ಶನಿವಾರ, ಜೂನ್ 27, 2015

ಹಣದುಬ್ಬರವಿಳಿತದ ಸಮಗ್ರ ಮಾಹಿತಿ


ಅರ್ಥಶಾಸ್ತ್ರದಲ್ಲಿ, ಹಣದುಬ್ಬರವಿಳಿತ ಎಂಬುದು ಸರಕುಗಳು ಮತ್ತು ಸೇವೆಗಳ ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿನ ಒಂದು ಇಳಕೆಯಾಗಿದೆ.[೧] ವಾರ್ಷಿಕ ಹಣದುಬ್ಬರ ದರವು ಶೂನ್ಯ ಶೇಕಡಾವಾರು ಪ್ರಮಾಣಕ್ಕಿಂತ (ಒಂದು ಋಣಾತ್ಮಕ ಹಣದುಬ್ಬರ ದರ) ಕೆಳಗೆ ಬಿದ್ದಾಗ ಹಣದುಬ್ಬರವಿಳಿತವು ಕಂಡುಬರುತ್ತದೆ. ಇದರಿಂದಾಗಿ ಹಣದ ವಾಸ್ತವಿಕ ಮೌಲ್ಯದಲ್ಲಿ ಒಂದು ಹೆಚ್ಚಳ ಕಂಡುಬರುವಂತಾಗಿ, ಅದೇ ಮೊತ್ತದ ಹಣದಿಂದ ಹೆಚ್ಚು ಸರಕುಗಳನ್ನು ಓರ್ವರು ಖರೀದಿಸಲು ಅದು ಅನುವುಮಾಡಿಕೊಡುತ್ತದೆ. ಹಣದುಬ್ಬರ ದರದಲ್ಲಿನ ಒಂದು ನಿಧಾನೀಕರಣವಾದ ಹಣದುಬ್ಬರ ತಗ್ಗಿಸುವಿಕೆಯೊಂದಿಗೆ ಇದನ್ನು ತಪ್ಪಾಗಿ ಗ್ರಹಿಸಬಾರದು (ಅಂದರೆ, ಹಣದುಬ್ಬರ ಇಳಿಕೆಯಾದರೂ, ಧನಾತ್ಮಕವಾಗಿಯೇ ಉಳಿಯುತ್ತದೆ).[೨] ಹಣದುಬ್ಬರವು ಕಾಲಾನಂತರದಲ್ಲಿ ಹಣದ ವಾಸ್ತವಿಕ ಮೌಲ್ಯವನ್ನು ತಗ್ಗಿಸುತ್ತದೆಯಾದ್ದರಿಂದ, ಇದಕ್ಕೆ ಪ್ರತಿಯಾಗಿ, ಒಂದು ರಾಷ್ಟ್ರೀಯ ಅಥವಾ ಪ್ರಾದೇಶಿಕ ಆರ್ಥಿಕತೆಯಲ್ಲಿ ಕಾರ್ಯಾರ್ಥಕ ಚಲಾವಣೆಯಾದ (ಮತ್ತು ಲೆಕ್ಕಪತ್ರದ ಹಣಕಾಸಿನ ಘಟಕವಾದ) ಹಣದ ವಾಸ್ತವಿಕ ಮೌಲ್ಯವನ್ನು ಹಣದುಬ್ಬರವಿಳಿತವು ಏರಿಸುತ್ತದೆ.
ಸದ್ಯದಲ್ಲಿ, ಮುಖ್ಯವಾಹಿನಿಯ ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ನಂಬುವ ಪ್ರಕಾರ, ಹಣದುಬ್ಬರವಿಳಿತ ಎಂಬುದು ಒಂದು ಆಧುನಿಕ ಆರ್ಥಿಕತೆಯಲ್ಲಿನ ಒಂದು ಸಮಸ್ಯೆಯಾಗಿದೆ. ಇದಕ್ಕೆ ಹಣದುಬ್ಬರವಿಳಿತದ ಸುರುಳಿಯೊಂದರ (ಕೆಳಗೆ ವಿವರಿಸಲಾಗಿದೆ ) ಅಪಾಯವೇ ಕಾರಣ ಎಂಬುದು ಅವರ ಅಭಿಮತ.[೩] ಬ್ಯಾಂಕುಗಳು ಠೇವಣಿದಾರರಿಗೆ ಸಂಬಂಧಿಸಿ ಬಾಕೀದಾರನಾಗುವುದರಿಂದ ಹಣದುಬ್ಬರವಿಳಿತವು ಹಿಂಜರಿತಗಳೊಂದಿಗೆ ಹಾಗೂ ಮಹಾನ್‌ ಕುಸಿತದೊಂದಿಗೂ ಸಂಬಂಧಹೊಂದಿರುತ್ತದೆ. ಇದರ ಜೊತೆಗೆ, ದ್ರವ್ಯತೆಯ ಜಾಲ ಎಂದು ಕರೆಯಲಾಗುವ ಒಂದು ಕಾರ್ಯವಿಧಾನದ ಕಾರಣದಿಂದಾಗಿ ಆರ್ಥಿಕತೆಯನ್ನು ಸ್ಥೀರೀಕರಿಸದಂತೆ ಹಣಕಾಸಿನ ನೀತಿಯನ್ನು ಹಣದುಬ್ಬರವಿಳಿತವು ತಡೆಯುತ್ತದೆ. ಆದಾಗ್ಯೂ, ಹಣದುಬ್ಬರವಿಳಿತದ ಎಲ್ಲಾ ನಿದರ್ಶನಗಳೂ ದುರ್ಬಲ ಆರ್ಥಿಕ ಬೆಳವಣಿಗೆಯ ಅವಧಿಗಳೊಂದಿಗೆ ಐತಿಹಾಸಿಕವಾಗಿ ಸಂಬಂಧ ಹೊಂದಿರುವುದಿಲ್ಲ.[೪]


