ಬುಧವಾರ, ಏಪ್ರಿಲ್ 26, 2017

ಹಿರಿಯ ನಾಗರಿಕರಿಗೆ 60 ವರ್ಷದ ಏಕರೂಪ ಮಾನದಂಡ

ಹಿರಿಯ ನಾಗರಿಕರಿಗೆ 60 ವರ್ಷದ ಏಕರೂಪ ಮಾನದಂಡ

ನವದೆಹಲಿ: ಹಿರಿಯ ನಾಗರಿಕರು ಎಂದು ಪರಿಗಣಿಸಲು 60 ವರ್ಷವನ್ನು ಏಕರೂಪ ಮಾನದಂಡವನ್ನಾಗಿ ರೂಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಇದೇ ಮಾನದಂಡದ ಆಧಾರದ ಮೇಲೆ ಎಲ್ಲ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳು  ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ‘ಪೋಷಕರ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಹಿರಿಯ ನಾಗರಿಕರ (ಎಂಡಬ್ಲ್ಯುಪಿಎಸ್‌ಸಿ) ಕಾಯ್ದೆ–2007ಕ್ಕೆ’ ತಿದ್ದುಪಡಿ ತರಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಚಿಂತನೆ ನಡೆಸಿದೆ.

ಎಂಡಬ್ಲ್ಯುಪಿಎಸ್‌ಸಿ ಕಾಯ್ದೆ ಪ್ರಕಾರ ‘60 ವರ್ಷ ಮತ್ತು ಮೇಲ್ಪಟ್ಟ’ ಭಾರತೀಯ ಪ್ರಜೆಗಳು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗಿದೆ. ಆದರೆ, ಕೆಲವು ಸಂಸ್ಥೆಗಳು ‘60 ವರ್ಷ ಮತ್ತು ಮೇಲ್ಪಟ್ಟ’ ಎನ್ನುವ ಅಂಶವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ.  ವಿವಿಧ ರೀತಿಯಲ್ಲಿ ವಯೋಮಾನವನ್ನು ನಿಗದಿಪಡಿಸಿ ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲ್ವೆ ಪ್ರಯಾಣ ದರದ ಹಿರಿಯರ ನಾಗರಿಕ ಕೋಟಾದಲ್ಲಿ ರಿಯಾಯಿತಿ ಪಡೆಯಲು ಮಹಿಳೆಯರಿಗೆ 58 ವರ್ಷ, ಪುರುಷರಿಗೆ 60 ವರ್ಷ ನಿಗದಿಪಡಿಸಲಾಗಿದೆ.

'ಕುಸುಮಾಗ್ರಜ' ಪ್ರಶಸ್ತಿಗೆ ಶಿವಪ್ರಕಾಶ ಆಯ್ಕೆ.

'ಕುಸುಮಾಗ್ರಜ' ಪ್ರಶಸ್ತಿಗೆ ಶಿವಪ್ರಕಾಶ್‌ ಆಯ್ಕೆ

ನವದೆಹಲಿ:  ಪ್ರಸಕ್ತ ಸಾಲಿನ (2017-18) ಪ್ರತಿಷ್ಠಿತ ‘ಕುಸುಮಾಗ್ರಜ ರಾಷ್ಟ್ರೀಯ ಭಾಷಾ ಸಾಹಿತ್ಯ ಪುರಸ್ಕಾರ’ಕ್ಕೆ ಕನ್ನಡದ ಹಿರಿಯ ಕವಿ- ನಾಟಕಕಾರ-  ವಿಮರ್ಶಕ ಪ್ರೊ. ಎಚ್.ಎಸ್.ಶಿವಪ್ರಕಾಶ್ ಆಯ್ಕೆಯಾಗಿದ್ದಾರೆ.

‘ಕುಸುಮಾಗ್ರಜ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಮರಾಠಿ ಲೇಖಕ ದಿವಂಗತ ವಿಷ್ಣು ವಾಮನ ಶಿರ್ವಾಡ್ಕರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಮರಾಠಿಯೇತರ ಭಾರತೀಯ ಭಾಷಾ ಬರಹಗಾರರಿಗೆ ನೀಡಲಾಗುತ್ತದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ಸಮ್ಮಾನ ಚಿಹ್ನೆ- ಸನ್ಮಾನ ಪತ್ರವನ್ನು ಒಳಗೊಂಡ ಈ ಪ್ರಶಸ್ತಿಯನ್ನು ಮುಂಬರುವ ಮೇ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.

ಭಾನುವಾರ, ಏಪ್ರಿಲ್ 23, 2017

ಎಟಿಎಂ ಕಾರ್ಡ್ ಹೊಂದಿದವರು ಓದಲೇಬೇಕಾದ ಸುದ್ದಿ

ಎಟಿಎಂ ಕಾರ್ಡ್ ಹೊಂದಿದವರು ಓದಲೇಬೇಕಾದ ಸುದ್ದಿ

ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಡೇಟಾ ಸೋರಿಕೆ ಕಳೆದ ವರ್ಷ ಸಂಭವಿಸಿತ್ತು. ದೇಶದ 19 ಬ್ಯಾಂಕ್ ಗಳ ಸುಮಾರು 32 ಲಕ್ಷ ಡೆಬಿಟ್ ಕಾರ್ಡ್ ಗಳನ್ನು ಹ್ಯಾಕ್ ಮಾಡಲಾಗಿತ್ತು. ಎಸ್ ಬಿ ಐ, ಆ್ಯಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಐಸಿಐಸಿಐ ಹೀಗೆ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳ ಗ್ರಾಹಕರ ಡೆಬಿಟ್ ಕಾರ್ಡ್ ಗಳನ್ನೂ ಹ್ಯಾಕ್ ಮಾಡಲಾಗಿತ್ತು.

ಹ್ಯಾಕ್ ಆಗಿರೋ ಎಟಿಎಂ ಮಷಿನ್ ಗಳಲ್ಲಿ ಡೆಬಿಟ್ ಕಾರ್ಡ್ ಬಳಸಿದ್ರಿಂದ ಈ ಅಕ್ರಮದ ಜಾಲ ಇನ್ನಷ್ಟು ವಿಸ್ತರಿಸಿತ್ತು. ಎಟಿಎಂಗಳಲ್ಲಿ ಗ್ರಾಹಕರಿಗೆ ವಂಚಿಸಲು ಹ್ಯಾಕರ್ ಗಳು ಹತ್ತಾರು ಮಾರ್ಗಗಳನ್ನು ಅನುಸರಿಸ್ತಾರೆ. ಕ್ರಿಮಿನಲ್ ಗಳು ಎಟಿಎಂ ಹ್ಯಾಕ್ ಮಾಡಲು ಬಳಸುವ 6 ಸಂಚುಗಳು ಯಾವುದು ಅನ್ನೋದನ್ನು ನೋಡೋಣ.

