ಶುಕ್ರವಾರ, ಆಗಸ್ಟ್ 30, 2019

ಅರಮನೆ ನಗರಿ ಮೈಸೂರಿನ ಜನರಿಗೆ ಸಿಹಿ ಸುದ್ದಿ; ನಗರದ 18 ವಿಶೇಷತೆಗಳಿಗೆ ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್​​

ಅರಮನೆ ನಗರಿ ಮೈಸೂರಿನ ಜನರಿಗೆ ಸಿಹಿ ಸುದ್ದಿ; ನಗರದ 18 ವಿಶೇಷತೆಗಳಿಗೆ ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್​​

LATHA CG |
AUGUST 29, 2019, 10:52 PM IST

LATHA CG

   


ಮೈಸೂರು(ಆ.29): ಸಾಂಸ್ಕೃತಿಕ ನಗರಿ, ಅರಮನೆ ನಗರಿ, ಮಲ್ಲಿಗೆ ನಗರಿ ಎಂದೇ ಪ್ರಸಿದ್ದಿ ಪಡೆದಿರುವ ಮೈಸೂರು ಅದರ ವೈಶಿಷ್ಟ್ಯಗಳಿಂದ ವಿಶೇಷತೆಗಳಿಗೆ ಭಾಜನವಾಗುತ್ತಲೇ ಇರುತ್ತದೆ. ಆ ನೆಲದ ವೈಶಿಷ್ಟ್ಯವೇ ಹಾಗೆ ಅನಿಸುತ್ತದೆ. ಮೈಸೂರಿನ 18 ವಿಶೇಷತೆಗಳಿಗೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು(ಜಿಐ-ಜಿಯಾಗ್ರಫಿಕಲ್​ ಇಂಡಿಕೇಷನ್​) ನೀಡಲು ಚಿಂತನೆ ನಡೆಸಲಾಗಿದೆ.

ರಾಜ್ಯದ ಒಟ್ಟು 42 ವಿಶೇಷತೆಗಳ ಪೈಕಿ ಮೈಸೂರಿನ 18 ವಿಶೇಷತೆಗಳಿಗೆ ಈ ಜಿಯಾಗ್ರಫಿಕಲ್​ ಇಂಡಿಕೇಷನ್​ ಸಿಗಲಿರುವುದು ಮೈಸೂರಿನ ಜನರಿಗೆ ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ. ಅಷ್ಟಕ್ಕೂ ಮೈಸೂರಿನಲ್ಲಿರುವ ಆ 18 ವಿಶೇಷತೆಗಳು ಯಾವುವು ಅಂತೀರಾ?



ಮೈಸೂರು ಸೀರೆ,

ಮೈಸೂರು ವೀಳ್ಯದೆಲೆ,


ಮೈಸೂರು ಬಾಳೆ,

ಮೈಸೂರು ಮಲ್ಲಿಗೆ,

ಮೈಸೂರು ಸ್ಯಾಂಡಲ್​ ಸೋಪು,

ಮೈಸೂರಿನ ಚಿತ್ರಕಲೆ,

ಮೈಸೂರಿನ ಗಂಧದೆಣ್ಣೆ,

ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆ,

ನಂಜನಗೂಡು ರಸಬಾಳೆ

ಮೈಸೂರು ಅಗರಬತ್ತಿ

ಮೈಸೂರು ರೋಸ್​ವುಡ್​

ಗಂಜೀಫ ಕಾರ್ಡ್ಸ್​

ಸೇರಿದಂತೆ ಒಟ್ಟು 18 ವಿಶೇಷತೆಗಳು ಜಿಯಾಗ್ರಫಿಕಲ್​ ಇಂಡಿಕೇಷನ್​ ಪಟ್ಟಿಯಲ್ಲಿ ಇವೆ.


ದಸರಾ ಸಂಭ್ರಮದಲ್ಲಿರುವ ಮೈಸೂರಿನ ಜನತೆಗೆ ಈ ವಿಷಯ ಇನ್ನೂ ಖುಷಿ ಹೆಚ್ಚಿಸುವ ಸಂಗತಿಯಾಗಿದೆ. ಮೈಸೂರು ಮಲ್ಲಿಗೆ, ಮೈಸೂರು ಸಿಲ್ಕ್​ ಸೀರೆ, ಮೈಸೂರು ಸ್ಯಾಂಡಲ್​ ಸೋಪು, ಮೈಸೂರು ವೀಳ್ಯದೆಲೆ ಸಾಕಷ್ಟು ಜನಪ್ರಿಯವಾಗಿರುವ ಉತ್ಪನ್ನಗಳು. ಹಾಗೂ ಉತ್ಪನ್ನಗಳನ್ನು ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಾರೆ. ಇವು ಅನಾದಿ ಕಾಲದಿಂದಲೂ ತಮ್ಮದೇಯಾದ ವೈಶಿಷ್ಟ್ಯವನ್ನು ಕಾಯ್ದುಕೊಂಡು ಬಂದಿವೆ.

ಜಿಯಾಗ್ರಫಿಕಲ್ ಇಂಡಿಕೇಷನ್​ ಸಿಕ್ಕಿರುವ ಸಾಕಷ್ಟು ಸರಕು-ಉತ್ಪನ್ನಗಳು ಹೆಚ್ಚಾಗಿ ಸಿಗುವುದು ಕರ್ನಾಟಕದಲ್ಲಿಯೇ. ಈಗಾಗಲೇ ಕೊಲ್ಲಾಪುರಿ ಪಾದರಕ್ಷೆಗಳು, ಕಲಬುರ್ಗಿ ತೊಗರಿ ಬೇಳೆ ಸಹ ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್​ ಪಡೆದಿವೆ.

ಭೌಗೋಳಿಕ ಹೆಗ್ಗುರುತು ಪಡೆಯುವ 18 ವಿಶೇಷ ಉತ್ಪನ್ನಗಳಿಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ. ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