ಶನಿವಾರ, ಜುಲೈ 18, 2015

ವಿತ್ತೀಯ ನೀತಿಯ ವಿಧಗಳು

ವಿತ್ತೀಯ ನೀತಿಯ ವಿಧಗಳು

ಆಚರಣೆಯಲ್ಲಿರುವ ಎಲ್ಲ ವಿತ್ತೀಯ ನೀತಿ ವಿಧಗಳು ಚಲಾವಣೆಯಲ್ಲಿರುವ ಮ‌ೂಲ ಕರೆನ್ಸಿ(M0) ಮೊತ್ತವನ್ನು ನವೀಕರಿಸುವುದನ್ನು ಒಳಗೊಂಡಿದೆ. ಋಣ ಮತ್ತು ಸಾಲ ಸಾಧನಗಳ(ಸರ್ಕಾರದ ವಿತರಣೆ) ಮುಕ್ತ ಮಾರಾಟಗಳು ಮತ್ತು ಖರೀದಿಗಳ ಮ‌ೂಲಕ ಮ‌ೂಲ ಕರೆನ್ಸಿಯ ದ್ರವ್ಯತೆಯಲ್ಲಿ ಬದಲಾವಣೆ ಮಾಡುವ ಪ್ರಕ್ರಿಯೆಗೆ ಮುಕ್ತ ಪೇಟೆ ಕಾರ್ಯಾಚರಣೆಗಳು ಎಂದು ಕರೆಯಲಾಗುತ್ತದೆ.

ವಿತ್ತೀಯ ಪ್ರಾಧಿಕಾರದಿಂದ ಸ್ಥಿರ ಮಾರುಕಟ್ಟೆ ವಹಿವಾಟುಗಳು ಕರೆನ್ಸಿಯ ಪೂರೈಕೆಯನ್ನು ಬದಲಿಸುತ್ತದೆ ಮತ್ತು ಇದರಿಂದ ಇತರೆ ಮಾರುಕಟ್ಟೆ ವ್ಯತ್ಯಾಸಗಳಾದ ಅಲ್ಪಾವಧಿ ಬಡ್ಡಿದರಗಳು ಮತ್ತು ವಿನಿಮಯ ದರದ ಮೇಲೆ ಪ್ರಭಾವ ಬೀರುತ್ತದೆ.

ವಿತ್ತೀಯ ನೀತಿಯ ವಿವಿಧ ವಿಧಗಳ ನಡುವೆ ಭಿನ್ನತೆಯು ತಮ್ಮ ಗುರಿಗಳನ್ನು ಸಾಧಿಸಲು ವಿತ್ತೀಯ ಪ್ರಾಧಿಕಾರ ಬಳಸುವ ಸಾಧನಗಳ ಸಮ‌ೂಹ ಮತ್ತು ಗುರಿ ವ್ಯತ್ಯಾಸಗಳ ಮೇಲೆ ಮುಖ್ಯವಾಗಿ ಅವಲಂಬಿತವಾಗಿದೆ.





ವಿತ್ತೀಯ ನೀತಿ
ಮಾರುಕಟ್ಟೆ ವ್ಯತ್ಯಾಸದ ಗುರಿ
ದೀರ್ಘಾವಧಿಯ ಉದ್ದೇಶ
ಹಣದುಬ್ಬರದ ಗುರಿ ದಿಢೀರ್ ಸಾಲದ ಮೇಲೆ ಬಡ್ಡಿ ದರ CPIನಲ್ಲಿ ಕೊಟ್ಟ ಬದಲಾವಣೆ ದರ
ದರ ಮಟ್ಟದ ಗುರಿ ದಿಢೀರ್ ಸಾಲದ ಮೇಲೆ ಬಡ್ಡಿದರ ನಿರ್ದಿಷ್ಟ
CPI ಸಂಖ್ಯೆ

ವಿತ್ತೀಯ ಒಟ್ಟು ಮೊತ್ತ ಹಣದ ಪೂರೈಕೆಯಲ್ಲಿ ಬೆಳವಣಿಗೆ CPIನಲ್ಲಿ ಕೊಟ್ಟ ಬದಲಾವಣೆ ದರ
ಸ್ಥಿರ ವಿನಿಮಯ ದರ ಕರೆನ್ಸಿಯ ಸ್ಥಳದ ದರ ಕರೆನ್ಸಿಯ ಸ್ಥಳದ ದರ
ಚಿನ್ನದ ಪ್ರಮಿತಿ ಚಿನ್ನದ ಸ್ಥಳದ ದರ ಚಿನ್ನದ ದರದಿಂದ ಕಡಿಮೆ ಹಣದುಬ್ಬರದ ಅಳತೆ
ಮಿಶ್ರಿತ ನೀತಿ ವಾಡಿಕೆಯ ಬಡ್ಡಿದರಗಳು ವಾಡಿಕೆಯ ನಿರುದ್ಯೋಗ+ CPI ಬದಲಾವಣೆ

ವಿನಿಮಯ ದರದ ಆಡಳಿತಗಳಿಗೆ ಸಮಾನಾಂತರವಾಗಿ ವಿತ್ತೀಯ ನೀತಿಗಳ ವಿವಿಧ ವಿಧಗಳನ್ನು ವಿತ್ತೀಯ ಆಡಳಿತಗಳು ಎಂದು ಕೂಡ ಕರೆಯುತ್ತಾರೆ. ಸ್ಥಿರ ವಿನಿಮಯ ದರ ಕೂಡ ವಿನಿಮಯ ದರದ ಆಡಳಿತ; ಚಿನ್ನದ ಪ್ರಮಿತಿಯುಳ್ಳ ಇತರೆ ರಾಷ್ಟ್ರಗಳ ಕರೆನ್ಸಿಗಳತ್ತ ಚಿನ್ನದ ಪ್ರಮಿತಿಯು ಸ್ಥಿರ ಆಡಳಿತದ ಫಲಿತಾಂಶಗಳನ್ನು ಒದಗಿಸುತ್ತದೆ. ಚಿನ್ನದ ಪ್ರಮಿತಿ ಇಲ್ಲದ ಕಡೆ ಬದಲಾಗುವ ಆಡಳಿತದ ಫಲಿತಾಂಶ ನೀಡುತ್ತದೆ. ಹಣದುಬ್ಬರದ ಮೇಲೆ ಗುರಿಯಿರಿಸುತ್ತಾ, ಸಂಬಂಧಿತ ವಿದೇಶಿ ಕರೆನ್ಸಿಗಳ ನಿರ್ವಹಣೆಯು ನಿಖರ ಸಮಾನ ವ್ಯತ್ಯಾಸಗಳನ್ನು(ಸುಸಂಗತ ಗ್ರಾಹಕ ದರ ಸೂಚ್ಯಂಕ ಮುಂತಾದವು)ಅನುಸರಿಸದೇ ಇದ್ದರೆ,ಒಟ್ಟು ವಿತ್ತೀಯ ಸಂಗ್ರಹವು ಬದಲಾಗುವ ವಿನಿಮಯ ದರವನ್ನು ಸೂಚಿಸುತ್ತದೆ.



ಹಣದುಬ್ಬರದ ಗುರಿಸಂಪಾದಿಸಿ
Main article: Inflation targeting
ಈ ನೀತಿಯ ಅನ್ವಯದಡಿ ಹಣದುಬ್ಬರವನ್ನು ಗ್ರಾಹಕ ದರ ಸೂಚ್ಯಂಕ ಮುಂತಾದ ನಿರ್ದಿಷ್ಟ ವ್ಯಾಖ್ಯೆಯಲ್ಲಿ ಇಚ್ಛಿತ ವ್ಯಾಪ್ತಿಯಲ್ಲಿ ಇರಿಸುವ ಗುರಿ ಹೊಂದಲಾಗಿದೆ.

ಕೇಂದ್ರ ಬ್ಯಾಂಕ್ ಬಡ್ಡಿದರದ ಗುರಿ ಮೇಲೆ ಆವರ್ತಕ ಹೊಂದಾಣಿಕೆಗಳನ್ನು ಮಾಡುವ ಮ‌ೂಲಕ ಹಣದುಬ್ಬರದ ಗುರಿಯನ್ನು ಸಾಧಿಸಲಾಗುತ್ತದೆ. ಬಡ್ಡಿದರವು ಸಾಮಾನ್ಯವಾಗಿ ಹಣದ ಹರಿವಿನ ಉದ್ದೇಶಗಳಿಗಾಗಿ ಬ್ಯಾಂಕುಗಳು ಪರಸ್ಪರ ದಿಢೀರ್ ಸಾಲ ನೀಡುವ ಅಂತರಬ್ಯಾಂಕ್ ದರವಾಗಿದೆ. ರಾಷ್ಟ್ರವನ್ನು ಅವಲಂಬಿಸಿ ಈ ನಿರ್ದಿಷ್ಟ ಬಡ್ಡಿದರವನ್ನು ನಗದು ದರ ಅಥವಾ ಅದಕ್ಕೆ ಸದೃಶವಾದ ಇನ್ನೊಂದು ಹೆಸರಿನಲ್ಲಿ ಕರೆಯಲಾಗುತ್ತದೆ.

ಮುಕ್ತ ಪೇಟೆಯ ಕಾರ್ಯಾಚರಣೆಗಳನ್ನು ಬಳಸಿ ನಿರ್ದಿಷ್ಟ ಅವಧಿಗೆ ಬಡ್ಡಿದರದ ಗುರಿಯನ್ನು ಕಾಯ್ದುಕೊಳ್ಳಲಾಗುತ್ತದೆ. ಸಾಂಕೇತಿಕವಾಗಿ ಬಡ್ಡಿದರದ ಗುರಿಯನ್ನು ಸ್ಥಿರವಾಗಿಡುವ ಕಾಲಾವಧಿಯು ಮಾಸಿಕಗಳು ಮತ್ತು ವಾರ್ಷಿಕಗಳಲ್ಲಿ ವ್ಯತ್ಯಾಸವಿರುತ್ತದೆ. ನೀತಿ ಸಮಿತಿಯಿಂದ ಬಡ್ಡಿದರದ ಗುರಿಯನ್ನು ಸಾಮಾನ್ಯವಾಗಿ ಮಾಸಿಕ ಅಥವಾ ತ್ರೈಮಾಸಿಕದ ಆಧಾರದ ಮೇಲೆ ಪುನರ್ಪರಿಶೀಲನೆ ಮಾಡಲಾಗುತ್ತದೆ.

ಆರ್ಥಿಕ ಪ್ರವೃತ್ತಿಗಳನ್ನು ಮುಂಗಾಣುವ ಪ್ರಯತ್ನವಾಗಿ ವಿವಿಧ ಮಾರುಕಟ್ಟೆ ಸೂಚಕಗಳಿಗೆ ಪ್ರತಿಕ್ರಿಯೆಯಾಗಿ ಬಡ್ಡಿದರದ ಗುರಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವ ಮ‌ೂಲಕ ವ್ಯಾಖ್ಯಾನಿಸಿದ ಹಣದುಬ್ಬರ ಗುರಿ ಸಾಧನೆಯತ್ತ ಮಾರುಕಟ್ಟೆಯನ್ನು ಇಡಲಾಗುತ್ತದೆ. ಉದಾಹರಣೆಗೆ,ಟೈಲರ್ ನಿಯಮವೆಂದು ಕರೆಯಲಾದ ಹಣದುಬ್ಬರದ ಗುರಿಯ ಒಂದು ಸರಳ ವಿಧಾನವು ಹಣದುಬ್ಬರದ ದರ ಮತ್ತು ಉತ್ಪಾದನೆ ಅಂತರದ ನಡುವೆ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ಬಡ್ಡಿದರವನ್ನು ಹೊಂದಾಣಿಕೆ ಮಾಡುತ್ತದೆ. ಸ್ಟಾನ್‌ಪೋರ್ಡ್ ಯ‌ೂನಿವರ್ಸಿಟಿಯ ಜಾನ್ B.ಟೇಲರ್ ಈ ನಿಯಮವನ್ನು ಪ್ರಸ್ತಾಪಿಸಿದರು.[೧೨]



ಹಣದುಬ್ಬರದ ಗುರಿಯ ದೃಷ್ಟಿಕೋನದಿಂದ ವಿತ್ತೀಯ ನೀತಿಯನ್ನು ರೂಪಿಸುವುದಕ್ಕೆ ನ್ಯೂಜಿಲೆಂಡ್ ಪ್ರವರ್ತಕವೆನಿಸಿತು. ಪ್ರಸಕ್ತ ಆಸ್ಟ್ರೇಲಿಯ,ಕೆನಡಾ, ಚಿಲಿ,ಕೊಲಂಬಿಯ,ಯ‌ೂರೋಜೋನ್, ನ್ಯೂಜಿಲೆಂಡ್, ನಾರ್ವೆ,ಐಸ್‌ಲ್ಯಾಂಡ್,ಫಿಲಿಪೈನ್ಸ್,ಪೋಲೆಂಡ್, ಸ್ವೀಡನ್,ಸೌತ್ ಆಫ್ರಿಕಾ,ಟರ್ಕಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇದನ್ನು ಬಳಸಲಾಗುತ್ತಿದೆ.



ದರ ಮಟ್ಟದ ಮೇಲೆ ಗುರಿಸಂಪಾದಿಸಿ
ಒಂದು ವರ್ಷದ CPI ಬೆಳವಣಿಗೆಯು ತರುವಾಯದ ವರ್ಷಗಳಲ್ಲಿ ಬಿಂಬಿತವಾಗುವುದನ್ನು ಹೊರತುಪಡಿಸಿ ದರ ಮಟ್ಟದ ಗುರಿಯು ಹಣದುಬ್ಬರದ ಗುರಿಯ ರೀತಿಯಲ್ಲೇ ಇರುತ್ತದೆ.ಹೀಗಾಗಿ ಕಾಲಾನಂತರದಲ್ಲಿ ಒಟ್ಟು ವಿತ್ತೀಯ ದರಮಟ್ಟ ಕದಲುವುದಿಲ್ಲ.



ಒಟ್ಟು ವಿತ್ತೀಯ ಮೊತ್ತಸಂಪಾದಿಸಿ
ಹಣದ ಪೂರೈಕೆಯಲ್ಲಿ ಸ್ಥಿರ ಬೆಳವಣಿಗೆಯ ಆಧಾರದ ಮೇಲೆ 1980ರ ದಶಕದಲ್ಲಿ ಅನೇಕ ರಾಷ್ಟ್ರಗಳು ವಿಧಾನವೊಂದನ್ನು ಬಳಸಿದವು. ಈ ವಿಧಾನವನ್ನು ನವೀಕರಿಸಿ ಹಣ ಮತ್ತು ಸಾಲ(M0, M1 ಇತರೆ)ದ ವಿವಿಧ ವರ್ಗಗಳನ್ನು ಸೇರಿಸಲಾಯಿತು. USA ನಲ್ಲಿ ಅಲಾನ್ ಗ್ರೀನ್‌ಸ್ಪಾನ್ ಅವರನ್ನು ಫೆಡ್ ಚೇರ್‌ಮನ್ ‌ಆಗಿ ಆಯ್ಕೆ ಮಾಡುವ ಮ‌ೂಲಕ ವಿತ್ತೀಯ ನೀತಿಯ ಈ ವಿಧಾನವನ್ನು ಸ್ಥಗಿತಗೊಳಿಸಲಾಯಿತು.

ಈ ವಿಧಾನಕ್ಕೆ ಕೆಲವು ಬಾರಿ ವಿತ್ತ ನಿಯಂತ್ರಣ ವಾದವೆಂದು ಕರೆಯಲಾಗುತ್ತದೆ.

ಅನೇಕ ವಿತ್ತೀಯ ನೀತಿ ಒಂದಲ್ಲ ಒಂದು ಸ್ವರೂಪದ ದರ ಸಂಕೇತದ ಮೇಲೆ ಗಮನಹರಿಸುತ್ತದೆ. ಈ ವಿಧಾನವು ವಿತ್ತೀಯ ಪ್ರಮಾಣಗಳ ಮೇಲೆ ಗಮನಹರಿಸುತ್ತದೆ.



ಸ್ಥಿರ ವಿನಿಮಯ ದರಸಂಪಾದಿಸಿ
ವಿದೇಶಿ ಕರೆನ್ಸಿಯ ಜತೆ ಸ್ಥಿರ ವಿನಿಮಯ ದರವನ್ನು ಕಾಯ್ದುಕೊಳ್ಳುವುದರತ್ತ ಈ ನೀತಿ ಆಧಾರಿತವಾಗಿದೆ. ಸ್ಥಿರ ವಿನಿಮಯ ದರಗಳ ವಿವಿಧ ಹಂತಗಳಿವೆ. ವಿತ್ತೀಯ ನೀತಿ ರೂಪಿಸುವ ರಾಷ್ಟ್ರದ ಜತೆ ಸ್ಥಿರ ವಿನಿಮಯ ದರ ಎಷ್ಟು ಕಟ್ಟುನಿಟ್ಟಾಗಿದೆ ಎಂಬ ಸಂಬಂಧದ ಮೇಲೆ ಅವುಗಳಿಗೆ ದರ್ಜೆ ನೀಡಲಾಗುತ್ತದೆ.

ಅಧಿಕೃತ ಸ್ಥಿರ ದರಗಳ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರ ಅಥವಾ ವಿತ್ತೀಯ ಪ್ರಾಧಿಕಾರವು ಸ್ಥಿರ ವಿನಿಮಯ ದರವನ್ನು ಘೋಷಿಸುತ್ತದೆ. ಆದರೆ ಆ ದರವನ್ನು ಕಾಯ್ದುಕೊಳ್ಳಲು ಸಕ್ರಿಯವಾಗಿ ಕರೆನ್ಸಿಯನ್ನು ಖರೀದಿಸುವುದಿಲ್ಲ ಅಥವಾ ಮಾರುವುದಿಲ್ಲ. ಬದಲಿಗೆ ಈ ದರವನ್ನು ಪರಿವರ್ತನೀಯತೆ-ರಹಿತ ಕ್ರಮಗಳಿಂದ(ಉದಾ: ಬಂಡವಾಳ ನಿಯಂತ್ರಣಗಳು, ಆಮದು/ರಫ್ತು ಪರವಾನಗಿಗಳು, ಇತರೆ)ಜಾರಿಗೆ ತರಲಾಗುತ್ತದೆ. ಈ ಪ್ರಕರಣದಲ್ಲಿ ಕಾಳಸಂತೆಯ ವಿನಿಮಯ ದರವಿರುತ್ತದೆ. ಅಲ್ಲಿ ಕರೆನ್ಸಿಯನ್ನು ಮಾರುಕಟ್ಟೆ/ಅನಧಿಕೃತ ದರದಲ್ಲಿ ಮಾರಾಟಮಾಡಲಾಗುತ್ತದೆ.

ಸ್ಥಿರ-ಪರಿವರ್ತನೀಯತೆ ವ್ಯವಸ್ಥೆಯಲ್ಲಿ,ವಿನಿಮಯ ದರ ಗುರಿ ಸಾಧನೆಗೆ ದಿನನಿತ್ಯದ ಆಧಾರದ ಮೇಲೆ ಕೇಂದ್ರ ಬ್ಯಾಂಕ್ ಅಥವಾ ವಿತ್ತೀಯ ಪ್ರಾಧಿಕಾರವು ಕರೆನ್ಸಿಯನ್ನು ಖರೀದಿಸುತ್ತದೆ ಮತ್ತು ಮಾರುತ್ತದೆ. ಆ ಗುರಿ ದರವು ಸ್ಥಿರ ಮಟ್ಟ ಅಥವಾ ಸ್ಥಿರ ಪಟ್ಟಿಯದ್ದಾಗಿರಬಹುದು. ಪಟ್ಟಿಯೊಳಗೆ ವಿನಿಮಯ ದರ ಕಾಯ್ದುಕೊಳ್ಳಲು ಖರೀದಿ ಅಥವಾ ಮಾರಾಟಕ್ಕೆ ವಿತ್ತೀಯ ಪ್ರಾಧಿಕಾರ ಮಧ್ಯಪ್ರವೇಶ ಮಾಡುವ ತನಕ ವಿನಿಮಯ ದರ ಏರುಪೇರಾಗುತ್ತದೆ. (ಈ ಪ್ರಕರಣದಲ್ಲಿ ಸ್ಥಿರ ಮಟ್ಟದೊಂದಿಗೆ ಸ್ಥಿರ ವಿನಿಮಯ ದರವನ್ನು ಪಟ್ಟಿಗಳೊಂದಿಗೆ ಸ್ಥಿರ ವಿನಿಮಯ ದರದ ವಿಶೇಷ ಪ್ರಕರಣದಂತೆ ಕಾಣಬಹುದು. ಅಲ್ಲಿ ಪಟ್ಟಿಗಳನ್ನು ಶೂನ್ಯಕ್ಕೆ ಇರಿಸಲಾಗುತ್ತದೆ).




ಕರೆನ್ಸಿ ಮಂಡಳಿ ನಿರ್ವಹಿಸುವ ಸ್ಥಿರ ವಿನಿಮಯ ದರಗಳ ವ್ಯವಸ್ಥೆಯಲ್ಲಿ ಸ್ಥಳೀಯ ಕರೆನ್ಸಿಯ ಪ್ರತಿಯೊಂದು ಅಂಶವು ವಿದೇಶಿ ಕರೆನ್ಸಿಯ ಒಂದಂಶದ ಬೆಂಬಲ ಹೊಂದಿರಬೇಕು.(ವಿನಿಮಯ ದರದ ಸರಿಪಡಿಸುವಿಕೆ) ಇದರಿಂದ ಸ್ಥಳೀಯ ವಿತ್ತೀಯ ಮ‌ೂಲವು ದೃಢ ಕರೆನ್ಸಿಯ ಬೆಂಬಲವಿಲ್ಲದೇ ಹಣದುಬ್ಬರ ಆಗದಿರುವುದನ್ನು ಖಾತರಿಪಡಿಸುತ್ತದೆ ಮತ್ತು ಸ್ಥಳೀಯ ಕರೆನ್ಸಿಯನ್ನು ದೃಢ(ವಿತ್ತೀಯ ನೀತಿ ರಾಷ್ಟ್ರದ)ಕರೆನ್ಸಿಗೆ ಪರವರ್ತಿಸಲು ಇಚ್ಛಿಸುವವರಿಗೆ ಸ್ಥಳೀಯ ಕರೆನ್ಸಿಯ ವ್ಯವಹಾರದ ಬಗ್ಗೆ ಚಿಂತೆಗಳನ್ನು ನಿವಾರಿಸುತ್ತದೆ.



ಡಾಲರೀಕರಣದಲ್ಲಿ ವಿದೇಶಿ ಕರೆನ್ಸಿಯನ್ನು(ಸಾಮಾನ್ಯವಾಗಿ US ಡಾಲರ್,ಆದ್ದರಿಂದ "ಡಾಲರೀಕರಣ" ಪದ)ವಿಶೇಷವಾಗಿ ಅಥವಾ ಸ್ಥಳೀಯ ಕರೆನ್ಸಿಗೆ ಸಮಾನಾಂತರವಾಗಿ ವಿನಿಮಯ ಮಾಧ್ಯಮವಾಗಿ ಮುಕ್ತವಾಗಿ ಬಳಸಲಾಗುತ್ತದೆ. ಸ್ಥಳೀಯ ಕರೆನ್ಸಿಯಲ್ಲಿ ಸ್ಥಳೀಯ ಜನರು ಎಲ್ಲ ನಂಬಿಕೆ ಕಳೆದುಕೊಂಡ ಕಾರಣ ಈ ಫಲಿತಾಂಶ ಬರುತ್ತದೆ ಅಥವಾ ಇದು ಸರ್ಕಾರದ ಒಂದು ನೀತಿಯಾಗಿರುತ್ತದೆ(ಸಾಮಾನ್ಯವಾಗಿ ಹಣದುಬ್ಬರ ನಿಯಂತ್ರಣಕ್ಕೆ ಮತ್ತು ವಿಶ್ವಾಸಾರ್ಹ ವಿತ್ತೀಯ ನೀತಿ ಬಿಂಬಿಸಲು)

ಈ ನೀತಿಗಳು ಅನೇಕ ವೇಳೆ ವಿತ್ತೀಯ ನೀತಿಯನ್ನು ವಿದೇಶಿ ಪ್ರಾಧಿಕಾರಕ್ಕೆ ಅಥವಾ ಸರ್ಕಾರಕ್ಕೆ ಬಿಟ್ಟುಕೊಡುತ್ತವೆ.ವಿದೇಶಿ ವಿನಿಮಯ ದರ ನಿರ್ವಹಣೆಗೆ ಸ್ಥಿರ ವಿತ್ತೀಯ ನೀತಿಯ ರಾಷ್ಟ್ರವು ಆಸರೆ ರಾಷ್ಟ್ರದ ವಿತ್ತೀಯ ನೀತಿಯೊಂದಿಗೆ ಸಂಯೋಜನೆ ಹೊಂದಬೇಕಾಗುತ್ತದೆ. ಸ್ಥಳೀಯ ವಿತ್ತೀಯ ನೀತಿಯು ಆಸರೆ ರಾಷ್ಟ್ರದ ಮೇಲೆ ಅವಲಿಂಬಿತವಾಗುವ ಮಟ್ಟವು ಬಂಡವಾಳ ಸಂಗ್ರಹಣೆ, ಮುಕ್ತತೆ, ಸಾಲದ ಮಾರ್ಗಗಳು ಮತ್ತು ಇತರೆ ಆರ್ಥಿಕ ಅಂಶಗಳನ್ನು ಆಧರಿಸಿದೆ.

ಇದನ್ನೂ ನೋಡಿ: ಸ್ಥಿರ ಕರೆನ್ಸಿಗಳ ಪಟ್ಟಿ



ಚಿನ್ನದ ಪ್ರಮಿತಿಸಂಪಾದಿಸಿ
Main article: Gold standard

ಚಿನ್ನದ ಪ್ರಮಿತಿ ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಚಿನ್ನದ ಗಟ್ಟಿಗಳ ಏಕಮಾನಗಳ ಮೇಲೆ ರಾಷ್ಟ್ರೀಯ ಕರೆನ್ಸಿಯನ್ನು ಅಳೆಯಲಾಗುತ್ತದೆ. ಮ‌ೂಲಕರೆನ್ಸಿಯನ್ನು ಇತರೆ ರಾಷ್ಟ್ರಗಳಿಗೆ ಮತ್ತು ಪೌರರ ಜತೆ ದಿನನಿತ್ಯ ಖರೀದಿಸುವ ಮತ್ತು ಮಾರುವ ಮ‌ೂಲಕ ಅದನ್ನು ಸ್ಥಿರವಾಗಿಡಲಾಗುತ್ತದೆ.(ಉದಾ:ಮುಕ್ತ ಪೇಟೆ ಕಾರ್ಯಾಚರಣೆಗಳು) ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಚಿನ್ನದ ಮಾರಾಟ ಅತೀ ಮುಖ್ಯವಾಗಿದೆ.

ಚಿನ್ನದ ಪ್ರಮಿತಿಯು "ಸ್ಥಿರ ವಿನಿಮಯ ದರ" ನೀತಿಯ ವಿಶೇಷ ಪ್ರಕರಣವೆಂದು ಪರಿಗಣಿಸಬಹುದು. ಚಿನ್ನದ ದರವನ್ನು "ಸರಕು ದರ ಸೂಚ್ಯಂಕ"ದ ವಿಶೇಷ ವಿಧ ಎಂದು ಪರಿಗಣಿಸಬಹುದು.

ಇಂದು ಜಗತ್ತಿನಲ್ಲಿ ಎಲ್ಲಿಯೂ ಇಂತಹ ವಿಧದ ವಿತ್ತೀಯ ನೀತಿ ಬಳಕೆಯಿಲ್ಲ.[ಸೂಕ್ತ ಉಲ್ಲೇಖನ ಬೇಕು] ಆದರೆ 1971ಕ್ಕಿಂತ ಮುಂಚಿತವಾಗಿ ವಿಶ್ವಾದ್ಯಂತ ಚಿನ್ನದ ಪ್ರಮಿತಿಯ ಒಂದು ಸ್ವರೂಪವು ವ್ಯಾಪಕವಾಗಿ ಬಳಕೆಯಲ್ಲಿತ್ತು. ವಿವರಗಳಿಗೆ ನೋಡಿ ಬ್ರೆಟ್ಟನ್ ವೂಡ್ಸ್ ಸಿಸ್ಟಮ್ .
ಅದರ ಮುಖ್ಯ ಅನುಕೂಲಗಳು ಸರಳತೆ ಮತ್ತು ಪಾರದರ್ಶಕತೆ




ವಿವಿಧ ರಾಷ್ಟ್ರಗಳ ನೀತಿಗಳುಸಂಪಾದಿಸಿ
◾ಆಸ್ಟ್ರೇಲಿಯ- ಹಣದುಬ್ಬರ ಗುರಿ
◾ಬ್ರೆಜಿಲ್-ಹಣದುಬ್ಬರ ಗುರಿ
◾ಕೆನಡಾ-ಹಣದುಬ್ಬರ ಗುರಿ
◾ಚಿಲಿ-ಹಣದುಬ್ಬರ ಗುರಿ
◾ಚೀನ - ವಿತ್ತೀಯ ಗುರಿ ಮತ್ತು ಕರೆನ್ಸಿ ಸಂಗ್ರಹದ ಮೇಲೆ ಅದರ ಗುರಿ
◾ಯೂರೋಜೋನ್-ಹಣದುಬ್ಬರ ಗುರಿ
◾ಹಾಂಕಾಂಗ್ - ಕರೆನ್ಸಿ ಮಂಡಳಿ (US ಡಾಲರ್‌ಗೆ ಸ್ಥಿರ)
◾ಭಾರತ - ಹಣದುಬ್ಬರ ಗುರಿ
◾ನ್ಯೂಜಿಲೆಂಡ್-ಹಣದುಬ್ಬರ ಗುರಿ
◾ನಾರ್ವೆ-ಹಣದುಬ್ಬರ ಗುರಿ
◾ಸಿಂಗಪುರ-ವಿನಿಮಯ ದರ ಗುರಿ
◾ಸೌತ್ ಆಫ್ರಿಕಾ-ಹಣದುಬ್ಬರ ಗುರಿ
◾ಸ್ವಿಜರ್‌ಲ್ಯಾಂಡ್ - ಹಣದುಬ್ಬರ ಗುರಿ [೧೩]
◾ಟರ್ಕಿ - ಹಣದುಬ್ಬರ ಗುರಿ
◾ಯುನೈಟೆಡ್ ಕಿಂಗ್‌ಡಮ್[೧೪]- ಹಣದುಬ್ಬರ ಗುರಿ, 'ಉತ್ಪಾದನೆ ಮತ್ತು ಉದ್ಯೋಗ' ಕುರಿತ ಎರಡನೇ ಗುರಿಗಳ ಜತೆ.
◾ಯುನೈಟೆಡ್ ಸ್ಟೇಟ್ಸ್[೧೫]-ಮಿಶ್ರಿತ ನೀತಿ(1980ರ ದಶಕದಿಂದ ಇದು "ಟೈಲರ್ ನಿಯಮ"ದಿಂದ ಸೂಕ್ತ ಹೊಂದಿಕೆ/ಬಣ್ಣಿತವಾಗಿದೆ. ಹಣದುಬ್ಬರ ಆಘಾತಗಳು ಮತ್ತು ಫಲಿತಾಂಶಕ್ಕೆ ಫೆಡ್ ನಿಧಿಗಳ ದರ ಸ್ಪಂದಿಸುತ್ತದೆಂದು ಅದು ತೋರಿಸುತ್ತದೆ.
Further information: Monetary policy of the USA





ವಿತ್ತೀಯ ನೀತಿಯ ಸಾಧನಗಳುಸಂಪಾದಿಸಿ
ವಿತ್ತೀಯ ನೆಲೆಗಟ್ಟುಸಂಪಾದಿಸಿ
ವಿತ್ತೀಯ ನೀತಿಯನ್ನು ವಿತ್ತೀಯ ನೆಲೆಗಟ್ಟಿನ ಗಾತ್ರವನ್ನು ಬದಲಿಸುವ ಮ‌ೂಲಕ ಅನುಷ್ಠಾನಕ್ಕೆ ತರಬಹುದು.[[]] ಇದು ನೇರವಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಮೊತ್ತವನ್ನು ಬದಲಿಸುತ್ತದೆ. ವಿತ್ತೀಯ ನೆಲೆಗಟ್ಟನ್ನು ಬದಲಿಸಲು ಕೇಂದ್ರ ಬ್ಯಾಂಕ್ ಮುಕ್ತ ಪೇಟೆ ಕಾರ್ಯಾಚರಣೆಗಳನ್ನು ಬಳಸಬಹುದು. ಕೇಂದ್ರ ಬ್ಯಾಂಕ್ ದೃಢಕರೆನ್ಸಿಯ ವಿನಿಮಯವಾಗಿ ಸಾಲಪತ್ರಗಳನ್ನು ಖರೀದಿಸುತ್ತದೆ/ಮಾರುತ್ತದೆ.
ಕೇಂದ್ರ ಬ್ಯಾಂಕ್ ದೃಢ ಕರೆನ್ಸಿಯ ಪಾವತಿಯ ವಿತರಣೆ/ಸಂಗ್ರಹಣೆ ಮಾಡಿದರೆ, ಆರ್ಥಿಕತೆಯಲ್ಲಿ ಕರೆನ್ಸಿಯ ಮೊತ್ತದಲ್ಲಿ ಬದಲಾವಣೆಯಾಗಿ, ವಿತ್ತೀಯ ನೆಲೆಗಟ್ಟಿನಲ್ಲಿ ಮಾರ್ಪಾಟು ಮಾಡುತ್ತದೆ.




ಮೀಸಲು ಅಗತ್ಯಗಳುಸಂಪಾದಿಸಿ
ವಿತ್ತೀಯ ಪ್ರಾಧಿಕಾರವು ಬ್ಯಾಂಕುಗಳ ಮೇಲೆ ನಿಯಂತ್ರಣ ಹೇರುತ್ತದೆ. ಕೇಂದ್ರ ಬ್ಯಾಂಕ್ ಜತೆ ಬ್ಯಾಂಕುಗಳು ಮೀಸಲು ನಿಧಿಯಾಗಿ ಹೊಂದಿರುವ ಒಟ್ಟು ಆಸ್ತಿಯ ಪ್ರಮಾಣವನ್ನು ಬದಲಿಸುವ ಮ‌ೂಲಕ ವಿತ್ತೀಯ ನೀತಿಯನ್ನು ಅನುಷ್ಠಾನಕ್ಕೆ ತರಬಹುದು. ಬ್ಯಾಂಕುಗಳು ತಮ್ಮ ಆಸ್ತಿಯಲ್ಲಿ ಸಣ್ಣ ಭಾಗವಾಗಿ ತಕ್ಷಣದ ವಾಪಸಾತಿಗೆ ಲಭ್ಯವಿರುವ ನಗದನ್ನು ಮಾತ್ರ ನಿರ್ವಹಿಸುತ್ತದೆ;ಉಳಿದವನ್ನು ದ್ರವ್ಯತೆಯಿಲ್ಲದ ಆಸ್ತಿಗಳಾದ ಅಡಮಾನಗಳು ಮತ್ತು ಸಾಲಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ದ್ರವ್ಯತೆ ನಗದಿನ ಒಟ್ಟು ಆಸ್ತಿಯ ಪ್ರಮಾಣದಲ್ಲಿ ಬದಲಾವಣೆ ಮಾಡುವ ಮ‌ೂಲಕ, ಫೆಡರಲ್ ರಿಸರ್ವ್ ಸಾಲವಾಗಿ ನೀಡುವ ನಿಧಿಗಳ ಲಭ್ಯತೆಯಲ್ಲಿ ಬದಲಾವಣೆ ಮಾಡುತ್ತದೆ. ಇದು ಹಣದ ಪೂರೈಕೆಯಲ್ಲಿ ಬದಲಾವಣೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇಂದ್ರ ಬ್ಯಾಂಕುಗಳು ಆಗಾಗ್ಗೆ ಮೀಸಲು ಅಗತ್ಯಗಳಲ್ಲಿ ಸಾಂಕೇತಿಕ ಬದಲಾವಣೆ ಮಾಡುವುದಿಲ್ಲ. ಏಕೆಂದರೆ ಸಾಲದ ವೃದ್ಧಿಯಿಂದ ಹಣದ ಪೂರೈಕೆಯಲ್ಲಿ ಏರುಪೇರಿನ ಬದಲಾವಣೆಯನ್ನು ಸೃಷ್ಟಿಸುತ್ತದೆ.



ರಿಯಾಯಿತಿ ದರದ ಸಾಲ ವಿಭಾಗಸಂಪಾದಿಸಿ
ಅನೇಕ ಕೇಂದ್ರ ಬ್ಯಾಂಕುಗಳು ಅಥವಾ ಹಣಕಾಸು ಸಚಿವಾಲಯಗಳು ತಮ್ಮ ರಾಷ್ಟ್ರದೊಳಗಿನ ಹಣಕಾಸು ಸಂಸ್ಥೆಗಳಿಗೆ ನಿಧಿಗಳನ್ನು ಸಾಲವಾಗಿ ನೀಡುವ ಅಧಿಕಾರ ಹೊಂದಿರುತ್ತವೆ. ಪ್ರಸಕ್ತ ಸಾಲಗಳಿಗೆ ಆಹ್ವಾನಿಸುವ ಮ‌ೂಲಕ ಅಥವಾ ಹೊಸ ಸಾಲಗಳನ್ನು ವಿಸ್ತರಿಸುವ ಮ‌ೂಲಕ ವಿತ್ತೀಯ ಪ್ರಾಧಿಕಾರವು ನೇರವಾಗಿ ಹಣದ ಪೂರೈಕೆಯ ಗಾತ್ರವನ್ನು ಬದಲಿಸಬಹುದು.






ಬಡ್ಡಿ ದರಗಳುಸಂಪಾದಿಸಿ
ವಿತ್ತೀಯ ಪೂರೈಕೆಯ ಪರಿಮಿತಿಯನ್ನು ಪರೋಕ್ಷ ವಾಗಿ ಸಾಮಾನ್ಯ ಬಡ್ಡಿ ದರವನ್ನು ಹೆಚ್ಚಿಸುವ ಮ‌ೂಲಕ ಸಾಧಿಸಬಹುದು. ವಿವಿಧ ರಾಷ್ಟ್ರಗಳಲ್ಲಿನ ವಿತ್ತೀಯ ಅಧಿಕಾರವರ್ಗಕ್ಕೆ ಆರ್ಥಿಕ-ವಿಸ್ತಾರದ ಬಡ್ಡಿದರಗಳ ನಿಯಂತ್ರಣದಲ್ಲಿ ಭಿನ್ನ ಮಟ್ಟಗಳನ್ನು ಹೊಂದಿರುತ್ತವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಫೆಡರಲ್ ರಿಸರ್ವ್ ರಿಯಾಯಿತಿ ದರವನ್ನು ನಿಗದಿ ಮಾಡಬಹುದು.ಮುಕ್ತ ಪೇಟೆ ಕಾರ್ಯಾಚರಣೆಗಳ ಮ‌ೂಲಕ ಇಚ್ಛಿತ ಫೆಡರಲ್ ನಿಧಿಗಳ ದರವನ್ನು ಸಾಧಿಸಬಹುದು. ಈ ದರವು ಇತರೆ ಮಾರುಕಟ್ಟೆ ಬಡ್ಡಿದರಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದು. ಆದರೆ ಪರಿಪೂರ್ಣ ಸಂಬಂಧ ಇರುವುದಿಲ್ಲ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮುಕ್ತ ಪೇಟೆ ಕಾರ್ಯಾಚರಣೆಗಳು ಸಾಲಪತ್ರ ಮಾರುಕಟ್ಟೆಯ ಒಟ್ಟು ಗಾತ್ರಕ್ಕೆ ಸಂಬಂಧಿಸಿದಂತೆ ಸಣ್ಣ ಭಾಗವನ್ನು ಹೊಂದಿದೆ. ವಿತ್ತೀಯ ನೆಲೆಗಟ್ಟು ಮತ್ತು ಬಡ್ಡಿದರ ಎರಡಕ್ಕೂ ಸ್ವತಂತ್ರ ಗುರಿಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಏಕೆಂದರೆ ಅವೆರಡೂ ಏಕೈಕ ಸಾಧನ- ಮುಕ್ತ ಪೇಟೆ ಕಾರ್ಯಾಚರಣೆಗಳಿಂದ ರೂಪಾಂತರ ಹೊಂದಿವೆ; ಯಾವುದನ್ನು ನಿಯಂತ್ರಿಸಬೇಕೆಂಬುದನ್ನು ಆಯ್ಕೆ ಮಾಡಬೇಕು.

ಇತರೆ ರಾಷ್ಟ್ರಗಳಲ್ಲಿ, ವಿತ್ತೀಯ ಪ್ರಾಧಿಕಾರವು ಸಾಲಗಳು, ಉಳಿತಾಯ ಖಾತೆಗಳು ಅಥವಾ ಇತರೆ ಹಣಕಾಸು ಆಸ್ತಿಗಳ ಮೇಲೆ ನಿರ್ದಿಷ್ಟ ಬಡ್ಡಿದರಗಳ ಆದೇಶ ನೀಡಲು ಸಮರ್ಥವಾಗಬಹುದು. ತನ್ನ ನಿಯಂತ್ರಣದಲ್ಲಿರುವ ಬಡ್ಡಿದರವನ್ನು ಏರಿಸುವ ಮ‌ೂಲಕ ವಿತ್ತೀಯ ಪ್ರಾಧಿಕಾರವು ಹಣದ ಪೂರೈಕೆಯನ್ನು ಪರಿಮಿತಗೊಳಿಸಬಹುದು. ಏಕೆಂದರೆ ಹೆಚ್ಚಿನ ಬಡ್ಡಿದರಗಳು ಉಳಿತಾಯಗಳಿಗೆ ಪ್ರೋತ್ಸಾಹಿಸುತ್ತವೆ ಮತ್ತು ಸಾಲ ಪಡೆಯಲು ನಿರುತ್ಸಾಹಗೊಳಿಸುತ್ತವೆ. ಇವೆರಡೂ ಪರಿಣಾಮಗಳಲ್ಲಿ ಹಣದ ಪೂರೈಕೆಯ ಗಾತ್ರವನ್ನು ತಗ್ಗಿಸುತ್ತದೆ.



ಕರೆನ್ಸಿ ಮಂಡಳಿಸಂಪಾದಿಸಿ
Main article: currency board

ಕರೆನ್ಸಿ ಮಂಡಳಿಯು ವಿತ್ತೀಯ ವ್ಯವಸ್ಥೆಯಾಗಿದ್ದು,ರಾಷ್ಟ್ರದ ವಿತ್ತೀಯ ನೆಲೆಗಟ್ಟನ್ನು ಇತರ ದೇಶದ ವಿತ್ತೀಯ ನೆಲೆಗಟ್ಟಿನೊಂದಿಗೆ ಭದ್ರಪಡಿಸುತ್ತದೆ. ಅದು ದೃಢ ಸ್ಥಿರ ವಿನಿಮಯ ದರವಾಗಿ ಕಾರ್ಯನಿರ್ವಹಿಸುತ್ತದೆ.ಅಲ್ಲಿ ಚಲಾವಣೆಯಲ್ಲಿರುವ ಸ್ಥಳೀಯ ಕರೆನ್ಸಿಗೆ ಬೆಂಬಲಿತ ರಾಷ್ಟ್ರದ ವಿದೇಶಿ ಕರೆನ್ಸಿಯು ಸ್ಥಿರದರದಲ್ಲಿ ಬೆಂಬಲವಾಗಿರುತ್ತದೆ.
ಹೀಗೆ, ಸ್ಥಳೀಯ ವಿತ್ತೀಯ ನೆಲೆಗಟ್ಟಿನ ಬೆಳವಣಿಗೆಗೆ ಕರೆನ್ಸಿ ಮಂಡಳಿಯಲ್ಲಿ ಸಮಾನ ಮೊತ್ತದ ವಿದೇಶಿ ಕರೆನ್ಸಿಯನ್ನು ಮೀಸಲುನಿಧಿಯಾಗಿ ಇರಿಸಬೇಕು. ಇದು ಸ್ಥಳೀಯ ವಿತ್ತೀಯ ಪ್ರಾಧಿಕಾರಕ್ಕೆ ಹಣದುಬ್ಬರ ಉಂಟುಮಾಡುವ ಅಥವಾ ಇತರೆ ಉದ್ದೇಶಗಳನ್ನು ಅನುಸರಿಸುವ ಸಾಧ್ಯತೆಯನ್ನು ಸೀಮಿತಗೊಳಿಸುತ್ತದೆ. ಕರೆನ್ಸಿ ಮಂಡಳಿಯ ರಚನೆಯ ಮುಖ್ಯ ತಾರ್ಕಿಕವಿವರಣೆಯು ಮ‌ೂರು ಹಂತಗಳನ್ನು ಹೊಂದಿದೆ:
1.ಆಸರೆ ರಾಷ್ಟ್ರದ ವಿತ್ತೀಯ ವಿಶ್ವಾಸಾರ್ಹತೆಯನ್ನು ಸೂಚಿಸುವುದು;
2.ಆಸರೆ ರಾಷ್ಟ್ರದೊಂದಿಗೆ ಸ್ಥಿರ ವಿನಿಮಯ ದರವನ್ನು ಕಾಯ್ದುಕೊಳ್ಳುವುದು;
3.ವಿನಿಮಯ ದರದೊಂದಿಗೆ ವಿಶ್ವಾಸಾರ್ಹತೆ ಸ್ಥಾಪಿಸುವುದು(ಡಾಲರೀಕರಣ ವ್ಯಾಪ್ತಿಯ ಹೊರಗೆ ಕರೆನ್ಸಿ ಮಂಡಳಿ ವ್ಯವಸ್ಥೆಯು ಸ್ಥಿರ ವಿನಿಮಯ ದರಗಳ ಕಠಿಣ ಸ್ವರೂಪ)
ಸೈದ್ಧಾಂತಿಕವಾಗಿ ರಾಷ್ಟ್ರವು ಸ್ಥಳೀಯ ಕರೆನ್ಸಿಯನ್ನು ಒಂದಕ್ಕಿಂತ ಹೆಚ್ಚು ವಿದೇಶಿ ಕರೆನ್ಸಿಯ ಜತೆ ನಿಗದಿಮಾಡಲು ಸಾಧ್ಯ. ಆದರೆ ಆಚರಣೆಯಲ್ಲಿ ಇದು ಸಂಭವಿಸಿಲ್ಲ(ಸರಳ ಏಕೈಕ ಕರೆನ್ಸಿ ಮಂಡಳಿಗಿಂತ ಇದನ್ನು ನಡೆಸುವುದು ಹೆಚ್ಚು ಜಟಿಲ) ಚಿನ್ನದ ಪ್ರಮಿತಿಯು ಕರೆನ್ಸಿಯ ಮಂಡಳಿಯ ವಿಶೇಷ ನಿದರ್ಶನವಾಗಿದ್ದು,ಅದರಲ್ಲಿ ರಾಷ್ಟ್ರೀಯ ಕರೆನ್ಸಿಯ ಮೌಲ್ಯವನ್ನು ವಿದೇಶಿ ಕರೆನ್ಸಿಯ ಬದಲಿಗೆ ಚಿನ್ನದ ಮೌಲ್ಯದ ಜತೆ ಕೊಂಡಿ ಕಲ್ಪಿಸಲಾಗಿದೆ.

ಕರೆನ್ಸಿ ಮಂಡಳಿಯು ಅಧಿಕೃತ ಹಣವನ್ನು ವಿತರಿಸುವುದಿಲ್ಲ. ಆದರೆ ಬದಲಿಗೆ ತನ್ನ ಬೊಕ್ಕಸದಲ್ಲಿರುವ ವಿದೇಶಿ ಕರೆನ್ಸಿಯ ಪ್ರತಿ ಏಕಮಾನಕ್ಕೆ ಸ್ಥಳೀಯ ಕರೆನ್ಸಿಯ ಅನೇಕ ಏಕಮಾನಗಳ ಜತೆಯನ್ನು ವಿತರಿಸುತ್ತದೆ. ಕೇಂದ್ರ ಬ್ಯಾಂಕಿನಲ್ಲಿ ಸ್ಥಳೀಯ ಬ್ಯಾಂಕುಗಳು ಹೊಂದಿರುವ ಹೆಚ್ಚಿನ ಠೇವಣಿಗಳು ಮತ್ತು (ಆರಂಭದಲ್ಲಿ) ರಫ್ತು ಆಧಾರಿತ ಸಂಸ್ಥೆಗಳು ತಮ್ಮ ಸ್ಥಳೀಯ ಬ್ಯಾಂಕುಗಳಲ್ಲಿ ಹೊಂದಿರುವ ಹೆಚ್ಚಿನ ಠೇವಣಿಗಳು(ನಿವ್ವಳ)ಆ ರಾಷ್ಟ್ರದ ಪಾವತಿ ಶಿಲ್ಕುಗಳಲ್ಲಿ ಹೆಚ್ಚುವರಿ ಮೊತ್ತವನ್ನು ಬಿಂಬಿಸುತ್ತವೆ. ದೇಶೀಯ ಹಣ ಪೂರೈಕೆಯ ಪ್ರಗತಿಯು ಕೇಂದ್ರ ಬ್ಯಾಂಕ್‌ನಲ್ಲಿ ಬ್ಯಾಂಕುಗಳು ಹೊಂದಿರುವ ಹೆಚ್ಚುವರಿ ಠೇವಣಿಗಳಿಗೆ ಈಗ ಕೊಂಡಿ ಕಲ್ಪಿಸಿದೆ. ಅದು ಕೇಂದ್ರ ಬ್ಯಾಂಕ್‌ನ ಕೈಯಲ್ಲಿರುವ ಹೆಚ್ಚುವರಿ ದೃಢ ವಿದೇಶಿ ವಿನಿಮಯ ಮೀಸಲುಗಳಿಗೆ ಸಮನಾಗಿದೆ. ಕರೆನ್ಸಿಯ ಸ್ಥಿರತೆಯ ಪ್ರಶ್ನೆಗಳು ಅನ್ವಯವಾಗದಿರುವುದು ಈ ವ್ಯವಸ್ಥೆಯ ಸತ್ವವಾಗಿದೆ. ಇದರ ನ್ಯೂನತೆಗಳು ಏನೆಂದರೆ ಇತರೆ ಸ್ಥಳೀಯ ಪರಿಗಣನೆಗಳಿಗೆ ಅನ್ವಯಿಸುವಂತೆ ವಿತ್ತೀಯ ನೀತಿಯನ್ನು ರೂಪಿಸಲು ರಾಷ್ಟ್ರಕ್ಕೆ ಸಾಮರ್ಥ್ಯವಿರುವುದಿಲ್ಲ ಮತ್ತು ರಾಷ್ಟ್ರ ಮತ್ತು ಅದರ ವ್ಯಾಪಾರಿ ಸಹಯೋಗಿ ರಾಷ್ಟ್ರಗಳ ಜತೆ ಆರ್ಥಿಕ ಭಿನ್ನಾಭಿಪ್ರಾಯಗಳನ್ನು ಪರಿಗಣಿಸದೇ,ಸ್ಥಿರ ವಿನಿಮಯ ದರವು ದೊಡ್ಡ ಪ್ರಮಾಣದಲ್ಲಿ ರಾಷ್ಟ್ರದ ವ್ಯಾಪಾರದ ಷರತ್ತುಗಳನ್ನು ಕೂಡ ಸ್ಥಿರಗೊಳಿಸುತ್ತದೆ.

ಹಾಂಕಾಂಗ್ ಬಲ್ಗೇರಿಯದ ರೀತಿಯಲ್ಲಿ ಕರೆನ್ಸಿ ಮಂಡಳಿಯನ್ನು ನಿರ್ವಹಿಸುತ್ತದೆ. ಎಸ್ಟೋನಿಯ ಸ್ವಾತಂತ್ರ್ಯ ಲಭಿಸಿದ ನಂತರ 1992ರಲ್ಲಿ ಡ್ಯುಟಸ್ಚ್‌ಮಾರ್ಕ್ ಜತೆ ಸ್ಥಿರವಾದ ಕರೆನ್ಸಿ ಮಂಡಳಿಯನ್ನು ಸ್ಥಾಪಿಸಿತು. ಈ ನೀತಿಯನ್ನು ಆ ರಾಷ್ಟ್ರದ ತರುವಾಯ ಆರ್ಥಿಕ ಯಶಸ್ಸಿನ ಮ‌ೂಲಾಧಾರವೆಂದು ಕಾಣಲಾಯಿತು.(ಎಸ್ಟೋನಿಯ ಕರೆನ್ಸಿ ಮಂಡಳಿಯ ವಿಸ್ತೃತ ವಿವರಣೆಗೆ ಎಕಾನಮಿ ಆಫ್ ಎಸ್ಟೋನಿಯವನ್ನು ನೋಡಿ). ತೀವ್ರ ಆರ್ಥಿಕ ಹಿಂಜರಿತದ ನಂತರ ಅರ್ಜೆಂಟಿನಾ ತನ್ನ ಕರೆನ್ಸಿ ಮಂಡಳಿಯನ್ನು 2002 ಜನವರಿಯಲ್ಲಿ ತೊರೆಯಿತು. ಕರೆನ್ಸಿ ಮಂಡಳಿಗಳು ಮಾರ್ಪಡಿಸಲಾಗದ್ದಲ್ಲವೆಂಬ ಸತ್ಯವನ್ನು ಇದು ಸ್ಪಷ್ಟಪಡಿಸುತ್ತದೆ. ವಿದೇಶಿ ವಿನಿಮಯ ವ್ಯಾಪಾರಿಗಳ ಸಟ್ಟಾ ವ್ಯವಹಾರದ ಹಿನ್ನೆಲೆಯಲ್ಲಿ ಅದನ್ನು ತ್ಯಜಿಸಬಹುದು. ಡೇಟನ್ ಪೀಸ್ ಅಗ್ರೀಮೆಂಟ್‌ಗೆ 1995ರಲ್ಲಿ ಅಂಕಿತ ಹಾಕಿದ ಬಳಿಕ, ಬೋಸ್ನಿಯ ಮತ್ತು ಹರ್ಜೆಗೋವಿನ ಡ್ಯೂಟಸ್ಚ್‌ಮಾರ್ಕ್ ಜತೆ ಹೊಂದಾಣಿಕೆಯ ಕರೆನ್ಸಿ ಮಂಡಳಿಯನ್ನು ಸ್ಥಾಪಿಸಿದವು.(2002ರಿಂದೀಚೆಗೆ ಯ‌ೂರೊದಿಂದ ಬದಲಾಗಿದೆ)

ಸ್ವತಂತ್ರ ವಿತ್ತೀಯ ನೀತಿಯ ಸುಸ್ಥಿರತೆ ಕಷ್ಟವಾಗಿ ಕಾಣುವ ಸಣ್ಣ ಮತ್ತು ಮುಕ್ತ ಆರ್ಥಿಕತೆಗಳಿಗೆ ಕರೆನ್ಸಿಮಂಡಳಿ ಅನುಕೂಲಗಳನ್ನು ಹೊಂದಿವೆ. ಕಡಿಮೆ ಹಣದುಬ್ಬರಕ್ಕೆ ಅದು ವಿಶ್ವಾಸಾರ್ಹ ಬದ್ಧತೆಯನ್ನು ಅವು ರೂಪಿಸಲು ಸಾಧ್ಯ.