ಕಾರ್ಡ್ ಸ್ಕಿಮ್ಮರ್ :
ಎಟಿಎಂ ಕಾರ್ಡ್ ಮೇಲಿರುವ ಮ್ಯಾಗ್ನೆಟಿಕ್ ಸ್ಟ್ರಿಪ್ ಮೇಲಿರುವ ಮಾಹಿತಿಯನ್ನು ಕಾಪಿ ಮಾಡಲು, ಕದಿಯಲು ಈ ಡಿವೈಸ್ ಗಳನ್ನು ಕಾರ್ಡ್ ರೀಡರ್ ಸ್ಲಾಟ್ ನಲ್ಲಿ ಅಳವಡಿಸಲಾಗುತ್ತದೆ.

ದೊಡ್ಡ ಕಾರ್ಡ್ ಸ್ಲಾಟ್ :
ಕಾರ್ಡ್ ಸ್ಲಾಟ್ ದೊಡ್ಡದಾಗಿದ್ರೆ, ಅಥವಾ ಕೊಂಚ ಬದಲಾಗಿದ್ರೆ ಅಸಲಿ ಸ್ಲಾಟ್ ನ ಮೇಲ್ಭಾಗದಲ್ಲಿ ಹೆಚ್ಚುವರಿ ಕಾರ್ಡ್ ರೀಡರ್ ಸ್ಲಾಟ್ ಒಂದನ್ನು ಅಳವಡಿಸಲಾಗಿದೆ ಎಂದರ್ಥ.

ಸಡಿಲ ಸ್ಲಾಟ್ :
ಸ್ಲಾಟ್ ಸಡಿಲವಾಗಿದ್ರೆ ಅದು ಕೂಡ ಎಟಿಎಂ ಹ್ಯಾಕ್ ನ ಸೂಚನೆ. ಮಶಿನ್ ನಲ್ಲಿ ಕಾರ್ಡ್ ಹ್ಯಾಕ್ ಮಾಡಲೆಂದೇ ಪ್ಲಾಸ್ಟಿಕ್ ಡಿವೈಸ್ ಒಂದನ್ನು ಹಾಕಲಾಗಿರುತ್ತದೆ. ಅದು ನಿಮ್ಮ ಕಾರ್ಡನ್ನು ಒಳಕ್ಕೆ ಸೆಳೆದುಕೊಳ್ಳುತ್ತದೆ. ಕಾರ್ಡ್ ಸ್ಟ್ರಕ್ ಆಗಿದೆ ಎಂದೇ ಗ್ರಾಹಕರು ಭಾವಿಸುತ್ತಾರೆ.

ಫಾಲ್ಸ್ ಫ್ರಂಟ್ :
ನಿಮ್ಮ ಎಟಿಎಂ ಕಾರ್ಡ್ ಪಿನ್ ನಂಬರ್ ಹಾಗೂ ಹಣವನ್ನು ನುಂಗಿಹಾಕಲು ಮಷಿನ್ ನ ಮೇಲ್ಭಾಗದಲ್ಲಿ ಹ್ಯಾಕಿಂಗ್ ಡಿವೈಸ್ ಅಳವಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಅಸಲಿ ಮಷಿನ್ ಅನ್ನು ಕವರ್ ಮಾಡುವುದರಿಂದ ಹ್ಯಾಕರ್ ಗಳ ಕೃತ್ಯದ ಬಗ್ಗೆ ಸುಳಿವೇ ಸಿಗುವುದಿಲ್ಲ.

ನಕಲಿ ಕೀಪ್ಯಾಡ್ :
ಅಸಲಿ ಕೀಪ್ಯಾಡ್ ನ ಮೇಲ್ಭಾಗದಲ್ಲಿ ನಕಲಿ ಕೀಪ್ಯಾಡ್ ಅಳವಡಿಸಲಾಗುತ್ತದೆ. ಸ್ಪಂಜನ್ನು ಮುಟ್ಟಿದ ಅನುಭವವಾದ್ರೆ ಕೀಪ್ಯಾಡ್ ಸಡಿಲವಾಗಿದ್ರೆ ನಿಮ್ಮ ಡೆಬಿಟ್ ಕಾರ್ಡ್ ನ ಪಿನ್ ನಂಬರ್ ಹಾಕಬೇಡಿ.

ರಹಸ್ಯ ಕ್ಯಾಮರಾ :
ಅತ್ಯಂತ ಚಿಕ್ಕದಾದ ರಹಸ್ಯ ಕ್ಯಾಮರಾವನ್ನು ಎಟಿಎಂ ಮಷಿನ್ ನಲ್ಲಿ ಹ್ಯಾಕರ್ ಗಳು ಅಳವಡಿಸಿರುತ್ತಾರೆ. ಅದು ನಿಮ್ಮ ಪಿನ್ ನಂಬರ್ ಅನ್ನು ಸೆರೆಹಿಡಿಯುತ್ತದೆ. ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಚ್ಚರದಿಂದಿದ್ರೆ ಹ್ಯಾಕರ್ ಗಳಿಂದ ನೀವು ಪಾರಾಗಬಹುದು.

"ನೇಷನ್ ವಾಂಟ್ಸ್ ಟು ನೌ" ದೇಶ ಕೇಳ ಬಯಸುತ್ತದೆ.

'ನೇಷನ್ ವಾಂಟ್ಸ್ ಟು ನೋ'... ಪದ ಬಳಸದಂತೆ ಅರ್ನಬ್'ಗೆ ಲೀಗಲ್ ನೋಟಿಸ್!

ಮುಂಬೈ: 'ರಿಪಬ್ಲಿಕ್ ಟಿವಿ' ಇಂಗ್ಲಿಷ್ ಸುದ್ದಿವಾಹಿನಿ ಸ್ಥಾಪಿಸಹೊರಟಿರುವ ಪತಕರ್ತ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ( ದೇಶ ಕೇಳಬಯಸುತ್ತದೆ) ವಾಕ್ಯವನ್ನು ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ಲೀಗಲ್ ನೋಟಿಸ್ ಜಾರಿ ಮಾಡಿದೆ.

'ಟೈಮ್ಸ್ ನೌ' ಸುದ್ದಿವಾಹಿನಿಯ ಮುಖ್ಯ ಸಂಪಾದಕರಾಗಿದ್ದಾಗ ಚರ್ಚೆ ಸಂದರ್ಭಗಳಲ್ಲಿ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ವಾಕ್ಯವನ್ನು ಬಳಕೆ ಮಾಡುತ್ತಿದ್ದರು. ಈ ವಾಕ್ಯ ಸಾಕಷ್ಟು ಜನಪ್ರಿಯತೆಯನ್ನುಗಳಿಸಿತ್ತು.

