ಗುರುವಾರ, ಮಾರ್ಚ್ 30, 2017

ಜಿ,ಎಸ್,ಟಿ,ಯಿಂದ ಜನಸಾಮಾನ್ಯರ ಮೆಲೆ ಆಗುವ ಪರಿಣಾಮಗಳು

ಏನಿದು ಜಿಎಸ್ ಟಿ? ಇದರಿಂದ ಜನ ಸಾಮಾನ್ಯರ ಮೇಲಾಗುವ ಪರಿಣಾಮಗಳೇನು?
ನವದೆಹಲಿ: ಹಲವು ಸುತ್ತಿನ ಮಾತುಕತೆಗಳ ನಂತರ ಕೊನೆಗೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮತ್ತು ಏಕೀಕೃತ ಸರಕು ಸೇವಾ ತೆರಿಗೆಗಳಿಗೆ ಜಿಎಸ್ ಟಿ ಮಂಡಳಿಯ ಒಪ್ಪಿಗೆ ದೊರೆತಿದೆ. ಈ ಮೂಲಕ ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆಯತ್ತ ಅಡಿಯಿಟ್ಟಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೇ 10 ವರ್ಷಗಳ ಕಾಯುವಿಕೆಯ ನಂತರ ದೇಶವೂ ಏಕರೂಪ ತೆರಿಗೆ ವ್ಯವಸ್ಥೆಗೆ ಸಾಕ್ಷಿಯಾಗಲಿದೆ.

ಉತ್ಪಾದಕ ವಸ್ತುಗಳ ಎಲ್ಲ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ತೆರಿಗೆ ಪದ್ಧತಿಗೆ ಸರಕು ಸೇವಾ ತೆರಿಗೆ ಎನ್ನಲಾಗುತ್ತದೆ. ಜಿಎಸ್ ಟಿ ಜಾರಿಯಾದರೆ ವ್ಯಾಪಾರ ವಹಿವಾಟು ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಜಿಎಸ್ ಟಿ ಜಾರಿಯಾದರೆ ಸಂಕೀರ್ಣ ತೆರಿಗೆ ಪದ್ಧತಿ ಸರಳ ತೆರಿಗೆ ಪದ್ಧತಿಯಾಗುತ್ತದೆ.
ಇನ್ನೊಂದೆಡೆ ಇದು ಆರ್ಥಿಕ ಅಭಿವೃದ್ಧಿ ದರ ಸುಧಾರಣೆಗೂ ನೆರವಾಗುತ್ತದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜಿ ಎಸ್ ಟಿಯಲ್ಲಿ ಮೂರು ವಿಭಾಗಗಳಿದ್ದು, ಆ ಪೈಕಿ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಸಿಜಿಎಸ್ ಟಿ) ಒಂದು, ಪ್ರಸ್ತುತ ಇರುವ ಕೇಂದ್ರ ಅಬಕಾರಿ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಹೆಚ್ಚುವರಿ ಅಬಕಾರಿ ತೆರಿಗೆ, ಹೆಚ್ಚುವರಿ ಸೀಮಾ ಸುಂಕಗಳು ಸಿಜಿಎಸ್ ಟಿಯೊಂದಿಗೆ ಸೇರಿಕೊಳ್ಳುತ್ತವೆ. ಸಿಜಿಎಸ್ ಟಿ ಅನ್ವಯ ಸಂಗ್ರಹಿಸಲಾದ ಎಲ್ಲಾ ಆದಾಯವು ಕೇಂದ್ರಕ್ಕೆ ಸೇರುತ್ತದೆ. ಅಂದರೆ ಗ್ರಾಹಕ ಯಾವುದೇ ವಸ್ತುವನ್ನು ಖರೀದಿಸುವಾಗ ರಾಜ್ಯ ಹಾಗೂ ಕೇಂದ್ರಕ್ಕೆ ಪ್ರತ್ಯೇಕ ತೆರಿಗೆ ಪಾವತಿಸುವಂತಿಲ್ಲ, ಜಿಎಸ್ ಟಿ ಮೂಲಕ ಒಂದು ಬಾರಿ ತೆರಿಗೆ ಪಾವತಿಸುತ್ತಾನೆ.

ಸಾಮಾನ್ಯ ಜನರ ಮೇಲೆ ಜಿಎಸ್ ಟಿ ಪರಿಣಾಮ

ಹೋಟೆಲ್ಗಳು, ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವನೆ ತುಟ್ಟಿ, ಸೇವಾ ತೆರಿಗೆ ಶೇ.18ಕ್ಕೆ ನಿಗದಿಯಾದರೆ ದೂರವಾಣಿ ಬಿಲ್ ಮೊತ್ತ ಏರಿಕೆ, ಆಮದು ಮಾಡಿದ ಫೋನ್ ಖರೀದಿ ದುಬಾರಿ. ಆಭರಣಗಳ ಖರೀದಿ ಮೇಲೂ ತೆರಿಗೆ ಹೆಚ್ಚು ಬೀಳುವ ಕಾರಣ, ಚಿನ್ನದ ದರ ಏರಿಕೆ, ಇ-ಕಾಮರ್ಸ್ ಕೂಡ ಜಿಎಸ್ಟಿ ವ್ಯಾಪ್ತಿಗೆ ಬರುವ ಕಾರಣ ಆನ್ಲೈನ್ನಲ್ಲಿ ಖರೀದಿಸುವ ವಸ್ತುಗಳು ತುಟ್ಟಿ, ಜಿಎಸ್ಟಿಯೊಳಗೇ ಎಕ್ಸೈಸ್ ಮತ್ತು ವ್ಯಾಟ್ ವಿಲೀನಗೊಳ್ಳುವ ಕಾರಣ ಸಿದ್ಧ ಉಡುಪುಗಳ ದರ ಇಳಿಕೆ, ತೆರಿಗೆ ದರ ಇಂತಿಷ್ಟೇ ಎಂದು ನಿಗದಿಯಾಗುವ ಕಾರಣ ಕಾರುಗಳ ಬೆಲೆ ಇಳಿಯಲಿವೆ, ಎಲ್‌ಇಡಿ ಟಿವಿಗಳು ಅಗ್ಗವಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