ಬುಧವಾರ, ಮೇ 31, 2017

ಭಾರತವು ಹಾರಿಬಿಟ್ಟ ಉಪಗ್ರಹಗಳ ಮಾಹಿತಿ


ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ
*ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ*
-----------------------------

*ಭಾರತದ ಏಕೈಕ ಬಾಹ್ಯಾಕಾಶ ಕೇಂದ್ರ ಶ್ರೀಹರಿ ಕೋಟಾದಿಂದ ಜಿಎಸ್ಎಲ್ ವಿ-09 ಉಪಗ್ರಹ ಮೇ 5ರಂದು ಉಡಾವಣೆಗೊಳ್ಳುವ ಮೂಲಕ ಇಸ್ರೋದ ಮತ್ತೊಂದು ಬಾಹ್ಯಾಕಾಶ ಯಾನಕ್ಕೆ ಸಾಕ್ಷಿಯಾಯಿತು.*

*ಕಳೆದ ಫೆಬ್ರವರಿ 15ರಂದು ಭಾರತ 104 ಸ್ಯಾಟಲೈಟ್ ಗಳನ್ನು ಒಂದು ರಾಕೆಟ್ ನಲ್ಲಿ ಉಡಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಮಾಮ್ನಿಂದ ಜಿಎಸ್ಎಲ್ ವಿ-9 ವರೆಗೆ ಆರ್ಯಭಟದಿಂದ ಇಲ್ಲಿಯವರೆಗೆ ಭಾರತ ಉಪಗ್ರಹ ಉಡಾವಣೆಯಲ್ಲಿ ಬಹುದೂರ ಸಾಗಿ ಬಂದಿದೆ.*

*ಹಳೆಯ ನೆನಪಿನ ಬುತ್ತಿಯನ್ನು ಕೆದಕಿದಾಗ ಇಸ್ರೋದ ಮಹತ್ವದ ಹೆಜ್ಜೆ ಗುರುತುಗಳನ್ನು ನೋಡಬಹುದು.*👇🏾👇🏾

*1975, ಆರ್ಯಭಟ*
-------------
*ಭಾರತದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಆರ್ಯಭಟವನ್ನು ಸೋವಿಯತ್ ಒಕ್ಕೂಟ ಉಡಾಯಿಸಿತು. ಅಂತರಿಕ್ಷದಲ್ಲಿ 19 ವರ್ಷಗಳ ಕಾಲ ಪ್ರಯಾಣ ಮಾಡಿ ಭೂ ಕಕ್ಷೆಯನ್ನು ಮರು ಪ್ರವೇಶಿಸಿತು. ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಆರ್ಯಭಟ ಉಪಗ್ರಹವನ್ನು ಬಳಸಲಾಯಿತು.*

*1979, ಭಾಸ್ಕರ್*
------------
*ಅರಣ್ಯ, ಜಲ ವಿಜ್ಞಾನ, ಭೂ ವಿಜ್ಞಾನಕ್ಕೆಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸಲು ಈ ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತಿದ್ದು ಕಾಪುಸ್ತಿನ್ ಯಾರ್ ನಲ್ಲಿ ಉಡಾಯಿಸಲಾಯಿತು. ಭಾಸ್ಕರ್ ಮೂಲಕವೇ ಟಿ ವಿ ಮತ್ತು ಕ್ಯಾಮರಾಗಳ ಆರಂಭವಾಯಿತು.*

*1980, ರೋಹಿಣಿ*
------------
*ಎಸ್ಎಲ್ ವಿ-3 ಹಾಗೂ ರೋಹಿಣಿಯನ್ನು ಒಟ್ಟಿಗೆ ಎರಡನೇ ಪ್ರಯೋಗಾತ್ಮಕ ಉಪಗ್ರಹವಾಗಿ ಉಡಾಯಿಸಲಾಯಿತು.ಕಾರ್ಯಾಚರಣೆ ಯಶಸ್ವಿಯಾಯಿತು.*

*1981,ಭಾಸ್ಕರ 2*
-------------
*ಭೂ ಕಕ್ಷೆಗೆ 1991ರಲ್ಲಿ ಮರು ಪ್ರವೇಶಿಸಿತು ಹಾಗೂ ಭೂಮಿ ಮತ್ತು ನೀರಿನ ವಲಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿತು. ಅಸಮರ್ಪಕವಾಗಿ ಕೆಲಸ ಮಾಡಿದಎರಡು ಕ್ಯಾಮರಾಗಳಲ್ಲಿ ಒಂದನ್ನು ಸುಮಾರು 2,000 ಚಿತ್ರಗಳನ್ನು ವಾಪಸ್ಸು ಕಳುಹಿಸಲಾಯಿತು.*

*1982, ಇನ್ಸಾಟ್-1 ಎ*
----------------
*ಅಮೆರಿಕಾ ರಾಕೆಟ್ ಮೂಲಕ ಉಡಾಯಿಸಲಾದ ಸಂವಹನ ಉಪಗ್ರಹ. ಇದು ನಮ್ಮ ದೇಶದ ಮೊದಲ ಹವಾಮಾನಶಾಸ್ತ್ರ ಉಪಗ್ರಹವಾಗಿದೆ.1983, ಇನ್ಸಾಟ್-2ಬಿ: ಇನ್ಸಾಟ್-1ಎಯ ಪ್ರತಿಬಿಂಬವಾಗಿದ್ದು 7 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದೆ.*

*1988, ಐಆರ್ಎಸ್-1ಎ*
-----------------
*ರಷ್ಯಾ ರಾಕೆಟ್ ಮೂಲಕ ಉಡಾವಣೆಗೊಂಡ ಭಾರತೀಯ ರಿಮೋಟ್ ಸೆನ್ಸಿಂಗ್(ಐಆರ್ಎಸ್) ಉಪಗ್ರಹವಾಗಿದೆ. ಆದರೆ ಈ ಕಾರ್ಯಾಚರಣೆ ವಿಫಲವಾಯಿತು.*

*1992, ಇನ್ಸಾಟ್-2ಡಿಟಿ*
-----------------
*1,360 ಕೆಜಿ ತೂಕದ ಈ ಉಪಗ್ರಹವನ್ನು ಆರಂಭದಲ್ಲಿ ಅರಬ್ ಮತ್ತು ನಂತರ ಭಾರತೀಯ ಸಂವಹನ ಉಪಗ್ರಹವಾಗಿ ಉಡಾಯಿಸಲಾಯಿತು. ಉದನ್ನು ಫ್ರಾನ್ಸ್ ನ ಗಯಾನಾದಲ್ಲಿ ಉಡಾಯಿಸಲಾಯಿತು.*

*1994,ವಿಸ್ತರಿಸಿದ*
*ರೋಹಿಣಿ ಉಪಗ್ರಹ ಸರಣಿ*
---------------------------
*ಅಂತರಿಕ್ಷಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪೇ ಲೋಡ್ಸ್ ಗಳನ್ನು ಹೊತ್ತೊಯ್ದ ಗುಂಪು ಉಪಗ್ರಹಗಳು ಗಾಮಾ ಕಿರಣ ಸ್ಫೋಟಗಳನ್ನು ಕಂಡು ಹಿಡಿಯುವಲ್ಲಿ ಇದು ಸಹಾಯ ಮಾಡಿದೆ.*