ಆದರೆ, ಈಗ ಕೃತಿಸ್ವಾಮ್ಯ ಕಾನೂನಿನಡಿ ಈ ವಾಕ್ಯ ಬಳಕೆ ಮಾಡದಂತೆ ಮಾಧ್ಯಮ ಸಂಸ್ಥೆಯೊಂದು  ಲೀಗಲ್ ನೋಟಿಸ್ ಜಾರಿ ಮಾಡಿದೆ ಎಂದು ಖುದ್ದು ಗೋಸ್ವಾಮಿಯವರೇ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಯೂಟ್ಯೂಬ್'ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನೇಷನ್ ವಾಂಟ್ಸ್ ಟು ನೋ ವಾಕ್ಯ ಬಳಕೆ ಮಾಡದಂತೆ ನನಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.
ಕೆಲ ಮಾಧ್ಯಮಗಳು ಕೆಲ ತಿಂಗಳಿನಿಂದಲೂ ನನ್ನ ಬಗ್ಗೆ ನಡೆದುಕೊಳ್ಳುತ್ತಿರುವ ವರ್ತನೆಗಳನ್ನು ನೋಡುತ್ತಲೇ ಇದ್ದೇನೆ. ಆ ವರ್ತನೆಗಳಿಗೆ ಉಂದು ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಜೈಲಿಗೆ ಹಾಕುವ ಬೆದರಿಕೆಗಳು ನನ್ನನ್ನು ಹಿಮ್ಮೆಟಿಸಲು ಆಗುವುದಿಲ್ಲ.

ನಿಮ್ಮಲ್ಲಿರುವ ದುಡ್ಡಿನ ಬ್ಯಾಗ್ ಮತ್ತು ವಕೀಲರನ್ನು ಕರೆ ತನ್ನಿ. ನೇಷನ್ ವಾಂಟ್ಸ್ ಟು ನೋ ಪದ ಬಳಕೆ ಮಾಡಿದ್ದಕ್ಕೆ ನನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ. ನಿಮ್ಮಿಂದ ಏನು ಮಾಡಲು ಸಾಧ್ಯವೋ ಅದೆನ್ನಲ್ಲಾ ಮಾಡಿ. ನಿಮ್ಮಲ್ಲಿರುವ ಎಲ್ಲಾ ಹಣವನ್ನು ಖರ್ಚು ಮಾಡಿ. ನನ್ನ ಬಂಧಿಸಿ. ನನಗೆ ಲೀಗಲ್ ನೋಟಿಸ್ ಬಂದಿದ್ದರೂ ಈ ವಾಕ್ಯವನ್ನು ಬಳಸುವುದರಿಂದ ತಡೆಯಲು ಯಾರಿಂದಲೂ ಆಗದು. ನಾನು ಸ್ಟುಡಿಯೋದಲ್ಲಿಯೇ ಇರುತ್ತೇನೆ. ಬೇಕಿದ್ದರೆ ನನ್ನನ್ನು ಬಂಧಿಸಿ ಎಂದು ಸವಾಲೆಸಿದಿದ್ದಾರೆ.

ಒಲಂಪಿಕ್ ಕ್ರೀಡೆಯ ಮಾಹಿತಿ


__________________
🚼Summer Olympics
2012 – London, UK.
2016 – Rio de Janeiro, Brazil.
2020 – Tokyo, Japan.

___________________
🚼Winter Olympics
2014 – Sochi, Russia.
2018 – Pyeongchang, South Korea.
2022 – Beijing, China.
___________________
🚼Commonwealth Games
2010 – New Delhi, India.
2014 – Glasgow, Scotland, U.K.
2018 – Gold Coast, Queensland, Australia.
2022- Durban, South Africa.
______________
🚼Asian Games
2014 – Incheon, South Korea.
2018 – Jakarta, Indonesia.
2022- Hangzhou, China.
___________________
🚼Hockey World Cup
2010 – New Delhi, India (Winner- Australia).
2014 – The Hague, Netherlands (Winner- Australia).
2018 – New Delhi, India.
_________________
🚼Women Hockey World Cup
2010 – Argentina (Winner- Argentina).
2014 – The Hague, Netherlands (Winner- Netherlands).
2018 – London, England.
__________________
🚼FIFA World Cup
2010 – South Africa (Winner- Spain).
2014 – Brazil (Winner- Germany).
2018 – Russia2022 – Qatar.
__________________
🚼Women Football World Cup
2011 – Germany (Winner – Japan).
2015 – Canada (Winner – United States).
2019 – France.
_________________
🚼ICC Cricket World Cup
2011 – India, Bangladesh & Sri Lanka ( Winner- India).
2015 – Australia and New Zealand (Winner – Australia).
2019 – England.
2023 – India.
_________________
🚼Women Cricket World Cup
2013 – India (Winner- Australia).
2017 – England.
2021 – New Zealand.
__________________
🚼ICC World T-20 World Cup
2014 – Bangladesh (Winner- Sri Lanka).
2016 – India (Winner – West Indies).
2018 – Australia.
__________________
🚼Women ICC World T-20 World Cup
2014 – Bangladesh (Winner- Australia).
2016 – India (Winner – West Indies).
2018 – West Indies.
__________________
🚼ICC World Test Championship
2017 (1st edition) – England.
2021 – India.

ಕಲ್ಯಾಣಿ ಚಾಲುಕ್ಯರ ಇತಿಹಾಸ


*🌏ಕಲ್ಯಾಣಿ ಚಾಲುಕ್ಯರು (ಕ್ರಿ.ಶ 973-1200)🌏*

👏ಮೂಲಪುರುಷ ಎರಡನೇ ತೈಲಪ
👍ರಾಜಧಾನಿ ಕಲ್ಯಾಣಿ
ನಾಣ್ಯಗಳು ಗದ್ಯಾಣ, ಕಳಂಜ, ಕಾಸು, ಮಂಜರಿ, ಅಕ್ಕ
ಲಾಂಛನ ವರಾಹ
ಕೊನೆಯ ಅರಸ ನಾಲ್ಕನೆಯ ಸೋಮೇಶ್ವರ (ಕ್ರಿ.ಶ 1184-89)
ಪ್ರಮುಖ ಅರಸರು ಇರಿವ ಬೆಡಂಗ ಸತ್ಯಾಶ್ರಯ, ಮೊದಲನೆಯ ಸೋಮೇಶ್ವರ, ಎರಡನೇ ಸೋಮೇಶ್ವರ, ಆರನೇ ವಿಕ್ರಮಾದಿತ್ಯ, ಮೂರನೇ ಸೋಮೇಶ್ವರ

# ಕಲ್ಯಾಣಿ ಚಾಲುಕ್ಯರ ಆಳ್ವಿಕೆಯ ಕಾಲವು ಭಾರತದ ಚರಿತ್ರೆಯಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದೆ.

# ರನ್ನ, ನಾಗಚಂದ್ರ, ದುರ್ಗಸಿಂಹ ಮುಂತಾದ ಕನ್ನಡ ಕವಿಗಳಿಗೆ ಇವರು ಆಶ್ರಯ ನೀಡಿದ್ದರು.

# ವಚನ ಸಾಹಿತ್ಯವು ಇದೇ ಕಾಲ ಖಂಡದಲ್ಲಿ ಬೆಳೆಯಿತು.

# ಕಲ್ಯಾಣಿ ಚಾಲುಕ್ಯ ಶೈಲಿಯ ದೇವಾಲಯಗಳು ಬಳಪದ ಕಲ್ಲಿನಿಂದ ರಚಿತವಾಗಿ ಕುಸುರಿನ ಕೆಲಸಕ್ಕೆ ಖ್ಯಾತವಾಗಿದೆ.

# ರಾಷ್ಟ್ರಕೂಟರ ಸಾಮಂತರಾಗಿದ್ದ ಎರಡನೇ ತೈಲಪನು ಕ್ರಿ.ಶ 973 ರಲ್ಲಿ ರಾಷ್ಟ್ರಕೂಟ ಅರಸು ಎರಡನೆಯ ಕರ್ಕನನ್ನು ಪರಾಭವಗೊಳಿಸಿ ಮಾನ್ಯಖೇಟವನ್ನು ಗೆದ್ದುಕೊಂಡನು. ಸತ್ಯಾಶ್ರಯ ಕ್ರಿ.ಶ 997 ರಲ್ಲಿ ಪಟ್ಟಕ್ಕೆ ಬಂದನು. ಈತನು ಕವಿ ರನ್ನನ ಆಶ್ರಯದಾತನಾಗಿದ್ದಾನೆ.

# ನಾಲ್ಕನೆಯ ವಿಕ್ರಮಾದಿತ್ಯ (1076-1126) ಕಲ್ಯಾಣದ ಚಾಲುಕ್ಯ ವಂಶದಲ್ಲಿಯೇ ಶ್ರೇಷ್ಠನಾದವನಾಗಿದ್ದನು. ಕ್ರಿ.ಶ 1076 ರರಲ್ಲಿ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು. ಶ್ರೀಲಂಕೆಯ ಅರಸ ವಿಜಯ ಬಾಹುವಿನಲ್ಲಿ ತನ್ನ ರಾಯಭಾರಿಯನ್ನು ಕಳುಹಿಸಿ ಅವರೊಂದಿಗೆ ಸಂಪರ್ಕ ಹೊಂದಿದ್ದನು.

# "ಮಿತಾಕ್ಷರ" ಎಂಬ ಹಿಂದೂ ನ್ಯಾಯ ಗ್ರಂಥವನ್ನು ವಿಜ್ಞಾನೇಶ್ವರನು ರಚಿಸಿದನು. ಇವನು ರಾಜಾ ವಿಕ್ರಮಾದಿತ್ಯನನ್ನು ಕುರಿತು "ಕ್ಷಿತ ತಲದಲ್ಲಿ ಕಲ್ಯಾಣದಂಥ ನಗರ ಹಿಂದಿರಲಿಲ್ಲ, ಮುಂದಿರಲಾರದು, ವಿಕ್ರಮಾಂಕನಂಥ ದೊರೆಯನ್ನು ಕಂಡಿಲ್ಲ, ಕೇಳಿಲ್ಲ" ಎಂದು ಬರೆದಿದ್ದಾನೆ.

# ಮೂರನೇ ಸೋಮೇಶ್ವರ ಹಾಗೂ ಜಗದೇಕಮಲ್ಲರು ಪಟ್ಟಕ್ಕೆ ಬಂದನಂತರ ಅವನತಿ ಪ್ರಾರಂಭವಾಯಿತು. ಕಲಚೂರಿ ಬಿಜ್ಜಳನು ಪ್ರಬಲನಾಗಿ ಕಲ್ಯಾಣವನ್ನು ಆಕ್ರಮಿಸಿದನು.

# 22 ವರ್ಷ ಕಲಚೂರಿ ವಂಶವು ಕಲ್ಯಾಣದಿಂದ ಆಡಳಿತ ನಡೆಸಿತು.

# 1184 ರಲ್ಲಿ ಚಾಲುಕ್ಯ ನಾಲ್ಕನೆಯ ಸೋಮೇಶ್ವರನು ಮತ್ತೆ ಕಲಚೂರಿಗಳಿಂದ ಅಧಿಕಾರ ಪಡೆದರೂ ಕ್ರಿ.ಶ 1189 ರಲ್ಲಿ ಈ ವಂಶವು ಕೊನೆಯಾಯಿತು.

*🌐ಆಡಳಿತ :-*

# ಕಲ್ಯಾಣಿ ಚಾಲುಕ್ಯರು ವಂಶ ಪರಂಪರಾನುಗತ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದರು. ಅವರು ಸಾಮ್ರಾಜ್ಯವನ್ನು ಮಂಡಲಗಳಾಗಿ ವಿಂಗಡಿಸಿದರು.

# ಪ್ರಾಂತ - ನೊಳಂಬವಾಡಿ 32000 ರ ಒಂದು ದೊಡ್ದ ಪ್ರಾಂತ್ಯವಾಗಿತ್ತು.

# ನಾಡು - ಬೆಳ್ವೊಲ 300 ಗ್ರಾಮಗಳ ಒಂದು ನಾಡಾಗಿತ್ತು.

# ಕಂಪಣ - ಮುಗುಂದ 30 ಗ್ರಾಮಗಳ ಒಂದು ಕಂಪಣವಾಗಿತ್ತು.

# ಕಂಪಣ ಎಂದರೇ ಗ್ರಾಮಗಳ ಒಂದು ಗುಂಪಾಗಿತ್ತು.

# ರಾಜ್ಯದ ಮೂಲಾದಾಯ ಭೂಕಂದಾಯ ’ಕಡಿತವೆರ್ಗಡೆ’ ಎಂಬ ಅಧಿಕಾರಿ ಭೂಕಂದಾಯದ ಲೆಕ್ಕವಿಡುವ ಮುಖ್ಯಸ್ಥರಾಗಿದ್ದರು. ಪರನಾಡಿನೊಂದಿಗೆ ವ್ಯಾಪಾರ ಅಭಿವೃದ್ಧಿ ಹೊಂದಿದ್ದು, ಹಲವಾರು ವೃತ್ತಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದವು.

*🌐ಸಾಹಿತ್ಯ:-*

ಬಳ್ಳಿಗಾವೆ, ಡಂಬಳ, ಕೋಳಿವಾಡ ಬೌದ್ದರ ಕೇಂದ್ರಗಳಾಗಿದ್ದವು. ಇವರು ಮತ, ದೇವಾಲಯ, ಅಗ್ರಹಾರ, ಬ್ರಹ್ಮಪುರಿ, ಘಟಿಕಸ್ಥಾನ ಇತ್ಯಾದಿಗಳಲ್ಲಿ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿದರು.

*🌐ಚಾಲುಕ್ಯ್ರರ ಕಾಲದ ಕೃತಿಗಳು:-*

ಕವಿ ಕೃತಿಗಳು
ರನ್ನ ಗದಾಯುದ್ಧ (ಸಾಹಸಭೀಮ ವಿಜಯ), ಅಜಿತನಾಥ ಪುರಾಣ
2 ನೇ ಚಾವುಂಡರಾಯ ಲೋಕೋಪಕಾರ (ವಿಶ್ವಕೋಶ)
ದುರ್ಗಸಿಂಹ ಪಂಚತಂತ್ರ
ಕೀರ್ತಿವರ್ಮ ಗೋವೈದ್ಯ
ವಾದಿರಾಜ ಯಶೋಧರ ಚರಿತೆ (ಸಂಸ್ಕೃತ)
ಬಿಲ್ಹಣ ವಿಕ್ರಮಾಂಕದೇವ ಚರಿತಂ
ವಿಜ್ಞಾನೇಶ್ವರ ಮಿತಾಕ್ಷರ
3 ನೇ ಸೋಮೇಶ್ವರ ಅಭಿಲಾಷಿತಾರ್ಥ ಚಿಂತಾಮಣಿ (ಮನಸೋಲ್ಲಾಸ)

ಬಸವಣ್ಣ. ಅಕ್ಕಮಹಾದೇವಿ, ಅಲ್ಲಮಪ್ರಭು ವಚನಗಳನ್ನು ರಚಿಸಿದರು.

*🌐ಕಲೆ ಮತ್ತು ವಾಸ್ತುಶಿಲ್ಪ:-*

ಇವರು ಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವೈಶ್ಯರ ಶೈಲಿಯು ಇವರ ಕಾಲದಲ್ಲಿ ಅಭಿವೃದ್ಧಿ ಹೊಂದಿತು. ಕಲ್ಯಾಣಿ ಚಾಲುಕ್ಯರ ದೇವಾಲಯಗಳ ಪ್ರವೇಶ ದ್ವಾರಗಳು ಸಾಮಾನ್ಯವಾಗಿ ಗರ್ಭಗೃಹದ ಮುಂಭಾಗದ ಬದಲು ಪಾರ್ಶ್ವದಲ್ಲಿವೆ. ಗರ್ಭಗುಡಿಗೆ ಪ್ರದಕ್ಷಿಣೆ ಪಥವಿಲ್ಲ. ನಕ್ಷತ್ರಾಕಾರದ ಗರ್ಭಗುಡಿಯನ್ನು ಹೊಂದಿವೆ.

*🌐ಪ್ರಮುಖ ದೇವಾಲಯಗಳು ಎಂದರೇ:-*

# ಗದುಗಿನ - ಸರಸ್ವತಿ ದೇವಾಲಯ, ತ್ರಿಕೂಟೇಶ್ವರ ದೇವಾಲಯ

# ಇಟಗಿಯ - ಮಹಾದೇವ ದೇವಾಲಯ
# ಲಕ್ಕುಂಡಿಯ - ಕಾಶಿವಿಶ್ವೇಶ್ವರ ಮಂದಿರ ಹಾಗೂ ಬ್ರಹ್ಮಜಿನಾಲಯ

# ಕುಕ್ಕನೂರಿನ - ಕಲ್ಮೇಶ್ವರ ದೇವಾಲಯ

# ಡಂಬಳದ - ದೊಡ್ಡಬಸಪ್ಪ ದೇವಾಲಯ

# ಕುರುವತ್ತಿಯ - ಮಲ್ಲಿಕಾರ್ಜುನ ಮಂದಿರ

ಸೋಮವಾರ, ಏಪ್ರಿಲ್ 17, 2017

ಪ್ರಚಲಿತ ಘಟನೆಗಳು

*🌎 Daily Current Affairs Group 🌎*

*ಪ್ರಚಲಿತ ಘಟನಗಳು👇👇👇*

*✴️ಮಲಾಲ ಯೂಸಫಿ ವಿಶ್ವಸಂಸ್ಥೆಯ ಅತ್ಯಂತ ಕಿರಿಯ ಶಾಂತಿದೂತೆ*

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟಾನಿಯೊ ಗುಟ್ರೆಸ್ ಅವರು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲ ಯೂಸಫಿ ಅವರಿಗೆ ಅತ್ಯುನ್ನತ ಗೌರವವಾದ ವಿಶ್ವಸಂಸ್ಥೆಯ ಶಾಂತಿದೂತ ಪ್ರಶಸ್ತಿ ನೀಡಿ ಗೌರವಿಸಿದರು. ವಿಶ್ವದಲ್ಲಿ ಅತ್ಯಂತ ಮಹತ್ವದ ಎಲ್ಲರಿಗೂ ಶಿಕ್ಷಣ ಎಂಬ ಪರಿಕಲ್ಪನೆಯ ಸಂಕೇತ ಎಂದು ಯೂಸಫಿ ಅವರನ್ನು ಬಣ್ಣಿಸಿದರು

*✴️ಚಂಪಾರಣ್ಯ ಸತ್ಯಾಗ್ರಹಕ್ಕೆ 100 ವರ್ಷ*

‘ಸ್ವಚ್ಛಗೃಹ ಬಾಪು ಕೋ ಕಾರ್ಯಾಂಜಲಿ- ಏಕ್ ಅಭಿಯಾನ್ ಏಕ್ ಪ್ರದರ್ಶಿನಿ’ ಎಂಬ ಚಿತ್ರ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಹೊಸದೆಹಲಿಯಲ್ಲಿ ಉದ್ಘಾಟಿಸಿದರು. ಚಂಪಾರಣ್ಯ ಸತ್ಯಾಗ್ರಹಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವಿಶಿಷ್ಟ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ಚಂಪಾರಣ್ಯ ಸತ್ಯಾಗ್ರಹದ ವಿವಿಧ ಹಂತಗಳ ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ.

*✴️2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟ...*

ಪತ್ರಿಕಾ ರಂಗದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತವಾಗಿರುವ 2017ನೇ ಸಾಲಿನ 101ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಪುಲಿಟ್ಜರ್ ಪ್ರಶಸ್ತಿ ಸಮಿತಿಯ ನಿರ್ವಾಹಕ ಮೈಕ್ ಪ್ರೈಡ್ ಅವರು ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿದರು. ನ್ಯೂಯಾರ್ಕ್ ನ  ಕೊಲಂಬಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರಶಸ್ತಿ ಘೋಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

*✴️ಕೇಂದ್ರದಿಂದ ಸೈಬರ್ ಫಿಸಿಕಲ್ ಸಿಸ್ಟಂ(ಸಿಪಿಎಸ್) ಯೋಜನೆಗೆ ಚಾಲನೆ..*

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸೈಬರ್ ಫಿಸಿಕಲ್ ಸಿಸ್ಟಂ(ಸಿಪಿಎಸ್) ಎಂಬ ಹೊಸ ಯೋಜನೆಯನ್ನು ಲೋಕಾರ್ಪಣೆ ಮಾಡಿದೆ. ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳ ಸಹಕಾರದೊಂದಿಗೆ ಸ್ವಯಂಚಾಲಿತ ಕಾರು ಮತ್ತು ಮಾನವ ರಹಿತ ವಾಹನ/ವಿಮಾನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ..

*✴️ದೀನದಯಾಳ್ ಅಂತ್ಯೋದಯ ರಸೋಯಿ ಯೋಜನೆಗೆ ಚಾಲನೆ*

ಮಧ್ಯಪ್ರದೇಶ ಸರ್ಕಾರವು ದೀನದಯಾಳ್ ಅಂತ್ಯೋದಯ ರಸೋಯಿ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದೆ. ಇದು ಜನಪ್ರಿಯ ಸಬ್ಸಿಡಿ ಊಟದ ಯೋಜನೆಯಾಗಿದ್ದು, ರಾಜ್ಯದ ಎಲ್ಲ ಬಡವರಿಗೆ ಇದರ ಪ್ರಯೋಜನ ಲಭ್ಯವಾಗಲಿದೆ. ಈ ಯೋಜನೆಯನ್ನು ಬಿಜೆಪಿಯ ಸಂಸ್ಥಾಪಕ ನಾಯಕರಲ್ಲೊಬ್ಬರಾದ ದೀನದಯಾಳ್ ಉಪಾಧ್ಯಾಯ ಅವರ ಹೆಸರನ್ನು ಯೋಜನೆಗೆ ಇಡಲಾಗಿದೆ.

*✴️ಬಾಹ್ಯಾಕಾಶ ಸಂಶೋಧಕರಿಂದ ಕೆಪ್ಲರ್- 1649ಗೆ ಸುತ್ತುವ ಗ್ರಹ ಪತ್ತೆ..*

ನಾಸಾದ ಕೆಪ್ಲರ್ ಬಾಹ್ಯಾಕಾಶನೌಕೆಯ ಟೆಲೆಸ್ಕೋಪ್ ಬಳಸಿಕೊಂಡು, ಬಾಹ್ಯಾಕಾಶ ವಿಜ್ಞಾನಿಗಳು ಗುರು ಗ್ರಹದ ಮಾದರಿಯ ಹೊಸ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ. ತೀರಾ ಮಬ್ಬು ಬೆಳಕು ಹೊರಸೂಸುವ ಕೆಪ್ಲರ್- 1649 ಕಕ್ಷೆಯ ಸುತ್ತ ಇದು ಸುತ್ತುತ್ತಿದೆ. ಹೊಸದಾಗಿ ಪತ್ತೆಯಾದ ಈ ಗ್ರಹವು ಸೂರ್ಯನ ಪರಿಧಿಯ ಐದನೇ ಒಂದರಷ್ಟು ಗಾತ್ರದ್ದಾಗಿದ್ದು, ಭೂಮಿಯ ಗಾತ್ರಕ್ಕಿಂತ ಸ್ವಲ್ಪ ದೊಡ್ಡದು.

*✴️2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟ...*

ಪತ್ರಿಕಾ ರಂಗದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತವಾಗಿರುವ 2017ನೇ ಸಾಲಿನ 101ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಪುಲಿಟ್ಜರ್ ಪ್ರಶಸ್ತಿ ಸಮಿತಿಯ ನಿರ್ವಾಹಕ ಮೈಕ್ ಪ್ರೈಡ್ ಅವರು ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿದರು. ನ್ಯೂಯಾರ್ಕ್ ನ  ಕೊಲಂಬಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರಶಸ್ತಿ ಘೋಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

*✴️2016ನೇ ವರ್ಷದ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆ..*

2016ನೇ ವರ್ಷದ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆ ಯಾಗಿವೆ. ಪೌರ ಕಾರ್ಮಿಕನೊಬ್ಬನ  ಜೀವನದ ಕಥಾವಸ್ತುವಿರುವ ಬಿ.ಎಂ.ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.  ಇದೇ ಚಿತ್ರದ ನಟನೆಗಾಗಿ ಅಚ್ಯುತ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಬ್ಯೂಟಿಫುಲ್ ಚಿತ್ರದ ನಟನೆಗಾಗಿ ಶ್ರುತಿ ಹರಿಹರನ್‍ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಮೊದಲನೆ ಅತ್ಯುತ್ತಮ ಚಿತ್ರ : ಅಮರಾವತಿ (ನಿರ್ದೇಶಕ: ಬಿ.ಎಂ. ಗಿರಿರಾಜ್)
ಎರಡನೇ ಅತ್ಯುತ್ತಮ ಚಿತ್ರ : ರೈಲ್ವೇ ಚಿಲ್ಡ್ರನ್
ಮೂರನೇ ಅತ್ಯುತ್ತಮ ಚಿತ್ರ : ಅಂತರ್ಜಲ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಮೂಡ್ಲ ಸೀಮೆಯಲಿ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಕಿರಿಕ್ ಪಾರ್ಟಿ
ಅತ್ಯುತ್ತಮ ಮಕ್ಕಳ ಚಿತ್ರ : ಜೀರ್ ಜಿಂಬೆ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಮದಿಪು (ತುಳು ಭಾಷೆ)

ಪ್ರಶಸ್ತಿ ವಿಜೇತರ ಪಟ್ಟಿ
ಅತ್ಯುತ್ತಮ ನಟ – ಅಚ್ಯುತ್ ಕುಮಾರ್ – ಅಮರಾವತಿ
ಅತ್ಯುತ್ತಮ ನಟಿ – ಶ್ರುತಿ ಹರಿಹರನ್‍  -ಬ್ಯೂಟಿಪುಲ್ ಮನಸುಗಳು
ಅತ್ಯುತ್ತಮ ಪೋಷಕ ನಟ – ನವೀನ್ ಡಿ ಪಡೀಲ್ -ಕುಡ್ಲ ಕೆಫೆ (ತುಳು)
ಅತ್ಯುತ್ತಮ ಪೋಷಕ ನಟಿ – ಅಕ್ಷತಾ ಪಾಂಡವಪುರ (ಪಲ್ಲಟ)
ಅತ್ಯುತ್ತಮ ಕತೆ – ನಂದಿತಾ ಯಾದವ್
ಅತ್ಯುತ್ತಮ ಚಿತ್ರಕತೆ – ಅರವಿಂದ ಶಾಸ್ತ್ರಿ (ಚಿತ್ರ -ಕಹಿ)

ಅತ್ಯುತ್ತಮ ಸಂಭಾಷಣೆ – ಬಿ.ಎಂ.ಗಿರಿರಾಜ್ (ಚಿತ್ರ: ಅಮರಾವತಿ)

