ಭಾನುವಾರ, ಏಪ್ರಿಲ್ 30, 2017

ಬಲೂಚಿಸ್ತಾನ ಗುಲಾಮಗಿರಿ

ಬಲೂಚಿಸ್ತಾನ್ ಜನತೆ ಯಾವತ್ತೂ ಭಾರತದ ಗುಲಾಮರಾಗುವುದಿಲ್ಲ: ಬಲೂಚಿಸ್ತಾನ್ ಸಿಎಂ

ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ಥಾನ ಪ್ರಾಂತ್ಯದ ಜನತೆ ಭಾರತದ "ಗುಲಾಮರಾಗಲು ಎಂದಿಗೂ ಒಪ್ಪುವುದಿಲ್ಲ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ಹೇಳಿದ್ದಾರೆ. 

ಬಲೂಚಿಸ್ತಾನದ ಅಂಜೇರಾ ಕಾಲತ್ ಪ್ರದೇಶದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ, ಬಲೂಚಿಸ್ತಾನ ಜನತೆ ಸಹೋದರರಂತೆ ಪಾಕಿಸ್ತಾನದಲ್ಲಿಯೇ ಜೀವನ ಸಾಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಶತ್ರುಗಳ ಅಜೆಂಡಾವನ್ನು ಪ್ರಚಾರ ಮಾಡುತ್ತಿರುವ ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ತಾನ್ ಜನತೆ "ಭಾರತದ ಗುಲಾಮರಾಗುವುದಿಲ್ಲ. ವಿದೇಶದಲ್ಲಿ ಕುಳಿತಿರುವ ಕೆಲ ವಿಚ್ಚಿದ್ರಕಾರಿ ಶಕ್ತಿಗಳು, ತಮ್ಮ ಮಹಾಪಾತಕದ ಕೃತ್ಯಗಳಿಗಾಗಿ ನಮ್ಮ ಯುವಕರನ್ನು ಬಳಸಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.

ಸಾಮಾಜಿಕ ಮಾಧ್ಯಮ ವಿಮೋಚನೆಗೆ ಮಾನದಂಡವಲ್ಲ. ವಾಸ್ತವವಾಗಿ, ಬಲೊಚ್ ಜನರು ಶ್ರೀಮಂತ ಮತ್ತು ಶಾಂತಿಯುತ ಬಯಸುತ್ತಾರೆ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ ತಿಳಿಸಿದ್ದಾರೆ.

ವಿಶ್ವದ ದೈತ್ಯ ಗಾತ್ರದ ಮೊಲ ವಿಧಿವಶ

ವಿಶ್ವದ ದೈತ್ಯ ಗಾತ್ರದ ಮೊಲ ವಿಧಿವಶ

  ಲಂಡನ್, ಎ.27: ವಿಶ್ವದ ದೈತ್ಯಗಾತ್ರದ ಮೊಲವೊಂದು ಅಮೆರಿಕ ಏರ್‌ಲೈನ್ಸ್‌ಗೆ ಸೇರಿದ ಚಿಕಾಗೊದಲ್ಲಿರುವ ಪ್ರಾಣಿ ಪಾಲನಾ ಕೇಂದ್ರದಲ್ಲಿ ಸಾವನ್ನಪ್ಪಿದೆ. ಇತ್ತೀಚೆಗಷ್ಟೇ ಪ್ರಯಾಣಿಕರೊಬ್ಬರನ್ನು ಆಸನದಿಂದ ಹೊರಗೆಳೆದು ಅವಮಾನಿಸಿದ್ದ ಅಮೆರಿಕದ ಏರ್‌ಲೈನ್ಸ್ ಈಗ ಮತ್ತೊಂದು ಮುಜುಗರ ಅನುಭವಿಸಿದೆ.

10 ತಿಂಗಳ ಪ್ರಾಯದ ವಿಶೇಷ ತಳಿಗೆ ಸೇರಿದ ಮೂರು ಅಡಿ ಉದ್ದದ ಸಿಮೊನ್ ಹೆಸರಿನ ಈ ದೊಡ್ಡ ಗಾತ್ರದ ಮೊಲವನ್ನು ಲಂಡನ್‌ನಿಂದ ಅಮೆರಿಕಕ್ಕೆ ವಿಮಾನದ ಮೂಲಕ ಕರೆ ತರಲಾಗಿತ್ತು. ವಿಮಾನದಲ್ಲಿ ಪ್ರಯಾಣಿಸುವ ಮೂರು ಗಂಟೆ ಮೊದಲು ಮೊಲದ ಆರೋಗ್ಯವನ್ನು ಪರೀಕ್ಷಿಸಲಾಗಿತ್ತು. ಚಿಕಾಗೊ ಏರ್‌ಪೋರ್ಟ್‌ಗೆ ಸೇರಿದ ಪ್ರಾಣಿ ಪಾಲನಾ ಕೇಂದ್ರಕ್ಕೆ ಕರೆ ಬಂದಾಗ ಮೊಲದ ಆರೋಗ್ಯದ ಸ್ಥಿತಿ ಚೆನ್ನಾಗಿತ್ತು. ಆದರೆ, ಕೆಲವೇ ಸಮಯದ ಬಳಿಕ ಅದು ಸಾವನ್ನಪ್ಪಿದೆ. ಸಿಮೊನ್ ಹೆಸರಿನ ಈ ಮೊಲ ಸೆಲೆಬ್ರಿಟಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

‘‘ಇಂತಹ ಘಟನೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಇದು ತುಂಬಾ ಬೇಸರದ ವಿಷಯ. ನಮ್ಮ ಕೇರ್ ಸೆಂಟರ್‌ನಲ್ಲಿ ಪ್ರಾಣಿಯೊಂದು ಸಾವನ್ನಪ್ಪಿರುವುದು ತುಂಬಾ ದುಃಖ ತಂದಿದೆ’’ ಎಂದು ಏರ್‌ಲೈನ್ ವಕ್ತಾರರಾದ ಹೊಬರ್ಟ್ ಹೇಳಿದ್ದಾರೆ.

‘‘ಮೊಲ ಸಾಯಲು ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಮೊಲದ ಸಾವಿಗೆ ಕಾರಣವೇನೆಂದು ಪತ್ತೆಹಚ್ಚಲು ಪೋಸ್ಟ್ ಮಾರ್ಟಂ ನಡೆಸಲಾಗುವುದು. ಮೊಲದ ಮಾಲಕರಿಗೆ ಪರಿಹಾರವನ್ನು ನೀಡಲಾಗುವುದು’’ಎಂದು ಹೊಬರ್ಟ್ ತಿಳಿಸಿದ್ದಾರೆ.

ಈ ಘಟನೆಯು ಎ.20 ರಂದು ನಡೆದಿದ್ದು, ‘ದಿ ಸನ್’ ನ್ಯೂಸ್ ಪೇಪರ್ ಬುಧವಾರ ಮೊದಲ ಬಾರಿ ವರದಿ ಮಾಡಿತ್ತು. ‘‘ನಾನು ಮೊಲಗಳನ್ನು ವಿಶ್ವದೆಲ್ಲೆಡೆ ಕೊಂಡೊಯ್ದಿದ್ದೇನೆ. ಈರೀತಿ ಈತನಕ ನಡೆದಿಲ್ಲ. ಸಿಮೊನ್ ಹೆಸರಿನ ಮೊಲವನ್ನು ಖರೀದಿಸಿದ ವ್ಯಕ್ತಿ ತುಂಬಾ ಪ್ರಸಿದ್ಧರಾಗಿದ್ದರು’’ ಎಂದು ಎಡ್ವರ್ಡ್ ಹೇಳಿದ್ದಾರೆ.

ಈ ತಿಂಗಳಾರಂಭದಲ್ಲಿ ಅಮೆರಿಕದ ಪ್ರಯಾಣಿಕ ಡಾ. ಡೇವಿಡ್‌ರೊಂದಿಗೆ ಅಮೆರಿಕದ ಏರ್‌ಲೈನ್ಸ್‌ಗೆ ಸೇರಿದ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿತ್ತು. ವಿಮಾನದ ಸಿಬ್ಬಂದಿಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಪ್ರಯಾಣಿಕ ಡೇವಿಡ್‌ರನ್ನು ಸೀಟಿನಿಂದ ಎಬ್ಬಿಸಲಾಗಿತ್ತು.

ಅಪ್ಘಾನ್ ಹಿಂಸೆಗೆ ಮಕ್ಕಳು ಬಲಿ

ಅಫ್ಘಾನ್ ಹಿಂಸೆಗೆ ಮಕ್ಕಳು ಬಲಿ: ವಿಶ್ವಸಂಸ್ಥೆ

ಕಾಬೂಲ್, ಎ. 27: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಭೀಕರ ಹಿಂಸಾಚಾರದಲ್ಲಿ 2017ರ ಮೊದಲ ಮೂರು ತಿಂಗಳಲ್ಲಿ ಬಲಿಯಾದ ನಾಗರಿಕರ ಪೈಕಿ ಮೂರನೆ ಒಂದು ಭಾಗ ಮಕ್ಕಳು ಎಂದು ವಿಶ್ವಸಂಸ್ಥೆಯ ಸಹಾಯಕ ಅಫ್ಘಾನ್ ಕಚೇರಿಯ ವರದಿಯೊಂದು ಗುರುವಾರ ಹೇಳಿದೆ.

ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ 210 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 525 ಮಂದಿ ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ ಸಂಬಂಧಿಸಿದ ನಾಗರಿಕರ ಒಟ್ಟು ಸಾವಿನ ಸಂಖ್ಯೆ 715 ಮತ್ತು ಗಾಯಗೊಂಡವರು 1,466.ಕಳೆದ ವರ್ಷ ಇದೇ ಅವಧಿಯಲ್ಲಿ ನಡೆದ ಮಕ್ಕಳ ಸಾವಿಗೆ ಹೋಲಿಸಿದರೆ ಈ ಬಾರಿಯ ಸಾವಿನ ಪ್ರಮಾಣ 17 ಶೇಕಡದಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಸಾವಿನ ಸಂಖ್ಯೆಯಲ್ಲಿ 4 ಶೇ. ಇಳಿಕೆಯಾಗಿದೆ.

ಟೈಮ್ ಪ್ರಭಾವಿ ನಾಯಕರ ಆಯ್ಕೆ ಮೋದಿ ಶೂನ್ಯಸಾಧನೆ

ಟೈಮ್‌ ಪ್ರಭಾವಿ ನಾಯಕರ ಆಯ್ಕೆ; ಮೋದಿ ಶೂನ್ಯಸಾಧನೆ

ನ್ಯೂಯಾರ್ಕ್‌: "ಜಗತ್ತಿನ 100 ಮಂದಿ ಪ್ರಭಾವಿ ವ್ಯಕ್ತಿಗಳ ಆಯ್ಕೆ' ಗಾಗಿ ಅಮೆರಿಕದ ಟೈಮ್‌ ನಿಯತಕಾಲಿಕೆ ನಡೆಸುವ ಓದುಗರ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೂನ್ಯ ಸಾಧನೆ ಮಾಡಿದ್ದಾರೆ! ಭಾನುವಾರ ರಾತ್ರಿ ಮತದಾನ ಮುಕ್ತಾಯವಾಗಿದ್ದು, ಮೋದಿ ಅವರಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಕಳೆದ ವರ್ಷದ ಟೈಮ್‌ 100 ಪಟ್ಟಿಯಲ್ಲಿ ಪೈಪೋಟಿಯಲ್ಲಿದ್ದ ಮೋದಿ, 2015ರಲ್ಲಿ ಜಗತ್ತಿನ 100 ಮಂದಿ ಪ್ರಭಾವಿಗಳ ಪೈಕಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇತ್ತೀಚೆಗಷ್ಟೇ, ಇನ್‌ಸ್ಟಾಗ್ರಾಂನಲ್ಲಿ ಅತಿ ಜನಪ್ರಿಯ ವಿಶ್ವನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಆದರೆ, ಈ ಬಾರಿ 100 ಪ್ರಭಾವಿಗಳಿಗಾಗಿ ನಡೆದ ಮತದಾನದಲ್ಲಿ ಮೋದಿಗೆ ಮತಗಳೇ ಬಿದ್ದಿಲ್ಲ. ಇವರ ಜತೆಗೆ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳಾÉ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರಿ ಇವಾಂಕಾ ಕೂಡ ಶೂನ್ಯ ಸಾಧನೆ ಮಾಡಿದ್ದಾರೆ.
ಟ್ರಂಪ್‌ ಶೇ.2ರಷ್ಟು ಮತ ಪಡೆದರೆ, ಫಿಲಿಪ್ಪೀನ್ಸ್‌ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್‌ ಅತಿ ಹೆಚ್ಚು ಮತ ಗಳಿಸುವ ಮೂಲಕ ಜಗತ್ತಿನ ಪ್ರಭಾವಿ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬ್ರಿಟನ್ನಲ್ಲಿ ಜೂ.8ಕ್ಕೆ ಸಾರ್ವತ್ರಿಕ ಚುನಾವಣೆ

ಬ್ರಿಟನ್‌ನಲ್ಲಿ ಜೂ.8ಕ್ಕೆ ಸಾರ್ವತ್ರಿಕ ಚುನಾವಣೆ

ಲಂಡನ್‌:  ಅಚ್ಚರಿಯ ನಡೆಯೊಂದರಲ್ಲಿ ಬ್ರಿಟನ್‌ನಲ್ಲಿ ಅವಧಿಪೂರ್ವ ಚುನಾವಣೆಯನ್ನು ಪ್ರಧಾನಿ ಥೆರೇಸಾ ಮೇ ಘೋಷಿಸಿದ್ದಾರೆ. ಈ ಹಿಂದೆ 2020ರ ಮೊದಲು ಚುನಾವಣೆ ಘೋಷಣೆಯನ್ನು ಥೆರೇಸಾ ನಿರಾಕರಿಸುತ್ತಲೇ ಬಂದಿದ್ದರು. ಸದ್ಯ ಅವಧಿ ಪೂರ್ವ ಚುನಾವಣೆಯ ಘೋಷಣೆ ಮಿತ್ರಪಕ್ಷಗಳಲ್ಲಿ, ಪ್ರತಿಪಕ್ಷಗಳಲ್ಲಿ ಅಚ್ಚರಿ ಉಂಟುಮಾಡಿದೆ. ಐರೋಪ್ಯ ಒಕ್ಕೂಟದಿಂದ ಹೊರ ಬರುವ "ಬ್ರೆಕ್ಸಿಟ್‌'  ಜಾರಿಗೆ ತರುವ ನಿಟ್ಟಿನಲ್ಲಿ ಥೆರೇಸಾ ಈ ಕ್ರಮ ಕೈಗೊಂಡಿದ್ದಾರೆ.
ಸದ್ಯ ಮೇ ಅವರ ಘೋಷಣೆ ಜಾರಿಗೆ ಬರಬೇಕಾದರೆ ಬ್ರಿಟನ್‌ನ ಕೆಳಮನೆ, ಹೌಸ್‌ ಆಫ್ ಕಾಮನ್ಸ್‌ನಲ್ಲಿ ಈ ಪ್ರಸ್ತಾವನೆ ಅಂಗೀಕಾರಗೊಳ್ಳಬೇಕಿದೆ. ಇದು ಬುಧವಾರವೇ ಮಂಡನೆಯಾಗುವ ನಿರೀಕ್ಷೆ ಇದೆ. ಚುನಾವಣೆ ಪ್ರಸ್ತಾಪಕ್ಕೆ ಜಯ ಸಿಗಬೇಕಾದಲ್ಲಿ 650 ಸಂಸದರಲ್ಲಿ 434 ಮಂದಿ ಸಂಸದರು ಪರವಾಗಿ ಮತ ಚಲಾಯಿಸಬೇಕಾಗುತ್ತದೆ.
ಬ್ರಿಟನ್‌ ಪ್ರಧಾನಿ ಮಾತನಾಡಿ ಪ್ರತಿಪಕ್ಷಗಳು  ಬ್ರೆಕ್ಸಿಟ್‌ ಕುರಿತ ನಮ್ಮ ನಡೆಯನ್ನು ಆಲೋಚನೆಯನ್ನು ಟೀಕಿಸಿವೆ ಮತ್ತು ಸವಾಲು ಹಾಕಿದೆ.
ಈ ಸಂದರ್ಭ ನಿಮಗೆ ನಮ್ಮ ನಡೆ ಯನ್ನು ತಡೆಯಲು ನಿಮಗೆ ಅವಕಾಶವಿದೆ ಎಂದಿದ್ದಾರೆ.

