ಸೋಮವಾರ, ಏಪ್ರಿಲ್ 17, 2017

ಪ್ರಚಲಿತ ಘಟನೆಗಳು

*🌎 Daily Current Affairs Group 🌎*

*ಪ್ರಚಲಿತ ಘಟನಗಳು👇👇👇*

*✴️ಮಲಾಲ ಯೂಸಫಿ ವಿಶ್ವಸಂಸ್ಥೆಯ ಅತ್ಯಂತ ಕಿರಿಯ ಶಾಂತಿದೂತೆ*

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟಾನಿಯೊ ಗುಟ್ರೆಸ್ ಅವರು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲ ಯೂಸಫಿ ಅವರಿಗೆ ಅತ್ಯುನ್ನತ ಗೌರವವಾದ ವಿಶ್ವಸಂಸ್ಥೆಯ ಶಾಂತಿದೂತ ಪ್ರಶಸ್ತಿ ನೀಡಿ ಗೌರವಿಸಿದರು. ವಿಶ್ವದಲ್ಲಿ ಅತ್ಯಂತ ಮಹತ್ವದ ಎಲ್ಲರಿಗೂ ಶಿಕ್ಷಣ ಎಂಬ ಪರಿಕಲ್ಪನೆಯ ಸಂಕೇತ ಎಂದು ಯೂಸಫಿ ಅವರನ್ನು ಬಣ್ಣಿಸಿದರು

*✴️ಚಂಪಾರಣ್ಯ ಸತ್ಯಾಗ್ರಹಕ್ಕೆ 100 ವರ್ಷ*

‘ಸ್ವಚ್ಛಗೃಹ ಬಾಪು ಕೋ ಕಾರ್ಯಾಂಜಲಿ- ಏಕ್ ಅಭಿಯಾನ್ ಏಕ್ ಪ್ರದರ್ಶಿನಿ’ ಎಂಬ ಚಿತ್ರ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಹೊಸದೆಹಲಿಯಲ್ಲಿ ಉದ್ಘಾಟಿಸಿದರು. ಚಂಪಾರಣ್ಯ ಸತ್ಯಾಗ್ರಹಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವಿಶಿಷ್ಟ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ಚಂಪಾರಣ್ಯ ಸತ್ಯಾಗ್ರಹದ ವಿವಿಧ ಹಂತಗಳ ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ.

*✴️2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟ...*

ಪತ್ರಿಕಾ ರಂಗದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತವಾಗಿರುವ 2017ನೇ ಸಾಲಿನ 101ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಪುಲಿಟ್ಜರ್ ಪ್ರಶಸ್ತಿ ಸಮಿತಿಯ ನಿರ್ವಾಹಕ ಮೈಕ್ ಪ್ರೈಡ್ ಅವರು ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿದರು. ನ್ಯೂಯಾರ್ಕ್ ನ  ಕೊಲಂಬಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರಶಸ್ತಿ ಘೋಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

*✴️ಕೇಂದ್ರದಿಂದ ಸೈಬರ್ ಫಿಸಿಕಲ್ ಸಿಸ್ಟಂ(ಸಿಪಿಎಸ್) ಯೋಜನೆಗೆ ಚಾಲನೆ..*

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸೈಬರ್ ಫಿಸಿಕಲ್ ಸಿಸ್ಟಂ(ಸಿಪಿಎಸ್) ಎಂಬ ಹೊಸ ಯೋಜನೆಯನ್ನು ಲೋಕಾರ್ಪಣೆ ಮಾಡಿದೆ. ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳ ಸಹಕಾರದೊಂದಿಗೆ ಸ್ವಯಂಚಾಲಿತ ಕಾರು ಮತ್ತು ಮಾನವ ರಹಿತ ವಾಹನ/ವಿಮಾನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ..

*✴️ದೀನದಯಾಳ್ ಅಂತ್ಯೋದಯ ರಸೋಯಿ ಯೋಜನೆಗೆ ಚಾಲನೆ*

ಮಧ್ಯಪ್ರದೇಶ ಸರ್ಕಾರವು ದೀನದಯಾಳ್ ಅಂತ್ಯೋದಯ ರಸೋಯಿ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದೆ. ಇದು ಜನಪ್ರಿಯ ಸಬ್ಸಿಡಿ ಊಟದ ಯೋಜನೆಯಾಗಿದ್ದು, ರಾಜ್ಯದ ಎಲ್ಲ ಬಡವರಿಗೆ ಇದರ ಪ್ರಯೋಜನ ಲಭ್ಯವಾಗಲಿದೆ. ಈ ಯೋಜನೆಯನ್ನು ಬಿಜೆಪಿಯ ಸಂಸ್ಥಾಪಕ ನಾಯಕರಲ್ಲೊಬ್ಬರಾದ ದೀನದಯಾಳ್ ಉಪಾಧ್ಯಾಯ ಅವರ ಹೆಸರನ್ನು ಯೋಜನೆಗೆ ಇಡಲಾಗಿದೆ.

*✴️ಬಾಹ್ಯಾಕಾಶ ಸಂಶೋಧಕರಿಂದ ಕೆಪ್ಲರ್- 1649ಗೆ ಸುತ್ತುವ ಗ್ರಹ ಪತ್ತೆ..*

ನಾಸಾದ ಕೆಪ್ಲರ್ ಬಾಹ್ಯಾಕಾಶನೌಕೆಯ ಟೆಲೆಸ್ಕೋಪ್ ಬಳಸಿಕೊಂಡು, ಬಾಹ್ಯಾಕಾಶ ವಿಜ್ಞಾನಿಗಳು ಗುರು ಗ್ರಹದ ಮಾದರಿಯ ಹೊಸ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ. ತೀರಾ ಮಬ್ಬು ಬೆಳಕು ಹೊರಸೂಸುವ ಕೆಪ್ಲರ್- 1649 ಕಕ್ಷೆಯ ಸುತ್ತ ಇದು ಸುತ್ತುತ್ತಿದೆ. ಹೊಸದಾಗಿ ಪತ್ತೆಯಾದ ಈ ಗ್ರಹವು ಸೂರ್ಯನ ಪರಿಧಿಯ ಐದನೇ ಒಂದರಷ್ಟು ಗಾತ್ರದ್ದಾಗಿದ್ದು, ಭೂಮಿಯ ಗಾತ್ರಕ್ಕಿಂತ ಸ್ವಲ್ಪ ದೊಡ್ಡದು.

*✴️2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟ...*

ಪತ್ರಿಕಾ ರಂಗದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತವಾಗಿರುವ 2017ನೇ ಸಾಲಿನ 101ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಪುಲಿಟ್ಜರ್ ಪ್ರಶಸ್ತಿ ಸಮಿತಿಯ ನಿರ್ವಾಹಕ ಮೈಕ್ ಪ್ರೈಡ್ ಅವರು ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿದರು. ನ್ಯೂಯಾರ್ಕ್ ನ  ಕೊಲಂಬಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರಶಸ್ತಿ ಘೋಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

*✴️2016ನೇ ವರ್ಷದ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆ..*

2016ನೇ ವರ್ಷದ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆ ಯಾಗಿವೆ. ಪೌರ ಕಾರ್ಮಿಕನೊಬ್ಬನ  ಜೀವನದ ಕಥಾವಸ್ತುವಿರುವ ಬಿ.ಎಂ.ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.  ಇದೇ ಚಿತ್ರದ ನಟನೆಗಾಗಿ ಅಚ್ಯುತ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಬ್ಯೂಟಿಫುಲ್ ಚಿತ್ರದ ನಟನೆಗಾಗಿ ಶ್ರುತಿ ಹರಿಹರನ್‍ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಮೊದಲನೆ ಅತ್ಯುತ್ತಮ ಚಿತ್ರ : ಅಮರಾವತಿ (ನಿರ್ದೇಶಕ: ಬಿ.ಎಂ. ಗಿರಿರಾಜ್)
ಎರಡನೇ ಅತ್ಯುತ್ತಮ ಚಿತ್ರ : ರೈಲ್ವೇ ಚಿಲ್ಡ್ರನ್
ಮೂರನೇ ಅತ್ಯುತ್ತಮ ಚಿತ್ರ : ಅಂತರ್ಜಲ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಮೂಡ್ಲ ಸೀಮೆಯಲಿ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಕಿರಿಕ್ ಪಾರ್ಟಿ
ಅತ್ಯುತ್ತಮ ಮಕ್ಕಳ ಚಿತ್ರ : ಜೀರ್ ಜಿಂಬೆ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಮದಿಪು (ತುಳು ಭಾಷೆ)

ಪ್ರಶಸ್ತಿ ವಿಜೇತರ ಪಟ್ಟಿ
ಅತ್ಯುತ್ತಮ ನಟ – ಅಚ್ಯುತ್ ಕುಮಾರ್ – ಅಮರಾವತಿ
ಅತ್ಯುತ್ತಮ ನಟಿ – ಶ್ರುತಿ ಹರಿಹರನ್‍  -ಬ್ಯೂಟಿಪುಲ್ ಮನಸುಗಳು
ಅತ್ಯುತ್ತಮ ಪೋಷಕ ನಟ – ನವೀನ್ ಡಿ ಪಡೀಲ್ -ಕುಡ್ಲ ಕೆಫೆ (ತುಳು)
ಅತ್ಯುತ್ತಮ ಪೋಷಕ ನಟಿ – ಅಕ್ಷತಾ ಪಾಂಡವಪುರ (ಪಲ್ಲಟ)
ಅತ್ಯುತ್ತಮ ಕತೆ – ನಂದಿತಾ ಯಾದವ್
ಅತ್ಯುತ್ತಮ ಚಿತ್ರಕತೆ – ಅರವಿಂದ ಶಾಸ್ತ್ರಿ (ಚಿತ್ರ -ಕಹಿ)

ಅತ್ಯುತ್ತಮ ಸಂಭಾಷಣೆ – ಬಿ.ಎಂ.ಗಿರಿರಾಜ್ (ಚಿತ್ರ: ಅಮರಾವತಿ)

ಅತ್ಯುತ್ತಮ ಛಾಯಾಗ್ರಹಣ –ಶೇಖರ್ ಚಂದ್ರ -(ಚಿತ್ರ: ಮುಂಗಾರು ಮಳೆ-2)
ಅತ್ಯುತ್ತಮ ಸಂಗೀತ ನಿರ್ದೇಶನ ಎಂ.ಆರ್.ಚರಣ್ ರಾಜ್ – (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಸಂಕಲನ ಸಿ.ರವಿಚಂದ್ರನ್ – (ಚಿತ್ರ: ಮಮ್ಮಿ)
ಅತ್ಯುತ್ತಮ ಬಾಲ ನಟ -ಮಾಸ್ಟರ್ ಮನೋಹರ್ ಕೆ. -(ಚಿತ್ರ: ರೈಲ್ವೇ ಚಿಲ್ಡ್ರನ್)
ಅತ್ಯುತ್ತಮ ಬಾಲ ನಟಿ- ಬೇಬಿ ಸಿರಿವಾನಳ್ಳಿ (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಕಲಾ ನಿರ್ದೇಶನ – ಶಶಿಧರ ಅಡಪ (ಚಿತ್ರ: ಉಪ್ಪಿನ ಕಾಗದ)
ಅತ್ಯುತ್ತಮ ಗೀತ ರಚನೆ -ಕಾರ್ತಿಕ್ ಸರಗೂರು (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಹಿನ್ನೆಲೆ ಗಾಯಕ -ವಿಜಯ್ ಪ್ರಕಾಶ್ (ಚಿತ್ರ: ಬ್ಯೂಟಿಪುಲ್ ಮನಸುಗಳು)
ಅತ್ಯುತ್ತಮ ಹಿನ್ನೆಲೆ ಗಾಯಕಿ –  ಸಂಗೀತಾ ರವೀಂದ್ರನಾಥ್ (ಚಿತ್ರ: ಜಲ್ಸ)

ತೀರ್ಪುಗಾರರ ವಿಶೇಷ ಪ್ರಶಸ್ತಿ -ಚಿನ್ಮಯ್ -(ಚಿತ್ರ: ಸಂತೆಯಲ್ಲಿ ನಿಂತ ಕಬೀರ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ – ಕೆ.ವಿ.ಮಂಜಯ್ಯ -(ಚಿತ್ರ: ಮುಂಗಾರು ಮಳೆ-2).

💐💐💐💐💐💐💐💐💐💐💐
   

ಕೆಂದ್ರೀಯ ಸಂಸ್ಥೆಗಳು

1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ
ದೆಹ್ರಾದೂನ್.(ಉತ್ತರಖಂಡ)

2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ
ದೆಹ್ರಾದೂನ್ 

3) ಹಪ್ಕೈನ್ ಇನ್ಸ್ಟಿಟ್ಯೂಟ್
ಮುಂಬೈ.

4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್
ಮುಂಬೈ.

5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್ 
ಮುಂಬೈ.

6) ತಳಿ ಸಂವರ್ಧನಾ ಸಂಸ್ಥೆ
ಹಿಸ್ಸಾರ್ (ಹರ್ಯಾಣ).

7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ
ಕರ್ನಾಲ್ (ಹರ್ಯಾಣ).

