ಶನಿವಾರ, ಡಿಸೆಂಬರ್ 8, 2018

ಪ್ರತಿಭೆ (ಭಾರತೀಯ ಕಾವ್ಯಮಿಮಾಂಸೆ)

ಪ್ರತಿಭೆ




ಕೋಲ್‌ರಿಜ್‌ನ ಈ ಪ್ರತಿಭಾ ತತ್ವದೊಂದಿಗೆ, ಅವನ ಸಮಕಾಲೀನನಾದ ಷೆಲ್ಲಿ ತನ್ನ ಕಾವ್ಯ ಸಮರ್ಥನೆ (A Defence of Poetry) ಯಲ್ಲಿ Imagination ಅನ್ನು ಕುರಿತು ಹೇಳಿದ ಒಂದು ಮಾತನ್ನು ಇಲ್ಲಿ ಪರಿಶೀಲಿಸುವುದು ಅಗತ್ಯವೆಂದು ತೋರುತ್ತದೆ. “The great instrument of moral good is Imagination”

[1] ಎಂಬುದು ಅವನ ಮಾತು.  “ನೈತಿಕ ಶ್ರೇಯಸ್ಸಿನ ದೊಡ್ಡ ಉಪಕರಣವೇ ಪ್ರತಿಭೆ.”

ಈ ಹೇಳಿಕೆಯ ಪ್ರಕಾರ ನೈತಿಕ ಒಳ್ಪನ್ನು ಸಾಧಿಸುವ ಹಲವು ವಿಧಾನಗಳಲ್ಲಿ ಪ್ರತಿಭೆ ದೊಡ್ಡದು ಅಥವಾ ಶ್ರೇಷ್ಠವಾದದ್ದು. ಎಂದರೆ ಕಾವ್ಯ ನೀತಿಪ್ರಸಾರದ ಮುಖ್ಯಸಾಧನ ಎಂಬ ನೀತಿವಾದಿಗಳ ಕಾವ್ಯತತ್ವವನ್ನು ಷೆಲ್ಲಿ ಎತ್ತಿ ಹಿಡಿದಿದ್ದಾನೆ ಎಂದು ಮೇಲುನೋಟಕ್ಕೆ ತೋರಬಹುದು. ನೀತಿಯನ್ನು, ತತ್ವವನ್ನು, ಧರ್ಮವನ್ನು ಸಾಧಿಸುವುದರಲ್ಲಿ ಕಾವ್ಯದ ಪಾತ್ರ ಬಹು ದೊಡ್ಡದು ಎಂದು ಜಗತ್ತಿನ ಅನೇಕ ದೊಡ್ಡ ಕವಿಗಳೂ ವಿಮರ್ಶಕರೂ ಸಾರುತ್ತಾ ಬಂದಿದ್ದಾರೆ ಎಂಬುದೂ ನಿಜವೆ. ಆದರೆ ಷೆಲ್ಲಿ ‘moral good’ ಎಂಬ ಪದವನ್ನು ನೀತಿವಾದಿಗಳು ಯಾವ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತಾರೋ ಆ ಅರ್ಥದಲ್ಲಿ ಬಳಸಿಲ್ಲ. ಹಾಗೆಯೇ ‘ನೀತಿ’ ಎಂಬ ಮಾತಿಗೆ ಷೆಲ್ಲಿ ಕೊಡುವ ಅರ್ಥವ್ಯಾಪ್ತಿ ಬೇರೆಯ ರೀತಿಯದು. ಇಲ್ಲಿಯೇ ಷೆಲ್ಲಿಯ ಈ ಸೂತ್ರ ನೀತಿವಾದಿಗಳ ಮತದಿಂದ ತೀರಾ ಬೇರೆಯಾಗಿರುವುದು.

ನೀತಿ ಎಂದರೆ ಸಾಮಾನ್ಯವಾದ ಅರ್ಥದಲ್ಲಿ, ಬದುಕಿನ ನಡೆವಳಿಕೆಯಲ್ಲಿರ ಬಹುದಾದ ಕೆಲವು ವಿಧಿ-ನಿಷೇಧಗಳ ಅರಿವು. ‘ನೈತಿಕ ಒಳ್ಪು’ (moral good) ಎಂದರೆ ನಾವು ದಿನದಿನದ ಬದುಕಿನಲ್ಲಿ ಹೇಗೆ ನಡೆದುಕೊಂಡರೆ, ನಮಗೂ ಇತರರಿಗೂ ಒಳ್ಳೆಯದಾಗುವುದೋ ಅದು. ನೀತಿಯ ದೃಷ್ಟಿಗೆ ಒಳ್ಳೆಯದು-ಕೆಟ್ಟದ್ದು, ಪಾಪ-ಪುಣ್ಯ, ಸ್ವರ್ಗ-ನರಕ, ಧರ್ಮ-ಅಧರ್ಮ-ಇತ್ಯಾದಿ ದ್ವಂದ್ವಗಳ ಅರಿವಿದೆ. ನಾವು ಲೋಕದಲ್ಲಿ ಕಾಣುವ ಜನಗಳ ನಡವಳಿಕೆಯನ್ನು ಕೆಲವು ಸಿದ್ಧ ನೈತಿಕ ಸೂತ್ರಗಳಿಂದ ಅಳೆದು, ಅವರ ನಡವಳಿಕೆ ಒಳ್ಳೆಯದು-ಕೆಟ್ಟದ್ದು ಎಂದು ವಿಂಗಡಿಸಿ ನೋಡಬಲ್ಲೆವೇ ಹೊರತು, ಈ ಎರಡರಾಚೆಗೆ ನಿಂತು ಅಥವಾ ಎರಡರ ಅಂತರಾಳವನ್ನು ಹೊಕ್ಕು ವ್ಯಕ್ತಿಯ ಸ್ವಭಾವವನ್ನು ಸಮಗ್ರವಾಗಿ ನೋಡಲಾರೆವು. ಯಾಕೆಂದರೆ ಒಬ್ಬ ವ್ಯಕ್ತಿಯನ್ನು ನೈತಿಕವಾಗಿ ನಾವು ಅಳೆಯುವಾಗಲೂ ನಮ್ಮ ಇಷ್ಟ-ಅನಿಷ್ಟ ಪ್ರಿಯ-ಅಪ್ರಿಯವಾದ ಎಷ್ಟೋ ವೈಯಕ್ತಿಕ ಪರಿಮಿತಿಗಳೂ ಬೆರೆತುಕೊಂಡಿರುತ್ತವೆ. ಇದರಿಂದಾಗಿ ಸಮಾಜ ಒಪ್ಪಿಕೊಂಡು, ಬಂದ ಕೆಲವು ಕಟ್ಟುಪಾಡುಗಳಿಗೆ ಅನುಸಾರವಾಗಿ ನಡೆಯುವವರನ್ನು ‘ನೀತಿವಂತ’ರೆಂದೂ, ಅದನ್ನು ಮೀರಿ ನಡೆಯುವವರನ್ನು ‘ಅನೀತಿವಂತ’ರೆಂದೂ, ಸುಲಭವಾಗಿ ನಿರ್ಣಯಿಸಿ ಬಿಡುತ್ತೇವೆ. ‘ನೈತಿಕ ಒಳ್ಪು’ ಎಂದರೆ, ಹೇಗೆ ನಡೆದುಕೊಂಡರೆ, ಸಾಮಾಜಿಕವಾದ ಒಳ್ಪು ಅಥವಾ ಶ್ರೇಯಸ್ಸು ಸಾಧಿತವಾಗುವುದೋ ಆ ಬಗೆಯ ನಡವಳಿಕೆ. ಕಾವ್ಯ ಕೂಡ ಇತರ ಮತ ಪ್ರಚಾರಕರ ಹಾಗೆ, ನೀತಿವಾದಿಗಳ ಹಾಗೆ, ಧಾರ್ಮಿಕ ಮುಖಂಡರ ಹಾಗೆ ಈ ಬಗೆಯ ನೀತಿ ಪ್ರಸಾರವನ್ನೂ ಕೈಕೊಳ್ಳುವುದುಂಟು.

ಆದರೆ ಷೆಲ್ಲಿಯ ದೃಷ್ಟಿಗೆ moral good ಎಂದರೆ, ನೀತಿವಾದಿಗಳು ಅಥವಾ ಎಲ್ಲರೂ ತಿಳಿದುಕೊಂಡ ಅರ್ಥದಿಂದ ಭಿನ್ನವಾದದ್ದು ಎಂಬುದೂ ಅವನ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ.

ಮೊದಲನೆಯದಾಗಿ moral ಎಂದರೆ ಷೆಲ್ಲಿಯ, ದೃಷ್ಟಿಗೆ, ಎಲ್ಲರೂ ಯಾವುದನ್ನು ‘ನೀತಿ’ ಎಂದುಕೊಂಡಿದ್ದಾರೋ ಅದಲ್ಲ; ಅವನ ಪ್ರಕಾರ ನೀತಿಯ ಪರಮರಹಸ್ಯ ಪ್ರೀತಿಯೆ. ಪ್ರೀತಿಯಿಲ್ಲದೆ ನಾವು ನಮ್ಮ ಸ್ವಾರ್ಥಮೂಲವಾದ ಅಹಂವ್ಯಕ್ತಿತ್ವದಿಂದ ಆಚೆಗೆ ಹೋಗಿ ಬೇರೊಂದನ್ನು ತಿಳಿಯಲಾರೆವು. ಆದಕಾರಣ ನಿಜವಾದ ಒಳ್ಳೆಯತನ ಅಥವಾ ನೀತಿವಂತಿಕೆ ಎಂದರೆ, ಅನ್ಯಮನೋಧರ್ಮಗಳನ್ನು ಪ್ರವೇಶಿಸಿ, ತಲ್ಲೀನವಾಗಿ ಅನುಕಂಪೆಯಿಂದ ಅನುಭವಿಸುವ ಸಾಮರ್ಥ್ಯ. ಕವಿಯಾದವನು ಮಾಡುವುದು ಇದನ್ನೆ. ಕವಿಯ ವ್ಯಕ್ತಿತ್ವ ಸದಾ ಅನ್ಯಮನೋಧರ್ಮಗಳನ್ನು ಒಳಹೊಕ್ಕು  ಸಹಾನುಭೂತಿಯಿಂದ ಬೆರೆಯುತ್ತದೆ. ಹೀಗೆ ಹೊಕ್ಕು ನೋಡಲು ಕವಿಗಿರುವ ಸಾಧನ ಪ್ರತಿಭೆ. ಪ್ರತಿಭೆಯ ಮೂಲಕ ಕವಿ ಅನ್ಯಮನೋಧರ್ಮಗಳನ್ನು ಒಳಹೊಕ್ಕು ಅದರ ಪದರ ಪದರಗಳನ್ನು ಸಹಾನುಭೂತಿಯಿಂದ ಕಂಡು, ಹಾಗೆ ಸಮಗ್ರವಾಗಿ ತಾನು ಕಂಡದ್ದನ್ನು ಅಭಿವ್ಯಕ್ತಪಡಿಸುತ್ತಾನೆ. ಅನ್ಯಮನೋಧರ್ಮಗಳನ್ನು ಸಹಾನುಭೂತಿಯಿಂದ ಒಳಹೊಕ್ಕು ಅನುಭವಿಸುವ ಸಾಮರ್ಥ್ಯವೇ ನಿಜವಾದ ನೈತಿಕ ದೃಷ್ಟಿ. ಈ ನೈತಿಕ ಶ್ರೇಯಸ್ಸಿನ ಉಪಕರಣವೇ ಪ್ರತಿಭೆ.

ನಾವು ಲೋಕದಲ್ಲಿ ಏನನ್ನೂ ಸಮಗ್ರವಾಗಿ ನೋಡಲಾರೆವು. ಕಾರಣ, ನಮ್ಮ ದೃಷ್ಟಿ ಏಕಮುಖವಾದದ್ದು, ಮತ್ತು ಸ್ವಾರ್ಥಮೂಲವಾದದ್ದು. ಆದರೆ ಕವಿಯಾದರೋ, ಅದು ಎಂತಹ ಪಾತ್ರವೇ ಆಗಿರಲಿ, ಅದರ ಅಂತರಂಗವನ್ನು ‘ಪ್ರೀತಿ’ಯಿಂದ ಒಳಹೊಕ್ಕು ನೋಡಿ ಅದನ್ನು ಸಮಗ್ರವಾಗಿ ಚಿತ್ರಿಸಬಲ್ಲನು. ನಿದರ್ಶನಕ್ಕೆ ದುರ್ಯೋಧನನಂತಹ ದುಷ್ಟ ಪಾತ್ರದ ವಿಷಯವನ್ನೇ ತೆಗೆದುಕೊಳ್ಳೋಣ. ಸಾಮಾನ್ಯ ನೀತಿ, ದುರ್ಯೋಧನ ನಂಥವನು ಮಾಡಿದ ಅಕಾರ್ಯಗಳನ್ನು ಪಟ್ಟಿಹಾಕಿ, ಅವನ ನಡವಳಿಕೆಯನ್ನು ಖಂಡಿಸಿ ಅವನು ‘ದುಷ್ಟ’ ಎಂದು ತೀರ್ಪು ಕೊಡುತ್ತದೆ. ಆದರೆ ಕವಿಯಾದವನು ಇಂಥ ‘ದುಷ್ಟ’ನ ಅಂತರಂಗದಲ್ಲಿರುವ ಸ್ನೇಹ, ಕರುಣೆ, ವಾತ್ಸಲ್ಯ, ಛಲ, ದೊಡ್ಡದನ್ನು ಕಂಡರೆ ಗೌರವಿಸುವ ಉದಾರತೆ, ವೀರತೆ ಇತ್ಯಾದಿಗಳನ್ನೂ ಗಮನಿಸಿ ಚಿತ್ರಿಸುವುದರ ಮೂಲಕ, ದುರ್ಯೋಧನನ ಸಮಗ್ರ ವ್ಯಕ್ತಿತ್ವ ಅಥವಾ ನಿಜವಾದ ವ್ಯಕ್ತಿತ್ವ, ನಾವು ಸುಮ್ಮನೆ ತಿಳಿದುಕೊಂಡದ್ದಕ್ಕಿಂತ ಬೇರೆ ಎಂಬಂತೆ, ಆ ಪಾತ್ರದ ಬಗ್ಗೆ ಓದುಗರ ಸಹಾನುಭೂತಿ ಗೌರವಗಳುಕ್ಕುವಂತೆ ಮಾಡುತ್ತಾನೆ. ಹೀಗೆ ಮಾಡುವುದರಿಂದ ಕವಿ ದುರ್ಯೋಧನನ ದೌಷ್ಟ್ಯವನ್ನು ಸಮರ್ಥಿಸುತ್ತಾನೆಂದು ಅರ್ಥವಲ್ಲ; ಅದರ ಬದಲು ಆ ಪಾತ್ರದ ಅಂತರಂಗದ ಇತರ ಒಳ್ಳೆಯ ಗುಣಗಳನ್ನೂ, ಒಳಗಿನ ಸಂಘರ್ಷಗಳನ್ನೂ ಚಿತ್ರಿಸಿ ನಾವು ದ್ವೇಷಿಸುವುದಕ್ಕಿಂತ ಮಿಗಿಲಾಗಿ ಮೆಚ್ಚುವಂಥ ಅಂಶಗಳೂ ಆ ವ್ಯಕ್ತಿಯಲ್ಲಿವೆ ಎನ್ನುವುದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾನೆ. ಹೀಗೆ ಕವಿ ಪಾತ್ರದ ಒಳಗನ್ನು ಕಾಣಬೇಕಾದರೆ ಅವನಿಗೆ ಪ್ರತಿಭೆ ಬೇಕು. ಈ ಪ್ರತಿಭೆಗೆ ಮೂಲವಾದ ಪ್ರೀತಿ ಬೇಕು. ಪ್ರೀತಿ ಅಥವಾ ಪ್ರತಿಭೆಯಿಂದ ಕವಿ ಅನ್ಯ ಮನೋಧರ್ಮಗಳನ್ನು ಅತ್ಯಂತ ಸಹಾನುಭೂತಿಯಿಂದ ಒಳಹೊಕ್ಕು ನೋಡಲು ಸಾಧ್ಯವಾಗುತ್ತದೆ. ಹೀಗೆ ನೋಡುವುದೇ ನಿಜವಾದ ನೀತಿ; ಈ ದೃಷ್ಟಿಯಿಂದ ಪ್ರತಿಭೆ ಎನ್ನುವುದು ನೈತಿಕ ಶ್ರೇಯಸ್ಸಿನ ಬಹು ದೊಡ್ಡ ಉಪಕರಣ.[2]

ಷೆಲ್ಲಿಯ ಅಭಿಪ್ರಾಯದಲ್ಲಿ ಪ್ರತಿಭೆಗೆ ಹೆಸರು ಪ್ರೀತಿ. ಯಾರಿಗೆ ಪ್ರೀತಿ ಇಲ್ಲವೋ ಅವನು ಕವಿಯಾಗಲಾರ. ಬದುಕಿನ ಬಗೆಗೆ ತೀವ್ರವಾದ ಪ್ರೀತಿಯಿಲ್ಲದವನು ಕವಿಯೇ ಆಗಲಾರ ಎಂದು ವಿಮರ್ಶಕರೊಬ್ಬರ ಮತ.[3] ಒಳಿತು-ಕೆಟ್ಟದೆಂಬ ಪಕ್ಷಪಾತವಿಲ್ಲದೆ, ಎಲ್ಲದರ ಅಂತರಂಗವನ್ನೂ ಅನುಕಂಪೆಯಿಂದ ಒಳಹೊಕ್ಕು ಬೆರೆಯಬಲ್ಲ, ಅರಿಯಬಲ್ಲ ಮನೋಧರ್ಮವೇ ನಿಜವಾದ ನೈತಿಕ ದೃಷ್ಟಿ. ಹೀಗಾಗಿ ಇಲ್ಲಿ ಪ್ರೀತಿಯೇ ನೀತಿ; ಈ ನೀತಿಯ ಬಹು ದೊಡ್ಡ ಉಪಕರಣವೇ ಪ್ರತಿಭೆ.