ಅತ್ಯುತ್ತಮ ಛಾಯಾಗ್ರಹಣ –ಶೇಖರ್ ಚಂದ್ರ -(ಚಿತ್ರ: ಮುಂಗಾರು ಮಳೆ-2)
ಅತ್ಯುತ್ತಮ ಸಂಗೀತ ನಿರ್ದೇಶನ ಎಂ.ಆರ್.ಚರಣ್ ರಾಜ್ – (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಸಂಕಲನ ಸಿ.ರವಿಚಂದ್ರನ್ – (ಚಿತ್ರ: ಮಮ್ಮಿ)
ಅತ್ಯುತ್ತಮ ಬಾಲ ನಟ -ಮಾಸ್ಟರ್ ಮನೋಹರ್ ಕೆ. -(ಚಿತ್ರ: ರೈಲ್ವೇ ಚಿಲ್ಡ್ರನ್)
ಅತ್ಯುತ್ತಮ ಬಾಲ ನಟಿ- ಬೇಬಿ ಸಿರಿವಾನಳ್ಳಿ (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಕಲಾ ನಿರ್ದೇಶನ – ಶಶಿಧರ ಅಡಪ (ಚಿತ್ರ: ಉಪ್ಪಿನ ಕಾಗದ)
ಅತ್ಯುತ್ತಮ ಗೀತ ರಚನೆ -ಕಾರ್ತಿಕ್ ಸರಗೂರು (ಚಿತ್ರ: ಜೀರ್ ಜಿಂಬೆ)
ಅತ್ಯುತ್ತಮ ಹಿನ್ನೆಲೆ ಗಾಯಕ -ವಿಜಯ್ ಪ್ರಕಾಶ್ (ಚಿತ್ರ: ಬ್ಯೂಟಿಪುಲ್ ಮನಸುಗಳು)
ಅತ್ಯುತ್ತಮ ಹಿನ್ನೆಲೆ ಗಾಯಕಿ –  ಸಂಗೀತಾ ರವೀಂದ್ರನಾಥ್ (ಚಿತ್ರ: ಜಲ್ಸ)

ತೀರ್ಪುಗಾರರ ವಿಶೇಷ ಪ್ರಶಸ್ತಿ -ಚಿನ್ಮಯ್ -(ಚಿತ್ರ: ಸಂತೆಯಲ್ಲಿ ನಿಂತ ಕಬೀರ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ – ಕೆ.ವಿ.ಮಂಜಯ್ಯ -(ಚಿತ್ರ: ಮುಂಗಾರು ಮಳೆ-2).

💐💐💐💐💐💐💐💐💐💐💐
   

ಕೆಂದ್ರೀಯ ಸಂಸ್ಥೆಗಳು

1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ
ದೆಹ್ರಾದೂನ್.(ಉತ್ತರಖಂಡ)

2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ
ದೆಹ್ರಾದೂನ್ 

3) ಹಪ್ಕೈನ್ ಇನ್ಸ್ಟಿಟ್ಯೂಟ್
ಮುಂಬೈ.

4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್
ಮುಂಬೈ.

5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್ 
ಮುಂಬೈ.

6) ತಳಿ ಸಂವರ್ಧನಾ ಸಂಸ್ಥೆ
ಹಿಸ್ಸಾರ್ (ಹರ್ಯಾಣ).

7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ
ಕರ್ನಾಲ್ (ಹರ್ಯಾಣ).

8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ
ಬೆಂಗಳೂರು.

9) ರಾಮನ್ ಸಂಶೋಧನಾ ಕೇಂದ್ರ •
ಬೆಂಗಳೂರು.

10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ
ಬೆಂಗಳೂರು.

11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್
ದೆಹಲಿ.

12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಜ್
ದೆಹಲಿ.

13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ
ದಹಲಿ.

14) ಭಾರತೀಯ ಹವಾಮಾನ ವೀಕ್ಷಣಾಲಯ
ಪುಣೆ ಮತ್ತು ದೆಹಲಿ.

15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್)
ದಹಲಿ.

16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥ
ದಹಲಿ
.
17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ
ದಹಲಿ.

18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ (ಕಾಸರಗೋಡು) ಕೇರಳ.

19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸೆ
ನಾಗ್ಪುರ

20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ •
ಧನ್ ಬಾದ್.

21) ಆಣ್ವಿಕ ಮತ್ತು ಕೋಶಗಳ ಜೀವವಿಜ್ಞಾನ ಕೇಂದ್ರ
ಹೈದರಾಬಾದ್.

22) ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ
ಲಕ್ನೋ.

23) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ
ಲಕ್ನೋ.

24) ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ
ಲಕ್ನೋ.

25) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥ
ಲಕ್ನೋ.

26) ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ
ರಾಮಗಢ. (ಹಿಮಾಚಲ ಪ್ರದೇಶ), ಇಜ್ಜತ್ ನಗರ (ಉತ್ತರ ಪ್ರದೇಶ).

27) ಜವಳಿ ಸಂಶೋಧನಾ ಸಂಸ್ಥೆ  ಅಹಮದಾಬಾದ್.

28) ರಾಷ್ಟ್ರೀಯ ಉದ್ಯೋಗ ಆರೋಗ್ಯಾ ಸಂಸ್ಥೆ
• ಅಹಮದಾಬಾದ್.

29) ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥ
ಶಿಮ್ಲಾ.

30) ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ
ದುರ್ಗಾಪುರ.

31) ಕೇಂದ್ರೀಯ ಕುಷ್ಠರೋಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ
ಚಿಂಗಲ್ ಪೇಟ್. 

32) ರಾಷ್ಟ್ರೀಯ ಶೇಂಗಾ ಸಂಶೋಧನಾ ಸಂಸ್ಥೆ
ಜುನಾಗಢ್.

34) ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ
ಚೆನೈ.

35) ಕೇಂದ್ರೀಯ ವಿದ್ಯುತ್-ರಾಸಾಯನಿಕ ಸಂಶೋಧನಾ ಸಂಸ್ಥೆ ಕರೈಕುಡಿ.

36) ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ
ಮೈಸೂರು (ಕರ್ನಾಟಕ).

37) ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ
ಪುಣೆ (ಮಹಾರಾಷ್ಟ್ರ).

38) ಭಾರತೀಯ ಲ್ಯಾಕ್ ರಿಸರ್ಚ್ ಇನ್ಸ್ಟಿಟ್ಯೂಟ್
ರಾಂಚಿ (ಜಾರ್ಖಂಡ್).

39) PGI ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥ
ಚಂಡೀಘಢ.

40) ಭಾರತೀಯ ಜೀವ ರಾಸಾಯನಿಕ ಸಂಸ್ಥೆ
ಕೋಲ್ಕತಾ.

41) ಕೇಂದ್ರೀಯ ಸೆಣಬು ತಾಂತ್ರಿಕ ಸಂಶೋಧನಾ ಸಂಸ್ಥೆ
(ಬ್ಯಾರಕ್ ಪುರ) ಕೋಲ್ಕತಾ.

42) ಭಾರತೀಯ ಪುರಾತತ್ವ ಇಲಾಖೆ ಕೋಲ್ಕತಾ.

