್ನು ರಾಷ್ಟ್ರೀಯವಾದಿಗಳು ಪ್ರಾರಂಭಿಸಿದರು. ರಾಷ್ಟ್ರೀಯವಾದಿ ಮುಸ್ಲಿಮ ನಾಯಕರುಗಳಾದ ಬ್ಯಾರಿಸ್ಟರ್ ಅಕ್ಬರ್ ಅಲಿಖಾನ್, ಮಿರ್ಜಾ ಜಹೀದ್‌ಬೇಕ್, ಅಬುಹಸನ್ ಸಯ್ಯದ್ ಅಲಿ ಮೊದಲಾದವರು ಹಿಂದೂಗಳ ಜೊತೆ ಸೇರಿ ಹೈದ್ರಾಬಾದ್ ಸಂಸ್ಥಾನದ ಉಚ್ಚ ನ್ಯಾಯಾಲಯದಲ್ಲಿ ನಿವೃತ ನ್ಯಾಯಾಧೀಶ ಸರ್, ನಜಾಮತ್ ಜಂಗ್‌ರವರ ಅಧ್ಯಕ್ಷತೆಯಲ್ಲಿ 1934ರಲ್ಲಿ ‘ಸಂಸ್ಥಾನ ನಾಗರೀಕ ಲೀಗ್’ ಸ್ಥಾಪಿಸಿ ಚುನಾವಣೆ ನಿಯಮದ ಆಧಾರದ ಮೇಲೆ ವಿಧಾನಸಭೆ ನಾಗರೀಕ ಎಂದು ಒತ್ತಾಯಿಸ ತೊಡಗಿದರು. ಕಾನೂನಿನ ಕಣ್ಣಿನಲ್ಲಿ ಎಲ್ಲಾ ಹೈದ್ರಾಬಾದಿಗಳು ಸಮಾನ; ಎಲ್ಲರಿಗೂ ಪೂರ್ಣನಾಗರಿಕ ಹಕ್ಕುಗಳು ದತ್ತವಾಗಬೇಕು ನಾಗರಿಕರ ಜೀವ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳನ್ನು ಒದಗಿಸಬೇಕು ಎಂದು ಲೀಗು ಘೋಷಸಿತು; ಚುನಾಯಿತ ಸದಸ್ಯರಿರುವ ವಿಧಾನಸಭೆಗೆ ಕಾರ್ಯಾಂಗವು ವಿಧೇಯವಾಗಿರುವುದು ಅವಶ್ಯಕ ಎಂದು ಲೀಗ್ ಒತ್ತಾಯಿಸಿ ಲೀಗ್ ಸ್ವತಂತ್ರ ನ್ಯಾಯಾಂಗದ ಪರಮಾಧಿಕಾರದಲ್ಲಿ ನಂಬಿಕೆ ಇಟ್ಟಿತು. ಲೀಗ್‌ನ ಈ ಬಗೆಯ ಕಾರ್ಯಚಟುವಟಿಕೆಗಳಿಂದ ನಿಜಾಮನು ‘ಕಪ್ಪುಸುತ್ತೋಲೆ’ ಹೊರಡಿಸಿ ಲೀಗನ್ನು ನಿಷೇಧಿಸಿದನು.
ಈ ಮಧ್ಯೆ ಬ್ರಿಟಿಷ್ ಸರ್ಕಾರವು 1935ರಲ್ಲಿ ಒಂದು ಕಾನೂನನ್ನು ಜಾರಿಗೊಳಿಸಿ ಪ್ರಾಂತೀಯ ಸ್ವಾಯತ್ತತೆಯನ್ನು ಘೋಷಿಸಿತು. ಹೈದ್ರಾಬಾದ್ ಸಂಸ್ಥಾನದಲ್ಲಿನ ಜನರಿಗೂ ಸಹ ಇದನ್ನು ಪಡೆಯುವ ಅಭಿಲಾಷೆ ಸಹಜವಾಗಿ ಮೂಡಿಬಂತು. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಸ್ವಾತಂತ್ರ್ಯಬೇಕು ಎಂಬ ಭಾವನೆ ಹೈದ್ರಾಬಾದ್‌ನ ನಾಗರಿಕಲ್ಲೂ ಮೂಡಿಬಂತು. ಈ ಬಗೆಯ ರಾಜಕೀಯ ಬೆಳವಣಿಗೆಯಿಂದ ಉತ್ಸಾಹಿತರಾದ ಪ್ರಾಂತೀಯ ಸಾಹಿತ್ಯ ಸಮಾವೇಶಗಳನ್ನು ಸಂಘಟಿಸುತ್ತಿದ್ದ, ರಾಜ್ಯದ ಹೊರಗೆ ಹೈದ್ರಾಬಾದ್ ಸಂಸ್ಥಾನ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದ ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವುದರಲ್ಲಿ ಯಶಸ್ವಿಯಾಗಿದ್ದ ಹೈದ್ರಾಬಾದ್ ಸಂಸ್ಥಾನದ ರಾಷ್ಟ್ರೀಯವಾದಿಗಳು 1938ರಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಆರ್ಯಸಮಾಜ, ಹಿಂದೂ ಮಹಾಸಭಾ, ರಾಜ್ಯ ಕಾಂಗ್ರೆಸ್‌ಗಳ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಲು ನಿಶ್ಚಿಯಿಸಿದರು. ಈ ಸತ್ಯಾಗ್ರಹದ ಪರಿಣಾಮವಾಗಿ 1938ರಲ್ಲಿ ನಿಜಾಮನು ‘ದೇವದೂತ ಸಿದ್ಧಾಂತ’ವನ್ನು ಕೈಬಿಡಬೇಕಾಯಿತು. ಅಂತಿಮವಾಗಿ ದಿವಾನ್ ಬಹಾದ್ದೂರ್ ಆರ್ವಮುದ್ದು ಅಯ್ಯಂಗಾರ್‌ರವರ ಅಧ್ಯಕ್ಷತೆಯಲ್ಲಿ ಒಂದು ಸುಧಾರಣೆ ಯೋಜನೆ ರೂಪಿಸಿಕೊಡಲು  ಸಂವಿಧಾನಾತ್ಮಕ ಸುಧಾರಣಾ ಆಯೋಗವನ್ನು ನೇಮಿಸಿದನು. ನಿಜಾಮನು ತನ್ನ ಸಾರ್ವ ಭೌಮತ್ವವನ್ನು ಸಂಪೂರ್ಣವಾಗಿ ಜನತೆಗೆ ವರ್ಗಾಯಿಸಲು ಸಿದ್ಧನಿರಲಿಲ್ಲ. ಆದರೆ ರಾಜ್ಯ ಸರ್ಕಾರದ ಮಟ್ಟದಲ್ಲಿ ವಿವಿಧ ಹಿತಾಸಕ್ತಿಗಳ ಗುಂಪುಗಳಿಗೆ ಅವಕಾಶ ನೀಡಲು ಸಿದ್ಧನಿದ್ಧನು. ಈ ನಂಬಿಕೆಗಳ ಹಿನ್ನೆಲೆಯಲ್ಲಿ ಆಯೋಗವು ತನ್ನ ಕಲಹೆ ನೀಡಬೇಕಾಗಿತ್ತು.
ಈ ಆಯೋಗವು 88 ಸದಸ್ಯರಿರುವ ಪ್ರಜಾಪರಿಷತ್ತಿನಲ್ಲಿ ಶೇ.12ರಷ್ಟಿರುವ ಮುಸ್ಲಿಮರಿಗೆ ಶೇ.50ರಷ್ಟು ಪ್ರಾತಿನಿಧ್ಯವಿರಬೇಕೆಂದು ಸಲಹೆ ಮಾಡಿತು. ಇನ್ನು ಉಳಿದ ಶೇ.50ರಷ್ಟು ಸದಸ್ಯತ್ವವನ್ನು ಕ್ರಿಶ್ಚಿಯನ್ನರೂ ಸೇರಿದಂತೆ ಹಿಂದೂಗಳು ಹೊಂದಬಹು ದಾಗಿತ್ತು. ಯಾರು ವಾರ್ಷಿಕ ರೂ.100ಗಳಷ್ಟು ಭೂಕಂದಾಯ ಸಲ್ಲಿಸುತ್ತಿದ್ದಾರೊ ಅವರಿಗೆ ಮಾತ್ರ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ನಿಜಾಮನು ರೂಪಿಸಿದ್ದ ‘ಪ್ರಜಾಪರಿಷತ್’ ನಲ್ಲಿನ 88 ಸದಸ್ಯರ ವಿವರ ಹೀಗಿತ್ತು.
ಚುನಾಯಿತ ಸದಸ್ಯರು                                          42
ಸರ್ಕಾರದಿಂದ ನೇಮಿಸಲ್ಪಟ್ಟವರು                           28
ಸರ್ ಐ ಖಾಸ್‌ನಿಂದ ನೇಮಿಸಲ್ಪಟ್ಟವರು                   03
ಜಮೀನ್ದಾರರು                                                     05
ಕಾರ್ಯಾಂಗ ಮಂಡಳಿ ಸದಸ್ಯರು                            10
ಒಟ್ಟು 88
ಪ್ರಜಾಪ್ರಭುತ್ವದ ಬೇಡಿಕೆಯನ್ನು ಜನರ ಅಶೋತ್ತರಗಳಿಗೆ ಮನ್ನಣೆಯನ್ನೂ ನಿಜಾಮನು ಈ ಬಗೆಯಲ್ಲಿ ಪೂರೈಸಿದನು ಸ್ವಾಮಿ ರಮಾನಂದತೀರ್ಥರ ನಾಯಕತ್ವದ ರಾಜ್ಯ ಕಾಂಗ್ರೆಸ್ಸು ಈ ಸೂತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ನಿಜಾಮನು ಇಂಥ ಕೋಮುವಾದಿ ಸುಧಾರಣೆ ಮೂಲಕ ರಾಷ್ಟ್ರೀಯವಾದಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾನೆ ಎಂದು ಅದು ಘೋಷಿಸಿತು. ಈ ಬಗೆಯ ಸುಧಾರಣೆ ಮೂಲಕ ಹಿಂದೂಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುವುದು ಅವನ ಉದ್ದೇಶವಾಗಿತ್ತು. ಈ ಸುಧಾರಣೆಯಿಂದ ಸಂಸ್ಥಾನದ ಬಹುಸಂಖ್ಯಾತ ಸಮುದಾಯಕ್ಕೆ ಮುಸ್ಲಿಮ ಸಮುದಾಯ ಶರಣಾಗಬೇಕಾದೀತು ಎಂಬ ಕಾರಣಕ್ಕಾಗಿ ಇಥ್ಥಹಾದ್ ಕೂಡ ತಿರಸ್ಕರಿಸಿತು. ಸಂವಿಧಾನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸುವುದರಲ್ಲಿ ನಿಜಾಮನು ಅನುಸರಿಸುತ್ತಿದ್ದ ವಿಳಂಬ ನೀತಿಯಿಂದಾಗಿ ದೇಶಭಕ್ತರಿಗೆ ಸತ್ಯಾಗ್ರಹ ಬಿಟ್ಟು ಬೇರೆ ಮಾರ್ಗವೇ ಇಲ್ಲದಂತಾಯಿತು. ಆಗಿಂದಾಗ್ಗೆ ನಿಜಾಮನು ರಾಷ್ಟ್ರೀಯವಾದಿ ಹೋರಾಟಗಾರರ ಬಂಧನಕ್ಕೆ ಫರ್ಮಾನ್‌ಗಳನ್ನು ಹೊರಡಿಸುತ್ತಿದ್ದನು. ನಿಜಾಮನ ಈ ನೀತಿಯನ್ನು ವಿರೋಧಿಸಲು ವಿನಾಯಕರಾವ್ ವಿದ್ಯಾಲಂಕಾರ್‌ರವರ ನಾಯಕತ್ವದಲ್ಲಿ ವಕೀಲರ ವೇದಿಕೆಯನ್ನು ನಿರ್ಮಿಸಲಾಯಿತು. ಇವೆಲ್ಲಾ ಬೆಳವಣಿಗೆಗಳು ರಾಷ್ಟ್ರೀಯವಾದಿಗಳು ಹಾಗೂ ನಿಜಾಮನ ಪಡೆಗಳ ನಡುವೆ ಘರ್ಷಣೆಗೆ ಕಾರಣವಾದವು.
ಸಾಮಾನ್ಯ ಜನರ ಸ್ಥಿತಿಗತಿಗಳು
ಇತಿಹಾಸದ ಅಧ್ಯಯನವೆಂದರೆ ಘಟನೆಗಳ ಕಾರ್ಯಾಕಾರಣ ಸಂಬಂಧದ ಅಧ್ಯಯನ ಘಟನೆಗಳ ಸ್ಫೋಟಕ್ಕೆ ಸನ್ನಿವೇಶವು ಕಾರಣವಾಗಿರುತ್ತದೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಜನರಿಗೆ ಪ್ರೇರಣೆ ನೀಡಿದ ಅಂಶಗಳಾವುವು ಎಂಬುದನ್ನು ಅರ್ಥಮಾಡಿಕೊಳ್ಳಲು ಅಂದು ಹೈದ್ರಾಬಾದ್ ಸಂಸ್ಥಾನದಲ್ಲಿ ಮುಖ್ಯವಾಗಿ ನಮ್ಮ ಅಧ್ಯಯನವು ಒಳಗೊಳ್ಳುವ ಪ್ರದೇಶದಲ್ಲಿ ಜನರ ಸ್ಥಿತಿಗತಿ ಹೇಗಿತ್ತು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಹೈದ್ರಾಬಾದ್ ಕರ್ನಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ಪರಂಪರೆಯು ರಾಷ್ಟ್ರಕೂಟರು, ಚಾಲುಕ್ಯರು, ಕಲ್ಯಾಣದ ಕಲಚೂರಿಗಳು, ವಿಜಯನಗರ, ಬಹಮನಿ ಮುಂತಾದ ಪ್ರಭುತ್ವ ಗಳು ಬಳಿವಳಿಯಾಗಿ ನೀಡಿದ ಭವ್ಯ ಪರಂಪೆಯಾಗಿತ್ತು. ಅನಾದಿಕಾಲದಿಂದಲೂ ಈ ಪ್ರದೇಶದ ಸಂಸ್ಕೃತಿಯನ್ನು ಕೃಷ್ಣಾ, ಭೀಮಾ, ಕಾಗಿನ ಮುಂತಾದ ನದಿಗಳು ಉಪನದಿಗಳ ಶ್ರೀಮಂತಗೊಳಿಸುತ್ತಾ ಬಂದಿವೆ. 1926ರಲ್ಲಿ ಮುಂಬಯಿಯಲ್ಲಿ ನಡೆದ  ಎರಡನೇ ಹೈದ್ರಾಬಾದ್ ರಾಜಕೀಯ ಸಮಾವೇಶದ ಅಧ್ಯಕ್ಷರೂ ಹಾಗೂ ಪ್ರಸಿದ್ಧ ವಿದ್ವಾಂಸರೂ ಆಗಿದ್ದ ವೈ.ಎಮ್.ಕಾಳೆಯವರು ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯು ಗಟ್ಟಿಯಾದ ಹಿಂದು ಮುಸ್ಲಿಮ ಸೌಹಾರ್ದತೆ ಮೇಲೆ ನಿಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿರುವ ಗ್ರೀಕ್ ಕಲೆಯ ಅವಶೇಷ, ಎಲ್ಲೋರ ಗುಹೆಗಳಲ್ಲಿ ಅರಳಿ ನಿಂತಿರುವ ಕಲಾಸ್ಮಾರಕ, ಅಜಂತಾ ವರ್ಣಚಿತ್ರಗಳು, ಹಿಂದೂ ಬೌದ್ಧ ವಾಸ್ತುಶಿಲ್ಪ ಮುಂತಾದವು ಪ್ರತಿಯೊಬ್ಬರನ್ನೂ ಆಶ್ಚರ್ಯಚಕಿತರನ್ನಾಗಿಸುತ್ತವೆ.
12ನೆಯ ಶತಮಾನದಲ್ಲಿ ಶ್ರೀ ಬಸವೇಶ್ವರವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಚಳವಳಿಗೆ ಭದ್ರ ನೆಲೆಯಾಗಿದ್ದ ಈ ಪ್ರದೇಶವು 1347ರಲ್ಲಿ ಬಹುಮನಿ ಸಾಮ್ರಾಜ್ಯದ ಸ್ಥಾಪನೆಯನ್ನು ಕಂಡಿತು.
ಕೊನೆಯ ನಿಜಾಮನ ಆಳ್ವಿಕೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶವು ಸಾಮಾಜಿಕ ವಿಷಮತೆ, ರಾಜಕೀಯ ಏರುಪೇರುಗಳು, ಆರ್ಥಿಕ ಶೋಷಣೆ ಹಾಗೂ ಧಾರ್ಮಿಕ ಅತ್ಯಾಚಾರಗಳನ್ನು ಅನುಭವಿಸಿತು. ಈ ಬಗೆಯ ಸ್ಥಿತಿಗತಿಗಳು ಆರ್ಯಸಮಾಜ, ಹಿಂದೂ ಮಹಾಸಭಾ ಹಾಗೂ ರಾಜ್ಯ ಕಾಂಗ್ರೆಸ್‌ನ ಗಮವನ್ನು ಸೆಳೆದವಲ್ಲದೆ ಮಿರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್ ಮತ್ತು ಆತನ ಇತ್ತೇಹಾದ್ ಸೃಷ್ಟಿಸಿದ್ದ ಭಯೋತ್ಪಾದಕತೆ ಹಾಗೂ ಕೋಮುವಾದದ ವಿರುದ್ಧ ಪವಿತ್ರ ಯುದ್ಧ ಘೋಷಿಸುವಂತೆ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವಂತೆ ಪ್ರೇರಣೆ ನೀಡಿದವು.
ಧಾರ್ಮಿಕ ಸ್ಥಿತಿ
ಮುಸ್ಲಿಮ ಸಾಮ್ರಾಜ್ಯ ನಿರ್ಮಿಸಲು ಬೇಕಾದ ನೀತಿಗಳನ್ನು ನಿಜಾಮ ಮತ್ತು ಅವನ ಇತ್ತೇಹಾದ್ ರೂಪಿಸುತ್ತಿದ್ದವು. ಇಡೀ ಮುಸ್ಲಿಮ ವಿಶ್ವಕ್ಕೆ ಸಾಮ್ರಾಟನಾಗುವ ಮಹಾದಾಸೆ ನಿಜಾಮನದಾಗಿತ್ತು. ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿರಲಿಲ್ಲ. ಅವರಿಗೆ ದೇವಾಲಯ ನಿರ್ಮಿಸಿಕೊಳ್ಳಲು ಅವಕಾಶವಿರಲಿಲ್ಲ. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇರಲಿಲ್ಲ. ಧಾರ್ಮಿಕ ಆಚರಣೆಗಳಿಗೆ ಪ್ರೋಗಣೇಶನ ಹಬ್ಬ ಬಸವ ಜಯಂತಿಗಳ ಸಂದರ್ಭಗಳಲ್ಲಿ ಮೆರವಣಿಗೆ ನಡೆಯುವಂತಿರಲಿಲ್ಲ. ಗುಲಬರ್ಗಾದಲ್ಲಿ ಶ್ರೀ ಶರಣಬಸವೇಶ್ವರ ದೇವಾಲಯದ ಗೋಪುರದ ಕಳಸ ಸ್ಥಾಪಿಸಲು ಅನುಮತಿ ನೀಡಲಿಲ್ಲ. ರಾಜ ಮಹಾರಾಜರ ಪ್ರೋಮೆರೆಯುತ್ತಿದ್ದ ಧಾರ್ಮಿಕ ಸಂಸ್ಥೆಗಳಾದ ಮಠಗಳು ದೇವಾಲಯಗಳು, ಆಶ್ರಮಗಳು ಈ ರಾಜರ ಆಳ್ವಿಕೆಯಲ್ಲಿ ನಿರ್ಲಕ್ಷಕ್ಕೆ ಒಳಗಾದವು. ಹಿಂದೂಗಳನ್ನು ಮುಸ್ಲಿಮರಾಗಿ ಮತಾಂತರಿಸುವ ಕಾರ್ಯ ಹಾಗೂ ದೇವಾಲಯಗಳನ್ನು ಮಸೀದಿಗಳಾಗಿ ಮಾಡುವ ಕಾರ್ಯವು ರಾಜಾಕಾರರ ನೇತೃತ್ವದಲ್ಲಿ ತೀವ್ರಗತಿಯಲ್ಲಿ ಮುಂದುವರಿದವು. ನವಾಬನು ಆಡಳಿತದ ಸೂತ್ರಗಳನ್ನು ಬಹುತೇಕ ಮುಸ್ಲಿಮ ಅಧಿಕಾರಿಗಳ ವಶಕ್ಕೆ ಕೊಟ್ಟಿದ್ದನು. ಇದರಿಂದ ಸಂಸ್ಥಾನದ ಪ್ರದೆಗಳ ಮೇಲೆ ಉಂಟಾಗಬಹುದಾದ ದುಷ್ಟಪರಿಣಾಮಗಳ ಬಗ್ಗೆ ಅವನು ತಲೆ ಕೆಡಿಸಿಕೊಳ್ಳಲಿಲ್ಲ. ಖಜಾನೆಗೆ ಕಂದಾಯ ಸಂದಾಯವಾದರೆ ನಿಜಾಮನಿಗೆ ಸಾಕಾಗಿತ್ತು. ಅಧಿಕಾರಿಗಳು, ಜಹಗೀರ್‌ದಾರರು, ಇತ್ತೇಹಾರ್‌ನ ಅನುಯಾಯಿಗಳು ಇವರಿಗೆ ಬದುಕಿಗಿಂತ ಸಂಪತ್ತಿನ ಮೋಹ ಅತಿಯಾಗಿತ್ತು. ಹೈದ್ರಾಬಾದ್ ಸಂಸ್ಥಾನದಲ್ಲಿ ಮುಸ್ಲಿಮರು ಗ್ರಾಮಾಂತರ ಪ್ರದೇಶಗಳಿಗಿಂತ ಹೆಚ್ಚಾಗಿ ಸಣ್ಣ ದೊಡ್ಡ ನಗರಗಳಲ್ಲಿ ನೆಲೆಸಲು ಬಯಸುತ್ತಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಮಸೀದಿ ನಿರ್ಮಿಸಲು ಉಚಿತ ವಾಗಿ ಹಣಕಾಸು ನೆರವು ನೀಡಲಾಗುತ್ತಿತ್ತು. ಬ್ರಿಟಿಷರ ಆಡಳಿತಗಾರರ ಸಮುದಾಯಕ್ಕೆ ಸೇರಿದ್ದ ಕ್ರಿಶ್ಚಿಯನ್ನರ ಬಗ್ಗೆ ನಿಜಾಮನ ಅಧಿಕಾರಿಗಳು ಮೃದುವಾಗಿರುತ್ತಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಎಷ್ಟು ಮುಗ್ಧರಾಗಿದ್ದರೆಂದರೆ ಅವರು ನಿಜಾಮನನ್ನು ದೇವರೆಂದೇ ಪರಿಗಣಿಸಿದ್ದರು ಮತ್ತು ಅವನು ಗ್ರಾಮಗಳಿಗೆ ಭೇಟಿ ನೀಡಿದಾಗ ‘ನಜರಾನ’ವನ್ನು ಸಲ್ಲಿಸುತ್ತಿದ್ದರು.
ಆರ್ಥಿಕ ಪರಿಸ್ಥಿತಿ
