ಭಾನುವಾರ, ಏಪ್ರಿಲ್ 2, 2017

ಆಧಾರ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡ ಸರಕಾರ

ಆಧಾರ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡ ಸರಕಾರ

ಚೆನ್ನೈ,ಮಾ.31: ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಮತ್ತು ನಿಮ್ಮ ಬ್ಯಾಂಕ್ ಖಾತೆಗಳು, ಇತರ ಸೂಕ್ಷ್ಮ ಮಾಹಿತಿಗಳು ಅದರೊಂದಿಗೆ ಜೋಡಣೆಗೊಂಡಿದ್ದರೆ ನಿಮ್ಮ ದತ್ತಾಂಶಗಳು ಸೋರಿಕೆಯಾಗುವ ಸಾಧ್ಯತೆಗಳಿವೆ.

ಆಧಾರ್ ಮಾಹಿತಿಗಳು ಸೋರಿಕೆಯಾಗುತ್ತಿವೆ ಎನ್ನುವುದನ್ನು ಮೋದಿ ಸರಕಾರವು ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.

ಆಧಾರ ಮಾಹಿತಿಗಳ ಸೂಕ್ಷತೆಯ ಕುರಿತು ಎಲ್ಲ ಎಚ್ಚರಿಕೆಗಳು ಮತ್ತು ಟೀಕೆಗಳನ್ನು ತೀರ ಇತ್ತೀಚಿನವರೆಗೂ ಕಡೆಗಣಿಸುತ್ತಲೇ ಬಂದಿದ್ದ ಸರಕಾರವು ಹಲವಾರು ಸೇವೆಗಳಿಗೆ ಆಧಾರ ಅಳವಡಿಕೆಗೆ ಒತ್ತು ನೀಡುತ್ತಲೇ ಇತ್ತು.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬರೆದಿರುವ ಪತ್ರವೊಂದು ಪ್ರಮುಖ ಆಂಗ್ಲ ದೈನಿಕಕ್ಕೆ ಲಭ್ಯವಾಗಿದ್ದು, ಸರಕಾರವು ತುಂಬ ಎಚ್ಚರಿಕೆಯಿಂದ ಕಾಯುತ್ತಿರುವ ಆಧಾರ ದತ್ತಾಂಶಗಳು ಸೋರಿಕೆಯಾಗಿರುವುದನ್ನು ಈ ಪತ್ರವು ದೃಢಪಡಿಸಿದೆ.

ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಾಗಿರುವ ವಿಜ್ಞಾನಿ ಅರ್ಚನಾ ದುರೇಜಾ ಅವರು ಮಾ.25ರಂದು ಬರೆದಿರುವ ಈ ಪತ್ರದಲ್ಲಿ ದತ್ತಾಂಶ ಸೋರಿಕೆಯು ಗಂಭೀರ ಮತ್ತು ದಂಡನೀಯ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿಗಳೊಂದಿಗೆ ಆಧಾರ್ ಸಂಖ್ಯೆಯಂತಹ ಮಾಹಿತಿಯನ್ನು ಬಹಿರಂಗಗೊಳಿಸುವದು ಆಧಾರ್ ಕಾಯ್ದೆ, 2016ರ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇದಕ್ಕಾಗಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇಂತಹ ತಪ್ಪೆಸಗುವವರು ಸಂತ್ರಸ್ತ ವ್ಯಕ್ತಿಗಳಿಗೆ ಪರಿಹಾರದ ರೂಪದಲ್ಲಿ ನಷ್ಟಗಳನ್ನು ಪಾವತಿಸಲು ಬಾಧ್ಯರಾಗಿರುತ್ತರೆ ಎಂದು ಹೇಳಿರುವ ದುರೇಜಾ, ಇಂತಹ ಯಾವುದೇ ವಿಷಯವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸಚಿವಾಲಯಗಳು ಮತ್ತು ರಾಜ್ಯಗಳಿಗೆ ಪತ್ರದ ಮೂಲಕ ನಿರ್ದೇಶ ನಿಡಿದ್ದಾರೆ.

ವ್ಯಂಗ್ಯವೆಂದರೆ ಇದೇ ಸಚಿವಾಲಯವು ಮಾ.5ರಂದು ಹೇಳಿಕೆಯೊಂದನು ಹೊರಡಿಸಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ)ದ ಬಳಿಯಿರುವ ವ್ಯಕ್ತಿಗಳ ಖಾಸಗಿ ಮಾಹಿತಿಗಳು ಸಂಪೂರ್ಣ ಸುರಕ್ಷಿತ ಮತ್ತು ಸುಭದ್ರವಾಗಿವೆ ಎಂದು ಭರವಸೆ ನೀಡಿತ್ತು. ಆಧಾರ್ ಮಾಹಿತಿ ಸೋರಿಕೆ, ಬಯೊಮೆಟ್ರಿಕ್ಸ್‌ನ ದುರುಪಯೋಗ, ಖಾಸಗಿತನದ ಉಲ್ಲಂಘನೆ ಮತ್ತು ಸಮಾನಾಂತರ ದತ್ತಾಂಶ ಸಂಚಯ ಸೃಷ್ಟಿಯನ್ನು ಆರೋಪಿಸಿದ್ದ ‘‘ಕೆಲವು ಮಾಧ್ಯಮ ವರದಿಗಳಲ್ಲಿನ ಸುಳ್ಳುಮಾಹಿತಿಗಳ ’’ಕುರಿತಂತೆ ಸ್ಪಷ್ಟನೆಯನ್ನು ನೀಡಿದ್ದ ಯುಐಡಿಎಐ, ಎಲ್ಲ ವರದಿಗಳನ್ನು ತಾನು ಪರಿಶೀಲಿಸಿದ್ದೇನೆ ಮತ್ತು ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಒತ್ತಿ ಹೇಳಿತ್ತು.

ಇಂತಹ ದತ್ತಾಂಶ ಸೋರಿಕೆ ಸಂದರ್ಭದಲ್ಲಿ ಅದನ್ನು ನಿರ್ವಹಿಸಲು ಸರಕಾರದ ಸನ್ನದ್ಧತೆಗೆ ಸಂಬಂಧಿಸಿದಂತೆ ಮಾಜಿ ವಿತ್ತಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಬುಧವಾರ ಸಂಸತ್ತಿನಲ್ಲಿ ಪ್ರಶ್ನೆಗಳನ್ನೆತ್ತಿದ್ದರು.

ಬ್ಯಾಂಕ್ ಮತ್ತು ಇತರ ವಹಿವಾಟುಗಳು ಆಧಾರ್‌ನೊಂದಿಗೆ ಜೋಡಣೆಗೊಂಡ ನಂತರ ವ್ಯಕ್ತಿಗಳ ಖಾಸಗಿತನವನ್ನು ರಕ್ಷಿಸುವ ಬಗ್ಗೆ ನಿಮ್ಮ ಸಿದ್ಧತೆಗಳೇನು ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದರು.
ಇತ್ತೀಚಿಗಷ್ಟೇ ಕ್ರಿಕೆಟಿಗ ಎಂ.ಎಸ್.ಧೋನಿಯವರ ಪತ್ನಿ ಸಾಕ್ಷಿ ತನ್ನ ಪತಿಯ ಆಧಾರ ಮಾಹಿತಿಗಳು ಬಹಿರಂಗಗೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದರು.
ಧೋನಿಯವರ ಆಧಾರ್ ಸಂಖ್ಯೆಯನ್ನು ಸೃಷ್ಟಿಸಿದ್ದ ಏಜನ್ಸಿಯನ್ನು 10 ವರ್ಷಗಳ ಅವಧಿಗೆ ಕಪ್ಪುಪಟಿಗೆ ಸೇರಿಸಿರುವುದಾಗಿ ಹೇಳಿದ್ದ ಸರಕಾರವು, ಇದೊಂದು ಬಿಡಿ ಘಟನೆಯಷ್ಟೇ ಎಂದು ಸಮಜಾಯಿಷಿ ನೀಡಿತ್ತು. ಆದರೆ ದುರೇಜಾರ ಪತ್ರವು ಸೋರಿಕೆ ವ್ಯಾಪಕವಾಗಿರಬಹುದು ಎನ್ನುವುದನ್ನು ಸ್ಪಷ್ಟಪಡಿಸಿದೆ.

