ಗುರುವಾರ, ಮಾರ್ಚ್ 30, 2017

ಜಿ,ಎಸ್,ಟಿ, ಯ ಗುಣ ಹಾಗೂ ಅವಗುಣಗಳು


GST
ಸದ್ಯ ಎಲ್ಲ ಕಡೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ನೀತಿಯದ್ದೇ ಚರ್ಚೆ. ಹಾಗಾದರೆ ಈ ಜಿಎಸ್ ಟಿ ಅಂದರೆ ಏನು? ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮ ಎಂಥಹುದು. ರಾಜ್ಯಗಳ ಮೇಲೆ ಬಿರುವ ಪರಿಣಾಮ ಏನು? ಯಾರಿಗೆ ಲಾಭ? ಯಾರಿಗೆ ನಷ್ಟ? ಆರ್ಥಿಕ ವ್ಯವಸ್ಥೆಯಲ್ಲಿ ನೀತಿ ತರುವ ಬದಲಾವಣೆಗಳು ಏನು? ಎಂಬ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ಸರಳ ಉದಾಹರಣೆಯೊಂದನ್ನು ನೋಡೋಣ.. ಒಂದು ಸಾಬೂನು ದೇಶದ ಒಳಗಡೆ ತಯಾರಾಗಿ ಅದು ಗ್ರಾಹಕನ ಕೈ ಸೇರುವ ವೇಳೆಗೆ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗೆ ಒಳಪಡಬೇಕಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೂ ಅದು ಭಿನ್ನವಾಗಿರುತ್ತದೆ. ಮೌಲ್ಯವರ್ಧಿತ ತೆರಿಗೆ(ವ್ಯಾಟ್), ಸೇವಾ ತೆರಿಗೆ, ಸೆಸ್ ಈ ಬಗೆಯ ತೆರಿಗೆಯ ಹೆಸರುಗಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಉತ್ಪಾದಕನ ಕೈಯಿಂದ ಗ್ರಾಹಕನ ಕೈ ಸೇರುವವರೆಗೆ ತೆರಿಗೆಗಳನ್ನು ಹೇರಿಸಿಕೊಳ್ಳುತ್ತಲೇ ಸಾಗುತ್ತದೆ.

ಸಾಬೂನಿಗೆ ತಮಿಳುನಾಡಲ್ಲಿ 12 ರು. ಇದ್ದರೆ, ಅದೇ ಸಾಬೂನಿಗೆ ಕರ್ನಾಟಕದಲ್ಲಿ 16 ರು. ನೀಡಬೇಕಾಗುತ್ತದೆ. ಇದಕ್ಕೆ ಕೆಲ ಪರೋಕ್ಷ ತೆರಿಗೆಗಳೇ ಕಾರಣ. ಆದರೆ ಜಿಎಸ್ ಟಿ ಜಾರಿಯಾದರೆ ಈ ಎಲ್ಲ ಪರೋಕ್ಷ ತೆರಿಗೆಗಳನ್ನು ತೆಗೆದು ಹಾಕಿ ನೇರ ತೆರಿಗೆ ಮಾತ್ರ ಉಳಿದುಕೊಳ್ಳುತ್ತದೆ. ಅಂದರೆ ರಾಜ್ಯದಿಂದ ರಾಜ್ಯಕ್ಕೆ ಒಂದೇ ವಸ್ತುವಿನ ಬೆಲೆಯಲ್ಲಿ ಭಾರೀ ದರ ವ್ಯತ್ಯಾಸ ಕಾಣ ಸಿಗುವುದಿಲ್ಲ. ಅಲ್ಲದೇ ಉತ್ಪಾದನ ಘಟಕಗಳು ಪಾವತಿ ಮಾಡುವ ತೆರಿಗೆಯಲ್ಲಿ ಬದಲಾವಣೆ ಆಗುವುದಿಲ್ಲ.

ಉತ್ಪಾದಕ ವಸ್ತುಗಳ ಎಲ್ಲ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ತೆರಿಗೆ ಪದ್ಧತಿಗೆ ಶ್ರೀ ಕಾರವೇ "ಸರಕು ಮತ್ತು ಸೇವಾ ತೆರಿಗೆ"(ಜಿಎಸ್ ಟಿ). ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿ ಅನ್ವಯವಾಗುಂತೆ ಮಾಡಲಾಗುತ್ತಿದ್ದು ದೇಶದ ಒಳಗಿನ ಅರ್ಥ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ನಿರೀಕ್ಷೆ ಮಾಡಲಾಗುತ್ತದೆ.

*ಜಿಎಎಸ್ ಟಿ ಅಗತ್ಯ ಏನು?*

ಪ್ರಸ್ತುತ ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ , ಸೇವಾ ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ, ಮೌಲ್ಯವರ್ಧಿತ ತೆರಿಗೆ (ವ್ಯಾಟ್ ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್ ಟಿ ನೆರವಾಗುತ್ತದೆ.

