ಮಂಗಳವಾರ, ಅಕ್ಟೋಬರ್ 15, 2019

*ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ದ್ವಿಶತಕ ವೈಭವ; ದಾಖಲೆಗಳು ಧೂಳೀಪಟ!*


*ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪುಣೆ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ಅನೇಕ ದಾಖಲೆಗಳನ್ನು ಪುಡಿಗಟ್ಟಿದ್ದು, ಈ ಸಂಬಂಧ ವಿವರಣೆಯನ್ನು ಕೊಡಲಾಗಿದೆ.*
 

*ಪುಣೆ: ಯಾವುದೇ ಪ್ರಕಾರದ ಕ್ರಿಕೆಟ್ ಆಗಿರಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಅಮೋಘ ದ್ವಿಶತಕ (254*) *ಸಾಧನೆ ಮಾಡುವ ಮೂಲಕ ಅನೇಕ ದಾಖಲೆಗಳನ್ನು ಧೂಳೀಪಟಗೈದಿದ್ದಾರೆ.
ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಬ್ಯಾಟ್‌ನಿಂದ ಸಿಡಿದ ಏಳನೇ ದ್ವಿಶತಕವಾಗಿದೆ. ಈ ಮೂಲಕ ಈ ದಾಖಲೆ ಬರೆದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ತಮ್ಮ 81 ಟೆಸ್ಟ್ ಪಂದ್ಯದ 138ನೇ ಇನ್ನಿಂಗ್ಸ್‌ನಲ್ಲಿ ಈ ಸ್ಮರಣೀಯ ಮೈಲುಗಲ್ಲನ್ನು ತಲುಪಿರುವುದು ಗಮನಾರ್ಹವೆನಿಸುತ್ತದೆ.*

*ಕಿಂಗ್ ಕೊಹ್ಲಿ ದ್ವಿಶತಕ:*

ಪ್ರಸ್ತುತ ಪಟ್ಟಿಯಲ್ಲಿ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ (6 ದ್ವಿಶತಕ) ದಾಖಲೆಯನ್ನು ಅಳಿಸಿ ಹಾಕಿರುವ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತದ ಸಾಧನೆಯನ್ನು ಮಾಡಿದ್ದಾರೆ. ಇಲ್ಲೂ ಸಚಿನ್ ತೆಂಡೂಲ್ಕರ್ (248*) ಸಾಧನೆಯನ್ನು ವಿರಾಟ್ ಮೀರಿ ನಿಂತಿದ್ದಾರೆ.

336 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 33 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 254 ರನ್ ಗಳಿಸಿ ಅಜೇಯರಾಗುಳಿದರು.
ವಿರಾಟ್ ಕೊಹ್ಲಿ ಹೊಡೆದುರಳಿಸಿದ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ:

ಏಳನೇ ದ್ವಿಶತಕ ಸಾಧನೆ:

ಪುಣೆಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕಿಂಗ್ ಕೊಹ್ಲಿ ಡಬಲ್ ಸೆಂಚುರಿ ಸಾಧನೆಯನ್ನು ಮೆರೆದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ:
ಸರ್ ಡಾನ್ ಬ್ರಾಡ್ಮನ್: 12, ಗರಿಷ್ಠ ಮೊತ್ತ: 334

ಕುಮಾರ ಸಂಗಕ್ಕರ: 11, ಗರಿಷ್ಠ ಮೊತ್ತ: 319
ಬ್ರ್ಯಾನ್ ಲಾರಾ: 9, ಗರಿಷ್ಠ ಮೊತ್ತ: 400*
ವಿರಾಟ್ ಕೊಹ್ಲಿ: 7, ಗರಿಷ್ಠ ಮೊತ್ತ: 243
ಮಹೇಲಾ ಜಯವರ್ಧನೆ: 7, ಗರಿಷ್ಠ ಮೊತ್ತ: 374
ವ್ಯಾಲಿ ಹಮ್ಮಂಡ್: 7, ಗರಿಷ್ಠ ಮೊತ್ತ: 336*
ಟೆಸ್ಟ್‌ನಲ್ಲಿ ಆರು ದ್ವಿಶತಕ ಬಾರಿಸಿದವರು: ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಮರ್ವಾನ್ ಅಟ್ಟಪಟ್ಟು, ಜಾವೇದ್ ಮಿಯಾಂದಾದ್ ಹಾಗೂ ಯೂನಿಸ್ ಖಾನ್
ಸಿಡಿಲಮರಿ ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ 7ನೇ ದ್ವಿಶತಕ ಸಾಧನೆ!

