ಶುಕ್ರವಾರ, ಮಾರ್ಚ್ 24, 2017

ಏಷ್ಯಾ ಪೆಷಿಪಿಕ್ ರಾಷ್ಟ್ರಗಳಲ್ಲಿ ಭಾರತವೆ ಅತ್ಯಂತ ಭ್ರಷ್ಟ ರಾಷ್ಟ್ರ

*ಈ ಕ್ಷಣದ ಸುದ್ದಿ:*

ಏಷ್ಯಾ-ಫೆಸಿಫಿಕ್ ರಾಷ್ಟ್ರಗಳ ಪೈಕಿ ಭಾರತ ಅತ್ಯಂತ ಭ್ರಷ್ಟ ರಾಷ್ಟ್ರ: ಸಮೀಕ್ಷೆ

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇತ್ತೀಚಿನ ವರದಿಯ ಪ್ರಕಾರ ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ ಭಾರತದಲ್ಲೇ ಹೆಚ್ಚು ಭ್ರಷ್ಟಾಚಾರವಿದೆ ಎನ್ನಲಾಗಿದೆ.

ಜುಲೈ 2016 ರಿಂದ ಜನವರಿ 2017ರವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 16 ಏಷ್ಯಾ-ಫೆಸಿಫಿಕ್ ರಾಷ್ಟ್ರಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಸರಿಸುಮಾರು 21000 ಜನರನ್ನು ಈ ವಲಯದಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರು ಮೂಲಭೂತ ಸೇವೆಗಳಿಗೆ ಲಂಚ ಕೊಡಲೇಬೇಕಾದ ಪರಿಸ್ಥಿತಿಯಿದೆ.

*ಪ್ರಮುಖಾಂಶಗಳು:*

*ಅತಿ ಹೆಚ್ಚು ಭ್ರಷ್ಟಾಚಾರವಿರುವ ರಾಷ್ಟ್ರಗಳು:*

ಭಾರತದಲ್ಲಿ ಸಮೀಕ್ಷೆಗೆ ಒಳಪಡಿಸಲಾದ ಗುಂಪುಗಳ ಪೈಕಿ ಶೇ 69% ರಷ್ಟು ಜನರು ಲಂಚ ನೀಡಿರುವುದಾಗಿ ಹೇಳಿದ್ದಾರೆ.
ನಂತರದ ಸ್ಥಾನದಲ್ಲಿ ವಿಯೆಟ್ನಾಂ (ಶೇ 65%), ಥಾಯ್ಲೆಂಡ್ (ಶೇ 41%) ಮತ್ತು ಪಾಕಿಸ್ತಾನ (ಶೇ 40%). ಚೀನಾದಲ್ಲಿ ಶೇ 26% ರಷ್ಟು ಅತಿ ಕಡಿಮೆ ವರದಿಯಾಗಿದೆ.

*ಅತಿ ಕಡಿಮೆ ಭ್ರಷ್ಟಾಚಾರವಿರುವ ರಾಷ್ಟ್ರಗಳು:*
ಜಪಾನ್ (ಶೇ 0.2%),
ದಕ್ಷಿಣ ಕೊರಿಯಾ
ಮತ್ತು ಆಸ್ಟ್ರೇಲಿಯಾ (ಶೇ 3%)
ಮತ್ತು ತೈವಾನ್ ಶೇ 6%.

*ಭಾರತಕ್ಕೆ ಸಂಬಂಧಿಸಿದಂತೆ:*

ಭಾರತದಲ್ಲಿ ಪ್ರತಿ 10 ಜನರಲ್ಲಿ 7 ಜನರು ಸಾರ್ವಜನಿಕ ಸೇವೆಯನ್ನು ಪಡೆದುಕೊಳ್ಳುವಾಗ ಲಂಚ ನೀಡುತ್ತಿರುವುದಾಗಿ ಹೇಳಿದ್ದಾರೆ.

ಶೇ 46-60% ಜನರು ಸಾರ್ವಜನಿಕ ಸೇವೆಗಳಾದ ಸರ್ಕಾರಿ ಶಾಲೆ, ಆಸ್ಪತ್ರೆ, ಇತರೆ ಅನುಮತಿ ಪಡೆಯುವ ವೇಳೆ ಲಂಚವನ್ನು ನೀಡುತ್ತಿದ್ದಾರೆ.
ಸಾಂಸ್ಥಿಕವಾಗಿ: ಪೊಲೀಸ್ ಇಲಾಖೆ ಅತ್ಯಂತ ಭ್ರಷ್ಟಾಚಾರ ಹೊಂದಿರುವ ಇಲಾಖೆ ಎನ್ನಲಾಗಿದೆ. ಐದು ಜನರ ಪೈಕಿ ಇಬ್ಬರು ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ವರದಿ ನೀಡಿದ್ದಾರೆ.
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್:

ಇದೊಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು, ಜರ್ಮನಿಯ ಬರ್ಲಿನ್ ನಲ್ಲಿದೆ.

ಪ್ರತಿ ವರ್ಷ ಈ ಸಂಸ್ಥೆ ಗ್ಲೋಬಲ್ ಕರ್ಪಶನ್ ಬರೋಮೀಟರ್ ಹಾಗೂ ಕರ್ಪಶನ್ ಪರ್ಸೆಪಶನ್ ಇಂಡೆಕ್ಸ್ ಹೊರತರುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