ಮಂಗಳವಾರ, ಆಗಸ್ಟ್ 27, 2019

ದೇಶದ ಮೊದಲ ಮಹಿಳಾ ಡಿಜಿಪಿ ಕಾಂಚನ್ ಭಟ್ಟಾಚಾರ್ಯ ನಿಧನ


ದೇಶದ ಮೊದಲ ಮಹಿಳಾ ಡಿಜಿಪಿ ಕಾಂಚನ್ ಭಟ್ಟಾಚಾರ್ಯ ನಿಧನ

ಡೆಹ್ರಾಡೂನ್: ಭಾರತದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ  (ಡಿಜಿಪಿ) ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ಸೋಮವಾರ ರಾತ್ರಿ ಮುಂಬೈನಲ್ಲಿ ಅನಾರೋಗ್ಯದಿಂದ ನಿಧನರಾದರು.

1973 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಭಟ್ಟಾಚಾರ್ಯ 004 ರಲ್ಲಿ ಉತ್ತರಾಖಂಡದ ಡಿಜಿಪಿಯಾಗಿ ನೇಮಕಗೊಂಡು ಇತಿಹಾಸ ನಿರ್ಮಿಸಿದ್ದರು.. ಅವರು ಅಕ್ಟೋಬರ್ 31, 2007 ರಂದು ನಿವೃತ್ತರಾದರು.

ಹಿಮಾಚಲ ಪ್ರದೇಶದಲ್ಲಿ ಜನಿಸಿದ್ದ ಇವರು ಕಿರಣ್ ಬೇಡಿ ಬಳಿಕ ದೇಶದ ಎರಡನೇ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದರು.ಅವರ ವೃತ್ತಿಜೀವನದಲ್ಲಿನ ಸಾಧನೆ ಪರಿಗಣಿಸಿ 1997ರಲ್ಲಿ ಅವರ ವಿಶೇಷ ಸೇವೆಗಾಗಿ ಪೊಲೀಸ್ ಪದಕವನ್ನು ನೀಡಲಾಗಿತ್ತು. ಅಲ್ಲದೆ ಅವರಿಗೆ ರಾಜೀವ್ ಗಾಂಧಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿತ್ತು.

ನಿವೃತ್ತಿಯ ನಂತರ, ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಹರಿದ್ವಾರ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಧುಮುಕಿದರು. ಆದರೆ,ಅವರು ಸೋಲೊಪ್ಪಬೇಕಾಯಿತು.

.ಭಟ್ಟಾಚಾರ್ಯ ಅವರ ನಿಧನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ.

"ದೇಶದ ಮೊದಲ ಮಹಿಳೆ ಡಿಜಿಪಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರ ನಿಧನದ ಬಗ್ಗೆ ತಿಳಿದು ದುಃಖಿತವಾಗಿದೆ. ಅವರು ನಿವೃತ್ತಿಯ ನಂತರ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು ಮತ್ತು ಕೊನೆಯವರೆಗೂ ದೇಶದ ಸೇವೆ ಮಾಡಲು ಬಯಸಿದ್ದರು. ಅವರ ನಿಧನ ನಾಡಿಗೆ ನಷ್ಟವಾಗಿದೆ" ಎಂದು ಎಎಪಿ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ. ಉತ್ತರಾಖಂಡ ಪೊಲೀಸರು ಟ್ವಿಟರ್ ಪೋಸ್ಟ್ ನಲ್ಲಿ ಎಂ.ಎಸ್ ಭಟ್ಟಾಚಾರ್ಯ ಅವರನ್ನು ನೆನಪಿಸಿಕೊಂಡರು.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