ಬುಧವಾರ, ಜನವರಿ 30, 2019

ಶಾಲಾ ಸೌಲಭ್ಯಗಳು

ಶಾಲಾ ಸೌಲಭ್ಯಗಳು


CONTENTS


ಶಿಕ್ಷಕರ ಸ್ಥಳಾಂತರ ಸಂಬಂಧ ರಾಜ್ಯ ನೀತಿ ಹಾಗೂ ನಿಯಮಗಳು


ದೂರು/ತಕರಾರುಗಳಿಗೆ ಪರಿಹಾರ


ಪಚಾರಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಶಾಲೆಯು ಮೂಲಭೂತ ಘಟಕವಾಗಿರುತ್ತದೆ. 2012-13ನೇ ಸಾಲಿನ ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆ (ಡೈಸ್) ಅಂಕಿ ಅಂಶಗಳ ವರದಿಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 78,950 ಶಾಲೆಗಳು (ಪದವಿ ಪೂರ್ವ ಕಾಲೇಜುಗಳು ಸೇರಿ) ಇದ್ದು, ಅವುಗಳಲ್ಲಿ 25,950 ಕಿರಿಯ ಪ್ರಾಥಮಿಕ ಶಾಲೆಗಳು, 34,086 ಹಿರಿಯ ಪ್ರಾಥಮಿಕ ಶಾಲೆಗಳು, 14,194 ಪ್ರೌಢ ಶಾಲೆಗಳು ಮತ್ತು 4,720 ಪದವಿ ಪೂರ್ವ ಕಾಲೇಜುಗಳಿವೆ. ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಅನುಪಾತವು 0.761 : 1 ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಪ್ರೌಢ ಶಾಲೆಗಳ ಅನುಪಾತವು 1 : 0.416 ಆಗಿರುತ್ತದೆ. .


1 ರಿಂದ 8ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, ಪ್ರೌಢ ಶಾಲೆಗಳಲ್ಲಿ ಮತ್ತು 1 ರಿಂದ 12ನೇ ತರಗತಿಯವರೆಗೆ ಉನ್ನತ ಪ್ರೌಢ ಶಾಲೆಗಳಲ್ಲಿ 8ನೇ ತರಗತಿ ಸೌಲಭ್ಯದ ಲಭ್ಯತೆ ಇರುತ್ತದೆ. ಆದಾಗ್ಯೂ 1 ರಿಂದ 7ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆ ವಾಸಸ್ಥಳಕ್ಕೆ ಹತ್ತಿರವಿರುವ 8ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಅಥವಾ ಪ್ರೌಢ ಶಾಲೆಗಳಲ್ಲಿ ದಾಖಲಾತಿ ಹೊಂದುತ್ತಾರೆ.

2010-11ನೇ ಸಾಲಿನ ಆರ್.ಟಿ.ಇ ಪೂರಕ ಯೋಜನೆಯಡಿಯಲ್ಲಿ ರಾಜ್ಯದ 5 ಜಿಲ್ಲೆಗಳಲ್ಲಿ ಬೆಂಗಳೂರು (ನಗರ), ದಕ್ಷಿಣ ಕನ್ನಡ, ಧಾರವಾಡ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವು ನಿರ್ದಿಷ್ಟ ವರ್ಗಗಳ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಸದರಿ ಶಾಲೆಗಳು ಶಿಕ್ಷಣ ವಂಚಿತ ನಗರ ಪ್ರದೇಶಗಳ ಮಕ್ಕಳು, ಬೆಟ್ಟ, ಗುಡ್ಡಗಾಡು, ನದಿ, ಅರಣ್ಯ ಪ್ರದೇಶ, ನಕ್ಸಲ್ ಪೀಡಿತ ಪ್ರದೇಶ, ಇತರೆ ಭೌಗೋಳಿಕ ಅಡೆತಡೆಗಳು ಇರುವ ಪ್ರದೇಶಗಳಲ್ಲಿ ಇರುವ ಮಕ್ಕಳಿಗಾಗಿ, ಶಾಲಾ ಅನುಭವ ಮಾತ್ರವಲ್ಲದೆ, ಊಟ ಮತ್ತು ವಸತಿಗಳ ಅಗತ್ಯತೆ ಇರುವ ವಯಸ್ಕರ ರಕ್ಷಣೆ ಇಲ್ಲದೆ ಸಂಕಷ್ಟದಲ್ಲಿರುವ ಅನಾಥ ಹಾಗೂ ಬೀದಿ ಮಕ್ಕಳ ರಕ್ಷಣೆ, ಪಾಲನೆ/ಪೋಷಣೆ ಹಾಗೂ ಶಾಲಾ ಅವಕಾಶಕ್ಕಾಗಿ ವಿಶೇಷವಾಗಿ ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾಲಯಗಳ ಮಾದರಿಯಲ್ಲಿ 10 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ (6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ) ಪ್ರಾರಂಭಿಸಿರುವ ಸನಿವಾಸ ಶಾಲೆಗಳಾಗಿವೆ. ಪ್ರತಿ ಶಾಲೆಯಲ್ಲಿ ಗರಿಷ್ಟ 100 ಮಕ್ಕಳನ್ನು ದಾಖಲಿಸಲು ಅವಕಾಶ ಇದೆ. ಈ ಶಾಲೆಗಳಳ್ಲಿ 2013ರ ಜೂನ್ ತಿಂಗಳವರೆಗೆ ಒಟ್ಟು 328 ಮಕ್ಕಳು ದಾಖಲಾಗಿದ್ದು, ಜಿಲ್ಲಾವಾರು ದಾಖಲಾತಿ ವಿವರಗಳು ಕೆಳಗಿನಂತಿವೆ:

ಕ್ರ.ಸಂ

ಜಿಲ್ಲೆಯ ಹೆಸರು

ಬ್ಲಾಕ್ ಹೆಸರು

ಶಾಲೆ ಇರುವ ಸ್ಥಳ

ದಾಖಲಾಗಿರುವ  ಮಕ್ಕಳ ಸಂಖ್ಯೆ

01

ಬೆಂಗಳೂರು ನಗರಬೆಂಗಳೂರು (ದಕ್ಷಿಣ)Tತಲಘಟ್ಟಪುರ55

02

ದಕ್ಷಿಣ ಕನ್ನಡಬೆಳ್ತಂಗಡಿಬೆಳ್ತಂಗಡಿ91

03

ಧಾರವಾಡಹುಬ್ಬಳ್ಳಿ ಸಿಟಿಘಂಟಿಕೇರಿ ಹುಬ್ಬಳ್ಳಿ56

04

ಮೈಸೂರುಮೈಸೂರು ಉತ್ತರನಜರಾಬಾದ್63

05

ಶಿವಮೊಗ್ಗತೀರ್ಥಹಳ್ಳಿಆಗುಂಬೆ63ಒಟ್ಟು328

ಪ್ರಾಥಮಿಕ ಶಿಕ್ಷಕರ ನೇಮಕಾತಿ ಕುರಿತು ರಾಜ್ಯ ಸರ್ಕಾರದ ನೀತಿ ಹಾಗೂ ನಿಯಮಗಳು

ಶಿಕ್ಷಕರ ನೇಮಕಾತಿಯನ್ನು ಪಾರದರ್ಶಕತೆಯಿಂದ ನಡೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕವನ್ನು (CAC) ಸ್ಥಾಪಿಸಲಾಗಿದೆ


ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳಿದ್ದು, ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದು, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇಮಕಾತಿ ಪ್ರಾಧಿಕಾರಿಗಳಾಗಿರುತ್ತಾರೆ,


ಅಭ್ಯರ್ಥಿಗಳು ಪಿ.ಯು.ಸಿ.ಡಿ.ಇಡಿ. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಸರಾಸರಿ ಶೇಕಡ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು (Provisional Selection List) ಸಿದ್ಧಪಡಿಸಲಾಗುವುದು.


ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಮೀಸಲಾತಿ/ವಿನಾಯಿತಿ ನಿಯಮಗಳ (Reservation) ಆಧಾರದ ಮೇಲೆ ಸಿದ್ಧಪಡಿಸಿ, ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳು ಇದ್ದಲ್ಲಿ ವ್ಯಕ್ತಪಡಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು. ಶೇಕಡ 50 ರಷ್ಟು ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ.


ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಜಿಲ್ಲಾವಾರು ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.


ಕಾರ್ಯನಿರ್ವಹಿಸಲು ತಮಗೆ ಅನುಕೂಲವಾದಂತಹ ಶಾಲೆಗಳನ್ನು ಆಯ್ಕೆ ಮಾಡಲು ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಅವಕಾಶ ನೀಡಲಾಗುವುದು.


2001ನೇ ಸಾಲಿನ ನಂತರ ನೇಮಕಾತಿಯಾಗಿರುವ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕು. 04-05-2005ರ ದಿನಾಂಕಕ್ಕೆ ಗ್ರಾಮಾಂತರ ಪ್ರದೇಶದಲ್ಲಿ 5 ವರ್ಷ ಸೇವೆ ಪೂರೈಸಿರುವ ಶಿಕ್ಷಕರಿಗೆ ಸೇವಾ ಅವಧಿಯಲ್ಲಿ ಒಂದು ಬಾರಿ ಘಟಕದ ಹೊರಗೆ ವರ್ಗಾವಣೆ ಪಡೆಯಲು ಅವಕಾಶವಿದ್ದು, ತೀವ್ರ ಕಾಯಿಲೆ, ದೈಹಿಕ ಅಂಗವಿಕಲತೆ, ವಿಧವೆ, ಪತಿ/ಪತ್ನಿ ಸರ್ಕಾರಿ ನೌಕರರಾಗಿರುವ ಪ್ರಕರಣ ಇತ್ಯಾದಿ ಸಂದರ್ಭಗಳಿಗೆ ವಿನಾಯಿತಿ ಇರುತ್ತದೆ.


ನೇಮಕಾತಿಯಾದ ನಂತರ ಶಿಕ್ಷಕರು ತಮ್ಮ ನೇಮಕಾತಿ ಸ್ಥಳದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕು.


ಶಿಕ್ಷಕರ ಸ್ಥಳಾಂತರ ಸಂಬಂಧ ರಾಜ್ಯ ನೀತಿ ಹಾಗೂ ನಿಯಮಗಳು

2007ನೇ ಸಾಲಿನಿಂದ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯಿದೆಯನ್ನು (Regulation of Teachers Transfer Act) ರಾಜ್ಯ ಸರ್ಕಾರವು ಅಳವಡಿಸಿದ್ದು, ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಅಗತ್ಯವಿರುವ ಶಾಲೆಗಳಿಗೆ ಮರುಹಂಚಿಕೆ ಕಾರ್ಯವನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಿಂತ ಮುಂಚಿತವಾಗಿ ನಡೆಸಲಾಗುತ್ತದೆ. ಕೌನ್ಸಿಲಿಂಗ್ ಮೂಲಕ ಮರುಹಂಚಿಕೆ ಕಾರ್ಯವನ್ನು ನ್ಯಾಯ ಹಾಗೂ ಪಾರದರ್ಶಕತೆಯಿಂದ ನಡೆಸಲು ಅವಕಾಶ ಸಿಗುವುದಲ್ಲದೇ ಯಾವುದೇ ರೀತಿಯ ಹಸ್ತಕ್ಷೇಪ ಮತ್ತು ತಾರತಮ್ಯವನ್ನು ತಡೆಗಟ್ಟುವ ಮೂಲಕ ಪರಿಣಾಮಕಾರಿ ಆಡಳಿತಕ್ಕೆ ಸಹಕಾರಿಯಾಗುತ್ತದೆ.

ದೂರು/ತಕರಾರುಗಳಿಗೆ ಪರಿಹಾರ

ಶಾಲಾ ಅಭಿವೃದ್ಧಿ ಹಾಗೂ ಉಸ್ತುವಾರಿ ಸಮಿತಿಯು ಶಿಕ್ಷಕರು ಅನುಭವಿಸುವ ತೊಂದರೆ, ಕುಂದು ಕೊರತೆಗಳಿಗೆ, ಶಿಕ್ಷಕರು ನೀಡಿದ ದೂರುಗಳಿಗೆ ಪರಿಹಾರವನ್ನು ನೀಡುವ ಸಂಬಂಧ ಮೊದಲನೇ ಹಂತದ ಪ್ರಾಧಿಕಾರವಾಗಿರುತ್ತದೆ.


ನೇಮಕಾತಿ, ವೇತನ, ಬಡ್ತಿ, ರಜಾ ಸೌಲಭ್ಯ ಹಾಗೂ ಸೇವೆಗೆ ಸಂಬಂಧಿಸಿದ ಇತರೆ ವಿಷಯಗಳಲ್ಲಿ ಕ್ರಮಗಳನ್ನು ಬ್ಲಾಕ್ ಹಂತದಲ್ಲಿ ಪಾರದರ್ಶಕತೆಯಿಂದ ಕೈಗೊಳ್ಳಲಾಗುತ್ತಿದೆ. ಆಕ್ಷೇಪಣೆಗಳಿದ್ದಲ್ಲಿ ಬ್ಲಾಕ್/ಜಿಲ್ಲಾ ಹಂತದ ಕಛೇರಿಯಲ್ಲಿ ಪರಿಹಾರ ಸಿಗುತ್ತದೆ ಹಾಗೂ ಯಾವುದೇ ಶಿಕ್ಷಕರು ನ್ಯಾಯಕ್ಕಾಗಿ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸವಹುದಾಗಿದೆ


ಮೂಲ : ಎಸ್ ಎಸ್ ಏ ಕರ್ನಾಟಕ

ಆರ್. ಟಿ. ಇ. ಕಾಯಿದೆ

ಆರ್. ಟಿ. ಇ. ಕಾಯಿದೆ


CONTENTS


ವಿದ್ಯಾರ್ಹತೆ


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ರಚನೆ ಮತ್ತು ವಿಷಯಸೂಚಿ


ಅರ್ಹತಾ ಅಂಕಗಳು


ಸಮಂಜಸತೆ


ಪರೀಕ್ಷೆಯನ್ನು ನೆರವೇಸುವ ಕಾರ್ಯವಿಧಾನ


ಕಾನೂನು ವಿವಾದ


ನಿರ್ವಹಣೆ


ಹಿನ್ನೆಲೆ ಮತ್ತು ಮೂಲ ಕಾರಣಗಳು


ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ಯನ್ನು ಜಾರಿ ಮಾಡಲು ದೇಶಾದ್ಯಂತ ಸಮಯದ ಪರಿಧಿಯಲ್ಲಿ ಕೆಲಸ ಮಾಡುವ ಬಹಳಷ್ಟು ಮಂದಿ ಶಿಕ್ಷಕರ ಅಗತ್ಯತೆ ಇದೆ. ಈ ಕೆಲಸವು ಅಪರಿಮಿತವಾಗಿದ್ದರೂ, ಯಾವುದೇ ಕಾರಣಕ್ಕೂ ಕೆಲಸಕ್ಕೆ ಸೇರುವ ಶಿಕ್ಷಕರ ಗುಣಮಟ್ಟವು ಕಡಿಮೆಯಾಗದ ಹಾಗೆ ನೋಡಿಕೊಳ್ಳುವ ಅವಶ್ಯಕತೆಯಿದೆ.ಆದುದರಿಂದ ಶಿಕ್ಷಕರಾಗಿ ಸೇರುವ ಮಂದಿಯು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಮಟ್ಟದ ಬೋಧನೆಯಲ್ಲಿ ಬರುವ ಕಠಿಣ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಅಗತ್ಯ ಯೋಗ್ಯತೆಗಳನ್ನು ಹೊಂದಿರುವುದನ್ನು ಖಾತ್ರಿಮಾಡಿಕೊಳ್ಳುವ ಅಗತ್ಯವಿರುತ್ತದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ,ವಿಭಾಗ 23 ರ ಉಪ-ವಿಭಾಗ (1)ದ ಉಪಬಂಧಕ್ಕೆ ಅನುಗುಣವಾಗಿ ರಾಷ್ಟ್ರೀಯ ಶಿಕ್ಷಕರ ವಿದ್ಯಾಭ್ಯಾಸ ಪರಿಷತ್ತು (ಎನ್ ಸಿ ಟಿ ಇ) ,ವರ್ಗ ಒಂದರಿಂದ ಎಂಟನೇ ವರ್ಗದವರೆಗೆ ಬೋಧಿಸುವ ಶಿಕ್ಷಕರ ನೇಮಕಾತಿಗಾಗಿ ಕನಿಷ್ಟ ವಿದ್ಯಾರ್ಹತೆಯನ್ನು ನಿಗಧಿಗೊಳಿಸಿದೆ. ಇದನ್ನು ಆಗಷ್ಟ್ 23 ರ ಪ್ರಕಟಣೆಯಲ್ಲಿ ನೋಡಬಹುದಾಗಿದೆ. ಆ ಪ್ರಕಟಣೆಯ ಪ್ರತಿಯನ್ನು ಕೆಳಗೆ ಲಗತ್ತಿಸಲಾಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ರ ವಿಭಾಗ 2 ಖಂಡ (ಎನ್ )ರಲ್ಲಿ ಸೂಚಿಸಿರುವ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ಅಗತ್ಯವಿರುವ ವಿದ್ಯಾರ್ಹತೆಗಳಲ್ಲಿ ಒಂದಾದ ಅರ್ಹತೆ ಎಂದರೆ, ಅವನು/ಅವಳು ಉಚಿತ ಸರಕಾರದಿಂದ ನಿರ್ವಹಣೆಗೊಳ್ಳುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ ಇ ಟಿ) ಉತ್ತೀರ್ಣರಾಗಬೇಕು.

ಶಿಕ್ಷಕರಾಗಿ ನೇಮಕಗೊಳ್ಳಲು ,ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿ ಇ ಟಿ) ಕನಿಷ್ಟ ವಿದ್ಯಾರ್ಹತೆಯನ್ನಾಗಿ ಒಳಗೂಡಿಸಿರುವ ಮೂಲಕಾರಣವನ್ನು ಇಲ್ಲಿ ನೀಡಲಾಗಿದೆ:

ನೌಕರಿಯ ಕಾರ್ಯವಿಧಾನದಲ್ಲಿ ಶಿಕ್ಷಕರ ಗುಣಮಟ್ಟವು, ರಾಷ್ಟ್ರೀಯ ದರ್ಜೆ ಹಾಗೂ ಮಟ್ಟ ಗುರುತನ್ನು(ಬೆಂಚ್ ಮಾರ್ಕ) ಹೊಂದಿರುವಂತೆ ಮಾಡಲು ಸಹಾಯಕವಾಗುತ್ತದೆ.

ಶಿಕ್ಷಕರ ವಿದ್ಯಾಭ್ಯಾಸ ಕೇಂದ್ರ ಮತ್ತು ಈ ಕೇಂದ್ರಗಳ ವಿದ್ಯಾರ್ಥಿಗಳ ನಿರ್ವಹಣಾ ಮಟ್ಟವನ್ನು ಸುಧಾರಿಸುವಂತೆ ಪ್ರೇರೇಪಿಸುತ್ತದೆ.

ಸರಕಾರವು ಶಿಕ್ಷಕರ ಗುಣಮಟ್ಟದಲ್ಲಿ ವಿಶೇಷ ಕಾಳಜಿವಹಿಸು ಬಗ್ಗೆ ಇದು ಎಲ್ಲಾ ಮಧ್ಯವರ್ತಿಗಳಿಗೆ ಧನಾತ್ಮಕ ಸಂದೇಶವನ್ನು ರವಾನಿಸುತ್ತದೆ.

ಈ ಉದ್ದೇಶಕ್ಕಾಗಿ ಉಚಿತ ಸರಕಾರದ ಮೂಲಕ ನೇಮಕಗೊಂಡಿರುವ ಸೂಕ್ತ ವೃತ್ತಿಪರ ಸಂಸ್ಥೆಗಳಿಂದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿ ಇ ಟಿ) ನೆಡೆಸಬಹುದಾಗಿದೆ .ಕೆಳೆಗೆ ಕೊಟ್ಟಿರುವ ಮಾರ್ಗದರ್ಶನಕ್ಕನುಗುಣವಾಗಿ ಇದನ್ನು ನಿರ್ವಹಿಸಬಹುದಾಗಿದೆ.