*1997, ಐಆರ್ಎಸ್ 1-ಡಿ*
-----------------
*ದೂರಸ್ಥಸಂವೇದನಾ ಉಪಗ್ರಹಗಳಲ್ಲಿ ಇದು ಏಳನೆಯದಾಗಿದೆ. ಇದನ್ನುಇಸ್ರೋ ನಿರ್ಮಿಸಿ ಉಡಾಯಿಸಿ,ಕಾರ್ಯನಿರ್ವಹಿಸಿದ ಉಪಗ್ರಹವಾಗಿದೆ. 12 ವರ್ಷಗಳ ಸೇವೆ ನಂತರ 2010ರಲ್ಲಿ ಪೂರ್ಣಗೊಂಡಿತು.*

*2001, ಜಿಸ್ಯಾಟ್-1*
--------------
*ಜಿಎಸ್ಎಲ್ ವಿ ಅಧಿಕ ಭಾರದ ರಾಕೆಟ್ ನ್ನು ಜಿಸ್ಯಾಟ್-1 ಮೂಲಕ ಯಶಸ್ವಿಯಾಗಿ ಉಡಾಯಿಸಿತು.*

*2002, ಕಲ್ಪನ-1*
-------------
*ಮೆಟ್ ಸಾಟ್ ದೇಶದ ಮೊದಲ ಮೀಸಲಾದ ಹವಾಮಾನ ಉಪಗ್ರಹವಾಗಿದ್ದು ಅದಕ್ಕೆ ಕಲ್ಪನ ಎಂದು ಮರು ನಾಮಕರಣ ಮಾಡಲಾಯಿತು.*

*ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಯಿತು. ಏಳು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹವಾಮಾನ ಮತ್ತು ಪರಿಸರದ ಸಂಬಂಧಿತ ಮಾಹಿತಿಯನ್ನು ಒಟ್ಟುಗೂಡಿಸಲು ಬಳಸಲಾಗಿದೆ.*

*2004, ಎಜುಸ್ಯಾಟ್*
--------------
*ದೇಶದ ಮೊದಲ ಶಿಕ್ಷಣ ಆಧಾರಿತ ಉಪಗ್ರಹವಾಗಿದ್ದು, ಸ್ಮಾರ್ಟ್ ತರಗತಿಗಳ ಪರಿಕಲ್ಪನೆ ಇದರಿಂದ ಹುಟ್ಟಿಕೊಂಡಿತು. ಎರಡು ಮಾರ್ಗಗಳ ಮೂಲಕ ಸಂವಹನ ಇದರಲ್ಲಿ ಸಾಧ್ಯವಿದ್ದು ತರಗತಿಗಳಿಗೆ ಶಿಕ್ಷಣದ ಸಾಮಗ್ರಿಗಳನ್ನು ಪೂರೈಸುತ್ತದೆ.*

*2005, ಕಾರ್ಟೊಸ್ಯಾಟ್-1*
------------------
*ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಇದನ್ನು ಉಡಾಯಿಸಲಾಯಿತು. ಪ್ರಾದೇಶಿಕ, ಸ್ಪೆಕ್ಟ್ರಲ್ ಮತ್ತು ರೇಡಿಯೊಮೆಟ್ರಿಕ್ ನಿರ್ಣಯಗಳನ್ನು ಸುಧಾರಿಸುವ ಕಾರ್ಯಾಚರಣೆ ಮತ್ತು ಅಂಕಿಅಂಶಗಳ ಸಂಗ್ರಹವನ್ನು ಹೊಂದಿದೆ.*

*2007, ಕಾರ್ಟೊಸ್ಯಾಟ್-2*
-----------------
*ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗ ಮತ್ತು ಎರಡು ವಿದೇಶಿ ಸ್ಯಾಟಲೈಟ್ ಗಳ ಉಡಾವಣೆಯನ್ನು ಇದು ಹೊಂದಿದೆ.*

*2008, ಚಂದ್ರಯಾನ*
--------------
*ಶ್ರೀ ಹರಿಕೋಟಾದಿಂದ ಮೊದಲ ಚಂದ್ರಪರಿಶೋಧನೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಇದು ಎರಡು ವರ್ಷಗಳ ಜೀವಿತಾವಧಿ ಹೊಂದಿತ್ತು. ಗ್ರಹಗಳ ಮತ್ತು ದೂರಸ್ಥ ಸಂವೇದನಾ ಕ್ಷೇತ್ರಗಳನ್ನು ಒಳಗೊಂಡಿದೆ.*

*2011, ಯೂತ್ ಸ್ಯಾಟ್*
---------------
*ಭಾರತ-ರಷ್ಯಾ ಜಂಟಿಯಾಗಿ ಉಡಾಯಿಸಿದ ಉಪಗ್ರಹವಿದು. ಪದವಿ, ಸ್ನಾತಕ ಪದವಿ ಮತ್ತು ಸಂಶೋಧನಾ ತಜ್ಞರನ್ನು ಒಟ್ಟಿಗೆ ತರುತ್ತದೆ. ಭಾರತದಮಿನಿ ಸ್ಯಾಟಲೈಟ್ ಸರಣಿಯ ಭಾಗವಾಗಿದ್ದು ಎರಡನೆಯದಾಗಿದೆ.*

*2013, ಮಾಮ್*
------------
*ಮಂಗಳಯಾನ ಎಂದು ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್ ಅಂತರಗ್ರಹ ಸ್ಥಳಕ್ಕೆ ಭಾರತದ ಮೊದಲ ಬಾಹ್ಯಾಕಾಶ ಪ್ರಯಾಣವಾಗಿದೆ.*

*2014, ಜಿಸ್ಯಾಟ್ 16*
---------------
*ಸಂವಹನ ಉಪಗ್ರಹ. ತೆರೆದ-ಸಾಮರ್ಥ್ಯದ ಆಂಟೆನಾವನ್ನು ಜಿಸ್ಯಾಟ್ 16 ಒಳಗೊಂಡಿದೆ.*

*2015, ಜಿಸ್ಯಾಟ್ 15*
---------------
*ಕು ಬಾಂಡ್ ನಲ್ಲಿ ಹೊತ್ತೊಯ್ಯುವ ಸಂವಹನ ಟ್ರಾನ್ಸ್ಪೋರ್ಡರ್ಗಳನ್ನು ಒಳಗೊಂಡಿದೆ.*

*20

16, ಸ್ಕ್ಯಾಟ್ ಸಾಟ್-1*
-----------------
*ಚಂಡಮಾರುತ, ಗಾಳಿ, ಹವಾಮಾನ ಮುನ್ಸೂಚನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತದೆ. 5 ವರ್ಷಗಳ ಜೀವಿತಾವಧಿ ಹೊಂದಿದೆ.*

