ಶನಿವಾರ, ಡಿಸೆಂಬರ್ 9, 2017

ಕುವೆಂಪು ಮತ್ತು ರಾಜಕೀಯ

#ಕುವೆಂಪು_ಮತ್ತು_ರಾಜಕೀಯ

ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕೆಯನ್ನು ಕುವೆಂಪು ಮೌಲ್ಯಮಾಪನ ಮಾಡಿದರು. ನೂರಕ್ಕೆ 17 ಅಂಕವನ್ನು ಕೊಟ್ಟರು. ಇದು ಆಗಿನ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎನ್.ಎಸ್.ಸುಬ್ಬರಾವ್ ಅವರಿಗೆ ಗೊತ್ತಾಯಿತು. ಅಲ್ಲದೆ ಈ ವಿಷಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೂ ತಿಳಿಯಿತು. ಕುಲಪತಿ ಅವರು ಈ ಬಗ್ಗೆ ವಿಚಾರಣೆ ನಡೆಸಲು ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಂಡರು.

ವೆಂಕಣ್ಣಯ್ಯ ಅವರು ಕುವೆಂಪು ಅವರನ್ನು ಕರೆದು, `ಏನಯ್ಯ, ರಾಜಕುಮಾರರಿಗೆ 17 ಅಂಕ ನೀಡಿದ್ದೀಯಲ್ಲ' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕುವೆಂಪು, `ನಾನು ನೀಡಿದ್ದಲ್ಲ. ಅವರು ತೆಗೆದುಕೊಂಡಿದ್ದು ಅಷ್ಟು' ಎಂದು ಉತ್ತರಿಸಿದರು. `ಅದನ್ನು 71 ಮಾಡಲು ಸಾಧ್ಯವಿಲ್ಲವೇ?' ಎಂದು ವೆಂಕಣ್ಣಯ್ಯ ಕೇಳಿದಾಗ, `ಉತ್ತರ ಪತ್ರಿಕೆಯನ್ನು ನೀವೇ ನೋಡಿ. ಎಷ್ಟು ಬೇಕಾದರೂ ಅಂಕ ಕೊಡಿ' ಎಂದು ಕುವೆಂಪು ಹೇಳಿದರಂತೆ.

ಇದರಿಂದ ಮಹಾರಾಜರೇನೂ ಸಿಟ್ಟಾಗಲಿಲ್ಲ. ಬದಲಿಗೆ ಕುವೆಂಪು ಅವರಿಗೆ ವಾರಕ್ಕೆ ಮೂರು ದಿನ ಅರಮನೆಗೆ ಬಂದು ಯುವ ರಾಜರಿಗೆ ಪಾಠ ಮಾಡಿ. ನಿಮ್ಮನ್ನು ಕರೆದುಕೊಂಡು ಬರಲು ಕಾರು ಕಳುಹಿಸಲಾಗುತ್ತದೆ. ಅಲ್ಲದೆ ನೂರು ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಿದರಂತೆ. ಆದರೆ ಅದಕ್ಕೂ ಕುವೆಂಪು ಒಪ್ಪಲಿಲ್ಲ. ಮಹಾರಾಜರ ಆಹ್ವಾನವನ್ನು ತಿರಸ್ಕರಿಸಿದ್ದೇ ಅಲ್ಲದೆ ಒಂದು ಕವನವನ್ನೂ ಬರೆದರು.

ವಸಂತ ವನದಲ್ಲಿ ಕೂಗುವ ಕೋಗಿಲೆ
ರಾಜರ ಬಿರುದನ್ನು ಬಯಸುವುದಿಲ್ಲ
ಕವಿಗೆ ಅರಸುಗಿರಸುಗಳ ಋಣವಿಲ್ಲ
ಅವನು ಅಗ್ನಿಮುಖಿ ಪ್ರಳಯ ಶಿಖಿ

ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಇನ್ನೂ ಮಾನಸ ಗಂಗೋತ್ರಿಗೆ ಸಂಪೂರ್ಣವಾಗಿ ಸ್ಥಳಾಂತರವಾಗಿರಲಿಲ್ಲ. ಸ್ಥಳಾಂತರಕ್ಕೆ ಸಾಕಷ್ಟು ಮಂದಿಯ ವಿರೋಧ ಕೂಡ ಇತ್ತು. ಮಾನಸ ಗಂಗೋತ್ರಿಗೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಸಾಹಸದಲ್ಲಿ ಕುವೆಂಪು ನಿರತರಾಗಿದ್ದರು.

ಮಾಜಿ ಕೇಂದ್ರ ಸಚಿವರೂ ಆಗಿದ್ದ ಸಿ.ಡಿ.ದೇಶಮುಖ್ ಅವರು ಆಗ ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ತಮ್ಮ ಪತ್ನಿ ಜೊತೆಗೆ ಕೃಷ್ಣರಾಜಸಾಗರಕ್ಕೆ ಬಂದು ಉಳಿದುಕೊಂಡಿದ್ದರು. ಹೀಗೆ ಬಂದ ದೇಶಮುಖ್ ಅವರಿಗೆ ಜ್ವರ ಬಂದು ನಾಲ್ಕು ದಿನ ಇಲ್ಲಿಯೇ ಉಳಿದುಕೊಳ್ಳುವಂತೆ ಆಯಿತು. ಆಗ ಪ್ರತಿ ದಿನ ಕುವೆಂಪು ಕೆಆರ್‌ಎಸ್‌ಗೆ ಹೋಗಿ ಅವರನ್ನು ನೋಡಿಕೊಂಡು ಬರುತ್ತಿದ್ದರಂತೆ.  ದೇಶಮುಖ್ ಅವರ ಪತ್ನಿ ಒಳ್ಳೆ ಕವಯತ್ರಿ. ಕುವೆಂಪು ಅವರು ಅಲ್ಲಿಗೆ ಹೋದಾಗ ಇವರೊಂದು ಅವರೊಂದು ಕವನ ವಾಚಿಸುತ್ತಿದ್ದರಂತೆ.

ಆಗಿನ್ನು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಯುಜಿಸಿ ವೇತನ ಸಿಗುತ್ತಿರಲಿಲ್ಲ. ಕುವೆಂಪು ಈ ಬಗ್ಗೆ ದೇಶಮುಖ್ ಅವರಲ್ಲಿ ಪ್ರಸ್ತಾಪಿಸಿದಾಗ, `ನಿಮ್ಮ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕಳುಹಿಸಿದರೆ ತಕ್ಷಣವೇ ಅದಕ್ಕೆ ಒಪ್ಪಿಗೆ ಕೊಡುತ್ತೇನೆ' ಎಂಬ ಭರವಸೆಯನ್ನು ನೀಡಿದರು.

ಖುಷಿಯಾದ ಕುವೆಂಪು ಈ ಬಗ್ಗೆ ಚರ್ಚೆ ನಡೆಸಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ `ತಮ್ಮನ್ನು ಕಾಣಲು ಬರಬೇಕು. ನಿಮ್ಮ ಸಮಯ ತಿಳಿಸಿ' ಎಂದು ಕೇಳಿಕೊಂಡರು. ಅದಕ್ಕೆ ನಿಜಲಿಂಗಪ್ಪ `ನೀವು ನನ್ನನ್ನು ನೋಡಲು ಇಲ್ಲಿಗೆ ಬರುವುದಾ? ನನಗೆ ಅವಮಾನ ಮಾಡಬೇಡಿ. ನಮ್ಮ ಶಿಕ್ಷಣ ಸಚಿವರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಚರ್ಚೆ ಮಾಡಿ. ನಾನು ಎಲ್ಲ ಅನುಕೂಲ ಮಾಡಿಕೊಡುತ್ತೇನೆ' ಎಂದು ಉತ್ತರಿಸಿದರು.

ಅದರಂತೆ ಆಗಿನ ಶಿಕ್ಷಣ ಸಚಿವ ವಿ.ವೆಂಕಟಪ್ಪ ಕುವೆಂಪು ಅವರ ಬಳಿಗೆ ಬಂದು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಆಲಿಸಿದರು. ಯುಜಿಸಿಗೆ ಸೂಕ್ತ ಪ್ರಸ್ತಾವನೆಯನ್ನೂ ಸಲ್ಲಿಸಿದರು. ಅಲ್ಲದೆ ಮಾನಸ ಗಂಗೋತ್ರಿಯಲ್ಲಿ ಸಂಚರಿಸಿ ಅಲ್ಲಿ ಮೂರು ಕಟ್ಟಡಗಳನ್ನು ನಿರ್ಮಿಸಲು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ನೀಡಲು ಒಪ್ಪಿಕೊಂಡರು.
***
ಕುವೆಂಪು ಅವರು ಕರ್ನಾಟಕ ಏಕೀಕರಣದ ಪರವಾಗಿದ್ದರು. ಇದರಿಂದ ಮೈಸೂರು ಭಾಗದ ರಾಜಕಾರಣಿಗಳು ಸಿಟ್ಟಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕುವೆಂಪು ಅವರಿಗೆ ಒಂದು ನೋಟಿಸ್ ಜಾರಿ ಮಾಡಿತು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಕೇಳಿತು. ಅದಕ್ಕೆ ಕುವೆಂಪು ಪದ್ಯದ ರೂಪದಲ್ಲಿಯೇ ಉತ್ತರ ಬರೆದರು. ಆ ಪದ್ಯವೇ ಕುವೆಂಪು ಅವರ ಪ್ರಸಿದ್ಧ `ಅಖಂಡ ಕರ್ನಾಟಕ' ಪದ್ಯ.
ರಾಜ್ಯ ಸರ್ಕಾರದ ನೋಟಿಸ್‌ಗೆ ಕುವೆಂಪು ಉತ್ತರ ಹೀಗಿದೆ:

ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಹರಸುತಿಹನು ದೇವ ಗಾಂಧಿ
ಮಂತ್ರಿಸಿಹುದು ಋಷಿಯ ನಾಂದಿ
*
ಅಖಂಡ ಕರ್ನಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
*
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ
***
ಕುವೆಂಪು ಅವರ ಪದ್ಯರೂಪದ ಉತ್ತರ ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಅವರನ್ನು ಮೆಳ್ಳಗಣ್ಣು ಎಂದು ಟೀಕಿಸಿದ್ದು ಕೂಡ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿತ್ತು. ಮೈಸೂರಿನಲ್ಲಿ ಕೆಲವರು ಈ ಪದ್ಯವನ್ನು ಸಾವಿರಾರು ಪ್ರತಿ ಮಾಡಿ ಹಂಚಿಬಿಟ್ಟರು. ವಿಷಯ ಸಚಿವ ಸಂಪುಟದ ಮುಂದೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದವರು ಕೆ.ಸಿ.ರೆಡ್ಡಿ. ಸಂಪುಟ ಸಭೆಯಲ್ಲಿ ಕೆಲವು ಸಚಿವರು ಕುವೆಂಪು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅವರ ಬಡ್ತಿ ರದ್ದು ಮಾಡಬೇಕು. ಇನ್ನೊಂದು ನೋಟಿಸ್ ನೀಡಬೇಕು ಎಂದೆಲ್ಲಾ ಒತ್ತಾಯಿಸಿದರು.

