ಮಂಗಳವಾರ, ಏಪ್ರಿಲ್ 4, 2017

ಪ್ರಮುಖ ಪ್ರಕೃತಿ ವಿಕೋಪಗಳು

*2016 ರ ಪ್ರಮುಖ ಪ್ರಕೃತಿ ವಿಕೋಪಗಳು*
*Mon, 3 Apr 2017 :*

*2016 ರ ಪ್ರಮುಖ ಪ್ರಕೃತಿ ವಿಕೋಪಗಳು*

1) ಮಂಗೋಲಿಯಾದಲ್ಲಿ ಭೀಕರ "ಡ್ಜೂಡ್" ಹಿಮಪಾತ
ಕಳೆದ ಜನವರಿಯಲ್ಲಿ ಮಂಗೋಲಿಯಾದಲ್ಲಿ ಸಂಭವಿಸಿದ ಭೀಕರ ಹಿಮಪಾತದಿಂದಾಗಿ ಸಾವಿರಾರು ಮಂದಿ ಪ್ರಾಣತೆತ್ತಿದ್ದರು. ಭೀಕರ ಚಳಿ ಹಾಗೂ ಹಿಮಪಾತದಿಂದಾಗಿ ಲಕ್ಷಾಂತರ ಸಾಕು ಪ್ರಾಣಿಗಳು ಕೂಡ ಅಸು ನೀಗಿದ್ದವು. 2015 ರ ನವೆಂಬರ್ ನಿಂದ ಆರಂಭಗೊಂಡಿದ್ದ ಹಿಮಪಾತ ಜನವರಿ ತಿಂಗಳಲ್ಲಿ ಭೀಕರ ಸ್ವರೂಪ ಪಡೆದಿತ್ತು.


2) ತಾಂಜೇನಿಯಾ ಪ್ರವಾಹ
ಕಳೆದ ಜನವರಿ 17 ಮತ್ತು 18ರಂದು ತಾಂಜೇನಿಯಾದಲ್ಲಿ ಸಂಭವಿಸಿದ್ದ ಭಾರಿ ಪ್ರವಾಹದಿಂದಾಗಿ ಸಾವಿರಾರು ಮನೆಗಳು ನೆಲಸಮಗೊಂಡಿದ್ದವು. ಡೊಡೊಮಾ ಮತ್ತು ಬಾಹಿ ಜಿಲ್ಲೆಗಳಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಸುಮಾರು 2800 ಮಂದಿ ನಿರಾಶ್ರಿತರಾಗಿದ್ದರು. ಬಾಹಿ ಜಿಲ್ಲೆಯೊಂದರಲ್ಲೇ ಸುಮಾರು 155 ಮನೆಗಳು ಕೊಚ್ಚಿಕೊಂಡು ಹೋಗಿತ್ತು.


3) ಹೈಟಿ ಪ್ರವಾಹ
ಹೈಟಿಯಲ್ಲಿ ಸಂಭವಿಸಿದ್ದ ಭಾರಿ ಪರಿಣಾಮ ಉಂಟಾಗಿದ್ದ ಪ್ರವಾಹದಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದರು. ಭೀಕರ ಪ್ರವಾಹದಿಂದಾಗಿ ಹೈಟಿಯ ಪೋರ್ಟ್ ಡಿ ಬೆಕ್ಸ್ ಪ್ರಾಂತ್ಯ ಸಂಪೂರ್ಣ ಜಲಾವೃತ್ತವಾಗಿತ್ತು. ಪ್ರವಾಹಕ್ಕೆ ಸಿಲುಕಿ ಸುಮಾರು 1 ಸಾವಿರಕ್ಕೂ ಅಧಿಕ ಕುಟುಂಬಗಳು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದವು.


4) ತೈವಾನ್ ಭೂಕಂಪನ
ಫೆಬ್ರವರಿ 6ರಂದು ಚೀನಾದ ತೈವಾನ್ ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದಲ್ಲಿ ಸುಮಾರು 36 ಮಂದಿ ಸಾವನ್ನಪ್ಪಿದ್ದರು. ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆ ದಾಖಲಾಗಿತ್ತು. ಭೂಕಂಪನದ ತೀವ್ರತೆಗೆ ನೂರಾರು ಕಟ್ಟಡಗಳು ಕುಸಿದು ಹಲವು ಕಟ್ಡಡಗಳು ಬಿರುಕುಗೊಂಡಿದ್ದವು. ಸತತ ಒಂದು ವಾರ ನಡೆದ ಕಾರ್ಯಾಚರಣೆಯಲ್ಲಿ ಅಂತಿಮವಾಗಿ 36 ಮಂದಿ ಸಾವನ್ನಪ್ಪಿ, 525 ಮಂದಿ ಗಾಯಗೊಂಡಿದ್ದರು. ಅಂತೆಯೇ ಅಂದು ಭೂಕಂಪನದಲ್ಲಿ ಸಿಲುಕಿದ್ದ ಸುಮಾರು 113 ಮಂದಿ ಕುರಿತು ಇಂದಿಗೂ ಮಾಹಿತಿಯೇ ಲಭ್ಯವಾಗಿಲ್ಲ.


5) ಫಿಜಿಯನ್ನು ಕಾಡಿದ್ದ ಚಂಡಮಾರುತ
ಫೆಬ್ರವರಿ 21ರಂದು ಫಿಜಿಯಲ್ಲಿ ಸಂಭವಿಸಿದ್ದ ಟ್ರಾಪಿಕಲ್ ಚಂಡಮಾರುತ ಮಾರುತದಿಂದಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಅಕ್ಷರಶಃ ನೆಲೆಕಳೆದುಕೊಂಡಿದ್ದರು. ಘಟನೆಯಲ್ಲಿ ಸುಮಾರು 42 ಮಂದಿ ಸಾವಿಗೀಡಾಗಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಚಂಡಮಾರುತದ ಪರಿಣಾಮ ಸುಮಾರು 3000ಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತವಾಗಿದ್ದವು. ಅಂದು ಚಂಡಮಾರುತದ ಹೊಡೆತಕ್ಕೆ ಬಲಿಯಾದ ಸುಮಾರು 52 ಸಾವಿರ ಮಂದಿ ಇಂದಿಗೂ ಫಿಜಿಯಲ್ಲಿ ನಿರಾಶ್ರಿತ ತಾಣಗಳಲ್ಲೇ ವಾಸಿಸುತ್ತಿದ್ದಾರೆ.