*2017, ಕಾರ್ಟೊಸ್ಯಾಟ್ 2 ಡಿ*
-------------------
*ಪಿಎಸ್ಎಲ್ ವಿ ಒಂದು ಉಡಾವಣಾ ವಾಹಕದ ಮೂಲಕ ಏಕಕಾಲಕ್ಕೆ 104 ಸ್ಯಾಟಲೈಟ್ಗಳನ್ನು ಉಡಾಯಿಸಿ ಇತಿಹಾಸ ನಿರ್ಮಿಸಿತು.*

*2017, ಜಿಸ್ಯಾಟ್-9*
--------------
*ದಕ್ಷಿಣ ಏಷ್ಯಾ ದೇಶಗಳಿಗೆ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಕೊಡುಗೆಯಿದು. ಸಂವಹನ ಉಪಗ್ರಹ.*

ಗುರುವಾರ, ಮೇ 11, 2017

ಕೇಂದ್ರ ಸರ್ಕಾರದ ಕೆಲವು ಪ್ರಮುಖ ಯೋಜನೆಗಳು:

#ಕೇಂದ್ರ ಸರ್ಕಾರದ ಕೆಲವು ಪ್ರಮುಖ ಯೋಜನೆಗಳು:

       
⏺ಅಟಲ್ ಪಿಂಚಣಿ ಯೋಜನೆ - 9ಮೇ-2015   2.

⏺ ಗ್ರಾಮೀಣ ಭಂಡಾರ ಯೋಜನ -31- ಮಾರ್ಚ-2007.
             
⏺ಇಂದಿರಾ ಆವಾಸ್ ಯೋಜನೆ-1985.   
 
⏺ಸಮಗ್ರ ಗ್ರಾಮೀಣ ಅಭಿವ್ಋದ್ದಿ ಯೋಜನೆ-1979.
              
⏺ಜನನಿ ಸುರಕ್ಷಾ ಯೋಜನೆ-2005..  

⏺ರಾಷ್ಟ್ರೀಯ ಸಾಕ್ಷರತಾ ಮಿಷನ್ -5-ಮೇ-1988..     

⏺ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ -9-ಮೇ-2015. 

⏺ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆ -9-ಮೇ-2015.

⏺ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ  -25-ಮೇ-2000.      
               
⏺ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ -1-ಎಪ್ರಿಲ್-2008.       
        
⏺ಸಂಪೂರ್ಣ ಗ್ರಾಮೀಣ ರೋಜ್ಗಾರ್ ಯೋಜನೆ -25-ಸೆಪ್ಟೆಂಬರ್-2001.            

⏺ಸ್ವಾಭಿಮಾನ್ -15-ಫೆಬ್ರವರಿ-2011.    

⏺ಸ್ವರ್ಣ ಜಯಂತಿ ಗ್ರಾಮ ಸ್ವ-ರೋಜ್ಗಾರ್ ಯೋಜನೆ -1-ಎಪ್ರಿಲ್-1999.                

⏺ಅಮ್ಋತ್ ಯೋಜನೆ-25-ಜೂನ್-2015. 

⏺ಪ್ರಧಾನಮಂತ್ರಿ ಆವಾಸ್ ಯೋಜನೆ-25-ಜೂನ್-2015.
                 
⏺ಸಬಲ ರಾಜೀವ್  ಗಾಂಧೀ ಯೋಜನೆ-2011.      
      
⏺ಅಂತ್ಯೋದಯ ಅನ್ನ ಯೋಜನೆ-25-ಡಿಸೆಂಬರ್-2015.
           
⏺ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ-15-ಜುಲೈ-2015.                  

⏺ಪ್ರಧಾನಮಂತ್ರಿ ಉಜ್ವಲ ಯೋಜನೆ  -1-ಮೇ-2016.       
             
⏺ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ-2007

ಭಾನುವಾರ, ಮೇ 7, 2017

ಕರ್ನಾಟಕದ ಆರ್ಥಿಕ ಸಮೀಕ್ಷೆ

📝 ಕರ್ನಾಟಕ ಆರ್ಥಿಕ ಸಮೀಕ್ಷೆ 📝
 
💐 ಆರ್ಥಿಕ ಸಮೀಕ್ಷೆಯ ಅಂಕಿ - ಅಂಶಗಳು 💐

👉 ರಾಜ್ಯ ಆಂತರಿಕ ಉತ್ಪನ್ನ - 1133194 ಕೋಟಿ ರೂ.(ಶೇ 6.9)
👉ರಾಜ್ಯ ಆದಾಯ ಮತ್ತು ಬೆಲೆಗಳು ವಲಯವಾರು ಶೇಕಡಾವಾರು ಕೊಡುಗೆ -         ★ಕೃಷಿ = ಶೇ. 12             
★ಕೈಗಾರಿಕೆ = ಶೇ. 24                ★ಸೇವೆಗಳು = ಶೇ . 64
👉 ವಿತ್ತೀಯ ಕೊರತೆ - ಶೇ. 2.12 ( ಆಂತರಿಕ ಉತ್ಪನ್ನ )
👉 ಒಟ್ಟು  ಜಮೆ - 1,61,956 ಕೋಟಿ ರೊಪಾಯಿ
👉ಒಟ್ಟು  ಅನುದಾನ - 1,63,419 ಕೋಟಿ ರೂಪಾಯಿ
👉ರಾಜಸ್ವ ಜಮೆ - 130758,31 ಕೋಟಿ ರೂಪಾಯಿ
👉ಯೋಜನಾ ಅನುದಾನ - 86230,31 ಕೋಟಿ ರೂಪಾಯಿ
👉ಜಿಲ್ಲಾ ಯೋಜನಾ ಅನುದಾನ - 12513 ಕೋಟಿ ರೂಪಾಯಿ
👉ತಲಾ ಆದಾಯ - 1,59,893 ಕೋಟಿ ರೂಪಾಯಿ
👉ಶಿಶು ಮರಣ ಪ್ರಮಾಣ -
    28 ( 2016 )

👉ತಾಯಂದಿರ ಮರಣ ಪ್ರಮಾಣ - 133 ( 2016 )
👉ಬರ ಪೀಡಿತ ತಾಲೂಕುಗಳು  139 ( ಮುಗಾರು )
160 ( ಹಿಂಗಾರು )
👉ನೀರಾವರಿ ಸಾಮರ್ಥ್ಯ - 40,75 ಲಕ್ಷ ಹೆಕ್ಟೇರ್ ( 2016-17)
👉 ಕಾರ್ಮಿಕ ಜನಸಂಖ್ಯಾ  ಪ್ರಮಾಣ - ಶೇ , 55,5
👉 ವಿದೇಶಿ ನೇರ ಬಂಡವಾಳ ಹೊಡಿಕೆ ( ಎಫ್ ಡಿ ಐ) - 4121
ದಶಲಕ್ಷ ಅಮೇರಿಕನ್ ಡಾಲರ್ 
( ಭಾರತದಲ್ಲಿ ಇದರ ಪ್ರಮಾಣ -40,001 ದಶಲಕ್ಷ ಅಮೇರಿಕನ್ ಡಾಲರ್ )
👉 ತಂರ್ತಾಂಶ / ಸೇವೆ ರಫ್ತು
- 1,99,822 ಕೋಟಿ ರೂ .
★ ಭಾರತದಲ್ಲಿ ಪ್ರಥಮ ಸ್ಥಾನ
    - ಶೇಕಡ . 36.96
👉 ಒಟ್ಟು  ರಫ್ತು - 3,25,414
ಕೋಟಿ ( 2015-16)
(ಆಂತರಿಕ ಉತ್ಪನ್ನದಲ್ಲಿ -ಶೇ 31.81)
👉 ಆಹಾರ ಧಾನ್ಯಗಳ  ಉತ್ಪಾದನೆ -  91.54 ( 2016-17) ಲಕ್ಷ ಟನ್ ಗಳಲ್ಲಿ
96.44 (2015-16)

👉 ಪ್ರವಾಸಿಗಳ ಸಂಖ್ಯೆ
     - 13.30 ಕೋಟಿ
👉 ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕ - 185.79 (2015-16) ರ ಪ್ರಕಾರ
👉 ಮಹಾತ್ಮ ಗಾಂಧಿ ರಾಷ್ಟ್ರೀಯ
ಉದ್ಯೋಗ ಖಾತ್ರಿ ಯೋಜನೆ ಅನುದಾನ - 592 .95 ಲಕ್ಷ
👉ಗೃಹ ನಿರ್ಮಾಣ - 35,18,603 ಮನೆಗಳು ( 2002-01 ರಿಂದ 2016-17 ರವರೆಗೆ )
  ★ ಧ್ಯನವಾದಗಳು ★
     

ಭಾನುವಾರ, ಏಪ್ರಿಲ್ 30, 2017

ಬಲೂಚಿಸ್ತಾನ ಗುಲಾಮಗಿರಿ

ಬಲೂಚಿಸ್ತಾನ್ ಜನತೆ ಯಾವತ್ತೂ ಭಾರತದ ಗುಲಾಮರಾಗುವುದಿಲ್ಲ: ಬಲೂಚಿಸ್ತಾನ್ ಸಿಎಂ

ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ಥಾನ ಪ್ರಾಂತ್ಯದ ಜನತೆ ಭಾರತದ "ಗುಲಾಮರಾಗಲು ಎಂದಿಗೂ ಒಪ್ಪುವುದಿಲ್ಲ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ಹೇಳಿದ್ದಾರೆ. 

ಬಲೂಚಿಸ್ತಾನದ ಅಂಜೇರಾ ಕಾಲತ್ ಪ್ರದೇಶದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ, ಬಲೂಚಿಸ್ತಾನ ಜನತೆ ಸಹೋದರರಂತೆ ಪಾಕಿಸ್ತಾನದಲ್ಲಿಯೇ ಜೀವನ ಸಾಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಶತ್ರುಗಳ ಅಜೆಂಡಾವನ್ನು ಪ್ರಚಾರ ಮಾಡುತ್ತಿರುವ ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ತಾನ್ ಜನತೆ "ಭಾರತದ ಗುಲಾಮರಾಗುವುದಿಲ್ಲ. ವಿದೇಶದಲ್ಲಿ ಕುಳಿತಿರುವ ಕೆಲ ವಿಚ್ಚಿದ್ರಕಾರಿ ಶಕ್ತಿಗಳು, ತಮ್ಮ ಮಹಾಪಾತಕದ ಕೃತ್ಯಗಳಿಗಾಗಿ ನಮ್ಮ ಯುವಕರನ್ನು ಬಳಸಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.

ಸಾಮಾಜಿಕ ಮಾಧ್ಯಮ ವಿಮೋಚನೆಗೆ ಮಾನದಂಡವಲ್ಲ. ವಾಸ್ತವವಾಗಿ, ಬಲೊಚ್ ಜನರು ಶ್ರೀಮಂತ ಮತ್ತು ಶಾಂತಿಯುತ ಬಯಸುತ್ತಾರೆ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ ತಿಳಿಸಿದ್ದಾರೆ.

ವಿಶ್ವದ ದೈತ್ಯ ಗಾತ್ರದ ಮೊಲ ವಿಧಿವಶ

ವಿಶ್ವದ ದೈತ್ಯ ಗಾತ್ರದ ಮೊಲ ವಿಧಿವಶ

  ಲಂಡನ್, ಎ.27: ವಿಶ್ವದ ದೈತ್ಯಗಾತ್ರದ ಮೊಲವೊಂದು ಅಮೆರಿಕ ಏರ್‌ಲೈನ್ಸ್‌ಗೆ ಸೇರಿದ ಚಿಕಾಗೊದಲ್ಲಿರುವ ಪ್ರಾಣಿ ಪಾಲನಾ ಕೇಂದ್ರದಲ್ಲಿ ಸಾವನ್ನಪ್ಪಿದೆ. ಇತ್ತೀಚೆಗಷ್ಟೇ ಪ್ರಯಾಣಿಕರೊಬ್ಬರನ್ನು ಆಸನದಿಂದ ಹೊರಗೆಳೆದು ಅವಮಾನಿಸಿದ್ದ ಅಮೆರಿಕದ ಏರ್‌ಲೈನ್ಸ್ ಈಗ ಮತ್ತೊಂದು ಮುಜುಗರ ಅನುಭವಿಸಿದೆ.

10 ತಿಂಗಳ ಪ್ರಾಯದ ವಿಶೇಷ ತಳಿಗೆ ಸೇರಿದ ಮೂರು ಅಡಿ ಉದ್ದದ ಸಿಮೊನ್ ಹೆಸರಿನ ಈ ದೊಡ್ಡ ಗಾತ್ರದ ಮೊಲವನ್ನು ಲಂಡನ್‌ನಿಂದ ಅಮೆರಿಕಕ್ಕೆ ವಿಮಾನದ ಮೂಲಕ ಕರೆ ತರಲಾಗಿತ್ತು. ವಿಮಾನದಲ್ಲಿ ಪ್ರಯಾಣಿಸುವ ಮೂರು ಗಂಟೆ ಮೊದಲು ಮೊಲದ ಆರೋಗ್ಯವನ್ನು ಪರೀಕ್ಷಿಸಲಾಗಿತ್ತು. ಚಿಕಾಗೊ ಏರ್‌ಪೋರ್ಟ್‌ಗೆ ಸೇರಿದ ಪ್ರಾಣಿ ಪಾಲನಾ ಕೇಂದ್ರಕ್ಕೆ ಕರೆ ಬಂದಾಗ ಮೊಲದ ಆರೋಗ್ಯದ ಸ್ಥಿತಿ ಚೆನ್ನಾಗಿತ್ತು. ಆದರೆ, ಕೆಲವೇ ಸಮಯದ ಬಳಿಕ ಅದು ಸಾವನ್ನಪ್ಪಿದೆ. ಸಿಮೊನ್ ಹೆಸರಿನ ಈ ಮೊಲ ಸೆಲೆಬ್ರಿಟಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

‘‘ಇಂತಹ ಘಟನೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಇದು ತುಂಬಾ ಬೇಸರದ ವಿಷಯ. ನಮ್ಮ ಕೇರ್ ಸೆಂಟರ್‌ನಲ್ಲಿ ಪ್ರಾಣಿಯೊಂದು ಸಾವನ್ನಪ್ಪಿರುವುದು ತುಂಬಾ ದುಃಖ ತಂದಿದೆ’’ ಎಂದು ಏರ್‌ಲೈನ್ ವಕ್ತಾರರಾದ ಹೊಬರ್ಟ್ ಹೇಳಿದ್ದಾರೆ.