ಭಾರತದಲ್ಲಿದ್ದ 565 ಸಂಸ್ಥಾನಗಳಲ್ಲಿ ಹೈದ್ರಾಬಾದ್ ಸಂಸ್ಥಾನ 82,689 ಚದರ ಮೈಲಿ ವಿಸ್ತೀರ್ಣವುಳ್ಳ ಬೃಹತ್ ಸಂಸ್ಥಾನವೆಂಬ ಕೀರ್ತಿಪಡೆದಿತ್ತು. 1941ರ ಜನಗಣತಿ ಪ್ರಕಾರ ಹೈದ್ರಾಬಾದ್ ಸಂಸ್ಥಾನದ ಜನಸಂಖ್ಯೆ 1,63,38,539 ಇತ್ತು. ನಿಜಾಮನ ಖಾಸಗಿ ಆಸ್ತಿಯ ವಿಸ್ತೀರ್ಣ 8,109 ಚದರ ಮೈಲಿಗಳಷ್ಟಿತ್ತು. ಇದರಿಂದ ವಾರ್ಷಿಕ 2,50,00,000 ರೂಪಾಯಿ ವರಮಾನ ಬರುತ್ತಿತ್ತು. ಇಷ್ಟೆಲ್ಲಾ ಸಂಪನ್ಮೂಲಗಳಿದ್ದರೂ ಜನರ ಜೀವನಮಟ್ಟವು ಅತ್ಯಂತ ಕೆಳಮಟ್ಟದ್ದಾಗಿತ್ತು. ಅವರ ಜೀವನಮಟ್ಟವು ಪ್ರಾಣಿಗಳಿಗಿಂತ ಹೀನಾಯವಾಗಿತ್ತು. ಜಮೀನ್ದಾರಿ ಪಾಳೆಗಾರರು, ಬ್ರಿಟಿಷರು ಹಾಗೂ ನಿಜಾಮ ಹೀಗೆ ಮೂರು ವಿಧದ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗಿದ್ದ ಜನರ ಜೀವನಮಟ್ಟವು ಉತ್ತಮವಾಗಿರಲು ಹೇಗೆ ಸಾಧ್ಯ ಸುಮಾರು 25.629 ಚದುರ ಮೈಲಿ ವಿಸ್ತೀರ್ಣ ಜಮೀನಿನ ಮೇಲೆ ಅಧಿಕಾರ ಪಡೆದಿದ್ದ ಜಮೀನ್ದಾರಿ ಪಾಳೆಗಾರಿಕೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಆರ್ಥಿಕ ಸ್ವಾತಂತ್ರ್ಯವೇ ಇರಲಿಲ್ಲ. ಜಮೀನ್ದಾರಿ ಪೈಗಳ ಕೃಪೆಯಲ್ಲಿ ರೈತರು ಬದುಕಬೇಕಾಗಿತ್ತು. ಜಮೀನ್ದಾರಿ ಪಾಳೆಗಾರಿಕೆ, ಸಾಂಪ್ರದಾಯಿಕ ಗುಲಾಮಿತನ ಜೀತದ ದುಡಿಮೆ, ಅವಮಾನವೀಯ ಹಾಗೂ ಭ್ರಷ್ಟ ಆಡಳಿತದಿಂದಾಗಿ ಆರ್ಥಿಕತೆಯು ಜರ್ಜರಿತವಾಗಿತ್ತು. ಸಾಮಾನ್ಯ ಜನರಿಂದ ಜಮೀನ್ದಾರರು ಜಮೀನನ್ನು ಮೋಸ ಕಪಟಗಳಿಂದ ಕಬಳಿಸುತ್ತಿದ್ದರು. ಅಧಿಕಾರಿಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದ ಇವರು ಜನರ ಗಮನಕ್ಕೆ ತಾರದೆ ಜಮೀನನ್ನು ತಮ್ಮ ಹೆಸರಿನಲ್ಲಿ ನೊಂದಾಯಿಸಿಕೊಂಡು ಕಾನೂನಿನ ಪ್ರಕಾರ ಮಾಲೀಕರಾಗಿ ಬಿಡುತ್ತಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯ
ನಿಜಾಮನ ಸರ್ವಾಧಿಕಾರಿ ಆಳ್ವಿಕೆಯಲ್ಲಿ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸಮಾನ ಅವಕಾಶಗಳ ಸ್ವಾತಂತ್ರ್ಯ ಮುಂತಾದ ಹಕ್ಕುಗಳನ್ನು ನಾಗರಿಕರಿಂದ ಕಿತ್ತುಕೊಳ್ಳಲಾಗಿತ್ತು. ರಾಷ್ಟ್ರೀಯವಾದಿಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿತ್ತು. ನಿಜಾಮನ ಕಾರ್ಯಾಂಗ ಮಂಡಳಿ ಸದಸ್ಯರನ್ನು ಚುನಾವಣೆ ಆಧಾರದ ಮೇಲೆ ಆರಿಸಬೇಕು ಎಂದು ಒತ್ತಾಯಿಸುತ್ತಿದ್ದವರ ಮೇಲೂ ಕಣ್ಣಿಡಲಾಗಿತ್ತು. ಅವರನ್ನು ಕಾರಣ ಅಜ್ಞೆ ಇಲ್ಲದೆ ಬಂಧಿಸಲಾಗುತ್ತಿತ್ತು. ಮೊಗಲಾಯಿ ಅಧಿಕಾರಿಗಳು ಈ ರೀತಿಯಲ್ಲಿ ಬಂಧಿಸಿದವರನ್ನು ಕ್ರೂರವಾಗಿ ಹಿಂಸಿಸುತ್ತಿದ್ದರು.
ಪತ್ರಿಕೆಗಳು
ಸಾರ್ವಜನಿಕಾಭಿಪ್ರಾಯದ ಪ್ರತಿಬಿಂಬ ಹಾಗೂ ಪ್ರಜಾಪ್ರಭುತ್ವಾದಿ ಸರ್ಕಾರದ ನಾಲ್ಕನೇ ಸ್ತಂಭವಾದ ಪತ್ರಿಕೆಗಳು ಸ್ವಾತಂತ್ರ್ಯ ರಾಷ್ಟ್ರೀಯತೆ ಕುರಿತು ಬರಹ ಪ್ರಕಟಿಸುವಂತಿರಲಿಲ್ಲ. ಜಮೀನ್ದಾರಿ ಪಾಳೆಗಾರಿಕೆಯ ಕರಾಳಮುಖ, ರಜಾಕಾರದ ಹಾವಳಿ, ತೆಲಂಗಾಣದಲ್ಲಿ ಕಮ್ಯುನಿಸ್ಟರ ಭಯೋತ್ಪಾದಕತೆ ಮುಂತಾದ ಸಂಪಾದಕೀಯಗಳನ್ನು ಬರೆಯುತ್ತಿದ್ದ ರಾಷ್ಟ್ರೀಯವಾದಿ ಮುಸ್ಲಿಮ ತರುಣ ಇಮ್ರೋಜ್ ಉರ್ದು ದಿನಪತ್ರಿಕೆಯ ಸಂಪಾದಕ ಶ್ರೀ ಶೋಬುಲ್ಲಾಖಾನ್‌ನನ್ನು ರಜಾಕಾರರು 1948ರ ಆಗಸ್ಟ್ 21ರಂದು ಕ್ರೂರವಾಗಿ ಕೊಲೆಗೈದು ಸರ್ಕಾರದ ನೀತಿಯನ್ನು ಕುರಿತು ಟೀಕೆ ಟಿಪ್ಪಣಿ ಮಾಡಲು ನೀಜಾಮನು ಅವಕಾಶ ಕೊಡುತ್ತಿರಲಿಲ್ಲ. ಹೈದ್ರಾಬಾದ್ ಸಂಸ್ಥಾನದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಎ.ಐ.ಸಿ.ಸಿ.ಯ ನಿರ್ಣಯಗಳನ್ನಾಗಲಿ, ಆರ್ಯ ಸಮಾಜ ಅಥವಾ ರಾಜ್ಯ ಕಾಂಗ್ರೆಸ್‌ನ ವಿಚಾರಗಳನ್ನಾಗಲಿ ಪ್ರಕಟಿಸಲು ಅನುಮತಿ ಇರಲಿಲ್ಲ. ನಿಜಾಮನ ಆಳ್ವಿಕೆ ಪರವಾಗಿ ಬರೆಯುತ್ತಿದ್ದ ಮತ್ತು ಇತ್ತೇಹಾದ್ ಅನ್ನು ವೈಭವೀಕರಿಸುತ್ತಿದ್ದ ಪತ್ರಿಕೆಗಳ ಸಭಾವನೆ ಕೊಡಲಾಗುತ್ತಿತ್ತು. ಸ್ವರಾಜ್ಯಕ್ಕಾಗಿ ನಡೆಯುತ್ತಿದ್ದ ಜನಾಂದೋಲನದ ಪರವಾಗಿದ್ದ ಪತ್ರಿಕೆಗಳನ್ನು ಕೋಮುವಾದಿಗಳೆಂದು ನಿಜಾಮನು ನಿಷೇಧ ಹೇರುತ್ತಿದ್ದನು. ನಿಜಾಮ ಈ ರೀತಿಯ ದಮನಕಾರಿ ನೀತಿಯಿಂದಾಗಿ 1935ರಲ್ಲಿ 35ರಷ್ಟಿದ್ದ ಪತ್ರಿಕೆಗಳ ಸಂಖ್ಯೆಯು 1945ರಲ್ಲಿ 22ಕ್ಕೆ ಇಳಿದವು. ಮುದ್ರಣ ಕಾಗದವನ್ನಾಗಲಿ ಅಥವಾ ಮುದ್ರಣ ಕಾರ್ಯಕ್ಕಾಗಲಿ ಅನುಮತಿ ಕೊಡುವಾಗ ಗೃಹ ಸಚಿವಾಲಯವು ತಾರತಮ್ಯ ನೀತಿ ಅನುಸರಿಸುತ್ತಿತ್ತು. 1939ರವರೆಗೆ ನಿಜಾಮನ ಆಳ್ವಿಕೆ ಇದ್ದ ಹೈದ್ರಾಬಾದ್ ಕರ್ನಾಟಕದಲ್ಲಿ ಒಂದಾದರೂ ಕನ್ನಡ ಪತ್ರಿಕೆ ಪ್ರಸಾರವಾಗುತ್ತಿರಲಿಲ್ಲ. ಮತ್ತು ಸಂಸ್ಥಾನದ ಹೊಕಗಿನ ಬ್ರಿಟಿಷ್ ಭಾರತದಿಂದ ಭೂಗತವಾಗಿ ಪತ್ರಿಕೆಗಳನ್ನು ತರಿಸಿಕೊಳ್ಳಬೇಕಾಗಿತ್ತು.
ಶಿಯಾಸತ್, ಇಮ್ರಾಜ್ ಮತ್ತು ಮುಶೀರ್ ಐ ದಖನ್ ಎಂಬ ಉರ್ದು ಭಾಷೆಯ ಪತ್ರಿಕೆಗಳು, ದಖನ್ ಕ್ರಾನಿಕಲ್ ಎಂಬ ಇಂಗ್ಲಿಷ್ ಪತ್ರಿಕೆ, ಮರಾಠ ಮತ್ತು ಕೇಸರಿ ಎಂಬ ಮರಾಠಿ ಭಾಷೆಯ ಪತ್ರಿಕೆಗಳು, ಹೈದ್ರಾಬಾದ್ ಕರ್ನಾಟಕ ನಾಗರಿಕ, ಶರಣಸಂದೇಶ, ಲೋಕವಾಣಿ ಎಂಬ ಕನ್ನಡ ಪತ್ರಿಕೆಗಳು, ಗೋಲ್ಕಂಡ ಮತ್ತು ವಿಭೂತಿ ಎಂಬ ತೆಲಗು ಪತ್ರಿಕೆಗಳು, ಆರ್ಯಭಾನು ಎಂಬ ಹಿಂದಿ ಪತ್ರಿಕೆಗಳು ರಾಷ್ಟ್ರೀಯವಾದಿ ಸ್ಪೂರ್ತಿಯಿಂದ ಕೂಡಿದ್ದವು. ನಿಜಾಮ ವಿಜಯ್, ವಕ್ತ್ ಮಿಜಾಮ್ ಪೈಸ್ ಅಕ್ಬರ್ ಶಹೀಪಾ ಮತ್ತು ರಹಬರ್ ಐ ದಖನ್ ಎಂಬ ಉರ್ದು ಪತ್ರಿಕೆಗಳು ನಿಜಾಮನ ನೀತಿಯನ್ನು ಹಾಹೊಗಳು ತ್ತಿದ್ದವು. ನಿಜಾಮನ ಪ್ರತ್ಯೇಕತಾವಾದವನ್ನು ಹಾಗೂ ಹಿಂದೂಗಳನ್ನು ಮುಸ್ಲಿಮರಾಗಿ ಮತಾಂತರಿಸುವ ಇತ್ತೆಹಾದ್ ತತ್ವವನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿದ್ದ ಪತ್ರಿಕೆಗಳಿಗೆ ಆಸ್ಥಾನದಿಂದ ಆಪಾರ ಅನುದಾನ ಸಿಗುತ್ತಿತ್ತು. ನಿಜಾಮನ ಆಸ್ಥಾನದಲ್ಲಿ ಇಂಥ ಪತ್ರಿಕೆಗಳ ಸಂಪಾದಕರಿಗೆ ಅಮೋಘ ಸ್ವಾಗತ ದೊರೆಯುತ್ತಿತ್ತು. ದಕ್ಷಿಣದ ರಾಷ್ಟ್ರೀಯತೆಯ ಪ್ರತಿಮೂರ್ತಿಯಾದ ಚಕ್ರವರ್ತಿ ನಿಜಾಮನು ದೀರ್ಘಕಾಲ ಬಾಳಲಿ ಎಂಬ ಗೋಷಣೆಯು ಈ ಎಲ್ಲಾ ಪತ್ರಿಕೆಗಳ ಮಾರ್ಗಸೂಚಿಯಾಗಿತ್ತು.
ರಾಜಕೀಯ ಸಮಾವೇಶಗಳು ಮತ್ತು ನಿಜಾಮನ ಫರ್ಮಾನುಗಳು
ಪಂಡಿತ ಜವಾಹರಲಾಲ್ ನೆಹರೂ ಅವರು ಹೈದ್ರಾಬಾದ್ ಸಂಸ್ಥಾನದಲ್ಲಿ ರಾಜಕೀಯ ಸಮಾರಂಭಗಳನ್ನು ತಿಳಿದವರೇ ಇಲ್ಲ ಎಂದು ಒಂದು ಕಡೆ ಹೇಳಿದ್ದಾರೆ. ಅಲ್ಲಿೊಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಅನುಮಾನದಿಂದ ನೋಡಲಾಗುತ್ತಿತ್ತು ಎಂದಿದ್ದಾರೆ. ಹೈದ್ರಾಬಾದ್ ಸಂಸ್ಥಾನದೊಳಗೆ ರಾಷ್ಟ್ರೀಯ ನಾಯಕರಿಗೆ ಪ್ರವೇಶವಿರಲಿಲ್ಲ. ಮಹಾತ್ಮಗಾಂಧಿಯವರು 1934ರಲ್ಲಿ ಹೈದ್ರಾಬಾದ್ ಸಂಸ್ಥಾನಕ್ಕೆ ಭೇಟಿ ಕೊಡುತ್ತಾರೆ ಎಂಬ ಸುದ್ದಿಯು ಆಡಳಿತ ವರ್ಗದಲ್ಲಿ ಆತಂಕ ಸೃಷ್ಟಿಸಿಬಿಟ್ಟಿತು. ಹೈದರಾಬಾದ್ ಸಂಸ್ಥಾನದ ಆಡಳಿತ ವ್ಯವಸ್ಥೆ ಅನುಸರಿಸುತ್ತಿದ್ದ ಪ್ರಜಾಪ್ರಭುತ್ವ ವಿರೋಧಿ ಹಾಗೂ ದಮನಕಾರಿ ವಿಧಾನಗಳು ಎಲ್ಲಿ ಬಹಿರಂಗಗೊಂಡು ಬಿಡುತ್ತವೊ ಮತ್ತು ಆಸಪ್‌ಜಹಾನ ಪರಮಾಧಿಕಾರಕ್ಕೆ ಎಲ್ಲಿ ಕುತ್ತು ಬಂದು ಬಿಡುತ್ತದೊ ಎಂಬ ಭಯ ಸೃಷ್ಟಿಯಾಯಿತು.
ಸಂಸದೀಯ ಪ್ರಜಾಪ್ರಭುತ್ವ ಸ್ಥಾಪನೆಯನ್ನು ಒತ್ತಾಯಿಸುವ ಸಲುವಾಗಿ ಮಹಾತ್ಮ ಗಾಂಧಿಯವರು ಅಸಹಕಾರ ಚಳವಳಿಯನ್ನು ದೇಶಾದ್ಯಂತ ಪ್ರಾರಂಭಿಸಲು ಕರೆಕೊಟ್ಟಾಗ ನಿಜಾಮನು 1921ನೆಯ ಸೆಪ್ಟೆಂಬರ್ 8ರಂದು ಒಂದು ಫರ್ಮಾನನ್ನು ಹೊರಡಿಸಿದನು. ರಾಜಕೀಯ ಸಮಾವೇಶ ಅಥವಾ ರಾಜಕೀಯ ಸ್ವರೂಪದ ಯಾವುದೇ ಸಭೆ ಸಮಾರಂಭಗಳನ್ನು ಸರ್ಕಾರದ ಕಾರ್ಯಾಂಗ ಮಂಡಳಿಯ ಅನುಮತಿ ಇಲ್ಲದೆ ನಡೆಸಕೊಡದು ಮತ್ತು ಇಂಥ ಸಭೆ ಸಮಾರಂಭಗಳ ನಡವಳಿಕೆ, ಕಾರ್ಯಕ್ರಮ ಪಟ್ಟಿಯನ್ನು ಕಾರ್ಯಾಂಗ ಮಂಡಳಿಯ ಅನುಮೋದನೆಗಾಗಿ ಮುಂಚಿತವಾಗಿ ಸಲ್ಲಿಸಬೇಕು ಎಂಬ ಒಕ್ಕಣಿಕೆಯು ಆ ಫರ್ಮಾನಿ ನಲ್ಲಿತ್ತು. ಮೋತಿಲಾಲನೆಹರು ಮತ್ತು ಡಾ.ಅನ್ಸಾರಿಯವರ ಮರಣದ ನಿಮಿತ್ತ ಸಂತಾಪಸೂಚಕ ಸಭೆಗಳಿಗೂ ಕೂಡ ಅನುಮತಿ ನಿರಾಕರಿಸಲಾಯಿತು.
ಇದೇ ರೀತಿ ಕಾರ್ಯಾಂಗವು ದಿನಾಂಕ 1357ನೆಯ ಡಿಸೆಂಬರ್ 21ರಂದು  ಪಾಸಲಿ ಯಲ್ಲಿ ಘಸ್ತಿ ಸಂಖ್ಯೆ 53 ಆಜ್ಞೆಯೊಂದನ್ನು ಜಾರಿಗೊಳಿಸಿತು. ಉರ್ದು ಭಾಷೆಯಲ್ಲಿರುವ ಮೂಲ ಬರಹ ರಾಜ್ಯ ಗೆಜೆಟಿಯರ್‌ನಲ್ಲಿ ಪ್ರಕಟವಾಗಿದೆ. ಅದರ ಕನ್ನಡ ರೂಪ ಹೀಗಿದೆ:
ಯಾವುದೇ ವ್ಯಕ್ತಿ ಸಾರ್ವಜನಿಕ ಸಮಾರಂಭ ನಡೆಸಲು ಇಚ್ಚಿಸಿದರೆ ಆ ಸಮಾರಂಭ ಉದ್ದೇಶವನ್ನು ಲಿಕಿತ ರೂಪದಲ್ಲಿ ಹೈದ್ರಾಬಾದ್ ಅಥವಾ ಅದರ ಸುತ್ತಮುತ್ತಲಾದರೆ ಪೊಲೀಸು ಕಮೀಷನ್‌ರವರಿಗೆ ಮತ್ತು ಉಳಿದ ಸ್ಥಳಗಳಲ್ಲಾದರೆ ಸಂಬಂಧಿಸಿದ ಕಲೆಕ್ಟರ್‌ರವರಿಗೆ ಹತ್ತು ದಿನ ಮುಂಚೆ ಅನುಮತಿಗಾಗಿ ಸಲ್ಲಿಸಬೇಕು.
ಕಮೀಷನ್‌ರ ಅಥವಾ ಕಲೆಕ್ಟರ್‌ರವರಿಗೆ ಉದ್ದೇಶಿತ ಸಮಾರಂಭ ಅಥವಾ ಸಮಾವೇಶವು ಸರ್ಕಾರದ ವಿರುದ್ಧ ಪ್ರಚೋದನೆ ಉಂಟು ಮಾಡುವಂಥಹದು ಎಂದು ಅನ್ನಿಸಿದರೆ ಅನುಮತಿ ಕೊಡಲಾಗುತ್ತಿರಲಿಲ್ಲ. ಈ ಆದೇಶವನ್ನು ಉಲ್ಲಂಘಿಸುವವರಿಗೆ 200 ರೂಪಾಯಿ ದಂಡ ಜೊತೆಗೆ ಒಂದು ತಿಂಗಳು ಜೈಲುವಾಸ ಅಥವಾ ಅಧಿಕಾರಿಗಳಿಗೆ ಸರಿಯೆನಿದ ಯಾವುದೇ ಶಿಕ್ಷೆ ಎಂದು ನಿರ್ಧರಿಸಲಾಗಿತ್ತು.
ನಿಜಾಮ ಸರ್ಕಾರವು 1933ನೆಯ ಏಪ್ರಿಲ್ 24ರಂದು ಒಂದು ಸಂದೇಶ ಹೊರಡಿಸಿ ರಾಜಕೀಯ ಸಭೆ ಎಂದರೆ ಯಾವುದು ಎಂಬ ಕೆಳಕಂಡ ವ್ಯಾಖ್ಯೆ ನೀಡಿತು.
ನಿಜಾಮ ಸಂತೋಷದಿಂದ ತಿಳಿಸುವುದೇನೆಂದರೆ ರಾಜಕೀಯ ಸಭೆಗಳು ಎಂದರೆ ಕೋಮು ಸಂಘರ್ಷಕ್ಕೆ ಅಥವಾ ಸರ್ಕಾರ ವಿರೋಧಿ ಭಾವನೆಗೆ ಪ್ರಚೋದನೆ ನೀಡುವಂತಹವು
ಎಂದು ವ್ಯಾಖ್ಯೆ ನೀಡಿತು.
ರಾಷ್ಟ್ರೀಯವಾದಿಗಳ ಚಟುವಟಿಕೆಗಳನ್ನು ಹತ್ತಿಕ್ಕಲು ನಿಜಾಮನು ರಾಜಕೀಯ ಎಂಬ ಪದವನ್ನು ತನಗೆ ಬೇಕಾದ ಉದ್ದೇಶಕ್ಕೆ ತಕ್ಕಂತೆ ವ್ಯಾಖ್ಯಾನಿಸಿದವು. ಉದಾಹರಣೆಗೆ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಕಮ್ಯುನಿಸ್ಟ್ ರಷ್ಟವು ಇಂಗ್ಲೆಂಡ್ ವಿರುದ್ಧ ಯುದ್ಧ ಮಾಡುತ್ತಿತ್ತು. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ನಿಜಾಮನು ನಿಜಾಮ ಕರ್ನಾಟಕ ಪರಿಷತ್ ಚಟುವಟಿಕೆಗಳೆಂದು ತೀರ್ಮಾನಿಸಿ ಸಾರ್ವಜನಿಕ ಹಿತರಕ್ಷಣೆ ಕಾನೂನಿನ್ವಯ ಅದರ ಮುಂದಾಳುಗಳನ್ನೆಲ್ಲಾ ವಾರೆಂಟ್ ಇಲ್ಲದೆ ಬಂಧಿಸಿದನು. ವಾಸ್ತವಿಕವಾಗಿ ಈ ಫರ್ಮಾನುಗಳು ಇತ್ತೆಹಾದ ಚಟುವಟಿಕೆಗಳಿಗೆ ಅನ್ವಯವಾಗುತ್ತಿರಲಿಲ್ಲ. ನಿಜಾಮ ಪಕ್ಷವಾದ ಇತ್ತೆಹಾದ್ ತನಗೆ ಇಷ್ಟಬಂದ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು. ಜವಾಬ್ದಾರಿ ಸರ್ಕಾರವನ್ನು ಯಾರೂ ಒತ್ತಾಯಿಸಿಕೂಡದು. ಏಕೆಂದರೆ ಅಲ್ಲಾಹ- ಹಜರತ್’ಗೆ ಮಾತ್ರ ಪ್ರಜೆಗಳನ್ನು ಆಳುವ ಹಕ್ಕಿದೆ ಎಂದು ನಿಜಾಮನು ಘೋಷಿಸಿದನು. ಹೈದ್ರಾಬಾದ್ ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಒತ್ತಾಯಿಸುವುದು ಪಕ್ಷ ರಾಜಕೀಯವಾಗುತ್ತದೆ. ಮತ್ತು ಅದು ನಿಜಾಮನಿಗೆ ಅವಿಧೇಯತೆ ತೋರಿದಂತೆ ಎಂದು ನಿಜಾಮನು ಘೋಷಿಸಿದನು.
ಕನ್ನಡ ಭಾಷೆ
ಹೈದ್ರಾಬಾದ್ ಸಂಸ್ಥಾನದಲ್ಲಿನ 1.6ಕೋಟಿ ಜನಸಂಖ್ಯೆಯು ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯಿಂದ ಬದುಕುತ್ತಿದ್ದ ಒಂದು ದೊಡ್ಡ ಭಾರತೀಯ ಸಮುದಾಯವಾಗಿತ್ತು. ಇದರಲ್ಲಿ 70 ಲಕ್ಷ ಜನ ತೆಲುಗರು, 40 ಲಕ್ಷ ಜನ ಮರಾಠಿಗರು ಮತ್ತು 20 ಲಕ್ಷ ಜನ ಕನ್ನಡಿಗರು ಇದ್ದರು. ನಿಜಾಮನ ಮಲತಾಯಿ ಧೋರಣೆಯಿಂದಾಗಿ ಕನ್ನಡ ಭಾಷೆಯ ಬೆಳವಣಿಗೆಯು ಕುಂಟಿತಗೊಂಡಿತ್ತು. ಆಳುವ ವರ್ಗದ ಭಾಷೆಯಾದ  ಉರ್ದುವನ್ನು ಆಡಳಿತ ಭಾಷೆಯನ್ನಾಗಿ ಹೇರಲಾಗಿತ್ತು ಮತ್ತು ಪ್ರಾಥರ್ಮಿಕ ಶಾಲೆಯಿಂದ  ಸ್ನಾತಕೋತ್ತರ ಪದವಿ ಮಟ್ಟದವರೆಗೆ ಶಿಕ್ಷಣ ಮಾಧ್ಯಮವು ಉರ್ದು ಭಾಷೆಯಾಗಿತ್ತು. 1948ರವರೆಗೆ ನಿಜಾಮನ ಆಳ್ವಿಕೆಯಲ್ಲಿ ಹೈದ್ರಾಬಾದ್ ಕರ್ನಾಟಕದಲ್ಲಿ ಕನ್ನಡ ಭಾಷೆ ಸಾಹಿತ್ಯವು ಪೂರ್ಣ ನಿರ್ಲಷ್ಯಕ್ಕೆ ಗುರಿಯಾಯಿತು.
ನೌಕರಿಯಲ್ಲಿ ಮೀಸಲಾತಿ
ಸ್ವತಂತ್ರ್ಯ ಹೈದ್ರಾಬಾದ್ ಸ್ಥಾಪನೆಯನ್ನು ಸಾಧಿಸಲಿಕ್ಕಾಗಿ ಸಂಸ್ಥಾನದ ಸರ್ಕಾರಿ ನೌಕರಿ ಗಳಲ್ಲಿ ಶೇ.80ರಷ್ಟು ನೌಕರಿಗಳನ್ನು ಶೇ.12 ರಷ್ಟಿದ್ದ ಮುಸ್ಲಿಮರಿಗೆ ಮೀಸಲಿರಿಸ ಲಾಗಿತ್ತು. ಉಳಿದ ನೌಕರಿಗಳನ್ನು ಶೇ.88ರಷ್ಟು ಜನಾಂಗದವರು ಹಂಚಿಕೊಳ್ಳಬೇಕಾಗಿತ್ತು. ಮೀಸಲಾತಿ ನೀತಿಗನುಗುಣವಾಗಿ 1354ರಲ್ಲಿ ನಿಜಾಮನು ನೇಮಿಸಿದ್ಧ ನಾಗರೀಕ ಸೇವಾ ಪಟ್ಟಿಯು ಕುತೂಹಲಕಾರಿಯಾಗಿದೆ.


(ವಿವರಣೆ : ಆಯ್ದ ಕೆಲವು ಇಲಾಖೆಗಳ ವಿವರ)
ಶಿಕ್ಷಣ
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಶೈಕ್ಷಣಿಕ ಹಿಂದುಳಿದಿರುವಿಕೆಯು ಪ್ರಸಿದ್ಧ ನಾಣ್ಣುಡಿಯಾಗಿ ಬಿಟ್ಟಿದೆ. ಭಾರತದ ಉಳಿದ ಭಾಗ ಪಾಶ್ಚಿಮಾನ್ಯ ಶಿಕ್ಷಣದ ಪ್ರಭಾವದಿಂದ ಗಣನೀಯ ಪ್ರಗತಿ ಹೊಂದುತ್ತಿದ್ದರೆ ಹೈದ್ರಾಬಾದ್ ಕರ್ನಾಟಕವು ವಿಶ್ವದಲ್ಲಿನ ಬೆಳವಣಿಗೆಗೆ ಸ್ಪಂದಿಸಿದ ಮೌಢ್ಯದಲ್ಲಿ ಮುಳುಗಿಬಿಟ್ಟಿತು. ಅಕ್ಷರಜ್ಞಾನದ ನಿರ್ಲಕ್ಷ್ಯದಿಂದಾಗಿ ಜನತೆಯು ಬಡತನ ಮತ್ತು ಅನಾರೋಗ್ಯದಿಂದ ನರಳುತ್ತಿತ್ತು. 1875-76ರಲ್ಲಿ ಪ್ರಾರಂಭವಾಗಿದ್ದ ಆಂಗ್ಲ ಭಾರತೀಯ ಭಾಷಾ ಸಂಯುಕ್ತ ಶಾಲೆಗಳನ್ನೆಲ್ಲಾ ನಿಜಾಮನು 1917ರಲ್ಲಿ ಉರ್ದು ಶಿಕ್ಷಣ ಮಾಧ್ಯಮದ ಉಸ್ಮಾನಿಯ ಪ್ರೌಢಶಾಲೆಗಳಾಗಿ ಪರಿವರ್ತಿಸಿ ದನು. ಪ್ರಧಾನವಾಗಿ ಗ್ರಾಮೀಣ ಲಕ್ಷಣವನ್ನು ಹೊಂದಿದ್ದ ಹೈದ್ರಾಬಾದ್ ಸಂಸ್ಥಾನದಲ್ಲಿ ಜನರ ಶಿಕ್ಷಣಕ್ಕೆ ಯಾವುದೇ ಅನುಕೂಲಗಳನ್ನು ಒದಗಿಸಿರಲಿಲ್ಲ. 19ನೇ ಶತಮಾನದ ಕೊನೆ ಭಾಗದಲ್ಲಿ ಹೈದ್ರಾಬಾದ್ ನಗರದಲ್ಲಿ ಪ್ರಾರಂಭವಾಗಿದ್ದ ಕೆಲವು ಶಾಲೆಗಳು ಶ್ರೀಮಂತ ಮತ್ತು ಉನ್ನತ ಮಧ್ಯಮ ವರ್ಗದ ಮುಸ್ಲಿಮ ಸಮುದಾಯದ ಹಾಗೂ ಕೆಲವೇ ಕೆಲವು ಶ್ರೀಮಂತ ಹಿಂದೂ ಮನೆತನಗಳ ಮಕ್ಕಳಿಗೆ ಮಾತ್ರ ಶಿಕ್ಷಣ ಒದಗಿಸುವ ಕೇಂದ್ರಗಳಾಗಿದ್ದವು.
1931ರಲ್ಲಿ ಹೈದ್ರಾಬಾದ್ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮಟ್ಟವೆಂದರೆ ಮುಖ್ತಾಬ್ ಮಾಧ್ಯಮಿಕ ಶಾಲೆ ಆಗಿತ್ತು. ಇಂಥ ಶಾಲೆಗಳ ಸಂಖ್ಯೆಯನ್ನು ಬೆರಳಲ್ಲಿ ಎಣಿಸಬಹುದಿತ್ತು. ಶಾಲಾ ಅಧ್ಯಾಪಕರು ಮಾಸಿಕ ಮೂರು ರೂಪಾಯಿ ಸಂಬಳ ಪಡೆಯು ತ್ತಿದ್ದರು ಕೊಪ್ಪಳ ಮತ್ತು ರಾಯಚೂರು ವಿಭಾಗದ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕಾಗಿ ಬರದೂರದ ಗುಲಬರ್ಗಾಕ್ಕೆ ಹೋಗಬೇಕಾಗಿತ್ತು. ಇಲ್ಲವೇ ಹೈದ್ರಾಬಾದ್‌ಗೆ ಹೋಗಬೇಕಾಗಿತ್ತು. ಇಡೀ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಶೈಕ್ಷಣಿಕ ಅವಶ್ಯಕತೆ ಪೂರೈಸಲು ಗುಲಬರ್ಗಾದಲ್ಲಿ ಒಂದೇ ಒಂದು ಪ್ರೌಢಶಾಲೆಯನ್ನು 1932ರಲ್ಲಿ ಇಂಟರ್ ಮಿಡಿಯೆಟ್ ಕಾಲೇಜಾಗಿ ಉನ್ನತ ದರ್ಜೆಗೇರಿಸಲಾಯಿತು. ಹದಿನಾರು ಜಿಲ್ಲೆಗಳನ್ನು ಹೊಂದಿದ್ದ ಇಡೀ ಹೈದ್ರಾಬಾದ್ ಸಂಸ್ಥಾನದಲ್ಲಿ ಸಾಹಿತ್ಯ ಮತ್ತು ವಿದ್ಯಾರ್ಜನೆಯ ಕೇಂದ್ರವಾಗಿ ಹೈದ್ರಾಬಾದ್ ನಗರದಲ್ಲಿ 1917ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯವು ಸ್ಥಾಪಿಸಲ್ಪಟ್ಟಿತು.
ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಅವುಗಳಿಗೆ ಯಾವುದೇ ಬಗೆಯ ಪ್ರೋನಿಜಾಮನು ಒಡ್ಡಿದ ಎಲ್ಲಾ ಬಗೆಯ ಆಂತಕಗಳನ್ನೂ ಎದುರಿಸಿ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸ್ಥಾಪಿಸಿದ್ದ ರಾಷ್ಟ್ರೀಯ ಸಾಲೆಗಳಿಗೆ ಸರ್ಕಾರದ ಮನ್ನಣೆ ಪಡೆದುಕೊಳ್ಳಲು ಸ್ವಾಮಿ ರಮಾನಂದತಿರ್ರು ದೆಡ್ಡ ಹೋರಾಟ ನಡೆಸಬೇಕಾಯಿತು. ಹೈದ್ರಾಬಾದ್ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಕೆಳಗಿನ ಪಟ್ಟಿಯಿಂದ ತಿಳಿದುಕೊಳ್ಳಬಹುದು.