ಕವಿಯ ಸಮಸ್ತ ವ್ಯಕ್ತಿತ್ವವು ತನಗೆ ದತ್ತವಾದ ಭಾವಾನುಭವಗಳನ್ನು ಕಾವ್ಯವನ್ನಾಗಿ ಪರಿವರ್ತಿಸುವ ಸೃಜನ ಕ್ರಿಯೆಲ್ಲಿ ತೊಡಗಿದಾಗ, ಕವಿ ಪ್ರತಿಭೆ ಅಭಿವ್ಯಕ್ತಿಯಲ್ಲಿ ಮೈದೋರುವ ರೀತಿಯ ಮೇಲಿನಿಂದ, ಪ್ರತಿಭೆಯ ಹಲವು ಬಗೆಗಳನ್ನು ಹೆಸರಿಸುವ ಸಂಗತಿ ಗಮನಾರ್ಹವಾದುದಾಗಿದೆ. ಎಲ್ಲಿ ಕವಿ ಪ್ರತಿಭೆ ಬದುಕಿನ ಬಹಿರಂಗ ಮುಖಗಳನ್ನು ರೂಪಿಸಿ ತೋರುತ್ತವೆಯೋ ಅದನ್ನು ವಸ್ತುನಿಷ್ಠ ಪ್ರತಿಭೆ (Objective Imagination) ಎಂದೂ, ಎಲ್ಲಿ ಕವಿ ಪ್ರತಿಭೆ ಮಾನಸಿಕ ಹಾಗೂ ಭಾವುಕ ಮೂಡಿಕೆ (Impressions) ಗಳನ್ನು ರೂಪಿಸಿ ತೋರುತ್ತದೆಯೋ ಅದನ್ನು ವ್ಯಕ್ತಿನಿಷ್ಠ ಪ್ರತಿಭೆ (Subjective Imagination) ಎಂದೂ, ಶ್ರೀ ಅರವಿಂದರು ಕರೆಯುತ್ತಾರೆ.[4] ವಾಸ್ತವವಾಗಿ ಈ ವಿಭಜನೆ ಔಪಚಾರಿಕವಾದದ್ದು. ಯಾಕೆಂದರೆ ಕವಿ ಪ್ರತಿಭೆಗೆ ವಸ್ತುವಾಗತಕ್ಕದ್ದು ಒಳಗಿನದೂ ಆಗಬಹುದು, ಹೊರಗಿನದೂ ಆಗಬಹುದು. ತನಗೆ ಎಟುಕಿದಷ್ಟು ಅನುಭವಕ್ಕೆ ಉಚಿತವಾದ ರೂಪನಿರ್ಮಾಣ ಮಾಡುವುದೇ ಪ್ರತಿಭೆಯ ಕಾರ್ಯಗಳಲ್ಲಿ ಮುಖ್ಯವಾದದ್ದು. ಪ್ರತಿಭೆಗೆ ಇರುವ ಈ ರೂಪ ನಿರ್ಮಾಣ ಕ್ರಿಯೆನ್ನು ಕೋಲ್‌ರಿಜ್ ‘ಎಸೆಂಪ್ಲಾಸ್ಟಿಕ್’ ಎಂದು ಕರೆದಿದ್ದಾನೆ. ಕವಿ ಪ್ರತಿಭೆಯ ಈ ರೂಪ ನಿರ್ಮಾಣ ಕ್ರಿಯೆ, ಕೆಲವು ಸಲ ಹೇಳಬೇಕಾದ್ದನ್ನು ಅತ್ಯಂತ ಸ್ಪಷ್ಟವೂ, ಖಚಿತವೂ ಆದ ರೀತಿಯಲ್ಲಿ ಅಭಿವ್ಯಕ್ತಿ ಪಡಿಸುವಂತೆ, ಮತ್ತೆ ಕೆಲವು ಸಲ ಅತ್ಯಂತ ಅಸ್ಪಷ್ಟವೂ, ಅಖಚಿತವೂ, ಆದ ರೀತಿಯಲ್ಲಿಯೂ ಅಭಿವ್ಯಕ್ತಪಡಿಸುತ್ತದೆ. ಈ ವ್ಯತ್ಯಾಸದ ಮೇಲಿನಿಂದ Imagination ಅನ್ನು Plastic Imagination ಮತ್ತು Diffluent Imagination ಎಂಬ ಮಾತನ್ನು ಮೊದಲು ಬಳಸಿದವನು ಫ್ರೆಂಚ್ ಲೇಖಕ ‘ರಿಂಬೊ’ (Rimbaud). ಕವಿ ಪ್ರತಿಭೆಯಲ್ಲಿನ ಗ್ರಹಿಕೆಯ ಸ್ಪಷ್ಟತೆ, ಅಭಿವ್ಯಕ್ತಿಯಲ್ಲಿ ಕಂಡುಬರುವ ವ್ಯವಸ್ಥಿತ ಸೊಗಸು, ‘ಪ್ಲಾಸ್ಟಿಕ್ ಇಮ್ಯಾಜಿನೇಷನ್’ನ ಮುಖ್ಯ ಲಕ್ಷಣ. ಪ್ಲಾಸ್ಟಿಕ್ ಇಮ್ಯಾಜಿನೇಷನ್‌ಗೆ, ಕಾಮನ ಬಿಲ್ಲು ತನ್ನ ಸಪ್ತವರ್ಣಸಮನ್ವಿತವಾದ ಕಾಮನಬಿಲ್ಲಿನಂತೆಯೇ ಕಾಣುತ್ತದೆ. ಮತ್ತು ಕವಿ ಈ ವಸ್ತು ಸೌಂದರ್ಯವನ್ನು ತನ್ನ ಅಭಿವ್ಯಕ್ತಿಯಲ್ಲಿ ನಮ್ಮ ಮನಸ್ಸಿಗೆ ಮುಟ್ಟಿಸುತ್ತಾನೆ. ಆದರೆ, Diffluent Imaginationಗೆ ಕಾಮಬಿಲ್ಲು ಒಂದು ರಹಸ್ಯದಂತೆ, ವ್ಯಕ್ತದಿಂದ ಅವ್ಯಕ್ತದೆಡೆಗೆ ಬೀಸಿದ ಸೇತುವೆಯಂತೆ ತೋರುತ್ತದೆ. ಶಿಲ್ಪಿ, ಚಿತ್ರಕಾರ ಇವರು ಸಾಮಾನ್ಯವಾಗಿ ಖಚಿತಾಕಾರ ನಿರ್ಮಾಣ ಪ್ರತಿಭೆಯ (Plastic Imagination) ಪ್ರಮಾಣವನ್ನು ಹೆಚ್ಚಾಗಿ ಉಳ್ಳವರು ಎಂದೂ, ಅನುಭಾವಿ, ಸಂಗೀತಗಾರ ಇಂಥವರು ಅಸ್ಪಷ್ಟತಾಕಾರ ನಿರ್ಮಾಣ ಪ್ರತಿಭೆಯ (Diffluent Imagination) ಪ್ರಮಾಣವನ್ನು ಹೆಚ್ಚಾಗಿ ಉಳ್ಳವರು ಎಂದೂ ಹೇಳಬಹುದು. ಸಾಹಿತ್ಯಾಭಿವ್ಯಕ್ತಿಯಲ್ಲಿ ಈ ಎರಡನ್ನೂ ಗುರುತಿಸಬಹುದು.[5] ನಿದರ್ಶನಕ್ಕೆ ಕುವೆಂಪು ಮತ್ತು ಬೇಂದ್ರೆ ಅವರ ಕವಿತೆಯಿಂದ  ಆಯ್ದ ಎರಡು ತುಣುಕುಗಳನ್ನು ಗಮನಿಸಬಹುದು. ಶರತ್ಕಾಲದ ಸೂರ್ಯೋದಯದಲ್ಲಿ ಕುವೆಂಪು ತಾವು ಕಂಡ ಇಬ್ಬನಿಗಳನ್ನು ವರ್ಣಿಸುವ ರೀತಿ ಹೀಗಿದೆ:-

ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರ ಗಟ್ಟಲೆ ಮುತ್ತನು ಚೆಲ್ಲಿ
ರನ್ನದ ಕಿರು ಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ
ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ.

ಎಂಬ ಈ ವರ್ಣನೆಯಲ್ಲಿ ‘ಖಚಿತಾಕಾರ ಪ್ರತಿಭೆ’ಯನ್ನು ಗುರುತಿಸಬಹುದು. ಇಲ್ಲಿ ಕವಿ ಪ್ರತಿಭೆ ವರ್ಣಶಿಲ್ಪಿಯಂತೆ ತಾನು ಕಂಡದ್ದನ್ನು ತಕ್ಕ ಶಬ್ದ ಚಿತ್ರಗಳಲ್ಲಿ ಯಾವ ಅಸ್ಪಷ್ಟತೆಗೂ ಅಸ್ಪದವಿಲ್ಲದಂತೆ ಸ್ಪಷ್ಟ ರಮ್ಯವಾಗಿ ಹಿಡಿದಿರಿಸಿದೆ. ಆದರೆ ಬೇಂದ್ರೆಯವರ ಗಂಗಾವತರಣದ ಒಂದು ಭಾಗದಲ್ಲಿ,

ಸುರಸ್ವಪ್ನವಿದ್ದ
ಪ್ರತಿಬಿಂದ ಬಿದ್ದ
ಉದ್ಬುದ್ಧ ಶುದ್ಧ ನೀರೇ

ಎಂದು ಗಂಗೆಯನ್ನು ವರ್ಣಿಸಲಾಗಿದೆ. ಇಲ್ಲಿ ಮಾತಿನ ಮೂಲಕ ಅಭಿವ್ಯಕ್ತವಾಗುವ ಚಿತ್ರ ಅಸ್ಪಷ್ಟವಾಗಿ, ಅಖಚಿತವಾಗಿ, ‘ಅಸ್ಪಷ್ಟತಾಕಾರ ನಿರ್ಮಾಣ ಪ್ರತಿಭೆ’ಗೆ ನಿದರ್ಶನವಾಗಿದೆ. ಇದೊಂದು ರೀತಿಯಲ್ಲಿ ಮಂಜಿನೊಳಗಣ ಚಿತ್ರದಂತೆ. ಯಾವ ಪ್ರತಿಭೆ ಜಗತ್ತನ್ನು ಸಚಿತ್ರವಾಗಿ, ಸವರ್ಣವಾಗಿ ಗ್ರಹಿಸಿ, ತಕ್ಕ ಶಬ್ದಚಿತ್ರಗಳ ಮೂಲಕ, ವಸ್ತುಗಳನ್ನು ಅವುಗಳ ಕಾಲ-ದೇಶ ಸಂಬಂಧಗಳ ಸಹಿತ ರೂಪಿಸುತ್ತದೆಯೋ, ವಾಸ್ತವವನ್ನು ಅಥವಾ ಅನುಭವಗಳನ್ನು ಒಂದು ರಹಸ್ಯವೆಂಬಂತೆ ರೂಪಿಸುತ್ತದೋ ಅದು Diffluent Imagination.[6] ಸಮರ್ಥನಾದ ಕವಿಯ ಪ್ರತಿಭೆ ಈ ಎರಡೂ ರೀತಿಗಳಲ್ಲಿ ಕೆಲಸ ಮಾಡುತ್ತದೆ.

ಈಗ ಪ್ರಸ್ತಾಪಿಸಿದ Diffluent Imagination, ಮುಖ್ಯವಾಗಿ, ವಸ್ತುಸತ್ಯವನ್ನು ಯಥಾರ್ಥವಾಗಿ ಚಿತ್ರಿಸುವುದಕ್ಕಿಂತ, ಅದರೊಳಗಿನ ರಹಸ್ಯವನ್ನು ಪ್ರತಿಮಿಸುತ್ತದೆ ಎಂದು ವರ್ಣಿತವಾಗಿದೆ. ಇದೇ ರೀತಿಯಲ್ಲಿ ಅನುಭಾವದ ವಿಸ್ತಾರಗಳನ್ನು, ಅನುಭಾವಿಕ ಸತ್ಯಗಳನ್ನು ಪ್ರತೀಕಗಳ ಮೂಲಕ ಅಭಿವ್ಯಕ್ತಪಡಿಸುವ ಕ್ರಿಯೆಯನ್ನು Symbolic Imagination ಎಂದು ಗುರುತಿಸಲಾಗಿದೆ. ‘ಪ್ರತೀಕಾತ್ಮಕ ಪ್ರತಿಭೆ’ ಮುಖ್ಯವಾಗಿ ಕೆಲಸ ಮಾಡುವುದು ದೃಷ್ಟಾಂತ (Analogy)ಗಳ ಮೂಲಕ. ಅಜ್ಞಾತವಾದದ್ದನ್ನು ಜ್ಞಾತವನ್ನಾಗಿಸುವ, ಅನುಭಾವಿಕ ಸತ್ಯಗಳನ್ನು ಮೂರ್ತೀಕರಿಸುವ ಪ್ರಯತ್ನ ಇಲ್ಲಿ ಪ್ರಧಾನವಾದದ್ದು. ವೇದಗಳಲ್ಲಿ ಈ ವಿಶ್ವವನ್ನು ‘ಬ್ರಹ್ಮಾಂಡ’ ಎಂಬ ಪ್ರತೀಕದಲ್ಲಿ ಹೇಳಲಾಗಿದೆ. ಇಲ್ಲಿ ‘ಬ್ರಹ್ಮಾಂಡ ಎನ್ನುವುದು ಜಗತ್ತಿನ ಕಲ್ಪನೆಗೆ ಒಂದು ವಸ್ತು ಪ್ರತಿರೂಪ, (Objective Correlative).[7] ಹಾಗೆ ನೋಡಿದರೆ ಪ್ರತಿಭೆಯ ಕಾರ್ಯವೇ ಮೂಲತಃ ಪ್ರತೀಕಗಳನ್ನು ನಿರ್ಮಾಣ ಮಾಡುವುದು. ಅದು ವರ್ಣನೆ, ನಿರೂಪಣೆ, ಸಂಕೇತ-ಪ್ರತೀಕ-ಪ್ರತಿಮೆ ಇತ್ಯಾದಿಗಳ ಮೂಲಕ ಅನುಭವವನ್ನು ಕಟ್ಟಿ ತೋರಿಸುತ್ತದೆ. ‘ಮುಖ ಕಮಲ’ ಎಂಬಂಥ ಸವಕಲು ಅಲಂಕಾರ ಕೂಡಾ, ಕವಿ ಕಂಡ ಮುಖದ ಸೌಂದರ್ಯಾನುಭವದ ಅಭಿವ್ಯಕ್ತಿಗೆ ನಿರ್ಮಿತವಾದ ಒಂದು ಪ್ರತೀಕವೇ. ಈ ಬಗೆಯ ಪ್ರತೀಕಗಳಿಂದ ಹಿಡಿದು; ಧ್ವನಿಪೂರ್ಣವಾದ ಪ್ರತಿಮಾ ನಿರ್ಮಿತಿಯವರೆಗೂ ಕ್ರಿಯಾಭಿಮುಖವಾಗಿರುವುದು ಕವಿ ಪ್ರತಿಭೆಯೇ. ‘ಅಭಿವ್ಯಕ್ತಿಯಲ್ಲಿ ಕಂಡುಬರುವ ವೈಚಿತ್ರ್ಯಗಳೇನಿವೆಯೋ, ಅವೆಲ್ಲವೂ ಕವಿ ಪ್ರತಿಭೆಯಿಂದ ಉದ್ಭವವಾದವುಗಳೇ’ (ಯತ್ಕಿಂಚನಾಪಿ ವೈಚಿತ್ರ ಂ ತತ್ ಸರ್ವಂ ಪ್ರತಿಭೋದ್ಭವಂ) ಎಂಬ ಕುಂತಕನ ಮಾತು ಪ್ರತಿಭೆಯ ಪಾರಮ್ಯವನ್ನು ಸೊಗಸಾಗಿ ವರ್ಣಿಸುತ್ತದೆ.