8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ
ಬೆಂಗಳೂರು.

9) ರಾಮನ್ ಸಂಶೋಧನಾ ಕೇಂದ್ರ •
ಬೆಂಗಳೂರು.

10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ
ಬೆಂಗಳೂರು.

11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್
ದೆಹಲಿ.

12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಜ್
ದೆಹಲಿ.

13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ
ದಹಲಿ.

14) ಭಾರತೀಯ ಹವಾಮಾನ ವೀಕ್ಷಣಾಲಯ
ಪುಣೆ ಮತ್ತು ದೆಹಲಿ.

15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್)
ದಹಲಿ.

16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥ
ದಹಲಿ
.
17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ
ದಹಲಿ.

18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ (ಕಾಸರಗೋಡು) ಕೇರಳ.

19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸೆ
ನಾಗ್ಪುರ

20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ •
ಧನ್ ಬಾದ್.

21) ಆಣ್ವಿಕ ಮತ್ತು ಕೋಶಗಳ ಜೀವವಿಜ್ಞಾನ ಕೇಂದ್ರ
ಹೈದರಾಬಾದ್.

22) ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ
ಲಕ್ನೋ.

23) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ
ಲಕ್ನೋ.

24) ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ
ಲಕ್ನೋ.

25) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥ
ಲಕ್ನೋ.

26) ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ
ರಾಮಗಢ. (ಹಿಮಾಚಲ ಪ್ರದೇಶ), ಇಜ್ಜತ್ ನಗರ (ಉತ್ತರ ಪ್ರದೇಶ).

27) ಜವಳಿ ಸಂಶೋಧನಾ ಸಂಸ್ಥೆ  ಅಹಮದಾಬಾದ್.

28) ರಾಷ್ಟ್ರೀಯ ಉದ್ಯೋಗ ಆರೋಗ್ಯಾ ಸಂಸ್ಥೆ
• ಅಹಮದಾಬಾದ್.

29) ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥ
ಶಿಮ್ಲಾ.

30) ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ
ದುರ್ಗಾಪುರ.

31) ಕೇಂದ್ರೀಯ ಕುಷ್ಠರೋಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ
ಚಿಂಗಲ್ ಪೇಟ್. 

32) ರಾಷ್ಟ್ರೀಯ ಶೇಂಗಾ ಸಂಶೋಧನಾ ಸಂಸ್ಥೆ
ಜುನಾಗಢ್.

34) ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ
ಚೆನೈ.

35) ಕೇಂದ್ರೀಯ ವಿದ್ಯುತ್-ರಾಸಾಯನಿಕ ಸಂಶೋಧನಾ ಸಂಸ್ಥೆ ಕರೈಕುಡಿ.

36) ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ
ಮೈಸೂರು (ಕರ್ನಾಟಕ).

37) ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ
ಪುಣೆ (ಮಹಾರಾಷ್ಟ್ರ).

38) ಭಾರತೀಯ ಲ್ಯಾಕ್ ರಿಸರ್ಚ್ ಇನ್ಸ್ಟಿಟ್ಯೂಟ್
ರಾಂಚಿ (ಜಾರ್ಖಂಡ್).

39) PGI ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥ
ಚಂಡೀಘಢ.

40) ಭಾರತೀಯ ಜೀವ ರಾಸಾಯನಿಕ ಸಂಸ್ಥೆ
ಕೋಲ್ಕತಾ.

41) ಕೇಂದ್ರೀಯ ಸೆಣಬು ತಾಂತ್ರಿಕ ಸಂಶೋಧನಾ ಸಂಸ್ಥೆ
(ಬ್ಯಾರಕ್ ಪುರ) ಕೋಲ್ಕತಾ.

42) ಭಾರತೀಯ ಪುರಾತತ್ವ ಇಲಾಖೆ ಕೋಲ್ಕತಾ.

43) ಸ್ಕೂಲ್ ಆಪ್ ಟ್ರಾಪಿಕಲ್ ಮೆಡಿಸಿನ್
ಕೋಲ್ಕತಾ .

44) ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಹೈಜೀನ್ ಆಂಡ್ ಪಬ್ಲಿಕ್ ಹೆಲ್ಥ್
ಕೋಲ್ಕತಾ.

45) ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್  ಕೋಲ್ಕತಾ.

46) ರಾಷ್ಟ್ರೀಯ ಭೂಭೌತಶಾಸ್ತ್ರ ಸಂಶೋಧನಾ ಸಂಸ್ಥೆ
ಹೈದರಾಬಾದ್.

47) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ನ್ಯೂಟ್ರಿಷನ್
ಹೈದರಾಬಾದ್.

48) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
ಬೆಂಗಳೂರು.

49) ಉನ್ನತ ಸಂಶೋಧನಾ ಪ್ರಯೋಗಾಲಯ
ಗುಲ್ಮರ್ಗ್.

50) ಕೇಂದ್ರೀಯ ಗಣಿ ಸಂಶೋಧನಾ ಸಂಸ್ಥೆ
ಧನ್ಬಾದ್.

51) ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ
ರೂರ್ಕಿ.

52) ಕೇಂದ್ರೀಯ ವೈಜ್ಞಾನಿಕ ಸಲಕರಣೆಗಳ ಸಂಸ್ಥೆ
ಚಂಡೀಘಢ.

53) ಕೇಂದ್ರೀಯ ಉಪ್ಪು ಮತ್ತು ಸಾಗರ ರಾಸಾಯನಿಕ ಸಂಶೋಧನಾ ಸಂಸ್ಥೆ
ಭಾವನಗರ್.

54) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ🏼
ಕಟಕ್

ಮಂಗಳವಾರ, ಏಪ್ರಿಲ್ 11, 2017

ವಿಶ್ವ ಹಾಕಿ ಲೀಗ್ ರೌಂಡ್-2: ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವಿಶ್ವ ಹಾಕಿ ಲೀಗ್ ರೌಂಡ್-2 : ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವೆಸ್ಟ್ ವ್ಯಾಂಕೊವರ್, ಏಪ್ರಿಲ್ 11 : ಸವಿತಾ ಪೂನಿಯಾ ಅವರ ಮನಮೋಹಕ ಆಟದಿಂದ ಭಾರತ ಮಹಿಳಾ ತಂಡ ವಿಶ್ವ ಹಾಕಿ ಲೀಗ್ ರೌಂಡ್-2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು.

ಸೋಮವಾರ ನಡೆದ ಫೈನಲ್ ಹಣಾಹಣಿಯ ಶೂಟೌಟ್ ನಲ್ಲಿ ಭಾರತ ತಂಡ 3-1 ಗೋಲುಗಳಿಂದ ಬಲಿಷ್ಠ ಚಿಲಿ ತಂಡದ ಗೆಲುವಿನ ನಗೆ ಬೀರಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಶೂಟೌಟ್ ಮೊರೆ ಹೋಗಲಾಗಿತ್ತು. ಈ ಅವಕಾಶದಲ್ಲಿ ಭಾರತದ ವನಿತೆಯರು ಪ್ರಾಬಲ್ಯ ಮೆರೆದರು.

ಈ ಗೆಲುವಿನೊಂದಿಗೆ ರಾಣಿ ರಾಂಪಾಲ್ ಪಡೆ ಮುಂಬರುವ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಗೆ ಅರ್ಹತೆ ಗಳಿಸಿದೆ. ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೆಲಾರಸ್ ತಂಡವನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿದ್ದ ಭಾರತದ ಆಟಗಾರ್ತಿಯರು ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ಆರಂಭ ಪಡೆಯಲು ವಿಫಲರಾದರು.[ ಚಕ್ ದೇ ಇಂಡಿಯಾ : ಭಾರತದ ವನಿತೆಯರು ಏಷ್ಯನ್ ಚಾಂಪಿಯನ್ಸ್ ]

ಬಲಿಷ್ಠ ಆಟಗಾರ್ತಿಯರ ಕಣಜ ಅನಿಸಿದ್ದ ಚಿಲಿ ತಂಡ ಐದನೇ ನಿಮಿಷದಲ್ಲೇ ಖಾತೆ ತೆರೆದು ಸುಲಭ ಗೆಲುವಿನ ಕನಸು ಕಂಡಿತ್ತು.
ಮರಿಯಾ ಮಲ್ಡೊ ನಾಡೊ ಚೆಂಡನ್ನು ಗುರಿ ಮುಟ್ಟಿಸಿ ಚಿಲಿ ಸಂಭ್ರಮಕ್ಕೆ ಕಾರಣರಾದರು.

ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿಸಿದ ಭಾರತ ತಂಡ 22ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಆದರೆ ಈ ಅವಕಾಶದಲ್ಲಿ ಭಾರತದ ಆಟಗಾರ್ತಿ ಬಾರಿಸಿದ ಚೆಂಡನ್ನು ಚಿಲಿ ತಂಡದ ಗೋಲ್ ಕೀಪರ್ ಕ್ಲಾಡಿಯಾ ಶುಲರ್ ಚೆಂಡನ್ನು ಗೋಲಿನತ್ತ ಬಿಡದೆ ತಡೆದರು.

ಹೀಗಾಗಿ 40ನೇ ನಿಮಿಷದವರೆಗೂ ಚಿಲಿ ತಂಡ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 41ನೇ ನಿಮಿಷ ದಲ್ಲಿ ಅನುಪಾ ಬಾರ್ಲಾ ಮೋಡಿ ಮಾಡಿದರು.

ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಭಾರತದ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು.

ಮೂರನೇ ಕ್ವಾರ್ಟರ್ ನ ಅಂತ್ಯಕ್ಕೆ ಪಂದ್ಯ 1-1ರಲ್ಲಿ ಸಮಬಲವಾಗಿದ್ದರಿಂದ ನಾಲ್ಕನೇ ಕ್ವಾರ್ಟರ್ ನ ಆಟ ಉಭಯ ತಂಡಗಳ ಪಾಲಿಗೂ ಮಹತ್ವದ್ದೆನಿಸಿತ್ತು.

ಈ ಕ್ವಾರ್ಟರ್ ನಲ್ಲಿ ಭಾರತದ ಸ್ಟ್ರೈಕರ್ ರಾಣಿ ಬಾರಿಸಿದ ಬ್ಯಾಕ್ ಹ್ಯಾಂಡ್ ಹೊಡೆತ ವನ್ನು ಚಿಲಿ ಗೋಲ್ಕೀಪರ್ ಕ್ಲಾಡಿಯಾ ಮನಮೋಹಕ ರೀತಿಯಲ್ಲಿ ತಡೆದು ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಸ್ವತಂತ್ರ ಪೂರ್ವದ ಸಾಮಾಜಿಕ,ಧಾರ್ಮಿಕ,ಚಳುವಳಿ

*🌕ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣಾ ಸಂಸ್ಥೆಗಳು, ಚಳುವಳಿಗಳು :*

🌕ಸ್ವತಂತ್ರ ಪೂರ್ವದ ಸುಧಾರಣಾ ಸಂಸ್ಥೆಗಳು ಮತ್ತು ಚಳುವಳಿಗಳು :

1) ಆತ್ಮೀಯ ಸಭಾ (1815) - ರಾಜ ರಾಮ್ ಮೋಹನ್ ರಾಯ್.

2) ಬ್ರಹ್ಮ ಸಮಾಜ (1828) - ರಾಜ ರಾಮ್ ಮೋಹನ್ ರಾಯ್.

3) ಸಾಧಾರಣ ಬ್ರಹ್ಮಸಮಾಜ - ಆನಂದ್ ಮೋಹನ್ ಬೋಸ್

4) ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ - ಎಮ್.ಜಿ ರಾನಡೆ.

5) ತತ್ವಭೋಧಿನಿ ಸಭಾ (1839) (ನಂತರ 1842ರಲ್ಲಿ ಬ್ರಹ್ಮ ಸಮಾಜದಲ್ಲಿ ವಿಲೀನಗೊಂಡಿತು• ಮಹರ್ಷಿ ದೇವೇಂದ್ರನಾಥ ಟ್ಯಾಗೋರ್.

6) ಸತ್ಯ ಶೋಧಕ ಸಮಾಜ (1873)  ಜ್ಯೋತಿರಾವ್ ಫುಲೆ (ಜಾತಿ ಶೋಷಣೆಯ ವಿರುದ್ಧ ಹೋರಾಟ).

7) ಶ್ರೀ ನಾರಾಯಣ ಧರ್ಮ ಪ್ರತಿಫಲನ - ಯೋಗಮಾ ಶ್ರೀ ನಾರಾಯಣ ಗುರು (ಜಾತಿ ಶೋಷಣೆಯ ವಿರುದ್ಧ ಹೋರಾಟ)

8) ಸೌಥ್ ಇಂಡಿಯನ್ ಲಿಬರಲ್ ಫೆಡರೇಷನ್ (ನಂತರ ಜಸ್ಟೀಸ್ ಪಾರ್ಟಿ & ದ್ರಾವಿಡ ಕಳಗಂ ಆಯಿತು) - ಟಿ ತ್ಯಾಗರಾಜ & ಟಿ.ಎಮ್ ನಾಯರ್ (ಆತ್ಮ ಗೌರವ).

9) ಹರಿಜನ ಸೇವಕ್ ಸಂಘ್ - ಮಹಾತ್ಮ ಗಾಂಧಿ.