‘‘ಮೊಲ ಸಾಯಲು ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಮೊಲದ ಸಾವಿಗೆ ಕಾರಣವೇನೆಂದು ಪತ್ತೆಹಚ್ಚಲು ಪೋಸ್ಟ್ ಮಾರ್ಟಂ ನಡೆಸಲಾಗುವುದು. ಮೊಲದ ಮಾಲಕರಿಗೆ ಪರಿಹಾರವನ್ನು ನೀಡಲಾಗುವುದು’’ಎಂದು ಹೊಬರ್ಟ್ ತಿಳಿಸಿದ್ದಾರೆ.

ಈ ಘಟನೆಯು ಎ.20 ರಂದು ನಡೆದಿದ್ದು, ‘ದಿ ಸನ್’ ನ್ಯೂಸ್ ಪೇಪರ್ ಬುಧವಾರ ಮೊದಲ ಬಾರಿ ವರದಿ ಮಾಡಿತ್ತು. ‘‘ನಾನು ಮೊಲಗಳನ್ನು ವಿಶ್ವದೆಲ್ಲೆಡೆ ಕೊಂಡೊಯ್ದಿದ್ದೇನೆ. ಈರೀತಿ ಈತನಕ ನಡೆದಿಲ್ಲ. ಸಿಮೊನ್ ಹೆಸರಿನ ಮೊಲವನ್ನು ಖರೀದಿಸಿದ ವ್ಯಕ್ತಿ ತುಂಬಾ ಪ್ರಸಿದ್ಧರಾಗಿದ್ದರು’’ ಎಂದು ಎಡ್ವರ್ಡ್ ಹೇಳಿದ್ದಾರೆ.

ಈ ತಿಂಗಳಾರಂಭದಲ್ಲಿ ಅಮೆರಿಕದ ಪ್ರಯಾಣಿಕ ಡಾ. ಡೇವಿಡ್‌ರೊಂದಿಗೆ ಅಮೆರಿಕದ ಏರ್‌ಲೈನ್ಸ್‌ಗೆ ಸೇರಿದ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿತ್ತು. ವಿಮಾನದ ಸಿಬ್ಬಂದಿಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಪ್ರಯಾಣಿಕ ಡೇವಿಡ್‌ರನ್ನು ಸೀಟಿನಿಂದ ಎಬ್ಬಿಸಲಾಗಿತ್ತು.

ಅಪ್ಘಾನ್ ಹಿಂಸೆಗೆ ಮಕ್ಕಳು ಬಲಿ

ಅಫ್ಘಾನ್ ಹಿಂಸೆಗೆ ಮಕ್ಕಳು ಬಲಿ: ವಿಶ್ವಸಂಸ್ಥೆ

ಕಾಬೂಲ್, ಎ. 27: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಭೀಕರ ಹಿಂಸಾಚಾರದಲ್ಲಿ 2017ರ ಮೊದಲ ಮೂರು ತಿಂಗಳಲ್ಲಿ ಬಲಿಯಾದ ನಾಗರಿಕರ ಪೈಕಿ ಮೂರನೆ ಒಂದು ಭಾಗ ಮಕ್ಕಳು ಎಂದು ವಿಶ್ವಸಂಸ್ಥೆಯ ಸಹಾಯಕ ಅಫ್ಘಾನ್ ಕಚೇರಿಯ ವರದಿಯೊಂದು ಗುರುವಾರ ಹೇಳಿದೆ.

ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ 210 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 525 ಮಂದಿ ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ ಸಂಬಂಧಿಸಿದ ನಾಗರಿಕರ ಒಟ್ಟು ಸಾವಿನ ಸಂಖ್ಯೆ 715 ಮತ್ತು ಗಾಯಗೊಂಡವರು 1,466.ಕಳೆದ ವರ್ಷ ಇದೇ ಅವಧಿಯಲ್ಲಿ ನಡೆದ ಮಕ್ಕಳ ಸಾವಿಗೆ ಹೋಲಿಸಿದರೆ ಈ ಬಾರಿಯ ಸಾವಿನ ಪ್ರಮಾಣ 17 ಶೇಕಡದಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಸಾವಿನ ಸಂಖ್ಯೆಯಲ್ಲಿ 4 ಶೇ. ಇಳಿಕೆಯಾಗಿದೆ.

ಟೈಮ್ ಪ್ರಭಾವಿ ನಾಯಕರ ಆಯ್ಕೆ ಮೋದಿ ಶೂನ್ಯಸಾಧನೆ

ಟೈಮ್‌ ಪ್ರಭಾವಿ ನಾಯಕರ ಆಯ್ಕೆ; ಮೋದಿ ಶೂನ್ಯಸಾಧನೆ

ನ್ಯೂಯಾರ್ಕ್‌: "ಜಗತ್ತಿನ 100 ಮಂದಿ ಪ್ರಭಾವಿ ವ್ಯಕ್ತಿಗಳ ಆಯ್ಕೆ' ಗಾಗಿ ಅಮೆರಿಕದ ಟೈಮ್‌ ನಿಯತಕಾಲಿಕೆ ನಡೆಸುವ ಓದುಗರ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೂನ್ಯ ಸಾಧನೆ ಮಾಡಿದ್ದಾರೆ! ಭಾನುವಾರ ರಾತ್ರಿ ಮತದಾನ ಮುಕ್ತಾಯವಾಗಿದ್ದು, ಮೋದಿ ಅವರಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಕಳೆದ ವರ್ಷದ ಟೈಮ್‌ 100 ಪಟ್ಟಿಯಲ್ಲಿ ಪೈಪೋಟಿಯಲ್ಲಿದ್ದ ಮೋದಿ, 2015ರಲ್ಲಿ ಜಗತ್ತಿನ 100 ಮಂದಿ ಪ್ರಭಾವಿಗಳ ಪೈಕಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇತ್ತೀಚೆಗಷ್ಟೇ, ಇನ್‌ಸ್ಟಾಗ್ರಾಂನಲ್ಲಿ ಅತಿ ಜನಪ್ರಿಯ ವಿಶ್ವನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಆದರೆ, ಈ ಬಾರಿ 100 ಪ್ರಭಾವಿಗಳಿಗಾಗಿ ನಡೆದ ಮತದಾನದಲ್ಲಿ ಮೋದಿಗೆ ಮತಗಳೇ ಬಿದ್ದಿಲ್ಲ. ಇವರ ಜತೆಗೆ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳಾÉ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರಿ ಇವಾಂಕಾ ಕೂಡ ಶೂನ್ಯ ಸಾಧನೆ ಮಾಡಿದ್ದಾರೆ.
ಟ್ರಂಪ್‌ ಶೇ.2ರಷ್ಟು ಮತ ಪಡೆದರೆ, ಫಿಲಿಪ್ಪೀನ್ಸ್‌ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್‌ ಅತಿ ಹೆಚ್ಚು ಮತ ಗಳಿಸುವ ಮೂಲಕ ಜಗತ್ತಿನ ಪ್ರಭಾವಿ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬ್ರಿಟನ್ನಲ್ಲಿ ಜೂ.8ಕ್ಕೆ ಸಾರ್ವತ್ರಿಕ ಚುನಾವಣೆ

ಬ್ರಿಟನ್‌ನಲ್ಲಿ ಜೂ.8ಕ್ಕೆ ಸಾರ್ವತ್ರಿಕ ಚುನಾವಣೆ

ಲಂಡನ್‌:  ಅಚ್ಚರಿಯ ನಡೆಯೊಂದರಲ್ಲಿ ಬ್ರಿಟನ್‌ನಲ್ಲಿ ಅವಧಿಪೂರ್ವ ಚುನಾವಣೆಯನ್ನು ಪ್ರಧಾನಿ ಥೆರೇಸಾ ಮೇ ಘೋಷಿಸಿದ್ದಾರೆ. ಈ ಹಿಂದೆ 2020ರ ಮೊದಲು ಚುನಾವಣೆ ಘೋಷಣೆಯನ್ನು ಥೆರೇಸಾ ನಿರಾಕರಿಸುತ್ತಲೇ ಬಂದಿದ್ದರು. ಸದ್ಯ ಅವಧಿ ಪೂರ್ವ ಚುನಾವಣೆಯ ಘೋಷಣೆ ಮಿತ್ರಪಕ್ಷಗಳಲ್ಲಿ, ಪ್ರತಿಪಕ್ಷಗಳಲ್ಲಿ ಅಚ್ಚರಿ ಉಂಟುಮಾಡಿದೆ. ಐರೋಪ್ಯ ಒಕ್ಕೂಟದಿಂದ ಹೊರ ಬರುವ "ಬ್ರೆಕ್ಸಿಟ್‌'  ಜಾರಿಗೆ ತರುವ ನಿಟ್ಟಿನಲ್ಲಿ ಥೆರೇಸಾ ಈ ಕ್ರಮ ಕೈಗೊಂಡಿದ್ದಾರೆ.
ಸದ್ಯ ಮೇ ಅವರ ಘೋಷಣೆ ಜಾರಿಗೆ ಬರಬೇಕಾದರೆ ಬ್ರಿಟನ್‌ನ ಕೆಳಮನೆ, ಹೌಸ್‌ ಆಫ್ ಕಾಮನ್ಸ್‌ನಲ್ಲಿ ಈ ಪ್ರಸ್ತಾವನೆ ಅಂಗೀಕಾರಗೊಳ್ಳಬೇಕಿದೆ. ಇದು ಬುಧವಾರವೇ ಮಂಡನೆಯಾಗುವ ನಿರೀಕ್ಷೆ ಇದೆ. ಚುನಾವಣೆ ಪ್ರಸ್ತಾಪಕ್ಕೆ ಜಯ ಸಿಗಬೇಕಾದಲ್ಲಿ 650 ಸಂಸದರಲ್ಲಿ 434 ಮಂದಿ ಸಂಸದರು ಪರವಾಗಿ ಮತ ಚಲಾಯಿಸಬೇಕಾಗುತ್ತದೆ.
ಬ್ರಿಟನ್‌ ಪ್ರಧಾನಿ ಮಾತನಾಡಿ ಪ್ರತಿಪಕ್ಷಗಳು  ಬ್ರೆಕ್ಸಿಟ್‌ ಕುರಿತ ನಮ್ಮ ನಡೆಯನ್ನು ಆಲೋಚನೆಯನ್ನು ಟೀಕಿಸಿವೆ ಮತ್ತು ಸವಾಲು ಹಾಕಿದೆ.
ಈ ಸಂದರ್ಭ ನಿಮಗೆ ನಮ್ಮ ನಡೆ ಯನ್ನು ತಡೆಯಲು ನಿಮಗೆ ಅವಕಾಶವಿದೆ ಎಂದಿದ್ದಾರೆ.

ಮ್ಯಾನ್ಮಾರ್ ಜಲ ಉತ್ಸವ ದುರಂತ

ಮ್ಯಾನ್ಮಾರ್ ಜಲ ಉತ್ಸವ ದುರಂತದಲ್ಲಿ ಸತ್ತವರ ಸಂಖ್ಯೆ 320ಕ್ಕೇರಿಕೆ

ಯಾಂಗನ್ (ಮ್ಯಾನ್ಮಾರ್), ಏ.19-ಮ್ಯಾನ್ಮಾರ್ ದೇಶಾದ್ಯಂತ ನಡೆದ ನಾಲ್ಕು ದಿನಗಳ ತಿಂಗ್ಯಾನ್ ಜಲ ಉತ್ಸವ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 320ಕ್ಕೇರಿದೆ. 1,000ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.  ಮ್ಯಾನ್ಮಾರ್‍ನ ವಿವಿಧ ಪ್ರಾಂತ್ಯಗಳಲ್ಲಿ ಜಲ ಉತ್ಸವದ ವೇಳೆ ಸಂಭವಿಸಿದ ವಿವಿಧ ದುರಂತಗಳಲ್ಲಿ ಸಾವು-ನೋವು ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮರಣದ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷವನ್ನು ಸ್ವಾಗತಿಸುವ ಜಲ ಯುದ್ಧದ ವೇಳೆ ನಡೆದ ಕೊಲೆ, ಇರಿತ, ದರೋಡೆ, ಕಳ್ಳತನ, ಮಾದಕ ವಸ್ತು ಬಳಕೆ ಮತ್ತು ಗುಂಪು ಘರ್ಷಣೆ ಸಂಬಂಧ 1,200ಕ್ಕೂ ಅಧಿಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
  ಮ್ಯಾನ್ಮಾರ್‍ನ ನೈಪಿ ತಾಪ್, ಯಾಂಗನ್, ಮಾಂಡೇಲಿಯ, ಸೈಗಂಗ್, ತನಿಂತಯಿ, ಬಾಗೋ, ಮಾಗ್ವೆ, ಮಾಸ್, ರಾಕೈನ್, ಶಾನ್ ಹಾಗೂ ಆಯೆಯವಡ್ಡಿ ಪ್ರಾಂತ್ಯಗಳಲ್ಲಿ ಈ ಸಾವು-ನೋವು ಸಂಭವಿಸಿವೆ.

ಅರುಣಾಚಲದ ಆರು ಪ್ರದೇಶಗಳಿಗೆ ಹೆಸರಿಟ್ಟ ಚೀನಾ

ಅರುಣಾಚಲದ ಆರು ಪ್ರದೇಶಗಳಿಗೆ ಹೆಸರಿಟ್ಟ ಚೀನಾ

ಬೀಜಿಂಗ್ :
ಚೀನಾವು ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಅಧಿಕೃತವಾಗಿ ಹೆಸರಿಟ್ಟಿದೆ. ದಲಾಯಿ ಲಾಮಾ ಇತ್ತೀಚೆಗೆ ಅರುಣಾಚಲ ಭೇಟಿಗೆ ಚೀನಾವು ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತೀಕಾರವೆಂಬಂತೆ ಅಲ್ಲಿನ ಪ್ರದೇಶಗಳಿಗೆ ಹೆಸರಿಡುವ ಕ್ರಮಕ್ಕೆ ಮುಂದಾಗಿದೆ.