ಕವಿ ಪ್ರತಿಭೆ, ಅನುಭವಗಳನ್ನು ಮೂರ್ತಗೊಳಿಸುವುದು ಭಾಷೆಯ ಮೂಲಕವೆ. ಹೀಗೆ ಭಾಷೆಯೊಂದನ್ನು ಕವಿ ತನ್ನ ಅಭಿವ್ಯಕ್ತಿಗೆ ಬಳಸುವಾಗ, ಕವಿ ಆ ಭಾಷೆಯಲ್ಲಿನ ಪದಗಳಿಗೆ ಹಾಗೂ ಅವು ಹೊರಡಿಸುವ ಅರ್ಥಗಳಿಗೆ ಹೊಸತೊಂದು ಜೀವಂತಿಕೆ ತುಂಬಿಕೊಳ್ಳುವ ಹಾಗೆ, ಭಾಷೆಯನ್ನೂ ಒಂದು ಅರ್ಥದಲ್ಲಿ ಪುನಃ ಸೃಷ್ಟಿಸುತ್ತಾನೆ. ಹೀಗೆ ಭಾಷೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಟಿ.ಎಸ್. ಇಲಿಯಟ್ Auditory Imagination (ಶ್ರಾವಣಪ್ರತಿಭೆ) ಎಂದು ಕರೆದಿದ್ದಾನೆ. ಒಂದು ಭಾಷೆಯ ಸಂದರ್ಭದಲ್ಲಿ ಕೆಲಸ ಮಾಡುವ ಕವಿಗೆ ಆ ಭಾಷೆಯ ಪರಂಪರೆ ಅಥವಾ ಚರಿತ್ರೆ ಚೆನ್ನಾಗಿ ಗೊತ್ತಿರಬೇಕು. ಕೇವಲ ಅಲೋಚನೆ ಅಥವಾ ಭಾವನೆಗಳ ಸ್ತರದಿಂದ, ಪ್ರಜ್ಞೆಯ ತಲಾತಲಕ್ಕೆ ಇಳಿದು ತಾನು ಬಳಸುವ ಒಂದೊಂದು ಮಾತಿಗೂ ಇರುವ ಅರ್ಥ-ನಾದ-ಲಯಗಳನ್ನು ಗ್ರಹಿಸಿ, ತನ್ನ ವರ್ತಮಾನದ ಭಾಷೆಗೆ ಹೊಸ ನುಡಿಗಟ್ಟನ್ನೂ ಜೀವಂತಿಕೆಯನ್ನೂ ತಂದು ಕೊಡಬೇಕು. ಹೀಗೆ ಭಾಷೆಯ ಪಾರಂಪರಿಕ ಸ್ತರಗಳಿಗೆ ಇಳಿದು, ಅದರ ಬೇರುಗಳ ತನಕವೂ ಹೋಗಿ, ಅತ್ಯಂತ ಪ್ರಾಚೀನವೂ ಹಾಗೂ ವಿಸ್ಕೃತಿಯ ತಲಾತಲದಲ್ಲಿರುವಂಥದೂ ಆದ ಅರ್ಥವನ್ನು, ತನ್ನ ವರ್ತಮಾನದ ಭಾಷೆಗೆ ತುಂಬಿ, ಅದನ್ನು ಸಚೇತನವನ್ನಾಗಿಸುವ ಕವಿಪ್ರತಿಭೆಯೇ ‘ಆಡಿಟರಿ ಇಮ್ಯಾಜಿನೇಷನ್.’[8]

ಭಾರತೀಯ ಕಾವ್ಯಮೀಮಾಂಸೆಯ ಸಂದರ್ಭದಲ್ಲಿ ರಾಜಶೇಖರನೆಂಬ ಆಲಂಕಾರಿಕನು, ಪ್ರತಿಭೆಯನ್ನು ಕುರಿತು ಹೇಳುವ ವಿಶಿಷ್ಟವಾದ ಮಾತೆಂದರೆ, ಪ್ರತಿಭೆ ಕವಿಯ ಕಾವ್ಯನಿರ್ಮಾಣಕ್ಕೆ ಹೇಗೆ ಅಗತ್ಯವೋ, ಹಾಗೆಯೇ, ಕವಿ ಕೃತಿಯನ್ನು ಆಸ್ವಾದಿಸುವ ಸಹೃದಯನಿಗೂ ಅಗತ್ಯ ಎನ್ನುವುದು. ಅವನ ಪ್ರಕಾರ ಪ್ರತಿಭೆ ಎರಡು ರೀತಿಯದು. ಒಂದು ಕಾರಯಿತ್ರೀ ಪ್ರತಿಭೆ, ಮತ್ತೊಂದು ಭಾವಯಿತ್ರೀ ಪ್ರತಿಭೆ. ಕಾರಯಿತ್ರೀ ಪ್ರತಿಭೆ ಕಾವ್ಯನಿರ್ಮಾಣ ಸಮರ್ಥವಾದ ಕವಿ ಪ್ರತಿಭೆ; ಭಾವಯಿತ್ರೀ ಪ್ರತಿಭೆ ಕವಿಕೃತಿಯನ್ನು ತನ್ನಲ್ಲಿ ಪುನಃ ಸೃಷ್ಟಿಸಿಕೊಳ್ಳುವ ಸಹೃದಯನ ಪ್ರತಿಭೆ. ಕಾವ್ಯನಿರ್ಮಿತಿ ಮಾತ್ರವಲ್ಲ; ಕಾವ್ಯಾಸ್ವಾದವೂ ಕೂಡ ಒಂದು ಸೃಜನ ಪ್ರಕ್ರಿಯೆ ಎಂಬ ಸಂಗತಿಯನ್ನು ಹತ್ತನೆಯ ಶತಮಾನದಷ್ಟು ಹಿಂದೆಯೇ ರಾಜಶೇಖರನು ಹೇಳಿದ್ದು ವಿಶೇಷದ ಸಂಗತಿಯಾಗಿದೆ.

೧೦

ಪೂರ್ವ ಹಾಗೂ ಪಶ್ಚಿಮದ ಅಭಿಪ್ರಾಯಗಳ ಪ್ರಕಾರ ಪ್ರತಿಭೆ ಎನ್ನುವುದು, ಕವಿಯಾದವನು ತನ್ನ ಅಂತರಂಗದ ತೀವ್ರಾನುಭವಗಳಿಗೆ ಭಾಷೆಯ ಮಾಧ್ಯಮದಲ್ಲಿ ರೂಪನೀಡುವ ಸಮಗ್ರ ಕ್ರಿಯೆಯನ್ನು ಸೂಚಿಸುತ್ತದೆ. ಪ್ರತಿಭಾಕ್ರಿಯೆ ಒಂದು ವಿಶೇಷವಾದ ಮಾನಸಿಕ ಸ್ಥಿತಿ. “ಕವಿಯ ವ್ಯಕ್ತಿತ್ವ ಸಮಸ್ತವೂ, ತನ್ನೆಲ್ಲ ಶಕ್ತಿ ಸಾಮರ್ಥ್ಯಗಳೊಂದಿಗೆ ಕೇಂದ್ರ ಬಿಂದುವೊಂದಕ್ಕೆ ಬಂದು ಕ್ರಿಯಾಶೀಲವಾಗುವ ವಿಧಾನ ಅದು.”[9] ಅಲ್ಲಿ ಕಾವ್ಯಾನುಭವಗಳನ್ನು ಹೊಸಹೊಸದಾಗಿ ಕಾಣುವ (ನವ ನವ ಉನ್ಮೇಷ ಶಾಲಿನಿ) ಮತ್ತು ಕಂಡದ್ದನ್ನು ಹೊಸ ಹೊಸದಾಗಿ ಕಟ್ಟುವ (ನವ ನವ ಉಲ್ಲೇಖ ಶಾಲಿನಿ) ಕ್ರಿಯೆ ಸುಗಮವಾಗಿ ನಡೆಯುತ್ತದೆ. ಆದರೆ ಹೀಗೆ ಭಾವ ಭಾವನೆಗಳಿಗೆ ರೂಪನಿರ್ಮಾಣ ಕ್ರಿಯೆ ನಡೆಯುವಾಗ ಕೇವಲ ಪ್ರತಿಭೆಯೊಂದೇ ಸಾಲದು. ಜತೆಗೆ ಶಾಸ್ತ್ರ ಸಂಸ್ಕಾರ ಹಾಗೂ ವಿಮರ್ಶನ ಪ್ರಜ್ಞೆಯ ನೆರವೂ ಬೇಕು ಎನ್ನುವ ಅಂಶವನ್ನು ನಮ್ಮ ಆಲಂಕಾರಿಕರು ಒತ್ತಿಹೇಳಿದ್ದಾರೆ. ಕೇವಲ ಶಾಸ್ತ್ರಬುದ್ಧಿಯಿಂದ ಕಲಾತ್ಮಕ ಸೃಜನೆ ಸಾಧ್ಯವಿಲ್ಲ; ಅಥವಾ ಶಾಸ್ತ್ರಬಲವಿಲ್ಲದ ಕೇವಲ ಪ್ರತಿಭೆಯೊಂದೇ ಕಾವ್ಯನಿರ್ಮಿತಿಗೆ ಸಾಕಾಗುವುದಿಲ್ಲ. ಮತ್ತು ಈ ಪ್ರತಿಭೆ ಎನ್ನುವುದು ಶಾಸ್ತ್ರಗಳಂತೆ ಪ್ರಯತ್ನಪೂರ್ವಕವಾಗಿ ಸಂಪಾದಿಸಿಕೊಳ್ಳತಕ್ಕದ್ದಲ್ಲ. ಭಾಮಹನು ಹೇಳುವಂತೆ “ಮಂದಬುದ್ಧಿಗಳು ಬೇಕಾದರೂ ಗುರುಗಳ ಉಪದೇಶದಿಂದ ಶಾಸ್ತ್ರವನ್ನು ಅಭ್ಯಾಸ ಮಾಡಬಹುದು. ಆದರೆ ಕಾವ್ಯ ಹುಟ್ಟುವುದು ಎಲ್ಲೋ ಲಕ್ಷಕ್ಕೊಬ್ಬ ಪ್ರತಿಭಾಶಾಲಿಯಿಂದ ಮಾತ್ರ.”[10] ಪ್ರತಿಭೆ ಎನ್ನುವುದು ಹೇಗೋ ಕೆಲವರಿಗೆ ಸಹಜವಾಗಿ ಬಂದಿರುತ್ತದೆ. ಎಲ್ಲರಲ್ಲಿಯೂ ಈ ಪ್ರಮಾಣದಲ್ಲಿ ಕಾಣದ, ಎಲ್ಲೋ ಕೆಲವರಲ್ಲಿ ಮಾತ್ರ ವಿಶೇಷ ರೀತಿಯಲ್ಲಿ ಕಾಣಿಸಿಕೊಳ್ಳುವ ಈ ಕಾವ್ಯಕಲಾ ನಿರ್ಮಾಣ ಸಾಮರ್ಥ್ಯ ರೂಪವಾದ ಪ್ರತಿಭೆಯನ್ನು ಕುರಿತು, ಅದರ ಬಗ್ಗೆ ವಿಶೇಷವಾದ ಪೂಜ್ಯತೆಯನ್ನೂ, ಅಲೌಕಿಕ ಕಾರಣಗಳನ್ನೂ ಕಲ್ಪಿಸುವ ಪ್ರವೃತ್ತಿಗಳು ಕಾವ್ಯಮೀಮಾಂಸೆಯ ಹೆಸರಿನಲ್ಲಿ ರೂಢಿಯಾಗಿವೆ. ಅದೊಂದು ದೈವೀಕೃಪೆ ಎಂದೋ, ಜನ್ಮಾಂತರ ಸಂಸ್ಕಾರ ವಿಶೇಷವೆಂದೋ, ಅದರಲ್ಲಿ ಏನೋ ಒಂದು ರಹಸ್ಯಮಯತೆ ಇದೆ ಎಂದೋ ಬಹುಮಂದಿ ಪ್ರತಿಭೆಯನ್ನು ಕುರಿತು ಮಾತನಾಡಿದ್ದಾರೆ. ಈ ಪ್ರವೃತ್ತಿಯನ್ನು ಖಂಡಿಸಲೆಂದೋ ಏನೋ, ಪಾಶ್ಚಾತ್ಯ ವಿಮರ್ಶಕನಾದ ಐ.ಎ. ರಿಚರ್ಡ್ಸ್ “ಪ್ರತಿಭೆಯಲ್ಲಿ ಅಂತಹ ವಿಲಕ್ಷಣ ರಹಸ್ಯತಮವಾದದ್ದೇನೂ ಇಲ್ಲ; ಮಾನವಮತಿಯ ಇತರ ವ್ಯಾಪಾರಗಳಿಗೆ ಇಲ್ಲದ ಅದ್ಭುತವೇನೂ ಅದಕ್ಕಿಲ್ಲ. ಆದರೂ ಅನೇಕ ವೇಳೆ ನಾವು ಬಹು ಎಚ್ಚರಿಕೆಯಿಂದ ಕಾಣಬೇಕಾದ ರಹಸ್ಯವೆಂಬಂತೆ ಅದು ಪರಿಗಣಿತವಾಗಿದೆ.”[11] -ಎನ್ನುತ್ತಾನೆ. ಈ ಅಭಿಪ್ರಾಯವನ್ನು ನಾವು ಪ್ರತಿಭೆಗೆ ಅಥವಾ ಕಾವ್ಯಕ್ಕೆ ವಿರೋಧಿಯಾದದ್ದೆಂದು ಗ್ರಹಿಸುವ ಕಾರಣವಿಲ್ಲ; ಪ್ರತಿಭೆಯ ವಿಚಾರದಲ್ಲಿ ಅನವಶ್ಯಕ ಸಂಭ್ರಾಂತಿಯಿಂದ ಉಜ್ವಲವಾಗಿ ಮಾತನಾಡುವ ಪ್ರವೃತ್ತಿಗೆ ಮಾತ್ರ ವಿರೋಧವಾಗಿದೆ, ಅಷ್ಟೆ. ಆದರೂ ರಿಚರ್ಡ್ಸ್‌ನ ಹೇಳಿಕೆ ನಾವು ಊಹಿಸಿದಷ್ಟನ್ನು ಸಾಧಿಸುವುದರ ಜೊತೆಗೆ, ವಿಮರ್ಶೆಯ ವೈಜ್ಞಾನಿಕ ಚಿಕಿತ್ಸಕ ಬುದ್ಧಿಯ ನೆಪದಲ್ಲಿ, ಮತ್ತೊಂದು ಅತಿರೇಕಕ್ಕೆ ಹೋಗುವ ಅಪಾಯದ ಹಾದಿಯಲ್ಲಿದೆಯೇನೊ ಎಂಬ ಸಂದೇಹಕ್ಕೂ ಆಸ್ಪದವಾಗಿದೆ. ಪ್ರತಿಭಾಶಕ್ತಿಯ ಬಗೆಗೆ ಅಲೌಕಿಕಾಂಶಗಳನ್ನು ಆರೋಪಿಸಿ ಆದರ್ಶಮಯವಾಗಿ ಮಾತನಾಡುವವರು ಒಂದು ಅತಿರೇಕದ ಅಂಚಿಗೆ ಹೋದರೆ, ಐ.ಎ. ರಿಚರ್ಡ್ಸ್ ತಾಳುವ ನಿಲುವು, ಪ್ರತಿಭೆಯಲ್ಲಿ ಅಂತಹ ವಿಲಕ್ಷಣಮಯತೆ ಯಾಗಲಿ, ಅಸಾಧಾರಣತೆಯಾಗಲಿ ಇಲ್ಲ ಎಂದು ಕಾವ್ಯನಿರ್ಮಿತಿಯ ವಿಶೇಷತೆಯನ್ನೇ ಅಲ್ಲಗಳೆದು, ಮತ್ತೊಂದು ಅತಿರೇಕದ ಅಂಚಿಗೆ ಇಳಿಯುತ್ತದೆ. ಪ್ರತಿಭೆಯ ಬಗೆಗೆ ಈ ಮಾತನ್ನು ಹೇಳಿದ್ದು ಮಾತ್ರ ಅಲ್ಲ, ಈ ಪ್ರತಿಭಾನಿರ್ಮಿತಿಯಾದ ಕಾವ್ಯದಿಂದ ಒದಗುವ ‘ರಸಾನುಭವ’ದ (Aesthetic Experience) ವಿಚಾರದಲ್ಲೂ ಕೂಡ, ಇದೇ ಬಗೆಯ ಧೋರಣೆಯನ್ನು ಪ್ರಕಟಿಸಿ, ಕಾವ್ಯ-ಕಲೆಗಳಿಂದ ಒದಗುವ ರಸಾನುಭವ ಎನ್ನುವುದು ಕೂಡಾ ಅಂತಹ ಅನುಪಮವಾದ ಅಂಶಗಳಿಂದ ಕೂಡಿದುದಲ್ಲ, ದೈನಂದಿನ ಸರಳ ಸಾಧಾರಣ ಅನುಭವಗಳಲ್ಲಿ ಇಲ್ಲದ ವಿಶೇಷತೆಯೇನೂ ಇದಕ್ಕಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾನೆ.[12] ಇಷ್ಟು ಸಾಲದೆಂಬಂತೆ “ಪ್ರತಿಭಾ ನಿರ್ಮಿತಿಯಾದ ಕಾವ್ಯಲೋಕ ಯಾವ ರೀತಿಯಲ್ಲಿಯೂ ನಮ್ಮ ವಾಸ್ತವಲೋಕದಿಂದ ಬೇರೆಯಾದ ಅಸ್ತಿತ್ವವನ್ನಾಗಲಿ ವಿಶೇಷ ನಿಯಮಗಳನ್ನಾಗಲಿ, ಅನ್ಯಲೋಕ ವಿಲಕ್ಷಣತೆಗಳನ್ನಾಗಲಿ ಪಡೆದಿಲ್ಲ”[13] ಎಂಬ ಸಿದ್ಧಾಂತದಲ್ಲಿ ಅವನ ವಾದ ಪರ್ಯವಸಾನವಾಗುತ್ತದೆ. ಅಂತೂ ಕಾವ್ಯನಿರ್ಮಾಣ ಸಾಮರ್ಥ್ಯವಾದ ಪ್ರತಿಭೆ, ಪ್ರತಿಭಾ ನಿರ್ಮಿತವಾದ ಕಾವ್ಯಜಗತ್ತು ಮತ್ತು ಈ ಕಾವ್ಯ ನೀಡುವ ಅನುಭವ – ಈ ಮೂರರಲ್ಲಿಯೂ, ಇದುವರೆಗು ಅನೇಕ ವಿಮರ್ಶಕರು ತಿಳಿದುಕೊಂಡಂತೆ, ಅಂಥ ಯಾವ ವಿಲಕ್ಷಣತೆಯಾಗಲಿ, ರಹಸ್ಯಮಯತೆಯಾಗಲಿ ಇಲ್ಲ ಎನ್ನುವುದೇ ರಿಚರ್ಡ್ಸ್‌ನ ಸಿದ್ಧಾಂತ. ಇಲ್ಲಿ ಪ್ರತಿಭೆಯನ್ನು ಕುರಿತು ಅಲ್ಲದೆ, ಅವನ ಇನ್ನೆರಡು ಹೇಳಿಕೆಗಳನ್ನು ವಿಮರ್ಶಿಸುವ ಅಗತ್ಯವಿಲ್ಲ. ಈ ಎರಡಕ್ಕೂ ನೆಲೆಗಟ್ಟಾಗಿರುವ ಪ್ರತಿಭೆಯನ್ನು ಕುರಿತು ಅವನು ಹೇಳಿರುವ ಮಾತುಗಳನ್ನು ಪರಿಶೀಲಿಸೋಣ: ಪ್ರತಿಭೆಯಲ್ಲಿ ಅಂತಹ ವಿಲಕ್ಷಣತೆಯೇನೂ -ಇಲ್ಲ -ಎನ್ನುವುದು ಕಾವ್ಯಕ್ಕೆ ಅನ್ಯಾಯ ಮಾಡುವ ಮಾತು. ಯಾಕೆಂದರೆ ಪ್ರತಿಭೆಗೆ, ದೈನಂದಿನ ಸರಳ ಸಾಧಾರಣ ಅನುಭವಗಳಲ್ಲಿ ಇಲ್ಲದ, ದೈನಂದಿನ ಭಾಷೆಯಲ್ಲಿ ಕಾಣದ ಒಂದು ವಿಶೇಷತೆಯನ್ನು ನಿರ್ಮಾಣ ಮಾಡುವ ಸಾಮರ್ಥ್ಯವಿದೆ ಎನ್ನುವುದನ್ನು ಮತ್ತೆ ನಾವು ಸಮರ್ಥಿಸುವ ಅಗತ್ಯವಿಲ್ಲ. “ಅದು ಕೂಡ ಮನಸ್ಸಿನ ಒಂದು ಶಕ್ತಿ: ಮನಸ್ಸಿನ ಇತರ ಕಾರ್ಯ ವಿಧಾನಗಳಲ್ಲಿ ಇಲ್ಲದ ಅದ್ಭುತವೇನೂ ಅದರಲ್ಲಿ ಇಲ್ಲ” -ಎನ್ನುವ ಮಾತಿನಲ್ಲಿ ನಾವು ಒಪ್ಪಬಹುದಾದದ್ದು, “ಅದು ಕೂಡಾ ಮನಸ್ಸಿನ ಒಂದು ಶಕ್ತಿ” ಎಂಬಷ್ಟನ್ನು ಮಾತ್ರ. ಮನಸ್ಸಿನ ರೀತಿ ನೀತಿಗಳೆಲ್ಲಾ ಅದ್ಭುತವೇ; ಅಂಥದರಲ್ಲಿ ಪ್ರತಿಭೆಯ ಕಾರ್ಯವೂ ಒಂದು ಎನ್ನುವುದಾದರೆ, ಮನಸ್ಸಿನ ಯಾವೆಲ್ಲ ವ್ಯಾಪಾರಗಳಿಗೂ, ನಾವು ಯಾವುದನ್ನು ‘ಪ್ರತಿಭೆ’ ಎಂಬ ವಿಶೇಷವಾದ ಒಂದು ‘ಸಾಮರ್ಥ್ಯ’ವನ್ನು ಕುರಿತು ಹೇಳುತ್ತೇವೋ ಆ ಒಂದು ಸಾಮರ್ಥ್ಯ ಯಾಕೆ ಇಲ್ಲ ಎಂದು ಪ್ರಶ್ನೆ ಹಾಕಬೇಕಾಗುತ್ತದೆ. ನಿಜ, ಪ್ರತಿಭೆ ಕೂಡ ಮನಸ್ಸಿನ ಇತರ ಕ್ರಿಯೆಗಳಂತೆ ಒಂದು ಕ್ರಿಯೆಯೇ. ಆದರೆ ಯಾವ ಮನಸ್ಸಿನ, ಎಂಥ ಮನಸ್ಸಿನ ಎಂಬ ಅಂಶಗಳನ್ನು ತಣ್ಣಗೆ ನಿರ್ಲಕ್ಷಿಸಿ, ಪ್ರತಿಭೆಯ ವಿಷಯವನ್ನು ಮಾತನಾಡುವುದು ಸರಿಯಾದುದಲ್ಲ. ಅದು ಯಾವೆಲ್ಲ ಮನಸ್ಸಿನ, ಹಾಗೂ ಯಾರೆಲ್ಲರ ಪ್ರಯತ್ನದ ಪರಿಣಾಮವಾಗಿದ್ದರೆ ಆ ಮಾತು ಬೇರೆ. ಆದರೆ ನಿಜವಾದ ಸಂಗತಿಯೆ ಬೇರೆ. “ಪ್ರತಿಭೆಯ ಶಕ್ತಿ-ಸತ್ವಗಳು ನಾವು ಬಯಸಿದಂತೆ ಅಥವಾ ಇಚ್ಛಿಸಿದಂತೆ ನಡೆಯತಕ್ಕವಲ್ಲ; ಅವು ಪುಟಿಯುವ ಚಿಲುಮೆಗಳು, ಯಂತ್ರಗಳಲ್ಲ.[14]