6) ಸರ್ಬಿಯಾದಲ್ಲಿ ಭೀಕರ ಪ್ರವಾಹ
ಮಾರ್ಚ್ 7ರಂದು ಸರ್ಬಿಯಾದಲ್ಲಿ ಸಂಭವಿಸಿದ್ದ ಭಾರಿ ಮಳೆ ಭೀಕರ ಪ್ರವಾಹವನ್ನು ತಂದೊಡ್ಡಿತ್ತು. ಪ್ರವಾಹದ ಅಬ್ಬರಕ್ಕೆ ಸರ್ಬಿಯಾದ ಬರೊಬ್ಬರಿ 14 ಜಿಲ್ಲೆಗಳಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಪ್ರವಾಹದ ರಭಸಕ್ಕೆ ಸುಮಾರು 710 ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಸುಮಾರು 1, 110 ಕುಟುಂಬಗಳು ನೆಲೆಕಳೆದುಕೊಂಡು ನಿರಾಶ್ರಿತವಾಗಿದ್ದವು. ರೆಡ್ ಕ್ರಾಸ್ ಸಂಸ್ಥೆ ಈ ಎಲ್ಲ ಕುಟುಂಬಗಳಿಗೆ ಗಂಜಿ ಕೇಂದ್ರ ತೆರೆದು ಉಪಚರಿಸಿತ್ತು. ಇಂದಿಗೂ ಸರ್ಬಿಯಾದಲ್ಲಿ ರೆಡ್ ಕ್ರಾಸ್ ಸಂಸ್ಥೆ ಗಂಜಿ ಕೇಂದ್ರವನ್ನು ಮುಂದುವರೆಸಿದೆ.


7) ಪಾಕಿಸ್ತಾನದಲ್ಲಿ ಭಾರಿ ಮಳೆ-ಪ್ರವಾಹ
ಇದೇ ಮಾರ್ಚ್ 7 ರಂದು ಪಾಕಿಸ್ತಾನದಲ್ಲೂ ಭೀಕರ ಪ್ರವಾಹ ಉಂಟಾಗಿತ್ತು. ಖೈಬರ್ ಪಖ್ತುಂಕ್ವ ಪ್ರದೇಶದಲ್ಲಿ ಬಿದ್ದ ಭಾರಿ ಮಳೆ ಪ್ರವಾಹಕ್ಕೆ ಕಾರಣವಾಗಿತ್ತು. ಅಂದಿನ ಪ್ರವಾಹದಲ್ಲಿ ಪಾಕಿಸ್ತಾನದ ಪಂಜಾಬ್, ಬಲೂಚಿಸ್ತಾನದಲ್ಲಿ ಸುಮಾರು 62 ಮಂದಿ ಸಾವನ್ನಪ್ಪಿ, 97 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರವಾಹದ ಹೊಡೆತಕ್ಕೆ 171ಕ್ಕೂ ಅಧಿಕ ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಬಳಿಕ ಜೂನ್ 1ರಂದು ಮತ್ತೆ ಪಾಕಿಸ್ತಾನದ್ದಲ್ಲಿ ಭಾರಿ ಮಳೆಯಾಗಿ ರಾವಲ್ಪಿಂಡಿ, ಇಸ್ಲಾಮಾಬಾದ್, ಪೇಶಾವರ ಮತ್ತು ಲಾಹೋರ್ ನಲ್ಲಿ ಪ್ರವಾಹ ಉಂಟಾಗಿತ್ತು. ಅಂದ ಮತ್ತೆ 15ಕ್ಕೂ ಹೆಚ್ಚು ಮಂದಿ ತಮ್ಮ ಜೀವ ಕಳೆದುಕೊಂಡಿದ್ದರು. ಅಂತೆಯೇ 173 ಮಂದಿ ಗಾಯಗೊಂಡಿದ್ದರು.


8) ಈಕ್ವೇಡಾರ್ ಭೂಕಂಪನ
ಏಪ್ರಿಲ್ 17 ರಂದು ಈಕ್ವೆಡಾರ್ ನಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಲ್ಲಿ ಸುಮಾರು 443 ಮಂದಿ ಸಾವನ್ನಪ್ಪಿದ್ದರು. ಅಂತೆಯೇ ಭೂಕಂಪನದಿಂದಾಗಿ ಹಲವು ಕಟ್ಟಡಗಳು ನೆಲಸಮಗೊಂಡಿದ್ದವು. ಘಟನೆಯಲ್ಲಿ 4027 ಮಂದಿ ಸಾವನ್ನಪ್ಪಿದ್ದರು. ಸರ್ಕಾರಿ ಇಲಾಖೆಗಳು ತಿಳಿಸಿರುವಂತೆ 805 ಬೃಹತ್ ಕಟ್ಟಡಗಳು ನೆಲಕ್ಕುರುಳಿ, 608 ಕಟ್ಟಡಗಳು ಜಖಂಗೊಂಡಿದ್ದವು.


9) ಶ್ರೀಲಂಕಾದಲ್ಲಿ ರೋನು ಚಂಡ ಮಾರುತ ಮತ್ತು ಪ್ರವಾಹ
ಮೇ 15 ರಂದು ಶ್ರೀಲಂಕಾದಲ್ಲಿ ಸಂಭವಿಸಿದ್ದ ರೋನು ಚಂಡಮಾರುತದಿಂದಾಗಿ ಭಾರಿ ಮಳೆ ಹಾಗೂ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಅದರ 25 ಜಿಲ್ಲೆಗಳ ಪೈಕಿ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಪ್ರವಾಹದಲ್ಲಿ 104 ಮಂದಿ ಸಾವನ್ನಪ್ಪಿ, 93 ಮಂದಿ ಇಂದಿಗೂ ನಾಪತ್ತೆಯಾಗಿದ್ದಾರೆ. ಪ್ರವಾಹದ ಹೊಡೆತಕ್ಕೆ ಸಿಲುಕಿ 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದರು. ಈ ಪೈಕಿ 21 ಸಾವಿರ ಮಂದಿ ತಮ್ಮ ಸ್ವಗ್ರಾಮದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, ನಾಲ್ಕು ಸಾವಿರಕ್ಕೂ ಅಧಿಕ ಮನೆಗಳು ಕೊಚ್ಚಿ ಹೋಗಿದ್ದವು.


