ಭಾನುವಾರ, ಏಪ್ರಿಲ್ 30, 2017

ಗೂಗಲ್ ಸಿಇಒ ಸುಂದರ ಪಿಚೈ ವಾರ್ಷಿಕ ವೇತನ

ಗೂಗಲ್ ಸಿಇಒ ಸುಂದರ್ ಪಿಚೈ 2016ರ ವಾರ್ಷಿಕ ವೇತನ ಎಷ್ಟು ಗೊತ್ತೆ?

ನವದೆಹಲಿ, ಏಪ್ರಿಲ್ 30 : ಭಾರತದ ಚೆನ್ನೈ ಮೂಲದ 44 ವರ್ಷದ ಗೂಗಲ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಸುಂದರ್ ಪಿಚೈ ಅವರ ವೇತನದಲ್ಲಿ ಭಾರೀ ಏರಿಕೆಯಾಗಿದೆ.

2015ಕ್ಕೆ ಹೋಲಿಸಿದರೆ 2016ರ ವೇತನ ದುಪ್ಪಟ್ಟಾಗಿದೆ. 2016ಕ್ಕೆ ಅವರು 200 ಮಿಲಿಯನ್ ಡಾಲರ್(ಸುಮಾರು 1285.5 ಕೋಟಿ ರು) ವೇತನ ಪಡೆದಿದ್ದಾರೆ. 2015ರಲ್ಲಿ ಅವರು 99.8 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದರು.

ಪಿಚೈ ನೇತೃತ್ವದಲ್ಲಿ ಬಿಡುಗಡೆಯಾದ ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದನ್ನು ಪರಿಗಣಿಸಿ ವೇತನವನ್ನು ಏರಿಕೆ ಮಾಡಲಾಗಿದೆ. [ಚಿತ್ರಗಳು : ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಗೂಗಲ್ ಸಿಇಒ ಸುಂದರ್ ಪಿಚೈ]

ಗೂಗಲ್ ಕಂಪೆನಿಯು 2016ರಲ್ಲಿ ತನ್ನದೇ ಹೊಸ ಸ್ಮಾರ್ಟ್ಫೋನ್, ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಇತ್ಯಾದಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು.
ಈ ಎಲ್ಲ ಬೆಳವಣಿಗೆಯಲ್ಲಿ ಪಿಚೈ ಅವರ ಮಹತ್ತರ ಪಾತ್ರ ಪರಿಗಣಿಸಿ ವೇತನ ಏರಿಕೆಯಾಗಿದೆ.

ಪಿಚೈ ಮುಖ್ಯಸ್ಥರಾದ ಬಳಿಕ ಯೂಟ್ಯೂಬ್ ವ್ಯವಹಾರ ಹಾಗೂ ಜಾಹೀರಾತು ಆದಾಯದಲ್ಲಿ ದೊಡ್ಡ ಮಟ್ಟಿನ ಏರಿಕೆ ದಾಖಲಿಸಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