ಮ್ಯಾನ್ಮಾರ್ ಜಲ ಉತ್ಸವ ದುರಂತ

ಮ್ಯಾನ್ಮಾರ್ ಜಲ ಉತ್ಸವ ದುರಂತದಲ್ಲಿ ಸತ್ತವರ ಸಂಖ್ಯೆ 320ಕ್ಕೇರಿಕೆ

ಯಾಂಗನ್ (ಮ್ಯಾನ್ಮಾರ್), ಏ.19-ಮ್ಯಾನ್ಮಾರ್ ದೇಶಾದ್ಯಂತ ನಡೆದ ನಾಲ್ಕು ದಿನಗಳ ತಿಂಗ್ಯಾನ್ ಜಲ ಉತ್ಸವ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 320ಕ್ಕೇರಿದೆ. 1,000ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.  ಮ್ಯಾನ್ಮಾರ್‍ನ ವಿವಿಧ ಪ್ರಾಂತ್ಯಗಳಲ್ಲಿ ಜಲ ಉತ್ಸವದ ವೇಳೆ ಸಂಭವಿಸಿದ ವಿವಿಧ ದುರಂತಗಳಲ್ಲಿ ಸಾವು-ನೋವು ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮರಣದ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷವನ್ನು ಸ್ವಾಗತಿಸುವ ಜಲ ಯುದ್ಧದ ವೇಳೆ ನಡೆದ ಕೊಲೆ, ಇರಿತ, ದರೋಡೆ, ಕಳ್ಳತನ, ಮಾದಕ ವಸ್ತು ಬಳಕೆ ಮತ್ತು ಗುಂಪು ಘರ್ಷಣೆ ಸಂಬಂಧ 1,200ಕ್ಕೂ ಅಧಿಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
  ಮ್ಯಾನ್ಮಾರ್‍ನ ನೈಪಿ ತಾಪ್, ಯಾಂಗನ್, ಮಾಂಡೇಲಿಯ, ಸೈಗಂಗ್, ತನಿಂತಯಿ, ಬಾಗೋ, ಮಾಗ್ವೆ, ಮಾಸ್, ರಾಕೈನ್, ಶಾನ್ ಹಾಗೂ ಆಯೆಯವಡ್ಡಿ ಪ್ರಾಂತ್ಯಗಳಲ್ಲಿ ಈ ಸಾವು-ನೋವು ಸಂಭವಿಸಿವೆ.

ಅರುಣಾಚಲದ ಆರು ಪ್ರದೇಶಗಳಿಗೆ ಹೆಸರಿಟ್ಟ ಚೀನಾ

ಅರುಣಾಚಲದ ಆರು ಪ್ರದೇಶಗಳಿಗೆ ಹೆಸರಿಟ್ಟ ಚೀನಾ

ಬೀಜಿಂಗ್ :
ಚೀನಾವು ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಅಧಿಕೃತವಾಗಿ ಹೆಸರಿಟ್ಟಿದೆ. ದಲಾಯಿ ಲಾಮಾ ಇತ್ತೀಚೆಗೆ ಅರುಣಾಚಲ ಭೇಟಿಗೆ ಚೀನಾವು ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತೀಕಾರವೆಂಬಂತೆ ಅಲ್ಲಿನ ಪ್ರದೇಶಗಳಿಗೆ ಹೆಸರಿಡುವ ಕ್ರಮಕ್ಕೆ ಮುಂದಾಗಿದೆ.

ಭಾರತದ ಅರುಣಾಚಲ ಪ್ರದೇಶವನ್ನು ಚೀನಾವು ದಕ್ಷಿಣ ಟಿಬೇಟ್ ಎಂದು ಹೇಳುತ್ತಾ ಬಂದಿದೆ. ಹಾಗಾಗಿ ಆರು ಸ್ಥಳಗಳಿಗೆ ಚೈನೀಸ್, ಟಿಬೆಟಿಯನ್ ಹಿನ್ನಲೆಯಲ್ಲಿ ರೋಮನ್ ಅಕ್ಷರಗಳನ್ನು ಒಳಗೊಂಡು ಹೆಸರಿಟ್ಟಿರುವುದಾಗಿ ಚೀನಾವು ಏ.14 ರಂದು ಪ್ರಕಟಿಸಿತ್ತು.

ಭಾರತ ಮತ್ತು ಚೀನಾದ ನಡುವೆ 3.488 ಕಿ.ಮೀ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದ ವಿವಾದವಿತ್ತು, 1962 ರಯುದ್ಧ ವೇಳೆ ಅಕ್ಸೈಚಿನ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದಾಗಿ ಭಾರತ ವಾದಿಸುತ್ತಿದೆ.
ಈ ವಿವಾದ ಇತ್ಯಾರ್ಥಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಪ್ರತಿನಿಧಿಗಳು 19 ಸುತ್ತಿನ ಮಾತುಕತೆ ನಡೆಸಿದ್ದಾರೆ.

ದಲಾಯಿ ಲಾಮಾ ಅವರ ಭಾರತ ಭೇಟಿ ಹಿನ್ನಲೆಯಲ್ಲಿ ಚೀನಾವು, ತನ್ನ ಪ್ರಾದೇಶಿಕ ಸಾರ್ವಭೌಮತೆ ಮತ್ತು ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.