ವಿದ್ಯಾರ್ಹತೆ

ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿ ಇ ಟಿ) ಹಾಜಾರಾಗುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು:

ಆಗಷ್ಟ್ 23 2010 ರ ಎನ್ ಸಿ ಟಿ ಇ ಪ್ರಕಟಣೆಯಲ್ಲಿ ಸೂಚಿಸಿರುವಂತೆ ಶೈಕ್ಷಣಿಕ ಮತ್ತು ವೃತ್ತಿಪರ ವಿದ್ಯಾರ್ಹತೆ ಪಡೆದಿರುವ ವ್ಯಕ್ತಿ.


ಆಗಷ್ಟ್ 23 2010 ರ ಎನ್ ಸಿ ಟಿ ಇ ಪ್ರಕಟಣೆಯಲ್ಲಿ ಸೂಚಿಸಿರುವಂತೆ ಶಿಕ್ಷಕರ ವಿದ್ಯಾಬ್ಯಾಸದ (ಎನ್ ಸಿ ಟಿ ಇ ಅಥವಾ ಆರ್ ಸಿ ಐ ನಿಂದ ಪ್ರಮಾಣೀಕರಿಸಿದ) ಯಾವುದೇ ಕೋರ್ಸನ್ನು ಮುಂದುವರೆಸುತ್ತಿರುವ ಅಭ್ಯರ್ಥಿ.


ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ,ವಿಭಾಗ 23 ರ ಉಪ-ವಿಭಾಗ (2)ರ ಉಪಬಂಧಕ್ಕೆ ಅನುಗುಣವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿ ಇ ಟಿ) ವಿದ್ಯಾರ್ಹತಾ ಮಾನದಂಡವನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸಡಿಲಗೊಳಿಸಬಹುದಾಗಿದೆ. ಕೇಂದ್ರ ಸರಕಾರದ ಪ್ರಕಟಣೆಯ ಆ ಉಪ-ವಿಭಾಗದಲ್ಲಿ ಈ ಸಡಿಲಗೊಂಡ ಮಾನದಂಡದನ್ನು ವಿಷದಪಡಿಸಲಾಗುತ್ತದೆ.


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ರಚನೆ ಮತ್ತು ವಿಷಯಸೂಚಿ

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ರಚನೆ ಮತ್ತು ವಿಷಯಸೂಚಿಯನ್ನು ಮುಂದಿನ ಪರಿಚ್ಚೇದಗಳಲ್ಲಿ ನೀಡಲಾಗಿದೆ.ಎಲ್ಲಾ ಪ್ರಶ್ನೆಗಳು ಬಹು ಆಯ್ಕೆಪ್ರಶ್ನೆಗಳಾಗಿದ್ದು, ನಾಲಕ್ಕು ಉತ್ತರಗಳ ಆಯ್ಕೆಯನ್ನು ನೀಡಲಾಗುತ್ತದೆ(ಎಮ್ ಸಿ ಕ್ಯೂ) ಹಾಗೂ ಅದರಲ್ಲಿ


ಒಂದು ಆಯ್ಕೆಯು ಸಮಂಜಸವಾಗಿರುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕ ಮತ್ತು ತಪ್ಪು ಉತ್ತರಕ್ಕೆ ಋಣಾತ್ಮಕ ಎಣಿಕೆ ಇರುವುದಿಲ್ಲ.


ಪರೀಕ್ಷೆ ಮಂಡಲಿಯು ಕೆಳಗೆ ನೀಡಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ರಚನೆ ಮತ್ತು ವಿಷಯಸೂಚಿಯನ್ನು ಕರಾರುವಕ್ಕಾಗಿ ಪಾಲಿಸಬೇಕು.


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರುತ್ತದೆ. ವರ್ಗ ಒಂದರಿಂದ ಐದನೇ ವರ್ಗದವರಿಗೆ ಶಿಕ್ಷಕರಾಗಲು ಇಚ್ಚಿಸುವವರು ಪ್ರಶ್ನೆ ಪತ್ರಿಕೆ -1 ನ್ನು ತೆಗೆದುಕೊಳ್ಳಬೇಕಾಗುತ್ತದೆ. ವರ್ಗ ಆರರಿಂದ ಎಂಟನೇ ವರ್ಗದವರಿಗೆ ಶಿಕ್ಷಕರಾಗಲು ಇಚ್ಚಿಸುವವರು ಪ್ರಶ್ನೆ ಪತ್ರಿಕೆ -2 ನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದರಿಂದ ಐದನೇ ವರ್ಗ ಅಥವಾ ಆರರಿಂದ ಎಂಟನೇ ವರ್ಗದವರಿಗೆ ಇವೆರಡಲ್ಲಿ ಯಾವುದಕ್ಕಾದರೂ ಶಿಕ್ಷಕರಾಗಲು ಇಚ್ಚಿಸುವವರು ಪ್ರಶ್ನೆ ಪತ್ರಿಕೆ -1 ಮತ್ತು ಪ್ರಶ್ನೆ ಪತ್ರಿಕೆ -2 ಎರಡಕ್ಕೂ ಹಾಜಾರಾಗಬೇಕಾಗುತ್ತದೆ.


ಪ್ರಶ್ನೆ ಪತ್ರಿಕೆ-1(ವರ್ಗ ಒಂದರಿಂದ ವರ್ಗ ಐದು); ಬಹು ಆಯ್ಕಾ ಪ್ರಶ್ನೆಗಳು-150
ಪರೀಕ್ಷೆಯ ಅವಧಿ; ಒಂದುವರೆ ಗಂಟೆ
ರಚನೆ ಮತ್ತು ವಿಷಯಸೂಚಿ (ಎಲ್ಲವೂ ಕಡ್ಡಾಯ)

(i)

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಕಲೆ

30 ಎಮ್ ಸಿ ಕ್ಯೂ

30 ಅಂಕಗಳು

(ii)

ಭಾಷೆ I

30 ಎಮ್ ಸಿ ಕ್ಯೂ

30 ಅಂಕಗಳು

(iii)

ಭಾಷೆ II

30 ಎಮ್ ಸಿ ಕ್ಯೂ

30 ಅಂಕಗಳು

(iv)

ಗಣಿತ

30 ಎಮ್ ಸಿ ಕ್ಯೂ

30 ಅಂಕಗಳು

(v)

ಪರಿಸರ ಅಧ್ಯಯನ

30 ಎಮ್ ಸಿ ಕ್ಯೂ

30 ಅಂಕಗಳು

ಪ್ರಶ್ನೆಗಳ ಸ್ವರೂಪ ಮತ್ತು ದರ್ಜೆ:

ಪ್ರಶ್ನೆ ಪತ್ರಿಕೆ -1 ನ್ನು ವಿನ್ಯಾಸ ಹಾಗೂ ತಯಾರು ಮಾಡುವಾಗ , ಪರೀಕ್ಷೆ ಮಂಡಲಿಯು ಕೆಳಗೆ ಕೊಟ್ಟಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಕಲೆಯ ಪರೀಕ್ಷಾ ಅಂಶಗಳು 6-11 ವರ್ಷದ ಮಕ್ಕಳ ಗುಂಪಿಗೆ ಸರಿಹೊಂದುವಂತ ಬೋಧನೆ ಮತ್ತು ಕಲಿಕೆಯ ಶೈಕ್ಷಣಿಕ ಮನೋವಿಜ್ಞಾನದ ಮೇಲೆ ಗಮನ ನೀಡುವಂತಿರುತ್ತದೆ. ಭಿನ್ನ ಭಿನ್ನ ಕಲಿಕೆಗಾರರ ಅಗತ್ಯ ಹಾಗೂ ಗುಣಲಕ್ಷಣಗಳನ್ನು ಮನನ ಮಾಡುವುದು , ಕಲಿಕೆಗಾರರೊಂದಿಗಿನ ಪರಸ್ಪರ ವರ್ತನೆ ,ಮತ್ತು ಒಳ್ಳೆಯ ಕಲಿಕೆಯ ವ್ಯವಸ್ಥೆಗಾರರ ಗುಣಧರ್ಮ ಹಾಗೂ ಗುಣ ಮಟ್ಟಕ್ಕೆ ಒತ್ತು ಕೊಡುವಂತಿರುತ್ತದೆ.

ಭಾಷೆ-1 ರ ಪರೀಕ್ಷಾ ಅಂಶಗಳು ಬೋಧನಾ ಮಾದ್ಯಮಕ್ಕೆ ಸಂಬಂಧಿಸಿದ ಪ್ರವೀಣತೆಗೆ ಗಮನ ನೀಡುತ್ತದೆ. (ಅರ್ಜಿ ನಮೂನೆಯ ನಿಗದಿತ ಭಾಷಾ ಆಯ್ಕೆಯ ಪಟ್ಟಿಯ ಆಯ್ಕೆಗೆ ಅನುಸಾರವಾಗಿ).

ಭಾಷೆ-2 ಯೂ ಕೂಡ ನಿಗದಿತ ಭಾಷಾ ಆಯ್ಕೆಯ ಪಟ್ಟಿಯಲ್ಲಿ ಭಾಷೆ-1 ನ್ನು ಬಿಟ್ಟು ,ನಮೂದಿಸಿದ ಎರಡನೇ ಆಯ್ಕೆಯಾಗಿರುತ್ತದೆ.ಅಭ್ಯರ್ಥಿಯು ಲಭ್ಯ ಭಾಷಾ ಪಟ್ಟಿಯಿಂದ ಯಾವುದಾದರೊಂದು ಭಾಷೆಯನ್ನು ಆಯ್ಕೆ ಮಾಡಬಹುದಾಗಿರುತ್ತದೆ ಹಾಗೂ ಅದನ್ನೇ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಭಾಷೆ-2 ರ ಪರೀಕ್ಷಾ ಅಂಶಗಳು ಕೂಡ ಭಾಷೆಯ ವಿಷಯ ,ಸಂಪರ್ಕ ,ಗ್ರಹಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ.

ಗಣಿತ ಮತ್ತು ಪರಿಸರ ಅಧ್ಯಯನದ ಪರೀಕ್ಷಾ ಅಂಶಗಳು ಅದರ ಪರಿಕಲ್ಪನೆ ,ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ , ಹಾಗೂ ಉಪಾಧ್ಯಾಯನ ವಿಷಯದ ತಿಳುವಳಿಕೆಯ ವಸ್ತುಗಳನ್ನು ಒಳಗೊಂಡಿರುತ್ತದೆ.ಪರೀಕ್ಷಾ ಅಂಶಗಳು ,ಈ ಮೇಲೆ ಕೊಟ್ಟಿರುವ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು ಅದು ಸರಕಾರವು ನಿಗದಿಮಾಡಿದ ವರ್ಗ ಒಂದರಿಂದ ಐದನೇವರ್ಗದ ಪಠ್ಯಕ್ರಮದ ಹಲವಾರು ವಿಭಾಗಗಳಲ್ಲಿ ಸಮವಾಗಿ ಹಂಚಿಕೆಯಾಗಿರಬೇಕು.

ಪ್ರಶ್ನೆಪತ್ರಿಕೆ-1 ರ ಪ್ರಶ್ನೆಗಳು ರಾಜ್ಯ ಸರಕಾರವು ನಿಗದಿಮಾಡಿದ ವರ್ಗ ಒಂದರಿಂದ ಐದನೇ ವರ್ಗದ ಪಠ್ಯಕ್ರಮದ ವಿಷಯಗಳ ಮೇಲೆ ಆಧಾರಿತವಾಗಿರುತ್ತದೆ,ಆದರೆ ಪ್ರಶ್ನೆಗಳ ಸಂಬಂಧ ಹಾಗೂ ಕಠಿಣತೆಯ ಮಟ್ಟವು ಫ್ರೌಡ ಮಟ್ಟದವರೆಗೂ ಹೋಗಬಹುದು.

ಪ್ರಶ್ನೆ ಪತ್ರಿಕೆ- II (ವರ್ಗ ಆರರಿಂದ ವರ್ಗಎಂಟು)

ಪ್ರಶ್ನೆ ಪತ್ರಿಕೆ- II (ವರ್ಗ ಆರರಿಂದ ವರ್ಗಎಂಟು); ಬಹು ಆಯ್ಕಾ ಪ್ರಶ್ನೆಗಳು-150
ಪರೀಕ್ಷೆಯ ಅವಧಿ; ಒಂದುವರೆ ಗಂಟೆ
ರಚನೆ ಮತ್ತು ವಿಷಯಸೂಚಿ (ಎಲ್ಲವೂ ಕಡ್ಡಾಯ

(i)

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಕಲೆ (ಕಡ್ಡಾಯ)

30 ಎಮ್ ಸಿ ಕ್ಯೂ

30 ಅಂಕಗಳು

(ii)

ಭಾಷೆ I (ಕಡ್ಡಾಯ)

30 ಎಮ್ ಸಿ ಕ್ಯೂ

30 ಅಂಕಗಳು

(iii)

ಭಾಷೆ II (ಕಡ್ಡಾಯ)

30 ಎಮ್ ಸಿ ಕ್ಯೂ

30 ಅಂಕಗಳು

(iv)

a. ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ: ಗಣಿತ ಮತ್ತು ವಿಜ್ಞಾನ – 60 ಎಮ್ ಸಿ ಕ್ಯೂಗಳು ಪ್ರತಿ ಪ್ರಶ್ನೆಗೆ ಒಂದು ಅಂಕ.
b. ಸಮಾಜ ವಿಜ್ಞಾನದ ಶಿಕ್ಷಕರಿಗೆ: ಸಮಾಜ ವಿಜ್ಞಾನ – 60 ಎಮ್ ಸಿ ಕ್ಯೂಗಳು ಪ್ರತಿ ಪ್ರಶ್ನೆಗೆ ಒಂದು ಅಂಕ.
c. ಬೇರೆ ಇನ್ಯಾವುದೇ ಶಿಕ್ಷಕರಿಗೆ: 4(ಎ) ಅಥವಾ 4(ಬಿ)