10) ಬಾಂಗ್ಲಾದೇಶದಲ್ಲಿ ಪ್ರವಾಹ
ಜುಲೈ 29 ರಂದು ಬಾಂಗ್ಲಾದೇಶದಲ್ಲಿ ಉಂಟಾಗಿದ್ದ ಪ್ರಹಾವದಿಂದಾಗಿ 42 ಮಂದಿ ಅಸುನೀಗಿದ್ದರು. ಬಾಂಗ್ಲಾದ 7 ಜಿಲ್ಲೆಗಳಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಿಂದಾಗಿ ಸುಮಾರು 8 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. ಬಾಂಗ್ಲಾದ ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿದಿದ್ದವು. ಸುಮಾರ 7 , 400 ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಆಗಸ್ಚ್ 11ರಂದು ಇದೇ ಬಾಂಗ್ಲಾದ 19 ಜಿಲ್ಲೆಗಳಲ್ಲಿ ಮತ್ತೆ ಪ್ರವಾಹ ಸಂಭವಿಸಿತ್ತು. ಆಗ ಮತ್ತೆ 106 ಮಂದಿ ಸಾವನ್ನಪ್ಪಿ, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು.16 ಸಾವಿರಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು.


11) ನೇಪಾಳದಲ್ಲೂ ಪ್ರವಾಹ
ಜುಲೈ ತಿಂಗಳಲ್ಲಿ ನೇಪಾಳದ ಭೊಟೆಕೋಸಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಮೂರು ಮಂದಿ ಸಾವನ್ನಪ್ಪಿದ್ದರು. ಅಂತೆಯೇ ನದಿ ಪಾತ್ರದಲ್ಲಿದ್ದ 38 ಮನೆಗಳು ಕೊಚ್ಚಿಕೊಂಡು ಹೋಗಿದ್ದವು.


12) ನ್ಯೂಜಿಲೆಂಡ್ ನಲ್ಲಿ ಭೀತಿ ಮೂಡಿಸಿದ್ದ ಸುನಾಮಿ
ಚಿಲಿಯಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಿಂದಾಗಿ ನ್ಯೂಜಿಲೆಂಡ್ ನಲ್ಲಿ ಸುನಾಮಿ ಭೀತಿ ಆವರಿಸಿತ್ತು. ಸೆಪ್ಟೆಂಬರ್ 17 ರಂದು ನ್ಯೂಜಿಲೆಂಡ್ ಕರಾವಳಿ ತೀರಕ್ಕೆ ಅಲ್ಪ ಪ್ರಮಾಣದ ಸುನಾಮಿ ಅಲೆಗಳು ಅಪ್ಪಳಿಸಿದ್ದವು.


13) ಇಂಡೋನೇಷ್ಯಾ ಭೂಕಂಪ
ದ್ವೀಪಗಳ ಸಮೂಹ ರಾಷ್ಟ್ರ. ಇಂಡೋನೇಷ್ಯಾದಲ್ಲಿ 2016 ರಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದವು. ಇಂಡೋನೇಷ್ಯಾದಲ್ಲಿ ಭೂಕಂಪನ ಪ್ರದೇಶಗಳಿದ್ದು, ಇವುಗಳನ್ನು ದಿ ಫೆಸಿಫಿಕ್ ರಿಂಗ್ ಆಫ್ ಫೈರ್ ಎಂದು ಕರೆಯುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಭೂಕಂಪನ ಸರ್ವೇ ಸಾಮಾನ್ಯ.

*ಕೃಪೆ:- ಕನ್ನಡಪ್ರಭ*

ಸೋಮವಾರ, ಏಪ್ರಿಲ್ 3, 2017

ಕಾಯಂ ಆಯ್ತು ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧದ ತೀರ್ಪು

ಕಾಯಂ ಆಯ್ತು ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧದ ತೀರ್ಪು

ನವದೆಹಲಿ, ಮಾರ್ಚ್ 30: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳ ನಡುವಿನ ದೂರವನ್ನು 500 ಮೀ.ಗಳಿಗೆ ನಿಗದಿಗೊಳಿಸಿ ನೀಡಿದ್ದ ತನ್ನ ತೀರ್ಪು ಪುನರ್ ಪರಿಶೀಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಇದಲ್ಲದೆ, ಈ ಮದ್ಯದಂಗಡಿಗಳ ಪರವಾನಗಿಯನ್ನು ಏ. 1ರ ನಂತರ ನವೀಕರಣಗೊಳಿಸದಿರುವಂತೆಯೂ ಸುಪ್ರೀಂ ಕೋರ್ಟ್ ಸ್ಪಷ್ಟ ನುಡಿಗಳಲ್ಲಿ ಹೇಳಿರುವುದರಿಂದ ಏ. 1ರಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಆಸುಪಾಸಿನ ಪ್ರಾಂತ್ಯಗಳಲ್ಲಿರುವ ಪರಸ್ಪರ 500 ಮೀ. ಅಂತರದೊಳಗಿರುವ ಮದ್ಯ ಮಾರಾಟದ ಅಂಗಡಿಗಳು ಎತ್ತಂಗಡಿಯಾಗಲಿವೆ.[ಟ್ರಿಪಲ್ ತಲಾಖ್ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ]

ಕಳೆದ ವರ್ಷ ಡಿಸೆಂಬರ್ 15ರಂದು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿನ ಮದ್ಯದಂಗಡಿಗಳ ನಡುವಿನ ಅಂತರವನ್ನು500 ಮೀ.ಗಳಿಗೆ ಹೆಚ್ಚಿಸಿ ತೀರ್ಪು ನೀಡಿತ್ತು.

ಆದರೆ, ಈ ಬಗ್ಗೆ ಕೇರಳ, ತೆಲಂಗಾಣ ಹಾಗೂ ಪಂಬಾಜ್ ರಾಜ್ಯಗಳ ಮದ್ಯ ಮಾರಾಟಗಳ ಒಕ್ಕೂಟಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಆದೇಶವನ್ನು ಮರುಪರಿಶೀಲಿಸಬೇಕು ಹಾಗೂ ಮದ್ಯದಂಗಡಿಗಳ ಅಂತರವನ್ನು 500 ಮೀ.ಗಳಿಗಿಂತಲೂ ಕಡಿಮೆ ಮಾಡಬೇಕೆಂದು ಕೋರಿದ್ದವು.

ಸರ್ಕಾರದ ಪರವಾಗಿ ಮನವಿ ಮಾಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೂಡಾ, ಈ ಅಂತರ ಕಡಿಮೆ ಮಾಡಬೇಕೆಂದು ಕೋರಿದ್ದರು.

ಈ ಮನವಿಗಳನ್ನು ಮಾರ್ಚ್ 29ರಂದು ವಿಚಾರಣೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ (ಮಾರ್ಚ್ 30) ಮುಂದೂಡಿತ್ತು.