ಆಗ ಕೆ.ಸಿ.ರೆಡ್ಡಿ ಅವರು `ಒಂದು ನೋಟಿಸ್‌ಗೆ ಈ ಪದ್ಯ ಬರೆದಿದ್ದಾರೆ. ಇನ್ನೊಂದು ನೋಟಿಸ್ ನೀಡಿದರೆ ಮತ್ತೆ ಮೂರು ಪದ್ಯ ಬರೆಯಬಹುದು. ಬೆಂಕಿಯ ಜೊತೆ ಸರಸ ಒಳ್ಳೆಯದಲ್ಲ' ಎಂದು ಹೇಳಿ ಈ ಬಗ್ಗೆ ತಾವು ವಿಚಾರಣೆ ನಡೆಸುವುದಾಗಿ ಹೇಳಿದರು.

ಅದರಂತೆ ಕೆ.ಸಿ.ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸರಾಯರ ಬಳಿ ಈ ಬಗ್ಗೆ ಚರ್ಚೆ ನಡೆಸಿದರು. ಆಗ ನಿಟ್ಟೂರು ಶ್ರೀನಿವಾಸರಾಯರು `ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸು ಪಡೆಯುವುದೇ ಸೂಕ್ತ' ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು. ರೆಡ್ಡಿ ಅವರು ಕುವೆಂಪು ಅವರಿಗೆ ನೀಡಿದ್ದ ನೋಟಿಸ್ ವಾಪಸು ಪಡೆದರು.
***
1929ರ ವೇಳೆಗೆ ಕುವೆಂಪು ಇನ್ನೂ ಯುವಕರು. ಶ್ರೀರಂಗಪಟ್ಟಣದಲ್ಲಿ ಒಂದು ಭಾಷಣ ಮಾಡಿದರು. `ನಿರಂಕುಶಮತಿಗಳಾಗಿ' ಎಂದು ಜನರಿಗೆ ಕರೆ ನೀಡಿದರು. ಸರ್ಕಾರದ ವಿರುದ್ಧ, ಮೂಢ ನಂಬಿಕೆಗಳ ವಿರುದ್ಧ ಅವರು ಮಾತನಾಡಿದ್ದು ಕೂಡ ಅಧಿಕಾರಸ್ಥರನ್ನು ಕೆರಳಿಸಿತು. ಈ ಬಗ್ಗೆ ವರದಿ ನೀಡುವಂತೆ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಳ್ಳಲಾಯಿತು. ವೆಂಕಣ್ಣಯ್ಯ ಅವರು ಕುವೆಂಪು ಅವರ ಭಾಷಣವನ್ನು ಪರಿಶೀಲಿಸಿ `ನನ್ನ ಮಗನಿಗೆ ಬುದ್ಧಿ ಹೇಳಿ ಎಂದು ಯಾರಾದರೂ ಹೇಳಿದರೆ ನಾನು ಇದಕ್ಕಿಂತ ಚೆನ್ನಾಗಿ ಹೇಳಲಾಗದು' ಎಂದು ಸರ್ಕಾರಕ್ಕೆ ವರದಿ ನೀಡಿದರು. ಅದು ಅಲ್ಲಿಗೇ ನಿಂತಿತು
***
ಕುವೆಂಪು ಅವರಿಗೆ ವಿನೋಬಾ ಭಾವೆ ಅವರನ್ನು ಕಂಡರೆ ತುಂಬಾ ಗೌರವ. ಯಾವಾಗಲೂ ಅವರನ್ನು ಹೊಗಳುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಕಾರ್ಯಕ್ರಮ. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆ. ಕುವೆಂಪು ಅತಿಥಿಗಳು. ಕುವೆಂಪು ತಮ್ಮ ಭಾಷಣದಲ್ಲಿ ವಿನೋಬಾ ಅವರನ್ನು ಸಾಕಷ್ಟು ಹೊಗಳಿದರು. ಇದು ಕೆಂಗಲ್ ಅವರಿಗೆ ಸರಿಕಾಣಲಿಲ್ಲ. ಅವರು ತಮ್ಮ ಭಾಷಣದಲ್ಲಿ ಕುವೆಂಪು ಅವರು ವಿನೋಬಾ ಅವರನ್ನು ಹೊಗಳಿದ್ದು ಹೆಚ್ಚಾಯಿತು ಎಂದರು. ಇದರಿಂದ ಕುವೆಂಪು ಸಿಟ್ಟಾದರಲ್ಲದೆ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಕೆಂಗಲ್ ಕಸಿವಿಸಿಗೊಂಡರು. ಈ ಸುದ್ದಿ ಯಾವ ಪತ್ರಿಕೆಯಲ್ಲೂ ಬರದಂತೆ ನೋಡಿಕೊಂಡರು.

ಆದರೆ ಈ ಘಟನೆ ಕೆಂಗಲ್ ಮತ್ತು ಕುವೆಂಪು ಅವರ ಸಂಬಂಧವನ್ನು ಹಾಳು ಮಾಡಲಿಲ್ಲ. ಮುಂದೆ ಕುವೆಂಪು ಅವರನ್ನು ಮಹಾರಾಜ ಕಾಲೇಜು ಪ್ರಾಂಶುಪಾಲರನ್ನಾಗಿ ಮಾಡಿದ್ದು ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿದ್ದು ಕೂಡ ಕೆಂಗಲ್ ಹನುಮಂತಯ್ಯ ಅವರೆ.

ಕೆಂಗಲ್ ಹನುಮಂತಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿತ್ತು. ಅವರನ್ನು ಕೆಳಕ್ಕೆ ಇಳಿಸಲು ಕಸರತ್ತುಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಒಮ್ಮೆ ಕುವೆಂಪು ಅವರು ಕೆಂಗಲ್ ಹುನುಮಂತಯ್ಯ ಅವರನ್ನು ನೋಡಲು ಅವರ ಮನೆಗೆ ಹೋದರು. ಆಗ ಹನುಮಂತಯ್ಯ ಪ್ಲೇಟೋನ `ರಿಪಬ್ಲಿಕ್' ಪುಸ್ತಕವನ್ನು ಓದುತ್ತಿದ್ದರು. ಅದನ್ನು ಕಂಡು ಕುವೆಂಪು ಅವರಿಗೆ ಅಚ್ಚರಿಯಾಯಿತು.

`ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ನಿಮ್ಮ ವಿರೋಧಿಗಳು ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಆದರೂ ನೀವು ಶಾಂತವಾಗಿ ರಿಪಬ್ಲಿಕ್ ಓದುತ್ತಿದ್ದೀರಲ್ಲ?' ಎಂದು ಕೆಂಗಲ್‌ರನ್ನು ಕುವೆಂಪು ಕೇಳಿದರು.

`ಪುಟ್ಟಪ್ಪ, ನಾನು ನನ್ನ ಬದುಕಿನಲ್ಲಿ ಹಲವಾರು ಬಾರಿ ಆತ್ಮಹತ್ಯೆಗೆ ಮನಸ್ಸು ಮಾಡಿದ್ದೆ. ಆಗೆಲ್ಲಾ ನನ್ನನ್ನು ರಕ್ಷಿಸಿದ್ದು ರಾಮಾಯಣ, ಮಹಾಭಾರತ, ಪ್ಲೇಟೊ, ಅರಿಸ್ಟಾಟಲ್ ಮುಂತಾದವರು. ಈಗ ಅದೆಲ್ಲಾ ಯಾಕೆ. ನೀವು ಅಕ್ಷರದಲ್ಲಿ ಮಹಾಕಾವ್ಯ ರಚಿಸಿದ್ದೀರಿ. ನಾನು ಕಲ್ಲಿನಲ್ಲಿ ಮಹಾಕಾವ್ಯ ರಚಿಸಿದ್ದೇನೆ. ನೋಡೋಣ ಬನ್ನಿ' ಎಂದು ಕುವೆಂಪು ಅವರನ್ನು ವಿಧಾನಸೌಧ ತೋರಿಸಲು ಕರೆದುಕೊಂಡು ಹೋದರು. ಈ ಘಟನೆ ನಡೆದಾಗ ದೇಜಗೌ ಅವರು ಕುವೆಂಪು ಅವರೊಂದಿಗೆ ಇದ್ದರು.
***
ಒಮ್ಮೆ ವಿನೋಬಾ ಭಾವೆ ಅವರು ಮೈಸೂರಿಗೆ ಬಂದಿದ್ದರು. ಅವರನ್ನು ಕಾಣಲು ಕುವೆಂಪು ಹೋದರು. ಕುವೆಂಪು ಅವರ `ರಾಮಾಯಣ ದರ್ಶನಂ' ಕಾವ್ಯವನ್ನು ವಿನೋಬಾ ಭಾವೆ ಅವರೂ ಓದಿದ್ದರು. ಭಾವೆ ಅವರನ್ನು ಭೇಟಿ ಮಾಡಿ ಹೊರಡುವಾಗ ಕುವೆಂಪು ಅವರಿಗೆ ವಿನೋಬಾ ಅವರು, `ನೀವು ನಿಮ್ಮ ಮನೆಗೆ ನನ್ನನ್ನು ಕರೆದೇ ಇಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕುವೆಂಪು ಉತ್ತರ `ಧನ್ಯೋಸ್ಮಿ' ಎಂದಷ್ಟೆ.