ಜಮೈಕಾದ 117 ವರ್ಷದ ವೃದ್ದೆ ಜಗತ್ತಿನ ಅತಿ ಹಿರಿಯ ವ್ಯಕ್ತಿ

ಜಮೈಕಾದ 117 ವರ್ಷದ ವೃದ್ಧೆ ಜಗತ್ತಿನ ಅತಿ ಹಿರಿಯ ವ್ಯಕ್ತಿ

ಕಿಂಗ್ಸ್‌ಟನ್‌: ಜಮೈಕಾದ ವಯಲೆಟ್‌ ಬ್ರೌನ್‌ ಜಗತ್ತಿನ ಅತಿ ಹಿರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 1899ರ ನ.29ನಲ್ಲಿ ಜನಿಸಿದ ಇವರಿಗೆ ಈಗ 117 ವರ್ಷ. ಈವರೆಗೆ ಜಗತ್ತಿನ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಇಟಲಿಯ ಎಮ್ಮಾ ಮೊರಾನೊ ಇತ್ತೀಚೆಗಷ್ಟೇ ನಿಧನರಾದರು. ಬಳಿಕ ವಯಲೆಟ್‌ರನ್ನು ಜನ್ಮ ದಿನಾಂಕದ ದಾಖಲೆಗಳ ಆಧಾರದಲ್ಲಿ ಅವರನ್ನು ಹಿರಿಯ ವ್ಯಕ್ತಿ ಎಂದು ಆರಿಸಲಾಗಿದೆ. ಕಳೆದ ತಿಂಗಳಷ್ಟೇ ಇವರು 117ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಪಶ್ವಿ‌ಮ ಜಮೈಕಾದಲ್ಲಿ ನೆಲೆಸಿರುವ ವಯಲೆಟ್‌ ತಮ್ಮ ಜೀವನವೆಲ್ಲಾ ಕಬ್ಬಿನ ಗದ್ದೆಯಲ್ಲಿ ದುಡಿಯುತ್ತಾ ಕಳೆದಿದ್ದಾರೆ. ಈ ಮುಪ್ಪಿನಲ್ಲೂ ಅವರು ನಡೆದಾಡುವ, ಹೇಳಿದ್ದನೆಲ್ಲಾ ಸರಿಯಾಗಿ ಗ್ರಹಿಸುವ, ಸ್ಪಷ್ಟವಾಗಿ ಮಾತನಾಡುವ ಶಕ್ತಿ ಹೊಂದಿದ್ದಾರೆ.

ಅರುಣಾಚಲದ ಆರು ಸ್ಥಳ ಹೆಸರು ಬದಲಿಸಿದ ಚೀನ

ಅರುಣಾಚಲದ ಆರು ಸ್ಥಳ ಹೆಸರು ಬದಲಿಸಿದ ಚೀನ

ಬೀಜಿಂಗ್‌:  ತನ್ನ ವಿರೋಧದ ನಡುವೆಯೂ ಟಿಬೆಟ್‌ ಧರ್ಮಗುರು ದಲೈ ಲಾಮಾರನ್ನು ಅರುಣಾಚಲ ಪ್ರದೇಧಿಶಕ್ಕೆ ಸ್ವಾಗತಿಸಿದ ಭಾರತದ ಕ್ರಮದಿಂದ ಕ್ರುದ್ಧಗೊಂಡಿದ್ದ ಚೀನ, ಇದೀಗ ಮತ್ತೆ ಗಡಿ ತಗಾದೆ ತೆಗೆದಿದೆ.

ಭಾರತದ ಗಡಿ ರಾಜ್ಯವಾಗಿರುವ ಅರುಣಾಚಲ ಪ್ರದೇಶ ತನ್ನದು ಎಂದು ಹಿಂದಿನಿಂದಲೂ ವಿವಾದ ಸೃಷ್ಟಿಸುತ್ತಲೇ ಬಂದಿರುವ ಚೀನ, ಇದೀಗ ಅರುಣಾಚಲದ ಆರು ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ಬುಧವಾರ ಅಂತಿಮಗೊಳಿಸಿದೆ. ಈ ಮೂಲಕ ಅರುಣಾಚಲ ವಿವಾದದ ಸಂಬಂಧ "ಕಾನೂನುಬದ್ಧ ಕ್ರಮ' ಕೈಗೊಂಡಿರುವುದಾಗಿ ಚೀನ ಹೇಳಿಕೊಂಡಿದೆ.

"ದಕ್ಷಿಣ ಟಿಬೆಟ್‌(ಅರುಣಾಚಲ ಪ್ರದೇಶ) ನಲ್ಲಿರುವ ಆರು ಸ್ಥಳಗಳಿಗೆ, ಚೀನೀ ಅಕ್ಷರಗಳು, ಟಿಬೆಟಿಯನ್‌ ಮತ್ತು ರೋಮನ್‌ ವರ್ಣಮಾಲೆಧಿಯನ್ನು ಬಳಸಿ ನೀಡಿದ ಹೆಸರುಗಳನ್ನು ಚೀನದ ನಾಗರಿಕ ವ್ಯವಹಾರಗಳ ಸಚಿವಾಲಯ ಎ.14ರಂದು ಅಂತಿಮಗೊಳಿಸಿದೆ,' ಎಂದು "ಗ್ಲೋಬಲ್‌ ಟೈಮ್ಸ್‌' ಪತ್ರಿಕೆ ವರದಿ ಮಾಡಿದೆ.

"ಆರೂ ಸ್ಥಳಗಳಿಗೆ ವೋಗ್ಯಾನ್‌ಲಿಂಗ್‌, ಮಿಲಾ ರಿ, ಕೊÌàಯೆxಂಗಾಬೊì, ಮನಿಕುÌಕಾ, ಬುಮೊ ಲಾ ಮತ್ತು ನಮ್ಕಾಪಬ್‌ ರಿ ಎಂಬ ಹೆಸರುಗಳನ್ನು ಅಂತಿಮಗೊಳಿಧಿಸಲಾಗಿದೆ. ಅರುಣಾಚಲದ ಮೇಲೆ ಚೀನ ಪ್ರಾದೇಶಿಕ ಹಕ್ಕು ಹೊಂದಿರುವುದಕ್ಕೆ ಇತಿಹಾಸ, ಸಂಸ್ಕೃತಿ ಮತ್ತು ಆಡಳಿತಾತ್ಮಕ ಸ್ಪಷ್ಟ ಸಾಕ್ಷ್ಯಗಳಿವೆ ಎಂಬುದನ್ನು ಈ ಹೆಸರುಧಿಗಳು ಪ್ರತಿಬಿಂಬಿಸುತ್ತವೆ,' ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಹೇಳಿದ್ದಾರೆ.
"ಸ್ಥಳೀಯರ ಹೆಸರುಗಳಿಗೆ  ಸಂಬಂಧಿಸಿದ ನಿಯಮಗಳಿಗೆ ಅನುಗುಣವಾಗಿ ಈ ಹೆಸರುಗಳನ್ನು ಅಂತಿಮಗೊಳಿಸಿದ್ದು, ಇದು ಚೀನ ಸರಕಾರ ಕೈಗೊಂಧಿಡ ಕಾನೂನುಬದ್ಧ ಕ್ರಮವಾಗಿದೆ ಎಂದಿರುವ ಲು ಕಾಂಗ್‌, "ಭಾರತ-ಚೀನ ನಡುವಿನ ವಿವಾದಿತ ಪ್ರದೇಶಧಿದಲ್ಲಿ ದಲೈ ಲಾಮಾ ಅವರ ಚಟುವಟಿಕೆಗಳಿಗೆ ಮತ್ತು ಅವರ ಚೀನ ವಿರುದ್ಧದ ಪಿತೂರಿಗಳಿಗೆ ಅವಧಿಕಾಶ ನೀಡುವ ಮೂಲಕ ಭಾರತ ತಪ್ಪೆಸಗಿದೆ. ಇದನ್ನು ಚೀನ ಬಲವಾಗಿ ಖಂಡಿಸುತ್ತದೆ' ಎಂದಿದ್ದಾರೆ.