ಗುರುವಾರದ ವಿಚಾರಣೆ ವೇಳೆ, ಮದ್ಯ ಮಾರಾಟಗಾರರ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತಲ್ಲದೆ, ಜನರ ಜೀವಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ಹೇಳಿತು.

ಇದರ ಅನ್ವಯ, ಹೆದ್ದಾರಿಗಳಲ್ಲಿನ ಮದ್ಯ ಮಾರಾಟವು ಇನ್ನು ಅರ್ಧ ಕಿ.ಮೀಗಳಿಗೊಂದರಂತೆ ಲಭ್ಯವಾಗಲಿದೆ .

ಹಣಕಾಸು ಮಸೂದೆ 2017 ಗೆ ಸಂಸತ್ತು ಅಂಗೀಕಾರ

ಹಣಕಾಸು ಮಸೂದೆ 2017 ಗೆ ಸಂಸತ್ತು ಅಂಗೀಕಾರ

ನವದೆಹಲಿ: ರಾಜ್ಯಸಭೆ ಮಾಡಿದ ಎಲ್ಲಾ 5 ತಿದ್ದುಪಡಿಗಳನ್ನು ಲೋಕಸಭೆ ನಿರಾಕರಿಸುವ ಮೂಲಕ ಸಂಸತ್ತಿನಲ್ಲಿ ಇಂದು ಹಣಕಾಸು ಮಸೂದೆ 2017 ಅಂಗೀಕಾರಗೊಂಡಿದೆ.

ರಾಜ್ಯಸಭೆಯ ತಿದ್ದುಪಡಿ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮೇಲ್ಮನೆಯ ತಿದ್ದುಪಡಿಗಳನ್ನು ಸ್ವೀಕರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಮಸೂದೆ ಮೇಲಿನ ಚರ್ಚೆ ಆರಂಭಿಸಿದ ಕಾಂಗ್ರೆಸ್ ನ ದೀಪೇಂದ್ರ ಹೂಡಾ ರಾಜ್ಯಸಭೆಯ ತಿದ್ದುಪಡಿಯನ್ನು ಬೆಂಬಲಿಸಿದರು. ಹಣಕಾಸು ಮಸೂದೆ ಮೂಲಕ ವಿವಿಧ ಕಾನೂನುಗಳಿಗೆ 40 ತಿದ್ದುಪಡಿಗಳ ಪ್ರಸ್ತಾವನೆ ಮಾಡಿದ ಸರ್ಕಾರವನ್ನು ಪ್ರಶ್ನಿಸಿದರು.

ಚುನಾವಣಾ ನಿಧಿಗಾಗಿ ಪ್ರತ್ಯೇಕ ಕಾನೂನಿಗೆ ಅವರು ಒತ್ತಾಯಿಸಿದರು. ರಾಜಕೀಯ ಪಕ್ಷಗಳು ಹಣ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕೆಂದು ಬಿಜೆಪಿ ನಾಯಕ ಬಾರ್ತುಹರಿ ಮಹತಾಬ್ ಹೇಳಿದರು.

ನಿನ್ನೆ 5 ತಿದ್ದುಪಡಿಗಳನ್ನು ಸೂಚಿಸಿ ಹಣಕಾಸು ಮಸೂದೆ-2017ನ್ನು ರಾಜ್ಯಸಭೆ ಲೋಕಸಭೆಗೆ ಕಳುಹಿಸಿತ್ತು.ಆದರೆ ಅದನ್ನು ಲೋಕಸಭೆ ಇಂದು ಧ್ವನಿಮತದ ಮೂಲಕ ತಿರಸ್ಕರಿಸಿ ಹಣಕಾಸು ಮಸೂದೆಗೆ ಅಂಗೀಕಾರ ನೀಡಿ ಬಜೆಟ್ ಕಾರ್ಯವನ್ನು ಮುಗಿಸಿತು.

ಇಂದು ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿರುವ ಹಣವು ಅಪಾರದರ್ಶಕವಾಗಿದೆ.
ಬಜೆಟ್ ಪ್ರಸ್ತಾವನೆ ಪರವಾಗಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವ ದಾನಿಗಳ ಸಂಖ್ಯೆಯನ್ನು ಸೀಮಿತಗೊಳಿಸುವುದರಿಂದ ರಾಜ್ಯಸಭೆಯಲ್ಲಿ ಮಾಡಿರುವ ತಿದ್ದುಪಡಿಯನ್ನು ಸ್ವೀಕಚುರಿಸಲಾಗುವುದಿಲ್ಲ ಎಂದು ಹೇಳಿದರು.

ಅಂಗೀಕಾರಗೊಂಡ ಮಸೂದೆಗಳು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ, ಸಮಗ್ರ ಜಿ.ಎಸ್.ಟಿ ಮಸೂದೆ, ಕೇಂದ್ರಾಡಳಿತ ಜಿಎಸ್‍ಟಿ ಮಸೂದೆ ಮತ್ತು ಜಿಎಸ್‍ಟಿ ಪರಿಹಾರ ಮಸೂದೆಗಳಾಗಿವೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪದ್ಮಾ ಕುಮುಟ ವಿಧಿವಶ

ಶೂಟಿಂಗ್ ವೇಳೆ ಹೃದಯಾಘಾತ: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪದ್ಮಾ ಕುಮುಟ ವಿಧಿವಶ
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ಕಿರುತೆರೆಯ ಹಿರಿಯ ನಟಿ ಪದ್ಮಾ ಕುಮುಟಾ (58) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೂಟಿಂಗ್ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಪದ್ಮಾ ಕುಮುಟಾ ಅವರು ಬಯಲುದಾರಿ, ಅರಿವು, ಫಲಿತಾಂಶ, ಅವಸ್ಥೆ, ಮೌನಗೀತೆ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು. ಚೋಮನದುಡಿ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು.

ಪದ್ಮಾ ಕುಮುಟಾ ಸೋಮವಾರದಂದು ಶೃತಿ ನಾಯ್ಡು ಅವರ ಮಹಾನದಿ ಸಿರೀಯಲ್ ಶೂಟಿಂಗ್ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಉಸಿರಾಟದ ತೊಂದರೆಯಿಂದಾಗಿ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದಿದ್ದರು.