ಪ್ರಶ್ನೆ ಪತ್ರಿಕೆ -2 ನ್ನು ವಿನ್ಯಾಸ ಹಾಗೂ ತಯಾರು ಮಾಡುವಾಗ , ಪರೀಕ್ಷೆ ಮಂಡಲಿಯು ಕೆಳಗೆ ಕೊಟ್ಟಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಕಲೆಯ ಪರೀಕ್ಷಾ ಅಂಶಗಳು 11-14 ವರ್ಷದ ಮಕ್ಕಳ ಗುಂಪಿಗೆ ಸರಿಹೊಂದುವಂತ ಬೋಧನೆ ಮತ್ತು ಕಲಿಕೆಯ ಶೈಕ್ಷಣಿಕ ಮನೋವಿಜ್ಞಾನದ ಮೇಲೆ ಗಮನ ನೀಡುವಂತಿರುತ್ತದೆ.ಭಿನ್ನ ಭಿನ್ನ ಕಲಿಕೆಗಾರರ ಅಗತ್ಯ ಹಾಗೂ ಗುಣಲಕ್ಷಣಗಳನ್ನು ಮನನ ಮಾಡುವುದು , ಕಲಿಕೆಗಾರರೊಂದಿಗಿನ ಪರಸ್ಪರ ವರ್ತನೆ ಮತ್ತು ಒಳ್ಳೆಯ ಕಲಿಕೆಯ ವ್ಯವಸ್ಥೆಗಾರರ ಗುಣಧರ್ಮ ಹಾಗೂ ಗುಣ ಮಟ್ಟಕ್ಕೆ ಒತ್ತು ಕೊಡುವಂತಿರುತ್ತದೆ.

ಅರ್ಜಿ ನಮೂನೆಯ ನಿಗದಿತ ಭಾಷಾ ಆಯ್ಕೆಯ ಪಟ್ಟಿಯ ಅಯ್ಕೆಗೆ ಅನುಸಾರವಾಗಿ ,ಭಾಷೆ-1 ರ ಪರೀಕ್ಷಾ ಅಂಶಗಳು ಬೋಧನಾ ಮಾದ್ಯಮಕ್ಕೆ ಸಂಬಂಧಿಸಿದ ಪ್ರವೀಣತೆಗೆ ಗಮನ ನೀಡುತ್ತದೆ.

ಭಾಷೆ-2 ಯೂ ಕೂಡ ನಿಗದಿತ ಭಾಷಾ ಆಯ್ಕೆಯ ಪಟ್ಟಿಯಲ್ಲಿ ಭಾಷೆ-1 ನ್ನು ಬಿಟ್ಟು ,ನಮೂದಿಸಿದ ಎರಡನೇ ಆಯ್ಕೆಯಾಗಿರುತ್ತದೆ.ಅಭ್ಯರ್ಥಿಯು ಲಭ್ಯ ಭಾಷಾ ಪಟ್ಟಿಯಿಂದ ಯಾವುದಾದರೊಂದು ಭಾಷೆಯನ್ನು ಆಯ್ಕೆ ಮಾಡಬಹುದಾಗಿರುತ್ತದೆ ಹಾಗೂ ಅರ್ಜಿಯಲ್ಲಿ ನಮೂದಿಸಿದ ಆ ಭಾಷೆಯ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿರುತ್ತದೆ. ಭಾಷೆ-2 ರ ಪರೀಕ್ಷಾ ಅಂಶಗಳು ಕೂಡ ಭಾಷೆಯ ವಿಷಯ ,ಸಂಪರ್ಕ ,ಗ್ರಹಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ.

ಗಣಿತ ಮತ್ತು ವಿಜ್ಞಾನ,ಹಾಗೂ ಸಮಾಜ ವಿಜ್ಞಾನದ ಪರೀಕ್ಷಾ ಅಂಶಗಳು ಅದರ ಪರಿಕಲ್ಪನೆ ,ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ , ಹಾಗೂ ಉಪಾಧ್ಯಾಯನ ವಿಷಯದ ತಿಳುವಳಿಕೆಯ ವಸ್ತುಗಳನ್ನು ಒಳ ಗೊಂಡಿರುತ್ತದೆ. ಗಣಿತ ಮತ್ತು ವಿಜ್ಞಾನದ ಪ್ರತಿ ವಿಷಯದ ಅಂಕಗಳು ಒಟ್ಟು ಮೂವತ್ತು. ಪರೀಕ್ಷಾ ಅಂಶಗಳು, ಮೇಲೆ ಸೂಚಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು ಅದು ಸರಕಾರವು ನಿಗದಿಮಾಡಿದ ವರ್ಗ ಆರರಿಂದ ಎಂಟನೇವರ್ಗದ ಪಠ್ಯಕ್ರಮದ ಹಲವಾರು ವಿಭಾಗಗಳಲ್ಲಿ ಸಮವಾಗಿ ಹಂಚಿಕೆಯಾಗಿರಬೇಕು .

ಪ್ರಶ್ನೆಪತ್ರಿಕೆ-2 ರ ಪ್ರಶ್ನೆಗಳು ರಾಜ್ಯ ಸರಕಾರವು ನಿಗದಿಮಾಡಿದ ವರ್ಗ ಆರರಿಂದ ಎಂಟನೇ ವರ್ಗದ ಪಠ್ಯಕ್ರಮದ ವಿಷಯಗಳ ಮೇಲೆ ಆಧಾರಿತವಾಗಿರುತ್ತದೆ,ಆದರೆ ಪ್ರಶ್ನೆಗಳ ಸಂಬಂಧ ಹಾಗೂ ಕಠಿಣತೆಯ ಮಟ್ಟವು ಹಿರಿಯ ಫ್ರೌಡ ಮಟ್ಟದವರೆಗೂ ಹೋಗಬಹುದು.

ಪ್ರಶ್ನೆಪತ್ರಿಕೆಯು ದ್ವಿಭಾಷೆಯಲ್ಲಿರಬಹುದು:

ಆಯಾಯ ಸರಕಾರದಿಂದ ನಿಗದಿಯಾದ ಭಾಷೆ; ಮತ್ತು

ಇಂಗ್ಲೀಷ್ ಭಾಷೆ

ಅರ್ಹತಾ ಅಂಕಗಳು

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯಲ್ಲಿ 60% ಅಥವಾ ಹೆಚ್ಚು ಅಂಕಗಳನ್ನು ಪಡೆದವರು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ.ಶಾಲಾ ಆಡಳಿತ ಮಂಡಲಿ(ಸರಕಾರ, ಸ್ಥಳೀಯ ಮಂಡಲಿಗಳು,ಸರಕಾರದಿಂದ ಅನುದಾನ ಪಡೆದ ಹಾಗೂ ಅನುದಾನ ಪಡೆಯದ).

ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ , ಇತರೆ ಹಿಂದುಳಿದ ಜಾತಿ,ವಿಕಲಾಂಗ ಚೇತನರು ಮುಂತಾದವರಿಗೆ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಕ್ಕೆ ಅನುಗುಣವಾಗಿ ಸ್ವಲ್ಪ ಮಟ್ಟಿನ ವಿನಾಯತಿಯನ್ನು ನೀಡಬಹುದಾಗಿರುತ್ತದೆ.

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯಲ್ಲಿ ಗಳಿಸಿದ ಅಂಕಗಳಿಗೆ ನೌಕರಿ ಭರ್ತಿಯಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ.ಆದರೂ ಸಹ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯು ನೌಕರಿಯ ಭರ್ತಿಯಲ್ಲಿನ ಮಾನದಂಡಗಳಲ್ಲಿ ಒಂದು ಮಾತ್ರಾ ಆಗಿರುವುದರಿಂದ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಯು ನೌಕರಿಯನ್ನು ಹಕ್ಕನ್ನಾಗಿ ಪರಿಗಣಿಸುವಂತಿಲ್ಲ.

ಸಮಂಜಸತೆ

ಕೇಂದ್ರ ಸರಕಾರವು ನೆಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ)ಯು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ,ವಿಭಾಗ 2,ಖಂಡ(ಎ)ರ ಉಪ-ಖಂಡ (1) ರಲ್ಲಿ ಉಲ್ಲೇಖಿಸಿರುವ ಎಲ್ಲಾ ಶಾಲೆಗಳಿಗೂ ಅನ್ವಯಿಸಿರುತ್ತದೆ.

ರಾಜ್ಯ ಸರಕಾರ /ಕೇಂದ್ರಾಡಳಿತ ಪ್ರದೇಶ ವಿಧಾನಮಂಡಲದಿಂದ ನೆಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಈ ಕೆಳಗೆ ನಮೂದಿಸಿರುವುದಕ್ಕೆ ಅನ್ವಯಿಸುತ್ತದೆ :

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ,ವಿಭಾಗ 2,ಖಂಡ(ಎನ್)ರ ಉಪ-ಖಂಡ (1) ರಲ್ಲಿ ಉಲ್ಲೇಖಿಸಿರುವ ಸ್ಥಳೀಯ ಅಧಿಕಾರಿಗಳು ಮತ್ತು ರಾಜ್ಯ ಸರಕಾರ /ಕೇಂದ್ರಾಡಳಿತ ಪ್ರದೇಶದ ಶಾಲೆಗಳು ಮತ್ತು.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ,ವಿಭಾಗ 2,ಖಂಡ(ಎನ್)ರ ಉಪ-ಖಂಡ (2) ರಲ್ಲಿ ಉಲ್ಲೇಖಿಸಿರುವ ಆ ರಾಜ್ಯದ /ಕೇಂದ್ರಾಡಳಿತ ಪ್ರದೇಶದ ಶಾಲೆಗಳು.

ಮೇಲೆ (i) ಮತ್ತು (ii) ರಲ್ಲಿ ನಮೂದಿಸಿರುವ ಶಾಲೆಗಳೂ ಸಹ ಬೇರೆ ರಾಜ್ಯದ /ಕೇಂದ್ರಾಡಳಿತ ಪ್ರದೇಶದ ವಿಧಾನಮಂಡಲಿಯಿಂದ ನೆಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ)ಯಿಂದ ಪ್ರಮಾಣಪತ್ರವನ್ನು ಪಡೆದಿರುವ ಅಭ್ಯರ್ಥಿಯನ್ನು ನೌಕರಿಯನ್ನು ಪಡೆಯಲು ಅರ್ಹನೆಂದು ಪರಿಗಣಿಸಬಹುದಾಗಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶದ ವಿಧಾನಮಂಡಲಿಯು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ)ಯನ್ನು ನೆಡೆಸಬಾರದೆಂದು ನಿರ್ಧರಿಸಿದರೆ, ಮೇಲೆ (i) ಮತ್ತು (ii) ರಲ್ಲಿ ನಮೂದಿಸಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಶಾಲೆಗಳು ಕೇಂದ್ರ ಸರಕಾರದಿಂದ ನೆಡೆಸಲ್ಪಟ್ಟ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ)ಯನ್ನು ಪರಿಗಣಿಸುತ್ತದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) 2009 ,ವಿಭಾಗ 2,ಖಂಡ(ಎನ್)ರ ಉಪ-ಖಂಡ (4) ರಲ್ಲಿ ಉಲ್ಲೇಖಿಸಿರುವ ಶಾಲೆಗಳು ಕೇಂದ್ರ ಸರಕಾರದಿಂದ ನೆಡೆಸಲ್ಪಟ್ಟ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶದ ವಿಧಾನ ಮಂಡಲಿಯು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಇದರಲ್ಲಿ ಯಾವುದನ್ನಾದರೂ ಉಪಯೋಗಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತದೆ.

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯನ್ನು ಪುನರಾವರ್ತಿಸುವುದು ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಪ್ರಮಾಣಪತ್ರದ ಊರ್ಜಿತತ್ವ ಅವಧಿ

ಉಚಿತ ಸರಕಾರವು ಪ್ರತಿ ವರ್ಷದಲ್ಲಿ ಒಮ್ಮೆಯಾದರೂ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯನ್ನು ನೆಡೆಸಬೇಕಾಗುತ್ತದೆ. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ಊರ್ಜಿತತ್ವ ಅವಧಿಯ ನಿರ್ಧಾರವು ಸರಕಾರಕ್ಕೆ ಸೇರಿದ್ದಾಗಿರುತ್ತದೆ ಹಾಗೂ ಇದು ಪ್ರತಿಯೊಂದು ವರ್ಗದವರಿಗೂ ಸೇರಿದಂತೆ ಗರಿಷ್ಟ ಏಳು ವರ್ಷಗಳಾಗಿವೆ.ಆದರೆ ಅಭ್ಯರ್ಥಿಗೆ ಪ್ರಮಾಣಪತ್ರವನ್ನು ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯನ್ನು ಎಷ್ಟು ಬಾರಿಯಾದರೂ ತೆಗೆದುಕೊಳ್ಳುವ ಅವಕಾಶವಿದೆ. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯಲ್ಲಿ ಉತ್ತೀರ್ಣನಾದ ಅಭ್ಯರ್ಥಿಯು ತನ್ನ ಅಂಕದ ಗಳಿಕೆಯನ್ನು ಸುಧಾರಿಸಿಕೊಳ್ಳಲು ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿದೆ.

ಪರೀಕ್ಷೆಯನ್ನು ನೆರವೇಸುವ ಕಾರ್ಯವಿಧಾನ

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯನ್ನು ನೆಡೆಸಲು ಪರೀಕ್ಷಾ ಮಂಡಲಿಯು ವಿವರವಾದ ಕಾರ್ಯ ವಿಧಾನವನ್ನು ರೂಪಿಸಬೇಕಾಗುತ್ತದೆ. ಮತ್ತು ಪರೀಕ್ಷೆಯನ್ನು ನೆಡೆಸಲು ಸೂಚನೆಯನ್ನು ನೀಡಬೇಕಾಗುತ್ತದೆ. ಯಾವುದೇ ರೀತಿಯ ದುಷ್ಟ ವರ್ತನೆ ಅಥವಾ ಪುರುಷಾಂತರ ಮಾಡಿದರೆ ಕಠಿಣ ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಅಭ್ಯರ್ಥಿಗೆ ತಿಳುವಳಿಕೆ ನೀಡಬೇಕಾಗುತ್ತದೆ.

ಕಾನೂನು ವಿವಾದ

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯನ್ನು ನೆರವೇರಿಸುವ ಬಗೆಗಿನ ಕಾನೂನು ವಿವಾದವು ಆಯಾಯ ಸರಕಾರದ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ಪ್ರಮಾಣಪತ್ರ ನೀಡುವಿಕೆ


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯನ್ನು ನೆಡೆಸಿದ ಆಯಾಯ ಸರಕಾರವು ಎಲ್ಲಾ ಯಶಸ್ವೀ ಅಭ್ಯರ್ಥಿಗೆ ಪ್ರಮಾಣಪತ್ರವನ್ನು ನೀಡುತ್ತದೆ.ಪ್ರಮಾಣಪತ್ರವು ಅಭ್ಯರ್ಥಿಯ ಹೆಸರು ಮತ್ತು ವಿಳಾಸ, ಹುಟ್ಟಿದ ದಿನಾಂಕ ,ನೋಂದಣಿ ಸಂಖ್ಯೆ,ಪ್ರಮಾಣಪತ್ರ ನೀಡಿದ ವರ್ಷ /ತಿಂಗಳು , ಪ್ರತಿಯೊಂದು ಪ್ರಶ್ನೆಪತ್ರಿಕೆಯಲ್ಲಿ ಪಡೆದಿರುವ ಅಂಕ,ವರ್ಗದ ಮಟ್ಟ (ವರ್ಗ ಒಂದರಿಂದ ಐದು, ವರ್ಗ ಆರರಿಂದ ಎಂಟು ಅಥವಾ ಎರಡೂ ) ಹಾಗೂ ಅಭ್ಯರ್ಥಿಯು ವರ್ಗ ಆರರಿಂದ ಎಂಟನೇ ವರ್ಗದ ಮಟ್ಟದ ಪರೀಕ್ಷೆಯನ್ನು ತೆಗೆದುಕೊಂಡಿದ್ದರೆ, ವಿಷಯದ ಕ್ಷೇತ್ರ(ವಿಜ್ಞಾನ ಮತ್ತು ಗಣಿತ,ಸಮಾಜ ವಿಜ್ಞಾನ ಮುಂತಾದವುಗಳು)ವನ್ನು ಒಳಗೊಂಡಿರುತ್ತದೆ.ಸಾಕಷ್ಟು ರಕ್ಷಣಾ ಕ್ರಮಗಳೊಂದಿಗೆ ಪ್ರಮಾಣಪತ್ರವನ್ನು ಗಣಕಯಂತ್ರದ ಮೂಲಕ ಎಲೆಕ್ಟ್ರಾನಿಕ್ ಮಾರ್ಗವಾಗಿ ತೆಗೆದುಕೊಳ್ಳಬಹುದಾಗಿದೆ.ಯಾವುದೇ ರೀತಿಯ ದುಷ್ಟವರ್ತನೆಯನ್ನು ತಡೆಯಲು ಡಿ-ಮೆಟೀರಿಯಲೈಸ್ದ್ (ಡಿಮ್ಯಾಟ) ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ಪ್ರಮಾಣಪತ್ರವನ್ನು ನೀಡುವ ವಿಶೇಷ ಏಜೆನ್ಸಿಗಳ ಸೇವೆಯನ್ನು ಅಭ್ಯರ್ಥಿಗಳು ಪಡೆದು ಕೊಳ್ಳಬಹುದಾಗಿದೆ.


ನಿರ್ವಹಣೆ

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ಕಾರ್ಯಭಾರ ಮತ್ತು ಗುಣಮಟ್ಟವನ್ನು ನಿರ್ವಹಿಸಲು ಕೆಳಗೆ ನೀಡಿರುವ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ:


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ಉದ್ದೇಶಕಾಗಿ ಆಯಾಯ ಸರಕಾರವು ಸಂಪರ್ಕ ಅಧಿಕಾರಿಯನ್ನು ನೇಮಕ ಮಾಡಬೇಕಾಗುತ್ತದೆ.


ಎನ್ ಸಿ ಟಿ ಇ ಯು ಪ್ರತಿ ವರ್ಷಕ್ಕೊಮ್ಮೆ ಸಂಪರ್ಕ ಅಧಿಕಾರಿಗಳ ಸಭೆಯನ್ನು ವ್ಯವಸ್ಥೆ ಮಾಡುತ್ತದೆ.


ಪ್ರತಿ ಸಮುಚಿತ ಸರಕಾರವು ಪ್ರತಿಯೊಂದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯ ವರದಿಯನ್ನು ಎನ್ ಸಿ ಟಿ ಇ ನಿಗದಿ ಮಾಡಿರುವ ನಮೂನೆಯಲ್ಲಿಯೇ ಎನ್ ಸಿ ಟಿ ಇ ಗೆ ಕಳಿಸಿಕೊಡಬೇಕಾಗುತ್ತದೆ.


ಎನ್ ಸಿ ಟಿ ಇ ಯು ಮೂಲ ಮಾಹಿತಿಯನ್ನು ನಿರ್ವಹಿಸುತ್ತದೆ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಯನ್ನು ನೆಡೆಸಲು ಬೇಕಾದ ತಂತ್ರಜ್ಞಾನದ ಸಲಕರಣೆಗಳನ್ನೂ ಒಳಗೊಂಡಂತೆ ತಜ್ಞರು ಮತ್ತು ಸಂಪಲ್ಮೂಲಗಳ ಉಗ್ರಾಣವಾಗಿದ್ದು ಈ ಮಾಹಿತಿಯನ್ನು ಅದು ಸರಕಾರದೊಂದಿಗೆ ಹಂಚಿಕೊಳ್ಳುತ್ತದೆ.


ಮೂಲ:ಎನ್ ಸಿ ಟಿ ಇ