ವಿತ್ತೀಯ ನೀತಿಯ ಇತಿಹಾಸ(History of financial polcy)

ವಿತ್ತೀಯ ನೀತಿಯ ಇತಿಹಾಸ

ವಿತ್ತೀಯ ನೀತಿಯು ಮುಖ್ಯವಾಗಿ ಬಡ್ಡಿದರ ಮತ್ತು ಸಾಲಕ್ಕೆ ಸಂಬಂಧಿಸಿದೆ. ಅನೇಕ ಶತಮಾನಗಳವರೆಗೆ, ಎರಡು ಸ್ವರೂಪಗಳ ವಿತ್ತೀಯ ನೀತಿ ಜಾರಿಯಲ್ಲಿತ್ತು.(i) ನಾಣ್ಯಗಳ ಬಗ್ಗೆ ನಿರ್ಧಾರಗಳು, (ii)ಕಾಗದದ ಹಣ ಮುದ್ರಿಸುವ ನಿರ್ಧಾರಗಳು ಮತ್ತು ಸಾಲದ ಸೃಷ್ಟಿ. ವಿತ್ತೀಯ ಪ್ರಾಧಿಕಾರದ ಭಾಗವೆಂದು ಈಗ ಭಾವಿಸಿದ ಬಡ್ಡಿ ದರಗಳು ಆ ಸಂದರ್ಭದಲ್ಲಿ ವಿತ್ತೀಯ ನೀತಿಯ ಇತರೆ ಸ್ವರೂಪಗಳ ಜತೆ ಸಾಮಾನ್ಯವಾಗಿ ಸಮನ್ವಯತೆ ಹೊಂದಿರಲಿಲ್ಲ. ವಿತ್ತೀಯ ನೀತಿಯನ್ನು ಕಾರ್ಯಾಂಗದ ನಿರ್ಧಾರವೆಂದು ಕಾಣಲಾಗುತ್ತಿತ್ತು. ನಾಣ್ಯವನ್ನು ಟಂಕಿಸುವ ಅಧಿಕಾರ ಅಥವಾ ನಾಣ್ಯಟಂಕನ ಲಾಭ ಗಳಿಸುವ ಪ್ರಾಧಿಕಾರದ ಕೈಯಲ್ಲಿ ಸಾಮಾನ್ಯವಾಗಿ ವಿತ್ತೀಯ ನೀತಿ ಇರುತ್ತಿತ್ತು. ಹೆಚ್ಚು ವ್ಯಾಪಾರ ಜಾಲಗಳ ಬರುವಿಕೆಯೊಂದಿಗೆ,ಚಿನ್ನ ಮತ್ತು ಬೆಳ್ಳಿಯ ನಡುವೆ ಹಾಗೂ ಸ್ಥಳೀಯ ಕರೆನ್ಸಿ ಮತ್ತು ವಿದೇಶಿ ಕರೆನ್ಸಿಗಳ ನಡುವೆ ದರನಿಗದಿ ಮಾಡುವ ಸಾಮರ್ಥ್ಯ ಲಭಿಸಿತು. ಈ ಅಧಿಕೃತ ಬೆಲೆಯು ಮಾರುಕಟ್ಟೆ ದರಕ್ಕಿಂತ ವ್ಯತ್ಯಾಸ ಹೊಂದಿದ್ದರೂ ಕಾನೂನಿನ ಮ‌ೂಲಕ ಜಾರಿಗೆ ತರುವುದು ಸಾಧ್ಯವಾಗಿತ್ತು.

ಬ್ಯಾಂಕ್ ಆಫ್ ಇಂಗ್ಲೆಂಡ್ 1694ರಲ್ಲಿ ಸ್ಥಾಪನೆ ಆಗುವುದರೊಂದಿಗೆ, ನೋಟುಗಳನ್ನು ಚಿನ್ನದ ಬೆಂಬಲದೊಂದಿಗೆ ಮುದ್ರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು.ಹೀಗಾಗಿ ಕಾರ್ಯಾಂಗದಿಂದ ಪ್ರತ್ಯೇಕವಾದ ವಿತ್ತೀಯ ನೀತಿಯ ಕಲ್ಪನೆ ಕುಡಿಯೊಡೆಯಲು ಪ್ರಾರಂಭಿಸಿತು.[೪]





ನಾಣ್ಯಗಳ ಮೌಲ್ಯವನ್ನು ಕಾಯ್ದುಕೊಳ್ಳುವುದು, ನಾಣ್ಯ ರೂಪದ ಹಣಕ್ಕೆ ಸಮಾನವಾಗಿ ಮಾರಾಟವಾಗುವ ನೋಟುಗಳ ಮುದ್ರಣ ಹಾಗೂ ನಾಣ್ಯಗಳು ಚಲಾವಣೆಯಿಂದ ನಿರ್ಗಮಿಸದಂತೆ ತಪ್ಪಿಸುವುದು ವಿತ್ತೀಯ ನೀತಿಯ ಗುರಿಯಾಗಿತ್ತು. ಕೈಗಾರೀಕೃತ ರಾಷ್ಟ್ರಗಳು ಕೇಂದ್ರ ಬ್ಯಾಂಕುಗಳನ್ನು ಸ್ಥಾಪಿಸಿದ ಆಗಿನ ಉದ್ದೇಶವು ಚಿನ್ನದ ಪ್ರಮಿತಿಗೆ ರಾಷ್ಟ್ರದ ಕರೆನ್ಸಿ ನಿಗದಿಯನ್ನು ಕಾಯ್ದುಕೊಳ್ಳುವ ಇಚ್ಛೆ ಮತ್ತು ಚಿನ್ನ ಬೆಂಬಲಿತ ಕರೆನ್ಸಿಗಳ ಜತೆ ಉಪಕ್ರಮಗಳೊಂದಿಗೆ ವ್ಯಾಪಾರ ಮಾಡುವುದಕ್ಕೆ ಸಂಬಂಧಿಸಿತ್ತು. ಈ ಗುರಿಯ ಸಾಧನೆಗೆ, ಕೇಂದ್ರ ಬ್ಯಾಂಕುಗಳು ಚಿನ್ನದ ಪ್ರಮಿತಿಯ ಭಾಗವಾಗಿ, ಸ್ವಂತ ಸಾಲದಾರರಿಗೆ ಮತ್ತು ದ್ರವ್ಯತೆ ಅಗತ್ಯವಾದ ಇತರೆ ಬ್ಯಾಂಕುಗಳಿಗೆ ಬಡ್ಡಿದರಗಳನ್ನು ವಿಧಿಸಲು ಪ್ರಾರಂಭಿಸಿತು. ಚಿನ್ನದ ಪ್ರಮಿತಿಯ ನಿರ್ವಹಣೆಗೆ ಬಹುತೇಕ ಬಡ್ಡಿದರಗಳನ್ನು ಪ್ರತಿತಿಂಗಳೂ ಹೊಂದಾಣಿಕೆ ಮಾಡುವುದು ಅಗತ್ಯವಾಗಿತ್ತು.


ಕೈಗಾರೀಕೃತ ರಾಷ್ಟ್ರಗಳು 1870-1920ರ ಅವಧಿಯಲ್ಲಿ ಕೇಂದ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿದವು. ಅವುಗಳಲ್ಲಿ ಕೊನೆಯದು 1913ರಲ್ಲಿ ಸ್ಥಾಪಿತವಾದ ಫೆಡರಲ್ ರಿಸರ್ವ್.[೫] ಈ ಹಂತದಲ್ಲಿ "ಅಂತಿಮ ಋಣದಾತ"ನೆಂಬ ಕೇಂದ್ರ ಬ್ಯಾಂಕ್ ಪಾತ್ರವು ಮನವರಿಕೆಯಾಯಿತು. ಆರ್ಥಿಕತೆಯಲ್ಲಿ ಗರಿಷ್ಠ ಕ್ರಾಂತಿಯ ಕಾರಣದಿಂದ ಇಡೀ ಆರ್ಥಿಕ ವ್ಯವಸ್ಥೆ ಮೇಲೆ ಬಡ್ಡಿದರಗಳು ಸಣ್ಣಭಾಗವಲ್ಲದೇ ಬಹುಮಟ್ಟಿಗೆ ಪ್ರಭಾವ ಬೀರಿತೆಂಬುದು ಹೆಚ್ಚು ಅರಿವಿಗೆ ಬಂತು. ಆರ್ಥಿಕ ವಹಿವಾಟಿನ ಬದಲಾವಣೆ ಆಧಾರದ ಮೇಲೆ ಎಷ್ಟು ಹೆಚ್ಚು ಮಂದಿ ಅಥವಾ ಎಷ್ಟು ಕಡಿಮೆ ಮಂದಿ ನಿರ್ಧಾರ ಕೈಗೊಳ್ಳುತ್ತಾರೆಂಬ ಬಗ್ಗೆ ಇದು ಗಮನ ಸೆಳೆಯಿತು.
ವ್ಯವಹಾರ ಆವರ್ತವೊಂದಿದ್ದು, ಆ ಆವರ್ತದ ಜತೆ ಬಡ್ಡಿದರಗಳ ಸಂಬಂಧದ ಬಗ್ಗೆ ಆರ್ಥಿಕ ಸಿದ್ಧಾಂತಕ್ಕೆ ಕ್ರಮೇಣ ಅರಿವಾಗುತ್ತಿದೆ ಎನ್ನುವುದು ಸ್ಪಷ್ಟವಾಯಿತು. (ಆದಾಗ್ಯೂ,ಬಡ್ಡಿದರದ ಮೇಲೆ ಪ್ರಭಾವ ಬೀರುವ ಮ‌ೂಲಕ ಇಡೀ ಆರ್ಥಿಕತೆಯನ್ನು ನಡೆಸುವುದು ತೈಲ ಟ್ಯಾಂಕರನ್ನು ಸಣ್ಣದೋಣಿಯ ಹುಟ್ಟಿನಿಂದ ನಡೆಸಿದಂತೆ ಎಂದು ಆಗಾಗ್ಗೆ ಬಣ್ಣಿಸಲಾಗಿದೆ). ವಿಸ್ತರಣೆ ಮತ್ತು ಪರಿಮಿತ ನೀತಿಗಳ ಕೇಂದ್ರ ಬ್ಯಾಂಕ್ ನೀತಿಗಳಿಂದ ಬಹುಷಃ ಆರ್ಥಿಕ ಆವರ್ತ ಸಂಭವಿಸುತ್ತಿರಬಹುದೆಂದು ಕ್ಯಾಸ್ ಬಿಸಿನೆಸ್ ಸ್ಕೂಲ್ ಸಂಶೋಧನೆಯು ಸಲಹೆ ಮಾಡಿದೆ; ಕೇಂದ್ರ ಬ್ಯಾಂಕ್ ನೀತಿಗಳು ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ ಆರ್ಥಿಕತೆಯಲ್ಲಿ ಆವರ್ತಗಳ ಕೊರತೆಯನ್ನು ಗಮನಿಸುವ ಮ‌ೂಲಕ ಪುರಾವೆಗಳು ಸಿಕ್ಕಿದವು.


ವಿತ್ತೀಯ ನಿಯಂತ್ರಣವಾದಿ ಬೃಹದರ್ಥ ಶಾಸ್ತ್ರಜ್ಞರು ಕೆಳಮಟ್ಟದಲ್ಲಿ, ಸ್ಥಿರದರದಲ್ಲಿ ವಿತ್ತೀಯ ಪೂರೈಕೆಯನ್ನು ಹೆಚ್ಚಿಸುವುದಕ್ಕೆ ಕೆಲವು ಬಾರಿ ಸಲಹೆ ಮಾಡಿದ್ದರು. ಕಡಿಮೆ ಹಣದುಬ್ಬರ ಮತ್ತು ಸ್ಥಿರ ಉತ್ಪಾದನೆ ಬೆಳವಣಿಗೆ ಕಾಯ್ದುಕೊಳ್ಳಲು ಅದನ್ನು ಅತ್ಯುತ್ತಮ ಮಾರ್ಗವೆಂದು ಅವರು ಭಾವಿಸಿದ್ದರು.[೬] ಆದಾಗ್ಯೂ,U.S. ಫೆಡರಲ್ ರಿಸರ್ವ್ ಅಧ್ಯಕ್ಷ ಪಾಲ್ ವೋಲ್ಕರ್ 1979 ಅಕ್ಟೋಬರ್‌ನಲ್ಲಿ ಈ ನೀತಿಯನ್ನು ಪ್ರಯತ್ನಿಸಿದಾಗ ಆರ್ಥಿಕತೆಯಲ್ಲಿ ಒಟ್ಟು ವಿತ್ತೀಯ ಮೊತ್ತ ಮತ್ತು ಇತರೆ ಬೃಹತ್ ಆರ್ಥಿಕತೆಯ ವ್ಯತ್ಯಾಸಗಳ ನಡುವೆ ಅತಿಯಾದ ಅಸ್ಥಿರ ಸಂಬಂಧದ ಕಾರಣದಿಂದ ಅದು ಅಪ್ರಾಯೋಗಿಕವೆಂದು ಕಂಡುಬಂತು.[೭] ಹಣದ ಪೂರೈಕೆ ಮೇಲೆ ಗುರಿಯಿರಿಸುವುದು ತಾವು ಆಶಿಸಿದ್ದಕ್ಕಿಂತ ಕಡಿಮೆ ಯಶಸ್ಸು ಪಡೆದಿದೆ ಎಂದು ಮಿಲ್ಟನ್ ಫ್ರೈಡ್‌ಮ್ಯಾನ್ 2003ರ ಜೂನ್ 7ರಂದು ಫೈನಾನ್ಸಿಯಲ್ ಟೈಮ್ಸ್ ಜತೆ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.[೮][೯][೧೦] ಆದ್ದರಿಂದ ವಿತ್ತೀಯ ನಿರ್ಧಾರಗಳು ಇಂದು ವಿಶಾಲ ವ್ಯಾಪ್ತಿಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಅವು ಯಾವುದೆಂದರೆ:
◾ಅಲ್ಪಾವಧಿ ಬಡ್ಡಿದರಗಳು;
◾ದೀರ್ಘಾವಧಿ ಬಡ್ಡಿದರಗಳು;
◾ಆರ್ಥಿಕತೆ ಮ‌ೂಲಕ ಹಣದ ಚಲಾವಣೆ ವೇಗ;
◾ವಿನಿಮಯ ದರಗಳು;
◾ಸಾಲದ ಗುಣಮಟ್ಟ;
◾ಸಾಲಪತ್ರಗಳು ಮತ್ತು ಷೇರುಗಳು (ಕಾರ್ಪೊರೇಟ್ ಮಾಲೀಕತ್ವ ಮತ್ತು ಋಣ);
◾ಸರ್ಕಾರ ವರ್ಸಸ್ ಖಾಸಗಿ ವಲಯ ವೆಚ್ಚ/ಉಳಿತಾಯಗಳು;
◾ದೊಡ್ಡ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಬಂಡವಾಳ ಹರಿವುಗಳು;
◾ವಿತ್ತೀಯ ಜನ್ಯಗಳಾದ ಆಯ್ಕೆ, ತೆರಿಗೆಯ ಮುನ್ನೋಟ, ಭವಿಷ್ಯದ ಗುತ್ತಿಗೆಗಳು ಮುಂತಾದವು.



ಚಿನ್ನದ ಪ್ರಮಿತಿಗೆ ಹಿಂದಿರುಗಬೇಕೆಂದು ಸಣ್ಣ ಗುಂಪಿಗೆ ಸೇರಿದ ಜನರು ಸಲಹೆ ಮಾಡಿದರು.(ಡಾಲರ್‌ಗೆ ಅಧಿಕೃತ ಕರೆನ್ಸಿ ಸ್ಥಾನಮಾನ ತೆಗೆಯುವುದು ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್ ಕೂಡ) ವಿತ್ತೀಯ ನೀತಿ ಅಪಾಯಗಳಿಂದ ತುಂಬಿದ್ದು, ವಿತ್ತೀಯ ನೀತಿ ವಿಫಲವಾದರೆ ಈ ಅಪಾಯಗಳಿಂದ ಜನಸಮುದಾಯಕ್ಕೆ ತೀಕ್ಷ್ಣ ಹಾನಿ ಉಂಟುಮಾಡುತ್ತದೆನ್ನುವುದು ಅವರ ಮ‌ೂಲಭೂತ ವಾದವಾಗಿತ್ತು. ಪ್ರಸಕ್ತ ವಿತ್ತೀಯ ನೀತಿ ಬಗ್ಗೆ ಇತರರು ಇನ್ನೊಂದು ಸಮಸ್ಯೆಯನ್ನು ಕಂಡುಕೊಂಡರು. ನಮ್ಮ ಹಣದ ಮೌಲ್ಯವನ್ನು ವ್ಯಾಖ್ಯಾನಿಸುವ ಬೌತಿಕತೆಯಿಲ್ಲ ಎನ್ನುವುದು ಅವರಿಗೆ ಸಮಸ್ಯೆಯಾಗಿರಲಿಲ್ಲ. ಆ ಹಣವನ್ನು ಸಾಲದ ಬದಲಿಗೆ ಗ್ರಾಹಕನಿಗೆ ಋಣವಾಗಿ ಆಂಶಿಕ ಮೀಸಲು ಎರವಲು ನೀಡುವುದರಿಂದ ಸಣ್ಣ ಭಾಗದ ಸಮಾಜ ಹೊರತುಪಡಿಸಿ ಎಲ್ಲರೂ(ಎಲ್ಲ ಸರ್ಕಾರಗಳೂ ಸೇರಿದಂತೆ) ನಿರಂತರ ಋಣದಲ್ಲಿ ಮುಳುಗುತ್ತವೆ ಎನ್ನುವುದು ಅವರ ಸಮಸ್ಯೆಯಾಗಿತ್ತು.

ವಾಸ್ತವವಾಗಿ ಅನೇಕ ಅರ್ಥಶಾಸ್ತ್ರಜ್ಞರು ಚಿನ್ನದ ಪ್ರಮಿತಿಗೆ ಹಿಂದಿರುಗುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಹಾಗೆ ಮಾಡುವುದರಿಂದ ತೀಕ್ಷ್ಣವಾಗಿ ಹಣದ ಪೂರೈಕೆಯನ್ನು ಸೀಮಿತಗೊಳಿಸುತ್ತದೆ ಮತ್ತು ವಿತ್ತೀಯ ನೀತಿಯಲ್ಲಿ 100 ವರ್ಷಗಳ ಪ್ರಗತಿಯನ್ನು ಅಳಿಸಿಹಾಕುತ್ತದೆಂದು ಅವರು ವಾದಿಸಿದರು. ಕೆಲವು ವೇಳೆ ಜಟಿಲ ಹಣಕಾಸು ವಹಿವಾಟುಗಳು ದೊಡ್ಡ ವ್ಯವಹಾರವನ್ನು(ವಿಶೇಷವಾಗಿ ಅಂತಾರಾಷ್ಟ್ರೀಯ ವ್ಯವಹಾರ)ಸುಲಭ ಮತ್ತು ಸುರಕ್ಷಿತಗೊಳಿಸಿದರೆ ಚಿನ್ನದ ಪ್ರಮಿತಿಯಿಂದ ವ್ಯವಹಾರ ಇನ್ನಷ್ಟು ಕಠಿಣವಾಗಬಹುದು ಅಥವಾ ಅಸಾಧ್ಯವಾಗಿಸಬಹುದು ಎಂದು ವಾದಿಸಿದರು. ಇದಲ್ಲದೇ, ಉಸ್ತುವಾರಿ ಮತ್ತು ಅಪಾಯವನ್ನು ಬಳಸಿಕೊಳ್ಳುವಲ್ಲಿ ಪರಿಣತಿ ಪಡೆದ ಜನರಿಗೆ/ಕಂಪೆನಿಗಳಿಗೆ ಅಪಾಯವನ್ನು ಹಸ್ತಾಂತರಿಸುವುದರಿಂದ, ಯಾವುದೇ ಹಣಕಾಸಿನ ಅಪಾಯವನ್ನು ಗೊತ್ತಿರುವ ಡಾಲರ್ ಮೊತ್ತಕ್ಕೆ ಪರಿವರ್ತಿಸಬಹುದು. ಆದ್ದರಿಂದ ವ್ಯವಹಾರದಲ್ಲಿ ಒಳಗೊಂಡ ಎಲ್ಲರಿಗೂ ಅದರ ಭವಿಷ್ಯ ತಿಳಿಯುತ್ತದೆ ಮತ್ತು ಹೆಚ್ಚು ಲಾಭದಾಯಕವಾಗಿರುತ್ತದೆ.



ಕೇಂದ್ರ ಬ್ಯಾಂಕಿಂಗ್‌ನಲ್ಲಿ ಪ್ರವೃತ್ತಿಗಳುಸಂಪಾದಿಸಿ
ಕೇಂದ್ರ ಬ್ಯಾಂಕ್ ವಿತ್ತೀಯ ನೆಲೆಗಟ್ಟಿನ ವಿಸ್ತರಣೆ ಅಥವಾ ಪರಿಮಿತಿಗೆ ಒಳಪಡಿಸುವ ಮ‌ೂಲಕ ಬಡ್ಡಿದರಗಳ ಮೇಲೆ ಪ್ರಭಾವ ಬೀರುತ್ತದೆ. ವಿತ್ತೀಯ ನೆಲೆಗಟ್ಟು ಚಲಾವಣೆಯಲ್ಲಿರುವ ಕರೆನ್ಸಿ ಮತ್ತು ಕೇಂದ್ರ ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟಿರುವ ಬ್ಯಾಂಕ್ ಮೀಸಲು ಹಣ ಹೊಂದಿವೆ. ಮುಕ್ತ ಪೇಟೆ ಕಾರ್ಯಾಚರಣೆಗಳು ಅಥವಾ ಸರ್ಕಾರದ ಹಳೆಯ ಸಾಲದ ಮಾರಾಟ ಅಥವಾ ಖರೀದಿ, ಅಥವಾ ಮೀಸಲು ಅಗತ್ಯಗಳ ಬದಲಾವಣೆ ಮ‌ೂಲಕ ಕೇಂದ್ರ ಬ್ಯಾಂಕ್ ವಿತ್ತೀಯ ನೆಲೆಗಟ್ಟಿನ ಮೇಲೆ ಪ್ರಭಾವ ಬೀರುವ ಮುಖ್ಯ ದಾರಿಯಾಗಿದೆ. ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಕುಂಠಿತಗೊಳಿಸಲು ಬಯಸಿದ್ದರೆ, ಅದು ಸರ್ಕಾರದ ಋಣಪತ್ರಗಳನ್ನು ಖರೀದಿಸುವ ಮ‌ೂಲಕ ಚಲಾವಣೆಯಲ್ಲಿರುವ ನಗದಿನ ಮೊತ್ತವನ್ನು ಹೆಚ್ಚಿಸುತ್ತದೆ ಅಥವಾ ಬ್ಯಾಂಕುಗಳ ಮೀಸಲು ಖಾತೆಗಳಿಗೆ ಸಾಲ ನೀಡುತ್ತವೆ. ಪರ್ಯಾಯವಾಗಿ ರಿಯಾಯಿತಿಗಳು ಅಥವಾ ಓವರ್‌ಡ್ರಾಫ್ಟ್(ಕೇಂದ್ರ ಬ್ಯಾಂಕ್ ನಮ‌ೂದಿಸಿದ ಸೂಕ್ತ ಜಾಮೀನಿನ ಮೇಲೆ ಬ್ಯಾಂಕುಗಳಿಗೆ ಸಾಲ)ಮೇಲೆ ಬಡ್ಡಿದರಗಳನ್ನು ಅದು ತಗ್ಗಿಸಬಹುದು.
 ಅಂತಹ ವ್ಯವಹಾರಗಳ ಮೇಲೆ ಬಡ್ಡಿದರ ಸಾಕಷ್ಟು ಕಡಿಮೆಯಿದ್ದರೆ,ಮೀಸಲು ಅಗತ್ಯಗಳನ್ನು ಪೂರೈಸಲು ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕ್‌ನಿಂದ ಸಾಲ ಪಡೆಯಬಹುದು ಮತ್ತು ಹೆಚ್ಚುವರಿ ದ್ರವ್ಯತೆಯನ್ನು ತಮ್ಮ ಆಯವ್ಯಯ ಶಿಲ್ಕನ್ನು ವಿಸ್ತರಿಸಲು ಬಳಸುವ ಮ‌ೂಲಕ ಆರ್ಥಿಕತೆಗೆ ಸಾಲದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಮೀಸಲು ಅಗತ್ಯಗಳನ್ನು ತಗ್ಗಿಸುವುದರಿಂದ ಇದೇ ರೀತಿಯ ಪರಿಣಾಮ ಬೀರುತ್ತದೆ.ಸಾಲಗಳ ವಿತರಣೆ ಹೆಚ್ಚಿಸಲು ಅಥವಾ ಲಾಭದಾಯಕ ಆಸ್ತಿಗಳ ಖರೀದಿ ಸಲುವಾಗಿ ಬ್ಯಾಂಕುಗಳಿಗೆ ನಿಧಿ ಪೂರೈಸುತ್ತದೆ.


ವಿನಿಮಯ ದರ ಬದಲಾಗುವ ಸ್ಥಿತಿಯಲ್ಲಿದ್ದರೆ ಕೇಂದ್ರ ಬ್ಯಾಂಕ್‌ಗೆ ನಿಜವಾದ ಸ್ವತಂತ್ರ ವಿತ್ತೀಯ ನೀತಿ ನಿರ್ವಹಣೆ ಸಾಧ್ಯವಾಗುತ್ತದೆ.[೧೧] ವಿನಿಮಯ ದರ ಸಮರೂಪವಾಗಿದ್ದರೆ ಅಥವಾ ಯಾವುದೇ ರೀತಿಯಲ್ಲಿ ನಿರ್ವಹಿಸಲ್ಪಟ್ಟರೆ,ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಬೇಕು ಅಥವಾ ಮಾರಬೇಕಾಗುತ್ತದೆ. ವಿದೇಶಿ ವಿನಿಮಯದಲ್ಲಿ ಈ ವಹಿವಾಟುಗಳಿಂದ ವಿತ್ತೀಯ ನೆಲೆಗಟ್ಟಿನ ಮೇಲೆ ಪ್ರಭಾವ ಬೀರಿ ಮುಕ್ತ ಪೇಟೆ ಖರೀದಿಗಳು ಮತ್ತು ಸರ್ಕಾರಿ ಋಣಪತ್ರಗಳ ಮಾರಾಟಗಳಿಗೆ ದಾರಿಕಲ್ಪಿಸುತ್ತದೆ; ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಿದರೆ, ವಿತ್ತೀಯ ನೆಲೆಗಟ್ಟು ವಿಸ್ತರಣೆಯಾಗುತ್ತದೆ ಮತ್ತು ವಿತ್ತೀಯ ನೆಲೆಗಟ್ಟು ವಿಸ್ತರಣೆಯಾದರೆ ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸುತ್ತದೆ. ಆದರೆ ಶುದ್ಧ ಬದಲಾಗುವ ವಿನಿಮಯ ದರದ ಪ್ರಕರಣದಲ್ಲಿ ಕೂಡ,ಬಂಡವಾಳ ಚಲನಶೀಲವಾಗಿರುವ ಜಗತ್ತಿನಲ್ಲಿ ಕೇಂದ್ರ ಬ್ಯಾಂಕುಗಳು ಮತ್ತು ವಿತ್ತೀಯ ಅಧಿಕಾರವರ್ಗ "ಗಾಳಿ ಬಂದ ಕಡೆ ವಾಲುವುದು ಸಾಧ್ಯ".

ಇದೇ ಪ್ರಕಾರವಾಗಿ,ವಿನಿಮಯ ದರದ ನಿರ್ವಹಣೆಯು ದೇಶೀಯ ವಿತ್ತೀಯ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುತ್ತದೆ. ಕೇಂದ್ರ ಬ್ಯಾಂಕ್ ತನ್ನ ವಿತ್ತೀಯ ನೀತಿಯನ್ನು ಕಾಯ್ದುಕೊಳ್ಳಲು,ವಿದೇಶಿ ವಿನಿಮಯ ನಿರ್ವಹಣೆಗಳನ್ನು ಹದ್ದುಬಸ್ತಿಗೆ ತರಬೇಕು ಅಥವಾ ವ್ಯತಿರಿಕ್ತ ಪ್ರಭಾವ ತಗ್ಗಿಸಬೇಕು. ಉದಾಹರಣೆಗೆ, ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಿದರೆ(ವಿದೇಶಿ ವಿನಿಮಯ ಮೌಲ್ಯಕ್ಕೆ ಪ್ರತಿಯಾಗಿ)ಮ‌ೂಲ ಹಣವು ವರ್ಧಿಸುತ್ತದೆ. ಆದ್ದರಿಂದ ಆ ಹೆಚ್ಚಳದ ಪ್ರಭಾವ ತಗ್ಗಿಸಲು ಕೇಂದ್ರ ಬ್ಯಾಂಕ್ ಸರ್ಕಾರದ ಋಣಪತ್ರಗಳನ್ನು ಮಾರಿ ವಿತ್ತೀಯ ನೆಲೆಗಟ್ಟನ್ನು ಸಮಾನ ಮೊತ್ತದಲ್ಲಿ ಇರಿಸಬೇಕು. ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ದ ಚಟುವಟಿಕೆಯಿಂದ ವಿದೇಶಿ ವಿನಿಮಯ ಕೂಡ ನಿರ್ವಹಿಸುವ ಕೇಂದ್ರ ಬ್ಯಾಂಕ್ ದೇಶೀಯ ವಿನಿಮಯ ನೀತಿಯ ಮೇಲೆ ನಿಯಂತ್ರಣ ಕಳೆದುಕೊಳ್ಳಬಹುದು.

ಅನೇಕ ಮಂದಿ ಅರ್ಥಶಾಸ್ತ್ರಜ್ಞರು 1980ರ ದಶಕದಲ್ಲಿ ಗರಿಷ್ಠ ವಿತ್ತೀಯ ನೀತಿಯ ಖಾತರಿಗೆ ರಾಷ್ಟ್ರದ ಕೇಂದ್ರ ಬ್ಯಾಂಕ್ ಉಳಿದ ಸರ್ಕಾರದ ಕಾರ್ಯಾಂಗದಿಂದ ಪ್ರತ್ಯೇಕವಾಗಿ ವ್ಯವಹರಿಸುವುದು ಉತ್ತಮ ಮಾರ್ಗವೆಂದು ನಂಬಿದ್ದರು. ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡದ ಕೆಲವು ಕೇಂದ್ರಬ್ಯಾಂಕುಗಳು ಸ್ವಾತಂತ್ರ್ಯ ಗಳಿಸಲು ಆರಂಭಿಸಿದವು. ಪ್ರಸಕ್ತ ಸರ್ಕಾರದ ಮರುಆಯ್ಕೆ ಸೇರಿದಂತೆ ರಾಜಕೀಯ ಗುರಿಗಳ ಮೇಲೆ ಪ್ರಭಾವ ಬೀರಲು ವಿತ್ತೀಯ ನೀತಿಗಳ ಸಾಧನಗಳನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು.
ವಿತ್ತೀಯನೀತಿ ನಿರ್ವಹಿಸುವ ಸದಸ್ಯರು ಸುದೀರ್ಘ,ಸ್ಥಿರ ಕಾಲಾವಧಿಯನ್ನು ಹೊಂದಿರಬೇಕೆನ್ನುವುದು ಸ್ವಾತಂತ್ರ್ಯದ ಸಾಂಕೇತಿಕ ಅರ್ಥ. ಇದು ಒಂದು ರೀತಿಯ ಸೀಮಿತ ಸ್ವಾತಂತ್ರ್ಯವೆನ್ನುವುದು ಸುಸ್ಪಷ್ಟ.



ವಿತ್ತೀಯ ನೀತಿಯ ಪ್ರಕ್ರಿಯೆಯಲ್ಲದಿದ್ದರೂ ಫಲಿತಾಂಶಗಳನ್ನು ಹೆಚ್ಚು ಪಾರದರ್ಶಕವಾಗಿಸಲು 1990ರ ದಶಕದಲ್ಲಿ, ಔಪಚಾರಿಕ ಸಾರ್ವಜನಿಕ ಹಣದುಬ್ಬರ ಗುರಿಗಳನ್ನು ಕೇಂದ್ರ ಬ್ಯಾಂಕುಗಳು ಅಳವಡಿಸಿಕೊಂಡವು. ಬೇರೆ ರೀತಿಯಲ್ಲಿ ಹೇಳುವುದಾದರೆ, ಗೊತ್ತಾದ ವರ್ಷದಲ್ಲಿ ಕೇಂದ್ರ ಬ್ಯಾಂಕ್ 2% ಹಣದುಬ್ಬರದ ಗುರಿಯನ್ನು ಹೊಂದಿದ್ದಾಗ, ಹಣದುಬ್ಬರ 5%ಗೆ ತಿರುಗಿದರೆ, ಕೇಂದ್ರ ಬ್ಯಾಂಕ್ ಅದಕ್ಕೆ ವಿವರಣೆಯನ್ನು ಸಾಂಕೇತಿಕವಾಗಿ ನೀಡಬೇಕಾಗುತ್ತದೆ.



ಬ್ಯಾಂಕ್ ಆಫ್ ಇಂಗ್ಲೆಂಡ್ ಇವೆರಡೂ ಪ್ರವತ್ತಿಗಳಿಗೆ ನಿದರ್ಶನವಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಕಾಯ್ದೆ 1998ರ ಮ‌ೂಲಕ ಸರ್ಕಾರದಿಂದ ಸ್ವತಂತ್ರವಾಗಿ 2.5% RPI (ಈಗ 2% of CPI)ಅಳವಡಿಸಿಕೊಂಡಿತು.

ವಿತ್ತೀಯ ನೀತಿ ವ್ಯವಹಾರ ಆವರ್ತಗಳನ್ನು ಸುಗಮಗೊಳಿಸುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಕೀನ್ಸಿಯನ್ ಆರ್ಥಿಕತೆಯ ಮುಖ್ಯ ಕಲ್ಪನೆ ಕೇಂದ್ರ ಬ್ಯಾಂಕ್ ಅಲ್ಪಾವಧಿಯಲ್ಲಿ ಒಟ್ಟು ಬೇಡಿಕೆಯನ್ನು ಉತ್ತೇಜಿಸಬಹುದೆನ್ನುವುದು. ಏಕೆಂದರೆ,ಅಲ್ಪಾವಧಿಯಲ್ಲಿ ಆರ್ಥಿಕತೆಯಲ್ಲಿ ಗಣನೀಯ ಸಂಖ್ಯೆಯ ದರಗಳು ಸ್ಥಿರವಾಗಿರುತ್ತದೆ ಮತ್ತು ಸಂಸ್ಥೆಗಳು ಬೇಡಿಕೆಯಿರುವಷ್ಟು ಸರಕುಗಳನ್ನು ಉತ್ಪಾದಿಸಿ, ಸೇವೆಗಳನ್ನು ನೀಡಬಹುದು.(ಆದಾಗ್ಯೂ, ದೀರ್ಘಾವಧಿಯಲ್ಲಿನಿಯೋಕ್ಲಾಸಿಕಲ್ ಮಾದರಿಯ ರೀತಿ ಹಣವು ತಟಸ್ಥವಾಗಿರುತ್ತದೆ). ಫ್ರೆಡರಿಕ್ ವಾನ್ ಹಾಯೇಕ್ ಮತ್ತು ಲುಡ್ವಿಗ್ ವಾನ್ ಮಿಸಸ್ ವಾದಗಳು ಸೇರಿರುವ ಆಸ್ಟ್ರಿಯನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕೂಡ ಇದೆ. ಆದರೆ ಈ ವಿಷಯದ ಬಗ್ಗೆ ಬಹುತೇಕ ಅರ್ಥಶಾಸ್ತ್ರಜ್ಞರು ಕೀನ್ಸಿಯನ್ ಅಥವಾ ನಿಯೋಕ್ಲಾಸಿಕಲ್ ವರ್ಗಗಳಿಗೆ ಸೇರಿದ್ದಾರೆ.



ಅಭಿವೃದ್ಧಿಶೀಲ ರಾಷ್ಟ್ರಗಳುಸಂಪಾದಿಸಿ
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪರಿಣಾಮಕಾರಿ ನಿರ್ವಹಣೆಯ ವಿತ್ತೀಯ ನೀತಿ ಸ್ಥಾಪನೆಯಲ್ಲಿ ಸಮಸ್ಯೆಗಳಿರಬಹುದು. ಕೆಲವೇ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು ಸರ್ಕಾರಿ ಸಾಲದಲ್ಲಿ ಆಳವಾದ ಮಾರುಕಟ್ಟೆಗಳನ್ನು ಹೊಂದಿರುವುದು ಮುಖ್ಯ ತೊಂದರೆಯಾಗಿದೆ.
ವಿತ್ತೀಯ ನೆಲೆಯನ್ನು ತ್ವರಿತಗತಿಯಲ್ಲಿ ವಿಸ್ತರಿಸುವ ಮ‌ೂಲಕ ಹಣದುಬ್ಬರ ತೆರಿಗೆಯನ್ನು ಹೇರುವುದಕ್ಕಾಗಿ ಹಣದ ಬೇಡಿಕೆ ಮತ್ತು ಖಜಾನೆ ಒತ್ತಡವನ್ನು ಮುಂಗಾಣಲು ಇರುವ ಕಷ್ಟಗಳಿಂದ ಈ ವಿಷಯ ಮತ್ತಷ್ಟು ಜಟಿಲಗೊಂಡಿತು.
ಸಾಮಾನ್ಯವಾಗಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ವಿತ್ತೀಯ ನೀತಿ ನಿರ್ವಹಣೆಯಲ್ಲಿ ಕೇಂದ್ರ ಬ್ಯಾಂಕುಗಳು ಕಳಪೆ ದಾಖಲೆಗಳನ್ನು ಹೊಂದಿದ್ದವು. ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ವಿತ್ತೀಯ ಅಧಿಕಾರವು ಸರ್ಕಾರದಿಂದ ಮುಕ್ತ ನಿರ್ವಹಣೆ ಇರಲಿಲ್ಲ. ಆದ್ದರಿಂದ ಸರ್ಕಾರದ ರಾಜಕೀಯ ಇಚ್ಛೆಗಳಿಂದ ಅಥವಾ ಇತರೆ ವಿತ್ತೀಯೇತರ ಗುರಿಗಳ ಅನುಸರಣೆಯಿಂದ ವಿತ್ತೀಯ ನೀತಿ ಹಿಂಭಾಗದ ಸ್ಥಾನಕ್ಕೆ ಸರಿದವು. ಇದು ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ,ವಿಶ್ವಾಸಾರ್ಹ ವಿತ್ತೀಯ ನೀತಿ ಸ್ಥಾಪಿಸಲು ಇಚ್ಛಿಸುವ ಅಭಿವೃದ್ಧಿಶೀಲ ರಾಷ್ಟ್ರಗಳು ಕರೆನ್ಸಿ ಮಂಡಳಿ ಸ್ಥಾಪಿಸಬಹುದು ಅಥವಾ ಡಾಲರೀಕರಣ(ದೇಶೀಯ ಹಣಕ್ಕೆ ಬದಲಿಯಾಗಿ ಅಥವಾ ಸಮಾನಾಂತರವಾಗಿ ವಿದೇಶಿ ಕರೆನ್ಸಿ) ಮಾಡಬಹುದು. ಇಂತಹ ಸ್ವರೂಪದ ವಿತ್ತೀಯ ಸಂಸ್ಥೆಗಳು ಹಸ್ತಕ್ಷೇಪದಿಂದ ಸರ್ಕಾರದ ಕೈಗಳನ್ನು ಕಟ್ಟುತ್ತವೆ ಮತ್ತು ಇಂತಹ ನೀತಿಗಳು ನಿರೂಪಕ ರಾಷ್ಟ್ರದ ನೀತಿಯನ್ನು ಬಿಂಬಿಸುತ್ತವೆ.


ಹಣಕಾಸು ಮಾರುಕಟ್ಟೆಗಳ ಉದಾರೀಕರಣ ಮತ್ತು ಸುಧಾರಣೆ ಮಾಡುವ ಇತ್ತೀಚಿನ ಪ್ರಯತ್ನಗಳು(ವಿಶೇಷವಾಗಿ ನೈಜೀರಿಯ ಮತ್ತಿತರ ಕಡೆ ಬ್ಯಾಂಕುಗಳು ಮತ್ತಿತರ ಸಂಸ್ಥೆಗಳ ಮರುಬಂಡವಾಳೀಕರಣ)ಪ್ರಸ್ತುತ ಕೇಂದ್ರ ಬ್ಯಾಂಕುಗಳಿಂದ ವಿತ್ತೀಯ ನೀತಿ ಚೌಕಟ್ಟುಗಳನ್ನು ಅನುಷ್ಠಾನಕ್ಕೆ ತರುವ ಮುಕ್ತ ಅವಕಾಶವನ್ನು ಕ್ರಮೇಣ ಒದಗಿಸುತ್ತದೆ.

ವಿತ್ತೀಯ ನೀತಿ(financial polcy)


ವಿತ್ತೀಯ ನೀತಿ




ಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಪ್ರಗತಿ ಕಡೆಗೆ ಗುರಿಯಿಟ್ಟು ಅವುಗಳ ಸಮ‍ೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ.[೧] ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ.

ವಿತ್ತೀಯ ನೀತಿಯನ್ನು ವಿಸ್ತರಣೆ ನೀತಿ ಅಥವಾ ಪರಿಮಿತ ನೀತಿ ಎಂದು ಉಲ್ಲೇಖಿಸಲಾಗಿದೆ. ವಿಸ್ತರಣೆಯ ನೀತಿಯು ಆರ್ಥಿಕತೆಯಲ್ಲಿ ಹಣದ ಒಟ್ಟು ಪೂರೈಕೆಯನ್ನು ವರ್ಧಿಸುತ್ತದೆ. ಪರಿಮಿತ ನೀತಿಯು ಒಟ್ಟು ಹಣದ ಪೂರೈಕೆಯನ್ನು ಕುಗ್ಗಿಸುತ್ತದೆ.
ಆರ್ಥಿಕ ಹಿಂಜರಿತದ ಕಾಲದಲ್ಲಿ ಬಡ್ಡಿದರವನ್ನು ಕುಂಠಿತಗೊಳಿಸುವ ಮ‌ೂಲಕ ನಿರುದ್ಯೋಗ ನಿವಾರಣೆಗೆ ವಿಸ್ತರಣಾ ನೀತಿಯನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಪರಿಮಿತ ನೀತಿಯಲ್ಲಿ ಹಿಂಜರಿತ ನಿಭಾಯಿಸಲು ಬಡ್ಡಿದರಗಳ ಏರಿಕೆ ಒಳಗೊಂಡಿದೆ. ವಿತ್ತೀಯ ನೀತಿಯು ಖಜಾನೆ ನೀತಿಗೆ ಭಿನ್ನವಾಗಿದೆ. ಸರ್ಕಾರದ ಸಾಲ,ವೆಚ್ಚ ಮತ್ತು ತೆರಿಗೆ ಪದ್ಧತಿಯನ್ನು ಖಜಾನೆ ನೀತಿ ಉಲ್ಲೇಖಿಸುತ್ತದೆ.[೨]






ಸ್ಥೂಲ ಅವಲೋಕನಸಂಪಾದಿಸಿ
ಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿದರಗಳ ನಡುವಿನ ಸಂಬಂಧದ ಮೇಲೆ ವಿತ್ತೀಯ ನೀತಿ ಅವಲಂಬಿತವಾಗಿದೆ. ಹಣವನ್ನು ಸಾಲವಾಗಿ ಪಡೆಯುವ ದರ ಮತ್ತು ಹಣದ ಒಟ್ಟು ಪೂರೈಕೆ ಇದರಲ್ಲಿ ಸೇರಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ, ಇತರೆ ಕರೆನ್ಸಿಗಳ ಜತೆ ವಿನಿಮಯ ದರ ಮತ್ತು ನಿರುದ್ಯೋಗ ಮುಂತಾದ ಫಲಶ್ರುತಿಗಳ ಪೈಕಿ ಪೈಕಿ ಒಂದು ಅಥವಾ ಎರಡನ್ನೂ ನಿಯಂತ್ರಿಸಿ ಅವುಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ವಿತ್ತೀಯ ನೀತಿಯು ವಿವಿಧ ಸಾಧನಗಳನ್ನು ಬಳಸುತ್ತದೆ.
ಕರೆನ್ಸಿ ವಿತರಣೆ ಏಕಸ್ವಾಮ್ಯತೆ ಹೊಂದಿರುವ ಕಡೆ, ಅಥವಾ ಕೇಂದ್ರ ಬ್ಯಾಂಕ್‌ಗೆ ಬದ್ಧವಾದ ಬ್ಯಾಂಕ್‌ಗಳ ಮ‌ೂಲಕ ಕರೆನ್ಸಿಗಳನ್ನು ವಿತರಿಸುವ ನಿಯಂತ್ರಿತ ವ್ಯವಸ್ಥೆ ಇರುವ ಕಡೆಯಲ್ಲಿ, ವಿತ್ತೀಯ ಪ್ರಾಧಿಕಾರಕ್ಕೆ ಹಣಕಾಸು ಪೂರೈಕೆ ಬದಲಿಸುವ ಸಾಮರ್ಥ್ಯವಿರುತ್ತದೆ. ಹೀಗೆ ಅದು ಬಡ್ಡಿದರದ ಮೇಲೆ ಪ್ರಭಾವ ಬೀರುತ್ತದೆ(ವಿತ್ತೀಯ ನೀತಿ ಗುರಿಗಳನ್ನು ಸಾಧಿಸುವುದಕ್ಕಾಗಿ) 19ನೇ ಶತಮಾನದ ಅಂತ್ಯದಲ್ಲಿ ವಿತ್ತೀಯ ನೀತಿ ಆರಂಭವಾಗಿದ್ದು, ಆಗ ಸುವರ್ಣಮಾನಕ ಪದ್ಧತಿಯನ್ನು ಕಾಯ್ದುಕೊಳ್ಳಲಾಗುತ್ತಿತ್ತು.


ವಿತ್ತೀಯ ನೀತಿಯೊಂದು ವಿತ್ತೀಯ ಪೂರೈಕೆಯ ಗಾತ್ರವನ್ನು ತಗ್ಗಿಸಿದರೆ ಅಥವಾ ಬಡ್ಡಿದರ ವರ್ಧಿಸಿದರೆ ಆ ನೀತಿಯನ್ನು ಪರಿಮಿತ ನೀತಿ ಎಂದು ಉಲ್ಲೇಖಿಸಲಾಗುತ್ತದೆ. ವಿಸ್ತರಣಾ ನೀತಿಯು ಹಣಕಾಸಿನ ಪೂರೈಕೆಯ ಗಾತ್ರವನ್ನು ಹೆಚ್ಚಿಸುತ್ತದೆ ಅಥವಾ ಬಡ್ಡಿದರವನ್ನು ಕುಗ್ಗಿಸುತ್ತದೆ. ಇದಿಷ್ಟೇ ಅಲ್ಲದೇ, ವಿತ್ತೀಯ ನೀತಿಗಳನ್ನು ಈ ಕೆಳಗಿನಂತೆ ಬಣ್ಣಿಸಲಾಗಿದೆ: ಕೇಂದ್ರ ವಿತ್ತೀಯ ಪ್ರಾಧಿಕಾರ ಗೊತ್ತುಮಾಡಿದ ಬಡ್ಡಿದರ ಆರ್ಥಿಕ ಬೆಳವಣಿಗೆ ಸೃಷ್ಟಿಯ ಉದ್ದೇಶ ಹೊಂದಿದ್ದರೆ ಹೊಂದಾಣಿಕೆಯ ನೀತಿ; ಬೆಳವಣಿಗೆ ಸೃಷ್ಟಿಸದೇ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶ ಇಲ್ಲದಿದ್ದರೆ ತಟಸ್ಥ ನೀತಿ; ಹಣದುಬ್ಬರ ತಗ್ಗಿಸುವ ಉದ್ದೇಶ ಹೊಂದಿದ್ದರೆ ಅದು ಬಿಗಿ ನೀತಿ ಎಂದು ಬಣ್ಣಿಸಲಾಗುತ್ತದೆ.

ಈ ಗುರಿಗಳ ಸಾಧನೆಗೆ ಅನೇಕ ಹಣಕಾಸಿನ ನೀತಿಯ ಸಾಧನಗಳು ಲಭ್ಯವಿವೆ: ಕಾನೂನುಬದ್ಧ ಬಡ್ಡಿ ದರಗಳನ್ನು ಹೆಚ್ಚಿಸುವುದು; ಆರ್ಥಿಕ ನೆಲಗಟ್ಟನ್ನು ತಗ್ಗಿಸುವುದು; ಮೀಸಲು ಅಗತ್ಯಗಳನ್ನು ಹೆಚ್ಚಿಸುವುದು. ಇವೆಲ್ಲವೂ ಹಣಕಾಸಿನ ಪೂರೈಕೆಯನ್ನು ಪರಿಮಿತಗೊಳಿಸುವ ಪ್ರಭಾವ ಹೊಂದಿವೆ. ಅದು ಹಿಂದುಮುಂದಾದರೆ ಹಣಕಾಸಿನ ಪೂರೈಕೆಯನ್ನು ವಿಸ್ತರಿಸುತ್ತದೆ. ಹಣಕಾಸಿನ ನೀತಿಯನ್ನು 1970ರವರೆಗೆ, ಸಾಮಾನ್ಯವಾಗಿ ಖಜಾನೆ ನೀತಿಯಿಂದ ಪ್ರತ್ಯೇಕವಾಗಿ ರಚಿಸಲಾಗುತ್ತಿತ್ತು. ಬ್ರೆಟ್ಟನ್ ವುಡ್ಸ್ ವ್ಯವಸ್ಥೆ 1970ರ ದಶಕದ ಪೂರ್ವದಿಂದ ಈಗಲೂ ಬಹುತೇಕ ರಾಷ್ಟ್ರಗಳು ಪ್ರತ್ಯೇಕವಾಗಿ ಎರಡು ನೀತಿಗಳನ್ನು ರಚಿಸುವುದನ್ನು ಖಾತರಿ ಮಾಡಿದೆ.



ಬಹುತೇಕ ಎಲ್ಲ ಆಧುನಿಕ ರಾಷ್ಟ್ರಗಳಲ್ಲಿ ವಿಶೇಷ ಸಂಸ್ಥೆಗಳು(ಬ್ಯಾಂಕ್ ಆಫ್ ಇಂಗ್ಲೆಂಡ್,ಯುರೋಪಿಯನ್ ಸೆಂಟ್ರಲ್ ಬ್ಯಾಂಕ್,ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ಫೆಡರಲ್ ರಿಸರ್ವ್ ಸಿಸ್ಟಮ್ ಇನ್ ದಿ ಯುನೈಟೆಡ್ ಸ್ಟೇಟ್ಸ್‌ ಬ್ಯಾಂಕ್ ಆಫ್ ಜಪಾನ್,ಬ್ಯಾಂಕ್ ಆಫ್ ಕೆನಡಾ ಅಥವಾ ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯ)ಅಸ್ತಿತ್ವದಲ್ಲಿದ್ದು,ವಿತ್ತೀಯ ನೀತಿಯನ್ನು ಜಾರಿಗೆತರುವ ಕೆಲಸ ವಹಿಸಿಕೊಂಡಿವೆ. ಅನೇಕ ವೇಳೆ ಕಾರ್ಯಾಂಗದಿಂದ ಪ್ರತ್ಯೇಕವಾಗಿ ಅವು ಕಾರ್ಯನಿರ್ವಹಿಸುತ್ತವೆ. ಸಾಮಾನ್ಯವಾಗಿ ಈ ಸಂಸ್ಥೆಗಳನ್ನು ಕೇಂದ್ರ ಬ್ಯಾಂಕ್‌ಗಳು ಎಂದು ಕರೆಯಲಾಗುತ್ತಿದೆ. ಹಣಕಾಸು ವ್ಯವಸ್ಥೆಯ ಸುಸೂತ್ರ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮುಂತಾದ ಇತರೆ ಜವಾಬ್ದಾರಿಗಳು ಅದಕ್ಕಿರುತ್ತವೆ.

ವಿತ್ತೀಯ ನೀತಿಯ ಪ್ರಾಥಮಿಕ ಸಾಧನವು ಮುಕ್ತ ಪೇಟೆಯ ಕಾರ್ಯಾಚರಣೆಗಳಾಗಿದೆ. ವಿವಿಧ ಸಾಲದ ಸಾಧನಗಳನ್ನು, ವಿದೇಶಿ ಕರೆನ್ಸಿಗಳನ್ನು ಅಥವಾ ಸರಕುಗಳನ್ನು ಮಾರುವ, ಖರೀದಿಸುವ ಮ‌ೂಲಕ ಚಲಾವಣೆಯಲ್ಲಿರುವ ಹಣದ ಪರಿಮಾಣವನ್ನು ನಿರ್ವಹಿಸುವುದು ಇದರಲ್ಲಿ ಒಳಗೊಂಡಿವೆ. ಇವೆಲ್ಲ ಖರೀದಿಗಳು ಅಥವಾ ಮಾರಾಟಗಳು ಹೆಚ್ಚುಕಡಿಮೆ ಮ‌ೂಲ ಕರೆನ್ಸಿ ಮಾರುಕಟ್ಟೆಯಲ್ಲಿ ಚಲಾವಣೆಗೆ ಪ್ರವೇಶಿಸುವ ಅಥವಾ ನಿರ್ಗಮಿಸುವುದರಲ್ಲಿ ಫಲ ನೀಡುತ್ತದೆ.

ಸಾಮಾನ್ಯವಾಗಿ, ಮುಕ್ತ ಪೇಟೆ ಕಾರ್ಯಾಚರಣೆಯ ಅಲ್ಪಾವಧಿ ಗುರಿಯು ಬಡ್ಡಿದರದ ನಿರ್ದಿಷ್ಟ ಅಲ್ಪಾವಧಿ ಗುರಿಯನ್ನು ಸಾಧಿಸುವುದಾಗಿದೆ. ಇತರ ನಿದರ್ಶನಗಳಲ್ಲಿ, ವಿತ್ತೀಯ ನೀತಿಯು ಕೆಲವು ವಿದೇಶಿ ಕರೆನ್ಸಿಗಳಿಗೆ ಅಥವಾ ಚಿನ್ನಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿನಿಮಯ ದರದ ಮೇಲೆ ಗುರಿಯಿರಿಸುವುದು ಒಳಗೊಂಡಿದೆ. ಉದಾಹರಣೆಗೆ,USAಗೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳು ದಿಢೀರನೇ ಪರಸ್ಪರ ಸಾಲ ನೀಡುವ ದರವಾದ ಫೆಡರಲ್ ನಿಧಿಗಳ ದರದ ಮೇಲೆ ಫೆಡರಲ್ ರಿಸರ್ವ್ ಗುರಿಯಿರಿಸುತ್ತದೆ; ಆದಾಗ್ಯೂ, ಚೀನದ ವಿತ್ತೀಯ ನೀತಿಯಲ್ಲಿ ರೆನ್‌ಮಿನ್ಬಿ(ಚೀನದ ಕರೆನ್ಸಿ) ಮತ್ತು ವಿದೇಶಿ ಕರೆನ್ಸಿಗಳ ಸಮ‌ೂಹದ ನಡುವಿನ ವಿನಿಯಮ ದರದ ಮೇಲೆ ಗುರಿಯಿರಿಸುವುದಾಗಿದೆ.