ಆರ್, ಅಶ್ವಿನ್ ಗೆ ಸರ್, ಗಾರ್ಫಿಲ್ಡ್ ಸೋಬರ್ಸ್ ಪ್ರಶಸ್ತಿ

ಆರ್ ಅಶ್ವಿನ್ ಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪ್ರದಾನ
ಧರ್ಮಶಾಲಾ: ತಮ್ಮ ಆಮೋಘ ಪ್ರದರ್ಶನದ ಮೂಲಕ ಐಸಿಸಿಯ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾಗಿದ್ದ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಮಂಗಳವಾರ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಳೆದ ಜನವರಿಯಲ್ಲಿ ಪ್ರಕಟವಾಗಿದ್ದ ಐಸಿಸಿ ಕ್ರಿಕೆಟ್ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಆಫ್ ಸ್ಪಿನ್ನರ್ ಆರ್ ಆಶ್ವಿನ್ ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಭಾಜನರಾಗಿದ್ದರು. ಇಂದು ಧರ್ಮಶಾಲಾದಲ್ಲಿ  ನಡೆದ ಅಂತಿಮ ಟೆಸ್ಟ್ ಮುಕ್ತಾಯದ ಬಳಿಕ ಅಶ್ವಿನ್ ಅವರಿಗೆ ಈ ಎರಡೂ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ವಿಜೇತ ಕ್ರಿಕೆಟಿಗ ಆರ್ ಅಶ್ವಿನ್, ನಿಜಕ್ಕೂ  ನನ್ನ ಕನಸೊಂದು ನನಾಸಾದ ವಿಶೇಷ ದಿನ ಇದು. ಉತ್ತಮ ಪ್ರದರ್ಶನದ ಮೂಲಕ ತಂಡ ಉತ್ತಮ ಸಾಧನೆಗೈಯಲು ನಾನು ಪ್ರಯತ್ನಿಸಿದ್ದೆ.
ಎಲ್ಲ ಬಗೆಯ ಕ್ರಿಕೆಟ್ ಮಾದರಿಗಳಲ್ಲೂ ನಾವು ಒಂದು ತಂಡವಾಗಿ ಆಡಿದ್ದೇವೆ. ಇದಕ್ಕೆ  ನಮಗೆ ದೊರೆತ ಗೆಲುವುಗಳೇ ಸಾಕ್ಷಿ ಎಂದು ಅಶ್ವಿನ್ ಹೇಳಿದರು.

ಪ್ರಮುಖವಾಗ ನಮ್ಮ ತಂಡದ ಹಾಗೂ ನನ್ನ ಯಶಸ್ಸಿನಲ್ಲಿ ಇಡೀ ತಂಡದ ಸದಸ್ಯರು ಹಾಗೂ ತಂಡದ ನಿರ್ವಾಹಕರ ತಂಡದ ದೊಡ್ಡ ಕೊಡುಗೆ ಇದ್ದು, ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಪ್ರಮುಖವಾಗಿ ನನ್ನ  ಕುಟುಂಬ ಮತ್ತು ಪಂದ್ಯದ ನಡುವೆಯೇ ನನ್ನ ಅಂಕಲ್ ಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನನ್ನ ಕುಟುಂಬದ ಬೆಂಬಲವಿಲ್ಲದೇ ಹೋಗಿದ್ದರೇ ನಾನು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ  ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸುವ ಭರವಸೆ ಇದೆ ಎಂದು ಅಶ್ವಿನ್ ಹೇಳಿದರು.

ಇದೇ ವೇಳೆ ಅಶ್ವಿನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು, ವಿಶ್ವ ಕ್ರಿಕೆಟ್ ಗೆ ಭಾರತ ಸದಾಕಾಲ ಉತ್ತಮ ಸ್ಪಿನ್ನರ್ ಗಳನ್ನು ನೀಡುತ್ತಾ ಬಂದಿದೆ. ಆ ಪಟ್ಟಿಗೆ ಅಶ್ವಿನ್ ಮತ್ತು ರವೀಂದ್ರ  ಜಡೇಜಾ ಇತ್ತೀಚಿನ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಸಿಸಿ ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ ಸನ್ ಅವರು, ನಿಜಕ್ಕೂ ಅಶ್ವಿನ್ ಓರ್ವ ಅದ್ಭುತ ಆಟಾಗಾರ,  ಅಗತ್ಯ ಬಿದ್ದಾಗಲೆಲ್ಲಾ ತಮ್ಮ ಉತ್ತಮ ಪ್ರದರ್ಶನ ತೋರಿದ ಅಶ್ವಿನ್ ತಂಡಕ್ಕೆ ನೆರವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಾಬ್ ಡೈಲನ್ ಅವರ ಕೈಸೇರಿದ ನೋಬೆಲ್ ಸಾಹಿತ್ಯ ಪ್ರಶಸ್ತಿ

ಬಾಬ್ ಡೈಲನ್ ಅವರ ಕೈಸೇರಿದ ನೊಬೆಲ್ ಸಾಹಿತ್ಯ ಪ್ರಶಸ್ತಿ

ಸ್ಟಾಕ್ಹೋಮ್: ಬಾಬ್ ಡೈಲನ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ಡೈಲನ್ ಅವರು ಅಮೆರಿಕಾದ ಸಂಗೀತಗಾರ ಮತ್ತು ಗೀತ ರಚನೆಕಾರರಾಗಿದ್ದು ನಿನ್ನೆ ರಾತ್ರಿ ಅವರು ಪ್ರದರ್ಶನ ನೀಡುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಸ್ವೀಡನ್ ಅಕಾಡೆಮಿಯ ಸದಸ್ಯ ಕ್ಲಾಸ್ ಒಸ್ಟೆರ್ಗ್ರೆನ್ ತಿಳಿಸಿದ್ದಾರೆ.

ಬಾಬ್ ಅವರ ಆಶಯದಂತೆ ಕಾರ್ಯಕ್ರಮ ಸರಳ ಮತ್ತು ಖಾಸಗಿಯಾಗಿತ್ತು. ಅಕಾಡೆಮಿ ಸದಸ್ಯರು ಮತ್ತು ಡೈಲನ್ ಅವರ ಕಚೇರಿ ಸಿಬ್ಬಂದಿಗಳು ಮಾತ್ರ ಭಾಗವಹಿಸಿದ್ದರು.

2016ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಬಾಬ್ ಡೈಲನ್ ಅವರಿಗೆ ಸಂದಿದೆ. ಅವರ ಕಾವ್ಯದ ಬರವಣಿಗೆಗಾಗಿ ಈ ಪ್ರಶಸ್ತಿ ಸಂದಿದೆ.

ರಘು ರೈಗೆ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ

6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟ: ರಘು ರೈಗೆ ಜೀವಮಾನ ಸಾಧನೆ ಪ್ರಶಸ್ತಿ
ನವದೆಹಲಿ: 6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟವಾಗಿದ್ದು, ಖ್ಯಾತ ಛಾಯಾಗ್ರಾಹಕ ರಘು ರೈ ಅವರು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1965ರಲ್ಲಿ ತಮ್ಮ ವೃತ್ತಿಪರ ಛಾಯಾಗ್ರಹಣ ಆರಂಭಿಸಿದ ರಘು ರೈ ಅವರು, 1972ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅಂತೆಯೇ ಛಾಯಾಗ್ರಹಣ ಕಲೆಯಲ್ಲಿ ಅಗಾಧ ಅನುಭವ ಹೊಂದಿರುವ ರಘುರೈ ಅವರು, ಸುಮಾರು 18  ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು 1992ರಲ್ಲಿ ಅಮೆರಿಕದ ಪ್ರತಿಷ್ಠಿತ ವರ್ಷದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೂ ರಘುರೈ ಭಾಜನರಾಗಿದ್ದರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಈ ಬಗ್ಗೆ  ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನಾರಾದ ರಘುರೈ ಅವರಿಗೆ ಶುಭಾಷಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛಾಯಾಗ್ರಹಣದ ಮೂಲಕ ಜಾಗೃತಿ ಮೂಡಿಸಬಹುದಾಗಿದ್ದು, ಛಾಯಾ ಗ್ರಹಣ ಉತ್ತಮ ಆಡಳಿತ ಪ್ರಸರಣದ ಮಾರ್ಗ ಕೂಡ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಳಿದಂತೆ ಪ್ರಶಸ್ತಿಗೆ ಭಾಜನರಾದ ಪ್ರಮುಖ ಛಾಯಾಗ್ರಾಹಕ ಹೆಸರು ಇಂತಿದೆ.

ವರ್ಷದ ಹವ್ಯಾಸಿ ಛಾಯಾಗ್ರಾಹಕ ಪ್ರಶಸ್ತಿ-ರವೀಂದರ್ ಕುಮಾರ್

ವರ್ಷದ ವತ್ತಿಪರ ಛಾಯಾಗ್ರಾಹಕ ಪ್ರಶಸ್ತಿ-ಕೆಕೆ ಮುಸ್ತಾಫಾ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಒಪಿ ಸೋನಿ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಜಿ ನಾಗಶ್ರೀನಿವಾಸು

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ದಿಪಾಯನ್ ಬಿಹಾರ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಚ ನಾರಾಯಣ ರಾವ್

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಅತುಲ್ ಚೌಬೆ

ಸನ್ಯಾಸತ್ವ ತೊರೆದ: (ತಾಯೆ ದೋರ್ಜೆ) ಟಿಬೆಟಿಯನ್ನರ ಧರ್ಮ ಗುರು

ಸನ್ಯಾಸತ್ವ ತೊರೆದು ಬಾಲ್ಯ ಗೆಳತಿಯನ್ನು ವಿವಾಹವಾದ ಟಿಬೆಟಿಯನ್ನರ ಧರ್ಮಗುರು ತಾಯೆ ದೊರ್ಜೆ

ನವದೆಹಲಿ: ಟಿಬೆಟಿಯನ್ನರ ಹಿರಿಯ ಬೌದ್ಧಗುರುವೊಬ್ಬರು ಸನ್ಯಾಸತ್ವ ತ್ಯಜಿಸಿ ಭಾರತದಲ್ಲಿ ತಮ್ಮ ಬಾಲ್ಯ ಸ್ನೇಹಿತೆಯನ್ನು ವಿವಾಹವಾಗಿದ್ದಾರೆ.

33 ವರ್ಷದ ಬೌದ್ಧ ಗುರು ತಾಯೆ ದೊರ್ಜೆ ಟಿಬೆಟಿಯನ್ ಧಾರ್ಮಿಕ ಪ್ರಮುಖ ನಾಲ್ಕು ಶಾಲೆಗಳಲ್ಲಿ ಒಂದು ಶಾಲೆಯ ಗುರುಗಳಾಗಿದ್ದು ಕರ್ಮಪಾ ಲಾಮಾ ಅವರ ಪುನರ್ಜನ್ಮ ಎಂದು ಹೇಳಲಾಗುತ್ತಿತ್ತು.

ಆದರೆ ಕರ್ಮ ಕಾಗ್ಯು ಬೌದ್ಧ ಶಾಲೆಯ ಹಲವು ಅನುಯಾಯಿಗಳು ದಲೈಲಾಮಾ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರತಿಸ್ಪರ್ಧಿಯಾದ ಉರ್ಜಿನ್ ಟ್ರಿನ್ಲೆ ಎಂಬ ಶಿರೋನಾಮೆ ಇಟ್ಟುಕೊಂಡಿದ್ದವರೊಂದಿಗೆ ಗುರುತಿಸಿಕೊಂಡಿದ್ದರು.

ಈ ಭಿನ್ನಾಭಿಪ್ರಾಯಗಳುಂಟಾಗಿ ಟಿಬಿಟಿಯನ್ ಬೌದ್ಧಗುರುಗಳು ಇಬ್ಭಾಗವಾಗಿ ಅನೇಕ ವರ್ಷಗಳಾಗಿದ್ದವು. ಇಂದು ತಾಯೆ ದೊರ್ಜೆಯವರ ಕಚೇರಿ ಆಶ್ಚರ್ಯಕರ ಸಂಗತಿಯನ್ನು ಘೋಷಿಸಿದ್ದು, ಮೊನ್ನೆ ಮಾರ್ಚ್ 25ರಂದು ದೆಹಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಗುರು ದೊರ್ಜೆಯವರು ವಿವಾಹವಾಗಿ ಸನ್ಯಾಸತ್ವವನ್ನು ತ್ಯಜಿಸಿರುವುದಾಗಿ ಘೋಷಿಸಿತು.

''ನಾನು ಮದುವೆ ಮಾಡಿಕೊಂಡ ನಿರ್ಧಾರ ನನ್ನಲ್ಲಿ ಮಾತ್ರವಲ್ಲದೆ ನನ್ನ  ಅನುಯಾಯಿಗಳ ಮೇಲೆ ಕೂಡ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ದೃಢ ವಿಶ್ವಾಸ ನನಗಿದೆ. ಕೆಲವು ಸುಂದರವಾದ ಪ್ರಯೋಜನವಾಗುವ ವಿಷಯಗಳು ನಮ್ಮೆಲ್ಲರಲ್ಲಿ ಮೂಡಲಿದೆ'' ಎಂದು ಹೇಳಿದ್ದಾರೆ.