1930ರಲ್ಲಿ ನಡೆದ ಸಂಸ್ಥಾನವಾದ ಮದರಾಸಿನಲ್ಲಿದ್ದ ಸಾಕ್ಷರತೆ ಶೇ.10.8. ಆದರೆ ಹೈದ್ರಾಬಾದ್ ಸಂಸ್ಥಾನದಲ್ಲಿದ್ದ ಸಾಕ್ಷರತೆ ಪ್ರಮಾಣ ಕೇವಲ ಶೇ.7. ಶಾಲೆಯಲ್ಲಿ ಹಿಂದೂ ಮುಸ್ಲಿಮ ವಿದ್ಯಾರ್ಥಿಗಳ ಅನುಪಾತ 1:2 ಇತ್ತು. ಆದರೆ ಇವೆರಡು ಜನಾಂಗಗಳ ಅನುಪಾತವು 8:1 ಇತ್ತೆಂಬುದು ಗಮನಾರ್ಹವಾಗಿದೆ.
15ನೇ ಆಗಸ್ಟ್ 1947ರಂದು ಭಾರತಕ್ಕೆ ದೊರೆತ ಸ್ವಾತಂತ್ರ್ಯವು ಅಪೂರ್ಣವಾಗಿತ್ತು. ಏಕೆಂದರೆ ಹೈದ್ರಾಬಾದ್ ನಿಜಾಮನು ಸೇರಿಸಿಕೊಂಡು ಹಲವಾರು ಸಂಸ್ಥಾನಾಧಿಪತಿಗಳು ಸ್ವಾತಂತ್ರ್ಯ ಘೋಷಿಸಿಕೊಳ್ಳಲು ಹವಣಿಸುತ್ತಿದ್ದವು. ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳಲು ಸದ್ದರಿರಲಿಲ್ಲ. ಇದರಿಂದಾಗಿ ಭಾರತದ ಅಖಂಡತೆ ದೊಡ್ಡ ಕುತ್ತು ಉಂಟಾಯಿತು. ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಇದೊಂದು ಸವಾಲಾಗಿ ಪರಿಣಮಿ ಸಿತು. ಅವರೆಲ್ಲರೂ ಸಂಸ್ಥಾನವನ್ನು ಭಾರತ ಒಕ್ಕೂಟದೊಳಗೆ ವಿಲೀನಗೊಳಿಸ ಬೇಕೆಂದು ಒತ್ತಾಯಿಸುತ್ತಿದ್ದರು. ಜವಾಬ್ದಾರಿ ಸರ್ಕಾರದ ರಚನೆಯನ್ನೂ ಒತ್ತಾಯಿಸುತ್ತಿದ್ದರು. ಹೈದ್ರಾಬಾದ್ ಸಂಸ್ಥಾನದ ಕಾಂಗ್ರೆಸ್ ಕ್ರಿಯಾಶೀಲ ನೇತಾರಸ್ವಾವಿ ರಮಾನಂದ ತೀರ್ಥರವರು ಈ ಸವಾಲನ್ನು ಸ್ವೀಕರಿಸಿದರು. ನಿಜಾಮನ ಕೋಮುವಾದಿ ಸರ್ವಾಧ%
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ಬಿ.ಸಿ.ಮಹಾಬಲೇಶ್ವರಪ್ಪ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ವಿಜಯ್ ಪೂಣಚ್ಚ ತಂಬಂಡ
ಸಂಪುಟ ಸಂಪಾದಕರು: ಡಾ. ಎನ್. ಚಿನ್ನಸ್ವಾಮಿ ಸೋಸಲೆ

