ಸೋಮವಾರ, ಮಾರ್ಚ್ 27, 2017

ಭಾರತದ ಅರಣ್ಯಗಳು

ಭಾರತದ ಅರಣ್ಯಗಳ

ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ (69.0 ದ.ಲ.ಹೇ) ಅಂದರೇ ಭೌಗೋಳಿಕ ಕ್ಷೇತ್ರದ ಶೇ 21.02 ರಷ್ಟು ಭೂಭಾಗವು ಅರಣ್ಯಗಳಿಂದ ಕೂಡಿದೆ.

ಭಾರತದ ಅರಣ್ಯ ಪ್ರದೇಶವನ್ನು ಮುಖ್ಯವಾಗಿ ಆರು ಪ್ರಕಾರಗಳಾಗಿ ವಿಂಗಡಿಸಬಹುದಾಗಿದೆ. ಅವುಗಳೆಂದರೇ

 

1) ನಿತ್ಯಹರಿದ್ವರ್ಣದ ಅರಣ್ಯಗಳು:-

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು 250 ಸೆಂ.ಮೀ ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮೀ. ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣಬಹುದಾಗಿದೆ.

# ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡುಬರುತ್ತದೆ.

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು ಸುಮಾರು 2.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿವೆ. ಈ ಪ್ರದೇಶದಲ್ಲಿ ಸಸ್ಯವರ್ಗವು ವರ್ಷವೆಲ್ಲಾ ಹಸಿರಾಗಿರುವುದರಿಂದ ಇವುಗಳನ್ನು ನಿತ್ಯಹರಿದ್ವರ್ಣದ ಅಥವಾ ಸದಾ ಹಚ್ಚ ಹಸಿರಾಗಿರುವ ಅರಣ್ಯವೆಂದು ಕರೆಯುವರು.

 

2) ಎಲೆಯುದುರುವ ಮಾನ್ಸೂನ್ ಅರಣ್ಯಗಳು:-

# ಈ ಪ್ರಕಾರದ ಅರಣ್ಯಗಳು ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿವೆ. ಇವುಗಳು 75 ರಿಂದ 250 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ.

# ಇದು ಭಾರತದ ಶೇ. 65.5 ರಷ್ಟು ಒಟ್ಟು ಅರಣ್ಯದಲ್ಲಿ ಹರಡಿವೆ. ಇವುಗಳು ವರ್ಷದ ನಿರ್ದಿಷ್ಟ ಒಣ ಹವೆಯ ಋತುವಿನಲ್ಲಿ ಎಲೆಯನ್ನು ಉದುರಿಸುವುದನ್ನು ರೂಢಿಸಿಕೊಂಡಿರುವುದರಿಂದ ಇವುಗಳನ್ನು ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳೆಂದು ಕರೆಯುವರು.

 

3) ಉಷ್ಣವಲಯದ ಹುಲ್ಲುಗಾವಲು ಅರಣ್ಯ:-

# ಭಾರತದಲ್ಲಿ 60 ರಿಂದ 75 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ಹುಲ್ಲುಗಾವಲು ಸಸ್ಯವರ್ಗ ಪ್ರಧಾನವಾಗಿ ಕಂಡುಬರುವುದು.

# ಈ ವಲಯಗಳಲ್ಲಿ ಎತ್ತರವಾದ ಹುಲ್ಲು ಹಾಗೂ ವಿರಳವಾಗಿ ಅಲ್ಲಲ್ಲಿ ಕುರುಚಲ ಜಾತಿಯ ಸಸ್ಯವರ್ಗಗಳನ್ನು ಕಾಣಬಹುದು.

# ದಖನ್ ಪ್ರಸ್ಥಭೂಮಿಯ ಕೇಂದ್ರಭಾಗ, ಅರಾವಳಿ ಪರ್ವತಗಳ ಪಶ್ಚಿಮದಲ್ಲಿರುವ ಥಾರ್ ಮರುಭೂಮಿಯ ಅಂಚಿನ ವಲಯಗಳು ಈ ಬಗೆಯ ಸಸ್ಯವರ್ಗವನ್ನು ಹೊಂದಿವೆ. 

# ಬಬೂಲ್, ಶಿಷಮ್, ಸಭಾಯ್ ಹುಲ್ಲು ಇತ್ಯಾದಿ ಇಲ್ಲಿ ಬೆಳೆಯುತ್ತವೆ.

 

4) ಮ್ಯಾಂಗ್ರೋವ್ ಅರಣ್ಯಗಳು:-

# ಈ ಕಾಡುಗಳು ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತವೆ. 

# ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾನದಿ ಮುಖಜಭೂಮಿಯಲ್ಲಿ ಕಂಡುಬರುತ್ತವೆ. 

# ಗಂಗಾ ನದಿಯ ಮುಖಜ ಭೂಮಿಯಲ್ಲಿ ಸುಂದರಿ ಮರಗಳು ಹೇರಳವಾಗಿರುವುದರಿಂದ ಈ ಪ್ರದೇಶವನ್ನು ಸುಂದರಬನ್ ಎಂದು ಕರೆಯುತ್ತಾರೆ.

# ಈ ಅರಣ್ಯಗಳ ಕ್ಷೇತ್ರ ದೇಶದಲ್ಲಿ 4.4 ಸಾವಿರ ಚ.ಕಿ.ಮೀ ರಷ್ಟಿರುವುದು.

 

5) ಮರುಭೂಮಿ ಅರಣ್ಯಗಳು:-

# ಈ ಅರಣ್ಯಗಳು ಸಾಮಾನ್ಯವಾಗಿ ವಾರ್ಷಿಕ 50 ಸೆಂ.ಮೀ ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. 

# ರಾಜಸ್ಥಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಕೆಲವು ಭಾಗಗಳಲ್ಲಿ ಈ ಅರಣ್ಯಗಳಿವೆ.

# ಈ ಸಸ್ಯವರ್ಗಗಳು ಆಳವಾಗಿ ಬೇರುಗಳನ್ನು ಹೊಂದಿದ್ದು ಕುರುಚಲು ಜಾತಿಯ ಸಸ್ಯವರ್ಗಗಳು ಮುಳ್ಳು ಕಂಟಿಗಳಿಂದ ಕೂಡಿರುತ್ತವೆ.

 

6) ಹಿಮಾಲಯದ ಅಲ್ಪೈನ್ ಅರಣ್ಯಗಳು:-

# ಹಿಮಾಲಯ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡುಬರುತ್ತವೆ. ಏಕೆಂದರೆ ಎತ್ತರವು ಹೆಚ್ಚಿದಂತೆ ಉಷ್ಣವಲಯದಿಂದ ಧ್ರುವ ಪ್ರದೇಶದವರೆಗಿನ ವಾಯುಗುಣಗಳನ್ನು ಈ ಪರ್ವತಗಳಲ್ಲಿ ಕಾಣಬಹುದು.

# ವಾಯುಗುಣಕ್ಕೆ ಅನುಗುಣವಾಗಿ ವಿವಿಧ ಪ್ರಕಾರದ ಸಸ್ಯವರ್ಗಗಳು ಇಲ್ಲಿ ಕಂಡುಬರುವವು.

# ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೇ - ಸಾಲ್, ಬೈರಾ, ಟೂನ್, ಸಿಲ್ವರ್, ಸ್ಟ್ರೂಸ್, ಲಾರೆಲ್ ಮುಂತಾದ ಎಲೆ ಮೊನಚಾದ ಅರಣ್ಯಗಳು ಪ್ರಧಾನವಾಗಿ ಬೆಳೆದಿರುತ್ತವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