ಸಂಸಾರಿಯಾಗಿದ್ದು ಕರ್ಮಪಾ ಪಾತ್ರವನ್ನು ತಾಯೆ ಮುಂದುವರಿಸಲಿದ್ದು ವಿಶ್ವಾದ್ಯಂತ ಇರುವ ಅವರ ವಿದ್ಯಾರ್ಥಿಗಳಿಗೆ, ಅನುಯಾಯಿಗಳಿಗೆ ತಮ್ಮ ಬೋಧನೆಗಳನ್ನು ಮುಂದುವರಿಸಲಿದ್ದಾರೆ.ಅವರ ಪತ್ನಿ 36 ವರ್ಷದ ರಿಂಚನ್ ಯಂಗ್ ಝೊಮ್ ಭೂತಾನ್ ನಲ್ಲಿ ಜನಿಸಿ ಭಾರತ ಮತ್ತು ಯುರೋಪ್ ನಲ್ಲಿ ಶಿಕ್ಷಣ ಗಳಿಸಿದ್ದಾರೆ.

ಅಮೇಜನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಶ್ರೀಮಂತ!

ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಶ್ರೀಮಂತ!

ಆನ್ ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಸಿರಿವಂತರಾಗಿ ಹೊರಹೊಮ್ಮಿದ್ದಾರೆ.

ಬ್ಲೂಂಬರ್ಗ್ ಮೂಲಗಳ ಪ್ರಕಾರ, ಜೆಫ್ ಬೆಜೋಸ್ ಇಂಡಿಟೆಕ್ಸ್ ಸಂಸ್ಥಾಪಕ ಅಮಾನ್ಸಿಯೋ ಒರ್ಟೆಗಾ ಮತ್ತು ವಾರೆನ್ ಬಫೆಟ್ ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

ಇತ್ತೀಚೆಗಷ್ಟೇ ಬೆಜೋಸ್ 1.5 ಬಿಲಿಯನ್ ಅಮೆರಿಕನ್ ಡಾಲರ್ ಇದ್ದ ಅವರ ಕಂಪನಿ ಶೇರ್ ಅದೃಷ್ಠವಶತ್ ಮಾರ್ಚ್ 29ಕ್ಕೆ 18.35 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ. ಕಾರಣ ಮಧ್ಯಪ್ರಾಚ್ಯ ದೇಶದ ಆನ್ ಲೈನ್ ಸಂಸ್ಥೆ ಸೌಕ್.ಕಾಂ ಅನ್ನು ಖರೀದಿಸುವುದಾಗಿ ಹೇಳಿದ ನಂತರ ಅವರ ಶೇರು ಗಗನಕ್ಕೆ ಏರಿದೆ.

ಇನ್ನು ಎಂದಿನಂತೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗ್ರೇಟ್ಸ್ ಮೊದಲ ಸ್ಥಾನದಲ್ಲಿದ್ದಾರೆ.

ಆಸ್ಕರ್: ಪ್ರಕಟಣೆಯಲ್ಲಿ ಎಡವಟ್ಟು ಮೂನ್ಲೈಟ್ ಶ್ರೇಷ್ಟ ಚಿತ್ರ

ಆಸ್ಕರ್ : ಪ್ರಕಟನೆಯಲ್ಲಿ ಎಡವಟ್ಟು, ಮೂನ್ಲೈಟ್ ಶ್ರೇಷ್ಠ ಚಿತ್ರ

ಹೊಸದಿಲ್ಲಿ : 89ರ ಆಸ್ಕರ್ ಪ್ರಶಸ್ತಿ ಪ್ರಕಟನೆಯಲ್ಲಿ ಎಡವಟ್ಟಾಗಿದೆ. ಹಾಗಾಗಿ ಲಾ ಲಾ ಲ್ಯಾಂಡ್ ಚಿತ್ರಕ್ಕೆ ಈ ಮೊದಲು ಘೋಷಿಸಲಾಗಿದ್ದ ಶ್ರೇಷ್ಠ ಚಿತ್ರ ಪ್ರಶಸ್ತಿಯು ಇದೀಗ ಮೂನ್ಲೈಟ್ ಚಿತ್ರದ ಪಾಲಾಗಿದೆ.

ಈ ಮೊದಲು ಬಹು ನಿರೀಕ್ಷೆಯ ಲಾ ಲಾ ಲ್ಯಾಂಡ್ ಅತ್ಯುತ್ತಮ ಚಿತ್ರವೆಂದು ಪ್ರಕಟಿಸಲಾಗಿತ್ತು. ಅದೀಗ ಬದಲಾಗಿ ಮೂನ್ಲೈಟ್ ಚಿತ್ರಕ್ಕೆ ಶ್ರೇಷ್ಠ ಪ್ರಶಸ್ತಿ ಸಂದಿರುವುದಾಗಿ ತಿಳಿದು ಬಂದಿದೆ.

ಅಮೆರಕದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ಲಾ ಲಾ ಲ್ಯಾಂಡ್ ಚಿತ್ರವನ್ನು ಡೇಮಿಯಲ್ ಚ್ಯಾಝೆಲ್ ನಿರ್ದೇಶಿಸಿದ್ದು ರಾನ್ ಗ್ಲಾಸಿಂಗ್ ಮತ್ತು ಎಮಾ ಸ್ಟೋನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿಶೇಷವೆಂದರೆ ಲಾ ಲಾ ಲ್ಯಾಂಡ್ ಚಿತ್ರ 2017ರ ಸಾಲಿನ ಗೋಲ್ಡನ್ ಗ್ಲೋಬ್ ನಲ್ಲಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
ಮಾತ್ರವಲ್ಲದೆ 14ನೇ ಅಕಾಡೆಮಿ ಅವಾರ್ಡ್ಸ್ಗೆ ನಾಮಾಂಕನ ಪಡೆದಿದ್ದ ಈ ಚಿತ್ರ ಅಪಾರ ಜನಮೆಚ್ಚುಗೆಯನ್ನು ಗಳಿಸಿತ್ತು.