 

[1] English Critical Essays (19th Century) Ed. Edmund D. Jones, p. 112. (A Defence of Poetry : Shelly).

[2] English Critical Essays : Ed. Edmund D. Jones (19th Century, p. 122 (A Defence of Poetry : Shelly) : the Great Secret of morals is love; or going out of our nature, and an identification of ourselves with the beautiful which exists in thought, action, or person, not our own. A man to be greatly good must imagine intensely and comprehensively; he must put himself in the place of another and many others; the pains and pleasures of his species must become his own. The great instrument of moral good is imagination : and poetry administers to the effect by acting upon the cause.

[3] “A man cannot, I repeat, know a thing unless he loves it. Poets are like the rest of us, but they love things more than we do, and therefore know them better and approach more nearly to the heart of their mystery – Aubrey de selincourt: on Reading Poetry p. 31.

[4] Sri Aurobindo; The Future poetry, p. 24-25.

[5] June E. Downey : Creative Imagination. p. 17.

[6] ಅಲ್ಲೇ, p. 18.

[7] B.B. Paliwal : Symbolic Imagination, and Dhvani, p. 169.

[8] F.O. Mathiessen : The Achievement of T.S. Eliot, p. 81, 82.

[9] Coleridge : BiographiaLiteraria, Vol. II, p. 12

[10] ಭಾಮಹ : ಕಾವ್ಯಾಲಂಕಾರ, (ಡಾ. ಕೆ. ಕೃಷ್ಣಮೂರ್ತಿಯವರ ಅನುವಾದ) ಪು. ೧-೫.

[11] I.A. Richards : Principles of Literary Criticism, p. 191.

[12] I.A. Richards : Principles of Literary Criticism, p. 78.

[13] ಅಲ್ಲೇ, ಪು. ೧೬

[14] D.J. James : Scepticism and poetry, p. 155.

ಭಾನುವಾರ, ಡಿಸೆಂಬರ್ 2, 2018

India to host G-20 summit in 2022

Prime Minister Narendra Modi announced on December 1 announced that India will host the G-20 summit in 2022.


The G-20 is a grouping of the world’s 20 major economies.

Mr. Modi made the announcement at the closing ceremony of the two-day summit held in Buenos Aires. Italy was to host the international forum in 2022.

Thanking Italy for allowing India to play the host, Mr. Modi invited G-20 leaders to India in 2022, which also marks the 75th anniversary of India’s Independence.

“In 2022 India completes 75 years since Independence. In that special year, India looks forward to welcoming the world to the G-20 Summit! Come to India, the world’s fastest growing large economy! Know India’s rich history and diversity, and experience the warm Indian hospitality,” the Prime Minister tweeted after making the announcement.

G-20 members comprise Argentina, Australia, Brazil, Canada, China, the European Union, France, Germany, India, Indonesia, Italy, Japan, Mexico, Russia, Saudi Arabia, South Africa, South Korea, Turkey, the UK and the U.S. Collectively, the G-20 economies account for nearly 90% of the gross world product, 80% of world trade, two-thirds of the world population, and approximately half of the world land area.

Spain is a permanent guest invitee.

...@@@@@@@@@@@@@@@@@@@@

ಬುಧವಾರ, ನವೆಂಬರ್ 28, 2018

ಭೂ ಆದಾಯವನ್ನು ಪುನಶ್ಚೇತನಗೊಳಿಸುವುದು ಹೇಗೆ

ಭೂ ಆದಾಯವನ್ನು ಪುನಶ್ಚೇತನಗೊಳಿಸುವುದು ಹೇಗೆ

 2002. ಜನವರಿ 08 ಸ್ವಾಮಿನಾಥನ್ ಎಸ್. ಅಂಕಲ್ಸೇರಿ ಅಯ್ಯರ್  2 ಪ್ರತಿಕ್ರಿಯೆಗಳು

ನಾವು ಕೃಷಿ ಆದಾಯವನ್ನು ಹೇಗೆ ತೆರಿಗೆ ಮಾಡಬೇಕು?ಸಂವಿಧಾನವು ಈ ಕಾರ್ಯವನ್ನು ರಾಜ್ಯ ಸರಕಾರಗಳಿಗೆ ನಿಗದಿಪಡಿಸುತ್ತದೆ, ಇದು ಸಾಮಾನ್ಯವಾಗಿ ರೈತರಿಗೆ ಏನೂ ವಿಧಿಸುವುದಿಲ್ಲ, ಆದರೂ ಅನೇಕ ತೋಟಗಳ ಮೇಲೆ ತೆರಿಗೆಯನ್ನು ವಿಧಿಸುತ್ತದೆ. ಭೂಮಿ ಆದಾಯ ಎಂದು ಭೂಮಿ ಮೇಲೆ ತೆರಿಗೆ ಇದೆ.

ಆದರೆ ರಾಜ್ಯ ರಾಜಕೀಯ ಪಕ್ಷಗಳ ನಡುವಿನ ಸ್ಪರ್ಧೆಯು ಭೂಮಿ ಆದಾಯದ ದರವನ್ನು ಕಡಿಮೆ ಮಟ್ಟಕ್ಕೆ ತಳ್ಳಿದೆ, ಮತ್ತು ಇವುಗಳನ್ನು ಕೂಡ ಆಚರಣೆಯಲ್ಲಿ ಸಂಗ್ರಹಿಸಲಾಗಿಲ್ಲ.

ಕೃಷಿ ಆದಾಯವನ್ನು ಕೇಂದ್ರೀಯ ವಿಷಯವನ್ನಾಗಿ ಮಾಡಲು ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಇತ್ತೀಚೆಗೆ ಕೆಲವು ಚರ್ಚೆಗಳಿವೆ. ಕೇಂದ್ರ ಸರಕಾರವನ್ನು ಅಡ್ಡಿಪಡಿಸುವ ರಾಜಕೀಯ ನಿರ್ಬಂಧಗಳನ್ನು ತಪ್ಪಿಸುವ ಮೂಲಕ ಈ ತೆರಿಗೆಯನ್ನು ತೆರಿಗೆ ವಿಧಿಸಬಹುದು. ಹೆಚ್ಚಿದ ಆದಾಯವನ್ನು ರಾಜ್ಯಗಳಿಗೆ ರವಾನಿಸಬಹುದು, ಆದ್ದರಿಂದ ತೆರಿಗೆ ಆದಾಯವನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ಅವರು ಆದಾಯವನ್ನು ಗಳಿಸುತ್ತಾರೆ.

ಕೃಷಿ ಆದಾಯ ತೆರಿಗೆಯು ವ್ಯವಸ್ಥಾಪನೀಯ ದುಃಸ್ವಪ್ನವಾಗಿದೆ ಎಂದು ವೈಯಕ್ತಿಕವಾಗಿ ನಾನು ಭಾವಿಸುತ್ತೇನೆ. ತೆರಿಗೆ ಕಛೇರಿಗಳೊಂದಿಗಿನ ನಗರಗಳಲ್ಲಿ ಸಣ್ಣ ಉದ್ಯಮಿಗಳು ಮತ್ತು ಸ್ವ ಉದ್ಯೋಗಿಗಳಿಂದ ತೆರಿಗೆಗಳನ್ನು ಸಂಗ್ರಹಿಸಲು ಆದಾಯ ತೆರಿಗೆ ಅಧಿಕಾರಿಗಳು ಸಾಧ್ಯವಾಗುವುದಿಲ್ಲ.

ಗ್ರಾಮೀಣ ಪ್ರದೇಶಗಳಿಂದ ಲಕ್ಷಾಂತರ ತೆರಿಗೆ ರಿಟರ್ನ್ಸ್ ಗಳೊಂದಿಗೆ ಈ ಭೂಮಿ ಮೇಲೆ ಹೇಗೆ ವಿಸ್ತಾರವಾದ, ಅಪ್ರಸ್ತುತ ಮತ್ತು ಭ್ರಷ್ಟಾಚಾರದ ಅಧಿಕಾರಿಗಳು ವ್ಯವಹರಿಸುತ್ತಾರೆ? ಪ್ರತಿ ತಲೆಗೆ ತೆರಿಗೆ ಹೊಣೆಗಾರಿಕೆಯು ಸಾಮಾನ್ಯವಾಗಿ ಸಣ್ಣದಾಗಿರುತ್ತದೆ, ಏಕೆಂದರೆ ದೊಡ್ಡ ಕಾರ್ಯಾಚರಣೆ ಹಿಡುವಳಿಗಳನ್ನು ಅನೇಕ ಕುಟುಂಬ ಸದಸ್ಯರ ಹೆಸರುಗಳಲ್ಲಿ ವಿತರಿಸಲಾಗುತ್ತದೆ, ಪ್ರತಿಯೊಂದೂ ಒಂದು ಪ್ರತ್ಯೇಕ ತೆರಿಗೆ ಘಟಕವಾಗಿದೆ.

ಲಕ್ಷಾಂತರ ರೈತರ ಸಣ್ಣ ಪ್ರಮಾಣದಲ್ಲಿ ಕೃಷಿ ಆದಾಯ ತೆರಿಗೆಯನ್ನು ಸಂಗ್ರಹಿಸುವುದು ಆಡಳಿತಾತ್ಮಕವಾಗಿ ಅಸಾಧ್ಯ. ಅಲ್ಲದೆ, ಲಕ್ಷಾಂತರ ರೈತರು ಹತ್ತಿರದ ಆದಾಯ ತೆರಿಗೆ ಕಛೇರಿಗೆ ಸಮೀಪ ಎಲ್ಲಿಯೂ ಇಲ್ಲ.

100 ಮೈಲುಗಳ ದೂರದಲ್ಲಿರುವ ಆದಾಯ ತೆರಿಗೆ ಕಛೇರಿಗೆ ಸಂಪರ್ಕಿಸಲು ಶ್ರಮದಾಯಕ ಪ್ರಯತ್ನಗಳನ್ನು ಮಾಡಲು ಯಾರೊಬ್ಬರೂ ಬಯಸುತ್ತಾರೆ?

ಮತ್ತೊಂದೆಡೆ, ಭೂಮಿ ಆದಾಯವನ್ನು ಸಂಗ್ರಹಿಸುವ ಸಲುವಾಗಿ ದೇಶವು ಸಿದ್ದವಾಗಿರುವ ಆಡಳಿತವನ್ನು ಹೊಂದಿದೆ. ಮುಘಲ್ ಸಾಮ್ರಾಜ್ಯ ಮತ್ತು ಬ್ರಿಟಿಷ್ ರಾಜ್ ಎರಡೂ ಕೃಷಿ ಆದಾಯ ತೆರಿಗೆ ಅಸಾಧ್ಯ ಎಂದು ಅರ್ಥ, ಯಾರೂ ನಿಜವಾಗಿಯೂ ರೈತ ವೆಚ್ಚ ಮತ್ತು ಆದಾಯ ಪರಿಶೀಲಿಸಬಹುದು.

ಬದಲಾಗಿ ಅವರು ಭೂಮಿ ಮೇಲೆ ತೆರಿಗೆಯನ್ನು ವಿಧಿಸಿದರು, ಅದನ್ನು ಸುಲಭವಾಗಿ ಅಳೆಯಬಹುದು.ತ್ವರಿತ ಆದಾಯದ ಭೂ ಆದಾಯಕ್ಕಾಗಿ ಕಠಿಣ ಕಾರ್ಯವಿಧಾನಗಳನ್ನು ಅವರು ನೀಡಿದರು, ಸಮಯಕ್ಕೆ ಈ ತೆರಿಗೆಯನ್ನು ಪಾವತಿಸಲು ಪ್ರೋತ್ಸಾಹವನ್ನು ಹೆಚ್ಚಿಸಿದರು. ಭೂಮಿ ಆದಾಯದಿಂದ ಈ ಎರಡು ಮಹಾನ್ ಸಾಮ್ರಾಜ್ಯಗಳು ಅಗಾಧವಾಗಿ ಹಣವನ್ನು ಪಡೆದುಕೊಂಡಿವೆ.

ಹಾಗಾಗಿ, ಯಾವುದೇ ರಾಜ್ಯ ಸರ್ಕಾರ ಇಂದು ತೆರಿಗೆ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ದೂರಿದಾಗ, ಇತಿಹಾಸದ ಪುಸ್ತಕಗಳನ್ನು ನಗುವುದು ಮತ್ತು ಸೂಚಿಸುತ್ತದೆ.

ರಾಜ್ಯಗಳಲ್ಲಿನ ಹಣಕಾಸಿನ ಬಿಕ್ಕಟ್ಟಿನಿಂದಾಗಿ, ಭೂಮಿ ಮೇಲಿನ ತೆರಿಗೆಯನ್ನು ಪುನರುಜ್ಜೀವನಗೊಳಿಸುವುದು ಹಿಂದಿನ ಮಹತ್ವದ ಸಾಮ್ರಾಜ್ಯಗಳಿಗೆ ಹಣ ಕೊಡುವುದು. ಭೂಮಿ ಆದಾಯವನ್ನು ಸಂಗ್ರಹಿಸಲು ಸಂಗ್ರಹಕಾರರಿಂದ ಪಾಟ್ವಾರಿ ಮತ್ತು ಗಿರಿಧವರಕ್ಕೆ ರಾಜ್ಯದ ಆಡಳಿತದ ಒಂದು ದೊಡ್ಡ ವಿಭಾಗವನ್ನು ರಚಿಸಲಾಗಿದೆ. ಅದು ಏಕೆ ಸಂಗ್ರಹಿಸಲ್ಪಟ್ಟಿಲ್ಲ?

