ಮಂಗಳವಾರ, ಜುಲೈ 20, 2021

​ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಹೊಸ ಮೂರು ದೇಶಗಳು, ಮಂಗೋಲಿಯಾ, ತಜಿಕಿಸ್ತಾನ, ಸ್ವಿಡ್ಜರ್‌ಲೆಂಡ್.

NewsPoint

​ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಹೊಸ ಮೂರು ದೇಶಗಳು

Vartha Bharati
19th July, 2021 09:11 IST

ದುಬೈ: ಮಂಗೋಲಿಯಾ, ತಜಿಕಿಸ್ತಾನ ಮತ್ತು ಸ್ವಿಡ್ಜರ್‌ಲೆಂಡ್ ದೇಶಗಳನ್ನು ಹೊಸ ಸದಸ್ಯ ರಾಷ್ಟ್ರಗಳಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರವಿವಾರ ನಡೆದ 78ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಆಂಗೀಕರಿಸಿದೆ.

ಈ ವರ್ಚುವಲ್ ಸಭೆಯಲ್ಲಿ ಮಂಗೋಲಿಯಾ ಹಾಗೂ ತಜಿಕಿಸ್ತಾನವನ್ನು ಏಷ್ಯಾ ಪ್ರದೇಶದ 22 ಹಾಗೂ 23ನೇ ಸದಸ್ಯರಾಷ್ಟ್ರಗಳಾಗಿ ಸೇರಿಸಿಕೊಳ್ಳಲಾಯಿತು. ಅಂತೆಯೇ ಯೂರೋಪ್‌ನ 35ನೇ ಸದಸ್ಯ ದೇಶವಾಗಿ ಸ್ವಿಡ್ಜರ್‌ಲೆಂಡ್ ಸೇರ್ಪಡೆಯಾಗಿದೆ. ಇದೀಗ ಐಸಿಸಿ 94 ಸಹಸದಸ್ಯತ್ವ ಸೇರಿದಂತೆ 106 ಸದಸ್ಯದೇಶಗಳನ್ನು ಹೊಂದಿದಂತಾಗಿದೆ.

ಎಲ್ಲ ಮೂರು ಅರ್ಜಿದಾರ ದೇಶಗಳು ಮಹಿಳೆಯರು ಮತ್ತು ಯುವಜನತೆಯಲ್ಲಿ ಕ್ರಿಕೆಟ್ ಬೆಳೆಸಲು ಬದ್ಧತೆ ಹೊಂದಿದ್ದು, ಅವು ತಮ್ಮ ಸಾಮರ್ಥ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಐಸಿಸಿ ನೆರವಾಗಲಿದೆ ಎಂದು ಐಸಿಸಿ ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಲಿಯಂ ಗ್ಲೆನ್‌ವರ್ತ್ ಹೇಳಿದ್ದಾರೆ.

"ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಕ್ರಿಕೆಟ್ ಚಟುವಟಿಕೆಗಳು ವಿಕಾಸಗೊಳ್ಳುತ್ತಿದ್ದು, ಮಹತ್ವಾಕಾಂಕ್ಷಿ ಯೋಜನೆಗಳ ಜತೆ ಕ್ರಿಕೆಟ್ ಪ್ರಗತಿಯ ರೋಮಾಂಚಕ ಕಾಲಘಟ್ಟದಲ್ಲಿ ನಾವಿದ್ದೇವೆ. ಸದಸ್ಯ ದೇಶಗಳಲ್ಲಿ ಕೋವಿಡ್-19 ಪರಿಣಾಮದ ಅವಲೋಕನ ಹಾಗೂ ಈ ಕ್ರೀಡೆಯನ್ನು ಜಾಗತಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಸದಸ್ಯ ದೇಶಗಳ ಜತೆ ಪಾಲುದಾರಿಕೆ ಹೊಂದಲಿದ್ದೇವೆ ಎಂದು ಅವರು ಹೇಳಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