ಇದೇ ಸಂದರ್ಭದಲ್ಲಿ ಮೂನ್ಲೈಟ್ ಚಿತ್ರದ ಅತ್ಯುತ್ತಮ ನಟನೆಗಾಗಿ ನಿರ್ದೇಶಸಿದ ಅಲಿ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ವಿಯೋಲಾ ಡೇವಿಸ್ ಅವರಿಗೆ ಫೆನ್ಸಸ್ ಚಿತ್ರದಲ್ಲಿನ ನಟನೆಗಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅಂದ ಹಾಗೆ ಆಸ್ಕರ್ ಪ್ರಶಸ್ತಿ ಗಳಿಸಿರುವ ಪ್ರಪ್ರಥಮ ಕಪ್ಪುವರ್ಣೀಯ ನಟಿ ಈಕೆ ಎನಿಸಿಕೊಂಡಿದ್ದಾರೆ.

ಮ್ಯಾಂಚೆಸ್ಟರ್ ಬೈ ದಿ ಸೀ ಚಿತ್ರದಲ್ಲಿನ ನಟನೆಗಾಗಿ ಆಯಫ್ಲೆಕ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.

ಜಂಗಲ್ ಬುಕ್ ಆಕರ್ಷಣೆ : ಬೆಸ್ಟ್ ವಿಶುವಲ್ ಅವಾರ್ಡ್ ಪ್ರಶಸ್ತಿಯನ್ನು ಜಂಗಲ್ ಬುಕ್ ಪಡೆಯಿತು.

ದೇವ್ ಪಟೇಲ್ಗೆ ನಿರಾಶೆ : ಆಸ್ಕರ್ ಪ್ರಶಸ್ತಿಯ ರೇಸ್ನಲ್ಲಿದ್ದ ಭಾರತದ ದೇವ್ ಪಟೇಲ್ಗೆ ಸ್ವಲ್ಪದರಲ್ಲೇ ಪ್ರಶಸ್ತಿ ತಪ್ಪಿರುವುದು ನಿರಾಶೆಗೆ ಕಾರಣವಾಗಿದೆ. ಪಟೇಲ್ ಅವರು ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಪ್ರಶಸ್ತಿ ಮೂನ್ ಲೈಟ ಚಿತ್ರಕ್ಕಾಗಿ ಮಹೆರ್ಶಿ ಅಲ್ ಅಲಿ ಅವರ ಪಾಲಿಗೆ ಹೋಯಿತು.

ಆಸ್ಕರ್ ಪ್ರಶಸ್ತಿಯ ಪೂರ್ಣ ಪಟ್ಟಿ ಹೀಗಿದೆ :

ಶ್ರೇಷ್ಠ ಚಿತ್ರ : ಮೂನ್ ಲೈಟ್
ಶ್ರೇಷ್ಠ ನಟಿ : ಎಮಾ ಸ್ಟೋನ್ - ಲಾ ಲಾ ಲ್ಯಾಂಡ್
ಶ್ರೇಷ್ಠ ನಟ : ಕ್ಯಾಸೇ ಆಫ್ ಲೆಕ್ - ಮ್ಯಾಂಚೆಸ್ಟರ್ ಬೈ ದಿ ಸೀ
ಶ್ರೇಷ್ಠ ನಿರ್ದೇಶಕ : ಡೇಮಿಯನ್ ಶಾಝೆಲ್ - ಲಾ ಲಾ ಲ್ಯಾಂಡ್
ಶ್ರೇಷ್ಠ ಪೋಷಕ ನಟಿ : ವಯೋಲಾ ಡೇವಿಸ್ - ಫೆನ್ಸಸ್
ಶ್ರೇಷ್ಠ ಪೋಷಕ ನಟ : ಮಹೆರ್ಶಲಾಅಲಿ - ಮೂನ್ ಲೈಟ್
ಒರಿಜಿನಲ್ ಸ್ಕ್ರೀನ್ ಪ್ಲೇ : ಮ್ಯಾಂಚೆಸ್ಟರ್ ಬೈ ದಿ ಸೀ
ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ : ಮೂನ್ ಲೈಟ್
ಬೆಸ್ಟ್ ಆಯನಿಮೇಟೆಡ್ ಫೀಚರ್ : ಝೂಟೋಪಿಯಾ

ಬೆಸ್ಟ್ ಆಯನಿಮೇಟೆಡ್ ಶಾರ್ಟ್ ಫಿಲಂ : ಪೈಪರ್
ಬೆಸ್ಟ್ ಲೈವ್ ಆಯಕ್ಷನ್ ಶಾರ್ಟ್ ಫಿಲಂ : ಸಿಂಗ್
ಶ್ರೇಷ್ಠ ವಿದೇಶೀ ಭಾಷಾ ಚಿತ್ರ : ದ ಸೇಲ್ಸ್ಮನ್
ಶ್ರೇಷ್ಠ ಸಾಕ್ಷ್ಯ ಚಿತ್ರ : ಎರ್ಜಾ ಎಡಲ್ವುನ್ ಮತ್ತು ಕ್ಯಾರೋಲಿನ್ ವಾಟರ್ಲೋ, ಓ ಜೆ ಮೇಡ್ ಇನ್ ಅಮೆರಿಕ
ಬೆಸ್ಟ್ ಸಿನೆಮಟೋಗ್ರಫಿ : ಲೈನಸ್ ಸ್ಯಾಂಡ್ಗೆÅನ್, ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸಾಂಗ್ : ಸಿಟಿ ಆಫ್ ಸ್ಟಾರ್ - ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸ್ಕೋರ : ಲಾ ಲಾ ಲ್ಯಾಂಡ್
ಬೆಸ್ಟ್ ವಿಶುವಲ್ ಅಫೆಕ್ಟ್ : ದಿ ಜಂಗಲ್ ಬುಕ್
ಬೆಸ್ಟ್ ಪ್ರೊಡಕ್ಷನ್ ಡಿಸೈನ್ : ಲಾ ಲಾ ಲ್ಯಾಂಡ್
ಬೆಸ್ಟ್ ಸೌಂಡ್ ಎಡಿಟಿಂಗ್ : ಅರೈವಲ್
ಬೆಸ್ಟ್ ಸೌಂಡ್ ಮಿಕ್ಸಿಂಗ್ : ಹ್ಯಾಕ್ಸಾ ರಿಜ್
ಬೆಸ್ಟ್ ಮೇಕಪ್ ಆಯಂಡ್ ಹೇರ್ಸ್ಟೈಲಿಂಗ್ : ಸುಯಿಸೈಡ್ ಸ್ಕ್ವಾಡ್
ಬೆಸ್ಟ್ costume ಡಿಸೈನ್ : ಫೆನಾಟಿಕ್ ಬೀಸ್ಟ್ಸ್ ಆಯಂಡ್ ವೇರ್ ಟು ಫೈಂಡ್ ದೆಮ್