ಸಾಂಪ್ರದಾಯಿಕ ಪದಸಂಪಾದಿಸಿ
ಹಣದ ಪೂರೈಕೆ ಹಾಗೂ ಖಾತೆಯಲ್ಲಿರುವ ಹಣದ ಮೊತ್ತದಲ್ಲಿನ ಒಂದು ಇಳಿಕೆಯನ್ನು ಉಲ್ಲೇಖಿಸಲು "ಹಣದುಬ್ಬರವಿಳಿತ" ಎಂಬ ಪದವು ಒಂದು ಪಯಾರ್ಯ ಅರ್ಥದೊಂದಿಗೆ ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರಿಂದ ಬಳಸಲ್ಪಟ್ಟಿತು; ಆಸ್ಟ್ರಿಯನ್‌-ಆರ್ಥಿಕ ಚಿಂತನಾ ಪಂಥದ ಅನೇಕ ಅರ್ಥಶಾಸ್ತ್ರಜ್ಞರೂ ಸೇರಿದಂತೆ ಕೆಲವೊಂದು ಅರ್ಥಶಾಸ್ತ್ರಜ್ಞರು ಇದೇ ಅರ್ಥದಲ್ಲಿ ಸದರಿ ಪದವನ್ನು ಬಳಸುತ್ತಾರೆ.[೫] ಹಣ ಪೂರೈಕೆಯಲ್ಲಿನ ಇಳಿಕೆಯು (ಹಣದ ವೇಗವು ಬದಲಾಗಿಲ್ಲ ಎಂದು ಭಾವಿಸುತ್ತಾ) ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿ ಒಂದು ಇಳಿಕೆಯನ್ನು ಉಂಟುಮಾಡುವ ಸಂಭವ ಇರುತ್ತದೆಯಾದರಿಂದ, ಎರಡೂ ಅರ್ಥಗಳು ಸಂಬಂಧವನ್ನು ಹೊಂದಿವೆ.

ಹಣದುಬ್ಬರವಿಳಿತದ ಪರಿಣಾಮಗಳುಸಂಪಾದಿಸಿ

Question book-new.svg
 


 
IS/LM ಮಾದರಿಯಲ್ಲಿ (ಅಂದರೆ, I ncome and S aving equilibrium/ L iquidity Preference and M oney Supply ಸಮತೋಲನದ ಮಾದರಿಯಲ್ಲಿ), ಸರಕುಗಳು ಮತ್ತು ಬಡ್ಡಿಗಾಗಿರುವ ಪೂರೈಕೆ ಮತ್ತು ಬೇಡಿಕೆಯ ವ್ಯತ್ಯಾಸಗೊಳ್ಳುವ ಪ್ರಮಾಣದ ಒಂದು ವರ್ಗಾವಣೆಯಿಂದ, ಅದರಲ್ಲೂ ನಿರ್ದಿಷ್ಟವಾಗಿ ಬೇಡಿಕೆಯ ಒಟ್ಟುಗೂಡಿದ ಮಟ್ಟದಲ್ಲಿನ ಒಂದು ಕುಸಿತದಿಂದಾಗಿ ಹಣದುಬ್ಬರವಿಳಿತವು ಉಂಟಾಗುತ್ತದೆ. ಅಂದರೆ, ಸಮಗ್ರ ಆರ್ಥಿಕತೆಯು ಎಷ್ಟರ ಮಟ್ಟಿಗೆ ಕೊಳ್ಳಲು ಒಪ್ಪಿದೆ ಎಂಬುದರಲ್ಲಿ, ಮತ್ತು ಸರಕುಗಳಿಗಾಗಿರುವ ಸದ್ಯದ ಬೆಲೆಯಲ್ಲಿ ಒಂದು ಕುಸಿತವಿರುತ್ತದೆ. ಸರಕುಗಳ ಬೆಲೆಯು ಕುಸಿಯುತ್ತಿರುತ್ತದೆಯಾದ್ದರಿಂದ, ಬೆಲೆಗಳು ಮತ್ತಷ್ಟು ಕುಸಿಯುವವರೆಗೆ ತಮ್ಮ ಖರೀದಿಗಳನ್ನು ಮತ್ತು ಬಳಕೆಯನ್ನು ವಿಳಂಬ ಮಾಡಲು ಗ್ರಾಹಕರಿಗೆ ಒಂದು ರೀತಿಯಲ್ಲಿ ಉತ್ತೇಜನ ಸಿಕ್ಕಿದಂತಾಗುತ್ತದೆ. ಇದು ಒಟ್ಟಾರೆ ಆರ್ಥಿಕ ಚಟುವಟಿಕೆಯು ತಗ್ಗಲು ಕಾರಣವಾಗಿ, ಹಣದುಬ್ಬರವಿಳಿತದ ಸುರುಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.