ವೈಯಕ್ತಿಕ ಗರಿಷ್ಠ ಮೊತ್ತ: 254*
ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಬ್ಯಾಟ್‌ನಿಂದ ಸಿಡಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 2017ರಲ್ಲಿ ಶ್ರೀಲಂಕಾ ವಿರುದ್ಧ 243 ರನ್ ಗಳಿಸಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದ್ದಾರೆ.
ಕಿಂಗ್ ಕೊಹ್ಲಿ ವೈಯಕ್ತಿಕ ಗರಿಷ್ಠ ಮೊತ್ತಗಳು:
247* ದ.ಆಫ್ರಿಕಾ ವಿರುದ್ಧ, ಪುಣೆ, 2019
243 ಶ್ರೀಲಂಕಾ ವಿರುದ್ಧ, ಹೊಸದಿಲ್ಲಿ, 2017
213, ಶ್ರೀಲಂಕಾ ವಿರುದ್ಧ, ನಾಗ್ಪುರ, 2017
211, ನ್ಯೂಜಿಲೆಂಡ್ ವಿರುದ್ಧ, ಇಂದೋರ್, 2016

ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತ:

ವೀರೇಂದ್ರ ಸೆಹ್ವಾಗ್: 319
ವೀರೇಂದ್ರ ಸೆಹ್ವಾಗ್: 309
ಕರುಣ್ ನಾಯರ್: 303*
ವೀರೇಂದ್ರ ಸೆಹ್ವಾಗ್: 293
ವಿವಿಎಸ್ ಲಕ್ಷ್ಣನ್: 281
ರಾಹುಲ್ ದ್ರಾವಿಡ್: 270
ವಿರಾಟ್ ಕೊಹ್ಲಿ: 254*
ವೀರೇಂದ್ರ ಸೆಹ್ವಾಗ್: 254
ಸಚಿನ್ ತೆಂಡೂಲ್ಕರ್: 248*
ವಿರಾಟ್ ಕೊಹ್ಲಿ: 243
ಸರ್ ಡಾನ್ ಬ್ರಾಡ್ಮನ್ ದಾಖಲೆಯನ್ನೇ ಅಳಿಸಿ ಹಾಕಿದ ಕಿಂಗ್ ಕೊಹ್ಲಿ
7000 ರನ್ ಮೈಲುಗಲ್ಲು:

ಟೆಸ್ಟ್ ಕ್ರಿಕೆಟ್‌ನಲ್ಲಿ 7000 ರನ್‌ಗಳ ಮೈಲುಗಲ್ಲನ್ನು ವಿರಾಟ್ ಕೊಹ್ಲಿ ತಲುಪಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಟೆಸ್ಟ್ ನಾಯಕರಾಗಿ ಅತಿ ಹೆಚ್ಚು ಬಾರಿ 150ಕ್ಕೂ ಹೆಚ್ಚು ರನ್ ಸಾಧನೆ:
ವಿರಾಟ್ ಕೊಹ್ಲಿ : 9
ಡಾನ್ ಬ್ರಾಡ್ಮನ್: 8
ಮೈಕಲ್ ಕ್ಲಾರ್ಕ್, ಮಹೇಲಾ ಜಯವರ್ಧನೆ, ಬ್ರ್ಯಾನ್ ಲಾರಾ, ಗ್ರೇಮ್ ಸ್ಮಿತ್: 7
ರಿಕಿ ಪಾಂಟಿಂಗ್, ಬಾಬ್ ಸಿಂಪ್ಸನ್, ಸ್ಟೀವ್ ವ್ಹಾ: 6
26ನೇ ಟೆಸ್ಟ್ ಶತಕ:
ಈ ಮೊದಲು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ದಾಖಲೆಯನ್ನು ಮುರಿದಿರುವ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ 26ನೇ ಶತಕ ಬಾರಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಗ್ಯಾರಿ ಸೋಬರ್ಸ್ ದಾಖಲೆಯನ್ನು ಸರಿಗಟ್ಟಿದ್ದರು.
ಭಾರತ ನಾಯಕನಾಗಿ 50ನೇ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಶತಕ ಬಾರಿಸಿದ ಕಿಂಗ್ ಕೊಹ್ಲಿ
ಅತಿ ವೇಗದಲ್ಲಿ 26 ಟೆಸ್ಟ್ ಶತಕಗಳ ಸಾಧನೆ (ಇನ್ನಿಂಗ್ಸ್):
ಡಾನ್ ಬ್ರಾಡ್ಮನ್: 69
ಸ್ಟೀವ್ ಸ್ಮಿತ್: 121
ಸಚಿನ್ ತೆಂಡೂಲ್ಕರ್: 136
ವಿರಾಟ್ ಕೊಹ್ಲಿ: 138*
ಸುನಿಲ್ ಗವಾಸ್ಕರ್: 144
ಮ್ಯಾಥ್ಯೂ ಹೇಡನ್: 145
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 69ನೇ ಶತಕ:
ಭಾರತ ಟೆಸ್ಟ್ ತಂಡದ ನಾಯಕನಾಗಿ 50ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಮರಣೀಯ ದಾಖಲೆಗಳನ್ನು ಬರೆದಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಸಂಖ್ಯೆಯನ್ನು 69ಕ್ಕೆ ಏರಿಸಿದ್ದಾರೆ.
ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು:
ಸಚಿನ್ ತೆಂಡೂಲ್ಕರ್: 51
ರಾಹುಲ್ ದ್ರಾವಿಡ್: 36
ಸುನಿಲ್ ಗವಾಸ್ಕರ್: 34
ವಿರಾಟ್ ಕೊಹ್ಲಿ: 26*
ಪಂಟರ್‌ ಪಾಂಟಿಂಗ್‌ ಶತಕಗಳ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ!
ಅತಿ ವೇಗದಲ್ಲಿ 7000 ರನ್ ದಾಖಲೆ (ಇನ್ನಿಂಗ್ಸ್):
131 ವ್ಯಾಲಿ ಹಮ್ಮಂಡ್
134 ವೀರೇಂದ್ರ ಸೆಹ್ವಾಗ್
136 ಸಚಿನ್ ತೆಂಡೂಲ್ಕರ್
138 ಗ್ಯಾರಿ ಸೋಬರ್ಸ್/ ಕುಮಾರ ಸಂಗಕ್ಕರ/ವಿರಾಟ್ ಕೊಹ್ಲಿ
139 ಮೊಹಮ್ಮದ್ ಯೂಸುಫ್

ಭಾರತದ ಪರ ಅತಿ ಹೆಚ್ಚು ದ್ವಿಶತಕಗಳು:
7 ವಿರಾಟ್ ಕೊಹ್ಲಿ
6 ಸಚಿನ್ ತೆಂಡೂಲ್ಕರ್/ ವೀರೇಂದ್ರ ಸೆಹ್ವಾಗ್
5 ರಾಹುಲ್ ದ್ರಾವಿಡ್
4 ಸುನಿಲ್ ಗವಾಸ್ಕರ್