ಭಾರತಕ್ಕೂ ವಾಟರ್ ವ್ಹೀಲ್ : ಬಂದಿದೆ ನೋಡಿ ನೀರಿನ ಬಂಡಿ

ಭಾರತಕ್ಕೂ ವಾಟರ್‌ ವ್ಹೀಲ್: ಬಂದಿದೆ ನೋಡಿ ನೀರಿನ ಬಂಡಿ

ಮುಂಬೈ: ನೀರು ತುಂಬಿದ ಕೊಡಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವುದಕ್ಕೆ ಬದಲಾಗಿ, ಬಂಡಿಯಂತೆ ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗುವಂತಹ ಕ್ಯಾನ್‌ಗಳನ್ನು ವೆಲ್ಲೊ ವಾಟರ್‌ ಎಂಬ ಜಾಗತಿಕ ಸ್ವಯಂಸೇವಾ ಸಂಸ್ಥೆ ಭಾರತಕ್ಕೆ ಪರಿಚಯಿಸಿದೆ.

ಭಾರತದ್ದೇ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಈಗಾಗಲೇ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಹಲವು ಹಳ್ಳಿಗಳಲ್ಲಿ ಈ ನೀರಿನ ಬಂಡಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಭಾರತದಲ್ಲಿ ಈ ಕ್ಯಾನ್‌ ತಯಾರಿಕೆಗೆ ನೀಲ್‌ಕಮಲ್ ಕಂಪೆನಿ ಜತೆ ವೆಲ್ಲೊ ಒಪ್ಪಂದ ಮಾಡಿಕೊಂಡಿದೆ.

‘ಇಲ್ಲಿ ತಯಾರಾದ ಇಂತಹ ಒಂದು ಕ್ಯಾನ್‌ಗೆ ₹2,500 ಬೆಲೆ ನಿಗದಿ ಮಾಡಲಾಗಿದೆ. ಭಾರಿ ಸಂಖ್ಯೆಯಲ್ಲಿ ಖರೀದಿಸಿದರೆ ₹ 1,900ಕ್ಕೆ ಒಂದು ಕ್ಯಾನ್ ಅನ್ನು ಒದಗಿಸಬಹುದು. ಆದರೆ, ಇದನ್ನು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಮೂಲಕ ಈ ಕ್ಯಾನ್‌ಗಳನ್ನು ವಿತರಿಸಲು ವೆಲ್ಲೊ ಯೋಜನೆ ರೂಪಿಸಿದೆ’ ಎಂದು ನೀಲ್‌ಕಮಲ್ ಹೇಳಿದೆ.

**

ಅನುಕೂಲಗಳು

* ಹೆಚ್ಚು ಶ್ರಮವಿಲ್ಲದೆ, ಹೆಚ್ಚು ನೀರನ್ನು ಸಾಗಿಸಬಹುದು

* ತಲೆ ಮೇಲೆ ಕೊಡ/ಬಿಂದಿಗೆ ಹೊತ್ತು ನಡೆಯುವುದು ತಪ್ಪುತ್ತದೆ. ಕೊಡ ಹೊತ್ತು ಸಾಗುತ್ತಿದ್ದುರಿಂದ ಬರುತ್ತಿದ್ದ ತಲೆ ನೋವು, ಬೆನ್ನು ನೋವು ಬರುವುದು ತಪ್ಪುತ್ತದೆ.

* ಸಣ್ಣ ಮಕ್ಕಳೂ ಸುಲಭವಾಗಿ ನೀರು ಸಾಗಿಸಬಹುದು

*

‘ನಮ್ಮ ಸಂಸ್ಥೆಯ ಸಂಸ್ಥಾಪಕಿ ಸಿಂಥಿಯಾ ಕೋನಿಂಗ್ ಅವರು ಲ್ಯಾಟಿನ್ ಅಮೆರಿಕದ ದೇಶಗಳ ಕುಗ್ರಾಮಗಳಲ್ಲಿ ಸಂಶೋಧನೆಗಾಗಿ ನೆಲೆಸಿದ್ದಾಗ, ಪ್ರತಿ ದಿನ ನೀರನ್ನು ಹೊತ್ತು ತರಬೇಕಿತ್ತು. ಆ ಕುಗ್ರಾಮಗಳ ಮಹಿಳೆಯರ ದಿನನಿತ್ಯದ ಕೆಲಸವಾಗಿದ್ದ ಇದನ್ನು, ಸುಲಭವಾಗಿಸುವ ನಿಟ್ಟಿನಲ್ಲಿ ‘ವಾಟರ್‌ ವ್ಹೀಲ್’ ಅರ್ಥಾತ್ ನೀರಿನ ಬಂಡಿಯ ಬಗ್ಗೆ ಯೋಚಿಸಿದರು. ನಂತರ ಸಂಸ್ಥೆಯ  ತಂತ್ರಜ್ಞರು, ವಿವಿಧ ಪ್ಲಾಸ್ಟಿಕ್‌ ಕಂಪೆನಿಗಳ ಸಹಯೋಗದಲ್ಲಿ ಈ ಬಂಡಿಯನ್ನು ಅಭಿವೃದ್ಧಿಪಡಿಸಿದರು’ ಎಂದು ವೆಲ್ಲೊ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ.

ದಕ್ಷಿಣ ಕೋರಿಯಾದ ಮೊದಲ ಅಧ್ಯಕ್ಷೆ "ಪಾರ್ಕ್ ಜಿಯುನ್" ಈಗ ಕೈದಿ

ಮೊದಲ ಅಧ್ಯಕ್ಷೆ, ಈಗ ಕೈದಿ

ಸೋಲ್‌: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪಾರ್ಕ್‌ ಜಿಯುನ್‌ ಹೈ, ಈಗ ಕೈದಿ ಸಂಖ್ಯೆ ಸಂಖ್ಯೆ 503.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪಾರ್ಕ್‌, ನ್ಯಾಯಾಲಯದ ವಿಚಾರಣೆ ನಂತರ ಕಾರಾಗೃಹದಲ್ಲಿ ತಮ್ಮ ಮೊದಲ ರಾತ್ರಿಯನ್ನು ಏಕಾಂಗಿಯಾಗಿ ಕಳೆದರು.

ಪಾರ್ಕ್‌ ಅವರ ಭಾವಚಿತ್ರವನ್ನು ತೆಗೆದುಕೊಂಡ ನಂತರ ಅವರಿಗೆ ಕೈದಿಗಳಿಗೆ ನೀಡುವಂತಹ ಪ್ರಸಾಧನ ಸಾಮಾಗ್ರಿ, ತಟ್ಟೆ ಹಾಗೂ ಹಾಸಿಗೆ ಇರುವ ಕಿಟ್‌ ನೀಡಲಾಯಿತು.

ಜೈಲಿನ ಪ್ರಕ್ರಿಯೆ ಮುಗಿದ ನಂತರ ಪಾರ್ಕ್‌ ಅವರಿಗೆ 10.6 ಚದರ ಮೀಟರ್‌ ಇರುವ ಪ್ರತ್ಯೇಕ ಜೈಲಿನ ಕೊಠಡಿಯನ್ನು ನೀಡಲಾಗಿದ್ದು, ಇದು ಜೈಲಿನ ಇತರೆ ಕೊಠಡಿಗಳಿಗಿಂತ ದೊಡ್ಡದಾಗಿದೆ.

ಜೈಲಿನ ಅಧಿಕಾರಿಗಳು ಅವರ ಕೊಠಡಿ ತೋರಿಸುತ್ತಿದ್ದಂತೆಯೇ ಪಾರ್ಕ್‌ ಅವರು ಬಿಕ್ಕಿಬಿಕ್ಕಿ ಅತ್ತರು ಎಂದು ಮೂಲಗಳು ತಿಳಿಸಿವೆ

ಎಂಟು ಒಪ್ಪಂದಕ್ಕೆ ಭಾರತ - ಮಲೇಷ್ಯಾ ಸಹಿ

ಎಂಟು ಒಪ್ಪಂದಕ್ಕೆ ಭಾರತ - ಮಲೇಷ್ಯಾ ಸಹಿ

ನವದೆಹಲಿ: ಭಾರತದಲ್ಲಿನ ಮದರಸಾಗಳ ಆಧುನೀಕರಣಕ್ಕೆ ನೆರವು ನೀಡಲು ಮಲೇಷ್ಯಾ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲೇಷ್ಯಾ ಪ್ರಧಾನಿ ಮೊಹಮ್ಮದ್ ನಜೀಬ್ ರಜಾಕ್ ಅವರ ಮಧ್ಯೆ ನಡೆದ ಮಾತುಕತೆ ವೇಳೆ ಎರಡೂ ದೇಶಗಳು ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿವೆ.

ಮಲೇಷ್ಯಾದಲ್ಲಿ ಮದರಸಾಗಳನ್ನು ಸರ್ಕಾರದ ವತಿಯಿಂದ ಹೇಗೆ ನಿರ್ವಹಿಸಲಾಗುತ್ತಿದೆ ಎಂಬ ವಿವರಗಳು ಇರುವ ಪುಸ್ತಕವನ್ನು ರಜಾಕ್ ಅವರು ಮೋದಿ ಅವರಿಗೆ ನೀಡಿದರು.

‘ಮುಸ್ಲಿಂ ಯುವಕರು ಉಗ್ರವಾದ ಮತ್ತು ಧಾರ್ಮಿಕ ಮೂಲಭೂತವಾದ ಕಡೆ ವಾಲುವುದನ್ನು ತಡೆಯುವ ಸಲುವಾಗಿ ಮದರಸಾಗಳ ಪಠ್ಯಕ್ರಮಗಳಲ್ಲಿ  ಬದಲಾವಣೆ ತರಲು ಸರ್ಕಾರ ಉದ್ದೇಶಿಸಿದೆ’ ಎಂದು ಮೂಲಗಳು  ಶುಕ್ರವಾರ ಹೇಳಿದ್ದವು.

ಇದರ ಜತೆಯಲ್ಲೇ ಎರಡೂ ರಾಷ್ಟ್ರಗಳು ಇನ್ನೂ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ.
‘ತಮಿಳು ಚಿತ್ರಗಳ ಅಭಿಮಾನಿ’ : ಮಲೇಷ್ಯಾ ಪ್ರಧಾನಿ ಮೊಹಮ್ಮದ್‌ ನಜೀದ್ ರಜಾಕ್‌ ಅವರು, ತಾವು ತಮಿಳು ಚಿತ್ರಗಳ ಅಭಿಮಾನಿ ಎಂದು ಘೋಷಿಸಿಕೊಂಡಿದ್ದಾರೆ.

‘ಚೆನ್ನೈಗೆ ಭೇಟಿ ನೀಡಿದ ನಂತರ ನಾನು ತಮಿಳು ಚಿತ್ರಗಳ ಹೊಸ ಅಭಿಮಾನಿ’ ಎಂದು ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಆರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿರುವ ರಜಾಕ್‌ ಅವರ ಗುರುವಾರ ಚೆನ್ನೈಗೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಅವರು ಪತ್ನಿಯೊಂದಿಗೆ ಖ್ಯಾತ ನಟ ರಜನೀಕಾಂತ್‌ ಅವರನ್ನು ಭೇಟಿ ಮಾಡಿದ್ದರು.

ಜಂಟಿ ಘೋಷಣೆ

‘ಭಯೋತ್ಪಾದನೆ ವಿರುದ್ಧದ ಹೋರಾಟ ಎಂಬುದು ಕೇವಲ ಉಗ್ರರ ಹತ್ಯೆ, ಉಗ್ರ ಸಂಘಟನೆಗಳು ಮತ್ತು ಜಾಲವನ್ನು ನಿರ್ಮೂಲನೆ ಮಾಡುವುದಕ್ಕೆ ಸೀಮಿತವಲ್ಲ. ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರಗಳನ್ನು ಗುರುತಿಸಿ, ಅವುಗಳನ್ನು ಹೊಣೆಗಾರರನ್ನಾಗಿ ಮಾಡುವುದೂ ಈ ಹೋರಾಟದ ಪ್ರಮುಖ ಭಾಗ’ ಎಂದು ಮೋದಿ ಮತ್ತು ರಜಾಕ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಒಪ್ಪಂದಗಳು
* ರಕ್ಷಣೆ ಮತ್ತು ಭದ್ರತಾ ಸಹಕಾರ
* ವಾಯುಯಾನ ಸೇವಾ ಸಹಕಾರ
* ಎರಡೂ ದೇಶಗಳಲ್ಲಿನ ಶಿಕ್ಷಣಕ್ಕೆ ಪರಸ್ಪರರಲ್ಲಿ ಮಾನ್ಯತೆ
* ಕ್ರೀಡೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಹಕಾರ
* ತಾಳೆ ಎಣ್ಣೆ ಕ್ಷೇತ್ರದಲ್ಲಿ ಸಹಕಾರ
* ಕೃಷಿ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದಿಸುವ ಅತ್ಯಾಧುನಿಕ ತಂತ್ರಜ್ಞಾನ ಪಾರ್ಕ್ ಆಂಧ್ರಪ್ರದೇಶದಲ್ಲಿ  ಸ್ಥಾಪನೆ
* ಭಾರತಕ್ಕೆ ರಫ್ತು ಮಾಡುವ ಉದ್ದೇಶದಿಂದ ಮಲೇಷ್ಯಾದಲ್ಲಿ ಯೂರಿಯಾ ಮತ್ತು ಅಮೋನಿಯಾ ಉತ್ಪಾದನಾ ಘಟಕ ಸ್ಥಾಪನೆ

ಇ-ಫೈಲಿಂಗ್ ಚಾಲನೆ

ಇ-ಫೈಲಿಂಗ್‌ ಗೆ ಚಾಲನೆ

ನವದೆಹಲಿ : 2017–18ರ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐ.ಟಿ ರಿಟರ್ನ್ಸ್‌) ಎರಡು ಇ–ಫೈಲಿಂಗ್‌ ಸೌಲಭ್ಯಕ್ಕೆ ಆದಾಯ ತೆರಿಗೆ ಇಲಾಖೆಯು ಶನಿವಾರ ಚಾಲನೆ ನೀಡಿದೆ.
ಅಂತರ್ಜಾಲ ತಾಣ https://incometaxindiaefiling. gov.in )  ಐಟಿಆರ್‌–1 (ಸಹಜ್‌) ಮತ್ತು ಐಟಿಆರ್‌–4 (ಸುಗಮ್‌) ಅರ್ಜಿ ನಮೂನೆಗಳು ಲಭ್ಯ ಇರಲಿವೆ.

ಛತ್ತಿಸಗಢ ರಾಜ್ಯವು ಗೋಹತ್ಯೆ ನಿಷೇದಿಸಿದ ಪ್ರಥಮ ರಾಜ್ಯವಾಗಿದೆ.

ಗೋಹತ್ಯೆ ಮಾಡಿದರೆ ಗಲ್ಲುಶಿಕ್ಷೆ: ರಮಣ್ ಸಿಂಗ್

ರಾಯ್‌ಪುರ, ಎ.1: ರಾಜ್ಯದಲ್ಲಿ ಯಾವುದೇ ವ್ಯಕ್ತಿ ಗೋಹತ್ಯೆ ಮಾಡಿರುವುದು ತಿಳಿದುಬಂದರೆ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.

  ಗುಜರಾತ್‌ನ ಬಿಜೆಪಿ ಸರಕಾರ ಗೋವಧೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಕಾನೂನನ್ನು ತಿದ್ದುಪಡಿ ಮಾಡಿದ ಮರುದಿನ ಛತ್ತೀಸ್‌ಗಢ ಸರಕಾರದ ಆದೇಶ ಹೊರಬಿದ್ದಿದೆ. ಉತ್ತರಪ್ರದೇಶ ಸರಕಾರ ಕೂಡಾ ಹಸುಗಳ ಅಕ್ರಮ ಸಾಗಾಟ ಮತ್ತು ಅಕ್ರಮ ಕಸಾಯಿಖಾನೆಯನ್ನು ನಿಷೇಧಿಸಿದೆ.