ಇದು ಸಾಮರ್ಥ್ಯವನ್ನು ವ್ಯಯಗೊಳಿಸುತ್ತದೆಯಾದ್ದರಿಂದ, ಹೂಡಿಕೆಯೂ ಕುಸಿಯುತ್ತದೆ. ಇದರಿಂದಾಗಿ ಒಟ್ಟುಗೂಡಿದ ಬೇಡಿಕೆಯಲ್ಲಿ ಮತ್ತಷ್ಟು ಇಳಿಕೆಗಳು ಉಂಟಾಗಲು ಕಾರಣವಾಗುತ್ತದೆ. ಇದೇ ಹಣದುಬ್ಬರವಿಳಿತದ ಸುರುಳಿ. ಕುಸಿಯುತ್ತಿರುವ ಒಟ್ಟುಗೂಡಿದ ಬೇಡಿಕೆಗೆ ಪ್ರಚೋದನೆಯು ಒಂದು ಉತ್ತರವಾಗಿದೆ. ಇದು ಕೇಂದ್ರ ಬ್ಯಾಂಕಿನಿಂದ ಮಾಡಲ್ಪಟ್ಟ ಹಣ ಪೂರೈಕೆಯ ವಿಸ್ತರಣೆಯಿಂದ ಬರಬಹುದು, ಅಥವಾ ಬೇಡಿಕೆಯನ್ನು ಹೆಚ್ಚಿಸಲು, ಮತ್ತು ಖಾಸಗಿ ಸಂಸ್ಥೆಗಳಿಗೆ ಲಭ್ಯವಿರುವುದಕ್ಕಿಂತ ಕೆಳಗಿರುವ ಬಡ್ಡಿಯ ದರಗಳಲ್ಲಿ ಸಾಲ ಪಡೆಯಲು ಹಣಕಾಸಿಗೆ ಸಂಬಂಧಿಸಿದ ಪ್ರಾಧಿಕಾರದಿಂದ ಬರಬಹುದು.
ಹಣದುಬ್ಬರವು ಪ್ರತಿಕೂಲ ಪರಿಣಾಮವನ್ನು ಹೊಂದಿರುವುದರಿಂದ ವಾಡಿಕೆಯಂತೆ ಹಿಂಜರಿತಕ್ಕೆ ಮುಂಚಿತವಾಗಿ ಬರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗೆ, ಈ ಅತ್ಯಗತ್ಯ ಅಂಶಗಳ ಬೆಲೆಗಳು 2008ರ ಹಿಂಜರಿತಕ್ಕೆ ಮುಂಚಿತವಾಗಿ ಮುಗಿಲುಮುಟ್ಟಿದ್ದವು.
ತೀರಾ ಇತ್ತೀಚಿನ ಆರ್ಥಿಕ ಚಿಂತನೆಯಲ್ಲಿ, ಹಣದುಬ್ಬರವಿಳಿತವು ಅಪಾಯದೊಂದಿಗೆ ಥಳಕುಹಾಕಿಕೊಂಡಿದೆ:  ಇಂಥ ಸಂದರ್ಭದಲ್ಲಿ ಸ್ವತ್ತುಗಳ ಮೇಲಿನ ಅಪಾಯ-ಹೊಂದಾಣಿಕೆಯ ಪ್ರತಿಫಲವು ಅಭಾವಾತ್ಮಕತೆಗೆ ಕುಸಿಯುತ್ತದೆ, ಮತ್ತು ಹೂಡಿಕೆದಾರರು ಹಾಗೂ ಖರೀದಿದಾರರು ಹಣವನ್ನು ಹೂಡುವುದಕ್ಕೆ ಬದಲಿಗೆ ಕೂಡಿಟ್ಟುಕೊಳ್ಳುತ್ತಾರೆ. ಭದ್ರತೆಗಳ ಸದೃಢ ಪರಿಸ್ಥಿತಿ ಇರುವಾಗಲೂ ಸಹ ಇದು ಕಂಡುಬರುತ್ತದೆ. ಹೆಚ್ಚು ಚರ್ಚೆಗೊಳಗಾದ ಅದರ ದ್ರವ್ಯತೆಯ ಜಾಲವೊಂದರ ಕಾರ್ಯಸಾಧ್ಯ ಸಂಭವನೀಯತೆಯ ಸೈದ್ಧಾಂತಿಕ ಸನ್ನಿವೇಶವನ್ನು ಇದು ನಿರ್ಮಿಸಬಲ್ಲದು. ಸಾಮಾನ್ಯವಾಗಿ ಕೇಂದ್ರ ಬ್ಯಾಂಕೊಂದು ಹಣಕ್ಕೆ ಸಂಬಂಧಿಸಿ ನಿಷೇಧ ರೂಪದ ಬಡ್ಡಿಯನ್ನು ವಿಧಿಸಲಾಗುವುದಿಲ್ಲ ಮತ್ತು ಒಂದು ವೇಳೆ ಶೂನ್ಯ ಬಡ್ಡಿಯನ್ನು ವಿಧಿಸಿದರೂ ಸಹ ಕೆಲವೊಮ್ಮೆ ಕೊಂಚವೇ ಹೆಚ್ಚಿನ ದರಗಳ ಬಡ್ಡಿಗಿಂತ ಕಡಿಮೆಯಿರುವ ಉತ್ತೇಜಕ ಪರಿಣಾಮವನ್ನು ಉಂಟುಮಾಡುತ್ತದೆ. ಮುಚ್ಚಿದ ಆರ್ಥಿಕತೆಯೊಂದರಲ್ಲಿ, ಇದು ಕಂಡುಬರಲು ಕಾರಣವೇನೆಂದರೆ, ಶೂನ್ಯ ಬಡ್ಡಿಯನ್ನು ವೀಧಿಸುವುದೆಂದರೆ ಸರ್ಕಾರಿ ಭದ್ರತೆಗಳ ಮೇಲೆ ಶೂನ್ಯ ಪ್ರತಿಫಲ ಹೊಂದುವುದು, ಅಥವಾ ಅಲ್ಪಾವಧಿಯ ವಾಯಿದೆ ತುಂಬಿರುವಿಕೆಯ ಮೇಲಿನ ನಿಷೇಧ ರೂಪದ ಪ್ರತಿಫಲವನ್ನು ಹೊಂದುವುದು ಎಂದೂ ಅರ್ಥಬರುತ್ತದೆ. ಮುಕ್ತ ಆರ್ಥಿಕತೆಯೊಂದರಲ್ಲಿ ಇದು ಸಾಗಣೆ ವ್ಯಾಪಾರವೊಂದನ್ನು ಸೃಷ್ಟಿಸುತ್ತದೆ, ಮತ್ತು ಚಲಾವಣೆಯ ಹಣವನ್ನು ಅಪಮೌಲ್ಯಗೊಳಿಸುತ್ತದೆ. ಇದರಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ರಫ್ತುಗಳಿಗೆ ಉತ್ತೇಜನ ಸಿಗದೆ ಆಮದುಗಳಿಗೆ ಹೆಚ್ಚಿನ ಬೆಲೆಗಳು ಉಂಟಾಗುತ್ತವೆ.
ಹಣ-ನಿಯಂತ್ರಣವಾದಿ ಸಿದ್ಧಾಂತದಲ್ಲಿ, ಹಣದುಬ್ಬರವಿಳಿತವು ಹಣದ ವೇಗ ಅಥವಾ ವ್ಯವಹಾರ ಕಾರ್ಯಗಳ ಸಂಖ್ಯೆಗಳಲ್ಲಿನ ಒಂದು ಅವಿಶ್ರಾಂತವಾದ ಇಳಿಕೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಹಣ ಪೂರೈಕೆಯ ಒಂದು ನಾಟಕೀಯ ಕುಗ್ಗುವಿಕೆಯು ಇದಕ್ಕೆ ಕಾರಣವಾಗಿದ್ದು, ಪ್ರಾಯಶಃ ಇದು ಕುಸಿಯುತ್ತಿರುವ ಒಂದು ವಿನಿಯ ದರಕ್ಕೆ ಪ್ರತಿಕ್ರಿಯೆಯಾಗಿರುತ್ತದೆ, ಅಥವಾ ಒಂದು ಸುವರ್ಣಮಾನ ಅಥವಾ ಇತರ ಬಾಹ್ಯ ಹಣಕಾಸಿನ ಮೂಲದ ಅಗತ್ಯತೆಗೆ ಅನುಸಾರವಾಗಿರಲು ಕಂಡುಬರುತ್ತದೆ.
ಹಣ ಕೂಡಿಡುವರ ಮತ್ತು ಪರಿವರ್ತಿಸಬಹುದಾದ ಸ್ವತ್ತುಗಳು ಹಾಗೂ ಚಲಾವಣೆ ಹಣವನ್ನು ಹೊಂದಿರುವವರ ಪ್ರಯೋಜನಕ್ಕಾಗಿ ಅಪರಿವರ್ತನೀಯ ಸ್ವತ್ತುಗಳ ಹಿಡುವಳಿದಾರಿಂದ ಹಾಗೂ ಸಾಲಗಾರರಿಂದ ಸಂಪತ್ತಿನ ವರ್ಗಾವಣೆಯಾಗಲು ಹಣದುಬ್ಬರವಿಳಿತವು ಕಾರಣವಾಗುತ್ತದೆಯಾದ್ದರಿಂದ, ಹಣದುಬ್ಬರವಿಳಿತವನ್ನು ಸಾಮಾನ್ಯವಾಗಿ ಋಣಾತ್ಮಕವಾಗಿ ಪರಿಗಣಿಸಲಾಗುತ್ತದೆ. ಈ ಅರ್ಥದಲ್ಲಿ ಇದು ಹಣದುಬ್ಬರಕ್ಕೆ (ಅಥವಾ ತೀರಾ ವಿಪರೀತ ಸನ್ನಿವೇಶದಲ್ಲಿ, ಅತಿ-ಹಣದುಬ್ಬರಕ್ಕೆ) ವಿರುದ್ಧವಾದುದಾಗಿದ್ದು, ಇದು ಸಾಲಗಾರರು ಹಾಗೂ ಅಲ್ಪಾವಧಿಯ ಬಳಕೆಯ ಪರವಾಗಿ ಚಲಾವಣಾ ಹಣವನ್ನು ಹೊಂದಿರುವವರು ಹಾಗೂ ಸಾಲದಾತರ (ಕೂಡಿಡುವವರ) ಮೇಲಿನ ಒಂದು ತೆರಿಗೆಯಾಗಿರುತ್ತದೆ. ಆಧುನಿಕ ಆರ್ಥಿಕತೆಗಳಲ್ಲಿ, ಬೇಡಿಕೆಯಲ್ಲಿನ ಒಂದು ಕುಸಿತದಿಂದಾಗಿ ಹಣದುಬ್ಬರವಿಳಿತವು ಉಂಟಾಗುತ್ತದೆ (ಸಾಮಾನ್ಯವಾಗಿ ಹೆಚ್ಚಿನ ಬಡ್ಡಿದರಗಳಿಂದ ಇದು ಉಂಟಾಗುತ್ತದೆ), ಮತ್ತು ಇದು ಹಿಂಜರಿತದೊಂದಿಗೆ ಹಾಗೂ (ತೀರಾ ಅಪರೂಪವಾಗಿ) ದೀರ್ಘಾವಧಿಯ ಆರ್ಥಿಕ ಕುಸಿತಗಳೊಂದಿಗೆ ಸಂಬಂಧಹೊಂದಿರುತ್ತದೆ.
ಆಧುನಿಕ ಆರ್ಥಿಕತೆಗಳಲ್ಲಿ, ಸಾಲದ ಅವಧಿಗಳು ದೀರ್ಘವಾಗಿ ಬೆಳೆದಿರುತ್ತವೆಯಾದ್ದರಿಂದ ಮತ್ತು ಸಾಲದ ನೆರವು ನೀಡುವುದು ಎಲ್ಲಾ ತೆರನಾದ ಹೂಡಿಕೆಗಳ ಪೈಕಿ ಸಾಮಾನ್ಯವಾಗಿರುವುದರಿಂದ, ಹಣದುಬ್ಬರವಿಳಿತದೊಂದಿಗೆ ಗುರುತಿಸಿಕೊಂಡಿರುವ ದಂಡ ಅಥವಾ ಜುಲ್ಮಾನೆಗಳು ಸಾಮಾನ್ಯವಾಗಿರುತ್ತದೆ. ಲಾಭಗಳಿಕೆಯ ನಿರೀಕ್ಷೆಯು ಋಣಾತ್ಮಕವಾಗಿ ಪರಿಣಮಿಸಬಹುದಾಗಿರುವಾಗ ಮತ್ತು ಭವಿಷ್ಯದ ಬೆಲೆಗಳ ನಿರೀಕ್ಷೆಯು ಕಡಿಮೆಯಾಗಿದ್ದಾಗ, ಭವಿಷ್ಯದ ಲಾಭಗಳಿಕೆಗಳ ಮೇಲಿನ ನಷ್ಟದಲ್ಲಿ ಸಿಲುಕುವುದಕ್ಕೆ ಯಾವುದೇ ಕಾರಣವಿಲ್ಲವಾದ್ದರಿಂದ ಹೂಡಿಕೆ ಮತ್ತು ಖರ್ಚುಮಾಡುವಿಕೆಯನ್ನು ಹಣದುಬ್ಬರವಿಳಿತ ಪ್ರೋತ್ಸಾಹಿಸುವುದಿಲ್ಲ. ಹೀಗಾಗಿ ಇದು ಒಟ್ಟುಗೂಡಿದ ಬೇಡಿಕೆಯಲ್ಲಿನ ಒಂದು ಕುಸಿತಕ್ಕೆ ಕೊಂಡೊಯ್ಯುತ್ತದೆ, ಅಥವಾ ಅದರೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. "ಹಣದುಬ್ಬರದ ಗುಪ್ತ ಅಪಾಯ"ವಿಲ್ಲದೆ, ಹಣವನ್ನು ಹಾಗೆಯೇ ಹಿಡಿದಿಟ್ಟುಕೊಳ್ಳುವುದು, ಮತ್ತು ಅದನ್ನು ಖರ್ಚುಮಾಡದೆ ಅಥವಾ ಹೂಡಿಕೆ ಮಾಡದೆ ಇರುವುದು ವಿವೇಚನಾಯುಕ್ತ ತೀರ್ಮಾನ ಎನಿಸಿಕೊಳ್ಳುತ್ತದೆ.
ಆದಾಗ್ಯೂ, ಧನಾತ್ಮಕ ಜನಸಂಖ್ಯಾ (ಮತ್ತು ಸಾರ್ವತ್ರಿಕ ಆರ್ಥಿಕ) ಬೆಳವಣಿಗೆಗೆ ಅನುಗುಣವಾಗಿರುವ ದರದಲ್ಲಿ ಹಣದ ಪೂರೈಕೆಯಲ್ಲಿನ ಏರಿಕೆಯ ದರವನ್ನು ಕಾಯ್ದುಕೊಳ್ಳದಿದ್ದಾಗ ಹಣದುಬ್ಬರವಿಳಿತವು ಪರಿವರ್ತನೀಯ ಹಣದ ಆರ್ಥಿಕತೆಗಳಲ್ಲಿನ ಸ್ವಾಭಾವಿಕ ಸ್ಥಿತಿಯಾಗಿರುತ್ತದೆ. ಇದು ಸಂಭವಿಸಿದಾಗ, ತಲಾ ವ್ಯಕ್ತಿಯ ಪರಿವರ್ತನೀಯ ಹಣದ ಲಭ್ಯ ಮೊತ್ತವು ಕುಸಿಯುತ್ತದೆ. ಇದರಿಂದಾಗಿ ಹಣದ ಹೆಚ್ಚಿನ ಪ್ರಮಾಣದಲ್ಲಿ ಹಣದ ಕೊರತೆಯ ಕಂಡುಬರುತ್ತದೆ; ಮತ್ತು ತತ್ಪರಿಣಾಮವಾಗಿ, ಚಲಾವಣಾ ಹಣದ ಏರಿಕೆಗಳ ಪ್ರತಿ ಘಟಕದ ಖರೀದಿ ಸಾಮರ್ಥ್ಯವು ಕಡಿಮೆಯಾಗುತ್ತದೆ. ಕಳೆದ 19ನೇ ಶತಮಾನವು ಈ ಸನ್ನಿವೇಶಗಳಡಿಯಲ್ಲಿನ ಆರ್ಥಿಕ ಅಭಿವೃದ್ಧಿಯೊಂದಿಗೆ ಸಂಯೋಜಿಸಲ್ಪಟ್ಟ ಸಮರ್ಥಿಸಲ್ಪಟ್ಟ ಹಣದುಬ್ಬರವಿಳಿತಕ್ಕೆ ಒಂದು ಉದಾಹರಣೆಯಾಗಿದೆ.