ನಂತರ ವಿನೋಬಾ ಕುವೆಂಪು ಅವರ `ಉದಯ ರವಿ'ಗೆ ಬಂದರು. ಕುವೆಂಪು `ರಾಮಾಯಣ ದರ್ಶನಂ' ಬರೆದ ಜಾಗವನ್ನು ಕೇಳಿ ತಿಳಿದುಕೊಂಡು ಅಲ್ಲಿಯೇ ಕೊಂಚ ಕಾಲ ಧ್ಯಾನಸ್ಥರಾಗಿ ಕುಳಿತುಕೊಂಡರು. ಕೆಲವರಿಂದ `ರಾಮಾಯಣ ದರ್ಶನಂ'ನ ಕೆಲವು ಭಾಗಗಳನ್ನು ಮತ್ತೆ ಓದಿಸಿಕೊಂಡರು. ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿಯೂ ಕುವೆಂಪು ಅವರನ್ನು `ಸಂತ' ಎಂದು ಕರೆದು ಹೊಗಳಿದರು.
***
ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು. ಆಗ ಒಬ್ಬ ಸಚಿವರು ಕುವೆಂಪು ಅವರಿಗೆ ಫೋನ್ ಮಾಡಿ ತಮ್ಮ ಕಡೆಯವರನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಿದರು. ಕುವೆಂಪು ನಿರಾಕರಿಸಿದರು. ಅದಕ್ಕೆ ಸಚಿವರು `ನನ್ನ ಮಾತನ್ನೇ ಕೇಳುವುದಿಲ್ಲವೇ ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದರು. ಆಗ ಕುವೆಂಪು `ಏನ್ ನೋಡಿಕೊಳ್ಳುತ್ತೀಯಾ, ರ‌್ಯಾಸ್ಕಲ್' ಎಂದು ಫೋನ್ ಇಟ್ಟುಬಿಟ್ಟರು. ಈ ಘಟನೆಗೂ ತಾವೇ ಸಾಕ್ಷಿ ಎಂದು ದೇಜಗೌ ಹೇಳುತ್ತಾರೆ.
***
ರಾಜಕೀಯ ಮತ್ತು ರಾಜಕಾರಣದ ಬಗ್ಗೆ ಕುವೆಂಪು ಅವರಿಗೆ ಸಿಟ್ಟಿತ್ತು. ಅವರು ತಮ್ಮ `ವಿಚಾರ ಕ್ರಾಂತಿಗೆ ಆಹ್ವಾನ' ಎಂಬ ಭಾಷಣದಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ, ಅಧಿಕಾರ, ಶಿಕ್ಷಣ ರಂಗದಲ್ಲಿ ನಿರ್ಲಜ್ಜರಾಗಿ ಪಾಪಮಯ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಮ್ಮಲ್ಲಿ `ಡೆಮಾಕ್ರಸಿ' ಎನ್ನುವುದು ಬರಿಯ `ಮಾಕರಿ'ಯಾಗಿದೆ. ಕೋಟ್ಯಧೀಶರಲ್ಲದವರು ಚುನಾವಣೆಯಲ್ಲಿ ಗೆಲ್ಲುವುದು ಹಾಗಿರಲಿ, ನಿಲ್ಲುವುದು ಕೂಡ ಅಸಾಧ್ಯವಾಗಿದೆ. ಜಾತಿ, ಮತ, ಹೆಂಡ, ದುಡ್ಡು ಇವೇ ಓಟರುಗಳಾಗಿವೆ. ಓಟು ಕೊಡುವ ಪ್ರಜೆಗಳು ಬರಿಯ ನಿಮಿತ್ತ ಮಾತ್ರ. ಮೂಕ ವಾಹನಗಳಷ್ಟೆ. ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ ಯಾವ ಉಪಾಯದಿಂದಾದರೂ ಕಾಳಸಂತೆಯ ಕಪ್ಪು ಹಣವೋ, ಕಳ್ಳ ಸಾಗಾಣಿಕೆಯ ಹಳದಿ ಹಣವೋ ಅಂತೂ ಹೆಚ್ಚು ಹಣ ಒಟ್ಟು ಮಾಡಿದರಾಯ್ತು ಚುನಾವಣೆ ಗೆಲ್ಲಬಹುದು.

ಒಮ್ಮೆ ಗೆದ್ದು ಅಧಿಕಾರ ಹಿಡಿದರಾಯ್ತು. ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನು ಅಧಿಕಾರದ ಭಯದಿಂದಲೋ ದುಡ್ಡಿನ ಬಲದಿಂದಲೋ ವಶಪಡಿಸಿಕೊಳ್ಳಬಹುದು. ಒಮ್ಮೆ ಜನಶಕ್ತಿ ಪ್ರತಿಭಟನೆಗೆ ನಿಂತರೂ ಪೊಲೀಸ್, ಸೇನೆ ಬಳಸಿ ವಿಫಲಗೊಳಿಸಬಹುದು ಎಂದು ಅವರು ಆಗಲೇ ಸಿಟ್ಟು ಕಾರಿದ್ದರು. ಗುಡುಗಿದ್ದರು. ಈಗಿನ ರಾಜಕೀಯವನ್ನು ನೋಡಿದ್ದರೆ ಏನು ಹೇಳುತ್ತಿದ್ದರೋ ಏನೋ?

ಚಿತ್ರಗಳು: ಲೀಲಾ ಅಪ್ಪಾಜಿ ಅವರ ಸಂಗ್ರಹ

ಗುರುವಾರ, ನವೆಂಬರ್ 30, 2017

ಪ್ರಚಲಿತ ಘಟನೆಗಳು -2017

🌻 ವಿಷಯ : *ಪ್ರಚಲಿತ ಘಟನೆಗಳು* (2017)

೧)  *ಭಾರತದ ಮೊದಲ ಲಿಂಗ ಪರಿವರ್ತಕ ( transgender ) ಶಾಲೆಯಾದ " Sahaj international "ಅನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ ?*

1)   ತಮಿಳುನಾಡು
2)   ಗೋವಾ
3)  *ಕೇರಳ*
೪)  ತೆಲಂಗಾಣ

👉 ಕೆರಳ ರಾಜ್ಯದ *ಎರ್ನಾಕುಳಂ* ಜಿಲ್ಲೆಯಲ್ಲಿದೆ
👉 ಲಿಂಗ ಪರಿವರ್ತಿತ ಕಾರ್ಯಕರ್ತರು ಇಲ್ಲಿ ಹನ್ನೆರಡನೇ ತರಗತಿಯವರೆಗೆ ಉಚಿತವಾಗಿ ಓದಬಹುದು

೨)  *ಈ ಕೆಳಗಿನ ಯಾವ ಸ್ಥಳವೂ ಪ್ರತಿ ವರ್ಷ ಮೊಟ್ಟ ಮೊದಲ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತದೆ ?*

೧)   ಬಾಕರ್ ಐಲ್ಯಾಂಡ್
೨)   ಸಮೂಹ ದ್ವೀಪ
೩)  *ಪೆಸಿಪಿಕ್ ಐಲ್ಯಾಂಡ್*
೪)   ಅಮೆರಿಕಾ ದೇಶ

👉 ಅಮೆರಿಕದ *"ಬಾಕರ್ ಐಲೆಂಡ್"* ಮತ್ತು ಅಮೆರಿಕನ್ *"ಸಮೂವಾ ದ್ವೀಪ"*ಪ್ರಪಂಚದ ಎಲ್ಲಾ ಸ್ಥಳಗಳಿಗಿಂತ ಕೊನೆಯಲ್ಲಿ ಹೊಸ ವರ್ಷ ಆಚರಿಸಿಕೊಳುತವೆ

೩)  *ಈ ಕೆಳಗಿನ ಯಾವ ದೇಶ ಇತ್ತೀಚೆಗೆ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸಿತು ?*

೧)   ಅಫ್ಘಾನಿಸ್ತಾನ
೨)   ಸೌದಿ ಅರೇಬಿಯಾ
೩)   ಅಮೆರಿಕ
೪)  *ಪಾಕಿಸ್ತಾನ*

೪)  *RBI ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು ?*

೧)  *ಸುರೇಶ್ ಮರಂಡಿ*
೨)   ರಘುರಾಮ್ ರಾಜನ್
೩)   ಜಾನ್ ವೆಲ್ ಮೊಯ್ಲಿ
೪)   ಯಾರೂ ಅಲ್ಲ

೫)  *30 ನೇ ಅಂತಾರಾಷ್ಟ್ರೀಯ "ಗಾಳಿಪಟ ಉತ್ಸವ " ಯಾವ ರಾಜ್ಯದಲ್ಲಿ ನಡೆಯಿತು ?*

೧)  ಮಹಾರಾಷ್ಟ್ರ
೨) *ಗುಜರಾತ್*
೩)  ಉತ್ತರಪ್ರದೇಶ
೪)  ತೆಲಂಗಾಣ

೬)  *13 ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರಾದ " ಗುಂಡ ಬ್ರಹ್ಮಯ್ಯ ನವರ "ವಿಗ್ರಹ ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ದೊರೆತಿದೆ ?*

೧)   *ಮಸ್ಕಿ*
೨)   ಪಾಲ್ಕಿ ಗೊಂಡ
೩)   ಚಿತ್ರದುರ್ಗ
೪)   ಬೆಳಗಾವಿ

೭)  *ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕೆಳಗಿನ ಯಾವ ನಗರದಲ್ಲಿ ಆರಂಭಗೊಂಡಿದೆ ?*

