ಗುರುವಾರ, ಅಕ್ಟೋಬರ್ 28, 2021

ಮಸುಕಾದ ಬಾನಿನಲ್ಲಿ ಎರೆಡು ಪತ್ರಿಕೋದ್ಯಮದ ನಕ್ಷತ್ರಗಳು ಮರಿಯಾ ಮತ್ತು ಮುರಾಟೋವ್

ಮಸುಕಾದ ಬಾನಿನಲ್ಲಿ ಎರೆಡು ಪತ್ರಿಕೋದ್ಯಮದ ನಕ್ಷತ್ರಗಳು ಮರಿಯಾ ಮತ್ತು ಮುರಾಟೋವ್ 
(ರಘುನಾಥ್ ಚ, ಹ,) 
ಪತ್ರಿಕೋದ್ಯಮದ ಮಸುಕು ಬಾನಿನಲ್ಲಿ ಎರಡು ಪ್ರಖರ ನಕ್ಷತ್ರಗಳು ಮೂಡಿವೆ. ನೋಬಲ್‌ ವೃತ್ತಿಗೆ ನೊಬೆಲ್‌ ಪ್ರಶಸ್ತಿ ಸಂದಿದೆ.

ಫಿಲಿಪ್ಪೀನ್ಸ್‌ನ ಮರಿಯಾ ರೆಸ್ಸಾ ಹಾಗೂ ರಷ್ಯಾದ ಡಿಮಿತ್ರಿ ಮುರಾಟೊವ್‌, 2021ರ ನೊಬೆಲ್‌ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1935ರಲ್ಲಿ ಜರ್ಮನಿಯ ಪತ್ರಕರ್ತನೊಬ್ಬನಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದುದನ್ನು ಹೊರತುಪಡಿಸಿದರೆ – ಪತ್ರಿಕೆಗಳನ್ನು ಗುರ್ತಿಸಿ, ಪತ್ರಕರ್ತರನ್ನು ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇದೇ ಮೊದಲು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶ್ವದಾದ್ಯಂತ ಧಕ್ಕೆಯುಂಟಾಗಿರುವ ಸಂದರ್ಭದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಈ ಪತ್ರಕರ್ತರು ನಡೆಸಿದ ಧೈರ್ಯದ ಹೋರಾಟವನ್ನು ಆಯ್ಕೆ ಸಮಿತಿ ಗುರ್ತಿಸಿದೆ.

ಈ ಆಯ್ಕೆಯ ಮೂಲಕ ನೊಬೆಲ್‌ ಸಮಿತಿ ಸೂಚ್ಯವಾಗಿ ಒಂದು ಸಂದೇಶ ನೀಡುತ್ತಿರುವಂತಿದೆ. ಈ ಜಗತ್ತನ್ನು ಮಾನವೀಯಗೊಳಿಸಲು ವೃತ್ತಿನಿಷ್ಠ ಪತ್ರಕರ್ತರು ಅಗತ್ಯ ಹಾಗೂ ಅಂಥವರನ್ನು ಗುರ್ತಿಸಿ ಗೌರವಿಸುವುದು ಈ ಹೊತ್ತಿನ ಜರೂರು ಎನ್ನುವ ಸೂಚನೆಯದು. ನಿಜ ಪತ್ರಿಕೋದ್ಯಮದ ಬೆನ್ನುತಟ್ಟಿದಂತಿರುವ ನೊಬೆಲ್‌ ಗೌರವ, ಸಮಕಾಲೀನ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ವ್ಯಾಪಾರದ ನಡುವಿನ ಗೆರೆ ಅಳಿಸಿಹೋಗಿರುವಷ್ಟು ತೆಳುವಾಗಿರುವ ಸನ್ನಿವೇಶದಲ್ಲಿ, ‘ಪತ್ರಕರ್ತ’ ಎನ್ನುವ

ಅಳಿಸಿಹೋಗುತ್ತಿರುವ ಪ್ರಭೇದವನ್ನು ರಕ್ಷಿಸುವಪ್ರಯತ್ನದಂತೆಯೂ ಇದೆ. ಈ ಕಾರಣಗಳಿಂದಾಗಿ, ಮರಿಯಾ ಮತ್ತು ಮುರಾಟೊವ್‌ ಅವರಿಗೆ ಸಂದಿರುವ ಪ್ರಶಸ್ತಿ ಪತ್ರಿಕೋದ್ಯಮದ ಸಂಭ್ರಮವಷ್ಟೇ ಅಲ್ಲ; ಅದು ಮಾನವೀಯತೆ ಮತ್ತು ವಿಶ್ವಶಾಂತಿಗೆ ಹಂಬಲಿಸುವ ಎಲ್ಲರ ಸಂಭ್ರಮವೂ ಹೌದು.

ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯ ವಿಶ್ವದೆಲ್ಲೆಡೆ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿವೆ. ಆ ಪ್ರವಾಹದೆದುರು ಈಜುವ ಧೈರ್ಯ ತೋರಿರುವ ಮರಿಯಾ ಹಾಗೂ ಮುರಾಟೊವ್‌, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಯತ್ನಿಸುವ ಎಲ್ಲ ಪತ್ರಕರ್ತರ ಪ್ರತಿನಿಧಿಗಳು.

ಮರಿಯಾ (ಜ: 1963) ಅವರ ‘ರ‍್ಯಾಪ್ಲರ್’ ನ್ಯೂಸ್‌ ವೆಬ್‌ಸೈಟ್‌ಗೆ ಇನ್ನೂ ಹತ್ತರ ಪ್ರಾಯವೂ ತುಂಬಿಲ್ಲ. 2012ರಲ್ಲಿ ಆರಂಭವಾದ ಈ ಅಂತರ್ಜಾಲ ಪತ್ರಿಕೆ, ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಆಡಳಿತದ ಜನ ವಿರೋಧಿ ಕ್ರಮಗಳ ಬಗ್ಗೆ ನಿರಂತರವಾಗಿ ಬರೆಯುತ್ತಿದೆ. ಮಾದಕವಸ್ತು ವಿರುದ್ಧದ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಳ್ಳು ಸುದ್ದಿ ಹರಡಲು ಹಾಗೂ ವಿರೋಧಿಗಳಿಗೆ ಕಿರುಕುಳ ನೀಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ‌ಬಯಲಿ ಗೆಳೆಯುತ್ತಾ ಬಂದಿದೆ.

ಮರಿಯಾ ಅವರಿಗಿಂತ ಎರಡು ವರ್ಷ ಹಿರಿಯರಾದ ಮುರಾಟೊವ್‌ರ (ಜ: 1961) ‘ನೊವಾಯಾ ಗೆಝೆಟ್‌’ (ಆರಂಭ: 1993) ‘ರ‍್ಯಾಪ್ಲರ್’ಗೆ ಅಣ್ಣನಂತಹ ಪತ್ರಿಕೆ; 19 ವರ್ಷಗಳಷ್ಟು ಹೆಚ್ಚಿನ ಪ್ರಾಯದ್ದು. ‘ರ‍್ಯಾಪ್ಲರ್’ ಆನ್‌ಲೈನ್‌ ಪತ್ರಿಕೆ, ‘ನೊವಾಯಾ ಗೆಝೆಟ್‌’ ಮುದ್ರಿತ ಪತ್ರಿಕೆ ಎನ್ನುವ ವ್ಯತ್ಯಾಸ ಹೊರತುಪಡಿಸಿದರೆ, ಎರಡರ ದಾರಿ–ಧ್ಯೇಯಗಳು ಒಂದೇ. ಪ್ರಭುತ್ವವಿರೋಧಿ ಧೋರಣೆ ಹಾಗೂ ಜನಪರ ಕಾಳಜಿ ಮಾಧ್ಯಮದ ಪ್ರಮುಖ ಕಾಳಜಿಯಷ್ಟೇ. ಈ ಧೋರಣೆಯನ್ನು ಎತ್ತಿ ಹಿಡಿಯಲಿಕ್ಕಾಗಿ ಎರಡೂ ಪತ್ರಿಕೆಗಳು ಎಂಥ ಸವಾಲನ್ನೂ ಎದುರುಗೊಳ್ಳಲು ಹಿಂಜರಿದಿಲ್ಲ.

ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಮರಿಯಾ ಜೈಲು ಕಂಡು ಬಂದಿದ್ದಾರೆ; ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಮುರಾಟೊವ್‌ ಅವರ ದಾರಿ ಮತ್ತೂ ಕಠಿಣವಾದುದು. ಅವರ ಪತ್ರಿಕಾಬಳಗದ ಆರು ಸಹೋದ್ಯೋಗಿಗಳು ಹೋರಾಟದ ಹಾದಿಯಲ್ಲಿ ಹುತಾತ್ಮರಾಗಿದ್ದಾರೆ. ಆ ಕಾರಣದಿಂದಲೇ ನೊಬೆಲ್‌ ಪ್ರಕಟವಾದಾಗ ಮುರಾಟೊವ್‌ ಮೊದಲು ನೆನಪಿಸಿಕೊಂಡಿದ್ದು ತನ್ನ ಪತ್ರಿಕಾಬಳಗವನ್ನು, ಹುತಾತ್ಮರನ್ನು. ಹದಿನೈದು ವರ್ಷಗಳ ಹಿಂದೆ ಅಕ್ಟೋಬರ್‌ 7ರಂದು ಪತ್ರಿಕೆಯ ಅನ್ನಾ ಪೊಲಿಟ್‌ಕೋವ್ಸ್‌ಕಯ ಎನ್ನುವ ವರದಿಗಾರ್ತಿಯ ಕೊಲೆಯಾಗಿತ್ತು. ಕಾಕತಾಳೀಯ ಎನ್ನುವಂತೆ, ಆಕೆಯ ಸ್ಮರಣೆಯ ಆಸುಪಾಸಿನ ಸಂದರ್ಭದಲ್ಲೇ ಪ್ರಶಸ್ತಿ ಪ್ರಕಟಣೆಯ ಸುದ್ದಿ ಹೊರಬಿದ್ದಿದೆ.

‘ತಮಗೆ ಸಂದ ನೊಬೆಲ್‌, ವಿಶ್ವದೆಲ್ಲೆಡೆಯಲ್ಲಿನ ಪತ್ರಕರ್ತರಿಗೆ ಸಂದಿರುವ ಗೌರವ’ ಎಂದು ಮರಿಯಾ ಹೇಳಿದ್ದಾರೆ. ಪತ್ರಕರ್ತನ ಕೆಲಸ ಹಿಂದೆಂದಿಗಿಂತಲೂ ಕ್ಲಿಷ್ಟ ಹಾಗೂ ಅಪಾಯಕಾರಿ ಎಂದಿರುವ ಅವರು, ಈ ಪ್ರಶಸ್ತಿ ಪ್ರಭುತ್ವದ ಜನವಿರೋಧಿ ಧೋರಣೆಯ ವಿರುದ್ಧದ ಹೋರಾಟದಲ್ಲಿ ಹಲ್ಲೆಗಳಿಂದ ತಪ್ಪಿಸಿಕೊಳ್ಳಲು ಗುರಾಣಿಯಾಗಲಿದೆ. ಪತ್ರಕರ್ತರು ಆತಂಕವಿಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸಲು ಪ್ರೇರಣೆಯಾಗಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ.

ಪತ್ರಕರ್ತರ ಪಾಲಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲೊಂದು ಎನ್ನುವ ಕುಖ್ಯಾತಿಗೆ ಪಾತ್ರವಾದ ಫಿಲಿಪ್ಪೀನ್ಸ್‌ನಲ್ಲಿ, ಮರಿಯಾ ಅವರಿಗೆ ಸಂದಿರುವ ಗೌರವ ಅಲ್ಲಿನ ಪತ್ರಕರ್ತರಿಗೆ ವಿಜಯೋತ್ಸವದಂತೆ ಕಾಣಿಸಿದೆ.

ರೊಡ್ರಿಗೊ ಡುಟರ್ಟೆ 2016ರಲ್ಲಿ ಫಿಲಿಪ್ಪೀನ್ಸ್‌ನ ಅಧ್ಯಕ್ಷರಾದ ನಂತರ ಮರಿಯಾ ಮತ್ತು ‘ರ‍್ಯಾಪ್ಲರ್’ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳು, ತನಿಖೆಗಳು ಹಾಗೂ ಆನ್‌ಲೈನ್‌ ದಾಳಿಗಳು ನಿರಂತರವಾಗಿ ನಡೆದಿವೆ. ರೊಡ್ರಿಗೊ ಅವರ ಪ್ರಕಾರ ‘ರ‍್ಯಾಪ್ಲರ್’ ಒಂದು ಸುಳ್ಳು ಸುದ್ದಿಗಳ ಕಾರ್ಖಾನೆ. ಸತ್ಯ ಹೇಳುವವರು ವ್ಯವಸ್ಥೆಯ ಕಣ್ಣಿಗೆ ಸುಳ್ಳುಗಾರರು, ದೇಶದ್ರೋಹಿಗಳಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ. ಫಿಲಿಪ್ಪೀನ್ಸ್‌ ಮಾದರಿ ಈಗ ವಿಶ್ವದ ಬಹುತೇಕ ದೇಶಗಳ ಮಾದರಿಯೂ ಆಗಿದೆ. ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ.

‘ಬುದ್ಧಿ–ಭಾವಗಳ ಮೇಲೆ ಸವಾರಿ ಮಾಡಲು ಭಯಕ್ಕೆ ಅವಕಾಶ ಮಾಡಿಕೊಟ್ಟರೆ ಅಧಿಕಾರದ ದುರುಪಯೋಗಕ್ಕೆ ಅವಕಾಶ ಕಲ್ಪಿಸಿದಂತೆಯೇ ಸರಿ. ಭಯದಿಂದ ಹೊರ ಬರುವುದು ಹೇಗೆನ್ನುವುದೇ ಬಹು ದೊಡ್ಡ ಸವಾಲು’ ಎನ್ನುವ ಮರಿಯಾ, ‘ಹೌ ಟು ಸ್ಟ್ಯಾಂಡಪ್‌ ಟು ಎ ಡಿಕ್ಟೇಟರ್‌’ (ಸರ್ವಾಧಿಕಾರಿಯನ್ನು ಎದುರಿಸುವುದು ಹೇಗೆ) ಪುಸ್ತಕದ ಲೇಖಕಿಯೂ ಹೌದು.

ಮರಿಯಾ ಅವರಂತೆ ಮುರಾಟೊವ್‌ ವ್ಯವಸ್ಥೆಯ ವಿರುದ್ಧದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್‌, ತಮಗೆ ದೊರೆತ ನೊಬೆಲ್ ಶಾಂತಿ ಪುರಸ್ಕಾರದ ಮೊತ್ತದಲ್ಲಿ ಒಂದು ಭಾಗವನ್ನು ‘ನೊವಾಯಾ ಗೆಝೆಟ್‌’ಗೆ ನೀಡಿದ್ದರಂತೆ. ಆ ಹಣದಲ್ಲಿ ಪತ್ರಿಕೆಗೆ ಕಂಪ್ಯೂಟರ್‌ಗಳನ್ನು ಖರೀದಿಸಲಾಗಿತ್ತಂತೆ. ಪ್ರಶಸ್ತಿ ಪುಳಕದ ಪಾಳಿಯೀಗ ಮುರಾಟೊವ್‌ ಅವರದು. ಅವರು ತಮಗೆ ಬರುವ ಪ್ರಶಸ್ತಿಯ ಹಣದಲ್ಲಿ ಚಿಕ್ಕಾಸನ್ನೂ ಬಳಸದಿರಲು ನಿರ್ಧರಿಸಿದ್ದು, ಪ್ರಶಸ್ತಿಯ ಧ್ಯೇಯವನ್ನು ಸಾಕಾರಗೊಳಿಸುವ ಚಟುವಟಿಕೆಗಳಿಗಾಗಿ ಹಣ ಮೀಸಲಿಡಲು ಉದ್ದೇಶಿಸಿದ್ದಾರೆ.

ಮುರಾಟೊವ್‌ ಅವರಿಗೆ ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಗೊರ್ಬಚೆವ್‌, ‘ವಿರಳವಾಗಿಯಾದರೂ ಸತ್ಯವನ್ನು ನಿರಾಶೆಗೊಳಿಸುವುದಕ್ಕಾಗಿ ಪತ್ರಿಕೆಯನ್ನು ಅಭಿನಂದಿಸುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಮುರಾಟೊವ್‌ ಪ್ರತಿಕ್ರಿಯೆ: ‘ನಾವು ಪರಿಪೂರ್ಣರಲ್ಲ, ತಪ್ಪು ಮಾಡಿರುವುದನ್ನು ಒಪ್ಪಿಕೊಳ್ಳುತ್ತೇವೆ’. ಈ ವಿನಯ ಮತ್ತು ವಿಮರ್ಶೆ ಸಮಕಾಲೀನ ಪತ್ರಿಕೋದ್ಯಮದಲ್ಲಿ ವಿರಳ. ಸತ್ಯವನ್ನು ಪದೇ ‍ಪದೇ ನಿರಾಶೆಗೊಳಿಸುವುದು ಹಾಗೂ ತಮ್ಮನ್ನು ಪರಿಪೂರ್ಣ ಎಂದು ತಿಳಿದಿರುವುದು ಈಗಿನ ಮಾಧ್ಯಮಗಳ ಲಕ್ಷಣ.

ನೊಬೆಲ್‌ ಶಾಂತಿ ಪ್ರಶಸ್ತಿ ಪ್ರಕಟಗೊಂಡ ಮರುದಿನದ ‘ನೊವಾಯಾ ಗೆಝೆಟ್‌’ ಪತ್ರಿಕೆಯ ಮುಖಪುಟದಲ್ಲಿ ಇದ್ದುದು ಮುರಾಟೊವ್‌ ಛಾಯಾಚಿತ್ರವಲ್ಲ– ಮರಿಯಾ ಅವರದು. ‘ಆಕೆ ಅಪ್ರತಿಮ ಪತ್ರಕರ್ತೆ. ಆಕೆಯ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಪತ್ರಿಕೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಂತೆ ಮರಿಯಾರನ್ನು ಆಹ್ವಾನಿಸಿದ್ದೇವೆ’ ಎಂದು ಮುರಾಟೊವ್‌ ಹೇಳಿದ್ದಾರೆ. ಮುರಾಟೊವ್‌ರ ಬಗ್ಗೆ ಪ್ರೀತಿ–ಗೌರವ ಮೂಡಲು ಈ ನಡವಳಿಕೆಯೊಂದು ಸಾಲದೆ?

