ಭಾನುವಾರ, ಮಾರ್ಚ್ 26, 2017

ಮಾನವನಲ್ಲಿ ನಿರ್ನಾಳ ಗ್ರಂಥಿಗಳ ವ್ಯೂಹ


ಮಾನವನಲ್ಲಿ ನಿರ್ನಾಳ ಗ್ರಂಥಿಗಳ ವ್ಯೂಹ

1. ಪಿಟ್ಯೂಟರಿ ಗ್ರಂಥಿ

ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ.

ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.

 

ಪಿಟ್ಯೂಟರಿ ಗ್ರಂಥಿಯ ಹಾರ್ಮೋನುಗಳು :-

# ಬೆಳವಣಿಗೆಯ ಹಾರ್ಮೋನು ( ಸೊಮ್ಯಾಟೊ ಟೋಫ್ರಿಕ್ ಹಾರ್ಮೋನು -STH) : ಇದು ಭೌತಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

# ಥೈರಾಯಿಡ್ ಅನ್ನು ಚೋದಿಸುವ ಹಾರ್ಮೋನು (TSH) : ಇದು ಥೈರಾಯಿಡ್ ಗ್ರಂಥಿಯು ಹಾರ್ಮೋನನ್ನು ಸ್ರವಿಸಲು ಚೋದಿಸುತ್ತದೆ.

# ಅಡ್ರಿನೋ ಕಾರ್ಟಿಕೋ ಟ್ರೋಪಿಕ್ ಹಾರ್ಮೋನು (ACTH) ಇದು ಆಡ್ರಿನಲ್ ಗ್ರಂಥಿಗಳ ಹಾರ್ಮೋನುಗಳ ಸ್ರವಿಕೆಯನ್ನು ನಿಯಂತ್ರಿಸುತ್ತದೆ.

# ಮೆಲನೋಸೈಟ್ ಚೋದಿಸುವ ಹಾರ್ಮೋನು (MSH) : ಇದು ಚರ್ಮದಲ್ಲಿ ಮೆಲನಿನ್ ಸಂಶ್ಲೇಷಣೆಯಾಗುವುದನ್ನು ಹತೋಟಿಯಲ್ಲಿಡುತ್ತದೆ.

# ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈಯುರೆಟಿಕ್ ಹಾರ್ಮೋನನ್ನು (ADH) ಉತ್ಪತ್ತಿ ಮಾಡಿದರೆ "ಡಯಾಬಿಟಿಸ್ ಇನ್ ಸಿಪಿಡಿಸ್"ಎಂಬ ರೋಗ ಉಂಟಾಗುತ್ತದೆ.

# ಪಿಟ್ಯುಟರಿ ಗ್ರಂಥಿಯನ್ನು " ಅಂತಃಸ್ರಾವಕ ವಾದ್ಯಮೇಳದ ನಿರ್ವಾಹಕ " ಎಂದು ಕರೆಯುತ್ತಾರೆ.

 

2. ಥೈರಾಯಿಡ್ ಗ್ರಂಥಿ

ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ.

# ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.

# ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ.

# ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು "ಮಿಕ್ಸೆಡಿಮಾ" ಎಂದು ಕರೆಯುತ್ತಾರೆ.

 

3. ಪ್ಯಾರಾಥೈರಾಯಿಡ್ ಗ್ರಂಥಿಗಳು

# ಪ್ಯಾರಾಥಾರ್ಮೋನಿನ ಕಾರ್ಯ, ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಸಿಯಂನ ಪ್ರಮಾಣವನ್ನು ನಿಯಂತ್ರಿಸುವುದು.

# ಈ ಹಾರ್ಮೋನಿನ ಕೊರತೆಯಿಂದ ನೋವಿನಿಂದ ಕೂಡಿದ ಸ್ನಾಯು ಸೆಡೆತ ಕಂಡು ಬರುತ್ತದೆ. ಪ್ಯಾರಾಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅವು ಮೃದುವಾಗುತ್ತವೆ.

 

4. ಲ್ಯಾಂಗರ್ ಹಾನ್ಸ್‌ನ ಕಿರು ದ್ವೀಪಗಳು

# ಈ ಗ್ರಂಥಿಗಳು ಚಿಕ್ಕದಾಗಿದ್ದು ಮೇದೋಜೀರಕದಲ್ಲಿ ಅಡಕವಾಗಿದೆ.

# ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.

# ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಡಯಾಬಿಟಿಸ್ ರೋಗ ಉಂಟಾಗುತ್ತದೆ.

# ಇನ್ಸುಲಿನ್ ಗ್ಲೂಕೋಸ್ ಅನ್ನು ಗ್ಲೈಕೊಜನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಗ್ಲೈಕೊಜನ್ ಯಕೃತ್ ಮತ್ತು ಸ್ನಾಯುಗಳಲ್ಲಿಸಂಗ್ರಹವಾಗಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ನ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.

# ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.

# ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.

 

5. ಅಡ್ರಿನಲ್ ಗ್ರಂಥಿಗಳು

# ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ.

# ಕಾರ್ಟೆಕ್ಸ್ ಎಂಬ ಹೊರಭಾಗ ಹಾಗೂ ಮೆಡುಲ್ಲಾ ಎಂಬ ಒಳಭಾಗ ಇದೆ.

# ಕಾರ್ಟೆಕ್ಸ್ ಸ್ರವಿಸುವ ಅನೇಕ ಹಾರ್ಮೋನುಗಳಲ್ಲಿ ಕಾರ್ಟಿಸೋನ್ ಒಂದು.

# ಅಡ್ರಿನಲ್‌ " ಮೆಡುಲ್ಲಾ ಆಡ್ರಿನಲಿನ್, ಭಾರತ ಅಡ್ರಿನಲಿನ್ ಮತ್ತು ಡೊಪಮಿನ್ ಎಂಬ ಮೂರು ಹಾರ್ಮೋನುಗಳನ್ನು ಸ್ರವಿಸುತ್ತದೆ.

*****************************************

ನಿರ್ನಾಳ ಗ್ರಂಥಿಗಳ ಮೇಲೆ ಪ್ರಶ್ನೋತ್ತರಗಳು:-

1.)

ಸ್ರವಿಕೆಯ ಕಾರ್ಯವನ್ನು ಮಾಡುವ ಜೀವಕೋಶ ಸಮೂಹವನ್ನು ಏನೆಂದು ಕರೆಯುತ್ತಾರೆ?

A). ಗ್ರಂಥಿ 
B). ವೈರಸ್ 
C). ತುಕ್ಕುಜೀವಿ 
D). ಚಯಾಪಚಯ 

Correct Ans: (A) 
Description:

ಗ್ರಂಥಿ

ಸ್ರವಿಕೆಯ ಕಾರ್ಯವನ್ನು ಮಾಡುವ ಜೀವಕೋಶ ಸಮೂಹವನ್ನು ಗ್ರಂಥಿ ಎನ್ನುವರು. ಅಥವಾ ಯಾವ ಅಮಗದ ಜೀವಕೋಶಗಳು ಸ್ರವಿಕೆಯ ಕಾರ್ಯಕ್ಕಾಗಿ ವೈಶಿಷ್ಟತ್ಯೆಯನ್ನು ಪಡೆದಿದೆಯೋ ಆ ಅಂಗವನ್ನು ಗ್ರಂಥಿ ಎಂದು ಕರೆಯುತ್ತಾರೆ. ಗ್ರಂಥಿಗಳಲ್ಲಿ ಮೂರು ವಿಧಗಳಿವೆ. 1.ನಳಿಕಾ ಗ್ರಂಥಿ 2.ನಿರ್ನಾಳ ಗ್ರಂಥಿ 3.ಮಿಶ್ರ ಗ್ರಂಥಿ

2.)

ನಳಿಕಾ ಗ್ರಂಥಿಗಳಲ್ಲಿ ಅತ್ಯಂತ ದೊಡ್ಡದಾದ ಗ್ರಂಥಿ ಯಾವುದು?

A). ಕರುಳಿನ ಗ್ರಂಥಿ 
B). ಲಾಲಾರಸ ಗ್ರಂಥಿ 
C). ಪಿತ್ತಜನಕಾಂಗ 
D). ಅಶ್ರು ಗ್ರಂಥಿ 

Correct Ans: (C) 
Description:

ಪಿತ್ತಜನಕಾಂಗ

ಪಿತ್ತಜನಕಾಂಗ ಅತ್ಯಂತ ದೊಡ್ಡ ಗ್ರಂಥಿಯಾಗಿದೆ. ಇದರಿಂದ ಸ್ರವಿಕೆಯಾಗುವ ವಸ್ತುವನ್ನು ಪಿತ್ತರಸ ಅಥವಾ ಬೈಲೆ ಎಂದು ಕರೆಯುತ್ತಾರೆ. ಪಿತ್ತರಸದಲ್ಲಿ ಯಾವುದೇ ಕಿಣ್ವ ಇರುವುದಿಲ್ಲ.

3.)

ಜೀರ್ಣಕ್ರಿಯೆಗೆ ಸಹಾಯವಾಗುವ 'ಅಮೈಲೇಸ್ ಕಿಣ್ವ' ಯಾವ ಗ್ರಂಥಿಯಲ್ಲಿ ಕಂಡು ಬರುತ್ತದೆ?

A). ಅಶ್ರು ಗ್ರಂಥಿ 
B). ಲಾಲಾರಸ ಗ್ರಂಥಿ 
C). ಕರುಳಿನ ಗ್ರಂಥಿ 
D). ಪಿತ್ತಜನಕಾಂಗ 

Correct Ans: (B) 
Description:

ಲಾಲಾರಸ ಗ್ರಂಥಿ

ಲಾಲಾರಸ ಗ್ರಂಥಿ ಬಾಯಿಯ ಅಂಗಳದಲ್ಲಿ ಕಂಡುಬರುತ್ತದೆ. ಇವುಗಳ ಸಂಖ್ಯೆ 3 ಜೊತೆ. ಈ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತು ಲಾಲಾರಸ ಅಥವಾ ಸರೈವಾ. ಈ ಲಾಲಾರಸದಲ್ಲಿ ಅಮೈಲೇಸ್ ಕಿಣ್ವ ಇದ್ದು ಇದು ಜೀರ್ಣ ಕ್ರಿಯೆಗೆ ಸಹಾಯಕವಾಗಿದೆ.

4.)

ಕೆಳಗಿನ ಯಾವ ಗ್ರಂಥಿಗಳಲ್ಲಿ 'ಹೈಡ್ರೊಕ್ಲೋರಿಕ್ ಆಮ್ಲ' ಕಂಡು ಬರುತ್ತದೆ?

A). ಅಶ್ರು ಗ್ರಂಥಿ 
B). ಲಾಲಾರಸ ಗ್ರಂಥಿ 
C). ಪಿತ್ತಜನಕಾಂಗ 
D). ಜಠರ ರಸ ಗ್ರಂಥಿ 

Correct Ans: (D) 
Description:

ಜಠರ ರಸ ಗ್ರಂಥಿ

ಜಠರ ರಸ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತು ಜಠರ ರಸ. ಈ ಜಠರ ರಸದಲ್ಲಿ ಪೆಪ್ಸಿನ್ ಮತ್ತು ರೆನಿನ್ ಕಿಣ್ವಗಳು ಕಂಡು ಬರುತ್ತವೆ. ಜೊತೆಗೆ 'ಹೈಡ್ರೊಕ್ಲೋರಿಕ್' ಆಮ್ಲ ಕೂಡ ಕಂಡುಬರುತ್ತದೆ.

5.)

ಕಣ್ಣು ಗುಡ್ಡೆಯನ್ನು ತೇವದಿಂದ ಕೂಡಿರುವಂತೆ ಮಾಡುವ ಗ್ರಂಥಿ ಯಾವುದು?

A). ಕರುಳಿನ ಗ್ರಂಥಿ 
B). ಅಶ್ರು ಗ್ರಂಥಿ 
C). ಲಾಲಾರಸ ಗ್ರಂಥಿ 
D). ಜಠರ ರಸ ಗ್ರಂಥಿ 

Correct Ans: (B) 
Description:

ಅಶ್ರು ಗ್ರಂಥಿ

ಅಶ್ರು ಗ್ರಂಥಿ ಕಣ್ಣಿರನ್ನು ಸ್ರವಿಕೆ ಮಾಡುತ್ತದೆ. ಕಣ್ನೀರು ಕಣ್ಣು ಗುಡೆಯನ್ನು ತೇವದಿಂದ ಇರುವಂತೆ ನೋಡಿಕೊಳ್ಳುತ್ತದೆ. ಲಾಲಾರಸ ಮತ್ತು ಕಣ್ಣೀರಿನಲ್ಲಿ ಲೈಸೋಸೋಮ್‌ ಎಂಬ ಕಿಣ್ವಗಳಿವೆ, ಇದು ಬ್ಯಾಕ್ಟೀರಿಯಾಗಳನ್ನ ನಾಶ ಮಾಡುತ್ತದೆ.

6.)

ಯಾವ ಗ್ರಂಥಿಗಳ ವಿಧವನ್ನು 'ಅಂತಸ್ರಾವ ಗ್ರಂಥಿ' ಎಂದು ಕರೆಯುತ್ತಾರೆ?

A). ನಳಿಕಾ ಗ್ರಂಥಿ 
B). ಮಿಶ್ರ ಗ್ರಂಥಿ 
C). ನಿರ್ನಾಳ ಗ್ರಂಥಿ 
D). ಮೇಲಿನ ಯಾವುದು ಅಲ್ಲ 

Correct Ans: (C) 
Description:

ನಿರ್ನಾಳ ಗ್ರಂಥಿ

ನಿರ್ನಾಳ ಗ್ರಂಥಿಗಳಿಂಧ ಸ್ರವಿಕೆಯಾಗುವ ಹಾರ್ಮೋನುಗಳು ನೇರವಾಗಿ ರಕ್ತದೊಳಗೆ ಸ್ರವಿಕೆಯಾಗುತ್ತದೆ, ಆದ್ದರಿಂದ ನಿರ್ನಾಳ ಗ್ರಂಥಿಗಳನ್ನು 'ಅಂತಸ್ರಾವ ಗ್ರಂಥಿ' ಎಂದು ಕರೆಯುತ್ತಾರೆ.

7.)

ನಿರ್ನಾಳ ಗ್ರಂಥಿಗಳು ಸ್ರವಿಸುವ ರಾಸಾಯನಿಕ ವಸ್ತುಗಳಿಗೆ ಏನೆಂದು ಕರೆಯುತ್ತಾರೆ?

A). ಹಾರ್ಮೋನುಗಳು 
B). ಬೈಲೆ 
C). ಸಲೈವಾ 
D). ಮೇಲಿನ ಮೂರು ಸರಿ 

Correct Ans: (A) 
Description:

ಹಾರ್ಮೋನುಗಳು

ನಿರ್ನಾಳ ಗ್ರಂಥಿಗಳಿ ನಳಿಕೆಗಳನ್ನು ಹೊಂದಿರುವುದಿಲ್ಲ. ನಿರ್ನಾಳ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತುಗಳಿಗೆ 'ಹಾರ್ಮೋನುಗಳು' (ಚೋದನ) ಎಂದು ಕರೆಯುತ್ತಾರೆ. ಈ ಹಾರ್ಮೋನುಗಳು ಅಮೈನೊ ಆಮ್ಲ, ಪ್ರೊಟೀನ್ ಅಥವಾ ಸ್ಟೀರಾಯಿಲ್ಡಗಳಿಂದ ಮಾಡಲ್ಪಟ್ಟಿರುತ್ತದೆ.

8.)

'ಮಾಸ್ಟರ್ ಆಫ್ ಮಾಸ್ಟರ್ ಗ್ರಂಥಿ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?

A). ಹೈಪೋಥಲಾಮಸ್ ಗ್ರಂಥಿ 
B). ಪೀನಿಯಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಪಿಟ್ಯುಟರಿ ಗ್ರಂಥಿ 

Correct Ans: (A) 
Description:

ಹೈಪೋಥಲಾಮಸ್ ಗ್ರಂಥಿ

ಹೈಪೋಥಲಾಮಸ್ ಗ್ರಂಥಿಯು ಮೆದುಳಿನ ಭಾಗದಲ್ಲಿ ಕಂಡು ಬರುತ್ತದೆ. ಪಿಟ್ಯೂಟರಿ ಗ್ರಂಥಿಯ ಚಟುವಟಿಕೆಗಳನ್ನು ಮೆದುಳಿನ ಹೈಪೋಥಲಾಮಸ್ ಭಾಗವು ನಿಯಂತ್ರಿಸುತ್ತದೆ ಆದ್ದರಿಂದ ಇದನ್ನು 'ಮಾಸ್ಟರ್ ಆಫ್ ಮಾಸ್ಟರ್ ಗ್ರಂಥಿ ಎಂದು ಕರೆಯುತ್ತಾರೆ. ಈ ಗ್ರಂಥಿಯಿಂದ ಆಕ್ಸಿಟೋಸಿನ್ ಮತ್ತು ವೆಸೋಪ್ರೆಸ್ಸಿನ್ ಹಾರ್ಮೋನ್‌ಗಳು ಸ್ರವಿಕೆಯಾಗುತ್ತದೆ.

9.)

ಮಗುವಿನ ಜನನಕ್ಕೆ ಕಾರಣವಾಗುವ ಹಾರ್ಮೋನು ಯಾವುದು?

A). ಮೆಲಟೋನಿಕ್ 
B). ಆಕ್ಸಿಟೋಸಿನ್ 
C). ವೆಸೋಪ್ರೆಸ್ಸಿನ್ 
D). ಕಾರ್ಟಿಸೋಲ್ 

Correct Ans: (B) 
Description:

ಆಕ್ಸಿಟೋಸಿನ್

ಹೈಪೋಥಲಾಮಸ್ ಗ್ರಂಥಿಯಿಂದ ಸ್ರವಿಕೆಯಾಗಗುವ ಆಕ್ಸಿಟೋಸಿನ್ ಹಾರ್ಮೋನ್ ಮಗುವಿನ ಜನನಕ್ಕೆ ಕಾರಣವಾಗಿದೆ. ಮತ್ತು ವೆಸೋಪ್ರೆಸ್ಸಿನ್ ಹಾರ್ಮೋನ್ ದೇಹದ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ.

10.)

ಮೆಲಟೋನಿನ್ ಹಾರ್ಮೋನ್‌ ಯಾವ ಗ್ರಂಥಿಯ ಸ್ರವಿಕೆಯಾಗಿದೆ?

A). ಹೈಪೋಥಲಾಮಸ್ ಗ್ರಂಥಿ 
B). ಪಿಟ್ಯುಟರಿ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಪೀನಿಯಲ್ ಗ್ರಂಥಿ 

Correct Ans: (D) 
Description:

ಪೀನಿಯಲ್ ಗ್ರಂಥಿ

ಪೀನಿಯಲ್ ಗ್ರಂಥಿ ಎಫಿಥಲಾಮಸ್ ಭಾಗದಲ್ಲಿ ಕಂಢುಬರುತ್ತದೆ. ಪೀನಿಯಲ್ ಗ್ರಂಥಿಯಿಂದ ಸ್ರವಿಕೆಯಾಗುವ ಮೆಲಟೋನಿಕ್ ಹಾರ್ಮೋನ್ ನಿದ್ದೆ ಯನ್ನು ಉಂಟು ಮಾಡುತ್ತದೆ.