ಚೀನದ ನೈರುತ್ಯ ಹಾಗೂ ಭಾರತದ ಈಶಾನ್ಯ ಗಡಿಗೆ ಹೊಂದಿಕೊಂಡಂತೆ ಇರುವ ಅರುಣಾಚಲ ಪ್ರದೇಶ, ಈ ದೇಶಗಳ ನಡುವಿನ ಗಡಿ ವಿವಾದದ ಮೂಲವಾಗಿದೆ. ಈ ಸಂಬಂಧ ಭಾರತ ಹಾಗೂ ಚೀನದ ವಿಶೇಷ ಪ್ರತಿನಿಧಿಗಳು 19 ಬಾರಿ ಸಭೆ ನಡೆಸಿ, ಚರ್ಚಿಸಿದ್ದರೂ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಟಿಬೆಟ್‌ ಧರ್ಮಗುರು ದಲೈಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ತಡೆಯುವಂತೆ ಚೀನ ಭಾರತವನ್ನು ಕೋರಿತ್ತು. ಆದರೆ ಭಾರತ ಲಾಮಾ ಅವರನ್ನು ಸ್ವಾಗತಿಸಿತ್ತು. ಇದಕ್ಕೆ ಪ್ರತೀಕಾರವೆಂಬಂತೆ ಚೀನ ಈಗ ಗಡಿ ವಿವಾದವನ್ನು ಕೆದಕುತ್ತಿದೆ.

ಯುದ್ಧಕ್ಕೆ ಚೀನ ಸಿದ್ಧತೆ?
ಅರುಣಾಚಲಕ್ಕೆ ಆರು ಹೆಸರುಗಳನ್ನು ನಿಗದಿ ಮಾಡಿರುವಂತೆಯೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೊಸ ಸವಾಲುಗಳನ್ನು ಎದುರಿಸುವಂತೆ ಸಿದ್ಧರಾಗಿ ಎಂದು ಸೇನೆಗೆ ಕರೆ ನೀಡಿದ್ದಾರೆ. ಬಾಹ್ಯಾಕಾಶ ಯುದ್ಧ, ಇಲೆಕ್ಟ್ರಾನಿಕ್‌ ಸೇರಿದಂತೆ ಎಲ್ಲ ಮಾದರಿಯ ಯುದ್ಧಗಳಲ್ಲೂ ನಿಪುಣತೆ ಸಾಧಿಸಬೇಕೆಂದು ಸಲಹೆ ಮಾಡಿದ್ದಾರೆ. ಭಾರತ ಮತ್ತು ಚೀನ ನಡುವಿನ ಸಂಬಂಧ ಬಿಗಡಾಯಿಸಿರು ಹಿನ್ನೆಲೆಯಲ್ಲಿ ಕ್ಸಿ ಜಿನ್‌ಪಿಂಗ್‌ರ ಈ ಮಾತು ಮಹತ್ವಪೂರ್ಣದ್ದಾಗಿದೆ ಎಂದು ಹೇಳಲಾಗುತ್ತಿದೆ. ಹೊಸತಾಗಿ ಆರಂಭವಾಗಿರುವ ಸೇನೆಯ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯರ ಹೆಸರುಗಳಿಗೆ  ಸಂಬಂಧಿಸಿದ ನಿಯಮಗಳಿಗೆ ಅನುಗುಣವಾಗಿ ಈ ಹೆಸರುಗಳನ್ನು ಅಂತಿಮಗೊಳಿಸಿದ್ದು, ಇದು ಚೀನ ಸರಕಾರ ಕೈಗೊಂಡ ಕಾನೂನುಬದ್ಧ ಕ್ರಮವಾಗಿದೆ.
- ಲು ಕಾಂಗ್‌, ಚೀನ
ವಿದೇಶಾಂಗ ಇಲಾಖೆ ವಕ್ತಾರ

ಆಸ್ಟ್ರೇಲಿಯ ಪೌರತ್ವ ಬಯಸಿದ್ದಿರಾ? ನಿಮಗಿದು ತಿಳಿದಿರಲಿ

ಆಸ್ಟ್ರೇಲಿಯ ಪೌರತ್ವ ಬಯಸಿದ್ದೀರಾ ? ಹಾಗಿದ್ದರೆ ನಿಮಗಿದು ತಿಳಿದಿರಲಿ

ಸಿಡ್ನಿ: ನೀವು ಆಸ್ಟ್ರೇಲಿಯದ ಪೌರತ್ವ ಪಡೆದು ಅಲ್ಲೇ ಉದ್ಯೋಗನಿರತರಾಗಿ ಬಾಳಲು ಬಯಸಿದ್ದೀರಾ ? ಹಾಗಿದ್ದರೆ ನೀವಿಗ ಆಸ್ಟ್ರೇಲಿಯನ್‌ ಮೌಲ್ಯಗಳ ಮತ್ತು ಅಲ್ಲಿನ ಇಂಗ್ಲಿಷ್‌ ಭಾಷಾ ಶೈಲಿಯ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸು ಮಾಡಿಕೊಳ್ಳಬೇಕಾಗುತ್ತದೆ.

ಅಂದ ಹಾಗೆ ಆಸ್ಟ್ರೇಲಿಯ ಸರಕಾರ ಈ ನಿಮಯಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ದೇಶಿಸಿರುವುದು ಯಾಕೆ ಗೊತ್ತಾ ? ಆಸ್ಟ್ರೇಲಿಯಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಇಲ್ಲಿಗೆ ಬರುವವರ ಕಾಯುವಿಕೆಯನ್ನು ಇನ್ನಷ್ಟು ದೀರ್ಘ‌ಗೊಳಿಸಲು ಅದು ಮಾಡಿರುವ ಉಪಾಯ ಇದಾಗಿದೆ.

ಆಸ್ಟ್ರೇಲಿಯದ ಪ್ರಧಾನಿ ಮಾಲ್ಕಂ ಟರ್ನ್ಬುಲ್‌ ಅವರ ಸರಕಾರ ಈಗಾಗಲೇ ತಾತ್ಕಾಲಿಕ ಉದ್ಯೋಗಗಳ 457 ವೀಸಾವನ್ನು ರದ್ದು ಪಡಿಸಿದ್ದು ಅದರಿಂದ ಏಶ್ಯನರು ವಿಶೇಷವಾಗಿ ಭಾರತೀಯರು ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ರದ್ದುಪಡಿಸಲಾಗಿರುವ ಈ ವೀಸಾ ಯೋಜನೆಯ ಬದಲಿಗೆ ಕಠಿನ ನಿಯಮಗಳ ಹೊಸ ಯೋಜನೆಯನ್ನು ಜಾರಿಗೆ ತರಲು ಆಸೀಸ್‌ ಸರಕಾರ ಮುಂದಾಗಿದೆ.
ಅಂತೆಯೇ ಅದು ಆಸ್ಟ್ರೇಲಿಯನ್‌ ಮೌಲ್ಯ ಹಾಗೂ ಇಂಗ್ಲಿಷ್‌ ಭಾಷಾ ಕೌಶಲ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌1ಬಿ ವೀಸಾ ನಿಯಮವನ್ನು ಕಠಿನಗೊಳಿಸಿದ್ದು ಆಮೆರಿಕನ್ನರೇ ಮೊದಲು ಎಂಬ ನೀತಿಯನ್ನು ಜಾರಿಗೆ ತಂದಿರುವ ಹಾಗೆ ಆಸ್ಟ್ರೇಲಿಯ ಕೂಡ ಈಗ ಅದೇ ಹಾದಿಯನ್ನು ತುಳಿದಿದೆ. ಆಸ್ಟ್ರೇಲಿಯ ಫ‌ಸ್ಟ್‌ ಎಂಬುದೇ ಅದರ ಕಠಿನ ವೀಸಾ ನಿಯಮಗಳ ಹಿಂದು ಮೂಲ ಉದ್ದೇಶವಾಗಿದೆ.