ಸೆಟೆದು ನಿಲ್ಲದಿದ್ದರೂ ಪರವಾಗಿಲ್ಲ, ಬಾಗದಿರುವ ಕನಿಷ್ಠ ವೃತ್ತಿಪರತೆಯನ್ನು ಹೊಂದಲಿಕ್ಕೆ ಸಮಕಾಲೀನ ಪತ್ರಕರ್ತರಿಗೆ ಮರಿಯಾ–ಮುರಾಟೊವ್‌ ಪ್ರೇರಣೆಯಾಗ ಬೇಕು. ಸ್ವತಂತ್ರ ಪತ್ರಿಕೋದ್ಯಮದ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಸಮಾನಮನಸ್ಕ ಪತ್ರಕರ್ತರ ಸಹಭಾಗಿತ್ವದಲ್ಲಿ ರೂಪುಗೊಂಡಿರುವ ‘ರ‍್ಯಾಪ್ಲರ್’ ಹಾಗೂ ‘ನೊವಾಯಾ ಗೆಝೆಟ್‌’ ಜೀವಂತಪಠ್ಯ ಗಳು ಭಾರತೀಯರಿಗೆ ಏನನ್ನೋ ಹೇಳುತ್ತಿರುವಂತಿವೆ.

ಶುಕ್ರವಾರ, ಅಕ್ಟೋಬರ್ 22, 2021

ಬಾರ್ಬಡೋಸ್ ಅಧ್ಯಕ್ಷೆಯಾಗಿ ಸಾಂಡ್ರಾ ಮೇಸನ್: ಬ್ರಿಟನ್ ವಸಾಹತುಶಾಹಿಯಿಂದ ಹೊರಕ್ಕೆ(ಮುಕ್ತಿ)

ಬ್ರಿಡ್ಜ್‌ಟೌನ್: ಬಾರ್ಬಡೋಸ್ ಕೆರಿಬಿಯನ್ ದ್ವೀಪವು ವಸಾಹತುಶಾಹಿ ಹಿಡಿತವನ್ನು ತೊಡೆದುಹಾಕುವ ನಿರ್ಣಾಯಕ ಹೆಜ್ಜೆಯಲ್ಲಿ ತನ್ನ ಮೊದಲ ಅಧ್ಯಕ್ಷರನ್ನು ಆಯ್ಕೆ ಮಾಡಿದೆ.

ಬ್ರಿಟನ್ ರಾಣಿ ಎಲಿಜಬೆತ್ ಅವರ ಹಿಡಿತದಿಂದ ಹೊರಬರಲು ಸಾಂಡ್ರಾ ಮೇಸನ್ ಅವರನ್ನು ಬುಧವಾರ ತಡರಾತ್ರಿ ದೇಶದ ಅಧ್ಯಕ್ಷರನ್ನಾಗಿ ಹೌಸ್ ಆಫ್ ಅಸೆಂಬ್ಲಿ ಮತ್ತು ಸೆನೆಟ್‌ನ ಜಂಟಿ ಅಧಿವೇಶನದಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಆಯ್ಕೆ ಮಾಡಲಾಯಿತು. ಇದು ನಮ್ಮ ‘ಗಣರಾಜ್ಯದ ಹಾದಿಯಲ್ಲಿ ಒಂದು ಮೈಲಿಗಲ್ಲು’ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

1966ರಲ್ಲಿ ಬ್ರಿಟಷರಿಂದ ಸ್ವಾತಂತ್ರ್ಯ ಪಡೆದ ಬಾರ್ಬಡೋಸ್, ವಸಾಹತು ರಾಷ್ಟ್ರವಾಗಿ ಬ್ರಿಟಿಷ್ ರಾಜಪ್ರಭುತ್ವದ ಜೊತೆ ದೀರ್ಘಕಾಲದಿಂದ ಸಂಬಂಧವನ್ನು ಉಳಿಸಿಕೊಂಡಿತ್ತು. ಆದರೆ, ಸಂಪೂರ್ಣ ಸಾರ್ವಭೌಮತ್ವ ಮತ್ತು ಸ್ವದೇಶಿ ನಾಯಕತ್ವಕ್ಕಾಗಿ ಇತ್ತೀಚಿನ ವರ್ಷಗಳಲ್ಲಿ ಕೂಗು ಹೆಚ್ಚಾಗಿದ್ದವು.

72 ವರ್ಷದ ಮೇಸನ್ ಅವರು ಬ್ರಿಟನ್‌ನಿಂದ ದೇಶ ಸ್ವಾತಂತ್ರ್ಯ ಪಡೆದದ 55 ನೇ ಸ್ವಾತಂತ್ರ್ಯೋತ್ಸವವಾದ ನವೆಂಬರ್ 30ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2018 ರಿಂದ ದ್ವೀಪದ ಗವರ್ನರ್-ಜನರಲ್ ಆಗಿರುವ ಮಾಜಿ ನ್ಯಾಯಶಾಸ್ತ್ರಜ್ಞೆ ಮೇಸನ್, ಬಾರ್ಬಡೋಸ್ ಕೋರ್ಟ್ ಆಫ್ ಅಪೀಲ್ಸ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯೂ ಕೂಡ ಆಗಿದ್ದಾರೆ.

ಅಧ್ಯಕ್ಷರ ಆಯ್ಕೆಯು ದೇಶದ ಪಯಣದಲ್ಲಿ ‘ಒಂದು ಪ್ರಮುಖ ಕ್ಷಣ’ಎಂದು ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲೆ ಬಣ್ಣಿಸಿದ್ಧಾರೆ.


ಮಂಗಳವಾರ, ಸೆಪ್ಟೆಂಬರ್ 28, 2021

ಚಂಡಮಾರುತಗಳಿಗೆ ಹೆಸರು ಇಡೋರು ಯಾರು?

ಚೆಂದ ಚೆಂದದ’ ಹೆಸರು ಇಟ್ಕೊಂಡು ಅಪ್ಪಳಿಸುತ್ತವಲ್ಲ ಈ ಚಂಡಮಾರುತಗಳು! ಇವಕ್ಕೆ ಹೆಸರು ಇಡೋರು ಯಾರು?

    

ಇತ್ತೀಚೆಗಷ್ಟೇ ನೀವಾರ್ ಚಂಡಮಾರುತ ಎದ್ದಿತ್ತು. ಇದಕ್ಕೆ ಹೆಸರುಕೊಟ್ಟಿದ್ದು ಇರಾನ್​. ಇದೀಗ ಪ್ರಾರಂಭವಾಗಿರುವ ಬುರೇವಿ ಮಾಲ್ಡೀವ್ಸ್​ನ ಸಲಹೆ. ಇನ್ನೂ ಮುಂದೆ ಅಪ್ಪಳಿಸಲಿರುವ ಸೈಕ್ಲೋನ್​ಗಳಿಗೂ ಈಗಾಗಲೇ ಹೆಸರಿಡಲಾಗಿದೆ.


ಪ್ರತಿವರ್ಷ ಒಂದಲ್ಲ ಒಂದು ಚಂಡಮಾರುತಗಳು ಏಳುತ್ತವೆ.. ಕೆಲವು ಅತಿ ಹೆಚ್ಚು ಭೀಕರತೆ ಸೃಷ್ಟಿಸಿದರೆ, ಮತ್ತೊಂದಿಷ್ಟು ಚಂಡಮಾರುತಗಳ ಪರಿಣಾಮ ಕೊಂಚ ಕಡಿಮೆ ಇರುತ್ತವೆ. ಆದರೆ ಅತಿಯಾದ ಗಾಳಿ, ಮಳೆ, ಸಮುದ್ರದಲ್ಲಿ ಏಳುವ ಭಯಂಕರ ಅಲೆಗಳು, ಭೂಕುಸಿತಗಳಂತಹ ಹಾನಿ ಭಯ ತರುವುದಂತೂ ಹೌದು..

ಆದರೆ ಈ ರುದ್ರ ಚಂಡಮಾರುತಗಳು ಹುಟ್ಟುಹುಟ್ಟುತ್ತಲೇ ಹೆಸರಿಟ್ಟುಕೊಂಡು ದಾಂಗುಡಿ ಇಡುತ್ತವಲ್ಲ..! ಅಷ್ಟಕ್ಕೂ ಇವಕ್ಕೆ ನಾಮಕರಣ ಮಾಡುವವರು ಯಾರು? ಯಾಕೆ ಮಾಡುತ್ತಾರೆ. ಇಷ್ಟೆಲ್ಲ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದು ಇಂದಿಗೂ ಅನೇಕರ ಕುತೂಹಲ.

ಈಗಾಗಲೇ ಅದೆಷ್ಟೋ ಚಂಡಮಾರುತಗಳ ಹೆಸರು ಕೇಳಿದ್ದೇವೆ. 2018ರಿಂದ ಮೆಲುಕು ಹಾಕಿದರೆ, ತಿತ್ಲಿ, ಗಜಾ, ಫೆಥೈ, ಫನಿ, ವಾಯು ಮತ್ತು ಹಿಕ್ಕಾ, ಆಂಫಾನ್​, ನಿಸರ್ಗ, ನೀವಾರ್​, ಬುರೇವಿ…ಹೀಗೆ ‘ಚೆಂದಚೆಂದದ’ ಹೆಸರಿನ ಚಂಡಮಾರುತಗಳು ಅಪ್ಪಳಿಸಿವೆ. ಇದಕ್ಕೂ ಮೊದಲೂ ಸಹ ಫ್ಯಾನ್​, ನೀಲಂ, ಹೆಲೆನ್​, ಫೈಲಿನ್​ ಹೆಸರಿನ ಸೈಕ್ಲೋನ್​ಗಳು ಅಪಾರ ಹಾನಿ ಸೃಷ್ಟಿಸಿದ್ದವು.

2000 ದಲ್ಲಿ ಶುರುವಾಯಿತು.. ಭ್ರಷ್ಟ ರಾಜಕಾರಣಿಗಳು, ಮಹಿಳೆಯರ ಹೆಸರಿನ ಸೈಕ್ಲೋನ್​ಗಳು
ಮೊದಲೆಲ್ಲ ಸೈಕ್ಲೋನ್​ಗಳಿಗೆ ಹೆಸರಿಡಲು ನಿರ್ದಿಷ್ಟ ಪದ್ಧತಿ ಇರಲಿಲ್ಲ. 1953ರ ಹೊತ್ತಲ್ಲಿ ಆಸ್ಟ್ರೇಲಿಯಾದಲ್ಲಿ ಭ್ರಷ್ಟ ರಾಜಕಾರಣಿಗಳ ಹೆಸರನ್ನು ಇಡಲಾಗುತ್ತಿತ್ತು. ಹಾಗೇ ಅಮೆರಿಕ ಮಹಿಳೆಯರ ಹೆಸರನ್ನೇ ಸೈಕ್ಲೋನ್​ಗಳಿಗೂ ಇಡಲು ಶುರು ಮಾಡಿಕೊಂಡಿತ್ತು. ಎ ದಿಂದ ಡಬ್ಲ್ಯೂವರೆಗಿನ ಅಕ್ಷರಗಳನ್ನೂ ಪ್ರಯೋಗ ಮಾಡುತ್ತಿತ್ತು. ಆದರೆ ಮೊಟ್ಟ ಮೊದಲಿಗೆ ನಿರ್ದಿಷ್ಟ ಪದ್ಧತಿಯ ಅನುಸಾರ, ಚಂಡಮಾರುತಗಳು ಹುಟ್ಟುವ ಮೊದಲೇ ಅವನ್ನು ಹೆಸರಿಟ್ಟು ಗುರುತಿಸುವ ಪರಿಪಾಠ ಶುರುವಾಗಿದ್ದು 2000ದಲ್ಲಿ.

ಭಾರತ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್​, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶಗಳನ್ನೊಳಗೊಂಡ WMO/ESCAP (ವಿಶ್ವ ಹವಾಮಾನ ಸಂಸ್ಥೆ ಹಾಗೂ ಏಷ್ಯಾ ಮತ್ತು ಪೆಸಿಫಿಕ್​ಗಳಿಗಾಗಿ ಇರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ) ಮೊಟ್ಟಮೊದಲಿಗೆ ಇದನ್ನು ಪ್ರಾರಂಭ ಮಾಡಿತು.

ಪ್ರತಿ ಸೈಕ್ಲೋನ್​ಗಳು ಅಪ್ಪಳಿಸುವ ಹೊತ್ತಿಗೆ ಈ ಎಂಟೂ ದೇಶಗಳು ಒಂದೊಂದು ಹೆಸರು ಸೂಚಿಸುತ್ತಿದ್ದವು. ಅದರಲ್ಲಿ ಆ ನಿರ್ದಿಷ್ಟ ಚಂಡಮಾರುತಕ್ಕೆ ಯಾವ ಹೆಸರು ಎಂಬುದನ್ನು WMO/ESCAPದ ಚಂಡಮಾರುತಗಳ ಪ್ಯಾನಲ್​ ಅಂತಿಮಗೊಳಿಸತೊಡಗಿತು. ಈ ಹೆಸರುಗಳು ಚಂಡಮಾರುತದ ಹುಟ್ಟುವ ಸ್ಥಳ, ವೇಗವನ್ನೂ ಆದರಿಸಿ ಇರುತ್ತಿತ್ತು.

2004ರಲ್ಲಿ ಅಪ್ಪಳಿಸಿದ್ದ ಚಂಡಮಾರುತಕ್ಕೆ ಭಾರತ ಮೊದಲ ಬಾರಿಗೆ ಅಗ್ನಿ ಎಂದು ಹೆಸರಿಟ್ಟಿತ್ತು. ಅದಾದ ಮೇಲೆ 2019ರಲ್ಲಿ ವಾಯು ಎಂಬುದು ನಮ್ಮ ದೇಶ ಇಟ್ಟ ಹೆಸರು. ಈಗಲೂ ಸಹ ಬಂಗಾಳ ಕೊಲ್ಲಿ, ಅರೇಬಿಯನ್​ ಸಾಗರ, ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಈ ಎಂಟು ರಾಷ್ಟ್ರಗಳ ಪ್ರಾದೇಶಿಕ ಹವಾಮಾನ ಇಲಾಖೆಗಳ ಹವಾಮಾನ ತಜ್ಞರೇ ಹೆಸರನ್ನು ಸೂಚಿಸುತ್ತಾರೆ. ಹಾಗೇ 2018ರಲ್ಲಿ ಈ ಸಮಿತಿಗೆ ಇರಾನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯೆಮೆನ್ ಸೇರ್ಪಡೆಯಾಗಿವೆ. ಪ್ರತಿ ರಾಷ್ಟ್ರಕ್ಕೂ ಎಂಟು ಹೆಸರನ್ನು ಸಲಹೆ ಮಾಡುವ ಅಧಿಕಾರ ಇರುತ್ತದೆ.

ಜಾಗತಿಕವಾಗಿಯೂ ಇದೇ ಮಾದರಿ
ಈಗಂತೂ ಜಾಗತಿಕವಾಗಿ ಈ ಪದ್ಧತಿ ಮುಂದುವರಿಯುತ್ತಿದೆ. ವಿಶ್ವದ ಯಾವುದೇ ಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಆಯಾ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (RSMCs) ಮತ್ತು ಉಷ್ಣವಲಯ ಚಂಡಮಾರುತ ಎಚ್ಚರಿಕೆ ಕೇಂದ್ರಗಳು (TCWCs) ನಾಮಕರಣ ಮಾಡುತ್ತವೆ. ಜಗತ್ತಿನಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಸೇರಿ ಒಟ್ಟು ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು ಮತ್ತು ಐದು ಉಷ್ಣವಲಯ ಚಂಡಮಾರುತ ಎಚ್ಚರಿಕೆ ಕೇಂದ್ರಗಳಿವೆ.

ಆಯಾ ದೇಶಗಳ ಭಾಷೆಯಲ್ಲಿ ಕೆಲವು ವಿಭಿನ್ನ ಅರ್ಥಕೊಡುವ ಹೆಸರನ್ನೇ ಚಂಡಮಾರುತಕ್ಕೆ ಇಡುತ್ತಿರುವುದು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುತ್ತದೆ. ಉದಾಹರಣೆಗೆ 2017ರ ನವೆಂಬರ್​ನಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಬಾಂಗ್ಲಾದೇಶ ಓಖಿ ಎಂದು ಹೆಸರಿಟ್ಟಿತ್ತು. ಅದರ್ಥ ಬೆಂಗಾಳಿ ಭಾಷೆಯಲ್ಲಿ ಕಣ್ಣು. ಹಾಗೇ ಫನಿ ಎಂದರೆ ಹಾವಿನ ಹೆಡೆ. ಇಲ್ಲಿಯವರೆಗೆ ಹಿಂದೂ ಮಹಾಸಾಗರ, ಅರೇಬಿಯನ್​ ಮತ್ತು ಬಂಗಾಳಕೊಲ್ಲಿಯಲ್ಲಿ ಹುಟ್ಟಿದ ಸುಮಾರು 64ಕ್ಕೂ ಹೆಚ್ಚು ಚಂಡಮಾರುತಗಳಿಗೆ ವಿಭಿನ್ನ, ಚೆಂದನೆಯ ಹೆಸರಿಡಲಾಗಿದೆ.

ಹೆಸರು ಕೊಡೋದು ಯಾಕೆ?
ಅಷ್ಟಕ್ಕೂ ಚಂಡಮಾರುಗಳಿಗೆ ಹೆಸರನ್ಯಾಕೆ ಕೊಡಲು ನಿರ್ಧರಿಸಿದ್ದಾರೆ ಎಂಬುದಕ್ಕೆ ಒಂದಷ್ಟು ಕಾರಣಗಳು ಸಿಗುತ್ತವೆ. ಮೊದಲನೆದಾಗಿ, ಆಯಾ ಪ್ರದೇಶದಲ್ಲಿ, ಬೇರೆಬೇರೆ ಕಾಲದಲ್ಲಿ ಅಪ್ಪಳಿಸುವ ಚಂಡಮಾರುತಗಳನ್ನು ಗುರುತಿಸಲು ಸುಲಭವಾಗುತ್ತದೆ. ಆ ನಿರ್ಧಿಷ್ಟ ಚಂಡಮಾರುತದ ಹಾನಿ ಪ್ರಮಾಣವನ್ನು ಜನರಿಗೆ ತಿಳಿಸಿ, ಅರಿವು ಮೂಡಿಸಲು ಸಹಾಯವಾಗುತ್ತದೆ.

ಕೆಲವೊಮ್ಮೆ ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಜಾಸ್ತಿ ಚಂಡಮಾರುತಗಳು ಒಟ್ಟಿಗೇ ಏಳುತ್ತವೆ.. ಅಥವಾ ಒಂದರ ಬೆನ್ನಿಗೆ ಮತ್ತೊಂದು ಅಪ್ಪಳಿಸುತ್ತವೆ. ಈ ಸಮಯದಲ್ಲಿ ಹೆಸರು ಇಡುವುದರಿಂದ ತುಂಬ ಅನುಕೂಲ. ಅಲ್ಲದೆ, ಸ್ಪಷ್ಟವಾಗಿ ಹಾನಿ, ಸಾವು, ನೋವಿನ ಲೆಕ್ಕಾಚಾರಗಳನ್ನು ದಾಖಲಿಸಬಹುದು. ಅದರಲ್ಲೂ ಅನೇಕ ವರ್ಷಗಳವರೆಗೆ ಚಂಡಮಾರುತ ಹೆಸರಿನಿಂದಲೇ ನೆನಪಿನಲ್ಲಿ ಉಳಿಯುತ್ತದೆ.