ವಿತ್ತೀಯ ನೀತಿಯನ್ನು ನಿರ್ವಹಿಸುವ ಇತರೆ ಪ್ರಾಥಮಿಕ ಮಾರ್ಗಗಳಲ್ಲಿ:(i)ರಿಯಾಯಿತಿ ಸಾಲ ವಿಭಾಗ(ಅಂತಿಮ ಋಣದಾತ),(ii)ಆಂಶಿಕ ಠೇವಣಿ ಸಾಲ(ಮೀಸಲು ಅಗತ್ಯದಲ್ಲಿ ಬದಲಾವಣೆಗಳು);(iii)ನೈತಿಕ ಮನವೊಲಿಕೆ ಮಾರ್ಗ(ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸುವಂತೆ ಕೆಲವು ಮಾರುಕಟ್ಟೆ ಹೂಡಿಕೆದಾರರ ಮನವೊಲಿಕೆ);(iv) "ಮುಕ್ತ ಮಾರುಕಟ್ಟೆ ನೀತಿಯ ಕಾರ್ಯಾಚರಣೆಗಳು"(ಮಾರುಕಟ್ಟೆಯ ಮುಕ್ತ ವಿತ್ತೀಯ ನೀತಿ).



ಸಿದ್ಧಾಂತಸಂಪಾದಿಸಿ
ಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಬೆಳವಣಿಗೆ ಆಧಾರಿತವಾದ ಗುರಿಗಳ ಸಮ‍ೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ


 ಆರ್ಥಿಕವ್ಯವಸ್ಥೆಯಲ್ಲಿ ಬಡ್ಡಿದರಗಳ ನಡುವೆ ಸಂಬಂಧದ ಮೇಲೆ ವಿತ್ತೀಯ ನೀತಿ ಅವಲಂಬಿತವಾಗಿದೆ. ಹಣವನ್ನು ಸಾಲವಾಗಿ ಪಡೆಯುವ ದರ ಮತ್ತು ಹಣದ ಒಟ್ಟು ಪೂರೈಕೆ ಇದರಲ್ಲಿ ಸೇರಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ,ಇತರೆ ಕರೆನ್ಸಿಗಳ ಜತೆ ವಿನಿಮಯ ದರ ಮತ್ತು ನಿರುದ್ಯೋಗ ಮುಂತಾದ ಫಲಶ್ರುತಿಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ವಿತ್ತೀಯ ನೀತಿಯು ಇವುಗಳಲ್ಲಿ ಒಂದು ಅಥವಾ ಎರಡನ್ನೂ ನಿಯಂತ್ರಿಸಲು ವಿವಿಧ ಸಾಧನಗಳನ್ನು ಬಳಸುತ್ತದೆ. ಕರೆನ್ಸಿ ವಿತರಣೆ ಏಕಸ್ವಾಮ್ಯತೆ ಹೊಂದಿರುವ ಕಡೆ,ಕೇಂದ್ರ ಬ್ಯಾಂಕ್‌ಗೆ ಬದ್ಧವಾದ ಬ್ಯಾಂಕ್‌ಗಳ ಮ‌ೂಲಕ ಕರೆನ್ಸಿಗಳನ್ನು ವಿತರಿಸುವ ನಿಯಂತ್ರಿತ ವ್ಯವಸ್ಥೆ ಇರುವ ಕಡೆಯಲ್ಲಿ, ವಿತ್ತೀಯ ಪ್ರಾಧಿಕಾರಕ್ಕೆ ಹಣಕಾಸು ಪೂರೈಕೆ ಬದಲಿಸುವ ಸಾಮರ್ಥ್ಯವಿರುತ್ತದೆ. ಹೀಗೆ ಬಡ್ಡಿದರದ ಮೇಲೆ ಪ್ರಭಾವ ಬೀರುತ್ತದೆ(ನೀತಿ ಗುರಿಗಳನ್ನು ಸಾಧಿಸುವುದಕ್ಕಾಗಿ) 19ನೇ ಶತಮಾನದ ಅಂತ್ಯದಲ್ಲಿ ವಿತ್ತೀಯ ನೀತಿ ಆರಂಭವಾಗಿದ್ದು, ಆಗ ಚಿನ್ನದ ಪ್ರಮಿತಿವನ್ನು ಕಾಯ್ದುಕೊಳ್ಳಲಾಗುತ್ತಿತ್ತು. ವಿತ್ತೀಯ ನೀತಿಯೊಂದು ವಿತ್ತೀಯ ಪೂರೈಕೆಯ ಗಾತ್ರವನ್ನು ತಗ್ಗಿಸಿದರೆ ಅಥವಾ ಬಡ್ಡಿದರ ವರ್ಧಿಸಿದರೆ ಆ ನೀತಿಯನ್ನು ಪರಿಮಿತ ನೀತಿ ಎಂದು ಉಲ್ಲೇಖಿಸಲಾಗುತ್ತದೆ. ವಿಸ್ತರಣಾ ನೀತಿಯು ಹಣಕಾಸಿನ ಪೂರೈಕೆಯ ಗಾತ್ರವನ್ನು ಹೆಚ್ಚಿಸುತ್ತದೆ ಅಥವಾ ಬಡ್ಡಿದರವನ್ನು ಕುಗ್ಗಿಸುತ್ತದೆ. ಇದಿಷ್ಟೇ ಅಲ್ಲದೇ, ವಿತ್ತೀಯ ನೀತಿಗಳನ್ನು ಈ ಕೆಳಗಿನಂತೆ ಬಣ್ಣಿಸಲಾಗಿದೆ: ಕೇಂದ್ರ ವಿತ್ತೀಯ ಪ್ರಾಧಿಕಾರ ಗೊತ್ತುಮಾಡಿದ ಬಡ್ಡಿದರ ಆರ್ಥಿಕ ಬೆಳವಣಿಗೆ ಸೃಷ್ಟಿಯ ಉದ್ದೇಶ ಹೊಂದಿದ್ದರೆ ಹೊಂದಾಣಿಕೆಯ ನೀತಿ; ಬೆಳವಣಿಗೆ ಸೃಷ್ಟಿಸದೇ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶ ಇಲ್ಲದಿದ್ದರೆ ತಟಸ್ಥ ನೀತಿ; ಹಣದುಬ್ಬರ ತಗ್ಗಿಸುವ ಉದ್ದೇಶ ಹೊಂದಿದ್ದರೆ ಅದು ಬಿಗಿ ನೀತಿ ಎಂದು ಬಣ್ಣಿಸಲಾಗುತ್ತದೆ.

ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡುವುದು ಮತ್ತು ಬಡ್ಡಿದರಗಳನ್ನು ಕೆಳಮಟ್ಟಕ್ಕೆ ಇಳಿಸುವುದು ನೀತಿರಚನೆಕಾರರಿಗೆ ಮುಖ್ಯವಾಗಿದೆ. ವಿತ್ತೀಯ ನೀತಿಗಳಿಗೆ ಸಂಬಂಧಿಸಿದಂತೆ ಅವು ಪ್ರಾಮುಖ್ಯವಲ್ಲ ಮತ್ತು ಅಪ್ರಸ್ತುತವೆನಿಸಿವೆ.
 ಹಣದುಬ್ಬರವನ್ನು ತಗ್ಗಿಸಲು ನೀತಿರಚನೆಕಾರರು ಬದ್ಧವಾಗಿದ್ದಾರೆಂದು ಖಾಸಗಿ ನಿಯೋಗಿಗಳು(ಗ್ರಾಹಕರು ಮತ್ತು ಸಂಸ್ಥೆಗಳು) ನಂಬಿದ್ದರೆ,ಭವಿಷ್ಯದ ದರಗಳು ಇಳಿಮುಖವಾಗುವುದೆಂದು ಅವರು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ.(ಈ ನಿರೀಕ್ಷೆಗಳು ಹೇಗೆ ರೂಪುಗೊಳ್ಳುತ್ತದೆ ಎನ್ನುವುದು ಸಂಪೂರ್ಣ ಭಿನ್ನ ವಿಚಾರ; ಉದಾಹರಣೆಗೆ ತರ್ಕಬದ್ಧ ನಿರೀಕ್ಷೆಗಳನ್ನು ಹೊಂದಾಣಿಕೆ ನಿರೀಕ್ಷೆಗಳೊಂದಿಗೆ ತುಲನೆ ಮಾಡಿ)
ನೌಕರದಾರನೊಬ್ಬ ಭವಿಷ್ಯದಲ್ಲಿ ದರಗಳು ಹೆಚ್ಚುವುದೆಂದು ನಿರೀಕ್ಷಿಸಿದ್ದರೆ,ಈ ದರಗಳಿಗೆ ಹೊಂದಿಕೆಯಾಗಿ ಹೆಚ್ಚಿನ ವೇತನ ಪಡೆಯಲು ವೇತನ ಒಪ್ಪಂದ ರೂಪಿಸಬಹುದು. ಆದ್ದರಿಂದ ಕಡಿಮೆ ವೇತನಗಳ ನಿರೀಕ್ಷೆಯನ್ನು ನೌಕರರು ಮತ್ತು ಮಾಲೀಕರ ನಡುವೆ ವೇತನ ನಿಗದಿ ನಡವಳಿಕೆಯಲ್ಲಿ ಬಿಂಬಿಸಲಾಗುತ್ತದೆ.(ದರಗಳು ಕಡಿಮೆಯಾಗುವ ನಿರೀಕ್ಷೆಯಲ್ಲಿ ಕಡಿಮೆ ವೇತನಗಳು) ವೇತನಗಳು ವಾಸ್ತವವಾಗಿ ಕಡಿಮೆ ಇದ್ದಾಗ, ಬೇಡಿಕೆ ಎಳೆಯುವ ಹಣದುಬ್ಬರ ಇರುವುದಿಲ್ಲ. ಏಕೆಂದರೆ ನೌಕರರು ಕಡಿಮೆ ವೇತನ ಸ್ವೀಕರಿಸುತ್ತಿರುತ್ತಾರೆ. ವೆಚ್ಚ ಹೆಚ್ಚಳದ ಹಣದುಬ್ಬರ ಕೂಡ ಇರುವುದಿಲ್ಲ. ಏಕೆಂದರೆ ಮಾಲೀಕರು ವೇತನದ ರೂಪದಲ್ಲಿ ಕಡಿಮೆ ಪಾವತಿ ಮಾಡುತ್ತಾರೆ.


ಕಡಿಮೆ ಮಟ್ಟದ ಹಣದುಬ್ಬರ ಸಾಧನೆಗೆ ನೀತಿರಚನೆಕಾರರು ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡಬೇಕು; ಈ ಪ್ರಕಟಣೆಗಳು ಭವಿಷ್ಯದ ವಾಸ್ತವ ನೀತಿಯನ್ನು ಬಿಂಬಿಸುತ್ತದೆಂದು ಖಾಸಗಿ ನಿಯೋಗಿಗಳು ನಂಬಬೇಕು. ಕೆಳ ಮಟ್ಟದ ಹಣದುಬ್ಬರದ ಗುರಿಗಳ ಬಗ್ಗೆ ನೀಡಿದ ಪ್ರಕಟಣೆಯನ್ನು ಖಾಸಗಿ ನಿಯೋಗಿಗಳು ನಂಬದಿದ್ದರೆ, ವೇತನ ನಿಗದಿಯಲ್ಲಿ ಉನ್ನತ ಮಟ್ಟದ ಹಣದುಬ್ಬರ ನಿರೀಕ್ಷಿಸಲಾಗುತ್ತದೆ ಮತ್ತು ವೇತನಗಳು ಏರಿಕೆಯಾಗಿ ಹಣದುಬ್ಬರ ಜಿಗಿಯುತ್ತದೆ. ಹೆಚ್ಚಿನ ವೇತನವು ಗ್ರಾಹಕರ ಬೇಡಿಕೆ, ಬೇಡಿಕೆ ಎಳೆಯುವ ಹಣದುಬ್ಬರ ಮತ್ತು ಸಂಸ್ಥೆಯ ವೆಚ್ಚಗಳನ್ನು, ವೆಚ್ಚ ಹೆಚ್ಚಿಸುವ ಹಣದುಬ್ಬರವನ್ನು ವೃದ್ಧಿಸುತ್ತದೆ.ಇದರಿಂದ ಹಣದುಬ್ಬರ ಏರಿಕೆಯಾಗುತ್ತದೆ. ಆದ್ದರಿಂದ ವಿತ್ತೀಯ ನೀತಿ ಕುರಿತು ನೀತಿರಚನೆಕಾರಕರ ಪ್ರಕಟಣೆಗಳು ವಿಶ್ವಾಸಾರ್ಹವಿಲ್ಲದಿದ್ದರೆ ನೀತಿಯು ಇಚ್ಛಿತ ಪರಿಣಾಮ ಬೀರುವುದಿಲ್ಲ.

ಖಾಸಗಿ ನಿಯೋಗಿಗಳು ಕಡಿಮೆ ಹಣದುಬ್ಬರ ನಿರೀಕ್ಷಿಸಿದ್ದಾರೆಂದು ನೀತಿರಚನೆಕಾರರು ನಂಬಿದ್ದರೆ, ವಿಸ್ತರಣೆ ವಿತ್ತೀಯ ನೀತಿಯ ಅಳವಡಿಕೆಗೆ ಅವರನ್ನು ಪ್ರಚೋದಿಸುತ್ತದೆ.(ವರ್ಧಿಸುವ ಆರ್ಥಿಕ ಫಲಶ್ರುತಿಯ ಗರಿಷ್ಠ ಸೌಲಭ್ಯಗಳು ಹಣದುಬ್ಬರದ ಗರಿಷ್ಠ ವೆಚ್ಚವನ್ನು ಮೀರಿಸುತ್ತದೆ); ಆದಾಗ್ಯೂ,ಖಾಸಗಿ ನಿಯೋಗಿಗಳಿಗೆ ತರ್ಕಬದ್ಧ ನಿರೀಕ್ಷೆಗಳಿಗಳಿವೆಯೆಂದು ಭಾವಿಸಿದಲ್ಲಿ, ನೀತಿ ರಚನೆಕಾರರು ಇಂತಹ ಪ್ರಚೋದನೆಗೆ ಒಳಗಾಗುವುದನ್ನು ಅವರು ತಿಳಿದಿರುತ್ತಾರೆ.
ತಾವು ಕಡಿಮೆ ಹಣದುಬ್ಬರ ನಿರೀಕ್ಷಿಸಿದರೆ, ವಿಸ್ತರಣಾ ನೀತಿ ಅಳವಡಿಸುವ ‌ಮೂಲಕ ಹಣದುಬ್ಬರ ಏರಿಕೆಯಾಗುತ್ತದೆಂದು ಖಾಸಗಿ ನಿಯೋಗಿಗಳು ಅರಿತಿರುತ್ತಾರೆ. ತರುವಾಯ,ಖಾಸಗಿ ನಿಯೋಗಿಗಳು ಹೆಚ್ಚಿನ ಹಣದುಬ್ಬರ ನಿರೀಕ್ಷಿಸುತ್ತಾರೆ.(ನೀತಿರಚನೆಕಾರರು ಕಡಿಮೆ ಹಣದುಬ್ಬರ ವಿಶ್ವಾಸಾರ್ಹ ವೆಂದು ಪ್ರಕಟಿಸುವ ತನಕ) ಈ ಮುನ್ನೆಣಿಕೆಯನ್ನು ಹೊಂದಾಣಿಕೆ ನಿರೀಕ್ಷೆಯ ಮ‌ೂಲಕ ಪೂರೈಸಲಾಗುತ್ತದೆ(ವೇತನ ನಿಗದಿ ನಡವಳಿಕೆ);ಆದ್ದರಿಂದ ಹಣದುಬ್ಬರ ಏರಿಕೆಯಾಗುತ್ತದೆ(ಹೆಚ್ಚುವರಿ ಉತ್ಪಾದನೆಯ ಸೌಲಭ್ಯವಿಲ್ಲದೇ). ಆದ್ದರಿಂದ ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡದಿದ್ದ ಪಕ್ಷದಲ್ಲಿ ವಿಸ್ತರಣಾ ವಿತ್ತೀಯ ನೀತಿ ವಿಫಲಗೊಳ್ಳುತ್ತದೆ.



ವಿವಿಧ ವಿಧಾನಗಳಲ್ಲಿ ಪ್ರಕಟಣೆಗಳ ವಿಶ್ವಾಸಾರ್ಹತೆ ಸಾಧಿಸಬಹುದು. ಕಡಿಮೆ ಹಣದುಬ್ಬರ ಗುರಿಗಳೊಂದಿಗೆ ಸ್ವತಂತ್ರ ಕೇಂದ್ರ ಬ್ಯಾಂಕ್ ಸ್ಥಾಪನೆಯು ಒಂದು ವಿಧಾನವಾಗಿದೆ.(ಆದರೆ ಉತ್ಪಾದನೆ ಗುರಿಗಳಿಲ್ಲ). ಆದ್ದರಿಂದ ಸ್ವತಂತ್ರ ಸಂಸ್ಥೆಯು ನಿಗದಿಮಾಡಿದ್ದರಿಂದ ಹಣದುಬ್ಬರ ಕಡಿಮೆಯೆಂಬುದು ಖಾಸಗಿ ನಿಯೋಗಿಗಳಿಗೆ ಮನವರಿಕೆಯಾಗುತ್ತದೆ. ಕೇಂದ್ರ ಬ್ಯಾಂಕುಗಳಿಗೆ ಅವುಗಳ ಖ್ಯಾತಿ ವೃದ್ಧಿಗೆ ಮತ್ತು ನೀತಿಗುರಿಯತ್ತ ದೃಢ ಬದ್ಧತೆಯ ಸಂಕೇತವಾಗಿ ತನ್ನ ಗುರಿಗಳನ್ನು ಪೂರೈಸಲು ಪ್ರೋತ್ಸಾಹಕಗಳನ್ನು ನೀಡಬಹುದು.(ಉದಾಹರಣೆಗೆ, ಹೆಚ್ಚಿನ ಬಜೆಟ್‌ಗಳಿಗೆ, ಬ್ಯಾಂಕಿನ ಮುಖ್ಯಸ್ಥರಿಗೆ ವೇತನ ಬೋನಸ್). ವಿತ್ತೀಯ ನೀತಿ ಅನುಷ್ಠಾನದಲ್ಲಿ ಖ್ಯಾತಿಯು ಮುಖ್ಯ ಅಂಶವಾಗಿದೆ. ಆದರೆ ಖ್ಯಾತಿಯ ಕಲ್ಪನೆಯನ್ನು ಬದ್ಧತೆಯೆಂದು ತಪ್ಪಾಗಿ ಎಣಿಸಿ ಗೊಂದಲಕ್ಕೆ ಸಿಲುಕಬಾರದು. ಕೇಂದ್ರ ಬ್ಯಾಂಕ್ ವಿತ್ತೀಯ ನೀತಿಯ ಉತ್ತಮ ನಿರ್ವಹಣೆಯಿಂದ ಅನುಕೂಲಕರ ಖ್ಯಾತಿಯನ್ನು ಗಳಿಸಿರಬಹುದು. ಆದರೆ ಅದೇ ಕೇಂದ್ರಬ್ಯಾಂಕ್ ಬದ್ಧತೆಯ ಯಾವುದೇ ನಿರ್ದಿಷ್ಟ ಸ್ವರೂಪವನ್ನು ಆಯ್ಕೆ ಮಾಡದಿರಬಹುದು.(ಹಣದುಬ್ಬರಕ್ಕೆ ನಿರ್ದಿಷ್ಟ ವ್ಯಾಪ್ತಿಯ ಗುರಿ ನಿಗದಿ ಮಾಡುವುದು). ನೀತಿ ಗುರಿಯ ಬಗ್ಗೆ ಪ್ರಕಟಣೆಯನ್ನು ಮಾರುಕಟ್ಟೆಗಳು ಎಷ್ಟರಮಟ್ಟಿಗೆ ನಂಬುತ್ತವೆಂದು ನಿರ್ಧರಿಸುವಲ್ಲಿ ಖ್ಯಾತಿಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಎರಡೂ ಪರಿಕಲ್ಪನೆಗಳು ಹೋಲಿಕೆಯಿಂದ ಕೂಡಿರಬಾರದು. ತರ್ಕಬದ್ಧ ನಿರೀಕ್ಷೆಗಳಲ್ಲಿ, ಹಿಂದಿನ ನೀತಿ ಕ್ರಮಗಳ ಆಧಾರದ ಮೇಲೆ ನೀತಿರಚನೆಕಾರನಿಗೆ ತನ್ನ ಖ್ಯಾತಿಯನ್ನು ಸಾಬೀತುಮಾಡುವ ಅಗತ್ಯವಿಲ್ಲವೆಂಬುದನ್ನು ಗಮನಿಸಿ; ಉದಾಹರಣೆಗೆ,ಕೇಂದ್ರ ಬ್ಯಾಂಕ್ ಮುಖ್ಯಸ್ಥರ ಖ್ಯಾತಿಯು ಅವರ ಅಥವಾ ಅವಳ ಸಿದ್ಧಾಂತ, ವೃತ್ತಿಪರ ಹಿನ್ನೆಲೆ, ಸಾರ್ವಜನಿಕ ಹೇಳಿಕೆಗಳು,ಇತರೆಗಳಿಂದ ಸಂಪೂರ್ಣವಾಗಿ ಹುಟ್ಟಿರಬಹುದು. ವಾಸ್ತವವಾಗಿ ಹೀಗೆಂದು ವಾದಿಸಲಾಗಿದೆ(ಕೆನ್ನೆತ್ ರೋಗೋಫ್,1985ಗೆ ಉಲ್ಲೇಖವನ್ನು ಸೇರಿಸಿ) "ದಿ ಆಪ್ಟಿಮಲ್ ಕಮಿಟ್‌ಮೆಂಟ್ ಟು ಎನ್ ಇಂಟರ್‌ಮೀಡಿಯೇಟ್ ಮಾನಿಟರಿ ಟಾರ್ಗೆಟ್" 'ಇನ್ ಕ್ವಾರ್ಟರ್ಲಿ ಜರ್ನಲ್ ಆಫ್ ಎಕನಾಮಿಕ್ಸ್'#100, pp. 1169-1189)
ವಿತ್ತೀಯ ನೀತಿ ಅನುಷ್ಠಾನದಲ್ಲಿ ಕಾಲ ಅಸಮಂಜಸತೆಗೆ ಸಂಬಂಧಿಸಿದ ಲಕ್ಷಣಗಳನ್ನು ತಪ್ಪಿಸಲು(ವಿಶೇಷವಾಗಿ ವಿಪರೀತ ಹಣದುಬ್ಬರ)ಕೇಂದ್ರ ಬ್ಯಾಂಕ್ ಮುಖ್ಯಸ್ಥರು ಉಳಿದ ಸರಾಸರಿ ಆರ್ಥಿಕತೆಗಿಂತ ಹೆಚ್ಚಾಗಿ ಹಣದುಬ್ಬರದ ಬಗ್ಗೆ ಹೆಚ್ಚಿನ ಅರುಚಿ ಹೊಂದಿರಬೇಕು. ಆದ್ದರಿಂದ ನಿರ್ದಿಷ್ಟ ಕೇಂದ್ರ ಬ್ಯಾಂಕ್ ಖ್ಯಾತಿಯು ಅದರ  ಪೂರ್ವ ಸಾಧನೆಗೆ ಕಟ್ಟುಬೀಳುವ ಅಗತ್ಯವಿಲ್ಲ. ಹಣದುಬ್ಬರ ನಿರೀಕ್ಷೆಗಳ ರಚನೆಗೆ ಮಾರುಕಟ್ಟೆಗಳು ಬಳಸಬಹುದಾದ ನಿರ್ದಿಷ್ಟ ಸಾಂಸ್ಥಿಕ ವ್ಯವಸ್ಥೆಗಳಿಗೆ ಅದು ಕಟ್ಟುಬೀಳಬೇಕು.

ವಿತ್ತೀಯ ನೀತಿಗೆ ಸಂಬಂಧಿಸಿದ ವಿಶ್ವಾಸಾರ್ಹತೆ ಕುರಿತು ಆಗಾಗ್ಗೆ ಚರ್ಚೆಯಾಗುತ್ತಿದ್ದರೂ ಕೂಡ, ವಿಶ್ವಾಸಾರ್ಹತೆಯ ನಿಖರ ಅರ್ಥದ ಬಗ್ಗೆ ಅಪರೂಪವಾಗಿ ವ್ಯಾಖ್ಯಾನಿಸಲಾಗಿದೆ. ಇಂತಹ ಸ್ಪಷ್ಟೀಕರಣದ ಕೊರತೆಯಿಂದ ಅತ್ಯಂತ ಅನುಕೂಲಕರ ಎಂಬ ನಂಬಿಕೆಯಿಂದ ಕೂಡ ನೀತಿಯನ್ನು ದೂರಮಾಡುತ್ತದೆ. ಉದಾಹರಣೆಗೆ, ಸಾರ್ವಜನಿಕ ಹಿತಾಸಕ್ತಿ ಪಾಲನೆಯ ಸಾಮರ್ಥ್ಯವು ಕೇಂದ್ರ ಬ್ಯಾಂಕುಗಳ ಜತೆ ಆಗಾಗ್ಗೆ ಸಂಬಂಧಿಸುವ ವಿಶ್ವಾಸಾರ್ಹತೆಯ ಕುರಿತ ಒಂದು ವ್ಯಾಖ್ಯಾನ. ಕೇಂದ್ರ ಬ್ಯಾಂಕ್ ತನ್ನ ವಾಗ್ದಾನಗಳನ್ನು ಎಷ್ಟು ನಂಬಿಕಾರ್ಹತೆಯಿಂದ ಉಳಿಸಿಕೊಳ್ಳುತ್ತದೆನ್ನುವುದು ಕೂಡ ಸಾಮಾನ್ಯ ವ್ಯಾಖ್ಯೆಯಾಗಿದೆ. ಕೇಂದ್ರ ಬ್ಯಾಂಕ್ ಸಾರ್ವಜನಿಕರಿಗೆ ಸುಳ್ಳು ನುಡಿಯಬಾರದೆಂದು ಪ್ರತಿಯೊಬ್ಬರೂ ಬಹುತೇಕ ಒಪ್ಪುತ್ತಾರೆ. ಆದರೆ ಸಾರ್ವಜನಿಕ ಹಿತಾಸಕ್ತಿ ರಕ್ಷಣೆಗೆ ಅತ್ಯುತ್ತಮವಾಗಿ ಕೇಂದ್ರ ಬ್ಯಾಂಕ್ ಹೇಗೆ ಸೇವೆ ಸಲ್ಲಿಸಬಹುದೆಂಬ ಬಗ್ಗೆ ವ್ಯಾಪಕ ಭಿನ್ನಾಭಿಪ್ರಾಯವಿದೆ. ಆದ್ದರಿಂದ ವ್ಯಾಖ್ಯೆಯ ಕೊರತೆಯಿಂದ ಜನರು ವಿಶ್ವಾಸಾರ್ಹತೆಯ ಒಂದು ನಿರ್ದಿಷ್ಟ ನೀತಿಯನ್ನು ಬೆಂಬಲಿಸುತ್ತಿರುವುದಾಗಿ ನಂಬಿರುತ್ತಾರೆ. ವಾಸ್ತವವಾಗಿ ಅವರು ಇನ್ನೊಂದು ನೀತಿಯನ್ನು ಬೆಂಬಲಿಸಿರುತ್ತಾರೆ.[೩]

ಅಂತರ್ಜಾಲ [ಇಂಗ್ಲಿಷ್: Internet ಇಂಟರ್^ನೆಟ್]


ಅಂತರ್ಜಾಲ [ಇಂಗ್ಲಿಷ್: Internet ಇಂಟರ್^ನೆಟ್] ಎನ್ನುವುದು ಕಂಪ್ಯೂಟರ್ ನೆಟ್‌ವರ್ಕ್‌ಗಳ (ಜಾಲಬಂಧಗಳ) ಒಂದು ನೆಟ್‌ವರ್ಕ್‌ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯನ್‌ಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್‌ವರ್ಕ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ.



ಅಂತರ್ಜಾಲದ ನಕ್ಷೆ (ಕಾಲ್ಪನಿಕ)

ಪಾರಿಭಾಷೆ


ಚರಿತ್ರೆ
ಇಂಟರ್‌ನೆಟ್ ಅಥವಾ ಅಂತರ್ಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಗೋಚರವಾಗಿದ್ದು ೧೯೯೦ರ ದಶಕದಲ್ಲಿ.

ರಚನಾ ವ್ಯವಸ್ಥೆ
◾ಅಂತರ್ಜಾಲವನ್ನು, ಅಂತರಜಾಲದ ಪರಿಕಲ್ಪನೆ ಹಾಗು ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತದೆ. ಉದಾಹರಣೆಗೆ ಕ್ಲೈಂಟ್-ಸರ್ವರ್ ಗ್ರಾಹಕ ಸೇವಾ ಪರಿಕರ ಕಂಪ್ಯೂಟಿಂಗ್ ಹಾಗು ಇಂಟರ್ನೆಟ್ ಪ್ರೋಟೋಕಾಲ್ ಸೂಟ್(TCP/IP)ಅಂತರಜಾಲ ನಿಯಮಗಳ ಬಳಕೆ ಮಾಡಲಾಗುತ್ತದೆ.ಯಾವುದೇ ಒಂದು ಜನಪ್ರಿಯ ಇಂಟರ್ನೆಟ್ ಪ್ರೋಟೋಕಾಲ್ ಗಳನ್ನೂ ಒಂದು ಅಂತರ್ಜಾಲದಲ್ಲಿ ಪತ್ತೆ ಮಾಡಬಹುದು.
◾ಉದಾಹರಣೆಗೆ HTTP(ಜಾಲ ಸೇವೆಗಳು), SMTP(ಇ-ಮೇಲ್), ಹಾಗು FTP(ಫೈಲ್ ವರ್ಗಾವಣೆ). ಅಂತರಜಾಲ ಮಾಹಿತಿಗಳು ಸಾಮಾನ್ಯವಾಗಿ ತಾಂತ್ರಿಕ ಮಾಹಿತಿಯ ದತ್ತಾಂಶವನ್ನು ಹೊಂದಿರುತ್ತವೆ. ಆಧುನಿಕ ಮಾಹಿತಿ ವ್ಯವಸ್ಥೆಗಳಿಗೆ ಕಾರ್ಪೊರೇಟ್ ವಿವರವನ್ನು ಮುಖಾಮುಖಿ ಯಾಗಿ,ಆಧುನಿಕ ಇಂಟರ್ ಫೇಸ್ ಒದಗಿಸುತ್ತದೆ.
◾ಅಂತರ್ಜಾಲವನ್ನು, ಅಂತರಜಾಲದ ಒಂದು ಖಾಸಗಿ ಆನ್ಯಲಾಗ್(ಸದೃಶವಾದ ವಸ್ತು) ಎಂದು ಅರ್ಥೈಸಿಕೊಳ್ಳಬಹುದು,ಅಥವಾ ಒಂದು ಸಂಸ್ಥೆಗೆ ಸೀಮಿತ ಅಂತರಜಾಲದ ಒಂದು ಖಾಸಗಿ ವಿಸ್ತರಣೆಯೆಂದು ಪರಿಗಣಿಸಬಹುದು. ಮೊದಲ ಬಾರಿಗೆ ಅಂತರ್ಜಾಲ ವೆಬ್ಸೈಟ್ ಗಳು ಹಾಗು ಹೋಂ ಪೇಜಸ್ ಗಳು ೧೯೯೦-೧೯೯೧ರಲ್ಲಿ ಆಯಾ ಸಂಸ್ಥೆಗಳಲ್ಲಿ, ಕಂಡುಬಂದವು.
◾ಅಧಿಕೃತವಾಗಿ ಗುರುತಿಸಲಾಗಿರದಿದ್ದರೂ, ೧೯೯೨ರಲ್ಲಿ ಅಂತರ್ಜಾಲ ಎಂಬ ಪದವು ಮೊದಲು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯಿತು. ಉದಾಹರಣೆಗೆ ವಿಶ್ವವಿದ್ಯಾಲಯಗಳು ಹಾಗು ತಂತ್ರಜ್ಞಾನ ಸಂಸ್ಥೆಗಳು.((Dubious|date=October 2009) ಅಂತರ್ಜಾಲಗಳನ್ನು ಎಕ್ಸಟ್ರಾನೆಟ್ ಗಳೊಂದಿಗೂ ಸಹ ವಿರುದ್ದಾರ್ಥಕವಾಗಿ ಬಳಸಲಾಗುತ್ತದೆ.
◾ಅಂತರ್ಜಾಲಗಳು ಸಾಧಾರಣವಾಗಿ ಸಂಸ್ಥೆಯ ನೌಕರರಿಗೆ ಮಾತ್ರ ಸೀಮಿತವಾಗಿದ್ದರೆ, ಎಕ್ಸ್ಟ್ರಾನೆಟ್ ಗಳನ್ನು ಗ್ರಾಹಕರು, ಸರಬರಾಜುದಾರರು, ಅಥವಾ ಇತರ ಅಂಗೀಕೃತ ಗುಂಪುಗಳೂ ಸಹ ಬಳಕೆಮಾಡಬಹುದು. ಎಕ್ಸ್ಟ್ರಾನೆಟ್ ಗಳು, ಅದಕ್ಕೆ ಆಕ್ಸೆಸ್(ಪ್ರವೇಶ), ಆಥರೈಸೇಶನ್ (ಪ್ರಮಾಣೀಕರಣ), ಹಾಗು ಅಥೆಂಟಿಕೆಶನ್(ದೃಢೀಕರಣ)ದಂತಹ (AAA ಪ್ರೋಟೋಕಾಲ್)ವಿಶೇಷ ಸೌಕರ್ಯವನ್ನು ಅಂತರಜಾಲದ ಮೂಲಕ ಖಾಸಗಿ ನೆಟ್ವರ್ಕ್ ಗೆ ವಿಸ್ತರಿಸುತ್ತವೆ.
◾ಅಂತರ್ಜಾಲಗಳು, ಅಂತರಜಾಲಕ್ಕೆ ಫೈರ್ ವಾಲ್ (ಸಾಫ್ಟ್ವೇರ್ ಮತ್ತು ಹಾರ್ಡ್ ವೇರ್)ನೊಂದಿಗೆ ನೆಟ್ವರ್ಕ್ ಪ್ರವೇಶವನ್ನು ಒದಗಿಸುತ್ತವೆ. ಈ ಮೂಲಕ ಬಾಹ್ಯ, ಅನಧಿಕೃತ ಪ್ರವೇಶದಿಂದ ಅಂತರ್ಜಾಲಕ್ಕೆ ರಕ್ಷಣೆ ಒದಗಿಸುತ್ತವೆ. ಸಾಮಾನ್ಯವಾಗಿ ಪ್ರವೇಶಗಳೂ ಸಹ ಬಳಕೆದಾರನ ದೃಢೀಕರಣ, ಸಂದೇಶಗಳ ಗೋಪ್ಯತೆ ಹಾಗು ಸಾಮಾನ್ಯವಾಗಿ ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್(VPN) ಕನೆಕ್ಟಿವಿಟಿಯನ್ನು ಕಂಪನಿಯ ಬಗ್ಗೆ ಮಾಹಿತಿ, ಕಂಪ್ಯೂಟರ್ ಸಾಧನಗಳು ಹಾಗು ಆಂತರಿಕ ಸಂವಹನಕ್ಕೆ ಪ್ರವೇಶದ ಅಧಿಕಾರವನ್ನು ಬಾಹ್ಯ ನೌಕರವರ್ಗಕ್ಕೆ ನೀಡುವುದರ ಮೂಲಕ ನಿರ್ವಹಣೆ ಮಾಡುತ್ತವೆ.

ಉಪಯೋಗಗಳು
◾ಹೆಚ್ಚಾಗಿ, ಅಂತರ್ಜಾಲಗಳನ್ನು ಸಾಧನೋಪಕರಣ ಹಾಗು ಅಳವಡಿಕೆಗಳನ್ನು ವಿತರಿಸಲು ಬಳಸಲಾಗುತ್ತದೆ. ಉದಾಹರಣೆಗೆ: ಸಹಯೋಗ(ಗುಂಪುಗಳಲ್ಲಿ ಹಾಗು ದೂರವಾಣಿ ಮೂಲಕ ಸಮಾಲೋಚನೆ ಮಾಡುವವರಿಗೆ ಅನುಕೂಲ ಒದಗಿಸುವುದು) ಅಥವಾ ಅತ್ಯಾಧುನಿಕ ಕಾರ್ಪೋರೇಟ್ ನಿರ್ದೇಶಿಕೆಗಳು, ಮಾರಾಟಗಾರ ಹಾಗು ಗ್ರಾಹಕ ಸಂಬಂಧಿತ ನಿರ್ವಹಣಾ ಸಾಧನಗಳು, ಯೋಜನಾ ನಿರ್ವಹಣೆ ಮುಂತಾದವುಗಳನ್ನು ಉತ್ಪಾದಕತೆ ಹೆಚ್ಚಿಸಲು ಬಳಸಲಾಗುತ್ತದೆ.
◾ಅಂತರ್ಜಾಲಗಳನ್ನು ಕಾರ್ಪೋರೇಟ್ ಕಾರ್ಯ-ಚಟುವಟಿಕೆಯ ಸಂಸ್ಕೃತಿ-ಬದಲಾವಣಾ ವೇದಿಕೆಗಳಾಗಿಯೂ ಸಹ ಬಳಸಲಾಗುತ್ತದೆ. ಉದಾಹರಣೆಗೆ, ಅಂತರ್ಜಾಲ ಚರ್ಚಾವೇದಿಕೆಯನ್ನು ಬಳಸಿಕೊಂಡು ದೊಡ್ಡ ಸಂಖ್ಯೆಯ ನೌಕರವರ್ಗವು ಪ್ರಮುಖ ವಿಷಯಗಳನ್ನು ಚರ್ಚಿಸಿದರೆ; ಇದು ನಿರ್ವಹಣೆ, ಉತ್ಪಾದಕತೆ, ಗುಣಮಟ್ಟ ಹಾಗು ಇತರ ಕಾರ್ಪೋರೇಟ್ ವಿವಾದ-ವಿಷಯಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ದಾರಿ ಮಾಡಿಕೊಡಬಹುದು.
◾ದೊಡ್ಡ ಅಂತರ್ಜಾಲಗಳಲ್ಲಿ, ವೆಬ್ಸೈಟ್ ಸೇವಾ ಬಳಕೆಯು ಸಾಮಾನ್ಯವಾಗಿ ಸಾರ್ವಜನಿಕ ವೆಬ್ಸೈಟ್ ಸೇವಾ ಬಳಕೆಗೆ ಸದೃಶವಾಗಿರುತ್ತದೆ. ಅಲ್ಲದೇ ಇದರ ಒಟ್ಟಾರೆ ಚಟುವಟಿಕೆಯನ್ನು ವೆಬ್ ಮೆಟ್ರಿಕ್ ಸಾಫ್ಟ್ ವೇರ್ (ಮಾನದಂಡ)ಮೂಲಕ ಪತ್ತೆ ಮಾಡಿ ಸೂಕ್ತವಾಗಿ ಅರ್ಥೈಸಬಹುದು. ಅಂತರ್ಜಾಲ ವೆಬ್ಸೈಟ್ ಪರಿಣಾಮಕಾರಿತ್ವವನ್ನು ಬಳಕೆದಾರ ಸಮೀಕ್ಷೆಗಳೂ ಸಹ ಉತ್ತಮಪಡಿಸುತ್ತವೆ.
◾ದೊಡ್ಡ ಉದ್ದಿಮೆಗಳು, ತನ್ನ ಬಳಕೆದಾರರಿಗೆ ತನ್ನ ಅಂತರ್ಜಾಲದೊಳಗೆ ಫೈರ್ ವಾಲ್ ಸರ್ವರ್ ಗಳ ಮೂಲಕ ಸಾರ್ವಜನಿಕ ಅಂತರ್ಜಾಲಕ್ಕೆ ಪ್ರವೇಶ ಕಲ್ಪಿಸಿಕೊಡುತ್ತವೆ. ಇವುಗಳಿಗೆ ಸಂಪೂರ್ಣ ಭದ್ರತೆಯೊಂದಿಗೆ ಬರುವ ಹಾಗು ಹೋಗುವ ಸಂದೇಶಗಳನ್ನು ಹಿಡಿದಿಟ್ಟು ಪ್ರದರ್ಶಿಸುವ ಸಾಮರ್ಥ್ಯವಿರುತ್ತದೆ. ಅಂತರ್ಜಾಲದ ಒಂದು ಭಾಗದ ಮಾಹಿತಿಯನ್ನು ಗ್ರಾಹಕರಿಗೆ ಹಾಗು ವ್ಯಾಪಾರಕ್ಕೆ ಸಂಬಂಧಿಸದ ಇತರರಿಗೆ ಲಭ್ಯವಾಗುವಂತೆ ಮಾಡಿದರು.
◾ಇದು ಒಂದು ಎಕ್ಸ್ಟ್ರಾನೆಟ್ ನ ಭಾಗವಾಗುತ್ತದೆ. ವ್ಯಾಪಾರ ಸಂಸ್ಥೆಗಳು ಖಾಸಗಿ ಸಂದೇಶಗಳನ್ನು ಸಾರ್ವಜನಿಕ ನೆಟ್ವರ್ಕ್ ಮೂಲಕ, ವಿಶೇಷವಾದ ಸಂದೇಶ ಗೋಪ್ಯತೆ/ಅಸಂಕೇತೀಕರಣವನ್ನು ಬಳಸಿಕೊಂಡು ಕಳುಹಿಸಬಹುದು. ಅಲ್ಲದೇ ಇತರ ಭದ್ರತಾ ಮುಂಜಾಗ್ರತೆಗಳು ಅಂತರ್ಜಾಲದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಪರ್ಕ ಹೊಂದುತ್ತವೆ.
◾ಅಂತರ್ಜಾಲದ ಬಳಕೆದಾರನು, ಆಂತರಿಕ ಸೈಟ್ ನ್ನು (ಮಾಹಿತಿಸೂಚಿಕೆ)ತಯಾರಿಸಲು ಸಂಪಾದಕೀಯ ಹಾಗು ತಂತ್ರಜ್ಞಾನ ತಂಡಗಳು ಒಟ್ಟಾಗಿ ಕೆಲಸ ನಿರ್ವಹಿಸುವುದನ್ನು ಮನಗಾಣುತ್ತಾನೆ. ತೀರ ಸಾಮಾನ್ಯವಾಗಿ, ಅಂತರ್ಜಾಲಗಳನ್ನು, ದೊಡ್ಡ ಸಂಸ್ಥೆಗಳಲ್ಲಿ ಸಂವಹನ, HR ಅಥವಾ CIO (ಕಾಂಗ್ರೆಸ್ ಆಫ್ ಇಂಡಸ್ಟ್ರಿಯಲ್ ಆರ್ಗೈನೇಜಶನ್)ವಿಭಾಗಗಳು, ಅಥವಾ ಇವುಗಳ ಕೆಲ ಸಂಯೋಜನೆಗಳನ್ನು ಹೊಂದಿರುವ ವಿಭಾಗಗಳು ನಿರ್ವಹಿಸುತ್ತವೆ.
◾ವಿಷಯಸೂಚಿಯ ಉದ್ದೇಶ ಹಾಗು ವೈವಿಧ್ಯತೆ ಹಾಗು ಅಸಂಖ್ಯಾತ ಸಿಸ್ಟಂ ಇಂಟರ್ಫೇಸ್ ಗಳ (ಮುಖಾಮುಖಿ ವಿಧಾನಗಳ)ಕಾರಣದಿಂದಾಗಿ, ಹಲವು ಸಂಸ್ಥೆಗಳ ಅಂತರಜಾಲಗಳು ತಮ್ಮ ಅನುಕ್ರಮವಾದ ನಿಯಮಿತ ಸಾರ್ವಜನಿಕ ವೆಬ್ಸೈಟ್ ಗಳಿಗಿಂತ ಹೆಚ್ಚು ಸಂಕೀರ್ಣವಾಗಿರುತ್ತವೆ. ಅಂತರ್ಜಾಲಗಳು ಹಾಗು ಅವುಗಳ ಬಳಕೆಯು ಕ್ಷಿಪ್ರವಾಗಿ ಬೆಳವಣಿಗೆಯಾಗುತ್ತಿದೆ.
◾ನೀಲ್ಸನ್ ನಾರ್ಮನ್ ಗ್ರೂಪ್ ೨೦೦೭ರಲ್ಲಿ ರಚಿಸಿ ಆಯೋಜಿಸಿದ ವಾರ್ಷಿಕ ಅಂತರ್ಜಾಲ ವಿನ್ಯಾಸದ ಪ್ರಕಾರ, ಇದರಲ್ಲಿ ಭಾಗವಹಿಸಿದವರ ಅಂತರ್ಜಾಲ ಪುಟಗಳ ಸಂಖ್ಯೆಯು ೨೦೦೧ ರಿಂದ ೨೦೦೩ರೊಳಗೆ ಸರಿಸುಮಾರು ೨೦೦,೦೦೦ಕ್ಕೂ ಅಧಿಕವಾಗಿತ್ತೆಂದು ಅಂದಾಜಿಸಲಾಗಿದೆ. ಅಲ್ಲದೇ ೨೦೦೫–೨೦೦೭ರ ನಡುವೆ ಇದು ಸರಿಸುಮಾರು ಆರು ದಶಲಕ್ಷಕ್ಕೂ ಹೆಚ್ಚೆಂದೂ ಅಂದಾಜಿಸಲಾಗಿದೆ.[೧]

