ಶನಿವಾರ, ಜುಲೈ 18, 2015

ವಿತ್ತೀಯ ನೀತಿಯ ಇತಿಹಾಸ(History of financial polcy)

ವಿತ್ತೀಯ ನೀತಿಯ ಇತಿಹಾಸ

ವಿತ್ತೀಯ ನೀತಿಯು ಮುಖ್ಯವಾಗಿ ಬಡ್ಡಿದರ ಮತ್ತು ಸಾಲಕ್ಕೆ ಸಂಬಂಧಿಸಿದೆ. ಅನೇಕ ಶತಮಾನಗಳವರೆಗೆ, ಎರಡು ಸ್ವರೂಪಗಳ ವಿತ್ತೀಯ ನೀತಿ ಜಾರಿಯಲ್ಲಿತ್ತು.(i) ನಾಣ್ಯಗಳ ಬಗ್ಗೆ ನಿರ್ಧಾರಗಳು, (ii)ಕಾಗದದ ಹಣ ಮುದ್ರಿಸುವ ನಿರ್ಧಾರಗಳು ಮತ್ತು ಸಾಲದ ಸೃಷ್ಟಿ. ವಿತ್ತೀಯ ಪ್ರಾಧಿಕಾರದ ಭಾಗವೆಂದು ಈಗ ಭಾವಿಸಿದ ಬಡ್ಡಿ ದರಗಳು ಆ ಸಂದರ್ಭದಲ್ಲಿ ವಿತ್ತೀಯ ನೀತಿಯ ಇತರೆ ಸ್ವರೂಪಗಳ ಜತೆ ಸಾಮಾನ್ಯವಾಗಿ ಸಮನ್ವಯತೆ ಹೊಂದಿರಲಿಲ್ಲ. ವಿತ್ತೀಯ ನೀತಿಯನ್ನು ಕಾರ್ಯಾಂಗದ ನಿರ್ಧಾರವೆಂದು ಕಾಣಲಾಗುತ್ತಿತ್ತು. ನಾಣ್ಯವನ್ನು ಟಂಕಿಸುವ ಅಧಿಕಾರ ಅಥವಾ ನಾಣ್ಯಟಂಕನ ಲಾಭ ಗಳಿಸುವ ಪ್ರಾಧಿಕಾರದ ಕೈಯಲ್ಲಿ ಸಾಮಾನ್ಯವಾಗಿ ವಿತ್ತೀಯ ನೀತಿ ಇರುತ್ತಿತ್ತು. ಹೆಚ್ಚು ವ್ಯಾಪಾರ ಜಾಲಗಳ ಬರುವಿಕೆಯೊಂದಿಗೆ,ಚಿನ್ನ ಮತ್ತು ಬೆಳ್ಳಿಯ ನಡುವೆ ಹಾಗೂ ಸ್ಥಳೀಯ ಕರೆನ್ಸಿ ಮತ್ತು ವಿದೇಶಿ ಕರೆನ್ಸಿಗಳ ನಡುವೆ ದರನಿಗದಿ ಮಾಡುವ ಸಾಮರ್ಥ್ಯ ಲಭಿಸಿತು. ಈ ಅಧಿಕೃತ ಬೆಲೆಯು ಮಾರುಕಟ್ಟೆ ದರಕ್ಕಿಂತ ವ್ಯತ್ಯಾಸ ಹೊಂದಿದ್ದರೂ ಕಾನೂನಿನ ಮ‌ೂಲಕ ಜಾರಿಗೆ ತರುವುದು ಸಾಧ್ಯವಾಗಿತ್ತು.

ಬ್ಯಾಂಕ್ ಆಫ್ ಇಂಗ್ಲೆಂಡ್ 1694ರಲ್ಲಿ ಸ್ಥಾಪನೆ ಆಗುವುದರೊಂದಿಗೆ, ನೋಟುಗಳನ್ನು ಚಿನ್ನದ ಬೆಂಬಲದೊಂದಿಗೆ ಮುದ್ರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು.ಹೀಗಾಗಿ ಕಾರ್ಯಾಂಗದಿಂದ ಪ್ರತ್ಯೇಕವಾದ ವಿತ್ತೀಯ ನೀತಿಯ ಕಲ್ಪನೆ ಕುಡಿಯೊಡೆಯಲು ಪ್ರಾರಂಭಿಸಿತು.[೪]