ಸದ್ಯದಲ್ಲೇ ಬೀಸಲಿದೆ ಪಾಕಿಸ್ತಾನದ ‘ಗುಲಾಬ್’ ಚಂಡಮಾರುತ 
ಇತ್ತೀಚೆಗಷ್ಟೇ ನಿವಾರ್ ಚಂಡಮಾರುತ ಎದ್ದಿತ್ತು. ಇದಕ್ಕೆ ಹೆಸರು ಕೊಟ್ಟಿದ್ದು ಇರಾನ್​. ಇದೀಗ ಪ್ರಾರಂಭವಾಗಿರುವ ಬುರೇವಿ ಮಾಲ್ಡೀವ್ಸ್​ನ ಸಲಹೆ. ಇನ್ನೂ ಮುಂದಕ್ಕೆ ಅಪ್ಪಳಿಸಲಿರುವ ಸೈಕ್ಲೋನ್​ಗಳಿಗೂ ಈಗಾಗಲೇ ಹೆಸರಿಡಲಾಗಿದೆ. ತೌಕ್ಟೆ (ಮ್ಯಾನ್ಮಾರ್​), ಯಾಸ್​ (ಒಮಾನ್​), ಗುಲಾಬ್​ (ಪಾಕಿಸ್ತಾನ​) ಎಂಬ ಸೈಕ್ಲೋನ್​ಗಳು ಶೀಘ್ರದಲ್ಲೇ ದಾಂಗುಡಿ ಇಡಲಿವೆ ಎಂದು ಹವಾಮಾನ ಇಲಾಖೆಗಳು ಪಟ್ಟಿ ಮಾಡಿವೆ.

ಶನಿವಾರ, ಸೆಪ್ಟೆಂಬರ್ 4, 2021

ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಪೈನಲ್ ಲಗ್ಗೆ

ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಪೈನಲ್ ಲಗ್ಗೆ.
ಟೋಕಿಯೊ: ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿರುವ ಭಾರತದ ಸುಹಾಸ್ ಎಲ್. ಯತಿರಾಜ್, ಚಿನ್ನದ ಪದಕ ಗೆಲ್ಲುವ ಗುರಿಯಿರಿಸಿದ್ದಾರೆ.

ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಯತಿರಾಜ್, ಎದುರಾಳಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು.

ನೋಯ್ಡಾದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಯತಿರಾಜ್, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಐಎಎಸ್ ಅಧಿಕಾರಿ ಎನಿಸಿದ್ದಾರೆ.

ಈ ಮೊದಲು ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಏತನ್ಮಧ್ಯೆ ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ಸೆಮಿಫೈನಲ್ ಪಂದ್ಯದಲ್ಲಿ ಮನೋಜ್ ಸರ್ಕಾರ್ ಸೋಲು ಅನುಭವಿಸಿದ್ದಾರೆ. ಆದರೂ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

ಗುರುವಾರ, ಸೆಪ್ಟೆಂಬರ್ 2, 2021

Union Budget 2021-22 | Summary | Date | Highlights

What Is Union Budget ?
  • The Union Budget of India, also referred to as the Annual Financial Statement in the Article 112 of the Constitution of India, is the annual budget of the Republic of India.
  • The Government presents it on the first day of February so that it could be materialized before the beginning of new financial year in April.
  • Until 2016 it was presented on the last working day of February by the Finance Minister of India in Parliament.
  • The budget, which is presented by means of the Finance bill and the Appropriation bill has to be passed by Lok Sabha before it can come into effect on April 1, the start of India’s financial year
What does the Budget presentation speech comprise? | Union Budget
  • The Budget presentation speech comprises the following parts:
  • Annual Financial Statement (AFS)
  • Demand for Grants (DG)
  • Appropriation Bill
  • Finance Bill
  • Macro-economic framework for the relevant financial year
  • Medium-Term fiscal policy and a strategy statement
  • Expenditure Profile
  • Expenditure Budget
  • Receipts Budget

Union Budget Of India 2021 Date |

  • Union Budget 2020-21 Will be presented By Finance Minister Nirmala Sitarman On 1 February 2021.

What is interim Budget ? | Union Budget 

  • The government of India  is expected to present an interim Budget, or vote on account, on February 1 as it nears the end of its term. Here, the government of India seeks the approval of Parliament to meet its expenditure for the first four months of the fiscal year (April to March) — paying salaries, ongoing programmes in various sectors etc — with no changes in the taxation structure, until a new government takes over and presents a full Budget that is revised for the full fiscal.

How Interim Budget is Differ From General Budget ?

  It differs from a General Budget, which is a comprehensive account of the finances. It lays down consolidated report of revenue from all sources, and outlays for schemes and projects.
  • The budget also carries Budgeted Estimates which are the estimates of the Central government’s accounts for the upcoming fiscal.



Union Budget 2021 Highlights | Budget 2021 Highlights

Union Budget 2021 Will be presented By Union Finance Minister Nirmala Sitaraman On 1 February 2021. Economic Survey Will be presented On 31st January 2021. Today Finance Minister Nirmala Sitarman Presented Union Budget 2021 For India . Full Details And Highlights Are Available Below .


  • Fiscal Deficit 2020-21 Was – 9.5 % of GDP , Fiscal Deficit For 2021-22 Will be Approx 6.8 %.
  • No Change In Personal Income Tax Slab.

Health and Well Being  Scheme And Fund Allocation In 2021 Budget

  • Ms. Sitharaman quotes Rabindranath Tagore: “Faith is the bird that feels the light when the dawn is still dark.”
  • Rs. 35, 000 crore has been allocated for COVID-19 vaccines and intend to provide further funds if required.
  • Rs. 2,217 crore for 32 urban centre For To tackle the burgeoning air pollution problem In India .
  • New Urban Jal Jeevan mission Will be Launched With A Total Fund Of Rs Rs 2.87 lakh crore. It Will Take Total 5 Years Time .
  • Mission Poshan 2.0 to improve nutritional outcomes across 112 Aspirational districts Would Be Launched In India .
  • The government envisages establishing critical health care hospital blocks in 602 districts.
  • PM Atma Nirbhar Swasthya Bharat Yojana at the outlay of Rs. 64,180 crore over six years to develop primary, secondary and tertiary healthcare systems.This will be in addition to the National Health mission and will support 17,000 rural and 11,000 urban health care centres.
  • Pnuemococcal vaccine to be rolled across the country
  • ₹35000 crore for Covid-19 Vaccine in 2021-22
  • Introduction of National Commission for Allied Healthcare Professionals Bill

PM Atma Nirbhar Swasth Bharat Yojana

utlay ₹64180 crore over 6 years

  • Support for Health and Wellness centres
  • Setting up of Integrated Public Health Labs
  • Establishing critical care hospital blocks
  • Strengthening NCDC
  • Expanding integrated health information portal

Health & Sanitation Budget 2021

  • A new scheme, titled PM Atma Nirbhar Swasthya Bharat Yojana, to be launched to develop primary, secondary and tertiary healthcare.
  • Mission POSHAN 2.0 to improve nutritional outcomes across 112 Aspirational districts Operationalization of 17 new public health units at points of entry
  • Modernising of existing health units at 32 airports, 15 seaports and land ports
  • Jal Jeevan Mission Urban aimed at better water supply nationwide
  • Strengthening of Urban Swachh Bharat Mission

Education Union Budget 2021

  • 100 new Sainik Schools to be set up
  • 750 Eklavya schools to be set up in tribal areas
  • A Central University to come up in Ladakh

Infrastructure Union Budget 2021

  • Vehicle scrapping policy to phase out old and unfit vehicles – all vehicles to undergo fitness test in automated fitness centres every 20 years (personal vehicles), every 15 years (commercial vehicles)
  • Highway and road works announced in Kerala, Tamil Nadu, West Bengal and Assam
  • National Asset Monetising Pipeline launched to monitor asset monetisation process
  • National Rail Plan created to bring a future ready Railway system by 2030
  • 100% electrification of Railways to be completed by 2023
  • Metro services announced in 27 cities, plus additional allocations for Kochi Metro, Chennai Metro Phase 2, Bengaluru Metro Phase 2A and B, Nashik and Nagpur Metros
  • National Hydrogen Mission to be launched to generate hydrogen from green power sources
  • Recycling capacity of ports to be doubled by 2024
  • Gas pipeline project to be set up in Jammu and Kashmir
  • Pradhan Mantri Ujjwala Yojana (LPG scheme) to be extended to cover 1 crore more beneficiaries

New Taxes Imposed In Budget 2021

  • No IT filing for people above 75 years who get pension and earn interest from deposits
  • Reopening window for IT assessment cases reduced from 6 to 3 years. However, in case of serious tax evasion cases (Rs. 50 lakh or more), it can go up to 10 years
  • Affordable housing projects to get a tax holiday for one year
  • Compliance burden of small trusts whose annual receipts does not exceed Rs. 5 crore to be eased
  • Duty of copper scrap reduced to 2.5%
  • Custom duty on gold and silver to be rationalised
  • Duty on naphtha reduced to 2.5%.
  • Duty on solar inverters raised from 5% to 20%, and on solar lanterns from 5% to 15%
  • All nylon products charged with 5% customs duty
  • Tunnel boring machines to attract customs duty of 7%
  • Customs duty on cotton raised from 0 to 10%

Economy and Finance In Budget 2021

  • Fiscal deficit stands at 9.5% of the GDP; estimated to be 6.8% in 2021-22
  • Proposal to allow States to raise borrowings up to 4% of GSDP this year
  • A Unified Securities Market Code to be created, consolidating provisions of the Sebi Act, Depositories Act, and two other laws
  • Proposal to increase FDI limit from 49% to 74%
  • An asset reconstruction company will be set up to take over stressed loans
  • Deposit insurance increased from Rs 1 lakh to Rs 5 lakh for bank depositors
  • Proposal to decriminalise Limited Liability Partnership Act of 2008
  • Two PSU bank and one general insurance firm to be Disinvested this year
  • An IPO of LIC to debut this fiscal
  • Strategic sale of BPCL, IDBI Bank, Air India to be completed

Agriculture Budget 2021 Key Schemes

  • Agriculture infrastructure fund to be made available for APMCs for augmenting their infrastructure
  • 1,000 more Mandis to be integrated into the E-NAM market place
  • Five major fishing hubs, including Chennai, Kochi and Paradip, to be developed
  • A multipurpose seaweed park to be established in Tamil Nadu

Employment Schemes In Budget 2021

  • A portal to be launched to maintain information on gig workers and construction workers
  • Social security to be extended to gig and platform workers
  • Margin capital required for loans via Stand-up India scheme reduced from 25% to 15% for SCs, STs and women

Union Budget 2021 : Full List Of Items What Got Cheaper & What Got Costlier After Budget 2021

Costlier Items After Budget 2021 

  • Mobile phones
  • Chargers
  • Power banks
  • Imported raw silk
  • Solar inverters – Budget 2021 raises duty to 20%.
  • Solar Lanterns : Budget 2021 raises duty to 15%.
  • Leather items
  • Gemstones
  • Tunnel boring machines
  • Kabuli chana, Pulses , Apples < Peas Will be Costlier After Budget 2021 .
  • Urea
  • Auto parts
  • Cotton: Customs duty increased to 10%
  • Gold & Silver Will be Costlier After Budget 2021 .
  • Palm Oil, Soybean Oil & Sun Flower Oil Will be Costlier

Cheaper Items After Budget 2021 

  • Iron
  • Steel
  • Nylon clothes
  • Copper items
  • Insurance
  • Shoes
  • Agricultural equipment

Budget 2021 Income Tax Slabs and Rates Table For Senior Citizen, NRIs

New Income Tax Slabs 2021-22
Under Rs 5 lakh
  • 0% for income upto 5 lakh.
  • 5% for income greater than 2.5 lakh if total income greater than Rs 5 lakh.
Rs 5 lakh to Rs 7.5 lakh10%
Rs 7.5 to 10 lakh15%
Rs 10 lakh to Rs 12.5 lakh20%
Rs 12.5 lakh to Rs 15 lakh25%
Above Rs 15 lakh30%

Important Abbreviations Union Budget 2021 | Indian Union Budget Abbreviations

  • IMF– International Monetary Fund
  • FDI- Foreign Direct Investment
  • CPI– Consumer Price Index
  • GDP– Gross Domestic Product
  • FCNR– Foreign Currency (Non-Resident) Account
  • GST– Goods and Service Tax
  • TEC India- Transform, Energise and Clean India
  • PACS– Primary Agriculture Credit Societies
  • KVKs– Krishi Vigyan Kendras
  • NAM– National Agricultural Market
  • APMC– Agricultural Produce Marketing Committee
  • MGNREGA– Mahatma Gandhi National Rural Employment Gurantee Act
  • PMGSY– Pradhan Mantri Gram Sadak Yojana
  • PMEGP– Prime Minister’s Employment Generation Programme
  • NRDWP– National Rural Drinking Water Programme
  • PMKK– Pradhan Mantri Kaushal Kendras
  • SANKALP– Skill Acquisition and Knowledge Awareness for Livelihood Promotion programme
  • STRIVE– Skill Strengthening for Industrial Value Enhancement
  • NTA– National Testing Agency
  • ICDS– Integrated Child Development Services
  • IRCTC– Indian Railway Catering and Tourism Corporation
  • TIES– Trade Infrastructure for Export Scheme
  • FIPB– Foreign Investment Promotion Board
  • CERT-Fin- Computer Emergency Response Team for our Financial Sector
  • IRFC– Indian Railway Finance Corporation Limited
  • FFO– Further Fund Offering
  • PMMY– Pradhan Mantri Mudra Yojana
  • BHIM– Bharat Interface for Money
  • UPI– Unified Payment Interface
  • USSD– Unstructured Supplementary Service Data
  • IMPS– Immediate Payment Service
  • SIDBI– Small Industries Development Bank of India
  • DBT- Direct Benefit Transfer
  • FRBM– Fiscal Responsibility and Budget Management Act
  • MAT– Minimum Alternate Tax
  • MSE– Medium and Small Enterprises
  • NPA– Non-Performing Asset
  • MSME– Micro, Small and Medium Enterprises
  • SIT– Special Investigation Team
  • FPI– Foreign Portfolio Investor
  • TDS– Tax Deducted at Source
  • QIBs– Qualified Institutional Buyers
  • SEBI- Securities and Exchange Board of India
  • RBI– Reserve Bank of India
  • CBDT– Central Board of Direct Taxation
  • IPO– Initial Public Offering
  • HUF– Hindu Undivided Family
  • OECD– Organisation for Economic Co-operation and Development
  • EBITDA– Earnings Before Interest, Taxes, Depreciation and Amortisation
  • TCS– Tax Collection at Source
  • FTC– Foreign Tax Credit
  • MPEDA– Marine Products Export Development Authority
  • APDEA– Anchorage Police Department Employees Association
  • AAR– Authority for Advance Ruling
  • FMV– Full Motion Video
  • FEMA– Foreign Exchange Management Act
  • LED– Light-Emitting Diode
  • RCS– Regional Connectivity Scheme
  • PCBs– Printed Circuit Boards
  • VPEG– Vinyl Polyethylene Glycol
  • MTA– Medium Quality Terephthalic Acid
  • QTA– Qualified Terephthalic Acid
  • NSSF– National Small Savings Fund


Union Budget Key Terminologies And Most Important Keywords
What Is Union Budget
  • Union Budget is the most comprehensive report of the Government’s Advances in which revenues from all sources and outlays for all activities are consolidated. The Budget also contains estimates of the Government’s accounts for the next Fiscal year called Budgeted Estimates.
  • Direct and Indirect Taxes – Direct taxes are the one that fall directly on individuals and corporations. For
    example, income tax, corporate tax etc. Indirect taxes are imposed on goods and services. They are paid by
    consumers when they buy goods and services. These include excise duty, customs duty etc.
  • Fiscal Deficit -When the government’s non-borrowed receipts fall short of its entire expenditure, it has to borrow money form the public to meet the shortfall. The excess of total expenditure over total non-borrowed receipts is called the Fiscal Deficit .
  • Revenue Deficit -The difference between revenue expenditure and revenue receipt is known as revenue Deficit. It shows the shortfall of government’s current receipts over current expenditure.
  • Primary Deficit -The primary deficit is the fiscal deficit minus interest payments. It tells how much of the Government’s borrowings are going towards meeting expenses other than interest payments.
  • Fiscal policy – It is the government actions with respect to aggregate levels of revenue and spending. Fiscal policy is implemented though the budget and is the primary means by which the government can influence the economy.
  • Capital Budget – The Capital Budget consists of capital receipts and payments. It includes investments in shares, loans and advances granted by the central Government to State Governments, Government companies, corporations and other parties
Revenue Budget –

The revenue budget consists of revenue receipts of the Government and it expenditure.
  • Revenue receipts are divided into tax and non-tax revenue.
  • Tax revenues constitute taxes like income tax, corporate tax, excise, customs, service and other duties that the Government levies.
  • The non-tax revenue sources include interest on loans, dividend on investments.
  • Budget Estimates – Amount of money allocated in the Budget to any ministry or scheme for the coming Financial year
  • Guillotine – Parliament, unfortunately, has very limited time for Scrutinizing the expenditure demands of all the Ministries.
  • So, once the prescribed period for the discussion on Demands for Grants is over, the Speaker of Lok Sabha puts all the outstanding Demands for Grants, Whether discussed or not, to the
    vote of the House.
  • This process is popularly known as ‘Guillotine’.

