ಶನಿವಾರ, ಮಾರ್ಚ್ 25, 2017

ಉಪರಾಷ್ಟ್ರಪತಿಗಳ ಬಗ್ಗೆ ಮಾಹಿತಿ

*ಉಪರಾಷ್ಟ್ರಪತಿಗಳು*

🔑ಭಾರತ ಸಂವಿಧಾನದ 63 ನೇ ವಿಧಿಯನ್ವಯ ಉಪರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರಪತಿಯವರ ಗೈರು ಹಾಜರಿಯಲ್ಲಿ ಉಪರಾಷ್ಟ್ರಪತಿ ಕಾರ್ಯ ನಿರ್ವಹಿಸುವರು. 66 ನೇ ವಿಧಿಯನ್ವಯ ಉಪರಾಷ್ಟ್ರಪತಿಯ ಚುನಾವಣೆಯಲ್ಲಿನ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರು ಪಾಲ್ಗೊಳ್ಳುವರು. ಸಂವಿಧಾನವು 64 ನೇ ಅನುಚ್ಚೇದದ ಪ್ರಕಾರ ಉಪರಾಷ್ಟ್ರಪತಿಯವರು ತಮ್ಮ ಪದವಿ ನಿಮಿತ್ತವಾಗಿ ರಾಜ್ಯಸಭೆಯ ಸಭಾಪತಿಯಾಗಿರುತ್ತಾರೆ.

🔑ರಾಷ್ಟ್ರಪತಿಯವರ ಅಧಿಕಾರಗಳನ್ನು ಉಪರಾಷ್ಟ್ರಪತಿಯವರು ನಿರ್ವಹಿಸಲು ಸಂವಿಧಾನದ ಅನುಚ್ಚೇದ 65 ರಲ್ಲಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರಪತಿಯವರ ಮರಣ, ಅನಾರೋಗ್ಯ, ರಾಜೀನಾಮೆ, ಗೈರುಹಾಜರಿ, ಕಾರ್ಯನಿರ್ವಹಿಸಲು ಅಸಮರ್ಥರಾದಾಗ, ತೆಗೆದುಹಾಕುವಿಕೆ ಅಥವಾ ಬೇರಾವುದೇ ಕಾರಣಕ್ಕಾಗಿ ರಾಷ್ಟ್ರಪತಿಯವರ ಹುದ್ದೆ ಖಾಲಿಯಾದಾಗ ಹೊಸ ರಾಷ್ಟ್ರಪತಿಯವರ ಚುನಾವಣೆಯಾಗುವ ದಿನಾಂಕದವರೆಗೆ ಉಪರಾಷ್ಟ್ರಪತಿಯವರು ಕಾರ್ಯಗಳನ್ನು ನಿರ್ವಹಿಸುತ್ತಾರೆ.

*ಅರ್ಹತೆಗಳು:-*

#ಕನಿಷ್ಠ 35 ವರ್ಷ ವಯಸ್ಸಾಗಿರಭೇಕು.

#ಭಾರತೀಯ ಪ್ರಜೆಯಾಗಿರಬೇಕು.

#ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು.

#ಹುಚ್ಚ ಅಥವಾ ದಿವಾಳಿಕೋರನಾಗಿರಬಾರದು.

#ಯಾವುದೇ ಕ್ರಿಮಿನಲ್ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಯಾಗಿರಬಾರದು.

#ಸಂಸತ್ತಿನಲ್ಲಿ ಅಥವಾ ಯಾವುದೇ ರಾಜ್ಯ ಶಾಸಕಾಂಗದ ಸದಸ್ಯನಾಗಿರಬಾರದು. ಒಂದು ವೇಳೆ ಆಗಿದ್ದರೆ ಅದನ್ನು ರಾಜೀನಾಮೆ ಮೂಲಕ ಖಾಲಿ ಮಾಡಬೇಕು.

*ಉಪರಾಷ್ಟ್ರಪತಿಯ_ಆಡಳಿತಾವಧಿ:*

#ಉಪರಾಷ್ಟ್ರಪತಿಯ ಅಧಿಕಾರವಧಿ 5 ವರ್ಷಗಳು ಆಗಿರುತ್ತವೆ.

#ಅವಧಿಯ ಮುನ್ನವೇ ರಾಷ್ಟ್ರಪತಿಗೆ ರಾಜೀನಾಮೆ ಪತ್ರವನ್ನು ನೀಡಬಹುದಾಗಿದೆ.

#ಇವರ ಅಧಿಕಾರ ಅವಧಿ ಪೂರ್ಣಗೊಂಡರೂ ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳುವವರೆಗೆ ಅಧಿಕಾರದಲ್ಲಿರುತ್ತಾರೆ.

#ಉಪರಾಷ್ಟ್ರತಿಗಳಿಗೆ ರಾಷ್ಟ್ರಪತಿಗಳು ಪ್ರಮಾಣವಚನ ಬೋಧಿಸುತ್ತಾರೆ.

*ರಾಜೀನಾಮೆ:-*

#ರಾಜ್ಯಸಭೆಯ ಸದಸ್ಯರು ಅಂಗೀಕರಿಸಿದ ನಿರ್ಣಯದ ಮೂಲಕ ಲೋಕಸಭೆಯ ಒಪ್ಪಿಗೆ ಮೇರೆಗೆ ರಾಷ್ಟ್ರಪತಿಯವರು ವಜಾ ಮಾಡಬಹುದು.

#ರಾಷ್ಟ್ರಪತಿಯವರ ಸ್ಥಾನ ಖಾಲಿ ಇರುವಾಗ ಅಂದರೇ ಆಕಸ್ಮಿಕ ಮರಣ ಉಂಟಾದಾಗ, ದೋಷಾರೋಪಣೆಯ ಮೇಲೆ ಅಧಿಕಾರದಿಂದ ಹೊರಬಂದರೆ ಅಂತಹ ಸ್ಥಿತಿಯಲ್ಲಿ ಉಪರಾಷ್ಟ್ರಪತಿಯವರು ಹಂಗಾಮಿ ರಾಷ್ಟ್ರಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

*ಉಪರಾಷ್ಟ್ರಪತಿಯ_ಕಾರ್ಯಗಳು*

#ಉಪರಾಷ್ಟ್ರಪತಿಯ ಹುದ್ದೆಯ ಕುರಿತು ಸಂವಿಧಾನದ 64-65 ನೇ ವಿಧಿಗಳು ವಿವರಿಸುತ್ತವೆ.

#ರಾಜ್ಯಸಭೆಯ ಸದಸ್ಯರಾಗಿದ್ದೂ ಸಹ ಇವರು ಈ ಸಭೆಯ ಪದನಿಮಿತ್ತ ಸಭಾಧ್ಯಕ್ಷರಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಲ್ಲಿನ ಕಾರ್ಯಕಲಾಪಗಳು ವಿಧಿಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಇವರದಾಗಿದೆ.

#ರಾಷ್ಟ್ರಪತಿ ಇಲ್ಲದಿರುವಾಗ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಬಹುದು.

*ಭಾರತದ_ಉಪರಾಷ್ಟ್ರಪತಿಗಳು*

#ಹೆಸರು    - #ಕಾಲಾವಧಿ

👍ಡಾ. ಎಸ್ ರಾಧಾಕೃಷ್ಣನ್ : 1952 - 62
👍ಡಾ. ಜಾಕಿರ್ ಹುಸೇನ್ : 1962 - 67
👍ವಿ.ವಿ. ಗಿರಿ : 1967 - 69
👍ಜಿ.ಎಸ್ ಪಾಠಕ್  : 1969 - 74
👍ಬಿ.ಡಿ. ಜತ್ತಿ  : 1974 - 79
👍ಎಂ. ಹಿದಾಯತುಲ್ಲಾ : 1979 - 84
👍ಆರ್. ವೆಂಕಟರಾಮನ್  : 1984 - 87
👍ಶಂಕರ್ ದಯಾಳ್ ಶರ್ಮಾ  : 1987 - 92
👍ಕೆ. ಆರ್ ನಾರಾಯಣನ್  : 1992 - 97
👍ಕೃಷ್ಣಕಾಂತ್  : 1997 - 2002
👍ಭೈರವ್ ಸಿಂಗ್ ಶೇಖಾವತ್ : 19-08-2002 - 10-08-2007
👍ಮೊಹಮ್ಮದ್ ಹಮೀದ್ ಅನ್ಸಾರಿ :  2007 - 2012
👍ಮೊಹಮ್ಮದ್ ಹಮೀದ್ ಅನ್ಸಾರಿ :  2012 ಇಂದಿನವರೆಗೆ..

4 ಕಾಮೆಂಟ್‌ಗಳು: