ಮಂಗಳವಾರ, ಆಗಸ್ಟ್ 29, 2017

ಮುಖ್ಯವಾದ ಪ್ರಚಲಿತ ಮಾಹಿತಿ

🌎 *ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು ಪರೀಕ್ಷಾ ದೃಷ್ಟಿಯಿಂದ ಮಹತ್ವದೆನಿಸಿರುವದನ್ನು ಸಂಕ್ಷಿಪ್ತವಾಗಿ ಮಾತ್ರ ಇಲ್ಲಿ ಕೊಡಲಾಗಿದೆ.*

** *ರಾಷ್ಟ್ರಪತಿ(The President) :*
*ಪ್ರಮಾಣವಚನ ಭೋದಿಸುವವರು*
• *ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ಉಪರಾಷ್ಟ್ರಪತಿ*

* *ಉಪರಾಷ್ಟ್ರಪತಿ(Vice-President):*
*ಪ್ರಮಾಣವಚನ ಭೋದಿಸುವವರು*
• *ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ*

* *ಪ್ರಧಾನಮಂತ್ರಿ(Prime Minister):*
*ಪ್ರಮಾಣವಚನ* *ಭೋದಿಸುವವರು *
• *ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ*

* *ಲೋಕಸಭಾ ಸ್ಪೀಕರ್(Lok Sabha Speaker).*
*ಪ್ರಮಾಣವಚನ ಭೋದಿಸುವವರು*
• *ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ಲೋಕಸಭೆಯ ಉಪ ಸ್ಪೀಕರ್.*

* *ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha).*
*ಪ್ರಮಾಣವಚನ ಭೋದಿಸುವವರು*
• *ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ಲೋಕಸಭಾ ಸ್ಪೀಕರ್*

* *ಮುಖ್ಯ ಚುನಾವಣಾ ಆಯುಕ್ತ (Chief Election Commissioner).*
*ಪ್ರಮಾಣವಚನ ಭೋದಿಸುವವರು*
• *ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ.*

*ಅಟಾರ್ನಿ ಜನರಲ್(Attorney General).*
*ಪ್ರಮಾಣವಚನ ಭೋದಿಸುವವರು*
• *ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ*

*ಮಹಾಲೇಖಪಾಲರು (CAG- Comptroller and Auditor General).*
*ಪ್ರಮಾಣವಚನ* *ಭೋದಿಸುವವರು*
• *ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
•  *ರಾಷ್ಟ್ರಪತಿ *

*ಸಾಲಿಸಿಟರ್ ಜನರಲ್(Solicitor-General).*
*ಪ್ರಮಾಣವಚನ ಭೋದಿಸುವವರು*
• ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ* *ಸಲ್ಲಿಸುವರು *
• *ರಾಷ್ಟ್ರಪತಿ.*

*ಲೋಕಸೇವಾ ಆಯೋಗದ ಛೇರ್ಮನ್*
(Chairman, Public Service *Commission).*
* *ಪ್ರಮಾಣವಚ* *ಭೋದಿಸುವವರು *
• *ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ.*

*ಯೋಜನಾ ಆಯೋಗದ ಛೇರ್ಮನ್*
*(Chairman, Planning Commission)*
*ಪ್ರಮಾಣವಚನ ಭೋದಿಸುವವರು*
• *ರಾಷ್ಟ್ರಪತಿ*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ.*

*ಯೋಜನಾ ಆಯೋಗದ ಸದಸ್ಯರು*
*(Members, Planning Commission).*
* *ಪ್ರಮಾಣವಚನ* * *ಭೋದಿಸುವವರು *
• *ಪ್ರಧಾನಮಂತ್ರಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ಪ್ರಧಾನಮಂತ್ರಿ.*

*ಆರ್ಬಿಐ ಗವರ್ನರ್ (Governor, RBI )*
*ಪ್ರಮಾಣವಚನ ಭೋದಿಸುವವರು*
• *ರಾಷ್ಟ್ರಪತಿ.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ.*

* *ಮುಖ್ಯಮಂತ್ರಿ(Chief Minister )*
*ಪ್ರಮಾಣವಚನ ಭೋದಿಸುವವರು*
• *ರಾಜ್ಯಪಾಲರು.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
•  *ರಾಜ್ಯಪಾಲರು.*

*ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ*
*(Chief Justice of High Court).*
*ಪ್ರಮಾಣವಚನ ಭೋದಿಸುವವರು •* *ರಾಜ್ಯಪಾಲರು.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ.*

* *ಹೈಕೋರ್ಟ್ ನ ಇತರ ನ್ಯಾಯಾಧೀಶರು*
*(Other Judges of High Court ).*
*ಪ್ರಮಾಣವಚನ* *ಭೋದಿಸುವವರು*
• *ರಾಜ್ಯಪಾಲರು.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಷ್ಟ್ರಪತಿ.*

* *ಅಡ್ವೋಕೇಟ್ ಜನರಲ್(Advocate General)*
*ಪ್ರಮಾಣವಚನ ಭೋದಿಸುವವರು •* *ರಾಜ್ಯಪಾಲರು.*
*ರಾಜೀನಾಮೆ ಇವರಿಗೆ ಸಲ್ಲಿಸುವರು •ರಾಜ್ಯಪಾಲರು.*

* *ಅಕೌಂಟೆಂಟ್ ಜನರಲ್(Accountant General ).*
*ಪ್ರಮಾಣವಚನ* *ಭೋದಿಸುವವರು *
• *ರಾಜ್ಯಪಾಲರು.*
*ರಾಜೀನಾಮೆ ಇವರಿಗೆ ಸಲ್ಲಿಸುವರು*
• *ರಾಜ್ಯಪಾಲರು.*

:
☀FAO :—  ಆಹಾರ ಮತ್ತು ಕೃಷಿ ಸಂಸ್ಥೆ

●. .ವಿಸ್ತೃತ ರೂಪ :—  Food and Agriculture Organization.

●. .ಕೇಂದ್ರ ಕಾರ್ಯಾಲಯ:—  ರೋಮ್ ನ ಇಟಲಿ (Rome, Italy)

●. .ಪ್ರಸ್ತುತ ಮುಖ್ಯಸ್ಥರು:—  ಜಾಕ್ಯೂಸ್ ಡಿಯೋಫ್  (Jacques Diouf)

●. .ಸ್ಥಾಪನೆಗೊಂಡಿದ್ದು :—  1945 ರಲ್ಲಿ
☀ IAEA :—  ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗ.

●. .ವಿಸ್ತೃತ ರೂಪ:— International Atomic Energy Agency

●. .ಕೇಂದ್ರ ಕಾರ್ಯಾಲಯ:—  ಆಸ್ಟ್ರಿಯಾದ ವಿಯೆನ್ನಾ (Vienna, Austria)

●. .ಪ್ರಸ್ತುತ ಮುಖ್ಯಸ್ಥರು:—  ಮೊಹಮದ್ ಎಲ್ಬರಾಡೇ (Mohamed ElBaradei)

●. .ಸ್ಥಾಪನೆಗೊಂಡಿದ್ದು :—  1957 ರಲ್ಲಿ
☀ ICAO :—  ಅಂತರಾಷ್ಟ್ರೀಯ ನಾಗರಿಕ ಉಡ್ಡಯನ ಸಂಸ್ಥೆ

●. .ವಿಸ್ತೃತ ರೂಪ:—  International Civil Aviation Organization

●. .ಕೇಂದ್ರ ಕಾರ್ಯಾಲಯ:—  ಕೆನಡಾದ ಮಾಂಟ್ರಿಯಲ್  (Montreal, Canada)

●. .ಪ್ರಸ್ತುತ ಮುಖ್ಯಸ್ಥರು:— ರೇಮಂಡ್ ಬೆಂಜಮಿನ್ (Raymond Benjamin)

●. .ಸ್ಥಾಪನೆಗೊಂಡಿದ್ದು :—  1947 ರಲ್ಲಿ
☀ IFAD :—  ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ.

●. .ವಿಸ್ತೃತ ರೂಪ:—  International Fund for Agricultural Development

●. .ಕೇಂದ್ರ ಕಾರ್ಯಾಲಯ:—  ರೋಮ್ ನ ಇಟಲಿ (Rome, Italy)

●. .ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್. ವಾಂಝ್ (Kanayo F. Nwanze)

●. .ಸ್ಥಾಪನೆಗೊಂಡಿದ್ದು :—  1977 ರಲ್ಲಿ
☀ ILO :—  ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ.

●. .ವಿಸ್ತೃತ ರೂಪ:—  International Labour Organization

●. .ಕೇಂದ್ರ ಕಾರ್ಯಾಲಯ:—  ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)

●. .ಪ್ರಸ್ತುತ ಮುಖ್ಯಸ್ಥರು:—  ಜುವಾನ್ ಸೊಮಾವಿಯಾ  (Juan Somavía)

●. .ಸ್ಥಾಪನೆಗೊಂಡಿದ್ದು :—  1946 ರಲ್ಲಿ
☀IMO :—  ಅಂತರರಾಷ್ಟ್ರೀಯ ಸಾಗರೋತ್ತರ ಸಂಘ.

●. .ವಿಸ್ತೃತ ರೂಪ:—  International Maritime Organization

●. .ಕೇಂದ್ರ ಕಾರ್ಯಾಲಯ—:  ಲಂಡನ್, ಯುನೈಟೆಡ್ ಕಿಂಗ್ಡಮ್  (London, United Kingdom)

●. .ಪ್ರಸ್ತುತ ಮುಖ್ಯಸ್ಥರು:—  ಇಪ್ತಿಮಿಯೋಸ್ ಇ. ಮಿಟ್ರೊಪೊಲಸ್  (Efthimios E. Mitropoulos)

●. .ಸ್ಥಾಪನೆಗೊಂಡಿದ್ದು :—  1948 ರಲ್ಲಿ
☀IMF :—  ಅಂತರರಾಷ್ಟ್ರೀಯ ಹಣಕಾಸು ನಿಧಿ

●. .ವಿಸ್ತೃತ ರೂಪ:—  International Monetary Fund.

●. .ಕೇಂದ್ರ ಕಾರ್ಯಾಲಯ:—  ವಾಷಿಂಗ್ಟನ್, ಡಿ. ಸಿ (Washington, D.C, USA)

●. .ಪ್ರಸ್ತುತ ಮುಖ್ಯಸ್ಥರು:-  ಡೊಮಿನಿಕ್ ಸ್ಟ್ರಾಸ್ ಕಾಹ್ನ್ (Dominique Strauss-Kahn)

●. .ಸ್ಥಾಪನೆಗೊಂಡಿದ್ದು :—  1945 ರಲ್ಲಿ
☀ ITU :  ಅಂತರ್ರಾಷ್ಟ್ರೀಯ ದೂರಸಂಪರ್ಕ ಸಂಘ.

●. .ವಿಸ್ತೃತ ರೂಪ:— International Telecommunication Union.

●. .ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)

●. .ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ (Hamadoun Touré)

●. .ಸ್ಥಾಪನೆಗೊಂಡಿದ್ದು :—  1947 ರಲ್ಲಿ
☀ UNESCO :  ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ.

●. .ವಿಸ್ತೃತ ರೂಪ:—  United Nations Educational, Scientific and Cultural Organization

●. .ಕೇಂದ್ರ ಕಾರ್ಯಾಲಯ:—  ಪ್ಯಾರಿಸ್, ಫ್ರಾನ್ಸ್ (Paris, France)

●. .ಪ್ರಸ್ತುತ ಮುಖ್ಯಸ್ಥರು:—  ಐರಿನಾ ಬೊಕೊವ  (Irina Bokova)

●. .ಸ್ಥಾಪನೆಗೊಂಡಿದ್ದು :—  1946 ರಲ್ಲಿ
☀UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.

●. .ವಿಸ್ತೃತ ರೂಪ:—  United Nations Industrial Development Organization.

●. .ಕೇಂದ್ರ ಕಾರ್ಯಾಲಯ:—  ಆಸ್ಟ್ರಿಯಾದ ವಿಯೆನ್ನಾ (Vienna, Austria)

●. .ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ  (Kandeh Yumkella)

●. .ಸ್ಥಾಪನೆಗೊಂಡಿದ್ದು :— 1967 ರಲ್ಲಿ.
☀ UPU : ವಿಶ್ವ ಅಂಚೆ ಸಂಘ.

●. .ವಿಸ್ತೃತ ರೂಪ:—  Universal Postal Union

●. .ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland)

●. .ಪ್ರಸ್ತುತ ಮುಖ್ಯಸ್ಥರು:—  ಎಡ್ವರ್ಡ್ ದಯನ್

●. .ಸ್ಥಾಪನೆಗೊಂಡಿದ್ದು :—  1947 ರಲ್ಲಿ.
☀ WB :  ವಿಶ್ವ ಬ್ಯಾಂಕ್

●. .ವಿಸ್ತೃತ ರೂಪ:—  World Bank

●. .ಕೇಂದ್ರ ಕಾರ್ಯಾಲಯ:—  ವಾಷಿಂಗ್ಟನ್, ಡಿ. ಸಿ (Washington, D.C, USA)

●. .ಪ್ರಸ್ತುತ ಮುಖ್ಯಸ್ಥರು:—  ರಾಬರ್ಟ್ ಬಿ. ಝೋಲ್ಲಿಕ್  (Robert B. Zoellick)

●. .ಸ್ಥಾಪನೆಗೊಂಡಿದ್ದು :—  1945 ರಲ್ಲಿ.
☀ WFP:—  ವಿಶ್ವ ಆಹಾರ ಕಾರ್ಯಕ್ರಮ.

●. .ವಿಸ್ತೃತ ರೂಪ:—  World Food Programme

●. .ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy)

●. .ಪ್ರಸ್ತುತ ಮುಖ್ಯಸ್ಥರು:—  ಜೋಸೆಟ್ ಷೀರನ್ (Josette Sheeran)

●. .ಸ್ಥಾಪನೆಗೊಂಡಿದ್ದು :—  1963 ರಲ್ಲಿ.
☀ WHO :  ವಿಶ್ವ ಆರೋಗ್ಯ ಸಂಸ್ಥೆ

●. .ವಿಸ್ತೃತ ರೂಪ:—  World Health Organization

●. .ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)

●. .ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್ ಚಾನ್ (Margaret Chan)

●. .ಸ್ಥಾಪನೆಗೊಂಡಿದ್ದು :—  1948 ರಲ್ಲಿ.
☀WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ

●. .ವಿಸ್ತೃತ ರೂಪ—:  World Intellectual Property Organization

●. .ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)

●. .ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis Gurry)

●. .ಸ್ಥಾಪನೆಗೊಂಡಿದ್ದು :  1974 ರಲ್ಲಿ.
☀ WMO : ವಿಶ್ವ ಹವಾಮಾನ ಸಂಸ್ಥೆ

●. .ವಿಸ್ತೃತ ರೂಪ:  (World Meteorological Organization)

●. .ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)

●. .ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್ ಬೆಡ್

*ರಾಜ್ಯಗಳು ಅಸ್ತಿತ್ವಕ್ಕೆ ಬಂದ ದಿನ*

*೧-ಆಂದ್ರ ಪ್ರದೇಶ      ೧-೧-೧೯೫೩*

*೨-ಉತ್ತರ ಪ್ರದೇಶ ೨೬-೦೧-೧೯೫೩*

*೩-ಒರಿಸ್ಸ                  ೧೯-೮೧೯೫೩*

*೪-ಕೇರಳ.               ೧-೧೧-೧೯೫೩*

*೫-ಮಧ್ಯ ಪ್ರದೇಶ.    ೧-೧೧-೧೯೫೩*

*೬-ಅಸ್ಸಾಂ              ೧-೧೧-೧೯೫೩*

*೭-ಬಿಹಾರ.             ೧-೧೧-೧೯೫೩*

*೮-ರಾಜಸ್ಥಾನ.         ೧-೧೧-೧೯೫೩*

*೯-ಕರ್ನಾಟಕ.          ೧-೧೧-೧೯೫೬*

*೧೦-ಪಶ್ಚಿಮ ಬಂಗಾಳ೧-೧೧-೧೯೫೬*

*೧೧-ತಮಿಳುನಾಡು    ೨೬-೧೧-೧೯೫೬*

*೧೨-ಜಮ್ಮು ಕಾಶ್ಮೀರ   ೧೬-೧-೧೯೫೭*

*೧೩-ಗುಜರಾತ್          ೧-೫-೧೯೬೦*

*೧೪-ಮಹಾರಾಷ್ಟ್ರ        ೧-೫-೧೯೬೦*

*೧೫-ನಾಗಾಲ್ಯಾಂಡ್  ೧-೧೨-೧೯೬೩*

*೧೬-ಹರಿಯಾಣ.         ೧-೧೧-೧೯೬೬*

*೧೭-ಪಂಜಾಬ್          ೧-೧೧-೧೯೬೬*

*೧೮-ಹಿಮಾಚಲ ಪ್ರದೇಶ ೨೫-೧-೧೯೭೧*

*೧೯-ಮಣಿಪುರ        ೧-೧-೧-೧೯೭೨*

*೨೦-ತ್ರಿಪುರ               ೨೧-೧-೧೯೭೨*

*೨೧-ಮೇಘಾಲಯ     ೨೧-೧-೧೯೭೨*

*೨೨-ಸಿಕ್ಕಿಂ                ೨೬-೪-೧೯೭೫*

*೨೩-ಅರುಣಾಚಲ ಪ್ರದೇಶ ೨೦-೧-೧೯೮೭*

*೨೪-ಮೀಝೊರಾಂ   ೨೦-೧-೧೯೮೭*

*೨೫-ಗೋವಾ           ೩೦-೫-೧೯೮೭*

*೨೬-ಛತ್ತೀಸ್ಗಢ.        ೧-೧೧-೨೦೦೦*

*೨೭-ಉತ್ತರಖಂಡ    ೯-೧೧-೨೦೦೦*

*೨೮-ಜಾರ್ಖಂಡ್  ೧೫-೧೧-೨೦೦೦*

*೨೯-ತೆಲಂಗಾಣ       ೨-೬-೨೦೧೪*

*ಭಾರತದಲ್ಲಿ 2017 ಸೆಪ್ಟೆಂಬರ್ ನಲ್ಲಿರುವಂತೆ 29  ರಾಜ್ಯಗಳ  ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ವಿವರ*

*1) ಆಂಧ್ರಪ್ರದೇಶ*
ಮುಖ್ಯಮಂತ್ರಿ: ಎನ್. ಚಂದ್ರಬಾಬು ನಾಯ್ಡು
ರಾಜ್ಯಪಾಲ: ಇ. ಎಸ್. ಎಲ್. ನರಸಿಂಹನ್.

*2) ಅರುಣಾಚಲ ಪ್ರದೇಶ*
ಮುಖ್ಯಮಂತ್ರಿ: ಪೆಮಾ ಖಂಡು
ರಾಜ್ಯಪಾಲ: ಷಣ್ಮಖಾನಾಂದ

*3) ಅಸ್ಸಾಂ*
ಮುಖ್ಯಮಂತ್ರಿ: ಸರ್ಬಾನಂದ್ ಸೋನೆವಾಲ್
ರಾಜ್ಯಪಾಲ: ಬನ್ವಾರಿ ಲಾಲ್ ಪುರೋಹಿತ್

*4) ಬಿಹಾರ್*
ಮುಖ್ಯಮಂತ್ರಿ: ನಿತಿಶ್ ಕುಮಾರ್
ರಾಜ್ಯಪಾಲ: ರಾಮಾನಾಥ ಕೋವಿಂದ್

*5) ಛತ್ತಿಸ್ ಘಡ*
ಮುಖ್ಯಮಂತ್ರಿ: ಡಾ|| ರಾಮನ್ ಸಿಂಗ್
ರಾಜ್ಯಪಾಲ: ಶ್ರೀ ಬಾಲ್ ರಾಮ್ ಜೀ ದಾಸ್ ಟಂಡನ್

*6) ಗೋವಾ*
ಮುಖ್ಯಮಂತ್ರಿ: ಮನೋಹರ ಪಾರಿಕ್ಕಾರ್
ರಾಜ್ಯಪಾಲ: ಮೃದುಲಾ ಸಿನ್ಹಾ

*7) ಗುಜರಾತ್*
ಮುಖ್ಯಮಂತ್ರಿ: ವಿಜಯ್ ರೂಪಾನಿ
ರಾಜ್ಯಪಾಲ: ಶ್ರೀ ಓಂ ಪ್ರಕಾಶ್ ಕೋಹ್ಲಿ

*8) ಹರಿಯಾಣ*
ಮುಖ್ಯಮಂತ್ರಿ: ಮನೋಹರ್ ಲಾಲ್ ಖಟ್ಟರ್
ರಾಜ್ಯಪಾಲ: ಕಪ್ತಾನ್ ಸಿಂಗ್ ಸೋಲಂಕಿ

*9) ಹಿಮಾಚಲ ಪ್ರದೇಶ*
ಮುಖ್ಯಮಂತ್ರಿ: ವೀರಭದ್ರ ಸಿಂಗ್
ರಾಜ್ಯಪಾಲ: ಆಚಾರ್ಯ ದೇವವೃತ

*10) ಜಮ್ಮು ಮತ್ತು ಕಾಶ್ಮೀರ*
ಮುಖ್ಯಮಂತ್ರಿ: ಮೆಹಬೂಬಾ ಮುಫ್ತಿ
ರಾಜ್ಯಪಾಲ: ನರೇಂದ್ರನಾಥ ವೋರಾ

*11) ಜಾರ್ಖಂಡ್*
ಮುಖ್ಯಮಂತ್ರಿ: ರಘುಬೀರ್ ದಾಸ್
ರಾಜ್ಯಪಾಲ: ದ್ರೌಪದಿ ಮುರ್ಮಾ

*12) ಕರ್ನಾಟಕ*
ಮುಖ್ಯಮಂತ್ರಿ: ಸಿದ್ಧರಾಮಯ್ಯ
ರಾಜ್ಯಪಾಲ: ವಜುಭಾಯಿ ವಾಲಾ

*13) ಕೇರಳ*
ಮುಖ್ಯಮಂತ್ರಿ: ಪಿಣರಾಯಿ ವಿಜಯನ್
ರಾಜ್ಯಪಾಲ: ಪಿ. ಸದಾಸಿವಂ

*14) ಮಧ್ಯಪ್ರದೇಶ*
ಮುಖ್ಯಮಂತ್ರಿ: ಶಿವರಾಜ್ ಸಿಂಗ್ ಚೌಹಣ್
ರಾಜ್ಯಪಾಲ: ಓಂ ಪ್ರಕಾಶ್ ಕೋಹ್ಲಿ (ಹಂಗಾಮಿ)

*15) ಮಹಾರಾಷ್ಟ್ರ*-
ದೇವೇಂದ್ರ ಜಿ. ಫಡ್ನವಿಸ್
ರಾಜ್ಯಪಾಲ: ಸಿ. ವಿದ್ಯಾಸಾಗರ್ ರಾವ್

*16) ಮಣಿಪುರ*
ಮುಖ್ಯಮಂತ್ರಿ: ಎನ್. ಬಿರೇನ್ ಸಿಂಗ್
ರಾಜ್ಯಪಾಲ: ನಜ್ಮಾ ಹೆಪ್ತುಲ್ಲಾ

*17) ಮೇಘಾಲಯ*
ಮುಖ್ಯಮಂತ್ರಿ: ಮುಕುಲ್ ಸಂಗ್ಮಾ
ರಾಜ್ಯಪಾಲ: ಷಣ್ಮುಖನಾಥನ್

*18) ಮಿಜೋರಾಂ*
ಮುಖ್ಯಮಂತ್ರಿ: ಲಾಲ್ ಥನ್ ಹಾವ್ಲಾ
ರಾಜ್ಯಪಾಲ: ನಿರ್ಭಯ್ ಶರ್ಮಾ

*19) ನಾಗಲ್ಯಾಂಡ್*
ಮುಖ್ಯಮಂತ್ರಿ: ಟಿ. ಆರ್. ಜಿಲಿಯಾಂಗ್
ರಾಜ್ಯಪಾಲ: ಪದ್ಮನಾಭ ಬಾಲಕೃಷ್ಣ ಆಚಾರ್ಯ

*20) ಒಡಿಸ್ಸಾ*
ಮುಖ್ಯಮಂತ್ರಿ: ನವೀನ್ ಪಾಟ್ನಾಯಕ್
ರಾಜ್ಯಪಾಲ: ಎಸ್. ಸಿ. ಜಮೀರ್

*21) ಪಂಜಾಬ್*
ಮುಖ್ಯಮಂತ್ರಿ: ಕ್ಯಾಪ್ಟನ್ ಅಮರಿಂದರ್ ಸಿಂಗ್
ರಾಜ್ಯಪಾಲ: ವಿ. ಪಿ. ಸಿಂಗ್ ಬದ್ನೋರ್

*22) ರಾಜಸ್ತಾನ*
ಮುಖ್ಯಮಂತ್ರಿ: ವಸುಂಧರಾ ರಾಜೇ
ರಾಜ್ಯಪಾಲ: ಕಲ್ಯಾಣ ಸಿಂಗ್

*23) ಸಿಕ್ಕಿಂ*
ಮುಖ್ಯಮಂತ್ರಿ: ಪವನ್ ಕುಮಾರ ಚಾಮ್ಲಿಂಗ್
ರಾಜ್ಯಪಾಲ: ಶ್ರೀನಿವಾಸ ದಾದಾಸಾಹೇಬ್ ಪಾಟೀಲ್

*24) ತಮಿಳುನಾಡು*
ಮುಖ್ಯಮಂತ್ರಿ: ಇಡಪ್ಪಾಡಿ ಕೆ. ಪಳನಿ ಸ್ವಾಮಿ
ರಾಜ್ಯಪಾಲ: ಕೆ. ರೋಸಯ್ಯ

*25) ತ್ರಿಪುರಾ*
ಮುಖ್ಯಮಂತ್ರಿ: ಮಾಣಿಕ್ ಸರ್ಕಾರ್
ರಾಜ್ಯಪಾಲ: ತಾತ್ಘಟ ರಾಯ್

*26) ಉತ್ತರಾಖಂಡ್*
ಮುಖ್ಯಮಂತ್ರಿ: ತ್ರಿವೇಂದ್ರ ಸಿಂಗ್ ರಾವತ್
ರಾಜ್ಯಪಾಲ: ಡಾ|| ಕೆ. ಕೆ. ಪೌಲ್

*27) ಉತ್ತರ ಪ್ರದೇಶ*
ಮುಖ್ಯಮಂತ್ರಿ: ಯೋಗಿ ಆದಿತ್ಯನಾಥ್
ರಾಜ್ಯಪಾಲ: ಶ್ರೀ ರಾಮ್ ನಾಯ್ಕ

*28) ಪಶ್ಚಿಮ ಬಂಗಾಳ*
ಮುಖ್ಯಮಂತ್ರಿ: ಮಮತಾ ಬ್ಯಾನರ್ಜಿ
ರಾಜ್ಯಪಾಲ: ಕೇಸರಿನಾಥ ತ್ರಿಪಾಠಿ

*29) ತೆಲಂಗಾಣ*
ಮುಖ್ಯಮಂತ್ರಿ: ಕೆ. ಚಂದ್ರಶೇಖರ್ ರಾವ್
ರಾಜ್ಯಪಾಲ: ಇ. ಎಸ್. ಎಲ್. ನರಸಿಂಹನ್

ಕೆ.ಎ.ಎಸ್ ಕನ್ನಡ — 2017:
*ಅಂತರಾಷ್ಟ್ರೀಯ, ರಾಷ್ಟ್ರೀಯ, ಮತ್ತು ರಾಜ್ಯ ಪ್ರಮುಖ ಹುದ್ದೆಗಳು*

* ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ - ಅಂಟೋನಿಯೊ ಗುಟೆರಸ್ ( ಪೋರ್ಚುಗಲ್)
* ಅಂತರಾಷ್ಟ್ರೀಯ ನ್ಯಾಯಲಯದ ಅಧ್ಯಕ್ಷರು - ರೋನಿ ಅಬ್ರಹಂ (ಈಜಿಪ್ಟ್)
* ವಿಶ್ವ ಸಂಸ್ಥೆಯ ಆಹಾರ & ಕೃಷಿ ಸಂಘಟನೆ (FAO) ( ರೋಂ) ಮಹಾ ನಿರ್ದೇಶಕರು - ಜೋಸ್ ಗ್ರಾಜಿಯಾ ನೋಡಾಸಿಲ್ವ.
* ಅಂತರಾಷ್ಟ್ರೀಯ ಅಣುಶಕ್ತಿ ಒಕ್ಕೂಟ (IAEA) (ವಿಯನ್ನಾ) ಮಹಾ ನಿರ್ದೇಶಕರು - ಯುಕಿಯಾ ಅಮನೊ
* ವಿಶ್ವ ವ್ಯಾಪಾರ ಸಂಸ್ಥೆ (WTO) (ಜಿನಿವಾ) ಮಹಾನಿರ್ದೇಶಕರು - ರಾಬರ್ಟೋ ಅಜಿವಿಡೊ
* ಅಂತರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಘಟನೆ (ICAO) (ಮಾಂಟ್ರಿಯಲ್) ಮುಖ್ಯಸ್ಥರು - ರೈಮಂಡ್ ಬೆಂಜಮೀನ್
* ಅಂತರಾಷ್ಟ್ರೀಯ ಕೃಷಿ ಅಭಿವೃದ್ದಿ ನಿಧಿ (IFAD) (ರೋಂ) ಮುಖ್ಯಸ್ಥರು - ಕನಯೊ ಎಫ್ ನಾವ್ನಜ

* ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ ( ILO) (ಜಿನಿವಾ) ಮಹಾನಿರ್ದೇಶಕರು - ಗುಯೊರೈಡರ್
* ಅಂತರಾಷ್ಟ್ರೀಯ ಸಾಗರಿಕಾ ಸಂಘಟನೆ ( IMO) (ಲಂಡನ್) ಮುಖ್ಯಸ್ಥರು - ಕೋಜಿ ಸೆಕಿಮಿಜೋ
* ಅಂತರಾಷ್ಟ್ರೀಯ ಹಣಕಾಸು ನಿಧಿ ( IMF) (ವಾಷಿಂಗ್ಟನ್ ) - ಮಹಾ ನಿರ್ದೇಶಕರು - ಕ್ರಿಶ್ಚಿಯನ್ ಲಿಗಾರ್ಡೆ
* ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ITU ( ಜಿನಿವಾ) ಮಹಾ ನಿರ್ದೇಶಕರು - ಡಾ• ಹಮಾಡಯನ್ ಟೂರೆ
* ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ UNESCO ( ಪ್ಯಾರೀಸ್) ಐರಿನಾ ಬೊಕೊವಾ
* ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ದಿ ಸಂಘಟನೆ UNIDO (ವಿಯನ್ನಾ) - ಲಿ ಯಾಂಗ್
* ಸಾರ್ವತ್ರಿಕ ಅಂಚೆ ಒಕ್ಕೂಟ UPU (ಬರ್ನ್, ಸ್ವಿರ್ಜಲ್ಯಾಂಡ್) ಮುಖ್ಯಸ್ಥರು - ಬಿಷರ್ ಅಬ್ದಿರೆಹಮಾನ್ ಹುಸ್ಸೈನ್
* ವಿಶ್ವಬ್ಯಾಂಕ್ (ವಾಷಿಂಗ್ಟನ್ ಡಿಸಿ) ಮುಖ್ಯಸ್ಥರು - ಜಿಮ್ ಯಾಂಗ್ ಕಿಮ್
* ವಿಶ್ವ ಆರೋಗ್ಯ ಸಂಸ್ಥೆ WTO ಜಿನಿವಾ - ಡಾ. ತೆಡ್ರೊಸ್ ಅಧನಂ ಗ್ರಿಬಿಯೆಸೂಸ್
* ವಿಶ್ವ ಆಹಾರ ಕಾರ್ಯಕ್ರಮ WFP (ರೋಂ) ಮುಖ್ಯಸ್ಥರು - ಯರ್ ತರಿನ್ ಕುಸಿನ್
* ವಿಶ್ವ ಬೌದ್ಧಿಕ, ಸಂಪತ್ತಿನ ಸಂಘಟನೆ - ಫ್ರಾನ್ಸಿಸ್ ಗರ್ರಿ

* ಜಾಗತಿಕ ಹವಾಮಾನ ಸಂಘಟನೆ - ಮಿಜೆಲ್ ಜರೌದ್
* ವಿಶ್ವ ಪ್ರವಾಸಿ ಸಂಸ್ಥೆ - ತಾಲಿಬ್ ರಿಪೈ
* ಯುನಿಸಿಫ್ ಕಾರ್ಯನಿರ್ವಣಾಧಿಕಾರಿ - ಅಂತೋನಿ ಲಾಕೆ
* ವಿಶ್ವ ವಾಣಿಜ್ಯ & ಅಭಿವೃದ್ದಿ ಸಮ್ಮೇಳನ ಪ್ರಧಾನ ಕಾರ್ಯದರ್ಶಿ - ಡಾ. ಮುಖಿಸ ಕಿತುಯಿ
* ಆಫ್ರಿಕನ್ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರು - ಅಕಿನ್ ವುಮಿ ಅಡೆಸಿನಾ
* ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ ಅಧ್ಯಕ್ಷರು - ಥಾಮಸ್ ಬಾಚ್
* ಕಾಮನ್ ವೆಲ್ತ್ ಪ್ರಧಾನ ಕಾರ್ಯದರ್ಶಿ - ಪ್ಯಾಟ್ರಿಷಿಯಾ ಸ್ಕಾಟ್ಲ್ಯಾಂಡ್ ಆಫ್ ಅಸ್ಕಾಲ್
* ಆಫ್ರಿಕಾನ್ ಒಕ್ಕೂಟದ ಸಾಮಾನ್ಯ ಸಭೆ - ರಾಬರ್ಟ್ ಮುಗಾಬೆ
* ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು - ಶಶಾಂಕ್ ಮನೋಹರ್
* ನ್ಯಾಮ್ ನ ಕಾರ್ಯದರ್ಶಿ - ನಿಕೋಲಸ್ ಮದುರೋ
* ನ್ಯಾಟೊ ಪ್ರಧಾನ ಕಾರ್ಯದರ್ಶಿ - ಜೆನ್ಸ್ ಸ್ಟೊಲೊನ್ಮ್ ಬರ್ಗ್
* ಸಾರ್ಕ್ ಪ್ರಧಾನ ಕಾರ್ಯದರ್ಶಿ - ಅಮ್ಜಿದ್ ಹುಸೇನ್ ಬಿ ಸಹೀಲ್
* ಯು. ಎನ್. ವುಮೆನ್ಸ್ ಕಾರ್ಯ ನಿರ್ವಹಣಾಧಿಕಾರಿ - ಫುಮ್ ಜಿಲ್ ಮ್ಲ್ಯಾಂಬೊ ನಗ್

2017 ನೇ ಸಾಲಿನ ಖೇಲರತ್ನ, ದ್ರೋಣಾಚಾರ್ಯ ಪ್ರಶಸ್ತಿ

Tuesday, 29 Aug, 4.42 pm
ಸಂಜೆ ವಾಣಿ
  💐  *ಇಂದು ರಾಷ್ಟ್ರಪತಿಗಳಿಂದ ಖೇಲ್‍ರತ್ನ ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ* 💐

ನವದೆಹಲಿ, ಆ. 29- ಅಂತಾರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 17 ಕ್ರೀಡಾ ಪಟುಗಳಿಗೆ ಖೇಲ್ ರತ್ನ ಹಾಗೂ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಲಿದ್ದಾರೆ. ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಅದ್ಭುತ ಪ್ರದರ್ಶನ ತೋರಿದ ಮರಿಯಪ್ಪನ್ ಹಾಗೂ ವರುಣ್ ಸಿಂಗ್ ಬಾಟಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ಪ್ರದಾನ ಮಾಡಿ ಗೌರವಿಸಲಿದ್ದಾರೆ. 2004ರ ಅಥೆನ್ಸ್ ಗೇಮ್ಸ್ ಹಾಗೂ 2013ರ ವಿಶ್ವ ಚಾಂಪಿಯನ್ಸ್‍ಷಿಪ್‍ನ ಪ್ಯಾರಾ ಒಲಿಂಪಿಕ್ಸ್‍ನಲ್ಲಿ ನೂತನ ದಾಖಲೆ ನಿರ್ಮಿಸಿದ ದೇವಿಂದ್ರ ಜಾಜಾರಿಯಾ, ಭಾರತದ ಹಾಕಿ ತಂಡವನ್ನು ಮೇಲಸ್ತರಕ್ಕೇರಿಸಿದ ಸರ್ದಾರ್ ಸಿಂಗ್‍ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಕೋವಿಂದ್ ಇಂದು ಸನ್ಮಾನಿಸಲಿದ್ದಾರೆ.

ಇನ್ನುಳಿದಂತೆ ಜ್ಯೋತಿ ಸುರೇಖಾ ವಿನ್ನಮ್ (ಆರ್ಚರಿ), ಕುಶ್‍ಬೀರ್ ಕೌರ್ (ಅಥ್ಲೇಟಿಕ್ಸ್), ಪ್ರಶಾಂತಿ ಸಿಂಗ್ (ಬ್ಯಾಸ್ಕೆಟ್ ಬಾಲ್), ಲೇಸ್‍ರಾಮ್ ದೇವೊಂದರ್ ಸಿಂಗ್ (ಬಾಕ್ಸಿಂಗ್), ಚೇತೇಶ್ವರ್ ಪೂಜಾರ , ಹರ್ಪಿತ್‍ಕೌರ್ (ಕ್ರಿಕೆಟ್), ಒಹಿನಾಮ್ ಬಿಮ್‍ಬಿಮ್ ದೇವಿ (ಫುಟ್ಬಾಲ್), ಎಸ್‍ಎಸ್‍ಪಿ ಚವ್‍ರಾಸಿಯಾ, ಎಸ್‍ವಿ ಸುನೀಲ್ (ಹಾಕಿ), ಜಸ್‍ವೀರ್ ಸಿಂಗ್ (ಕಬ್ಬಡಿ), ಕನ್ನಡಿಗ ಪ್ರಕಾಶ್ ನಂಜಪ್ಪ ( ಶೂಟಿಂಗ್), ಆಂಟೋನಿ ಅಮಲ್‍ರಾಜ್(ಟೇಬಲ್‍ಟೆನ್ನಿಸ್),ಸನಮ್ ಸಿಂಗ್ (ಟೆನ್ನಿಸ್), ಸತ್ಯವಾರ್ಟ್ ಕದಿಯಾನ್(ಕುಸ್ತಿ) ಇವರಿಗೆ ಖೇಲ್ ರತ್ನ ಪ್ರಶಸ್ತಿ ಲಭಿಸಲಿದೆ.

🌷  *ದ್ರೋಣಾಚಾರ್ಯ ಪ್ರಶಸ್ತಿ:*

ದಿವಂಗತ ಡಾ.ಆರ್. ಗಾಂಧಿ (ಅಥ್ಲೆಟಿಕ್ಸ್), ಹೇರಾ ನಂದ್ ಕಟಾರಿಯಾ (ಕಬ್ಬಡಿ), ಜಿಎಸ್‍ಎಸ್‍ವಿ ಪ್ರಸಾದ್ (ಬ್ಯಾಡ್ಮಿಂಟನ್, ಜೀವಮಾನ ಸಾಧನೆ), ಬಿರ್ಜ್ ಭೂಷಣ್ ಮೊಹಾಂತಿ (ಬಾಕ್ಸಿಂಗ್- ಜೀವಮಾನ ಸಾಧನೆ), ಪಿ.ಎ. ರಾಪ್‍ಹಿಲ್ (ಹಾಕಿ, ಜೀವಮಾನ ಸಾಧನೆ), ಸ್ಯಾನ್‍ಜೋಯ್ ಚಕ್ರವರ್ತಿ ( ಶೂಟಿಂಗ್- ಜೀವಮಾನ ಸಾಧನೆ), ರೋಷನ್ ಲಾಲ್ (ಕುಸ್ತಿ- ಜೀವಮಾನ ಸಾಧನೆ).

  🌷 *ಧ್ಯಾನ್ ಚಂದ್*  *ಪ್ರಶಸ್ತಿ* : 

ಭುಪೆಂದರ್ ಸಿಂಗ್ (ಅಥ್ಲೆಟಿಕ್ಸ್), ಸೈಯದ್ ಸಾಹಿದ್ ಹಕ್ಕಿಮ್ (ಫುಟ್ಬಾಲ್), ಸುಮರೈ ಟೆಟೆ (ಹಾಕಿ).

ಭಾರತದ ಪ್ರಮುಖ ಕಾರ್ಯಾಚರಣೆಗಳು

ಭಾರತದ ಪ್ರಮುಖ ಕಾರ್ಯಾಚರಣೆಗಳು

Q1.ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು?
ಕಾರ್ಗಿಲ್

Q2.ಆಪರೇಷನ್ ಸೇಪಡ ಸಾಗರ?
ಕಾರ್ಗಿಲ್ ಯುದ್ಧ ದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ

Q3.ಆಪರೇಷನ್ ಭದ್ರ ಕಾರ್ಯಾಚರಣೆ?
ಕಾರ್ಗಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ

Q4.ಆಪರೇಷನ್ ಟ್ರೈಡೆಂಟ್?
1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ

Q5.ಆಪರೇಷನ್ ಬ್ಲಾಕ್ ಥಂಡರ?
1986 apr 30 ಸುವರ್ಣ ಮಂದಿರ ದ ಮೇಲೆ ದಾಳಿ

Q6.ಆಪರೇಷನ್ ಬ್ಲಾಕ್ ಟಾನ್ರಾಡೋ?
nov 26.2008. NSG ಪಡೆ ಭಯೋತ್ಪಾದಕರು ವಿರುದ್ಧ ಕೈಗೊಂಡ ಕಾರ್ಯಾಚರಣೆ

Q7.ಆಪರೇಷನ್ ನೇಪ್ಚೊನಸ್ಪಿಯರ ?
ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ

Q8.ಆಪರೇಷನ್ ರಾಹತ್?
ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ

Q9.ಆಪರೇಷನ್ ಮೇಘದೂತ?
1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು

Q10.ಆಪರೇಷನ್ ದುರ್ಯೋಧನ ?
14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೇ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ,

Q11.ಆಪರೇಷನ್ ಮದಾದ್?
ಭಾರತೀಯ ನೌಕಾಪಡೆ ತಮಿಳುನಾಡಿನಲ್ಲಿ ಸುನಾಮಿ ಉಂಟಾದಾಗ ಕೈಗೊಂಡ ಕಾರ್ಯಾಚರಣೆ

Q12.ಆಪರೇಷನ್ ಗ್ರೀನ್ ಹಂಟ್?
2009 ನಕ್ಸಲ್ ಹಾವಳಿ ನಿಯಂತ್ರಿಸಲು

Q13.ಆಪರೇಷನ್ ಕ್ಯಾಕ್ಟಸ್
1988ರಲ್ಲಿ ಭಾರತೀಯ ವಾಯುಪಡೆ & ಮಾಲ್ಡಿವ್ಸ ಸರ್ಕಾರ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ

Q14.ಆಪರೇಷನ್ ಓಶನ್ ಶಿಲ್ಡ?
2009 ರಿಂದ ನ್ಯಾಟೋ ಪಡೆ ಸೋಮಾಲಿಯಾ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ

Q15.ಆಪರೇಷನ್ ಬ್ಲೂಸ್ಟಾರ್ ?
ಸುವರ್ಣ ಮಂದಿರದ ಮೇಲಿನ ದಾಳಿ ಹತ್ತಿಕ್ಕಲು

ಸೋಮವಾರ, ಆಗಸ್ಟ್ 28, 2017

ಪಿ,ವಿ,ಸಿಂಧುಗೆ ಬೆಳ್ಳಿ

☑️ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್‌: ಪಿ.ವಿ. ಸಿಂಧುಗೆ ಬೆಳ್ಳಿ

# ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಜಪಾನಿನ ನೊಝೊಮಿ ಒಕುಹರ ವಿರುದ್ಧ ಪಿ.ವಿ. ಸಿಂಧುಗೆ ಅವರು ಸೋಲನುಭವಿಸಿದ್ದಾರೆ. ಇದರಿಂದ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

# ಒಕುಹರ ವಿರುದ್ಧದ ಪಂದ್ಯದಲ್ಲಿ ಸಿಂಧು ಅವರು 19-21, 22-20, 20-22 ಸೆಟ್‌ಗಳಿಂದ ಪರಾಭವಗೊಂಡರು. ಇದಕ್ಕೂ ಮುನ್ನ, ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯುಫಿ ವಿರುದ್ಧ 48 ನಿಮಿಷಗಳಲ್ಲಿ 21-13, 21-10 ಸೆಟ್‌ಗಳಿಂದ ಸಿಂಧು ಜಯಗಳಿಸಿದ್ದರು.

# ಸಿಂಧು ಅವರು 2013 ಮತ್ತು 2014ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.

ಭಾನುವಾರ, ಆಗಸ್ಟ್ 27, 2017

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆಗಾಗಿ ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ಆಗಿರುವ ಎಂ.ಓ.ಯು.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ವಿವಿಧ ಬ್ರಿಕ್ಸ್ ರಾಷ್ಟ್ರಗಳ ನಡುವೆ ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ (ಬ್ರಿಕ್ಸ್ –ಎ.ಆರ್.ಪಿ.) ಸ್ಥಾಪನೆಗಾಗಿ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಹಿನ್ನೆಲೆ:

2015ರ ಜುಲೈ 9ರಂದು ರಷ್ಯಾದ ಉಫಾದಲ್ಲಿ ನಡೆದ 7ನೇ ಬ್ರಿಕ್ಸ್ ಶೃಂಗಸಭೆಯ ವೇಳೆ, ಪ್ರಧಾನಮಂತ್ರಿ ಶ್ರೀ ಮೋದಿ ಅವರು ಇಡೀ ವಿಶ್ವಕ್ಕೇ ಕೊಡುಗೆಯಾಗಬಲ್ಲ ಬ್ರಿಕ್ಸ್ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಯ ಪ್ರಸ್ತಾಪ ಮಾಡಿದ್ದರು. ಈ ಕೇಂದ್ರವು ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಆಹಾರ ಭದ್ರತೆ ಒದಗಿಸಲು ಕೃಷಿಯಲ್ಲಿ ವ್ಯೂಹಾತ್ಮಕ ಸಹಕಾರವನ್ನು ಒದಗಿಸುವ ಮೂಲಕ ಸುಸ್ಥಿರ ಕೃಷಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡುವುದನ್ನು ಉತ್ತೇಜಿಸುತ್ತದೆ. 

ಬ್ರಿಕ್ಸ್ ರಾಷ್ಟ್ರಗಳಲ್ಲಿ ಸಣ್ಣ ಹಿಡುವಳಿದಾರರ ಕೃಷಿಗೆ ತಂತ್ರಜ್ಞಾನವೂ ಸೇರಿದಂತೆ ಕೃಷಿ ಸಂಶೋಧನಾ ನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವಿನ್ಯತೆ ಮತ್ತು ಸಾಮರ್ಥ್ಯವರ್ಧನೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆಗೆ ಎಂ.ಓ.ಯು.ಗೆ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಗೋವಾದಲ್ಲಿ 2016ರ ಅಕ್ಟೋಬರ್ 16ರಂದು ನಡೆದಿದ್ದ 8ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಅಂಕಿತ ಹಾಕಿದ್ದರು.

ಬ್ರಿಕ್ಸ್ –ಎ.ಆರ್.ಪಿ. ವಿಶ್ವದ ಹಸಿವು, ಅಪೌಷ್ಟಿಕತೆ, ಬಡತನ ಮತ್ತು ಅಸಮಾನತೆ ಅದರಲ್ಲೂ ರೈತರು ಮತ್ತು ರೈತೇತರರ ಆದಾಯದ ನಡುವಿನ ಅಸಮಾನತೆ ಮತ್ತು ಕೃಷಿ ವ್ಯಾಪಾರವನ್ನು ಹೆಚ್ಚಿಸುವ, ಜೈವಿಕ –ಸುರಕ್ಷತೆ ಮತ್ತು ಹವಾಮಾನ ತಾಳಿಕೊಳ್ಳುವ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ವಿಜ್ಞಾನದ ನೇತೃತ್ವದ ಕೃಷಿ ಆಧಾರಿತ ಸುಸ್ಥಿರ ಅಭಿವೃದ್ಧಿಗೆ ನೈಸರ್ಗಿಕ ಜಾಗತಿಕ ವೇದಿಕೆಯಾಗಿದೆ.
 

******

ಕರ್ನಾಟಕದಲ್ಲಿ ಪಾಸ್ ಪೋರ್ಟ್ ಕೇಂದ್ರ

ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿ “ಪಾಸ್ ಪೋರ್ಟ್ ಕೇಂದ್ರ”

ಭಾರತ ಸರಕಾರದ ವಾರ್ತಾ ಶಾಖೆ
ಬೆಂಗಳೂರು

ಬೆಂಗಳೂರು, ಜೂನ್ 19, 2017

ಪತ್ರಿಕಾ ಹೇಳಿಕೆ

ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿಪಾಸ್ ಪೋರ್ಟ್ ಕೇಂದ್ರ

ಅಂಚೆ ಕಚೇರಿಗಳ “ಪಾಸ್ ಪೋರ್ಟ್ಕೇಂದ್ರ” ಎರಡನೆ ಹಂತಕರ್ನಾಟಕಕ್ಕೆನೂತನ 7 ಕೇಂದ್ರಗಳು

 

ಕೇಂದ್ರ ವಿದೇಶಾಂಗ ವ್ಯವಹಾರಗಳಸಚಿವಾಲಯ ಮತ್ತು ಅಂಚೆ ಕಚೇರಿಇಲಾಖೆಗಳು ಜಂಟಿಯಾಗಿ ದೇಶದಾಧ್ಯಂತಖಾಲಿ ಸ್ಥಳಗಳನ್ನು ಹೊಂದಿರುವ ಮುಖ್ಯ ಅಂಚೆಕಚೇರಿಗಳು/ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಸೌಲಭ್ಯ ಪೂರೈಸುವಯೋಜನೆಯ ಎರಡನೇಯ ಹಂತದಲ್ಲಿಕರ್ನಾಟಕದ ಬಳ್ಳಾರಿ, ಬೀದರ್, ರಾಯಚೂರ್,ಶಿವಮೊಗ್ಗ, ತುಮಕೂರು, ಉಡುಪಿ, ಮತ್ತುವಿಜಾಪುರ ಸೇರಿದಂತೆ ( 7)  ಒಟ್ಟು 149 ಅಂಚೆಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರಗಳನ್ನು ದೇಶದಾಧ್ಯಂತತೆರೆಯಲಾಗುವದು.

ಪಾಸ್ ಪೋರ್ಟ್ ವಿತರಣೆ ಸಂಬಂಧಿಸಿದ ಸೇವಾ ಸೌಲಭ್ಯಗಳ ಪೂರೈಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಸೌಕರ್ಯ ಲಭ್ಯವಿರದ ಜಿಲ್ಲಾ ಕೇಂದ್ರ ಸ್ಥಳಗಳಿಗೆ ನೂತನ ಸೇವಾ ಕೇಂದ್ರಗಳನ್ನು ತೆರೆಯಲು ಜನತೆಯ ಪಾಲ್ಗೊಳ್ಳುವಿಕೆಯ ಈ ವಿಶೇಷ ಜಂಟಿ ಯೋಜನೆಯನ್ನು ಜಾರಿಗೊಳಿಸಿದೆ.

ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರ ಯೋಜನೆಯ ಮೊದಲ ಹಂತದಲ್ಲಿಒಟ್ಟು 86 ಪಿ.ಓ.ಪಿ.ಎಸ್.ಕೆ ಗಳನ್ನು ತೆರೆಯಲುವ್ಯವಸ್ಥೆಗಳನ್ನು ಮಾಡಿದ್ದು, ಇದರಲ್ಲಿ 52ಕಾರ್ಯಗತಗೊಂಡಿವೆ. ಈಗ ದೇಶದಾಧ್ಯಂತನೂತನ 149 ಕೇಂದ್ರ ತೆರೆಲಿದ್ದು, ಒಟ್ಟು 235ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರಗಳು ಸಾರ್ವಜನಿಕರ ಸೌಕರ್ಯಕ್ಕಾಗಿಲಭ್ಯವಿದೆ.

****

ಉಜ್ವಲ ಭವಿಷ್ಯದತ್ತ ಭಾರತೀಯ ಕೈಮಗ್ಗ ವಲಯ

ಉಜ್ವಲ ಭವಿಷ್ಯದತ್ತ ಭಾರತೀಯ ಕೈಮಗ್ಗ ವಲಯ

ಬಣ್ಣದೋಕುಳಿ, ಕಣ್ಣುಕೋರೈಸುವ ವಿನ್ಯಾಸ,ತಳುಕಿನ ಚಿತ್ತಾರ ಮತ್ತು ಬಳುಕುವ ನೇಯ್ಗೆ ಈವಸ್ತ್ರಗಳ ವಿಶಿಷ್ಠ ಆಕರ್ಷಣೆಯಾಗಿದೆ. ಈಶಾನ್ಯರಾಜ್ಯಗಳಿಂದಿಡಿದು ಕಾಶ್ಮೀರ-ದಕ್ಷಿಣದತುದಿಯವರೆವಿಗೂ ತಯಾರಾಗುವ ಪ್ರತೀಕೈಮಗ್ಗ ವಸ್ತ್ರಗಳಗೂ ಅದರದೇ ಆದ ವಿಶೇಷಗುಣಗಳಿವೆ. ಈ ವಿಶೇಷತೆಗಳಿಂದಲೇ ವಸ್ತ್ರಗಳು ಆಕರ್ಷಣೆ ಪಡೆದುಕೊಳ್ಳುತ್ತವೆ. ಭಾರತದಕರಕುಶಲಕಲೆಯೊಂದಿಗೆ ಕೈಮಗ್ಗಶತಮಾನಗಳಿಂದ ಮಿಳಿತಗೊಂಡಿದ್ದು, ದೇಶದ ಎಲ್ಲ ರಾಜ್ಯಗಳಲ್ಲೂ ನೆಲೆಸಿರುವ ಲಕ್ಷಾಂತರಕುಶಲಕರ್ಮಿಗಳಿಗೆ ಜೀವನೋಪಾಯಒದಗಿಸಿದೆ.

ಕ್ಷಿಪ್ರ ಬದಲಾವಣೆಯ ನಡುವೆಯೂ ಕೈಮಗ್ಗದಲ್ಲಿತೊಡಗಿಕೊಂಡಿರುವ ಕಲಾವಿದರು, ಅಸಾಧಾರಣಕೈಮಗ್ಗದ ರಚನೆಗಳನ್ನು ಸತತ ಪರಿಶ್ರಮದಿಂದಉಳಿಸಿಕೊಂಡು ಬಂದಿಲ್ಲದೆ, ತಮ್ಮ ಜ್ಞಾನ-ಕೌಶಲ್ಯವನ್ನು ಮುಂದಿನ ಪೀಳಿಗೆಗೆದಾಟಿಸುತ್ತಿದ್ದಾರೆ. ಇದು ಪ್ರತಿಯೊಬ್ಬ ಕೈಮಗ್ಗ ನೇಕಾರನ ಕನಸೂ ಆಗಿದೆ.

ಹೋಲಿಸಲಾಸಾಧ್ಯವಾದ ಗುಣಮಟ್ಟದಿಂದಭಾರತದ ಕೈಮಗ್ಗ ಪದಾರ್ಥಗಳುಜನಪ್ರಿಯವಾಗಿವೆ. ಛಾಂದೇರಿಯ ಮಸ್ಲಿನ್,ವಾರಣಾಸಿಯ ಅಂಚುಳ್ಳ ರೇಷ್ಮೆ ಸೀರೆಗಳು,ರಾಜಾಸ್ತಾನ-ಒಡಿಶಾದ ಬಣ್ಣದ ಉತ್ಪನ್ನಗಳು,ಮಚಲಿಪಟ್ಟಣದ ಚಿಂತಾಗಳೂ,ಹೈದಾರಾಬಾದ್‍ನ ಹಿಮ್ರಾಸ್, ಪಂಜಾಬ್‍ನಖೇಸ್, ಫಾರೂಖಾಬಾದ್‍ನ ಅಚ್ಚುಗಳು,ತೊಂಗಮ್‍ ಮತ್ತು ಫೀನಕ್ ಹಾಗೂ ಮಣಿಪುರ-ಅಸ್ಸಾಂನ ಬಾಟಲ್ ವಿನ್ಯಾಸ, ಮಧ್ಯಪ್ರದೇಶದಮಹೇಶ್ವರಿ ಸೀರೆಗಳು ಮತ್ತು ವಡೋದರಾದಪಾಟೋಲ ಸೀರೆಗಳು ಇವುಗಳಲ್ಲಿಪ್ರಮುಖವಾದವು.

ಜೊತೆಗೆ, ಕಾಂಚೀಪುರಂ, ಬನಾರಸ್ ಸೀರೆ,ಛತ್ತೀಸ್‍ಗಢದ ಕೋಸ, ಅಸ್ಸಾಂನ ಮೋಗಾರೇಷ್ಮೆ, ಬಂಗಾಳದ ಜಾಮ್ಧಾನಿ, ಮಧ್ಯಪ್ರದೇಶದಭಾಗಲ್‍ಪುರ್ ಮತ್ತು ಛಾಂದೇರಿ, ಓಡಿಶಾದತುಷಾರ್ ಮತ್ತು ಇಕಾತ್‍ನಂತಹ ರೇಷ್ಮೆ ವಸ್ತ್ರಗಳನ್ನು ತಯಾರಿಸುವ ಪ್ರಕ್ರಿಯೆ ಕೇವಲ ಆರ್ಥಿಕವಷ್ಟೇ ಅಲ್ಲದೇ ವಿಶೇಷ ಸಾಂಸ್ಕೃತಿಕಬಂಡವಾಳವೂ ಆಗಿದೆ.

ಹಗುರವಾಗಿದ್ದರೂ ವಿದೇಶಿ ಬಟ್ಟೆಗಳನ್ನು ಜನತೆಬಯಸುತ್ತಾರೆ. ಆದರೆ, ನಮ್ಮ ಸಾಂಪ್ರಾದಾಯಿಕವಿನ್ಯಾಸದ ವಸ್ತ್ರಗಳನ್ನು ಮದುವೆ-ಹಬ್ಬಗಳಂತಹವಿಶೇಷ ಸಂದರ್ಭಗಳಲ್ಲಿ ಉಡುವುದನ್ನುಮರೆಯುವುದಿಲ್ಲ.

ಸ್ವಾತಂತ್ರ್ಯದ ನಂತರ, ವಿದ್ಯುತ್ ಮಗ್ಗ ಮತ್ತು ಹತ್ತಿಗಿರಣಿ ಕ್ಷೇತ್ರದ ಆಕ್ರಮಣದಿಂದ ದೇಶದಸಾಂಸ್ಕøತಿಕ ಪರಂಪರೆಯಾದ ಕೈಮಗ್ಗ ಮತ್ತುನೇಕಾರರ ರಕ್ಷಣೆಗಾಗಿ ಮತ್ತು ಖಾದಿಯನ್ನುಗೌರವಿಸುವ ಗಾಂಧೀಜೀ ಅವರ ಮೌಲ್ಯವನ್ನುಕಾಪಾಡಲು ಸರ್ಕಾರ ಹಲವಾರುಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿತು.ಕೈಮಗ್ಗಗಳ (ಕರಕುಶಲ ಉತ್ಪನ್ನಗಳಿಗಾಗಿನಮೀಸಲು) ಕಾಯ್ದೆ 1985, ಅಂಚುಗಳಿರುವಸೀರೆ, ಪಂಚೆ, ಲುಂಗಿ, ಮತ್ತಿತರ ಕೈಮಗ್ಗದಉತ್ಪನ್ನಗಳನ್ನು ವರ್ಗೀಕರಿಸಿ, ವಿದ್ಯುತ್ ಮಗ್ಗಕ್ಷೇತ್ರದಿಂದ ಹೊರಗಿಟ್ಟಿತು. ಆದರೆ ಈ ಕಾಯ್ದೆತಡವಾಗಿ 8 ವರ್ಷಗಳ ನಂತರ ಜಾರಿಗೆಬಂದಾಗ, ಕಾಯ್ದೆಯಡಿ ಕೈಮಗ್ಗ ಉತ್ಪನ್ನಗಳಸಂಖ್ಯೆ ಕೇವಲ 11ಕ್ಕೆ ಇಳಿಕೆಯಾಗಿತ್ತು.ವಿದ್ಯುತ್‍ಮಗ್ಗ ವಲಯದ ವ್ಯಾಪಾರಸ್ಥರಕಾನೂನಾತ್ಮಕ ಸವಾಲು ಕಾಯ್ದೆಯ ಪಟ್ಟಿಯಲ್ಲಿನ ಕೈಮಗ್ಗ ಉತ್ಪನ್ನಗಳ ಸಂಖ್ಯೆಯನ್ನುಕಡಿತಗೊಳಿಸಿತ್ತು.

90ರ ದಶಕದಿಂದೀಚೆಗೆ ಬದಲಾದ ಗ್ರಾಹಕರಅಭಿರುಚಿ, ಬದಲಾದ ವ್ಯಾಪಾರ ಪ್ರಕ್ರಿಯೆಹಾಗೂ ಚೀಣಾದಿಂದ ಆಮದಾಗುವಸುಂಕರಹಿತ ತೆಳು ಕೆಂಪು ರೇಷ್ಮೆ (ಕ್ರೀಪ್ ರೇಷ್ಮೆ)ಭಾರತೀಯ ನೇಕಾರ ಸಮುದಾಯವನ್ನುಸಂಕಷ್ಟಕ್ಕೀಡುಮಾಡಿತು. ಕ್ರಮೇಣ ನೇಕಾರರುಕಾರ್ಮಿಕರಾದರು. ಬದಲಾದ ಕಾಲಘಟ್ಟದಲ್ಲಿ,ಜೀವನ ನಡೆಸುವುದೂ ದುಸ್ತರವಾಗಿನೇಕಾಕರರು ಆರ್ಥಿಕವಾಗಿ ಕುಸಿದರು.ಸೋಜಿಗವೆಂದರೆ, 2015ರಿಂದೀಚೆಗೆ ಗ್ರಾಹಕರಆಸಕ್ತಿ ಮತ್ತೆ ಕೈಮಗ್ಗದ ಕಡೆ ತಿರುಗಿದೆ.ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೃಷಿ ಹೊರತುಪಡಿಸಿ ಭಾರತದ ಎರಡನೇಅತಿಹೆಚ್ಚು ಕಾರ್ಮಿಕರು ತೊಡಗಿಕೊಂಡಿರುವಉದ್ಯಮ ಕೈಮಗ್ಗವಾಗಿದೆ. ವಿವಿಧಸಮುದಾಯಗಳ 43 ಲಕ್ಷ 30 ಸಾವಿರ ಮಂದಿ, 20 ಲಕ್ಷ 38 ಸಾವಿರ ಕುಟುಂಬಗಳು ಕೈಮಗ್ಗಘಟಕಗಳಲ್ಲಿ ದುಡಿಯುತ್ತಿದ್ದಾರೆ. ಇದು ದೇಶದಶೇ.15ರಷ್ಟು ಜವಳಿ ಉತ್ಪಾದನೆ ಮತ್ತು ಅಷ್ಟೇಪ್ರಮಾಣದ ರಫ್ತಿಗೆ ಕೊಡುಗೆ ನೀಡುತ್ತಿದೆ.ಜಗತ್ತಿನ ಶೇ. 95ರಷ್ಟು ಕೈಮಗ್ಗದ ಬಟ್ಟೆಭಾರತದ್ದೇ ಎಂಬುದು ಹೆಮ್ಮೆಯ ವಿಷಯ.

ನೇಕಾರರ ಹಿತದೃಷ್ಟಿಯಿಂದ, ಇತಿಹಾಸವನ್ನುಮರುಕಳಿಸುವ ಮತ್ತು ಕೈಮಗ್ಗವನ್ನು ಪ್ರಸ್ತುತಸಂದರ್ಭಕ್ಕೆ ತಕ್ಕಂತೆ ಸಜ್ಜುಗೊಳಿಸಲು ಸರ್ಕಾರಬದ್ಧವಾಗಿದೆ. 1905ರಲ್ಲೇ ಆರಂಭಿಸಲಾದಸ್ವದೇಶಿ ಚಳುವಳಿಯ ಸ್ಮರಣಾರ್ಥ ಆಗಸ್ಟ್ 7ನ್ನುಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ರಾಷ್ಟ್ರೀಯ ಕೈಮಗ್ಗದಿನವನ್ನಾಗಿ 2015ರಲ್ಲಿ ಘೋಷಿಸಿದರು. ಅವರಚುನಾವಣಾ ಸಮಯದ ಘೋಷಣೆಯಾದಕೃಷಿಯಿಂದ ನೂಲಿಗೆ, ನೂಲಿನಿಂದ ಬಟ್ಟೆ,ಬಟ್ಟೆಯಿಂದ ಸೊಬಗು, ಸೊಬಗಿನಿಂದ ವಿದೇಶಕ್ಕೆಎಂಬ ಪ್ರತಿಜ್ಞೆಗೆ ಬದ್ಧರಾಗಿದ್ದಾರೆ.

ಪ್ರಧಾನಮಂತ್ರಿ ಅವರು ಅಂದೇ, “ಇಂಡಿಯಾಹ್ಯಾಂಡ್ ಲೂಮ್” ಬ್ರಾಂಡ್, ಐಹೆಚ್‍ಬಿಗೆಚಾಲನೆ ನೀಡಿದರು. ಗ್ರಾಹಕರ ವಿಶ್ವಾಸಗಳಿಸಲುಸಾಮಾಜಿಕ ಮತ್ತು ಪರಿಸರಸ್ನೇಹಿ ವಿಷಯಗಳು ಮಾತ್ರವಲ್ಲದೇ,  ಕಚ್ಚಾವಸ್ತು, ಉತ್ಪಾದನೆ, ನೇಯ್ಗೆಮತ್ತಿತರ ಅಂಶಗಳ ಗುಣಮಟ್ಟದ ಖಾತ್ರಿಗೆಐಹೆಚ್‍ಬಿಗೆ ಚಾಲನೆ ನೀಡಲಾಯಿತು.

ಶೀಘ್ರವೇ ಸಾಮಾಜಿಕ ಜಾಲತಾಣಗಳನ್ನುತಲುಪಿದ ಐಹೆಚ್‍ಬಿ, ಗ್ರಾಹಕರನ್ನು ಅದರಲ್ಲೂವಿಶೇಷವಾಗಿ ಯುವಜನತೆಯನ್ನು ತಲುಪಿದ್ದುಬಹುದೊಡ್ಡ ಸಾಧನೆ.

2016 ಜುಲೈನಲ್ಲಿ ಜವಳಿ ಸಚಿವಾಲಯದಹೊಣೆ ಹೊತ್ತ ಸಚಿವೆ ಸ್ಮೃತಿ ಇರಾನಿ ಅವರು“ನಾನು ಕೈಮಗ್ಗದ ಬಟ್ಟೆಗಳನ್ನು ತೊಡುತ್ತೇನೆ”ಎಂದು ಘೋಷಿಸುವುದರ ಮೂಲಕ ಸ್ವತಃಮಾದರಿಯಾಗಿ ಸಾಮಾಜಿಕ ತಾಣದಲ್ಲಿಆಂದೋಲನ ಆರಂಭಿಸಿದರು.

ಕೈಮಗ್ಗಗಳನ್ನು ಪುನರುಜ್ಜೀವನಗಳಿಸಲುಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.ನೇಕಾರರ ಆದಾಯವನ್ನು ಹೆಚ್ಚಿಸುವುದರತ್ತಒತ್ತು ನೀಡಿರುವ ಸರ್ಕಾರ, ಯುವಸಮುದಾಯವನ್ನು ಈ ಉದ್ಯೋಗಕ್ಕೆಸೆಳೆಯಲು ಪ್ರಯತ್ನ ನಡೆಸಿದೆ. ಕ್ಲಸ್ಟರ್ಮಟ್ಟದಲ್ಲಿ ನೇಕಾರರ ಸಂಘಟನೆ ಮತ್ತುಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವಮೂಲಕ ಮೂಲಭೂತ ಸೌಲಭ್ಯ ನೀಡಲುಸರ್ಕಾರ ಪ್ರಯತ್ನ ನಡೆಸಿದೆ.