 


ಶನಿವಾರ, ಆಗಸ್ಟ್ 28, 2021

ಜಾತಿ ವಿನಾಶದ ಮೊದಲ ಹೆಜ್ಜೆ ಜಾತಿ ಗಣತಿ: ಸಿದ್ದರಾಮಯ್ಯ

ಜಾತಿ ವಿನಾಶದ ಮೊದಲ ಹೆಜ್ಜೆ ಜಾತಿ ಗಣತಿ: ಸಿದ್ದರಾಮಯ್ಯ

ಜಾತಿ ಗಣತಿಯ ಬೇಡಿಕೆಯನ್ನು ಸಂಕುಚಿತ ಅರ್ಥದಿಂದ ನೋಡಬೇಕಾಗಿಲ್ಲ. ಇದು ಕೇವಲ ತಲೆಎಣಿಕೆ ಮೂಲಕ ಜಾತಿ ಸಂಖ್ಯೆಯನ್ನು ಗುರುತಿಸಲು ಮಾಡುವ ಸಮೀಕ್ಷೆ ಅಲ್ಲ. ಇದು ಎಲ್ಲ ಜಾತಿ-ಧರ್ಮಗಳ ಜನತೆಯ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮಗ್ರರೂಪದ ಸಮೀಕ್ಷೆ. ಕರ್ನಾಟಕದಲ್ಲಿ ಇದನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದೆ ಎನ್ನುವ ಕಾರಣಕ್ಕೆ ಇದನ್ನು ಕೇವಲ ಹಿಂದುಳಿದ ಜಾತಿಗಳಿಗೆ ಸೀಮಿತಗೊಳಿಸಿ ವಿಶ್ಲೇಷಿಸುವುದು ತಪ್ಪು.
ನಮ್ಮದು ಜಾತಿಗ್ರಸ್ತ ಸಮಾಜ. ಇಲ್ಲಿನ ಪ್ರತಿಯೊಂದು ಜಾತಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ,ಸಾಂಸ್ಕೃತಿಕವಾಗಿ ಪ್ರತ್ಯೇಕ ಗುರುತುಗಳಿವೆ.  ಇವರ ಸಮಸ್ಯೆಗಳು ಮತ್ತು ಪರಿಹಾರಗಳೂ ಭಿನ್ನವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಇಡೀ ಜನಸಮುದಾಯಕ್ಕೆ ಅನ್ವಯವಾಗುವ ಏಕರೂಪದ ಸಾಮೂಹಿಕ ಯೋಜನೆಯನ್ನು ರೂಪಿಸಲಾಗುವುದಿಲ್ಲ. ಪ್ರತಿಯೊಂದು ಜಾತಿ-ಧರ್ಮದ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಯ ಸಮೀಕ್ಷೆ ನಡೆಸಿ ಹಿಂದುಳಿಯುವಿಕೆಯನ್ನು ಗುರುತಿಸಿದರೆ ಅದರ ಆಧಾರದಲ್ಲಿ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ಮೂಲಕ ಸಾಧಿಸುವ ಆರ್ಥಿಕ ಸ್ವಾವಲಂಬನೆ, ಜಾತಿ ವಿನಾಶದ  ಪ್ರಯತ್ನದ ಮೊದಲ ಹೆಜ್ಜೆಯಾಗುತ್ತದೆ. ಇದು ಜಾತಿಗಣತಿಯ ಮೂಲ ಉದ್ದೇಶ.
ಜಾತಿ ಗಣತಿಯ ಬೇಡಿಕೆ ಇಂದು ನಿನ್ನೆಯದಲ್ಲ. ಮಂಡಲ್ ಆಯೋಗದ ವರದಿಯನ್ನು ಸಲ್ಲಿಸುವಾಗಲೇ ಆಯೋಗದ ಅಧ್ಯಕ್ಷರಾಗಿದ್ದ ಬಿ.ಪಿ.ಮಂಡಲ್ ಅವರು ಜಾತಿ ಗಣತಿ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಸಂವಿಧಾನದ ಪರಿಚ್ಚೇದ 15(4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲು ರೂಪಿಸಲಾಗಿರುವ ಮೀಸಲಾತಿಯನ್ನು ವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತರಲು ಜಾತಿ ಗಣತಿ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದರು. ಮೀಸಲಾತಿಯನ್ನು ಪ್ರಶ್ನಿಸಿದ ಪ್ರಕರಣ ಪ್ರತಿಬಾರಿ ವಿಚಾರಣೆಗೆ ಬಂದಾಗ ಸುಪ್ರೀಂಕೋರ್ಟ್ ಮೀಸಲಾತಿಯನ್ನು ನಿರ್ಧರಿಸಲು ಬೇಕಾದ ಜಾತಿ ಕುರಿತ ಅಂಕಿ-ಅಂಶ ಎಲ್ಲಿದೆ ಎಂಬ ಪ್ರಶ್ನೆಯನ್ನು ಕೇಳಿದೆ.
ಜಾತಿ ಆಧಾರಿತ ಜನಗಣತಿ ಕೊನೆಯ ಬಾರಿ ನಡೆದದ್ದು 1931ರಲ್ಲಿ.   ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯವೇಳೆ ಧರ್ಮಗಳ ಗಣತಿ ಜೊತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಗಣತಿಯನ್ನು ತಲೆಎಣಿಕೆಯ ಮೂಲಕ ನಡೆಸಲಾಗುತ್ತದೆ. ಆದರೆ ಹಿಂದುಳಿದ ವರ್ಗದಲ್ಲಿರುವ ಜಾತಿಗಳ ಬಗೆಗಿನ ಇಲ್ಲಿಯ ವರೆಗಿನ ಮಾಹಿತಿಗೆ ಸ್ಯಾಂಪಲ್ ಸರ್ವೆಯೇ ಆಧಾರ.  ನಮ್ಮ ರಾಜ್ಯದ ಎಲ್ .ಜಿ.ಹಾವನೂರು ಆಯೋಗದಿಂದ ಹಿಡಿದು, ಕೇಂದ್ರ ಸರ್ಕಾರದ ಮಂಡಲ್ ಆಯೋಗದ ವರದಿಯ ವರೆಗೆ ಎಲ್ಲ ಆಯೋಗಗಳು 1931ರ ಜಾತಿ ಗಣತಿಯನ್ನು ಮೂಲವಾಗಿಟ್ಟುಕೊಂಡು ನಡೆಸಿದ್ದ ಸ್ಯಾಂಪಲ್ ಸರ್ವೆಯನ್ನು ಆಧರಿಸಿಯೇ ಶಿಫಾರಸುಗಳನ್ನು ಮಾಡಿವೆ.. ಈ ಕಾರಣಕ್ಕಾಗಿಯೇ ನ್ಯಾಯಾಲಯಗಳ ಈ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾ ಬಂದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುತ್ತಿದೆ. ಆದರೆ ಈ ಮೀಸಲಾತಿ ನೀತಿಯನ್ನು ಯಾವ ಅಂಕಿ-ಅಂಶದ ಆಧಾರದಲ್ಲಿ ರೂಪಿಸಲಾಗಿದೆ? ದೇಶದಲ್ಲಿರುವ ಹಿಂದುಳಿದ ಜಾತಿಗಳ ನಿಖರ ಸಂಖ್ಯೆ ಎಷ್ಟು? ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಏನು? ಇದ್ಯಾವುದಕ್ಕೂ ಸರ್ಕಾರದ ಬಳಿ ಉತ್ತರ ಇಲ್ಲ. ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಕೇಳಿರುವುದು  ಇದೇ ಪ್ರಶ್ನೆಯನ್ನು.
ಹಿಂದುಳಿದ ಜಾತಿಗಳ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿದ ಮಂಡಲ್ ತೀರ್ಪು ಎಂದೇ ಪ್ರಸಿದ್ದವಾದ ಇಂದಿರಾ ಸಾನಿ ತೀರ್ಪಿನಲ್ಲಿ ಹಿಂದುಳಿದ ಜಾತಿಗಳನ್ನು ಕ್ರಮಬದ್ಧವಾಗಿ ಗುರುತಿಸಲು  ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಶಾಶ್ವತ ಹಿಂದುಳಿದ ಜಾತಿಗಳ ಆಯೋಗ ರಚಿಸಬೇಕೆಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಎನ್.ಧರ್ಮಸಿಂಗ್ ಸರ್ಕಾರದಲ್ಲಿ  ಉಪಮುಖ್ಯಮಂತ್ರಿ ಮತ್ತು  ಹಣಕಾಸು ಖಾತೆ ಸಚಿವನಾಗಿದ್ದ ನಾನು ಮಂಡಿಸಿದ್ದ 2004-05ರ ಬಜೆಟ್ ನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವ ಘೋಷಣೆ ಮಾಡಿದ್ದೆ. ಆದರೆ ಆಗಿನ ಅತಂತ್ರ ರಾಜಕೀಯ ಸ್ಥಿತಿಯಿಂದಾಗಿ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಮರುವರ್ಷ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ್ದ ಕಾರಣದಿಂದಾಗಿ ಈ ಸಮೀಕ್ಷೆಯ ಆದೇಶ ಮೂಲೆಗುಂಪಾಗಿತ್ತು. ಅದರ ನಂತರ ಅಧಿಕಾರಕ್ಕೆ ಬಂದ ಎಲ್ಲ ಮುಖ್ಯಮಂತ್ರಿಗಳು ಈ ಯೋಜನೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದರು. ಒಂಬತ್ತು ವರ್ಷಗಳ ನಂತರ ಮುಖ್ಯಮಂತ್ರಿಯಾಗಿ  ನಾನೇ ಇದಕ್ಕೆ ಚಾಲನೆ ನೀಡಬೇಕಾಯಿತು.
ನ್ಯಾಯವಾದಿ ಕಾಂತರಾಜ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ಆಯೋಗಕ್ಕೆ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಹೊಣೆಗಾರಿಕೆ ವಹಿಸಿದ್ದು ಮಾತ್ರವಲ್ಲ 170 ಕೋಟಿ ರೂಪಾಯಿ ಅನುದಾನವನ್ನೂ ನೀಡಿದ್ದೆ. ಈ ಸಮೀಕ್ಷೆ ನ್ಯಾಯಾಲಯದ ನಿಕಷಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳಿರುವ ಕಾರಣ ಈ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಎಚ್ಚರಿಕೆಯಿಂದ ನಡೆಸಬೇಕಿತ್ತು. ಸುಮಾರು 1.6 ಲಕ್ಷ ಸಿಬ್ಬಂದಿಯ ಮೂಲಕ ರಾಜ್ಯದ 1.3 ಕೋಟಿ ಮನೆಗಳಿಗೆ ಭೇಟಿ ನೀಡಿ 2015ರ ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಅತ್ಯಂತ ವೈಜ್ಞಾನಿಕವಾಗಿಯೇ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹ ಒಂದು ಭಾಗವಾದರೆ, ಅದರ ವಿಶ್ಲೇಷಣೆ ಇನ್ನೊಂದು ಪ್ರಮುಖ ಭಾಗ. ಈ ಕಾರ್ಯಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ ನೆರವನ್ನು ಪಡೆಯಲಾಗಿತ್ತು. ಈ ವಿಶ್ಲೇಷಣಾ ಕಾರ್ಯ ನಿರೀಕ್ಷೆ ಮೀರಿ ವಿಳಂಬವಾಗಿದ್ದು ನಿಜ.
ದೇಶದಲ್ಲಿಯೇ ಮೊದಲನೆಯದಾದ ಈ ಜಾತಿ ಸಮೀಕ್ಷೆ ನನ್ನ ಕನಸಿನ ಕೂಸು. ಇದನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಸ್ವೀಕಾರ ಮಾಡಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂಬುದು ನನ್ನ ಆಸೆಯಾಗಿತ್ತು, ಆದರೆ ಆ ಕಾಲದಲ್ಲಿ ಪೂರ್ಣಗೊಂಡಿರಲಿಲ್ಲ. ನನಗಿರುವ ಮಾಹಿತಿ ಪ್ರಕಾರ ಆಯೋಗ ಸಮೀಕ್ಷಾ ವರದಿಯನ್ನು ಪೂರ್ಣಗೊಳಿಸಿದ್ದು 2018ರ ಕೊನೆಯಲ್ಲಿ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಕಾಂತರಾಜ್ ಆಯೋಗ ವರದಿ ಸಲ್ಲಿಸಲು ಸಮಯವಕಾಶ ಕೋರಿ ಆಗಿನ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಪತ್ರ ಬರೆದರೂ ಅದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಅನಗತ್ಯ ಸಂಘರ್ಷ ಬೇಡವೆಂದು ನಾನು ಒತ್ತಾಯಿಸಲು ಹೋಗಲಿಲ್ಲ. ಕೊನೆಗೆ 2019ರ ಸೆಪ್ಟೆಂಬರ್ ನಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಸಮಗ್ರ ವರದಿಯನ್ನು ಕಾಂತರಾಜ್ ಆಯೋಗ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಿದೆ.
ವಿರೋಧಪಕ್ಷದಲ್ಲಿದ್ದಾಗ ಜಾತಿ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಜಾರಿಗೊಳಿಸಲು ಒತ್ತಾಯಿಸುತ್ತಿದ್ದ ಬಿಜೆಪಿ ನಾಯಕರು ಈಗ ರಾಗಬದಲಾಯಿಸುತ್ತಿರುವುದು ವಿಷಾದನೀಯ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸ್ವಾಯತ್ತ ಸಂಸ್ಥೆ, ಇದಕ್ಕೆ ರಾಜಕೀಯ ಬಣ್ಣ ಬಳಿಯಬಾರದು. ಮಂಡಲ್ ಆಯೋಗ ರಚನೆಯಾಗಿದ್ದು 1977ರ ಜನತಾ ಸರ್ಕಾರದ ಕಾಲದಲ್ಲಿ, ಅದು ವರದಿ ಸಲ್ಲಿಸಿರುವುದು 1980ರಲ್ಲಿ ಇಂದಿರಾಗಾಂಧಿ ಸರ್ಕಾರಕ್ಕೆ, ಅದನ್ನು  ಒಪ್ಪಿಕೊಂಡಿರುವುದು 1990ರಲ್ಲಿ ಅಧಿಕಾರದಲ್ಲಿದ್ದ ವಿ.ಪಿ.ಸಿಂಗ್ ಸರ್ಕಾರ. ನಮ್ಮ ರಾಜ್ಯದಲ್ಲಿಯೇ ರಚನೆಯಾಗಿರುವ ಎ.ಜೆ.ಸದಾಶಿವ ಆಯೋಗ ರಚನೆ ಮಾಡಿದ್ದು ಒಂದು ಸರ್ಕಾರ, ಅದು ವರದಿ ಸಲ್ಲಿಸಿದ್ದು ಇನ್ನೊಂದು ಸರ್ಕಾರಕ್ಕೆ. 
ಇಂತಹ ಸಮೀಕ್ಷೆಗಳು ಕೋಟ್ಯಂತರ ಜನತೆಯ ಸಾಮಾಜಿಕ,ಆರ್ಥಿಕ  ಭವಿಷ್ಯವನ್ನು ನಿರ್ಧರಿಸುವ ವಿಷಯವಾಗಿರುವ ಕಾರಣ ಅವಸರದಿಂದ, ನಿರ್ಲಕ್ಷದಿಂದ ಮಾಡಲಾಗದು. ವಿಳಂಬವಾದರೂ ಈಗ ಪೂರ್ಣಗೊಂಡಿದೆ. ಈಗ ಕುಂಟುನೆಪಗಳನ್ನು ಮುಂದೊಡ್ಡಿ ಈ ಸಮೀಕ್ಷೆಯನ್ನು ತಿರಸ್ಕರಿಸಿದರೆ ಅದು ರಾಜ್ಯದ ಜನತೆಗೆ ಬಗೆವ ದ್ರೋಹವಾಗುತ್ತದೆ ಮಾತ್ರವಲ್ಲ ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ.
ಕೆಲವು ಬಿಜೆಪಿ ನಾಯಕರು ಜಾತಿ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಹಳಷ್ಟು ತರಾತುರಿಯಿಂದ ಸಂವಿಧಾನಕ್ಕೆ ತಿದ್ದುಪಡಿಯನ್ನೂ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇಕಡಾ 10ರಷ್ಟು ಮೀಸಲಾತಿಯನ್ನು ಘೋಷಿಸಿತು. ಈ ಮೀಸಲಾತಿ ನೀತಿಗೆ ಮುನ್ನ ಯಾವ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆದಿದೆ?.
ರಾಜ್ಯ ಸರ್ಕಾರ ಇಂತಹ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು. ಈಗಾಗಲೇ ಜಾತಿಗಣತಿಯ ವರದಿ ಮುಖ್ಯಮಂತ್ರಿಯವರ ಮೇಜಿನಲ್ಲಿದೆ. ಮೊದಲು ಅದನ್ನು ಸ್ವೀಕರಿಸಬೇಕು, ಅದರಲ್ಲಿ ಏನಾದರೂ ಲೋಪ-ದೋಷಗಳಿದ್ದರೆ ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸರ್ಕಾರಕ್ಕೆ ಸಂಪೂರ್ಣವಾಗಿ ಸಹಕರಿಸಲು ನಾವು ಸಿದ್ದರಿದ್ದೇವೆ. 

-Siddaramaiah
ಮಾಜಿ ಮುಖ್ಯಮಂತ್ರಿಗಳು 
ಕೃಪೆ : ಪ್ರಜಾವಾಣಿ, 28-08-2021

ಮಂಗಳವಾರ, ಆಗಸ್ಟ್ 24, 2021

23 ಆಗಸ್ಟ್ 2021 ರಂದು, ದೇಶದಲ್ಲಿಯೆ ಪ್ರಥಮವಾಗಿ ಕರ್ನಾಟಕ ರಾಜ್ಯ "ರಾಷ್ಟ್ರೀಯ ಶಿಕ್ಷಣ ನೀತಿ" ಜಾರಿ ಮಾಡಿದ ಮೊದಲ ರಾಜ್ಯವಾಗಿದೆ.

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್

23 Aug 2021.5:19 PM

ಬೆಂಗಳೂರು, (ಆ.23): ಇಡೀ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಇಂದು (ಆ.23) ವಿಧ್ಯುಕ್ತವಾಗಿ ಜಾರಿಗೆ ತರಲಾಯಿತು. ಇದರೊಂದಿಗೆ ದೇಶದಲ್ಲೇ ಎಲ್ಲರಿಗಿಂತ ಮೊದಲು ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿದಂತಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನವದೆಹಲಿಯಿಂದಲೇ ವರ್ಚುಯಲ್ ವೇದಿಕೆ ಮೂಲಕ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಹಸಿರು ನಿಶಾನೆ ತೋರಿಸಿದರಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಇಂದಿನಿಂದ ಹೊಸ ಮನ್ವಂತರ ಆರಂಭವಾಗಿದೆ ಎಂದು ಘೋಷಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ದಿನವೇ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಘೋಷಿಸಿದ ಸಿಎಂ

ಇದೇ ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ಉನ್ನತ ಶಿಕ್ಷಣ ವಿಭಾಗದಲ್ಲಿ ಇಂದಿನಿಂದಲೇ ವಿದ್ಯಾರ್ಥಿಗಳ ದಾಖಲಾತಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಬಾರಿ ಮೊದಲ ವರ್ಷದ ಪದವಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೂ ಸರಕಾರವೇ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಿದೆ ಎಂದು ಘೋಷಣೆ ಮಾಡಿದರು.

ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ನೀಡುವ ವಿಚಾರವಾಗಿ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥನಾರಾಯಣ ಅವರು ನನಗೆ ಸಲಹೆ ನೀಡಿದ್ದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅವುಗಳ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ಈ ಬಾರಿ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಸಿಎಂ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಎರಡು ವರ್ಷ ಮಾತೃಭಾಷೆ ಕಡ್ಡಾಯವಾಗಿ ಕಲಿಯಬೇಕು

ಅಲ್ಲದೆ, ರಾಜ್ಯದ ಡಿಜಿಟಲ್ ನೀತಿ ಹಾಗೂ ಸಂಶೋಧನೆ- ಅಭಿವೃದ್ಧಿ ನೀತಿಯನ್ನೂ ಈ ವರ್ಷದಿಂದಲೇ ಜಾರಿ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

ರಾಜ್ಯದ ಗುಣಗಾನ ಮಾಡಿದ ಪ್ರಧಾನ್: 

ನಮ್ಮ ದೇಶದ ಎಲ್ಲ ರಾಜ್ಯಗಳ ಪೈಕಿ ಎಲ್ಲರಿಗಿಂತ ಮೊದಲೇ ಕರ್ನಾಟಕ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದು, ಇದು ರಾಜ್ಯದ ದಿಕ್ಕನ್ನೇ ಬದಲಿಸುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಇಂದಿನಿಂದ ಹೊಸ ಮನ್ವಂತರ ಆರಂಭವಾಗಿದ್ದು, ಇಡೀ ದೇಶದಲ್ಲೇ ಕರ್ನಾಟಕವು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ದಾಪುಗಾಲು ಇಟ್ಟಿದೆ. ಇಡೀ ದೇಶವನ್ನೇ ನವ ದಿಕ್ಕಿನತ್ತ ಚಲಿಸುವಂತೆ ಮಾಡಬಲ್ಲ ಶಿಕ್ಷಣ ನೀತಿಯು, ಬಹ ಶಿಸ್ತಿಯ ಹಾಗೂ ಬಹು ಆಯ್ಕೆಯ ಕಲಿಕೆಗೆ ಉತ್ತೇಜನ ನೀಡಲಿದ್ದು, ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯವನ್ನು ಮುಕ್ತವಾಗಿ ಅಧ್ಯಯನ ಮಾಡಬಹುದಾಗಿದೆ ಎಂದು ಪ್ರಧಾನ್ ಹೇಳಿದರು.

ಇಂದಿನಿಂದ ವಿದ್ಯಾರ್ಥಿಗಳ ದಾಖಲಾತಿ: 

ಶಿಕ್ಷಣ ನೀತಿ ಜಾರಿಗೆ ಬಂದ ಬೆನ್ನಲ್ಲೇ ಉನ್ನತ ಶಿಕ್ಷಣಕ್ಕೆ ನೂತನ ವಿದ್ಯಾರ್ಥಿಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ವೇದಿಕೆಯಲ್ಲೇ ಚಾಲನೆ ನೀಡಿದರು. ಇದರನ್ವಯ ಅಕ್ಟೋಬರ್ 1ರಿಂದ ಪದವಿ ಮೊದಲ ವರ್ಷದ ತರಗತಿಗಳು ಆರಂಭವಾಗಲಿವೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಶಿಕ್ಷಣ ನೀತಿಯನ್ನು ಎಲ್ಲರಿಗಿಂತ ಮೊದಲೇ ಜಾರಿ ಮಾಡುತ್ತಿರುವ ನಮ್ಮ ರಾಜ್ಯವೂ, ಮುಂಬರುವ ದಿನಗಳಲ್ಲಿ ಡಿಜಿಟಲ್ ಕಲಿಕೆಯನ್ನು ಉತ್ತೇಜಿಸಲು, ಅಂತರ್ಜಾಲದಿಂದ ಪ್ರತಿ ಹಳ್ಳಿಯನ್ನು ಬೆಸೆಯಲು ಕಟಿಬದ್ಧವಾಗಿದ್ದು, ಇದಕ್ಕಾಗಿ ʼಹೊಸ ಡಿಜಿಟಲ್ ಪಾಲಸಿʼ ಜಾರಿಗೆ ತರುವುದಾಗಿ ಘೋಷಣೆ ಮಾಡಿದರು.

ಮೊದಲಿನಿಂದಲೂ ಕರ್ನಾಟಕವು ಶೈಕ್ಷಣಿಕವಾಗಿ ಅದರಲ್ಲೂ ವೈಜ್ಞಾನಿಕ ಅಧ್ಯಯನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಹೀಗಾಗಿ ನೂತನ ʼಸಂಶೋಧನೆ ಮತ್ತು ಅಭಿವೃದ್ಧಿ ನೀತಿʼಯನ್ನು ಜಾರಿಗೆ ತರಲಾಗುವುದು. ಈ ಮೂಲಕ ವೈಜ್ಞಾನಿಕ ಸಂಶೋಧನೆ, ಅಭಿವೃದ್ಧಿಗೆ ಅತಿ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ನಿರ್ವಹಣಾ ವ್ಯವಸ್ಥೆಗೂ ಚಾಲನೆ: 

ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆಯಾದ ʼಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಗೂ ಇದೇ ವೇಳೆ ಮುಖ್ಯಮಂತ್ರಿ ಚಾಲನೆ ನೀಡಿದರು.

ಆದ್ಯತೆಯ ಮೇರೆಗೆ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಹಕಾರ, ಸಂಪನ್ಮೂಲವನ್ನು ಒದಗಿಸಲಾಗುವುದು. ಇವತ್ತಿನಿಂದಲೇ ರಾಜ್ಯದಲ್ಲಿ ಅಧಿಕೃತವಾಗಿ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಇದಕ್ಕೆ ಪೂರಕವಾಗಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕವೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದರು ಸಿಎಂ.

ಎನ್‌ಇಪಿ ವೆಬ್ ಮತ್ತು ಸಹಾಯವಾಣಿ 
ರಾಷ್ಟೀಯ ಶಿಕ್ಷಣ ನೀತಿಯ ಜಾರಿ ಸಂದರ್ಭದಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಶಿಕ್ಷಣ ನೀತಿಯ ವೆಬ್ಸೈಟ್ ಮತ್ತು ಸಹಾಯವಾಣಿಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಿದರು. 080-24486666 ಸಂಖ್ಯೆಯನ್ನು ಎಲ್ಲರೂ ಸಂಪರ್ಕ ಮಾಡಬಹುದು.

ಜಾಗತಿಕ ಮಟ್ಟಕ್ಕೆ ಉನ್ನತ ಶಿಕ್ಷಣ 

ಇದೇ ಕಾರ್ಯಕ್ರಮದಲ್ಲಿ ಹೊಸ ಶಿಕ್ಷಣ ನೀತಿಯಡಿ ಉನ್ನತ ಶೀಕ್ಷಣವನ್ನು ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಂಟಿಗೋಮೆರಿ ಕಮ್ಯುನಿಟಿ ಕಾಲೇಜಿನ ಜತೆ ಕಾಲೇಜು ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು, ಶಿಕ್ಷಣ ನೀತಿ ಜಾರಿಯ ಬಗ್ಗೆ ಈವರೆಗೆ ರಾಜ್ಯ ಸರಕಾರ ಕೈಗೊಂಡ ಎಲ್ಲ ಕ್ರಮಗಳನ್ನು ಪಟ್ಟಿ ಮಾಡಿದರಲ್ಲದೆ, ಹೊಸ ಶಿಕ್ಷಣ ನೀತಿಯು ರಾಜ್ಯಕ್ಕೆ ಅತ್ಯಗತ್ಯವಾಗಿತ್ತು. ರಾಜ್ಯದ ಸಮಗ್ರ ವಿಕಾಸಕ್ಕೆ ಇದು ಮುಂದಿನ ದಿನಗಳಲ್ಲಿ ದೊಡ್ಡ ಕಾಣಿಕೆ ನೀಡಲಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಕೂಡ ಮಾತನಾಡಿದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಇಲಾಖೆಯ ಆಯುಕ್ತ ಪ್ರದೀಪ್ ಶಿಕ್ಷಣ ನೀತಿಯ ಪ್ರಾತ್ಯಕ್ಷಿಕೆ ನೀಡಿದರು. ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲ ಜೋಶಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನೀತಿ ನಿರೂಪಕರಿಗೆ ಗೌರವ

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷರಾಗಿದ್ದ ಇಸ್ರೋ ಸಂಸ್ಥೆಯ ವಿಶ್ರಾಂತ ಅಧ್ಯಕ್ಷ ಡಾ.ಕಸ್ತೂರಿ ರಂಗನ್, ಶಿಕ್ಷಣ ತಜ್ಞರಾದ ಪ್ರೊ.ಎಂ.ಕೆ.ಶ್ರೀಧರ್, ಪ್ರೊ.ಟಿ.ವಿ.ಕಟ್ಟೀಮನಿ ಹಾಗೂ ಅನುರಾಗ್ ಬೇಹರ್ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದೇ ವೇಳೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರಿ ರಂಗನ್ ಅವರು; ಕರ್ನಾಟಕ ಸರಕಾರವು ಅತಿದೊಡ್ಡ, ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಶಿಕ್ಷಣ ನೀತಿಯೂ ಪ್ರತಿಯೊಂದು ಹಂತದಲ್ಲೂ ಸಮಾಜವನ್ನು ಜ್ಞಾನದ ಮೂಲಕ ಬದಲಾವಣೆ ಮಾಡುತ್ತಾ ಹೋಗುತ್ತದೆ ಎಂದರು.

ಶಿಕ್ಷಣ ನೀತಿಯ ಕರಡು ಸಿಕ್ಕಿದ ಕೂಡಲೇ ರಾಜ್ಯ ಸರಕಾರ ಕಾರ್ಯಪಡೆಯನ್ನು ರಚನೆ ಮಾಡಿತು. ಕೇಂದ್ರ ಸರಕಾರ ನೀತಿಯನ್ನು ಘೋಷಣೆ ಮಾಡಿದ ನಂತರ ನಾನು ಬೆಂಗಳೂರಿಗೆ ವಾಪಸ್ ಬಂದೆ. ಆ ಕೂಡಲೇ ನಮ್ಮ ಮನೆಗೆ ಬಂದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಡಾ.ಅಶ್ವತ್ಥನಾರಾಯಣ ಅವರು, ಆದಾಗ್ಗೆ ಕೈಗೊಂಡಿದ್ದ ಕ್ರಮಗಳ ಬಗ್ಗೆ ವಿವರಿಸಿದರು. ಅವರಿಬ್ಬರೂ ನಮಗಿಂತ ವೇಗವಾಗಿದ್ದರು. ನನಗೆ ಬಹಳ ಆಶ್ಚರ್ಯವಾಯಿತು. ಅಂದು ನಡೆದ ಚರ್ಚೆಯಂತೆ ಇಂದು ಶಿಕ್ಷಣ ನೀತಿ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ ಎಂದು ಕಸ್ತೂರಿ ರಂಗನ್ ಹೇಳಿದರು.

ಇವತ್ತು ನನಗೆ ಅತಿ ಹೆಚ್ಚು ಸಂತಸದ ದಿನ. ಸಚಿವ ಅಶ್ವತ್ಥನಾರಾಯಣ ಅವರು ಹೇಳಿದಂತೆ‌ ಮಾಡಿ ತೋರಿಸಿದರು. ಸಣ್ಣ ಪುಟ್ಟ ದೋಷಗಳು ಬರಬಹುದು. ಆದರೆ ಎದೆಗುಂದದೆ ಕೆಲಸ‌ ಮಾಡಿ. ಈ ವಿಷಯದಲ್ಲಿ ಅಶ್ವತ್ಥನಾರಾಯಣ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಬುಧವಾರ, ಆಗಸ್ಟ್ 18, 2021

ಪಿ,ವಿ,ಸಿಂಧು ಜೊತೆ ಐಸ್ ಕ್ರಿಮ್ ಸವಿದ ಮೊದಿಜೀ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ತವರಿಗೆ ಬಂದ ಬಳಿಕ ನಿಮ್ಮೊಟ್ಟಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಆದರಂತೆ ಪಿ.ವಿ ಸಿಂಧು ಜೊತೆ ಐಸ್‍ಕ್ರೀಂ ಸವಿಯುವ ಮೂಲಕ ಮೋದಿ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜತೆ ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮೋದಿ ಸಮಯ ಕಳೆದಿದ್ದಾರೆ.

ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಜುಲೈ 14ರಂದು ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದರು.

ಸಂವಾದದಲ್ಲಿ ಮಾತನಾಡಿದ್ದ ಸಿಂಧು, ‘ನಾನು ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವುದರಿಂದ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಿದ್ದೇನೆ. ಹಾಗಾಗಿ ನಾನು ಐಸ್ ಕ್ರೀಂ ಹೆಚ್ಚು ತಿನ್ನುವುದಿಲ್ಲ ಎಂದು ಹೇಳಿದ್ದರು. ಇದೇ ವೇಳೆ ಮಾತನಾಡಿದ್ದ ಮೋದಿ, ಒಲಿಂಪಿಕ್ಸ್‌ನಿಂದ ತವರಿಗೆ ಮರಳಿದ ಬಳಿಕ ನಿಮ್ಮೊಂದಿಗೆ ಐಸ್ ಕ್ರೀಂ ಸೇವಿಸುವುದಾಗಿ ಭರವಸೆ ನೀಡಿದ್ದರು.

ಔತಣಕೂಟದಲ್ಲಿ ನೀರಜ್ ಚೋಪ್ರಾ, ಪಿ.ವಿ.ಸಿಂಧು, ಮೀರಾಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್, ಪುರುಷರು ಮತ್ತು ಮಹಿಳಾ ಹಾಕಿ ತಂಡದ ಆಟಗಾರ್ತಿಯರು ಸೇರಿದಂತೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ ಮೋದಿ ಮಾತುಕತೆ ನಡೆಸಿದರು.