11.)

ಅತ್ಯಂತ ಚಿಕ್ಕ ಗ್ರಂಥಿ ಯಾವುದು?

A). ಪಿಟ್ಯೂಟರಿ ಗ್ರಂಥಿ 
B). ಆ್ಯಡ್ರಿನಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (A) 
Description:

ಪಿಟ್ಯೂಟರಿ ಗ್ರಂಥಿ

ಅತ್ಯಂತ ಚಿಕ್ಕ ಗ್ರಂಥಿ ಪಿಟ್ಯೂಟರಿ ಗ್ರಂಥಿ. ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ. ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.

12.)

ಮೆದುಳಿನ ಕೆಳಗೆ ಮತ್ತು ತಲೆಯ ಮಧ್ಯದಲ್ಲಿರುವ ಗ್ರಂಥಿ ಯಾವುದು?

A). ಹೈಪೋಥಲಾಮಸ್ ಗ್ರಂಥಿ 
B). ಪ್ಯಾರಾ ಥೈರಾಯಿಡ್ 
C). ಪಿಟ್ಯೂಟರಿ ಗ್ರಂಥಿ 
D). ಪೀನಿಯಲ್ ಗ್ರಂಥಿ 

Correct Ans: (C) 
Description:

ಪಿಟ್ಯೂಟರಿ ಗ್ರಂಥಿ

ಮೆದುಳಿನ ಕೆಳಗೆ ಮತ್ತು ತಲೆಯ ಮಧ್ಯದಲ್ಲಿರುವ ಗ್ರಂಥಿ ಪಿಟ್ಯೂಟರಿ ಗ್ರಂಥಿ. ಪಿಟ್ಯೂಟರಿ ಗ್ರಂಥಿ ಸ್ಫುರಿಸುವ ಹಾರ್ಮೋನುಗಳನ್ನು ದೇಹದ ಬೆಳವಣಿಗೆ, ಮೂತ್ರಪಿಂಡಗಳ ಕಾರ್ಯನಿರ್ವಹಣೆ ಮತ್ತು ಲೈಂಗಿಕ ಅಂಗಗಳ ಮೇಲೆ ಪ್ರಭಾವ ಹೊಂದಿದೆ.

13.)

ಯಾವ ಗ್ರಂಥಿಯನ್ನು 'ಅಂತಃಸಾವ್ರಕ ವಾದ್ಯಮೇಳದ ನಿರ್ವಾಹಕ' ಎಂದು ಕರೆಯುತ್ತಾರೆ?

A). ಪಿಟ್ಯೂಟರಿ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಆ್ಯಡ್ರಿನಲ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (A) 
Description:

ಪಿಟ್ಯೂಟರಿ ಗ್ರಂಥಿ

ಪಿಟ್ಯೂಟರಿ ಗ್ರಂಥಿಯನ್ನು 'ಅಂತಃಸಾವ್ರಕ ವಾದ್ಯಮೇಳದ ನಿರ್ವಾಹಕ' ಎಂದು ಕರೆಯುತ್ತಾರೆ. ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈಯುರೆಟಿಕ್ ಹಾರ್ಮೋನನ್ನು (ADH) ಉತ್ಪತ್ತಿ ಮಾಡಿದರೆ "ಡಯಾಬಿಟಿಸ್ ಇನ್ ಸಿಪಿಡಿಸ್"ಎಂಬ ರೋಗ ಉಂಟಾಗುತ್ತದೆ.

14.)

'ಗ್ರಂಥಿಗಳ ರಾಜ' ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?

A). ಹೈಪೋಥಲಾಮಸ್ ಗ್ರಂಥಿ 
B). ಪೀನಿಯಲ್ ಗ್ರಂಥಿ 
C). ಪ್ಯಾರಾ ಥೈರಾಯಿಡ್ 
D). ಪಿಟ್ಯೂಟರಿ ಗ್ರಂಥಿ 

Correct Ans: (D) 
Description:

ಪಿಟ್ಯೂಟರಿ ಗ್ರಂಥಿ

ಪಿಟ್ಯೂಟರಿ ಗ್ರಂಥಿಯಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳು ಇತರ ಗ್ರಂಥಿಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಈ ಗ್ರಂಥಿಯನ್ನು 'ಗ್ರಂಥಿಗಳ ರಾಜ' ಎಂದು ಕರೆಯುತ್ತಾರೆ.

15.)

ನಿರ್ನಾಳ ಗ್ರಂಥಿಗಳಲ್ಲಿ ದೊಡ್ಡದಾದ ಗ್ರಂಥಿ ಯಾವುದು?

A). ಥೈಮಸ್ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಹೈಪೋಥಲಾಮಸ್ ಗ್ರಂಥಿ 
D). ಪೀನಿಯಲ್ ಗ್ರಂಥಿ 

Correct Ans: (B) 
Description:

ಥೈರಾಯಿಡ್ ಗ್ರಂಥಿ

ನಿರ್ನಾಳ ಗ್ರಂಥಿಗಳಲ್ಲಿ ದೊಡ್ಡದಾದ ಗ್ರಂಥಿ ಥೈರಾಯಿಡ್ ಗ್ರಂಥಿ. ಈ ಗ್ರಂಥಿಯಿಂದ ಥೈರಾಕ್ಸಿನ್ (T4) ಮತ್ತು ಟ್ರೈಐಡೋ ಥೈರೋನಿಸ್ (T3) ಹಾರ್ಮೋನ್‌ಗಳ ಸ್ರವಿಕೆಯಾಗುತ್ತದೆ.

16.)

ಕುತ್ತಿಗೆಯ ಉಸಿರು ನಾಳದ ಮುಂದೆ ಇರುವ ಗ್ರಂಥಿ ಯಾವುದು?

A). ಪಿಟ್ಯೂಟರಿ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಆ್ಯಡ್ರಿನಲ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (B) 
Description:

ಥೈರಾಯಿಡ್ ಗ್ರಂಥಿ

ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ. ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.

17.)

ಥೈರಾಯಿಡ್ ಕೊರತೆಯಿಂದ ಬರುವ ರೋಗ ಯಾವುದು?

A). ಗಳಗಂಡ 
B). ಕಾಲಾರ 
C). ಕ್ಯಾನ್ಸರ್ 
D). ಕಾಮಾಲೆ 

Correct Ans: (A) 
Description:

ಗಳಗಂಡ

ಥೈರಾಯಿಡ್ ಕೊರತೆಯಿಂದ ಬರುವ ರೋಗ ಗಳಗಂಡ (ಗಾಯಿಟರ್). ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ. 

18.)

ಥೈರಾಕ್ಸಿನ್ ಉತ್ಪತ್ತಿ ಕಡಿಮೆಯಾಗುವ ಸ್ಥಿತಿಯನ್ನು ಏನೆಂದು ಕರೆಯುತ್ತಾರೆ?

A). ಹೈಪರ್ ಥೈರಾಡಿಸಮ್ 
B). ನಾನ್‌ಎಪಿನೆಫ್ರಿನ್ 
C). ಹೈಪೊಥೈರಾಡಿಸಮ್ 
D). ಮೇಲಿನ ಯಾವುದು ಅಲ್ಲ 

Correct Ans: (C) 
Description:

ಹೈಪೊಥೈರಾಡಿಸಮ್

ಥೈರಾಕ್ಸಿನ್ ಉತ್ಪತ್ತಿ ಕಡಿಮೆಯಾಗುವ ಸ್ಥಿತಿಯನ್ನು ಹೈಪೊಥೈರಾಡಿಸಮ್ ಎಂದು ಕರೆಯುತ್ತಾರೆ. ಇದರಿಂದ ಗಳಗಂಡ ರೋಗ, ಮೀಕ್ಸೆಡಿಮಾ ಮತ್ತು ಕ್ರೆಟಿನಿಸಮ್ ಕಾಯಿಲೆಗಳು ಬರುತ್ತವೆ. ಥೈರಾಕ್ಸಿನ್ ಉತ್ಪತ್ತಿ ಹೆಚ್ಚಾಗುವ ಸ್ಥಿತಿಯನ್ನು ಹೈಪರ್ ಥೈರಾಡಿಸಮ್ ಎಂದು ಕರೆಯುತ್ತಾರೆ.

19.)

ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಂಟಾಗುವ ಸ್ಥಿತಿ?

A). ಗಳಗಂಡ 
B). ಮೀಕ್ಸೆಡಿಮಾ 
C). ಕ್ರೆಟಿನಿಸಮ್ 
D). ಯಾವುದು ಅಲ್ಲ 

Correct Ans: (B) 
Description:

ಮೀಕ್ಸೆಡಿಮಾ

ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು "ಮಿಕ್ಸೆಡಿಮಾ" ಎಂದು ಕರೆಯುತ್ತಾರೆ.

20.)

ಮೇಧೋಜೀರಕ ಗ್ರಂಥಿಯ ಅಂತಃಸ್ರಾವಕ ಕೋಶಗಳನ್ನು ಹೀಗೆನ್ನುತ್ತಾರೆ?

A). ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು 
B). ಆ್ಯಡ್ರಿನಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (A) 
Description:

ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು

ಮೇಧೋಜೀರಕ ಗ್ರಂಥಿಯ ಅಂತಃಸ್ರಾವಕ ಕೋಶಗಳನ್ನು ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಎನ್ನುವರು. ·         ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.