ರಾಜಕೀಯ ಕಾರಣಗಳಿಗಾಗಿ. ನಾವು ಇಂದು ಹಿಡಿದಿರುವ ಮೌಲ್ಯಗಳು ಹಿಂದಿನ ಸಾಮ್ರಾಜ್ಯಗಳಿಂದ ಭಿನ್ನವಾಗಿದೆ. ತೆರಿಗೆಯ ರೈತರು ಅತೀವವಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಇಂದು ನಾವು ಆ ಸಾಮ್ರಾಜ್ಯಗಳನ್ನು ಹೊಂದಿದ್ದೇವೆ.

ನಮ್ಮ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ, ನಮ್ಮ ನಾಯಕರು ಬ್ರಿಟಿಷ್ ರಾಜ್ ರೈತರನ್ನು ಹೆಚ್ಚಿನ ಭೂ ತೆರಿಗೆಗಳ ಮೂಲಕ ದುರ್ಬಲಗೊಳಿಸುತ್ತಿದ್ದಾರೆಂದು ಆರೋಪಿಸಿದರು, ಮತ್ತು ಸ್ವಾತಂತ್ರ್ಯದ ನಂತರ ಈ ಪ್ರಮಾಣವನ್ನು ಕಡಿಮೆ ಮಾಡಲು ಶಪಥ ಮಾಡಿದರು.

ವ್ಯಂಗ್ಯವಾಗಿ, ಆ ನಾಯಕರು ಭೂಮಿ ಆದಾಯವನ್ನು ಕಣ್ಮರೆಯಾಗುವುದೆಂದು ಊಹಿಸಿರಲಿಲ್ಲ, ಯಂತ್ರೋಪಕರಣಗಳು ಸಂಗ್ರಹಿಸಲು ಅದು ಸರಿಯಾಗಿ ಉಳಿಯುತ್ತದೆ.

ದೊಡ್ಡ ಭೂಮಾಲೀಕರು ಹೆಚ್ಚಿನ ಭೂ ಆದಾಯವನ್ನು ಪಡೆದರು. ಈಗ, ಸ್ವಾತಂತ್ರ್ಯಾನಂತರ, ದೊಡ್ಡ ರಾಜಕೀಯ ರೈತರು ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿಕೊಳ್ಳಲು ಅಥವಾ ನುಡಿಸಲು ಬಂದರು.

ಈ ಶಕ್ತಿಶಾಲಿ ಫಾರ್ಮ್ ಲಾಬಿ ನೀರಿನ, ವಿದ್ಯುತ್ ಮತ್ತು ಕ್ರೆಡಿಟ್ಗೆ ರಾಜ್ಯ ಸಬ್ಸಿಡಿಗಳನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು. ನೈಸರ್ಗಿಕವಾಗಿ ಲಾಬಿ ಭೂ ಆದಾಯದ ದರಗಳಲ್ಲಿ ಕಡಿತವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು, ಮತ್ತು ಅದನ್ನು ಆಚರಣೆಯಲ್ಲಿ ಪಾವತಿಸದೇ ಇರಲಿಲ್ಲ.

ಜೊತೆಗೆ, ಸ್ವಾತಂತ್ರ್ಯದ ನಂತರ, ಭೌತಿಕ ಪ್ರತಿಭಟನೆಯನ್ನು ನೀಡುವ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ರಚಿಸುವ ಡೀಫಾರಿನ ಭೂಮಿಯನ್ನು ವಶಪಡಿಸಿಕೊಳ್ಳಲು ರಾಜಕೀಯವಾಗಿ ಕಷ್ಟವಾಯಿತು.

ಯಾವುದೇ ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಮೇಲಾಧಾರವಾಗಿ ರೈತರು ವಾಗ್ದಾನ ಮಾಡಿದ ಭೂಮಿಯನ್ನು ವಶಪಡಿಸಿಕೊಳ್ಳಲು ಅಸಾಧ್ಯವೆಂದು ನಿಮಗೆ ತಿಳಿಸುವರು. ಸ್ಥಳೀಯ ಜನರು ಹಾಗೆ ಮಾಡಲು ಪ್ರಯತ್ನಿಸುವ ಯಾವುದೇ ಬ್ಯಾಂಕ್ ಅಧಿಕಾರಿಗಳನ್ನು ಸೋಲಿಸುತ್ತಾರೆ. ಕಾನೂನಿನ ನಿಯಮದ ಮೇಲೆ ರಾಜಕೀಯವು ಗೆಲುವು ಸಾಧಿಸುತ್ತದೆ. ಆದಾಯ ತೆರಿಗೆ ಸಂಗ್ರಹಿಸಲು ಯಾವುದೇ ಪ್ರಯತ್ನಗಳು ಸಂಭವಿಸಬಹುದೆಂದು ನನಗೆ ಖಚಿತವಾಗಿದೆ

ಆದ್ದರಿಂದ ಯಾವುದೇ ಮಾರ್ಗವಿಲ್ಲ? ಹೌದು ನಿಜವಾಗಿಯೂ. ಮೊದಲನೆಯದಾಗಿ, ಆಡಳಿತಾತ್ಮಕ ಕಾರ್ಯಸಾಧ್ಯತೆಯ ಕಾರಣದಿಂದಾಗಿ ಭೂಮಿ ಮೇಲೆ ತೆರಿಗೆಯ ಮೂಲಕ ಕೃಷಿಗೆ ತೆರಿಗೆ ವಿಧಿಸಬೇಕು ಎಂದು ನಾನು ಭಾವಿಸುತ್ತೇನೆ.

ಎರಡನೆಯದು, ಹಣವು ದೂರದಲ್ಲಿರುವ ರಾಜ್ಯ ರಾಜಧಾನಿಗೆ ಅಥವಾ ಅದಕ್ಕಿಂತ ಸ್ವಲ್ಪ ದೂರದ ಜಿಲಾ ಮುಖ್ಯಕಾರ್ಯಾಲಯಕ್ಕೆ ಕಣ್ಮರೆಯಾದರೆ ಯಾವುದೇ ರೈತನು ಭೂ ಆದಾಯವನ್ನು ಪಾವತಿಸಲು ಬಯಸುವುದಿಲ್ಲ ಎಂದು ನಾವು ಗುರುತಿಸಬೇಕಾಗಿದೆ.ಆದರೆ ಗ್ರಾಮವು ಗ್ರಾಮ ಪಂಚಾಯತ್ನಲ್ಲಿ ಉಳಿದಿದ್ದರೆ, ಸ್ಥಳೀಯ ಉದ್ದೇಶಗಳಿಗಾಗಿ ಮಾತ್ರ ರೈತರು ಹೆಚ್ಚು ಸಿದ್ಧರಾಗುತ್ತಾರೆ.

ಇದು ಬಹುಶಃ ಯಶಸ್ಸಿಗೆ ಒಂದು ಅವಶ್ಯಕವಾದ ಸ್ಥಿತಿಯಾಗಿದೆ, ಆದರೆ ಸಾಕಷ್ಟು ಒಂದಲ್ಲ. ಅತಿದೊಡ್ಡ ರೈತರು ದೊಡ್ಡ ಭೂ ಆದಾಯದ ಹೊಣೆಗಾರಿಕೆಯನ್ನು ಹೊಂದುತ್ತಾರೆ ಮತ್ತು ಸಂಗ್ರಹವನ್ನು ನಾಶಮಾಡಲು ಪ್ರಯತ್ನಿಸುತ್ತಾರೆ.

ಸಣ್ಣ ರೈತರು ಕಡಿಮೆ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ ಆದರೆ ಪಾವತಿಯನ್ನು ತಪ್ಪಿಸಲು ಸಹ ಪ್ರಯತ್ನಿಸುತ್ತಾರೆ. ಅವರು ಪಂಚಾಯತ್ ಯೋಜನೆಗಳಿಂದ ಪಡೆಯುವ ಯಾವುದೇ ಪ್ರಯೋಜನಗಳನ್ನು ತೆರಿಗೆಗಳ ವೆಚ್ಚವು ಮೀರಿಸುತ್ತದೆ ಎಂದು ಅವರು ಭಾವಿಸಬಹುದು.

ಇದನ್ನು ಜಯಿಸಲು ಏಕೈಕ ಮಾರ್ಗವೆಂದರೆ, ಭೂ ಆದಾಯವನ್ನು ಪಾವತಿಸಲು ಇಚ್ಛೆ ಹೆಚ್ಚಿಸುವ ಒಂದು ಹೊಸ ಪ್ರೋತ್ಸಾಹವನ್ನು ಸೃಷ್ಟಿಸುವುದು. ತಾತ್ತ್ವಿಕವಾಗಿ, ಹೊಸ ಉತ್ತೇಜನವು ರಾಜ್ಯ ಸರಕಾರದಿಂದ ಸಂಗ್ರಹಿಸಲಾದ ಭೂ ಆದಾಯಕ್ಕೆ ಒಂದು ಹೊಂದಾಣಿಕೆಯ ಅನುದಾನವಾಗಿರಬೇಕು.

ಒಂದು ಪಂಚಾಯತ್ ಸಂಗ್ರಹಿಸಿದರೆ, 2 ಲಕ್ಷ ರೂ ಆದಾಯದಲ್ಲಿ ಹೇಳುವುದಾದರೆ, ಇದು ಸ್ಥಳೀಯ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕಾದ ಒಂದು ಹೊಂದಾಣಿಕೆಯ ಅನುದಾನವಾಗಿ ರಾಜ್ಯ ಸರ್ಕಾರದಿಂದ ಮತ್ತೊಂದು ರೂ 2 ಲಕ್ಷವನ್ನು ಪಡೆಯಬೇಕು.

ಸರಿಹೊಂದುವ ಅನುದಾನದ ಸೌಂದರ್ಯವು ಸಕಾಲಿಕ ಮತ್ತು ಪರಿಣಾಮಕಾರಿ ಸಂಗ್ರಹಣೆಗೆ ಪ್ರೋತ್ಸಾಹವನ್ನು ನೀಡುತ್ತದೆ ಎಂಬುದು. ದೊಡ್ಡ ಅಥವಾ ಸಣ್ಣ ಪ್ರತಿ ರೈತನಿಗೆ ಒಂದು ಪ್ರಕರಣವನ್ನು ಮಾಡಬಹುದು, ಅವರು ಸಿಸ್ಟಮ್ನಿಂದ ಪಡೆಯುವ ಪ್ರಯೋಜನವು ತನ್ನದೇ ಆದ ತೆರಿಗೆ ಪಾವತಿಯನ್ನು ಮೀರಿಸುತ್ತದೆ.

ಕೆಲವು ಡ್ರೋನ್ಗಳು ಬಾಕಿ ಪಾವತಿಗಳನ್ನು ತಪ್ಪಿಸಲು ಬಯಸುತ್ತಾರೆ ಮತ್ತು ನೆರೆಹೊರೆಯವರ ತೆರಿಗೆ ಪ್ರಯತ್ನಗಳಿಂದ ಪ್ರಯೋಜನಗಳನ್ನು ಆನಂದಿಸುತ್ತಾರೆ.ಇದನ್ನು ತಡೆಯಲು ವಿರೋಧಿಗಳನ್ನು ಅಗತ್ಯವಿದೆ.

ಉದಾಹರಣೆಗೆ, ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಭೂಮಿಗೆ ಭೂ ಆದಾಯವನ್ನು ಸಂಗ್ರಹಿಸಿದ ನಂತರ ಹೊಂದಾಣಿಕೆಯ ಅನುದಾನಗಳು ಬರಬೇಕು, 90% ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಹೇಳಿ, ಮತ್ತು ನಿಗದಿತ ಬ್ಯಾಂಕ್ ಖಾತೆಯಲ್ಲಿ ಸಂಗ್ರಹಿಸಲಾಗಿದೆ.

ಅದು ಪಾವತಿಸದವರಿಗೆ ಗ್ರಾಹಕರು ಸಾಮಾಜಿಕ ಒತ್ತಡವನ್ನು ತರುವಂತೆ ಮಾಡುತ್ತದೆ. ಈ ಸಾಮಾಜಿಕ ಒತ್ತಡವು ಎಲ್ಲೆಡೆ ಕೆಲಸ ಮಾಡುವುದಿಲ್ಲ, ಆದರೆ ನಮ್ಮ ಔಪಚಾರಿಕ ತೆರಿಗೆ ಸಂಗ್ರಹ ಯಂತ್ರಗಳಿಗಿಂತ ಹೆಚ್ಚು ಹಣವನ್ನು ಸಂಗ್ರಹಿಸುವಲ್ಲಿ ಖಂಡಿತವಾಗಿಯೂ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಯತ್ನಿಸುವ ಮೌಲ್ಯವಾಗಿದೆ.



ಭಾನುವಾರ, ನವೆಂಬರ್ 25, 2018

ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ! ಪ್ರಜಾವಾಣಿ ವಾರ್ತೆ

ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ!
ಪ್ರಜಾವಾಣಿ ವಾರ್ತೆ
Published: 15 ಮೇ 2011, 01:00 IST
Updated: 15 ಮೇ 2011, 01:00 IST

 

ಹದಿನಾಲ್ಕು ವರ್ಷದ ಹನುಮಂತಪ್ಪ ಎಂಬ ಹುಡುಗನನ್ನು ಕೆಲವು ವಾರಗಳ ಹಿಂದೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಯಿತು. ಕೊಪ್ಪಳದ ಬಡರೈತ ಮುನಿಯಪ್ಪನವರ ಮಗ ಈ ಹನುಮಂತಪ್ಪ.

ಕಳೆದ ಐದು ವರ್ಷಗಳಿಂದ ಹನುಮಂತಪ್ಪ ಹೃದ್ರೋಗದಿಂದ ಬಳಲುತ್ತಿದ್ದ. ಮಗನಿಗೆ ಚಿಕಿತ್ಸೆ ಕೊಡಿಸಲು ಅಗತ್ಯವಿದ್ದ ಹಣ ಹೊಂದಿಸಲು ಮುನಿಯಪ್ಪನವರಿಗೆ ಅಷ್ಟೇ ವರ್ಷಗಳು ಬೇಕಾದವು. ಇದ್ದ ಕೆಲವೇ ಗುಂಟೆ ಜಮೀನನ್ನು ಮಾರಿ ಅವರು ಹಣ ಹೊಂದಿಸಿಕೊಂಡು ಮಗನನ್ನು ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ಕರೆತಂದರು. ಆದರೆ, ‘ಹೃದ್ರೋಗ ಶಸ್ತ್ರಚಿಕಿತ್ಸೆಯಿಂದ ರೋಗ ಗುಣವಾಗುವ ಸ್ಥಿತಿ ಮೀರಿದೆ’ ಎಂದ ವೈದ್ಯರು, ‘ಹುಡುಗ ಇನ್ನು ಕೆಲವೇ ದಿನ ಬದುಕಿರುತ್ತಾನೆ’ ಎಂದು ಹೇಳಿದರು. ಆಗ ಹನುಮಂತಪ್ಪ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಾನು ಕೆಲಸ ಮಾಡುತ್ತಿದ್ದ ಘಟಕಕ್ಕೆ ಬಂದ. ಅಲ್ಲಿ ಅಪ್ಪ-ಮಗ ನಮ್ಮೊಟ್ಟಿಗೆ ಮೂರು ವಾರ ಇದ್ದರು.

ಮುನಿಯಪ್ಪ ಪತ್ನಿಯನ್ನು ಕಳೆದುಕೊಂಡಿದ್ದರೂ ಮತ್ತೊಂದು ಮದುವೆ ಆಗಿರಲಿಲ್ಲ. ಗೋಣಿಚೀಲದಲ್ಲಿ ಒಂದಿಷ್ಟು ರಾಗಿ, ಸ್ವಲ್ಪ ಸೀಮೆಎಣ್ಣೆ, ಒಂದು ಸ್ಟವ್ ಮತ್ತಿತರ ವಸ್ತುಗಳನ್ನು ತಂದಿದ್ದರು. ಅವರು ಆಸ್ಪತ್ರೆಯಲ್ಲಿ ಇರುವ ಅಷ್ಟೂ ದಿನ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಮಗನಿಗೆ ಆಸ್ಪತ್ರೆಯವರೇ ಊಟ ಕೊಡುತ್ತಿದ್ದರಿಂದ ಸಮಸ್ಯೆ ಇರಲಿಲ್ಲ. ಮಗನ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳನ್ನು ಮಾಡಿಸಲು ಮುನಿಯಪ್ಪ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರು. ಸೊಂಟಕ್ಕೆ ಸುತ್ತಿಕೊಂಡಿದ್ದ ಪಟ್ಟಿಯಲ್ಲಿ ತಾವು ಕಷ್ಟಪಟ್ಟು ಹೊಂದಿಸಿದ ಹಣ ಇಟ್ಟುಕೊಂಡಿರುತ್ತಿದ್ದರು. ಬರಬರುತ್ತಾ ಹಣ ಕರಗಿತು. ಅವರು ತಂದಿದ್ದ ಗೋಣಿಚೀಲದ ವಸ್ತುಗಳೂ ಖಾಲಿಯಾಗತೊಡಗಿದವು. ಮಗ ಗುಣಮುಖನಾಗುವ ಭರವಸೆಯಂತೂ ಸಿಗಲಿಲ್ಲ.

ಪ್ರತಿ ಬೆಳಗ್ಗೆ ವೈದ್ಯರು ಭೇಟಿ ನೀಡುವ ಹೊತ್ತಿಗೆ ಸರಿಯಾಗಿ ತೀವ್ರ ನಿಗಾ ಘಟಕದಲ್ಲಿದ್ದ ತಮ್ಮ ಮಗನಿಗೆ ಮುನಿಯಪ್ಪ ಹಲ್ಲುತಿಕ್ಕಿ, ಸ್ನಾನ ಮಾಡಿಸುತ್ತಿದ್ದರು. ಹಿಂದಿನ ದಿನ ಒಗೆದು ಆಸ್ಪತ್ರೆಯ ಆವರಣದಲ್ಲೇ ಒಣಗಿಸಿದ, ಮುದುರಿದ ಬಟ್ಟೆ ತೊಡಿಸುತ್ತಿದ್ದರು.

