ಭಾನುವಾರ, ಏಪ್ರಿಲ್ 30, 2017

ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೇರಿಕದಿಂದ ಕ್ಷಿಪಣಿ ಪರೀಕ್ಷೆ

ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೆರಿಕದಿಂದ ಕ್ಷಿಪಣಿ ಪರೀಕ್ಷೆ

ನ್ಯೂಸ್ ಡೆಸ್ಕ್ :
ಅಮೆರಿಕ ಮತ್ತು ಉತ್ತರ ಕೊರಿಯಾಗಳು ಪರಸ್ಪರ ಆಕ್ರಮಣಕಾರಿ ನಿಲುವು ತಳೆದಿರುವ ರೀತಿಯಲ್ಲಿ ಅಮೆರಿಕದ ವಾಯುಪಡೆಯು ಫೆಸಿಫಿಕ್ ಸಾಗರ ಪ್ರದೇಶದಲ್ಲಿ ದೂರವ್ಯಾಪ್ತಿಯ ಕ್ಷಿಪಣಿ ಪರೀಕ್ಷೆ ನಡೆಸಿದೆ.

ಈ ಕ್ಷಿಪಣಿಯು ಪರಮಾಣು ಬಾಂಬು ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಸಿಡಿತಲೆ ಜೋಡಿಸಿರಲಿಲ್ಲ. ಕ್ಷಿಪಣಿಯು 4200 ಕಿ.ಮೀ. ಗಳಷ್ಟು ದೂರ ಕ್ರಮಿಸಿ ನಂತರ ಸಮುದ್ರಕ್ಕೆ ಅಪ್ಪಳಿಸಿತು. ಈ ಸಂದರ್ಭದಲ್ಲಿ ಉತ್ತರ ಕೊರಿಯಾದ ದಾಳಿಯಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕವು ದಕ್ಷಿಣ ಕೊರಿಯಾದ ಸುತ್ತಲೂ ಕ್ಷಿಪಣಿ ರಕ್ಷಣಾ ತಂತ್ರಜ್ಞಾನ ವ್ಯವಸ್ಥೆ ಅಳವಡಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