ಗೋ ಹತ್ಯೆ ವಿರೋಧಿಸಿ ಕಾನೂನಿನಲ್ಲಿ ಯಾವುದಾದರೂ ತಿದ್ದುಪಡಿ ಮಾಡುವ ಇರಾದೆಯಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮಣ್ ಸಿಂಗ್, ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಈ ರೀತಿಯ ಘಟನೆ (ಗೋಹತ್ಯೆ) ನಡೆದಿಲ್ಲ.
ಯಾರು ಈ ರೀತಿ ಮಾಡುತ್ತಾರೋ ಅವರನ್ನು ಗಲ್ಲಿಗೇರಿಸಲಾಗುವುದು ಎಂದುತ್ತರಿಸಿದರು. ಗೋಹತ್ಯೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶ ಯಾವುದೇ ರಾಜ್ಯ ಸರಕಾರದ ಕಾನೂನಿನಲ್ಲಿ ಇಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು.

   ಛತ್ತೀಸ್‌ಗಢದ ‘ಪಶು ಕ್ರೂರತಾ ಅಧಿನಿಯಮ’ದಡಿ ಗೋ ಹತ್ಯೆ ಮತ್ತು ಮಾಂಸ ಸಾಗಾಟ ನಿಷೇಧಿಸಲಾಗಿದೆ. ತಪ್ಪಿತಸ್ತರಿಗೆ ಏಳು ವರ್ಷ ಜೈಲುಶಿಕ್ಷೆ ಮತ್ತು 50,000 ರೂ.

ದಂಡ ಅಥವಾ ಎರಡನ್ನೂ ವಿಧಿಸಬಹುದು. ಛತ್ತೀಸ್‌ಗಢವು ಗೋಹತ್ಯೆ ನಿಷೇಧಿಸಿದ ಪ್ರಥಮ ರಾಜ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿರುವ ಕಸಾಯಿಖಾನೆಗಳಲ್ಲಿ ಆಡುಗಳನ್ನು ಮಾತ್ರ ವಧಿಸಲು ಅವಕಾಶವಿದೆ. ಜಾನುವಾರುಗಳು ಅಥವಾ ಹಂದಿಯನ್ನು ವಧಿಸುವಂತಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಮದ್ಯಪ್ರದೇಶದಲ್ಲಿ ವಿದ್ಯುನ್ಮಾನ ಮತಯಂತ್ರ ಪರೀಕ್ಷೆ

ಮಧ್ಯಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಸಂದರ್ಭ ಎಲ್ಲ ಮತಗಳನ್ನೂ ಬಿಜೆಪಿಗೆ ದಾಖಲಿಸಿದ ಇವಿಎಂ

ಭೋಪಾಲ,ಎ.1: ಮಧ್ಯಪ್ರದೇಶದಲ್ಲಿ ಶನಿವಾರ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ವೊಂದು ಮತಗಳನ್ನು ನಿರ್ದಿಷ್ಟ ಪಕ್ಷಕ್ಕೇ ನೀಡಿದೆ ಎಂದು ವರದಿಯಾಗಿದ್ದು, ಇದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಅಂತಿಮ ಸುತ್ತಿನ ಮತದಾನದಲ್ಲಿ ಇವಿಎಂಗಳಲ್ಲಿ ಕೈವಾಡದಿಂದಾಗಿ ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗಿದ್ದವು ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಹೊಸಬಲವನ್ನು ನೀಡಿದೆ.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಮುನ್ನ ರಾಜ್ಯ ಚುನಾವಣಾಧಿಕಾರಿಗಳು ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯ ವೀಡಿಯೊವನ್ನು ವೀಕ್ಷಿಸಿದ ಬಳಿಕ ಚುನಾವಣಾ ಆಯೋಗವು ಭಿಂಡಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ವಿವರವಾದ ವರದಿಯನ್ನು ಕೇಳಿದೆ.

ಇವಿಎಂಗಳಲ್ಲಿ ಅಳವಡಿಸಲಾಗುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್(ವಿವಿಪಿಎಟಿ) ಅಥವಾ ಮುದ್ರಿತ ರಸೀದಿ ವ್ಯವಸ್ಥೆಯ ಮೂಲಕ ಮತದಾರ ತಾನು ಒತ್ತಿದ ಮತ ತಾನು ಆಯ್ಕೆ ಮಾಡಿದ್ದ ಪಕ್ಷಕ್ಕೇ ಬಿದ್ದಿದೆ ಎನ್ನುವುದನ್ನು ಹೇಗೆ ಖಚಿತ ಪಡಿಸಿಕೊಳ್ಳಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದ ಮುಖ್ಯ ಚುನಾವಣಾಧಿಕಾರಿ ಶಾಲಿನಾ ಸಿಂಗ್ ಅವರು, ಎರಡೂ ಸಂದರ್ಭಗಳಲ್ಲಿ ಮತಗಳು ಬಿಜೆಪಿ ಪರವಾಗಿಯೇ ದಾಖಲಾಗಿದ್ದವು ಎನ್ನುವುದನ್ನು ತಿರಸ್ಕರಿಸಿದರು.
ಆದರೆ ಇದು ಇವಿಎಂಗಳ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನೆತ್ತುತ್ತಿರುವ ವಿರೋಧ ಪಕ್ಷಗಳಿಗೆ ತೃಪ್ತಿಯನ್ನು ನೀಡಿಲ್ಲ.

ಮತದಾರ ಮತದಾನದ ಗುಂಡಿಯನ್ನು ಅದುಮಿದಾಗ ಆತ ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದಾನೋ ಆ ಪಕ್ಷದ ಚುನಾವಣಾ ಚಿಹ್ನೆ ಮುದ್ರಿತಗೊಂಡಿರುವ ರಸೀದಿಯನ್ನು ವಿವಿಪಿಎಟಿ ಪ್ರದರ್ಶಿಸುತ್ತದೆ. ಪೆಟ್ಟಿಗೆಯೊಂದರಲ್ಲಿ ಅದು ಬೀಳುವ ಮುನ್ನ ಚಿಹ್ನೆಯನ್ನು ಖಚಿತ ಪಡಿಸಿಕೊಳ್ಳಲು ಏಳು ಸೆಕಂಡ್‌ಗಳ ಕಾಲಾವಕಾಶ ಮತದಾರನಿಗಿರುತ್ತದೆ.

ವರದಿಯ ಬೆನ್ನಲ್ಲೇ ದಿಲ್ಲಿಯಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಧಾವಿಸಿದ ಕಾಂಗ್ರೆಸ್ ಮತ್ತು ಆಪ್‌ನ ಹಿರಿಯ ನಾಯಕರು ಇವಿಎಂಗಳ ಕುರಿತ ತಮ್ಮ ಕಳವಳಗಳನ್ನು ಪುನರುಚ್ಚರಿಸಿದರು. ಇವಿಎಂನ ತಟಸ್ಥತೆಯ ಕುರಿತ ಪ್ರಶ್ನೆಗಳನ್ನು ಆಯೋಗವು ಈ ಹಿಂದೆ ತಳ್ಳಿಹಾಕಿತ್ತು.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಇವಿಎಂಗಳಲ್ಲಿ ಕೈವಾಡ ನಡೆದಿರುವ ಬಗ್ಗೆ ಬಿಎಸ್‌ಪಿ ನಾಯಕಿ ಮಾಯಾವತಿ ಮೊದಲು ಶಂಕೆ ವ್ಯಕ್ತಪಡಿಸಿದ್ದರು. ಆಪ್,ಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ ಸಹ ಇದಕ್ಕೆ ಧ್ವನಿಗೂಡಿಸಿದ್ದವು.