ಆ ಅಪ್ಪ-ಮಗನ ನಡುವೆ ಇದ್ದ ಅವ್ಯಾಜ ಪ್ರೀತಿಯನ್ನು ನಾನು ಬದುಕಿರುವವರೆಗೆ ಮರೆಯಲಾರೆ. ಅವರಿಬ್ಬರ ನಡುವಿನ ವಾತ್ಸಲ್ಯದ ಚಿತ್ರಗಳು ನನ್ನ ಮನದಲ್ಲಿ ಅಚ್ಚೊತ್ತಿವೆ. ಒಬ್ಬನೇ ಮಗನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಅಪ್ಪ ಪಡುತ್ತಿದ್ದ ಪಡಿಪಾಟಲನ್ನು ನೆನೆಸಿಕೊಂಡರೆ ನನ್ನ ಕಣ್ಣು ಈಗಲೂ ತುಂಬಿಕೊಳ್ಳುತ್ತದೆ. ಮುನಿಯಪ್ಪ ಮಗನ ಔಷಧಕ್ಕೆ ಮಾತ್ರ ಹಣ ಖರ್ಚು ಮಾಡುತ್ತಿದ್ದರೇ ಹೊರತು ಮಿಕ್ಕ ಯಾವುದಕ್ಕೂ ಅಲ್ಲ. ಇದ್ದ ಅಷ್ಟೂ ಹಣ ಮಗನ ಚಿಕಿತ್ಸೆಗಷ್ಟೇ ಉಪಯೋಗವಾಗಬೇಕು ಎಂಬ ಕಾಳಜಿ ಅವರದು.

ಹುಡುಗನ ಕಾಯಿಲೆಯಲ್ಲಿ ಏರಿಳಿತ ಇದ್ದೇಇತ್ತು. ಸ್ಥಿತಿ ಗಂಭೀರವಾದಾಗ ಹಾಸಿಗೆಯ ಪಕ್ಕದಲ್ಲಿ ನಿಂತು ಅಪ್ಪ ಸ್ತಂಭೀಭೂತರಾಗುತ್ತಿದ್ದರು. ಆ ನೋವಿನಲ್ಲೂ ಮಗ ನಗುಮೊಗದಿಂದಲೇ ಅಪ್ಪನಿಗೆ ಧೈರ್ಯ ತುಂಬುತ್ತಿದ್ದ. ತಾನೇ ಓಡಾಡುವ ಸ್ಥಿತಿಯಲ್ಲಿ ಇರುವಾಗಲೂ ಮಗನನ್ನು ಅಪ್ಪ ಶೌಚಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಅಕಸ್ಮಾತ್ತಾಗಿ ಅವನಿಗೇನಾದರೂ ಆದರೆ ಎಂಬ ಆತಂಕ ಅವರದು. ಏಳಲು ಆಗದ ಸ್ಥಿತಿಯಲ್ಲಿ ಅವನಿದ್ದಾಗ ಹಾಸಿಗೆಯ ಪಕ್ಕದಲ್ಲೇ ನಿಂತು, ಅಗತ್ಯವಿದ್ದಾಗ ತಾವೇ ಬೆಡ್‌ಪ್ಯಾನ್ ಇಡುತ್ತಿದ್ದರು. ಒಮ್ಮೆಯೂ ಮುನಿಯಪ್ಪ ಗೊಣಗಿದ್ದನ್ನಾಗಲೀ, ಬೇಸರ ಪಟ್ಟುಕೊಂಡಿದ್ದನ್ನಾಗಲೀ ನಾನು ನೋಡಲಿಲ್ಲ. ಬಂದದ್ದೆಲ್ಲವನ್ನೂ ಒಬ್ಬರೇ ಎದುರಿಸಿದರು.

ಹನುಮಂತಪ್ಪ ಕೊನೆಯುಸಿರೆಳೆದ ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ದುರದೃಷ್ಟ. ತೀವ್ರ ನಿಗಾ ಘಟಕಕ್ಕೆ ಮುನಿಯಪ್ಪನವರನ್ನು ಕರೆದು, ಮಗ ಕೊನೆಯುಸಿರೆಳೆದ ವಿಷಯವನ್ನು ತಿಳಿಸಿದೆವು. ಅವರು ಅಳಲಿಲ್ಲ. ಅತ್ತಿದ್ದರೆ ಚೆನ್ನಾಗಿತ್ತು. ಮಾತೇ ಆಡಲಿಲ್ಲ. ಅಲ್ಲಿದ್ದ, ಅರ್ಧ ಕರಗಿದ್ದ ಗೋಣಿಚೀಲ ಎತ್ತಿಕೊಂಡರು. ಸೊಂಟದ ಪಟ್ಟಿಯಲ್ಲಿ ನೂರರ ಕೆಲವೇ ನೋಟುಗಳಿದ್ದವು.

ಮುನಿಯಪ್ಪ ಅಲ್ಲಿಂದ ಕಾಣೆಯಾದರು. ಎರಡು ತಾಸಾದರೂ ಬರಲಿಲ್ಲ. ಆಸ್ಪತ್ರೆಯ ನಿಯಮದ ಪ್ರಕಾರ ಮೂರು ತಾಸಿಗಿಂತ ಹೆಚ್ಚು ಹೊತ್ತು ಶವವನ್ನು ಇಟ್ಟುಕೊಳ್ಳುವಂತಿಲ್ಲ. ಹುಡುಗನ ಶವಕ್ಕೆ ಅನಾಥಶವದ ಪಟ್ಟಿ ಹಚ್ಚುವ ಯೋಚನೆಯೂ ನಡೆಯಿತು. ಅಷ್ಟರಲ್ಲಿ ದೊಡ್ಡದೊಂದು ಟ್ರಂಕ್ ಹೊತ್ತುಕೊಂಡು ಮುನಿಯಪ್ಪ ಬಂದರು.

ನಮ್ಮ ನೆರವಿನಿಂದ ಮಗನ ಶವವನ್ನು ಅದರಲ್ಲಿಟ್ಟುಕೊಂಡರು. ಶವವನ್ನು ಹಾಗೆ ಕಷ್ಟಪಟ್ಟು ಟ್ರಂಕಿನಲ್ಲಿ ಇರಿಸುವುದನ್ನು ಕಂಡು ನಾನು ದಂಗಾದೆ. ‘ಯಾಕೆ ಹೀಗೆ ಮಾಡುತ್ತಿದ್ದೀರಿ?’ ಎಂದು ಕೇಳಿದೆ. ಆಗ ಸಿಕ್ಕ ಉತ್ತರ ಇನ್ನೂ ದಂಗುಬಡಿಸಿತು.

ಮಗನನ್ನು ಕೊಪ್ಪಳದ ತಮ್ಮ ಜಾಗದಲ್ಲೇ ಮಣ್ಣು ಮಾಡುವುದು ಮುನಿಯಪ್ಪನವರ ಬಯಕೆಯಾಗಿತ್ತು. ಅದಕ್ಕಾಗಿ ಟ್ಯಾಕ್ಸಿ ವಿಚಾರಿಸಿದ್ದಾರೆ. ಟ್ಯಾಕ್ಸಿಯವರು ಮೂರೂವರೆಯಿಂದ ನಾಲ್ಕು ಸಾವಿರ ರೂಪಾಯಿ ಕೇಳಿದರಂತೆ. ಅವರು ತಮ್ಮ ಕೆಲವೇ ಗುಂಟೆಗಳ ಜಮೀನು ಮಾರಿದಾಗ ಬಂದ ಹಣ ಕೂಡ ಅಷ್ಟಿರಲಿಲ್ಲವಂತೆ. ಟ್ಯಾಕ್ಸಿಗೆ ಹಣ ಹೊಂದಿಸಲಾಗದ ಕಾರಣ, ಅವರು ನಾಲ್ಕುನೂರು ರೂಪಾಯಿ ಕೊಟ್ಟು ಟ್ರಂಕು ಖರೀದಿಸಿ ತಂದಿದ್ದರು. ಅದರಲ್ಲಿ ಮಗನ ಶವವನ್ನು ಊರಿಗೆ ಸಾಗಿಸುವುದು ಅವರ ಉದ್ದೇಶವಾಗಿತ್ತು.

ಟ್ರಂಕನ್ನು ತಲೆಮೇಲೆ ಇಡುವಂತೆ ಕೇಳಿದ ಮುನಿಯಪ್ಪನವರು ಅದನ್ನು ಕೆಎಸ್ಸಾರ್ಟಿಸಿ ಬಸ್‌ಸ್ಟ್ಯಾಂಡಿನವರೆಗೆ ಹೊತ್ತುಕೊಂಡೇ ಹೋದರು. ಅಲ್ಲಿಂದ ಬಸ್ಸಿನಲ್ಲಿ ಕೊಪ್ಪಳಕ್ಕೆ.

ಈ ಅಪ್ಪ-ಮಗ ನಾನು ಕಂಡ ಅದ್ಭುತ ವ್ಯಕ್ತಿತ್ವಗಳು. ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅಂಥವರ ಪಾಲಿಗೆ ಬದುಕಿಗಿಂತ ಸಾವೇ ದುಬಾರಿ.

ಬಡವರಾದರೂ ಮುನಿಯಪ್ಪ ದುಃಖಿಸಲಿಲ್ಲ. ದೃಢ ಸಂಕಲ್ಪ ಮಾಡಿ ತಮ್ಮೂರಿಗೆ ಮಗನ ಶವ ಸಾಗಿಸಿ, ಅಂತಿಮ ಸಂಸ್ಕಾರ ಮಾಡಿದರು.

ಅನೇಕ ದಿನಗಳಾದರೂ ಮುನಿಯಪ್ಪ ಟ್ರಂಕ್ ಎತ್ತಿಕೊಂಡು ಹೋದ ಚಿತ್ರ ನನ್ನ ಮನಸ್ಸನ್ನು ಕಾಡುತ್ತಲೇ ಇದೆ. ಮೊನ್ನೆ ಕೆಎಸ್ಸಾರ್ಟಿಸಿಗೆ ಫೋನ್ ಮಾಡಿ, ಬಸ್‌ನಲ್ಲಿ ಪೆಟ್ಟಿಗೆಯ ಮೂಲ ಶವ ಸಾಗಿಸಲು ಅನುಮತಿ ಇದೆಯೇ ಎಂದು ಕೇಳಿದೆ. ಅದಕ್ಕೆ ಅಲ್ಲಿನ ಸಿಬ್ಬಂದಿ ಇಲ್ಲವೆಂದರು. ಮುನಿಯಪ್ಪ ಮಗನ ಶವವನ್ನು ಬಸ್ಸಿನಲ್ಲೇ ಸಾಗಿಸಿದ ವಿಚಾರವನ್ನು ಅವರಿಗೆ ಹೇಳಲಿಲ್ಲ. ಮುನಿಯಪ್ಪ ಹೇಗೋ ಮಗನ ಶವವನ್ನು ಕೆಎಸ್ಸಾರ್ಟಿಸಿ ಬಸ್ಸಿನಲ್ಲೇ ಸಾಗಿಸಿದ್ದಾರೆಂದು ನಾನು ಭಾವಿಸಿದ್ದೇನೆ.

ನಮಗೆ ಸ್ವಾತಂತ್ರ್ಯ ಬಂದು 62 ವರ್ಷಗಳಾಗಿವೆ. ಈಗಲೂ ಬಡವರಿಗೆ ನೆರವಾಗದ ಇಂಥ ನಿಯಮಗಳು ಇವೆ ಎಂಬುದೇ ದುರಂತ. ಮತ ಚಲಾಯಿಸುವಾಗ ಬೇಕಾಗುವ ಬಡವರು, ಬದುಕಿನಂತೆಯೇ ಸಾವಿನಲ್ಲೂ ಅನುಭವಿಸುವ ಯಾತನೆ ಬಣ್ಣಿಸಲು ಆಗದಂಥದ್ದು.

ಸೋಮವಾರ, ನವೆಂಬರ್ 5, 2018

ಬೆಲೆ ಸ್ಥಿರತೆ ನಿಧಿ (ಪಿಎಸ್ಎಫ್)

ಬೆಲೆ ಸ್ಥಿರತೆ ನಿಧಿ (ಪಿಎಸ್ಎಫ್)


 ಹಂಚಿಕೊಳ್ಳಿ 

ಆಯ್ದ ಸರಕುಗಳ ಬೆಲೆಗಳಲ್ಲಿ ತೀವ್ರ ಚಂಚಲತೆಯನ್ನು ಹೊಂದಿರುವ ಉದ್ದೇಶಕ್ಕಾಗಿ ಸ್ಥಾಪಿಸಲಾದ ಯಾವುದೇ ನಿಧಿಯನ್ನು ಬೆಲೆ ಸ್ಥಿರತೆ ನಿಧಿ (ಪಿಎಸ್ಎಫ್) ಉಲ್ಲೇಖಿಸುತ್ತದೆ. ಉದಾಹರಣೆಗೆ, ಹೆಚ್ಚಿನ ಉತ್ಪನ್ನಗಳು, ಉತ್ಪನ್ನಗಳ ಸಂಗ್ರಹಣೆ ಮತ್ತು ಅವಶ್ಯಕತೆ ಇದ್ದಾಗ ಮತ್ತು ಅಗತ್ಯವಿರುವ ವಿತರಣೆ, ಹೀಗೆ ಬೆಲೆಗಳು ವ್ಯಾಪ್ತಿಯಲ್ಲಿ ಉಳಿದಿವೆ ಎಂದು ಹೇಳಲು ಹೆಚ್ಚಿನ / ಕಡಿಮೆ ಬೆಲೆಗಳನ್ನು ತಗ್ಗಿಸಲು ಗುರಿಯನ್ನು ಹೊಂದಿರುವ ಚಟುವಟಿಕೆಗಳಿಗೆ ನಿಧಿಯಲ್ಲಿನ ಮೊತ್ತವನ್ನು ಸಾಮಾನ್ಯವಾಗಿ ಬಳಸಿಕೊಳ್ಳಲಾಗುತ್ತದೆ.

ಅನೇಕ ದೇಶಗಳು ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಸ್ಥಿರತೆಗಾಗಿ ವಿಶೇಷವಾಗಿ ಮೀಸಲು ಹಣವನ್ನು ಬಳಸುತ್ತವೆ, ವಿಶೇಷವಾಗಿ ಆಮದುದಾರರು. ಕೆಲವೊಂದು ದೇಶಗಳು ಇಂತಹ ಸರಕುಗಳನ್ನು ಕೇವಲ ಸರಕು ಬೆಲೆಗಳಷ್ಟೇ ಸ್ಥಿರವಾಗಿ ಬಳಸುತ್ತವೆ ಆದರೆ ವಿನಿಮಯ ದರ (ಬಾಹ್ಯ ಕರೆನ್ಸಿ ವಿಷಯದಲ್ಲಿ ವ್ಯಕ್ತಪಡಿಸಿದ ದೇಶೀಯ ಕರೆನ್ಸಿಯ ಬೆಲೆ ಮಾತ್ರವಲ್ಲದೇ), ಬೆಂಚ್ಮಾರ್ಕ್ ಷೇರು ಸೂಚ್ಯಂಕಗಳು ಮುಂತಾದ ವೈವಿಧ್ಯಮಯ ಪ್ರಮುಖ ಸ್ಥೂಲ ಆರ್ಥಿಕ ಚರಾಂಕಗಳು ಅಂತಹ ಹಣದ ವಿವರಗಳನ್ನು ದೇಶದಿಂದ ದೇಶಕ್ಕೆ ಬದಲಾಗುತ್ತದೆ.

2003 ರಲ್ಲಿ ಕೆಲವು ರಫ್ತು ಉದ್ದೇಶಿತ ತೋಟಗಾರಿಕಾ ಬೆಳೆಗಳಿಗೆ ಭಾರತ ಮೊದಲ ಬೆಲೆ ಸ್ಥಿರತೆ ನಿಧಿಯನ್ನು ಸೃಷ್ಟಿಸಿತು, ಮತ್ತು ಇದು 2013 ರಲ್ಲಿ ಅಸ್ತಿತ್ವದಲ್ಲಿತ್ತು. 2015 ರಲ್ಲಿ ಮತ್ತಷ್ಟು ನಾಶವಾಗುವ ಕೃಷಿ ಮತ್ತು ತೋಟಗಾರಿಕಾ ಸರಕುಗಳಿಗೆ ಮತ್ತೊಂದು ನಿಧಿಯನ್ನು ರೂಪಿಸಲಾಯಿತು, ಆದರೆ ಆರಂಭದಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿ ಬೆಲೆಗಳನ್ನು ಬೆಂಬಲಿಸಲು ಸೀಮಿತವಾಗಿತ್ತು.

ಪಿಎಸ್ಎಫ್ ಯಾಂತ್ರಿಕತೆಯು ಕೆಲವು ಕೃಷಿ ಸರಕುಗಳಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕನಿಷ್ಠ ಪ್ರಮಾಣದ ಬೆಲೆ (ಎಮ್ಎಸ್ಪಿ) ಆಧಾರಿತ ಉಪಕ್ರಮಗಳಿಂದ ದೂರವಿದೆ .ಎಮ್ಎಸ್ಪಿ ವ್ಯವಸ್ಥೆಗೆ ಕೆಲವು ಬೆಲೆಗಳು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿವೆ, ಆದರೆ ಇದು ಬೆಳೆಗಾರರು / ರೈತರ ದೃಷ್ಟಿಕೋನದಿಂದ ಮತ್ತು ಬೆಲೆಗಳು ಉತ್ಪಾದನೆಯ ವೆಚ್ಚಕ್ಕಿಂತ ಕಡಿಮೆಯಾದಾಗ ಆಪರೇಟಿವ್ ಆಗುತ್ತದೆ.ಇದರಿಂದಾಗಿ ಸರಕಾರವು MSP ಯಲ್ಲಿ ಸಂಗ್ರಹಿಸಿದ ಉತ್ಪಾದನೆಯನ್ನು ನಂತರ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಕೈಗೆಟುಕುವ ದರದಲ್ಲಿ ಹಂಚಲಾಗುತ್ತದೆ.

ಪಿಎಸ್ಎಫ್ಗೆ ಸಮಾನಾಂತರವಾದದ್ದು ಗ್ರಾಹಕರ ಫೆಡರೇಶನ್ಸ್ (ಸಾಮಾನ್ಯವಾಗಿ ಕನ್ಸ್ಯೂಮರ್ಫೆಡ್ಸ್ ಎಂದು ಕರೆಯಲಾಗುತ್ತದೆ) ಗ್ರಾಹಕ ಸರಕುಗಳ ವಿತರಣೆಯನ್ನು ಸಮಂಜಸವಾದ ಮತ್ತು ಕೈಗೆಟುಕುವ ದರದಲ್ಲಿ ಪೂರೈಸುತ್ತದೆ. ಗ್ರಾಹಕ ಸರಕುಗಳು, ಅಗತ್ಯ ಸರಕುಗಳು, ಔಷಧಿಗಳ ಇತ್ಯಾದಿಗಳನ್ನು (ಅವುಗಳ ಆಮದು ಅಗತ್ಯವಿದ್ದಲ್ಲಿ ಸೇರಿದಂತೆ), ಮತ್ತು ಸಂಯೋಜಿತ ಮತ್ತು / ಅಥವಾ ಇತರ ಸಹಕಾರಿ ಸಂಘಗಳಿಗೆ ಸರಬರಾಜು ಮಾಡುವುದು ಮತ್ತು ಅಂತಹ ಸರಕುಗಳ ಸರಿಯಾದ ಶೇಖರಣೆ, ಪ್ಯಾಕಿಂಗ್, ಶ್ರೇಯಾಂಕ ಮತ್ತು ಸಾಗಣೆಗಾಗಿ ವ್ಯವಸ್ಥೆಗೊಳಿಸುತ್ತದೆ. ಅಂತಹ ಸರಕುಗಳ ಬೆಲೆಗಳನ್ನು ಶಾಂತವಾಗಿಸುವಾಗ, ಈ ಘಟಕಗಳು ಚಿಲ್ಲರೆ / ಮಧ್ಯವರ್ತಿಗಳ ಶೋಷಣೆಯಿಂದ ಸಾರ್ವಜನಿಕರನ್ನು ಉಳಿಸುತ್ತವೆ ಮತ್ತು ಈ ಸರಕುಗಳ ಮಾರುಕಟ್ಟೆಯ ಬೆಲೆಯಲ್ಲಿ ಚಳವಳಿಯಿಲ್ಲದೆಯೇ ನಿರಂತರವಾಗಿ ವರ್ಷವಿಡೀ ಕಾರ್ಯನಿರ್ವಹಿಸುತ್ತವೆ. ಗ್ರಾಹಕರ ಉತ್ಪನ್ನಗಳ ಉತ್ಪಾದನೆಗಾಗಿ ಉತ್ಪಾದನೆ ಮತ್ತು ಸಂಸ್ಕರಣೆ ಘಟಕಗಳನ್ನು ಇತರ ಗ್ರಾಹಕ ಸಂಸ್ಥೆಗಳ ಸಹಯೋಗದೊಂದಿಗೆ ಅಥವಾ ನೇರವಾಗಿ ಸ್ವತಃ ಕೆಲವು ಗ್ರಾಹಕರು ಸ್ಥಾಪಿಸುತ್ತಾರೆ ಮತ್ತು ನಡೆಸುತ್ತಾರೆ.

ಎಂಎಸ್ಪಿ ಮತ್ತು ಗ್ರಾಹಕರ ಫೆಡ್ ಕಾರ್ಯಾಚರಣೆಗಳಿಗೆ ವ್ಯತಿರಿಕ್ತವಾಗಿ, ಪಿಎಸ್ಎಫ್ ಸಾಮಾನ್ಯವಾಗಿ ಬೆಲೆ ಚಳುವಳಿಯ ಎರಡೂ ದಿಕ್ಕುಗಳಲ್ಲಿಯೂ ಕಾರ್ಯಾಚರಿಸಬೇಕೆಂದು ಕಲ್ಪಿಸಲಾಗಿದೆ, ಬೆಲೆಗಳು ಕೆಲವು ಮಿತಿ ಮಟ್ಟವನ್ನು ದಾಟಲು ಕಾರಣವಾಗುತ್ತದೆ.

ಬೆಲೆ ಸ್ಥಿರತೆ ಫಂಡ್ 2015
ರಲ್ಲಿ ರೂ. ಕೃಷಿ ಉತ್ಪನ್ನಗಳಿಗೆ 500 ಕೋಟಿರೂಪಾಯಿಗಳನ್ನು ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಚಂಚಲತೆಯನ್ನು ತಗ್ಗಿಸುವ ದೃಷ್ಟಿಯಿಂದ 2014-15ರಲ್ಲಿ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಯಿತು .

ಅಂತೆಯೇ, ಮಾರ್ಚ್ 28, 2015 ರಂದು ಭಾರತ ಸರಕಾರ, ಒಂದು ಕೇಂದ್ರೀಯ ವಲಯ ಯೋಜನೆಯಾಗಿ 500 ಕೋಟಿ ರೂಪಾಯಿಗಳ ದೇಣಿಗೆಯೊಂದಿಗೆ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅನ್ನು ರಚಿಸುವುದನ್ನು ಅಂಗೀಕರಿಸಿದೆ , ಹಾನಿಕಾರಕ ಕೃಷಿ-ತೋಟಗಾರಿಕಾ ಸರಕುಗಳ ಬೆಲೆ ನಿಯಂತ್ರಣಕ್ಕೆ ಮಾರುಕಟ್ಟೆ ಮಧ್ಯಸ್ಥಿಕೆಗಳನ್ನು ಬೆಂಬಲಿಸಲು 2014-15 ರಿಂದ 2016-17 ರವರೆಗೆ. ಆರಂಭದಲ್ಲಿ ಈ ಹಣವನ್ನು ಈರುಳ್ಳಿ ಮತ್ತು ಆಲೂಗಡ್ಡೆಗೆ ಮಾತ್ರ ಮಾರುಕಟ್ಟೆ ಮಧ್ಯಸ್ಥಿಕೆಗಾಗಿ ಬಳಸಬೇಕೆಂದು ಪ್ರಸ್ತಾಪಿಸಲಾಯಿತು ಮತ್ತು ತರುವಾಯ ಬೇಳೆಕಾಳುಗಳನ್ನು ಸೇರಿಸಲಾಯಿತು. 

ಈ ಸರಕುಗಳ ಸಂಗ್ರಹಣೆಯನ್ನು ರೈತರು ಅಥವಾ ರೈತರ ಸಂಘಟನೆಗಳಿಂದ ನೇರವಾಗಿ ಫಾರ್ಮ್ ಗೇಟ್ /ಮಂಡ್ಯಲ್ಲಿ ಕೈಗೊಳ್ಳಲಾಗುವುದು ಮತ್ತು ಗ್ರಾಹಕರಿಗೆ ಹೆಚ್ಚು ಸಮಂಜಸವಾದ ಬೆಲೆಗೆ ಲಭ್ಯವಾಗುವಂತೆ ಮಾಡಲಾಗುವುದು. ಕಾರ್ಯಾಚರಣೆಗಳಲ್ಲಿ ಕೇಂದ್ರ ಮತ್ತು ಸಂಸ್ಥಾನಗಳ ನಡುವೆ ಹಂಚಿಕೆಯಾಗುವ ನಷ್ಟಗಳು ಸಂಭವಿಸಿದರೆ. ಆದ್ದರಿಂದ 2015 ರ ಪಿಎಸ್ಎಫ್ ಯೋಜನೆಯು ಗ್ರಾಹಕರ ಮೇಲೆ ಹೆಚ್ಚು ಕೇಂದ್ರೀಕರಿಸಿದೆ.

ಪಿಎಸ್ಎಫ್ ಯೋಜನೆಯು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿಗಳು) ಮತ್ತು ಕೇಂದ್ರೀಯ ಏಜೆನ್ಸಿಗಳಿಗೆ ಬಡ್ಡಿಯ ಉಚಿತ ಸಾಲವನ್ನು ಒದಗಿಸುವ ಮೂಲಕ ತಮ್ಮ ಕೆಲಸದ ಬಂಡವಾಳ ಮತ್ತು ಇತರ ಖರ್ಚುಗಳನ್ನು ಬೆಂಬಲಿಸಲು ಅವುಗಳು ಸರಕುಗಳ ಸಂಗ್ರಹಣೆ ಮತ್ತು ವಿತರಣಾ ಮಧ್ಯಸ್ಥಿಕೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನಿಧಿಗಳ ನೈಜ ಬಳಕೆಯು ಈ ಉದ್ದೇಶಗಳಿಗಾಗಿ ಅಂತಹ ಸಾಲಗಳನ್ನು ಪಡೆಯಲು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಸಮ್ಮತಿಯನ್ನು ಅವಲಂಬಿಸಿರುತ್ತದೆ. ಇದಲ್ಲದೆ, ಬೆಂಬಲವು ಅಗತ್ಯವಾದ ಸಮಯದ ನಿಜವಾದ ಪತ್ತೆ ಮತ್ತು ಬೆಲೆ ಬೆಂಬಲ ಕ್ರಮಗಳನ್ನು ನಿಯೋಜಿಸುವುದು ರಾಜ್ಯಗಳಿಗೆ ಬಿಡಲಾಗುತ್ತದೆ.

ಈ ಉದ್ದೇಶಕ್ಕಾಗಿ, ರಾಜ್ಯಗಳು ' ಸುತ್ತುತ್ತಿರುವ ನಿಧಿಯನ್ನು'(ಹಣಕಾಸಿನ ವರ್ಷ ಪರಿಗಣನೆಯಿಂದ ನಿರಂತರವಾಗಿ ಪುನರ್ಭರ್ತಿ ಮಾಡಲಾಗುವುದು ಮತ್ತು ಸೀಮಿತವಾಗಿಲ್ಲ)ಸ್ಥಾಪಿಸಬೇಕು ಮತ್ತು ಕೇಂದ್ರ ಮತ್ತು ರಾಜ್ಯವು ಸಮಾನವಾಗಿ (50:50) ಕೊಡುಗೆ ನೀಡುತ್ತದೆ. ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಕಾರ್ಪಸ್ಗೆ ಕೇಂದ್ರ-ಸಂಸ್ಥಾನದ ಕೊಡುಗೆಯ ಅನುಪಾತವು 75:25 ಆಗಿರುತ್ತದೆ.ಕೇಂದ್ರೀಯ ಏಜೆನ್ಸಿಗಳು ತಮ್ಮ ಸುತ್ತುತ್ತಿರುವ ನಿಧಿಯನ್ನು ಕೇಂದ್ರದಿಂದ ಮುಂಚಿತವಾಗಿ ಸಂಪೂರ್ಣವಾಗಿ ಹೊಂದಿಸುತ್ತದೆ.

ಪ್ರೈಸ್ ಸ್ಟೆಬಿಲೈಸೇಷನ್ ಫಂಡ್ ಮ್ಯಾನೇಜ್ಮೆಂಟ್ ಕಮಿಟಿಯಿಂದ (ಪಿಎಸ್ಎಫ್ಎಂಸಿ) ಕೇಂದ್ರೀಯವಾಗಿ ಬೆಲೆ ನಿಭಾಯಿಸುವ ನಿಧಿಯನ್ನು ನಿರ್ವಹಿಸಲಾಗುವುದು ಇದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಏಜೆನ್ಸಿಯ ಎಲ್ಲ ಪ್ರಸ್ತಾಪಗಳನ್ನು ಅನುಮೋದಿಸುತ್ತದೆ. ಖಾಸಗಿ ವ್ಯವಹಾರಗಳು ಮತ್ತು ಹೂಡಿಕೆ ಮತ್ತು ತಂತ್ರಜ್ಞಾನಕ್ಕೆಕೃಷಿಗಳನ್ನು ಜೋಡಿಸಲು ಕೃಷಿ ಸಚಿವಾಲಯವು ಉತ್ತೇಜಿಸುವ ಒಂದು ಸಮಾಜವಾದ ಸಣ್ಣ ರೈತರು ಕೃಷಿ ಉದ್ಯಮ ಒಕ್ಕೂಟದಿಂದ ಪಿಎಸ್ಎಫ್ ಒಂದು ಕೇಂದ್ರ ಕಾರ್ಪಸ್ ಫಂಡ್ ಆಗಿ ನಿರ್ವಹಿಸಲ್ಪಡುತ್ತದೆ . SFAC ಫಂಡ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರೀಯ ಕಾರ್ಪಸ್ನ ನಿಧಿಯನ್ನು ಎರಡು ಪ್ರವಾಹಗಳಲ್ಲಿ ಬಿಡುಗಡೆ ಮಾಡಲಾಗುವುದು, ರಾಜ್ಯ ಸರ್ಕಾರಗಳು / ಯು.ಟಿ.ಗಳಿಗೆ ಒಂದು ರಾಜ್ಯ ಮುಂಚಿತವಾಗಿ ಪ್ರಸ್ತಾವನೆ ಮತ್ತು ಕೇಂದ್ರ ಏಜೆನ್ಸಿಯ ಆಧಾರದ ಮೇಲೆ ಪ್ರತಿ ರಾಜ್ಯ / ಯು.ಟಿ. 2014-15ರಲ್ಲಿ ಕೇಂದ್ರ ಕಾರ್ಪಸ್ ಫಂಡ್ ಅನ್ನು ಈಗಾಗಲೇ ಎಸ್ಎಫ್ಎಸಿ ಸ್ಥಾಪಿಸಿದೆ. 

ಸ್ಟೇಟ್ / ಯುಟಿ ಯಿಂದ ಹೊಂದಾಣಿಕೆಯ ನಿಧಿಗಳೊಂದಿಗೆ ತಮ್ಮ ಮೊದಲ ಪ್ರಸ್ತಾಪವನ್ನು ಆಧರಿಸಿ ರಾಜ್ಯಗಳು / ಯು.ಟಿ.ಗಳಿಗೆ ಒಂದು ಸಮಯ ಮುಂಗಡವು ರಾಜ್ಯ / ಯುಟಿ ಮಟ್ಟದ ರಿವಾಲ್ವಿಂಗ್ ಫಂಡ್ ಅನ್ನು ರೂಪಿಸುತ್ತದೆ, ನಂತರ ಅವುಗಳನ್ನು ಎಲ್ಲಾ ಭವಿಷ್ಯದ ಮಾರುಕಟ್ಟೆ ಮಧ್ಯಸ್ಥಿಕೆಗಳು ಈರುಳ್ಳಿ ಬೆಲೆಗಳನ್ನು ನಿಯಂತ್ರಿಸಲು ಬಳಸಬಹುದು ಮತ್ತು ಈ ಉದ್ದೇಶಕ್ಕಾಗಿ ಸ್ಪಷ್ಟವಾಗಿ ಸ್ಥಾಪಿಸಲಾದ ರಾಜ್ಯ ಮಟ್ಟ ಸಮಿತಿಯ ಅನುಮೋದನೆಗಳ ಆಧಾರದ ಮೇಲೆ ಆಲೂಗಡ್ಡೆ.

ಸಂಸ್ಥಾನದ ಕಾರ್ಪಸ್ನಿಂದ ಬೆಂಬಲಿಸಲು ತಮ್ಮ ಪರವಾಗಿ ಅಂತಹ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಏಜೆನ್ಸಿಯನ್ನು ರಾಜ್ಯಗಳು ಕೋರಬಹುದು.ಹೆಚ್ಚುವರಿಯಾಗಿ, ಸಣ್ಣ ರೈತರು ಕೃಷಿ ಉದ್ಯಮ ಒಕ್ಕೂಟ (ಎಸ್ಎಫ್ಎಸಿ), ರಾಷ್ಟ್ರೀಯ ಕೃಷಿ ಸಹಕಾರ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಎಎಫ್ಇಡಿ) ಮುಂತಾದ ಕೇಂದ್ರೀಯ ಏಜೆನ್ಸಿಯನ್ನು ಕೇಂದ್ರ ಸರ್ಕಾರವು ವಿನಂತಿಸಬಹುದು . 

ರಾಜ್ಯಗಳಿಗೆ ನೀಡಲಾಗುವ ಮುಂಗಡ / ಸಾಲವನ್ನು ಮರಳಿ ಪಡೆಯಬಹುದಾದರೂ, 2017 ರ ಮಾರ್ಚ್ 31 ರಂದು ಮುಂಗಡವನ್ನು ವಜಾಗೊಳಿಸುವ ಸಮಯದಲ್ಲಿ ಕೇಂದ್ರ ಸರ್ಕಾರವು 50% ನಷ್ಟು ನಷ್ಟವನ್ನು (NE ರಾಜ್ಯಗಳಲ್ಲಿ 75%) ಹಂಚಿಕೊಳ್ಳುತ್ತದೆ. ಕೇಂದ್ರ ಸರ್ಕಾರ , ಹಾಗೆಯೇ, ಅದೇ ಅನುಪಾತದಲ್ಲಿ, ಲಾಭಗಳನ್ನು ಹಂಚಿಕೊಳ್ಳಲು ಸಹ ಉದ್ದೇಶಿಸಿದೆ.

ಕೃಷಿಯ ಸಚಿವಾಲಯ , ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್, ಕೋಆಪರೇಶನ್ & ಫೇಮರ್ಸ್ ವೆಲ್ಫೇರ್ (ಡಿಎಸಿ & ಎಫ್ಡಬ್ಲು) ಅಡಿಯಲ್ಲಿ ಬೆಲೆ ಸ್ಥಿರತೆ ನಿಧಿ (ಪಿಎಸ್ಎಫ್) ಸ್ಥಾಪಿಸಲಾಯಿತು ಪಿಎಸ್ಎಫ್ ಯೋಜನೆಯನ್ನು ಡಿಎಸಿ ಮತ್ತು ಎಫ್ಡಬ್ಲ್ಯೂನಿಂದ 2016 ರ ಏಪ್ರಿಲ್ 1 ರಂದು ಗ್ರಾಹಕ ವ್ಯವಹಾರಗಳ (ಡಿಒಸಿಎ) ಇಲಾಖೆಗೆ ವರ್ಗಾಯಿಸಲಾಯಿತು.

ಯೋಜನೆಯ ವಿವರವಾದ ಮಾರ್ಗಸೂಚಿಗಳನ್ನು ಇಲ್ಲಿಕಾಣಬಹುದು . 2017 ರ ಮಾರ್ಚ್ 28 ರ ಪತ್ರಿಕಾ ಪ್ರಕಟಣೆಯ ಪ್ರಕಾರ , ಪಿಎಸ್ಎಫ್ ಅಡಿಯಲ್ಲಿ ನಿಧಿಸಂಸ್ಥೆಯನ್ನು ಪ್ರಾಥಮಿಕವಾಗಿ 20 ಲಕ್ಷ ಟನ್ಗಳಷ್ಟು ಬೇಳೆಕಾಳುಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ. ಇದರ ಜೊತೆಗೆ, 17,747 ಟನ್ಗಳಷ್ಟು ಈರುಳ್ಳಿಯ ಬಫರ್ ರಚಿಸುವಂತಹ ಇತರ ಚಟುವಟಿಕೆಗಳು; ಆಮದು 5000 ಟನ್ ಮತ್ತು 2000 ಟನ್ಗಳಷ್ಟು ಈರುಳ್ಳಿ; NAFED ಮತ್ತು ಎಸ್ಎಫ್ಎಸಿ ಮೂಲಕ 6011 ಟನ್ಗಳಷ್ಟು ಈರುಳ್ಳಿ ಖರೀದಿ; ರಾಜ್ಯ ಮಟ್ಟದ ಪಿಎಸ್ಎಫ್ ಸ್ಥಾಪನೆಗೆ ಪಶ್ಚಿಮ ಬಂಗಾಳ (ರೂ 2.5 ಕೋಟಿ), ಆಂಧ್ರ ಪ್ರದೇಶ (ರೂ 25 ಕೋಟಿ) ಮತ್ತು ತೆಲಂಗಾಣ (ರೂ 9.15 ಕೋಟಿ) ರಾಜ್ಯಗಳಿಗೆ ಆರ್ಥಿಕ ನೆರವು; ಇತ್ಯಾದಿಗಳು ಸಹ ಕೈಗೊಂಡವು.

2003 ರ ಬೆಲೆ ಸ್ಥಿರೀಕರಣ ನಿಧಿ 2003
ರ ಜುಲೈ 24 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಸರಕುಗಳ ಮುಂದುವರಿದ ಕಡಿಮೆ ಬೆಲೆಗಳು ಕಾರಣದಿಂದಾಗಿ ಕಾಫಿ, ಚಹಾ, ರಬ್ಬರ್ ಮತ್ತು ತಂಬಾಕು ಮುಂತಾದ ತೋಟಗಾರಿಕೆ ಬೆಳೆಗಳಿಗೆ ಸರ್ಕಾರವು ಬೆಲೆ ಸ್ಥಿರತೆ ನಿಧಿ (ಪಿಎಸ್ಎಫ್) ಟ್ರಸ್ಟ್ ಸ್ಥಾಪಿಸಿತು. ಈ ಸರಕುಗಳ ಬೆಳೆಗಾರರ ​​ಹಿತಾಸಕ್ತಿಗಳು. ಏಪ್ರಿಲ್ 2003 ರಿಂದ ಮಾರ್ಚ್ 2013 ರವರೆಗೂ ಹತ್ತು ವರ್ಷಗಳ ಅವಧಿಯಲ್ಲಿ ಬೆಲೆ ಸ್ಥಿರತೆ ನಿಧಿ (ಪಿಎಸ್ಎಫ್) ಯೋಜನೆಯನ್ನು ಆರಂಭಿಸಲಾಯಿತು (ಆದರೂ ಟ್ರಸ್ಟ್ ಅನ್ನು ಜುಲೈ 2003 ರಲ್ಲಿ ಮಾತ್ರ ಸ್ಥಾಪಿಸಲಾಯಿತು). ವಿಸ್ತೃತ ಯೋಜನೆ ಅವಧಿಯು 30.09.2013 ರಂದು ಮುಗಿಯಿತು. ಈ ಯೋಜನೆಯುವಾಣಿಜ್ಯ ಸಚಿವಾಲಯದಿಂದ ನಿರ್ವಹಿಸಲ್ಪಟ್ಟಿದೆ .

ಪಿಎಸ್ಎಫ್ ವಾಣಿಜ್ಯ ಇಲಾಖೆಯ ಯೋಜನೆ 442 ಹೆಕ್ಟೇರ್ಗಳವರೆಗಿನ ಕಾರ್ಯಾಚರಣೆಯನ್ನು ಹೊಂದಿರುವ ಚಹಾ, ಕಾಫಿ, ನೈಸರ್ಗಿಕ ರಬ್ಬರ್ ಮತ್ತು ತಂಬಾಕಿನ ಒಟ್ಟು 3.42 ಲಕ್ಷ ಬೆಳೆಗಾರರನ್ನು ಒಳಗೊಳ್ಳುವ ಉದ್ದೇಶವನ್ನು ಹೊಂದಿತ್ತು. ಪಿಎಸ್ಎಫ್ ಉದ್ದೇಶವು ಈ ಸರಕುಗಳ ಬೆಲೆ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಾದಾಗ ಬೆಳೆಗಾರರಿಗೆ ಹಣಕಾಸಿನ ಪರಿಹಾರವನ್ನು ಒದಗಿಸುವುದು, ಆದರೆ ಸರ್ಕಾರಿ ಏಜೆನ್ಸಿಗಳಿಂದ ಸಂಗ್ರಹಣೆ ಪ್ರಕ್ರಿಯೆಗಳಿಗೆ ಆಶ್ರಯಿಸದೆ, ಸಾಮಾನ್ಯವಾಗಿ ಈ ಸಂದರ್ಭದಲ್ಲಿ.

2015 ರ ಪಿಎಸ್ಎಫ್ಗಿಂತ ಭಿನ್ನವಾಗಿ, ಈ ವರ್ಷವು ಸಾಮಾನ್ಯ / ಬೂಮ್ / ತೊಂದರೆಗೀಡಾದ ಅವಧಿಯೇ ಎಂಬುದರ ಮೇಲೆ ಅವಲಂಬಿಸಿ ಬೆಳೆಗಾರರು ಮತ್ತು ಸರ್ಕಾರದಿಂದ ನೀಡಿದ ಕೊಡುಗೆಗಳ ತತ್ವವನ್ನು ಆಧರಿಸಿದೆ.ತೊಂದರೆಗೊಳಗಾದ ಅವಧಿಗಳಲ್ಲಿ ಬೆಳೆಗಾರರಿಂದ ಹಣವನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನು ಮಾತ್ರ ಅನುಮತಿಸಲಾಗಿದೆ. ದೇಶೀಯ ಬೆಲೆಗೆ ಧಾರಣೆ ಸ್ಪೆಕ್ಟ್ರಮ್ ಬ್ಯಾಂಡ್ನ ಸಂಬಂಧದ ಆಧಾರದ ಮೇಲೆ ಒಂದು ವರ್ಷದ ವರ್ಗೀಕರಣವು ಬೂಮ್ / ಸಾಧಾರಣ / ತೊಂದರೆಯು ನಿರ್ಧರಿಸಲ್ಪಟ್ಟಿತು. ಈ ಉದ್ದೇಶಕ್ಕಾಗಿ, ಎಲ್ಲಾ ನಾಲ್ಕು ಸರಕುಗಳ ಏಕರೂಪದ ಬ್ಯಾಂಡ್ನ 40 ಶೇಕಡವನ್ನು +/- 20% ರಷ್ಟು ಏಳು ವರ್ಷಗಳಿಂದ ಅಂತರರಾಷ್ಟ್ರೀಯ ಬೆಲೆಯ ಸರಾಸರಿ ಚಲಿಸುವ ಬೆಲೆಯ ಸ್ಪೆಕ್ಟ್ರಮ್ ಬ್ಯಾಂಡ್ ಅಳವಡಿಸಲಾಗಿದೆ. ಲೋವರ್ ಬ್ಯಾಂಡ್ (-) 20% ಮತ್ತು ಮೇಲ್ ಬ್ಯಾಂಡ್ ಸರಾಸರಿ ಏಳು ವರ್ಷಗಳ ಸರಾಸರಿಯ 20% ಆಗಿರುತ್ತದೆ.

ದೇಶೀಯ ಬೆಲೆ ಲೋವರ್ ಬ್ಯಾಂಡ್ ಮತ್ತು ಮೇಲ್ ಬ್ಯಾಂಡ್ನೊಳಗೆ ಇರುವಾಗ ಸಾಮಾನ್ಯ ವರ್ಷ. ಅಪ್ಪರ್ ಬ್ಯಾಂಡ್ಗಿಂತ ದೇಶೀಯ ಬೆಲೆ ಹೆಚ್ಚಾಗಿದ್ದರೆ ಒಂದು ಬೂಮ್ ವರ್ಷ. ಡಿಸ್ಟ್ರೆಸ್ ವರ್ಷವು ಸ್ಥಳೀಯ ಬೆಲೆ ಕಡಿಮೆ ಲೋವರ್ ಬ್ಯಾಂಡ್ಗಿಂತ ಕಡಿಮೆಯಾದಾಗ ವರ್ಷ ಸಂಭವಿಸುತ್ತದೆ.

ಈ ಯೋಜನೆಯಲ್ಲಿ, ಸರಾಸರಿ ವಾರ್ಷಿಕ ದೇಶೀಯ ಬೆಲೆ ಏಳು ವರ್ಷಗಳಲ್ಲಿ ಇಪ್ಪತ್ತು ಶೇಕಡಾಕ್ಕಿಂತ ಕಡಿಮೆಯಾದರೆ ಮಾತ್ರ ಅಂತಾರಾಷ್ಟ್ರೀಯ ದರದಲ್ಲಿ ಸರಾಸರಿ ಏರಿಕೆಯಾದರೆ ಮಾತ್ರ ರೈತರಿಗೆ 1000 ರೂ. ದರದಲ್ಲಿ ಆರ್ಥಿಕ ಸಹಾಯಕ್ಕಾಗಿ ಅರ್ಹರಾಗಿರುತ್ತಾರೆ. ಅಂದರೆ, ಡಿಸ್ಟ್ರೆಸ್ ಇಯರ್ ನಲ್ಲಿ, ಸರ್ಕಾರವು ಪ್ರತಿ 1000 / - ನ್ನು ಬೆಳೆಗಾರರಿಗೆ ಮತ್ತು ಠೇವಣಿದಾರರಿಗೆ ರೂ .1000 / - ವರೆಗೆ ಹಿಂಪಡೆಯಲು ಅನುಮತಿ ನೀಡಲಾಗುತ್ತದೆ. ಸಾಧಾರಣ ವರ್ಷದಲ್ಲಿ, ಆದಾಗ್ಯೂ, ಸರ್ಕಾರವು ಬೆಳೆಗಾರರಿಗೆ ರೂ .500 / - ಠೇವಣಿ ಮಾಡುತ್ತಾರೆ ಮತ್ತು ಪ್ರತಿ ಬೆಳೆಗಾರ ರೂ .500 / - ಠೇವಣಿ ಮಾಡುತ್ತಾರೆ. ಸಾಮಾನ್ಯ ವರ್ಷದಲ್ಲಿ ವಾಪಸಾತಿ ಇಲ್ಲ. ಬೂಮ್ ವರ್ಷದಲ್ಲಿ, ಬೆಳೆಗಾರನು ರೂ .1000 / - ನಿಲ್ಲುತ್ತಾನೆ ಮತ್ತು ಯಾವುದೇ ಹಿಂಪಡೆಯುವವರೆಗೆ ಯಾವುದೇ ಹಿಂಪಡೆಯುವಿಕೆಯನ್ನು ಅನುಮತಿಸಲಾಗುವುದಿಲ್ಲ.

ಆದ್ದರಿಂದ, ಯೋಜನೆಯು ಬೆಲೆ ಸ್ಥಿರತೆ ನಿಧಿ ಎಂದು ಹೆಸರಿಸಲ್ಪಟ್ಟಿದ್ದರೂ ಕೂಡ ಈ ಯೋಜನೆಯು ವಿಮಾ ರಕ್ಷಣೆಯಂತೆ ಕಾರ್ಯನಿರ್ವಹಿಸುತ್ತದೆ.

ಪಾಲಿಸಿದಾರರ ಮತ್ತು ಸರ್ಕಾರದ ಸಹಾಯಾರ್ಥವು ಈ ಯೋಜಿತ ಉದ್ದೇಶಕ್ಕಾಗಿ ಯಾವುದೇ ಗೊತ್ತುಪಡಿಸಿದ ಬ್ಯಾಂಕ್ನೊಂದಿಗೆ ತೆರೆಯಲಾದ ಸಹಭಾಗಿತ್ವದ ಬೆಳೆಗಾರರ ​​ಖಾತೆಗೆ ಮಾಡಲಾಗುವುದು. ಪಾಲ್ಗೊಳ್ಳುವವರ ಪಾಲುದಾರ / ಸರ್ಕಾರವು ಬೆಳೆಗಾರನ ಖಾತೆಯ ಕೊಡುಗೆ ಮತ್ತು ಅಲ್ಲಿಂದ ಹಿಂತೆಗೆದುಕೊಳ್ಳುವಿಕೆಯ ಕೊಡುಗೆ ನಿರ್ದಿಷ್ಟಪಡಿಸಿದ ಬೆಲೆಯ ಬ್ಯಾಂಡ್ಗೆ ಸಂಬಂಧಿಸಿರುತ್ತದೆ.ಟ್ರಸ್ಟ್ ಫಂಡ್ ಅನ್ನು ನಬಾರ್ಡ್ ನಿರ್ವಹಿಸುತ್ತಿದೆ ಮತ್ತು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಡಿಟ್ ಮಾಡಬೇಕಾಗಿದೆ.

ವಾಣಿಜ್ಯ ವೆಬ್ಸೈಟ್ ಸಚಿವಾಲಯದಲ್ಲಿ ಹೆಚ್ಚಿನ ವಿವರಗಳನ್ನು ಕಾಣಬಹುದು. ಈ ಬೆಲೆ ಸ್ಥಿರೀಕರಣ ಫಂಡ್ನ ಕಾರ್ಪಸ್ ಸರ್ಕಾರಿ ಮತ್ತು ಬೆಳೆಗಾರರಿಂದ ಪಡೆಯಲಾದ 435.55 ಕೋಟಿ ರೂ.ಗಳ ಒಂದು ಬಾರಿಯ ಕೊಡುಗೆಯಾಗಿದೆ (ಬೆಳೆಗಾರರು ನೀಡುವ ಕೊಡುಗೆ 2 ಕೋಟಿ ರೂ.ಗಳಿಗಿಂತಲೂ ಹೆಚ್ಚಿಲ್ಲ) ಮತ್ತು 31.03.2015 ರ ವೇಳೆಗೆ 1011.69 ಕೋಟಿ ರೂಪಾಯಿಗಳಷ್ಟಿತ್ತು. ನಿಧಿ ಆರಂಭವಾದಂದಿನಿಂದ ಮೇಲಿನ ಯೋಜನೆಗಳ ಒಟ್ಟು ಸಂಚಿತ ವೆಚ್ಚ ಕೇವಲ 1.53 ಕೋಟಿ ರೂ. ಕ್ಯಾಲೆಂಡರ್ ವರ್ಷದ 2010, 2011 ಮತ್ತು 2012 ರ ಅವಧಿಯಲ್ಲಿ ಎಲ್ಲಾ ಬೆಳೆಗಳು "ಬೂಮ್" ವರ್ಗಕ್ಕೆ ಒಳಪಟ್ಟಿವೆ. ಆದ್ದರಿಂದ, ಪಿಎಸ್ಎಫ್ ಯೋಜನೆಯಡಿ ನಿಜವಾದ ಉದ್ಧಾರವು ಕಡಿಮೆಯಾಗಿತ್ತು. ಪಿಎಸ್ಎಫ್ 2003 ಯೋಜನೆಯು ಕಡಿಮೆ ಹಣಕಾಸಿನ ನೆರವು ನೀಡಿತು, ಸಹಾಯಧನವನ್ನು ಭೂಸ್ಥಳಕ್ಕೆ ಜೋಡಿಸದೆ, ತೊಂದರೆಗಳನ್ನು ನಿರ್ಣಯಿಸಲು ಕಠಿಣ ಮಾನದಂಡಗಳು ಮತ್ತು ಸರಕು ಸೂಪರ್ ಚಕ್ರದ ಭಾಗವಾಗಿ ಅನುಷ್ಠಾನದ ಅವಧಿಯಲ್ಲಿ ಅಧಿಕ ಬೆಲೆಗಳನ್ನು ವಿಧಿಸುವಂತಹ ಹಲವಾರು ಕಾರಣಗಳಿಗಾಗಿ ಪಿಎಸ್ಎಫ್ 2003 ಯೋಜನೆಯು ಪರಿಣಾಮಕಾರಿಯಾಗಿದೆ.

ಉಲ್ಲೇಖಗಳು

ಹಲವಾರು ಪತ್ರಿಕಾ ಪ್ರಕಟಣೆಗಳ ಆಧಾರದ ಮೇಲೆ, ಸಂಸತ್ತಿನ ಪ್ರಶ್ನೆಗಳಿಗೆ ಪ್ರತ್ಯುತ್ತರ ಮತ್ತು ವಾಣಿಜ್ಯ ಸಚಿವಾಲಯದ ವಾರ್ಷಿಕ ವರದಿ

ಕೊಡುಗೆ

ಮಿಸ್ ರೋಸ್ಮೆರಿ ಅಬ್ರಹಾಂ, ಐಇಎಸ್ (2006)