ಸೋಮವಾರ, ಸೆಪ್ಟೆಂಬರ್ 4, 2023

ಅಪರೂಪದಲ್ಲಿ ಅಪರೂಪ | ಐದು ಸಿಶುಗಳಿಗೆ ಜನ್ಮ‌ ನೀಡಿದ ಮಹಿಳೆ : ಎನಿದು ಕ್ವಿಂಟುಪ್ಲೆಟ್ಸ್ ?

ರಾಂಚಿ: ಜಾರ್ಖಂಡ್‌ ರಾಜ್ಯದಲ್ಲಿ ಮಹಿಳೆಯೊಬ್ಬರು ಐದು ಶಿಶುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ. ಇಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ಪೆಬ್ರುವರಿ 23ರಂದು ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ. ತಾಯಿ ಹಾಗೂ ಶಿಶುಗಳು ಆರೋಗ್ಯವಾಗಿವೆ. ಆ ಐದು ಶಿಶುಗಳನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಏನಿದು ಕ್ವಿಂಟುಪ್ಲೆಟ್ಸ್?
  • ವೈದ್ಯಕೀಯ ಭಾಷೆಯಲ್ಲಿ ಒಂದೇ ಬಾರಿಗೆ ಜನಿಸಿದ ಐದು ಮಕ್ಕಳನ್ನು ಕ್ವಿಂಟುಪ್ಲೆಟ್ಸ್ (quintuplets) ಎಂದು ಕರೆಯಲಾಗುತ್ತದೆ

  • ಸಾಮಾನ್ಯವಾಗಿ ಐದೂವರೆ ಕೋಟಿ ಜನರಲ್ಲಿ ಒಂದು ಪ್ರಕರಣ​ ಮಾತ್ರ ಕ್ವಿಂಟುಪ್ಲೆಟ್ಸ್ ಆಗಿರುತ್ತದೆ.

  • ಬಹುತೇಕ ಕ್ವಿಂಟುಪ್ಲೆಟ್ಸ್ ಪ್ರಕರಣಗಳಲ್ಲಿ ಹೆಣ್ಣು ಮತ್ತು ಗಂಡು ಶಿಶುಗಳು ಇರುತ್ತವೆ.

  • ಕ್ವಿಂಟುಪ್ಲೆಟ್ಸ್ ಪ್ರಕರಣಗಳಲ್ಲಿ ಎಲ್ಲಾ ಶಿಶುಗಳು ಗಂಡಾಗಿರುವುದು ಅಥವಾ ಹೆಣ್ಣಾಗಿರುವುದು ತೀರ ಅಪರೂಪ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತವೆ.

ವೈದ್ಯಕೀಯ ಮಾಹಿತಿ ಪ್ರಕಾರ ಈ ವರ್ಷದ ಫೆಬ್ರುವರಿಯಲ್ಲಿ ಬ್ರಿಟನ್‌ನಲ್ಲಿ ಒಂದು ಕ್ವಿಂಟುಪ್ಲೆಟ್ಸ್ ಪ್ರಕರಣ ವರದಿಯಾಗಿದೆ. ಅದು ಬಿಟ್ಟರೆ ಈ ವರ್ಷದಲ್ಲಿ ಇದು ಎರಡನೇ ಪ್ರಕರಣ ಎಂದು ತಜ್ಞರು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