ಪ್ರಯೋಜನಗಳು
◾ಕಾರ್ಯತಂಡದ ಉತ್ಪಾದಕತೆ : ಅಂತರ್ಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ. ಅಲ್ಲದೇ ಅವರ ಪಾತ್ರ ಹಾಗು ಜವಾಬ್ದಾರಿಗಳಿಗೆ ಅನುಸಾರವಾಗಿ ಅನ್ವಯಗಳನ್ನು ಬಳಕೆ ಮಾಡಬಹುದು. ವೆಬ್ ಬ್ರೌಸರ್ ಇಂಟರ್ಫೇಸ್ ನ ಸಹಾಯದಿಂದ, ಬಳಕೆದಾರರು, ದತ್ತಾಂಶ ಸಂಗ್ರಹದಲ್ಲಿರುವ ಸಂಸ್ಥೆಗೆ ಬೇಕಾದ ಯಾವುದೇ ದತ್ತಾಂಶವನ್ನು ಯಾವುದೇ ಸಮಯದಲ್ಲಿ ಸುಲಭದಲ್ಲಿ ಪಡೆಯಬಹುದು.
◾ಅಲ್ಲದೇ- ಇದು ಭದ್ರತಾ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ - ಇದು ಸಂಸ್ಥೆಯ ಯಾವುದೇ ಕಾರ್ಯತಾಣಗಳೊಳಗಿರಬಹುದು. ತಮ್ಮ ಕಾರ್ಯವನ್ನು ಬೇಗನೆ ಮುಗಿಸಲು ನೌಕರರ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ಹೆಚ್ಚಿಸುವುದು, ಹಾಗು ತಮ್ಮ ಮಾಹಿತಿ ಸರಿಯಾಗಿದೆಯೆಂಬ ಭರವಸೆ ನೀಡುವುದು. ಇದು ಬಳಕೆದಾರರಿಗೆ ಒದಗಿಸಲಾದ ಸೇವೆಗಳನ್ನು ಉತ್ತಮಪಡಿಸಲೂ ಸಹ ಸಹಾಯಮಾಡುತ್ತದೆ.
◾ಸಮಯ : ಅಂತರ್ಜಾಲಗಳು ಸಂಸ್ಥೆಗಳಿಗೆ, ನೌಕರರಿಗೆ ಅಗತ್ಯವಿದ್ದ ಸಮಯದಲ್ಲಿ ಮಾಹಿತಿಯನ್ನು ಹಂಚಿಕೆ ಮಾಡಲು ಅವಕಾಶ ನೀಡುತ್ತದೆ; ನೌಕರರು ಇಲೆಕ್ಟ್ರಾನಿಕ್ ಮೇಲ್ ನ ಮೂಲಕ ಮಾಹಿತಿಯ ಅವ್ಯವಸ್ಥೆಯಿಂದಾಗಿ ಉಂಟಾಗುವ ಗೊಂದಲಕ್ಕಿಂತ, ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿಯನ್ನು ಅವರು ಸಂಯೋಜಿಸಬಹುದು.
◾ಸಂವಹನ : ಅಂತರ್ಜಾಲಗಳು ಒಂದು ಸಂಸ್ಥೆಯೊಳಗೆ ಸಮಗ್ರವಾಗಿ ಹಾಗು ಸಮಾನವಾಗಿ ಸಂವಹನದ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಸಂಪರ್ಕ-ಸಂವಹನದ ದೃಷ್ಟಿಕೋನದಿಂದ, ಅಂತರ್ಜಾಲಗಳು ಸಂಸ್ಥೆಯುದ್ದಕ್ಕೂ ಸಮಗ್ರವಾದ ನಿಲುಕಿನಲ್ಲಿರುವ ಕಾರ್ಯ ನೀತಿಯ ಉಪಕ್ರಮವನ್ನು ಜಾಗತಿಕವಾಗಿ ಅಗತ್ಯ ಮಾಹಿತಿ ತಿಳಿಸಲು ಸಹಕಾರಿಯಾಗಿವೆ.ಸಂಘಟನೆಯ ಸಂಪೂರ್ಣ ಆರಂಭಿಕ ಕಾರ್ಯವಿಧಾನಗಳನ್ನು ಅವು ದೃಢಪಡಿಸಲು ಸಮರ್ಥವಾಗಿವೆ. ಮಾಹಿತಿಯ ಮಾದರಿಯನ್ನು ಸುಲಭವಾಗಿ ತಿಳಿಯಪಡಿಸುವುದು ಉಪಕ್ರಮದ ಉದ್ದೇಶವಾಗಿದೆ. *ಅದು ಉಪಕ್ರಮವು ಏನನ್ನು ಸಾಧಿಸಲು ಉದ್ದೇಶಿಸಿದೆ, ಉಪಕ್ರಮದ ಹಿಂದಿರುವ ಅಂಶಗಳು ಯಾವವು, ಇಲ್ಲಿಯವರೆಗೂ ದೊರೆತ ಫಲಿತಾಂಶ, ಹಾಗು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು. ಅಂತರ್ಜಾಲದಲ್ಲಿ ಈ ಮಾಹಿತಿಯನ್ನು ಒದಗಿಸುವ ಮೂಲಕ, ಸಿಬ್ಬಂದಿಯು ಕಾರ್ಯವಿಧಾನದೊಂದಿಗೆ ಇಂದಿನತನಕದ ಮಾಹಿತಿಯನ್ನು ಸಂಗ್ರಹಿಸಿ ಕಲೆಹಾಕುವ ಅವಕಾಶ ದೊರೆಯುತ್ತದೆ. ಸಂವಹನದ ಕೆಲ ಉದಾಹರಣೆಗಳೆಂದರೆ ಚಾಟ್, ಇಮೇಲ್, ಹಾಗು ಅಥವಾ ಬ್ಲಾಗ್ ಗಳು.
◾ಅಂತರ್ಜಾಲವು ಸಂವಹನದಿಂದಾಗಿ ಒಂದು ಸಂಸ್ಥೆಗೆ ನೆರವಾದ ವಾಸ್ತವ ಜಗತ್ತಿನ ಒಂದು ಉತ್ತಮ ಉದಾಹರಣೆಯೆಂದರೆ, ನೆಸ್ಲೆ ಸಂಸ್ಥೆ, ಇದು ಸ್ಕ್ಯಾಂಡಿನೇವಿಯದಲ್ಲಿ ಆರಂಭಿಸಿದ ಹಲವಾರು ಆಹಾರ ಸಂಸ್ಕರಣ ಘಟಕಗಳ ಬಗ್ಗೆ ಅಂತರ್ಜಾಲ ಸಂವಹನದಿಂದ ಹೊರ ಜಗತ್ತಿಗೆ ಇದರ ಬಗ್ಗೆ ಮಾಹಿತಿ ದೊರೆಯಿತು. ಅವರ ಪ್ರಮುಖ ಬೆಂಬಲದ, ನೆರವಿನ ವ್ಯವಸ್ಥೆಯು ಪ್ರತಿ ದಿನ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ವ್ಯವಾಹರಿಕ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು.[೨]
◾ನೆಸ್ಲೆ ಸಂಸ್ಥೆಯು ಅಂತರ್ಜಾಲದ ಮೇಲೆ ತನ್ನ ಬಂಡವಾಳ ಹೂಡಲು ನಿರ್ಧರಿಸಿದಾಗ, ಅದು ಇದರಿಂದ ಆಗುವ ಉಳಿತಾಯವನ್ನು ಬೇಗನೆ ಗುರುತಿಸಿತು. ಮ್ಯಾಕ್ಗೋವರ್ನ್ ಪ್ರಕಾರ ಪ್ರಶ್ನೆಗಳಿಗಾಗಿ ಮಾಡಲಾಗುತ್ತಿದ್ದ ದೂರವಾಣಿ ಕರೆಗಳ ನಂತರ ಉಂಟಾಗುತ್ತಿದ್ದ ಉಳಿತಾಯವು ಅಂತರ್ಜಾಲದ ಮೇಲೆ ಹೂಡಲಾದ ಬಂಡವಾಳಕ್ಕಿಂತ ಮೂಲಭೂತವಾಗಿ ಅಧಿಕವಾಗಿತ್ತು.
◾ವೆಬ್ ಪ್ರಕಟಣೆ , ಹೈಪರ್ ಮೀಡಿಯ ಹಾಗು ವೆಬ್ ತಂತ್ರಜ್ಞಾನಗಳನ್ನೂ ಬಳಸಿಕೊಂಡು ಸಂಸ್ಥೆಯುದ್ದಕ್ಕೂ ಅಡ್ಡಿ ಆತಂಕಗಳೊಂದಿಗೆ ನಿಧಾನ ಗತಿಯ ಕಾರ್ಪೋರೆಟ್ ಜ್ಞಾನ ನಿರ್ವಹಣೆ ಹಾಗು ಸುಲಭವಾಗಿ ತಲುಪಲು ಅವಕಾಶ ನೀಡುತ್ತದೆ. ಉದಾಹರಣೆಗಳಲ್ಲಿ: ನೌಕರರ ಕೈಪಿಡಿ, ಪ್ರಯೋಜನಗಳ ದಾಖಲೆ ಆಧಾರ, ಕಂಪನಿಯ ನೀತಿ-ಸೂತ್ರಗಳು, ವ್ಯಾಪಾರ ಗುಣಮಟ್ಟಗಳು, ನ್ಯೂಸ್ ಫೀಡ್ ಗಳು, ಹಾಗು ತರಬೇತಿಯನ್ನೂ ಸಹ ಒಳಗೊಂಡಿದೆ.
◾ಇವುಗಳನ್ನು ಸಾಮಾನ್ಯವಾದ ಅಂತರ್ಜಾಲ ಗುಣಮಟ್ಟಗಳನ್ನು ಬಳಸಿಕೊಂಡು ಸುಲಭವಾಗಿ ತಲುಪಬಹುದು.(ಆಕ್ರೊಬ್ಯಾಟ್ ಫೈಲುಗಳು, ಫ್ಲ್ಯಾಶ್ ಫೈಲುಗಳು, CGI ಅಪ್ಲಿಕೇಶನ್ ಗಳು). ಪ್ರತಿಯೊಂದು ವ್ಯಾಪಾರ ಘಟಕವು ತನ್ನ ದಾಖಲೆಗಳ ಆಧಾರದ ಆನ್ಲೈನ್ ಪ್ರತಿಯನ್ನು ನವೀಕರಿಸಿಕೊಳ್ಳಬಹುದು. ತೀರ ಇತ್ತೀಚಿನ ರೂಪಾಂತರವು ಸಾಮಾನ್ಯವಾಗಿ ಅಂತರ್ಜಾಲ ಬಳಕೆಮಾಡುವ ನೌಕರರಿಗೆ ದೊರಕುತ್ತದೆ.
◾ವ್ಯಾಪಾರ ಕಾರ್ಯ ಚಟುವಟಿಕೆಗಳ ಪ್ರಕ್ರಿಯೆ ಹಾಗು ನಿರ್ವಹಣೆ : ಅಂತರ್ಜಾಲಗಳನ್ನು ವ್ಯಾಪಾರ ಪ್ರಕ್ರಿಯೆಗಳಿಗೆ ನೆರವಾಗಲು ಹಾಗು ಅಂತರ್ಜಾಲದ ಮೇಲೆ ಕೆಲಸ ಮಾಡುವ ವ್ಯಾಪಾರ ಸಂಸ್ಥೆಯುದ್ದಕ್ಕೂ ಅಭಿವೃದ್ಧಿ ಹೊಂದುತ್ತಿರುವ ಹಾಗು ಪರಿಣಾಮಕಾರಿ ಅನುಷ್ಠಾನ, ಅನ್ವಯಗಳ ವೇದಿಕೆಯಾಗಿಯೂ ಸಹ ಬಳಕೆ ಮಾಡಲಾಗುತ್ತದೆ.
◾ಆಕರ್ಷಕ, ನ್ಯಾಯಸಮ್ಮತ ಪರಿಣಾಮಕಾರಿ-ಬೆಲೆ  : ಬಳಕೆದಾರರು ಕಾರ್ಯ-ವಿಧಾನ ಕೈಪಿಡಿಗಳು, ಆಂತರಿಕ ದೂರವಾಣಿ ಪಟ್ಟಿ ಹಾಗು ಕೋರಿಕೆ ಅರ್ಜಿಗಳಂತಹ ದಾಖಲೆಗಳ ಆಧಾರ ಪ್ರಮಾಣಗಳ ನಿರ್ವಹಣೆಗಿಂತ ವೆಬ್ ಬ್ರೌಸರ್ ನ ಮೂಲಕ ಮಾಹಿತಿ ಹಾಗು ಅಗತ್ಯ ದತ್ತಾಂಶ ಸಂಗ್ರಹಿಸಬಹುದು. ಇದು ಮುದ್ರಣ, ಆಧಾರ ದಾಖಲೆ,ಪ್ರಮಾಣಗಳ ನಕಲು ಪ್ರತಿ ಮಾಡಿಸುವುದು ಹಾಗು ಸಾಂದರ್ಭಿಕ ಪರಿಸರದ ಅಗತ್ಯದ ದಾಖಲೆ ಆಧಾರ ಪ್ರಮಾಣದ ನಿರ್ವಹಣೆಗೆ ತಗಲುವ ವೆಚ್ಚವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ.
◾ಉದಾಹರಣೆಗೆ, ಪೀಪಲ್ ಸಾಫ್ಟ್ ನಿಂದ ಪಡೆದ "ಅಂತರ್ಜಾಲಕ್ಕೆ HR ಪ್ರಕ್ರಿಯೆಗಳನ್ನು ವರ್ಗಾವಣೆ ಮಾಡುವ ಮೂಲಕ ಗಮನಾರ್ಹ ವೆಚ್ಚ ಉಳಿತಾಯ ಮಾಡಿತು".[೨] ಮ್ಯಾಕ್ಗವರ್ನ್, ಪ್ರಯೋಜನಗಳಲ್ಲಿ ಕೈಪಿಡಿಗಾದ ವೆಚ್ಚವು ಪ್ರತಿ ದಾಖಲಾತಿಗೆ USD109.48ರಷ್ಟೆಂದು ಹೇಳುತ್ತಾರೆ. "ಈ ಕಾರ್ಯಚಟುವಟಿಕೆಯ-ಪ್ರಕ್ರಿಯೆಯನ್ನು ಅಂತರ್ಜಾಲಕ್ಕೆ ವರ್ಗಾವಣೆ ಮಾಡಿದಾಗ, ಇದು ಪ್ರತಿ ದಾಖಲಾತಿಗೆ $21.79ನಷ್ಟು ವೆಚ್ಚ ತಗ್ಗಿತು; ಹಾಗೆ ನೋಡಿದರೆ ಇದು ಶೇಖಡ 80ರಷ್ಟು ಉಳಿತಾಯವೆನಿಸುತ್ತದೆ".
◾ವೆಚ್ಚದ ವರದಿಯನ್ನಾಧರಿಸಿ ಗಮನಿಸಿದಾಗ ವೆಚ್ಚ ಪ್ರಮಾಣದ ಮೇಲೆ ಹಣ ಉಳಿತಾಯ ಮಾಡಿದ ಮತ್ತೊಂದು ಸಂಸ್ಥೆಯೆಂದರೆ ಸಿಸ್ಕೋ. "1996ರಲ್ಲಿ, ಸಿಸ್ಕೋ 54,000 ವರದಿಗಳನ್ನು ಸಂಸ್ಕರಿಸುವುದರ ಜೊತೆಗೆ USD 19 ದಶಲಕ್ಷ ಡಾಲರ್ ಉಳಿತಾಯ ಮಾಡಿತು".[೨]
◾ಸಹಯೋಗದ ವರ್ಧನೆ : ಎಲ್ಲ ಅಧಿಕೃತ ಬಳಕೆದಾರರ ಮೂಲಕ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು. ಇದು ಜತೆಯಾಗಿ ತಂಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.
◾ವಿವಿಧ-ವೇದಿಕೆಗಳ ಸಾಮರ್ಥ್ಯ :ವಿಭಿನ್ನ ಗುಣಮಟ್ಟದ-ಅನುವರ್ತನಾಶೀಲ ವೆಬ್ ಬ್ರೌಸರ್ ಗಳು ವಿಂಡೋಸ್, ಮ್ಯಾಕ್, ಹಾಗು UNIXಗೆ ಲಭ್ಯವಿದೆ.
◾ಒಬ್ಬನೇ ವೀಕ್ಷಕನಿಗಾಗಿ ನಿರ್ಮಿತ ವಿನ್ಯಾಸ : ಹಲವು ಸಂಸ್ಥೆಗಳು ಕಂಪ್ಯೂಟರ್ ನಿರ್ದಿಷ್ಟತೆಗಳನ್ನು ನಿರ್ದೇಶಿಸುತ್ತವೆ. ಇದಕ್ಕೆ ಬದಲಿಯಾಗಿ ಇದು ಅಂತರ್ಜಾಲದ ಅಭಿವರ್ಧಕರಿಗೆ ಒನ್ ಬ್ರೌಸರ್ ನ ಮೇಲೆ ಕಾರ್ಯನಿರ್ವಹಿಸುವಂತೆ ಅಳವಡಿಕೆಗಾಗಿ,ಅಪ್ಲಿಕೇಶನ್ ಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ.(ಯಾವುದೇ ವಿವಿಧ-ಬ್ರೌಸರ್ ನ ಹೊಂದಾಣಿಕೆ ಸಮಸ್ಯೆಗಳು ಉದ್ಭವಿಸುವುದಿಲ್ಲ.) ನಿರ್ದಿಷ್ಟವಾಗಿ ನಿಮ್ಮ "ವೀಕ್ಷಕನನ್ನು" ಸಂಬೋಧಿಸುವ ಸಾಮರ್ಥ್ಯವು ಒಂದು ದೊಡ್ಡ ಪ್ರಯೋಜನವಾಗಿ ಪರಿಣಮಿಸುತ್ತದೆ.
◾ಅಂತರ್ಜಾಲಗಳು ಬಳಕೆದಾರನ-ನಿರ್ದಿಷ್ಟ ಉದ್ದೇಶದ ಮೇಲೆ ಅವಲಂಬಿತವಾಗಿರುವುದರಿಂದ(ಇದರ ಪ್ರವೇಶಕ್ಕೆ ಮುಂಚೆ ದತ್ತಾಂಶ ಸಂಗ್ರಹ/ನೆಟ್ವರ್ಕ್ ದೃಢೀಕರಣದ ಅಗತ್ಯವಿರುತ್ತದೆ.) ನೀವು ಯಾರೊಂದಿಗೆ ಇಂಟರ್ಫೇಸ್ (ಮುಖಾಮುಖಿ)ಮಾಡುತ್ತಿರುವಿರೆಂದು ನಿಮಗೆ ನಿರ್ದಿಷ್ಟವಾಗಿ ತಿಳಿದಿರುತ್ತದೆ. ಅಲ್ಲದೇ ಕೆಲಸದ ಆಧಾರದ ಮೇಲೆ ನಿಮ್ಮ ಅಂತರ್ಜಾಲವನ್ನು ವೈಯಕ್ತಿಕತೆಗೆ ಅಗತ್ಯವಾದ ವೈಶಿಷ್ಟ್ಯವಾಗಿಸಬಹುದು.(ಕೆಲಸದ ಶೀರ್ಷಿಕೆ, ವಿಭಾಗ) ಅಥವಾ ವೈಯಕ್ತಿಕವಾಗಿ("ನಮ್ಮ ಕಂಪನಿಯಲ್ಲಿ ನೀವು ಮೂರು ವರ್ಷ ಪೂರೈಸಿದ್ದಕ್ಕಾಗಿ ನಿಮಗೆ ಹಾರ್ದಿಕ ಅಭಿನಂದನೆಗಳು ಜೇನ್)
!").
◾ಸಾಮಾನ್ಯ ಕಾರ್ಪೋರೆಟ್ ಸಂಸ್ಕೃತಿಗೆ ಉತ್ತೇಜನ : ಪ್ರತಿಯೊಬ್ಬ ಬಳಕೆದಾರನು ಅಂತರ್ಜಾಲದೊಳಗಿರುವ ಒಂದೇ ರೀತಿಯ ಮಾಹಿತಿಯನ್ನು ವೀಕ್ಷಿಸಲು ಸಮರ್ಥನಾಗಿರುತ್ತಾನೆ.
◾ತಕ್ಷಣದ ನವೀಕರಣಗಳು : ಸಾರ್ವಜನಿಕರೊಂದಿಗೆ ಯಾವುದೇ ಸಾಮರ್ಥ್ಯದಲ್ಲಿ ವ್ಯವಹರಿಸಬೇಕಾದರೆ, ಕಾನೂನುಗಳು, ನಿರ್ದಿಷ್ಟತೆಗಳು, ಹಾಗು ಲಕ್ಷಣಗಳು ಬದಲಾಗಬಹುದು. ಅಂತರ್ಜಾಲಗಳು ವೀಕ್ಷಕರಿಗೆ "ನೇರವಾದ" ಜೀವಂತಿಕೆಯ ಬದಲಾವಣೆಗಳನ್ನು ಒದಗಿಸುತ್ತವೆ. ಇದರಿಂದಾಗಿ ಅವರು ಇಂದಿನತನಕದ ಮಾಹಿತಿಯನ್ನು ಪಡೆಯಬಹುದು, ಇದರಿಂದಾಗಿ ಸಂಸ್ಥೆಯ ಜವಾಬ್ದಾರಿಗಳು ಸೀಮಿತಗೊಳ್ಳುತ್ತವೆ.
◾ವಿಂಗಡಣೆಯಾದ ಕಂಪ್ಯೂಟಿಂಗ್ ವಿನ್ಯಾಸ ರಚನೆಗೆ ನೆರವು ನೀಡುತ್ತದೆ : ಅಂತರ್ಜಾಲವನ್ನು ಒಂದು ಸಂಸ್ಥೆಯ ನಿರ್ವಹಣಾ ಮಾಹಿತಿ ವ್ಯವಸ್ಥೆಗೂ ಸಹ ತಳುಕು ಹಾಕಬಹುದು, ಉದಾಹರಣೆಗೆ ಸಮಯ ಪಾಲನಾ ವ್ಯವಸ್ಥೆಯ ವಿಧಾನ.

ಯೋಜನೆ ಹಾಗು ರಚನೆ
ಹಲವು ಸಂಸ್ಥೆಗಳು, ತಮ್ಮ ಅಂತರ್ಜಾಲದ ಯೋಜನೆ ಹಾಗು ಕಾರ್ಯಗತಗೊಳಿಸುವಿಕೆಗೆ ಗಮನಾರ್ಹ ಸಂಪನ್ಮೂಲವನ್ನು ಮೀಸಲಾಗಿ ಇಡುತ್ತವೆ. ಏಕೆಂದರೆ ಇದು ಸಂಸ್ಥೆಯ ಯಶಸ್ಸಿಗೆ ಸೃಷ್ಟಿಸುವ ಯೋಜನಾ ಪ್ರಾಮುಖ್ಯತೆಯಾಗುತ್ತದೆ. ಯೋಜನೆಯಲ್ಲಿ ಒಳಗೊಳ್ಳುವ ಕೆಲ ವಿಷಯ ಗಳೆಂದರೆ:
◾ಅಂತರ್ಜಾಲದ ಉದ್ದೇಶ ಹಾಗು ಧ್ಯೇಯಗಳು
◾ಕಾರ್ಯಗತಗೊಳಿಸುವಿಕೆ ಹಾಗು ನಿರ್ವಹಣೆಗೆ ಜವಾಬ್ದಾರರಾದ ವ್ಯಕ್ತಿಗಳು ಅಥವಾ ವಿಭಾಗಗಳು
◾ಅಧಿಕೃತ ಯೋಜನೆಗಳು, ಮಾಹಿತಿ ಚೌಕಟ್ಟುಗಳ ರಚನೆ, ಪೇಜ್ ಲೇಔಟ್ ಗಳು,(ಪುಟಗಳ ಸೃಷ್ಟಿ) ವಿನ್ಯಾಸ[೩]
◾ಅನುಷ್ಠಾನದ ವಿವರಗಳು ಹಾಗು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ನಿಧಾನಗತಿಯಲ್ಲಿ ಹಂತ-ಹಂತವಾಗಿ ಅಂತ್ಯಗೊಳಿಸುವುದು
◾ಅಂತರ್ಜಾಲದ ಭದ್ರತೆಗಳ ನಿರೂಪಣೆ,ವ್ಯಾಖ್ಯಾನ ಹಾಗು ಕಾರ್ಯಗತಗೊಳಿಸುವುದು
◾ಕಾನೂನು ಪರಿಮಿತಿ ಹಾಗು ಇತರ ನಿರ್ಬಂಧದೊಳಗೆ ಹೇಗೆ ಇದನ್ನು ರಕ್ಷಿಸುವುದು
◾ಅಪೇಕ್ಷಿತ ಪರಸ್ಪರ ಕಾರ್ಯಕಾರಿತ್ವದ ಮಟ್ಟ(ಉದಾಹರಣೆಗೆ ವಿಕಿಗಳು, ಆನ್ಲೈನ್ ಮಾದರಿಗಳು)
◾ಹೊಸ ದತ್ತಾಂಶದ ಇನ್ ಪುಟ್ ಹಾಗು ನವೀಕರಣಗೊಂಡ ಅಸ್ತಿತ್ವದಲ್ಲಿರುವ ದತ್ತಾಂಶವನ್ನು ಪ್ರಮುಖವಾಗಿ ನಿಯಂತ್ರಿಸುವುದು ಅಥವಾ ವರ್ಗಾವಣೆ ಮಾಡುವುದು.
◾ಇವೆಲ್ಲವೂ ಹಾರ್ಡ್ ವೇರ್ ಹಾಗು ಸಾಫ್ಟ್ ವೇರ್ ನಿರ್ಣಯಕ್ಕೆ ಜೊತೆಯಾಗಿವೆ.(ವಿಷಯಸೂಚಿ ನಿರ್ವಹಣಾ ವ್ಯವಸ್ಥೆಗಳ ಮಾದರಿಯಲ್ಲಿ), ಪಾಲ್ಗೊಳ್ಳುವಿಕೆಯಲ್ಲಿ ಉಂಟಾಗುವ ಸಮಸ್ಯೆಗಳು(ಉತ್ತಮ ಅಭಿರುಚಿ, ಕಿರುಕುಳ, ಗೋಪ್ಯತೆಗಳ ಮಾದರಿಯಲ್ಲಿ), ಹಾಗು ನೆರವಾಗುವ ವೈಶಿಷ್ಟ್ಯ ಗಳು.[೪]
◾ಅಂತರ್ಜಾಲಗಳು ಸಾಮಾನ್ಯವಾಗಿ ಸ್ಥಿರ ಸೈಟ್ ಗಳಾಗಿರುತ್ತವೆ. ಮೂಲತಃ ಇವುಗಳು ಹಂಚಿಕೆಯಾದ ಡ್ರೈವ್ ಗಳಾಗಿರುತ್ತವೆ, ಇವುಗಳು ಆಂತರಿಕ ನಿಯಮಾವಳಿ ಅಥವಾ ಸಂವಹನಗಳೊಂದಿಗೆ ಪ್ರಧಾನವಾಗಿ ಶೇಖರಣೆಯಾದ ದಾಖಲೆ ಆಧಾರ ಪ್ರಮಾಣಗಳಿಗೆ ನೆರವಾಗುತ್ತವೆ.(ಸಾಮಾನ್ಯವಾಗಿ ಒಂದೇ ಕಡೆಯ ಸಂವಹನ). ಆದಾಗ್ಯೂ ಸಂಸ್ಥೆಗಳು ಇತ್ತೀಚಿಗೆ ಹೇಗೆ ಅಂತರ್ಜಾಲಗಳು, ಸಮಾಜೀಕರಿತ ಅಂತರ್ಜಾಲದಲ್ಲಿ ವಿಶೇಷತೆಯನ್ನು ಪಡೆದಿವೆ.ಅದನ್ನು ಆ ಮೂಲದ ಸಂಸ್ಥೆಗಳನ್ನು ಬಳಸಿಕೊಂಡು ಹೇಗೆ ತಮ್ಮ ತಂಡಕ್ಕೆ 'ಸಂವಹನದ ಮಾಹಿತಿ ಕೇಂದ್ರ ವಾಗಬಹುದೆಂದು' ಯೋಜಿಸುತ್ತಿದೆ.[೫]
ವಾಸ್ತವವಾಗಿಯೂ ಕಾರ್ಯಗತಗೊಳಿಸುವಿಕೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ:
◾ಹಿರಿತನದ ನಿರ್ವಹಣಾ ನೆರವು ಹಾಗು ಆರ್ಥಿಕ ನಿಧಿ-ಬೆಂಬಲವನ್ನು ಗಳಿಸಿಕೊಳ್ಳುವುದು.[೬]
◾ವ್ಯಾಪಾರ ಅವಶ್ಯಕತೆಗಳ ವಿಶ್ಲೇಷಣೆ.
◾ಬಳಕೆದಾರರ ಮಾಹಿತಿ ಅಗತ್ಯಗಳನ್ನು ಗುರುತಿಸಲು ಬಳಕೆದಾರನು ಪಾತ್ರ ವಹಿಸುವುದು.
◾ವೆಬ್ ಸರ್ವರ್ ನ ಅಳವಡಿಕೆ ಹಾಗು ಬಳಕೆದಾರರು ಸುಲಭವಾಗಿ ಪ್ರವೇಶಿಸುವ ನೆಟ್ವರ್ಕ್.
◾ಕಂಪ್ಯೂಟರ್ ಗಳಲ್ಲಿ ಬಳಕೆದಾರನಿಗೆ ಅಗತ್ಯವಿರುವ ಅಪ್ಲಿಕೇಶನ್ ಗಳನ್ನು(ಅನ್ವಯಿಕೆ) ಸಂಸ್ಥಾಪಿಸುವುದು.
◾ರಚಿತವಾಗಬೇಕಿರುವ ವಿಷಯಸೂಚಿಗೆ ದಾಖಲೆಯ ಆಧಾರ ಪ್ರಮಾಣ ಚೌಕಟ್ಟನ್ನು ರೂಪಿಸುವುದು.[೭]
◾ಅಂತರ್ಜಾಲ ಪರೀಕ್ಷಿಸುವಾಗ ಬಳಕೆದಾರನ ಪಾತ್ರ ಹಾಗು ಅದರ ಬಳಕೆಯನ್ನು ಉತ್ತೇಜಿಸುವುದು.
◾ಮುಂದುವರೆಯುತ್ತಿರುವ ಮಾಪನ ಹಾಗು ಅರ್ಹತೆ ನಿರ್ಧಾರ, ಇದರಲ್ಲಿ ಇತರ ಅಂತರ್ಜಾಲಗಳ ವಿರುದ್ಧ ನಿಗದಿತ ಮಾನದಂಡವನ್ನು ಅಳೆದು ರೂಪಿಸುವುದು ಸೇರಿದೆ.[೮]
ಅಂತರ್ಜಾಲದ ವಿಭಾಗ ರಚನೆಯಲ್ಲಿರುವ ಮತ್ತೊಂದು ಉಪಯೋಗಿ ಅಂಶವೆಂದರೆ, ಅಂತರ್ಜಾಲದ ನಿರ್ವಹಣೆಗೆ ಬದ್ಧನಾದ ಒಬ್ಬ ಪ್ರಮುಖ ವ್ಯಕ್ತಿಯ ಜೊತೆಗೆ ಈತನು ವಿಷಯಸೂಚಿಗಳನ್ನು ಪ್ರಚಲಿತದಲ್ಲಿಡಲು ಜವಾಬ್ದಾರನಾಗಿರುತ್ತಾನೆ. ಅಂತರ್ಜಾಲದ ಕುರಿತ ಪ್ರತಿಕ್ರಿಯೆಗಾಗಿ, ಬಳಕೆದಾರರ ಒಂದು ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ಪಡೆಯಬಹುದು. ಇದರಿಂದ ಬಳಕೆದಾರರಿಗೆ ಏನು ಬೇಕು ಹಾಗು ಅವರು ಏನನ್ನು ಬಯಸುತ್ತಾರೆಂಬುದನ್ನು ಸೂಚಿಸಬಹುದು.

ಇವನ್ನೂ ಗಮನಿಸಿ
◾ಎಂಟರ್ಪ್ರೈಸ್ ಪೋರ್ಟಲ್
◾ಇಂಟ್ರಾನೆಟ್ ಪೋರ್ಟಲ್
◾ಅಂತರ್ಜಾಲ ಕಾರ್ಯವಿಧಾನಗಳು
◾ಇಂಟ್ರಾವೆಬ್
◾ಸ್ಥಳೀಯ ವಲಯ ಜಾಲ
◾ವ್ಯಾಪಕ ವಲಯ ಜಾಲ
◾ವೆಬ್ ಪೋರ್ಟಲ್
◾ಕ್ವಾಂಗ್ಮ್ಯೊಂಗ್ (ಅಂತರಜಾಲ)

ಇ-ಕಾಮರ್ಸ್


ಇ-ಕಾಮರ್ಸ್


ಎಲೆಕ್ಟ್ರಾನಿಕ್ ಕಾಮರ್ಸ್ , ಸಾಮಾನ್ಯವಾಗಿ (ಇ-ಶಾಪಿಂಗ್)ಇ-ಕಾಮರ್ಸ್ ಅಥವಾ eCommerce ಎಂದೇ ಪರಿಚಿತ. ಇದರಲ್ಲಿ ಯಾವುದೇ ವಸ್ತು ಗಳನ್ನು ಅಥವಾ ಸೇವೆಗಳನ್ನು ಎಲೆಕ್ಟ್ರಾನಿಕ್ ವ್ಯವಸ್ಥೆಗಳಾದ ಅಂತರ್ಜಾಲ ಹಾಗು ಇತರ ಕಂಪ್ಯೂಟರ್ ಜಾಲಗಳ ಮೂಲಕ ಕೊಂಡುಕೊಳ್ಳುವುದು ಅಥವಾ ಮಾರಾಟಮಾಡುವುದು. ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತಿರುವ ವ್ಯಾಪಾರದ ಪ್ರಮಾಣವು ವ್ಯಾಪಕವಾದ ಅಂತರ್ಜಾಲದ ಬಳಕೆಯಿಂದ ಅಸಾಧಾರಣ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಈ ವಿಧಾನದಲ್ಲಿ ನಡೆಸಲಾಗುತ್ತಿರುವ ವ್ಯಾಪಾರದಲ್ಲಿ ಇಲೆಕ್ಟ್ರಾನಿಕ್ ವಿಧಾನದಲ್ಲಿ ಹಣದ ವರ್ಗಾವಣೆ, ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಅಂತರ್ಜಾಲದಲ್ಲಿ ಮಾರಾಟ ವ್ಯವಸ್ಥೆ, ಆನ್ಲೈನ್ ನಲ್ಲಿ ವ್ಯವಹಾರ ಪ್ರಕ್ರಿಯೆ, ಇಲೆಕ್ಟ್ರಾನಿಕ್ ಡಾಟಾ ವಿನಿಮಯ(EDI), ಸರಕು-ಸಂಗ್ರಹ ನಿರ್ವಹಣಾ ವ್ಯವಸ್ಥೆಗಳು ಹಾಗು ಸ್ವಯಂಚಾಲಿತ ಡಾಟಾ ಸಂಗ್ರಹಣಾ ವ್ಯವಸ್ಥೆಗಳು ಉತ್ತೇಜನ ಪಡೆಯುತ್ತಿರುವ ಜೊತೆಗೆ ಹೊಸ ಆವಿಷ್ಕಾರಗಳನ್ನು ಆಕರ್ಷಿಸುತ್ತಿದೆ. ಆಧುನಿಕ ಇಲೆಕ್ಟ್ರಾನಿಕ್ ವ್ಯವಹಾರವು ವಿಶಿಷ್ಟವಾಗಿ ವರ್ಲ್ಡ್ ವೈಡ್ ವೆಬ್ ನ್ನು ಕಡೇಪಕ್ಷ ವರ್ಗಾವಣೆಯ ಚಕ್ರದ ಕೆಲವು ಹಂತದಲ್ಲಿ ಬಳಸುತ್ತದೆ, ಆದರೂ ಇದು ಒಂದು ವ್ಯಾಪಕ ಶ್ರೇಣಿಯ ತಂತ್ರಜ್ಞಾನಗಳಾದ ಇ-ಮೇಲ್ ನ್ನು ಸಹ ಒಳಗೊಂಡಿರುತ್ತದೆ..
ಒಂದು ದೊಡ್ಡ ಪ್ರಮಾಣದ ಇಲೆಕ್ಟ್ರಾನಿಕ್ ವ್ಯವಹಾರವನ್ನು, ಪರಿಣಾಮಸಿದ್ಧ ವಸ್ತುಗಳಿಗೆ ಉದಾಹರಣೆಗೆ ಅಂತರ್ಜಾಲದಲ್ಲಿ ಅಧಿಕ ಮೌಲ್ಯದ ವಸ್ತುಗಳನ್ನು ತಲುಪಲು ಸಂಪೂರ್ಣವಾಗಿ ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತದೆ. ಆದರೆ ಹಲವು ಇಲೆಕ್ಟ್ರಾನಿಕ್ ವ್ಯವಹಾರವು, ಯಾವುದೋ ರೀತಿಯಲ್ಲಿ ಭೌತ ವಸ್ತುಗಳ ಸಾಗಣೆಯನ್ನು ಒಳಗೊಂಡಿರುತ್ತದೆ. ಆನ್ಲೈನ್ ನ ಕಿರುಕೋಳ ಮಾರಾಟಗಾರರನ್ನು ಕೆಲವೊಂದು ಬಾರಿ ಇ-ಟೈಲರ್ ಎಂದು ಕರೆಯಲಾಗುತ್ತದೆ, ಹಾಗು ಆನ್ಲೈನ್ ಕಿರುಕೋಳ ಮಾರಾಟವನ್ನು ಇ-ಟೈಲ್ ಎಂದು ಕರೆಯಲಾಗುತ್ತದೆ. ಹೆಚ್ಚುಕಡಿಮೆ ಎಲ್ಲ ದೊಡ್ಡ ಕಿರುಕೋಳ ಮಾರಾಟಗಾರರು ವರ್ಲ್ಡ್ ವೈಡ್ ವೆಬ್ ನ ಇಲೆಕ್ಟ್ರಾನಿಕ್ ವ್ಯಾಪಾರದಲ್ಲಿ ಉಪಸ್ಥಿತರಿರುತ್ತಾರೆ.
ವ್ಯಾಪಾರಗಳ ನಡುವೆ ನಡೆಸಲಾಗುವ ಇಲೆಕ್ಟ್ರಾನಿಕ್ ವ್ಯವಹಾರವನ್ನು ವ್ಯಾಪಾರದಿಂದ ವ್ಯಾಪಾರ ಅಥವಾ B2B ಎಂದು ಕರೆಯಲಾಗುತ್ತದೆ. ಆಸಕ್ತಿಯುಳ್ಳ ಎಲ್ಲ ವ್ಯಕ್ತಿಗಳಿಗೆ B2B ಮುಕ್ತವಾಗಿದೆ (ಉದಾಹರಣೆಗೆ ವಸ್ತು ವಿನಿಮಯ) ಅಥವಾ ಸೀಮಿತ ಹಾಗು ನಿರ್ದಿಷ್ಟ, ಅರ್ಹತೆ ಹೊಂದದ ಪಾಲುದಾರರನ್ನು ಹೊಂದಿದೆ (ಖಾಸಗಿ ಇಲೆಕ್ಟ್ರಾನಿಕ್ ಮಾರುಕಟ್ಟೆ). ಇಲೆಕ್ಟ್ರಾನಿಕ್ ವ್ಯವಹಾರವು ವ್ಯಾಪಾರಗಳು ಹಾಗು ಗ್ರಾಹಕರುಗಳ ನಡುವೆ ನಡೆಯುತ್ತದೆ. ಇನ್ನೊಂದು ಭಾಗದಲ್ಲಿ, ಇದನ್ನು ವ್ಯವಹಾರದಿಂದ ಗ್ರಾಹಕರವರೆಗೆ ಅಥವಾ B2C ಎಂದು ಸೂಚಿಸಲಾಗುತ್ತದೆ. ಈ ರೀತಿಯಾದ ಇಲೆಕ್ಟ್ರಾನಿಕ್ ವ್ಯವಹಾರವನ್ನು Amazon.comನಂತಹ ಸಂಸ್ಥೆಗಳು ನಡೆಸುತ್ತವೆ. ಆನ್ಲೈನ್ ಶಾಪಿಂಗ್ ಎಂಬುದು ಇಲೆಕ್ಟ್ರಾನಿಕ್ ವ್ಯವಹಾರದ ಒಂದು ರೂಪ. ಇದರಲ್ಲಿ ಕೊಂಡುಕೊಳ್ಳುವವನು ಆನ್ಲೈನ್ ನಲ್ಲಿ ನೇರವಾಗಿ ಕಂಪ್ಯೂಟರ್ ನಲ್ಲಿ ಅಂತರ್ಜಾಲದ ಮೂಲಕ ಮಾರಾಟಗಾರನ ಸಂಪರ್ಕದಲ್ಲಿರುತ್ತಾನೆ. ಈ ವಿಧಾನ ಯಾವುದೇ ಮಧ್ಯವರ್ತಿಗಳ ಸೇವೆಯನ್ನು ಹೊಂದಿರುವುದಿಲ್ಲ. ಮಾರಾಟ ಹಾಗು ಕೊಂಡುಕೊಳ್ಳುವ ವ್ಯವಹಾರವು ಇಲೆಕ್ಟ್ರಾನಿಕವಾಗಿ ಸಂಪೂರ್ಣಗೊಳ್ಳುತ್ತದೆ; ಅದು ವಾಸ್ತವದಲ್ಲಿ ಮಾತುಕತೆಯೊಂದಿಗೆ ನಡೆಯುತ್ತದೆ, ಉದಾಹರಣೆಗೆ ಹೊಸ ಪುಸ್ತಕಗಳಿಗಾಗಿ Amazon.com ಯಾವುದೇ ಒಬ್ಬ ಮಧ್ಯಸ್ಥಗಾರನ ಉಪಸ್ಥಿತಿಯಿದ್ದರೆ, ಮಾರಾಟ ಹಾಗು ಕೊಂಡುಕೊಳ್ಳುವ ವ್ಯವಹಾರವನ್ನು ಇಲೆಕ್ಟ್ರಾನಿಕ್ ವ್ಯಾಪಾರದ eBay.comಎಂದು ಕರೆಯಲಾಗುತ್ತದೆ.
ಇಲೆಕ್ಟ್ರಾನಿಕ್ ವ್ಯವಹಾರವನ್ನು ಸಾಧಾರಣವಾಗಿ ಇ-ಬಿಸನೆಸ್ಸ್ ನ ಮಾರಾಟದ ಭಾಗವೆಂದು ಪರಿಗಣಿಸಲಾಗಿದೆ. ಇದು ಹಣದ ವ್ಯವಹಾರವನ್ನು ಸುಲಭಗೊಳಿಸಲು ಹಾಗು ವ್ಯಾಪಾರ ವ್ಯವಹಾರದ ಹಣ ಸಂದಾಯಕ್ಕೆ ಡಾಟಾದ ವಿನಿಮಯವನ್ನು ಒಳಗೊಂಡಿದೆ.


ಇತಿಹಾಸಸಂಪಾದಿಸಿ
ಆರಂಭಿಕ ಬೆಳವಣಿಗೆಸಂಪಾದಿಸಿ
ಇಲೆಕ್ಟ್ರಾನಿಕ್ ವ್ಯವಹಾರ ಎಂಬ ಪದದ ಅರ್ಥವು ಕಳೆದ 30 ವರ್ಷಗಳಲ್ಲಿ ಬದಲಾವಣೆಯನ್ನು ಹೊಂದಿದೆ. ಮೂಲತಃ, ಇಲೆಕ್ಟ್ರಾನಿಕ್ ವ್ಯವಹಾರವೆಂದರೆ ಇಲೆಕ್ಟ್ರಾನಿಕವಾಗಿ ವ್ಯಾಪಾರಿ ವ್ಯವಹಾರವನ್ನು, ಇಲೆಕ್ಟ್ರಾನಿಕ್ ಡಾಟಾ ವಿನಿಮಯ(EDI)ಹಾಗು ಇಲೆಕ್ಟ್ರಾನಿಕ್ ಹಣ ವರ್ಗಾವಣೆ ಮುಂತಾದ ತಂತ್ರಜ್ಞಾನವನ್ನು ಬಳಸಿ ಸುಲಭಗೊಳಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಇವೆರಡನ್ನೂ 1970ರ ಉತ್ತರಾರ್ಧದಲ್ಲಿ ಪರಿಚಯಿಸಲಾಯಿತು. ಇದನ್ನು ಇಲೆಕ್ಟ್ರಾನಿಕವಾಗಿ ವಾಣಿಜ್ಯ ದಾಖಲೆಗಳಾದ ಖರೀದಿ ಆದೇಶ ಅಥವಾ ಇನ್ವಾಯ್ಸ್ ಗಳನ್ನು ಕಳಿಸಲು ವ್ಯಾಪಾರಕ್ಕೆ ಸಹಾಯಕವಾಯಿತು. ಕ್ರೆಡಿಟ್ ಕಾರ್ಡ್ ಗಳ ಅಂಗೀಕಾರ ಹಾಗು ಅವುಗಳ ಬೆಳವಣಿಗೆ, ಸ್ವಯಂಚಾಲಿತ ನಗದು ಗಣಕ ಯಂತ್ರಗಳು(ATM) ಹಾಗು 1980ರಲ್ಲಿ ಪರಿಚಿತವಾದ ದೂರವಾಣಿ ಬ್ಯಾಂಕಿಂಗ್ ಗಳು ಇಲೆಕ್ಟ್ರಾನಿಕ್ ವ್ಯವಹಾರದ ಇತರ ರೂಪಗಳು. ಇ-ಕಾಮರ್ಸ್ ನ ಮತ್ತೊಂದು ರೂಪವೆಂದರೆ ವಿಮಾನ ಯಾನಕ್ಕೆ ಮುಂಗಡವಾಗಿ ಟಿಕೆಟನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು USAನಲ್ಲಿ ಸಬ್ರೆ ಹಾಗು UKಯಲ್ಲಿ ಟ್ರವಿಕಾಮ್ ಮಾದರಿಯನ್ನು ನಿರೂಪಿಸಿತು.
ಆನ್ಲೈನ್ ಶಾಪಿಂಗ್, ಇಲೆಕ್ಟ್ರಾನಿಕ್ ವ್ಯವಹಾರದ ಮತ್ತೊಂದು ರೂಪವಾದ ಇದು IBM PC, ಮೈಕ್ರೋಸಾಫ್ಟ್, ಆಪಲ್ Inc. ಹಾಗು ದಿ ಇಂಟರ್ನೆಟ್/wwwಗೆ ಮಾಹಿತಿಯನ್ನು ಮುಂಚಿತವಾಗಿ ತಿಳಿಸುತ್ತದೆ. ಕಳೆದ 1979ರಲ್ಲಿ, ಒಬ್ಬ ಇಂಗ್ಲೀಷ್ ಸೃಷ್ಟಿಕರ್ತ ಮೈಕಲ್ ಆಲ್ಡ್ರಿಚ್, 26" ಬಣ್ಣದ ಟೆಲಿವಿಶನ್ ನನ್ನು ಮಾರ್ಪಡಿಸಿ ಅದನ್ನು ನಿಜಾವಧಿ ಕಂಪ್ಯೂಟರ್ ವರ್ಗಾವಣಾ ಪ್ರಕ್ರಿಯೆಗೆ ಒಂದು ದೂರವಾಣಿ ಸಂಪರ್ಕ ಸಂಯೋಜಿಸಿ ಆನ್ಲೈನ್ ಶಾಪಿಂಗ್ ನ್ನು ಕಂಡು ಹಿಡಿದರು.[೧] ಮೊದಲು ದಾಖಲುಗೊಂಡ B2B 1981ರ ಥಾಮ್ಸನ್ ಹಾಲಿಡೆಸ್[೨], ಮೊದಲು ದಾಖಲುಗೊಂಡ B2C ಎಂದರೆ 1984ರ ಗೇಟ್ಸ್ ಹೆಡ್ ಸಿಸ್/ಟೆಸ್ಕೋ.[೩] ವಿಶ್ವದಲ್ಲಿ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಮನೆಯಿಂದ ಶಾಪಿಂಗ್ ಮಾಡಿದ್ದು Mrs ಜೇನ್ ಸ್ನೌಬಾಲ್, 72, ಗೇಟ್ಸ್ ಹೆಡ್, ಇಂಗ್ಲೆಂಡ್, ಮೇ 1984ರಲ್ಲಿ.[೪] ಕಳೆದ 1980ರಲ್ಲಿ, ಮುಖ್ಯವಾಗಿ UKಯಲ್ಲಿ ಆಲ್ಡ್ರಿಚ್ ಹಲವು ವ್ಯವಸ್ಥಿತ ಸಮುದಾಯಗಳಾದ ಫೋರ್ಡ್, ಪ್ಯುಗೆಯೋಟ್[ಆ ಅವಧಿಯಲ್ಲಿ ಟಾಲ್ಬೋಟ್ ಮೋಟೊರ್ಸ್ ಎಂಬ ಹೆಸರಿನಲ್ಲಿ ವ್ಯವಹರಿಸುತ್ತಿದ್ದವು], ಜನರಲ್ ಮೋಟೊರ್ಸ್ ಹಾಗು ನಿಸ್ಸಾನ್ ನ ತಯಾರಿಕೆಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದರು.[೫] ಕಳೆದ 1984/5ರ ನಿಸ್ಸಾನ್ ವ್ಯವಸ್ಥೆಯು ಕ್ರಾಂತಿಕಾರಿಯಾಗಿತ್ತು. ಇದು ವ್ಯಾಪಾರಿ ಸಮುದಾಯದಿಂದ ಕಾರನ್ನು ಕೊಂಡುಕೊಳ್ಳುವವನಿಗೆ ಖರೀದಿಸಲು ಹಾಗು ಕಾರಿನ ಹಣ ಪಾವತಿಸಲು ಸಹಾಯ ಮಾಡಿತು. ಇದರಲ್ಲಿ ಆನ್ಲೈನ್ ನಲ್ಲಿ ಕ್ರೆಡಿಟ್ ತಾಳೆ ನೋಡುವುದಕ್ಕೂ ಸಹಕಾರಿಯಾಗಿತ್ತು.[೬] ಆಲ್ಡ್ರಿಚ್ ಆನ್ಲೈನ್ ನಲ್ಲಿ ಶಾಪಿಂಗ್ ವ್ಯವಸ್ಥೆ ಹಾಗು ಅದನ್ನು ಬಳಸಲು ವ್ಯಾವಹಾರಿಕ ವಿವರಣೆ ಎರಡನ್ನೂ ಕಂಡು ಹಿಡಿದರು. ಅವರ ವ್ಯವಸ್ಥೆಯನ್ನು ನಕಲು ಮಾಡಲಾಯಿತು; ಹಾಗು ಅವರ ವಿಚಾರಗಳನ್ನು ಕದ್ದು ಬಳಸಲಾಯಿತು. 1980ರಲ್ಲೇ ಅವರ ವ್ಯವಸ್ಥೆಗಳು 2010ರ ಅಂತರ್ಜಾಲ ಶಾಪಿಂಗ್ ವ್ಯವಸ್ಥೆಯಷ್ಟೇ ವೇಗವಾಗಿದ್ದವು. ಅವರು ಟೆಲಿಫೋನ್ ಕರೆಗಳನ್ನು ಮಾಡುತ್ತಿದ್ದರು. ಅದಲ್ಲದೇ ಬ್ರಾಡ್ ಬ್ಯಾಂಡ್ ದೊರಕದ ಕಾರಣ ಟೆಲಿಫೋನ್ ತಂತಿಗಳನ್ನು ಗುತ್ತಿಗೆ ನೀಡುತ್ತಿದ್ದರು. ಅವರು ತಮ್ಮ ಶಾಪಿಂಗ್ ವ್ಯವಸ್ಥೆಗೆ ಹಕ್ಕುಗಳನ್ನು ಪಡೆದಿರಲಿಲ್ಲ; ಹಾಗು ಅವರ ವಿಚಾರಗಳ ಆಧಾರವೇ ಇಂದಿನ ಅಂತರ್ಜಾಲ ಶಾಪಿಂಗ್.
ಕಳೆದ 1990ರಿಂದೀಚೆಗೆ, ಇಲೆಕ್ಟ್ರಾನಿಕ್ ವ್ಯವಹಾರವು ಹೆಚ್ಚಿನ ವ್ಯಾಪಾರಸಂಸ್ಥೆಯ ವ್ಯವಹಾರ ಯೋಜನಾವ್ಯವಸ್ಥೆಗಳು (ERP), ಡಾಟಾ ಮೈನಿಂಗ್ ಹಾಗು ಡಾಟಾದ ತಾತ್ಕಾಲಿಕ ಸಂಗ್ರಹಣೆ
ಒಂದು ಪೂರ್ವಭಾವಿ ಉದಾಹರಣೆಯೆಂದರೆ, ಇಲೆಕ್ಟ್ರಾನಿಕ್ ವ್ಯವಹಾರದಲ್ಲಿ ಭೌತಿಕ ಸರಕಿನ ಮಾರಾಟ, 1982ರಲ್ಲಿ ಪರಿಚಯವಾದ ಬಾಸ್ಟನ್ ಕಂಪ್ಯೂಟರ್ ಎಕ್ಸ್ಚೇಂಜ್, ಬಳಕೆ ಮಾಡಲಾದ ಕಂಪ್ಯೂಟರ್ ಗಳ ಒಂದು ಮಾರುಕಟ್ಟೆ. ಆನ್ಲೈನ್ ಜಾಲಗಳ ಬಗ್ಗೆ ಪೂರ್ವಭಾವಿ ಮಾಹಿತಿಯಲ್ಲಿ, ಅಮೆರಿಕನ್ ಇನ್ಫಾರ್ಮೇಶನ್ ಎಕ್ಸ್ಚೇಂಜ್ ನ ಆನ್ಲೈನ್ ಸಲಹೆಯು ಸೇರಿದೆ, ಮತ್ತೊಂದು ಪೂರ್ವಭಾವಿ ಅಂತರ್ಜಾಲ[clarification needed] ಮಾಹಿತಿ ವ್ಯವಸ್ಥೆಯನ್ನು 1991ರಲ್ಲಿ ಪರಿಚಯಿಸಲಾಯಿತು.
ಕಳೆದ 1990ರಲ್ಲಿ ಟಿಮ್ ಬರ್ನರ್ಸ್-ಲೀ ವರ್ಲ್ಡ್ ವೈಡ್ ವೆಬ್ ನ ಅಂತರ್ಜಾಲ ವೀಕ್ಷಣೆಯನ್ನು ಕಂಡು ಹಿಡಿದರು. ಅಲ್ಲದೇ ಒಂದು ಶೈಕ್ಷಣಿಕ ದೂರಸಂಪರ್ಕ ಅಂತರ್ಜಾಲವನ್ನು ಮಾರ್ಪಡಿಸಿ, ವಿಶ್ವವ್ಯಾಪಿಯಾಗಿ ಪ್ರತಿಯೊಬ್ಬರೂ ಪ್ರತಿದಿನದ ಸಂಪರ್ಕ ವ್ಯವಸ್ಥೆಯಾದ ಇಂಟರ್ನೆಟ್/www ಬಳಸುವಂತೆ ಮಾಡಿದರು. ಕಳೆದ 1991ರ ತನಕ ಅಂತರ್ಜಾಲದ ಮೇಲೆ ವಾಣಿಜ್ಯ ಸಂಸ್ಥೆಗಳ ಹಕ್ಕನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು.[೭] ಆದಾಗ್ಯೂ, 1994ರ ಸುಮಾರಿಗೆ ಮೊದಲ ಬಾರಿ ಆನ್ಲೈನ್ ನಲ್ಲಿ ಶಾಪಿಂಗ್ ಪ್ರಾರಂಭವಾದಾಗ ಅಂತರ್ಜಾಲವು ವಿಶ್ವವ್ಯಾಪಿಯಾಗಿ ಜನಪ್ರಿಯತೆ ಗಳಿಸಿತು. ಭದ್ರತಾ ನಿಯಮಾವಳಿಗಳನ್ನು ಪರಿಚಯಿಸುವುದಕ್ಕೆ ಸುಮಾರು ಐದು ವರ್ಷ ತೆಗೆದುಕೊಂಡಿತು. ಅಲ್ಲದೇ DSL ಅಂತರ್ಜಾಲದ ಎಡೆಬಿಡದ ಸಂಯೋಜನೆಗೆ ಅನುಮತಿ ನೀಡಿತು. ಕಳೆದ 2000ರದ ಕೊನೆಯ ಹೊತ್ತಿಗೆ, ಹಲವು ಯುರೋಪಿಯನ್ ಹಾಗು ಅಮೇರಿಕನ್ ವಾಣಿಜ್ಯ ಸಂಸ್ಥೆಗಳು ವರ್ಲ್ಡ್ ವೈಡ್ ವೆಬ್ ನ ಮೂಲಕ ಸೇವೆಗಳನ್ನು ಒದಗಿಸಿತು. ಅಲ್ಲಿಂದೀಚೆಗೆ ಜನರು ಭದ್ರತಾ ನಿಯಮಾವಳಿಗಳು ಹಾಗು ಇಲೆಕ್ಟ್ರಾನಿಕ್ ಹಣ ಸಂದಾಯ ಸೇವೆಗಳನ್ನು ಬಳಸಿಕೊಂಡು ಅಂತರ್ಜಾಲದ ಮೂಲಕ ವಿವಿಧ ಸರಕುಗಳನ್ನು ಖರೀದಿ ಮಾಡುವ ಸಾಮರ್ಥ್ಯಕ್ಕೆ "ಇ ಕಾಮರ್ಸ್" ಎಂಬ ಪದವನ್ನು ಸಂಯೋಜಿಸಿದರು.
ಟೈಮ್ ಲೈನ್ಸಂಪಾದಿಸಿ
◾1979: ಮೈಕಲ್ ಆಲ್ಡ್ರಿಚ್ ಆನ್ಲೈನ್ ಶಾಪಿಂಗ್ ನ್ನು ಕಂಡು ಹಿಡಿದರು.
◾1981: ಥಾಮ್ಸನ್ ಹಾಲಿಡೆಸ್, UK ಮೊದಲ B2B ಆನ್ಲೈನ್ ಶಾಪಿಂಗ್ ಆಗಿದೆ.
◾1982: ಮಿನಿಟೆಲ್ ಫ್ರಾನ್ಸ್ ದೇಶಾದ್ಯಂತ ಫ್ರಾನ್ಸ್ ಟೆಲಿಕಾಮ್ ಪರಿಚಯಿಸಿತು; ಹಾಗು ಇದನ್ನು ಆನ್ಲೈನ್ ನಲ್ಲಿ ಸರಕುಗಳ ಬೇಡಿಕೆಗೆ ಬಳಸಲಾಗುತ್ತಿತ್ತು.
◾1984: ಗೇಟ್ಸ್ ಹೆಡ್ SIS/ಟೆಸ್ಕೋ ಮೊದಲ B2C ಆನ್ಲೈನ್ ಶಾಪಿಂಗ್ ಹಾಗು Mrs ಸ್ನೋಬಾಲ್ ,72, ಮನೆಯಿಂದ ಶಾಪಿಂಗ್ ಮಾಡಿದ ಮೊದಲ ಆನ್ಲೈನ್ ಗ್ರಾಹಕಿ
◾1985: ನಿಸ್ಸಾನ್ UK ಕಾರುಗಳನ್ನು ಮಾರಾಟ ಮಾಡುತ್ತದೆ. ಅಲ್ಲದೇ ಆನ್ಲೈನ್ ಗ್ರಾಹಕರಿಗೆ ವ್ಯಾಪಾರಿ ಸಮುದಾಯದಿಂದ ಕ್ರೆಡಿಟ್ ಅನ್ನು ತಾಳೆ ಹಾಕುವುದರೊಂದಿಗೆ ಹಣ ಸಂದಾಯ ಮಾಡುತ್ತದೆ.
◾1987: ಸ್ವೆರ್ಗ್ ಇಲೆಕ್ಟ್ರಾನಿಕ್ ವ್ಯಾಪಾರಿ ಗಣಕ ಮೂಲಕ ತಮ್ಮ ಸರಕನ್ನು ಮಾರಾಟ ಮಾಡಲು ಇಚ್ಚಿಸುವ ಲೇಖಕರಿಗೆ ಸಾಫ್ಟ್ವೇರ್ ಹಾಗು ತಂತ್ರಾಂಶಗಳನ್ನು ಒದಗಿಸುತ್ತದೆ.
◾1990: ಟಿಮ್ ಬರ್ನರ್ಸ್-ಲೀ ಮೊದಲ ಅಂತರ್ಜಾಲ ವೀಕ್ಷಣೆ 0}ವರ್ಲ್ಡ್ ವೈಡ್ ವೆಬ್, ನ್ನು NeXTಕಂಪ್ಯೂಟರ್ ಬಳಸಿಕೊಂಡು ರಚಿಸಿದ್ದಾರೆ.
◾1992: J.H. ಸ್ನಿಡೆರ್ ಹಾಗು ಟೆರ್ರ ಜಿಪೊರಿನ್ ಫ್ಯೂಚರ್ ಶಾಪ್ ಬಗ್ಗೆ ಪ್ರಕಟಿಸುತ್ತಾರೆ: ಹೌ ನ್ಯೂ ಟೆಕ್ನಾಲಜೀಸ್ ವಿಲ್ ಚೇಂಜ್ ದಿ ವೇ ವಿ ಶಾಪ್ ಅಂಡ್ ವಾಟ್ ವಿ ಬೈ. ಸೇಂಟ್‌ ಮಾರ್ಟಿನ್ಸ್‌ ಪ್ರೆಸ್‌. ISBN 0-312-06359-8
◾1994: ನೆಟ್ಸ್ಕೇಪ್ ಅಕ್ಟೋಬರ್ ನಲ್ಲಿ ನಾವಿಗೇಟರ್ ವೀಕ್ಷಣೆಯನ್ನು, ಮೊಜಿಲ್ಲ ಎಂಬ ಸಂಕೇತ ನಾಮದಿಂದ ಬಿಡುಗಡೆ ಮಾಡುತ್ತಾರೆ. ಪಿಜ್ಜಾ ಹಟ್ ತನ್ನ ಅಂತರ್ಜಾಲ ಪುಟದಲ್ಲಿ ಆನ್ಲೈನ್ ಬೇಡಿಕೆಗಳನ್ನು ಒದಗಿಸುತ್ತದೆ. ಮೊದಲ ಬಾರಿಗೆ ಆನ್ಲೈನ್ ಬ್ಯಾಂಕ್ ತೆರೆಯುತ್ತದೆ. ಆನ್ಲೈನ್ ನ ಮೂಲಕ ಹೂವಿನ ಸರಬರಾಜು ಹಾಗು ನಿಯತಕಾಲಿಕಗಳ ಚಂದಾ ಪಾವತಿಗೆ ಪ್ರಯತ್ನ. ಪ್ರೌಢರ ವಸ್ತುಗಳು ಸಹ ವಾಣಿಜ್ಯಕವಾಗಿ ದೊರೆಯಲು ಪ್ರಾರಂಭಿಸುತ್ತದೆ, ಇದೆ ರೀತಿ ಕಾರುಗಳು ಹಾಗು ಬೈಕುಗಳು ಸಹ. ನೆಟ್ಸ್ಕೇಪ್ 1.0, 1994ರ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು.SSL ಗೂಢ ಲಿಪೀಕರಣದ ಮೂಲಕ ವ್ಯವಹಾರಗಳನ್ನು ಭದ್ರಪಡಿಸಲಾಯಿತು.
◾1995: ಜೆಫ್ಫ್ ಬೆಜೊಸ್ Amazon.com ನ್ನು ಪ್ರಾರಂಭಿಸುತ್ತಾರೆ ಹಾಗು ಮೊದಲ ವಾಣಿಜ್ಯ-ಉಚಿತ 24 ಗಂಟೆಗಳ, ಏಕೈಕ-ಅಂತರ್ಜಾಲ ಬಾನುಲಿ ಕೇಂದ್ರಗಳು, ರೇಡಿಯೋ HK ಹಾಗು NetRadio ತಮ್ಮ ಪ್ರಸರಣವನ್ನು ಪ್ರಾರಂಭಿಸುತ್ತದೆ. ಡೆಲ್ ಹಾಗು ಸಿಸ್ಕೋ ವಾಣಿಜ್ಯ ವ್ಯವಹಾರಗಳಿಗೆ ಅಂತರ್ಜಾಲವನ್ನು ಹುರುಪಿನಿಂದ ಬಳಸುತ್ತವೆ. eBayಯನ್ನು ಕಂಪ್ಯೂಟರ್ ಪ್ರೋಗ್ರಾಮರ್ ಪಿಯೇರ್ರೆ ಒಮಿಡ್ಯರ್ ಹರಾಜು ಜಾಲವಾಗಿ ಸ್ಥಾಪಿಸುತ್ತಾರೆ.
◾1998: ಇಲೆಕ್ಟ್ರಾನಿಕ್ ಅಂಚೆ ಚೀಟಿಗಳುಅಂತರ್ಜಾಲದಿಂದ ಖರೀದಿಮಾಡಬಹುದು. ಅಲ್ಲದೇ ಮುದ್ರಿಸಲು ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
◾1999: Business.com US $7.5 ಮಿಲ್ಯನ್ ಗೇ ಇಕಂಪನೀಸ್ ಗಳನ್ನು ಮಾರಾಟಮಾಡಿತು, ಇದು 1997ರಲ್ಲಿ US $149,000ಕ್ಕೆ ಖರೀದಿ ಮಾಡಿತ್ತು. ಒಂದು ಸಮಾನವಾದ ಫೈಲ್ ಶೇರಿಂಗ್ ಸಾಫ್ಟ್ವೇರ್ ನ್ಯಾಪ್ಸ್ಟರ್ ಬಿಡುಗಡೆಯಾಯಿತು. ATG ಸ್ಟೋರ್ಸ್ ಮನೆಗಳಿಗೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಆನ್ಲೈನ್ ನಲ್ಲಿ ಬಿಡುಗಡೆಮಾಡಿತು.
◾2000: ದಿ ಡಾಟ್-ಕಾಮ್ ಬಸ್ಟ್.
◾2002: eBay PayPalನ್ನು $1.5 ಮಿಲ್ಯನ್ ಗೆ ಹೊಂದಿತು. ಸ್ಥಾಪಿತಗೊಂಡ ಕಿರುಕೋಳ ಸಂಸ್ಥೆಗಳಾದ CSN ಸ್ಟೋರ್ಸ್ ಹಾಗು NetShopsಗಳನ್ನು ಒಂದು ಕೇಂದ್ರೀಕೃತ ವಾಹಕಕ್ಕಿಂತ ನಿಗದಿತ ಹಲವಾರು ಕ್ಷೇತ್ರದ ಮೂಲಕ ಸರಕುಗಳನ್ನು ಮಾರಾಟ ಮಾಡುವ ಉದ್ದೇಶದೊಂದಿಗೆ ಸ್ಥಾಪಿಸಲಾಯಿತು.
◾2003: Amazon.comಮೊದಲ ವಾರ್ಷಿಕ ಲಾಭವನ್ನು ಪೋಸ್ಟ್ ಮಾಡಿತು.
◾2007: Business.com ನ್ನು R.H. ಡೋನ್ನೆಲ್ಲಿ $345 ಮಿಲ್ಯನ್ ಗೆ ಕೊಂಡುಕೊಂಡರು.
◾2009: Zappos.comನ್ನು Amazon.com $928 ಮಿಲ್ಯನ್ ಗೆ ಕೊಂಡುಕೊಂಡಿತು.[೮] ರೀಟೈಲ್ ಕಾನ್ವರ್ಜೆನ್ಸ್, ಖಾಸಗಿ ಮಾರಾಟ ಅಂತರ್ಜಾಲದ ನಿರ್ವಾಹಕ RueLaLa.comನ್ನು GSI ಕಾಮರ್ಸ್$180 ಮಿಲ್ಯನ್ ಗೆ ಕೊಂಡುಕೊಂಡಿತು, ಜೊತೆಗೆ 2012ರಲ್ಲಿ ಮಾರಾಟವನ್ನು ಆಧರಿಸಿ $170 ಮಿಲ್ಯನ್ ಹಣಸಂದಾಯವನ್ನು ಮಾಡುವುದಾಗಿ ಒಪ್ಪಿಕೊಂಡಿತು[೯].
◾2010: US eCommerce ಹಾಗು ಆನ್ಲೈನ್ ರೀಟೈಲ್ ಮಾರಾಟವು $173 ಬಿಲ್ಯನ್ ಮಾರಾಟದ ಗುರಿಯನ್ನು ಹೊಂದಿದೆ, ಇದು 2009ರ ಮಾರಾಟಕ್ಕಿಂತ ಶೇಖಡಾ 7ರಷ್ಟು ಅಧಿಕವಾಗಿದೆ[೧೦].