10) ಪ್ರಾರ್ಥನಾ ಸಮಾಜ (1867)  ಆತ್ಮ ರಾಮ್ ಪಾಂಡುರಂಗ.

11) ಆರ್ಯ ಸಮಾಜ (1875) ಸ್ವಾಮಿ ದಯಾನಂದ.

12) ಹಿಂದೂ ಧರ್ಮ ಸಂಗ್ರಕ್ಷಣಿ  ಸಭಾ (1893 ನಾಸಿಕ್ ನಲ್ಲಿ) ಚಾಪೆಕರ್ ಸಹೋದರರು - ದಾಮೋದರ & ಬಾಲಕೃಷ್ಣ.

13) ಅಭಿನವ ಭಾರತ -ವಿ.ಡಿ. ಸಾವರ್ಕರ್.

14) ನ್ಯೂ ಇಂಡಿಯಾ ಅಸೋಸಿಯೇಶನ- ವಿ.ಡಿ. ಸಾವರ್ಕರ್.

15) ಅನುಶೀಲನ ಸಮಿತಿ - ಅರಬಿಂದೋ ಘೋಷ್ ಬರೀಂದ್ರ ಕುಮಾರ್ ಘೋಷ್, ಬಿ.ಪಿ ಮಿತ್ರ, ಅಭಿನಾಷ್ ಭಟ್ಟಾಚಾರ್ಯ & ಭೂಪೇಂದ್ರ ದತ್ತ.

16) ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) - ಗೋಪಾಲ ಕೃಷ್ಣ ಗೋಖಲೆ (ನೈಟ್ ಹುಡ್ ಗೌರವವನ್ನು ತಿರಸ್ಕರಿಸಿದ್ದರು).

17) ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್ - ಸಯ್ಯಿದ್ ಅಹ್ಮದ್ ಖಾನ್

18) ಬಹಿಷ್ಕ್ರಿತ ಹಿತಕರ್ಣಿ ಸಭಾ (1924), ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ -ಬಿ ಅಂಬೇಡ್ಕರ್.

19) ಅಖಿಲ ಭಾರತೀಯ ದಲಿತ ವರ್ಗ ಸಭಾ -ಬಿ.ಆರ್ ಅಂಬೇಡ್ಕರ್.

20) ಪೆಟ್ರೋಯಿಟಿಕ್  ಅಸೋಸಿಯೇಶನ-
ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್.

ಸೋಮವಾರ, ಏಪ್ರಿಲ್ 10, 2017

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ರೆ ಸಿಗಲ್ಲ ಸರ್ಕಾರಿ ನೌಕರಿ..!

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ರೆ ಸಿಗಲ್ಲ ಸರ್ಕಾರಿ ನೌಕರಿ..!

ಅಸ್ಸಾಂನ ಸರ್ಬಾನಂದ್ ಸೋನೊವಾಲ್ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಕರಡು ಸಿದ್ಧಪಡಿಸಿದೆ. ಈ ಜನಸಂಖ್ಯೆ ನೀತಿ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಪಾಲಕರಿಗೆ ಸರ್ಕಾರಿ ನೌಕರಿ ಸಿಗುವುದಿಲ್ಲ. ಹಾಗೆ ಪದವಿಯವರೆಗೆ ವಿದ್ಯಾರ್ಥಿನಿಯರಿಗೆ ನೀಡಲಾಗ್ತಾ ಇರುವ ಉಚಿತ ಶಿಕ್ಷಣ ಸಿಗುವುದಿಲ್ಲ.

ಅಸ್ಸಾಂನ ಆರೋಗ್ಯ ಸಚಿವ ಹಿಮಂತ್ ವಿಶ್ವ ಶರ್ಮಾ ಈ ವಿಷಯ ತಿಳಿಸಿದ್ದಾರೆ. ಇದು ಜನಸಂಖ್ಯಾ ನೀತಿಯಾಗಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ನೌಕರಿ ಸಿಗುವುದಿಲ್ಲ. ಕೆಲಸ ಸಿಕ್ಕ ನಂತ್ರ ನೌಕರಿಯ ಅವಧಿ ಮುಗಿಯುವವರೆಗೂ ಇದನ್ನು ಪರಿಪಾಲಿಸಬೇಕಾಗುತ್ತದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಟ್ರ್ಯಾಕ್ಟರ್, ವಸತಿ, ಸರ್ಕಾರಿ ಯೋಜನೆಗಳನ್ನು ಪಡೆಯಲೂ ಈ ದ್ವಿಸಂತಾನ ನೀತಿ ಅನ್ವಯಿಸಲಿದೆ. ರಾಜ್ಯ ಚುನಾವಣಾ ಆಯೋಗ ಅಡಿಯಲ್ಲಿ ನಡೆಯುವ ಪಂಚಾಯತಿ, ಪುರಸಭೆ ಅಧ್ಯಕ್ಷರು, ಸದಸ್ಯರ ಚುನಾವಣೆಗೂ ಈ ನೀತಿ ಅನ್ವಯವಾಗಲಿದೆ.

'ದಲೈ ಲಾಮಾ' ಉತ್ತರಾಧಿಕಾರಿ ನೇಮಕಕ್ಕೆ ಚೀನಾ ಒಪ್ಪಿಗೆ ಅತ್ಯಗತ್ಯ

'ದಲೈ ಲಾಮಾ ಉತ್ತರಾಧಿಕಾರಿ ನೇಮಕಕ್ಕೆ ಚೀನಾ ಒಪ್ಪಿಗೆ ಅತ್ಯಗತ್ಯ'

