ಶುಕ್ರವಾರ, ಮಾರ್ಚ್ 31, 2017

"ಕಿರಿಕ್ ಪಾರ್ಟಿ" "ಯು-ಟರ್ನ್" ಗೆ ಐಫಾ ಅವಾರ್ಡ್

'ಕಿರಿಕ್ ಪಾರ್ಟಿ', 'ಯು -ಟರ್ನ್'ಗೆ ಐಫಾ ಅವಾರ್ಡ್

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ‘ಐಫಾ ಉತ್ಸವಂ -2017’ ಅವಾರ್ಡ್ ಗಳನ್ನು ನೀಡಲಾಗಿದೆ.

ಜೂನಿಯರ್ ಎನ್.ಟಿ.ಆರ್. ಅಭಿನಯದ ತೆಲುಗು ಚಿತ್ರ ‘ಜನತಾಗ್ಯಾರೇಜ್’, ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’, ಪವನ್ ಕುಮಾರ್ ನಿರ್ದೇಶನದ ‘ಯು –ಟರ್ನ್’ ಕನ್ನಡ ಚಿತ್ರಗಳು ಪ್ರಶಸ್ತಿ ಪಡೆದುಕೊಂಡಿವೆ.

‘ಜನತಾ ಗ್ಯಾರೇಜ್’ ಬೆಸ್ಟ್ ಸಿನಿಮಾ, ಅತ್ಯುತ್ತಮ ನಟ(NTR), ಅತ್ಯುತ್ತಮ ನಿರ್ದೇಶಕ(ಕೊರಟಾಲ ಶಿವ), ಅತ್ಯುತ್ತಮ ಸಂಗೀತ ನಿರ್ದೇಶಕ(ದೇವಿ ಶ್ರೀ ಪ್ರಸಾದ್) ಪ್ರಶಸ್ತಿ ಸೇರಿದಂತೆ 6 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

‘ಕಿರಿಕ್ ಪಾರ್ಟಿ’ಗೆ ಅತ್ಯುತ್ತಮ ನಟ(ರಕ್ಷಿತ್ ಶೆಟ್ಟಿ), ಅತ್ಯುತ್ತಮ ಸಂಗೀತ ನಿರ್ದೇಶಕ(ಅಜನೀಶ್ ಲೋಕನಾಥ್), ಹಿನ್ನಲೆ ಗಾಯಕ(ವಿಜಯ್ ಪ್ರಕಾಶ್), ಸಾಹಿತ್ಯ ಮೊದಲಾದ ಪ್ರಶಸ್ತಿಗಳು ಬಂದಿವೆ.

ಪವನ್ ಕುಮಾರ್ ‘ಯು ಟರ್ನ್’ ಚಿತ್ರಕ್ಕಾಗಿ ಅತ್ಯುತ್ತಮ ಕತೆ, ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ಗಳಿಸಿದ್ದಾರೆ.

ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ. ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಕ್ಕಾಗಿ ಪಾರೂಲ್ ಯಾದವ್, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಬೆಸ್ಟ್ ವಿಲನ್ ರೋಲ್ ಗಾಗಿ ವಸಿಷ್ಠ ಎನ್. ಸಿಂಹ ಪ್ರಶಸ್ತಿ ಗಳಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