ಶನಿವಾರ, ಜುಲೈ 18, 2015

ಮೈಕ್ರೋಸಾಫ್ಟ್


ಮೈಕ್ರೋಸಾಫ್ಟ್






ಮೈಕ್ರೋಸಾಫ್ಟ್ ಅಮೆರಿಕದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆ. ಗಣಕಯಂತ್ರ, ಮೊಬೈಲ್ ಫೋನ್ ಮತ್ತಿತರ ಸಾಧನಗಳಲ್ಲಿ ಉಪಯೋಗಿಸಬಹುದಾದ ವಿವಿಧ ರೀತಿಯ ತಂತ್ರಾಂಶಗಳನ್ನು ಈ ಸಂಸ್ಥೆ ವಿಕಸನಗೊಳಿಸಿ ಮಾರಾಟ ಮಾಡುತ್ತದೆ. ಇದರ ಅತ್ಯಂತ ಯಶಸ್ವಿ ತಂತ್ರಾಂಶಗಳೆಂದರೆ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಮತ್ತು ಮೈಕ್ರೋಸಾಫ್ಟ್ ಆಫೀಸ್ ಗುಂಪಿನ ತಂತ್ರಾಂಶಗಳು. ಈ ಸಂಸ್ಥೆಯನ್ನು ಸ್ಥಾಪಿಸಿದವರು ಬಿಲ್ ಗೇಟ್ಸ್.




ಪರಿವಿಡಿ
ಚರಿತ್ರೆ ೧೯೭೫-೧೯೮೫: ಸ್ಥಾಪನೆ
೧೯೮೫-೧೯೯೫: ಒಎಸ್/೨ ಮತ್ತು ವಿಂಡೋಸ್
೧೯೯೫-೨೦೦೫: ಅಂತರಜಾಲ ಮತ್ತು ಕಾನೂನಿನ ತೊಡಕುಗಳು
೨೦೦೬ ರಿಂದ ಮುಂದೆ
ಕಾರ್ಯನಿರ್ವಾಹಕರು
ಮೈಕ್ರೋಸಾಫ್ಟ್‌ನಲ್ಲಿ ಕನ್ನಡ


ಚರಿತ್ರೆ
೧೯೭೫-೧೯೮೫: ಸ್ಥಾಪನೆಸಂಪಾದಿಸಿ
ಆಲ್ಟೇರ್ ೮೮೦೦ ಗಣಕಯಂತ್ರದ ಬಿಡುಗಡೆಯ ನಂತರ, ಆ ಯಂತ್ರದ ಮೇಲೆ ಬೇಸಿಕ್ ಭಾಷೆಯನ್ನು ಉಪಯೋಗಿಸಲು ತಂತ್ರಾಂಶವೊಂದನ್ನು ಬಿಲ್ ಗೇಟ್ಸ್ ಪ್ರದರ್ಶಿಸಿದರು. ಈ ಗಣಕಯಂತ್ರವನ್ನು ತಯಾರಿಸುತ್ತಿದ್ದ ಸಂಸ್ಥೆ ಈ ತಂತ್ರಾಂಶವನ್ನು ಮಾರಾಟ ಮಾಡಲು ಒಪ್ಪಿಗೆಯಿತ್ತ ನಂತರ ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಬಿಟ್ಟು ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದರು.
ಮೈಕ್ರೋಸಾಫ್ಟ್ ಸಂಸ್ಥೆಯ ಮೊದಲ ಯಶಸ್ಸು "ಡಾಸ್" ಕಾರ್ಯಾಚರಣ ವ್ಯವಸ್ಥೆ. ಐಬಿಎಮ್ ಸಂಸ್ಥೆಯ ಗಣಕಯಂತ್ರಗಳಿಗೂ ಈ ಕಾರ್ಯಾಚರಣ ವ್ಯವಸ್ಥೆಯನ್ನು ವಿಸ್ತರಿಸಿದ ಮೇಲೆ ಮೈಕ್ರೋಸಾಫ್ಟ್ ದೊಡ್ಡ ಸಂಸ್ಥೆಯಾಗಿ ಬೆಳೆಯಿತು.
೧೯೮೫-೧೯೯೫: ಒಎಸ್/೨ ಮತ್ತು ವಿಂಡೋಸ್ಸಂಪಾದಿಸಿ
ಆಗಸ್ಟ್ ೧೯೮೫ ರಲ್ಲಿ ಮೈಕ್ರೋಸಾಫ್ಟ್ ಮತ್ತು ಐಬಿಎಮ್ ಸೇರಿ ಒಎಸ್/೨ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಹೊರತಂದರು. ಇದೇ ವರ್ಷದಲ್ಲಿ ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನೂ ಬಿಡುಗಡೆ ಮಾಡಿತು. ಮಾರ್ಚ್ ೧೩, ೧೯೮೬ ರಂದು ತನ್ನ ಷೇರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.
೧೯೮೯ ರಲ್ಲಿ ಮೈಕ್ರೋಸಾಫ್ಟ್ ಆಫೀಸ್ ಎಂಬ ತಂತ್ರಾಂಶ ಸಲಕರಣೆಗಳ ಸಮೂಹವನ್ನು ಬಿಡುಗಡೆ ಮಾಡಿತು. ಇದು ಇತರ ಸಂಸ್ಥೆಗಳ ಇಂಥದೇ ತಂತ್ರಾಂಶಗಳಿಗಿಂತ ಹೆಚ್ಚು ಯಶಸ್ವಿಯಾಯಿತು. ೧೯೯೦ ರಲ್ಲಿ ವಿಂಡೋಸ್ ೩.೦, ೧೯೯೩ ರಲ್ಲಿ ವಿಂಡೋಸ್ ಎನ್ ಟಿ, ೧೯೯೫ ರಲ್ಲಿ ವಿಂಡೋಸ್ ೯೫ ಬಿಡುಗಡೆಯಾದವು.
೧೯೯೫-೨೦೦೫: ಅಂತರಜಾಲ ಮತ್ತು ಕಾನೂನಿನ ತೊಡಕುಗಳುಸಂಪಾದಿಸಿ
೯೦ ರ ದಶಕದ ಮಧ್ಯದಲ್ಲಿ ಮೈಕ್ರೋಸಾಫ್ಟ್ ಅಂತರ್ಜಾಲಕ್ಕೆ ಸಂಬಂಧಪಟ್ಟ ತಂತ್ರಾಂಶಗಳನ್ನು ಸಹ ಮಾರಾಟ ಮಾಡಲಾರಂಭಿಸಿತು. ಎಮ್ ಎಸ್ ಎನ್ ಎಂಬ ಪ್ರಮುಖ ಅಂತರ್ಜಾಲ ಸೇವೆಯನ್ನು ಆರಂಭಿಸಿತು. ೧೯೯೬ ರಲ್ಲಿ ಎನ್ ಬಿ ಸಿ ಸಂಸ್ಥೆಯಂದಿಗೆ ಸೇರಿ ಎಮ್ ಎಸ್ ಎನ್ ಬಿ ಸಿ ಎಂಬ ಕೇಬಲ್ ಟಿವಿ ಚಾನಲ್ ಅನ್ನು ಆರಂಭಿಸಲಾಯಿತು. ಪಿಡಿಎ, ಮೊಬೈಲ್ ಫೋನ್ ಮೊದಲಾದ ಕಿರು ಯಂತ್ರಗಳ ಮೇಲೆ ಕೆಲಸ ಮಾಡಬಲ್ಲ ವಿಂಡೋಸ್ ಸಿಇ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಯಿತು.
ಅಂತರ್ಜಾಲದಲ್ಲಿ ತಾಣಗಳನ್ನು ಭೇಟಿ ನೀಡಲು ಮೈಕ್ರೋಸಾಫ್ಟ್ ನ ತಂತ್ರಾಂಶವಾದ ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ವಿಂಡೋಸ್ ಮತ್ತು ಮ್ಯಾಕ್ - ಈ ಎರಡೂ ಕಾರ್ಯಾಚರಣ ವ್ಯವಸ್ಥೆಗಳಿಗೆ ಬಿಡುಗಡೆ ಮಾಡಲಾಯಿತು. ತನ್ನ ಸ್ಪರ್ಧಾಳು ತಂತ್ರಾಂಶ ನೆಟ್ ಸ್ಕೇಪ್ ಗಿಂತ ಇದು ಹೆಚ್ಚು ಯಶಸ್ವಿಯಾಗಲಾರಂಭಿಸಿತು. ಇದಕ್ಕೆ ಸಂಬಂಧಪಟ್ಟಂತೆ ೧೯೯೪ ರ ಒಂದು ಒಪ್ಪಂದವನ್ನು ಮೈಕ್ರೋಸಾಫ್ಟ್ ಮೀರಿತ್ತು ಎಂದು ೧೯೯೭ ರಲ್ಲಿ ಅಮೆರಿಕದ ನ್ಯಾಯ ಇಲಾಖೆ ದೂರು ದಾಖಲಿಸಿಕೊಂಡಿತು. ಏಪ್ರಿಲ್ ೩, ೨೦೦೦ ದಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮೈಕ್ರೋಸಾಫ್ಟ್ ಸಂಸ್ಥೆ ಗ್ರಾಹಕರ ಹಿತರಕ್ಷಣೆಗಾಗಿ ಇಬ್ಭಾಗವಾಗಬೇಕೆಂಬ ತೀರ್ಪು ನೀಡಿತು.
೧೯೯೮ ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ನ ಅಧ್ಯಕ್ಷ ಸ್ಥಾನವನ್ನು ಸ್ಟೀವ್ ಬಾಮರ್ ಅವರಿಗೆ ಬಿಟ್ಟುಕೊಟ್ಟರು; ಆದರೆ ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆದರು. ೧೯೯೮ ರಲ್ಲಿ ವಿಂಡೋಸ್ ೯೮, ೨೦೦೧ ರಲ್ಲಿ ವಿಂಡೋಸ್ ಎಕ್ಸ್ ಪಿ ಬಿಡುಗಡೆಯಾದವು. ಎಕ್ಸ್ ಬಾಕ್ಸ್ ಎಂಬ ಟಿವಿ ಆಟಗಳನ್ನಾಡುವ ಯಂತ್ರದ ಬಿಡುಗಡೆಯ ನಂತರ ಮೈಕ್ರೋಸಾಫ್ಟ್ ಗೇಮಿಂಗ್ ಮಾರುಕಟ್ಟೆಯನ್ನೂ ಪ್ರವೇಶಿಸಿತು.
೨೦೦೬ ರಿಂದ ಮುಂದೆಸಂಪಾದಿಸಿ
ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ವಿಸ್ಟಾ, ಜನವರಿ ೨೦೦೭ ರಲ್ಲಿ ಬಿಡುಗಡೆಯಾಯಿತು.
ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೭, ಜುಲೈ ೨೦೦೯ ರಲ್ಲಿ ಬಿಡುಗಡೆಯಾಯಿತು.
ಮೈಕ್ರೋಸಾಫ್ಟ್ ನ ಸ್ಮಾರ್ಟ್‌‌ಫೋನ್ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್, ನವಂಬರ‍್ ೨೦೧೦ ರಲ್ಲಿ ಬಿಡುಗಡೆಯಾಯಿತು.
ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೮, ಅಕ್ಟೋಬರ‍್ ೨೦೧೨ ರಲ್ಲಿ ಬಿಡುಗಡೆಯಾಯಿತು.
ಫೆಬ್ರವರಿ ೧, ೨೦೦೮ ರಂದು ಮೈಕ್ರೋಸಾಫ್ಟ್ ಅಂತರ್ಜಾಲ ಸಂಸ್ಥೆ ಯಾಹೂ ಅನ್ನು ೪೪.೬ ಶತಕೋಟಿ ಡಾಲರ್ ಕೊಟ್ಟು ಕೊಳ್ಳಲು ಮುಂದಾಯಿತು. ಆದರೆ ಈ ಪ್ರಸ್ತಾಪವನ್ನು ಯಾಹೂ ತಿರಸ್ಕರಿಸಿತು. ನಂತರ ಮೈಕ್ರೋಸಾಫ್ಟ್ ತನ್ನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು.

ಕಾರ್ಯನಿರ್ವಾಹಕರುಸಂಪಾದಿಸಿ

ಕ್ರಮ ಸಂಖ್ಯೆ
ಹೆಸರು
ಅವದಿ
೧ ಬಿಲ್ ಗೇಟ್ಸ್ ಎಪ್ರಿಲ್ ೪, ೧೯೭೫ - ಜನವರಿ ೧೩, ೨೦೦೦
೨ ಸ್ಟೀವ್ ಬಾಲ್ಮೆರ್ ಜನವರಿ ೧೩, ೨೦೦೦ - ಫೆಬ್ರವರಿ ೦೪, ೨೦೧೪
೩ ಸತ್ಯ ನಾಡೆಲ್ಲ ಫೆಬ್ರವರಿ ೦೪, ೨೦೧೪ ಇಂದ -

ಮೈಕ್ರೋಸಾಫ್ಟ್‌ನಲ್ಲಿ ಕನ್ನಡಸಂಪಾದಿಸಿ
ಮೈಕ್ರೋಸಾಫ್ಟ್‌ ತನ್ನ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಿತು. ಈ ಅಳವಡಿಕೆಯಲ್ಲಿ ಯುನಿಕೋಡ್ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್), ಇನ್‌ಸ್ಕ್ರಿಪ್ಟ್ ಕೀಲಿಮಣೆ, ಕನ್ನಡದಲ್ಲಿ ಫೈಲ್‌ಗಳಿಗೆ ಹೆಸರು ನೀಡುವ ಸೌಲಭ್ಯ, ಕನ್ನಡದ ಅಕಾರಾದಿ ವಿಂಗಡಣೆ, ಎಲ್ಲ ಇದ್ದವು. ಕನ್ನಡ ಪಠ್ಯವನ್ನು ಪರದೆಯಲ್ಲಿ ತೋರಲು ಬಳಸಿದ ಕನ್ನಡ ಯುನಿಕೋಡ್ ಆಧಾರಿತ ಓಪನ್‌ಟೈಪ್ ಫಾಂಟ್ ತುಂಗ. ಅದರಲ್ಲಿ ಕನ್ನಡದ ಕೆಲವು ಅಕ್ಷರಗಳಲ್ಲಿ, ಉದಾ "ಮೋ", ದೋಷಗಳಿದ್ದವು. ಮೈಕ್ರೋಸಾಫ್ಟ್ ಈ ದೋಷಗಳನ್ನು ೨೦೦೩ರಲ್ಲಿ ವಿಂಡೋಸ್ ಸರ್ವರ‍್ ೨೦೦೩ ಆವೃತ್ತಿಯಲ್ಲಿ ಸರಿಪಡಿಸಿತು. ನಂತರದ ವಿಸ್ತ, ವಿಂಡೋಸ್ ೭ ಮತ್ತು ೮ ಆವೃತ್ತಿಗಳಲ್ಲಿ ಕನ್ನಡದ ಅಳವಡಿಕೆಯಲ್ಲಿ ಯಾವ ದೋಷವೂ ಇಲ್ಲ. ಮೈಕ್ರೋಸಾಫ್ಟ್ ಕಂಪೆನಿ ತನ್ನ ಭಾಷಾಇಂಡಿಯ ತಾಣದ ಮೂಲಕ ಇನ್ನಷ್ಟು ಕೀಲಿಮಣೆ ವಿನ್ಯಾಸಗಳನ್ನು ನೀಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