ಬೀಜಿಂಗ್: ದಲೈ ಲಾಮಾ ಅವರ ಉತ್ತರಾಧಿಕಾರಿ ಯಾರಾಗಬೇಕೆಂದು ಚೀನಾ ನಿರ್ಧರಿಸುವುದಿಲ್ಲ. ಆದರೆ ಟಿಬೆಟಿಯನ್ನರ ಮುಂದಿನ ಪರಮೋಚ್ಚ ಧರ್ಮಗುರು  ಆಗುವವರು ಚೀನಾದ ಒಪ್ಪಿಗೆ ಪಡೆದಿರಲೇಬೇಕು ಎಂದು  ಹೇಳುವ ಮೂಲಕ ಚೀನಾದ ಚಿಂತಕರ ಚಾವಡಿಯು ದಲೈ ಲಾಮಾ ಅವರಿಗೆ ತಿರುಗೇಟು ನೀಡಿದೆ.
  ಚೀನಾದ ಕ್ವಿಂಗ್ ರಾಜಮನೆತನ ರೂಪಿಸಿರುವ ನಿಯಮಾವಳಿಗಳನ್ನು ಆಧರಿಸಿ ಟಿಬೆಟ್‌ನ ಹೊಸ ಧರ್ಮಗುರು ನೇಮಕಕ್ಕೆ ಅನುಮೋದನೆ ನೀಡುವ ಅಧಿಕಾರ ಸರ್ಕಾರಕ್ಕಿದೆ ಎಂದು ಶಾಂಘೈನ ತೊಂಗ್‌ಜಿ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಸಹ ನಿರ್ದೇಶಕ ವಾಂಗ್ ದೆಹುವಾ ಅವರು ಹೇಳಿದ್ದಾರೆ.   ಶತಮಾನದಷ್ಟು ಹಳೆಯ ಸಂಪ್ರದಾಯವನ್ನು ಬದಲಾಯಿಸುತ್ತಿರುವುದಾಗಿ ದಲೈಲಾಮಾ ಅವರು ಹೇಳುತ್ತಿರುವುದು ಹಾಸ್ಯಾಸ್ಪದ. ಏಕೆಂದರೆ ಈ ಸಂಪ್ರದಾಯವನ್ನು 1959ರಲ್ಲೇ  ಬದಲಿಸಲಾಗಿದೆ.
  ಟಿಬೆಟಿಯನ್ನರ ಇಚ್ಛೆಗೆ ಅನುಸಾರವಾಗಿ, ಚೀನಾದ ಕಾನೂನು ಹಾಗೂ ಐತಿಹಾಸಿಕ ನಿಯಮಗಳ ಪ್ರಕಾರ ದಲೈ ಲಾಮಾ ಅವರು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದರೆ ಅದನ್ನು ಬೆಂಬಲಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.   ತಮ್ಮ ನಂತರ ಯಾರು ಎಂಬುದನ್ನು ಚೀನಾ ನಿರ್ಧರಿಸುವಂತಿಲ್ಲ ಎಂದು ಚೀನಾ ಗಡಿಗೆ ಸಮೀಪದಲ್ಲಿರುವ  ತವಾಂಗ್‌ನಲ್ಲಿ ದಲೈ ಲಾಮಾ ಅವರು ಶನಿವಾರ ಹೇಳಿದ್ದರು. ಈ ಮೂಲಕ ಚೀನಾಕ್ಕೆ ತಿರುಗೇಟು ನೀಡಿದ್ದರು.    ಫುಡನ್ ವಿಶ್ವವಿದ್ಯಾಲಯದ  ಅಮೆರಿಕ ಅಧ್ಯಯನ ವಿಭಾಗದ ಡೀನ್ ಶೆನ್ ಡಿಂಗ್ಲಿ ಅವರು ಕೂಡಾ ಚೀನಾದ ಅನುಮೋದನೆ ಬೇಕು ಎಂದು ಪ್ರತಿಪಾದಿಸಿದ್ದಾರೆ.

ಕೊರಿಯಾ ಪರ್ಯಾಯ ದ್ವೀಪದತ್ತ ಅಮೇರಿಕದ ನೌಕಾಪಡೆಯ ದಾಳಿ ತಂಡ

ಕೊರಿಯಾ ಪರ್ಯಾಯ ದ್ವೀಪದತ್ತ ಅಮೆರಿಕದ ನೌಕಾಪಡೆಯ ದಾಳಿ ತಂಡ

ವಾಷಿಂಗ್ಟನ್, ಎ.9: ಉತ್ತರ ಕೊರಿಯಾ ನಡೆಸುತ್ತಿರುವ ‘ಭಂಡ ಧೈರ್ಯದ’ ಪರಮಾಣು ಅಸ್ತ್ರ ಕಾರ್ಯಕ್ರಮಕ್ಕೆ ಎಚ್ಚರಿಕೆ ನೀಡುವ ಕ್ರಮವಾಗಿ ತನ್ನ ದಾಳಿ ತಂಡವನ್ನು ಕೊರಿಯಾ ಪರ್ಯಾಯ ದ್ವೀಪದತ್ತ ಕಳುಹಿಸಿರುವುದಾಗಿ ಅಮೆರಿಕದ ನೌಕಾಪಡೆ ತಿಳಿಸಿದೆ.

ಅಮೆರಿಕದ ಈ ಕ್ರಮದಿಂದ ಕೊರಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿ ಉದ್ವಿಗ್ನತೆ ತಲೆದೋರಲಿದೆ. ಸಿರಿಯಾದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿರುವುದು ಪರೋಕ್ಷವಾಗಿ ಉತ್ತರಕೊರಿಯಾಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಸಿದ್ದತೆಯನ್ನು ಕಾಯ್ದುಕೊಳ್ಳಲು ಎಚ್ಚರಿಕೆಯ ಕ್ರಮವಾಗಿ ಕಾರ್ಲ್ ವಿನ್ಸನ್ ದಾಳಿ ತಂಡವನ್ನು ಉತ್ತರದತ್ತ ಸಾಗಲು ಅಮೆರಿಕದ ಪೆಸಿಫಿಕ್ ಕಮಾಂಡ್ ಆದೇಶಿಸಿದೆ ಎಂದು ಅಮೆರಿಕದ ಪೆಸಿಫಿಕ್ ಕಮಾಂಡ್‌ನ ವಕ್ತಾರ ಕಮಾಂಡರ್ ಡೇವ್ ಬೆನ್‌ಹ್ಯಾಮ್ ತಿಳಿಸಿದ್ದಾರೆ.

ಉತ್ತರ ಕೊರಿಯಾ ಈ ವಲಯದಲ್ಲಿ ಭದ್ರತೆಗೆ ಎದುರಾಗಿರುವ ಅಗ್ರ ಬೆದರಿಕೆ ಎಂದವರು ವಿಶ್ಲೇಷಿಸಿದ್ದಾರೆ. ಅಮೆರಿಕ ನೌಕಾಪಡೆಯ ದಾಳಿ ತಂಡ ಅತ್ಯಾಧುನಿಕ ಯುಎಸ್‌ಎಸ್ ಕಾರ್ಲ್ ವಿನ್ಸನ್ ಯುದ್ದವಿಮಾನದಿಂದ ಸುಸಜ್ಜಿತವಾಗಿದೆ. ಸಿಂಗಾಪುರದಿಂದ ಇದೀಗ ಈ ದಾಳಿ ತಂಡ ಪಶ್ಚಿಮ ಪೆಸಿಫಿಕ್ ಪ್ರದೇಶದತ್ತ ಸಾಗುತ್ತಿದೆ.

ಸಿರಿಯಾದ ಮೇಲೆ ಅಮೆರಿಕ ನಡೆಸಿದ್ದ ದಾಳಿಯನ್ನು ‘ಸಹಿಸಲಾಗದ ಆಕ್ರಮಣ’ ಎಂದು ದೂಷಿಸಿದ್ದ ಉತ್ತರ ಕೊರಿಯಾ, ಉತ್ತರ ಕೊರಿಯಾವು ಪರಮಾಣು ಶಕ್ತ ರಾಷ್ಟ್ರವಾಗಲು ಬಯಸುತ್ತಿರುವುದನ್ನು ಈ ಘಟನೆ ಸಮರ್ಥಿಸುತ್ತಿದೆ ಎಂದು ಹೇಳಿಕೆ ನೀಡಿತ್ತು.

ಚೀನಾಕ್ಕೆ ಕತ್ತೆ ರಫ್ತು ಮಾಡಲಿರುವ ಪಾಕ್

ಚೀನಾಕ್ಕೆ ಕತ್ತೆ ರಫ್ತು ಮಾಡಲಿರುವ ಪಾಕ್

ಪೇಷಾವರ, ಎ.9: ಒಂದು ಬಿಲಿಯನ್ ರೂಪಾಯಿ ಬಂಡವಾಳದ ‘ಕತ್ತೆ ಅಭಿವೃದ್ಧಿ ಕಾರ್ಯಕ್ರಮ‘ದಲ್ಲಿ ಚೀನಾಕ್ಕೆ ಕತ್ತೆಗಳನ್ನು ರಫ್ತು ಮಾಡಲು ಪಾಕಿಸ್ತಾನ ಚಿಂತನೆ ನಡೆಸಿದೆ.

ಕತ್ತೆಯ ಚರ್ಮವನ್ನು ಔಷಧ ತಯಾರಿಕೆಗೆ ಬಳಸಲಾಗುವ ಕಾರಣ ಕತ್ತೆಗೆ ಚೀನಾದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ವಾಯುವ್ಯ ಪಾಕಿಸ್ತಾನದ ಖೈಬರ್- ಫಖ್ತೂನ್‌ಕ್ವ ಪ್ರದೇಶದಲ್ಲಿ ಕತ್ತೆ ಅಭಿವೃದ್ಧಿ ಕಾರ್ಯಕ್ರಮದಡಿ ಚೀನಾದಿಂದ ಬಂಡವಾಳ ಆಕರ್ಷಿಸಲು ಪಾಕಿಸ್ತಾನ ಯೋಜನೆ ರೂಪಿಸಿದೆ.

46 ಬಿಲಿಯನ್ ಡಾಲರ್ ವೆಚ್ಚದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಚೀನಾ-ಪಾಕಿಸ್ತಾನ ಆರ್ಥಿಕ ವಲಯ ಯೋಜನೆಯಡಿ ಕತ್ತೆಗಳನ್ನು ಅಭಿವೃದ್ಧಿಗೊಳಿಸಿ ರಫ್ತು ಮಾಡುವ ಯೋಜನೆ ರೂಪಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕತ್ತೆಗಳ ವಂಶಾಭಿವೃದ್ಧಿಗೊಳಿಸುವ ಮತ್ತು ಕತ್ತೆಗಳ ಕಾರ್ಯನಿರ್ವಹಣೆ ಹೆಚ್ಚಿಸುವ ಕಾರ್ಯ ನಡೆಸಲಾಗುವುದು ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

26,684 ಕೋ.ರೂ.ಮೌಲ್ಯದ ಬೀಫ್ ರಫ್ತು ಮಾಡಿದ ಭಾರತ


26,684 ಕೋ. ರೂ. ಮೌಲ್ಯದ ಬೀಫ್ ರಫ್ತು ಮಾಡಿದ ಭಾರತ

ಹೊಸದಿಲ್ಲಿ, ಮಾ.27: ಕಳೆದ (2015-16)ರ ಆರ್ಥಿಕ ವರ್ಷದಲ್ಲಿ ಭಾರತ 26,684 ಕೋಟಿ ರೂ. ಮೊತ್ತದ ಕೋಣದ ಮಾಂಸವನ್ನು ರಫ್ತು ಮಾಡಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

  ವಿಯೆಟ್ನಾಮ್, ಮಲೇಶ್ಯಾ, ಈಜಿಪ್ಟ್, ಇಂಡೋನೇಶಿಯಾ ಮತ್ತು ಸೌದಿ ಅರೆಬಿಯಾ ದೇಶಗಳಿಗೆ ಭಾರತ ಮಾಂಸ ರಪ್ತು ಮಾಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

  ಹಾಲಿ ಇರುವ ರಫ್ತು ನೀತಿಯ ಪ್ರಕಾರ ದನದ ಮಾಂಸವನ್ನು ರಫ್ತು ಮಾಡುವುದಕ್ಕೆ ನಿಷೇಧವಿದೆ. ಕೋಣದ ಮೂಳೆರಹಿತ ಮಾಂಸ, ಆಡು, ಕುರಿ ಮತ್ತು ಪಕ್ಷಿಗಳ ಮಾಂಸ ರಪ್ತು ಮಾಡಲು ಅವಕಾಶವಿದೆ. ಈ ವರ್ಷದ ಜನವರಿಯಿಂದ ಎಪ್ರಿಲ್ ವರೆಗಿನ ಅವಧಿಯಲ್ಲಿ 2.82 ಕೋಟಿ ರೂ.
ಸಂಸ್ಕರಿಸಿದ ಮಾಂಸ ರಫ್ತು ಮಾಡಲಾಗಿದೆ. ಇದೇ ಅವಧಿಯಲ್ಲಿ 727.16 ಕೋಟಿ ರೂ. ಮೌಲ್ಯದ ಆಡು/ಕುರಿ/ ಮಾಂಸ ಮತ್ತು 22,073.5 ಕೋಟಿ ರೂ. ಮೌಲ್ಯದ ಹಕ್ಕಿಗಳ ಮಾಂಸವನ್ನು ರಫ್ತು ಮಾಡಲಾಗಿದೆ ಎಂದವರು ತಿಳಿಸಿದರು.

ಭಾರತಕ್ಕೆ ಬಾಂಗ್ಲಾವನ್ನು ಮಾರಿದ ಹಸೀನಾ

ಅಧಿಕಾರಕ್ಕೆ ಅಂಟಿಕೊಳ್ಳುವ ಆಸೆಯಿಂದ ಬಾಂಗ್ಲಾವನ್ನು ಭಾರತಕ್ಕೆ ಮಾರುತ್ತಿರುವ ಹಸೀನಾ : ಖಾಲಿದಾ ಝಿಯಾ ಆರೋಪ

ಢಾಕಾ, ಎ.9: ಜೀವಮಾನವಿಡೀ ಅಧಿಕಾರದಲ್ಲಿ ಉಳಿಯಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾವನ್ನು ಭಾರತಕ್ಕೆ ಮಾರುತ್ತಿದ್ದಾರೆ ಎಂದು ಬಾಂಗ್ಲಾದ ವಿಪಕ್ಷ ನಾಯಕಿ ಖಾಲಿದಾ ಝಿಯಾ ಆರೋಪಿಸಿದ್ದಾರೆ.

ಹಸೀನಾ ಜೀವಮಾನವಿಡೀ ಅಧಿಕಾರದಲ್ಲಿರಬೇಕೆಂದು ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಹಲವು ಕೃತ್ಯಗಳನ್ನು ನಡೆಸಿದ್ದಾರೆ. ದೇಶಕ್ಕೆ ಯಾವುದನ್ನೂ ಉಳಿಸದೆ ಎಲ್ಲವನ್ನೂ ಮಾರಿಬಿಟ್ಟಿದ್ದಾರೆ . ಆದರೆ ದೇಶ ಮಾರಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಜಾಗತಿಕ ಇತಿಹಾಸ ತಿಳಿಸುತ್ತದೆ ಎಂದು ಖಾಲಿದಾ ಹೇಳಿದರು.

ಭಾರತ ಮತ್ತು ಬಾಂಗ್ಲಾ ದೇಶಗಳು 22 ಒಪ್ಪಂದಕ್ಕೆ ಸಹಿ ಹಾಕಿದ ಕೆಲ ಗಂಟೆಗಳ ಬಳಿಕ ಬಾಂಗ್ಲಾದ ಸಂಸತ್ ಭವನದ ಮುಂಭಾಗದ ಪಕ್ಷದ ಸಭೆಯೊಂದರಲ್ಲಿ ಮಾಜಿ ಪ್ರಧಾನಿ, ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಅಧ್ಯಕ್ಷೆ ಖಾಲಿದಾ ಮಾತನಾಡಿದರು.

ಭಾರತದೊಂದಿಗೆ ರಕ್ಷಣಾ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕುವುದು ಬಾಂಗ್ಲಾಕ್ಕೆ ಮತ್ತು ದೇಶದ ಜನತೆಗೆ ಎಸಗಿರುವ ದ್ರೋಹವಾಗಿದೆ . ಈ ಬೆಳವಣಿಗೆಯಿಂದ ಕೆ ನೀಬಾಂಗ್ಲಾದ ಭದ್ರತಾ ರಹಸ್ಯವನ್ನು ಭಾರತಕ್ಕೆ ಬಿಟ್ಟುಕೊಟ್ಟಂತಾಗುತ್ತದೆ ಎಂದು ಶನಿವಾರ ಬಿಎನ್‌ಪಿಯ ವಕ್ತಾರ ರುಹುಲ್ ಕಬೀರ್ ರಿಝ್ವಿ ಹೇಳಿಡಿದ್ದರು. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದ ಭದ್ರತೆ ಮತ್ತು ಅಸ್ತಿತ್ವವನ್ನು ಪಣಕ್ಕೆ ಇಟ್ಟಂತಾಗಿದೆ ಎಂದವರು ಹೇಳಿದ್ದರು.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಆಡಳಿತ ಪಕ್ಷವಾದ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಮತ್ತು ರಸ್ತೆ ಸಾರಿಗೆ ಸಚಿವ ಒಬೈದುಲ್ ಖಾದರ್, ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದೆ ಬಿಎನ್‌ಪಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಇದು ತಂತ್ರಜ್ಞಾನದ ಯುಗ.

ಇಲ್ಲಿ ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

2014ರ ಮಹಾಚುನಾವಣೆಯನ್ನು ಬಹಿಷ್ಕರಿಸಿದ್ದ ಬಿಎನ್‌ಪಿ, ಆ ಬಳಿಕ ದೇಶದ ರಾಜಕೀಯ ರಂಗದಲ್ಲಿ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಲು ಹೆಣಗಾಡುತ್ತಿದೆ. ಇದೀಗ ಭಾರತ-ಬಾಂಗ್ಲಾ ಒಪ್ಪಂದದ ವಿಷಯವನ್ನು ವಿವಾದವನ್ನಾಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು , ಈ ಮೂಲಕ ಪಕ್ಷದ ಕಾರ್ಯಕರ್ತರ ಮತ್ತು ಬೆಂಬಲಿಗರ ಮನೋಬಲ ಹೆಚ್ಚಿಸಲು ಬಯಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ವಿಷಯದಲ್ಲಿ ಬಿಎನ್‌ಪಿ ದ್ವಿಮುಖ ಧೋರಣೆ ತಳೆಯುತ್ತಿದೆ ಎಂದು ಇತ್ತೀಚೆಗೆ ಆರೋಪಿಸಿದ್ದ ಪ್ರಧಾನಿ ಶೇಖ್ ಹಸೀನಾ, ಭಾರತಕ್ಕೆ ಗ್ಯಾಸ್ ಮಾರಾಟ ಮಾಡುವ ಆಶ್ವಾಸನೆ ನೀಡಿ 2001ರಲ್ಲಿ ಖಾಲಿದಾ ಝಿಯಾ ಅಧಿಕಾರಕ್ಕೆ ಬಂದಿದ್ದರು. ಬಾಂಗ್ಲಾದೇಶದ ಹಿತಾಸಕ್ತಿಯನ್ನು ಕಡೆಗಣಿಸಿದ ಇಂತವರ ಬಾಯಲ್ಲಿ ಭಾರತ ವಿರೋಧಿ ಪದಗಳು ಶೋಭಿಸುವುದಿಲ್ಲ ಎಂದು ಟೀಕಿಸಿದ್ದರು.

ತನ್ನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರುತ್ತಿರುವ ಝಿಯಾರಿಗೆ ನ್ಯಾಯಾಲಯದಲ್ಲಿ ಹಾಜರಾಗಲೂ ಧೈರ್ಯ ಇಲ್ಲ ಎಂದು ಹಸೀನಾ ಟೀಕಿಸಿದ್ದರು. ಚಾರಿಟೇಬಲ್ ಟ್ರಸ್ಟ್‌ನ ಹೆಸರಲ್ಲಿ ಝಿಯಾ 4 ಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

71 ವರ್ಷದ ಝಿಯಾ ಮತ್ತು 69 ವರ್ಷದ ಹಸೀನಾರ ಮಧ್ಯೆ ತೀವ್ರ ರಾಜಕೀಯ ವೈಷಮ್ಯವಿದ್ದು ‘ಕಾದಾಡುವ ಬೇಗಂಗಳು’ ಎಂದೇ ಇವರು ಹೆಸರಾಗಿದ್ದಾರೆ.