*ಸರಳ ವಹಿವಾಟು*

ಜಿಎಸ್ ಟಿ ಜಾರಿಯಾದರೆ ವ್ಯಾಪಾರ ವಹಿವಾಟು ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

*ಉತ್ಪಾದಕ ಮತ್ತು ಗ್ರಾಹಕರಿಗೆ ಲಾಭ*

ಜಿಎಸ್ ಟಿ ಜಾರಿಯಾದರೆ ಸಂಕೀರ್ಣ ತೆರಿಗೆ ಪದ್ಧತಿ ಸರಳ ತೆರಿಗೆ ಪದ್ಧತಿಯಾಗುತ್ತದೆ. ಇನ್ನೊಂದೆಡೆ ಇದು ಆರ್ಥಿಕ ಅಭಿವೃದ್ಧಿ ದರ ಸುಧಾರಣೆಗೂ ನೆರವಾಗುತ್ತದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಕನ್ನಡ ಸಾಮಾನ್ಯ ಜ್ಞಾನ

*ಯುಪಿಎಯಿಂದ ಎನ್ ಡಿ ಎ ವರೆಗೆ*

ಹಿಂದೆ ಜಿಎಸ್ ಟಿ ಮಸೂದೆ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಯುಪಿಎ ಸರ್ಕಾರ. ರಾಜಕೀಯ ಬದಲಾವಣೆಗಳ ನಂತರ ಮಸೂದೆ ಹಿಂದಕ್ಕೆ ಹೋಗಿತ್ತು. ಇದೀಗ ಎನ್ ಡಿಎ ಸರ್ಕಾರ ಮಸೂದೆ ಕೈಗೆತ್ತಿಕೊಂಡಿದ್ದು ಲೋಕಸಭೆಯಲ್ಲಿ ಅಮಗೀಕಾರ ಆಗಿದೆ. ಕಾಂಗ್ರೆಸ್ ಆಗ್ರಹದಂತೆ ಮಸೂದೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು ರಾಜ್ಯಸಭೆಯಲ್ಲೂ ಅಂಗೀಕಾರ ಆಗುವ ಎಲ್ಲ ಸಾಧ್ಯತೆಗಳಿವೆ.

*ಜಿಎಸ್ಟಿಯ ಅವಗುಣಗಳು*

ಜಿಎಸ್ ಟಿ ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ಅನ್ವಯವಾಗಲ್ಲ. ಇದರಿಂದ ಸರ್ಕಾದರ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. 
* ಇಷ್ಟು ದಿನ ಒಂದು ಆಧಾರದಲ್ಲಿ ತೆರಿಗೆ ರಿಟರ್ನ್ಸ್ ಪಾವತಿ ಮಾಡುತ್ತಿದ್ದ ಸಾಮಾನ್ಯ ಮನುಷ್ಯನಿಗೆ ಹೊಸ ತೆರಿಗೆ ಲೆಕ್ಕ ಅರ್ಥವಾಗಲು ಕೆಲ ದಿನಗಳೆ ಹಿಡಿಯಬಹುದು ಅಥವಾ ಗೊಂದಲ ನಿರ್ಮಾಣವಾಗುವ ಸಾಧ್ಯತೆಯೂ ಇದೆ.
* ಜಿಎಸ್ ಟಿ ಬಿಲ್ ನ ಸಮಗ್ರ ಅನುಷ್ಠಾನಕ್ಕೆ ಬಲಿಷ್ಠ ಐಟಿ ವ್ಯವಸ್ಥೆ ಅಗತ್ಯ, ಆದರೆ ಭಾರತ ಐಟಿ ವ್ಯವಸ್ಥೆಯಲ್ಲಿ ಕೆಲ ಕೊರತೆಗಳನ್ನು ಎದುರಿಸುತ್ತಿದೆ.
* ಸದ್ಯದ ಮೌಲ್ಯವರ್ಧಿತ ತೆರಿಗೆ ಶೇ. 12.5 ರ ಜಾಗದಲ್ಲಿ ಶೇ. 16 ಪ್ರತಿಷ್ಠಾಪನೆಯಾಗುವ ಸಾಧ್ಯತೆ ಇದೆ.
* ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ತೆರಿಗೆ ಹಂಚಿಕೆಯಲ್ಲಿ ಗೊಂದಲಗಳು ಏರ್ಪಟ್ಟರೂ ಆಶ್ಚರ್ಯವಿಲ್ಲ.
*ರಾಜ್ಯಗಳಿಗಿದ್ದ ಹೆಚ್ಚುವರಿ ಶೇ. 1 ತೆರಿಗೆ ವಿಧಿಸುವ ಹಕ್ಕನ್ನು ಜಿಎಸ್ ಟಿ ಕಸಿದುಕೊಳ್ಳುತ್ತದೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