೧)   ಮುಂಬೈ
೩) *ಗಾಂಧಿನಗರ*
೩)   ಪುಣೆ
೪)   ನವದೆಹಲಿ

೮)  *ಅಮೆರಿಕದ ಕ್ಷಯ ರೋಗ ಜಾಗೃತಿಯ ರಾಯಭಾರಿಯಾಗಿ ಆಯ್ಕೆಯಾದ ಭಾರತೀಯ ಯಾರು ?*

೧)    ಶಾರುಖ್ ಖಾನ್
೨)  *ಅಮಿತಾಬ್ ಬಚ್ಚನ್*
೩)   ಹೃತಿಕ್ ರೋಷನ್
೪)   ಸಲ್ಮಾನ್ ಖಾನ್

೯)  *ಕೆಳಗಿನ ಯಾವ ನಗರದಲ್ಲಿ " ಇ ಗವರ್ನೆನ್ಸ್ " ಕುರಿತ ರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ನಡೆಯಿತು ?*

೧)   *ವಿಶಾಖಪಟ್ಟಣಂ*
೨)    ಹೈದರಾಬಾದ್
೩)    ವಿಜಯ್ ವಾಡ
೪)    ಜೈಪುರ್

👉 20 ನೇ ಆವೃತ್ತಿ
👉 ಧ್ಯೇಯ ವಾಕ್ಯ - *internet of things and e governance*

೧೦)  *"ಜಲ ಮಂತನ - 3 " 2017 ರ ರಾಷ್ಟ್ರೀಯ ಸಮ್ಮೇಳನ ಕೆಳಗಿನ ಯಾವ ನಗರದಲ್ಲಿ ನಡೆಯಿತು ?*

೧)    ಕೋಲ್ಕತ್ತಾ
೨)    ಬೆಂಗಳೂರು
೩)    ವಿಜಯಪುರ
೪)   *ನವದೆಹಲಿ*
👉 ನಡೆದದ್ದು - *17 ಜನೆವರಿ  2017*
👉 ಚರ್ಚೆ - *ನೀರಿನ ವಲಯದ ವಿವಿಧ ಸಮಸ್ಯೆಗಳ ಕುರಿತು*
👉 ಉದ್ಘಾಟನೆ -  *ಜಲಸಂಪನ್ಮೂಲ ಸಚಿವೆ ಉಮಾಭಾರತಿ*

೧೧)  *ಇತ್ತೀಚೆಗೆ "ಜಿಂಗ್ ಬರ್ ಸ್ಪೀಡೋಸ್ಪ್ಯಾರೋಸಮ " ಎಂಬ ಶುಂಠಿಯ ಹೊಸ ಪ್ರಭೇದವನ್ನು ಎಲ್ಲಿ ಪತ್ತೆ ಹಚ್ಚಲಾಯಿತು ?*

೧)  ಪಶ್ಚಿಮ ಘಟ್ಟಗಳು
೨)  ಈಶಾನ್ಯ ಹಿಮಾಲಯ
೩)  *ಅಂಡಮಾನ್ ನಿಕೋಬಾರ್ ದ್ವೀಪ*
೪)  ಮಧ್ಯೆ ಆಫ್ರಿಕಾ
👉  ಯಾವುದೇ ಹೊಸ ಪ್ರಭೇದದ ಸಸ್ಯ ತಳಿಗಳು *"ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ"*ಕಂಡುಬರುತ್ತವೆ ಉದಾ -ಬಾಳೆಹಣ್ಣು ಶುಂಠಿ
👉  ಯಾವುದೇ ಹೊಸ ಪ್ರಭೇದದ ಪ್ರಾಣಿ ಸೂಕ್ಷ್ಮಾಣು ಜೀವಿ ಆತ ಇತರ ಜೀವಿಗಳ ಪ್ರಬೇಧವು *"ಪಶ್ಚಿಮ ಘಟ್ಟಗಳಲ್ಲಿ"* ಕಂಡು ಬರುತ್ತವೆ

೧೨)  *2017 ರ " ರಾಷ್ಟ್ರೀಯ ಯುವಜನ ಉತ್ಸವ "ಈ ಕೆಳಗಿನ ಯಾವ ರಾಜ್ಯದಲ್ಲಿ ನಡೆಯಿತು ?*

೧)   ಪಂಜಾಬ್
೨)  *ಹರಿಯಾಣ*
೩)   ಛತ್ತೀಸ್ಗಡ
೪)   ತೆಲಂಗಾಣ
👉 ಸ್ಥಳ - *ರೊಹಟಕ*
👉 ಯಾವಾಗ - *ಜೆನೆವರಿ-12-16*
👉  *"ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ "*ಅಂಗವಾಗಿ ರಾಷ್ಟ್ರೀಯ ಯುವಜನ ಉತ್ಸವವನ್ನು ನಡೆಸಲಾಗುತ್ತದೆ

೧೩)  *ಇತ್ತೀಚೆಗೆ ಯಾವ ದೇಶ ತನ್ನ ಪಳೆಯುಳಿಕೆ ಇಂಧನಗಳ ಸಂಪನ್ಮೂಲ ಬಂಡವಾಳ ಹಿಂಪಡೆದ ವಿಶ್ವದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿದೆ ?*

೧)   ಥೈಲಾಂಡ್
೨)  *ಐರ್ಲೆಂಡ್*
೩)   ಜಪಾನ್
೪)   ಭಾರತ

೧೪)  *ಇತ್ತೀಚೆಗೆ ಕೇಂದ್ರ ಸರ್ಕಾರವು ಯಾವ ರಾಜ್ಯದಿಂದ " ದಡಾರ ರುಬೆಲ್ಲಾ ಲಸಿಕಾ ಅಭಿಯಾನವನ್ನು" ಪ್ರಾರಂಭಿಸಿತ್ತು ?*

೧)    ತಮಿಳುನಾಡು
೨)    ಮಹಾರಾಷ್ಟ್ರ
೩)  *ಕರ್ನಾಟಕ*
೪)    ಕೇರಳ

೧೫)  *ಇತ್ತೀಚೆಗೆ ಸರಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ಘೋಷಿಸಿದ ರಾಜ್ಯ ಯಾವುದು ?*

೧)  ಬಿಹಾರ್
೨) *ಜಾರ್ಖಂಡ್*
೩)  ಹರಿಯಾಣ
೪)  ಪಂಜಾಬ್

೧೬)  *ಸಬ್ಸಿಡಿ ಹಂಚಿಕೆಯ "ಹಜ್ಜ್  ನೀತಿ ಸುಧಾರಿಸಲು" ಕೇಂದ್ರ ಸರ್ಕಾರವು ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ ?*

೧)  *ಅಫ್ಜಲ್ ಅಮಾನುಲ್ಲಾ ಕಮಿಟಿ*
೨)   ಮಹಮ್ಮದ್  ಹಿದಾಯಿತುಲ್ಲಾ ಕಮಿಟಿ
೩)   ಎಸ್ಎನ್ ರಾಜನ್ ಕಮಿಟಿ
೪)   ಸಾತ್ವಿಕ್ ಸಾಯಿರಾಜ್ ಕಮಿಟಿ

೧೭)  *ಕೆಳಗಿನ ಯಾವ ನಗರದಲ್ಲಿ "ಅಂತರರಾಷ್ಟ್ರೀಯ ವಾಯುಯಾನ ಮತ್ತು ರಕ್ಷಣಾ ಪ್ರದರ್ಶನವೂ (Aero India )" ನಡೆಯಿತು ?*

೧)   ಕೋಲ್ಕತ್ತಾ
೨)   ವಿಶಾಖಪಟ್ಟಣಂ
೩) *ಬೆಂಗಳೂರು*
೪)   ಚೆನ್ನೈ

೧೮)  *ಭಾರತದಲ್ಲೇ ಮೊದಲ ಬಾರಿಗೆ ಯುದ್ಧ ನೌಕೆಯಲ್ಲಿ ಸೌರ ಫಲಕಗಳನ್ನು ಅಳವಡಿಸಿದ ಮೊದಲ ಯುದ್ಧ ನೌಕೆ ಯಾವುದು ?*

೧)   ಐ ಎನ್ ಎಸ್ ವಿಕ್ರಾಂತ್
೨)   ಐ ಎನ್ ಎಸ್ ಮಹಾಭಾರತ್
೩)  *ಐಎನ್ಎಸ್ ಸರ್ವೇಕ್ಷಕ*
೪)   ಯಾವುದೂ ಅಲ್ಲ

೧೯)  *ಭಾರತದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ತೇಲುವ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ ರಾಜ್ಯ ಯಾವುದು ?*

೧)   ಅಸ್ಸಾಂ
೨)   ನಾಗಾಲ್ಯಾಂಡ್
೩)  *ಮಣಿಪುರ*
೪)   ಅರುಣಾಚಲ ಪ್ರದೇಶ

👉  *ಲೊಕತಕ ಸರೋವರದ ಮೇಲೆ*

೨೦)  *ಕೆಳಗಿನ ಯಾವ ರಾಜ್ಯ ಸರಕಾರ ಸರಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ಪ್ರವೇಶ ತರಬೇತಿಯನ್ನು ಕಡ್ಡಾಯ ಮಾಡಿದೆ ?*

೧)   ತಮಿಳುನಾಡು
೨)  *ಕೇರಳ*
೩)   ಆಂಧ್ರಪ್ರದೇಶ
೪)   ತೆಲಂಗಾಣ

೨೧)  *2017 ನೇ ಸಾಲಿನ "ಇಂಟರ್ನ್ಯಾಷನಲ್ ಮದರ್ ಲಾಂಗ್ವೇಜ್ ಡೇ" ನ ಧ್ಯೇಯ ವಾಕ್ಯ ವೇನು ?*

೧)  ತಾಯಿ ಭಾಷೆ ಜಗತ್ ಭಾಷೆ
೨) *ಬಹುಭಾಷಾ ಶಿಕ್ಷಣದ ಮೂಲಕ ಸಮರ್ಥನೀಯ ಭವಿಷ್ಯದ ಕಡೆಗೆ*
೩)  ನಮ್ಮ ಭವಿಷ್ಯ ತಾಯಿ ಭಾಷೆಯಲ್ಲಿ
೪)  ಯಾವುದೂ ಅಲ್ಲ

೨೨)  *ಸ್ವಚ್ಛ ಭಾರತ ಅಭಿಯಾನದ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದವರು ಯಾರು ?*
೧)  ಅಮಿತಾ ಬಚ್ಚನ್
೨)  ಅನುಷ್ಕಾ ಶರ್ಮಾ
೩) *ಶಿಲ್ಪಾಶೆಟ್ಟಿ*
೪)  ಅನುಷ್ಕಾ ಶೆಟ್ಟಿ

೨೩)  *2017 ರ "ಅಂತಾರಾಷ್ಟ್ರೀಯ ಯೋಗ ಉತ್ಸವವು " ಯಾವ ರಾಜ್ಯದಲ್ಲಿ ಇತ್ತೀಚೆಗೆ ನಡೆಯಿತು ?*

೧)   ಉತ್ತರಪ್ರದೇಶ
೨)  *ಉತ್ತರಾಖಂಡ್*
೩)   ಹರ್ಯಾಣ
೪)   ಬಿಹಾರ್

೨೪)  *WTO ಗೆ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕವಾದವರು ಯಾರು ?*
೧)  ಅಜಯ್ ತ್ಯಾಗಿ
೨)  ಅಮ್ಜದ್ ಹುಸೇನ್
೩) *ಜೆ ಎಸ್ ದೀಪಕ್*
೪)  ರಾಬಿನ್ ರಿಹಾನ

೨೫)  *2017 ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗ್ರಾಫ್ ಗೌರವವಾದ " ಪಾಲಿ ಉಮ್ರಿಗರ್ " ಪ್ರಶಸ್ತಿಯನ್ನು ಪಡೆದವರು ಯಾರು ?*

೧) *ವಿರಾಟ್ ಕೊಹ್ಲಿ*
೨)  ರವಿಚಂದ್ರನ್ ಅಶ್ವಿನ್
೩)  ಮಹೇಂದ್ರ ಸಿಂಗ್ ಧೋನಿ
೪)  ಆಡಮ್ ಗಿಲ್ ಕ್ರಿಸ್ಟ್

೨೬)  *ಎಂಟನೇ ತರಗತಿಯವರೆಗೆ ಸಂಸ್ಕೃತ ಭಾಷೆಯನ್ನು ಕಡ್ಡಾಯಗೊಳಿಸಿ ರಾಜ್ಯ ಯಾವುದು ?*

೧)  ಮಣಿಪುರ
೨)  ನಾಗಾಲ್ಯಾಂಡ್
೩) *ಅಸ್ಸಾಂ*
೪)  ಕರ್ನಾಟಕ

೨೭)  *"ಸ್ವಯಂವರ ಅಥವಾ ಮದುವೆ ಮಾರುಕಟ್ಟೆ ರೀತಿಯಲ್ಲಿ ನಡೆಯುವ ಕೆಳಗಿನ ಬುಡಕಟ್ಟು ಹಬ್ಬ ಯಾವುದು ?*

೧) *ಬಾಗೋರಿಯಾ*( ಮಧ್ಯಪ್ರದೇಶದ ಬುಡಕಟ್ಟು ಹಬ್ಬ )
೨)  ಮಿಲನ್ ವೈಷ್ಣವ
೩)  ಸ್ವಯಂ ಭಕ್ಷಣೆ
೪)  ಯಾವುದೂ ಅಲ್ಲ

೨೮)  *ಇತ್ತೀಚೆಗೆ ಅಳಿವಿನಂಚಿನಲ್ಲಿರುವ "ಕುರುಖ ಬುಡಕಟ್ಟು ಭಾಷೆಗೆ " ಅಧಿಕೃತ ಭಾಷಾ ಸ್ಥಾನಮಾನ ನೀಡಿದ ರಾಜ್ಯ ಯಾವುದು ?*

೧)  ಕರ್ನಾಟಕ
೨)  ಕೇರಳ
೩)  ತಮಿಳುನಾಡು
೪) *ಪಶ್ಚಿಮ ಬಂಗಾಳಿ*

👉 ಕುರುಖ ಇದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದೆ
👉 *ಒರಾಯನ್ ಮತ್ತು ಕಿಸಾನ್* ಬುಡಕಟ್ಟು ಜನಾಂಗ ಈ ಭಾಷೆಯನ್ನು ಮಾತನಾಡುತ್ತಾರೆ

೨೯)  *ಹಿರಿಯ ನಾಗರಿಕರಿಗಾಗಿ ಯಾವ ರಾಜ್ಯ ಸರಕಾರವು ಇತ್ತೀಚೆಗೆ "ತೀರ್ಥ ದರ್ಶನ" ಎಂಬ ಯೋಜನೆಗೆ ಚಾಲನೆ ನೀಡಿದ ?*

೧)  ಪಂಜಾಬ್
೨) *ಹರಿಯಾಣ*
೩)  ಕರ್ನಾಟಕ
೪)  ತಮಿಳುನಾಡು
👉 ಸರಕಾರಿ ವೆಚ್ಚದಲ್ಲಿ ಅರುವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತೀರ್ಥಯಾತ್ರೆಯನ್ನು ಕೈಗೊಳ್ಳಬಹುದು
👉 ಬಡತನ ರೇಖೆಯ ಕೆಳಗಿನ ಕುಟುಂಬಗಳು ಮಾತ್ರ ಅರ್ಹರು

೩೦)  *2016 ನೇ ಸಾಲಿನ  "ಮೂರ್ತಿ ದೇವಿ ಪ್ರಶಸ್ತಿ " ಪಡೆದವರು ಯಾರು ?*

೧) *ವೀರೇಂದ್ರ ಕುಮಾರ್*
೨)  ರವೀಂದ್ರ ಕುಮಾರ್
೩)  ಅನುಪಮಾ ಶೆಣೈ
೪)  ಯಾರು ಅಲ್ಲ

👉 ಕೊಡುವ ಸಂಸ್ಥೆ -  *ಭಾರತೀಯ ಜ್ಞಾನಪೀಠ ಸಂಸ್ಥೆ*
👉ಯಾವ ಕೃತಿಗೆ - *Hymavathabhoovil*
👉ಪ್ರಶಸ್ತಿಯ ಮೊತ್ತ - *4 ಲಕ್ಷ ರೂಪಾಯಿ*

೩‍೧)  *"India By the Nile" ಎಂಬ ಸಾಂಸ್ಕೃತಿಕ ಉತ್ಸವವು ಇತ್ತೀಚೆಗೆ ಯಾವ ದೇಶದಲ್ಲಿ ನಡೆಯಿತು ?*

೧) *ಈಜಿಪ್ಟ್*
೨)  ಸೌದಿ ಅರೇಬಿಯಾ
೩)  ಇರಾನ್
೪)  ನೇಪಾಳ
👉 ಸ್ಥಳ - *ಕೈರೋ*
👉 ದಿನಾಂಕ - *ಮಾರ್ಚ್ .8-14-2017
👉 ಉದ್ದೇಶ - *ಭಾರತ ಮತ್ತು ಈಜಿಪ್ಟ್ನ ಕರಕುಶಲ ವಸ್ತುಗಳಿಗೆ ಉತ್ತೇಜನ ಉತ್ತೇಜನ ನೀಡುವ ಸಲುವಾಗಿ*

೩೨)  *2016 ನೇ ಸಾಲಿನ " ಸರಸ್ವತಿ ಸಮ್ಮಾನ ಪ್ರಶಸ್ತಿ " ಪಡೆದವರು ಯಾರು ?*

೧)    ವೀರೇಂದ್ರ ಕುಮಾರ್
೨)   ಎಸ್ ರವೀಂದ್ರ ಕುಮಾರ್
೩)   *ಮಹಾಬಳೇಶ್ವರ ಸೈಲ್*
೪)    ವೀರೇಶ್ವರ ಸೈಲ್

👉  ಇವರು ಖ್ಯಾತ ಕೊಂಕಣಿ ಬರಹಗಾರರು
👉ಕೃತಿ  - *Hawthan*
👉ಮೊತ್ತ  - *ಹದಿನೈದು ಲಕ್ಷ* ರೂ

೩೩)  *ಮಧುಕರ್ ಗುಪ್ತಾ ಸಮಿತಿ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ ?*

೧)  *ಗಡಿ ರಕ್ಷಣೆ ಬಲಪಡಿಸುವ ಕುರಿತು*
೨)  ಜಿಎಸ್ಟಿಯನ್ನು ಪರಿಶೀಲನೆ ಕುರಿತು
೩)   ಆಧಾರ್ ನೋಂದಣಿಯ ಕುರಿತು
೪)   ಸರ್ಕಾರದ ಯೋಜನೆಗಳ ಪರಿಶೀಲನೆಗಾಗಿ

೩೪)  *ಮಹಿಳಾ ಉದ್ಯಮಿಗಳಿಗಾಗಿ ಯಾವ ರಾಜ್ಯ ಸರ್ಕಾರವು " Idea2poc " ಎಂಬ ನಿಧಿಯನ್ನು ಸ್ಥಾಪಿಸಿದೆ ?*

1)  ಕೇರಳ
2) *ಕರ್ನಾಟಕ*
3)  ತೆಲಂಗಾಣ
4)  ಮಹಾರಾಷ್ಟ್ರ

೩೫)  *ಹಿಂದುಳಿದ ವರ್ಗಗಳ ಯುವಕರು ಸೇನೆಗೆ ಸೇರುವುದನ್ನು ಉತ್ತೇಜಿಸಲು ಕೆಳಗಿನ ಯಾವ ಸ್ಥಳದಲ್ಲಿ "ಸಂಗೊಳ್ಳಿ ರಾಯಣ್ಣ ಸೈನಿಕ"  ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ ?*

೧)  ಕಿತ್ತೂರು
೨) *ಬೈಲಹೊಂಗಲ*
೩)  ಕೊಡಗು
೪)  ಬೆಳಗಾವಿ

೩೬)  *ಅತ್ಯುತ್ತಮ ಚಿತ್ರಕ್ಕಾಗಿ   89 ನೇ ಆಸ್ಕರ್ ಪ್ರಶಸ್ತಿ ಪಡೆದ ಚಿತ್ರ ಯಾವುದು ?*

೧)  ಲಾಲಾ ಲ್ಯಾಂಡ್
೨) *ಮೂನ್ಲೈಟ್*
೩)  ಎಮ್ಮಾಸ್ಟೋನ್
೪)   ಮಾರ್ಷಲ್

👉 ಅತ್ಯುತ್ತಮ ನಟ - *ಕ್ಯಾಸಿ ಅಫ್ಲೆಕ್*
👉ಅತ್ಯುತ್ತಮ ನಟಿ - *ಎಮ್ಮಾ ಸ್ಟೋನ್*
👉ಅತ್ಯುತ್ತಮ ಪೋಷಕ ನಟ - *ಮಾರ್ಷಲ್ ಅಲ್ಲಿ*
👉ಅತಿ ಹೆಚ್ಚು ಪ್ರಶಸ್ತಿಯನ್ನು ಪಡೆದ ಚಿತ್ರ - *ಲಾಲಾ ಲ್ಯಾಂಡ್*

೩೭)  *2017 ನೇ ಸಾಲಿನ  ಇಂಡಿಯಾ ಸೂಪರ್ ಸಿರೀಸ್ ಟೂರ್ನಮೆಂಟ್ ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದವರು ಯಾರು ?*

೧)  ಕರೋಲಿನ ಮರೀನಾ
೨) *ಪಿ ವಿ ಸಿಂಧು*
೩)  ರೋಜರ್ ಫೆಡರೆರ್
೪)  ಮಹೇಶ್ ಭೂಪತಿ

೩೮)  *ಇತ್ತೀಚೆಗೆ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ಯಾವುದು ?*

೧)  ವಾರ್ಧಾ ಚಂಡಮಾರುತ
೨) *ನಾದ ಚಂಡಮಾರುತ*
೩)  ಜೂಲಿಯ ಚಂಡಮಾರುತ
೪)  ರೋಷನ್ ಚಂಡಮಾರುತ

೩೯)  *ಪ್ರಸ್ತುತ ಕರ್ನಾಟಕದಲ್ಲಿ ನರೇಗಾ ಕೂಲಿ ಮೊತ್ತವು ಎಷ್ಟಿದೆ ?*

೧)   222
೨)   224
೩)  *236*
೪)   246

೪೦)  *ಕೃಷ್ಣಾ ನ್ಯಾಯಾಧಿಕರಣದ ಅಧ್ಯಕ್ಷರಾಗಿ ನೇಮಕವಾದವರು ಯಾರು ?*

೧)   ನ್ಯಾಯಮೂರ್ತಿ ಅಮಿತವ್ ರಾಯ್
೨)   ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್
೩)  *ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್*
೪)   ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್

೪೧)  *ಎತ್ತಿನಹೊಳೆ ಯೋಜನೆಯ ಅಧ್ಯಯನಕ್ಕಾಗಿ ರಾಜ್ಯ ಸರಕಾರ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ ?*

೧) *ಏ ಕೆ ಬಜಾಜ್ ಸಮಿತಿ*
೨)   ಬ್ರಿಜೇಶ್ ಕುಮಾರ್ ಸಮಿತಿ
೩)   ದೀಪಕ್ ಸಮಿತಿ
೪)   ರೋಹಿಣಿ ಸಮಿತಿ

೪೨)  *2017 ನೇ ಸಾಲಿನ  ಕರ್ನಾಟಕ ರಾಜ್ಯದ ಬಜೆಟ್ ಗಾತ್ರ ಎಷ್ಟಿತ್ತು ?*

೧)  1.76.561 ಕೋಟಿ
೨) *1.86.561 ಕೋಟಿ*
೩)  1.88.561 ಕೋಟಿ
೪)  1.78.561 ಕೋಟಿ

೪೩)  *ದೇಶದ ಮೊದಲ ಟೈಟಾನಿಯಂ ಘಟಕ

ಯಾವ ರಾಜ್ಯದಲ್ಲಿ ಸ್ಥಾಪನೆಯಾಗುತ್ತದೆ ?*

೧)   ಛತ್ತೀಸ್ಗಡ್
೨)   ಜಾರ್ಖಂಡ್
೩)  *ಒಡಿಶಾ*
೪)    ಕೇರಳ

೪೪)  *ಕೆಎಸ್ ವಾಲ್ಡಿಯಾ ಸಮಿತಿ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ ?*

೧)  ಜಿಎಸ್ಟಿಯ ಅಧ್ಯಯನಕ್ಕಾಗಿ
೨) *ಸರಸ್ವತಿ ನದಿಯ ಅಸ್ತಿತ್ವದ ಬಗ್ಗೆ*
೩)  ನೋಟು ರದ್ದತಿಯ ಕುರಿತು
೪)  ಯಾವುದು ಅಲ್ಲ 

೪೫)  *21 ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ಯಾರು ನೇಮಕವಾಗಿದ್ದಾರೆ ?*

೧) *ಬಲ್ಬೀರ್ ಸಿಂಗ್ ಚೌಹಾನ್*
೨)  ಎಸ್  ಶಿವಕುಮಾರ್
೩)  ಬೀರೇಂದ್ರ ಸಿಂಗ್ ಚವಾಣ್
೪)  ವಿಜಯಸಿಂಗ್ ಚೌಹಾನ್

೪೬)  *ಕೇಂದ್ರ ಸರಕಾರಿ ವೈದ್ಯರ ನಿವೃತ್ತಿ ವಯಸ್ಸನ್ನು ಎಷ್ಟಕ್ಕೆ ಹೆಚ್ಚಿಸಲಾಗಿದೆ ?*

೧)   62  ವರ್ಷಕ್ಕೆ
೨)  *65  ವರ್ಷಕ್ಕೆ*
೩)   68  ವರ್ಷಕ್ಕೆ
೪)   60  ವರ್ಷಕ್ಕೆ

೪೭)  *ದ್ವಿ ತೆರಿಗೆ ನಿಯಂತ್ರಣ ಒಪ್ಪಂದಕ್ಕೆ ಕೆಳಗಿನ ಯಾವ ರಾಷ್ಟ್ರಗಳು ಸಹಿ ಹಾಕಿವೆ ?*

೧) *ಭಾರತ - ಸಿಂಗಾಪುರ*
೨)  ಭಾರತ - ನೇಪಾಳ
೩)  ಭಾರತ - ಥೈಲಾಂಡ್
೪)  ಭಾರತ - ಅಮೇರಿಕಾ

೪೮)  *ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಮರು ಆಯ್ಕೆಯಾದ ಭಾರತೀಯ ಯಾರು ?*

೧)  ಮಹೇಶ್ ಭಂಡಾರಿ
೨) *ದಲ್ವೀರ್ ಭಂಡಾರಿ*
೩)  ದೀಪಕ್ ಮಿಶ್ರಾ
೪)  ರಾಜೇಶ್ ಕೋಟಾಕ್

೪೯)  *"ವ್ಯಾಟ್ಸ್ ಆಪ್ ಬಳಕೆಯ ಮಾಹಿತಿ ಹಂಚಿಕೆ" ಕುರಿತು ಸಂಬಂಧಿಸಿದ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದ ನೇತೃತ್ವ ವಹಿಸಿದವರು ಯಾರು ?*

೧)  ನ್ಯಾ.ಜೆ ಎಂ ಪಾಂಚಾಲ್ ಮತ್ತು ನ್ಯಾಯಮೂರ್ತಿ ವಿನಯ್ ಮಿತ್ತಲ್
೨)  ನ್ಯಾ.ಪಿ ಎಸ್ ನಾರಾಯಣ್ ಮತ್ತು ನ್ಯಾ. ಜಿ ರೋಹಿಣಿ
೩) *ನ್ಯಾ.ಜಿ ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಸೆಹಗಲ್*
೪) ನ್ಯಾ.ಪಿ ಎಫ್ ನಾರಾಯಣ್ ಮತ್ತು ನ್ಯಾ.ಖೇಹರ

೫೦)  *ಅಂಗವಿಕಲರ ಸಬಲೀಕರಣಕ್ಕಾಗಿ ದೇಶದಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಸೇವೆಗಳನ್ನು ನೀಡುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು ?*

೧)  ತಮಿಳುನಾಡು
೨)  ಕೇರಳ
೩) *ಕರ್ನಾಟಕ*
೪)  ಮಹಾರಾಷ್ಟ್ರ

🙏🙏 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ *ಉಪಯುಕ್ತ ಮಾಹಿತಿ ಒದಗಿಸುವ* ಸಣ್ಣ ಪ್ರಯತ್ನ....ಸಹಕರಿಸಿ....🙏🙏