ವ್ಯಾವಹಾರಿಕ ಬಳಕೆಗಳುಸಂಪಾದಿಸಿ
ಇಲೆಕ್ಟ್ರಾನಿಕ್ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯವಾದ ಬಳಕೆಗಳನ್ನು ಈ ಕೆಳಕಂಡಂತೆ ನೀಡಲಾಗಿದೆ:
◾ಇಮೇಲ್
◾ವ್ಯಾಪಾರಸಂಸ್ಥೆಯ ವಸ್ತು ನಿರ್ವಹಣೆ
◾ತಕ್ಷಣದ ಸಂದೇಶ ಸೇವೆ
◾ಸುದ್ದಿಗುಂಪುಗಳು
◾ಆನ್ಲೈನ್ ಶಾಪಿಂಗ್ ಹಾಗು ಬೇಡಿಕೆಯ ವಸ್ತುಗಳ ಅನ್ವೇಷಣೆ
◾ಆನ್ಲೈನ್ ಬ್ಯಾಂಕ್ ವ್ಯವಹಾರ
◾ಆನ್ಲೈನ್ ಕಚೇರಿ ಗುಂಪುಗಳು
◾ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಹಣ ಸಂದಾಯ ವ್ಯವಸ್ಥೆಗಳು
◾ಶಾಪಿಂಗ್ ಕಾರ್ಟ್ ಸಾಫ್ಟ್ವೇರ್
◾ದೂರವಾಣಿ ಸಮಾಲೋಚನೆ
◾ಇಲೆಕ್ಟ್ರಾನಿಕ್ ಟಿಕೆಟ್ಗಳು

ಸರ್ಕಾರದ ಕಟ್ಟುಪಾಡುಗಳುಸಂಪಾದಿಸಿ
ಯುನೈಟೆಡ್ ಸ್ಟೇಟ್ಸ್ ನಲ್ಲಿ, ಕೆಲವು ಇಲೆಕ್ಟ್ರಾನಿಕ್ ವ್ಯಾವಹಾರಿಕ ಚಟುವಟಿಕೆಗಳು ಫೆಡರಲ್ ಟ್ರೇಡ್ ಕಮಿಷನ್(FTC)ನಿಂದ ನಿಯಮಕ್ಕೊಳಪಟ್ಟಿದೆ. ಈ ಚಟುವಟಿಕೆಗಳಲ್ಲಿ ವಾಣಿಜ್ಯ ಇಮೇಲ್ ಗಳು, ಆನ್ಲೈನ್ ಜಾಹಿರಾತು ನೀಡಿಕೆ ಹಾಗು ಗ್ರಾಹಕರ ಗೋಪ್ಯತೆ ಸೇರಿದೆ. 2003ರ CAN-SPAM ಆಕ್ಟ್ ಇಮೇಲ್ ಮುಖಾಂತರ ರಾಷ್ಟ್ರೀಯ ಮಟ್ಟದಲ್ಲಿ ನೇರ ಮಾರಾಟಗಾರಿಕೆಯನ್ನು ಸ್ಥಾಪಿಸುತ್ತದೆ. ಫೆಡರಲ್ ಟ್ರೇಡ್ ಕಮಿಷನ್ ಆಕ್ಟ್ ಎಲ್ಲ ವಿಧದ ಜಾಹಿರಾತುಗಳನ್ನು ವಿಧಿಬದ್ಧಗೊಳಿಸುತ್ತದೆ, ಇದರಲ್ಲಿ ಆನ್ಲೈನ್ ನಲ್ಲಿ ಜಾಹಿರಾತು ನೀಡಿಕೆ, ಹಾಗು ಜಾಹಿರಾತುಗಳು ವಾಸ್ತವವಾಗಿರಬೇಕು ಹಾಗು ಮೋಸಗೊಳಿಸಬಾರದೆಂದು ನಿರ್ದೇಶಿಸುತ್ತದೆ.[೧೧] FTC ಆಕ್ಟ್ (ಕಾನೂನು) ತನ್ನ ಅಧಿಕಾರವನ್ನು ಬಳಸಿಕೊಂಡು ವಿಧಿ 5ರ ಅಡಿಯಲ್ಲಿ, ಅಹಿತಕರವಾದದ್ದು ಹಾಗು ವಂಚನೆಯನ್ನು ತಡೆಯುತ್ತದೆ. ಇದರ ಸಲುವಾಗಿ FTC ಹಲವಾರು ನಿದರ್ಶನದ ಮೂಲಕ ಸಂಘಟಿತ ಖಾಸಗಿ ನಿರೂಪಣೆಗಳಿಗೆ ಆಶಾದಾಯಿಕವಾಗಿರುತ್ತದೆ. ಇದರಲ್ಲಿ ಗ್ರಾಹಕ ವೈಯಕ್ತಿಕ ಮಾಹಿತಿಯ ಭದ್ರತೆಯ ಬಗ್ಗೆ ನೀಡುವ ಭರವಸೆಯು ಸೇರಿದೆ.[೧೨] ಪರಿಣಾಮವಾಗಿ, ಇ-ಕಾಮರ್ಸ್ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ಸಂಘಟಿತ ಖಾಸಗಿ ಕಾರ್ಯ ನೀತಿಯು FTCಯ ಕಾನೂನಿಗೆ ಒಳಪಟ್ಟಿರುತ್ತದೆ.
ಕಳೆದ 2008ರಲ್ಲಿ ಜಾರಿಗೆ ಬಂದ 2008ರ ದಿ ರಯಾನ್ ಹೈಟ್ ಆನ್ಲೈನ್ ಫಾರ್ಮಸಿ ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್, ಆನ್ಲೈನ್ ಫಾರ್ಮಸಿಗಳ ವಿಳಾಸಗಳನ್ನು ಕಂಟ್ರೋಲ್ಡ್ ಸಬ್ಸ್ಟೆನ್ಸಸ್ ಆಕ್ಟ್ ಮೂಲಕ ತಿದ್ದುಪಡಿ ಮಾಡಿದೆ.[೧೩]

ಪ್ರಕಾರಗಳುಸಂಪಾದಿಸಿ
ಆಧುನಿಕ ಇಲೆಕ್ಟ್ರಾನಿಕ್ ವ್ಯವಹಾರವು ತಕ್ಷಣದ ಆನ್ಲೈನ್ ಬಳಕೆಯಾದ(ಡಿಜಿಟಲ್ ) "ಅಂಕೀಯ" ವಸ್ತುಗಳ ಬೇಡಿಕೆಯಿಂದ ಹಿಡಿದು ಸಾಂಪ್ರದಾಯಿಕ ಸರಕುಗಳು ಹಾಗು ಸೇವೆಗಳ ಬೇಡಿಕೆಯವರೆಗೆ ಹಾಗು ಇಲೆಕ್ಟ್ರಾನಿಕ್ ವ್ಯವಹಾರದ ಇತರ ವಿಧಾನಗಳನ್ನು ಸುಲಭಗೊಳಿಸುವ "ಮೆಟಾ" ಸೇವೆಗಳೆಲ್ಲವನ್ನು ಒಳಗೊಂಡಿದೆ.
ಗ್ರಾಹಕ ಮಟ್ಟದಲ್ಲಿ, ಇಲೆಕ್ಟ್ರಾನಿಕ್ ವ್ಯವಹಾರವನ್ನು ಸಾಮಾನ್ಯವಾಗಿ ವರ್ಲ್ಡ್ ವೈಡ್ ವೆಬ್ ನಲ್ಲಿ ನಡೆಸಲಾಗುತ್ತದೆ. ಒಬ್ಬ ವ್ಯಕ್ತಿಯು ಆನ್ಲೈನ್ ನಲ್ಲಿ ಪುಸ್ತಕಗಳಿಂದ ಹಿಡಿದು ದಿನಸಿಯವರೆಗೆ, ದುಬಾರಿ ವಸ್ತುಗಳಾದ ರಿಯಲ್ ಎಸ್ಟೇಟ್ ತನಕ ಯಾವುದನ್ನಾದರೂ ಖರೀದಿಸಬಹುದಾಗಿದೆ. ಮತ್ತೊಂದು ಉದಾಹರಣೆಯೆಂದರೆ ಆನ್ಲೈನ್ ಬ್ಯಾಂಕಿಂಗ್, ಅದೆಂದರೆ ಆನ್ಲೈನ್ ನಲ್ಲಿ ಬಿಲ್ ಪಾವತಿ, ಸಾಮಾನು ಖರೀದಿ, ಒಂದು ಅಕೌಂಟ್ ನಿಂದ ಮತ್ತೊಂದಕ್ಕೆ ಹಣದ ವರ್ಗಾವಣೆ, ಹಾಗು ಮತ್ತೊಂದು ದೇಶಕ್ಕೆ ತಂತಿಯ ಮೂಲಕ ಹಣವನ್ನು ಪಾವತಿಸಲು ಉಪಕ್ರಮಿಸುವುದು ಸೇರಿದೆ. ಈ ಎಲ್ಲ ಚಟುವಟಿಕೆಗಳನ್ನು ಕೀಬೋರ್ಡ್ ನ ಮೂಲಕ ಕೆಲವೇ ಕ್ಷಣದಲ್ಲಿ ಮಾಡಬಹುದಾಗಿದೆ.
ಸಾಂಘಿಕ ಮಟ್ಟದಲ್ಲಿ, ದೊಡ್ಡ ಸಂಸ್ಥೆಗಳು ಹಾಗು ಹಣಕಾಸು ಸಂಸ್ಥೆಗಳು, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಸುಲಭಗೊಳಿಸುವ ಸಲುವಾಗಿ ಅಂತರ್ಜಾಲದಲ್ಲಿ ಹಣಕಾಸಿನ ಡಾಟಾವನ್ನು(ಅಂಕಿಅಂಶ) ವಿನಿಮಯ ಮಾಡಿಕೊಳ್ಳುತ್ತವೆ. ಡಾಟಾ ಸಮಗ್ರತೆ ಹಾಗು ಭದ್ರತೆಗೆ ಇಂದಿನ ಇಲೆಕ್ಟ್ರಾನಿಕ್ ವ್ಯವಹಾರದಲ್ಲಿ ತುಂಬಾ ಗಾಢವಾದ ಹಾಗು ಒತ್ತುಕೊಡುವಂತಹ ವಿಷಯವಾಗಿದೆ.

ಇವನ್ನೂ ಗಮನಿಸಿಸಂಪಾದಿಸಿ
◾ಡಾಟ್-ಕಾಂ ಸಂಸ್ಥೆ
◾ಇ-ಸರಕಾರ
◾ಇ-ವಾಣಿಜ್ಯ
◾ಎಲೆಕ್ಟ್ರಾನಿಕ್ ಹಣ
◾ಅಂತರ್ಜಾಲ ವ್ಯಾಪಾರ
◾ಮೊಬೈಲ್ ಕಾಮರ್ಸ್
◾ಪೈಡ್ ಕಂಟೆಂಟ್
◾ಸಾಮಾಜಿಕ ವ್ಯಾಪಾರ
◾ಆನ್ಲೈನ್ ಶಾಪಿಂಗ್
◾B2B ಇ-ಮಾರುಕಟ್ಟೆ
◾ಶಾಪಿಂಗ್ ಕಾರ್ಟ್ ಸಾಫ್ಟ್ವೇರ್ ನ ತುಲನೆ

ಮೈಕ್ರೋಸಾಫ್ಟ್


ಮೈಕ್ರೋಸಾಫ್ಟ್






ಮೈಕ್ರೋಸಾಫ್ಟ್ ಅಮೆರಿಕದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆ. ಗಣಕಯಂತ್ರ, ಮೊಬೈಲ್ ಫೋನ್ ಮತ್ತಿತರ ಸಾಧನಗಳಲ್ಲಿ ಉಪಯೋಗಿಸಬಹುದಾದ ವಿವಿಧ ರೀತಿಯ ತಂತ್ರಾಂಶಗಳನ್ನು ಈ ಸಂಸ್ಥೆ ವಿಕಸನಗೊಳಿಸಿ ಮಾರಾಟ ಮಾಡುತ್ತದೆ. ಇದರ ಅತ್ಯಂತ ಯಶಸ್ವಿ ತಂತ್ರಾಂಶಗಳೆಂದರೆ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಮತ್ತು ಮೈಕ್ರೋಸಾಫ್ಟ್ ಆಫೀಸ್ ಗುಂಪಿನ ತಂತ್ರಾಂಶಗಳು. ಈ ಸಂಸ್ಥೆಯನ್ನು ಸ್ಥಾಪಿಸಿದವರು ಬಿಲ್ ಗೇಟ್ಸ್.




ಪರಿವಿಡಿ
ಚರಿತ್ರೆ ೧೯೭೫-೧೯೮೫: ಸ್ಥಾಪನೆ
೧೯೮೫-೧೯೯೫: ಒಎಸ್/೨ ಮತ್ತು ವಿಂಡೋಸ್
೧೯೯೫-೨೦೦೫: ಅಂತರಜಾಲ ಮತ್ತು ಕಾನೂನಿನ ತೊಡಕುಗಳು
೨೦೦೬ ರಿಂದ ಮುಂದೆ
ಕಾರ್ಯನಿರ್ವಾಹಕರು
ಮೈಕ್ರೋಸಾಫ್ಟ್‌ನಲ್ಲಿ ಕನ್ನಡ


ಚರಿತ್ರೆ
೧೯೭೫-೧೯೮೫: ಸ್ಥಾಪನೆಸಂಪಾದಿಸಿ
ಆಲ್ಟೇರ್ ೮೮೦೦ ಗಣಕಯಂತ್ರದ ಬಿಡುಗಡೆಯ ನಂತರ, ಆ ಯಂತ್ರದ ಮೇಲೆ ಬೇಸಿಕ್ ಭಾಷೆಯನ್ನು ಉಪಯೋಗಿಸಲು ತಂತ್ರಾಂಶವೊಂದನ್ನು ಬಿಲ್ ಗೇಟ್ಸ್ ಪ್ರದರ್ಶಿಸಿದರು. ಈ ಗಣಕಯಂತ್ರವನ್ನು ತಯಾರಿಸುತ್ತಿದ್ದ ಸಂಸ್ಥೆ ಈ ತಂತ್ರಾಂಶವನ್ನು ಮಾರಾಟ ಮಾಡಲು ಒಪ್ಪಿಗೆಯಿತ್ತ ನಂತರ ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಬಿಟ್ಟು ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದರು.
ಮೈಕ್ರೋಸಾಫ್ಟ್ ಸಂಸ್ಥೆಯ ಮೊದಲ ಯಶಸ್ಸು "ಡಾಸ್" ಕಾರ್ಯಾಚರಣ ವ್ಯವಸ್ಥೆ. ಐಬಿಎಮ್ ಸಂಸ್ಥೆಯ ಗಣಕಯಂತ್ರಗಳಿಗೂ ಈ ಕಾರ್ಯಾಚರಣ ವ್ಯವಸ್ಥೆಯನ್ನು ವಿಸ್ತರಿಸಿದ ಮೇಲೆ ಮೈಕ್ರೋಸಾಫ್ಟ್ ದೊಡ್ಡ ಸಂಸ್ಥೆಯಾಗಿ ಬೆಳೆಯಿತು.
೧೯೮೫-೧೯೯೫: ಒಎಸ್/೨ ಮತ್ತು ವಿಂಡೋಸ್ಸಂಪಾದಿಸಿ
ಆಗಸ್ಟ್ ೧೯೮೫ ರಲ್ಲಿ ಮೈಕ್ರೋಸಾಫ್ಟ್ ಮತ್ತು ಐಬಿಎಮ್ ಸೇರಿ ಒಎಸ್/೨ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಹೊರತಂದರು. ಇದೇ ವರ್ಷದಲ್ಲಿ ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನೂ ಬಿಡುಗಡೆ ಮಾಡಿತು. ಮಾರ್ಚ್ ೧೩, ೧೯೮೬ ರಂದು ತನ್ನ ಷೇರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.
೧೯೮೯ ರಲ್ಲಿ ಮೈಕ್ರೋಸಾಫ್ಟ್ ಆಫೀಸ್ ಎಂಬ ತಂತ್ರಾಂಶ ಸಲಕರಣೆಗಳ ಸಮೂಹವನ್ನು ಬಿಡುಗಡೆ ಮಾಡಿತು. ಇದು ಇತರ ಸಂಸ್ಥೆಗಳ ಇಂಥದೇ ತಂತ್ರಾಂಶಗಳಿಗಿಂತ ಹೆಚ್ಚು ಯಶಸ್ವಿಯಾಯಿತು. ೧೯೯೦ ರಲ್ಲಿ ವಿಂಡೋಸ್ ೩.೦, ೧೯೯೩ ರಲ್ಲಿ ವಿಂಡೋಸ್ ಎನ್ ಟಿ, ೧೯೯೫ ರಲ್ಲಿ ವಿಂಡೋಸ್ ೯೫ ಬಿಡುಗಡೆಯಾದವು.
೧೯೯೫-೨೦೦೫: ಅಂತರಜಾಲ ಮತ್ತು ಕಾನೂನಿನ ತೊಡಕುಗಳುಸಂಪಾದಿಸಿ
೯೦ ರ ದಶಕದ ಮಧ್ಯದಲ್ಲಿ ಮೈಕ್ರೋಸಾಫ್ಟ್ ಅಂತರ್ಜಾಲಕ್ಕೆ ಸಂಬಂಧಪಟ್ಟ ತಂತ್ರಾಂಶಗಳನ್ನು ಸಹ ಮಾರಾಟ ಮಾಡಲಾರಂಭಿಸಿತು. ಎಮ್ ಎಸ್ ಎನ್ ಎಂಬ ಪ್ರಮುಖ ಅಂತರ್ಜಾಲ ಸೇವೆಯನ್ನು ಆರಂಭಿಸಿತು. ೧೯೯೬ ರಲ್ಲಿ ಎನ್ ಬಿ ಸಿ ಸಂಸ್ಥೆಯಂದಿಗೆ ಸೇರಿ ಎಮ್ ಎಸ್ ಎನ್ ಬಿ ಸಿ ಎಂಬ ಕೇಬಲ್ ಟಿವಿ ಚಾನಲ್ ಅನ್ನು ಆರಂಭಿಸಲಾಯಿತು. ಪಿಡಿಎ, ಮೊಬೈಲ್ ಫೋನ್ ಮೊದಲಾದ ಕಿರು ಯಂತ್ರಗಳ ಮೇಲೆ ಕೆಲಸ ಮಾಡಬಲ್ಲ ವಿಂಡೋಸ್ ಸಿಇ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಯಿತು.
ಅಂತರ್ಜಾಲದಲ್ಲಿ ತಾಣಗಳನ್ನು ಭೇಟಿ ನೀಡಲು ಮೈಕ್ರೋಸಾಫ್ಟ್ ನ ತಂತ್ರಾಂಶವಾದ ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ವಿಂಡೋಸ್ ಮತ್ತು ಮ್ಯಾಕ್ - ಈ ಎರಡೂ ಕಾರ್ಯಾಚರಣ ವ್ಯವಸ್ಥೆಗಳಿಗೆ ಬಿಡುಗಡೆ ಮಾಡಲಾಯಿತು. ತನ್ನ ಸ್ಪರ್ಧಾಳು ತಂತ್ರಾಂಶ ನೆಟ್ ಸ್ಕೇಪ್ ಗಿಂತ ಇದು ಹೆಚ್ಚು ಯಶಸ್ವಿಯಾಗಲಾರಂಭಿಸಿತು. ಇದಕ್ಕೆ ಸಂಬಂಧಪಟ್ಟಂತೆ ೧೯೯೪ ರ ಒಂದು ಒಪ್ಪಂದವನ್ನು ಮೈಕ್ರೋಸಾಫ್ಟ್ ಮೀರಿತ್ತು ಎಂದು ೧೯೯೭ ರಲ್ಲಿ ಅಮೆರಿಕದ ನ್ಯಾಯ ಇಲಾಖೆ ದೂರು ದಾಖಲಿಸಿಕೊಂಡಿತು. ಏಪ್ರಿಲ್ ೩, ೨೦೦೦ ದಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮೈಕ್ರೋಸಾಫ್ಟ್ ಸಂಸ್ಥೆ ಗ್ರಾಹಕರ ಹಿತರಕ್ಷಣೆಗಾಗಿ ಇಬ್ಭಾಗವಾಗಬೇಕೆಂಬ ತೀರ್ಪು ನೀಡಿತು.
೧೯೯೮ ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ನ ಅಧ್ಯಕ್ಷ ಸ್ಥಾನವನ್ನು ಸ್ಟೀವ್ ಬಾಮರ್ ಅವರಿಗೆ ಬಿಟ್ಟುಕೊಟ್ಟರು; ಆದರೆ ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆದರು. ೧೯೯೮ ರಲ್ಲಿ ವಿಂಡೋಸ್ ೯೮, ೨೦೦೧ ರಲ್ಲಿ ವಿಂಡೋಸ್ ಎಕ್ಸ್ ಪಿ ಬಿಡುಗಡೆಯಾದವು. ಎಕ್ಸ್ ಬಾಕ್ಸ್ ಎಂಬ ಟಿವಿ ಆಟಗಳನ್ನಾಡುವ ಯಂತ್ರದ ಬಿಡುಗಡೆಯ ನಂತರ ಮೈಕ್ರೋಸಾಫ್ಟ್ ಗೇಮಿಂಗ್ ಮಾರುಕಟ್ಟೆಯನ್ನೂ ಪ್ರವೇಶಿಸಿತು.
೨೦೦೬ ರಿಂದ ಮುಂದೆಸಂಪಾದಿಸಿ
ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ವಿಸ್ಟಾ, ಜನವರಿ ೨೦೦೭ ರಲ್ಲಿ ಬಿಡುಗಡೆಯಾಯಿತು.
ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೭, ಜುಲೈ ೨೦೦೯ ರಲ್ಲಿ ಬಿಡುಗಡೆಯಾಯಿತು.
ಮೈಕ್ರೋಸಾಫ್ಟ್ ನ ಸ್ಮಾರ್ಟ್‌‌ಫೋನ್ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್, ನವಂಬರ‍್ ೨೦೧೦ ರಲ್ಲಿ ಬಿಡುಗಡೆಯಾಯಿತು.
ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೮, ಅಕ್ಟೋಬರ‍್ ೨೦೧೨ ರಲ್ಲಿ ಬಿಡುಗಡೆಯಾಯಿತು.
ಫೆಬ್ರವರಿ ೧, ೨೦೦೮ ರಂದು ಮೈಕ್ರೋಸಾಫ್ಟ್ ಅಂತರ್ಜಾಲ ಸಂಸ್ಥೆ ಯಾಹೂ ಅನ್ನು ೪೪.೬ ಶತಕೋಟಿ ಡಾಲರ್ ಕೊಟ್ಟು ಕೊಳ್ಳಲು ಮುಂದಾಯಿತು. ಆದರೆ ಈ ಪ್ರಸ್ತಾಪವನ್ನು ಯಾಹೂ ತಿರಸ್ಕರಿಸಿತು. ನಂತರ ಮೈಕ್ರೋಸಾಫ್ಟ್ ತನ್ನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು.

ಕಾರ್ಯನಿರ್ವಾಹಕರುಸಂಪಾದಿಸಿ

ಕ್ರಮ ಸಂಖ್ಯೆ
ಹೆಸರು
ಅವದಿ
೧ ಬಿಲ್ ಗೇಟ್ಸ್ ಎಪ್ರಿಲ್ ೪, ೧೯೭೫ - ಜನವರಿ ೧೩, ೨೦೦೦
೨ ಸ್ಟೀವ್ ಬಾಲ್ಮೆರ್ ಜನವರಿ ೧೩, ೨೦೦೦ - ಫೆಬ್ರವರಿ ೦೪, ೨೦೧೪
೩ ಸತ್ಯ ನಾಡೆಲ್ಲ ಫೆಬ್ರವರಿ ೦೪, ೨೦೧೪ ಇಂದ -

ಮೈಕ್ರೋಸಾಫ್ಟ್‌ನಲ್ಲಿ ಕನ್ನಡಸಂಪಾದಿಸಿ
ಮೈಕ್ರೋಸಾಫ್ಟ್‌ ತನ್ನ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಿತು. ಈ ಅಳವಡಿಕೆಯಲ್ಲಿ ಯುನಿಕೋಡ್ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್), ಇನ್‌ಸ್ಕ್ರಿಪ್ಟ್ ಕೀಲಿಮಣೆ, ಕನ್ನಡದಲ್ಲಿ ಫೈಲ್‌ಗಳಿಗೆ ಹೆಸರು ನೀಡುವ ಸೌಲಭ್ಯ, ಕನ್ನಡದ ಅಕಾರಾದಿ ವಿಂಗಡಣೆ, ಎಲ್ಲ ಇದ್ದವು. ಕನ್ನಡ ಪಠ್ಯವನ್ನು ಪರದೆಯಲ್ಲಿ ತೋರಲು ಬಳಸಿದ ಕನ್ನಡ ಯುನಿಕೋಡ್ ಆಧಾರಿತ ಓಪನ್‌ಟೈಪ್ ಫಾಂಟ್ ತುಂಗ. ಅದರಲ್ಲಿ ಕನ್ನಡದ ಕೆಲವು ಅಕ್ಷರಗಳಲ್ಲಿ, ಉದಾ "ಮೋ", ದೋಷಗಳಿದ್ದವು. ಮೈಕ್ರೋಸಾಫ್ಟ್ ಈ ದೋಷಗಳನ್ನು ೨೦೦೩ರಲ್ಲಿ ವಿಂಡೋಸ್ ಸರ್ವರ‍್ ೨೦೦೩ ಆವೃತ್ತಿಯಲ್ಲಿ ಸರಿಪಡಿಸಿತು. ನಂತರದ ವಿಸ್ತ, ವಿಂಡೋಸ್ ೭ ಮತ್ತು ೮ ಆವೃತ್ತಿಗಳಲ್ಲಿ ಕನ್ನಡದ ಅಳವಡಿಕೆಯಲ್ಲಿ ಯಾವ ದೋಷವೂ ಇಲ್ಲ. ಮೈಕ್ರೋಸಾಫ್ಟ್ ಕಂಪೆನಿ ತನ್ನ ಭಾಷಾಇಂಡಿಯ ತಾಣದ ಮೂಲಕ ಇನ್ನಷ್ಟು ಕೀಲಿಮಣೆ ವಿನ್ಯಾಸಗಳನ್ನು ನೀಡಿದೆ.

ವಿದೇಶಿ ಬಂಡವಾಳ


ವಿದೇಶಿ ಬಂಡವಾಳ


ವಿದೇಶಿ ಬಂಡವಾಳವು ಇಂದು ವಿವಿಧ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಂಡವಾಳದ ಕೊರತೆಯನ್ನು ಅನುಭವಿಸುತ್ತಿರುವ ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ವಿದೇಶಿ ಬಂಡವಾಳದ ಪಾತ್ರ ಹಿರಿದಾದುದಾಗಿದೆ. ವಿದೇಶಿ ಬಂಡವಾಳ ಎ೦ದರೆ ಕೇವಲ ವಿದೇಶಿ ಹಣದ ನೆರವು ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಇಂದು ವಿದೇಶಿ ಬಂಡವಾಳದ ಹೆಸರಿನಲ್ಲಿ ಯಂತ್ರಗಳು,ತಂತ್ರಜ್ಞಾನ, ತರಬೇತಿ, ಉತ್ಪಾದನಾ ನೈಪುಣ್ಯತೆ ಮುಂತಾದವುಗಳೂ ಕೂಡಾ ಲಭ್ಯವಾಗುತ್ತಿವೆ. ಆದ್ದರಿಂದ ವಿದೇಶಿ ಬಂಡವಾಳವನ್ನು ಸೌಮ್ಯ ಭಾಷೆಯಲ್ಲಿ "ವಿದೇಶಿ ನೆರವು" ಎಂದು ಕರೆಯಲಾಗಿದೆ.ವಿದೇಶಿ ಬಂಡವಾಳವು ಇಂದು ಎಲ್ಲಿಲ್ಲದ ಪ್ರಾಮುಖ್ಯತೆ ಪಡೆದಿರುವುದು ನಮ್ಮ ಮುಂಬರುವ ಚರ್ಚೆಯಲ್ಲಿ ವೇದ್ಯವಾಗುತ್ತದೆ. ಆರ್ಥಿಕಾಭಿವೃದ್ಡಿಗಾಗಿ ವಿದೇಶಿ ಬಂಡವಾಳವನ್ನು ಆಮದು ಮಾಡಿಕೊಳ್ಳುವ ಪರಿಪಾಠ ಹೊಸದೇನಲ್ಲ. ಇಂದು ಮುಂದುವರಿದ ಶ್ರೀಮಂತ ದೇಶಗಳೆಂದು ಕರೆಸಿಕೊಳ್ಳುತ್ತಿರುವ ದೇಶಗಳೂ ಕೂಡ ಅಭಿವೃದ್ದಿಯ ಆರಂಭಿಕ ಹಂತದಲ್ಲಿ ವಿದೇಶಿ ಬಂಡವಾಳವನ್ನು ಬಳಸಿಕೊಂಡಿವೆ. ೧೭ ಮತ್ತು ೧೮ನೇ ಶತಮಾನದಲ್ಲಿ ಇಂಗ್ಲೆಂಡ್ ಹಾಲೆಂಡ್ ದೇಶದಿಂದ ಬಂಡವಾಳದ ನೆರವು ಪಡೆದಿದ್ದರೆ, ೧೯ನೇ ಶತಮಾನದಲ್ಲಿ ಯೂರೋಪಿನಿಂದ ಬೃಹತ್ ಪ್ರಮಾಣದಲ್ಲಿ ಹಣ ಹರಿದು ಬಂದುದರಿಂದ ಅಮೇರಿಕಾ ತೀವ್ರ ಪ್ರಗತಿ ಸಾಧಿಸುವುದು ಸಾಧ್ಯವಾಯಿತು. ರಷ್ಯಾ ಕೂಡಾ ಪ್ರಾರಂಭದಲ್ಲಿ ವಿದೇಶಿ ಹಣದ ನೆರವಿನಿಂದಲೇ ಪ್ರಗತಿ ಸಾಧಿಸಿತು. ವಿದೇಶಿ ಬಂಡವಾಳದ ನೆರವಿನಿಂದ ಅನೇಕ ದೇಶಗಳು ತ್ವರಿತ ಆರ್ಥಿಕಾಭಿವೃದ್ದಿಯನ್ನು ಸಾಧಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.೧೮ ಮತ್ತು೧೯ನೇ ಶತಮಾನಗಳಲ್ಲಿ ಸಾಲಗಾರರಾಗಿದ್ದ ದೇಶಗಳು ಇಂದು ಬೇರೆ ದೇಶಗಳಿಗೆ ಸಾಲ ನೀಡುವ ಶಕ್ತಿ ಪಡೆದಿವೆ.[೧]
ವಿದೇಶಿ ನೆರವಿನ ಜೊತೆಗೆ ತಂತ್ರಜ್ಞಾನ, ಉತ್ಪಾದನಾ ನೈಪುಣ್ಯತೆ,ಯಂತ್ರೋಪಕರಣಗಳು ಹಾಗೂ ಮತ್ತಿತರ ನೆರವುಗಳೂ ಕೂಡಾ ಹರಿದು ಬರುವುದರಿಂದ ತ್ವರಿತ ಪ್ರಗತಿ ಸಾಧ್ಯವಾಗುತ್ತದೆ. ವಿದೇಶಿ ಬಂಡವಾಳವು ಹಿಂದುಳಿದ ಬಡರಾಷ್ಟ್ರಗಳಲ್ಲಂತೂ ತುಂಬಾ ಮಹತ್ತರ ಪಾತ್ರವನ್ನು ವಹಿಸುತ್ತಿದೆ.[೨]



ವಿದೇಶಿ ಸಂಬಂಧದ ಸಚಿವಾಲಯ

ವಿದೇಶಿ ಬಂಡವಾಳದ ಪಾತ್ರಸಂಪಾದಿಸಿ
ವಿದೇಶಿ ಬಂಡವಾಳ ಅಥವಾ ನೆರವು ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಬಡತನ,ನಿರುದ್ಯೋಗ, ಮುಂತಾದ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ದೇಶಗಳಲ್ಲಿ ವಿದೇಶಿ ಬಂಡವಾಳ ಆರ್ಥಿಕಾಭಿವೃದ್ಡಿಯ ಜೀವಾಳವಾಗಬಲ್ಲದು.ಬಂಡವಾಳ ಕೊರತೆಯನ್ನು ಅನುಭವಿಸುತ್ತಿರುವ ಈ ದೇಶಗಳಲ್ಲಿ ವಿದೇಶಿ ಬಂಡವಾಳ ಪ್ರಗತಿಯ ಯಂತ್ರವಾಗಬಲ್ಲದು.ವಿವಿಧ ಕ್ಷೇತ್ರಗಳಲ್ಲಿ ಈ ಬಂಡವಾಳ ವಹಿಸುವ ಪಾತ್ರವನ್ನು ಈ ಕೆಳಗಿನಂತೆ ಚರ್ಚಿಸಬಹುದು.
◾ಬಂಡವಾಳ ಕೊರತೆ ನಿವಾರಣೆ
ಹಿಂದುಳಿದ ದೇಶಗಳು ಕಡಿಮೆ ಉಳಿತಾಯ ಮತ್ತು ಕಡಿಮೆ ಹೂಟೆಯ ದೇಶಗಳು. ಈ ದೇಶಗಳಲ್ಲಿ ವ್ಯಾಪಕ ಬಡತನವಿರುವುದರಿಂದ ಮತ್ತು ಕಡಿಮೆ ತಲಾ ಆದಾಯ ಮತ್ತು ರಾಷ್ಟ್ರೀಯವರಮಾನಗಳಿಂದ ಉಳಿತಾಯದ ಪ್ರಮಾಣ ತುಂಬಾ ಕಡಿಮೆಯಿದೆ. ಕಡಿಮೆ ಉಳಿತಾಯದಿಂದ ಕಡಿಮೆ ಹೂಟೆಯಾಗುತ್ತಿದೆ.ಈ ದೇಶಗಳಲ್ಲಿ ಬಂಡವಾಳ ಹೂಡಿಕೆಯ[೧] ರಾಷ್ಟ್ರೀಯ ಆದಾಯದ ಕೇವಲ ಶೇಕಡ ೫ ರಿಂದ ೬ ರಷ್ಟಿದೆ. ಪ್ರತಿವರ್ಷ ಶೇಕಡ ೨ ರಿಂದ ೨.೫ ರಷ್ಟು ಜನಸಂಖ್ಯೆ ಬೆಳೆಯುತ್ತಿರುವ ಈ ದೇಶಗಳಲ್ಲಿ ಈಗಿರುವ ಬಂಡವಾಳ ಹೂಡಿಕೆ ಏನೇನೂ ಸಾಲದು. ಹಿಂದುಳಿದ ದೇಶಗಳ ಬಡತನದ ವಿಷವೃತ್ತವನ್ನು ತಡೆಯಲು ಕನಿಷ್ಟಪಕ್ಷ ರಾಷ್ಟೀಯ ಆದಯದ ಶೇಕಡ ೨೦ ರಷ್ಟು ಹೂಟೆಯಾಗ ಬೇಕಾಗುತ್ತದೆ. ಇಲ್ಲಿನ ಸರ್ಕಾರಗಳು ತೆರಿಗೆ ಮತ್ತು ಸಾರ್ವಜನಿಕ ಸಾಲದ ಮುಖೇನ ಬಂಡವಾಳ ಸಂಗ್ರಹಣೆ ಮಾಡುತ್ತಿವೆಯಾದರೂ ಇದು ಸಾಲದಾಗುತ್ತಿಲ್ಲ.ಏಕೆಂದರೆ ಈ ರೀತಿಯ ಕ್ರಮಗಳಿಂದ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ಹಿಂದುಳಿದ ದೇಶಗಳ ಉಳಿತಾಯ ಮತ್ತು ಹೂಟೆಗಳ ನಡುವೆ ಆಗಾಧ ಅಂತರವಿದೆ.ವಿದೇಶಿ ನೆರವಿನ ಸಹಾಯದಿಂದ ಈ ದೇಶಗಳು ಬಂಡವಾಳ ಸಂಗ್ರಹಣೆಯನ್ನು ಉತ್ತಮಗೊಳಿಸಿಕೊಂಡು ಹೆಚ್ಚಿನ ಹೂಟೆಯನ್ನು ಮಾಡಲು ಸಾಧ್ಯವಾಗುತ್ತದೆ.ಆದ್ದರಿಂದ ವಿದೇಶಿ ಬಂಡವಾಳವು ಹಿಂದುಳಿದ ದೇಶಗಳ ಬಂಡವಾಳದ ಕೊರತೆ ಸಮಸ್ಯೆಯನ್ನು ನೀಗಿಸುತ್ತದೆ.
◾ತೀವ್ರ ಆರ್ಥಿಕಾಭಿವೃದ್ಧಿ
ಅಲ್ಪ ಉಳಿತಾಯ ಮತ್ತು ಅಲ್ಪ ಹೂಟೆಯ ಜೊತೆಗೆ ಹಿಂದುಳಿದ ದೇಶಗಳಲ್ಲಿ ತಂತ್ರಜ್ಞಾನ ಹಿಂದುಳಿದಿದೆ.ಈ ಹಿಂದುಳಿದ ತಂತ್ರಜ್ಞಾನದಿಂದಾಗಿ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದೆಯಲ್ಲದೆ ಉತ್ಪಾದನಾ ಸಾಮರ್ಥ್ಯ ಕೂಡ ಕಡಿಮೆಯಾಗುತ್ತಿದೆ.ಈ ದೇಶಗಳಲ್ಲಿ ಬಂಡವಾಳ ಹಾಗೂ ಉತ್ಪಾದನೆಯ ಅನುಪಾತ ಕೂಡ ಹೆಚ್ಚಿದೆ.ವಿದೇಶಿ ಬಂಡವಾಳವನ್ನು ಉಪಯೋಗಿಸುವುದರಿಂದ ಬಂಡವಾಳ ಕೊರತೆಯನ್ನು ನೀಗಿಸುವುದರ ಜೊತೆಗೆ ತಾಂತ್ರಿಕ ಹಿಂದುಳಿದಿರುವಿಕೆಯ ಸಮಸ್ಯೆಯನ್ನು ಬಗೆಹರಿಸ ಬಹುದಾಗಿದೆ.ಏಕೆಂದರೆ ವಿದೇಶಿ ಬಂಡವಾಳವು ಹಣಕಾಸಿನ ಜೊತೆಗೆ ತಾಂತ್ರಿಕಜ್ಞಾನ, ಕುಶಲಶ್ರಮ, ಸಂಘಟನಾ ಚತುರತೆ, ಮಾರುಕಟ್ಟೆ ಮಾಹಿತಿ, ಆಧುನಿಕ ಉತ್ಪಾದನಾ ತಂತ್ರ, ಸರಕುಗಳಲ್ಲಿನ ಅವಿಷ್ಕಾರಗಳನ್ನು ತರುವುದರಿಂದ ಆರ್ಥಿಕಾಭಿವೃದ್ದಿ[೨] ತೀವ್ರಗೊಳ್ಳುತ್ತದೆ.ವಿದೇಶಿ ಬಂಡವಾಳವು ಸ್ಥಳೀಯ ಶ್ರಮವನ್ನು ಹೊಸ ಕೌಶಲ್ಯಗಳಲ್ಲಿ ತರಬೇತಿ ನೀಡುವುದರಿಂದ ಹೆಚ್ಚಿದ ಉತ್ಪಾದನಾ ಸಾಮರ್ಥ್ಯದಿಂದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ.
◾ಮೂಲ ಸೌಕರ್ಯಗಳ ನಿರ್ಮಾಣ
ಉತ್ತಮ ರಸ್ತೆಗಳು,ಕಾಲುವೆಗಳು, ವಿದ್ಯುತ್ ಸ್ಥಾವರಗಳು, ಶಿಕ್ಷಣ, ತರಬೇತಿ ಮುಂತಾದವುಗಳು ಆರ್ಥಿಕಾಭಿವೃದ್ಡಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ಎಲ್ಲಾ ಮೂಲಭೂತ ಸೌಲಭ್ಯಗಳು ಬಂಡವಾಳ ಹೂಡಿಕೆಗೆ ಬೇಕಿರುವ ಸೂಕ್ತ ವಾತಾವರಣವನ್ನು ನಿರ್ಮಿಸುತ್ತವೆಯಲ್ಲದೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುತ್ತವೆ. ಆದರೆ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದರೆ ಬೃಹತ್ ಪ್ರಮಾಣದ ಬಂಡವಾಳವನ್ನು ಹೂಡ ಬೇಕಾಗುತ್ತದೆ. ಅಷ್ಟಲ್ಲದೆ ಇವುಗಳು ಫಲನೀಡಲು ಬಹಳ ದೀರ್ಘ ಕಾಲಾವಧಿಯನ್ನು ತೆಗೆದುಕೊಳ್ಳುತ್ತವೆ .ಈಗಗಾಲೇ ಬಂಡವಾಳದ ಕೊರತೆಯನ್ನು ಅನುಭವಿಸುತ್ತಿರುವ ಹಿಂದುಳಿದ ದೇಶಗಳು ಈ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಬೃಹತ್ ಬಂಡವಾಳವನ್ನು ಹೂಡಲು ಸ್ಥಿತಿಯಲ್ಲಿಲ್ಲ. ಆದ್ದರಿಂದ ವಿದೇಶಿ ನೆರವಿನ ಸಹಾಯದಿಂದ ಈ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಹಿಂದುಳಿದ ದೇಶಗಳು ಪ್ರಯತ್ನಿಸಬಹುದು.
◾ಕೈಗಾರಿಕೀಕರಣ
ಹಿಂದುಳಿದ ದೇಶಗಳು ಸ್ವಶಕ್ತಿಯಿಂದ ಮೂಲಭೂತ ಮತ್ತು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ್.ಏಕೆಂದರೆ ಈ ದೇಶಗಳಲ್ಲಿ ಬಂಡವಾಳ ಮತ್ತು ತಂತ್ರಜ್ಞಾನದ ಕೊರತೆ ಇದೆ.ಈ ದೇಶಗಳು ವಿದೇಶಿ ನೆರವನ್ನು ಪಡೆದು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು, ಯಂತ್ರೋಪಕರಣಗಳು,ರಾಸಾಯನಿಕ ವಸ್ತುಗಳು,ಸಿಮೆಂಟು ಮತ್ತು ವಿದ್ಯುತ್ ಉಪಕರಣಗಳ ಕೈಗಾರಿಕೆಗಳನ್ನು ಸ್ಥಾಪಿಸಬಹುದು.ವಿದೇಶಿ ಬಂಡವಾಳದ ನೆರವಿನಿಂದ ಈ ಮೂಲಭೂತ ಕೈಗಾರಿಕೆಗಳನ್ನು ಸ್ಥಾಪಿಸಿದಾದಲ್ಲಿ ಬೇರೆ ಕೈಗಾರಿಕೆಗಳ ಸ್ಥಾಪನೆ ಸುಲಭ ಸಾಧ್ಯವಾಗುತ್ತದೆ.ದೇಶದ ಸರ್ವತೋಮುಖ ಪ್ರಗತಿಯ ದೃಷ್ಟಿಯಿಂದ ಈ ಎಲ್ಲಾ ಕೈಗಾರಿಕೆಗಳನ್ನು ಸ್ಥಾಪಿನೆ ಅತೀ ಮುಖ್ಯ್.ಆದ್ದರಿಂದ ವಿದೇಶಿ ಬಂಡವಾಳ ಹಿಂದುಳಿದ ದೇಶಗಳ ಕೈಗಾರಿಕೀಕರಣಕ್ಕೆ[೩] ತುಂಬಾ ಸಹಾಯಕಾರಿ.
◾ಪ್ರಾದೇಶಿಕ ಅಸಮತೋಲನ ನಿವಾಹರಣೆ
ಹಿಂದುಳಿದ ದೇಶಗಳಲ್ಲಿ ಪ್ರಾದೇಶಿಕ ಅಸಮತೋಲನ ಬಹುದೊಡ್ಡ್ ಸಮಸ್ಯೆಯಾಗಿದೆ.ವಿವಿಧ ಪ್ರದೇಶಗಳಲ್ಲಿ ಸಮತೋಲನ ಅಭಿವೃದ್ಧಿ ಸಾಧಿಸ ಬೇಕಾಗಿರುವುದು ಅನಿವಾರ್ಯ.ಆದರೆ ಈ ದೇಶಗಳಲ್ಲಿ ಖಾಸಗೀ ವಲಯ ಗಂಡಾಂತರಗಳನ್ನು ಎದುರಿಸಿ ಎಲ್ಲಾ ಪ್ರದೇಶಗಳಲ್ಲಿ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ.ವಿದೇಶಿ ಬಂಡವಾಳ ಸಹಾಯದಿಂದ ಎಲ್ಲಾ ಪ್ರದೇಶಗಳಲ್ಲಿ ಬಂಡವಾಳ ಹೂಡಿ ಅಭಿವೃದ್ಧಿ ಸಾಧಿಸುವ ಮೂಲಕ ಈ ದೇಶಗಳಲ್ಲಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸ ಬಹುದಾಗಿದೆ.
◾ಉದ್ಯೋಗಾವಕಾಶಗಳ ವಿಸ್ತರಣೆ
ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ,ಮೂಲ ಸೌಲಭ್ಯ್ಗಳ ವಿಸ್ತರಣೆ,ಹೊಸ ಸಂಪನ್ಮೂಲಗಳ ಸಂಶೋಧನೆ, ಹೊಸ ಪ್ರದೇಶಗಳ ಶೋಧನೆ ಮುಂತಾದವುಗಳೆಲ್ಲವೂ ಒಂದು ದೇಶದಲ್ಲಿನ ಉದ್ಯೋಗಾವಕಾಶಗಳ[೪] ವಿಸ್ತರಣೆಗೆ ಅವಕಾಶಗಳಾಗುತ್ತವೆ. ವಿದೇಶಿ ಬಂಡವಾಳದ ಉಪಯೋಗವು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವುದಲ್ಲದೆ,ಗ್ರಾಮೀಣ ಕ್ಷೇತ್ರದಲ್ಲಿರುವ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗಲು ಅವಕಾಶ ದೊರೆತಂತಾಗುತ್ತದೆ. ಇದರಿಂದಾಗಿ ಕೃಷಿ ಮೇಲಿನ ಮಿತಿಮೀರಿದ ಅವಲಂಬನೆ ಕಡಿಮೆಯಾಗುವುದಲ್ಲದೆ,ಮರೆಮಾಚಿದ ನಿರುದ್ಯೋಗ ಕಣ್ಮರೆಯಾಗುತ್ತದೆ.ಇದು ವಿದೇಶಿ ಬಂಡವಾಳದಿಂದ ಲಭ್ಯವಾಗುವ ಅತ್ಯಂತ ಪ್ರಮುಖವಾದ ಸಾಮಾಜಿಕ ಲಾಭವಾಗಿದೆ.
◾ಸಂಪನ್ಮೂಲಗಳ ವರ್ಧನೆ
ಹಿಂದುಳಿದ ದೇಶಗಳಲ್ಲಿ ಹೊಸ ಹೊಸ ಸಂಪನ್ಮೂಲಗಳನ್ನು ಕಂಡುಹಿಡಿಯುವ ಮತ್ತು ಹೊಸ ಪ್ರದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಹುಡುಕುವಂತಹ ತೊಂದರೆಯ ಕೆಲಸಗಳನ್ನು ಮಾಡಲು ಖಾಸಗೀ ವಲಯ ಮುಂದಾಗುವುದಿಲ್ಲ. ವಿದೇಶಿ ಬಂಡವಾಳವು ಈ ಎಲ್ಲಾ ತೊಂದರಗಳನ್ನು ಎದುರಿಸಿ,ಕಷ್ಟನಷ್ಟಗಳನ್ನು ಅನುಭವಿಸಿ ಹೊಸ ಹೊಸ ಸಂಪನ್ಮೂಲಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.ಇದರಿಂದಾಗಿ ದೇಶದ ನೈಸರ್ಗಿಕ ಸಂಪನ್ಮೂಲಗಳ ವರ್ಧನೆಯಾಗುತ್ತದೆ.ಭೌಗೋಳಿಕ ಸಂಶೋಧನೆಗೆ ಪ್ರೋತ್ಸಾಹ ದೊರೆಯುತ್ತದೆ.
◾ಜೀವನ ಮಟ್ಟದಲ್ಲಿ ಸುಧಾರಣೆ
ವಿದೇಶಿ ಬಂಡವಾಳವು ರಾಷ್ಟ್ರೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚುವಂತೆ ಮಾಡುವುದಲ್ಲದೆ ರಾಷ್ಟ್ರಾದಾಯ ಮತ್ತು ಉದ್ಯೋಗಾವಕಾಶಗಳು ಹೆಚ್ಚುವಂತೆ ಮಾಡುತ್ತದೆ.ಇದರಿಂದಗಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ದೊರೆಯುವುದು. ವಿದೇಶಿ ತಂತ್ರಜ್ಞಾನದ ಸಹಾಯದಿಂದ ಉತ್ಪಾದಿಸಿದ ಉತ್ತಮ ಗುಣಮಟ್ಟದ ಸರಕುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತಾಗುತ್ತವೆ.ಇದರಿಂದಾಗಿ ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತದೆ.
◾ಸರ್ಕಾರಕ್ಕೆ ಹೆಚ್ಚಿನ ಅದಾಯ
ವಿದೇಶಿ ಬಂಡವಾಳದಾರರು ತಮ್ಮ ಬಂಡವಾಳವನ್ನು ಹಿಂದುಳಿದ ದೇಶಗಳಲ್ಲಿ ಹೂಡಿ ಹೆಚ್ಚಿನ ಲಾಭಗಳಿಸುತ್ತಾರೆ.ಸರ್ಕಾರ ಇವರುಗಳ ಲಾಭದಮೇಲೆ ತೆರಿಗೆಯನ್ನು ಹಾಕುವುದರ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ವಿದೇಶಿ ಬಂಡವಾಳದ ನೆರವಿನಿಂದ ತಲಾದಾಯ ಮತ್ತು ರಾಷ್ಟ್ರೀಯ ಆದಾಯಗಳು ಹೆಚ್ಚುವುದರಿಂದ ಜನರ ತೆರಿಗೆ ಕಟ್ಟುವ ಸಾಮರ್ಥ್ಯ ಹೆಚ್ಚುತ್ತದೆ. ಆಗ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಿ ಆದಾಯ ಪಡೆಯಲು ಪ್ರಯತ್ನಿಸಬಹುದು.
◾ಹಣದುಬ್ಬರ ಒತ್ತಡಗಳ ನಿರ್ಮೂಲನೆ
ವಿದೇಶಿ ಬಂಡವಾಳ ನೆರವಿನಿಂದ ಹಿಂದುಳಿದ ದೇಶಗಳಲ್ಲಿ ಕಂಡುಬರುವ ಹಣದುಬ್ಬರ ಒತ್ತಡಗಳ ನಿರ್ಮೂಲನೆ ಮಾಡಬಹುದು.ಈ ದೇಶಗಳಲ್ಲಿ ಸರಕುಗಳ ಕೊರತೆಯಿಂದಾಗಿ ಹಣದುಬ್ಬರದ ಸನ್ನಿವೇಶಗಳು ಹುಟ್ಟಿಕೊಳ್ಳುತ್ತವೆ. ವಿದೇಶಿ ಬಂಡವಾಳ ಹರಿದು ಬಂದಾಗ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳ್ಬಹುದು.ಹಾಗೂ ದೇಶೀಯವಾಗಿಯೂ ಸರಕುಗಳ ಉತ್ಪಾದನೆ ಹೆಚ್ಚುತ್ತದೆ.ಇದರಿಂದಾಗಿ ಸರಕುಗಳ ನೀಡಿಕೆ ಮತ್ತು ಬೇಡಿಕೆಗಳ ನಡುವಿನ ಅಂತರ ಮಾಯವಾಗಿ ಬೆಲೆ ಏರಿಕೆಯ ಸನ್ನಿವೇಶಗಳು ಇಲ್ಲದಂತಾಗುತ್ತದೆ.
◾ಪಾವತಿ ಶಿಲ್ಕಿನ ಪರಿಸ್ಥಿತಿಯಲ್ಲಿ ಸುಧಾರಣೆ
ಹಿಂದುಳಿದ ದೇಶಗಳು ಇನ್ನೂ ಅಭಿವೃದ್ದಿಯ ಆರಂಭಿಕ ಹಂತದಲ್ಲಿರುವುದರಿಂದ ಈ ದೇಶಗಳು ಬೃಹತ್ ಪ್ರಮಾಣದಲ್ಲಿ ವಿದೇಶಿ ತಂತ್ರಜ್ಞಾನ,ಯಂತ್ರೋಪಕರಣಗಳು,ಕೆಲ ಕಚ್ಚಸಾಮಾಗ್ರಿಗಳು,ಸಲಕರಣೆಗಳು ಮುಂತಾದವುಗಳನ್ನು ಆನದು ಮಾಡಿಕೊಳ್ಳಬೇಕಾಗುತ್ತದೆ.ಜೊತೆಗೆ ಆಹಾರ ಸಮಸ್ಯೆಯನ್ನು ನೀಗಲು ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಈ ಕಾರಣದಿಂದಾಗಿ ಹಿಂದುಳಿದ ದೇಶಗಳಲ್ಲಿ ಪಾವತಿ ಶಿಲ್ಕಿನ ಸಮಸ್ಯೆ ಉದ್ಬವಿಸಿದೆ. ಈ ದೇಶಗಳು ಕೇವಲ ಪ್ರಾಥಮಿಕ ಸರಕುಗಳನ್ನು ಮಾತ್ರ ರಪ್ತು ಮಾಡುತ್ತಿವೆ.ವಿದೇಶಿ ಬಂಡವಾಳ ನೆರವಿನಿಂದ ಹಿಂದುಳಿದ ದೇಶಗಳು ಪಾವತಿ ಶಿಲ್ಕಿನ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗುತ್ತದೆ.ಕಾಲಾನಂತರ ಈ ದೇಶಗಳು ಕೈಗಾರಿಕೆ ಅಭಿವೃದ್ದಿಯನ್ನು ಸಾಧಿಸುವುದರಿಂದ ಹೆಚ್ಚು ತಯಾರಿಕಾ ಸರಕುಗಳನ್ನು ರಪ್ತು ಮಾಡಿ ಸಾಕಷ್ಟು ವಿದೇಶಿ ವಿನಿಮಯವನ್ನು ಗಳಿಸಬಹುದು.
◾ಯೋಜನೆಗಳ ಅನುಷ್ಠಾನ
ಇಂದು ಜಗತ್ತಿನ ಅನೇಕ ದೇಶಗಳು ತಮ್ಮ ತ್ವರಿತ‍ ಆರ್ಥಿಕಾಭಿವೃದ್ಧಿಗಾಗಿ ಆರ್ಥಿಕ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತಂದಿವೆ.ಯೋಜನೆಗಳ ಮೂಲಕ ತ್ವರಿತ ಆರ್ಥಿಕಾಭಿವೃದ್ಧಿಯನ್ನು ಸಾಧಿಸಬೇಕೆಂದರೆ ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳು, ವಿವಿಧ ಸಲಕರಣೆಗಳು ಮುಂತಾದವುಗಳು ಬೇಕಾಗುತ್ತವೆ.ಇವುಗಳನ್ನೆಲ್ಲಾ ವಿದೇಶಿ ಬಂಡವಾಳದ ಮುಖೇನ ಈ ದೇಶಗಳು ಪಡೆಯಲು ಪ್ರಯತ್ನಿಸಬಹುದು.ಆರ್ಥಿಕ ಯೋಜನೆಗಳ ಅನುಷ್ಠಾನವೆಂದರೆ ಬೃಹತ್ ಪ್ರಮಾಣದಲ್ಲಿ ಬಂಡವಾಳವನ್ನು ತೊಡಗಿಸುವುದಾಗಿರುತ್ತದೆ. ಹೀಗೆ ವಿದೇಶಿ ಬಂಡವಾಳವು ತ್ವರಿತ ಆರ್ಥಿಕಾಭಿವೃದ್ಧಿ ಸಾಧಿಸಲು ಅತ್ಯಂತ ಅವಶ್ಯಕ.ವಿದೇಶಿ ಬಂಡವಾಳವು ಹಿಂದುಳಿದ ದೇಶಗಳಲ್ಲಿನ ಸಮಾಜವನ್ನು ಆಧುನೀಕರಿಸಲು ಸಹಾಯ ಮಾಡುತ್ತದೆಯಲ್ಲದೇ ಈ ದೇಶಗಳಲ್ಲಿನ ಸಾರ್ವಜನಿಕ ಮತ್ತು ಖಾಸಗಿ ರಂಗಗಳೆರಡನ್ನೂ ಬಲಪಡಿಸುತ್ತದೆ.