ಉತ್ಪಾದನಾ ಸಾಮರ್ಥ್ಯದಲ್ಲಿನ ಸುಧಾರಣೆಗಳು ಸರಕುಗಳ ಒಟ್ಟಾರೆ ಬೆಲೆಯನ್ನು ತಗ್ಗಿಸಿದಾಗಲೂ ಸಹ ಹಣದುಬ್ಬರವಿಳಿತವು ಕಂಡುಬರುತ್ತದೆ. ಸರಕುಗಳು ಮತ್ತು ಸೇವೆಗಳ ವ್ಯಾಪಾರೀ ಉತ್ಪಾದಕರು ತಾವು ಮಾಡುವ ಉತ್ಪಾದನಾ ಸುಧಾರಣೆಯಿಂದ ಹೊರಹೊಮ್ಮುವ ಏರಿಕೆಗೊಂದ ಲಾಭಾಂಶದ ಒಂದು ಭರವಸೆಯಿಂದ ಪ್ರೇರಿತರಾಗುವುದರಿಂದ ಉತ್ಪಾದನಾ ಸಾಮರ್ಥ್ಯದಲ್ಲಿನ ಸುಧಾರಣೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ವೆಚ್ಚದ ಉಳಿತಾಯಗಳಲ್ಲಿನ ಕಡೇಪಕ್ಷ ಸ್ವಲ್ಪ ಭಾಗವನ್ನು ತಮ್ಮ ಸರಕುಗಳಿಗಾಗಿರುವ ಮಾರಾಟದ ಬೆಲೆಯನ್ನು ತಗ್ಗಿಸುವಲ್ಲಿ ಅನ್ವಯಿಸಲೆಂದು ಅಂಥಾ ಉತ್ಪಾದಕರನ್ನು ಮಾರುಕಟ್ಟೆ ವಲಯದಲ್ಲಿ ಕಂಡುಬರುವ ಸ್ಪರ್ಧೆಯು ಹಲವು ಬಾರಿ ಪ್ರೇರೇಪಿಸುತ್ತದೆ. ಇದು ಸಂಭವಿಸಿದಾಗ, ಆ ಸರಕುಗಳಿಗೆ ಗ್ರಾಹಕರು ಕಡಿಮೆ ಹಣವನ್ನು ತೆರುತ್ತಾರೆ; ಮತ್ತು ಖರೀದಿ ಸಾಮರ್ಥ್ಯವು ಹೆಚ್ಚಳಗೊಂಡ ಕಾರಣದಿಂದಾಗಿ ಇದು ಹಣದುಬ್ಬರವಿಳಿತದಲ್ಲಿ ಪರಿಣಮಿಸುತ್ತದೆ.
ಓರ್ವನ ಹಣದ ಖರೀದಿಸುವ ಸಾಮರ್ಥ್ಯದಲ್ಲಿನ ಒಂದು ಹೆಚ್ಚಳವು ಪ್ರಯೋಜನಕಾರಿಯಾಗಿ ಕಂಡುಬಂದಲ್ಲಿ, ವಾಸ್ತವವಾಗಿ ಇದು ಅಭಾವವನ್ನು ತಂದೊಡ್ಡಬಲ್ಲದು. ಏಕೆಂದರೆ, ಓರ್ವನ ನಿವ್ವಳ ಗಳಿಕೆಯು ಮನೆಗಳು, ಭೂಮಿ, ಮತ್ತು ಖಾಸಗಿ ಸ್ವತ್ತಿನ ಇತರ ಸ್ವರೂಪಗಳಂಥ ಅಪರಿವರ್ತನೀಯ ಸ್ವತ್ತುಗಳಲ್ಲಿ ಹಿಡಿದಿಡಲ್ಪಡುತ್ತದೆ. ಇದು ಋಣಭಾರದ ಕೊರೆತವನ್ನೂ ವರ್ಧಿಸುತ್ತದೆ. ಏಕೆಂದರೆ ಗಣನೀಯ ಪ್ರಮಾಣದ ಹಣದುಬ್ಬರವಿಳಿತದ ಒಂದಷ್ಟು ಅವಧಿಯ ನಂತರ, ಋಣಭಾರವೊಂದರ ಸೇವೆಯಲ್ಲಿ ಓರ್ವನು ಮಾಡುತ್ತಿರುವ ಪಾವತಿಗಳು ಖರೀದಿ ಸಾಮರ್ಥ್ಯದ ಒಂದು ಬೃಹತ್ ಪ್ರಮಾಣವನ್ನು ಪ್ರತಿನಿಧಿಸುತ್ತವೆ. ಈ ಪ್ರಮಾಣವು ಋಣಭಾರಕ್ಕೆ ಮೊದಲು ಈಡಾದಾಗ ಮಾಡಿದುದಕ್ಕಿಂತ ಹೆಚ್ಚಿರುತ್ತದೆ. ಆದ್ದರಿಂದ, ಹಣದುಬ್ಬರವಿಳಿತವನ್ನು ಒಂದು ಸಾಲದ ಬಡ್ಡಿದರದ ಒಂದು ತೋರ್ಕೆಯ ವರ್ಧನೆ ಅಥವಾ ಉತ್ಪ್ರೇಕ್ಷೆಯ ರೀತಿಯಲ್ಲಿ ಭಾವಿಸಬಹುದು. ಒಂದು ವೇಳೆ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಮಹಾನ್‌ ಕುಸಿತದ ಅವಧಿಯಲ್ಲಿದ್ದಂತೆ ಹಣದುಬ್ಬರವಿಳಿತವು ವಾರ್ಷಿಕವಾಗಿ ಸರಾಸರಿ 10%ನಷ್ಟಿದ್ದರೆ, ಒಂದು 0% ಸಾಲವೂ ಕೂಡ ಅನಾಕರ್ಷಕವಾಗಿ ಪರಿಣಮಿಸಬಲ್ಲದು. ಏಕೆಂದರೆ ಅದನ್ನು 10% ಹೆಚ್ಚಿನ ಮೌಲ್ಯದ ಹಣದೊಂದಿಗೆ ಪ್ರತಿ ವರ್ಷ ಮರುಪಾವತಿ ಮಾಡಬೇಕಾಗುತ್ತದೆ.
ಏಕೆಂದರೆ

ಸಾಮಾನ್ಯ ಸನ್ನಿವೇಶಗಳಡಿಯಲ್ಲಿ, ಫೆಡರಲ್‌ ಮತ್ತು ಹೆಚ್ಚಿನ ಇತರ ಕೇಂದ್ರ ಬ್ಯಾಂಕುಗಳು ಒಂದು ಅಲ್ಪಾವಧಿಯ ಬಡ್ಡಿದರಕ್ಕಾಗಿರುವ ಗುರಿಯನ್ನು ಇರಿಸಿಕೊಂಡು ಕಾರ್ಯನೀತಿಯನ್ನು ಅಳವಡಿಸಿಕೊಳ್ಳುತ್ತವೆ--ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ರಾತ್ರೋರಾತ್ರಿಯ ಫೆಡರಲ್‌ ನಿಧಿಗಳ ದರದಂತೆ ಇದೂ ಇರುತ್ತದೆ--ಮತ್ತು ಮುಕ್ತ ಬಂಡವಾಳ ಮಾರುಕಟ್ಟೆಗಳಲ್ಲಿ ಖಾತರಿಗಳನ್ನು (ಅಂದರೆ ಸಾಲದ ಅಥವಾ ಬಂಡವಾಳದ ಪತ್ರಗಳನ್ನು) ಖರೀದಿಸುವ ಹಾಗೂ ಮಾರಾಟ ಮಾಡುವ ಮೂಲಕ ಆ ಗುರಿಯನ್ನು ಜಾರಿಗೆ ತರುತ್ತವೆ. ಅಲ್ಪಾವಧಿಯ ಬಡ್ಡಿದರವು ಶೂನ್ಯವನ್ನು ಮುಟ್ಟಿದಾಗ, ಕೇಂದ್ರ ಬ್ಯಾಂಕು ತನ್ನ ವಾಡಿಕೆಯ ಬಡ್ಡಿದರದ ಗುರಿಯನ್ನು ಕಡಿಮೆ ಮಾಡುವುದರಿಂದ ಕಾರ್ಯನೀತಿಯನ್ನು ಹೆಚ್ಚು ಕಾಲ ಸರಾಗಗೊಳಿಸಲಾಗುವುದಿಲ್ಲ.,

ಅಲ್ಪಾವಧಿ ಬಡ್ಡಿದರವನ್ನು ಶೂನ್ಯಕ್ಕೆ ಇಳಿಸಿದರೂ ಕೂಡ ಅದು ಒಂದು "ವಾಸ್ತವಿಕ" ಬಡ್ಡಿದರದಲ್ಲಿ ಪರಿಣಮಿಸಿ, ಸದರಿ ದರವು ಇನ್ನೂ ಹೆಚ್ಚಾಗಿ ಕಂಡುಬರಬಹುದಾದ್ದರಿಂದ, ಹಣ ಪೂರೈಕೆಯನ್ನು ನಿಯಂತ್ರಿಸುವ ವಾಡಿಕೆಯ ಕಾರ್ಯವಿಧಾನಗಳು ಪರಿಣಾಮಕಾರಿಯಾಗದೇ ಹೋಗಬಹುದು; ಹೀಗಾಗಿ, ಹಣದ ಪೂರೈಕೆಯನ್ನು ಹೆಚ್ಚಿಸಲು ಸ್ವತ್ತುಗಳು ಅಥವಾ ಪರಿಮಾಣಾತ್ಮಕ ಸರಾಗಗೊಳಿಸುವಿಕೆಯಂಥ (ಹಣವನ್ನು ಮುದ್ರಿಸುವಂಥ) ಇತರ ಕಾರ್ಯವಿಧಾನಗಳನ್ನು ಜಾರಿಗೆ ತರಬೇಕಾಗುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಫೆಡರಲ್‌ ರಿಸರ್ವ್‌ ವ್ಯವಸ್ಥೆಯ ಪ್ರಸಕ್ತ ಅಧ್ಯಕ್ಷನಾದ ಬೆನ್‌ ಬೆರ್ನಾಂಕೆ 2002ರಲ್ಲಿ ಹೇಳಿದಂತೆ, "...