ಭಾನುವಾರ, ಏಪ್ರಿಲ್ 30, 2017

ಪ್ರಾನ್ಸ್ ಅಧ್ಯಕ್ಷಿಯ ಚುನಾವಣೆ

ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆ: ಲೆ ಪೆನ್‌ ಹಿಂದಿಕ್ಕಿದ ಮ್ಯಾಕ್ರನ್‌

ಪ್ಯಾರಿಸ್‌: ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯ ಒಂದು ಹಂತದ ಮತದಾನ ಭಾನುವಾರ ಮುಕ್ತಾಯವಾಗಿದ್ದು, ಕಟ್ಟರ್‌ ಬಲಪಂಥೀಯವಾದಿ, ನ್ಯಾಷನಲ್‌ ಫ್ರಂಟ್‌ ನಾಯಕಿ ಮರೀನ್‌ ಲೆ ಪೆನ್‌ ಹಾಗೂ ರಾಜಕೀಯವಾಗಿ ಅನನುಭವಿಯಾಗಿರುವ ಮ್ಯಾಕ್ರನ್‌ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಮ್ಯಾಕ್ರನ್‌ ಶೇ.23.9ರಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದರೆ, ಲೆ. ಪೆನ್‌ ಶೇ.21.4ರಷ್ಟು ಮತ ಗಳಿಸಿದ್ದಾರೆ. ಫ್ರಾನ್ಸ್‌ನ ಮುಂದಿನ ಅಧ್ಯಕ್ಷರಾಗುವತ್ತ ಮ್ಯಾಕ್ರನ್‌ ಹೆಜ್ಜೆಯಿಟ್ಟಿದ್ದು, ಅವರಿಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ಫ್ರೆಂಚರ ಭಯ, ಹತಾಶೆ ಮತ್ತು ನೋವುಗಳನ್ನು ನಾನು ಆಲಿಸಿದ್ದೇನೆ ಮತ್ತು ಅರಿತಿದ್ದೇನೆ. ಅವರು ಬದಲಾವಣೆಯನ್ನು ಬಯಸಿದ್ದಾರೆ ಎಂಬುದನ್ನೂ ನಾನು ಮನಗಂಡಿದ್ದೇನೆ,' ಎಂದಿದ್ದಾರೆ.
ಮೇ 7ರಂದು ಎರಡನೇ ಸುತ್ತಿನ ಮತದಾನ ನಡೆಯಲಿದೆ.

ಇದೇ ವೇಳೆ, ಕಟ್ಟರ್‌ ಬಲಪಂಥೀಯವಾದಿ ನಾಯಕಿಯಾಗಿರುವ ಲೆ ಪೆನ್‌ ಅವರು ವಲಸಿಗ ವಿರೋಧಿ, ಐರೋಪ್ಯ ಒಕ್ಕೂಟ ವಿರೋಧಿ ಸಿದ್ಧಾಂತದಿಂದ ಜನಪ್ರಿಯರಾದವರು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರಂತೆ ಪ್ರಚಾರದುದ್ದಕ್ಕೂ "ಫ್ರಾನ್ಸ್‌ ಫ‌ಸ್ಟ್‌' ನೀತಿಯನ್ನು ಅನುಸರಿಸುವುದಾಗಿ ಘೋಷಿಸುತ್ತಾ ಬಂದವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