ಭಾನುವಾರ, ಆಗಸ್ಟ್ 15, 2021

ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

1) ರಾಮಾಯಣ ರಚಿಸಿದವರು ಯಾರು?
ಉತ್ತರ: ವಾಲ್ಮೀಕಿ ಮಹರ್ಷಿಗಳು
2) ವಾಲ್ಮಿಕಿ ಯಾವ ವಂಶಜರು?
ಉತ್ತರ: ಭೃಗುವಂಶ
3) ವಾಲ್ಮಿಕಿಯ ತಂದೆಯ ಹೆಸರೇನು?
ಉತ್ತರ: ಪುಚೇತನ ಮಹರ್ಷಿಗಳು
4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?
ಉತ್ತರ: ಹುತ್ತ
5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು?
ಉತ್ತರ: ೦೮
6)ರಾಮಾಯಣದ ಕಾಂಡಗಳು ಯಾವುವು?
ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 
7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? 
ಉತ್ತರ : ರಾಷ್ಟ್ರಕವಿ ಕುವೆಂಪು
8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?
ಉತ್ತರ : ಕಂಬನ್
9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?
ಉತ್ತರ : ಯುದ್ದಕಾಂಡ
10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? 
ಉತ್ತರ : ತ್ರೇತಾಯುಗ
11) ರಾಮನ ವಂಶ ಯಾವುದು ? 
ಉತ್ತರ : ಸೂರ್ಯವಂಶ 
12) ಸೂರ್ಯವಂಶದ ಮೊದಲ ರಾಜನ ಹೆಸರು ?
ಉತ್ತರ : ಇಕ್ಷ್ವಾಕು
13) ಇಕ್ಷ್ವಾಕುವಿನ ತಂದೆ ಯಾರು ? 
ಉತ್ತರ : ಸೂರ್ಯದೇವ
15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?
ಉತ್ತರ : ರಘುವಂಶ
16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?
ಉತ್ತರ : ಸತ್ಯ ಹರಿಶ್ಚಂದ್ರ
17) ದಶರಥನ ಮೂವರು ಪಟ್ಟ ಮಹಿಷಿಯರು 
ಯಾರು ? 
ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ
18) ದಶರಥ ಮಹಾರಜನ ತಂದೆ ಯಾರು ?
ಉತ್ತರ : ಅಜ ಮಹಾರಾಜ
19) ಕೌಶಲ್ಯೆಯ ತಂದೆ ಯಾರು ?
ಉತ್ತರ : ಭಾನುವಂತ
20) ಸುಮಿತ್ರೆಯ ತಂದೆ ಯಾರು ?
ಉತ್ತರ: ಶೂರರಾಜ
21) ಕೈಕೆಯ ತಂದೆ ಯಾರು?
ಉತ್ತರ : ಅಶ್ವಪತಿ ರಾಜ
22) ದಶರಥನು  ಪ್ರಾಣಿಯನ್ನು ಕೊಲ್ಲಲೆಂದು  ಹುಡಿದ್ದ ಬಾಣ ಯಾರಿಗೆ ನಾಟಿತು ?
ಉತ್ತರ : ಶ್ರವಣಕುಮಾರ
23) ದಶರಥನಿಗೆ ಪುತ್ರವಿರಹದಿಂದ ಸಾಯುವಂತೆ ಶಾಪ ನಿಡಿದ್ದು ಯಾರು ?
ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ
24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?
ಉತ್ತರ : ಪುತ್ರಕಾಮೇಷ್ಟಿ ಯಾಗ
25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?
ಉತ್ತರ : ಶೃಂಗಿ ಋಷಿಗಳು
26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು? 
ಉತ್ತರ : ಅಗ್ನಿದೇವ
27) ರಾಮನು ಜನಿಸಿದ್ದು ಯಾವಾಗ ?
ಉತ್ತರ: ಚೈತ್ರಮಾಸದ 9ನೇ ದಿನ
28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?
ಉತ್ತರ : ಪುನರ್ವಸು
29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು? 
ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)
30) ದಶರಥ ಮಹಾರಾಜನ ರಾಜಗುರು ಯಾರು ?
ಉತ್ತರ : ವಶಿಷ್ಠ ಮಹರ್ಷಿಗಳು
31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?
ಉತ್ತರ : ಸುಮಂತ
32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?
ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ
33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?
ಉತ್ತರ : ಬಲ ಹಾಗೂ ಅತಿಬಲಾ
34) ತಾಟಕಿಯನ್ನು ಕೊಂದಿದ್ದು ಯಾರು?
ಉತ್ತರ : ಶ್ರೀರಾಮ
35) ಸುಬಾಹುವನ್ನು ಕೊಂದಿದ್ದು ಯಾರು?
ಉತ್ತರ : ಲಕ್ಷ್ಮಣ
36) ಸುಮಿತ್ರೆಯ ಅವಳಿ ಮಕ್ಕಳು ಯಾರು?
ಉತ್ತರ : ಲಕ್ಷ್ಮಣ, ಶತ್ರುಘ್ನ
37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ? 
ಉತ್ತರ : ಮಹರ್ಷಿ ವಸಿಷ್ಠರು
38) ಕೈಕೆಯಿ ಯಾರ ಮಗಳು?
ಉತ್ತರ : ಕೈಕಯ ರಾಜನ‌ ಮಗಳು
39) ಕೌಶಲ್ಯ ಯಾವ ದೇಶದವಳು ?
ಉತ್ತರ : ಕೋಸಲ ದೇಶ
40) ವಿದೇಹದ ರಾಜಧಾನಿ ಯಾವುದು? 
ಉತ್ತರ : ಮಿಥಿಲೆ
46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು? 
ಉತ್ತರ : ಶಿವ ಧನಸ್ಸು
47) ಭರತನ ಹೆಂಡತಿ ಯಾರು?
ಉತ್ತರ : ಮಾಂಡವಿ
48) ಶತ್ರುಘ್ನನ ಹೆಂಡತಿ ಯಾರು?
ಉತ್ತರ : ಶೃತಕಿರ್ತಿ
49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?
ಉತ್ತರ : ಕ್ಕುಷದ್ವಜನ ಮಕ್ಕಳು
50) ಪರಶುರಾಮರು ಯಾವ ವಂಶದವರು? 
ಉತ್ತರ : ಭೃಗು ವಂಶ
41) ಜನಕ ಮಹಾರಾಜನ ಪತ್ನಿ ಯಾರು ?
ಉತ್ತರ : ಸುನಯನಾ ದೇವಿ
42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ? 
ಉತ್ತರ : ವಿದೇಹ
43) ವೈದೇಹಿ ಯಾರು ?
ಉತ್ತರ : ಸೀತಾಮಾತೆ 
44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?
ಉತ್ತರ : ಊರ್ಮಿಳಾ
45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?
ಉತ್ತರ : ಭೂಮಿಯಲ್ಲಿ
51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?
ಉತ್ತರ : ಗೌತಮ ಮಹರ್ಷಿಗಳು
52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?
ಉತ್ತರ: ಶ್ರೀರಾಮನಿಂದ
53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?
ಉತ್ತರ : ಶತಾನಂದ
54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?
ಉತ್ತರ : 21 ಬಾರಿ
55) ಚಿರಂಜೀವಿಗಳು ಎಷ್ಟು ಮಂದಿ? 
ಉತ್ತರ : 7 ಜನ 
56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?
ಉತ್ತರ : ಎರಡನೆಯ ಭಾಗ
57) ರಾಮಾಯಣದ ಮೊದಲ ಭಾಗದ ಹೆಸರೇನು ?
ಉತ್ತರ : ಬಾಲಕಾಂಡ
58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?
ಉತ್ತರ : ರಾಜಗುರುಗಳಾದ ವಶಿಷ್ಠರಿಗೆ
59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?
ಉತ್ತರ : ಶಂಬರಾಸುರ
60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?
ಉತ್ತರ : ದಶರಥ ಮಹಾರಾಜ
61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?
ಉತ್ತರ : ದೇವೇಂದ್ರ
62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?
ಉತ್ತರ: 2
63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?
 ಉತ್ತರ : ಸೌಮಿತ್ರಿ
64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು? 
ಉತ್ತರ : ಅಂದಿನ ಸೂರ್ಯಾಸ್ತ
65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?
ಉತ್ತರ : ಶೃಂಗವೇರಪುರ
66) ಶೃಂಗವೆರಪುರ ಎಲ್ಲಿದೆ ?
ಉತ್ತರ: ಗಂಗಾನದಿಯ ತಟದಲ್ಲಿ
67) ನಿಷಾದದ ರಾಜನ ಹೆಸರೇನು ?
ಉತ್ತರ : ಗುಹ
68) ಗುಹನ ವೃತ್ತಿ ಏನು?
ಉತ್ತರ: ಅವನೊಬ್ಬ ಬೇಡ
69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?
ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ
70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?
ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು
76) ಬೃಹಸ್ಪತಿಯ ಮಗ ಯಾರು? 
ಉತ್ತರ : ಭಾರದ್ವಾಜ ಋಷಿಗಳು
77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ
78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು? 
ಉತ್ತರ : ಚಿತ್ರಕೂಟ ಪರ್ವತದ ಬಳಿ
79) ದಶರಥನ ಅಂತ್ಯ ಹೇಗಾಯಿತು?
ಉತ್ತರ : ಪುತ್ರ ವಿರಹದಿಂದ
80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?
ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.
71) ದೋಣಿ ನಡೆಸುವ ಅಂಬಿಗನ ಹೆಸರೇನು ? 
ಉತ್ತರ : ಕೇವತ
72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?
ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ
73) ಕೇವತನ ಭಯ ನಿಜವಾದುದೇ?
ಉತ್ತರ : ಇಲ್ಲ
74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?
ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ 
75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು
ಉತ್ತರ : ಪಾದಗಳನ್ನು ಯೊಳೆದದ್ದು
81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?
ಉತ್ತರ : ಭಾರತ 
82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?
ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ
83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?
ಉತ್ತರ : ರಾಮನ ಪಾದುಕೆಗಳು
84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?
ಉತ್ತರ : ರಾಜಗುರು ವಶಿಷ್ಠರು
85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ? 
ಉತ್ತರ: ನಂದಿಗ್ರಾಮ
101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?
ಉತ್ತರ : ಗೋದಾವರಿ
102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು?
ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ
103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು?
ಉತ್ತರ : ದಶರಥನ ಸ್ನೇಹಿತ ಎಂದು
104) ಪುಲಸ್ತ್ಯರು ಯಾರ ಮಗ?
ಉತ್ತರ : ಬ್ರಹ್ಮದೇವರ ಮಾನಸಪುತ್ರರು
105) ಪುಲಸ್ತ್ಯರ ಮಗ ಯಾರು ?
ಉತ್ತರ :  ವಿಶ್ರವಸು
106) ವಿಶ್ರವಸುವಿನ ಪತ್ನಿ ಯಾರು?
ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ
107) ವೀಶ್ರವಸುವಿನ ಮಗ ಯಾರು?
ಉತ್ತರ : ವೈಶ್ರವನ
108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ?
ಉತ್ತರ : ಕುಭೇರ
109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು?
ಉತ್ತರ : ಪುಷ್ಪಕ ವಿಮಾನ
110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು?
ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ
111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?
ಉತ್ತರ : ಕುಭೆರ 
112) ವಿಶ್ರವಸು ಹಾಗು ಕೈಕಸಿಯ ಮಗ ಯಾರು? 
ಉತ್ತರ : ರಾವಣ
113) ಕೈಕಸಿ ಯಾರ ಮಗಳು?
ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು
 114) ಸುಮಾಲಿಯ ಸೋದರರು ಎಷ್ಟು ಮಂದಿ?
ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ) 
115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? 
ಉತ್ತರ: ಸುಖೇಶನೆಂಬ ರಾಕ್ಷಸ
116) ರಾವಣನ ಮೂಲ ಹೆಸರೇನು?
ಉತ್ತರ : ದಶಕಂಠ/ ದಶಾನನ
117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? 
ಉತ್ತರ: ತನಗೆ ಸಾವು ಬರಬಾರದು ಎಂದು
118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?
ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ
118) ರಾವಣ ಕೇಳಿದವರ ದೊರೆಯಿತೇ? 
ಉತ್ತರ : ಇಲ್ಲ
119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು? 
ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ
120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?
ಉತ್ತರ : ಮನುಷ್ಯ
121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? 
ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ
122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? 
ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು 
123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?
ಉತ್ತರ : ಸರಸ್ವತಿ ದೇವಿ
124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ
125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?
ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ
126) ರಾವಣನಿಗೆ ಕುಬೇರನು ಏನಾಗಬೇಕು? 
ಉತ್ತರ : ಅಣ್ಣ
127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ? 
ಉತ್ತರ : ಕುಬೇರನ ಮೇಲೆ
128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ? 
ಉತ್ತರ : ಕೈಕಸಿ
129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?
ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ
130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು
ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ
131) ಮಂಡೋದರಿ ಯಾರ ಮಗಳು ? 
ಉತ್ತರ : ಮಯ ಎಂಬ ರಾಕ್ಷಸನ ಮಗಳು
132) ಮಂಡೋದರಿಯ ತಾಯಿ ಯಾರು?
ಉತ್ತರ : ಹೇಮಾ ಎಂಬ ಅಪ್ಸರೆ
133) ಕುಂಭಕರ್ಣನ ಹೆಂಡತಿ ಯಾರು?
ಉತ್ತರ : ವಿದ್ಯುಜ್ಜಿಹ್ವೆ
134) ವಿಭೀಷಣನ ಪತ್ನಿ ಯಾರು? 
ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ
135) ವಿಭೀಷಣನ ಮಾವ ಯಾರು ? 
ಉತ್ತರ : ಶೈಲೂಷ
136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?
ಉತ್ತರ : ತಂದೆ ವಿಶ್ರವಸುವಿನ ಮಾತಿಗೆ
137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?
ಉತ್ತರ : ಅಲ್ಕ ನಗರಿಯಲ್ಲಿ
138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?
ಉತ್ತರ : ಮಂದಾಕಿನಿ
139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ?
ಉತ್ತರ : ನಂದಿಕೇಶ್ವರ
140) ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ?
ಉತ್ತರ : ಶಿವನಿಂದ
141) ಕುಬೇರನ ಮಗ ಯಾರು?
ಉತ್ತರ : ನಳಕೂಬರ
142) ಹಿಮ ಪರ್ವತದಲ್ಲಿ 
ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು?
ಉತ್ತರ : ವೇದವತಿ
143) ವೇದವತಿ ಯಾರ ಅವತಾರ ?
ಉತ್ತರ : ಲಕ್ಷ್ಮೀದೇವಿ
144) ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ?
ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ
145) ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ? 
ಉತ್ತರ : ರಾವಣ
151) ಶೂರ್ಪಣಕಿಯ ದೊಡ್ಡಮ್ಮನ‌ ಮಕ್ಕಳು ಯಾರು?
ಉತ್ತರ : ಖರ ದೂಷಣರೆಂಬ ರಾಕ್ಷಸರು 
152) ಖರ ದೂಷಣರ ಸಂಹರಿಸಿದ್ದು ಯಾರು ?
ಉತ್ತರ‌: ಶ್ರೀರಾಮ‌
153) ಖರ ದೂಷಣರು ರಾಮ ಲಕ್ಷ್ಮಣರ ಮೇಲೆ ಯುದ್ದಕ್ಕೆ ಬಂದಾಗ ಅವರ ಸಂತತಿ ಎಷ್ಟಿತ್ತು?
ಉತ್ತರ : 14,000
154) 14,000 ರಕ್ಕಸರನ್ನು ಸಂಹರಿಸಿದ್ದು ಯಾರು ? 
ಉತ್ತರ : ಶ್ರೀರಾಮ ಒಬ್ಬನೆ
155) ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ? 
ಉತ್ತರ : ಅಕಂಪನ ಎಂಬ ರಾಕ್ಷಸ
146) ವೇದವತಿ ರಾವಣನಿಗೆ ಕೊಟ್ಟ ಶಾಪವೇನು?
ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು 
147) ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ?
ಉತ್ತರ : ಸೀತೆಯಾಗಿ 
148) ಶೂರ್ಪನಕಿಯ ಪತಿ ಯಾರು?
ಉತ್ತರ : ಕಾಲಕೇಯನೆಂಬ ರಾಕ್ಷಸ‌
149) ಕಾಲಕೇಯನನ್ನು ಕೊಂದಿದ್ದು ಯಾರು ? 
ಉತ್ತರ : ರಾವಣ 
150) ರಾವಣ ಕಾಲಕೇಯನನ್ನು  ಕೊಂದಿದ್ದು ಏಕೆ?
ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ   ಪ್ರಯೋಗಿಸಿಬಿಟ್ಟಿದ್ದ
156) ಮಾರಿಚ ಯಾರು ?
ಉತ್ತರ : ರಾವಣನ ಸೋದರ ಮಾವ
157) ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ?
ಉತ್ತರ : ಮಾಯಾಮೃಗದ ರೂಪ
158) ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ?
ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೆಳಿದಳು 
159) ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ?
ಉತ್ತರ : ಹಾ ಲಕ್ಷ್ಮಣ ಹಾ ಸಿತಾ 
160) ಸಿತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ?
ಉತ್ತರ : ವಾನರ‌ ಸೈನ್ಯ
161) ಸೀತೆ ತನ್ನ ಆಭರಣಗಳ ಪುಟ್ಟ ಗಂಟನ್ನು ಎಲ್ಲಿ ಎಸೆದಳು?
ಉತ್ತರ : ಋಷ್ಯಮೂಕ ಪರ್ವತದಲ್ಲಿ ಇದ್ದ ವಾನರರ ಕಡೆಗೆ
162) ಯೋಜನಗಳಷ್ಟು ದೂರದವರೆಗೆ ಕೈಗಿಳಿದ್ದ ರಾಕ್ಷಸ ಯಾರು ?
ಉತ್ತರ: ಕಬಂಧ
೧೬೩) ಕಬಂಧನ ತಲೆಯು ಎಲ್ಲಿತ್ತು?
ಉತ್ತರ : ಹೊಟ್ಟೆಯಲ್ಲಿ 
೧೬೪) ಕಬಂಧನ ತಲೆಯು ಹೊಟ್ಟೆಯಲ್ಲಿ ಹೋಗಿ ಸಿಕ್ಕಿಕೊಂಡಿದ್ದಕ್ಕೆ ಕಾರಣವೇನ?
ಉತ್ತರ : ಇಂದ್ರನ ವಜ್ರಾಯುಧದಿಂದ ಹೊಡೆದ ಕಾರಣ
೧೬೫) ಕಬಂಧನನ್ನು ಸಂಹರಿಸಿದ್ದು ಯಾರು?
ಉತ್ತರ : ಶ್ರೀರಾಮ 
೧೬೬) ಪಂಪಾ ಸರೋವರದಲ್ಲಿ  ಆಶ್ರಮದಲ್ಲಿ ರಾಮನಿಗಾಗಿ ಕಾಯುತ್ತಿದ್ದ ವೃದ್ಧ ಭಕ್ತೆ ಯಾರು ?
ಉತ್ತರ : ಶಬರಿ
೧೬೭) ಶಬರಿ ಯಾವ ಆಶ್ರಮದಲ್ಲಿ ರಾಮನಿಗಾಗಿ ಎದಿರು ನೋಡುತ್ತಿದ್ದಳು ?
ಉತ್ತರ : ಮತಂಗ ಮುನಿಯ ಆಶ್ರಮದಲ್ಲಿ
೧೬೮) ಶಬರಿ ರಾಮನಿಗೆ ಏನನ್ನು ತಿನ್ನಲು ನೀಡಿದಳು?
ಉತ್ತರ : ಬಾರಿ ಅಥವಾ ಬೋರೆಹಣ್ಣು
೧೬೯) ಶಬರಿ ಆ ಹಣ್ಣನ್ನು ಕಚ್ಚಿ ತಿಂದು ರುಚಿ ನೋಡಿ ರಾಮನಿಗೆ ಕೊಟ್ಟಿದ್ದು ಏಕೆ ?
ಉತ್ತರ : ಸಿಹಿಯಾದ ಹಣ್ಣುಗಳನ್ನು ಮಾತ್ರವೇ ಅರ್ಪಿಸಬೇಕು ಎಂದು
೧೭೦) ಸೀತೆಯನ್ನು ಹುಡುಕಲು ಶಬರಿ ಹೇಳಿದ ಉಪಾಯವೇನು?
ಉತ್ತರ : ಸುಗ್ರೀವನನ್ನು  ಬೇಟಿಯಾಗುವ ಸಲಹೆ ನೀಡಿದಳು
 ೧೭೧) ಸುಗ್ರಿವ ಎಲ್ಲಿದ್ದ?
ಉತ್ತರ : ಋಷ್ಯಮೂಕ ಪರ್ವತದಲ್ಲಿ.
೧೭೨) ಸುಗ್ರೀವನ ಬಳಿ‌ ಇದ್ದ ರಾಮನ ಪರಮ ಭಕ್ತ ಯಾರು?
ಉತ್ತರ : ಹನುಮಂತ 
೧೭೩) ಹನುಮಂತನ ಇನ್ನಿತರ ಹೆಸರುಗಳೇನು ? 
ಉತ್ತರ : ರಾಮಬಂಟ, ಆಂಜನೆಯ, ಮಾರುತಿ, ವಾಯುಪುತ್ರ, ಅಂಜನಿಪುತ್ರ, ಹನುಮಾನ, ಪವನಪುತ್ರ, ಬಜರಂಗಿ, ಕೆಸರಿ ನಂದನ
೧೭೪) ರಾಮನ ದರ್ಶನ ಆದನಂತರ ಶಬರಿಯು ದೇಹತ್ಯಾಗ ಮಾಡಿದ್ದು ಹೇಗೆ? 
ಉತ್ತರ : ಅಗ್ನಿ ಪ್ರವೇಶದ ಮೂಲಕ
೧೭೫) ಕಿಸ್ಕಿಂಧಾ ಕಂಡದ ಹಿಂದಿನ ಬಾಗ ಯಾವುದು?
ಉತ್ತರ : ಅರಣ್ಯಕಾಂಡ 
೧೭೬) ಹನುಮಂತನ ತಂದೆ ಯಾರು?
ಉತ್ತರ : ಕೆಸರಿ
೧೭೭) ಆಂಜನೆಯ ಯಾರ ವರದಿಂದ ಜನ್ಮತಾಳಿದನು?
ಉತ್ತರ : ವಾಯುದೇವನ ವರದಿಂದ 
೧೭೮) ಹಸಿವೆಯಿಂದ ಹನುಮಂತ ತಿನ್ನಲು ಹೊದ ಹಣ್ಣು‌ ಯಾವುದು?
ಉತ್ತರ : ಕೆಂಪಗಿರುವ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೊಗಿದ್ದ
೧೭೯) ಹನುಮಂತನಿಗೆ ವಜ್ರಾಯುಧದಲ್ಲಿ ಪೆಟ್ಟು ಕೊಟ್ಟಿದ್ದು ಯಾರು?
ಉತ್ತರ: ಇಂದ್ರ
೧೮೦) ಹನು ಎಂದರೆ ಅರ್ಥ ಏನು?
ಉತ್ತರ : ದವಡೆ
೧೮೧) ರಾಮ ಲಕ್ಷ್ಮಣರು ಸುಗ್ರೀವನನ್ನು ಕಾಣಲು ಎಲ್ಲಿಗೆ ಬಂದರು?
ಉತ್ತರ : ಋಷ್ಯಮೂಕ ಪರ್ವತ
೧೮೨) ಸುಗ್ರೀವನ ಅಣ್ಣ ಯಾರು? 
ಉತ್ತರ : ವಾಲಿ
೧೮೩) ರಾಮಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಬರ ಮಾಡಿಕೊಂಡಿದ್ದು ಯಾರು ?
ಉತ್ತರ: ಬ್ರಾಹ್ಮಣ ರೂಪದಲ್ಲಿದ್ದ ಹನುಮಂತ
೧೮೪) ವಾಲಿ-ಸುಗ್ರೀವರ ತಂದೆ ಯಾರು? 
ಉತ್ತರ: ವೃಕ್ಷ ಶಿರಸು
೧೮೫) ವಾಲಿಗೆ ಋಷ್ಯಮೂಕ ಪರ್ವತಕ್ಕೆ ಕಾಲಿಟ್ಟೊಡನೆ ಮೃತ್ಯು ಬರಲಿ ಎಂದು ಶಪಿಸಿದ್ದು ಯಾರ
ಉತ್ತರ : ಮಾತಂಗ ಮುನಿಗಳು
೧೮೬) ಸುಗ್ರೀವನ ಪತ್ನಿ ಯಾರು? 
ಉತ್ತರ: ರುಮೆ 
೧೮೭) ವಾಲಿಯ ಪತ್ನಿ ಯಾರು?
ಉತ್ತರ : ತಾರಾ
೧೮೮) ತಾರಾಳನ್ನು ಯಾರು?
ಉತ್ತರವ: ತಾರ
೧೮೯) ತಾರಾ ಹಾಗೂ ತಾರ, ಯಾರ ಮಕ್ಕಳು?
ಉತ್ತರ : ಸುಷೇಣನೆಂಬ ವಾನರನ ಮಕ್ಕಳು
೧೯೦) ಸುಗ್ರೀವನು ಸೀತೆಯನ್ನು ಗುರುತಿಸುವುದಕ್ಕಾಗಿ ಏನನ್ನು ರಾಮಚಂದ್ರನಿಗೆ ನೀಡಿದನು?
ಉತ್ತರ : ಆಭರಣದ ಪುಟ್ಟ ಗಂಟನ್ನು ನೀಡಿದ
೧೯೬) ಮಾಯಾವಿಯ ಕಳೆಬರವು ಎಲ್ಲಿತ್ತು?
ಉತ್ತರ: ಋಷ್ಯಮೂಕ ಪರ್ವತದ ಎತ್ತರದ ಒಂದು ಮರದ ಮೇಲೆ ಎಷ್ಟು
೧೯೭) ಮಾಯಾವಿಯ ಕಳೇಬರವನ್ನು ಕಾಲಿನಿಂದ ಒದ್ದು ಯೋಜನೆಗಳಷ್ಟು ದೂರ ಎಸೆದದ್ದು  ಯಾರು?
ಉತ್ತರ: ರಾಮ
೧೯೮) ವಾಲಿ-ಸುಗ್ರೀವರ ಯುದ್ಧದಲ್ಲಿ ಮೊದಲ ದಿನ ಗೆದ್ದದ್ದು ಯಾರು?
ಉತ್ತರ : ವಾಲಿ
೧೯೯) ರಾಮನಿಗೆ ವಾಲಿಯನ್ನು ಮೊದಲ ಯುದ್ಧದಲ್ಲಿ ಕೊಲ್ಲಲು ಏಕೆ ಸಾಧ್ಯವಾಗಲಿಲ್ಲ?
ಉತ್ತರ : ವಾಲಿ ಹಾಗೂ ಸುಗ್ರೀವರು ನೋಡಲು ಒಂದೇ ರೀತಿ ಇದ್ದರು ಎಂಬ ಕಾರಣಕ್ಕೆ!
೨೦೦) ಸುಗ್ರೀವನಿಗೆ ರಾಮನು ಯುದ್ಧದ ಸಮಯದಲ್ಲಿ ಏನನ್ನು ಧರಿಸಲು ಕೊಟ್ಟ ?
ಉತ್ತರ: ತನ್ನ ಕುರರ ಹಾರವನ್ನು ಧರಿಸಲು ಕೊಟ್ಟ
೧೯೧) ಲಕ್ಷ್ಮಣನು ಗುರುತಿಸಿದ ಸೀತೆಯ ಆಭರಣ ಯಾವುದು?
ಉತ್ತರ : ಸೀತಾಮಾತೆಯ ಕಾಲುಂಗುರದಿಂದ
೧೯೨) ಸುಗ್ರೀವನು ವಾಲಿಯನ್ನು ಯಾವ ಸ್ಥಳದಲ್ಲಿ ಯುದ್ಧ ಮಾಡು ಬಾ ಎಂದು ಕರೆದ ? 
ಉತ್ತರ : ಋಷಿ ಮುಖ ಪರ್ವತದ ದಟ್ಟ ಕಾನನದಲ್ಲಿ
೧೯೩) ಕಾಡಿನಲ್ಲಿ ಯುದ್ಧಮಾಡಲು ಕರೆದಿದ್ದು ಏಕೆ?
ಉತ್ತರ : ರಾಮನು ವನವಾಸದಲ್ಲಿ ಇರುವುದರಿಂದ ಅವನು ನಗರ ಪ್ರವೇಶ ಮಾಡುವಂತಿರಲಿಲ್ಲ ಹೀಗಾಗಿ ವಾಲಿಯನ್ನು ಕಾಡಿಗೆ ತರಬೇಕಿತ್ತು
೧೯೪) ವಾಲಿಯು ಯಾವ ರಾಕ್ಷಸ ನಂದಿಗೆ ಒಂದಿಡೀ ವರ್ಷ ಗುಹೆಯಲ್ಲಿ ಕಾದಾಡಿದ್ದ ?
ಉತ್ತರ: ಮಾಯಾವಿ
೧೯೫) ವಾಲಿ ಹಾಗೂ ಮಾಯಾವಿ ಯುದ್ದದ್ದಲ್ಲಿ ಗೆದ್ದದ್ದು ಯಾರು? 
ಉತ್ತರ  : ವಾಲಿ
೨೦೧) ರಾಮನ ಹಾರವನ್ನು ಸುಗ್ರೀವನು ಧರಿಸುವುದರಿಂದ ಆಗುತ್ತಿದ್ದ ಪ್ರಯೋಜನವೇನು?
ಉತ್ತರ: ಹಾರ ದರಿಸಿದವನು ಸುಗ್ರೀವನೆಂದೂ. ಹಾರವಿಲ್ಲದವನು ವಾಲಿ ಎಂದು ರಾಮನಿಗೆ ತಿಳಿಯುತ್ತಿತ್ತು.
೨೦೨) ವಾಲಿಯ ಮಗ ಯಾರು?
ಉತ್ತರ: ಅಂಗದ
೨೦೩? ಶ್ರವಣದಿಂದ ಕಾರ್ತಿಕ ಮಾಸದ ವರೆಗೂ ರಾಮಲಕ್ಷ್ಮಣರು ಯಾವ ಪರ್ವತದಲ್ಲಿ ವಾಸವಿದ್ದರು?
ಉತ್ತರ : ಮಾಲ್ಯವಂತ ಪರ್ವತದಲ್ಲಿ ( ಈಗಿನ ಆನೆಗುಂದಿ ಹತ್ತಿರ ಬರುತ್ತದೆ ಅಂದರೆ ಹಂಪಿಯ ಕ್ಷೇತ್ರ)
೨೦೪) ವಾಲಿ ಹತನಾದ ನಂತರ ಕಿಷ್ಕಿಂದೆಯ ರಾಜನಾಗಿದ್ದು ಯಾರು?
ಉತ್ತರ: ಸುಗ್ರೀವ
 ೨೦೫) ಅಂಗದ ನಿಗೆ ಯಾವ ಪಟ್ಟ ಸಿಕ್ಕಿತು?
ಉತ್ತರ: ಯುವರಾಜನ ಪಟ್ಟ
೨೧೧) ರಾಮನು ಹನುಮಂತನಿಗೆ, ಸೀತೆಗೆ ತಲುಪಿಸಲು ಕೊಟ್ಟ ವಸ್ತು ಯಾವುದು?
ಉತ್ತರ : ತನ್ನ ಉಂಗುರ
೨೧೨) ರಾಮನಿಗೆ ಯಾವ ವಾನರ ಮೇಲೆ ಅಪಾರವಾದ ನಂಬಿಕೆ ಇತ್ತು ?
ಉತ್ತರ : ಆಂಜನೆಯ 
೨೧೩) ಜಾಂಬವಂತ ಯಾರ ತಂಡದಲ್ಲಿ ಇದ್ದ?
ಉತ್ತರ : ಆಂಜನೆಯ
೨೧೪) ವಾಲಿಯ ಮಗ ಯಾವ ತಂಡದಲ್ಲಿದ್ದ?
ಉತ್ತರ : ಆಂಜನೆಯ
೨೧೫) ವಿಂದ್ಯ ಪರ್ವತದ ತಪ್ಪಲಿನ ಗುಹೆಯಲ್ಲಿದ್ದ ಅಪರೂಪದ ಸರೋವರ ಯಾರಿಗೆ ಸೇರಿತ್ತು?
ಉತ್ತರ : ಮಯನೆಂಬ ರಾಕ್ಷಕನಿಗೆ ಸೇರಿತ್ತು.
೨೦೬) ಸೀತೆಯನ್ನು ಹುಡುಕಲು ಎಷ್ಟು ದಿಕ್ಕುಗಳಿಗೆ ವಾನರರನ್ನು ಸುಗ್ರೀವನು ಕಳುಹಿಸಿದನು?
ಉತ್ತರ : ನಾಲ್ಕು ದಿಕ್ಕುಗಳಿಗೆ 
೨೦೭) ಪೂರ್ವದಿಕ್ಕಿಗೆ ಹೋದದ್ದು ಯಾರು?
ಉತ್ತರ :  ವಾನರರ ಮುಖ್ಯಸ್ಥ ವಿನತ
೨೦೮) ಪಶ್ಚಿಮ ದಿಕ್ಕಿಗೆ ಹೋದದ್ದು ಯಾರು?
ಉತ್ತರ : ತಾರಾಳ ತಂದೆ ಸುಷೇಣ
೨೦೯) ಉತ್ತರ ದಿಕ್ಕಿಗೆ ಹೋದದ್ದು ಯಾರು?
ಉತ್ತರ : ಶತಬಲಿ ಎಂಬ ವಾನರ ಮುಖ್ಯಸ್ಥ
೨೧೦) ದಕ್ಷಿಣ ದಿಕ್ಕೆಗೆ ಹೋದದ್ದು ಯಾರು?
ಉತ್ತರ : ಆಂಜನೆಯ
೨೧೬) ಮಯನು ಅತ್ಯಂತ ರಮಣೀಯ ಸರೋವರವನ್ನು ಹಾಗು ಉದ್ಯಾನವನ್ನು ಯಾರಿಗಾಗಿ ನಿರ್ಮಿಸಿದ್ದ?
ಉತ್ತರ: ಹೇಮಾ ಎಂಬ ಅಪ್ಸರೆ ಗಾಗಿ ( ಮಂಡೋದರಿಯ ತಾಯಿ)
೨೧೭) ಇದೀಗ ಮಯನ ಸರೋವರನ್ನು ನೋಡಿಕೊಳ್ಳುತ್ತದ್ದ ಯೋಗಿನ ಯಾರು?
ಉತ್ತರ : ಅಪ್ಸರೆ ಹೇಮಾಳ ಸಖಿಯಾದ ಸ್ವಯಂಪ್ರಭೆ
೨೧೮) ಮಾಹೇಂದ್ರ ಪರ್ವತದ ಗುಹೆಯಲ್ಲಿ ವಾನರರು ಸಂಧಿಸಿದ ವೃದ್ದ ಹದ್ದುಗಳ ರಾಜ ಯರು?
ಉತ್ತರ: ಸಂಪಾತಿ
೨೧೯) ಸಂಪಾತಿ ಯಾರ ಅಣ್ಣ ?
ಉತ್ತರ : ಜಟಾಯು
೨೨೦) ಜಟಾಯು ಹಾಗು ಸಂಪಾತಿಯು ಯಾರ ಮಕ್ಕಳು ?
ಉತ್ತರ : ಅರುಣನ ಮಕ್ಕಳು
೨೨೭) ಸುಂದರಕಾಂಡ ಅವಧಿ ಎಷ್ಟು?
ಉತ್ತರ: ಒಂದು ರಾತ್ರಿಯ ಕಥೆಯಾಗಿದೆ
೨೨೮) ಆಂಜನೇಯನಿಗೆ ಸಿದ್ದಸಿದ್ದ ಅಷ್ಟ ಮಹಾವಿದ್ಯೆಗಳು ಯಾವುವು?
ಉತ್ತರ: ಅನಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ಮತ್ತು ವಶತ್ವ
೨೨೯) ಮೈನಾಕನು ಯಾರ ಮಗ?
ಉತ್ತರ: ಹಿಮವಂತನ ಮಗ
೨೨೧) ಅರುಣ ಯಾರು?
ಉತ್ತರ : ಸೂರ್ಯನ ಸಾರಥಿ
೨೨೨) ವೃದ್ಧ ಸಂಪಾತಿಯ ಮಗ ಯಾರು?
ಉತ್ತರ: ಸುಪಾರ್ಶ್ವ
೨೨೩) ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು?
ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ.
೨೨೪) ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ? 
ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು.
೨೨೬) ಮಾಹೇಂದ್ರ ಪರ್ವತದಿಂದ ಲಂಕೆಗೆ ಎಷ್ಟು ದೂರವಿತ್ತು ? 
ಉತ್ತರ : 100 ಯೋಜನೆಗಳಷ್ಟು
೨೩೦) ಹಿಮವಂತನ ಮಗಳಾಗಿ ಜನಿಸಿದ್ದು ಯಾರು?
ಉತ್ತರ : ಪಾರ್ವತಿದೇವಿಯು ಹೈಮವತಿ ಎಂಬ ಹೆಸರಿನಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದ್ದಳು 
೨೩೧) ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಯಾರು?
ಉತ್ತರ : ಸಾಗರದೊಳಗೆ ಹುದುಗಿದ್ದ ಮೈನಾಕ ( ಪರ್ವತ)
೨೩೨) ಸರ್ಪಗಳ ತಾಯಿ ಯಾರು?
ಉತ್ತರ : ಸುರಸೆ
೨೩೩) ದೇವತೆಗಳು ರಾಮಭಕ್ತ ಹನುಮನನ್ನು ಪರೀಕ್ಷಿಸಲು ಕೇಳಿಕೊಂಡಿದ್ದು ಯಾರನ್ನು?
ಉತ್ತರ : ಸುರಸೆ
೨೩೪) ಸುರೇಸೆಯು ಹನುಮಂತನ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳು?
ಉತ್ತರ : ರಾಕ್ಷಸಿಯ ರೂಪದಲ್ಲಿ
೨೩೫) ಸುರೆಸೆಯು ಹನುಮನಿಗೆ ಏನು ಹೇಳಿದಳು?
ಉತ್ತರ :ನನ್ನ ಬಾಯಿಯೊಳಗೆ ನೀನು ಬಂದು ಬಿಳಬೇಕು ಎಂದಳು.
೨೩೬) ಸುರಸೆಯಿಂದ ತಪ್ಪಿಸಿಕೊಳ್ಳಲು ಹನುಮ ಮಾಡಿದ ಉಪಾಯವೇನು?
ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬೀಳಬೇಕು ಎಂದಳು
೨೩೭) ರಾಹುವಿನ ತಾಯಿ ಯಾರು?
ಉತ್ತರ : ಸಿಂಹಿಕೆ
೨೩೮) ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು?
ಉತ್ತರ ‌: ಸಿಂಹಕ್ಕೆಯನ್ನು
೨೩೯)ಸಿಂಹಿಕೆಯ ಕೆಲಸವೇನು?
ಉತ್ತರ ; ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು!
೨೪೦) ನೆರಳನ್ನು ತಿಂದಾಗ ಏನಾಗುತ್ತದೆ?
ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ.
೨೪೧) ಸಿಂಹಿಕೆ ಹನುಮಾನ ನೆರಳನ್ನು ನುಂಗಿದಳೇ?
ಉತ್ತರ : ಹೌದು. ನೆರಳಿನ ಜೊತೆಗೆ ಹನುಮನು ಅವಳ ಬಾಯಿಗೆ ಬಿದ್ದ
೨೪೨) ಹನುಮನ ನುಂಗಿದ ಸಿಂಹಿಕೆಯ ಗತಿ ಏನಾಯಿತು?
ಉತ್ತರ : ಸಿಂಹಿಕೆಯ ಬಾಯಿಗೆ ಬಿದ್ದ ಹನುಮ ತೋಳ ಹೊಟ್ಟೆಯನ್ನು ಸೇರಿ ಬಲು ದೊಡ್ಡದಾಗಿ ಬೆಳೆದು ಹೊಟ್ಟೆಯನ್ನು ಸೀಳಿ ಹೊರಬಂದ
೨೪೩) ಲಂಕೆಗೆ ಬಂದ ಹನುಮ ತನ್ನ ಪಾದಗಳನ್ನು ಮೊದಲ ಬಾರಿಗೆ ಎಲ್ಲಿ ಉರಿದ?
ಉತ್ತರ : ತ್ರೀಕೂಟದ ಗಿರಿಶಿಖರದಲ್ಲಿ
೨೪೪) ಲಂಕೆಯ ಪುರ ದೇವತೆ ಯಾರು ? 
ಉತ್ತರ : ಲಂಕಿಣಿ
೨೪೫) ಹನುಮನನ್ನು ಕಂಡ ಲಂಕಿಣಿ ಯಾವ ಪ್ರಶ್ನೆ ಕೇಳಿದಳು?
ಉತ್ತರ: ಅಪ್ಪಣೆಯಿಲ್ಲದೆ ರಾತ್ರಿಯ ವೇಳೆ ಲಂಕೆಗೆ ನುಸುಳುತ್ತಿರುವ ನೀನು ಯಾರು ಎಂದಳು
೨೪೬) ಹನುಮಾನ್ ಲಂಕಿಣಿಯನ್ನು ಹೇಗೆ ಶಿಕ್ಷಿಸಿದ?
ಉತ್ತರ : ಅವಳನ್ನು ಸ್ಪರ್ಶಿಸಿದನಷ್ಟೇ ಅಷ್ಟಕ್ಕೇ ಲಂಕಿಣಿಯ ಬೆನ್ನು ಮೂಳೆ ಮುರಿದಂತಾಯಿತು.
೨೪೭) ಲಂಕಿಣಿಗೆ ಬ್ರಹ್ಮದೇವನು ಏನೆಂದು ಎಚ್ಚರಿಸಿದ್ದ?
ಉತ್ತರ: ಲಂಕೆಗೆ ವಾನರನೊಬ್ಬ ಕಾಲಿಟ್ಟ ಕ್ಷಣದಿಂದ ಲಂಕೆಯ ಅವನತಿ ಆರಂಭವಾಗುತ್ತದೆ ಎಂದು.
೨೪೮) ಲಂಕೆಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರು?
ಉತ್ತರ : ವಿಭಿಷಣ
೨೪೯) ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು?
ಉತ್ತರ : ಮಂಡೋದರಿ
೨೫೦) ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು?
ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು.
೨೫೧) ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು?
ಉತ್ತರ : ರಾವಣನ ಅಶೋಕವನ
೨೫೨) ದೇವಲೋಕದ ಅತ್ಯಂತ ಸುಂದರವಾದ ಯಾವುದು?
ಉತ್ತರ : ನಂದನವನ
೨೫೩) ನಂದನವನ ಯಾರಿಗೆ ಸೇರಿದ್ದು?
ಉತ್ತರ : ದೇವೇಂದ್ರನಿಗೆ 
೨೫೪) ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು?
ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು 
೨೫೫) ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು?
ಉತ್ತರ :ಬಿಳಿಯ ಬಣ್ಣದ ಹೂಗಳು  
೨೫೬) ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು?
ಉತ್ತರ : ಬಿಳಿಯ ಬಣ್ಣದ ಹೂಗಳು 
೨೫೭) ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ?
ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು.
೨೫೮) ಸೀತಾಮಾತೆ ಅಶೋಕವನದಲ್ಲಿ ಏನನ್ನು ಸೇವಿಸುತ್ತಿದ್ದಳು ?
ಉತ್ತರ : ಕೇವಲ ಹಾಲನ್ನವನ್ನು 
೨೫೯) ಹಾಲನ್ನವನ್ನು ಯಾರು ಕಳಿಸುತ್ತಿದ್ದರು?
ಉತ್ತರ‌: ಸ್ವತಃ ದೇವೆಂದ್ರ
೨೬೦) ಸೀತೆಯು ಹಾಲನ್ನವನ್ನು ಎಷ್ಟು ಭಾಗಮಾಡಿ ಸೇವಿಸುತ್ತಿದ್ದಳು?
ಉತ್ತರ : ರಾಮ ಹಾಗೂ ಲಕ್ಷ್ಮಣರಿಗೆ ಎರಡು ಭಾಗ ಮಾಡಿ, ಅದರಲ್ಲಿ ರಾಮನ ಪಾಲಿನ ಅರ್ಧ ಹಾಲನ್ನವನ್ನು ಮಾತ್ರ ಸೇವಿಸುತ್ತಿದ್ದಳು.
೨೬೧) ಸೀತೆಯ ಹಾಲನ್ನವನ್ನು ಭಾಗ ಮಾಡಿ  ಸೇವಿಸುವುದನ್ನು ಕಂಡ ಪಕ್ಷಿ ಯಾವುದು ?
ಉತ್ತರ: ಹದ್ದುಗಳ ರಾಜ ಸಂಪಾತಿಯ ಮಗ ಸುಪಾರ್ಶ್ವ
೨೬೨) ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ?
ಉತ್ತರ: ಅಶೋಕವನದಲ್ಲಿ
೨೬೩) ಅಶೋಕವನ ಎಂದರೇನು?
ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉಧ್ಯಾನವನವೇ ಅಶೋಕವನ
೨೬೪) ಅಶೋಕವೃಕ್ಷಕ್ಕಿರುವ ಇಮ್ನೊಂದು ಹೆಸರೇನು?
ಉತ್ತರ : ಶಿಂಶಪಾವೃಕ್ಷ
೨೬೫) ಸೀತಾಮಾತೇಯ ಸುತ್ತಲಿದ್ದ ರಾಕ್ಷಸಿಯರು ಯಾರು ಯಾರು?
ಉತ್ತರ : ತ್ರಿಜಟೆ,ಭೂರಿಜಟೆ, ಜಟೆ,ವಿಘಸೆ,ಅಯೋಮುಖಿ, ವಿಕಟೆ, ಚಂಡೊದರಿ,ವಿನತೆ, ಅಶ್ವಮುಖಿ.
೨೬೬) ರಕ್ಕಸಿಯರಲೆಲ್ಲಾ ಸಾಧು ಸ್ವಭಾವದ ರಕ್ಕಸಿ ಯಾರು?
ಉತ್ತರ : ತ್ರಿಜಟೆ ಎಂಬ ವೃದ್ದೆ.
೨೬೭) ಆಂಜನೇಯನು ಅಶೋಕ ವನವನ್ನು ಪ್ರವೇಶಿಸಿದ ಕೂಡಲೇ ಸೀತೆಯೊಂದಿಗೆ ಯಾಕೆ ಮಾತನಾಡಲಿಲ್ಲ?
ಉತ್ತರ : ಅವನಿಗೆ ಯಾರೋ ಬರುತ್ತಿರುವ ಸುಳಿವು ಸಿಕ್ಕಿತು.
೨೬೮) ಅಶೋಕವನಕ್ಕೆ ಆವೇಳೆ ಹೊತ್ತಿನಲ್ಲಿ ಪ್ರವೇಶಿಸಿದ್ದು ಯಾರು? ?
ಉತ್ತರ : ರಾವಣನು ಪತ್ನಿ ಸಮೇತ ಪ್ರವೇಶಿಸಿದ್ದ.
೨೬೯) ರಾವಣನನ್ನು ಕಂಡ ಆಂಜನೇಯ ಮಾಡಿದ್ದೇನು?
ಉತ್ತರ : ಅಶೋಕ ವೃಕ್ಷದ ಮೇಲೆ ಸದ್ದಿಲ್ಲದೇ ಕುಳಿತುಕೊಂಡ.
೨೭೦) ರಾವಣನು ಸಿತೆಯನ್ನು ಕಂಡು ಹೇಳಿದ್ದೆನು? 
ಉತ್ತರ : ಇನ್ನೊಂದು ತಿಂಗಳೊಳಗೆ ನನ್ನವಳಾಗದಿದ್ದರೆ ನಿನ್ನನ್ನು ಕೊಲ್ಲುವೆ ಎಂದ.
೨೭೬) ಅಚ್ಚರಿಯಿಂದ ಮರದ ಮೇಲೆ ನೋಡಿದ ಸೀತಾಮಾತೆಯ ಕಣ್ಣಿಗೆ ಕಂಡದ್ದು ಯಾರು?
ಉತ್ತರ : ಕೈಜೋಡಿಸಿ ಕುಳಿತಿದ್ದ ಗೇಣುದ್ದದ ಆಂಜನೇಯ
೨೭೭) ಸೀತಾಮಾತೆಯು ಆಂಜನೆಯನನ್ನು ಯಾರೆಂದು ತಿಳಿದಳು?
ಉತ್ತರ : ಮಾಯಾವಿ ರಾವಣನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ತಿಳಿದಳು
೨೭೮) ಹನುಮನು ತನ್ನೊಂದಿಗೆ ಸೀತಾಮತೆಯನ್ನು ಕರೆದೊಯ್ಯುವೆ ಎಂದಾಗ ಸೀತೆ ಏನು ಹೇಳಿದಳು ?
ಉತ್ತರ : ಶ್ರೀರಾಮನು ಲಂಕಾಧೀಶ ನನ್ನು ಸದೆಬಡಿದೇ ನನ್ನನ್ನು ಕೊಂಡೊಯ್ಯುವುದು ಧರ್ಮ ಎಂದಳು.
೨೭೯) ಸೀತಾಮಾತೆಗೆ ಹನುಮನು ಕೊಟ್ಟ ಆಭರಣ ಯಾವುದು?
ಉತ್ತರ : ಶ್ರೀರಾಮಚಂದ್ರನ ಮುದ್ರಾ ಉಂಗುರ
೨೮೦) ಸೀತಾಮಾತೆ ರಾಮಚಂದ್ರನಿಗೆ ಕೊಡು ಎಂದು ಹೇಳಿ ಕೊಟ್ಟ ಆಭರಣ ಯಾವುದು ?
ಉತ್ತರ : ತನ್ನ ನೆತ್ತಿಯ ಮೆಲಿದ್ದ ಚೂಡಾಮಣಿ.
೨೭೧) ರಾವಣನಿಗೆ ಸೀತೆಯ ಯಾವ ಉತ್ತರವನ್ನು ಕೊಟ್ಟಳು?
ಉತ್ತರ : ನನ್ನ ರಾಮಪ್ರಭು ಬಂದೇ ಬರುತ್ತಾನೆ. ನಿನ್ನನ್ನು ಕೊಂದು ನನ್ನನ್ನು ಕರೆದೊಯ್ಯುತ್ತಾನೆ ಎಂದಳು 
೨೭೨) ಕುಪಿತ ರಾವಣನು ನಿರ್ಗಮಿಸಿದ ನಂತರ ರಕ್ಕಸಿಯರೆಲ್ಲ ನಿದ್ರೆಗೆ ಶರಣಾದದ್ದು ಹೇಗೆ ?
ಉತ್ತರ: ನಿದ್ರಾದೇವಿಯ ಉಪಕಾರದಿಂದ ರಕ್ಕಸಿಯರಿಗೆಲ್ಲಾ ನಿದ್ರೆ ಆವರಿಸಿತು
೨೭೪) ಆಂಜನೆಯನು ಅಶೋಕವನಕ್ಕೆ ಬಂದಾಗ ಅವನ ಗಾತ್ರ ಎಷ್ಟಿತ್ತು?
ಉತ್ತರ : ಗೇಣುದ್ದ ಮಾತ್ರ 
೨೭೫) ಸೀತಾಮಾತೆಯ ಕಿವಿಗೆ ಆಂಜನೆಯನ ಯಾವ ನುಡಿಗಳು ಬಿದ್ದವು?
ಉತ್ತರ : ರಾಮನ ಬಗ್ಗೆ ಭಕ್ತಿಯಿಂದ ಯಾರೋ ಗುನುಗುತ್ತಿರುವುದು ಸೀತಾಮಾತೆಯ ಕಿವಿಗೆ ಬಿದ್ದವು.
೨೮೧) ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು  ದ್ವಂಸ ಏಕೆ ಮಾಡಿದ ?
ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು!
೨೮೨) ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ?
ಉತ್ತರ : ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ
೨೮೩) ಅಕ್ಷಕುಮಾರನ ಸ್ಥಿತಿ ಏನಾಯಿತು?
ಉತ್ತರ: ಆಂಜನೆಯನ ಕೈಯಲ್ಲಿ ಸಂಹಾರವಾದ 
೨೮೪) ರಾವಣನ ಮತ್ತೊಬ್ಬ ಮಗನ ಹೆಸರೇನು?
ಉತ್ತರ: ಇಂದ್ರಜಿತ್
೨೮೫) ಇಂದ್ರಜೀತ್ ಎಂಬ ಹೆಸರು ಅವನಿಗೆ ಏಕೆ ಬಂತು?
ಉತ್ತರ : ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು
🌺🌺🌺🌺🌺🌺🌺🌺🌺🌺🌺🌺🌺🌺🌺