ಭಾರತದ ಅರುಣಾಚಲ ಪ್ರದೇಶವನ್ನು ಚೀನಾವು ದಕ್ಷಿಣ ಟಿಬೇಟ್ ಎಂದು ಹೇಳುತ್ತಾ ಬಂದಿದೆ. ಹಾಗಾಗಿ ಆರು ಸ್ಥಳಗಳಿಗೆ ಚೈನೀಸ್, ಟಿಬೆಟಿಯನ್ ಹಿನ್ನಲೆಯಲ್ಲಿ ರೋಮನ್ ಅಕ್ಷರಗಳನ್ನು ಒಳಗೊಂಡು ಹೆಸರಿಟ್ಟಿರುವುದಾಗಿ ಚೀನಾವು ಏ.14 ರಂದು ಪ್ರಕಟಿಸಿತ್ತು.

ಭಾರತ ಮತ್ತು ಚೀನಾದ ನಡುವೆ 3.488 ಕಿ.ಮೀ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದ ವಿವಾದವಿತ್ತು, 1962 ರಯುದ್ಧ ವೇಳೆ ಅಕ್ಸೈಚಿನ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದಾಗಿ ಭಾರತ ವಾದಿಸುತ್ತಿದೆ.
ಈ ವಿವಾದ ಇತ್ಯಾರ್ಥಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಪ್ರತಿನಿಧಿಗಳು 19 ಸುತ್ತಿನ ಮಾತುಕತೆ ನಡೆಸಿದ್ದಾರೆ.

ದಲಾಯಿ ಲಾಮಾ ಅವರ ಭಾರತ ಭೇಟಿ ಹಿನ್ನಲೆಯಲ್ಲಿ ಚೀನಾವು, ತನ್ನ ಪ್ರಾದೇಶಿಕ ಸಾರ್ವಭೌಮತೆ ಮತ್ತು ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.

ಜಮೈಕಾದ 117 ವರ್ಷದ ವೃದ್ದೆ ಜಗತ್ತಿನ ಅತಿ ಹಿರಿಯ ವ್ಯಕ್ತಿ

ಜಮೈಕಾದ 117 ವರ್ಷದ ವೃದ್ಧೆ ಜಗತ್ತಿನ ಅತಿ ಹಿರಿಯ ವ್ಯಕ್ತಿ

ಕಿಂಗ್ಸ್‌ಟನ್‌: ಜಮೈಕಾದ ವಯಲೆಟ್‌ ಬ್ರೌನ್‌ ಜಗತ್ತಿನ ಅತಿ ಹಿರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 1899ರ ನ.29ನಲ್ಲಿ ಜನಿಸಿದ ಇವರಿಗೆ ಈಗ 117 ವರ್ಷ. ಈವರೆಗೆ ಜಗತ್ತಿನ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಇಟಲಿಯ ಎಮ್ಮಾ ಮೊರಾನೊ ಇತ್ತೀಚೆಗಷ್ಟೇ ನಿಧನರಾದರು. ಬಳಿಕ ವಯಲೆಟ್‌ರನ್ನು ಜನ್ಮ ದಿನಾಂಕದ ದಾಖಲೆಗಳ ಆಧಾರದಲ್ಲಿ ಅವರನ್ನು ಹಿರಿಯ ವ್ಯಕ್ತಿ ಎಂದು ಆರಿಸಲಾಗಿದೆ. ಕಳೆದ ತಿಂಗಳಷ್ಟೇ ಇವರು 117ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಪಶ್ವಿ‌ಮ ಜಮೈಕಾದಲ್ಲಿ ನೆಲೆಸಿರುವ ವಯಲೆಟ್‌ ತಮ್ಮ ಜೀವನವೆಲ್ಲಾ ಕಬ್ಬಿನ ಗದ್ದೆಯಲ್ಲಿ ದುಡಿಯುತ್ತಾ ಕಳೆದಿದ್ದಾರೆ. ಈ ಮುಪ್ಪಿನಲ್ಲೂ ಅವರು ನಡೆದಾಡುವ, ಹೇಳಿದ್ದನೆಲ್ಲಾ ಸರಿಯಾಗಿ ಗ್ರಹಿಸುವ, ಸ್ಪಷ್ಟವಾಗಿ ಮಾತನಾಡುವ ಶಕ್ತಿ ಹೊಂದಿದ್ದಾರೆ.

ಅರುಣಾಚಲದ ಆರು ಸ್ಥಳ ಹೆಸರು ಬದಲಿಸಿದ ಚೀನ

ಅರುಣಾಚಲದ ಆರು ಸ್ಥಳ ಹೆಸರು ಬದಲಿಸಿದ ಚೀನ

ಬೀಜಿಂಗ್‌:  ತನ್ನ ವಿರೋಧದ ನಡುವೆಯೂ ಟಿಬೆಟ್‌ ಧರ್ಮಗುರು ದಲೈ ಲಾಮಾರನ್ನು ಅರುಣಾಚಲ ಪ್ರದೇಧಿಶಕ್ಕೆ ಸ್ವಾಗತಿಸಿದ ಭಾರತದ ಕ್ರಮದಿಂದ ಕ್ರುದ್ಧಗೊಂಡಿದ್ದ ಚೀನ, ಇದೀಗ ಮತ್ತೆ ಗಡಿ ತಗಾದೆ ತೆಗೆದಿದೆ.

ಭಾರತದ ಗಡಿ ರಾಜ್ಯವಾಗಿರುವ ಅರುಣಾಚಲ ಪ್ರದೇಶ ತನ್ನದು ಎಂದು ಹಿಂದಿನಿಂದಲೂ ವಿವಾದ ಸೃಷ್ಟಿಸುತ್ತಲೇ ಬಂದಿರುವ ಚೀನ, ಇದೀಗ ಅರುಣಾಚಲದ ಆರು ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ಬುಧವಾರ ಅಂತಿಮಗೊಳಿಸಿದೆ. ಈ ಮೂಲಕ ಅರುಣಾಚಲ ವಿವಾದದ ಸಂಬಂಧ "ಕಾನೂನುಬದ್ಧ ಕ್ರಮ' ಕೈಗೊಂಡಿರುವುದಾಗಿ ಚೀನ ಹೇಳಿಕೊಂಡಿದೆ.