ನಾಣ್ಯಗಳ ಮೌಲ್ಯವನ್ನು ಕಾಯ್ದುಕೊಳ್ಳುವುದು, ನಾಣ್ಯ ರೂಪದ ಹಣಕ್ಕೆ ಸಮಾನವಾಗಿ ಮಾರಾಟವಾಗುವ ನೋಟುಗಳ ಮುದ್ರಣ ಹಾಗೂ ನಾಣ್ಯಗಳು ಚಲಾವಣೆಯಿಂದ ನಿರ್ಗಮಿಸದಂತೆ ತಪ್ಪಿಸುವುದು ವಿತ್ತೀಯ ನೀತಿಯ ಗುರಿಯಾಗಿತ್ತು. ಕೈಗಾರೀಕೃತ ರಾಷ್ಟ್ರಗಳು ಕೇಂದ್ರ ಬ್ಯಾಂಕುಗಳನ್ನು ಸ್ಥಾಪಿಸಿದ ಆಗಿನ ಉದ್ದೇಶವು ಚಿನ್ನದ ಪ್ರಮಿತಿಗೆ ರಾಷ್ಟ್ರದ ಕರೆನ್ಸಿ ನಿಗದಿಯನ್ನು ಕಾಯ್ದುಕೊಳ್ಳುವ ಇಚ್ಛೆ ಮತ್ತು ಚಿನ್ನ ಬೆಂಬಲಿತ ಕರೆನ್ಸಿಗಳ ಜತೆ ಉಪಕ್ರಮಗಳೊಂದಿಗೆ ವ್ಯಾಪಾರ ಮಾಡುವುದಕ್ಕೆ ಸಂಬಂಧಿಸಿತ್ತು. ಈ ಗುರಿಯ ಸಾಧನೆಗೆ, ಕೇಂದ್ರ ಬ್ಯಾಂಕುಗಳು ಚಿನ್ನದ ಪ್ರಮಿತಿಯ ಭಾಗವಾಗಿ, ಸ್ವಂತ ಸಾಲದಾರರಿಗೆ ಮತ್ತು ದ್ರವ್ಯತೆ ಅಗತ್ಯವಾದ ಇತರೆ ಬ್ಯಾಂಕುಗಳಿಗೆ ಬಡ್ಡಿದರಗಳನ್ನು ವಿಧಿಸಲು ಪ್ರಾರಂಭಿಸಿತು. ಚಿನ್ನದ ಪ್ರಮಿತಿಯ ನಿರ್ವಹಣೆಗೆ ಬಹುತೇಕ ಬಡ್ಡಿದರಗಳನ್ನು ಪ್ರತಿತಿಂಗಳೂ ಹೊಂದಾಣಿಕೆ ಮಾಡುವುದು ಅಗತ್ಯವಾಗಿತ್ತು.


ಕೈಗಾರೀಕೃತ ರಾಷ್ಟ್ರಗಳು 1870-1920ರ ಅವಧಿಯಲ್ಲಿ ಕೇಂದ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿದವು. ಅವುಗಳಲ್ಲಿ ಕೊನೆಯದು 1913ರಲ್ಲಿ ಸ್ಥಾಪಿತವಾದ ಫೆಡರಲ್ ರಿಸರ್ವ್.[೫] ಈ ಹಂತದಲ್ಲಿ "ಅಂತಿಮ ಋಣದಾತ"ನೆಂಬ ಕೇಂದ್ರ ಬ್ಯಾಂಕ್ ಪಾತ್ರವು ಮನವರಿಕೆಯಾಯಿತು. ಆರ್ಥಿಕತೆಯಲ್ಲಿ ಗರಿಷ್ಠ ಕ್ರಾಂತಿಯ ಕಾರಣದಿಂದ ಇಡೀ ಆರ್ಥಿಕ ವ್ಯವಸ್ಥೆ ಮೇಲೆ ಬಡ್ಡಿದರಗಳು ಸಣ್ಣಭಾಗವಲ್ಲದೇ ಬಹುಮಟ್ಟಿಗೆ ಪ್ರಭಾವ ಬೀರಿತೆಂಬುದು ಹೆಚ್ಚು ಅರಿವಿಗೆ ಬಂತು. ಆರ್ಥಿಕ ವಹಿವಾಟಿನ ಬದಲಾವಣೆ ಆಧಾರದ ಮೇಲೆ ಎಷ್ಟು ಹೆಚ್ಚು ಮಂದಿ ಅಥವಾ ಎಷ್ಟು ಕಡಿಮೆ ಮಂದಿ ನಿರ್ಧಾರ ಕೈಗೊಳ್ಳುತ್ತಾರೆಂಬ ಬಗ್ಗೆ ಇದು ಗಮನ ಸೆಳೆಯಿತು.
ವ್ಯವಹಾರ ಆವರ್ತವೊಂದಿದ್ದು, ಆ ಆವರ್ತದ ಜತೆ ಬಡ್ಡಿದರಗಳ ಸಂಬಂಧದ ಬಗ್ಗೆ ಆರ್ಥಿಕ ಸಿದ್ಧಾಂತಕ್ಕೆ ಕ್ರಮೇಣ ಅರಿವಾಗುತ್ತಿದೆ ಎನ್ನುವುದು ಸ್ಪಷ್ಟವಾಯಿತು. (ಆದಾಗ್ಯೂ,ಬಡ್ಡಿದರದ ಮೇಲೆ ಪ್ರಭಾವ ಬೀರುವ ಮ‌ೂಲಕ ಇಡೀ ಆರ್ಥಿಕತೆಯನ್ನು ನಡೆಸುವುದು ತೈಲ ಟ್ಯಾಂಕರನ್ನು ಸಣ್ಣದೋಣಿಯ ಹುಟ್ಟಿನಿಂದ ನಡೆಸಿದಂತೆ ಎಂದು ಆಗಾಗ್ಗೆ ಬಣ್ಣಿಸಲಾಗಿದೆ). ವಿಸ್ತರಣೆ ಮತ್ತು ಪರಿಮಿತ ನೀತಿಗಳ ಕೇಂದ್ರ ಬ್ಯಾಂಕ್ ನೀತಿಗಳಿಂದ ಬಹುಷಃ ಆರ್ಥಿಕ ಆವರ್ತ ಸಂಭವಿಸುತ್ತಿರಬಹುದೆಂದು ಕ್ಯಾಸ್ ಬಿಸಿನೆಸ್ ಸ್ಕೂಲ್ ಸಂಶೋಧನೆಯು ಸಲಹೆ ಮಾಡಿದೆ; ಕೇಂದ್ರ ಬ್ಯಾಂಕ್ ನೀತಿಗಳು ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ ಆರ್ಥಿಕತೆಯಲ್ಲಿ ಆವರ್ತಗಳ ಕೊರತೆಯನ್ನು ಗಮನಿಸುವ ಮ‌ೂಲಕ ಪುರಾವೆಗಳು ಸಿಕ್ಕಿದವು.


ವಿತ್ತೀಯ ನಿಯಂತ್ರಣವಾದಿ ಬೃಹದರ್ಥ ಶಾಸ್ತ್ರಜ್ಞರು ಕೆಳಮಟ್ಟದಲ್ಲಿ, ಸ್ಥಿರದರದಲ್ಲಿ ವಿತ್ತೀಯ ಪೂರೈಕೆಯನ್ನು ಹೆಚ್ಚಿಸುವುದಕ್ಕೆ ಕೆಲವು ಬಾರಿ ಸಲಹೆ ಮಾಡಿದ್ದರು. ಕಡಿಮೆ ಹಣದುಬ್ಬರ ಮತ್ತು ಸ್ಥಿರ ಉತ್ಪಾದನೆ ಬೆಳವಣಿಗೆ ಕಾಯ್ದುಕೊಳ್ಳಲು ಅದನ್ನು ಅತ್ಯುತ್ತಮ ಮಾರ್ಗವೆಂದು ಅವರು ಭಾವಿಸಿದ್ದರು.[೬] ಆದಾಗ್ಯೂ,U.S. ಫೆಡರಲ್ ರಿಸರ್ವ್ ಅಧ್ಯಕ್ಷ ಪಾಲ್ ವೋಲ್ಕರ್ 1979 ಅಕ್ಟೋಬರ್‌ನಲ್ಲಿ ಈ ನೀತಿಯನ್ನು ಪ್ರಯತ್ನಿಸಿದಾಗ ಆರ್ಥಿಕತೆಯಲ್ಲಿ ಒಟ್ಟು ವಿತ್ತೀಯ ಮೊತ್ತ ಮತ್ತು ಇತರೆ ಬೃಹತ್ ಆರ್ಥಿಕತೆಯ ವ್ಯತ್ಯಾಸಗಳ ನಡುವೆ ಅತಿಯಾದ ಅಸ್ಥಿರ ಸಂಬಂಧದ ಕಾರಣದಿಂದ ಅದು ಅಪ್ರಾಯೋಗಿಕವೆಂದು ಕಂಡುಬಂತು.[೭] ಹಣದ ಪೂರೈಕೆ ಮೇಲೆ ಗುರಿಯಿರಿಸುವುದು ತಾವು ಆಶಿಸಿದ್ದಕ್ಕಿಂತ ಕಡಿಮೆ ಯಶಸ್ಸು ಪಡೆದಿದೆ ಎಂದು ಮಿಲ್ಟನ್ ಫ್ರೈಡ್‌ಮ್ಯಾನ್ 2003ರ ಜೂನ್ 7ರಂದು ಫೈನಾನ್ಸಿಯಲ್ ಟೈಮ್ಸ್ ಜತೆ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.[೮][೯][೧೦] ಆದ್ದರಿಂದ ವಿತ್ತೀಯ ನಿರ್ಧಾರಗಳು ಇಂದು ವಿಶಾಲ ವ್ಯಾಪ್ತಿಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಅವು ಯಾವುದೆಂದರೆ:
◾ಅಲ್ಪಾವಧಿ ಬಡ್ಡಿದರಗಳು;
◾ದೀರ್ಘಾವಧಿ ಬಡ್ಡಿದರಗಳು;
◾ಆರ್ಥಿಕತೆ ಮ‌ೂಲಕ ಹಣದ ಚಲಾವಣೆ ವೇಗ;
◾ವಿನಿಮಯ ದರಗಳು;
◾ಸಾಲದ ಗುಣಮಟ್ಟ;
◾ಸಾಲಪತ್ರಗಳು ಮತ್ತು ಷೇರುಗಳು (ಕಾರ್ಪೊರೇಟ್ ಮಾಲೀಕತ್ವ ಮತ್ತು ಋಣ);
◾ಸರ್ಕಾರ ವರ್ಸಸ್ ಖಾಸಗಿ ವಲಯ ವೆಚ್ಚ/ಉಳಿತಾಯಗಳು;
◾ದೊಡ್ಡ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಬಂಡವಾಳ ಹರಿವುಗಳು;
◾ವಿತ್ತೀಯ ಜನ್ಯಗಳಾದ ಆಯ್ಕೆ, ತೆರಿಗೆಯ ಮುನ್ನೋಟ, ಭವಿಷ್ಯದ ಗುತ್ತಿಗೆಗಳು ಮುಂತಾದವು.



ಚಿನ್ನದ ಪ್ರಮಿತಿಗೆ ಹಿಂದಿರುಗಬೇಕೆಂದು ಸಣ್ಣ ಗುಂಪಿಗೆ ಸೇರಿದ ಜನರು ಸಲಹೆ ಮಾಡಿದರು.(ಡಾಲರ್‌ಗೆ ಅಧಿಕೃತ ಕರೆನ್ಸಿ ಸ್ಥಾನಮಾನ ತೆಗೆಯುವುದು ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್ ಕೂಡ) ವಿತ್ತೀಯ ನೀತಿ ಅಪಾಯಗಳಿಂದ ತುಂಬಿದ್ದು, ವಿತ್ತೀಯ ನೀತಿ ವಿಫಲವಾದರೆ ಈ ಅಪಾಯಗಳಿಂದ ಜನಸಮುದಾಯಕ್ಕೆ ತೀಕ್ಷ್ಣ ಹಾನಿ ಉಂಟುಮಾಡುತ್ತದೆನ್ನುವುದು ಅವರ ಮ‌ೂಲಭೂತ ವಾದವಾಗಿತ್ತು. ಪ್ರಸಕ್ತ ವಿತ್ತೀಯ ನೀತಿ ಬಗ್ಗೆ ಇತರರು ಇನ್ನೊಂದು ಸಮಸ್ಯೆಯನ್ನು ಕಂಡುಕೊಂಡರು. ನಮ್ಮ ಹಣದ ಮೌಲ್ಯವನ್ನು ವ್ಯಾಖ್ಯಾನಿಸುವ ಬೌತಿಕತೆಯಿಲ್ಲ ಎನ್ನುವುದು ಅವರಿಗೆ ಸಮಸ್ಯೆಯಾಗಿರಲಿಲ್ಲ. ಆ ಹಣವನ್ನು ಸಾಲದ ಬದಲಿಗೆ ಗ್ರಾಹಕನಿಗೆ ಋಣವಾಗಿ ಆಂಶಿಕ ಮೀಸಲು ಎರವಲು ನೀಡುವುದರಿಂದ ಸಣ್ಣ ಭಾಗದ ಸಮಾಜ ಹೊರತುಪಡಿಸಿ ಎಲ್ಲರೂ(ಎಲ್ಲ ಸರ್ಕಾರಗಳೂ ಸೇರಿದಂತೆ) ನಿರಂತರ ಋಣದಲ್ಲಿ ಮುಳುಗುತ್ತವೆ ಎನ್ನುವುದು ಅವರ ಸಮಸ್ಯೆಯಾಗಿತ್ತು.

ವಾಸ್ತವವಾಗಿ ಅನೇಕ ಅರ್ಥಶಾಸ್ತ್ರಜ್ಞರು ಚಿನ್ನದ ಪ್ರಮಿತಿಗೆ ಹಿಂದಿರುಗುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಹಾಗೆ ಮಾಡುವುದರಿಂದ ತೀಕ್ಷ್ಣವಾಗಿ ಹಣದ ಪೂರೈಕೆಯನ್ನು ಸೀಮಿತಗೊಳಿಸುತ್ತದೆ ಮತ್ತು ವಿತ್ತೀಯ ನೀತಿಯಲ್ಲಿ 100 ವರ್ಷಗಳ ಪ್ರಗತಿಯನ್ನು ಅಳಿಸಿಹಾಕುತ್ತದೆಂದು ಅವರು ವಾದಿಸಿದರು. ಕೆಲವು ವೇಳೆ ಜಟಿಲ ಹಣಕಾಸು ವಹಿವಾಟುಗಳು ದೊಡ್ಡ ವ್ಯವಹಾರವನ್ನು(ವಿಶೇಷವಾಗಿ ಅಂತಾರಾಷ್ಟ್ರೀಯ ವ್ಯವಹಾರ)ಸುಲಭ ಮತ್ತು ಸುರಕ್ಷಿತಗೊಳಿಸಿದರೆ ಚಿನ್ನದ ಪ್ರಮಿತಿಯಿಂದ ವ್ಯವಹಾರ ಇನ್ನಷ್ಟು ಕಠಿಣವಾಗಬಹುದು ಅಥವಾ ಅಸಾಧ್ಯವಾಗಿಸಬಹುದು ಎಂದು ವಾದಿಸಿದರು. ಇದಲ್ಲದೇ, ಉಸ್ತುವಾರಿ ಮತ್ತು ಅಪಾಯವನ್ನು ಬಳಸಿಕೊಳ್ಳುವಲ್ಲಿ ಪರಿಣತಿ ಪಡೆದ ಜನರಿಗೆ/ಕಂಪೆನಿಗಳಿಗೆ ಅಪಾಯವನ್ನು ಹಸ್ತಾಂತರಿಸುವುದರಿಂದ, ಯಾವುದೇ ಹಣಕಾಸಿನ ಅಪಾಯವನ್ನು ಗೊತ್ತಿರುವ ಡಾಲರ್ ಮೊತ್ತಕ್ಕೆ ಪರಿವರ್ತಿಸಬಹುದು. ಆದ್ದರಿಂದ ವ್ಯವಹಾರದಲ್ಲಿ ಒಳಗೊಂಡ ಎಲ್ಲರಿಗೂ ಅದರ ಭವಿಷ್ಯ ತಿಳಿಯುತ್ತದೆ ಮತ್ತು ಹೆಚ್ಚು ಲಾಭದಾಯಕವಾಗಿರುತ್ತದೆ.



ಕೇಂದ್ರ ಬ್ಯಾಂಕಿಂಗ್‌ನಲ್ಲಿ ಪ್ರವೃತ್ತಿಗಳುಸಂಪಾದಿಸಿ
ಕೇಂದ್ರ ಬ್ಯಾಂಕ್ ವಿತ್ತೀಯ ನೆಲೆಗಟ್ಟಿನ ವಿಸ್ತರಣೆ ಅಥವಾ ಪರಿಮಿತಿಗೆ ಒಳಪಡಿಸುವ ಮ‌ೂಲಕ ಬಡ್ಡಿದರಗಳ ಮೇಲೆ ಪ್ರಭಾವ ಬೀರುತ್ತದೆ. ವಿತ್ತೀಯ ನೆಲೆಗಟ್ಟು ಚಲಾವಣೆಯಲ್ಲಿರುವ ಕರೆನ್ಸಿ ಮತ್ತು ಕೇಂದ್ರ ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟಿರುವ ಬ್ಯಾಂಕ್ ಮೀಸಲು ಹಣ ಹೊಂದಿವೆ. ಮುಕ್ತ ಪೇಟೆ ಕಾರ್ಯಾಚರಣೆಗಳು ಅಥವಾ ಸರ್ಕಾರದ ಹಳೆಯ ಸಾಲದ ಮಾರಾಟ ಅಥವಾ ಖರೀದಿ, ಅಥವಾ ಮೀಸಲು ಅಗತ್ಯಗಳ ಬದಲಾವಣೆ ಮ‌ೂಲಕ ಕೇಂದ್ರ ಬ್ಯಾಂಕ್ ವಿತ್ತೀಯ ನೆಲೆಗಟ್ಟಿನ ಮೇಲೆ ಪ್ರಭಾವ ಬೀರುವ ಮುಖ್ಯ ದಾರಿಯಾಗಿದೆ. ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಕುಂಠಿತಗೊಳಿಸಲು ಬಯಸಿದ್ದರೆ, ಅದು ಸರ್ಕಾರದ ಋಣಪತ್ರಗಳನ್ನು ಖರೀದಿಸುವ ಮ‌ೂಲಕ ಚಲಾವಣೆಯಲ್ಲಿರುವ ನಗದಿನ ಮೊತ್ತವನ್ನು ಹೆಚ್ಚಿಸುತ್ತದೆ ಅಥವಾ ಬ್ಯಾಂಕುಗಳ ಮೀಸಲು ಖಾತೆಗಳಿಗೆ ಸಾಲ ನೀಡುತ್ತವೆ. ಪರ್ಯಾಯವಾಗಿ ರಿಯಾಯಿತಿಗಳು ಅಥವಾ ಓವರ್‌ಡ್ರಾಫ್ಟ್(ಕೇಂದ್ರ ಬ್ಯಾಂಕ್ ನಮ‌ೂದಿಸಿದ ಸೂಕ್ತ ಜಾಮೀನಿನ ಮೇಲೆ ಬ್ಯಾಂಕುಗಳಿಗೆ ಸಾಲ)ಮೇಲೆ ಬಡ್ಡಿದರಗಳನ್ನು ಅದು ತಗ್ಗಿಸಬಹುದು.
 ಅಂತಹ ವ್ಯವಹಾರಗಳ ಮೇಲೆ ಬಡ್ಡಿದರ ಸಾಕಷ್ಟು ಕಡಿಮೆಯಿದ್ದರೆ,ಮೀಸಲು ಅಗತ್ಯಗಳನ್ನು ಪೂರೈಸಲು ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕ್‌ನಿಂದ ಸಾಲ ಪಡೆಯಬಹುದು ಮತ್ತು ಹೆಚ್ಚುವರಿ ದ್ರವ್ಯತೆಯನ್ನು ತಮ್ಮ ಆಯವ್ಯಯ ಶಿಲ್ಕನ್ನು ವಿಸ್ತರಿಸಲು ಬಳಸುವ ಮ‌ೂಲಕ ಆರ್ಥಿಕತೆಗೆ ಸಾಲದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಮೀಸಲು ಅಗತ್ಯಗಳನ್ನು ತಗ್ಗಿಸುವುದರಿಂದ ಇದೇ ರೀತಿಯ ಪರಿಣಾಮ ಬೀರುತ್ತದೆ.ಸಾಲಗಳ ವಿತರಣೆ ಹೆಚ್ಚಿಸಲು ಅಥವಾ ಲಾಭದಾಯಕ ಆಸ್ತಿಗಳ ಖರೀದಿ ಸಲುವಾಗಿ ಬ್ಯಾಂಕುಗಳಿಗೆ ನಿಧಿ ಪೂರೈಸುತ್ತದೆ.


ವಿನಿಮಯ ದರ ಬದಲಾಗುವ ಸ್ಥಿತಿಯಲ್ಲಿದ್ದರೆ ಕೇಂದ್ರ ಬ್ಯಾಂಕ್‌ಗೆ ನಿಜವಾದ ಸ್ವತಂತ್ರ ವಿತ್ತೀಯ ನೀತಿ ನಿರ್ವಹಣೆ ಸಾಧ್ಯವಾಗುತ್ತದೆ.[೧೧] ವಿನಿಮಯ ದರ ಸಮರೂಪವಾಗಿದ್ದರೆ ಅಥವಾ ಯಾವುದೇ ರೀತಿಯಲ್ಲಿ ನಿರ್ವಹಿಸಲ್ಪಟ್ಟರೆ,ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಬೇಕು ಅಥವಾ ಮಾರಬೇಕಾಗುತ್ತದೆ. ವಿದೇಶಿ ವಿನಿಮಯದಲ್ಲಿ ಈ ವಹಿವಾಟುಗಳಿಂದ ವಿತ್ತೀಯ ನೆಲೆಗಟ್ಟಿನ ಮೇಲೆ ಪ್ರಭಾವ ಬೀರಿ ಮುಕ್ತ ಪೇಟೆ ಖರೀದಿಗಳು ಮತ್ತು ಸರ್ಕಾರಿ ಋಣಪತ್ರಗಳ ಮಾರಾಟಗಳಿಗೆ ದಾರಿಕಲ್ಪಿಸುತ್ತದೆ; ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಿದರೆ, ವಿತ್ತೀಯ ನೆಲೆಗಟ್ಟು ವಿಸ್ತರಣೆಯಾಗುತ್ತದೆ ಮತ್ತು ವಿತ್ತೀಯ ನೆಲೆಗಟ್ಟು ವಿಸ್ತರಣೆಯಾದರೆ ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸುತ್ತದೆ. ಆದರೆ ಶುದ್ಧ ಬದಲಾಗುವ ವಿನಿಮಯ ದರದ ಪ್ರಕರಣದಲ್ಲಿ ಕೂಡ,ಬಂಡವಾಳ ಚಲನಶೀಲವಾಗಿರುವ ಜಗತ್ತಿನಲ್ಲಿ ಕೇಂದ್ರ ಬ್ಯಾಂಕುಗಳು ಮತ್ತು ವಿತ್ತೀಯ ಅಧಿಕಾರವರ್ಗ "ಗಾಳಿ ಬಂದ ಕಡೆ ವಾಲುವುದು ಸಾಧ್ಯ".

ಇದೇ ಪ್ರಕಾರವಾಗಿ,ವಿನಿಮಯ ದರದ ನಿರ್ವಹಣೆಯು ದೇಶೀಯ ವಿತ್ತೀಯ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುತ್ತದೆ. ಕೇಂದ್ರ ಬ್ಯಾಂಕ್ ತನ್ನ ವಿತ್ತೀಯ ನೀತಿಯನ್ನು ಕಾಯ್ದುಕೊಳ್ಳಲು,ವಿದೇಶಿ ವಿನಿಮಯ ನಿರ್ವಹಣೆಗಳನ್ನು ಹದ್ದುಬಸ್ತಿಗೆ ತರಬೇಕು ಅಥವಾ ವ್ಯತಿರಿಕ್ತ ಪ್ರಭಾವ ತಗ್ಗಿಸಬೇಕು. ಉದಾಹರಣೆಗೆ, ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಿದರೆ(ವಿದೇಶಿ ವಿನಿಮಯ ಮೌಲ್ಯಕ್ಕೆ ಪ್ರತಿಯಾಗಿ)ಮ‌ೂಲ ಹಣವು ವರ್ಧಿಸುತ್ತದೆ. ಆದ್ದರಿಂದ ಆ ಹೆಚ್ಚಳದ ಪ್ರಭಾವ ತಗ್ಗಿಸಲು ಕೇಂದ್ರ ಬ್ಯಾಂಕ್ ಸರ್ಕಾರದ ಋಣಪತ್ರಗಳನ್ನು ಮಾರಿ ವಿತ್ತೀಯ ನೆಲೆಗಟ್ಟನ್ನು ಸಮಾನ ಮೊತ್ತದಲ್ಲಿ ಇರಿಸಬೇಕು. ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ದ ಚಟುವಟಿಕೆಯಿಂದ ವಿದೇಶಿ ವಿನಿಮಯ ಕೂಡ ನಿರ್ವಹಿಸುವ ಕೇಂದ್ರ ಬ್ಯಾಂಕ್ ದೇಶೀಯ ವಿನಿಮಯ ನೀತಿಯ ಮೇಲೆ ನಿಯಂತ್ರಣ ಕಳೆದುಕೊಳ್ಳಬಹುದು.

ಅನೇಕ ಮಂದಿ ಅರ್ಥಶಾಸ್ತ್ರಜ್ಞರು 1980ರ ದಶಕದಲ್ಲಿ ಗರಿಷ್ಠ ವಿತ್ತೀಯ ನೀತಿಯ ಖಾತರಿಗೆ ರಾಷ್ಟ್ರದ ಕೇಂದ್ರ ಬ್ಯಾಂಕ್ ಉಳಿದ ಸರ್ಕಾರದ ಕಾರ್ಯಾಂಗದಿಂದ ಪ್ರತ್ಯೇಕವಾಗಿ ವ್ಯವಹರಿಸುವುದು ಉತ್ತಮ ಮಾರ್ಗವೆಂದು ನಂಬಿದ್ದರು. ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡದ ಕೆಲವು ಕೇಂದ್ರಬ್ಯಾಂಕುಗಳು ಸ್ವಾತಂತ್ರ್ಯ ಗಳಿಸಲು ಆರಂಭಿಸಿದವು. ಪ್ರಸಕ್ತ ಸರ್ಕಾರದ ಮರುಆಯ್ಕೆ ಸೇರಿದಂತೆ ರಾಜಕೀಯ ಗುರಿಗಳ ಮೇಲೆ ಪ್ರಭಾವ ಬೀರಲು ವಿತ್ತೀಯ ನೀತಿಗಳ ಸಾಧನಗಳನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು.
ವಿತ್ತೀಯನೀತಿ ನಿರ್ವಹಿಸುವ ಸದಸ್ಯರು ಸುದೀರ್ಘ,ಸ್ಥಿರ ಕಾಲಾವಧಿಯನ್ನು ಹೊಂದಿರಬೇಕೆನ್ನುವುದು ಸ್ವಾತಂತ್ರ್ಯದ ಸಾಂಕೇತಿಕ ಅರ್ಥ. ಇದು ಒಂದು ರೀತಿಯ ಸೀಮಿತ ಸ್ವಾತಂತ್ರ್ಯವೆನ್ನುವುದು ಸುಸ್ಪಷ್ಟ.



ವಿತ್ತೀಯ ನೀತಿಯ ಪ್ರಕ್ರಿಯೆಯಲ್ಲದಿದ್ದರೂ ಫಲಿತಾಂಶಗಳನ್ನು ಹೆಚ್ಚು ಪಾರದರ್ಶಕವಾಗಿಸಲು 1990ರ ದಶಕದಲ್ಲಿ, ಔಪಚಾರಿಕ ಸಾರ್ವಜನಿಕ ಹಣದುಬ್ಬರ ಗುರಿಗಳನ್ನು ಕೇಂದ್ರ ಬ್ಯಾಂಕುಗಳು ಅಳವಡಿಸಿಕೊಂಡವು. ಬೇರೆ ರೀತಿಯಲ್ಲಿ ಹೇಳುವುದಾದರೆ, ಗೊತ್ತಾದ ವರ್ಷದಲ್ಲಿ ಕೇಂದ್ರ ಬ್ಯಾಂಕ್ 2% ಹಣದುಬ್ಬರದ ಗುರಿಯನ್ನು ಹೊಂದಿದ್ದಾಗ, ಹಣದುಬ್ಬರ 5%ಗೆ ತಿರುಗಿದರೆ, ಕೇಂದ್ರ ಬ್ಯಾಂಕ್ ಅದಕ್ಕೆ ವಿವರಣೆಯನ್ನು ಸಾಂಕೇತಿಕವಾಗಿ ನೀಡಬೇಕಾಗುತ್ತದೆ.



ಬ್ಯಾಂಕ್ ಆಫ್ ಇಂಗ್ಲೆಂಡ್ ಇವೆರಡೂ ಪ್ರವತ್ತಿಗಳಿಗೆ ನಿದರ್ಶನವಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಕಾಯ್ದೆ 1998ರ ಮ‌ೂಲಕ ಸರ್ಕಾರದಿಂದ ಸ್ವತಂತ್ರವಾಗಿ 2.5% RPI (ಈಗ 2% of CPI)ಅಳವಡಿಸಿಕೊಂಡಿತು.

ವಿತ್ತೀಯ ನೀತಿ ವ್ಯವಹಾರ ಆವರ್ತಗಳನ್ನು ಸುಗಮಗೊಳಿಸುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಕೀನ್ಸಿಯನ್ ಆರ್ಥಿಕತೆಯ ಮುಖ್ಯ ಕಲ್ಪನೆ ಕೇಂದ್ರ ಬ್ಯಾಂಕ್ ಅಲ್ಪಾವಧಿಯಲ್ಲಿ ಒಟ್ಟು ಬೇಡಿಕೆಯನ್ನು ಉತ್ತೇಜಿಸಬಹುದೆನ್ನುವುದು. ಏಕೆಂದರೆ,ಅಲ್ಪಾವಧಿಯಲ್ಲಿ ಆರ್ಥಿಕತೆಯಲ್ಲಿ ಗಣನೀಯ ಸಂಖ್ಯೆಯ ದರಗಳು ಸ್ಥಿರವಾಗಿರುತ್ತದೆ ಮತ್ತು ಸಂಸ್ಥೆಗಳು ಬೇಡಿಕೆಯಿರುವಷ್ಟು ಸರಕುಗಳನ್ನು ಉತ್ಪಾದಿಸಿ, ಸೇವೆಗಳನ್ನು ನೀಡಬಹುದು.(ಆದಾಗ್ಯೂ, ದೀರ್ಘಾವಧಿಯಲ್ಲಿನಿಯೋಕ್ಲಾಸಿಕಲ್ ಮಾದರಿಯ ರೀತಿ ಹಣವು ತಟಸ್ಥವಾಗಿರುತ್ತದೆ). ಫ್ರೆಡರಿಕ್ ವಾನ್ ಹಾಯೇಕ್ ಮತ್ತು ಲುಡ್ವಿಗ್ ವಾನ್ ಮಿಸಸ್ ವಾದಗಳು ಸೇರಿರುವ ಆಸ್ಟ್ರಿಯನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕೂಡ ಇದೆ. ಆದರೆ ಈ ವಿಷಯದ ಬಗ್ಗೆ ಬಹುತೇಕ ಅರ್ಥಶಾಸ್ತ್ರಜ್ಞರು ಕೀನ್ಸಿಯನ್ ಅಥವಾ ನಿಯೋಕ್ಲಾಸಿಕಲ್ ವರ್ಗಗಳಿಗೆ ಸೇರಿದ್ದಾರೆ.



ಅಭಿವೃದ್ಧಿಶೀಲ ರಾಷ್ಟ್ರಗಳುಸಂಪಾದಿಸಿ
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪರಿಣಾಮಕಾರಿ ನಿರ್ವಹಣೆಯ ವಿತ್ತೀಯ ನೀತಿ ಸ್ಥಾಪನೆಯಲ್ಲಿ ಸಮಸ್ಯೆಗಳಿರಬಹುದು. ಕೆಲವೇ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು ಸರ್ಕಾರಿ ಸಾಲದಲ್ಲಿ ಆಳವಾದ ಮಾರುಕಟ್ಟೆಗಳನ್ನು ಹೊಂದಿರುವುದು ಮುಖ್ಯ ತೊಂದರೆಯಾಗಿದೆ.
ವಿತ್ತೀಯ ನೆಲೆಯನ್ನು ತ್ವರಿತಗತಿಯಲ್ಲಿ ವಿಸ್ತರಿಸುವ ಮ‌ೂಲಕ ಹಣದುಬ್ಬರ ತೆರಿಗೆಯನ್ನು ಹೇರುವುದಕ್ಕಾಗಿ ಹಣದ ಬೇಡಿಕೆ ಮತ್ತು ಖಜಾನೆ ಒತ್ತಡವನ್ನು ಮುಂಗಾಣಲು ಇರುವ ಕಷ್ಟಗಳಿಂದ ಈ ವಿಷಯ ಮತ್ತಷ್ಟು ಜಟಿಲಗೊಂಡಿತು.
ಸಾಮಾನ್ಯವಾಗಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ವಿತ್ತೀಯ ನೀತಿ ನಿರ್ವಹಣೆಯಲ್ಲಿ ಕೇಂದ್ರ ಬ್ಯಾಂಕುಗಳು ಕಳಪೆ ದಾಖಲೆಗಳನ್ನು ಹೊಂದಿದ್ದವು. ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ವಿತ್ತೀಯ ಅಧಿಕಾರವು ಸರ್ಕಾರದಿಂದ ಮುಕ್ತ ನಿರ್ವಹಣೆ ಇರಲಿಲ್ಲ. ಆದ್ದರಿಂದ ಸರ್ಕಾರದ ರಾಜಕೀಯ ಇಚ್ಛೆಗಳಿಂದ ಅಥವಾ ಇತರೆ ವಿತ್ತೀಯೇತರ ಗುರಿಗಳ ಅನುಸರಣೆಯಿಂದ ವಿತ್ತೀಯ ನೀತಿ ಹಿಂಭಾಗದ ಸ್ಥಾನಕ್ಕೆ ಸರಿದವು. ಇದು ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ,ವಿಶ್ವಾಸಾರ್ಹ ವಿತ್ತೀಯ ನೀತಿ ಸ್ಥಾಪಿಸಲು ಇಚ್ಛಿಸುವ ಅಭಿವೃದ್ಧಿಶೀಲ ರಾಷ್ಟ್ರಗಳು ಕರೆನ್ಸಿ ಮಂಡಳಿ ಸ್ಥಾಪಿಸಬಹುದು ಅಥವಾ ಡಾಲರೀಕರಣ(ದೇಶೀಯ ಹಣಕ್ಕೆ ಬದಲಿಯಾಗಿ ಅಥವಾ ಸಮಾನಾಂತರವಾಗಿ ವಿದೇಶಿ ಕರೆನ್ಸಿ) ಮಾಡಬಹುದು. ಇಂತಹ ಸ್ವರೂಪದ ವಿತ್ತೀಯ ಸಂಸ್ಥೆಗಳು ಹಸ್ತಕ್ಷೇಪದಿಂದ ಸರ್ಕಾರದ ಕೈಗಳನ್ನು ಕಟ್ಟುತ್ತವೆ ಮತ್ತು ಇಂತಹ ನೀತಿಗಳು ನಿರೂಪಕ ರಾಷ್ಟ್ರದ ನೀತಿಯನ್ನು ಬಿಂಬಿಸುತ್ತವೆ.


ಹಣಕಾಸು ಮಾರುಕಟ್ಟೆಗಳ ಉದಾರೀಕರಣ ಮತ್ತು ಸುಧಾರಣೆ ಮಾಡುವ ಇತ್ತೀಚಿನ ಪ್ರಯತ್ನಗಳು(ವಿಶೇಷವಾಗಿ ನೈಜೀರಿಯ ಮತ್ತಿತರ ಕಡೆ ಬ್ಯಾಂಕುಗಳು ಮತ್ತಿತರ ಸಂಸ್ಥೆಗಳ ಮರುಬಂಡವಾಳೀಕರಣ)ಪ್ರಸ್ತುತ ಕೇಂದ್ರ ಬ್ಯಾಂಕುಗಳಿಂದ ವಿತ್ತೀಯ ನೀತಿ ಚೌಕಟ್ಟುಗಳನ್ನು ಅನುಷ್ಠಾನಕ್ಕೆ ತರುವ ಮುಕ್ತ ಅವಕಾಶವನ್ನು ಕ್ರಮೇಣ ಒದಗಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