ವಿರಾಟ್ ಕೊಹ್ಲಿ ದ್ವಿಶತಕಗಳು:
254*, ದ.ಆಫ್ರಿಕಾ ವಿರುದ್ಧ, ಪುಣೆ, 2019
243, ಶ್ರೀಲಂಕಾ ವಿರುದ್ಧ, ಹೊಸದಿಲ್ಲಿ, 2017/18
235, ಇಂಗ್ಲೆಂಡ್ ವಿರುದ್ಧ, ಮುಂಬೈ, 2016/17
213, ಶ್ರೀಲಂಕಾ ವಿರುದ್ಧ, ನಾಗ್ಪುರ, 2017/18
211, ನ್ಯೂಜಿಲೆಂಡ್ ವಿರುದ್ಧ, ಇಂಧೋರ್, 2016/17
204, ಬಾಂಗ್ಲಾದೇಶ ವಿರುದ್ಧ, ಹೈದರಾಬಾದ್, 2016/17
200, ವೆಸ್ಟ್‌ಇಂಡೀಸ್ ವಿರುದ್ಧ, ನಾರ್ತ್ ಸೌಂಡ್, 2016
ಸ್ಟೀವ್‌ ಸ್ಮಿತ್‌ಗೆ ಸಡ್ಡು ಹೊಡೆದ ವಿರಾಟ್‌ ಕೊಹ್ಲಿ!
ಆರು ದೇಶಗಳ ವಿರುದ್ಧ ದ್ವಿಶತಕ ಸಾಧನೆ:
ಕುಮಾರ ಸಂಗಕ್ಕರ ಹಾಗೂ ಯೂನಿಸ್ ಖಾನ್ ದಾಖಲೆಯನ್ನು ಸರಿಗಟ್ಟಿರುವ ವಿರಾಟ್ ಕೊಹ್ಲಿ ಆರು ದೇಶಗಳ ವಿರುದ್ಧ ದ್ವಿಶತಕ ಸಾಧನೆ ಮಾಡಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ದ್ವಿಶತಕವನ್ನು ಬಾರಿಸಿಲ್ಲ.
ತವರು ನೆಲದಲ್ಲಿ ವಿರಾಟ್ ಆಡಿದ ಎಲ್ಲ ಎದುರಾಳಿಗಳ ವಿರುದ್ಧ ಶತಕ ಸಾಧನೆ:
107 ಆಸ್ಟ್ರೇಲಿಯಾ ವಿರುದ್ಧ
204 ಬಾಂಗ್ಲಾದೇಶ ವಿರುದ್ಧ
235 ಇಂಗ್ಲೆಂಡ್ ವಿರುದ್ಧ
211 ನ್ಯೂಜಿಲೆಂಡ್ ವಿರುದ್ಧ
243 ಶ್ರೀಲಂಕಾ ವಿರುದ್ಧ
139 ವೆಸ್ಟ್‌ಇಂಡೀಸ್ ವಿರುದ್ಧ
254* ದಕ್ಷಿಣ ಆಫ್ರಿಕಾ ವಿರುದ್ಧ
ದಕ್ಷಿಣ ಆಫ್ರಿಕಾ ವಿರುದ್ಧ 1000 ರನ್ ಗಳಿಸಿದ ಭಾರತೀಯರು (ಇನ್ನಿಂಗ್ಸ್):
19 ವಿರಾಟ್ ಕೊಹ್ಲಿ
20 ವೀರೇಂದ್ರ ಸೆಹ್ವಾಗ್
29 ಸಚಿನ್ ತೆಂಡೂಲ್ಕರ್
30 ರಾಹುಲ್ ದ್ರಾವಿಡ್
ನಾಯಕನಾಗಿ 19ನೇ ಟೆಸ್ಟ್ ಶತಕ:
ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಕೊಹ್ಲಿ ಗಳಿಸಿದ 19ನೇ ಶತಕವಿದು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.
ನಾಯಕನಾಗಿ ಅತಿ ಹೆಚ್ಚು ದ್ವಿಶತಕ:
ಅದೇ ಹೊತ್ತಿಗೆ ವೆಸ್ಟ್‌ಇಂಡೀಸ್‌ನ ಬ್ರ್ಯಾನ್ ಲಾರಾ ದಾಖಲೆಯನ್ನು ಮುರಿದಿರುವ ವಿರಾಟ್ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ದ್ವಿಶತಕಗಳನ್ನು ಬಾರಿಸಿದ ಹಿರಿಮೆಗೆ ಪಾತ್ರವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