"ದಕ್ಷಿಣ ಟಿಬೆಟ್‌(ಅರುಣಾಚಲ ಪ್ರದೇಶ) ನಲ್ಲಿರುವ ಆರು ಸ್ಥಳಗಳಿಗೆ, ಚೀನೀ ಅಕ್ಷರಗಳು, ಟಿಬೆಟಿಯನ್‌ ಮತ್ತು ರೋಮನ್‌ ವರ್ಣಮಾಲೆಧಿಯನ್ನು ಬಳಸಿ ನೀಡಿದ ಹೆಸರುಗಳನ್ನು ಚೀನದ ನಾಗರಿಕ ವ್ಯವಹಾರಗಳ ಸಚಿವಾಲಯ ಎ.14ರಂದು ಅಂತಿಮಗೊಳಿಸಿದೆ,' ಎಂದು "ಗ್ಲೋಬಲ್‌ ಟೈಮ್ಸ್‌' ಪತ್ರಿಕೆ ವರದಿ ಮಾಡಿದೆ.

"ಆರೂ ಸ್ಥಳಗಳಿಗೆ ವೋಗ್ಯಾನ್‌ಲಿಂಗ್‌, ಮಿಲಾ ರಿ, ಕೊÌàಯೆxಂಗಾಬೊì, ಮನಿಕುÌಕಾ, ಬುಮೊ ಲಾ ಮತ್ತು ನಮ್ಕಾಪಬ್‌ ರಿ ಎಂಬ ಹೆಸರುಗಳನ್ನು ಅಂತಿಮಗೊಳಿಧಿಸಲಾಗಿದೆ. ಅರುಣಾಚಲದ ಮೇಲೆ ಚೀನ ಪ್ರಾದೇಶಿಕ ಹಕ್ಕು ಹೊಂದಿರುವುದಕ್ಕೆ ಇತಿಹಾಸ, ಸಂಸ್ಕೃತಿ ಮತ್ತು ಆಡಳಿತಾತ್ಮಕ ಸ್ಪಷ್ಟ ಸಾಕ್ಷ್ಯಗಳಿವೆ ಎಂಬುದನ್ನು ಈ ಹೆಸರುಧಿಗಳು ಪ್ರತಿಬಿಂಬಿಸುತ್ತವೆ,' ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಹೇಳಿದ್ದಾರೆ.
"ಸ್ಥಳೀಯರ ಹೆಸರುಗಳಿಗೆ  ಸಂಬಂಧಿಸಿದ ನಿಯಮಗಳಿಗೆ ಅನುಗುಣವಾಗಿ ಈ ಹೆಸರುಗಳನ್ನು ಅಂತಿಮಗೊಳಿಸಿದ್ದು, ಇದು ಚೀನ ಸರಕಾರ ಕೈಗೊಂಧಿಡ ಕಾನೂನುಬದ್ಧ ಕ್ರಮವಾಗಿದೆ ಎಂದಿರುವ ಲು ಕಾಂಗ್‌, "ಭಾರತ-ಚೀನ ನಡುವಿನ ವಿವಾದಿತ ಪ್ರದೇಶಧಿದಲ್ಲಿ ದಲೈ ಲಾಮಾ ಅವರ ಚಟುವಟಿಕೆಗಳಿಗೆ ಮತ್ತು ಅವರ ಚೀನ ವಿರುದ್ಧದ ಪಿತೂರಿಗಳಿಗೆ ಅವಧಿಕಾಶ ನೀಡುವ ಮೂಲಕ ಭಾರತ ತಪ್ಪೆಸಗಿದೆ. ಇದನ್ನು ಚೀನ ಬಲವಾಗಿ ಖಂಡಿಸುತ್ತದೆ' ಎಂದಿದ್ದಾರೆ.

ಚೀನದ ನೈರುತ್ಯ ಹಾಗೂ ಭಾರತದ ಈಶಾನ್ಯ ಗಡಿಗೆ ಹೊಂದಿಕೊಂಡಂತೆ ಇರುವ ಅರುಣಾಚಲ ಪ್ರದೇಶ, ಈ ದೇಶಗಳ ನಡುವಿನ ಗಡಿ ವಿವಾದದ ಮೂಲವಾಗಿದೆ. ಈ ಸಂಬಂಧ ಭಾರತ ಹಾಗೂ ಚೀನದ ವಿಶೇಷ ಪ್ರತಿನಿಧಿಗಳು 19 ಬಾರಿ ಸಭೆ ನಡೆಸಿ, ಚರ್ಚಿಸಿದ್ದರೂ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಟಿಬೆಟ್‌ ಧರ್ಮಗುರು ದಲೈಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ತಡೆಯುವಂತೆ ಚೀನ ಭಾರತವನ್ನು ಕೋರಿತ್ತು. ಆದರೆ ಭಾರತ ಲಾಮಾ ಅವರನ್ನು ಸ್ವಾಗತಿಸಿತ್ತು. ಇದಕ್ಕೆ ಪ್ರತೀಕಾರವೆಂಬಂತೆ ಚೀನ ಈಗ ಗಡಿ ವಿವಾದವನ್ನು ಕೆದಕುತ್ತಿದೆ.

ಯುದ್ಧಕ್ಕೆ ಚೀನ ಸಿದ್ಧತೆ?
ಅರುಣಾಚಲಕ್ಕೆ ಆರು ಹೆಸರುಗಳನ್ನು ನಿಗದಿ ಮಾಡಿರುವಂತೆಯೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೊಸ ಸವಾಲುಗಳನ್ನು ಎದುರಿಸುವಂತೆ ಸಿದ್ಧರಾಗಿ ಎಂದು ಸೇನೆಗೆ ಕರೆ ನೀಡಿದ್ದಾರೆ. ಬಾಹ್ಯಾಕಾಶ ಯುದ್ಧ, ಇಲೆಕ್ಟ್ರಾನಿಕ್‌ ಸೇರಿದಂತೆ ಎಲ್ಲ ಮಾದರಿಯ ಯುದ್ಧಗಳಲ್ಲೂ ನಿಪುಣತೆ ಸಾಧಿಸಬೇಕೆಂದು ಸಲಹೆ ಮಾಡಿದ್ದಾರೆ. ಭಾರತ ಮತ್ತು ಚೀನ ನಡುವಿನ ಸಂಬಂಧ ಬಿಗಡಾಯಿಸಿರು ಹಿನ್ನೆಲೆಯಲ್ಲಿ ಕ್ಸಿ ಜಿನ್‌ಪಿಂಗ್‌ರ ಈ ಮಾತು ಮಹತ್ವಪೂರ್ಣದ್ದಾಗಿದೆ ಎಂದು ಹೇಳಲಾಗುತ್ತಿದೆ. ಹೊಸತಾಗಿ ಆರಂಭವಾಗಿರುವ ಸೇನೆಯ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯರ ಹೆಸರುಗಳಿಗೆ  ಸಂಬಂಧಿಸಿದ ನಿಯಮಗಳಿಗೆ ಅನುಗುಣವಾಗಿ ಈ ಹೆಸರುಗಳನ್ನು ಅಂತಿಮಗೊಳಿಸಿದ್ದು, ಇದು ಚೀನ ಸರಕಾರ ಕೈಗೊಂಡ ಕಾನೂನುಬದ್ಧ ಕ್ರಮವಾಗಿದೆ.
- ಲು ಕಾಂಗ್‌, ಚೀನ
ವಿದೇಶಾಂಗ ಇಲಾಖೆ ವಕ್ತಾರ