ಗುರುವಾರ, ಫೆಬ್ರವರಿ 1, 2018

ಬಜೆಟ್ ಇತಿಹಾಸ

ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1 ರಂದು ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ದೇಶದಲ್ಲಿ ಜುಲೈ 1, 2017 ರಿಂದ GST(ಸರಕು ಮತ್ತು ಸೇವಾ ತೆರಿಗೆ) ಪರಿಚಯಿಸಿದ ನಂತರ ಇದು ಮೊದಲ ಬಜೆಟ್ ಆಗಿದೆ. ಅಂದ ಹಾಗೇ ಭಾರತದ ಬಜೆಟ್ ಗೆ ತನ್ನದೇ ಆದ ಇತಿಹಾಸ ಹಾಗೂ ಒಂದಿಷ್ಟು ಆಸಕ್ತಿಕರ ವಿಷಯಗಳನ್ನು ಹೊಂದಿದ್ದು ಅವುಗಳ ಬಗ್ಗೆ ಮಾಹಿತಿಗಳು ಇಲ್ಲಿವೆ.

* ಬಜೆಟ್ ಪದವನ್ನು ಲ್ಯಾಟಿನ್ "ಬೋಗೆಟ್" ನಿಂದ ಮಾಡಲಾಗಿದೆ, ಅಂದರೆ ಚರ್ಮದ ಚೀಲ

* ಮಧ್ಯಕಾಲೀನ ಕಾಲದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ವ್ಯಾಪಾರಿಗಳು ಹಣ ಉಳಿಸಿಕೊಳ್ಳಲು ಚರ್ಮದ ಚೀಲಗಳನ್ನು ಬಳಸಿದರು.

* 1860 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಬಜೆಟ್ ಅನ್ನು ಮೊದಲು ಪರಿಚಯಿಸಲಾಯಿತು, ಅಲ್ಲಿಗೆ ಭಾರತದ ಬಜೆಟ್ ಗೆ ಸರಿ ಸುಮಾರು 150 ವರ್ಷಕ್ಕಿಂತ ಹೆಚ್ಚು ಇತಿಹಾಸವಿದೆ.

* ಮುಂಗಡ ಪತ್ರವನ್ನು ಬ್ರೀಫ್ ಕೇಸ್​ನಲ್ಲಿ ಸಂಸತ್ತಿಗೆ ಕೊಂಡೊಯ್ಯುವ ಪದ್ಧತಿ ಆರಂಭವಾಗಿದ್ದು 1860ರಲ್ಲಿ, ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ. ಆ ಬ್ರೀಫ್ ಕೇಸ್​ಗೆ 'ಬಜೆಟ್ ಬಾಕ್ಸ್' ಎಂದು ಹೇಳುತ್ತಾರೆ.

* ಬಜೆಟ್ ದಾಖಲೆ ಪತ್ರಗಳನ್ನು ಮುದ್ರಣ ಮಾಡುವ ಪ್ರಕ್ರಿಯೆ ಬಜೆಟ್ ಆರಂಭವಾಗುವ 10ರಿಂದ 15 ದಿವಸಕ್ಕೂ ಮುನ್ನ ದಿಲ್ಲಿಯ ನಾರ್ಥ್ ಬ್ಲಾಕ್ನಲ್ಲಿ ಹಲ್ವಾ ಕಾರ್ಯಕ್ರಮ ನಡೆಯುತ್ತದೆ. ಬಜೆಟ್ ಪತ್ರದ ಗೋಪ್ಯತೆ ಕಾಯ್ದುಕೊಳ್ಳಲು ಹಣಕಾಸು ಸಚಿವಾಲಯದ ಪ್ರಮುಖ ಅಧಿಕಾರಿಗಳನ್ನು ಒಂದು ಕಡೆ ಇರಿಸಲಾಗುತ್ತದೆ. ಇಡೀ ಬಜೆಟ್ ಮಂಡನೆಯಾಗುವ ತನಕ ಅವರು ಅಲ್ಲಿಯೇ ಉಳಿಯುತ್ತಾರೆ. ಹಲ್ವಾ ತಯಾರಿಸಿ ಇಡೀ ಸಿಬ್ಬಂದಿ ವರ್ಗಕ್ಕೆ ವಿತರಿಸಲಾಗುವ ಸಂಪ್ರದಾಯ ದೀರ್ಘ ಕಾಲದಿಂದ ನಡೆದು ಬಂದಿದೆ.

* ಹಲ್ವಾ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿರುತ್ತಾರೆ.

*1947ರ ನವೆಂಬರ್‍ ನಲ್ಲಿ ಆರ್‍.ಕೆ ಶಣ್ಮುಗಂ ಜೆಟ್ಟಿ ಭಾರತದ ಮೊಟ್ಟ ಮೊದಲ ಬಜೆಟ್ ಮಂಡಿಸಿದ
ಕೀರ್ತಿಗೆ ಪಾತ್ರರಾಗಿದ್ದಾರೆ.

*ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್.ಬಿ.ಐ) ಆಗಿದ್ದ ಸಿ.ಡಿ ದೇಶ್ ಮುಖ್ ಹಣಕಾಸು ಸಚಿವರಾದ ಮೊದಲಿಗರು ಅಷ್ಟೆ ಅಲ್ಲ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಗೌರ್ವನರ್ ಕೂಡ.

*ಪ್ರಧಾನಿಯಾಗಿ ಹಣಕಾಸು ಮಂಡಿಸಿದ ಮೊದಲ ಪ್ರಧಾನಿ ಎನ್ನುವ ಹೆಸರಿಗೆ ಮಾಜಿ ಪ್ರಧಾನಿ ಜವಹರ್‍ ಲಾಲ್ ನೆಹರು ಅವರದ್ದು 1958-1959 ರಲ್ಲಿ ಅವರು ಹಣಕಾಸು ಖಾತೆಯನ್ನು ಹೊಂದಿದ್ದರು.

*ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಅಂದರೆ 10 ಬಾರಿ ಮುಂಗಡ ಪತ್ರವನ್ನು ಮಂಡಿಸಿರುವ ಹೆಗ್ಗಳಿಕಗೆ ಪಾತ್ರವಾಗಿದ್ದಾರೆ. ಅಷ್ಟು ಮಾತ್ರವಲ್ಲ ಹಣಕಾಸು ಸಚಿವರಾಗಿ ತಮ್ಮ ಎರಡು ಹುಟ್ಟು ಹಬ್ಬದ ದಿವಸ ಅಂದರೆ 1964 ಹಾಗೂ 1968ರಂದು ಮುಂಗಡ ಪತ್ರವನ್ನು ಮಂಡಿಸಿದ ಹಿರಿಮೆ ಅವರಿಗೆ ಇದೆ. ಅಂದ ಹಾಗೇ ಅವರ ಜನುಮ ದಿವಸ ಫೆ.29

*ರಾಜ್ಯ ಸಭೆ ಸದ್ಯಸರಾಗಿದ್ದುಕೊಂಡು ಬಜೆಟ್ ಮಂಡನೆ ಮಾಡಿದ ಕೀರ್ತಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಲ್ಲುತ್ತದೆ.

* ಮೊರಾರ್ಜಿ ದೇಸಾಯಿ ಸರ್ಕಾರದ ಪತನದ ಬಳಿಕ ಪ್ರಧಾನಿಯಾದ ಇಂದಿರಾ ಗಾಂಧಿ ವಿತ್ತ ಸಚಿವೆಯೂ ಆಗಿ ಬಜೆಟ್ ಮಂಡಿಸಿದ್ದರು. ಆನಂತರ ಮಹಿಳಾ ವಿತ್ತ ಸಚಿವರನ್ನು ಭಾರತ ಕಂಡಿಲ್ಲ.

* ಡಾ.ಮನಮೋಹನ್ ಸಿಂಗ್ ಮತ್ತು ಯಶವಂತ ಸಿನ್ಹಾ ಅವರು ಸತತ ಐದು ಬಾರಿ ಮುಂಗಡಪತ್ರ ಮಂಡಿಸಿದ ದಾಖಲೆ ಬರೆದಿದ್ದಾರೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕೂಡ ಈ ಬಾರಿ ಬಜೆಟ್ ಮಂಡಿಸಿ ಇದೇ ದಾಖಲೆಯನ್ನು ಸರಿಗಟ್ಟಲಿದ್ದಾರೆ.

* ಅಂದ ಹಾಗೇ 2000ನೇ ಇಸವಿ ತನಕವೂ ಫೆಬ್ರವರಿ ಕೊನೇ ದಿನ ಸಂಜೆ 5 ಗಂಟೆಗೆ ಬಜೆಟ್ ಆರಂಭವಾಗುತ್ತಿತ್ತು. ಬಜೆಟ್ ಮಂಡನೆ ಸಮಯವನ್ನು ಮೊದಲ ಬಾರಿಗೆ ಬದಲಾಗಿದ್ದು ನ್​ಡಿಎ ಸರ್ಕಾರ ಇದ್ದಾಗ. 2001ರಲ್ಲಿ ಎಅಂದು ವಿತ್ತ ಸಚಿವರಾಗಿದ್ದ ಯಶವಂತ ಸಿನ್ಹಾ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿದ್ದರು.

* ಕೇಂದ್ರ ಬಜೆಟ್ ಮಂಡನೆಗಿಂತ ಒಂದೆರಡು ದಿನ ಮೊದಲೇ ರೈಲ್ವೆ ಬಜೆಟ್ ಮಂಡನೆಯಾಗುವ ಪರಿಪಾಠ 2017ರ ತನಕವೂ 92 ವರ್ಷ ಕಾಲ ನಡೆದಿತ್ತು. ಕಳೆದ ವರ್ಷ ರೈಲ್ವೆ ಬಜೆಟನ್ನು ಕೇಂದ್ರ ಬಜೆಟ್ ಜತೆ ವಿಲೀನಗೊಳಿಸಿ ಒಂದೇ ಬಜೆಟ್ ಮಂಡಿಸಲಾಗಿತ್ತು. ಕೇಂದ್ರ ಸಚಿವ ಸುರೇಶ್ ಪ್ರಭು ರೈಲ್ವೆ ಸಚಿವರಾಗಿ ಕಾರ್ಯ ನಿವರ್ಹಣೆ ಮಾಡುತ್ತಿದ್ದ ವೇಳೆಯಲ್ಲಿ ರೈಲ್ವೆ ಬಜೆಟ್ ಕೊನೆಯದಾಗಿತ್ತು.

* ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಫೆ.1ರಂದು ಮಂಡಿಸಲಿರುವ ಬಜೆಟ್, ದೇಶದ ತೆರಿಗೆ ವ್ಯವಸ್ಥೆಯ ಆಮೂಲಾಗ್ರ ಪರಿಷ್ಕರಣೆ ನಂತರ ಮಂಡಿಸುವ ಮೊದಲ ಬಜೆಟ್ ಆಗಿದ್ದು, ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.

1 ಕಾಮೆಂಟ್‌:

  1. ಬಜೆಟ್ ಗೆ ಬಜೆಟ್ ಅಂತ ಯಾಕೆ ಕರೆಯುತ್ತಿದ್ದಾರೆ?
    ಯಾವಾಗಿನಿಂದ ಕರೆಯುತ್ತಿದ್ದಾರೆ?ಇದರ ಬಗ್ಗೆ ಸ್ವಲ್ಪ ವಿವರಣೆ ಕೊಡಿ

    ಪ್ರತ್ಯುತ್ತರಅಳಿಸಿ