21.)

ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು?

A). ಡಯಾಬಿಟಿಸ್ 
B). ಮೀಕ್ಸೆಡಿಮಾ 
C). ಕ್ರೆಟಿನಿಸಮ್ 
D). ಮಲೇರಿಯಾ 

Correct Ans: (A) 
Description:

ಡಯಾಬಿಟಿಸ್

ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಉಂಟಾಗುವ ಕಾಯಿಲೆ ಡಯಾಬಿಟಿಸ್. ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.

22.)

ಸುಪ್ರಾರೀನಲ್ ಗ್ರಂಥಿ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?

A). ಥೈಮಸ್ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಹೈಪೋಥಲಾಮಸ್ ಗ್ರಂಥಿ 
D). ಅಡ್ರಿನಲ್ ಗ್ರಂಥಿ 

Correct Ans: (D) 
Description:

ಅಡ್ರಿನಲ್ ಗ್ರಂಥಿ

ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ. ಈ ರೀತಿ ಕಂಡು ಬರುವುದಕ್ಕೆ ಸುಪ್ರಾರೀನಲ್ ಗ್ರಂಥಿ ಎಂದು ಕರೆಯುವರು.

23.)

ತುರ್ತು ಪರಿಸ್ಥಿತಿ ಹಾರ್ಮೋನ್ ಎಂದು ಹೆಸರು ಪಡೆದಿರುವ ಹಾರ್ಮೋನ್ ಯಾವುದು?

A). ಥೈರಾಕ್ಸಿನ್ ಹಾರ್ಮೋನ್ 
B). ಎಪಿನೆಫ್ರಿನ್ ಹಾರ್ಮೋನ್ 
C). ಅಲ್ಡೋಸ್ಫಿರೋನ್ ಆರ್ಮೋನ್ 
D). ಕ್ಯಾಲ್ಸಿಟೋನಿನ್ ಹಾರ್ಮೋನ್ 

Correct Ans: (B) 
Description:

ಎಪಿನೆಫ್ರಿನ್ ಹಾರ್ಮೋನ್

ಎಪಿನೆಫ್ರಿನ್ ಹಾರ್ಮೋನ್ ತುರ್ತು ಪರಿಸ್ಥಿತಿಯಲ್ಲಿ ಉಸಿರಾಟ ಕ್ರಿಯೆ ಮತ್ತು ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದನ್ನು ತುರ್ತು ಪರಿಸ್ಥಿತಿ ಹಾರ್ಮೋನ್ ಎಂದು ಕರೆಯುತ್ತಾರೆ.

24.)

ಹೃದಯದ ಪಕ್ಕದಲ್ಲಿ ಕಂಡು ಬರುವ ಗ್ರಂಥಿ ಯಾವುದು?

A). ಥೈರಾಯಿಡ್ ಗ್ರಂಥಿ 
B). ಹೈಪೋಥಲಾಮಸ್ ಗ್ರಂಥಿ 
C). ಥೈಮಸ್ ಗ್ರಂಥಿ 
D). ಅಡ್ರಿನಲ್ ಗ್ರಂಥಿ 

Correct Ans: (C) 
Description:

ಥೈಮಸ್ ಗ್ರಂಥಿ

ಹೃದಯದ ಪಕ್ಕದಲ್ಲಿ ಕಂಡು ಬರುವ ಗ್ರಂಥಿ ಥೈಮಸ್ ಗ್ರಂಥಿ. ಇದರಿಂದ ಥೈಮೋಸಿನ್ ಹಾರ್ಮೋನ್ ಮತ್ತು T-Lympocyte ಬಿಳಿ ರಕ್ತಕಣ ಉತ್ಪತ್ತಿಯಾಗುತ್ತದೆ. ಥೈಮೋಸಿನ್ ಹಾರ್ಮೋನ್ ದೇಹದ ಬೆಳವಣಿಗೆಗೆ ಕಾರಣವಾಗಿದೆ. ಮತ್ತು T-Lympocyte ಬಿಳಿ ರಕ್ತಕಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

25.)

ವೃಷಣಗಳಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳಿಗೆ ಏನೆಂದು ಕರೆಯುವರು?

A). ಈಸ್ಟ್ರೋಜನ್ 
B). ಎಪಿನೆಫ್ರಿನ್ 
C). ಕ್ಯಾಲ್ಸಿಟೋನಿನ್ 
D). ಆ್ಯಂಡ್ರೋಜನ್ 

Correct Ans: (D) 
Description:

ಆ್ಯಂಡ್ರೋಜನ್

ವೃಷಣಗಳಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳಿಗೆ ಆ್ಯಂಡ್ರೋಜನ್ ಎಂದು ಕರೆಯುವರು. ಪ್ರಮುಖವಾದ ಆ್ಯಂಡ್ರೋಜನ್ ಹಾರ್ಮೋನ್ 'ಟೆಸ್ಟೊಸ್ಮಿರಾನ್'. ಇದು ಗಂಡಿನ ಪ್ರಾಥಾಮಿಕ ಮತ್ತು ದ್ವಿತೀಯ ಲೈಂಗಿಕ ಲಕ್ಷಣಗಳಿಗೆ ಕಾರಣವಾಗಿದೆ.

26.)

ಅಂಡಾಶಯಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳಿಗೆ ಏನೆಂದು ಕರೆಯುತ್ತಾರೆ?

A). ಎಪಿನೆಫ್ರಿನ್ 
B). ಈಸ್ಟ್ರೋಜನ್ 
C). ಆ್ಯಂಡ್ರೋಜನ್ 
D). ಮೇಲಿನ ಯಾವುದು ಸರಿ ಅಲ್ಲ 

Correct Ans: (B) 
Description:

ಈಸ್ಟ್ರೋಜನ್

ಅಂಡಾಶಯಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳಿಗೆ ಈಸ್ಟ್ರೋಜನ್ ಕರೆಯುತ್ತಾರೆ. ಪ್ರಮುಖವಾದ ಈಸ್ಟ್ರೋಜನ್ ಹಾರ್ಮೋನ್ - 'ಈಸ್ಟ್ರಾಡಯಾಲ್' ಇದು ಹೆಣ್ಣಿನ ಪ್ರಾಥಾಮಿಕ ಮತ್ತು ದ್ವಿತೀಯ ಲೈಂಗಿಕ ಲಕ್ಷಣಗಳಿಗೆ ಕಾರಣವಾಗಿದೆ.

27.)

ಅಂಡಾಶಯಗಳಲ್ಲಿ ಉತ್ಪತ್ತಿಯಾಗುವ ಹಳದಿ ಬಣ್ಣದ ರಚನೆಗೆ _____ ಎನ್ನುವರು.

A). ಕಾರ್ಪಸ್ ಲೂಟಿಯಮ್ 
B). ಈಸ್ಟ್ರೋಜನ್ 
C). ಆ್ಯಂಡ್ರೋಜನ್ 
D). ಮೇಲಿನ ಎಲ್ಲವೂ ತಪ್ಪು 

Correct Ans: (A) 
Description:

ಕಾರ್ಪಸ್ ಲೂಟಿಯಮ್

ಅಂಡಾಶಯಗಳಲ್ಲಿ ಉತ್ಪತ್ತಿಯಾಗುವ ಹಳದಿ ಬಣ್ಣದ ರಚನೆಗೆ ಕಾರ್ಪಸ್ ಲೂಟಿಯಮ್ ಎನ್ನುವರು. ಇದು ಪ್ರೋಜೆಸ್ಟಿ ರಾನ್ ಹಾರ್ಮೊನ್‌ನ್ನು ಸ್ರವಿಕೆ ಮಾಡುತ್ತದೆ. ಇದು ಗರ್ಭಕೋಶದಲ್ಲಿ ಗರ್ಭಧಾರಣೆಗೆ ಬೇಕಾದ ಎಲ್ಲಾ ಬದಲಾವಣೆಯನ್ನು ಉಂಟು ಮಾಡುತ್ತದೆ.

ಶನಿವಾರ, ಮಾರ್ಚ್ 25, 2017

ವಿಶ್ವಸಂಸ್ಥೆಯ ಬಗ್ಗೆ ಮಾಹಿತಿ

🌕 ವಿಶ್ವಸಂಸ್ಥೆ 🌕

• ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ ಅಕ್ಟೋಬರ್ 24, 1945.

• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.

• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.

• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ ಒಂಬತ್ತು ವರ್ಷಗಳು.

• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.

• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.

• ಸಾರ್ಕ ಸ್ಥಾಪನೆಯಾದ ವರ್ಷ 1985.

• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).

• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.

• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.

• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.

• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಮಸ್ಥೆ : 1948
• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.

• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.

• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.

• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ.
   ಇಂಗ್ಲಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.

2. ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾವವು?
1. ಸಾಮಾನ್ಯ ಸಭೆ
2. ಭದ್ರತಾ ಸಮಿತಿ
3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ
4. ಧರ್ಮದರ್ಶಿ ಸಮಿತಿ
5. ಸಚಿವಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ

3. ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವವು?
   ಇಂಗ್ಲೆಂಡ, ಅಮೆರಿಕಾ, ರಷ್ಯಾ, ಪ್ರಾನ್ಸ್, ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು

🌕

ಸಂವಿಧಾನ ರಚನಾ ಸಭೆಯ ಸಮಿತಿಗಳು

*ಸಂವಿಧಾನದ ರಚನಾ ಸಭೆಯ ಪ್ರಮುಖ ಸಮಿತಿಗಳು*

*ಸಮಿತಿಗಳು    -   ಅಧ್ಯಕ್ಷರು*

1. ಕೇಂದ್ರ ಅಧಿಕಾರಗಳ ಸಮಿತಿ ಜವಾಹರಲಾಲ್ ನೆಹರು -
2. ಅಲ್ಪಸಂಖ್ಯಾತರ ಮತ್ತು ಮೂಲಭೂತ ಹಕ್ಕುಗಳ ಸಮಿತಿ - ಸರ್ದಾರ ವಲ್ಲಭಭಾಯ್ ಪಟೇಲ್
3. ಪ್ರಾಂತೀಯ ಸಂವಿಧಾನ ಸಮಿತಿ ಸರ್ದಾರ - ವಲ್ಲಭಭಾಯ್ ಪಟೇಲ್
4. ಕೇಂದ್ರ ಸಂವಿಧಾನ ಸಮಿತಿ -ಜವಾಹರ ಲಾಲ್ ನೆಹರು
5. ಸ್ಪೀರಿಂಗ್ ಸಮಿತಿ - ಕೆ.ಎಂ.ಮುನ್ಸಿ
6. ಕರಡು ಸಮಿತಿ - ಡಾ.ಬಿ.ಆರ್.ಅಂಬೇಡ್ಕರ್
7. ಬಾವುಟ ಸಮಿತಿ - ಜೆ.ಬಿ.ಕೃಪಾಲಿನಿ
8. ಕಾರ್ಯ ವಿಧಾನ ನಿಯಮಗಳ ಸಮಿತಿ - ಡಾ. ರಾಜೇಂದ್ರ ಪ್ರಸಾದ್

ಪ್ರಪಂಚದ ಅದ್ಭುತಗಳು

*ಪ್ರಪಂಚದ_ಏಳು_ಅದ್ಭುತಗಳು_ಮತ್ತು_ನವೀನ_ಏಳು_ಅದ್ಭುತಗಳು*

*ಪ್ರಾಚೀನ ಯುಗದ ಏಳು ಅದ್ಭುತಗಳು*

*ಕ್ರಮಸಂಖ್ಯೆ - #ಪ್ರಾಚೀನ ಕಾಲದ ಏಳು ಅದ್ಭುತಗಳು*

1  ಬ್ಯಾಬಿಲೋನಿಯದ ತೂಗು ಉದ್ಯಾನ
2  ಇಪೆಸಸ್ ನ ಅರ್ಟೆಮಿಸ್ ದೇವಸ್ಥಾನ
3  ಒಲಿಂಪಿಯಾದ ಜ್ಯೂಸ್ ದೇವನ ಮೂರ್ತಿ
4  ಈಜಿಪ್ಟಿನ ಪಿರಮಿಡ್ಡುಗಳು
5 ಹಾಲಿಕಾರ್ನಸಸ್ ನ ಮೌಸೋಲಸ್ ಗೋಪುರ.
6 ರೋಡ್ಸ್ ನ ಕೋಲೋಸಸ್
7 ಅಲೆಕ್ಜಾಂಡ್ರಿಯಾದ ದ್ವೀಪ ಸ್ತಂಭ

*ಮಧ್ಯ ಯುಗದ ಏಳು ಅದ್ಭುತಗಳು*

*ಕ್ರ.ಸಂ - #ಮಧ್ಯ ಯುಗದ ಏಳು ಅದ್ಭುತಗಳು*

1  ರೋಮನ್ ಕೋಲಾಸೆಯುಮ್
2  ಚೀನಾದ ಮಹಾಗೋಡೆ
3  ನಾಕಿಂಗ್ ನ ಪೋರ್ಸೆಲಿಯನ್ ಗೋಪುರ
4  ಅಲೆಕ್ಜಾಂಡ್ರಿಯಾದ ಗುಹೆ
5 ಸೇಂಟ್ ಸೋಫಿಯಾ ಮಸೀದಿ
6  ಇಂಗ್ಲೆಂಡಿನ ಸ್ಟೋನ್ ಹೆಂಜ್
7 ಪೀಸಾದ ವಾಲು ಗೋಪುರ
  ನವೀನ ಯುಗದ ಏಳು ಅದ್ಭುತಗಳು

*ಕ್ರ.ಸಂಖ್ಯೆ   - #ಅದ್ಭುತಗಳು  - #ದೇಶ*

1  ಐಪೆಲ್ ಟಾವರ್  ಪ್ಯಾರಿಸ್ (ಫ್ರಾನ್ಸ್)
2  ಈಜಿಪ್ಟನ ಪಿರಮಿಡ್ಡುಗಳು  ಈಜಿಪ್ಟ್
3  ತಾಜ್ ಮಹಾಲ್  ಆಗ್ರಾ (ಭಾರತ)
4  ಎಂಪೈರ್ ಸ್ಟೇಟ್ ಬಿಲ್ಡಿಂಗ್  ನ್ಯೂಯಾರ್ಕ್ (ಯು.ಎಸ್.ಎ)
5  ಹಗಿಯಾ, ಸೋಫಿಯಾ  ಇಸ್ತಾಂಬುಲ್ (ಟರ್ಕಿ)
6 ಪೀಸಾದ ವಾಲುಗೋಪುರ  ಇಟಲಿ
7 ವಾಷಿಂಗ್‌ಟನ್ ಪ್ರತಿಮೆ  ವಾಷಿಂಗ್‌ಟನ್ ಡಿಸಿ (ಯು.ಎಸ್.ಎ)

ಭಾರತದಲ್ಲಿರುವ ಪ್ರಮುಖ ಗಿರಿಧಾಮಗಳ ಎತ್ತರ

*ಭಾರತದಲ್ಲಿರುವ_ಪ್ರಮುಖ_ಗಿರಿಧಾಮಗಳು*

*ಗಿರಿಧಾಮ -  #ಎತ್ತರ ಸಮುದ್ರ ಮಟ್ಟದಿಂದ - #ರಾಜ್ಯ*

🔰ಗುಲರ್ಬೆಗಾ - 2550mts - ಜಮ್ಮು & ಕಾಶ್ಮೀರ
🔰ಊಟಿ  -2290 mts -ತಮಿಳುನಾಡು
🔰ಶಿಮ್ಲಾ - 2210mts -ಹಿಮಾಚಲ ಪ್ರದೇಶ
🔰ಪಹಲಗಾಮ್ -2200 mts-ಜಮ್ಮು & ಕಾಶ್ಮೀರ
🔰ಡಾರ್ಜಲಿಂಗ್ -2135 mts-ಪಶ್ಚಿಮ ಬಂಗಾಲ
🔰ಕೊಡೈಕೆನಾಲ್ - 2120 mts- ತಮಿಳುನಾಡು
🔰ಲಾನ್ಸ್ ಡೌನೆ - 2120 mts-ಉತ್ತರಾಖಾಂಡ
🔰ಡಾಲ್ ಹೌಸಿ - 2035 mts- ಹಿಮಾಚಲ ಪ್ರದೇಶ
🔰ಮಸ್ಸೂರಿ -2006mts  -ಉತ್ತರಾಖಂಡ
🔰ಮುಕ್ತೇಶ್ವರ -1975mts- ಉತ್ತರಾಖಂಡ
🔰ನೈನಿತಾಲ್ - 1940  mts-ಉತ್ತರಾಖಂಡ
🔰ಕಸೌಲಿ - 1895 mts-ಹಿಮಾಚಲ ಪ್ರದೇಶ
🔰ಕೂನೂರ -1860  mts-ತಮಿಳುನಾಡು
🔰ಗ್ಯಾಂಗ್ ಟಕ್  -1850 mts- ಸಿಕ್ಕಿಂ
🔰ಮನಾಲಿ - 1830  mts- ಹಿಮಾಚಲ ಪ್ರದೇಶ

ಉಪರಾಷ್ಟ್ರಪತಿಗಳ ಬಗ್ಗೆ ಮಾಹಿತಿ

*ಉಪರಾಷ್ಟ್ರಪತಿಗಳು*

🔑ಭಾರತ ಸಂವಿಧಾನದ 63 ನೇ ವಿಧಿಯನ್ವಯ ಉಪರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರಪತಿಯವರ ಗೈರು ಹಾಜರಿಯಲ್ಲಿ ಉಪರಾಷ್ಟ್ರಪತಿ ಕಾರ್ಯ ನಿರ್ವಹಿಸುವರು. 66 ನೇ ವಿಧಿಯನ್ವಯ ಉಪರಾಷ್ಟ್ರಪತಿಯ ಚುನಾವಣೆಯಲ್ಲಿನ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರು ಪಾಲ್ಗೊಳ್ಳುವರು. ಸಂವಿಧಾನವು 64 ನೇ ಅನುಚ್ಚೇದದ ಪ್ರಕಾರ ಉಪರಾಷ್ಟ್ರಪತಿಯವರು ತಮ್ಮ ಪದವಿ ನಿಮಿತ್ತವಾಗಿ ರಾಜ್ಯಸಭೆಯ ಸಭಾಪತಿಯಾಗಿರುತ್ತಾರೆ.

🔑ರಾಷ್ಟ್ರಪತಿಯವರ ಅಧಿಕಾರಗಳನ್ನು ಉಪರಾಷ್ಟ್ರಪತಿಯವರು ನಿರ್ವಹಿಸಲು ಸಂವಿಧಾನದ ಅನುಚ್ಚೇದ 65 ರಲ್ಲಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರಪತಿಯವರ ಮರಣ, ಅನಾರೋಗ್ಯ, ರಾಜೀನಾಮೆ, ಗೈರುಹಾಜರಿ, ಕಾರ್ಯನಿರ್ವಹಿಸಲು ಅಸಮರ್ಥರಾದಾಗ, ತೆಗೆದುಹಾಕುವಿಕೆ ಅಥವಾ ಬೇರಾವುದೇ ಕಾರಣಕ್ಕಾಗಿ ರಾಷ್ಟ್ರಪತಿಯವರ ಹುದ್ದೆ ಖಾಲಿಯಾದಾಗ ಹೊಸ ರಾಷ್ಟ್ರಪತಿಯವರ ಚುನಾವಣೆಯಾಗುವ ದಿನಾಂಕದವರೆಗೆ ಉಪರಾಷ್ಟ್ರಪತಿಯವರು ಕಾರ್ಯಗಳನ್ನು ನಿರ್ವಹಿಸುತ್ತಾರೆ.

*ಅರ್ಹತೆಗಳು:-*

#ಕನಿಷ್ಠ 35 ವರ್ಷ ವಯಸ್ಸಾಗಿರಭೇಕು.

#ಭಾರತೀಯ ಪ್ರಜೆಯಾಗಿರಬೇಕು.

#ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು.

#ಹುಚ್ಚ ಅಥವಾ ದಿವಾಳಿಕೋರನಾಗಿರಬಾರದು.

#ಯಾವುದೇ ಕ್ರಿಮಿನಲ್ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಯಾಗಿರಬಾರದು.

#ಸಂಸತ್ತಿನಲ್ಲಿ ಅಥವಾ ಯಾವುದೇ ರಾಜ್ಯ ಶಾಸಕಾಂಗದ ಸದಸ್ಯನಾಗಿರಬಾರದು. ಒಂದು ವೇಳೆ ಆಗಿದ್ದರೆ ಅದನ್ನು ರಾಜೀನಾಮೆ ಮೂಲಕ ಖಾಲಿ ಮಾಡಬೇಕು.

*ಉಪರಾಷ್ಟ್ರಪತಿಯ_ಆಡಳಿತಾವಧಿ:*

#ಉಪರಾಷ್ಟ್ರಪತಿಯ ಅಧಿಕಾರವಧಿ 5 ವರ್ಷಗಳು ಆಗಿರುತ್ತವೆ.

#ಅವಧಿಯ ಮುನ್ನವೇ ರಾಷ್ಟ್ರಪತಿಗೆ ರಾಜೀನಾಮೆ ಪತ್ರವನ್ನು ನೀಡಬಹುದಾಗಿದೆ.

#ಇವರ ಅಧಿಕಾರ ಅವಧಿ ಪೂರ್ಣಗೊಂಡರೂ ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳುವವರೆಗೆ ಅಧಿಕಾರದಲ್ಲಿರುತ್ತಾರೆ.

#ಉಪರಾಷ್ಟ್ರತಿಗಳಿಗೆ ರಾಷ್ಟ್ರಪತಿಗಳು ಪ್ರಮಾಣವಚನ ಬೋಧಿಸುತ್ತಾರೆ.

*ರಾಜೀನಾಮೆ:-*

#ರಾಜ್ಯಸಭೆಯ ಸದಸ್ಯರು ಅಂಗೀಕರಿಸಿದ ನಿರ್ಣಯದ ಮೂಲಕ ಲೋಕಸಭೆಯ ಒಪ್ಪಿಗೆ ಮೇರೆಗೆ ರಾಷ್ಟ್ರಪತಿಯವರು ವಜಾ ಮಾಡಬಹುದು.

#ರಾಷ್ಟ್ರಪತಿಯವರ ಸ್ಥಾನ ಖಾಲಿ ಇರುವಾಗ ಅಂದರೇ ಆಕಸ್ಮಿಕ ಮರಣ ಉಂಟಾದಾಗ, ದೋಷಾರೋಪಣೆಯ ಮೇಲೆ ಅಧಿಕಾರದಿಂದ ಹೊರಬಂದರೆ ಅಂತಹ ಸ್ಥಿತಿಯಲ್ಲಿ ಉಪರಾಷ್ಟ್ರಪತಿಯವರು ಹಂಗಾಮಿ ರಾಷ್ಟ್ರಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

*ಉಪರಾಷ್ಟ್ರಪತಿಯ_ಕಾರ್ಯಗಳು*

#ಉಪರಾಷ್ಟ್ರಪತಿಯ ಹುದ್ದೆಯ ಕುರಿತು ಸಂವಿಧಾನದ 64-65 ನೇ ವಿಧಿಗಳು ವಿವರಿಸುತ್ತವೆ.

#ರಾಜ್ಯಸಭೆಯ ಸದಸ್ಯರಾಗಿದ್ದೂ ಸಹ ಇವರು ಈ ಸಭೆಯ ಪದನಿಮಿತ್ತ ಸಭಾಧ್ಯಕ್ಷರಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಲ್ಲಿನ ಕಾರ್ಯಕಲಾಪಗಳು ವಿಧಿಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಇವರದಾಗಿದೆ.

#ರಾಷ್ಟ್ರಪತಿ ಇಲ್ಲದಿರುವಾಗ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಬಹುದು.

*ಭಾರತದ_ಉಪರಾಷ್ಟ್ರಪತಿಗಳು*

#ಹೆಸರು    - #ಕಾಲಾವಧಿ

👍ಡಾ. ಎಸ್ ರಾಧಾಕೃಷ್ಣನ್ : 1952 - 62
👍ಡಾ. ಜಾಕಿರ್ ಹುಸೇನ್ : 1962 - 67
👍ವಿ.ವಿ. ಗಿರಿ : 1967 - 69
👍ಜಿ.ಎಸ್ ಪಾಠಕ್  : 1969 - 74
👍ಬಿ.ಡಿ. ಜತ್ತಿ  : 1974 - 79
👍ಎಂ. ಹಿದಾಯತುಲ್ಲಾ : 1979 - 84
👍ಆರ್. ವೆಂಕಟರಾಮನ್  : 1984 - 87
👍ಶಂಕರ್ ದಯಾಳ್ ಶರ್ಮಾ  : 1987 - 92
👍ಕೆ. ಆರ್ ನಾರಾಯಣನ್  : 1992 - 97
👍ಕೃಷ್ಣಕಾಂತ್  : 1997 - 2002
👍ಭೈರವ್ ಸಿಂಗ್ ಶೇಖಾವತ್ : 19-08-2002 - 10-08-2007
👍ಮೊಹಮ್ಮದ್ ಹಮೀದ್ ಅನ್ಸಾರಿ :  2007 - 2012
👍ಮೊಹಮ್ಮದ್ ಹಮೀದ್ ಅನ್ಸಾರಿ :  2012 ಇಂದಿನವರೆಗೆ..

ಲೋಕಸಭೆಯ ಪರಿಚಯ

*ಲೋಕಸಭೆಯ_ಪರಿಚಯ*

ಲೋಕಸಭೆಯನ್ನು ಸಂಸತ್ತಿನ ಕೆಳಮನೆಯೆಂದು ಕರೆಯಲಾಗುತ್ತದೆ. ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆ 552 ಆಗಿರುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರಬಾರದು. ಇವರಲ್ಲಿ ಈ ಕೆಳಕಂಡಂತೆ ಪ್ರತಿನಿಧಿಗಳನ್ನು ಆಯ್ಕೆಮಾಡಲಾಗುವುದು. ಆಯಾ ರಾಜ್ಯಗಳಿಂದ ಲೋಕಸಭಾ ಸ್ಥಾನಕ್ಕೆ ಆಯ್ಕೆಯಾದ ಸದಸ್ಯರನ್ನು ಹೊಂದಿರುತ್ತಾರೆ.

*ಸದಸ್ಯರ ಮಾಹಿತಿ:*

ರಾಜ್ಯಗಳಿಂದ ನೇಮಕವಾಗುವ ಸದಸ್ಯರು 530
ಕೇಂದ್ರಾಡಳಿತ ಪ್ರದೇಶದಿಂದ ನೇಮಕವಾಗುವ ಸದಸ್ಯರು 13
ಆಂಗ್ಲೋ ಇಂಡಿಯನ್ ಸಮುದಾಯದಿಂದ ನೇಮಕವಾಗುವ ಸದಸ್ಯರು 2
ಒಟ್ಟು 545

*ಲೋಕಸಭಾ ಚುನಾವಣೆ:-*

ಲೋಕಸಭೆಗೆ ಚುನಾವಣೆ ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ನಡೆಯುತ್ತದೆ. 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಗಳು ಮತ ಚಲಾಯಿಸಬಹುದಾಗಿದೆ.

*ಸದಸ್ಯರಾಗಲು_ಇರಬೇಕಾದ_ಅರ್ಹತೆಗಳು:-*

# ಭಾರತೀಯ ಪ್ರಜೆಯಾಗಿರಬೇಕು.

# ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.

# ಸರ್ಕಾರದಲ್ಲಿ ಲಾಭದಾಯಕ ಹುದ್ದೆ ಹೊಂದಿರಬಾರದು.

# ಕೋರ್ಟ್ ನಿಂದ ಶಿಕ್ಷೆಗೆ ಒಳಗಾಗಿರಬಾರದು.

# ದಿವಾಳಿಕೋರನಾಗಿರಬಾರದು.

# ಮತಿಭ್ರಮಣೆಗೊಂಡಿರಬಾರದು.

# ಚುನಾವಣಾ ಆಯೋಗದ ನಿಷೇಧಕ್ಕೆ ಒಳಗಾಗಿರಬಾರದು.

*ಅಧಿಕಾರವಧಿ_ಮತ್ತು_ಪ್ರಮಾಣವಚನ:-*

ಲೋಕಸಭೆಯ ಸದಸ್ಯರ ಅವಧಿ ಐದು ವರ್ಷ, ಸತತವಾಗಿ ಅಧಿವೇಶನಕ್ಕೆ 60 ದಿನಗಳು ಗೈರುಹಾಜರಿದ್ದರೆ ಅವರ ಸದಸ್ಯತ್ವ ರದ್ದಾಗುವುದು.