ಇವಿಎಂಗಳ ಕುರಿತು ಎತ್ತಲಾಗಿರುವ ಶಂಕೆಗಳ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಜೊತೆ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದ ಸಿಂದಿಯಾ, ಈ ಬಗ್ಗೆ ತಾನು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆಯೋಗವು ಭರವಸೆ ನೀಡಿದೆ ಎಂದು ತಿಳಿಸಿದರು.
ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲೇಬಾರದು ಎಂದು ಸಿಂಗ್ ಹೇಳಿದರು.

ಶನಿವಾರ, ಏಪ್ರಿಲ್ 1, 2017

ಚಂಡಮಾರುತಕ್ಕೆ ನಾಮಕರಣ ಹೇಗೆ ?

*💐 ಕನ್ನಡ ಸಾಮಾನ್ಯ ಜ್ಞಾನ 💐*

🌕 ಚಂಡಮಾರುತಕ್ಕೆ ನಾಮಕರಣ ಹೇಗೆ ?
ಚಂಡಮಾರುತದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಏಳುವ ಚಂಡಮಾರುತದ ಕುರಿತು ಗೊಂದಲ ನಿವಾರಣೆಗಾಗಿ  ಅಧಿಕೃತವಾಗಿ ಹೆಸರಿಡುವ ಪ್ರಕ್ರಿಯೆ ನಡೆಯುತ್ತಿದೆ.

ಪ್ರಸ್ತುತ ಚಂಡುಮಾರುತಕ್ಕೆ ‘ವಾರ್ದಾ’ ಹೆಸರು ನೀಡಿರುವುದು ಪಾಕಿಸ್ತಾನ. ವಾರ್ದಾ ಎಂದರೆ ಕೆಂಪು ಗುಲಾಬಿ ಎನ್ನುವ ಅರ್ಥವಿದೆ.

ಹಿಂದೂ ಮಹಾ ಸಾಗರದಿಂದ ಸುತ್ತುವರಿದಿರುವ ರಾಷ್ಟ್ರಗಳು ಅಪ್ಪಳಿಸುವ ಚಂಡಮಾರುತಕ್ಕೆ 2004ರಿಂದ ಹೆಸರಿಡುತ್ತಿವೆ. ವಿಶ್ವ ಪವನಶಾಸ್ತ್ರ ಸಂಸ್ಥೆ(WMO) ಚಂಡಮಾರುತಗಳಿಗೆ ಹೆಸರಿಡುವ ಕ್ರಮವನ್ನು ಜಾರಿಗೆ ತಂದಿದೆ.

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಥೈಲ್ಯಾಂಡ್, ಮ್ಯಾನ್ಮಾರ್, ಮಾಲ್ಡೀವ್ಸ್ ಹಾಗೂ ಒಮಾನ್ ಸರತಿಯಂತೆ ಹೆಸರು ಸೂಚಿಸುತ್ತವೆ. ಇತ್ತೀಚೆಗೆ ಭಾರತದಲ್ಲಿ ಕಾಣಿಸಿಕೊಂಡ ನಾಡಾ ಚಂಡಮಾರುತಕ್ಕೆ ಒಮಾನ್ ದೇಶ ಹೆಸರು ನೀಡಿತ್ತು.

ಈ ಮೇಲಿನ ಎಂಟು ರಾಷ್ಟ್ರಗಳು ಚಂಡಮಾರುತಗಳಿಗೆ ಹೆಸರಿಡಲು ಈಗಾಗಲೇ 64 ಹೆಸರಿನ ಪಟ್ಟಿ ಸಿದ್ಧಪಡಿಸಿವೆ. ಪ್ರತಿ ರಾಷ್ಟ್ರ ಎಂಟು ಹೆಸರು ಸೂಚಿಸುವ ಅವಕಾಶ ಪಡೆದುಕೊಂಡಿವೆ.

*ಕೆಲವು ಚಂಡಮಾರುಗಳ ಹೆಸರು:*

ನಿಲೋಫರ್‌– ಪಾಕಿಸ್ತಾನ
ಪ್ರಿಯಾ– ಶ್ರೀಲಂಕಾ
ಕೋಮೆನ್‌–ಥೈಲ್ಯಾಂಡ್‌
ಚಪಲಾ– ಬಾಂಗ್ಲಾದೇಶ
ಮೇಘ್‌– ಭಾರತ
ರೋನು–ಮಾಲ್ಡೀವ್ಸ್‌
ನಾಡಾ–ಓಮನ್‌
ಹುಡ್‌ಹುಡ್‌–ಓಮನ್‌