ಕೈಮಗ್ಗವನ್ನು ಉತ್ತೇಜಿಸಲು ಜವಳಿ ಸಚಿವರು,ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿವಿಧಮುಂಚೂಣಿ ವಿನ್ಯಾಸಕರನ್ನು ಒಂದೇವೇದಿಕೆಯಡಿ ತರುವ ವಿಶಿಷ್ಟ ಕಾರ್ಯಕ್ರಮಆಯೋಜಿಸಿದ್ದರು. ಒಂದು ಡಜನ್‍ಗೂಅಧಿಕವಾಗಿದ್ದ ಇವರನ್ನು ವಿವಿಧ ಕೈಮಗ್ಗಕ್ಲಸ್ಟರ್‍ಗಳಿಗೆ ನಿಯೋಜಿಸಿ, ಉತ್ಪನ್ನಗಳಅಭಿವೃದ್ಧಿ ಮತ್ತು ನೇಕಾರರ ಕೌಶಲ್ಯಾಭಿವೃದ್ಧಿದೃಷ್ಟಿಯಿಂದ ತರಬೇತಿ ನೀಡಲು ಉತ್ತೇಜಿಸಲಾಗಿತ್ತು.

ಇ-ವಾಣಿಜ್ಯದ ಮೂಲಕ ತಮ್ಮ ಉತ್ಪನ್ನಗಳನ್ನುಮಾರಾಟ ಮಾಡಲು ಉತ್ತೇಜನ ನೀಡುವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನೇಕಾರ ಸಮುದಾಯದ ಕುಟುಂಬಗಳವಿದ್ಯಾವಂತ ಯವಜನತೆಗೆ ಮಾರುಕಟ್ಟೆ ಮಾಹಿತಿನೀಡಿಕೆ, ಉತ್ಪಾದನೆ ಮತ್ತು ಜವಳಿಯ ನೇರಮಾರುಕಟ್ಟೆ ಪುರಸ್ಕರಿಸುವ ಮೂಲಕ ಈ ಯುವ ಸಮುದಾಯವನ್ನು ಉದ್ಯಮಶೀಲರನ್ನಾಗಿಸುವಗುರಿ ಹೊಂದಲಾಗಿದೆ. ಮಾರುಕಟ್ಟೆಯ ವಿಸ್ತರಣೆಮತ್ತು ಆದಾಯ ಹೆಚ್ಚಳ ದೃಷ್ಠಿಯಿಂದಕೈಮಗ್ಗವನ್ನು ಫ್ಯಾಷನ್ ಮತ್ತುಪ್ರವಾಸೋದ್ಯಮದೊಂದಿಗೆ ಸೇರಿಸಲಾಗುತ್ತಿದೆ.ಇದರೊಂದಿಗೆ, ವಿನ್ಯಾಸ ಅಭಿವೃದ್ಧಿ ಮತ್ತುಮಾರಾಟ ತಂತ್ರಗಳಿಗಾಗಿ ಖಾಸಗಿ ಕ್ಷೇತ್ರವನ್ನುಒಳಗೊಳ್ಳಿಸಿಕೊಳ್ಳಲಾಗುತ್ತಿದೆ.

ಎಲ್ಲಾ ರೀತಿಯ ಬಟ್ಟೆಗಳಿಗೆ ಭಾರತವನ್ನುಜಾಗತಿಕ ಕೇಂದ್ರವನ್ನಾಗಿಸುವ ಪ್ರಯತ್ನದೆಡೆಗೆಸರ್ಕಾರ ಶ್ರಮವಹಿಸುತ್ತಿದ್ದು, ಭಾರತದ ಸೀಮಿತ ಗ್ರಾಹಕರ ಬದಲಿಗೆ ಜಾಗತಿಕ ಮಾರುಕಟ್ಟೆಒದಗಿಸುವುದು ಇದರ ಉದ್ದೇಶವಾಗಿದೆ.

ನೇಕಾರರಿಗೆ ಅನುಕೂಲವಾಗುವ, ಉತ್ಪಾದನೆಹೆಚ್ಚಳಗೊಳಿಸುವ ಮತ್ತು ಗುಣಮಟ್ಟದಖಾತ್ರಿಗಾಗಿ ನೇಯ್ಗೆ ತಂತ್ರಜ್ಞಾನವನ್ನುಉನ್ನರೀಕರಣಗೊಳಿಸುವ ಪ್ರಯತ್ನಗಳುನಡೆಯುತ್ತಿವೆ. ನೇಕಾರಿಕಾ ಪರಂಪರೆಯಮುಂದುವರಿಕೆಗಾಗಿ ದೇಶಾದ್ಯಂತ ಇರುವ 9ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳುಮುಂದಿನ ತಲೆಮಾರಿಗೆ ಅನುಗುಣವಾಗಿ ವಿಶೇಷತರಬೇತಿಯನ್ನು ನೀಡಲಾಗುತ್ತಿವೆ.

ಆಧುನಿಕ ಯುಗದಲ್ಲಿ ಬದಲಾಗುತ್ತಿರುವಗ್ರಾಹಕರ ಅಗತ್ಯಕ್ಕೆ-ಅಭಿರುಚಿಗೆ ತಕ್ಕಂತೆ ದೇಶದಕೈಮಗ್ಗ ನೇಕಾರಿಕೆಯೂ ತನ್ನನ್ನು ಪ್ರತೀದಿನಸಜ್ಜುಗೊಳಿಸಿಕೊಳ್ಳುತ್ತಿದೆ. ಹಲವು ರೀತಿಯನಾವೀನ್ಯ ವಿನ್ಯಾಸಗಳು, ತೂಕದ ಸಾದಾ ಬಟ್ಟೆ(ಕೇಸ್‍ಮೆಂಟ್), ತೂಕದ ಹತ್ತಿ ಬಳಸುವಚಿತ್ರನೇಯ್ಗೆ ಮಗ್ಗದ ನೂಲು (ಜಾಕ್ವರ್ಡ್ ಮಗ್ಗ)ಮತ್ತು ರೇಷ್ಮೆ ಬಟ್ಟೆಗಳು, ಪುನರ್ಬಳಸಬಹುದಾದ ರತ್ನಗಂಬಳಿಗಳು ಇಂದಿನಬೇಡಿಕೆಯ ಕೈಮಗ್ಗ ಉತ್ಪನ್ನಗಳಾಗಿವೆ.ಕೈಮಗ್ಗಗಳು ಇಂದು ವೈವಿಧ್ಯಮಯಅಲಂಕಾರಿಕ ಗೃಹೋಪಯೋಗಿ ಹತ್ತಿ ಮತ್ತುರೇಷ್ಮೇ ಉತ್ಪನ್ನಗಳನ್ನು ನೀಡುತ್ತಿದೆ. ದೇಶದಿಂದರಫ್ತಾಗುತ್ತಿರುವ ಶೇ. 50ಕ್ಕೂ ಹೆಚ್ಚಿನಉತ್ಪನ್ನಗಳು ಗೃಹೋಪಯೋಗಿಜವಳಿಗಳಾಗಿವೆ. ಜಾಗತಿಕವಾಗಿ, ಕೈಮಗ್ಗದಬಗೆಗೆ ಸಮಾಜದ ಪ್ರಖ್ಯಾತರು ಮತ್ತುವಿನ್ಯಾಸಕಾರರು ಸಕಾರಾತ್ಮಕ ಹೇಳಿಕೆಗಳನ್ನುನೀಡುತ್ತಿದ್ದಾರೆ.

ಉತ್ಪಾದನೆಯ ವಿಕೇಂದ್ರೀಕರಣ ವ್ಯವಸ್ಥೆ ಮತ್ತು ಯಾವುದೇ ತೆರೆನಾದ ಕಲುಷಿತಉದ್ಯಮವಲ್ಲದ್ದರಿಂದ, ಕೈಮಗ್ಗ ಭವಿಷ್ಯದನೆಚ್ಚಿನ ಕ್ಷೇತ್ರವಾಗಿದೆ. ತನ್ನ ವಿಶಿಷ್ಟತೆ, ಶ್ರೀಮಂತಪರಂಪರೆಯ, ಕಡಿಮೆ ಬಂಡವಾಳ-ಉತ್ತಮ ಉತ್ಪಾದನೆ ಅನುಪಾತ, ಆವಿಷ್ಕಾರ ಮತ್ತುಪೂರೈಕೆದಾರೊಂದಿಗಿನ ಅವಶ್ಯಕತೆಗೆಹೊಂದಿಕೊಳ್ಳುವಿಕೆ ಕೈಮಗ್ಗದ ಧನಾತ್ಮಕಅಂಶಗಳಾಗಿವೆ.

***

ಲೇಖಕರು ಸ್ವತಂತ್ರ ಪತ್ರಕರ್ತ ಮತ್ತುಅಂಕಣಕಾರರಾಗಿದ್ದು, ಮುದ್ರಣ, ಆನ್‍ಲೈನ್,ರೇಡಿಯೋ ಮತ್ತು ಟೆಲಿವಿಷನ್‍ ಕ್ಷೇತ್ರಗಳಲ್ಲಿನಾಲ್ಕು ದಶಕಗಳ ಅನುಭವವಿದೆ. ಇವರುಅಭಿವೃದ್ಧಿ ವಿಷಯಗಳ ಮೇಲೆ ಬರೆಯುತ್ತಾರೆ.

ಈ ಲೇಖನದಲ್ಲಿ ವ್ಯಕ್ತಪಡಿಸಿರುವಅಭಿಪ್ರಾಯಗಳು ಲೇಖಕರದ್ದು.