ವಿದೇಶಿ ಬಂಡವಾಳಾದ ಪ್ರಕಾರಗಳುಸಂಪಾದಿಸಿ
ವಿದೇಶಿ ಬಂಡವಾಳವು ಮುಖ್ಯವಾಗಿ ಎರಡು ರೂಪ ಅಥವಾ ಪ್ರಕಾರಗಳಲ್ಲಿ ಹರಿದುಬರುತ್ತದೆ.ಅವುಗಳೆಂದರೆ ವಿದೇಶಿ ಖಾಸಗಿ ಬಂಡವಾಳ ಮತ್ತು ವಿದೇಶಿ ಸಾರ್ವಜನಿಕ ಬಂಡವಾಳ.[೩]
ವಿದೇಶಿ ಖಾಸಗಿ ಬಂಡವಾಳಸಂಪಾದಿಸಿ
ವಿದೇಶಗಳ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಬೇರೆ ಬೇರೆ ದೇಶಗಳಲ್ಲಿ ಬಂಡವಾಳವನ್ನು ತೊಡಗಿಸಿದರೆ ಅದನ್ನು ವಿದೇಶಿ ಖಾಸಗಿ ಬಂಡವಾಳ ಎಂದು ಕರೆಯುವರು.ಅಂದರೆ ವಿದೇಶಿ ಖಾಸಗಿ ಬಂಡವಾಳವು ಮುಖ್ಯವಾಗಿ ವಿದೇಶಿ ಜನಗಳು ವಿಶ್ವದ ಇತರೆ ದೇಶಗಳಲ್ಲಿ ಮಾಡುವ ಬಂಡವಾಳ ಹೂಡಿಕೆಯಾಗಿದೆ.ಬಹುರಾಷ್ಟ್ರೀಯ ನಿಗಮಗಳು ಹೂಡುವ ಬಂಡವಾಳ ಇದರ ಒಂದು ಉತ್ತಮ ಉದಾಹರಣೆಯಾಗಿದೆ.ವಿದೇಶಿ ಖಾಸಗಿ ಬಂಡವಾಳವು ಮುಖ್ಯವಾಗಿ ನೇರಹೂಟೆ ಮತ್ತು ಪರೋಕ್ಷ ಹೂಟೆಯನ್ನು ಒಳಗೊಂಡಿರುತ್ತದೆ.
ವಿದೇಶಿ ಸಾರ್ವಜನಿಕ ಬಂಡವಾಳಸಂಪಾದಿಸಿ
ವಿದೇಶಿ ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳು ನೀಡುವ ನೆರವು ವಿದೇಶಿ ಸಾರ್ವಜನಿಕ ಬಂಡವಾಳವಾಗುತ್ತದೆ. ವಿದೇಶಿ ಸಾರ್ವಜನಿಕ ಬಂಡವಾಳದಲ್ಲಿ ಪ್ರಮುಖವಾಗಿ ದ್ವಿಪಕ್ಷೀಯ ನೆರವು,ಬಹುಪಕ್ಷೀಯ ನೆರವು,ದಾನಹಣ,ರಫ್ತುಸಾಲ ಮುಂತಾದವುಗಳು ಸೇರಿಕೊಂಡಿರುತ್ತದೆ. ವಿದೇಶಿಯ ನೆರವು ಖಾಸಗಿಯಾದರೂ ಆಗಬಹುದು ಅಥವಾ ಸಾರ್ವಜನಿಕವಾದರೂ ಆಗಬಹುದು .ಒಟ್ಟಿನಲ್ಲಿ ವಿದೇಶಿಗಳಿಂದ ಹರಿದು ಬರುವ
ಅಥವಾ ಚಲನೆಯಾಗುವ ನೆರವು ಅಥವಾ ಬಂಡವಾಳವನ್ನು ಸಾಮಾನ್ಯವಾಗಿ ಈ ಕೆಳಗಿನಂತೆ ವರ್ಗೀಕರಿಸಬಹುದು.

Foreign Currency uses and pegs, Ruble included.png

◾ನೇರಹೂಟೆ
ನೇರ ಹೂಟೆಯೆಂದರೆ ವಿದೇಶಿದಲ್ಲಿ ಹೂಡಿ ಅದರ ಮೇಲೆ ಪೂರ್ಣ ಹತೋಟಿಯಿಟ್ಟುಕೊಳ್ಳುವುದು. ನೇರಹೂಟೆಯು ವಿದೇಶಿ ಖಾಸಗಿ ಬಂಡವಾಳದ ರೂಪದಲ್ಲಿರುತ್ತದೆ.ನೇರಹೂಟೆಯಲ್ಲಿ ವಿದೇಶಿ ಕಂಪನಿಯೊಂದು ಹೊಸದಾಗಿ ಒಂದು ಉದ್ಯಮವನ್ನು ಪ್ರಾರಂಭಿಸಬಹುದು ಅಥವಾ ಈಗಿರುವ ಒಂದು ಉದ್ಯಮವನ್ನೇ ತಾನು ತೆಗೆದುಕೊಳ್ಳಬಹುದು.ನೇರಹೂಟೆ[೫] ಉದ್ಯಮದ ನಿರ್ವಹಣೆಯ ಕಾರ್ಯಗಳು ಒಟ್ಟೊಟ್ಟಿಗೆ ನಡೆಯುತ್ತಿರುತ್ತವೆ.ನೇರ ಹೂಟೆಯಡಿ ವಿದೇಶಿ ಬಂಡವಾಳದಾರರು ಒಂದು ಉದ್ಯಮದಲ್ಲಿ ಬಂಡವಾಳ ತೊಡಗಿಸಿದಾಗ ಆ ಉದ್ಯಮದ ಹತೋಟಿ ತಮ್ಮ ಬಳಿಯಲ್ಲಿಯೇ ಇರುವುದರಿಂದ ಅವರು ಹೊಸ ಹೊಸ ಯಂತ್ರೋಪಕರಣ, ತಂತ್ರಜ್ಞಾನ,ಉದ್ಯಮ ಚತುರತೆ ಮುಂತಾದವುಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಹಿಂದುಳಿದ ದೇಶಗಳಿಗೆ ತುಂಬಾ ಅನುಕೂಲವಾಗುತ್ತದೆ.
◾ನೇರಹೂಟೆಯ ಪರ ವಾದಗಳು
ವಿದೇಶಿ ನೇರ ಹೂಟೆಯು ಈಚಿನ ದಿನಗಳಲ್ಲಿ ಹಲವಾರು ವಾಗ್ವಾದಗಳನ್ನು ಹುಟ್ಟು ಹಾಕಿದೆ.ಈ ಕಾರಣದಿಂದಾಗಿ ಅದರ ಪರ ಮತ್ತು ವಿರೋಧ ವಾದಗಳನ್ನು ಗಮನಿಸಬೇಕಾದ ಅಗತ್ಯ ಎದುರಗಿದೆ. ನೇರ ಹೂಟೆಯ ಪರವಿರುವ ಪ್ರಮುಖ ವಾದಗಳು ಈ ಮುಂದಿನಓತಿವೆ.
1.ದಕ್ಷ ನಿರ್ವಹಣೆ ಮತ್ತು ಹತೋಟಿ
2.ತಾಂತ್ರಿಕ ಜ್ಞಾನದ ಲಭ್ಯತೆ
3.ದೇಶಿ ಉದ್ಯಮಗಳ ಬೆಳವಣಿಗೆ
4.ಬಂಡವಾಳದ ನಿರಂತರ ಹರಿವು
5.ಲಾಭದ ಮರುಹೂಡಿಕೆ
6.ಸರ್ಕಾರಕ್ಕೆ ಅಧಿಕ ವರಮಾನ
7.ಉದ್ಯೋಗ ಸೃಷ್ಟಿ
8.ಮಾರುಕಟ್ಟೆ ವಿಸ್ತರಣೆ
9.ಪಾವತಿ ಶಿಲ್ಕಿನ ಮೇಲೆ ಅನುಕೂಲಕಾರಿ ಪರಿಣಾಮ,ಇತ್ಯಾದಿ.
Exchange Money Conversion to Foreign Currency.jpg


◾ನೇರಹೂಟೆಯ ವಿರೋಧ ವಾದಗಳು
ವಿದೇಶಿ ನೇರ ಹೂಟೆಯ ವಿರುದ್ದವಾಗಿ ಮಂಡಿಸಲಾದ ಪ್ರಮುಖ ವಾದಗಳು ಈ ಮುಂದಿನಂತಿವೆ.
1.ಅಸಮತೋಲನ ಅಭಿವೃದ್ದಿಗೆ ದಾರಿ
2.ಸಂಪನ್ಮೂಲ ಮತ್ತು ಮಾರುಕಟ್ಟೆಯ ವ್ಯಾಪಕ ಶೋಷಣೆ
3.ಉದ್ಯೋಗಾವಕಾಶಗಳ ಮಿತವಾದ್ ಏರಿಕೆ
4.ತಂತ್ರಜ್ಞಾನದ ಅಲ್ಪವರ್ಗಾವಣೆ
5.ಕೈಗಾರಿಕೆಗಳ ಕೇಂದ್ರೀಕರಣ
6.ಏಕಸ್ವಾಮ್ಯದ ಬೆಳವಣಿಗೆ
7.ರಾಜಕೀಯ ಭ್ರಷ್ಟಾಚಾರ
8.ದುಬಾರಿ ಮೂಲ ಸೌಕರ್ಯ ನಿರ್ಮಾಣ ವೆಚ್ಚ,ಇತ್ಯಾದಿ.
◾ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆ
ವಿದೇಶಿ ಕಂಪನಿಗಳು ಲಾಭ ಗಳಿಸುವ ದೃಷ್ಟಿಯಿಂದ ತಮ್ಮ ಹಣ ಅಥವಾ ಬಂಡವಾಳವನ್ನು ನೆರವು ಪಡೆಯಲ್ಚಿಸುವ ದೇಶದ [೬]ಕಂಪನಿಗಳ ಷೇರುಗಳು, ಸಾಲಪತ್ರಗಳು ಮತ್ತು ಬಾಂಡುಗಳ ಮೇಲೆ ತೊಡಗಿಸುವವು ಅಥವಾ ಈ ದೇಶದಗಳ ಬ್ಯಾಂಕುಗಳಲ್ಲಿ ಠೇವಣಿಗಳನ್ನು ಸಹ ಇಡಬಹುದು. ಈ ರೀತಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಬಂಡವಾಳವನ್ನು ಹೂಡಲಾಗುತ್ತದೆಯೇ ಹೊರತು ಈ ಬಂಡವಾಳ ಹೂಡಿಕೆಯ ಮೇಲೆ ಯಾವುದೇ ರಿತೀಯ ಹತೋಟಿಯನ್ನು ಹೊಂದಿರುವುದಿಲ್ಲ.ಆದ್ದರಿಂದ ವಿದೇಶಿ ಬಂಡವಾಳವು ಷೇರುಗಳು,ಬಾಂಡುಗಳು, ಸಾಲಪತ್ರಗಳು, ಮತ್ತು ಠೇವಣಿಗಳಂತಹ ವರ್ಗಾಯಿಸ ಬಹುದಾದ ವಿನಿಯೊಜಕ ರೂಪದಲ್ಲಿ ಬರುತ್ತಿದ್ದರೆ ಅದನ್ನು ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಡಿಕೆ ಎಂದು ಕರೆಯಲಾಗುತ್ತದೆ.ಈ ರೀತಿಯ ಬಂಡವಾಳ ಹೂಡಿಕೆಗಳು ವಿದೇಶಿ ಖಾಸಗಿಯವರಿಂದ ನಡೆಯುವುದೇ ಹೆಚ್ಚು. ವಿದೇಶಿ ಖಾಸಗಿ ಬಂಡವಾಳ ನೇರಹೂಟೆಯು ಸಾಮಾನ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಬರುತ್ತದೆ. ಆದರೆ ಖಾಸಗಿ ಬಂಡವಾಳದ ಪರೋಕ್ಷ ಹೂಟೆಯು ಕ್ಷೇತ್ರೀಯ ರೂಪದಲ್ಲಿ ಅಂದರೆ ಷೇರುಗಳು,ಬಾಂಡುಗಳು,ಸಾಲಪತ್ರಗಳು ಮೇಲಿನ ಹೂಡಿಕೇಯ ರೂಪದಲ್ಲಿರುತ್ತದೆ.
◾ವಿದೇಶಿ ಸಾಂಸ್ಥಿಕ ಹೂಡಿಕೆದಾರರು[೪]
ವಿದೇಶಿ ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು[೭] ಪ್ರಮುಖ ಪಾತ್ರವಹಿಸುತ್ತರೆ. ಈ ಸಾಂಸ್ಥಿಕ ಹೂಡಿಕೆದಾರರನ್ನು ಆಧುನಿಕ ಯುಗದಲ್ಲಿ ಷೇರು ಮಾರುಕಟ್ಟೆಯಾ "ನವ ಗೂಳಿಗಳು"ಎಂದು ಪರಿಗಣಿಸಲಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಗುಂಪು ಮುಖ್ಯವಾಗಿ ನಿವೃತ್ತಿ ನಿಧಿ,ಪರಸ್ಪರ ನಿಧಿ,ಆಸ್ತಿ ನಿರ್ವಾಹಣೆ ಕಂಪನಿಗಳು,ಹೂಟೆ ದತ್ತಿಗಳು, ನಾಮನಿರ್ದೇಶಿತ ಕಂಪನಿಗಳು,ಸಾಂಸ್ಥಿಕ ಪೋರ್ಟ್ ಫೋಲಿಯೋ ನಿರ್ವಾಹಕರು,ವಿಶ್ವವಿದ್ಯಾಲಯ ನಿಧಿಗಳು,ಧರ್ಮದರ್ಶಿ ಸಂಸ್ಥೆಗಳು,ದತ್ತಿ ಸಂಸ್ಥೆಗಳು ಮುಂತಾದದುವನ್ನು ಒಳಗೊಂಡಿರುತ್ತದೆ.[೫]
◾ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆ ಪರವಾದಗಳು
ಪೋರ್ಟ್ ಫೋಲಿಯೋ ಹೂಟೆಯ ಪರವಾಗಿ ಈ ಕೆಳಗಿನ ವಾದಗಳನ್ನು ಮಂಡಿಸಲಾಗಿದೆ.
1.ಬಂಡವಾಳದ ಸಮರ್ಥ ಬಳಕೆ
2.ಸ್ವದೇಶಿ ಆರ್ಥಿಕತೆಯ ಶೋಷಣೆ ಇಲ್ಲ
3.ಸಾರ್ವಜನಿಕ ವಲಯದ ಬೆಳವಣೆಗೆ
4.ಸ್ವದೇಶಿ ನಿಯಂತ್ರಣ ಮತ್ತು ನಿರ್ವಹಣೆ
5.ಮಿತವ್ಯಯಕಾರಿ
6.ರಾಜಕೀಯ ಪ್ರಾಬಲ್ಯದ ಭಯವಿಲ್ಲ
7.ಏಕಸ್ವಾಮ್ಯ ಬೆಳವಣಿಗೆಯ ಭಯವಿಲ್ಲ, ಇತ್ಯಾದಿ.
◾ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆ ವಿರೋಧ ವಾದಗಳು
ಪರೋಕ್ಷ ಅಥವಾ ಪೋರ್ಟ್ ಫೋಲಿಯೋ ಹೂಟೆಯ ಪ್ರಮುಖ ವಿರೋಧ ವಾದಗಳು ಮುಂದಿನಂತಿವೆ.
1.ಬಡ್ಡಿ ಪಾವತಿಯ ಹೊರೆ
2.ಆಧುನಿಕ ತಂತ್ರಜ್ಞಾನ ಲಭ್ಯತೆಯ ಅನುಕೂಲವಿಲ್ಲ
3.ಬಂಡವಾಳದ ಅದಕ್ಷ ಬಳಕೆಯ ಸಾಧ್ಯತೆ
4.ಮುಗ್ಗಟ್ಟಿನ ಕಾಲದಲ್ಲಿ ಅಪಾಯಕಾರಿ
5.ವಿದೇಶಿ ಮಧ್ಯಪ್ರವೇಶ ಸಾಧ್ಯತೆ
6.ಲಾಭದ ವರ್ಗಾವಣೆ
7.ನಿರ್ವಾಹಣೆ ಕ್ರಾಂತಿ ಸಾಧ್ಯವಿಲ್ಲ,ಇತ್ಯಾದಿ.
◾ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಬಂಡವಾಳ[೮]
ಒಂದು ವರ್ಷದ ಅವಧಿಗಿಂತ ಕಡಿಮೆ ಅವಧಿಗೆ ಲಭ್ಯವಿರುವ ಬಂಡವಾಳವನ್ನು ಅಲ್ಪಕಾಲಿಕ ಬಂಡವಾಳ ಎಂದು ಕರೆಯಾಲಾಗುತ್ತದೆ.ಈ ರೀತಿ ಅಲ್ಪಕಾಲಿಕ ಬಂಡವಾಳವು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಬಡ್ಡಿಯ ದರದಲ್ಲಿರುವ ವ್ಯತ್ಯಾಸದ ಮೇಲೆ ನಡೆಯುತ್ತದೆ. ಅಂದರೆ ಅಲ್ಪಕಾಲದಲ್ಲಿ ಹೆಚ್ಚಿನ ಬಡ್ಡಿ ದರದ ಲಾಭ ಪಡೆಯುವ ದೃಷ್ಟಿಯಿಂದ ಈ ರೀತಿ ಬಂಡವಾಳ ಹೂಡಿಕೆಯನ್ನು ಮಾಡಲಾಗುತ್ತದೆ. ದೀರ್ಘಕಾಲಿಕ ಬಂಡವಾಳವು ಸಾಮಾನ್ಯವಾಗಿ ದೀರ್ಘಕಾಲಿನ ಹೂಟೆಗಾಗಿ ಬಳಸಲ್ಪಡುವ ಬಂಡವಾಳವಾಗಿರುತ್ತದೆ.ಈ ರೀತಿ ಬಂಡವಾಳವನ್ನು ಬೃಹತ್ ಪ್ರಮಾಣದ ಉತ್ಪಾದಕ ಚಟುವಟಿಕೆಯನ್ನು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.
◾ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ನೆರವು
ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ನೆರವು ಸಾಮಾನ್ಯವಾಗಿ ಸರ್ಕಾರಿ ಅಥವಾ ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳ ಮೂಲದಿಂದ ಬರುವಂತಹುದು. ಎರಡು ದೇಶಗಳ ನಡುವಿನ ಪರಸ್ಪರ ಒಪ್ಪಂದಾ ಅಥವಾ ಆಧಾರದ ಮೇಲೆ ಒಂದು ದೇಶ ಮತ್ತೊಂದು ದೇಶಕ್ಕೆ ನೆರವು ನೀಡುವುದನ್ನು ದ್ವಿಪಕ್ಷೀಯ ನೆರವು ಎಂದು ಕರೆಯಾಲಾಗುತ್ತದೆ.ಇದು ಎರಡು ದೇಶಗಳ ಸರ್ಕಾರಗಳ ನಡುವಿನ ಒಪ್ಪಂದವಾಗಿರುವದರಿಂದ ಇದನ್ನು ಅಂತರ ಸರ್ಕಾರಗಳ ಸಾಲ ಎಂದು ಕರೆಯುವರು. ಬಹುಪಕ್ಷೀಯ ನೆರವೆಂದರೆ ಒಂದು ದೇಶದ ಸರ್ಕಾರ ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳಾದ ಅಂತರರಾಷ್ಟ್ರೀಯ ಹಣಕಾಸು ನಿಧಿ,ಜಾಗತಿಕ ಬ್ಯಾಂಕು, ಅಂತರರಾಷ್ಟ್ರೀಯ ಹಣಕಾಸಿನ ನಿಗಮ ಅಥವಾ ಏಷಿಯಾ ಅಭಿವೃದ್ದಿ ಬ್ಯಾಂಕುಗಳಂತಹ ಸಂಸ್ಥೆಗಳಿಂದ ಸಾಲ ಅಥವಾ ನೆರವು ಪಡೆಯುವುದಾಗಿದೆ. ಹಣಕಾಸಿನ ಸಂಸ್ಥೆಗಳು ವಿವಿಧ ಸದಸ್ಯ ದೇಶಗಳಿಂದ ವಂತಿಕೆ ಸಂಗ್ರಹಿಸಿದ ಹಣದಲ್ಲಿ ನೆರವು ಅಗತ್ಯವಿರುವ ಬಡದೇಶಗಳಿಗೆ ಕೊಡುತ್ತೆವೆಯಾದ್ದರಿಂದ ಇದು ಬಹುಪಕ್ಷೀಯ ನೆರವಾಗುತ್ತದೆ.ಬಹುಪಕ್ಷೀಯ ನೆರವಿನಡಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಸಾಮಾನ್ಯವಾಗಿ ಕಡಿಮೆ ಬಡ್ಡಿ ದರದಲ್ಲಿ ಹಣಕಾಸನ್ನು ಅಭಿವೃದ್ದಿಯ ಚಟುವಟಿಕೆಗಳಿಗೆ ಒದಗಿಸಲಾಗುತ್ತದೆ.
◾ರಫ್ತು ಸಾಲ
ಹಿಂದುಳಿದ ದೇಶಗಳು ಈಗ ತಾನೇ ತಮ್ಮ ಅಭಿವೃದ್ದಿಯ ಚಟುವಟಿಕೆಗಳನ್ನು ಪ್ರಾರಂಭಿಸಿವೆಯಾದ್ದರಿಂದ ಈ ದೇಶಗಳು ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳು, ತಂತ್ರಜ್ಞಾನ ಮತ್ತು ಕಚ್ಚಾ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಈ ದೇಶಗಳಲ್ಲಿ ಮಿತಿಮೀರಿದ ಜನಸಂಖ್ಯೆಯಿಂದಾಗಿ ಆಹಾರ ಸಾಮಾಗ್ರಿಗಳ ಕೊರತೆ ಉದ್ಭವಿಸಿದೆ.ಆದ್ದರಿಂದ ಈ ದೇಶಗಳು ಆಮದು ಮತ್ತು ರಫ್ತುಗಳ ನಡುವಿನ ಅಂತರದಿಂದ ನರಳುತ್ತಿವೆ.ಹಿಂದುಳಿದ ದೇಶಗಳು ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳು, ಮತ್ತು ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳಬೇಕೆಂದರೆ ಬೃಹತ್ ಪ್ರಮಾಣದಲ್ಲಿ ಬಂಡವಾಳ ಬೇಕಾಗುತ್ತದೆ. ಬಂಡವಾಳ ಕೊರತೆಯ ಸಮಸ್ಯೆಯಿಂದ ನರಳುತ್ತಿರುವ ಈ ದೇಶಗಳಿಗೆ ಇದು ಸಾಧ್ಯವಾಗಲಾರದು.ಆದ್ದರಿಂದ ಹಿಂದುಳಿದ ದೇಶಗಳು ಅನಿರ್ವಾಯವಾಗಿ ಶ್ರೀಮಂತ ದೇಶಗಳ ನೆರವನ್ನು ಕೋರಬೇಕಾಗುತ್ತದೆ. ಹಿಂದುಳಿದ ದೇಶಗಳಿಗೆ ಬೇಕಿರುವ ಯಂತ್ರೋಪಕರಣಗಳು,ತಂತ್ರಜ್ಞಾನ, ಮತ್ತು ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳಲು ಅವಕಾಶವಾಗುವಂತೆ ಶ್ರೀಮಂತ ದೇಶಗಳು ಕೊಡುವ ಸಾಲವನ್ನು ರಫ್ತು ಸಾಲ ಎಂದು ಕರೆಯಲಾಗುತ್ತದೆ.
◾ವಿದೇಶಿ ಸಹಭಾಗಿತ್ವ
ಯಾವುದೇ ಒಂದು ಉದ್ಯಮದಲ್ಲಿ ಅಥವಾ ಯೋಜನೆಯಲ್ಲಿ ವಿದೇಶಿ ಮತ್ತು ಸ್ವದೇಶಿ ಬಂಡವಾಳಗಳೆದಡನ್ನು ಹೂಡುವುದಕ್ಕೆ ವಿದೇಶಿ ಸಹಭಾಗಿತ್ವ ಎಂದುಕರೆಯುತ್ತಾರೆ.ಜಂಟಿರಂಗದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳೆರಡರ ಸಹಭಾಗಿತ್ವವಿದ್ದ ಹಾಗೆ ವಿದೇಶಿ ಸಹಭಾಗಿತ್ವದಲ್ಲಿ ವಿದೇಶಿ ,ಸ್ವದೇಶಿ ಬಂಡವಾಳಗಳೆದಡನ್ನು ಹೂಡಲಾಗುತ್ತದೆ.ವಿದೇಶಿ ಸಹೋದ್ಯಮವು ಎರಡು ದೇಶಗಳ ಸರ್ಕಾರಗಳ ಸಹಭಾಗಿತ್ವ ಅಥವಾ ಎರಡು ದೇಶಗಳ ಖಾಸಗಿ ವ್ಯಕ್ತಿಗಳ ಸಹಭಾಗಿತ್ವ ,ವಿದೇಶಿ ಕೈಗಾರಿಕಾ ಸಂಸ್ಥೆಗಳು ಹಾಗು ಸ್ವದೇಶಿ ಸರ್ಕಾರಗಳ ಸಹಭಾಗಿತ್ವ ರೂಪದಲ್ಲಿರಬಹುದು.
◾ವಿದೇಶಿ ನೆರವು
ವಿದೇಶಿ ನೆರವು ಎಂಬ ಪದಗಳನ್ನು ಬಹಳ ದೊಡ್ಡ ಅರ್ಥದಲ್ಲಿ ವಿದೇಶಿ ಖಾಸಗೀ ಮತ್ತು ಸಾರ್ವಜನಿಕ ಬಂಡವಾಳದ ನೆರವುಗಳನ್ನು ಸೇರಿಸಿಕೊಂಡು ಉಪಯೋಗಿಸಲಾಗುತ್ತಾದರೂ ಕೆಲವೊಮ್ಮೆ ವಿದೇಶಿ ಬಂಡವಾಳದ ಏಕಮುಖ ಪಾವತಿಗಳನ್ನು ಮಾತ್ರ ಸೇರಿಸಿಕೊಂಡು ಅರ್ಥೈಸಲಾಗುತ್ತದೆ. ವಿದೇಶಿ ಏಕಮುಖ ಪಾವತಿಯಲ್ಲಿ ಅತ್ಯಂತ ಪ್ರಮುಖ ವಿದೇಶಿ ನೆರವೆಂದರೆ ಅನುದಾನಗಳು ಅಥವಾ ದಾನಗಳು.
◾ಅನುದಾನಗಳು ಅಥವಾ ದಾನಗಳು
ಕೆಲವೊಮ್ಮೆ ಮುಂದುವರಿದ ದೇಶಗಳು ಹಿಂದುಳಿದ ದೇಶಗಳಿಗೆ ಅನುದಾನಗಳು ಅಥವಾ ದಾನದ ರೂಪದಲ್ಲಿ ಕೆಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಬಂಡವಾಳವನ್ನು ಒದಗಿಸುತ್ತದೆ.ಹೀಗೆ ಕೊಟ್ಟಿರುವ ಬಂಡವಾಳದ ನೆರವನ್ನು ಹಿಂದುಳಿದ ದೇಶಗಳು ಮರುಪಾವತಿಸ ಬೇಕಿಲ್ಲ.ಕೆಲವೊಮ್ಮೆ ಅಂತರರಾಷ್ಟ್ರೀಯ ಸಾಮಾಜಿಕ ಸಂಸ್ಥೆಗಳು ಕೂಡ ಈ ರೀತಿಯ ಅನುದಾನಗಳು ಅಥವಾ ದಾನಗಳ ರೂಪದಲ್ಲಿ ಬಂಡವಾಳದ ನೆರವನ್ನು ನೀಡುತ್ತದೆ. ಅನುದಾನಗಳು ಅಥವಾ ದಾನದ ರೂಪದಲ್ಲಿ ಪಡೆದ ವಿದೇಶಿ ನೆರವನ್ನು ಮರುಪಾವತಿ ಮಾಡವ ಅಗತ್ಯೈವಿಲ್ಲ ಇದರಿಂದ ಹಿಂದುಳಿದ ದೇಶಗಳ ಸರ್ವತೋಮುಖ ಅಭಿವೃದ್ದಿಗೆ ತುಂಬಾ ಅನುಕೂಲವಾಗುತ್ತದೆ.
◾ದ್ವಿಪಕ್ಷೀಯ ಕಠಿಣ ಸಾಲಗಳು ಮತ್ತು ಮೆದು ಸಾಲಗಳು
ದ್ವಿಪಕ್ಷೀಯ ಕಠಿಣ ಸಾಲಗಳಲ್ಲಿ ಸಾಲ ನೀಡುವ ದೇಶವು ತನ್ನ ಸ್ವಂತ ಹಣ ರೂಪದಲ್ಲಿಯೇ ಸಾಲ ಪಡೆಯಲ್ಚಿಸುವ ದೇಶಕ್ಕೆ ಸಾಲ ನೀಡುತ್ತೆದೆ. ಉದಾಹರಣೆಗೆ ಬ್ರಿಟೀಷ್ ಸರ್ಕಾರವು ಬೇರೊಂದು ದೇಶಕ್ಕೆ ಸಾಲ ನೀಡುವಾಗ ತನ್ನ ಕರೆನ್ಸಿಯಾದ ಪೌಂಡ್-ಸ್ಟರ್ಲಿಂಗ್ ರೂಪದಲ್ಲಿ ನೀಡಬಹುದು. ದ್ವಿಪಕ್ಷೀಯ ಮೆದು ಸಾಲಗಳಲ್ಲಿ ಸಾಲ ನೀಡುವ ದೇಶವು ಸಾಲ ಪಡೆಯುವ ದೇಶದ ಕರೆನ್ಸಿ ಹಣದ ರೂಪದಲ್ಲಿ ಸಾಲ ನೀಡುತ್ತೆದೆ. ಉದಾಹರಣೆಗೆ ಅಮೇರಿಕಾದ ಪಿ.ಎಲ್ ೪೮೦(pl)ವ್ಯವಸ್ಥೆಯಡಿ ಭಾರತಕ್ಕೆ ಆಹಾರ ಮತ್ತು ಕೃಷಿ ಸಾಮಾಗ್ರಿಗಳನ್ನು ಒದಗಿಸಿರುವುದು. ಈ ಸಾಲಗಳನ್ನು ಸಾಲ ಪಡೆದ ದೇಶ ತನ್ನ ಸ್ವಂತ ನಾಣ್ಯದ ರೂಪದಲ್ಲಿ ಮರುಪಾವತಿ ಮಾಡಬಹುದು.
◾ಬಂಧಿತ ನೆರವು
ನೆರವು ನೀಡುವ ದೇಶವು ತಾನು ನೀಡುತ್ತಿರುವ ನೆರವಿನ ಬಂಡವಾಳವನ್ನು ಒಂದು ನಿರ್ದಿಷ್ಟ ಉದ್ದೇಶ ಅಥವ ಯೋಜನೆಗೆ ಉಪಯೋಗಿಸಬೇಕೆಂದು ಒತ್ತಾಯಿಸಿದರೆ ಅದು ಬಂಧಿತ ನೆರವಾಗುತ್ತದೆ .ಅಂದರೆ ನೆರವು ನೀಡುವ ದೇಶವು ಸ್ಪಷ್ಟಪಡಿಸಿದರುವ ಉದ್ದೇಶಕ್ಕೆ ಮಾತ್ರ ಈ ಬಂಡವಾಳವನ್ನು ಉಪಯೋಗಿಸ ಬೇಕಾಗುತ್ತದೆಯೇ ಹೊರತು ಬೇರೆ ಉದ್ದೇಶಗಳಿಗೆ ಈ ಬಂಡವಾಳವನ್ನು ಬಳಸುವಂತಿಲ್ಲ.ಹೀಗೆ ಬಂಧಿತ ನೆರವಿನಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನೆರವನ್ನು ಬಳಸಬೇಕೆಂದು ಬಂಧಿಸಲಾಗಿರುತ್ತದೆ ಅಥವಾ ಕಟ್ಟುಪಾಡು ಹಾಕಿರಲಾಗುತ್ತದೆ. ನೆರವು ಪಡೆಯುತ್ತಿರುವ ದೇಶಕ್ಕೆ ತನಗಿಷ್ಟ ಬಂದ ರೀತಿಯಲ್ಲಿ ಈ ಬಂಡವಾಳವನ್ನು ಬಳಸುವ ಸ್ವತಂತ್ರವಿರುವುದಿಲ್ಲ.ಬಂಧಿತ ನೆರವಿನಲ್ಲಿ ಎರಡು ವಿಧಗಳಿವೆ. ರಾಷ್ಟ್ರಬಂಧಿತ ನೆರವು ಮತ್ತು ಯೋಜನೆ ಅಥವಾ ಪ್ರಾಜೆಕ್ಟು ಬಂಧಿತ ನೆರವು.
◾ರಾಷ್ಟ್ರಬಂಧಿತ ನೆರವು
ರಾಷ್ಟ್ರಬಂಧಿತ ನೆರವು ರಾಷ್ಟ್ರಾ ಬಂಧಿತ ನೆರವು ನೀಡುತ್ತಿರುವ ನೆರವು ಪಡೆಯುತ್ತಿರುವ ದೇಶಕ್ಕೆ ತನ್ನ ಸರಕುಗಳನ್ನೇ ಕೊಂಡುಕೊಳ್ಳಬೇಕೆಂದು ಷರತ್ತು ಹಾಕುತ್ತದೆ. ಅಂದರೆ ಈ ರೀತಿಯ ನೆರವಿನಲ್ಲಿ ನೆರವು ನೀಡುತ್ತಿರುವ ದೇಶದ ಸರಕುಗಳನ್ನೇ ಆಮದು ಮಾಡಿಕೊಳ್ಳಬೇಕೆಂದು ಕಟ್ಟುಪಾಡು ಹಾಕಲಾಗುತ್ತದೆ.ನೆರವು ಪಡೆಯುತ್ತಿರುವ ದೇಶವು ನೆರವು ನೀಡುತ್ತಿರುವ ದೇ॑ಶದಿಂದ ಮಾತ್ರ ಸರಕನ್ನು ಆಮದು ಮಾಡಿಕೊಳ್ಳಬೇಕೆಂಬ ಷರತ್ತನ್ನು ವಿಧಿಸುತ್ತದೆ. ನೆರವು ನೀಡುತ್ತಿರುವ ದೇಶದ ಸರಕುಗಳನ್ನೇ ಆಮದು ಮಾಡಿಕೊಳ್ಳಬೇಕೆಂದು ಷರತ್ತುನ್ನು ವಿಧಿಸುತ್ತದೆ. ನೆರವು ನೀಡುತ್ತಿರುವ ದೇಶವು ನೆರವು ಪಡೆಯುತ್ತಿರುವ ದೇಶಕ್ಕೆ ಯಂತ್ರೋಪಕರಣಗಳು ,ಬಿಡಿಭಾಗಗಳು , ಆಹಾರ ಧಾನ್ಯಗಳು ಇತ್ಯಾದಿಗಳನ್ನು ಪೂರೈಕೆ ಮಾಡಲು ಮುಂದಾಗುತ್ತದೆ.
◾ಯೋಜನೆ ಬಂಧಿತ ನೆರವು
ಯೋಜನೆ ಬಂಧಿತ ನೆರವನ್ನು ಪ್ರಾಜೆಕ್ಟು ಬಂಧಿತ ನೆರವೆಂದೂ ಕರೆಯಬಹುದು.ಈ ರೀತಯ ನೆರವಿನಲ್ಲಿ ಯಾವ ಯೋಜನೆ ಅಥವಾ ಪ್ರಾಜೆಕ್ಟಿಗಾಗಿ ನೆರವನ್ನು ಪಡೆಯಲಾಗುತ್ತದೋ ಅದೇ ಉದ್ದೇಶಕ್ಕೆ ಮಾತ್ರ ನೆರವಿನ ಹಣವನ್ನು ಬಳಸಬೇಕೆಂಬ ಷರತ್ತನ್ನು ನೆರವು ನೀಡುವ ದೇಶ ವಿಧಿಸುತ್ತದೆ. ಯಾವುದೋ ನಿರ್ದಿಷ್ಟ ಯೋಜನಯ ಅನುಷ್ಠಾನಕ್ಕಾಗಿ ತೆಗೆದುಕೊಂಡ ನೆರವಿನ ಹಣವನ್ನು ಬೇರೊಂದು ಯೋಜನೆಯ ಅನುಷ್ಠಾನಕ್ಕಾಗಿ ಉಪಯೋಗಿಸುವಂತಿಲ್ಲ. ಉದಾಹರಣೆಗೆ ಒಂದು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ವಿದೇಶಿ ಯೋಜನೆ ಬಂಧಿತ ನೆರವನ್ನು ತೆಗೆದುಕೊಳ್ಳಲಾಗಿದೆ ಎಂದರೆ ಈ ನೆರವಿನ ಹಣವನ್ನು ಬೇರೊಂದೆ ಕೈಗಾರಿಕೆಯ ಅಭಿವೃದ್ದಿ ಕಾರ್ಯಗಳಿಗೆ ತೊಡಗಿಸುವಂತಿಲ್ಲ.
◾ಬಂಧಿತವಲ್ಲದ ನೆರವು
ಯಾವುದೇ ಷರತ್ತು ಅಥವಾ ಕಟ್ಟುಪಾಡುಗಳಿಲ್ಲದೆ ಯಾವುದೇ ಅವಶ್ಯಕ ಅಭಿವೃದ್ದಿಯ ಕಾರ್ಯಕ್ರಮಗಳಿಗೆ ಉಪಯೋಗಿಸಲು ಅನುಕೂಲವಾಗುವಗುವಂತೆ ನೀಡಲಾಗುವ ವಿದೇಶಿ ನೆರವನ್ನು ಬಂಧಿತವಲ್ಲದ ಅಥವಾ ಬಂಧನರಹಿತ ನೆರವು ಎಂದು ಕರೆಯಲಾಗುತ್ತದೆ. ಅಂದರೆ ಇಂತಹ ನೆರವಿನಲ್ಲಿ ಒಂದು ನಿರ್ದಿಷ್ಟ ಯೋಜನೆ ಅಥವಾ ಪ್ರಾಜೆಕ್ಟಿಗೆ ಉಪಯೋಗಿಸಬೇಕೆಂಬ ಕಟ್ಟುಪಾಡುಗಳಿರುವುದಿಲ್ಲ.ನೆರವು ಪಡೆದ ದೇಶ ತನಗಿಷ್ಟ ಬಂದ ಅಭಿವೃದ್ದಿ ಯೋಜನೆಗಳನ್ನು ಕಾರ್ಯಗತ ಮಾಡಲು ಈ ನೆರವನ್ನು ಬಳಸಿಕೊಳ್ಳಬಹುದು.ಅಲ್ಲದೆ ನೆರವು ಪಡೆಯುತ್ತಿರುವ ದೇಶವು ನೆರವುನೀಡುತ್ತಿರುವ ದೇಶದಿಂದಲೇ ಸರಕುಗಳನ್ನು ತನಗಿಷ್ಟ ಬಂದ ದೇಶದಿಂದ ಆಮದು ಮಾಡಿಕೊಳ್ಳಲು ಈ ದೇಶ ಸ್ವತಂತ್ರವಾಗಿರುತ್ತದೆ. ಈ ರೀತಿ ಬಂಧನರಹಿತ ನೆರವನ್ನು ಕಾರ್ಯಕ್ರಮ ಆಧಾರಿತ ನೆರವು ಎಂತಲೂ ಕರೆಯುವರು. ಬಂಧನರಹಿತ ನೆರವು ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ದಿಗೆ ತುಂಬಾ ಪೂರಕವಾಗುವುದು.ಏಕೆಂದರೆ ದೇಶವು ತಾವು ಪಡೆದ ನೆರವಿನ ಮೊತ್ತವನ್ನು ಅಗತ್ಯಕ್ಕನುಗುಣವಾಗಿ ತಮಗಿಷ್ಟ ಬಂದ ಅಭಿವೃದ್ದಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು. ತಮಗಿಷ್ಟ ಬಂದ ಮಾರುಕಟ್ಟೆಯಲ್ಲಿ .ಅಗತ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳ ಬಹುದಲ್ಲದೆ ಸಂಪನ್ಮೂಲಗಳ ಸಮರ್ಪಕ ಹಂಚಿಕೆಗೂ ಮುಕ್ತ ಅವಕಾಶಗಳಿರುತ್ತವೆ.ನೆರವು ಪಡೆದ ದೇಶಗಳು ತಮ್ಮ ಬುದ್ದಿಶಕ್ತಿಯನ್ನು ಬಳಸಿ ನೆರವಿನ ಹಣವನ್ನು ಹೆಚ್ಚು ದಕ್ಷ ಹಾಗೂ ಪ್ರಾಮಾಣಿಕವಾಗಿ ಬಳಸಿಕೊಂಡಿದಾದಲ್ಲಿ ಇದರಿಂದ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತದೆ.ನೆರವು ನೀಡುತ್ತಿರುವ ದೇಶಗಳ ಬಿಡಿ ಹಿಡಿತದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯ ಸಂದರ್ಭಗಳು ಈ ರೀತಿಯ ನೆರವಿನಲ್ಲಿ ಉದ್ಭವಿಸುವುದಿಲ್ಲ.
ನೆರವನ್ನು ನಿರ್ಧರಿಸುವ ಅಂಶಗಳುಸಂಪಾದಿಸಿ
ಹಿಂದಳಿದ ದೇಶಗಳಿಗೆ ಹರಿದುಬರುವ ವಿದೇಶಿ ನೆರವಿನ ಪ್ರಮಾಣವು ಅನೇಕ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ.ಏಕೆಂದರೆ ವಿದೇಶಿ ನೆರವು ನೀಡಬೇಕಾದರೆ ಅದಕ್ಕೊಂದು ಸೂಕ್ತ ವಾತವರಣವನ್ನು ಬೇಕಾಗುತ್ತದೆ.ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಹರಿದುಬರುವ ವಿದೇಶಿ ನೆರವಿನ ಪ್ರಮಾಣವನ್ನು ನಿರ್ಧರಿಸುವ ಪ್ರಮುಖ ಅಂಶಗಳು ಕೆಳಗಿನಂತಿವೆ.
◾ಬಂವಾಳದ ಲಭ್ಯತೆ
ನೆರವು ನೀಡಬೇಕೆಂದರೆ ನೆರವು ನೀಡಲಿಚ್ಚಿಸುವ ದೇಶದಲ್ಲಿ ಸಾಕಷ್ಟು ಬಂಡವಳ ಲಭ್ಯವಿರಬೇಕಾಗುತ್ತದೆ. ಹಿಂದಳಿದ ದೇಶಗಳಿಗೆ ವಾರ್ಷಿಕವಾಗಿ ಸರಾಸರಿ ೧೫ ರಿಂದ ೨೦ಬಿಲಿಯನ್ ಡಾಲರ್ ಗಳ ಬಂಡವಾಳದ ಅವಶ್ಯಕತೆ ಇರುತ್ತದೆ. ಆದರೆ ಮುಂದುವರಿದ ದೇಶಗಳಲ್ಲಿ ಬಂಡವಾಳ ಲಭ್ಯವಿಲ್ಲ. ಅದೂ ಅಲ್ಲದೆ ಕೆಲ ಮುಂದುವರಿದ ದೇಶಗಳೇ ತಮ್ಮ ಅಭಿವೃದ್ದಿಯ ಚಟುವಟಿಕೆಗಳಿಗೆ ನೆರವನ್ನು ಪಡೆಯಲೆತ್ನಿಸಿವೆ.ಮುಂದುವರಿದ ಶ್ರಿಮಂತ ದೇಶಗಳು ಬಡದೇಶಗಳಿಗೆ ನೆರವಾಗುವ ದೃಷ್ಟಿಯಿಂದ ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಮುಂದಾಗದಿದ್ದಲ್ಲಿ ಬಂಡವಳವು ಅಗತ್ಯ ಪ್ರಮಾಣದಲ್ಲ್ಲಿ ಲಭ್ಯವಿರುವುದಿಲ್ಲ.
◾ಹೀರುವ ಸಾಮರ್ಥ್ಯ
ವಿದೇಶಿ ನೆರವನ್ನು ನಿರ್ಧರಿಸುವ ಎರಡನೇ ಮುಖ್ಯ ಅಂಶವೆಂದರೆ ಹಿಂದಳಿದ ದೇಶಗಳ ಹೀರುವ ಸಾಮರ್ಥ್ಯ.ಹೂಡಿಕೆಗೆ ಅಗತ್ಯವಿರುವಷ್ಟು ಪ್ರಮಾಣವನ್ನು ಈ ದೇಶಗಳು ಬಂಡವಾಳ ಪಡೆಯುವಂತಿರಬೇಕು. ಅಭಿವೃದ್ದಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಆರ್ಥಿಕ ಸಂಘಟನೆಯನ್ನು ಬದಲಾಯಿಸುವ ಮತ್ತು ಸಂಪನ್ಮೂಲಗಳನ್ನು ಮರುಹಂಚುವ ಸಾಮರ್ಥ್ಯಗಳು ಹಿಂದಳಿದ ದೇಶಗಳ ಹೀರುವ ಸಾಮರ್ಥ್ಯವನ್ನು ನಿರ್ಧರಿಸುತ್ತವೆ.ಹಿಂದಳಿದ ದೇಶಗಳು ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದರೆ,ಮತ್ತು ಅತಿ ವೇಗವಾಗಿ ಯೋಜನೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದರೆ ಅವುಗಳ ಹೀರುವ ಸಾಮರ್ಥ್ಯ ಹೆಚ್ಚುರುತ್ತದೆ.ಶಿಕ್ಷಣ, ತರಬೇತಿ, ರಸ್ತೆಗಳು, ಸದೃಢ ಸರ್ಕಾರ,ಶಿಕ್ಷಿತ ಜನರು, ತಂತ್ರಜ್ಞಾನ, ವೈಚಾರಿಕ ಮನೋಭಾವನೆ, ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಮುನ್ನಡೆ, ಇತ್ಯಾದಿಗಳು ಈ ದೇಶಗಳ ವಿದೇಶಿ ನೆರವನ್ನು ಹೀರುವ ಸಾಮರ್ಥ್ಯವನ್ನು ಹೆಚ್ಚುಸುತ್ತವೆ . ಹೀರುವ ಸಾಮರ್ಥ್ಯ ಜಾಸ್ತಿಯಿದ್ದಲ್ಲಿ ಆ ದೇಶಕ್ಕೆ ಹರಿದುಬರುವ ವಿದೇಶಿ ನೆರವೂ ಕೂಡ ಹೆಚ್ಚ್ಚಿರುತ್ತದೆ .
◾ಸಂಪನ್ಮೂಗಳ ಲಭ್ಯತೆ
ಸಂಪನ್ಮೂಗಳ ಲಭ್ಯತೆಯು ವಿದೇಶಿ ನೆರವಿನ ಪ್ರಮಾಣವನ್ನು ನಿರ್ಧಿರಿಸುವ ಮೂರನೇ ಪ್ರಮುಖ ಅಂಶವಾಗಿದೆ.ಮಾನವ ಮತ್ತು ನೈಸರ್ಗಿಕ ಸಂಪನ್ಮೂಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅವುಗಳನ್ನು ಸರಿಯಾಗಿ ಅಭಿವೃದ್ದಿಪಡಿಸಲಾಗಿದ್ದರೆ ಯಾವುದೇ ಒಂದು ದೇಶದ ವಿದೇಶಿ ಬಂಡವಾಳವನ್ನು ಉಪಯೋಗಿಸುವ ಸಾಮರ್ಥ್ಯ ಹೆಚ್ಚಿರುತ್ತದೆ. ಆದರೆ ಮಾನವ ಮತ್ತು ನೈಸರ್ಗಿಕ ಸಂಪನ್ಮೂಗಳು ಕೊರತೆಯನ್ನು ಅನುಭವಿಸುತ್ತಿರುವ ದೇಶಕ್ಕೆ ವಿದೇಶಿ ನೆರವು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಲಾರದು. ಸಂಪನ್ಮೂಗಳು ಸಾಕಷ್ಟು ಪ್ರಮಾಣದಲ್ಲಿದ್ದೂ ಸರಿಯಾಗಿ ಅಭಿವೃದ್ದಿಪಡಿಸದ ದೇಶಕ್ಕೆ ಯಾವ ವಿದೇಶಿಯಾರೂ ನೆರವು ನೀಡಲು ಮುಂದೆ ಬರುವುದಿಲ್ಲ.
◾ಮರುಪಾವತಿ ಸಾಮರ್ಥ್ಯ
ಹಿಂದಳಿದ ದೇಶಗಳ ಸಾಲ ಮರುಪಾವತಿ ಸಾಮರ್ಥ್ಯವು ವಿದೇಶಿ ನೆರವನ್ನು ನಿರ್ಧರಿಸುವ ಇನ್ನೊಂದು ಪ್ರಮುಖ ಅಂಶವಾಗಿದೆ.ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ದೇಶಕ್ಕೆ ನೆರವು ನೀಡಲು ಅನೇಕರು ಮುಂದೆ ಬರುತ್ತರೆ. ಹಿಂದಳಿದ ದೇಶಗಳು ಹೇಳಿ ಕೇಳಿ ಹಿಂದುಳಿದ ಬಡದೇಶಗಳು.ಈ ದೇಶಗಳ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಕಡಿಮೆಯೇ ಇರುತ್ತದೆ. ಪಡೆಯಲಾದ ವಿದೇಶಿ ನೆರವನ್ನು ಉತ್ಪಾದಕ ಚಟುವಟಿಕೆಗಳಲ್ಲಿ ಸಮರ್ಥವಾಗಿ ಬಳಸಿಕೊಂಡರೆ ಮರುಪಾವತಿ ಸಾಮರ್ಥ್ಯ ಸ್ವಯಂಚಾಲಿತವಾಗಿ ಜಾಸ್ತಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಿಂದಳಿದ ದೇಶಗಳ ಸಾಲದ ಭಾರ ಅತಿಯಾಗಿ ಅವುಗಳು ತಮ್ಮ ರಾಷ್ಟ್ರಾದಾಯದ ಹೆಚ್ಚಿನ ಭಾಗವನ್ನು ಸಾಲ ಮರುಪಾವತಿಗಾಗಿ ಉಪಯೋಗಿಸಬೇಕಾಗಿದೆ.
◾ಬಡ್ಡಿಯ ದರ
ಅಂತರರಾಷ್ಟ್ರೀಯ ಬಂಡವಾಳ ಚಲನೆಯನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಅಂಶವು ಬಡ್ಡಿಯ ದರವಾಗಿದೆ. ಸಾಮಾನ್ಯವಾಗಿ ಕಡಿಮೆ ಬಡ್ಡಿದರ ಹೊಂದಿರುವ ದೇಶಕ್ಕೆ ಚಲನೆಯಾಗುತ್ತದೆ. ಈ ರೀತಿಯ ಬಂಡವಾಳ ಚಲನೆಯಲ್ಲಿ ಪ್ರಮುಖವಾಗಿ ವಿದೇಶಿ ಖಾಸಗಿ ಬಂಡವಾಳವೇ ಮುಖ್ಯವಾದುದಾಗಿದೆ.ಹೆಚ್ಚು ಬಡ್ದಿ ಪಡೆಯುವ ಆಸೆಯಿಂದ ವಿದೇಶಿಯರು ತಮ್ಮ ಬಂಡವಾಳವನ್ನು ಹಿಂದಳಿದ ದೇಶಗಳಲ್ಲಿ ಠೇವಣಿ ಇಟ್ಟಾಗ ಅಥವಾ ಸಾಲವನ್ನು ಕೊಟ್ಟಾಗ ಆ ಬಂಡವಾಳವೂ ಹೂಡಿಕೆಗೆ ಲಭ್ಯವಿರುತ್ತದೆ.
◾ಲಾಭದ ಸಾಧ್ಯತೆಗಳು
ವಿದೇಶಿ ಖಾಸಗಿ ಬಂಡವಾಳದ ಚಲನೆಯು ಲಾಭ ಗಳಿಸುವ ಸಾಧ್ಯತೆಗಳನ್ನು ಅವಲಂಬಿಸಿರುತ್ತದೆ. ಬಂಡವಾಳ ಹೂಡಿಕೆಯ ಮೇಲೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆಗಳಿದ್ದರೆ ವಿದೇಶಿಯರು ಹೆಚ್ಚು ಬಂಡವಾಳ ಹೂಡಲು ಮುಂದಾಗುತ್ತಾರೆ.
◾ಉತ್ಪಾದನಾ ವೆಚ್ಚ
ವಿದೇಶಿ ಖಾಸಗಿ ಬಂಡವಾಳದ ಚಲನೆಯು ಉತ್ಪಾದನಾ ವೆಚ್ಚ ಅಂಶಗಳಿಂದಲೂ ನಿರ್ಧರಿಸಲ್ಪಡುತ್ತದೆ. ವಿದೇಶದಲ್ಲಿ ಶ್ರಮ ಮತ್ತು ಉತ್ಪಾದನಾ ಸಂಪನ್ಮೂಲಗಳು ತುಂಬಾ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದರೆ ಅನೇಕ ವಿದೇಶಿ ಬಂಡವಾಳಗಾರರು ತಮ್ಮ ಬಂಡವಾಳವನ್ನು ಆ ದೇಶದಲ್ಲಿ ತೊಡಗಿಸಲು ಮುಂದಾಗುತ್ತಾರೆ.
◾ಆರ್ಥಿಕ ಸ್ಥಿತಿಗತಿಗಳು
ಮಾರುಕಟ್ಟೆ ಸೌಲಭ್ಯಗಳು, ಮೂಲಭೂತ ಸೌಲಭ್ಯಗಳು, ಸಾರಿಗೆ ಸಂಪರ್ಕ ಇತ್ಯಾದಿ ಆರ್ಥಿಕ ಅಂಶಗಳು ಬಂಡವಾಳ ಲಭ್ಯತೆಯನ್ನು ನಿರ್ಧರಿಸುತ್ತವೆ. ಈ ಎಲ್ಲಾ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದರೆ ಹೆಚ್ಚಿನ ಬಂಡವಾಳ ಹೂಡಿಕೆಯಾಗುವ ಸಾಧ್ಯತೆಗಳಿರುತ್ತವೆ.
◾ಸರ್ಕಾರಿ ಧೋರಣೆ
ವಿದೇಶಿ ಬಂಡವಾಳ ಹೂಡಿಕೆಯ ಮತ್ತು ವಿದೇಶಿ ಸಹಭಾಗಿತ್ವ, ಲಾಭಗಳು, ತೆರಿಗೆ ನೀತಿ, ವಿದೇಶಿ ವಿನಿಮಯ[೯] ನಿಯಂತ್ರಣ, ಸುಂಕಗಳು, ಹಣಕಾಸಿನ ಮತ್ತು ಖಜಾನೆ ನೀತಿ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ತಾಳುವ ಧೋರಣೆಗಳು ವಿದೇಶಿ ನೆರವಿನ ಅಂಶವನ್ನು ನಿರ್ಧರಿಸುವ ಅತ್ಯಂತ ಪ್ರಭಾವೀ ಅಂಶವಾಗಿವೆ. ಈ ಎಲ್ಲಾ ವಿಷಯಗಳಲ್ಲಿ ಸರ್ಕಾರೀ ಧೋರಣೆ ವಿದೇಶಿಯರಿಗೆ ಅನುಕೂಲಕರವಾಗಿದ್ದರೆ ಹೆಚ್ಚಿನ ವಿದೇಶಿ ಬಂಡವಾಳ ಹರಿದುಬರುತ್ತದೆ.
◾ರಾಜಕೀಯ ಅಂಶಗಳು
ರಾಜಕೀಯ ಸ್ಥಿರತೆ, ರಾಜಕೀಯ ಪಕ್ಷಗಳ ಗುಣಲಕ್ಷಣಗಳು, ವಿದೇಶಿ ವ್ಯವಹಾರ, ಬುದ್ದಿವಂತ ಪ್ರಜೆಗಳು, ಸರ್ಕಾರೀ ನೀತಿ ಮುಂತಾದ ರಾಜಕೀಯ ಅಂಶಗಳು ವಿದೇಶಿ ನೆರವಿನ ಮೇಲೆ ತಮ್ಮದೇ ಆದ ಪರಿಣಾಮಗಳನ್ನು ಹೊಂದಿವೆ.
◾ಅಭಿವೃದ್ದಿಯ ಸಾಧಿಸುವ ಆಸಕ್ತಿ
ದೇಶವನ್ನು ಪ್ರಗತಿ ಪಥದಲ್ಲಿ ನಡೆಸಿಕೊಂಡು ಹೋಗುವ ಆಸಕ್ತಿ ಮತ್ತು ಆ ನಿಟ್ಟಿನಲ್ಲಿ ಮಾಡಲಾಗುವ ಪ್ರಯತ್ನಗಳು ವಿದೇಶಿ ನೆರವಿನ ಪ್ರಮಾಣವನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಮತ್ತು ಮಹತ್ವದ ಅಂಶಗಳಾಗಿವ. ಯಾವುದೇ ರಾಷ್ಟ್ರ ಅಭಿವೃದ್ದಿಯ ಹೊಂದುವ ಆಸಕ್ತಿ ಮತ್ತು ಪ್ರಯತ್ನಗಳನ್ನೇ ಹೊಂದಿಲ್ಲವಾದರೆ, ಆ ರಾಷ್ಟ್ರ ವಿದೇಶಿ ನೆರವನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳುವುದೆಂಬ ಭರವಸೆ ಮೂಡುವುದಿಲ್ಲ. ಹಿಂದಳಿದ ದೇಶಗಳಿಗೆ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಆ ದೇಶಗಳಲ್ಲಿ ಇರಲೇಬೇಕಾದ ಪರಿಸ್ಥಿತಿಗಳನ್ನು ಏಷಿಯಾ ಮತ್ತು ದೂರ ಪ್ರಾಚ್ಯ ದೇಶಗಳಿರುವ ವಿಶ್ವಸಂಸ್ಥೆಯ ಆರ್ಥಿಕ ಸಮಿತಿಯು ಈ ಕೆಳಗಿನಂತೆ ಪಟ್ಟಿ ಮಾಡಿದೆ.
1.ರಾಜಕೀಯ ಸ್ಥಿರತೆ ಮತ್ತು ವಿದೇಶಿ ಹಿಡಿತದಿಂದ ಮುಕ್ತವಾಗಿರುವುದು
2.ಲಾಭಗಳಿಸುವ ಸಾಕಷ್ಟು ಅವಕಾಶಗಳು
3.ರಾಷ್ಟ್ರೀಕರಣ ಮಾಡಲ್ಪಟ್ಟ ವಿದೇಶಿ ಕಂಪೆನಿಗಳಿಗೆ ಸೂಕ್ತ ಪರಿಹಾರ
4.ಮೂಲಬಂಡವಾಳ ಹೂಡಿಕೆಯಿಂದ ಬರುವ ಲಾಭ, ಬಡ್ಡಿ, ಡಿವಿಡೆಂಡ್ ಇತ್ಯಾದಿಗಳ ಪಾವತಿ
5.ವಿದೇಶಿ ತಂತ್ರಜ್ಞರ ನೇಮಕಾತಿ ಅವಕಾಶ
6.ವಿದೇಶಿಯರಿಗೆ ಯಾವುದೇ ತಾರತಮ್ಯ ಮಾಡದಿರುವುದು
7.ದ್ವಿಮುಖ ತೆರಿಗೆಯಿಂದ ವಿನಾಯತಿ
8.ವಿದೇಶಿ ಹೂಡಿಕೆದಾರರ ಜೊತೆಯಲ್ಲಿ ಸಾಮಾನ್ಯ ಭ್ರಾತೃತ್ವ, ಇತ್ಯಾದಿ

ವಿದೇಶಿ ನೆರವಿನ ಅನಾನುಕೂಲಗಳು ಅಥವಾ ದೋಷಗಳುಸಂಪಾದಿಸಿ
ವಿದೇಶಿ ನೆರವು ಕೆಲವು ಅನಾನುಕೂಲಗಳು ಅಥವಾ ದೋಷಗಳನ್ನು ಹೊಂದಿದೆ. ಅದರಲ್ಲೂ ಖಾಸಗೀ ವಿದೇಶಿ ನೆರವು ಅನೇಕ ದೋಷಗಳನ್ನು ಹೊಂದಿರುವುದು ನಮ್ಮ ಗಮನಕ್ಕೆ ಬಂದಿದೆ. ಹಿಂದಳಿದ ದೇಶಗಳಲ್ಲಿ ಮೂಲಭೂತ ಸೌಲಭ್ಯಗಳು, ತಂತ್ರಿಕ ಜ್ಞಾನ, ಉತ್ಪಾದನಾಂಗಗಳು ಮುಂತಾದವುಗಳ ಕೊರತೆ,ಮಾರುಕಟ್ಟೆಯ ಸಂಕುಚಿತ ವ್ಯವಸ್ಥ,ಅದಕ್ಷ ಆಡಳಿತ, ಶಿಕ್ಷಣದ ಹಿಂದುಳಿದಿರುವಿಕೆ, ತರಬೇತಿ ಸೌಲಭ್ಯಗಳು ಮತ್ತು ನಿಪುಣತೆಯ ಕೊರತೆಯಿಂದಾಗಿ ಈ ದೇಶಗಳ ಹೀರುವ ಸಾಮರ್ಥ್ಯ ಒಂದು ಮಿತಿಯೊಳಗಿದೆ. ವಿದೇಶಿ ಬಂಡವಾಳವು ಮುಖ್ಯವಾಗಿ ಈ ಕೆಳಗಿನ ದೋಷಗಳು ಅಥವಾ ಅನಾನುಕೂಲಗಳನ್ನು ಹೊಂದಿದೆ.
◾ರಾಜಕೀಯ ಹಸ್ತಕ್ಷೇಪ
ವಿದೇಶಿ ನೆರವು ಕೆಲವೊಮ್ಮೆ ರಾಜಕೀಯ ಹಸ್ತಕ್ಷೇಪ ಕಾರಣವಾಗಬಹುದು. ನೆರವು ನೀಡುವ ದೇಶವು ನೆರವು ಪಡೆಯುತ್ತಿರುವ ದೇಶದ ಆರ್ಥಿಕ ಮತ್ತು ರಾಜಕೀಯ ನೀತಿಗಳಲ್ಲಿ ಹಸ್ತಕ್ಷೇಪ ನಡೆಸಿ ಈ ರಾಷ್ಟ್ರಗಳ ರಾಜಕೀಯ ಸ್ಥಿತಿಯನ್ನೇ ಹದಗೆಡಿಸ ಬಹುದು . ನಿರಂತರ ಹಸ್ತಕ್ಷೇಪದಿಂದಾಗಿ ರಾಜಕೀಯ ಸ್ವಾತಂತ್ರ್ಯದ ಹರಣವಾಗ ಬಹುದು.
◾ಪ್ರಾಥಮಿಕ ವಲಯದ ಉಪೇಕ್ಷೆ ಸಾಧ್ಯತೆ
ವಿದೇಶಿ ಬಂಡವಾಳವು ಸಾಮಾನ್ಯವಾಗಿ ಹೆಚ್ಚು ಲಾಭ ಬರುವ ಸಾಧ್ಯತೆ ಇರುವ ಕೈಗಾರಿಕೆ ಮತ್ತು ಇನ್ನಿತರ ಕ್ಷೇತ್ರಗಳಿಗೆ ಹೋಗುವ ಸಾಧ್ಯತೆಗಳಿರುತ್ತದೆ. ಹಿಂದಳಿದ ದೇಶಗಳ ಪ್ರಾಥಮಿಕ ಚಟುವಟಿಕೆಯಾದ ಕೃಷಿಕ್ಷೇತ್ರ ಉಪೇಕ್ಷಗೊಳಗಾಗ ಬಹುದಾದ ಸಾಧ್ಯತೆಗಳಿರುತ್ತದೆ.
◾ಸರಿಹೊಂದದ ತಂತ್ರಜ್ಞಾನ
ವಿದೇಶಿ ನೆರವಿನ ಹೆಸರಿನಲ್ಲಿ ಹಿಂದಳಿದ ದೇಶಗಳಿಗೆ ರವಾನೆಯಾಗುವ ತಂತ್ರಜ್ಞಾನ[೧೦] ಈ ದೇಶಗಳ ಪರಿಸ್ಥಿತಿ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳದಿರ ಬಹುದು. ಈ ದೇಶಗಳ ಅನುಭೋಗದ ಅಗತ್ಯತೆಗಳು, ಸ್ವದೇಶಿ ಮಾರುಕಟ್ಟೆಯ ಗಾತ್ರ ಮತ್ತು ಆರ್ಥಿಕ ಪ್ರಗತಿಯ ಹಂತಗಳಿಗೆ ತಂತ್ರಜ್ಞಾನ ಸರಿ ಹೊಂದದಿರಬಹುದು. ಕೆಲವೊಮ್ಮೆ ಶ್ರೀಮಂತ ದೇಶಗಳು ವಿದೇಶಿ ನೆರವಿನ ಹೆಸರಿನಲ್ಲಿ ಹಳೆಯದಾದ, ಸವೆದು ಹೋದ ಮತ್ತು ಅಪ್ರಸ್ತುತ ತಂತ್ರಜ್ಞಾನವನ್ನು ರಪ್ತು ಮಾಡಬಹುದು.
◾ಅಧಿಕ ಬಡ್ಡಿದರ
ಶ್ರೀಮಂತ ದೇಶಗಳು ಹಿಂದಳಿದ ದೇಶಗಳಿಗೆ ನೆರವನ್ನು ನೀಡುವ ಸಂದರ್ಭದಲ್ಲಿ ಅತ್ಯಧಿಕ ಬಡ್ದಿದರವನ್ನು ನಿರ್ಧರಿಸಿದರೆ, ಅದು ಈ ದೇಶಗಳಿಗೆ ಭರಿಸಲಾಗದ ಹೊರೆಯಾಗಬಹುದು. ಸಾಲದ ಹೊರೆ ಹೆಚ್ಚಿ ಈ ದೇಶಗಳ ಆರ್ಥಿಕ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿರುತ್ತದೆ.
◾ಸ್ವಾವಲಂಬನೆಗೆ ಧಕ್ಕೆ
ವಿದೇಶಿ ನೆರವು ಹಲವು ಬಾರಿ ಹಿಂದಳಿದ ದೇಶಗಳ ಸ್ವಾವಲಂಬನೆಗೆ ಧಕ್ಕೆ ತಂದೊಡ್ಡುವ ಅಪಾಯವಿದೆ. ನೆರವು ನೀಡುವ ದೇಶಗಳು ನೆರವು ನೀಡುವ ವೇಳೆಯಲ್ಲಿ ಅನೇಕ ಷರತ್ತುಗಳನ್ನು ವಿಧಿಸುತ್ತವೆ. ಇಂದರಿಂದ ಹಿಂದಳಿದ ದೇಶಗಳ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಗೆ ಧಕ್ಕೆ ಬಂದೊದಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ನೆರವು ಪಡೆಯಲು ಮುಂದಾಗುತ್ತಿರುವ ಹಿಂದಳಿದ ದೇಶಗಳು ಅನೇಕ ಬಾರಿ ಮುಂದುವರಿದ ದೇಶಗಳ ತಾಳಕ್ಕೆ ತಕ್ಕಂತೆ ಕುಣಿಯ ಬೇಕಾಗುವುದು. ವಿದೇಶಿ ನೆರವು ಬಂಧಿತ ನೆರವಿನ ರೂಪದಲ್ಲಿ ಲಭ್ಯವಿದ್ದಿದ್ದಾದರೆ ಹೆಚ್ಚಿನ ಉಪಯೋಗಗಳಿರುವುದಿಲ್ಲ. ಅದೂ ಅಲ್ಲದೆ ಹಿಂದಳಿದ ದೇಶಗಳು ಯಾವ ದೇಶದಿಂದ ನೆರವು ಪಡೆದಿರುತ್ತವೆಯೋ ಅದೇ ದೇಶಗಳ ಕರೆನ್ಸಿಯಲ್ಲಿ ಸಾಲ ಮರುಪಾವತಿಗೆ ಶ್ರಮಪಡ ಬೇಕಾಗಬಹುದು. ನೆರವಿನ ರೂಪದಲ್ಲಿ ಬರುವ ಬಂಡವಾಳಗಾರರು ಅನೀತಿಯ ಕೆಲಸಗಳಲ್ಲಿ ತೊಡಗಬಹುದು. ಹೀಗೆ ವಿದೇಶಿ ಬಂಡವಾಳ ಅನುಕೂಲ ಹಾಗೂ ಅನಾನುಕೂಲಗಳೆರಡನ್ನು ಹೊಂದಿದೆ. ಆದರೆ ಅನುಕೂಲಗಳೆಷ್ಟು ಲಭ್ಯವಿರುತ್ತವೆಂಬುದು ಆ ಸಂದರ್ಭದ ಪರಿಸ್ಥಿತಿ ಮತ್ತು ಸನ್ನಿವೇಶಗಳಿಂದ ನಿರ್ಧರಿಸಲ್ಪಡುತ್ತದೆ. ಎಷ್ಟೇ ದೋಷಗಳು ಅಥವಾ ಅನಾನುಕೂಲತೆಗಳಿದ್ದರೂ ಸಹ ವಿದೇಶಿ ಬಂಡವಾಳ ತುಂಬಾ ಮುಖ್ಯ ಹಾಗೂ ಅನಿವಾರ್ಯ.

ಗುರುವಾರ, ಜುಲೈ 16, 2015

ಗಾಂಧೀ-ಇರ್ವಿನ್ ಒಪ್ಪಂದ


ಗಾಂಧೀ-ಇರ್ವಿನ್ ಒಪ್ಪಂದ


ಗಾಂಧೀ-ಇರ್ವಿನ್ ಒಪ್ಪಂದ : ಭಾರತದ ವೈಸ್ರಾಯ್ ಇರ್ವಿನ್ ಮತ್ತು ಮಹಾತ್ಮ ಗಾಂಧೀ ಇವರ ನಡುವೆ 1931ರ ಮಾರ್ಚ್ 5ರಂದು ಆದ ಒಪ್ಪಂದ. ಆಧುನಿಕ ಭಾರತದ ಇತಿಹಾಸದಲ್ಲಿ ಇದು ಒಂದು ಮುಖ್ಯ ಘಟನೆ. ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿ ವೈಸ್ರಾಯಿಗೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ರಾಷ್ಟ್ರೀಯ ಕಾಂಗ್ರೆಸಿನ ನೇತಾರರಾದ ಗಾಂಧಿಯವರಿಗೂ ಪ್ರಥಮ ಬಾರಿಗೆ ಸಮಾನ ಅಂತಸ್ತಿನಲ್ಲಿ ವಿಚಾರವಿನಿಮಯ ನಡೆದು ಅದು ಈ ಒಪ್ಪಂದದಲ್ಲಿ ಪರ್ಯವಸಾನ ವಾಯಿತು. ಇದರಿಂದ ಕಾಂಗ್ರೆಸಿಗೆ ಪ್ರಾಮುಖ್ಯ ಅಧಿಕವಾಗಿ ಅದರ ಕೀರ್ತಿಯೂ ಹೆಚ್ಚಿತು. ದುಂಡುಮೇಜಿನ ಪರಿಷತ್ತಿನ ಎರಡನೆಯ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸಲು ಅವಕಾಶವಾಯಿತು.
1930ರ ಏಪ್ರಿಲ್ 6ರಂದು ಗಾಂಧಿಯವರು ಆರಂಭಿಸಿದ ಕಾನೂನು ಭಂಗ ಚಳವಳಿಯ ಪ್ರತಿಭಟನೆಯನ್ನು ಹತ್ತಿಕ್ಕಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿತ್ತು. ಭಾರತೀಯ ಜನರ ಮೇಲೆ ಕಾಂಗ್ರೆಸ್ ಹೊಂದಿದ್ದ ಪ್ರಭಾವವನ್ನು ಸರ್ಕಾರ ಸರಿಯಾಗಿ ಅರಿತಿರಲಿಲ್ಲ. ಕಾಂಗ್ರೆಸಿನಷ್ಟು ಪ್ರಭಾವಶಾಲಿಯಲ್ಲದ, ಪ್ರತಿಗಾಮಿಯಾಗಿದ್ದ ಹಲವಾರು ಸಣ್ಣಪುಟ್ಟ ಪಕ್ಷಗಳಿಗೆ ಅದು ವಿಶೇಷವಾಗಿ ಉತ್ತೇಜನ ನೀಡಲು ಯತ್ನಿಸಿತು. ಸರ್ಕಾರದ ದಮನನೀತಿಯಿಂದ ಸ್ವಾತಂತ್ರ್ಯ ಹೋರಾಟ ಇನ್ನೂ ಬಿರುಸಾಯಿತು. ಭಾರತದ ರಾಜಕೀಯ ಭವಿಷ್ಯದ ಬಗ್ಗೆ ಸಮಾಲೋಚಿಸಲು 1930ರ ನವೆಂಬರಿನಲ್ಲಿ ಸಮಾವೇಶಗೊಂಡಿದ್ದ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್ ಪ್ರತಿನಿಧಿ ಯಾರೂ ಇರಲಿಲ್ಲ. ಕಾಂಗ್ರೆಸ್ ಇಲ್ಲದ ಯಾವ ಸಮಾಲೋಚನೆಯೂ ಫಲಪ್ರದವಾಗುವಂತಿರಲಿಲ್ಲ. ಪರಿಷತ್ತಿನ ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸುವುದೆಂಬುದು ಬ್ರಿಟಿಷ್ ಪ್ರಧಾನಿಯ ಆಶಯವಾಗಿತ್ತು. 1931ರ ಫೆಬ್ರವರಿ 17ರಂದು ಗಾಂಧೀ ಇರ್ವಿನರ ನಡುವೆ ಮಾತುಕತೆಗಳು ಆರಂಭವಾದುವು. ಮಾರ್ಚ್ 5ರಂದು ಒಪ್ಪಂದಕ್ಕೆ ಸಹಿಯಾಯಿತು.
ಇರ್ವಿನರ ಅಭಿಲಾಷೆಗಳು ಪ್ರಾಮಾಣಿಕವಾಗಿವೆಯೆಂದು ಗಾಂಧಿಯವರಿಗೆ ಖಚಿತವಾಗಿತ್ತು. ಲಿಬರಲ್ ಪಕ್ಷದ ನಾಯಕರಾದ ತೇಜ್ಬಹದ್ದೂರ್ ಸಪ್ರು, ಎಂ.ಆರ್. ಜಯಕರ್, ವಿ. ಎಸ್. ಶ್ರೀನಿವಾಸ ಶಾಸ್ತ್ರಿ ಇವರು ಸಂಧಾನ ಫಲಪ್ರದವಾಗಲು ಪ್ರಮುಖ ಪಾತ್ರ ವಹಿಸಿದ್ದರು.
ಒಪ್ಪಂದದ ಮುಖ್ಯಾಂಶಗಳಿವು : ದಬ್ಬಾಳಿಕೆಯ ಸುಗ್ರೀವಾಜ್ಞೆಗಳನ್ನೂ ಇತ್ಯರ್ಥವಾಗದ ಆಪಾದನೆಗಳನ್ನೂ ಹಿಂತೆಗೆದುಕೊಳ್ಳಲೂ ಹಿಂಸೆಯಲ್ಲಿ ತೊಡಗಿದ್ದವರನ್ನು ಬಿಟ್ಟು ಉಳಿದ ಎಲ್ಲ ರಾಜಕೀಯ ಸೆರೆಯಾಳುಗಳ ಬಿಡುಗಡೆ ಮಾಡಲೂ ಸತ್ಯಾಗ್ರಹದಲ್ಲಿ ಭಾಗವಹಿಸಿ ಆಸ್ತಿ ಕಳೆದುಕೊಂಡಿದ್ದವರಿಗೆ ಅದನ್ನು ಹಿಂದಿರುಗಿಸಲೂ ಮದ್ಯ ಮತ್ತು ವಿದೇಶಿ ಬಟ್ಟೆ ಅಂಗಡಿಗಳ ಮುಂದೆ ಶಾಂತಿಯುತ ನಿರೋಧಕಾರ್ಯ ನಡೆಸುವುದಕ್ಕೆ ಮತ್ತು ಸಮುದ್ರತೀರದಿಂದ ನಿಯಮಿತ ದೂರದಲ್ಲಿ ವಾಸಿಸುವ ಜನ ತೆರಿಗೆಯಿಲ್ಲದೆ ಉಪ್ಪು ತಯಾರಿಸುವುದಕ್ಕೆ ಅವಕಾಶ ಕೊಡಲೂ ಸರ್ಕಾರದ ಪರವಾಗಿ ಇರ್ವಿನ್ ಒಪ್ಪಿಕೊಂಡ. ಪೋಲಿಸ್ ದೌರ್ಜನ್ಯ ಕುರಿತು ವಿಚಾರಣೆಗೆ ಒತ್ತಾಯಿಸದಿರಲೂ ಕಾನೂನುಭಂಗ ಚಳವಳಿ ನಿಲ್ಲಿಸಲೂ ಜವಾಬ್ದಾರಿ ಸರ್ಕಾರ ಸ್ಥಾಪನೆ ಮತ್ತು ಭಾರತ ಹಿತರಕ್ಷಣೆಯ ಆಧಾರದ ಮೇಲೆ ದುಂಡುಮೇಜಿನ ಪರಿಷತ್ತಿನ ಎರಡನೆಯ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸಲೂ ಬಹಿಷ್ಕಾರವನ್ನೆಲ್ಲ ನಿಲ್ಲಿಸಲೂ ಗಾಂಧಿಯವರು ಕಾಂಗ್ರೆಸಿನ ಪರವಾಗಿ ಸಮ್ಮತಿಸಿದರು.

ಕರ್ನಾಟಕದಅರಣ್ಯಗಳ ವರ್ಗೀಕರಣ

ಅರಣ್ಯಗಳ ವರ್ಗೀಕರಣ

ಹವಾಗುಣ, ಮಣ್ಣು, ಉಷ್ಣತೆ, ಗಾಳಿ, ಮಳೆ, ಸಮುದ್ರಮಟ್ಟದಿಂದ ಇರುವ ದೂರ ಮತ್ತು ಎತ್ತರ ಮತ್ತು ಆ ಪ್ರದೇಶದ ಸಸ್ಯ ಸಮುದಾಯಕ್ಕೆ ಹಿಂದೆ ಸಿಕ್ಕಿರುವ ಉಪಚಾರ ಇವೇ ಮೊದಲಾದ ಅಂಶಗಳ ಆಧಾರದ ಮೇಲೆ ಕರ್ನಾಟಕದ ಅರಣ್ಯಗಳನ್ನು ವಿವಿಧ ಬಗೆಗಳಾಗಿ ವಿಂಗಡಿಸಲಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ಪ್ರಕಾರದ ಮಣ್ಣಿದೆ. ವರ್ಷಕ್ಕೆ ೨೫೦-೮೦೦ಮೀಮೀ ಮಳೆ ಬಿದ್ದು ಉಷ್ಣತೆ ೧೫-೪೦ ಸೆಲ್ಸಿಯಸ್ ವರೆಗೆ ವ್ಯತ್ಯಾಸವಾಗುತ್ತದೆ. ನೆಲದ ಎತ್ತರ ಸಮುದ್ರ ಮಟ್ಟದಿಂದ ೧೭೦೦ಮೀ ವರೆಗೆ ವಿವಿಧ ಜಾತಿಯ ಸಸ್ಯಗಳನ್ನೊಳಗೊಂಡ ವಿವಿಧ ನೈಜ ಅರಣ್ಯಗಳಿಗೆ ಎಡೆ ಮಾಡಿ ಕೊಟ್ಟಿದೆ. ವಿವಿಧ ಸಸ್ಯಪ್ರಭೇದ ಸಮೂಹ ಮತ್ತು ವಿಸ್ತರಣೆಗಳ ಆಧಾರದ ಮೇಲೆ ಕರ್ನಾಟಕದ ಅರಣ್ಯ ಪ್ರದೇಶವನ್ನು ಈ ಕೆಳಕಂಡಂತೆ ವಿಂಗಡಿಸಬಹುದು (ಚಾಂಪಿಯನ್ ಮತ್ತು ಸೇತ್ ಎಂಬ ತಜ್ಞರ ವರ್ಗೀಕರಣದ ಪ್ರಕಾರ)
◾೧. ದಕ್ಷಿಣಾರ್ಧದ ಉಷ್ಣವಲಯದ ತೇವಪೂರಿತ ನಿತ್ಯ ಹರಿದ್ವರ್ಣದ ಅರಣ್ಯ
◾೨. ದಕ್ಷಿಣಾರ್ಧದ ಉಷ್ಣವಲಯದ ಆಂಶಿಕ ನಿತ್ಯ ಹರಿದ್ವರ್ಣದ ಅರಣ್ಯ
◾೩. ದಕ್ಷಿಣ ಭಾರತದ ತೇವ ಮಿಶ್ರಿತ ಪರ್ಣಪಾತಿ ಅರಣ್ಯ
◾೪. ದಕ್ಷಿಣಾರ್ಧದ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯ
◾೫. ದಕ್ಷಿಣಾರ್ಧದ ಉಷ್ಣವಲಯದ ಕುರುಚಲು ಅರಣ್ಯ
ಇದರ ಜೊತೆಗೆ ಆಯಾ ಸ್ಥಳದ ಸೂಕ್ಷ್ಮ ಹವಾಗುಣವನ್ನು ಅವಲಂಬಿಸಿ ಮಾರ್ಪಾಡಾಗಿರುವ ಸಣ್ಣ ಪುಟ್ಟ ಬಗೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನೊಂದು ಮುಖ್ಯವಾದ ಅಂಶವೆಂದರೆ ಮೇಲೆ ನಮೂದಿಸಿರುವ ವರ್ಗಗಳು ಒಂದರೊಡನೊಂದು ಸೇರಿಕೊಳ್ಳುವುದು ಅಥವಾ ಒಂದು ಜಾತಿಯ ಗಿಡಮರಗಳ ಗುಂಪಿನಲ್ಲಿ ಮತ್ತೊಂದು ಬಗೆಯವು ಅಡಕವಾಗಿರುವುದು. ಜೊತೆಗೆ ದಟ್ಟ ಅರಣ್ಯದ ನಡುವೆ ಗಿಡಮರಗಳಿಲ್ಲದೆ ಕೇವಲ ಹುಲ್ಲು ಮಾತ್ರ ಬೆಳೆದಿದ್ದು ಕೆಲವು ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ನೀಡುವ ಹುಲ್ಲುಗಾವಲುಗಳೂ ಕಂಡುಬರುತ್ತವೆ. ಜೌಗಿನಿಂದ ಕೂಡಿದ ಪ್ರದೇಶಗಳನ್ನು ‘ಹಡ್ಲು’ ಎಂದು ಕರೆಯುತ್ತಾರೆ. ಇಳಿಜಾರಿನ ಪ್ರದೇಶಗಳಲ್ಲಿ ಗಾಳಿಯ ಒತ್ತಡದಿಂದ ಗಿಡಮರಗಳು ಬೆಳೆಯದೆ ಕೇವಲ ಕಲ್ಲುಮಣ್ಣುಗಳಿಂದಾವೃತವಾದ ನಿರುಪಯುಕ್ತ ಸ್ಥಳಗಳೂ ಅರಣ್ಯದ ಮಧ್ಯದಲ್ಲಿವೆ. ಈ ಸ್ಥಳಗಳನ್ನು ಶೋಲಾಗಳೆನ್ನುತ್ತಾರೆ.
ದಕ್ಷಿಣಾರ್ಧದ ಉಷ್ಣವಲಯದ ತೇವಪೂರಿತ ನಿತ್ಯ ಹರಿದ್ವರ್ಣದ ಅರಣ್ಯಸಂಪಾದಿಸಿ
ಪಶ್ಚಿಮ ಕರಾವಳಿಯ ಉದ್ದಕ್ಕೂ ಬೆಳಗಾವಿಯಿಂದ ಕೊಡಗಿನವರೆಗೂ ಈ ಬಗೆಯ ಅರಣ್ಯವನ್ನು ಕಾಣಬಹುದು. ಇಲ್ಲಿ ವಾರ್ಷಿಕವಾಗಿ ಸು.೨೫೦೦-೮೦೦೦ ಮಿಮೀ ಮಳೆಯಾಗುತ್ತದೆ. ಸಮುದ್ರ ಮಟ್ಟದಿಂದ ೫೦೦-೧೦೦೦ಮೀ ಎತ್ತರದವರೆಗೂ ಈ ಅರಣ್ಯ ವಿಸ್ತರಿಸಿದೆ. ದಟ್ಟವಾಗಿ ಬೆಳೆಯುವ ಇವುಗಳಲ್ಲಿ ವಿವಿಧ ಜಾತಿಯ ಮರಗಳನ್ನು ಕಾಣಬಹುದು. ಈ ಗುಂಪಿನ ಅರಣ್ಯಗಳ ಅತಿಮುಖ್ಯ ಲಕ್ಷಣವೆಂದರೆ ಮೇಲ್ಚಾವಣಿಯಲ್ಲಿರುವ ಮರಗಳು ನೀಳವಾಗಿ ಬೆಳೆದಿರುತ್ತವೆ. ಮೊದಲನೆಯ ಕೊಂಬೆಗೂ ನೆಲಕ್ಕೂ ಸು.೩೦ಮೀ ಅಂತರವಿರುತ್ತದೆ. ಮರಗಳ ಸುತ್ತಳತೆ ಸು.೫ಮೀ ಇರುತ್ತದೆ.
ನಿತ್ಯ ಹರಿದ್ವರ್ಣದ ಅರಣ್ಯ ಸಾಮಾನ್ಯವಾಗಿ ಮೂರು ಶ್ರೇಣಿಯ ಸಸ್ಯಜಾತಿಗಳನ್ನೊಳಗೊಂಡಿವೆ. ಈ ಗುಂಪಿನ ಕಾಡುಗಳಲ್ಲಿ ಧೂಮ, ಸುರಹೊನ್ನೆ, ಕಿರಾಳಭೋಗಿ, ಮಾವು, ಗುಳಮಾವು, ಬೆನ್ನಾಟೆ, ಹೊಳೆಗಾರ, ಹೊಳೆಹೊನ್ನೆ, ಬಿಲ್ಲಿ, ನಾಗಸಂಪಿಗೆ, ಬಿಳಿದೇವದಾರು, ಪಾಲಿ, ಸಂಪಿಗೆ, ಸಾಲುಧೂಪ, ಹೆಬ್ಬಲಸು, ನೊಗ, ಬಲಂಜೆ, ಸಟ್ಟಗ, ದಾಲ್ಚಿನ್ನಿ, ಹೈಗ, ಕಾಯಿಧೂಪ, ನೀಲಿ, ಬಗನಿ, ನೇರಳೆ, ಸಾಗಡೆ, ರಂಚ, ಅರಿಶಿನಗುರಿಗೆ, ತೊರತ್ತಿ, ರಾಮನಡಿಕೆ, ಬೊಂಬು, ವಾಟೆ, ಗುರಿಗೆ, ಕೇದಗೆ, ಬೆತ್ತ ಮೊದಲಾದ ಗಿಡ ಮರಬಳ್ಳಿಗಳು ಕಂಡುಬರುತ್ತವೆ. ಈ ಅರಣ್ಯಗಳ ಪಾತ್ರ ದೇಶದ ಹಿತದೃಷ್ಟಿಯಿಂದ ಬಹುಮುಖ್ಯವಾದುದು. ನೇರವಾಗಿ ಬೆಳೆಯುವ ಮರಗಳಿಂದ ವಿದ್ಯುಚ್ಫಕ್ತಿ ಕಂಬಗಳು, ರೈಲುಕಂಬಿಗಳ ಆಸರೆಯ ದಿಮ್ಮಿಗಳು, ಕಾಗದದ ಉತ್ಪತ್ತಿಗೆ ಬೇಕಾದ ನಾರು ತಿರುಳು, ತೆಳುಹೊದಿಕೆ ಮರದ ಹಾಳೆಗಳು ಮುಂತಾದವು ದೊರಕುವವು.
ದಕ್ಷಿಣಾರ್ಧದ ಉಷ್ಣವಲಯದ ಆಂಶಿಕ ನಿತ್ಯ ಹರಿದ್ವರ್ಣದ ಅರಣ್ಯಸಂಪಾದಿಸಿ
ಈ ಗುಂಪಿನ ಕಾಡುಗಳು ಪಶ್ಚಿಮ ಕರಾವಳಿಯಲ್ಲಿ ನಿತ್ಯಹರಿದ್ವರ್ಣ ಅರಣ್ಯ ಮತ್ತು ತಾತ್ಕಾಲಿಕ ಪರ್ಣಪಾತಿ ಅರಣ್ಯಗಳ ಮಧ್ಯ ಹರಡಿವೆ. ಇಲ್ಲಿ ನಿತ್ಯಹರಿದ್ವರ್ಣ ವೃಕ್ಷ ಮತ್ತು ಬೇಸಗೆಯಲ್ಲಿ ಎಲೆ ಉದುರಿಸುವ ವೃಕ್ಷಗಳ ಸಮ್ಮಿಶ್ರಣವನ್ನು ಕಾಣಬಹುದು. ಜಂಬೆಮರಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಆಸರೆಯ ಕಾಂಡಗಳುಳ್ಳ ಮರಗಳೂ ಇಲ್ಲಿ ಇವೆ. ಸಟ್ಟಗ, ಬೂರುಗ ಮುಂತಾದವು ಈ ಗುಂಪಿಗೆ ಸೇರುತ್ತವೆ. ಸಾಮಾನ್ಯವಾಗಿ ಮರಗಳ ತೊಗಟೆ ಸ್ವಲ್ಪ ದಪ್ಪವಾಗಿಯೂ ಗಡುಸಾಗಿಯೂ ಇರುವುದು. ಈ ಬಗೆಯ ಅರಣ್ಯವಿರುವ ಪ್ರದೇಶಗಳಲ್ಲಿ ೨೦೦೦-೨೫೦೦ಮಿಮೀ ಮಳೆಯಾಗುತ್ತದೆ. ಸಾಮಾನ್ಯವಾಗಿ ಈ ಕಾಡಿನಲ್ಲಿ ಹನಾಲು, ಕರಿಮರ, ನಂದಿ, ಹೊಳೆಗಾರ ಹೈಗ, ಬೆನ್ನಾಟೆ, ಸಂಪಿಗೆ, ದಾಲ್ಚಿನ್ನಿ, ಕಿರಾಳಭೋಗಿ, ಹೆಬ್ಬಲಸು, ಸಟ್ಟಗ, ರಂಗುಮಾಲೆ, ಗರಿಗೆ, ಹೆಬ್ಬಿದಿರು ಮೊದಲಾದವು ವಿಶೇಷವಾಗಿ ಬೆಳೆಯುವುವು.
ದಕ್ಷಿಣ ಭಾರತದ ತೇವ ಮಿಶ್ರಿತ ಪರ್ಣಪಾತಿ ಅರಣ್ಯಸಂಪಾದಿಸಿ
ಪಶ್ಚಿಮ ಕರಾವಳಿಯ ಪೂರ್ವಪಾಶರ್ವ್‌ದ ಉದ್ದಕ್ಕೂ ಈ ಬಗೆಯ ಅರಣ್ಯವನ್ನು ಕಾಣಬಹುದು. ಇಲ್ಲಿನ ಮಳೆಯ ಪರಿಮಾಣ ೧೫೦೦-೨೦೦೦ ಮಿಮೀ. ತೇಗ ಮತ್ತಿ, ನಂದಿ, ಹೊನ್ನೆ, ಹೇತ್ತೇಗ, ಬೀಟೆ, ಬಿಳಿಮತ್ತಿ, ತಾರೆ, ಜಂಬೆ, ಸಾಗಡೆ, ಕೌಲು, ಹಲಸು, ತಡಸಲು, ಬೂರುಗ, ನೆಲ್ಲಿ ಮುಂತಾದವು ಇಲ್ಲಿನ ಮುಖ್ಯ ಸಸ್ಯಜಾತಿಗಳು. ಜೊತೆಗೆ ನೀರಿನ ಆಸರೆಯಿರುವ ಕಡೆಗಳಲ್ಲೆಲ್ಲ ಹೆಬ್ಬಿದಿರು ಬಲು ಸಾಮಾನ್ಯವಾಗಿ ಕಂಡುಬರುತ್ತದೆ. ಕಿರಿಬಿದಿರಾದರೂ ಶುಷ್ಕ ಹವೆ ಪ್ರದೇಶಗಳಲ್ಲೆಲ್ಲಾ ಕಂಡುಬರುತ್ತದೆ. ಇಲ್ಲಿನ ಮರಗಳಿಗೆ ಒಣಹವೆಯನ್ನು ತಡೆದುಕೊಳ್ಳುವ ಶಕ್ತಿ ಇದೆ. ಈ ಕಾಡುಗಳ ಕೆಳಗಿನ ಶ್ರೇಣಿಯಲ್ಲಿ ಕೆಲವು ಸಣ್ಣ ನಿತ್ಯಹರಿದ್ವರ್ಣ ವೃಕ್ಷಗಳು ಕೂಡಾ ಕಂಡುಬರುತ್ತವೆ.
ದಕ್ಷಿಣಾರ್ಧದ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯಸಂಪಾದಿಸಿ
ವರ್ಷದಲ್ಲಿ ೮೫೦ ರಿಂದ ೧೫೦೦ಮಿಮೀ ಮಳೆ ಬೀಳುವ ಪ್ರದೇಶದಲ್ಲಿ ಈ ಬಗೆಯ ಅರಣ್ಯ ಕಂಡುಬರುತ್ತದೆ. ಕೆಲವು ಸಲ ಶೀಘ್ರವಾಗಿ ಆರುವ ಒಣಮಣ್ಣು ಇರುವ ಹಾಗೂ ೧೯೦೦ಮಿಮೀ ಮಳೆ ಬೀಳುವ ಪ್ರದೇಶದಲ್ಲೂ ಕಾಣಬಹುದು. ಯಾವ ಪ್ರದೇಶದಲ್ಲಿ ಮಳೆ ೭೫೦ಮಿಮೀಗಿಂತ ಕಡಿಮೆ ಬೀಳುತ್ತದೊ ಅಲ್ಲಿ ಕುರುಚಲು ಅರಣ್ಯಕ್ಕೆ ಎಡೆಮಾಡಿಕೊಡುತ್ತದೆ. ಈ ಅರಣ್ಯಗಳು ೪೫೦-೬೦೦ಮೀ ಎತ್ತರದಲ್ಲಿದ್ದು ಸಣ್ಣಪುಟ್ಟ ಗುಡ್ಡಗಳನ್ನು ಆಕ್ರಮಿಸಿಕೊಂಡಿವೆ. ಬಹುಶಃ ಮೈದಾನ ಪ್ರದೇಶವನ್ನೆಲ್ಲಾ ವ್ಯವಸಾಯಕ್ಕೆ ಉಪಯೋಗಿಸಿರುವುದು ಇದಕ್ಕೆ ಕಾರಣವಿರಬೇಕು.
ಪರಾಕಾಷ್ಠೆಯನ್ನು ತಲಪಿರುವ ಈ ಅರಣ್ಯಗಳಲ್ಲಿ ಮೇಲಿನ ಮರಶ್ರೇಣಿ ಇಕ್ಕಟ್ಟಾಗಿರುತ್ತದೆಯಾದರೂ ದಟ್ಟವಾಗಿರುವುದಿಲ್ಲ. ಇಲ್ಲಿ ಕಂಡುಬರುವ ಬಹುಪಾಲು ವೃಕ್ಷಗಳೆಲ್ಲವೂ ಬೇಸಿಗೆಯಲ್ಲಿ ಎಲೆಯುದುರುವಂಥವು. ಇವುಗಳ ಎತ್ತರ ೧೨-೨೦ಮೀ. ಮರಗಳ ಕೆಳಗೆ ಕಿರುಬಿದಿರುಗಳು, ಅನೇಕ ಜಾತಿಯ ಹುಲ್ಲುಗಳು, ಅಡರು ಬಳ್ಳಿಗಳು ಬೆಳೆದಿರುತ್ತವೆ. ಬೆತ್ತ ಮತ್ತು ತಾಳವೃಕ್ಷಗಳು ಈ ಅರಣ್ಯಗಳಲ್ಲಿ ಕಂಡುಬರುವುದಿಲ್ಲ.
ಈ ಅರಣ್ಯಗಳಲ್ಲಿ ಕೆಲವೆಡೆ ಸಾಗುವಾನಿ ಜಾತಿಯ ಮರಗಳು ಹಾಗೂ ದಿಂಡಿಲು ಮತ್ತು ಮತ್ತಿ ಜಾತಿಯ ಮರಗಳು ಬೆಳೆಯುತ್ತವೆ. ಸಾಗುವಾನಿ ಜಾತಿಯ ಮರಗಳು ಕಂಡುಬರದ ಪ್ರದೇಶಗಳಲ್ಲಿ ದಿಂಡಿಗ, ಮತ್ತಿ, ಬೆಂಡೆ, ನಂದಿ, ಹೆತ್ತೇಗ, ಕಣಗಲು, ಹಿಪ್ಪೆ, ಬೂರುಗ, ತಡಸಲು, ಹೊನ್ನೆ, ಗಂಧ, ಹುರುಗಲು, ತಾರೆ, ಕಮರ, ಕಗ್ಗಲು, ನೂನಲು, ಬಿಲ್ವಪತ್ರೆ, ಬೇಲ, ನೆಲ್ಲಿ, ಎಲಚಿ, ಬಿಕ್ಕೆ, ಬಾಗೆ, ಬಂದರಿಕೆ, ಲಂಟಾನ, ಎಡಮುರಿ, ಮುತ್ತುಗ, ಜಗಳಗಂಟಿ, ಸಾಗಡೆ, ಕೂಳಿ, ದೊಡ್ಡ ತೊಪ್ಪೆ ಹಾಗೂ ಅನೇಕ ಜಾತಿಯ ಮುಳ್ಳಿನ ಗಿಡಗಳು ಕಂಡುಬರುತ್ತವೆ. ತೇವಮಿಶ್ರಿತ ಪರ್ಣಪಾತಿ ಅರಣ್ಯ ಹಾಗೂ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯಗಳು ತಾತ್ಕಾಲಿಕವಾಗಿ ಎಲೆ ಉದುರುವ ಅರಣ್ಯಗಳು. ಈ ಅರಣ್ಯಗಳಲ್ಲಿ ವನ್ಯಮೃಗದ ಸಂಪತ್ತು ಹೇರಳವಾಗಿದೆ. ಇವುಗಳಲ್ಲಿ ಪ್ರಮುಖವಾದ ಪ್ರಾಣಿಗಳು ಆನೆ, ಹುಲಿ, ಕಾಡುಕೋಣ, ಚಿರತೆ, ಕಡವೆ, ಚುಕ್ಕಿ ಚಿಗರೆ, ಕಾಡುಹಂದಿ, ಕರಡಿ, ಸೀಳುನಾಯಿ ಮುಂತಾದವು. ವರ್ಣರಂಜಿತ ಪಕ್ಷಿಗಳಾದ ನವಿಲು, ಕಾಡುಕೋಳಿ, ಕೆಂಬೂತ ಇವು ಮುಖ್ಯವಾದ ಪಕ್ಷಿಗಳು.
ದಕ್ಷಿಣಾರ್ಧದ ಉಷ್ಣವಲಯದ ಕುರುಚಲು ಅರಣ್ಯಸಂಪಾದಿಸಿ
ಇವುಗಳಲ್ಲಿ ಮರಗಿಡಗಳ ಎಲೆಗಳು ಸಾಮಾನ್ಯವಾಗಿ ಬೇಸಗೆಯಲ್ಲಿ ಉದುರುತ್ತವೆ. ಇಲ್ಲಿನ ಮಳೆಯ ಪ್ರಮಾಣ ಸು.೨೫೦-೧೦೦೦ಮಿಮೀ. ಈ ಅರಣ್ಯಗಳಲ್ಲಿ ಮುಳ್ಳಿನ ಗಿಡಗಳ ಪ್ರಮಾಣ ಹೆಚ್ಚು. ಈ ಗುಂಪಿನ ಕಾಡುಗಳು ದೇಶದ ಆದಾಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಲ್ಲ. ಪ್ರಕೃತಿಯ ವಿಕೋಪಕ್ಕಿಂತ ಹೆಚ್ಚಾಗಿ ಮಾನವ ಚಟುವಟಿಕೆಯಿಂದಾಗಿ ಈ ಬಗೆಯ ಕಾಡು ನಶಿಸಿ ಹೋಗುತ್ತಿದೆ. ಈ ಅರಣ್ಯಗಳಲ್ಲಿ ದಿಂಡಿಗ, ಗೊಬ್ಬಳಿ, ಬಿಳಿಜಾಲಿ, ಕತ್ತಾಳೆ, ಬನ್ನಿ, ಬಬ್ಬಿಲಿ, ಬಿಲ್ವಾರ, ಬಾಗೆ, ಮತ್ತಿ, ತಾರೆ, ಅಳಲೆ, ಬಿಲ್ವಪತ್ರ, ಬೇಲ, ಸಾಂಬ್ರಾಣಿ, ನವಿಲಾಡಿ, ಗಂಧ, ಹುರುಗಲು, ಬೇವು, ಕಗ್ಗಲಿ, ದೇವದಾರು, ಹಂಗರು ಮುಂತಾದ ಗಿಡಮರಗಳನ್ನು ಕಾಣಬಹುದು. ಜೊತೆಗೆ ಎಲಚಿ, ಸೀತಾಫಲ, ಈಚಲು, ಎಕ್ಕ, ಕಾರೆಗಿಡ, ಪಾಪಾಸುಕಳ್ಳಿ, ಚಂಡರಿಕೆ, ಲಂಟಾನ ಮುಂತಾದವುಗಳೂ ಕಂಡುಬರುತ್ತವೆ.
ಕರ್ನಾಟಕದಲ್ಲಿ ಈ ಎಲ್ಲ ಐದು ಬಗೆಯ ಅರಣ್ಯಗಳಿದ್ದರೂ ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಮೊದಲ ಮೂರು ವಿಧದ ಅರಣ್ಯಗಳ ಕೊಡುಗೆ ಮಹತ್ವದ್ದು. ಈ ಬಗೆಯ ಅರಣ್ಯಗಳಲ್ಲಿ ಬೆಲೆಬಾಳುವ ಮರಗಳು ಹೆಚ್ಚು. ಅವು ಸಮೃದ್ಧವಾಗಿಯೂ ಬೆಳೆಯುತ್ತವೆ. ಆದರೆ ಈ ಬಗೆಯ ಅರಣ್ಯಗಳ ಪ್ರಮಾಣ ಕುರುಚಲು ಅರಣ್ಯಗಳಿಗಿಂತ ಕಡಿಮೆ ಇದೆ ಎಂಬುದು ಗಮನಿಸಬೇಕಾದ ಅಂಶ. ಕರ್ನಾಟಕದಲ್ಲಿರುವ ವಿವಿಧ ಬಗೆಯ ಅರಣ್ಯಗಳು, ಅವುಗಳ ಸೇಕಡಾವಾರು ಪ್ರಮಾಣ, ವಿಸ್ತೀರ್ಣ ಮುಂತಾದ ಅಂಕಿ ಸಂಖ್ಯೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಅರಣ್ಯ -ವಿಧ
ವಿಸ್ತೀರ್ಣ-ಒಟ್ಟು
ಅರಣ್ಯದ (೧೦೦೦ ಹೆಕ್ಟೇರುಗಳಲ್ಲಿ)

