ಭಾನುವಾರ, ಏಪ್ರಿಲ್ 30, 2017

ಬಾಹ್ಯಾಕಾಶ ವಾಸ : ದಾಖಲೆ ಮುರಿದ ಪೆಗ್ಗಿ

ಬಾಹ್ಯಾಕಾಶ ವಾಸ :ದಾಖಲೆ ಮುರಿದ ಪೆಗ್ಗಿ

ವಾಷಿಂಗ್ಟನ್ :
ನಾಸಾದ ಗಗನಯಾತ್ರಿ ಪೆಗ್ಗಿ ವೈಟ್ಸನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 534 ದಿನಗಳ ಕಾಲ ವಾಸಿಸುವ ಮೂಲಕ ಜೆಫ್ ವಿಲಿಯಮ್ಸ್ ರ ದಾಖಲೆಯನ್ನು ಮುರಿದಿದ್ದಾರೆ.

2008 ರಲ್ಲಿ ಬಾಹ್ಯಾಕಾಶ ನಿಲ್ದಾಣದ ಮೊದಲ ಮಹಿಳಾ ಕಮಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೈಟ್ಸನ್ ಅವರು ಕಳೆದ ವರ್ಷ ನ.17 ರಂದು 377 ದಿನಗಳ ಅವಧಿಗೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ್ದ ವೈಟ್ಸನ್, ಜೆಫ್ ವಿಲಿಯಮ್ಸ್ ರ 534 ದಿನ 2 ಗಂಟೆ ಮತ್ತು 48 ನಿಮಿಷಗಳ ದಾಖಲೆಯನ್ನು ಅವರು ಮುರಿದಿದ್ದಾರೆ. ಮಾರ್ಚ್ ನಲ್ಲಿ ವಾಪಸ್ ಮರಳಿ ಭೂಮಿಗೆ ಬರಬೇಕಿದ್ದ ಅವರ ಯಾನವನ್ನು ಸೆಪ್ಟಂಬರ್ ವರೆಗೆ ವಿಸ್ತರಿಸಲಾಗಿದೆ. ಅವರು ಭೂಮಿಗೆ ಮರಳುವ ವೇಳೆಗೆ 650 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಿದ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ವೈಟ್ಸನ್ ಅವರು ನಾಸಾದಲ್ಲಿ 1980 ರಲ್ಲಿ ವೃತ್ತಿ ಜೀವನ ಆರಂಭಿಸಿ ಹಲವಾರು ಸಂಶೋಧನೆಗಳಲ್ಲಿ ಪಾಲ್ಗೊಂಡಿದ್ದರು. 1992 ರಲ್ಲಿ ಶಟಲ್ ಮೀರ್ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಅವರು 2002 ರಲ್ಲಿ ಎಕ್ಸೆಪೆಡಿಷನ್-5 ಯೋಜನೆಯಡಿ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳಸಿದ್ದರು. 184 ದಿನಗಳ ಕಾಲ ತಂಗಿದ್ದ ಅವರು, 21 ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿದ್ದು. ನಾಸಾದ ಮೊದಲ ವಿಜ್ಞಾನ ಅಧಿಕಾರಿಯಾಗಿದ್ದರು.

ಕಳೆದ ನವೆಂಬರ್ ನಿಂದ ಐಎಸ್ ಎಸ್ ಗೆ ಮರಳಿರುವ ಅವರು 53 ಗಂಟೆಗಳ ಕಾಲ ಅಂತರಿಕ್ಷ ನಡಿಗೆ ಕೈಗೊಂಡಿದ್ದಾರೆ. ಈ ನಡುವೆ 2009 ರಲ್ಲಿ ಗಗನಯಾತ್ರಿಗಳ ಕಚೇರಿಯಲ್ಲಿ ಮುಖ್ಯಸ್ಥೆಯಾಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದರು. ಈಗ ಮತ್ತೆ ಅಂತರಿಕ್ಷ ನಡಿಗೆಗೆ ಸನ್ನದಾರಾಗಿರುವ ಅವರು ಹೊಸ ದಾಖಲೆ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