ಆಸ್ಟ್ರೇಲಿಯ ಸರಕಾರದ ಹೊಸ ಪೌರತ್ವ ನಿಯಮಗಳು ಈಗಿನ್ನು ಅಲ್ಲಿನ ಸಂಸತ್ತಿನಲ್ಲಿ ಪಾಸಾಗಬೇಕಾಗಿವೆ. ಅದಕ್ಕೆ ಬಲಪಂಥೀಯ ಸೆನೆಟರ್‌ಗಳ ಬೆಂಬಲವೂ ಬೇಕಿದೆ.

ಆಸ್ಟ್ರೇಲಿಯ ಪೌರತ್ವ ಪಡೆಯಲು ಕೇವಲ ಇಂಗ್ಲಿಷ್‌ ಭಾಷಾ ಪ್ರಭುತ್ವದ ಪರೀಕ್ಷೆ ಮಾತ್ರವೇ ಸಾಲದು; ಇಲ್ಲಿನ ಮೌಲ್ಯಗಳನ್ನು ಕೂಡ ವಲಸಿಗರು ತಿಳಿದಿರುವುದು ಕಡ್ಡಾಯ ಎಂದು ಪ್ರಧಾನಿ ಟರ್ನ್ಬುಲ್‌ ಹೇಳಿದ್ದಾರೆ.

ಆಸೀಸ್‌ ಪೌರತ್ವ ಪಡೆಯಬಯಸುವವರು ಇಂಗ್ಲೀಷ್‌ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 6.0 ಮಟ್ಟವನ್ನು ಪೂರೈಸಿರಬೇಕು. ಆಸೀಸ್‌ ಪೌರತ್ವ ಪಡೆಯಲು ಈ ತನಕ 1 ವರ್ಷದ ಶಾಶ್ವತ ವಾಸ್ತವ್ಯ ಅಗತ್ಯವಿತ್ತು; ಆದರೆ ಈಗ ಅದನ್ನು 4 ವರ್ಷಕ್ಕೆ ಏರಿಸಲಾಗಿದೆ

ಪಾಕ್ ಹಿಂದೂ ಯುವಕನಿಗೆ ಅಮೆರಿಕ ಪ್ರತಿಷ್ಠಿತ ಪ್ರಶಸ್ತಿ

ಪಾಕ್‌ ಹಿಂದೂ ಯುವಕನಿಗೆ ಅಮೆರಿಕ ಪ್ರತಿಷ್ಠಿತ ಪ್ರಶಸ್ತಿ

ವಾಷಿಂಗ್ಟನ್‌: ಪಾಕಿಸ್ಥಾನದ ಹಿಂದೂ ಯುವಕನೊಬ್ಬ ಅಮೆರಿಕ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯೊಂದಕ್ಕೆ ಭಾಜನರಾಗಿದ್ದಾರೆ.

ಸುಸ್ಥಿರ ಶಾಂತಿ ಸ್ಥಾಪಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ ಯುವಕರಿಗೆ ಅಮೆರಿಕ ವಿದೇಶಾಂಗ ಇಲಾಖೆ  ಕೊಡಮಾಡುವ ಎಮರ್ಜಿಂಗ್‌ ಯಂಗ್‌ ಲೀಡರ್‌ ಪ್ರಶಸ್ತಿಗೆ ಪಾಕ್‌ ಯುವಕ ರಾಜ್‌ ಕುಮಾರ್‌ ಭಾಜನರಾಗಿದ್ದಾರೆ. ಇವರಲ್ಲದೇ ಮಾಲ್ಟ, ಶ್ರೀಲಂಕ, ಆಫ್ಘಾನಿಸ್ತಾನ, ಅಲೆjàರಿಯಾ ಮುಂತಾದ 10 ದೇಶಗಳ ಯುವಕರಿಗೆ ಈ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಪಡೆದವರು 15 ದಿನಗಳ ಮಟ್ಟಿಗೆ ಅಮೆರಿಕಕ್ಕೆ ತೆರಳಿ ನಾಯ ಕತ್ವ ಸೇರಿ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ಪಡೆಯಲಿ ದ್ದಾರೆ.  ಪಾಕಿಸ್ತಾನಿ ಹಿಂದು ಆಗಿರುವ ಕುಮಾರ್‌ ಶಾಂತಿ, ಸಾಮರಸ್ಯ ಸಾರುವಂಥ ಲೇಖನಗಳನ್ನು ಪ್ರಕಟಿಸಿದ್ದಾರೆ.

ಮಾಜಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಗರ್ಭಿಣಿ

ಮಾಜಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಗರ್ಭಿಣಿ

ನ್ಯೂಯಾರ್ಕ್:
ವಿಶ್ವದ ಮಾಜಿ ನಂ.1 ಆಟಗಾರ್ತಿ ಹಾಗೂ 23 ಗ್ರ್ಯಾನ್ ಸ್ಪ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಗರ್ಭಿಣಿಯಾಗಿದ್ದಾರೆ.

ಹೌದು ಈ ಬಗ್ಗೆ ಸೆರೆನಾ ವಿಲಿಯಮ್ಸ್ ಖುದ್ದು ಹೇಳಿಕೊಂಡಿದ್ದು ತಾವು 20 ವಾರಗಳ ಗರ್ಭಿಣಿ ಎಂಬ ವಿಷಯವನ್ನು ಸಾಮಾಜಿಕ ತಾಣವಾದ ಸ್ನ್ಯಾಪ್ ಚಾಟ್ ಮೂಲಕ ಬುಧವಾರ ಬಹಿರಂಗ ಪಡಿಸಿದ್ದಾರೆ.

ವರ್ಷದ ಮೊದಲ ಗ್ರ್ಯಾನ್ ಸ್ಪ್ಯಾಮ್ ಟೂರ್ನಿಯಾದ ಆಸ್ಪ್ರೇಲಿಯಾ ಓಪನ್ನಲ್ಲಿ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್ ಅವರನ್ನು ಮಣಿಸಿ 23ನೇ ಸಿಂಗಲ್ಸ್ ಗ್ರ್ಯಾನ್ ಸ್ಪ್ಯಾಮ್ ಪ್ರಶಸ್ತಿ ಗೆದ್ದ ಸೆರೆನಾ ವಿಲಿಯಮ್ಸ್, ಅಂದಿನಿಂದ ಆಟದಿಂದ ದೂರ ಉಳಿದಿದ್ದಾರೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ರೆಡಿಟ್ ಸಂಸ್ಥೆಯ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜತೆಗೆ ಒಡನಾಟ ಹೊಂದಿರುವುದಾಗಿ ಸೆರೆನಾ ಹೇಳಿಕೊಂಡಿದ್ದು, ಈಗ ಗರ್ಭಿಣಿಯಾಗಿದ್ದಾರೆ.

ಪನಾಮ ಹಗರಣ

ಪನಾಮಾ ಹಗರಣ : ಸದ್ಯಕ್ಕೆ ನವಾಜ್ ಷರೀಫ್ ಬಜಾವ್

ಇಸ್ಲಾಮಾಬಾದ್ :
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಅಕ್ರಮ ವಿದೇಶಿ ಹೂಡಿಕೆ ಪ್ರಕರಣದಲ್ಲಿ ಪ್ರಧಾನಿ ಪಟ್ಟ ಕಳೆದುಕೊಳ್ಳುವ ಆಪತ್ತಿಗೆ ಸಿಲುಕಿದ್ದ ಅವರು ಸದ್ಯಕ್ಕೆ ಬಚಾವಾಗಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಲ್ಲಿನ ಸುಪ್ರೀಂಕೋರ್ಟ್ ಸಾಕ್ಷ್ಯಾಧಾರ ಕೊರತೆಯ ಕಾರಣ ನೀಡಿ ಹೆಚ್ಚಿನ ಮಾಹಿತಿಗೆ ಜಂಟಿ ತನಿಖೆ ನಡೆಸುವಂತೆ ಆದೇಶ ನೀಡಿದೆ.