ಸಾಕಾಗುಷ್ಟು ಪ್ರಮಾಣದಲ್ಲಿ ಮಾಡಲಾಗುವ ಹಣದ ಒಳಸೇರಿಸುವಿಕೆಗಳು ಅಂತಿಮವಾಗಿ ಯಾವಾಗಲೂ ಹಣದುಬ್ಬರವಿಳಿತವೊಂದನ್ನು ಹಿಮ್ಮುಖವಾಗಿಸುತ್ತವೆ."[೬]
ಹಣದ ಕಟ್ಟಾ ಸಮರ್ಥಕರು ವಾದಿಸುವ ಪ್ರಕಾರ, ಒಂದು ವೇಳೆ ಆರ್ಥಿಕತೆಯೊಂದರಲ್ಲಿ ಯಾವುದೇ "ಕಟ್ಟುನಿಟ್ಟುಗಳು" ಇರದಿದ್ದಲ್ಲಿ, ಹಣದುಬ್ಬರವಿಳಿತವು ಒಂದು ಸ್ವಾಗತಾರ್ಹ ಪರಿಣಾಮವಾಗಿರಬೇಕಾಗಿರುತ್ತದೆ. ಏಕೆಂದರೆ ಇತರ ಚಟುವಟಿಕೆಯ ವಲಯಗಳಿಗೆ ಆರ್ಥಿಕತೆಯ ಹೆಚ್ಚಿನ ಪ್ರಯತ್ನವು ಸಾಗುವಂತೆ ಬೆಲೆಗಳ ತಗ್ಗಿಸುವಿಕೆಯು ಅನುವುಮಾಡಿಕೊಡುತ್ತದೆ. ಹೀಗಾಗಿ ಆರ್ಥಿಕತೆಯ ಒಟ್ಟಾರೆ ಉತ್ಪನ್ನ ಅಥವಾ ಫಲಿತಾಂಶವು ವರ್ಧಿಸುತ್ತದೆ. ಕೆಲವೊಂದು ಅರ್ಥಶಾಸ್ತ್ರಜ್ಞರು ಈ ಸಿದ್ಧಾಂತವನ್ನು ಟೀಕಿಸಿದ್ದಾರೆ. ಆರ್ಥಿಕತೆಯಲ್ಲಿ ಕಟ್ಟುನಿಟ್ಟುಗಳು ಇರದೇ ಹೋದಲ್ಲಿ, ಹಣದುಬ್ಬರವಾಗಲೀ ಅಥವಾ ಹಣದುಬ್ಬರವಿಳಿತವಾಗಲೀ ಯಾವುದೇ ಗಮನಾರ್ಹವಾದ ಪರಿಣಾಮವನ್ನು ಹೊಂದುವುದಿಲ್ಲ ಎಂಬುದು ಈ ಅರ್ಥಶಾಸ್ತ್ರಜ್ಞರ ಅಭಿಪ್ರಾಯ.
ಚಲಾವಣಾ ಹಣವನ್ನು ಯಾರು ಹೊಂದಿಲ್ಲವೋ ಅವನಿಗಿಂತ ಅದನ್ನು ಯಾರು ಹಿಡಿದಿಟ್ಟುಕೊಂಡಿದ್ದಾರೋ ಅಂಥವರನ್ನು ಹಣದುಬ್ಬರವಿಳಿತದ ಅವಧಿಗಳು ಓಲೈಸುತ್ತವೆಯಾದ್ದರಿಂದ, ಶ್ರೀಸಾಮಾನ್ಯನ ವರ್ಗದ ಹೆಚ್ಚುತ್ತಿರುವ ಭಾವನೆಯ ಅವಧಿಗಳೊಂದಿಗೆ ಅವನ್ನು ಹಲವು ಬಾರಿ ಹೋಲಿಸಲಾಗುತ್ತದೆ. 19ನೇ ಶತಮಾನದ ಅಂತ್ಯದ ವೇಳೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಶ್ರೀಸಾಮಾನ್ಯರು ಕಟ್ಟಾ ಹಣದ ಮಾನದಂಡಗಳಿಂದ ದೂರವಾಗಿ, ಹೆಚ್ಚು ಹಣದುಬ್ಬರದ ಲೋಹವಾದ ಬೆಳ್ಳಿಯನ್ನು (ಏಕೆಂದರೆ ಇದು ಹೆಚ್ಚು ಹೇರಳವಾಗಿ ಲಭ್ಯವಿತ್ತು) ಆಧರಿಸಿದ ಹಣದ ಮಾನದಂಡವೊಂದರ ಕಡೆಗೆ ಮರಳಲು ಬಯಸಿದಾಗ ಇಂಥದೇ ಸಂದರ್ಭವಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