ಕ್ಯಾನ್ಸರ್ ರೋಗ ಕಂಡುಹಿಡಿಯುವ ಬಗೆ ಮತ್ತು ಅದನ್ನು ತಡೆಯುವ ಕ್ರಮ

ಫೋಲಿಕ್ ಆಮ್ಲ
ಕರಳು ಕ್ಯಾನ್ಸರ್ ನಿರ್ಮೂಲನೆಗೆ ಫೊಲಿಕ್ ಆಮ್ಲವು ಪರಿಣಾಮಕಾರಿಯಾದರೂ ಇದು ಕರುಳಿನ ಕೊಲನ್ ಪೊಲಿಪ್ಸ್ ಹೆಚ್ಚಳಕ್ಕೆ [೫೯]ಕಾರಣವಾಗುತ್ತದೆ.



ಕೆಮೊನಿರ್ಮೂಲನಸಂಪಾದಿಸಿ
ಕ್ಯಾನ್ಸರ್ ನ ಔಷೋಧಪಚಾರಗಳು ನಿರ್ಮೂಲನಾ ಕ್ರಮಗಳ ಮೂಲಕ ರೋಗಿಗಳನ್ನು ಆಕರ್ಷಿಸುವುದಲ್ಲದೇ ಆದರೆ ಹಲವಾರು ರೋಗ ನಿದಾನ ಕೇಂದ್ರಗಳಲ್ಲಿನ ಕೆಮೊನಿರ್ಮಲನಾ ಪದ್ದತಿಯು ಉನ್ನತ ಮಟ್ಟದ ಚಿಕಿತ್ಸಾ ಪದ್ದತಿ ಎನಿಸಿದೆ.

ಸ್ತನ ಕ್ಯಾನ್ಸರ್ ನ ಬೆಳವಣಿಗೆ ಕಂಡುಬರುವ 50%ರಷ್ಟು ಮಹಿಳೆಯರಿಗಾಗಿ ದಿನಬಳಕೆಗಾಗಿ ಟ್ಯಾಮೊಕ್ಷಿಫೆನ್ ಒಂದು ನಿರ್ಧಾರಿತ ಎಸ್ಟ್ರೊಜೆನ್ ರೆಸೆಪ್ಟರ್ ಮಾಡ್ಯುಲೇಟರ್ (SERM) ನ್ನು ಐದು ವರ್ಷಗಳ ಕಾಲ ಪ್ರಯೋಗಿಸಲಾಯಿತು. ಇತ್ತೀಚಿನ ಅಧ್ಯಯನಗಳ ಪ್ರಕಾರ ಸ್ತನ ಕ್ಯಾನ್ಸರ್ ನಿಂದ ಅಧಿಕ ಅಪಾಯ ಎದುರಿಸುವ ಮಹಿಳೆಯರಿಗೆ ನೀಡುವ ಸೆಲೆಕ್ಟಿವ್ ಎಸ್ಟ್ರೊಜೆನ್ ರೆಸಿಪ್ಟರ್ ಮಾಡುಲ್ಯುಟೇರ್ ರಾಲೊಕ್ಷಿಫೆನ್ ನಷ್ಟೇ ಪರಿಣಾಮಕಾರಿಯಾಗಿದ್ದು ಟ್ಯಾಮೊಕ್ಷಿಫೆನ್ ಕೂಡಾ ಅಡ್ದ ಪರಿಣಾಮಗಳನ್ನು ನಿಯಂತ್ರಿಸಲು ಈ ಪ್ರಕರಣಗಳಲ್ಲಿ [೬೦]ಸಾಧ್ಯವಾಗಿದೆ.

ರಾಲೊಕ್ಷಿಫೆನ್ ಒಂದುSERM ಆಗಿದ್ದು ಇದನ್ನು ( STAR ಪ್ರಯತ್ನದಲ್ಲಿ) ಸ್ತನ ಕ್ಯಾನ್ಸರ್ ಅಪಾಯವನ್ನು ತಪ್ಪಿಸಲಾಗುವ ಟ್ಯಾಮೊಕ್ಷಿಫೆನ್ ನಷ್ಟೇ ಪ್ರಬಲವಾಗಿದ್ದು ಈ ಕ್ಯಾನ್ಸರ್ ಉಲ್ಬಣಗೊಂಡ ಮಹಿಳೆಯರಲ್ಲಿ ಇದರ ಪ್ರಮಾಣವನ್ನು ಅಳೆಯಬಹುದಾಗಿದೆ. ಈ ಪ್ರಯೋಗದಲ್ಲಿ ಸುಮಾರು 20,000 ಮಹಿಳೆಯರನ್ನು ಪರೀಕ್ಷೆಗೊಳಪಡಿಸಿದಾಗ ರಾಲಿಕ್ಷಿಫೆನ್ ಸಂಯುಕ್ತವು ಟ್ಯಾಮ್ಕ್ಷಿಫೆನ್ ಗಿಂತ ಕಡಿಮೆ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ.ಆದರೂ ಇದು ಅತಿ ಹೆಚ್ಚು DCISಗಳ ರಚನೆಗೆ ಅವಕಾಶ [೬೦]ನೀಡುತ್ತದೆ.

[೬೧]ಫಿನಾಸ್ಟಿರೊಯಿಡ್ ಒಂದು 5-ಅಲ್ಫಾ-ರಿಡಕ್ಟೇಸ್ ಇನ್ ಹ್ಯಾಬಿಟರ್ ಕಡಿಮೆ ಪ್ರಮಾಣದ ಜನನಾಂಗದ ಕ್ಯಾನ್ಸರ್ ಅಪಾಯ ತರಬಹುದು ಅಥವಾ ಸಣ್ಣ ಪ್ರಮಾಣದ ಗೆಡ್ಡೆಗಳನ್ನು ತಡೆಯಲು ಇವು [೬೨]ಸಹಕಾರಿಯಾಗಿವೆ. ಪೊಲಿಪೊಸಿಸ್ ರೋಗಿಗಳ ಫೆಮಿಲೈಲ್ ಅಡೆನೊಮೇಟಸ್ ಪೊಲಿಪೊಸಿಸ್ ಮೇಲೆ ನಡೆಸಿದ ಪ್ರಯೋಗಗಳಿಂದ COX-2 ಅಸ್ತಿತ್ವಗಳ ಉದಾಹರಣೆಗೆ ರೊಫೆಕೊಕ್ಷಿಬ್ ಮತ್ತು ಸೆಲೆಕೊಕ್ಷಿಬ್ ಗಳ ಪರಿಣಾಮವು ಸೋಂಕಿಗೆ ತುತ್ತಾದ ಮಹಿಳೆಯರಲ್ಲಿನ ಕ್ಯಾನ್ಸರ್ ಸಾಧ್ಯತೆಗಳನ್ನು ತಕ್ಕಮಟ್ಟಿಗೆ [೬೩]ಕಡಿಮೆಗೊಳಿಸಬಹುದಾಗಿದೆ.ಅಂದರೆ ಇಲ್ಲಿನ ರಸಾಯನಿಕಗಳ ಸಂಯುಕ್ತವು ಆಯಾ ರೋಗಿಗಳ ಕಾಯಿಲೆಯು ಹಂತದಲ್ಲಿದೆ ಎಂಬುದನ್ನು [೬೪]ಕಾಣಬಹುದಾಗಿದೆ. [೬೫][೬೬]/}ಮತ್ತು ಸಾಮಾನ್ಯ ಜನಸಂಖ್ಯೆಯನ್ನು ಪರಿಗಣಿಸಿದರೆ ಇವೆರಡೂ ಗುಂಪಿನಲ್ಲಿ ಕರುಳಿನ ಪೊಲಿಪ್ಸ್ ಸಂಭವವನ್ನು ಕಡಿಮೆ ಮಾಡಬಹುದಾಗಿದ್ದರೂ ಹೃದಯದ ಕವಾಟಿಗೆ ಸಂಭಂದಿಸಿದ ವಿಷಮತೆ ಏರಿಕೆಯಾಗುವ ಸಾಧ್ಯತೆ ಇದೆ.



ತಳಿ ಪರೀಕ್ಷೆಸಂಪಾದಿಸಿ
ಕ್ಯಾನ್ಸರ್ ನ ಹೆಚ್ಚು ಸಾಧ್ಯತೆಗಳಿಗೆ ಒಡ್ಡಿಕೊಳ್ಳುವ ವ್ಯಕ್ತಿಗಳ ತಳಿ ಅಥವಾ ವಂಶವಾಹಿನಿಯ ಪರೀಕ್ಷೆಯು ಪ್ರಗತಿಯಲ್ಲಿದೆ.ಅದೂ ಅಲ್ಲದೇ ಕ್ಯಾನ್ಸರ್ ಸಂಭಂದಿತ ತಳಿ ರೂಪಾಂತರಗಳ ಬಗೆಗಿನ ಮಾಹಿತಿ ಕಲೆಹಾಕುವ ಪ್ರಕ್ರಿಯೆ ಮುಂದುವರೆದಿದೆ. ತಳಿ ರೂಪಾಂತರಗಳನ್ನು ಹೊತ್ತೊಯ್ಯುವ ಕ್ಯಾನ್ಸರ್ ಕೋಶಗಳು ಹೊಂದಿರುವವರು ಹೆಚ್ಚಿನ ಕಾಳಜಿ,ಔಷಧೋಪಚಾರ,ಕೆಮೊನಿರ್ಮೂಲನೆ ಅಥವಾ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಕ್ಯಾನ್ಸರ್ ಕಾಯಿಲೆಗೆ ಬೇಗ ತುತ್ತಾಗುವವರ ಮತ್ತು ತಳಿ ಮೂಲದ ರೋಗದ ಲಕ್ಷಣಗಳನ್ನುಹೊಂದಿದವರು ಆರಂಭಮಟ್ಟದಲ್ಲಿ ಇದನ್ನು ಕ್ಯಾನ್ಸರ್ ನಿರ್ಮೂಲನಾ ಕ್ರಮಗಳಲ್ಲದೇ ಕೆಮಿಥೆರೊಪಿಯಂತಹ ಪದ್ದತಿಗಳನ್ನು ಅಳವಡಿಸಿಕೊಳ್ಳುವದರಿಂದ ಇದರ ಉಲ್ಬಣತೆ ತಡೆಯಬಹುದಾಗಿದೆ.




ಜೀನ್‌
ಕ್ಯಾನ್ಸರ್ ನ ವಿಧಗಳು
ಲಭ್ಯತೆ
BRCA1, BRCA2 ಸ್ತನ, ಅಂಡಾಶಯ,ಗಂಟಲು ಪ್ರಯೋಗಕ್ಕಾಗಿ ಲಭ್ಯವಿರುವ ವಾಣಿಜ್ಯೋದ್ಯಶದ ಲ್ಯಾಬ್ ರೊಟರಿ ನಮೂನೆಗಳು
MLH1, MSH2, MSH6, PMS1, PMS2 ಕರಳು,ಮೂತ್ರಕೋಶ,ಸಣ್ಣಕರುಳು,ಉದರ,ಮೂತ್ರಾಶದ ಜಾಗೆ Commercially available for clinical specimens



ಲಸಿಕೆಗಳುಸಂಪಾದಿಸಿ
ಪ್ರೊಫಿಲ್ಯಾಕ್ಟಿಕ್ ಲಸಿಕೆಯು ಕ್ಯಾನ್ಸರ್ ಗ್ರಂಥಿಗಳ ಮೂಲಕ ಸೋಂಕು ತರುವ ಕೋಶಗಳನ್ನು ಅಂದರೆ ವೈರಸ್ ಗಳನ್ನು ನಿವಾರಿಸುತ್ತದೆ.ಕ್ಯಾನ್ಸರ್ ಕಾರಕಗಳನ್ನು ಸೂಕ್ತ ರೋಗ ನಿದಾನ ಪತ್ತೆ ಮೂಲಕ ಗುರುತಿಸಿ ರೋಗ ನಿರೋಧಕ ಶಕ್ತಿಗೆ ಇನ್ನಷ್ಟು ಉತ್ತೇಜನ ನೀಡಿ ಕ್ಯಾನ್ಸರ್ -ನಮೂನೆಯ ಎಪಿಟೋಪ್ ಗಳನ್ನು [೬೭]ನಿಯಂತ್ರಿಸಬಹುದಾಗಿದೆ.

ವರದಿಗಳ ಪ್ರಕಾರ ಮಾನವ ಪಪಿಲೊಮಾವೈರಸ್ ಲಸಿಕೆಯು ಮಾನವ ಪಪಿಲೊಮಾವೈರಸ್ ನ ಕಾರಣದಿಂದುಟಾಗುವ ಜನನೇಂದ್ರಿಯ ಕ್ಯಾನ್ಸರ್ ಮತ್ತು ತಳಿಯ ಸಂಭಂದಿತ ಕಾಯಿಲೆ ಹೆಚ್ಚಳದ ಅಪಾಯ ತಡೆಗಟ್ಟಲು ಸಾಧ್ಯವಿದೆ. ಕೇವಲ ಎರಡುHPV ಲಸಿಕೆಗಳು ಅಂದರೆ ಗರ್ಡಾಸಿಲ್ ಮತ್ತು ಸೆರಾವೆರಿಕ್ಸ್ ಇತ್ತೀಚಿಗೆ ಆಕ್ಟೋಬರ್ 2007ರಿಂದ ಮಾರುಕಟ್ಟೆಯಲ್ಲಿ [೬೭]ಲಭ್ಯವಿವೆ. ಹೆಪಟೈಟಿಸ್ B ಲಸಿಕೆ ಕೂಡಾ ಇಲ್ಲಿ ದೊರಕುತ್ತಿದೆ.ಇದು ಹೆಪಟೈಟಿಸ್ B ವೈರಿಸ್ ನಿಂದ ಉಂಟಾಗುವ ಸೋಂಕಿನಿಂದ ಸಂಭವಿಸುವ ಜಠರ ಕ್ಯಾನ್ಸರ್ ನ್ನು ನಿರ್ಮೂಲನೆ ಮಾಡುವ ಸಾಧ್ಯತೆ [೬೭]ಇದೆ. ಚೂಪಾದ ಹಲ್ಲುಗಳಿಗೆ ಬೇಕಾಗುವ ಮೆಲಾನೊಮಾ ಲಸಿಕೆಯನ್ನು ಕೂಡಾ [೬೮]ಅಭಿವೃದ್ಧಿಪಡಿಸಲಾಗಿದೆ.(ಇದು ಬಹುತೇಕ ಮಾಂಸಾಹಾರಿ ಪ್ರಾಣಿಗಳ ದಂತ ಕ್ಯಾನ್ಸರ್ ಗೂ [೬೯]ಬಳಸಬಹುದಾಗಿದೆ.



ರೋಗ ತಪಾಸಣೆಸಂಪಾದಿಸಿ
Main article: Cancer screening

Question book-new.svg
 
ಕ್ಯಾನ್ಸರ್ ನ ಸಮಗ್ರ ತಪಾಸಣೆಯು ಯಾವದೇ ಅನುಮಾನಾಸ್ಪದ ಕ್ಯಾನ್ಸರ್ ಲಕ್ಷಣಗಳಿವೆಯೇ ಎಂದು ಗುರುತಿಸಲು ಸ್ಕ್ರೀನಿಂಗ್ ನ ಅಗತ್ಯ ಇರುತ್ತದೆ. ದೊಡ್ಡ ಪ್ರಮಾಣದ ಆರೋಗ್ಯವಂತ ಜನಸಂಖ್ಯೆಯ ಸ್ಕ್ರೀನಿಂಗ್ ಅಗ್ಗ,ಸುರಕ್ಷಿತ,ದುರಾಕ್ರಮಣ ನಡೆಸುವುದಂತಹದಲ್ಲ.ಇಂತಹ ತಪಾಸಣೆಯು ತಪ್ಪಾಗಿ ಗ್ರಹಿಸುವ ಧನಾತ್ಮಕ ಫಲಿತಾಂಶಗಳನ್ನು ಕಡಿಮೆ ಮಾಡುವ ಸಾಧ್ಯತೆಇದೆ. ಒಂದು ವೇಳೆ ಕ್ಯಾನ್ಸರ್ ನ ಚಿನ್ಹೆಗಳು ಕಾಣಿಸಿದರೆ ಅವುಗಳಿಗಾಗಿ ಸೂಕ್ತ ಹಾಗು ಸಕಾಲದಲ್ಲಿ ಪರಿಣಾಮಕಾರಿ ಔಷಧೋಪಚಾರ ಮಾಡಬಹುದಾಗಿದೆ.

ಕ್ಯಾನ್ಸರ್ ನ ಸಕಾಲಿಕ ಸ್ಕ್ರೀನಿಂಗ್ ಅಥವಾ ಪರೀಕ್ಷೆಯಿಂದ ಆರಂಭಿಕ ಪ್ರಮುಖ ಪ್ರಕರಣಗಳನ್ನು ಪತ್ತೆಹಚ್ಚಬಹುದಾಗಿದೆ. ತತ್ ಕ್ಷಣದ ರೋಗ ಪತ್ತೆ ಕಾರ್ಯವು ರೋಗಿಯ ಆಯುಷ್ಯವರ್ಧನೆಗೆ ಕಾರಣವಾಗುತ್ತದೆ.ಆದರೆ ಇದರ ಬಗೆಗಿನ ಊಹಾಪೋಹಗಳಿಗೆ ಬಲಿಯಾಗಿ ರೋಗಿಗೆ ಸಾವಿನ ಭಯದಲ್ಲೇ ಬದುಕುವ ಅನಿವಾರ್ಯತೆ ಉಂಟಾಗಬಹುದು.ಆದ್ದರಿಂದ ಜೀವನದ ಕಾಲಾವಧಿಯ ಮೇಲೆ ಅಥವಾ ಯಾವದೇ ದೀರ್ಘ ಬದುಕಿನ ಬಗೆಗಿನ ವದಂತಿಗಳಿಗೆ ರೋಗಿಯು ಕಿವಿಗೊಡಬಾರದು.

ವಿವಿಧ ರೋಗಕಾರದ ಲಕ್ಷಣಗಳ ಪತ್ತೆಗೆ ವಿವಿಧ ಸ್ಕ್ರೀನಿಂಗ್ ಅಥವಾ ಪರೀಕ್ಷಾ ವಿಧಾನಗಳು ಅಭಿವೃದ್ದಿ ಹೊಂದಿವೆ. ಸ್ತನ ಕ್ಯಾನ್ಸರನ್ನು ಸ್ತನದ ಸ್ವಯಂ ಪರೀಕ್ಷೆಯಿಂದ ಕಂಡುಹಿಡಿಯಬಹುದಾಗಿದೆ.ಆದರೆ 2005ರಲ್ಲಿ ಚೀನಾದ 300,000ಮಹಿಳೆಯರ ಮೇಲೆ ನಡೆಸಿದ ಪ್ರಯೋಗದಿಂದಾಗಿ ಈ ಸ್ವಯಂ ಚಿಕಿತ್ಸೆ ಅಷ್ಟಾಗಿ ಸಫಲವಾಗಿಲ್ಲ. .ಮಮ್ಮೊಗ್ರಾಮ್ ಮೂಲಕ ಸ್ತನ ಕ್ಯಾನ್ಸರ್ ನ್ನು ಕಂಡು ಹಿಡಿದು ಅದನ್ನು ಸಣ್ಣದರಲ್ಲೇ ಕಡಿಮೆ ಮಾಡಿ ಸ್ತನ ಕ್ಯಾನ್ಸರ್ ಗಳ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಮಮ್ಮೊಗ್ರಾಫಿಕ್ ಮೂಲಕ ತಪಾಸಣೆ ಮಾಡುವದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಇಡೀ ದೇಶದ ಈ ಕಾಯಿಲೆ ಯಾವ ಹಂತದಲ್ಲಿದೆ ಮತ್ತು ಮೂಲ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕರುಳಿಗೆ ಸಂಭಂದಿಸಿದ ಕ್ಯಾನ್ಸರ್ ನ್ನು ಸಂಪೂರ್ಣ ರಕ್ತ ತಪಾಸಣೆ ಮತ್ತು ಕೊಲೊಸ್ಕೊಪಿ,ಮೂಲಕ ಕ್ಯಾನ್ಸರ್ ಉಲ್ಬಣದ ಗಂಡಾಂತರವನ್ನು ತಕ್ಕ ಮಟ್ಟಿಗೆ ನಿರ್ಮೂಲನೆ ಮಾಡಲು ಸಾಧ್ಯತೆ ಇದೆ.ಇದರಿಂದ ಕೊಲೊನ್ ಕ್ಯಾನ್ಸರ್ ನ ಹರಡುವಿಕೆ ಮತ್ತು ಸಾವಿನ ದುರಂತಗಳನ್ನು ತಪ್ಪಿಸಲು ಸಾಧ್ಯವಿದೆ.ಆರಂಭಿಕ ತಪಾಸಣೆಯು ಆರಂಭಿಕ ಕ್ಯಾನ್ಸರ್ ಪೀಡಿತ ಪೊಲಿಪ್ಸ್ ಗಳನ್ನು ತೊಡೆದು ಹಾಕಬಹುದಾಗಿದೆ. .ಅದೇ ತೆರನಾಗಿ ಸೆರ್ವಿಕಲ್ ಸೈಟೊಲಾಜಿ ಪರೀಕ್ಷೆಯು(ಪಾಪ್ ಸ್ಮೆಅರ್ ಬಳಸಿ)ಮಾಡುವದರಿಂದ ಕಾಯಿಲೆಯ ತೀವ್ರ ಪತ್ತೆ ಮತ್ತು ಗುರುತಿಸುವಿಕೆ ಸಾಧ್ಯ. ಹಲವಾರು ವರ್ಷಗಳಿಂದ ಈ ಪರೀಕ್ಷೆಯು ಸೆರ್ವಿಕಲ್ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಹೆಚ್ಚಳ ಮತ್ತು ಸಾವಿನ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣಿಸಿದೆ. ವೃಷಣಗಳಿಗೆ ಸಂಭಂದಿಸಿದ ಟೆಸ್ಟಿಕುಲರ್ ಸ್ವಯಂ ಪರೀಕ್ಷೆಯನ್ನು 15ವರ್ಷಗಳ ವಯೋಮಾನದ ಪುರುಷರು ಮಾಡಿಕೊಳ್ಳಬಹುದಾಗಿದೆ.ಇದರಿಂದ ಬಹುಬೇಗನೆ ವೃಷಣಕೆ ಸಂಭಂದಿಸಿದ ವೃಷಣ ಕ್ಯಾನ್ಸರ್ ನ್ನು ಪತ್ತೆ ಹಚ್ಚಬಹುದಾಗಿದೆ. ಪುರುಷ ಜನನೇಂದ್ರ ಕ್ಯಾನ್ಸರ್ ನ್ನು ಡಿಜಿಟಲ್ ರೆಕ್ಟಲ್ ಪರೀಕ್ಷೆಯ ಮೂಲಕ ಅಂದರೆ ಪ್ರೊಸ್ಟೇಟ್ ಆಂಟಿಜಿನ್ (PSA)ಜೊತೆಯಲ್ಲಿ ರಕ್ತ ಪರೀಕ್ಷೆಯೊಂದಿಗೆ ಇದನ್ನು ಮಾಡಬಹುದು.ಕೆಲವು ಸಂಘಟನೆಗಳು (ಅಂದರೆUS ನ ಪ್ರೆವೆಂಟಿವ್ ಸರ್ವಿಸಿಸ್ ಟಾಸ್ಕ್ ಫೋರ್ಸ್ )ಶಿಫಾರಿಸ್ಸಿನಂತೆ ಪ್ರತಿಯೊಬ್ಬ ಪುರುಷ ಈ ಸ್ಕ್ರೀನಿಂಗ್ ಗೆ ಒಳಗಾಗಬೇಕೆಂದು ಅದು ಹೇಳುತ್ತದೆ.

ಕೆಲವು ಪ್ರಕರಣಗಳಲ್ಲಿ ಇದರ ಲಕ್ಷಣಗಳು ಸಾಬೀತಾಗದೇ ಇಂತಹ ತಪಾಸಣೆ ಜೀವ ಉಳಿಸಬಲ್ಲದೇ ಎಂಬ ಬಗ್ಗೆ ವಿವಾದವಿದೆ. ರೋಗ ನಿದಾನ ಪ್ರಕ್ರಿಯೆ ಮತ್ತು ಕ್ಯಾನ್ಸರ್ ಚಿಕಿತ್ಸೆಯು ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡುತ್ತದೆಯೇ ಎಂಬುದು ಸ್ಕ್ರೀನಿಂಗ್ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬುದರ ಮೇಲೆ ವಿವಾದಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗಾಗಿ: ಪುರುಷರ ಜನನೇಂದ್ರಿಯ ಕ್ಯಾನ್ಸರ,ಅಂದರೆPSAಪರೀಕ್ಷೆಯು ಸಣ್ಣ ಪ್ರಮಾಣದ ಕ್ಯಾನ್ಸರ್ ಕಾಯಿಲೆಯನ್ನು ಗುರುತಿಸಬಹುದು ಆದರೆ ಇದು ಪ್ರಾಣಾಪಾಯನ್ನುಂಟು ಮಾಡಲಾರದಾದರೂ ಇದರ ಚಿಕಿತ್ಸೆ ಮಾತ್ರ ನಿಲ್ಲುವದಿಲ್ಲ. ಇಂತಹ ಸಂದರ್ಭದಲ್ಲಿ ವಿಪರೀತವಾದ ರೋಗನಿದಾನ ಪತ್ತೆ ಎಂದು ಇದನ್ನು ಕರೆಯಬಹುದು,ಇದು ಕೆಲವು ಅನವಶ್ಯಕ ಶಸ್ತ್ರ ಚಿಕಿತ್ಸೆಯಂತಹ ಕ್ರಮಗಳು ಸಂಕೀರ್ಣ ಸಮಸ್ಯೆ ತರಬಹುದಾಗಿದೆ. ಈ ಸಂದರ್ಭದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಗಾಗಿ ನಡೆಸಿದ ಪ್ರೊಸ್ಟೇಟ್ ಬಯಾಪ್ಸಿಯು ಅಡ್ಡಪರಿಣಾಮಗಳನ್ನು ಅಲ್ಲದೇ ರಕ್ತಸ್ರಾವ ಮತ್ತು ಸೋಂಕಿಗೆ ಕಾರಣವಾಗುವ ಸಾಧ್ಯತೆ ಇದೆ. ಪ್ರೊಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯು ಇನ್ ಕಾಂಟಿನೆನ್ಸ್ (ಮೂತ್ರದ ಹರಿಯುವಿನ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದು)ಎರೆಕ್ಟೈಲ್ ನಿಷ್ಕ್ರಿಯತೆ (ಜನನಾಂಗದ ಉದ್ರೇಕದ ಸಾಮರ್ಥ್ಯ ಕಡಿಮೆ ಇದರಿಂದ ಸಂಭೋಗ ಅತೃಪ್ತಿದಾಯಕವಾಗುತ್ತದೆ) ಅದೇ ರೀತಿ ಸ್ತನ ಕ್ಯಾನ್ಸರ್ ಗೂ ಇದೇ ತೆರನಾದ ಟೀಕೆಗಳು ಬಂದಿವೆ,ಕೆಲವು ದೇಶಗಳಲ್ಲಿ ಸ್ತನ ಕ್ಯಾನ್ಸರ್ ಕಾರ್ಯಕ್ರಮಗಳು ಸಮಸ್ಯೆ ಬಗೆಹರಿಸುವದಕ್ಕಿಂತ ಹೆಚ್ಚು ವಿಪರೀತಗಳಿಗೆ ಕಾರಣವಾಗುತ್ತಿದೆ. .ದೊಡ್ದ ಪ್ರಮಾಣದಲ್ಲಿ ಮಹಿಳೆಯರನ್ನು ಸ್ತನ ಕ್ಯಾನ್ಸರ್ ಗಾಗಿ ಪರೀಕ್ಷೆಗೆಒಳಪಡಿಸುವದಕಿಂತ ಇದರಲ್ಲಿ ತಪ್ಪು ತಪ್ಪಾಗಿ ಅಚಾತುರ್ಯಗಳಿಂದ ಇಲ್ಲದ ಕ್ಯಾನ್ಸರ್ ಗಾಗಿ ಮಹಿಳೆಯರು ಕಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಹೆಚ್ಚು ಪ್ರಕರಣಗಳ ತಪಾಸಣೆಯ ಶ್ರಮ ಮತ್ತು ಅದನ್ನು ಬೆನ್ನಟ್ಟಿ ಪರಿಹಾರ ಮತ್ತು ಔಷಧೋಪಚಾರ ಇನ್ನೂ ಜಟಿಲ ಕಾರ್ಯವಾಗುವ ಸಂದರ್ಭವೇ ಹೆಚ್ಚು.ಒಂದೇ ಒಂದು ಸ್ತನ ಕ್ಯಾನ್ಸರ್ ನ ಆರಂಭಿಕ ಹಂತ ಕಂಡುಕೊಳ್ಳಲು ಎಲ್ಲಾ ಜನರಿಗೆ ಪರೀಕ್ಷೆಯ ಆತಂಕ ಒಡ್ಡಿದಂತಾಗುತ್ತದೆ.

ಪ್ಯಾಪ್ ಸ್ಮಿಯರ್ (ಒಂದು ತುದಿಯ ತೊಟ್ಟಿನ )ಮೂಲಕ ಕುತ್ತಿಗೆ ಕ್ಯಾನ್ಸರ್ ನ್ನು ಸ್ಕ್ರೀನಿಂಗ್ ಮಾಡಬಹುದು ಇದು ಎಲ್ಲಾ ಕ್ಯಾನ್ಸರ್ ತಪಾಸಣಾ ಕ್ರಿಯೆಗಳಿಗಿಂತ ಉತ್ತಮವಾದುದೆಂದು ಪರಿಗಣಿಸಲಾಗಿದೆ.ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಇಂಥ ತಪಾಸಣೆಗಳು ಸ್ಪಷ್ಟ ಅಪಾಯಕಾರಿ ಅಂಶಗಳನ್ನು (ಲೈಂಗಿಕ ಸಂಪರ್ಕ)ಹೊರಗೆಡುವುತ್ತವೆ. ಇದು ವೈರಸ್ ಗಳಿಂದ ಹರಡುವ ಸಾಧ್ಯತೆ ಇರುವದರಿಂದ ಇದರ ಸುದೀರ್ಘ ಕಾಲಾವಧಿಯನ್ನು ಪತ್ತೆ ಹಚ್ಚಲು ತೀವ್ರ ಪರೀಕ್ಷೆಗಳು ಬೇಕಾಗುತ್ತವೆ.ಇದು ಸಾಮಾನ್ಯವಾಗಿ ನಿಧಾನ ಹರಡುವ ಗುಣಲಕ್ಷಣ ಹೊಂದಿದೆ. ಹೇಗೆಯಾದರೂ ಈ ಪರೀಕ್ಷೆಯು ಸರಳ ಮತ್ತು ಅಗ್ಗದ ತಪಾಸಣೆಯೂ ಆಗಿದೆ.

ಇದೇ ಕಾರಣಕ್ಕಾಗಿ ಕ್ಯಾನ್ಸರ್ ಚಿಕಿತ್ಸೆಯನ್ನು ಕೈಗೊಳ್ಳುವ ಮುನ್ನ ಇದರ ಲಾಭ ಮತ್ತು ಪರೀಕ್ಷಾ ಸಮಯದ ಪ್ರಕ್ರಿಯೆ ಹಾಗು ಚಿಕಿತ್ಸಾ ವಿಧಾನದ ಬಗ್ಗೆಯೂ ಆಲೋಚನೆ ಮಾಡುವುದು ಒಳಿತು.

 .ಜನರಲ್ಲಿನ ಕ್ಯಾನ್ಸರ್ ತಪಾಸಣೆಗೆ ವೈದ್ಯಕೀಯ ಛಾಯೆ ಬಳಸುವುದು, ಜನರಲ್ಲಿನ ಸ್ಪಷ್ಟ ಕ್ಯಾನ್ಸರ್ ಚಿನ್ಹೆಗಳನ್ನು ಕಾಣದೇ ಮುಂದುವರೆಯುವುದು ಕೂಡಾ ಒಂದು ಸಮಸ್ಯೆಯ ಆಗರವೇ ಸರಿ. ಇದು ಇತ್ತೀಚಿನ ವರದಿಗಳಂತೆ ರೋಗ ಪತ್ತೆಯು ಒಂದು ಅಪಾಯಕಾರಿ ಅಥವಾ ಗಂಡಾಂತರಕಾರಿಯಾದ ಇನ್ಸೆಡೆಂಟಾಲೊಮಾ ,(ಸಾಂದರ್ಭಿಕ ಆರೋಗ್ಯದ ಸಮಸ್ಯೆ) ಎಂದು ಕರೆಯಲ್ಪಟ್ಟಿದೆ.ಇದನ್ನು ಹಾನಿಕಾರಕ ಮತ್ತು ಅಪಾಯಕಾರಿ ರೋಗಪತ್ತೆ ಕಾರ್ಯವೆಂದೂ ವ್ಯಾಖ್ಯಾನಿಸಲಾಗಿದೆ. ಇತ್ತೀಚಿನCT ಸ್ಕ್ಯಾನ್ ಮೂಲಕ ಧೂಮಪಾನಿಗಳ ಶ್ವಾಸಕೋಶದ ಕ್ಯಾನ್ಸರ್ ತಪಾಸಣೆಯು ಸೂಕ್ತ ಫಲಿತಾಂಶಗಳನ್ನು ನೀಡಿಲ್ಲ ಇದಕ್ಕಾಗಿ ವ್ಯವಸ್ಥಿತ ಸ್ಕ್ಯಾನಿಂಗ್ ಬಗ್ಗೆ ಜುಲೈ2007ರಿಂದಲೂ ಯಾವುದೇ ಶಿಫಾರಸುಗಳು ಬಂದಿಲ್ಲ. ರಾಂಡೊಮೈಜ್ಡ್ ಕ್ಲಿನಿಕಲ್ ಪ್ರಯೋಗಗಳು(ಸರಾಸರಿ ತಪಾಸಣಾ ಪ್ರಯೋಗಗಳು) ಸಾದಾ ಎದೆಯ ಎಕ್ಷರೇ ತೆಗೆದು ಧೂಮಪಾನಿಗಳಲ್ಲಿನ ಶ್ವಾಸಕೋಶದ ಕ್ಯಾನ್ಸರ್ ಕಂಡು ಹಿಡಿಯುವದರಿಂದ ಯಾವದೇ ನಿಶ್ಚಿತ ಲಾಭ ದೊರಕಿಲ್ಲ.ಈ ಟ್ರಯಲ್ ಅಷ್ಟಾಗಿ ಸೂಕ್ತವೆನಿಸಿಲ್ಲ.

ಶ್ವಾನಗಳ ಕ್ಯಾನ್ಸರ್ ಪತ್ತೆ ಕಾರ್ಯ ಕೆಲಮಟ್ಟಿಗೆ ಭರವಸೆ ಮೂಡಿಸಿದೆಯಾದರೂ ಅದಿನ್ನು ಸಂಶೋಧನೆಯ ಆರಂಭಿಕ ಹಂತದಲ್ಲೇ ಉಳಿದುಕೊಂಡಿದೆ.




ರೋಗನಿರ್ಣಯಸಂಪಾದಿಸಿ



ಎದೆ ಭಾಗದ ಎಡಕ್ಕೆ ಶ್ವಾಸಕೋಶದ ಕ್ಯಾನ್ಸರ್ ಯ ಕ್ಷಕಿರಣ
 ಬಹುತೇಕ ಕ್ಯಾನ್ಸರ್ ಗಳು ಆರಂಭಿಕವಾಗಿ ಕೆಲವು ಸಾಮಾನ್ಯ ಲಕ್ಷಣಗಳೊಂದಿಗೆ ಗೋಚರಿಸಬಹುದು ಅಥವಾ ಸ್ಕ್ಯಾನಿಂಗ್ ಮೂಲಕ ಪತ್ತೆಯಾಗಬಹುದು. ಇದರಲ್ಲಿನ ಯಾವೂ ಖಚಿತ ರೋಗ ಪತ್ತೆ ಮಾಡುವದಕ್ಕೆ ವಿಫಲವಾಗುತ್ತವೆ. ಇದಕ್ಕಾಗಿ ರೋಗನಿದಾನ ಶಾಸ್ತ್ರಜ್ಞ,ಅಂದರೆ ಫಿಜಿಸಿಯನ್ (ಔಷಧಿ ತಜ್ಞ) ಈತ ಕ್ಯಾನ್ಸರ್ ಮತ್ತು ಇತರೆ ರೋಗಗಳ ಪತ್ತೆಯಲ್ಲಿ ಪರಣಿತಿ ಪಡೆದಿರಬೇಕಾಗಿರುತ್ತದೆ. ಕ್ಯಾನ್ಸರ್ ರೋಗದ ಅನುಮಾನದ ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗಳ ಮೂಲಕ ಆತನನ್ನು ಸಂಶಯದಿಂದ ದೂರ ಮಾಡಬಹುದು. ಇವು ಸಾಮಾನ್ಯವಾಗಿ ರಕ್ತ ತಪಾಸಣೆಗಳು,ಎಕ್ಷರೇಗಳು CT ಸ್ಕ್ಯಾನ್ ಗಳು ಮತ್ತು ಎಂಡೊಸ್ಕೊಪಿ ಮೊದಲಾದವು.



ರೋಗಶಾಸ್ತ್ರಸಂಪಾದಿಸಿ
ವಿಭಿನ್ನ ಕಾರಣಗಳಿಗಾಗಿ ಕ್ಯಾನ್ಸರ್ ರೋಗವೆಂದು ಅನುಮಾನಿಸಬಹುದಾಗಿದೆ.ಆದರೆ ಒಬ್ಬ ವೈದ್ಯಕೀಯ ರೋಗ ನಿದಾನ ಶಾಸ್ತ್ರಜ್ಞ ನಡೆಸುವ ಹಳೆಯ ರೋಗದ ತಪಾಸಣೆ ಬಗ್ಗೆ ಕ್ಯಾನ್ಸರ್ ಗೆ ಕಾರಣವಾಗುವ ನಿಖರ ಕೋಶಗಳ ಪರೀಕ್ಷೆಗಳ ಮೂಲಕ ದೃಢಪಡುತ್ತದೆ. ಅಂಗಾಂಶವನ್ನು ಬಯಾಪ್ಸಿ ಅಥವಾ ಶಸ್ತ್ರಚಿಕಿತ್ಸೆ ಮೂಲಕ ತಪಾಸಣೆಗೆ ಪಡೆಯಬಹುದು. .ಹಲವಾರು ಬಯಾಪ್ಸಿಗಳು(ಚರ್ಮ,ಸ್ತನ ಅಥವಾ ಜಠರ)ವೈದ್ಯರ ಕಚೇರಿ ಅಥವಾ ಕ್ಲಿನಿಕ್ ನಲ್ಲೇ ನಡೆಯುವುದು ಸಾಮಾನ್ಯ. ಜೀವಕೋಶಗಳ ಛೇದದಿಂದ ಅಂಗಾಂಶಗಳ ತಪಾಸಣೆಯನ್ನು ನಡೆಸಲಾಗುತ್ತದೆ.ಇಲ್ಲಿ ಅರಿವಳಿಕೆ ಮತ್ತು ಶಸ್ತ್ರಚಿಕಿತ್ಸೆಗಳು ಆಪ್ ರೇಶನ್ ಕೊಠಡಿಯಲ್ಲಿ ನಡೆಸಲಾಗುತ್ತದೆ.

ಈ ಅಂಗಾಂಶಗಳ ಛೇದನದ ರೋಗ ತಪಾಸಣೆಯು ರೋಗನಿದಾನ ಶಾಸ್ರ್ತಜ್ಞನಿಂದ ಸಂಪೂರ್ಣ ವಿವರ, ರೋಗದ ಉಲ್ಬಣದ ಪ್ರಮಾಣ, ಅದರ ಇತಿಹಾಸ,ಅದರ ಅನುವಂಶೀಯ ಇಲ್ಲವೇ ತಳಿಯ ಅಸಹಜತೆ ಮತ್ತು ಗೆಡ್ಡೆಯ ವಿವರಗಳನ್ನು ವೈದ್ಯರು ನಿಖರಗೊಳಿಸಬೇಕಾಗುತ್ತದೆ. ಇವುಗಳೊಂದಿಗೆ ಈ ಮಾಹಿತಿಯು ರೋಗಿಯ ಪೂರ್ವಸೂಚಕದ ಸಂಪೂರ್ಣ ಮೌಲ್ಯಮಾಪನದಿಂದ ಸರಿಯಾದ ಕ್ರಮ ಮತ್ತು ಸೂಕ್ತ ಚಿಕಿತ್ಸೆಯನ್ನು ನಿರ್ಣಿಯಿಸಬಹುದಾಗಿದೆ. ಸೈಟೊಜೆನೆಟಿಕ್ಸ್ ಮತ್ತು ಇಮ್ಮುನೊಹಿಸ್ಟೊಕೆಮಿಸ್ತ್ರಿ ಪರೀಕ್ಷಾ ವಿಧಾನಗಳು ಕೂಡಾ ರೋಗ ನಿದಾನ ತಪಾಸಣಾ ಶಾಸ್ತ್ರಜ್ಞನ ನೆರವಿಗೆ ಬರುತ್ತವೆ ಇವೆರಡು ಪರೀಕ್ಷೆಗಳ ಮೂಲಕ ಅಂಗಾಂಶದ ಮಾದರಿಯೊಂದಿಗೆ ವೈದ್ಯರು ತಪಾಸಣೆ ಚಿಕಿತ್ಸೆಗೆ ಮುಂದಾಗುತ್ತಾರೆ. ಈ ತಪಾಸಣೆಗಳು ಅಣುಗಳಲ್ಲಿನ ಬದಲಾವಣೆ (ರೂಪಾಂತರಗಳು, ಪ್ರಭಾವೀ ತಳಿಗಳು,ಮತ್ತು ಅಸಂಖ್ಯಾತ ಕ್ರೊಮೊಸೊಮ್ ಗಳ ಬದಲಾವಣೆಗಳು) ಕ್ಯಾನ್ಸರ್ ಕೋಶಗಳಲ್ಲಾದ ಪರಿವರ್ತನೆಗಳನ್ನುಅದು ತಿಳಿಸುತ್ತದೆ.ಇದರ ಮೂಲಕ ಕ್ಯಾನ್ಸರ್ ಯಾವ ಹಂತದಲ್ಲಿದೆ ಅದರ ಭವಿಷ್ಯತ್ ಚಿಕಿತ್ಸೆಗೆ ಇದು ಮಾಹಿತಿ ನೀಡುತ್ತದೆ.




Breast cancer gross appearance.jpg

ಸೂಕ್ಷ್ಮದರ್ಶಕದಲ್ಲಿ ಸಾಮಾನ್ಯವಾಗಿ ಗೋಚರಿಸುವ ಕ್ಯಾನ್ಸರ್ಸ್ತನದ ಡಕ್ಟಲ್ ಕಾರ್ಸಿನೊಮಾವು (ಮಧ್ಯದ ಬಿಳಚಿದ ಭಾಗ)ಇದು ಗುಂಡಗಿನ ಗೆಡ್ಡೆ ಸುತ್ತುವರೆದ ಸಣ್ಣ ಗೆರೆಗಳಿಂದ ಕೂಡಿರುತ್ತದೆ.ಇದು ಹಳದಿ ದಪ್ಪನೆಯ ಅಂಗಾಂಶ ಹೊಂದಿರುತ್ತದೆ..ಏಡಿಯನ್ನು ಹೋಲುವ ದಪ್ಪನೆಯ ಪದರಿನ ಕೋಶ




ಕೊಲೊಕ್ಟೆಮಿಯಲ್ಲಿನ ಕಾರ್ಸಿನೊಮಾದ ಆಕ್ರಮಣದ ನಮೂನೆ(ಕೇಂದ್ರದ ಮೇಲೆ)




ಕವಚದ ಕೋಶ ಕಾರ್ಸಿನೊಮಾ(ಶ್ವೇತ ಗೆಡ್ಡೆ)ಶ್ವಾಸಕೋಶದ ನಮೂನೆ




ಮಾಸ್ಟೆಕ್ಟೊಮಿಯಲ್ಲಿ ದೊಡ್ದ ಪ್ರಮಾಣದ ಡಕ್ಟಲ್ ಕಾರ್ಸಿನೊಮಾದ ದಾಳಿಯ ನಮೂನೆ