ಸೋಮವಾರ, ನವೆಂಬರ್ 27, 2017

List of complete static gk

✔TRICKS to Remember most important STATIC GK For all
Competative exams

List of Complete Static GK TRICKS , 300+ Videos :- https://goo.gl/ydx9Kk

1.Railway Zones Headquarters :- https://goo.gl/VFf4KW
2.International Organisations H.Q'S :- https://goo.gl/DuLjLB
3.National Parks & Sanctuaries :- https://goo.gl/RV5dWc
4.190 Currencies & Capitals :- https://goo.gl/AmtmKa
5.Dams on Rivers :- https://goo.gl/wXBWcM
6.All indian Dances State wise :- https://goo.gl/z9GTK3
7.Important Days :- https://goo.gl/3i7QCn
8.Waterfalls of india :- https://goo.gl/Iz3XyG
9.Country & Parliament Name :- https://goo.gl/GLqZ14
10.Indian Cities on Rivers :- https://goo.gl/GosMPJ
11.All Airports state wise :- https://goo.gl/KHmAfJ
12.All Power Plants State wise :- https://goo.gl/Pm0gTt
13.All Stadiums in india :- https://goo.gl/VkPZON
14.Temples in India :- https://goo.gl/dtmIax
15. Caves in india :- https://goo.gl/CDPPME
16.OCEAN Trenches :- https://goo.gl/IQcFJd
17.Indian Lakes & Importance :- https://goo.gl/6qecrI
18.Important Years & Events :- https://goo.gl/G7IYbJ
19.Deserts india | wORLD :- https://goo.gl/W5ER6s
20.Indian Rivers & Tributaries:- https://goo.gl/0cP0lm
21.Discoveries & Inventions :- https://goo.gl/xTgFY0
22.Marine National Parks :- https://goo.gl/YSu05q
23.Terminology & Branches :- https://goo.gl/nywHNy
24.Revolutions & Founders :- https://goo.gl/7y9u2L
25.Mountain Passes :- https://goo.gl/dkcfrO
26.Mosques :- https://goo.gl/vQMoy9
27.sports & No of Players :- https://goo.gl/QROf0p
28.Indian History :- https://goo.gl/EtqzyS
29.Indian Culture & Tradition :- https://goo.gl/OvOuY7
30.Palces and Founders :- https://goo.gl/jUp11d
31.General Science Tricks :- https://goo.gl/DtA1dr
32.Branches of Agriculture :- https://goo.gl/WubptK
33.Awards & Field :- https://goo.gl/S0hdN9
34.Indian Research Institutes :- https://goo.gl/QUXwsz
35.Country & National Game :- https://goo.gl/07mihc
36.Crops | Minerals state Rank:- https://goo.gl/eRvvuv
37.Periodic Table Tricks :- https://goo.gl/LdF2ic
38. Tricks on Solar System :- https://goo.gl/w55cEV
39.Vitamins Deficiency scientific Names:- https://goo.gl/Mr4gv0
40.Computer Questions Tricks :-https://goo.gl/VUb9xw
41.Freedom Fighters Fathers :- https://goo.gl/bf5JOw
42.Bank Taglines & H.Q's :- https://goo.gl/l9x1kj

ಮಂಗಳವಾರ, ನವೆಂಬರ್ 21, 2017

ಪ್ರಚಲಿತ ಪ್ರಶ್ನೋತ್ತರಗಳು 2017 ನವೆಂಬರ್

🌻 *ಕರುನಾಡು ಪರೀಕ್ಷಾ ಕೈಪಿಡಿ*ಗ್ರೂಪ್ ನಲ್ಲಿ 17-11-2017 ಶುಕ್ರವಾರದಂದು  ನಡೆದ *ಕ್ವೀಜನ್ ಸರಿ ಉತ್ತರಗಳು*..🌻

💐 *ವಿಷಯ ::*ಪ್ರಚಲಿತ ಘಟನೇಗಳು....💐

1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?

A.  90  ಉಪಗ್ರಹಗಳು
B.  95  ಉಪಗ್ರಹಗಳು
C. *104 ಉಪಗ್ರಹಗಳು*
D.  109  ಉಪಗ್ರಹಗಳು

*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?

1)  ಜಾಕಿ ಶರೀಪ್
2)  ಎ.ಆರ್.ರೆಹಮಾನ
3) *ಕಿರಣ ಭಟ್*
4)  ಯಾರೂ ಅಲ್

*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?

1) *ಇರಾನ್*
2)  ಇರಾಕ್
3) ಅಫಘಾನಿಸ್ತಾನ್
4)  ನೇಪಾಳ

*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?

1)  ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3)  ರಕ್ತದಾನ ಶ್ರೇಷ್ಠದಾನ
4)  ಯಾವುದು ಅಲ್

*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?

1)  ಶಿಮ್ಲಾ
2) *ಧರ್ಮಶಾಲಾ*
3)  ಡೆಹ್ರಾಡೂನ್
4)  ಕುಲುಮನಾಲಿ

6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?

1)  ಕೆನಡಾ
2)  ಇಟಲಿ
3)  ಅಮೇರಿಕಾ
4) *ಜಪಾನ್*

7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?

1)  ಇಂಗ್ಲೇಂಡ್
2)  ಬಾಂಗ್ಲದೇಶ
3) *ಅಮೆರಿಕಾ*
4)  ಶ್ರೀಲಂಕಾ

8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?

1) *ಕೇರಳ*
2)  ಕರ್ನಾಟಕ
3)  ತೆಲಂಗಾಣ
4)  ಆಂಧ್ರಪ್ರದೇಶ

9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?

1) *ವೆಸ ಮೆಯರ*
2)  ದಿಸೋಜಾ ಪ೦ಟಿಕೊ
3)  ಕಾರ್ಲೋ ಫ್ರಾಂಕ್
4)  ಯಾರು ಅಲ್

10) *ಶಾನ್ ಡಂಗ್* ಎಂದರೇನು ?

1) *ಚೀನಾದ ವಿಮಾನ ನೌಕೆ*
2)  ನೂತನ ಅಣ್ವಸ್ತ್ರ
3)  ಚಿನಾದ ಉಪಗ್ರಹ
4)  ಯಾವುದು ಅಲ್

11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?

1) *ಇಂದೋರ*
2)  ಸೂರತ
3)  ಮೈಸೂರು
4)  ತಿರುಪತಿ

12) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?

1)  ಭೂತಾನ
2) *ನೇಪಾಳ*
3)  ಶ್ರೀಲಂಕಾ
4)  ಮಯನ್ಮಾರ್

13) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?

1)  ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3)  ಭಾರತ ನೆಟ್
4)  ಗ್ರಾಮೀಣ ನೆಟ್

14) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?

1) *ಮಹಾರಾಷ್ಟ್ರ*
2)  ಕರ್ನಾಟಕ
3)  ಕೇರಳ
4)  ಗೋವಾ

15) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?

1) *ಡೋಕ್ಲಾಂ*
2)  ತವಾಂಗ
3)  ಚಾಂಡಿಪುರ
4)  ಯಾವುದು ಅಲ್

16) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?

1) *ಕೆ.ಕೆ.ವೇಣುಗೋಪಾಲ*
2)  ಕೆ.ಕೆ.ರಾಮಗೋಪಾಲ್
3)  ದೀಪಕ ಮಿಶ್ರ
4)  ಯಾರು ಅಲೢಾ

17) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?

1) *ಕಂಬಳ*
2)  ಜೆಲ್ಲಿಕಟ್ಟು
3)  ಕಬಡ್ಡಿ
4)  ಮಲ್ಲಕಂಬ

18) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?

1) *ರವಿಶಾಸ್ತ್ರ*
2)  ಸೌರವ್ ಗಂಗೂಲಿ
3)  ರಾಹುಲ್ ದ್ರಾವಿಡ
4)  ಅನಿಲ್ ಕುಂಬ್ಳೆ

19) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?

1) *ಚೀನಾ*
2)  ಭಾರತ
3)  ರಷ್ಯಾ
4)  ಫ್ರಾನ್ಸ್

20) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?

1)  ಉಷಾರಾವ
2)  ಲತಾ ಹೆಗ್ಗಡೆ
3) *S.ಅಪರ್ಣಾ*
4)  ಯಾರು ಅಲ್

21) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?

1) *ರಾಜೀವ ಕುಮಾರ್*
2)  ಆನಂದ ಕುಮಾರ್
3)  ರಾಮ ಕುಮಾರ್
4)  ಸಂತೋಷ ಕುಮಾರ್

22) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?

1)  ಬ್ರಹ್ಮಪುತ್ರ
2)  ಸರಸ್ವತಿ
3)  ಅಲಕನಂದಾ
4) *ಮೇಚಿ*

23) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?

1)  ದೀಪಕ್ ಮಿಶ್ರ
2)  ವಿವೇಕ ಗೋಯೆಂಕಾ
3)  ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*

24) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?

1)  ಸುನೀಲ್ ಚೌದ್ರಿ
2)  ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4)  ಸ್ಟೀವ್ ಜಾನ್ಸನ್

25) *ಭಾರತದ ನೂತನ ರಕ್ಷಣಾ ಸಚಿವರು ಯಾರು*?

1)  ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3)  ಅರುಣ್ ಜೇಟ್ಲಿ
4)  ಸುಷ್ಮಾ ಸ್ವರಾಜ್

26) *IIT ಧಾರವಾಡದ ನೂತನ ನಿರ್ದೇಶಕರಾಗಿ ನೇಮಕಗೊಂಡವರು ಯಾರು*?

1) *ಪ್ರೊ. ಕವಿ ಮಹೇಶ್*
2)  ರೂಪ ಕುಮಾರಿ
3)  ಲಲಿತಾ ದೇವಿ
4)  ಪ್ರೊ.ಮಹೇಶ್

27) *ವಿಶ್ವದ ಹೈಟೆಕ್ ನಗರಗಳ ಪೈಕಿ ಬೆಂಗಳೂರು ನಗರದ ಸ್ಥಾನವೇನು*?

1) *19*
2)  20
3)  21
4)  22

28) *ಯಾವ ದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಿ ಭಾರತೀಯರ ಉದ್ಯೋಗವನ್ನು ಕಡಿತಗೊಳಿಸಲಾಗಿದೆ*?

1) *ಸೌಧಿ ಅರೆಬಿಯಾ*
2)  ಅಮೇರಿಕಾ
3)  ಕತಾರ್
4)  ಇರಾನ್

29) *ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ (CAG) ಜನರಲ್ ಯಾರು*?

1) *ರಾಜೀವ್ ಮಹರ್ಷಿ*
2)  ರಾಜೀವ್ ಹೆಗ್ಗಡೆ
3)  ರಾಜೀವ್ ಸಿಂಗ್
4)  ಯಾರೂ ಅಲ್

30) *ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯಾವುದು*?

1) *ಹಬೀಬ್ ಗಂಜ್ ರೈಲ್ವೆ ನಿಲ್ದಾಣ*
2)  ಗೋರಕ್ ಪುರ್ ರೈಲ್ವೆ ನಿಲ್ದಾಣ
3)  ಸಂಬಾಲ್ ಪುರ ರೈಲ್ವೆ ನಿಲ್ದಾಣದ
4)  ಯಾವುದು ಅಲ್

31) *ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್ ಯಾವುದು*?