ಶುಕ್ರವಾರ, ಮಾರ್ಚ್ 31, 2017

ಚೋಮನದುಡಿ ಕಥೆಯ ಸಾರಾಂಶ

ಕಥೆಯ ಸಾರಾಂಶ:
ಚೋಮ ಮತ್ತು ಅವನ ಕುಟುಂಬ ಭೋಗನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಅವನ ಮಕ್ಕಳು ಚನಿಯ, ಗುರುವ, ಕಾಳ, ನೀಲ ಮತ್ತು ಬೆಳ್ಳಿ.. ಚೋಮನಿಗೆ ಬಹಳ ಇಷ್ಟವಾದ ವಸ್ತುಗಳು ಎರಡು, ಒಂದು ದುಡಿ ಮತ್ತೊಂದು ಸೇಂದಿ(ಹೆಂಡ). ಇವೆರಡೂ ಇಲ್ಲದೆ ಅವನಿಗೆ ಜೀವನ ನಡೆಸಲು ಬಹಳ ಕಷ್ಟ. ಅವನು ಜೀವನದಲ್ಲಿ ನೊಂದಾಗ ದುಡಿಯನ್ನು ಬಾರಿಸಿ ತನ್ನ ನೋವನ್ನು ನೀಗಿಕೊಳ್ಳುವನು. ಚೋಮನ ಹೆಂಡತಿ ಈಗಾಗಲೆ ತೀರಿಕೊಂಡಿರುತ್ತಾಳೆ. ಚೋಮ ಸಂಕಪ್ಪಯ್ಯನವರ ಬಳಿ ಕೆಲಸ ಮಾಡುತ್ತಿರುವುದಾಗಿಯೂ ಹಾಗೂ ಮಕ್ಕಳು ಹೊರೆ-ಸೊಪ್ಪನ್ನು ತರುವುದರಿಂದಾಗಿಯೂ ಅವರಿಗೆ ಎರಡು ಪಾವು ಅಕ್ಕಿ ಮತ್ತು ಐದು ಪಾವು ಭತ್ತ ದೊರೆಯುತ್ತಿರುತ್ತದೆ. ಮನೆಯಲ್ಲಿ ಬಾಡು ಎಂಬ ನಾಯಿಯೂ ಇರುತ್ತದೆ. ಹೀಗೆ ಎಲ್ಲ ಕಷ್ಟಗಳ ನಡುವೆ ಅವರು ಜೀವನ ನಡೆಸುತ್ತಿರುತ್ತಾರೆ.
ಮನುಷ್ಯನಿಗೆ ಆಸೆ ಅನ್ನುವುದು ಸಹಜ. ಚೋಮನಿಗೂ ಹೀಗೊಂದು ಆಸೆ ಇತ್ತು. ಅದು ಆತ ಬೇಸಾಯಗಾರನಾಗಬೇಕೆಂದು. ಅವನ ಬಳಿ ಎರಡು ಎತ್ತುಗಳೂ ಸಹ ಇದ್ದವು. ಆದರೆ ಕಡು ಬಡತನದಿಂದಾಗಿ ಅವನ ಬಳಿ ಬೇಸಾಯಕ್ಕಾಗಿ ಇದ್ದ ತುಂಡು ಭೂಮಿಯನ್ನು ಸಂಕಪ್ಪಯ್ಯನ ಬಳಿ ಅಡ ಇಟ್ಟಿರುತ್ತಾನೆ. ಸಾಲ ತೀರಿಸಿ ಭೂಮಿಯನ್ನು ಮತ್ತೆ ಪಡೆಯಲು ಸಂಕಪ್ಪ ಯ್ಯನ ಬಳಿಯೇ ಜೀತಗಾರನಾಗಿ ಸೇರಿಕೊಂಡಿರುತ್ತಾನೆ. ಆ ದಿನಗಳಲ್ಲಿ ಕೀಳು ಜಾತಿಗೆ ಸೇರಿದವರು ವ್ಯವಸಾಯ ಮಾಡುವುದನ್ನು ನಿಷೇಧಿಸಿದ್ದರು. ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆಸುತ್ತಿದ್ದ.
ಚೋಮ ಬಹಳ ವರ್ಷಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡಲು ಹೋಗಿರುತ್ತಾನೆ. ಆಗ ಆತ ಮಾಡಿದ್ದ ೪-೫.ರೂ ಸಲ ಈಗ ೨೦.ರೂ ಆಗಿದೆ ಎಂದು ಅದಕ್ಕಾಗಿ ಅವನನ್ನು ಅರಸುತ್ತಾ ತೋಟದ ದೊರೆಗಳು ಕಳುಹಿಸಿ ಕೊಟ್ಟಿದ್ದ ಮನ್ವೇಲ ಸಾಹೇಬ ಬರುತ್ತಾನೆ. ತೋಟಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಎಷ್ಟೇ ಬೆವರು ಸುರಿಸಿದರೂ ಅವರ ಕೈಗೆ ಹಣ ಬರುವುದು ಆಣೆಗಳ ರೂಪದಲ್ಲಿ ಮಾತ್ರ. ಅದಕ್ಕಾಗಿ ಅವರು ಮಾಡುವ ಸಾಲ ಎಂದಿಗೂ ತೀರುವಂತಿಲ್ಲ.
ಹೀಗಿರುವಾಗ ವಿಧಿ ಇಲ್ಲದೆ ತನ್ನ ಇಬ್ಬರು ಮಕ್ಕಳಾದ ಚನಿಯ ಮತ್ತು ಗುರುವನನ್ನು ತೋಟದ ಕೆಲಸಕ್ಕೆಂದು ಕಳುಹಿಸಿಕೊಡಲು ನಿರ್ಣಯಿಸುತ್ತಾನೆ. ಅವರು ಅಲ್ಲಿಗೆ ಹೋಗಲು ಬಹಳಷ್ಟು ತೊಂದರೆಗಳ್ನ್ನು ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ �
[31/03 11:01 pm] ‪+91 96860 19177‬: ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ ವಿಧವಾದ ಕಷ್ಟಗಳನ್ನು ಅನುಭವಿಸುತ್ತಾರೆ. ಇತ್ತ ಚೋಮ ಮತ್ತು ಇತರರಿಗೂ ಅವರನ್ನು ಬಿಟ್ಟು ಇರುವ ಮನಸ್ಸಿಲ್ಲ. ಅಲ್ಲಿಗೆ ಹೋದ ಅವರು ತಮ್ಮ ಸಹ ಆಳುಗಳ ಜೊತೆ ಸೇರಿ ಅವರ ಅಪ್ಪನಂತೆಯೆ ಹೆಂಡ ಕುಡಿಯುವುದನ್ನೂ ಕಲಿಯುತ್ತಾರೆ. ಹೆಂಡಕ್ಕೆ ದಾಸರಾಗಿ ಅವರು ದುಡಿಯುವ ಹಣವನ್ನು ಅದಕ್ಕಾಗಿ ಸುರಿಯಲು ಪ್ರಾರಂಭಿಸುವರು. ಹೀಗಾಗಿ ಅಪ್ಪನ ಸಾಲ ತೀರಿಸಲು ಹೋಗಿ ಇನ್ನೂ ಹೆಚ್ಚಿನ ಸಲ ಮಾಡುವಂತಾಯಿತು. ಇದೆಲ್ಲ ಸಾಲದಂತೆ ಗುರುವ ಅಲ್ಲಿ ಮಾರಿ ಎಂಬ ಹುಡುಗಿಯನ್ನು ಇಷ್ಟ ಪಡುತ್ತಾನೆ. ಆ ಹುಡುಗಿ ಇಗರ್ಜಿಯವಳು. ಆದರೆ ಇತ್ತ ಚೋಮ ತನ್ನ ಮಕ್ಕಳು ತನ್ನ ಸಾಲ ತೀರಿಸಲು ಹೋಗಿದ್ದಾರೆ, ಅವರನ್ನು ಒಂದು ಮನೆಯವರನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುತ್ತಾನೆ.
ಕಾಫಿ ತೋಟದಲ್ಲಿ ನಡೆಯುತ್ತಿರುವ ವಿಷಯವನ್ನು ತಿಳಿಯದ ಚೋಮ ಧನಿಗಳ ಬಳಿ ಕೆಲಸಕ್ಕೆ ಹೋಗುವಾಗ ತನಗೊಂದು ಸಣ್ಣ ಭೂಮಿಯನ್ನು ಕೊಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಧಣಿಗಳು ಒಪ್ಪಿದರೂ, ಧಣಿಗಳ ವಯಸ್ಸಾದ ತಾಯಿ ಅದಕ್ಕೆ ಒಪ್ಪುವುದಿಲ್ಲ. ಅವರಿಗೆ ಕೊಡುವ ಮನಸ್ಸಿದ್ದರೂ ಅವರ ತಾಯಿಯ ಮನಸ್ಸನ್ನು ನೋಯಿಸಲು ಇಷ್ಟ ಪಡದೆ ಚೋಮನಿಗೆ ಭೂಮಿ ಕೊಡಲು ನಿರಾಕರಿಸಿ ಬಿಡುತ್ತಾನೆ. ಅವರ ಪ್ರಕಾರ ಕೆಳ ವರ್ಗದ ಜನರು ವ್ಯವಸಾಯ ಮಾಡುವಂತಿಲ್ಲ. ಅದು ಹಿಂದಿನಿಂದಲೂ ಬಂದಿರುವ ಆಚಾರವಂತೆ. ಕೀಳು ವರ್ಗದವರು ವ್ಯವಸಾಯ ಮಾಡಿದರೆ ಮೇಲ್ವರ್ಗದವರಿಗೆ ಅವಮಾನವಲ್ಲವೇ? ಎಂಬುದು ಆಕೆಯ ವಾದವಾಗಿತ್ತು. ಹೀಗಾಗಿ ಸಂಕಪ್ಪಯ್ಯನವರಿಗೆ ಇಷ್ಟವಿದ್ದರೂ ತಾಯಿಯ ಮಾತು ಮೀರುವಂತಿರಲ್ಲಿಲ್ಲ. ಇದನ್ನೆಲ್ಲಾ ಕೇಳಿದ ಚೋಮನ ಮನಸ್ಸ್ಸು ನೋವಿನಿಂದ ತುಂಬಿತ್ತು. ಆ ದಿನವೆಲ್ಲಾ ತನ್ನ ಧಣಿಯ ಹೊಲವನ್ನು ಎತ್ತುಗಳನ್ನು ಹೊಡೆಯುತ್ತಾ ಸಮ ಮಾಡುತ್ತಾನೆ.
[31/03 11:01 pm] ‪+91 96860 19177‬: ಇಷ್ಟು ಹೊತ್ತಿಗಾಗಲೆ ಗುರುವ ಮಾರಿಯ ಪ್ರೇಮಲೋಕದಲ್ಲಿ ತೇಲಿಯಾಡುತಿದ್ದ. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ಹುಡುಗರಿಬ್ಬರೂ ವಾಪಸ್ ಊರಿಗೆ ತೆರಳ ಬೇಕಿತ್ತು. ಆದರೆ ಗುರುವ ಮಾರಿಯವರ ಕುಟುಂಬದೊಂದಿಗೆ ಪರಾರಿಯಾದ ಕಾರಣ, ಚನಿಯನು ಮಾತ್ರ ಊರಿಗೆ ಹೊರಟು ಬಂದ. ಎಲ್ಲರೂ ಜಾತ್ರೆಯ ಸಂಭ್ರಮದಲ್ಲಿದ್ದರೆ ಚೋಮನ ಮನಸ್ಸಿನಲ್ಲಿ ಕಾರ್ಕತ್ತಲೇ ಮೂಡಿತ್ತು. ಅವರ್ಯಾರಿಗೂ ಜಾತ್ರೆಯ ಸಂತಸವಿರಲಿಲ್ಲ. ಇದ್ದ ಕಷ್ಟಗಳು ಸಾಲದೆಂಬಂತೆ, ಚನಿಯನು ಆ ಬೆಟ್ಟ ಪ್ರದೇಶದಲ್ಲಿದ್ದೂ, ಅನಾರೋಗ್ಯಕ್ಕೆ ಒಳಗಾಗ ಬೇಕಾಯಿತು. ಬೆಳ್ಳಿಯು ಎಷ್ಟೇ ಪ್ರಯತ್ನಿಸಿದರೂ ಅವಳಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೂ ಚನಿಯನು ಅನಾರೋಗ್ಯದ ಕಾರಣದಿಂದಾಗಿ ಸಾಯುವ ಪರಿಸ್ಥಿತಿ ಬಂತು. ಒಂದೇ ಸಮನೆ ದುಃಖದ ಮಹಾಪೂರವನ್ನೇ ಚೋಮನ ಕುಟುಂಬ ಅನುಭವಿಸಬೇಕಾಯಿತು. ಒಂದೇ ಕಾಲದಲ್ಲಿ ಎರಡೂ ಮಕ್ಕಳನ್ನು ಕಳೆದುಕೊಂಡ ಚೋಮನು ದುಡಿಯನ್ನು ಬಾರಿಸುವುದನ್ನಲ್ಲದೆ ಬೇರೆ ಏನನ್ನೂ ಮಾಡಲು ಸಾಧ್ಯವಾಗಲ್ಲಿಲ್ಲ. ಹೀಗಿರುವಾಗಲೇ ಧನಿಗಳು ಚೋಮನನ್ನು ಮಳೆಗಾಲ ಬಂದಿದೆ ನನಗೆ ನಿನ್ನ ಎತ್ತುಗಳನ್ನು ಮಾರಿಬಿಡು ಎಂದರು. ಇದರಿಂದ ಮತ್ತಷ್ಟು ಸಿಟ್ಟಿಗೇರಿದ ಚೋಮ ಚೆನ್ನಾಗಿ ಹೆಂಡವನ್ನು ಕುಡಿದು ತಾನು ದುಡಿ ಬಾರಿಸುತ್ತಾ ತನ್ನ ಸಣ್ಣದಾದ ಎರಡೂ ಮಕ್ಕಳನ್ನೂ ಅದರ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಹೊಡೆದು ಬಡೆಯತ್ತಾನೆ. ಆಗ ಬೆಳ್ಳಿ ಅವರನ್ನು ರಕ್ಷಿಸುತ್ತಾಳೆ. ಚೋಮನ ಸಿಟ್ಟು ಇನ್ನೂ ಕಡಿಮೆ ಆಗುವುದಿಲ್ಲ. ಕೊನೆಗೆ ತನಗೆ ಆ ಎತ್ತುಗಳಿಂದ ವ್ಯವಸಾಯ ಮಾಡಲು ಸಾಧ್ಯವಿಲ್ಲವೆಂದು, ಅದು ಪರರಿಗೂ ದೊರಕಬಾರದೆಂದು ಆ ಎತ್ತುಗಳ ಕಾಲು ಮುರಿಯುತ್ತಾನೆ. ನಂತರ ಬೆಳ್ಳಿ ಧಣಿಗಳ ಬಳಿ ಮಾತನಾಡಿ ಅಪ್ಪನಿಗೆ ಬುದ್ಧಿ ಕಲಿಸುವಂತೆ ನಿರ್ಣಯಿಸುತ್ತಾಳೆ.
[31/03 11:01 pm] ‪+91 96860 19177‬: ಹಾಗೆಂದು ಯೋಚಿಸಿ ಮನೆಗೆ ತೆರಳಿದ ಬೆಳ್ಳಿಗೆ ಆಶ್ಚರ್ಯವೆಂದರೆ ಅವರ ಮನೆಗೆ ನೆಂಟರು ಬಂದಿದ್ದರು. ಅವಳು ಹಲವು ದಿನಗಳಿಂದ ಕೂಡಿಟ್ಟಿದ್ದ ಗೆಣಸು ಅಕ್ಕಿ ಎಲ್ಲವೂ ಖಾಲಿಯಾಗ ತೊಡಗಿತು. ಚೋಮನು ಎಲ್ಲವನ್ನೂ ಮರೆತು ಅವರೊಂದಿಗೆ ಸಂತಸದಿಂದ ಕಾಲಕಳೆಯತ್ತಾನೆ. ಅವರೊಂದಿಗೆ ಬೇಟೆಗೆ ಹೋಗಿ ಮೊಲಗಳನ್ನು ತಂದು ತಿಂದು,ಕುಡಿದು ಕುಪ್ಪಳಿಸುತ್ತಾರೆ. ಯಾರದೋ ಮನೆಯಲ್ಲಿ ಎಮ್ಮೆ ಸತ್ತರೆ ಅದನ್ನೂ ತಿಂದು, ಮನೆಯ ಮುಂದೆ ಬೆಂಕಿಯನ್ನು ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಕೆಲವು ದಿನಗಳ ನಂತರ ಅವರೂ ಹೊರಟರು. ಆದರೆ ಈಗ ಚೋಮನ ಎದುರಿನಲ್ಲಿದ್ದ ಮತ್ತೊಂದು ಸವಾಲೆಂದರೆ ಮತ್ತೆ ಮನ್ವೇಲನು ಬಂದಾಗ ಅವನೊಂದಿಗೆ ಯಾರನ್ನಾದರು ಕರೆದುಕೊಂಡು ಹೋಗುತ್ತಾನೆ. ಆದರೆ ಹೋಗಲಿಕ್ಕೆ ಯಾರಿದ್ದಾರೆ? ಎಂಬುದು. ಕೊನೆಗೆ ಮುದಿ ತಂದೆಯನ್ನು ಕಷ್ಟಗಳ ಪಾಲು ಮಾಡಲು ಇಷ್ಟವಿಲ್ಲದೆ ಕೊನೆಗೆ ಬೆಳ್ಳಿಯೇ ಮನ್ವೇಲನ ಕೂಡ ಹೊರಡುವಂತೆ ನಿಶ್ಚಯವಾಯಿತು. ಇಷ್ಟವಿಲ್ಲದ ಮನಸ್ಸು ಹಾಗೂ ಮನ್ವೇಲನ ಒತ್ತಡದಿಂದಾಗಿ ಚೋಮನೂ ಅವಳನ್ನು ಕಣ್ಣೀರಿನಿಂದ ಬೀಳ್ಕೊಡಬೇಕಾಗಿ ಬಂತು.
ಕೊನೆಗೆ ಬೆಳ್ಳಿಯ ತೋಟದ ಯಾತ್ರೆ ಸಾಗಿತು. ಅವಳಿಗೂ ಆ ಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂತು. ಅವಳೊಂದಿಗೆ ನೀಲನೂ ಹೊರಟಿದ್ದ. ಅಲ್ಲಿ ಅವರಿಗೆ ಉಳಿಯಲು ವ್ಯವಸ್ಥೆ ಆಯಿತು. ನೀಲನು ಅನಾರೋಗ್ಯಕ್ಕೆ ಒಳಗಾದ ಕಾರಣ ಅವಳಿಗೆ ಬರುತ್ತಿದ್ದ ಹಣವನ್ನು ಅವನ ಔಷಧಿಯನ್ನು ಖರೀದಿಸಲು ಸಾಲುತಿತ್ತೇ ಹೊರೆತು ಸಾಲ ತೀರಿಸಲು ಆಗುತ್ತಿರಲಿಲ್ಲ. ಹೀಗಾಗಿ ಮನ್ವೇಲನ ಒತ್ತಡದ ಮೇರೆಗೆ ಅವನ ಮನೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಳು. ಆದರೆ ಅಲ್ಲಿ ನಡೆದದ್ದೆ ಬೇರೆಯದ್ದೊಂದು ವಿಷಯ. ಹೆಂಡತಿ ಮನೆಯಲ್ಲಿಲ್ಲದ ಕಾರಣ ಅವನಲ್ಲಿನ ಕಾಮ ಪ್ರೇರಣೆ ಹಾಗೂ ಕಾಯದ ದೌರ್ಬಲ್ಯ ಅವಳನ್ನು ಆತನ ಕಾಮದ ದಾಸಿಯನ್ನಾಗಿ ಮಾಡಿತು.
[31/03 11:01 pm] ‪+91 96860 19177‬: ಅವರಿಬ್ಬರ ನಡುವಿನ ಸಂಬಂಧ ಎಲ್ಲರಿಗೂ ತಿಳಿಯಲಾರಂಭವಾಯಿತು. ಅವಳ ಮೇಲೆ ದೊರೆಗಳಿಗೂ ಆಸೆಯಾಯಿತು. ಕೊನೆಗೆ ಮನ್ವೇಲನು ಅವಳನ್ನು ಅವನ ಬಳಿಯೂ ಕಳುಹಿಸಿ ಕೊಟ್ಟನು. ಹಣದ ಆಸೆ ಅವಳನ್ನು ಈ ರೀತಿಯ ಕೆಲಸವನ್ನೂ ಮಾಡದೆ ಬಿಡಲಿಲ್ಲ. ಕೊನೆಗೆ ಮನ್ವೇಲನು ಅವಳನ್ನು ಅಲ್ಲಿಂದ ಪಾರು ಮಾಡುವನು. ಅವಳು ವಾಪಸ್ಸ್ಸು ಮನೆಗೆ ತೆರಳಿದ ಕಾರಣ ಚೋಮನಿಗೆ ಹಿಡಿಸಲಾರದಷ್ಟು ಸಂತೋಷ. ನನ್ನ ಗಂಡು ಮಕ್ಕಳು ಮಾಡಲಾರದ ಕೆಲಸ ತನ್ನ ಮಗಳು ಮಾಡಿದ್ದಾಳೆಂದು ಅವನ ಸಂಭ್ರಮ. ಆದರೆ ಪಾಪ ಚೋಮನಿಗೆ ತನ್ನ ಮಗಳು ಆತನ ಸಾಲ ತೀರಿಸಿದ ಬಗೆ ತಿಳಿಯದು. ಮತ್ತೆ ಊರಿನ ಜಾತ್ರೆ ಬಂದೇ ಬಂತು. ಬೆಳ್ಳಿ ತನಗೆ ಮನ್ವೇಲನು ಕೊಟ್ಟಿರುವ ಸೀರೆ ಉಟ್ಟು ಜಾತ್ರೆಗೆ ಹೋಗುತ್ತಾಳೆ. ಆದರೆ ಅಲ್ಲಿ ಮನ್ವೇಲನೂ ಬಂದಿರುವುದನ್ನು ಕಂಡು ಭಯದಿಂದ ಮನೆಗೆ ತೆರಳಿದಳು. ಅತ್ತ ಚೋಮ ತನ್ನ ಮಗಳಿಗೆ ತಕ್ಕ ವರನನ್ನು ಹುಡುಕುತ್ತಿದ್ದನು. ನಂತರ ಆ ಸಂತಸದಲ್ಲಿಯೇ ಗೆಳೆಯರೊಡನೆ ಕುಣಿದು ಹರ್ಷಿಸುತ್ತಿದ್ದ.
ಮರುದಿನ ತನ್ನ ಮಕ್ಕಳಿಗೆ ಸ್ನಾನ ಮಾಡಿಸಲೆಂದು ಕೆರೆಯ ಬಳಿ ಹೋದಾಗ ಅಲ್ಲಿ ನೀಲ ನೀರಿನಲ್ಲಿ ಮುಳುಗಿ ಹೋಗುತ್ತಿರುತ್ತಾನೆ. ಚೋಮ ಆ ಸಮಯದಲ್ಲಿ ಅಲ್ಲಿ ಇರುವುದಿಲ್ಲ. ಕಾಳ ಇನ್ನೂ ಚಿಕ್ಕವ, ಆದರೆ ಅಲ್ಲಿಯ ದಡೆಯ ಮೇಲಿನ ಜನರು ಅವನನ್ನು ಕಾಪಾಡಬಹುದಾಗಿತ್ತು. ಆದರೆ ಅವರು ಮೇಲ್ವರ್ಗದವರು ಹಾಗು ನೀಲ ಕೆಳ ವರ್ಗದವನು ಎಂಬ ಒಂದೇ ಒಂದು ಕಾರಣ ಅವರನ್ನು ನೀಲನನ್ನು ಮೂಟ್ಟಬಾರದೆಂದು ಕಟ್ಟು ಹಾಕಿತ್ತು. ಇಲ್ಲದಿದ್ದಲ್ಲಿ ನೀಲ ಉಳಿಯುತ್ತಿದ್ದ. ಹೀಗೆ ಚೋಮನಿಗೆ ಒಂದರ ನಂತರ ಮತ್ತೊಂದು ಹೃದಯ ಹಿಂಡುವ ಕಷ್ಟಗಳು ಕಾದಿರುತ್ತಿದ್ದವು. ಮರುದಿನ ಮನ್ವೇಲನು ಅವರ ಮನೆಗೆ ಬರುತ್ತಾನೆ. ಆತ ಅವರ ಕ್ಷೇಮ ಸಮಾಚಾರ ತಿಳಿದು ಗುರುವನ ಬಗ್ಗೆ ತಿಳಿಸುತ್ತಾನೆ. ಜೀವನದಲ್ಲಿ ಎಲ್ಲವನ್ನು ಕಳೆದು ಕೊಂಡು ಸಾಧಿಸುವುದಾದರೂ ಏನು? ಹೋಗಿ ನಿನ್ನ ಮಗನನ್ನು ವಾಪಸ್ಸು ಕರೆತಾ ಎಂದು ಆತನಿಗೆ ಮನ್ವೇಲನು ಸಲಹೆ ನೀಡುತ್ತಾನೆ. ಅದರಿಂದಾಗಿ ತಾನೂ ಮತ ಪರಿವರ್ತಿಸಿ ಕೊಳ್ಳುವುದಾಗಿ ನಿರ್ಧರಿಸುತ್ತಾನೆ. ನಾಳೆ ಬೆಳಿಗ್ಗೆ ತನ್ನ ಮಗನ ಬಳಿ ಹೋಗುವುದಾಗಿ ಅವನನ್ನು ಕರೆತರುವುದಾಗಿ ಚರ್ಚಿಸಿರುತ್ತಾರೆ.