99 ನೇ ಅನುಚ್ಛೇದದ ಮೇರೆಗೆ ಸದನದ ಪ್ರತಿಯೊಬ್ಬ ಸದಸ್ಯನು ಸಂವಿಧಾನವನ್ನು ಗೌರವಿಸಿ, ಪ್ರತಿಜ್ಞೆ ಸ್ವೀಕರಿಸಬೇಕು. ಪ್ರತಿಜ್ಞಾವಿಧಿ ಸ್ವೀಕರಿಸದ ಸದಸ್ಯನು ಸದನದಲ್ಲಿ ಹಾಜರಾದರೆ ಹಾಗೂ ಚಲಾಯಿಸದರೆ 104 ನೇ ಅನುಚ್ಛೇದದ ಪ್ರಕಾರ ಪ್ರತಿದಿನ 500 ರೂಪಾಯಿಯ ದಂಡ ತೆರಬೇಕಾಗುತ್ತದೆ.

*ಲೋಕಸಭೆಯ_ಅಧ್ಯಕ್ಷರು:-*

☀️ಲೋಕಸಭೆಯ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಮುಖ್ಯಸ್ಥನಿಗೆ ಸಭಾಪತಿ (Speaker) ಎನ್ನುವರು. ಎಲ್ಲ ರಾಜಕೀಯ ಪಕ್ಷಗಳನ್ನು ಒಂದೇ ತೆರನಾಗಿ ನೋಡಿಕೊಂಡು ಹೋಗುವ ಜವಾಬ್ದಾರಿಯು ಇವರದಾಗಿರುತ್ತದೆ. ಸಭಾಪತಿಯನ್ನು ಲೋಕಸಭಾ ಸದಸ್ಯರು ಅವಿರೋಧವಾಗಿ ಇಲ್ಲವೇ ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಾರೆ. ಪ್ರತಿ ಹೊಸ ಲೋಕಸಭೆಯು ತನ್ನ ಸಭಾಪತಿಯನ್ನು ಆಯ್ಕೆ ಮಾಡುತ್ತದೆ.

☀️ಸದನದಲ್ಲಿ ಹಾಜರಿದ್ದ ಸದಸ್ಯರ ಬಹುಮತದಿಂದ ಗೊತ್ತುವಳಿಯನ್ನು ಅಂಗೀಕರಿಸಿ 14 ದಿವಸ ಮುಂಚಿತವಾಗಿ ಅವರಿಗೆ ನೋಟಿಸನ್ನು ಜಾರಿಗೊಳಿಸಿ, ಸಭಾಧ್ಯಕ್ಷರನ್ನು ಹಾಗೂ ಉಪಸಭಾಧ್ಯಕ್ಷರನ್ನು ಅಧಿಕಾರದಿಂದ ಪದಚ್ಯುತಗೊಳಿಸಬಹುದು.

☀️ಸಭಾಪತಿ ಹಾಗೂ ಉಪಸಭಾಪತಿ ಸದನದಲ್ಲಿ ಗೈರುಹಾಜರಾದರೆ ಸದನದ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಿರ್ವಹಿಸಲು ಆರು ಜನರ ಪಟ್ಟಿಯನ್ನು ಸಭಾಪತಿಗಳೇ ರಚಿಸುತ್ತಾರೆ. ಅವರು ಕ್ರಮವಾಗಿ ನಿರ್ವಹಿಸುತ್ತಾರೆ. ಈ ಪಟ್ಟಿಯಲ್ಲಿ ವಿರೋಧ ಪಕ್ಷದ ಸದಸ್ಯರಿಗೂ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ.

*ಸಭಾಪತಿಯ_ಅಧಿಕಾರ_ಮತ್ತು_ಕಾರ್ಯಗಳು:-*

# ಲೋಕಸಭೆಯ ಕಾರ್ಯಕಲಾಪಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುವುದು.

# ಸಭೆಯಲ್ಲಿ ಯಾರು ಪ್ರಶ್ನೆ ಮೊದಲು ಕೇಳಬೇಕು, ಯಾವ ಭಾಷೆ ಬಳಸಬೇಕು ಎಂಬುದನ್ನು ನಿರ್ಧರಿಸುತ್ತದೆ.

# ಸಭೆಯಲ್ಲಿ ಅನುಚಿತವಾಗಿ ವರ್ತನೆ ತೋರಿಸಿದ ಸದಸ್ಯರನ್ನು ಸದನದಿಂದ ಹೂರಗೆ ಹಾಕುವ ಅಧಿಕಾರವಿದೆ.

# ಲೋಕಸಭೆಯಲ್ಲಿ ಮಂಡನೆಯಾಗುವ ಮಸೂದೆಗಳು ಹಣಕಾಸಿನ ಮಸೂದೆಯೋ ಅಥವಾ ಸಾಮಾನ್ಯ ಮಸೂದೆಯೋ ಎಂಬುದನ್ನು ನಿರ್ಧರಿಸುತ್ತಾನೆ.

# ಜಂಟಿ ಅಧೀವೇಷನದ ಅಧ್ಯಕ್ಷ ಸ್ಥಾನವನ್ನು ವಹಿಸುವರು.

# ಲೋಕಸಭೆಯ ಸದಸ್ಯರ ನಾಯಕನಾಗಿ ಅವರ ಹಕ್ಕುಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಾರೆ.

# ಸಭಾಪತಿಯ ಅನುಮತಿ ಇಲ್ಲದೆ ಸದನದ ಆವರಣದಲ್ಲಿ ಯಾವ ವ್ಯಕ್ತಿಯನ್ನು ಬಂಧಿಸುವಂತಿಲ್ಲ.

# ಸಭಾಪತಿ ಭಾರತೀಯ ಸಂಸದಿಕ ತಂಡದ ಪದನಿಮಿತ್ತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

# ಸದಸ್ಯನ ಅಕ್ರಮ ನಡುವಳಿಕೆಗಾಗಿ ಆತನನ್ನು ಸದನದಿಂದ ಒಂದು ದಿನಕ್ಕಾಗಿ ಅಥವಾ ಸ್ವಲ್ಪ ಅವಧಿಗಾಗಿ ಹೊರ ಕಳುಹಿಸುವ ಅಧಿಕಾರವನ್ನು ಸಭಾಪತಿಯವರು ಹೊಂದಿರುತ್ತಾರೆ.

# ಪಕ್ಷಾಂತರಕ್ಕೆ ಸಂಬಂಧಿಸಿದಂತೆ ಸಭಾಪತಿ ಸದಸ್ಯನೊಬ್ಬನನ್ನು ಅನರ್ಹಗೊಳಿಸುವ ಅಂತಿಮ ಅಧಿಕಾರ ಹೊಂದಿರುತ್ತಾರೆ.

# ಭಾರತದ ಪ್ರಪ್ರಥಮ ಸಭಾಪತಿ = ಜಿ.ವಿ ಮಾವಳಂಕರ್

# ಭಾರತದ ಪ್ರಥಮ ಕನ್ನಡಿಗ ಸಭಾಪತಿ = ಕೆ.ಎಸ್ ಹೆಗಡೆ

# ಭಾರತದ ಉಪಸಭಾಪತಿಯಾದ ಮೊದಲ ಕನ್ನಡಿಗ = ಎಸ್. ಮಲ್ಲಿಕಾರ್ಜುನಯ್ಯ

# ಸಭಾಪತಿಯನ್ನು ಬಹುಮತದ ಮೂಲಕ ವಜಾ ಮಾಡಬಹುದಾಗಿದೆ.

# ಪ್ರಸ್ತುತ ಲೋಕಸಭೆಯ ಸಭಾಪತಿ = ಸುಮಿತ್ರಾ ಮಹಾಜನ್ (2014 ರಿಂದ).

*ಉಪ_ಸಭಾಪತಿ:-*

# ಸಭಾಪತಿಯ ಅನುಪಸ್ಥಿತಿಯಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ.

# ಇವರು ಬಜೆಟ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

# ಇವರು ಸದನದ ಚರ್ಚೆಯಲ್ಲಿ ಭಾಗವಹಿಸಿ, ಒಬ್ಬ ಸದಸ್ಯನಾಗಿ ಮತ ಚಲಾಯಿಸಬಹುದು. ಆದರೆ ಸಭಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಇದಕ್ಕೆ ಅವಕಾಶವಿಲ್ಲ.

ಶುಕ್ರವಾರ, ಮಾರ್ಚ್ 24, 2017

ನಾಪತ್ತೆಯಾಗಿದ್ದ ಧರ್ಮ ಗುರುಗಳು ಪತ್ತೆ

ನಾಪತ್ತೆಯಾಗಿದ್ದ ಧರ್ಮಗುರುಗಳು ಭಾರತಕ್ಕೆ ವಾಪಸ್‌

ಹೊಸದಿಲ್ಲಿ, ಮಾ.20: ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತದ  ಇಬ್ಬರು ಧರ್ಮಗುರುಗಳು ಸೋಮವಾರ ಬೆಳಗ್ಗೆ  ಭಾರತಕ್ಕೆ ವಾಪಸಾಗಿದ್ದಾರೆ.
ಹಝ್ರತ್ ನಿಜಾಮುದ್ದೀನ್ ದರ್ಗಾದ ಮುಖ್ಯ ಧರ್ಮಗುರು  ಸೈಯದ್ ಆಸಿಫ್ ನಿಝಾಮಿ ಮತ್ತು ಅವರ ಸೋದರಳಿಯ ನಝೀಮ್ ಅಲಿ ನಿಝಾಮಿ ಅವರು ಇಂದು ಬೆಳಗ್ಗೆ ದಿಲ್ಲಿಗೆ  ವಿಮಾನದಲ್ಲಿ ಆಗಮಿಸಿದ್ದಾರೆ.
  ಕರಾಚಿಯಲ್ಲಿರುವ ತನ್ನ ಸಹೋದರಿಯನ್ನು ಭೇಟಿಯಾಗಲು ಸೈಯದ್ ಆಸಿಫ್ ನಿಝಾಮಿ  ಅವರು ನಝಿಮ್  ಅಲಿ ಜೊತೆ ತೆರಳಿದ್ದರು ಎಂದು ತಿಳಿದು ಬಂದಿದೆ. ಇವರು ಮಾ.೮ರಂದು ಪಾಕಿಸ್ತಾನಕ್ಕೆ ತರಳಿದ್ದರು.