ಪನಾಮಾ ಪೇಪರ್ ಸೋರಿಕೆಯಿಂದ ಷರೀಫ್ ಅವರ ಕುಟುಂಬದ ವಿದೇಶಿ ಹೂಡಿಕೆಯ ಬಾನಗಡಿಯು ಅವರ ಪ್ರಧಾನಿ ಹುದ್ದೆಗೆ ಕುತ್ತು ತರಲಿದೆ ಎಂದೇ ಭಾವಿಸಲಾಗಿದೆ. ಆದರೆ ಸುಪ್ರೀಂಕೋರ್ಟ್ ನ ಗುರುವಾರದ ತೀರ್ಪು ಷರೀಫ್ ಅವರಿಗೆ ಇನ್ನಷ್ಟು ಕಾಲ ನಿರುಮ್ಮಳವಾಗಿರಲು ಅವಕಾಶ ನೀಡಿತ್ತು. ತತ್ಕಾಲಕ್ಕೆ ಅವರ ಪ್ರಧಾನಿ ಹುದ್ದೆ ಸುರಕ್ಷಿತವಾಗಿದ್ದರೂ 60 ದಿನಗಳೊಳಗೆ ಜಂಟಿ ತನಿಖೆಗೆ ಒಳಪಡಬೇಕಾದ ಒತ್ತಡ ಇದೆ.

ತನಿಖೆಗೆ 60 ದಿನಗಳ ಕಾಲಾವಕಾಶ ನೀಡಿರುವ ಸುಪ್ರೀಂ ಕೋರ್ಟ್, ಪ್ರತಿ ಎರಡು ವಾರಗಳಿಗೆ ಒಮ್ಮೆ ತನಿಖಾ ಪ್ರಗತಿಯ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಲಂಡನ್ ನಗರದಲ್ಲಿ ನಾಲ್ಕು ಐಷಾರಾಮಿ ಅಪಾರ್ಟ್ ಮೆಂಟ್ ಗಳನ್ನು ಷರೀಫ್ ತಮ್ಮ ಮಕ್ಕಳ ಹೆಸರಿನಲ್ಲಿ ಖರೀದಿಸಿದ್ದಾರೆ.,ಜತೆಗೆ ಖತಾರ್ ನ ಉದ್ಯಮ ವಲಯದಲ್ಲಿಯೂ ಅಪಾರ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ ಎನ್ನುವುದು ಪನಾಮಾ ಪೇಪರ್ ಗಳ ಮೂಲಕ ತಿಳಿದುಬಂದಿತ್ತು.

  



ದಿರಿಯ ನಿರಾಶ್ರಿತೆ ವಿಶ್ವಸಂಸ್ಥೆ ರಾಯಭಾರಿ

ಸಿರಿಯ ನಿರಾಶ್ರಿತೆ ವಿಶ್ವಸಂಸ್ಥೆ ರಾಯಭಾರಿ

ಜಿನೇವ, ಎ. 28: ಜರ್ಮನಿಯಲ್ಲಿ ಆಶ್ರಯ ಪಡೆದಿರುವ ಸಿರಿಯ ನಿರಾಶ್ರಿತೆ ಯೂಸ್ರಾ ಮರ್ದಿನಿ ಅವರನ್ನು ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ನೇಮಿಸಲಾಗಿದೆ.

ಸಿರಿಯದ ಯುದ್ಧದಿಂದ ತಪ್ಪಿಸಿಕೊಂಡು ಸಣ್ಣ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರ ದಾಟುತ್ತಿದ್ದಾಗ ಅವರ ದೋಣಿ ಮುಳುಗಿತ್ತು. ಆಗ ಅವರು ಮತ್ತು ತಂಗಿ ಗಂಟೆಗಳ ಕಾಲ ಈಜಿ ಗ್ರೀಸ್‌ನ ಲೆಸ್ಬೋಸ್ ತಲುಪಿದ್ದರು. ಇತರ 20 ಮಂದಿಯನ್ನೂ ಅವರು ರಕ್ಷಿಸಿದ್ದರು.

ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಅವರು ನಿರಾಶ್ರಿತ ಒಲಿಂಪಿಕ್ಸ್ ತಂಡದ ಸದಸ್ಯೆಯಾಗಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈಗ ಅವರು ಯುದ್ಧದಿಂದ ನಿರಾಶ್ರಿತರಾದ ಜನರ ಧ್ವನಿಯಾಗಿದ್ದಾರೆ.

‘‘ನನಗೆ ಸಿಕ್ಕಿದ ಅವಕಾಶ ಮತ್ತು ವೇದಿಕೆಗಾಗಿ ನಾನು ಕೃತಜ್ಞಳಾಗಿದ್ದೇನೆ.
ಈ ಎಳೆಯ ಪ್ರಾಯದಲ್ಲೇ ನಾವು ಅನುಭವಿಸಿದ ಭಯಾನಕ ಅನುಭವಗಳು, ನಾವು ಪ್ರೀತಿಸಿದ ಮತ್ತು ಕಳೆದುಕೊಂಡ ಮನೆಗಳು, ನಾವು ಕಳೆದುಕೊಂಡ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬಗ್ಗೆ ಜಗತ್ತಿಗೆ ಹೇಳಬಹುದಾಗಿದೆ. ನಾವು 100 ವರ್ಷ ಬದುಕಿದ್ದೇವೇನೋ ಎಂದು ಅನಿಸುತ್ತಿದೆ’’ ಎಂದು 19 ವರ್ಷದ ಮರ್ದಿನಿ ಹೇಳುತ್ತಾರೆ. ಅವರು ಬರ್ಲಿನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಈಜು ತರಬೇತಿಯನ್ನೂ ಪಡೆಯುತ್ತಿದ್ದಾರೆ.

ಲಾಡೆನ್ ಆಯ್ತು ಈಗ ಅಲ್ ಖೈದಾ ಮುಖಂಡ ಜವಾಹಿರಿ

ಲಾಡೆನ್ ಆಯ್ತು, ಈಗ ಅಲ್ ಖೈದಾ ಮುಖಂಡ ಜವಾಹಿರಿ ಐಎಸ್‌ಐ ರಕ್ಷಣೆಯಲ್ಲಿ!

ವಾಷಿಂಗ್ಟನ್‌ : ಅಲ್‌ ಕಾಯಿದಾ ಉಗ್ರ ಸಂಘಟನೆಯ ಮುಖ್ಯಸ್ಥ, ಹತ ಉಸಾಮಾ ಬಿನ್‌ ಲಾದನ್‌ನ ಗುರು ಹಾಗೂ ಉತ್ತರಾಧಿಯಾಗಿರುವ ಈಜಿಪ್ಟ್ ಸಂಜಾತ ಇಮಾನ್‌ ಅಲ್‌ ಜವಾಹಿರಿ ಪಾಕಿಸ್ಥಾನದ ಕುಖ್ಯಾತ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ರಕ್ಷಣೆಯಲ್ಲಿ ಬಹುತೇಕ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ವರದಿಯೊಂದು ಹೇಳಿದೆ.

ಅತ್ಯಂತ ಮಹತ್ವದ ತನಿಖಾ ವರದಿಯಲ್ಲಿ ನ್ಯೂಸ್‌ ವೀಕ್‌ ಈ ರೀತಿ ಹೇಳಿದೆ : 2001ರಲ್ಲಿ ಅಮೆರಿಕನ್‌ ಪಡೆಗಳು ಅಫ್ಘಾನಿಸ್ಥಾನದಿಂದ ಅಲ್‌ ಕಾಯಿದಾವನ್ನು  ತೆರವುಗೊಳಿಸಿದ ಬಳಿಕ, ಓರ್ವ ತರಬೇತಿ ಪಡೆದ ಸರ್ಜನ್‌ ಆಗಿರುವ ಜವಾಹಿರಿಯು, ಪಾಕಿಸ್ಥಾನದ ಬೇಹು ಸಂಸ್ಥೆ ಐಎಸ್‌ಐ ಆಸರೆಯಲ್ಲಿ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ'.

ಅನೇಕ ಅಧಿಕೃತ ಮೂಲಗಳನ್ನು ಆಧರಿಸಿ ತನಗೆ ಈ ಮಾಹಿತಿ ಸಿಕ್ಕಿರುವುದಾಗಿ ನ್ಯೂಸ್‌ ವೀಕ್‌ ಹೇಳಿದೆ.

2.60 ಕೋಟಿ ಜನಸಂಖ್ಯೆಇರುವ ಅರಬ್ಬೀ ಸಮುದ್ರದ ಬಂದರು ನಗರವಾಗಿರುವ ಕರಾಚಿಯಲ್ಲಿ ಜವಾಹಿರಿ ಬಹುತೇಕ ಅಡಗಿಕೊಂಡಿದ್ದಾನೆ ಎಂದು ನ್ಯೂಸ್‌ ವೀಕ್‌ ವರದಿ ತಿಳಿಸಿದೆ.

ಜಗತ್ತಿನ ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾಗಿರುವ ಜವಾಹಿರಿಯು ಅಡಗಿಕೊಂಡಿರುವ ತಾಣವನ್ನು ಪತ್ತೆ ಹಚ್ಚಿ ಬಹಿರಂಗಪಡಿಸಿರುವ, ಕಳೆದ ಹಲವಾರು ವರ್ಷಗಳಲ್ಲಿನ ಮೊತ್ತ ಮೊದಲ ವರದಿ ಇದಾಗಿದೆ ಎನ್ನಲಾಗಿದೆ.

14 ತುಂಬುವವರೆಗೆ ಮೊಬೈಲ್ ನಿಷೇಧ: ಇದು ಗೇಟ್ಸ್ ನಿಯಮ

14 ತುಂಬುವವರೆಗೆ ಮೊಬೈಲ್‌ ನಿಷೇಧ; ಇದು ಗೇಟ್ಸ್‌ ನಿಯಮ

ವಾಷಿಂಗ್ಟನ್‌: "ಊಹೂಂ, 14 ವರ್ಷ ತುಂಬದೇ ಮಕ್ಕಳ ಕೈಗೆ ಮೊಬೈಲ್‌ ಫೋನ್‌ ಕೊಡುವುದೇ ಇಲ್ಲ. ಹೋಂ ವರ್ಕ್‌ ಮಾಡೋ ಸಮಯದಲ್ಲಿ ಅದನ್ನು ಬಿಟ್ಟು ಬೇರೇನೂ ಮಾಡುವ ಹಾಗಿಲ್ಲ. ಶ್ರೀಮಂತಿಕೆಯ ಅಹಂ ಹತ್ತಿರ ಸುಳಿಯಬಾರದು. ಎಲ್ಲರ ಜೊತೆಯೂ ಸಾಮಾನ್ಯರಂತೆ ಬೆರೆಯಬೇಕು...'

ವೈಭೋಗದ ಜೀವನದ ಮೂಲಕ ಶ್ರೀಮಂತಿಕೆಯ ಪ್ರದರ್ಶನ ಮಾಡುವ ಕುಬೇರರೇ ತುಂಬಿರುವಂಥ ಈ ಜಗತ್ತಿನಲ್ಲಿ "ವಿಶ್ವದ ಅತಿ ಶ್ರೀಮಂತ ವ್ಯಕ್ತಿ' ಎಂದು ಹೆಸರು ಗಳಿಸಿರುವ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್‌ ಅವರು ಪಾಲಿಸಿಕೊಂಡು ಬಂದಿರುವ ನೀತಿಯಿದು.

ಈ ಡಿಜಿಟಲ್‌ ಯುಗದ ತಂತ್ರಜ್ಞಾನ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಗೇಟ್ಸ್‌ ಅವರು ತಮ್ಮ ಮಕ್ಕಳಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್‌ ಸಂಪರ್ಕಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ.
ಬ್ರಿಟನ್‌ನ ಪತ್ರಿಕೆ "ದಿ ಮಿರರ್‌'ಗೆ ನೀಡಿದ ಸಂದರ್ಶನದಲ್ಲಿ ಅವರೇ ಈ ಕುರಿತು ಹೇಳಿಕೊಂಡಿದ್ದಾರೆ.

ಮೊಬೈಲ್‌ ಬಳಕೆಗೆ ಮಿತಿ: "ನಮ್ಮ ಮಕ್ಕಳಾದ ಜೆನಿಫ‌ರ್‌(20), ರೋರಿ(17) ಮತ್ತು ಫೋಬೆ(14)ಗೆ ಹಲವು ಮಿತಿಗಳನ್ನು ಹೇರಿದ್ದೇವೆ. ಸಹಪಾಠಿಗಳೆಲ್ಲ ಮೊಬೈಲ್‌ ಹೊಂದಿದ್ದಾರೆ ಎಂದು ಎಷ್ಟು ಹಠ ಹಿಡಿದರೂ ಅವರಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್‌ ಕೊಡಿಸಿರಲಿಲ್ಲ. ಡಿನ್ನರ್‌ ಟೇಬಲ್‌ ಬಳಿಯಂತೂ ಮೊಬೈಲನ್ನು ತರುವ ಹಾಗಿಲ್ಲ.
ರಾತ್ರಿ ಮಲಗುವ ಸಮಯದಲ್ಲಿ ಅದು ಹತ್ತಿರ ಸುಳಿಯಲೂ ಕೂಡದು. ಸಾಮಾನ್ಯರಂತೆ ಇತರರೊಂದಿಗೆ ಬೆರೆಯಬೇಕು. ಹೋಂ ವರ್ಕ್‌ ಮಾಡಬೇಕು. ಹೆಚ್ಚು ಪಾಕೆಟ್‌ ಮನಿ ನೀಡುವುದಿಲ್ಲ. ಅವರನ್ನು ಸಾಮಾನ್ಯರ ಮಕ್ಕಳಂತೆ ಬೆಳೆಸಬೇಕೆಂಬುದು ನಮ್ಮ ಆಸೆ,' ಎಂದಿದ್ದಾರೆ ಗೇಟ್ಸ್‌. ಇದೇ ವೇಳೆ,  ಮ್ಯಾಕ್‌ಡೊನಾಲ್ಡ್‌, ಬರ್ಗರ್‌ ಕಿಂಗ್‌ ತಮ್ಮ ಫೇವರಿಟ್‌ ಎಂಬುದನ್ನು ಹೇಳಲು ಗೇಟ್ಸ್‌ ಮರೆಯಲಿಲ್ಲ.

10 ಡಾಲರ್‌ನ ವಾಚ್‌: ವಿಶೇಷವವೆಂದರೆ, ಸುಮಾರು 87 ಶತಕೋಟಿ ಡಾಲರ್‌(5.62 ಲಕ್ಷ ಕೋಟಿ ರೂ.) ಆಸ್ತಿ ಹೊಂದಿರುವ ಗೇಟ್ಸ್‌ ಅವರು ಸಂದರ್ಶನದ ಸಮಯದಲ್ಲೂ 10 ಡಾಲರ್‌(650 ರೂ.)ನ ಕ್ಯಾಸಿಯೋ ವಾಚ್‌ ಧರಿಸಿದ್ದರು ಎಂದು ದಿ ಮಿರರ್‌ ವರದಿ ಮಾಡಿದೆ.