! ಶೇಕಡಾವಾರು
೧. ದಕ್ಷಿಣಾರ್ಧದ ಉಷ್ಣವಲಯದ
ತೇವಪೂರಿತ
ನಿತ್ಯಹರಿದ್ವರ್ಣದ ಅರಣ್ಯ
 ೫೮೦ ೧೫.೧೧
೨. ದಕ್ಷಿಣಾರ್ಧದ ಉಷ್ಣವಲಯದ
ಆಂಶಿಕ ನಿತ್ಯಹರಿದ್ವರ್ಣದ ಅರಣ್ಯ
 ೫೭೮ ೧೪.೯೬
೩. ದಕ್ಷಿಣ ಭಾರತದ
ತೇವಮಿಶ್ರಿತ ಪರ್ಣಪಾತಿ ಅರಣ್ಯ
 ೭೨೭ ೧೮.೬೪
೪. ದಕ್ಷಿಣಾರ್ಧದ ಉಷ್ಣವಲಯದ
ಒಣ ಪರ್ಣಪಾತಿ ಅರಣ್ಯ
 ೮೧೮ ೨೧.೧೧
೫. ದಕ್ಷಿಣಾರ್ಧದ ಉಷ್ಣವಲಯದ
ಕುರುಚಲು ಅರಣ್ಯ
 ೧೧೬೧ ೩೦.೧೮
ಒಟ್ಟು
೩೮೬೪
೧೦೦.೦೦

ಅರಣ್ಯ ಇಲಾಖೆಯ ಆಡಳಿತಸಂಪಾದಿಸಿ
ಭಾರತದ ಸಂವಿಧಾನದ ವಿಧಿಗನುಗುಣವಾಗಿ ಅರಣ್ಯ ಇಲಾಖೆಯ ಆಡಳಿತ ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಅರಣ್ಯ ಇಲಾಖೆಯ ಆಡಳಿತದ ಉನ್ನತ ಹುದ್ದೆಗಳಿಗೆ ಆಯ್ಕೆ, ಅರಣ್ಯ ವಿದ್ಯಾಭ್ಯಾಸ ಹಾಗೂ ವೈಜ್ಞಾನಿಕ ಸಂಶೋಧನೆಗಳ ಮೇಲ್ವಿಚಾರಣೆ ಭಾರತ ಸರ್ಕಾರಕ್ಕೆ ಸೇರಿದೆ. ಅರಣ್ಯ ಹುಟ್ಟುವಳಿಗಳ ರಫ್ತು ಆಮದುಗಳು ಕೂಡಾ ಕೇಂದ್ರ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತವೆ. ಕರ್ನಾಟಕದ ಅರಣ್ಯ ಇಲಾಖೆಯ ಎಲ್ಲಾ ಕಾರ್ಯ ಚಟುವಟಿಕೆಗಳೂ ಅರಣ್ಯಖಾತೆ ಮಂತ್ರಿಗಳ ನೇತೃತ್ವದಲ್ಲಿ ಅರಣ್ಯ ಕಾರ್ಯದರ್ಶಿಗಳ ಮುಖಾಂತರ ಸಾಗುತ್ತವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಸೇರಿದೆ. ಇವರ ಅಧೀನದಲ್ಲಿ ಅರಣ್ಯ ವಿಭಾಗ, ವನ್ಯಜೀವಿ ವಿಭಾಗ ಹಾಗೂ ಅರಣ್ಯ ಕಾರ್ಪೊರೇಶನ್ ಎಂಬ ಮೂರು ಮುಖ್ಯ ಘಟಕಗಳಿವೆ. ಮುಖ್ಯ ಸಂರಕ್ಷಣಾಧಿಕಾರಿಗಳು ಈ ಘಟಕಗಳ ಮುಖ್ಯಸ್ಥರು. ಇವರ ಅಧೀನದಲ್ಲಿ ವೃತ್ತ ಸಂರಕ್ಷಣಾಧಿಕಾರಿಗಳು, ವಿಭಾಗ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ವನಾಧಿಕಾರಿಗಳು, ಅರಣ್ಯ ರಕ್ಷಕರು ಮುಂತಾದವರಿರುತ್ತಾರೆ. ಕರ್ನಾಟಕದಲ್ಲಿ ಒಟ್ಟು ೧೪ ವೃತ್ತಗಳು, ೫೮ ವಿಭಾಗಗಳು, ೧೯೮ ವಲಯಗಳೂ ಇವೆ. ಇದರೊಂದಿಗೆ ಅಭಿವೃದ್ಧಿ ಮುಖ್ಯ ಸಂರಕ್ಷಣಾಧಿಕಾರಿ, ಅರಣ್ಯ ಕೈಗಾರಿಕೆಗಳ ಮುಖ್ಯ ಅಧಿಕಾರಿ, ಮುಖ್ಯ ವನ್ಯಪ್ರಾಣಿ ಸಂರಕ್ಷಣಾಧಿಕಾರಿ ಮುಂತಾದ ಹುದ್ದೆಗಳಿವೆ. ಬೆಂಗಳೂರಿನಲ್ಲಿ ಒಂದು ಅರಣ್ಯ ವೈಜ್ಞಾನಿಕ ಸಂಶೋಧನ ಕೇಂದ್ರವೂ ಇದೆ. ಅರಣ್ಯ ಉಸ್ತುವಾರಿಗಾಗಿ ಗ್ರಾಮ ಅರಣ್ಯ ಸಮಿತಿಗಳನ್ನು ಅನೇಕ ಕಡೆ ಅಸ್ತಿತ್ವಕ್ಕೆ ತರಲಾಗಿದೆ.
ಅರಣ್ಯ ರಕ್ಷಕರಿಗೆ ತರಬೇತಿ ನೀಡಲು ಕುಶಾಲನಗರ, ಯಲ್ಲಾಪುರ, ಹನುಮನಹಟ್ಟಿ ಮತ್ತು ಬೀದರಗಳಲ್ಲಿ ತರಬೇತಿ ಶಾಲೆಗಳಿವೆ. ವನಾಧಿಕಾರಿಗಳು ಮತ್ತು ಮೋಜಣಿದಾರರ (ಸರ್ವೇಯರ್) ತರಬೇತಿಗೆಂದು ಅಂಬಿಕಾನಗರದ ಸಮೀಪ ತರಬೇತಿಶಾಲೆ ಇದೆ. ವಲಯಾಧಿಕಾರಿಗಳಿಗೆ ತರಬೇತಿ ನೀಡಲು ಕೊಯಮತ್ತೂರಿನಲ್ಲಿಯೂ ಭಾರತೀಯ ಅರಣ್ಯ ಸೇವಾ ಅಧಿಕಾರಿಗಳಿಗೆ ತರಬೇತಿ ನೀಡಲು ಡೆಹರಾಡೂನಿನಲ್ಲಿಯೂ ಅರಣ್ಯ ಕಾಲೇಜುಗಳಿವೆ. ಅರಣ್ಯಗಳ ಬಗ್ಗೆ ಹೆಚ್ಚಿನ ವ್ಯಾಸಂಗ, ಮಾಹಿತಿ ಪಡೆಯಲು, ಮೇಲ್ದರ್ಜೆಯ ಅಧಿಕಾರಿಗಳಿಗೆ ವಿದೇಶಗಳಿಗೆ ಭೇಟಿ ನೀಡುವ ಅವಕಾಶಗಳೂ ಇವೆ. ಕರ್ನಾಟಕದಲ್ಲಿ ಅತ್ಯಂತ ಸಂಪದ್ಭರಿತ ಅರಣ್ಯಗಳಿದ್ದರೂ ಅನೇಕ ಕಾರಣಗಳಿಂದಾಗಿ ಅರಣ್ಯಪ್ರದೇಶ ದಿನೇ ದಿನೇ ಕ್ಷಿಣಿಸುತ್ತಿದೆ. ಅರಣ್ಯಪ್ರದೇಶವನ್ನು ವ್ಯವಸಾಯೋದ್ದೇಶಕ್ಕಾಗಿ ಬಳಸುತ್ತಿರುವುದು, ನೀರಾವರಿ ಮತ್ತು ವಿದ್ಯುಚ್ಫಕ್ತಿ ಉದ್ದೇಶಗಳಿಗಾಗಿ ಜಲಾಶಯಗಳನ್ನು ನಿರ್ಮಿಸುತ್ತಿರುವುದು, ನಿರ್ವಸಿತರಿಗೆ ಮರುವಸತಿ ಕಲ್ಪಿಸಲು ಕಾಡುಗಳನ್ನು ಕಡಿಯುವುದು ಅತಿಯಾಗಿ ಮೇಯಿಸುವುದು, ಕಾಡ್ಗಿಚ್ಚು, ಅತಿಕ್ರಮಣ ಚಟುವಟಿಕೆ- ಇವು ಅರಣ್ಯನಾಶಕ್ಕೆ ಮುಖ್ಯ ಕಾರಣಗಳು. ಕಳೆದ ಕೆಲವು ವರ್ಷಗಳಿಂದ ಅರಣ್ಯಾಭಿವೃದ್ಧಿಗೆ, ವನ್ಯಪ್ರಾಣಿ ಸಂರಕ್ಷಣೆಗೆ ಸಾಕಷ್ಟು ಗಮನ ಹರಿಸಲಾಗಿದೆ. ಅರಣ್ಯದ ಇಳುವರಿಯನ್ನು ಹೆಚ್ಚಿಸುವುದು, ಭೂ ಸವಕಳಿಯನ್ನು ತಪ್ಪಿಸುವುದು, ನಾಶಗೊಂಡ ಅರಣ್ಯಗಳಲ್ಲಿ ಪುನಃ ಮರಗಳನ್ನು ಬೆಳೆಸುವುದು, ಸಣ್ಣ ಪ್ರಮಾಣದ ಅರಣ್ಯೋತ್ಪನ್ನಗಳ ಅಭಿವೃದ್ಧಿ, ಅರಣ್ಯ ಸಂಪರ್ಕ ಮಾರ್ಗಗಳ ಅಭಿವೃದ್ಧಿ, ಮೃದು ಮರಗಳನ್ನು, ಬೆಂಕಿಕಡ್ಡಿ ಮರಗಳನ್ನು ಬೆಳೆಸುವುದು, ಪರರಾಷ್ಟ್ರಗಳಿಂದ ಬಂದ ಭಾರತೀಯ ನಿರಾಶ್ರಿತರ ಪುನರ್ ವಸತಿಗಾಗಿ ರಬ್ಬರ್ ತೋಟ ಬೆಳೆಸುವುದು, ಸೌದೆಗಾಗಿ ಮರಗಳನ್ನು ವೃದ್ಧಿಸುವುದು, ಕೋಕೋ ಗಿಡಗಳನ್ನು ಬೆಳೆಸುವುದು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಈಗ ಪ್ರತ್ಯೇಕವಾದ ಸಾಮಾಜಿಕ ಅರಣ್ಯ ವಿಭಾಗವನ್ನೇ ಪ್ರಾರಂಭಿಸಲಾಗಿದೆ. ಕರ್ನಾಟಕ ಅರಣ್ಯ ಕೈಗಾರಿಕಾ ಮಂಡಳಿಯನ್ನು ಕೂಡಾ ಸ್ಥಾಪಿಸಲಾಗಿದೆ. ಅರಣ್ಯ ರಕ್ಷಣೆಗಾಗಿ ಬಂದೋಬಸ್ತ್‌ ನೋಡಿಕೊಳ್ಳಲು ಮತ್ತು ಅರಣ್ಯ ಉತ್ಪನ್ನಗಳನ್ನು ಸಾಗಿಸಲು ಅರಣ್ಯ ಇಲಾಖೆ ಅರಣ್ಯ ಪ್ರದೇಶದಲ್ಲಿ ೨೯೩೮ಕಿಮೀ ರಸ್ತೆ ನಿರ್ಮಾಣ ಮಾಡಿದೆ (೧೯೯೫).
ಅರಣ್ಯ ಉದ್ಯಮಗಳುಸಂಪಾದಿಸಿ
ಕರ್ನಾಟಕದ ಅರಣ್ಯ ಪ್ರದೇಶ ವಿವಿಧ ಸಸ್ಯವರ್ಗಗಳ ತವರೂರು. ಶ್ರೀಗಂಧ, ಹೊನ್ನೆ, ನಂದಿ, ಮತ್ತಿ, ಹನಾಲು, ಕರಡಿ, ಸಾಗುವಾನಿ, ಬೀಟೆ, ಹೆತ್ತೇಗ, ತಡಸಲು, ಭೋಗಿ, ನೊಗ, ಬೂರುಗ, ಮಾಕಾಳಿ, ದೊಡ್ಡತೊಪ್ಪೆ, ಸಟ್ಟುಗ, ಬಿಲ್ವಾರ, ಗೊದ್ದ, ತಾರೆ, ದಿಂಡಿಗ, ಬೆಂಡೆ, ಜಂಬೆ, ನೇರಳೆ, ಬಲ್ಲಿ, ಹಲಸು, ಹೆಬ್ಬಲಸು, ಗುಳಮಾವು, ನಾಗ ಸಂಪಿಗೆ, ಕಿರಾಳ ಭೋಗಿ, ಬಿಳಿದೇವದಾರು, ಬೆನ್ನಾಟೆ, ಬಲಂಜಿ, ಹೊಳೆಗಾರ, ನೀಲಿ ಸಂಪಿಗೆ, ಹಾಲುಮಡ್ಡಿ, ಮದ್ದಾಲೆ, ಚುಂಗ, ಧೂಮ, ಸಾಲ್ಧೂಪ, ಕಾಯಿಧೂಪ, ಸುರಹೊನ್ನೆ, ಪಾಲಿ, ಕೊಟ್ಟಿ, ಮಾವು ಮುಂತಾದ ಪ್ರಮುಖ ವೃಕ್ಷಗಳು ಬೆಳೆಯುತ್ತವೆ. ಜೊತೆಗೆ ಬಿದಿರು, ವಾಟೆ ಮತ್ತು ಬೆತ್ತ ಅರಣ್ಯದಲ್ಲಿ ವಿಪುಲವಾಗಿವೆ. ಅರಣ್ಯ ವೈವಿಧ್ಯಮಯ ವಾಗಿರುವಂತೆ ಕರ್ನಾಟಕದ ಅರಣ್ಯ ಉದ್ಯಮಗಳೂ ವೈವಿಧ್ಯಪೂರ್ಣವಾಗಿವೆ.
ಅನಾದಿಕಾಲದಿಂದಲೂ ಮಾನವನ ಜೀವನ ಅರಣ್ಯದೊಡನೆ ಬೆರೆತುಹೋಗಿದೆ. ಆದಿಮಾನವ ದಿನಬಳಕೆಯ ಆಹಾರವಸ್ತುಗಳಾದ ಗಿಡಮೂಲಿಕೆ, ಹಣ್ಣು ಹಂಪಲು, ಮೊಟ್ಟೆ, ಮಾಂಸಗಳನ್ನು, ಮನೆಕಟ್ಟಲು ಬಳಸುವ ಸಾಮಗ್ರಿಯನ್ನೂ ಮೈ ಮುಚ್ಚುವ ಉಡುಪನ್ನೂ ಬೆಂಕಿಯನ್ನೂ ಆಯುಧ ಉಪಕರಣಗಳನ್ನೂ ಅರಣ್ಯದಿಂದಲೇ ಪಡೆಯುತ್ತಿದ್ದ. ಒಂದು ದೇಶದಲ್ಲಿ ಸೌದೆ ಮತ್ತು ಕೈಗಾರಿಕೆಗೆ ಉಪಯೋಗಿಸುತ್ತಿರುವ ಅರಣ್ಯ ಉತ್ಪನ್ನಗಳ ಬಳಕೆಯ ಮೇಲೆ ಅಲ್ಲಿನ ಕೈಗಾರಿಕಾ ಪ್ರಗತಿಯನ್ನು ನಿರ್ಧರಿಸಲಾಗುತ್ತದೆ. ಕೈಗಾರಿಕಾ ಪ್ರಗತಿಯುಳ್ಳ ದೇಶದಲ್ಲಿ ಅರಣ್ಯದ ಕಚ್ಚಾವಸ್ತುಗಳು ಕೈಗಾರಿಕೆಗಳಿಗೆ ಬಳಕೆಯಾಗುತ್ತವೆ. ಅಲ್ಪಭಾಗ ಮಾತ್ರ ಸೌದೆಗೆ ಉಪಯೋಗವಾಗುತ್ತದೆ. ಆದರೆ ನಮ್ಮಲ್ಲಿ ಕಾಡಿನ ಮರಗಳನ್ನು ಸೌದೆಗೆ ಹೆಚ್ಚು ಬಳಸುವುದು ಕಂಡುಬರುತ್ತಿದೆ ಗ್ರಾಮೀಣ ವಸತಿ ಇದಕ್ಕೆ ಮುಖ್ಯ ಕಾರಣ. ಈ ಮುಂದೆ ತಿಳಿಸಿರುವಂತೆ ಸಸ್ಯಗಳನ್ನು ವಿಶ್ವವ್ಯಾಪ್ತಿಯುಳ್ಳ ಕಚ್ಚಾವಸ್ತುಗಳನ್ನಾಗಿ ಪರಿಗಣಿಸಬಹುದು. ಏಕೆಂದರೆ ಅವನ್ನು ಮಣ್ಣು, ಲೋಹ, ಗಾಜು, ನೇಯ್ದ ವಸ್ತುಗಳ ಬದಲಾಗಿ ಬಳಸಬಹುದು.
ಕರ್ನಾಟಕದಲ್ಲಿ ವ್ಯವಸಾಯವೇ ಪ್ರಧಾನವಾದ ಕಸಬು. ವ್ಯವಸಾಯಕ್ಕೆ ಅರಣ್ಯದ ಅಗತ್ಯ ಬಹಳ ಇದೆ. ಹೆಚ್ಚು ಯಾಂತ್ರಿಕತೆ ಇಲ್ಲದ ಬೇಸಾಯಕ್ಕೆ ಅಗತ್ಯವಾದ ನೇಗಿಲು, ಕೊರಡು, ಕುಂಟೆ, ರೆಂಟೆ ಮುಂತಾದ ಉಪಕರಣಗಳನ್ನು ತಯಾರಿಸಲು ಮರದ ಅಗತ್ಯವಿದೆ. ಎಲೆಗೊಬ್ಬರವಂತೂ ವ್ಯವಸಾಯಕ್ಕೆ ಪೌಷ್ಟಿಕವೆಂದು ಪರಿಗಣಿಸಲಾಗುತ್ತದೆ. ಹಸುರೆಲೆಗಳನ್ನು ಬಳಸಿ ಕಾಂಪೋಸ್ಟ್‌ ಗೊಬ್ಬರವನ್ನೂ ತಯಾರಿಸಲಾಗುತ್ತದೆ. ದನದ ಮೇವು, ಮರದ ಸಕ್ಕರೆ, ಮಾದಕ ಪಾನೀಯ, ಶ್ರೀಗಂಧ, ನೀಲಗಿರಿ, ನಿಂಬೆಹುಲ್ಲಿನ ಎಣ್ಣೆ, ರೆಯಾನ್, ಪಾಲಿಫೈಬರ್, ಸೌದೆ, ಇದ್ದಿಲು, ಬೆಂಕಿಕಡ್ಡಿ, ವಿದ್ಯುಚ್ಫಕ್ತಿ, ಮನೆಗೆ ಮರಮುಟ್ಟು, ಪೀಠೋಪಕರಣ, ಪ್ಲೈವುಡ್ ಮತ್ತು ವಿನೀರ್, ಸ್ಲೀಪರ್ಗಳು, ರೈಲ್ವೆಬೋಗಿ, ರೈಲು ಹಾಗೂ ಬಸ್ಸಿನ ಚೌಕಟ್ಟು, ದೋಣಿ, ಹಡಗು ಮಾಡಲು, ಟೀ ಪೆಟ್ಟಿಗೆಗಳು, ಸಾಮಾನು ಸಾಗಣೆ ಪೆಟ್ಟಿಗೆಗಳು, ಕಾಗದ, ಪೆನ್ಸಿಲ್, ಚಿತ್ರೋದ್ಯಮದ ಕಾಗದ, ಪಾರದರ್ಶಕ ಅಂಟು ಮುಂತಾದವುಗಳಿಗೆಲ್ಲ ಅರಣ್ಯಗಳ ಕೊಡುಗೆ ಆಪಾರವಾದುದು. ಕಳೆದ ಎರಡು ಶತಮಾನಗಳಿಂದ ಕರ್ನಾಟಕದಲ್ಲಿ ಅರಣ್ಯ ಆಧಾರಿತವಾದ ಹಲವಾರು ಉದ್ಯಮಗಳು ಸ್ಥಾಪಿತವಾಗಿವೆ.
ಶ್ರೀಗಂಧದ ಉದ್ಯಮಸಂಪಾದಿಸಿ
ಶ್ರೀಗಂಧದ ಮರ ಕರ್ನಾಟಕಕ್ಕೆ ಪ್ರಕೃತಿದತ್ತ ವರ. ರಾಷ್ಟ್ರದ ಒಟ್ಟು ಉತ್ಪತ್ತಿಯ ಶೇ. ೮೦ ಭಾಗ ಕರ್ನಾಟಕದಲ್ಲಿಯೇ ದೊರೆಯುತ್ತದೆ. ಹೀಗಾಗಿ ಶ್ರೀಗಂಧದ ಬೀಡು ಎನ್ನುವ ಮಾತಿದೆ. ಶ್ರೀಗಂಧದ ತೈಲ ಅತಿ ಪರಿಮಳಯುಕ್ತ ಸುಗಂಧ ದ್ರವ್ಯಗಳಲ್ಲಿ ಒಂದು. ಇದು ಪ್ರಾಚೀನ ಕಾಲದಿಂದ ಇಂದಿನವರೆಗೂ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಮಧ್ಯಯುಗದಲ್ಲಿ ವರ್ತಕರು ಈ ಸುಗಂಧವನ್ನು ಪರ್ಷಿಯ, ಅರೇಬಿಯ, ಏಷ್ಯಮೈನರ್, ಈಜಿಪ್ಟ್‌, ಗ್ರೀಸ್ ಮತ್ತು ರೋಮ್ಗಳಿಗೆ ಸಾಗಿಸುತ್ತಿದ್ದುದರ ಬಗ್ಗೆ ಉಲ್ಲೇಖವಿದೆ.
ಕರ್ನಾಟಕದ ಶ್ರೀಗಂಧ ಸ್ಯಾಂಟಲಮ್ ಆಲ್ಬಮ್ ಪ್ರಭೇದಕ್ಕೆ ಸೇರುತ್ತದೆ. ಇದರಿಂದ ಗಂಧದೆಣ್ಣೆಯನ್ನು ತೆಗೆಯುತ್ತಾರೆ. ಆಸ್ಟ್ರೇಲಿಯದಲ್ಲಿ ಬೆಳೆಯುವ ಗಂಧದಮರ ಸ್ಯಾಂಟಲಮ್ ಸ್ಟೈಕೇಟಮ್ದಿಂದ ತೆಗೆಯುವ ತೈಲದೊಡನೆ ತೀವ್ರ ಪೈಪೋಟಿ ಇದೆಯಾದರೂ ಅದು ಕರ್ನಾಟಕದ ಎಣ್ಣೆಯಷ್ಟು ಉತ್ತಮ ದರ್ಜೆಯದಲ್ಲ. ಆದರೂ ಸುಧಾರಿತ ಭಟ್ಟಿ ಇಳಿಸುವ ವಿಧಾನ, ಸಂಯೋಜಿಸುವ ಮತ್ತು ಮಿಶ್ರಣಮಾಡುವ ವಿಧಾನ, ಉತ್ತಮ ದರ್ಜೆಯ ನಿರ್ವಹಣೆ ಮುಂತಾದವುಗಳಿಂದಾಗಿ ಆಸ್ಟ್ರೇಲಿಯದ ಗಂಧದೆಣ್ಣೆ ಕರ್ನಾಟಕದ ತೈಲದೊಡನೆ ಪೈಪೋಟಿ ನೆಡಸಲು ಸಾಧ್ಯವಾಗಿದೆ. ಇಂಡೋನೇಷ್ಯದಲ್ಲಿ ತಯಾರಿಸುವ ಗಂಧದೆಣ್ಣೆಯೂ ಸ್ವಲ್ಪಮಟ್ಟಿಗೆ ನಮ್ಮ ಶ್ರೀಗಂಧದೆಣ್ಣೆಯೊಂದಿಗೆ ಸ್ಪರ್ಧಿಸುತ್ತಿದೆ.
೧೯೧೨ರ ವರೆಗೂ ಕರ್ನಾಟಕದಿಂದ ಶ್ರೀಗಂಧದ ಚಕ್ಕೆ ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಜರ್ಮನಿಗೆ ರಫ್ತಾಗುತ್ತಿತ್ತು. ಅಲ್ಲಿ ಚಕ್ಕೆಯಿಂದ ತೈಲವನ್ನು ತೆಗೆದು ವಿವಿಧ ದೇಶಗಳಿಗೆ ಮಾರುತ್ತಿದ್ದರು. ಒಂದನೆಯ ಮಹಾಯುದ್ಧದ ಪ್ರಯುಕ್ತ ಇದರ ಮಾರಾಟ ನಿಂತುಹೋಯಿತು. ಆಗ ಮೈಸೂರಿನ ದಿವಾನರಾಗಿದ್ದ ಎಂ. ವಿಶ್ವೇಶ್ವರಯ್ಯನವರು ಮರದಿಂದ ಗಂಧದ ಎಣ್ಣೆಯನ್ನು ಹೊರತೆಗೆಯುವ ಯೋಜನೆಯನ್ನು ರೂಪಿಸಿ ೧೯೧೬ರಲ್ಲಿ ಬೆಂಗಳೂರಿನಲ್ಲಿ ಗಂಧದ ಎಣ್ಣೆಯ ಕಾರ್ಖಾನೆಯನ್ನು ಸ್ಥಾಪಿಸಿದರು. ೧೯೧೭ರಲ್ಲಿ ಈ ಕಾರ್ಖಾನೆಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಮಲೆನಾಡು ಪ್ರದೇಶದಲ್ಲಿ ಮರದಿಂದ ಗಂಧವನ್ನು ಕೆತ್ತಿ ಸಾಗಿಸಿದ ಮೇಲೆ ಉಳಿದ ಚಿಲ್ವಾ ಗಂಧದ ಚಕ್ಕೆಯನ್ನು ವಿಕ್ರಯಿಸುವುದು ಸಮಸ್ಯೆಯಾಯಿತಾದ್ದರಿಂದ ಅದನ್ನು ಉಪಯೋಗಿಸಲು ಶಿವಮೊಗ್ಗದಲ್ಲಿ ಒಂದು ಪರಿವರ್ತನ ಕಾರ್ಖಾನೆಯನ್ನು ಪ್ರಾರಂಭಿಸಲಾಯಿತು. ಇದು ೧೯೬೩ರಲ್ಲಿ ಪೂರ್ಣ ಗಂಧದ ಎಣ್ಣೆ ಕಾರ್ಖಾನೆಯಾಗಿ ಪರಿವರ್ತಿತವಾಯಿತು. ವರ್ಷಂಪ್ರತಿ ೨೦೦೦ ಟನ್ ಶ್ರೀಗಂಧದ ಮರವನ್ನು ಇವೆರಡು ಕಾರ್ಖಾನೆಗಳು ಉಪಯೋಗಿಸುತ್ತಿವೆ.
ಗಂಧದ ಎಣ್ಣೆಗೆ ಯುರೋಪ್, ಅಮೆರಿಕ ಮತ್ತು ಅರಬ್ ದೇಶಗಳಿಂದ ಹೆಚ್ಚು ಬೇಡಿಕೆ ಉಂಟು. ಗಂಧದ ಎಣ್ಣೆಯನ್ನು ಸುಗಂಧ ದ್ರವ್ಯಗಳ ಹಾಗೂ ಮೈ ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗಂಧದ ಪರಿಮಳ ಮನಮೆಚ್ಚುವಂಥದು. ಜೊತೆಗೆ ಗಂಧದಿಂದ ಎಣ್ಣೆಯನ್ನು ತೆಗೆದ ಮೇಲೆ ಬರುವ ಗಂಧದ ಪುಡಿಯಿಂದ ಊದಿನ ಕಡ್ಡಿಯನ್ನು ತಯಾರುಮಾಡುತ್ತಾರೆ. ಈಗ ೮೦ ದೇಶಗಳಿಗೆ ಊದಿನಕಡ್ಡಿ ನಿರ್ಯಾತವಾಗುತ್ತಿದ್ದು ಇದರಿಂದ ಪ್ರತಿವರ್ಷ ಸು. ೧೦೦ ಕೋಟಿಗಿಂತಲೂ ಹೆಚ್ಚು ವಿದೇಶೀ ವಿನಿಮಯ ಬರುತ್ತಿದೆ. ಗಂಧದ ಮರವನ್ನು ಕೆತ್ತನೆ ಕೆಲಸಕ್ಕೂ ಉಪಯೋಗಿಸುತ್ತಾರೆ. ಮೈಸೂರು, ಬೆಂಗಳೂರು, ಸಾಗರ, ಸೊರಬ, ಕುಮಟ, ಕಾರವಾರಗಳಲ್ಲಿ ಗಂಧದ ಮರದಿಂದ ಕೆತ್ತನೆ ಕೆಲಸ ಮಾಡುವ ಗುಡಿಗಾರಿಕೆಯ ಕುಶಲ ಕೆಲಸಗಾರರರಿದ್ದಾರೆ. ಗಂಧದ ಮರಗಳನ್ನು ಕದ್ದು ಕಡಿದು ಸಾಗಿಸುವ ದಂಧೆಯಿಂದಾಗಿ ಅವುಗಳ ರಕ್ಷಣೆ ದೊಡ್ಡ ಸಮಸ್ಯೆಯಾಗಿದ್ದು ಅವುಗಳ ಲಭ್ಯತೆ ಕ್ಷೀಣಿಸಿದೆ.
ಕಾಗದದ ಕಾರ್ಖಾನೆಗಳುಸಂಪಾದಿಸಿ
ಬೊಂಬಿನಿಂದ ಕಾಗದವನ್ನು ತಯಾರುಮಾಡುವ ಕಾರ್ಖಾನೆಗಳಾದ ಭದ್ರಾವತಿಯ ಮೈಸೂರು ಕಾಗದದ ಕಾರ್ಖಾನೆ, ದಾಂಡೇಲಿಯ ಪಶ್ಚಿಮ ಕರಾವಳಿಯ ಕಾಗದದ ಕಾರ್ಖಾನೆ (ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್) ಇವು ಮುಖ್ಯವಾದವು. ಮೈಸೂರು ಕಾಗದದ ಕಾರ್ಖಾನೆ ವರ್ಷಂಪ್ರತಿ ಸು. ೩೦,೦೦೦ ಟನ್ ಕಾಗದವನ್ನು ತಯಾರಿಸುತ್ತಿತ್ತು. ದಾಂಡೇಲಿಯಲ್ಲಿರುವ ಪಶ್ಚಿಮ ಕರಾವಳಿಯ ಕಾಗದ ಕಾರ್ಖಾನೆ ೧೯೫೮ರಲ್ಲಿ ಕಾರ್ಯಾರಂಭ ಮಾಡಿತು. ಈ ಕಾರ್ಖಾನೆ ಪ್ರತಿವರ್ಷ ಸು. ೪೫,೦೦೦ ಟನ್ ಕಾಗದವನ್ನು ತಯಾರಿಸುತ್ತಿತ್ತು. ಇವುಗಳ ಜೊತೆಗೆ ಬೆಳಗೊಳದ ಮಂಡ್ಯ ನ್ಯಾಷನಲ್ ಕಾಗದ ಕಾರ್ಖಾನೆ ಮತ್ತು ಮುನಿರಾಬಾದ್ನ ತುಂಗಭದ್ರಾ ಕಾಗದ ಹಾಗೂ ಸ್ಟ್ರಾಬೋರ್ಡ್ ಕಾರ್ಖಾನೆಗಳು ಕಬ್ಬಿನ ಸಿಪ್ಪೆ ಹಾಗೂ ಹುಲ್ಲನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸಿ ಕಾಗದ ತಯಾರಿಸುತ್ತಿದ್ದ ಕಾರ್ಖಾನೆಗಳು. ಈ ಪೈಕಿ ಮೈಸೂರಿನ ಬಳಿ ಬೆಳಗೊಳದ ಕಾರ್ಖಾನೆಯಲ್ಲಿ ಬೊಂಬನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸಿ ಕಾಗದ ತಯಾರಿಕೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯಿತಾದರೂ ಈ ಯೋಜನೆ ಕಾರ್ಯಗತವಾಗುವ ಮೊದಲೇ ಅನಿವಾರ್ಯವಾಗಿ ಈ ಕಾರ್ಖಾನೆಯನ್ನು ಮುಚ್ಚಲಾಯಿತು. ಇವುಗಳೊಂದಿಗೆ ಕಾರವಾರ ಹಾಗೂ ನಂಜನಗೂಡಿನಲ್ಲಿ ಖಾಸಗಿ ಸ್ವಾಮ್ಯದಲ್ಲಿರುವ ಕಾಗದದ ಕಾರ್ಖಾನೆಗಳೂ ಇವೆ. ಇಂದು ರಾಜ್ಯದಲ್ಲಿ ಒಟ್ಟು ೧೪ಕಕ್ಕೂ ಹೆಚ್ಚು ಕಾಗದದ ಕಾರ್ಖಾನೆಗಳಿವೆ.
ರಬ್ಬರ್ ಉದ್ಯಮಸಂಪಾದಿಸಿ
ರಬ್ಬರ್ ಉದ್ಯಮಕ್ಕೆ ಕೇರಳ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ೧೯೬೧ರಿಂದ ಈಚೆಗೆ ಕರ್ನಾಟಕದಲ್ಲಿ ಸಾವಿರಾರು ಹೆಕ್ಟೆರ್ ಅರಣ್ಯ ಪ್ರದೇಶದಲ್ಲಿ ರಬ್ಬರ್ ನೆಡುತೋಪುಗಳನ್ನು ಬೆಳೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದರೆ ತಾಲ್ಲೂಕುಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಪಶ್ಚಿಮ ಇಳಿಜಾರು ಪ್ರದೇಶಗಳಲ್ಲಿ ಇಂಥ ನೆಡುತೋಪುಗಳಿವೆ. ಈಗ ವರ್ಷಕ್ಕೆ ಸು. ೨೦೦೦ ಟನ್ ರಬ್ಬರ್ ಉತ್ಪಾದನೆಯಾಗುತ್ತಿದೆ. ರಬ್ಬರ್ ನೆಡುತೋಪುಗಳ ಕಾರ್ಯಕ್ರಮದೊಂದಿಗೆ ಶ್ರೀಲಂಕಾದಿಂದ ಬಂದ ನಿರಾಶ್ರಿತರಿಗೆ ಪುನರ್ವಸತಿಕಲ್ಪಿಸುವ ಕಾರ್ಯಕ್ರಮವನ್ನು ಜೋಡಿಸಲಾಗಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ಸು. ೧೦,೦೦೦ ಮಂದಿಗೆ ಪುನರ್ವಸತಿ ದೊರೆತಿದೆ. ರಬ್ಬರ್ ತಯಾರಿಕೆಯನ್ನು ಆಧರಿಸಿದ, ವಾಹನಗಳ ಚಕ್ರದ ಟ್ಯೂಬು ಹಾಗೂ ಟೈರುಗಳನ್ನೂ ತಯಾರಿಸುವ ಕಾರ್ಖಾನೆಗಳೂ ಈಗ ಕರ್ನಾಟಕದಲ್ಲಿ ಸ್ಥಾಪಿತವಾಗಿವೆ. ಈಗ ಪ್ರತ್ಯೇಕವಾದ ರಬ್ಬರ್ ಉದ್ಯಮ ನಿಗಮವನ್ನೂ ಕೂಡಾ ಪ್ರಾರಂಭಿಸಲಾಗಿದೆ. ಸ್ಲೇಟು ಹಾಗೂ ಫೋಟೋ ಚೌಕಟ್ಟಿನ ಉದ್ಯಮಗಳು: ಚಿಕ್ಕಮಗಳೂರು, ಸಾಗರ, ಕುಶಾಲನಗರ, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಸ್ಲೇಟು ಹಾಗೂ ಫೋಟೋ ಚೌಕಟ್ಟಿನ ಅನೇಕ ಉದ್ಯಮಗಳಿವೆ. ಈ ಉದ್ಯಮಗಳು ಸಿಲ್ವರ್ ಓಕ್ ಮತ್ತು ಬೆನ್ನಾಟೆ ಮರಗಳನ್ನು ಉಪಯೋಗಿಸಿಕೊಳ್ಳುತ್ತವೆ. ಜೊತೆಗೆ ಆಂಧ್ರಪ್ರದೇಶದಲ್ಲಿರುವ ಕೆಲವು ಕಾರ್ಖಾನೆಗಳ ಆವಶ್ಯಕತೆಯ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕರ್ನಾಟಕದ ಅರಣ್ಯಗಳು ಪೂರೈಸುತ್ತಿವೆ.
ಮರ ಕುಯ್ಯುವ ಕಾರ್ಖಾನೆಗಳುಸಂಪಾದಿಸಿ
ಕರ್ನಾಟಕದಲ್ಲಿ ಸರ್ಕಾರದ ಮತ್ತು ಖಾಸಗಿ ಆಡಳಿತಕ್ಕೊಳಪಟ್ಟಿರುವ ೫೦೦ಕ್ಕೂ ಹೆಚ್ಚು ಮರ ಕೊಯ್ಯುವ ಕಾರ್ಖಾನೆಗಳಿದ್ದು ಕರ್ನಾಟಕದ ಪ್ರಮುಖ ಉದ್ಯಮವರ್ಗಗಳಲ್ಲಿ ಒಂದು ಎನಿಸಿಕೊಂಡಿದೆ.
ಕರಕುಶಲ ವಸ್ತುಗಳುಸಂಪಾದಿಸಿ
ಕರ್ನಾಟಕ ಅನಾದಿ ಕಾಲದಿಂದಲೂ ತನ್ನ ಕರಕುಶಲ ಕಲೆಗಳಿಗೆ ಪ್ರಸಿದ್ಧಿಯಾಗಿದೆ. ಕರ್ನಾಟಕದಾದ್ಯಂತ ಕುಶಲ ಕಲೆಗಾರರಿದ್ದಾರೆ. ಮೈಸೂರು, ಚನ್ನಪಟ್ಟಣ, ಬೆಂಗಳೂರು, ಶಿವಮೊಗ್ಗ, ಸಾಗರ, ಸೊರಬ, ಶಿರಸಿ, ಹೊನ್ನಾವರ, ಕುಮಟದ ಕುಶಲಕಲೆಗಾರರು ವಿಶೇಷ ಮನ್ನಣೆಯನ್ನು ಪಡೆದಿದ್ದಾರೆ. ಕೆತ್ತನೆಯ ಕೆಲಸಕ್ಕೆ ಶ್ರೀಗಂಧ, ಆನೆಯ ದಂತ, ಬೀಟೆ, ಹೆತ್ತೇಗ, ಕೂಳ, ಹಲಸು, ಕರಿಮರ ಮುಂತಾದ ಹಲವಾರು ವಸ್ತುಗಳು ಬಳಕೆಯಾಗುತ್ತವೆ.
ಪ್ರಾಣಿ ಪಕ್ಷಿಗಳ ಚರ್ಮ ಪ್ರಸಾದನ ಉದ್ಯಮಗಳುಸಂಪಾದಿಸಿ
ಕರ್ನಾಟಕದ ಅರಣ್ಯಗಳು ವನ್ಯಪ್ರಾಣಿಗಳ ತವರುಗಳಾಗಿವೆ. ಇತ್ತೀಚಿನವರೆಗೂ ಬೇಟೆಗಾರರಿಗೆ ಅವಕಾಶವಿದ್ದುದರಿಂದ ಬೇಟೆಯಾದ ಪ್ರಾಣಿಪಕ್ಷಿಗಳ ಚರ್ಮವನ್ನು ಹದಗೊಳಿಸುವ ಹಾಗೂ ಆ ಪ್ರಾಣಿಗಳ ಸ್ಥಿರ ಆಕಾರ ನೀಡುವ ಉದ್ಯಮ ಬಹಳ ಹೆಸರುವಾಸಿಯಾಗಿತ್ತು. ಜೊತೆಗೆ ಪಾದರಕ್ಷೆಗಳು ಹಾಗೂ ಇನ್ನಿತರ ಚರ್ಮದ ವಸ್ತುಗಳನ್ನು ತಯಾರಿಸುವ ಉದ್ಯಮವೂ ಸಾಗುತ್ತಿತ್ತು. ಈಗ ಬೇಟೆಯಾಡುವುದು ನಿಷಿದ್ಧವಾದ್ದರಿಂದ ಇಂಥ ಉದ್ಯಮಗಳು ಕಡಿಮೆಯಾಗಿವೆ. ಚರ್ಮದ ಬದಲು ಪ್ಲಾಸ್ಟಿಕ್ ಅಥವಾ ಕೃತಕವಾಗಿ ತಯಾರಿಸಿದ ವಸ್ತುಗಳನ್ನು ಈ ಉದ್ಯಮಗಳಿಗೆ ಬಳಸಲಾಗುತ್ತಿದೆ.
ಪೆಟ್ಟಿಗೆ ಉದ್ಯಮಗಳುಸಂಪಾದಿಸಿ
ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಬೆಳಗಾಂವಿ, ಸುಳ್ಯ, ಚಾಮರಾಜನಗರ ಮುಂತಾದೆಡೆಗಳಲ್ಲಿ ಮರದ ಪೆಟ್ಟಿಗೆ ತಯಾರಿಕೆಯಲ್ಲಿ ನಿರತವಾದ ಅನೇಕ ಕಾರ್ಖಾನೆಗಳಿವೆ. ಪ್ಲೈವುಡ್ ಮತ್ತು ವಿನೀರ್ ಉದ್ಯಮಗಳು: ಧಾರವಾಡ, ದಾಂಡೇಲಿ, ತಾಳಗುಪ್ಪ, ಸಿದ್ಧಾಪುರ, ಸುಬ್ರಹ್ಮಣ್ಯ, ಮೈಸೂರು, ಹುಣಸೂರು, ಬೆಂಗಳೂರು, ಬಂಟ್ವಾಳ ಮತ್ತು ಹುಬ್ಬಳ್ಳಿಗಳಲ್ಲಿ ಪ್ಲೈವುಡ್ ಮತ್ತು ವಿನೀರ್ ಕಾರ್ಖಾನೆಗಳಿವೆ. ಬಲಂಜಿ, ಅರಶಿನ, ತೇಗ, ಬಿಲ್ವಾರ, ಮದ್ದಾಲೆ, ಕದಂಬ, ಹೆಬ್ಬಲಸು, ಹಲಸು, ಸುರಹೊನ್ನೆ, ಕಾಯಿಧೂಪ, ಗಂಧಗರಿಗೆ, ಬೀಟೆ, ಧೂಮ, ಬಿಳಿದೇವದಾರು, ಪಟ್ಟಗ, ನೇರಳೆ, ಕೂರಿ, ಗೊದ್ದ, ಸಿಲ್ವರ್ ಓಕ್, ದೊಡ್ಡತೊಪ್ಪಾ, ಬೆಂಡೆ, ನಂದಿ, ಬೆನ್ನಾಟೆ, ಗುಳಮಾವು, ಸಂಪಿಗೆ, ಪಾಲಿ ಬೂರುಗ, ಸಾಗುವಾನಿ, ಮತ್ತಿ ಜಾತಿಯ ಮರಗಳು, ಸಾಲುಧೂಪ ಮುಂತಾದ ವೃಕ್ಷಗಳು ಪ್ಲೈವುಡ್ ಮಾಡಲು ಬಳಕೆಯಾಗುತ್ತವೆ.
ಕರ್ನಾಟಕದ ಪ್ಲೈವುಡ್ಡಿಗೆ ಇರಾನ್, ಇರಾಕ್, ಸೌದಿ, ಕುವೈತ್, ಅರೇಬಿಯ, ಶ್ರೀಲಂಕಾ, ಸಿಂಗಪುರ, ಇಂಗ್ಲೆಂಡ್, ಕೆನಡ, ಅಮೆರಿಕ, ಜಪಾನ್, ಜರ್ಮನಿ ಮುಂತಾದ ದೇಶಗಳಿಂದ ಅಧಿಕ ಬೇಡಿಕೆಯಿದೆ. ಈ ಕಾರ್ಖಾನೆ ಅತ್ಯಂತ ಹೆಚ್ಚಿನ ಜನರಿಗೆ ಉದ್ಯೋಗವನ್ನು ಕಲ್ಪಿಸುವ ಮತ್ತು ವಿದೇಶೀ ವಿನಿಮಯವನ್ನು ಒದಗಿಸುವ ಒಂದು ಉದ್ಯಮವಾಗಿದೆ.
ಬೆಂಕಿಕಡ್ಡಿ ಕಾರ್ಖಾನೆಗಳುಸಂಪಾದಿಸಿ
ಇವು ಮುಖ್ಯವಾಗಿ ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕೇಂದ್ರಿಕೃತವಾಗಿವೆ. ಈ ಎರಡು ಜಿಲ್ಲೆಗಳಲ್ಲಿ ೨೦ ಕಾರ್ಖಾನೆಗಳಿವೆ. ಅಲ್ಲದೆ ಧಾರವಾಡ, ಚಾಮರಾಜನಗರ, ಸಾಗರ, ಪುತ್ತೂರುಗಳಲ್ಲಿಯೂ ಸಣ್ಣ ಸಣ್ಣ ಕಾರ್ಖಾನೆಗಳಿವೆ. ಆದರೆ ಇವು ಯಾವುವೂ ಪೂರ್ಣ ಪ್ರಮಾಣದ ಕಾರ್ಖಾನೆಗಳಲ್ಲ. ಆದ್ದರಿಂದ ಈ ಕಾರ್ಖಾನೆಗಳು ಕಡ್ಡಿಗಳನ್ನು ಶಿವಕಾಶಿಯಲ್ಲಿರುವ ಕಾರ್ಖಾನೆಗಳಿಗೂ ವಿಮ್ಕೋ ಕಂಪನಿಗೂ ಮಾರುತ್ತವೆ. ವಿಮ್ಕೋ ಕಂಪನಿ ಚೆನ್ನೈ, ಅಂಬರನಾಥ, ಚೂಟರ್ ಬುಕ್ಗಂಜ್, ಕಲ್ಲಿಕೋಟೆ ಹಾಗೂ ಪೋರ್ಟ್ಬ್ಲೆರ್ಗಳಲ್ಲಿರುವ ತನ್ನ ಕಾರ್ಖಾನೆಗಳಿಗೆ ಬೆಂಕಿಕಡ್ಡಿಗಳನ್ನು ಕಳುಹಿಸಿ ಪೊಟ್ಟಣಗಳನ್ನು ತಯಾರಿಸುತ್ತದೆ. ಶಿವಮೊಗ್ಗದಲ್ಲಿ ಬೆಂಕಿ ಪೊಟ್ಟಣಗಳನ್ನು ತಯಾರಿಸುವ ಕಾರ್ಖಾನೆ ಇದೆ. ಇತ್ತೀಚೆಗೆ ಕೆಲವು ಅದ್ದುವ ಕಾರ್ಖಾನೆಗಳು ಪ್ರಾರಂಭವಾಗಿವೆ. ಮರದ ಕಡ್ಡಿಯ ಬದಲು ಎಣ್ಣೆ ಕಾಗದದ ಕಡ್ಡಿಗಳನ್ನು ತಯಾರಿಸಲಾಗುತ್ತದೆ.
ಹರಿಹರ ಪಾಲಿಫೈಬರ್ ಕಾರ್ಖಾನೆಸಂಪಾದಿಸಿ
ಇದು ೧೯೭೦ರಲ್ಲಿ ಕಾರ್ಯಾರಂಭ ಮಾಡಿತು. ಈ ಕಾರ್ಖಾನೆಗೆ ದಿನವಹಿ ೧೨೦೦ ಟನ್ನು ನೀಲಗಿರಿ ಮರ ಕಚ್ಚಾವಸ್ತುವಾಗಿ ಬೇಕಾಗುತ್ತದೆ. ಈ ಕಾರ್ಖಾನೆ ಸಾವಿರಾರು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆಯಲ್ಲದೆ ಪರೋಕ್ಷವಾಗಿ ೧೦,೦೦೦ ಮಂದಿಗೆ ಉದ್ಯೋಗ ದೊರಕುವಂತೆ ಮಾಡಿದೆ. ಇದರೊಂದಿಗೆ ಕೇರಳದ ಮಾವೂರಿನಲ್ಲಿರುವ ಗ್ವಾಲಿಯರ್ ರೆಯಾನ್ ಕಾರ್ಖಾನೆಗೆ ಇತ್ತೀಚಿನವರೆಗೂ ಕರ್ನಾಟಕದ ಅರಣ್ಯಗಳಿಂದ ಬೊಂಬು ಮತ್ತು ಸೌದೆ ಸರಬರಾಜಾಗುತ್ತಿದ್ದವು.
ಮರ ಸಂರಕ್ಷಣೆ ಕಾರ್ಯಗಾರಸಂಪಾದಿಸಿ
ಎರಡನೆಯ ಮಹಾಯುದ್ಧದ ಅನಂತರ ಸಾಗುವಾನಿ ಮರ ನಶಿಸುತ್ತ ಬಂದಿದ್ದರಿಂದ ಕೆಳದರ್ಜೆಯ ಜಾತಿಯ ಮರಗಳನ್ನು ಸಾಗುವಾನಿ ಮರದ ಬದಲು ಉಪಯೋಗಿಸುವ ಸಾಧ್ಯತೆಯನ್ನು ಕುರಿತು ಅಧ್ಯಯನ ನಡೆಸಲಾಗಿದೆ. ರಕ್ಷಕ ರಾಸಾಯನಿಕ ಪದಾರ್ಥವನ್ನು ಉಪಯೋಗಿಸಿ ಮರಗಳನ್ನು ಅಧಿಕ ಕಾಲಾವಧಿಯವರೆಗೂ ಉಪಯೋಗಕ್ಕೆ ಬರುವಂತೆ ಮಾಡುವ ತಂತ್ರವನ್ನು ಕಂಡುಹಿಡಿಯಲಾಗಿದೆ. ಈಗ ಸರ್ಕಾರದ ಅಧೀನದಲ್ಲಿ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಮರ ಸಂರಕ್ಷಕ ಕಾರ್ಯಾಗಾರಗಳಿವೆ. ಮುಖ್ಯವಾಗಿ ವಿದ್ಯುಚ್ಫಕ್ತಿ ಕಂಬಗಳಿಗೆ ಹಾಗೂ ರೈಲ್ವೆ ಹಳಿಗಳ ಕೆಳಗೆ ಉಪಯೋಗಿಸುವ ಅಡಿಮರಗಳನ್ನು ಇಲ್ಲಿ ಸಂಸ್ಕರಿಸಲಾಗುವುದು. ಖಾಸಗಿ ಆಡಳಿತಕ್ಕೊಳಪಟ್ಟ ಇನ್ನೊಂದು ಕಾರ್ಯಾಗಾರ ಹುಬ್ಬಳ್ಳಿಯಲ್ಲಿದೆ. ಇತ್ತೀಚೆಗೆ ವಿದ್ಯುತ್ ಕಂಬಗಳಿಗೆ ಹಾಗೂ ರೈಲ್ವೆ ಹಳಿಗಳ ಅಡಿಪಟ್ಟಿಗಳಿಗೆ ಮರದ ಬದಲು ಕಾಂಕ್ರೀಟ್ ಕಂಬಗಳನ್ನು ಬಳಸುವುದರ ಮೂಲಕ ಮರಗಳನ್ನು ಕಡಿದು ಉಪಯೋಗಿಸುವುದನ್ನು ಕಡಿಮೆ ಮಾಡಲಾಗುತ್ತಿದೆ. ಕರ್ನಾಟಕದ ಕಾಡುಗಳಲ್ಲಿ ನಾಟಾಕ್ಕೆ ಉಪಯುಕ್ತವಾದ ಮರಗಳ ಪ್ರಮಾಣ ತುಂಬಾ ಕ್ಷೀಣಿಸಿದ್ದರಿಂದ ಆಗ್ನೇಯ ಏಷ್ಯದ ರಾಷ್ಟ್ರಗಳಿಂದ ಮತ್ತು ಆಫ್ರಿಕದಿಂದ ಮರದ ದಿಮ್ಮಿಗಳನ್ನು ಆಮದು ಮಾಡಿಕೊಳ್ಳುವುದು ಹೆಚ್ಚಿದೆ.
ಪೀಠೋಪಕರಣಗಳ ಉದ್ಯಮಸಂಪಾದಿಸಿ
ಈ ಉದ್ಯಮಕ್ಕೆ ಬೆತ್ತ, ಮರ ಮತ್ತು ಪ್ಲೈವುಡ್ಗಳನ್ನು ಉಪಯೋಗಿಸುತ್ತಾರೆ. ಕೊಡಗಿನ ಮೂರ್ಕಲ್ ಮತ್ತು ಶಿವಮೊಗ್ಗದಲ್ಲಿ ಸರ್ಕಾರದ ಅಧೀನಕ್ಕೊಳಪಟ್ಟ ಪೀಠೋಪಕರಣ ತಯಾರಿಕೆಯ ಎರಡು ಘಟಕಗಳಿವೆ. ಇವುಗಳ ಜೊತೆಗೆ ಖಾಸಗಿ ಕ್ಷೇತ್ರದಲ್ಲಿ ಸಾವಿರಾರು ಘಟಕಗಳು ಕೆಲಸಮಾಡುತ್ತಿವೆ. ಇದಲ್ಲದೆ ವಿವಿಧ ಜಿಲ್ಲೆಗಳಲ್ಲಿರುವ ಬಂದೀಖಾನೆಗಳಲ್ಲಿ ಕೂಡಾ ಪೀಠೋಪಕರಣಗಳ ತಯಾರಿಕೆಯ ಕೆಲಸ ನಡೆಯುತ್ತದೆ.
ಚಿಪ್ ಬೋರ್ಡ್ ಉದ್ಯಮಸಂಪಾದಿಸಿ
ಯಾವ ಕೈಗಾರಿಕೆಗಳಿಗೂ ಬಾರದ ವಿವಿಧ ಜಾತಿಯ ಸಣ್ಣಮರದ ತುಂಡುಗಳಿಂದ ಚಿಪ್ ಬೋರ್ಡ್ನ್ನು ತಯಾರಿಸಬಹುದು. ಅರಣ್ಯ ಉದ್ಯಮದಲ್ಲಿ ಇದೊಂದು ಬಹುಮುಖ್ಯ ಪ್ರಗತಿಪರ ಹೆಜ್ಜೆ. ಚಿಪ್ ಬೋರ್ಡ್ಗಳನ್ನು ಶಕ್ತಿ ಪ್ರಾಧನ್ಯವಿಲ್ಲದ ಭಾಗಗಳಲ್ಲಿ ಹಲಗೆಗಳ ಬದಲಾಗಿ ಉಪಯೋಗಿಸಬಹುದು.