"ದಿ ವಾಲ್ ರಾಹುಲ್ ದ್ರಾವಿಡ್ ದಾಖಲೆ ಮುರಿದ ಪೂಜಾರಾ!

"ದಿ ವಾಲ್" ರಾಹುಲ್ ದ್ರಾವಿಡ್ ದಾಖಲೆ ಮುರಿದ ಪೂಜಾರಾ!
ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ನಲ್ಲಿ ಭಾರತದ ಪಾರುಪತ್ಯ ಮುಂದುವರೆದಿದ್ದು, ಭಾರತದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದ ಚೇತೇಶ್ವರ ಪೂಜಾರ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 525 ಎಸೆತಗಳನ್ನು ಎದುರಿಸಿರುವ ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಒಟ್ಟು 525 ಎಸೆತಗಳನ್ನು  ಎದುರಿಸಿ  ಸುದೀರ್ಘ ಇನ್ನಿಂಗ್ಸ್ ಆಡಿದ ಮೊದಲ ಭಾರತೀಯ ಕ್ರಿಕೆಟಿಗೆ ಎಂಬ ಕೀರ್ತಿಗೆ ಪೂಜಾರ ಭಾಜನರಾಗಿದ್ದಾರೆ. ಈ ಹಿಂದೆ "ದಿ ವಾಲ್" ಖ್ಯಾತಿಯ ರಾಹುಲ್ ದ್ರಾವಿಡ್ ಹೆಸರಿನಲ್ಲಿ ಈ ದಾಖಲೆ ಇತ್ತು. 2004ರಲ್ಲಿ ಪಾಕಿಸ್ತಾನದ  ವಿರುದ್ಧ ರಾಹುಲ್ ದ್ರಾವಿಡ್ 495 ಎಸೆತಗಳನ್ನು ಎದುರಿಸಿದ್ದರು.

ಇದು ಈ ವರೆಗೆ ಭಾರತೀಯ ಕ್ರಿಕೆಟ್ ಆಟಗಾರನ ಸುದೀರ್ಘ ಇನ್ನಿಂಗ್ಸ್ ಎಂದು ದಾಖಲಾಗಿತ್ತು. ಆದರೆ ಇದೀಗ ಪೂಜಾರ ಅದನ್ನೂ ಮೀರಿದ ಇನ್ನಿಂಗ್ಸ್ ಆಡಿದ್ದು, ಟೀಂ ಇಂಡಿಯಾದ ಎರಡನೇ ವಾಲ್ ಎಂಬ ಖ್ಯಾತಿಗೆ  ಹತ್ತಿರವಾಗುತ್ತಿದ್ದಾರೆ. ಅಂತೆಯೇ ಈ ಸುದೀರ್ಘ ಇನ್ನಿಂಗ್ಸ್ ಮೂಲಕ ಅತೀ ಹೆಚ್ಚು ಎಸೆತಗಳನ್ನು ಎದುರಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಕೀರ್ತಿಗೂ ಪೂಜಾರಾ ಭಾಜನರಾಗಿದ್ದಾರೆ.

ದ್ವಿಶತಕದಲ್ಲೂ ಪೂಜಾರ ದಾಖಲೆ!

ಇನ್ನು ಈ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಪೂಜಾರಾಗೆ ಇದು ವೃತ್ತಿ ಜೀವನದ ಮೂರನೇ ದ್ವಿಶತಕವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸುವ ಮೂಲಕ ಪೂಜಾರ ಗ್ರೇಮ್ ಪೊಲ್ಲಾಕ್, ಸಚಿನ್  ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಏಷ್ಯಾ ಪೆಷಿಪಿಕ್ ರಾಷ್ಟ್ರಗಳಲ್ಲಿ ಭಾರತವೆ ಅತ್ಯಂತ ಭ್ರಷ್ಟ ರಾಷ್ಟ್ರ

*ಈ ಕ್ಷಣದ ಸುದ್ದಿ:*

ಏಷ್ಯಾ-ಫೆಸಿಫಿಕ್ ರಾಷ್ಟ್ರಗಳ ಪೈಕಿ ಭಾರತ ಅತ್ಯಂತ ಭ್ರಷ್ಟ ರಾಷ್ಟ್ರ: ಸಮೀಕ್ಷೆ

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇತ್ತೀಚಿನ ವರದಿಯ ಪ್ರಕಾರ ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ ಭಾರತದಲ್ಲೇ ಹೆಚ್ಚು ಭ್ರಷ್ಟಾಚಾರವಿದೆ ಎನ್ನಲಾಗಿದೆ.

ಜುಲೈ 2016 ರಿಂದ ಜನವರಿ 2017ರವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 16 ಏಷ್ಯಾ-ಫೆಸಿಫಿಕ್ ರಾಷ್ಟ್ರಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಸರಿಸುಮಾರು 21000 ಜನರನ್ನು ಈ ವಲಯದಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರು ಮೂಲಭೂತ ಸೇವೆಗಳಿಗೆ ಲಂಚ ಕೊಡಲೇಬೇಕಾದ ಪರಿಸ್ಥಿತಿಯಿದೆ.

*ಪ್ರಮುಖಾಂಶಗಳು:*

*ಅತಿ ಹೆಚ್ಚು ಭ್ರಷ್ಟಾಚಾರವಿರುವ ರಾಷ್ಟ್ರಗಳು:*

ಭಾರತದಲ್ಲಿ ಸಮೀಕ್ಷೆಗೆ ಒಳಪಡಿಸಲಾದ ಗುಂಪುಗಳ ಪೈಕಿ ಶೇ 69% ರಷ್ಟು ಜನರು ಲಂಚ ನೀಡಿರುವುದಾಗಿ ಹೇಳಿದ್ದಾರೆ.
ನಂತರದ ಸ್ಥಾನದಲ್ಲಿ ವಿಯೆಟ್ನಾಂ (ಶೇ 65%), ಥಾಯ್ಲೆಂಡ್ (ಶೇ 41%) ಮತ್ತು ಪಾಕಿಸ್ತಾನ (ಶೇ 40%). ಚೀನಾದಲ್ಲಿ ಶೇ 26% ರಷ್ಟು ಅತಿ ಕಡಿಮೆ ವರದಿಯಾಗಿದೆ.

*ಅತಿ ಕಡಿಮೆ ಭ್ರಷ್ಟಾಚಾರವಿರುವ ರಾಷ್ಟ್ರಗಳು:*
ಜಪಾನ್ (ಶೇ 0.2%),
ದಕ್ಷಿಣ ಕೊರಿಯಾ
ಮತ್ತು ಆಸ್ಟ್ರೇಲಿಯಾ (ಶೇ 3%)
ಮತ್ತು ತೈವಾನ್ ಶೇ 6%.

*ಭಾರತಕ್ಕೆ ಸಂಬಂಧಿಸಿದಂತೆ:*

ಭಾರತದಲ್ಲಿ ಪ್ರತಿ 10 ಜನರಲ್ಲಿ 7 ಜನರು ಸಾರ್ವಜನಿಕ ಸೇವೆಯನ್ನು ಪಡೆದುಕೊಳ್ಳುವಾಗ ಲಂಚ ನೀಡುತ್ತಿರುವುದಾಗಿ ಹೇಳಿದ್ದಾರೆ.

ಶೇ 46-60% ಜನರು ಸಾರ್ವಜನಿಕ ಸೇವೆಗಳಾದ ಸರ್ಕಾರಿ ಶಾಲೆ, ಆಸ್ಪತ್ರೆ, ಇತರೆ ಅನುಮತಿ ಪಡೆಯುವ ವೇಳೆ ಲಂಚವನ್ನು ನೀಡುತ್ತಿದ್ದಾರೆ.
ಸಾಂಸ್ಥಿಕವಾಗಿ: ಪೊಲೀಸ್ ಇಲಾಖೆ ಅತ್ಯಂತ ಭ್ರಷ್ಟಾಚಾರ ಹೊಂದಿರುವ ಇಲಾಖೆ ಎನ್ನಲಾಗಿದೆ. ಐದು ಜನರ ಪೈಕಿ ಇಬ್ಬರು ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ವರದಿ ನೀಡಿದ್ದಾರೆ.
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್:

ಇದೊಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು, ಜರ್ಮನಿಯ ಬರ್ಲಿನ್ ನಲ್ಲಿದೆ.

ಪ್ರತಿ ವರ್ಷ ಈ ಸಂಸ್ಥೆ ಗ್ಲೋಬಲ್ ಕರ್ಪಶನ್ ಬರೋಮೀಟರ್ ಹಾಗೂ ಕರ್ಪಶನ್ ಪರ್ಸೆಪಶನ್ ಇಂಡೆಕ್ಸ್ ಹೊರತರುತ್ತಿದೆ.