Prime Minister Narendra Modi announced a National Edible Oil Mission-Oil Palm (NMEO-OP) on August 9, 2021 to make India self-sufficient in cooking oils, including palm oil. The Prime Minister made the announcement while he was stressing on reducing the dependence on imports during a virtual event on PM Kisan scheme.

Prime Minister Narendra Modi announced a National Edible Oil Mission-Oil Palm (NMEO-OP) on August 9, 2021 to make India self-sufficient in cooking oils, including palm oil. The Prime Minister made the announcement while he was stressing on reducing the dependence on imports during a virtual event on PM Kisan scheme. 

The Prime Minister said that over Rs 11,000 crore will be invested in the edible oil ecosystem. He also transferred over Rs 19,500 crore into the accounts of 9.75 crore farmers under the government's flagship PM-Kisan scheme.

PM Modi highlighted during the event that India has become self-sufficient in the production of rice, wheat and sugar, but it is not enough as the country is still largely dependent on huge imports of edible oils. 

Hence, to make India self-reliant in edible oil too, the Prime Minister announced National Edible Oil Mission-Oil Palm.

•Under the National Edible Oil Mission-Oil Palm, the central government will ensure that farmers get all facilities including quality seeds and technology to promote farming to produce palm oil and other oil seeds.

•The mission will promote the cultivation of oil palm. 

•It will also promote the expansion of the cultivation of other traditional oilseeds crops.

•India is the world's biggest importer of edible oils. India is highly dependent on imports of edible oil to meet domestic demand. Out of India's total edible oil imports, palm oil constitutes about 55 percent. 

•As per official data, India imported $10 billion worth of vegetable oil in 2019-20, making it the country’s fifth most valuable import.

•Prime Minister Narendra Modi also pointed out that India has spent thousands of crores of rupees on edible oil imports and this money rather should go to farmers.

•The Prime Minister said that north-eastern states and Andaman and the Nicobar Islands could be promoted for palm oil farming.

Palm Oil is one of the cheapest edible oil available naturally and it is relatively stable at high temperatures. It is, therefore, suitable for reuse and deep-frying.

India will host the first Internet Governance Forum in the country for three days beginning October 20, 2021.

The Ministry of Electronics and Information Technology on August 9, 2021, informed that India will host the first Internet Governance Forum in the country for three days beginning October 20, 2021.

Anil Kumar Jain, CEO, National Internet Exchange of India (NIXI), Ministry of Electronics and Information Technology, and also the Chairman of Coordination Committee, India Internet Governance Forum (IIGF) 2021 announced the launch of IIGF during a press conference at Electronics Niketan, New Delhi.

Pre-IIGF engagement events will begin from August 2021 at several colleges and universities. The pre-events aim to engage students and youth to participate in the main event in October and further involve them in the policy formation stages.

•The theme of IIGF 2021 is Inclusive Internet for Digital India.

•IIGF expanded to India Internet Governance Forum is an Internet Governance policy discussion platform. It is the Indian chapter of the Internet Governance Forum under the United Nations.

•India is the second-largest broadband subscription country in the world. It has the highest data consumption per user per month.

•The IIGF aims to take into account the aspirations of the Indians in their International policy formation and stakeholder discussion.

•The IIGF aims to ensure that the growth of broadband adheres to the lifestyle and requirements of the Indian community.

•The Indian Chapter of IGF will also adopt the multi-stakeholder concept to organize the event.

•The coordination committee of the IIGF comprises apt representation from the Government, civil society, industrial association, industry, trust, and other stakeholders.

•Anil Kumar Jain, CEO, National Internet Exchange of India (NIXI), Ministry of Electronics and Information Technology as Chairman, TV Ramchandran as Vice Chairman, Jaijeet Bhattacharya as Vice Chairman, Dr Rajat Moona as Vice-Chairman along with around 12 members representing Government, Industries, Civil Society, Associations, Trust, etc. will make up the Coordination Committee of the IIGF.

•IGF expanded to Internet Governance Forum is a United Nations forum that incorporates multi-stakeholder policy dialogue on issues relating to Internet Governance.

•The United Nations Secretary-General in July 2006 had announced the establishment of the IGF. The first meeting of IGF was held in October-November 2006 in Athens, Greece. Thereafter, the forum has been holding annual meetings since then.

•The 16th annual IGF meeting will be held in Katowice, Poland from December 6 to 10, 2021 with the theme ‘Internet United’.

•The forum gathers representatives from various groups such as government, civil or private sector, academicians, all at par to deliberate on internet governance or public policy issues relating to the internet.

•The forum’s mode of engagement is based on the multi-stakeholder model of Internet Governance. The model is well adopted by United Nations and by Internet Cooperation for Assigned Names and Numbers (ICANN).

World Lion Day 2021: World Lion Day is celebrated every year on August 10 to raise awareness about lions and mobilise support for their protection and conservation.

World Lion Day 2021: World Lion Day is celebrated every year on August 10 to raise awareness about lions and mobilise support for their protection and conservation. 

Prime Minister Narendra Modi tweeted on the occasion saying, "The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population."

The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG

The Prime Minister continued by saying that when he was serving as Gujarat Chief Minister, he had the opportunity to work towards ensuring safe and secure habitats for the Gir Lions. He said, "A number of initiatives were taken which involved local communities and global best practices to ensure habitats are safe and tourism also gets a boost."

When I was serving as Gujarat CM, I had the opportunity to work towards ensuring safe and secure habitats for the Gir Lions. A number of initiatives were taken which involved local communities and global best practices to ensure habitats are safe and tourism also gets a boost. pic.twitter.com/0VEGmh7Ygj

World Lion Day 2021 Theme: "Slow elimination of the African lion”

World Lion Day is observed to raise awareness about the declining population of lions and need for conservation. Lions are vulnerable species as per the International Union for Conservation of Nature's (IUCN) Red List.

The first World Lion Day was celebrated in 2013. Since then, the day has become a symbol in the fight to protect the majestic species.

According to the World Wide Fund for animals (WWF), though the lion is often referred to as the “king of the jungle,” it actually only lives in grasslands and plains and not in the forest surrounded by trees. 

•India is home to the Asian lion with four Royal Bengal tigers, the Indian leopard, the clouded leopard and the snow leopard. 

•As per a census conducted by the Gujarat government in June 2020, there has been a rise of magnificent big cats. 

•According to the census, India had witnessed one of the highest growth rates of 28.87 per cent in the population of Asiatic Lions last year in June. 

•The number of Asiatic lions has gone up from 523 to 674 in five years from the last population estimation done in 2015.

•The Gujarat Chief Wildlife Warden informed that the last population estimation exercise was conducted in May 2015, which estimated the lion numbers to be at 523, which was a 27 per cent increase from the 2010 estimation. 

•The population of Asiatic Lions has thus shown a steady increase in the last five years with an increase rate of 28.87 per cent, one of the highest growth rate so far.

Project Lion was announced by Prime Minister Narendra Modi on August 15, 2020. It is to be modeled on Project Elephant and Project Tiger.

The Government of Gujarat has sought the assistance of Rs. 2,000 crores from the Central Government for Project Lion. As per a senior government official, the request is under active consideration for approval.

Project Lion was announced by Prime Minister Narendra Modi on August 15, 2020. It is to be modeled on Project Elephant and Project Tiger.

The Chief Minister of Gujarat Vijay Rupani, while participating in an event organized by the State forest department to celebrate World Lion Day on August 10, 2021, informed in a video address that the allocation process of Rs. 2,000 crores by the Central government was underway.

The Chief Minister of Gujarat informed that in the coming years under Project Lion, the link between lion conservation and breeding will be strengthened.

He also added that the optimal use will be made of the hospitals, rescue centers, breeding centers, and laboratories. Radio collars and other modern technology will also be used well.

• The State Government, under Project Lion, aims at establishing a National Wildlife Disease Diagnostic Center for a projected investment of Rs. 71 crores.

• A lion cell at the Union Ministry of environment, forest, and climate change is also envisioned for an investment of Rs. 31.65 crores under the proposed plan.

• Gujarat Government has also taken up the task of maintaining the health of the lions and their conservation by developing a new concept of an advanced lion hospital.

• Other features will be lion ambulance, trackers, rescue and rapid action team, and Vanyaprani Mitras in Sasan Gir with the public participation.

• The funding proposal by Gujarat Government for the project involves Rs. 712 crores for the habitat and the population management. Rs. 375 crores for the communities as stakeholders under the Sinh Mitra Yojana.

• Other aspects are Rs. 203 crores or lion health management, Rs. 152 crores for surveillance and monitoring, Rs. 120 crores for human-wildlife conflict management, and Rs. 74 crores for research and learning.

• 54 cores will be required for Information Learning and communication while the development of the potential lion habitat and future lion migration or the dispersal will require Rs. 117 crores.

• The mitigation of human-wildlife conflict envisages funds of Rs. 22.5 crores.

The Forest Department of Gujarat had informed in June 2020 that the Asiatic Lion population has increased by 29% over the last five years- from 523 in 2015 to 674 in 2020.

The distribution range of lions in the Saurashtra region of Gujarat has increased by 36% from 22,000 sq km in 2015 to 30,000 sq km.