1)  ಅಲಹಾಬಾದ್ ಹೈಕೋರ್ಟ್
2) *ರಾಜ್ಯ ಸ್ಥಾನ ಹೈಕೋರ್ಟ್*
3)  ಕರ್ನಾಟಕ ಹೈಕೋರ್ಟ್
4)  ಮದ್ರಾಸ್ ಹೈಕೋರ್ಟ್

32) *ಗೋವು ದೇವರ ಪ್ರತಿರೂಪ, ಅದನ್ನು ಕೊಲ್ಲುವಂತಿಲ, ಎಂದು ಯಾವ ಹೈಕೋರ್ಟ್ ತೀರ್ಪು ನೀಡಿದೆ*?

1)  ಮದ್ರಾಸ್ ಹೈಕೋರ್ಟ್
2)  ಅಲಹಾಬಾದ್ ಹೈಕೋರ್ಟ್
3)  ಗುಜರಾತ್ ಹೈಕೋರ್ಟ್
4) *ಹೈದರಾಬಾದ್ ಹೈಕೋರ್ಟ್*

33) *ಸರೋವರದ ಮೇಲೆ ಜಗತ್ತಿನ ಅತಿ ದೊಡ್ಡ ತೇಲುವ ಸೌರ ಘಟಕವನ್ನು ನಿರ್ಮಿಸಿದ ದೇಶ ಯಾವುದು*?

1)  ಫ್ರಾನ್ಸ್
2) *ಚೀನಾ*
3)  ಕೆನಡಾ
4)  ಜಪಾನ್

34) *ಯಾವ ಹೈಟೆಕ್ ಅಣು ಸ್ಥಾವರವನ್ನು ಭಾರತದ ಹೆಮ್ಮೆಯ ಅಕ್ಷಯ ಪಾತ್ರೆ ಎಂದು ಕರೆಯಲಾಗುತ್ತದೆ*?

1) *ಕಕ್ರಫಾರ್ ಅಣುಸ್ಥಾವರ*
2)  ಕಲ್ಪಕಂ ಅಣು ಸ್ಥಾವರ
3)  ಕೈಗಾ ಅಣು ವಿದ್ಯುತ್ ಸ್ಥಾವರ
4)  ಯಾವುದು ಅಲ್ಲ

35) *ಯುನೆಸ್ಕೋ ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಗರ ಯಾವುದು*?

1)  ಸೂರತ್
2) *ಅಲಹಾಬಾದ್‌*
3)  ಉದಯಪುರ
4)  ಅಹ್ಮದ್ಬಾದ

36) *ರೇರಾ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ*?

1)  ಭ್ರಷ್ಟಾಚಾರ ನಿರ್ಮೂಲನೆಗೆ
2) *ರಿಯಲ್ ಎಸ್ಟೇಟ್ ಉದ್ಯಮಕ್ಕೆ*
3)  ಕಪ್ಪು ಹಣ ನಿಗ್ರಹಕ್ಕೆ
4)  ಅನಿವಾಸಿ ಭಾರತೀಯರಿಗೆ ಶಾಶ್ವತ ನೆಲೆ ಕಲ್ಪಿಸುವುದು

37) *ಸಲಿಂಗ ವಿವಾಹವನ್ನು ಇತ್ತೀಚೆಗೆ ಯಾವ ದೇಶದ ಸಂಸತ್ತು ಕಾನೂನು ಬದ್ಧಗೊಳಿಸಿದೆ*?

1)  ಬ್ರಿಟಿನ
2) *ಜರ್ಮನ್*
3)  ರಷ್ಯಾ
4)  ಫ್ರಾನ್ಸ್

38) *ಇತ್ತೀಚೆಗೆ ಬಿಡುಗಡೆಯಾದ ಹೊಸ ಅದು ಐವತ್ತು (50)  ರೂಪಾಯಿಯ ನೋಟಿನಲ್ಲಿ ಕರ್ನಾಟಕದ ಯಾವ ಐತಿಹಾಸಿಕ ಸ್ಮಾರಕವನ್ನು ಮುದ್ರಿಸಲಾಗಿದೆ*?

1)  ಬೇಲೂರು ಚನ್ನಕೇಶವ ದೇವಾಲಯ
2) *ಹಂಪಿಯ ಕಲ್ಲಿನ ರಥ*
3)  ಬಾದಾಮಿಯ ಮೇಣಬಸದಿ
4)  ಯಾವುದು ಅಲ್ಲ

39) *ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಇತ್ತೀಚೆಗೆ ಎಲ್ಲಿ ನಡೆಯಿತು*?

1) *ಬಿಜಾಪುರ*
2)  ಬೀದರ್
3)  ಕಲಬುರ್ಗಿ
4)  ರಾಯಚೂರು

40) *ಈ ಕೆಳಗಿನ ಯಾವ ನಗರದ ಉದ್ಯಾನವನಕ್ಕೆ ರಾಣಿ ಚನ್ನಮ್ಮನ ಹೆಸರಿಡಲಾಗಿದೆ*?

1)  ಚೆನ್ನೈ
2)  ಹೈದರಾಬಾದ್
3) *ದೆಹಲಿ*
4)  ಕೋಲ್ಕತಾ

41) *2017 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಪಡೆದರು ಯಾರೂ*?

1)  ದೇವನೂರು ಮಹಾದೇವ
2)  ಟಿ.ಸಿದ್ದಲಿಂಗಯ್ಯ
3) *ಮಲ್ಲಿಕಾರ್ಜುನ್ ಖರ್ಗೆ*
4)  ಸಚಿವ ಆಂಜನೇಯ

42) *ಯಾವ ರಾಜ್ಯ ಸರಕಾರ ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸಿದೆ*?

1) *ರಾಜಸ್ಥಾನ*
2)  ಮಧ್ಯಪ್ರದೇಶ
3)  ಪಂಜಾಬ
4)  ಹರಿಯಾಣ

43) *ಜಗತ್ತಿನ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತದ ಮೆಟ್ರೋ ಯಾವುದು*?

1)  ಕೋಲ್ಕತಾ
2)  ಮುಂಬೈ
3)  ಕೊಚ್ಚಿ
4) *ನವದೆಹಲಿ*

44) *2017 ರ ಆನೆಗಳ ಗಣತಿ ಪ್ರಕಾರ  ಕರ್ನಾಟಕ ಎಷ್ಟು ಆನೆಗಳನ್ನು ಹೊಂದಿದೆ*?

1) *6049*
2)  5719
3)  3054
4)  2761

45) *ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಲಿದೆ*?

1)  ಬೆಳಗಾವಿ
2)  ಮೖಸೂರ
3)  ಉಡುಪಿ
4) *ದಾವಣಗೆರೆ*

46) *"DIGI YATRA" ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ*?

1)  ಸಂಸದರ ವಿದೇಶಿ ಪ್ರವಾಸ
2)  ವಿಮಾನಯಾನಕ್ಕೆ ಕಡ್ಡಾಯ ಪಾಸ್ ಪೋರ್ಟ್ ವ್ಯವಸ್ಥೆ
3) *ವಿಮಾನಯಾನ ಕ್ಷೇತ್ರದಲ್ಲಿ ಕಡಿಮೆ ಪೇಪರ್ ಬಳಕೆ*
4)  ವಿದೇಶಿ ಪ್ರವಾಸಿಗರಿಗೆ ಇರುವ ಡಿಜಿಟಲ್ ವ್ಯವಸ್ಥೆ

47) *ಕರ್ನಾಟಕ ಸರ್ಕಾರ ಯಾವ ಚಿಟ್ಟೆಯನ್ನು "ರಾಜ್ಯದ ಅಧಿಕೃತ ರಾಜ್ಯ ಚಿಟ್ಟೆ" ಎಂದು ಘೋಷಿಸಿದೆ*?

1) *ಸದರನ್ ಬರ್ಡ್ ವಿಂಗ್*
2)  ಬ್ಲ್ಯು ಮಾರ್ಮನ್
3)  ರಾಕೆಟ್ ಬರ್ಡ್ ವಿಂಗ್
4)  ಯಾವುದು ಅಲ್ಲ

48) *ರಾಜ್ಯದ 6 ನೇ ವೇತನ ಆಯೋಗದ ಅಧ್ಯಕ್ಷರು ಯಾರು*?

1)  ಏ.ಕೆ.ಮಾತೂರ್
2)  *ಎಂ.ಆರ್ .ಶ್ರೀನಿವಾಸ್ ಮೂರ್ತಿ*
3)  ವೈ ವಿ ರೆಡ್ಡಿ
4)  ಯಾರೂ ಅಲ್ಲ

49) *ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಗರವನ್ನೇ ಮುಳುಗಿಸಿದ ಚಂಡಮಾರುತ ಯಾವುದು*?

1) *ಹಾರ್ವೆ*
2)  ಹರೀಕೆನ
3)  ಕರೀಷಮ
4)  ಇರಮಾ

50) *2017 ನೇ ಸಾಲಿನ "ಬಸವಶ್ರೀ ಪ್ರಶಸ್ತಿ" ಯನ್ನು ಯಾರಿಗೆ ನೀಡಲಾಗಿದೆ*?

1)  ಮಾಣಿಕ್ ಸರಕಾರ
2) *ಪಿ.ಸಾಯಿನಾಥ*
3)  ಮೆಧಾ ಪಾಟಕರ್
4)   ಯಾರೂ  ಅಲ್ಲ

51) *ಕರ್ನಾಟಕ ರಾಜ್ಯದ ಯಾವ ಗ್ರಾಮಕ್ಕೆ ಅಂತಾರಾಷ್ಟ್ರೀಯ ಗೂಗಲ್ ಪ್ರಶಸ್ತಿ ದೊರೆತಿದೆ*?

1)  ಎಚ್.ಡಿ.ಕೋಟೆ
2) *ಶಿರಗುಪ್ಪಿ*
3)  ಯಲವಾಳ
4)  ಹುಕ್ಕೇರಿ