ಅದಿರುಗಳು

*ಅದಿರುಗಳು*

*👉ತಾಮ್ರದ ಅದಿರುಗಳು*
ಪ್ಲೆರೈಟ್ಸ್- CuFrS2
ಗ್ಲಾನ್ಸ್- Cu2S
ಕ್ಯ್ರುಪ್ರೈಟ್- Cu2O
ಮೆಲಕೈಟ್- CuCo3cu( OH)2
ಅಜುರೈಟ್- 2cuco3cu(OH)2

*👉ಕಬ್ಬಿಣದ ಅದಿರುಗಳು*
ಹೆಮಟೈಟ್- Fe2O3
ಮ್ಯಾಗ್ನೆಟಿಕ್- Fe3O4
ಲಿಮೊನೈಟ್- Fe2O3H2O
ಸೈಡ್ ರೈಟ್- FeCO3

*👉ಸೋಡಿಯಂ ಅದಿರುಗಳು*
ರಾಕ್ ಸಾಲ್ಟ್ - Nacl
ಬೋರಾಕ್ಸ್+ Na2B401oH20
ಚೈಲ್ ಸಾಲ್ಟ್- NaN03

*👉ಮೆಗ್ನೀಸಿಯಂ ಅದಿರುಗಳು*
ಮಾಗ್ನಸೈಟ್- MgCO3
ಡೋಮೋಮೈಟ್- CaCO3MgCO3
ಕಾರ್ನ್ ಲೈಟ್- KCl2mgCl26H3O
ಎಪ್ಸ್ಂ ಸಾಲ್ಟ್- mgSO47H20