43) ಸ್ಕೂಲ್ ಆಪ್ ಟ್ರಾಪಿಕಲ್ ಮೆಡಿಸಿನ್
ಕೋಲ್ಕತಾ .

44) ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಹೈಜೀನ್ ಆಂಡ್ ಪಬ್ಲಿಕ್ ಹೆಲ್ಥ್
ಕೋಲ್ಕತಾ.

45) ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್  ಕೋಲ್ಕತಾ.

46) ರಾಷ್ಟ್ರೀಯ ಭೂಭೌತಶಾಸ್ತ್ರ ಸಂಶೋಧನಾ ಸಂಸ್ಥೆ
ಹೈದರಾಬಾದ್.

47) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ನ್ಯೂಟ್ರಿಷನ್
ಹೈದರಾಬಾದ್.

48) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
ಬೆಂಗಳೂರು.

49) ಉನ್ನತ ಸಂಶೋಧನಾ ಪ್ರಯೋಗಾಲಯ
ಗುಲ್ಮರ್ಗ್.

50) ಕೇಂದ್ರೀಯ ಗಣಿ ಸಂಶೋಧನಾ ಸಂಸ್ಥೆ
ಧನ್ಬಾದ್.

51) ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ
ರೂರ್ಕಿ.

52) ಕೇಂದ್ರೀಯ ವೈಜ್ಞಾನಿಕ ಸಲಕರಣೆಗಳ ಸಂಸ್ಥೆ
ಚಂಡೀಘಢ.

53) ಕೇಂದ್ರೀಯ ಉಪ್ಪು ಮತ್ತು ಸಾಗರ ರಾಸಾಯನಿಕ ಸಂಶೋಧನಾ ಸಂಸ್ಥೆ
ಭಾವನಗರ್.

54) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ🏼
ಕಟಕ್

ಮಂಗಳವಾರ, ಏಪ್ರಿಲ್ 11, 2017

ವಿಶ್ವ ಹಾಕಿ ಲೀಗ್ ರೌಂಡ್-2: ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವಿಶ್ವ ಹಾಕಿ ಲೀಗ್ ರೌಂಡ್-2 : ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವೆಸ್ಟ್ ವ್ಯಾಂಕೊವರ್, ಏಪ್ರಿಲ್ 11 : ಸವಿತಾ ಪೂನಿಯಾ ಅವರ ಮನಮೋಹಕ ಆಟದಿಂದ ಭಾರತ ಮಹಿಳಾ ತಂಡ ವಿಶ್ವ ಹಾಕಿ ಲೀಗ್ ರೌಂಡ್-2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು.

ಸೋಮವಾರ ನಡೆದ ಫೈನಲ್ ಹಣಾಹಣಿಯ ಶೂಟೌಟ್ ನಲ್ಲಿ ಭಾರತ ತಂಡ 3-1 ಗೋಲುಗಳಿಂದ ಬಲಿಷ್ಠ ಚಿಲಿ ತಂಡದ ಗೆಲುವಿನ ನಗೆ ಬೀರಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಶೂಟೌಟ್ ಮೊರೆ ಹೋಗಲಾಗಿತ್ತು. ಈ ಅವಕಾಶದಲ್ಲಿ ಭಾರತದ ವನಿತೆಯರು ಪ್ರಾಬಲ್ಯ ಮೆರೆದರು.

ಈ ಗೆಲುವಿನೊಂದಿಗೆ ರಾಣಿ ರಾಂಪಾಲ್ ಪಡೆ ಮುಂಬರುವ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಗೆ ಅರ್ಹತೆ ಗಳಿಸಿದೆ. ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೆಲಾರಸ್ ತಂಡವನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿದ್ದ ಭಾರತದ ಆಟಗಾರ್ತಿಯರು ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ಆರಂಭ ಪಡೆಯಲು ವಿಫಲರಾದರು.[ ಚಕ್ ದೇ ಇಂಡಿಯಾ : ಭಾರತದ ವನಿತೆಯರು ಏಷ್ಯನ್ ಚಾಂಪಿಯನ್ಸ್ ]

ಬಲಿಷ್ಠ ಆಟಗಾರ್ತಿಯರ ಕಣಜ ಅನಿಸಿದ್ದ ಚಿಲಿ ತಂಡ ಐದನೇ ನಿಮಿಷದಲ್ಲೇ ಖಾತೆ ತೆರೆದು ಸುಲಭ ಗೆಲುವಿನ ಕನಸು ಕಂಡಿತ್ತು.
ಮರಿಯಾ ಮಲ್ಡೊ ನಾಡೊ ಚೆಂಡನ್ನು ಗುರಿ ಮುಟ್ಟಿಸಿ ಚಿಲಿ ಸಂಭ್ರಮಕ್ಕೆ ಕಾರಣರಾದರು.

ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿಸಿದ ಭಾರತ ತಂಡ 22ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಆದರೆ ಈ ಅವಕಾಶದಲ್ಲಿ ಭಾರತದ ಆಟಗಾರ್ತಿ ಬಾರಿಸಿದ ಚೆಂಡನ್ನು ಚಿಲಿ ತಂಡದ ಗೋಲ್ ಕೀಪರ್ ಕ್ಲಾಡಿಯಾ ಶುಲರ್ ಚೆಂಡನ್ನು ಗೋಲಿನತ್ತ ಬಿಡದೆ ತಡೆದರು.

ಹೀಗಾಗಿ 40ನೇ ನಿಮಿಷದವರೆಗೂ ಚಿಲಿ ತಂಡ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 41ನೇ ನಿಮಿಷ ದಲ್ಲಿ ಅನುಪಾ ಬಾರ್ಲಾ ಮೋಡಿ ಮಾಡಿದರು.

ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಭಾರತದ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು.

ಮೂರನೇ ಕ್ವಾರ್ಟರ್ ನ ಅಂತ್ಯಕ್ಕೆ ಪಂದ್ಯ 1-1ರಲ್ಲಿ ಸಮಬಲವಾಗಿದ್ದರಿಂದ ನಾಲ್ಕನೇ ಕ್ವಾರ್ಟರ್ ನ ಆಟ ಉಭಯ ತಂಡಗಳ ಪಾಲಿಗೂ ಮಹತ್ವದ್ದೆನಿಸಿತ್ತು.

ಈ ಕ್ವಾರ್ಟರ್ ನಲ್ಲಿ ಭಾರತದ ಸ್ಟ್ರೈಕರ್ ರಾಣಿ ಬಾರಿಸಿದ ಬ್ಯಾಕ್ ಹ್ಯಾಂಡ್ ಹೊಡೆತ ವನ್ನು ಚಿಲಿ ಗೋಲ್ಕೀಪರ್ ಕ್ಲಾಡಿಯಾ ಮನಮೋಹಕ ರೀತಿಯಲ್ಲಿ ತಡೆದು ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು.