ಸೋಮವಾರ, ಮಾರ್ಚ್ 27, 2017

ಭಾರತದ ಭೂಗೋಳ ಸಾಮಾನ್ಯ


2. ಭಾರತದ ಭೂಗೋಳ

1. ಭಾರತವು ಏಷ್ಯಾ ಖಂಡದಲ್ಲಿದೆ.

2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.

3. ಭಾರತದ ಉಪಖಂಡದ ದಕ್ಷಿಣದ ತುದಿ "ಇಂದಿರಾ ಪಾಯಿಂಟ",  ಹಾಗೂ ಅದೇ ರೀತಿಯಾಗಿ ಉತ್ತರ ತುದಿಯನ್ನು "ಇಂದಿರಾ ಕೋಲ್ " ಎಂದು ಕರೆಯುವರು.

4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.

5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.

6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.

7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.

8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.

9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)

10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.

11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.

12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.

13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.

14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.

15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.

16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.

17. ಭಾರತದಲ್ಲಿ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ.

18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.

19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.

20. ಹೊಸದಾಗಿ ರಚನೆಯಾದ ಚತ್ತೀಸಗರ್ದ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______

21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ ಗಡಿ ಪ್ರದೇಶ.

22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ ಪ್ರದೇಶ ಎಂದು ಕರೆಯಲಾಗಿದೆ.

23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.

24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.

25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು ಸಮುದ್ರ ಎನ್ನುವರ.

26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.

27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ (ಲೈನ್ ಆಪ್ ಕಂಟ್ರೋಲ್) ಎನ್ನುವರು.

28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.

29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.

30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.

31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.

32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.

33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ ಚಿಕ್ಕ ಜಿಲ್ಲೆ-ಪಾಂಡಿಚೇರಿ

34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ.

ಪ್ರಚಲಿತ ವಿದ್ಯಮಾನ(ನಿಮಗಿದು ತಿಳಿದಿರಲಿ)

*🌕#ನಿಮಗೆ ಗೊತ್ತಿರಲಿ🌕*

👉ದೇಶದ ಮೊದಲ ಬ್ರಾಡ್ ಬ್ಯಾಂಡ್ ಯೋಜನೆ ಸ್ಥಾಪಿಸಿದ ಜಿಲ್ಲೆ - ಕೇರಳದ "ಇಡುಕ್ಕಿ"

👉ಮುಖಚರ್ಯೆ ಮೂಲಕ ಕಾರ್ಯನಿರ್ವಹಿಸುವ ATM ಅಭಿವೃದ್ಧಿಪಡಿಸಿದ ದೇಶ- ಚೀನಾ

👉ಇತ್ತೀಚೆಗೆ ಭಾರತ-ನೇಪಾಳ ದೇಶಗಳು ಜಂಟಿಯಾಗಿ ನಡೆಸಿದ ಸಮರಾಭ್ಯಾಸ - "ಸೂರ್ಯಕಿರಣ -8,"

👉ಭಾರತ- ಮಂಗೋಲಿಯಾ ಮಧ್ಯೆ ನಡೆದ ಮಿಲ್ಟ್ರಿ ಅಭ್ಯಾಸ- "ನಾಮೆಂಡಿಕ್ ಎಲಿಫೆಂಟ್ 2015"

👉 ದೆಹಲಿಯಿಂದ ಆಗ್ರಾ ನಗರಗಳನ್ನು ಸಂಪರ್ಕಿಸುವ ದೇಶದ ವೇಗವಾದ ರೈಲು - "ಗಾತಿಮಾನ್ ಎಕ್ಸಪ್ರೆಸ್",( tango ಪರೀಕ್ಷಾಥ೯ವಾಗಿದೆ )

👉ಮುದ್ರಾಯೋಜನೆ ಪ್ರಥಮವಾಗಿ ಜಾರಿಗೆ ತಂದ ಬ್ಯಾಂಕು -  "ಕಾರ್ಪೋರೇಷನ್ ಬ್ಯಾಂಕು",

ಕರ್ನಾಟಕದ ಜನಸಂಖ್ಯೆ

ಜನಸಂಖ್ಯೆ
ಕರ್ನಾಟಕದ ಜನಸಂಖ್ಯೆ

*ಒಂದು ನಿರ್ದಿಷ್ಟವಾದ ಭೂ ಪ್ರದೇಶದಲ್ಲಿ ವಾಸಿಸುವ ಜನರ ಒಟ್ಟು ಸಮೂಹವನ್ನು’ಜನಸಂಖ್ಯೆ’ ಎನ್ನುವರು.*

*# 2011 ರ ಜನಗಣತಿಯ ಪ್ರಕಾರ ಕರ್ನಾಟಕವು 6,11,30,704 ಜನಸಂಖ್ಯೆಯನ್ನು ಹೊಂದಿದೆ.*

*# ಇದರಲ್ಲಿ ಪುರುಷರ ಸಂಖ್ಯೆ - 3,10,57,742 ಆಗಿದೆ. ಮತ್ತು ಮಹಿಳೆಯರ ಸಂಖ್ಯೆ - 3,00,72,662 ಆಗಿದೆ.*

*# ಬೆಂಗಳೂರು ನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಜಿಲ್ಲೆಯಾಗಿದ್ದು, ಕೊಡಗು ಕಡೆಯ ಸ್ಥಾನದಲ್ಲಿದೆ.*

*ಜನಸಾಂದ್ರತೆ :-*

# 2011 ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದ ಜನಸಾಂದ್ರತೆ 319 ಆಗಿದೆ.

# ಬೆಂಗಳೂರು ನಗರ ಜಿಲ್ಲೆಯು ಅಧಿಕ ಜನಸಾಂದ್ರತೆ ಹೊಂದಿದ್ದು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.

# ಕೊಡಗು ಜಿಲ್ಲೆಯು(135) ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ.

*ಲಿಂಗಾನುಪಾತ :-*

# 2011 ರ ಜನಗಣತಿಯ ಪ್ರಕಾರ ರಾಜ್ಯದ ಲಿಂಗಾನುಪಾತ 973 ಆಗಿದೆ.

# ಉಡುಪಿ, ಕೊಡಗು, ದ.ಕನ್ನಡ, ಹಾಸನ ಜಿಲ್ಲೆಗಳಲ್ಲಿ ಪುರಷರಿಗಿಂತ ಹೆಚ್ಚು ಮಹಿಳೆಯರು ಕಂಡುಬರುತ್ತಾರೆ.

# ಉಡುಪಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 1093 ಸ್ತ್ರೀಯರಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಸ್ತ್ರೀಯರ ಪ್ರಮಾಣವುಳ್ಳ ಜಿಲ್ಲೆಯಾಗಿದೆ.

# ಬೆಂಗಳೂರು ನಗರ ಜಿಲ್ಲೆಯು ಪ್ರತಿ ಸಾವಿರ ಪುರಷರಿಗೆ 908 ಮಹಿಳೆಯರನ್ನು ಹೊಂದಿದ್ದು ರಾಜ್ಯದ ಕಡೆಯ ಸ್ಥಾನದಲ್ಲಿದೆ.

*ಸಾಕ್ಷರತೆಯ ಪ್ರಮಾಣ :-*

# 2011 ರ ಜನಗಣತಿಯ ಪ್ರಕಾರ ರಾಜ್ಯದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ. 75.6 ಆಗಿದೆ.

# ದಕ್ಷಿಣ ಕನ್ನಡ ಜಿಲ್ಲೆಯು ಶೇ. 88.6% ರಷ್ಟು ಸಾಕ್ಷರತೆ ಹೊಂದಿದ್ದು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.

# ನಂತರ ಬೆಂಗಳೂರು ನಗರ ಜಿಲ್ಲೆಯು (88.5%) ರಷ್ಟು ಹೊಂದಿದ್ದು ಎರಡನೆಯ ಸ್ಥಾನದಲ್ಲಿದೆ. ಮತ್ತು ಉಡುಪಿ ಮೂರನೆಯ ಸ್ಥಾನದಲ್ಲಿದೆ.

# ಯಾದಗಿರಿ ಜಿಲ್ಲೆಯು (52.4%) ಅತಿ ಕಡಿಮೆ ಸಾಕ್ಷರತಯುಳ್ಳ ಜಿಲ್ಲೆಯಾಗಿದೆ.

# ಪುರಷರ ಸಾಕ್ಷರತೆಯ ಪ್ರಮಾಣವು ಶೇ. 82.9% ರಷ್ಟಿದ್ದು, ಮಹಿಳೆಯರ ಸಾಕ್ಷರತೆಯ ಪ್ರಮಾಣವು ಶೇ. 68.2% ರಷ್ಟಿರುತ್ತದೆ.

ಭಾರತದ ಅರಣ್ಯಗಳು

ಭಾರತದ ಅರಣ್ಯಗಳ

ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ (69.0 ದ.ಲ.ಹೇ) ಅಂದರೇ ಭೌಗೋಳಿಕ ಕ್ಷೇತ್ರದ ಶೇ 21.02 ರಷ್ಟು ಭೂಭಾಗವು ಅರಣ್ಯಗಳಿಂದ ಕೂಡಿದೆ.

ಭಾರತದ ಅರಣ್ಯ ಪ್ರದೇಶವನ್ನು ಮುಖ್ಯವಾಗಿ ಆರು ಪ್ರಕಾರಗಳಾಗಿ ವಿಂಗಡಿಸಬಹುದಾಗಿದೆ. ಅವುಗಳೆಂದರೇ

 

1) ನಿತ್ಯಹರಿದ್ವರ್ಣದ ಅರಣ್ಯಗಳು:-

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು 250 ಸೆಂ.ಮೀ ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮೀ. ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣಬಹುದಾಗಿದೆ.

# ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡುಬರುತ್ತದೆ.

# ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು ಸುಮಾರು 2.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿವೆ. ಈ ಪ್ರದೇಶದಲ್ಲಿ ಸಸ್ಯವರ್ಗವು ವರ್ಷವೆಲ್ಲಾ ಹಸಿರಾಗಿರುವುದರಿಂದ ಇವುಗಳನ್ನು ನಿತ್ಯಹರಿದ್ವರ್ಣದ ಅಥವಾ ಸದಾ ಹಚ್ಚ ಹಸಿರಾಗಿರುವ ಅರಣ್ಯವೆಂದು ಕರೆಯುವರು.

 

2) ಎಲೆಯುದುರುವ ಮಾನ್ಸೂನ್ ಅರಣ್ಯಗಳು:-

# ಈ ಪ್ರಕಾರದ ಅರಣ್ಯಗಳು ಭಾರತದಲ್ಲಿ ಅತಿ ಹೆಚ್ಚು ವಿಸ್ತಾರವಾಗಿ ಹರಡಿವೆ. ಇವುಗಳು 75 ರಿಂದ 250 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ.

# ಇದು ಭಾರತದ ಶೇ. 65.5 ರಷ್ಟು ಒಟ್ಟು ಅರಣ್ಯದಲ್ಲಿ ಹರಡಿವೆ. ಇವುಗಳು ವರ್ಷದ ನಿರ್ದಿಷ್ಟ ಒಣ ಹವೆಯ ಋತುವಿನಲ್ಲಿ ಎಲೆಯನ್ನು ಉದುರಿಸುವುದನ್ನು ರೂಢಿಸಿಕೊಂಡಿರುವುದರಿಂದ ಇವುಗಳನ್ನು ಎಲೆಯುದುರಿಸುವ ಮಾನ್ಸೂನ್ ಅರಣ್ಯಗಳೆಂದು ಕರೆಯುವರು.

 

3) ಉಷ್ಣವಲಯದ ಹುಲ್ಲುಗಾವಲು ಅರಣ್ಯ:-

# ಭಾರತದಲ್ಲಿ 60 ರಿಂದ 75 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ಹುಲ್ಲುಗಾವಲು ಸಸ್ಯವರ್ಗ ಪ್ರಧಾನವಾಗಿ ಕಂಡುಬರುವುದು.

# ಈ ವಲಯಗಳಲ್ಲಿ ಎತ್ತರವಾದ ಹುಲ್ಲು ಹಾಗೂ ವಿರಳವಾಗಿ ಅಲ್ಲಲ್ಲಿ ಕುರುಚಲ ಜಾತಿಯ ಸಸ್ಯವರ್ಗಗಳನ್ನು ಕಾಣಬಹುದು.

# ದಖನ್ ಪ್ರಸ್ಥಭೂಮಿಯ ಕೇಂದ್ರಭಾಗ, ಅರಾವಳಿ ಪರ್ವತಗಳ ಪಶ್ಚಿಮದಲ್ಲಿರುವ ಥಾರ್ ಮರುಭೂಮಿಯ ಅಂಚಿನ ವಲಯಗಳು ಈ ಬಗೆಯ ಸಸ್ಯವರ್ಗವನ್ನು ಹೊಂದಿವೆ. 

# ಬಬೂಲ್, ಶಿಷಮ್, ಸಭಾಯ್ ಹುಲ್ಲು ಇತ್ಯಾದಿ ಇಲ್ಲಿ ಬೆಳೆಯುತ್ತವೆ.

 

4) ಮ್ಯಾಂಗ್ರೋವ್ ಅರಣ್ಯಗಳು:-

# ಈ ಕಾಡುಗಳು ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತವೆ. 

# ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾನದಿ ಮುಖಜಭೂಮಿಯಲ್ಲಿ ಕಂಡುಬರುತ್ತವೆ. 

# ಗಂಗಾ ನದಿಯ ಮುಖಜ ಭೂಮಿಯಲ್ಲಿ ಸುಂದರಿ ಮರಗಳು ಹೇರಳವಾಗಿರುವುದರಿಂದ ಈ ಪ್ರದೇಶವನ್ನು ಸುಂದರಬನ್ ಎಂದು ಕರೆಯುತ್ತಾರೆ.

# ಈ ಅರಣ್ಯಗಳ ಕ್ಷೇತ್ರ ದೇಶದಲ್ಲಿ 4.4 ಸಾವಿರ ಚ.ಕಿ.ಮೀ ರಷ್ಟಿರುವುದು.

 

5) ಮರುಭೂಮಿ ಅರಣ್ಯಗಳು:-

# ಈ ಅರಣ್ಯಗಳು ಸಾಮಾನ್ಯವಾಗಿ ವಾರ್ಷಿಕ 50 ಸೆಂ.ಮೀ ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. 

# ರಾಜಸ್ಥಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಕೆಲವು ಭಾಗಗಳಲ್ಲಿ ಈ ಅರಣ್ಯಗಳಿವೆ.

# ಈ ಸಸ್ಯವರ್ಗಗಳು ಆಳವಾಗಿ ಬೇರುಗಳನ್ನು ಹೊಂದಿದ್ದು ಕುರುಚಲು ಜಾತಿಯ ಸಸ್ಯವರ್ಗಗಳು ಮುಳ್ಳು ಕಂಟಿಗಳಿಂದ ಕೂಡಿರುತ್ತವೆ.

 

6) ಹಿಮಾಲಯದ ಅಲ್ಪೈನ್ ಅರಣ್ಯಗಳು:-

# ಹಿಮಾಲಯ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡುಬರುತ್ತವೆ. ಏಕೆಂದರೆ ಎತ್ತರವು ಹೆಚ್ಚಿದಂತೆ ಉಷ್ಣವಲಯದಿಂದ ಧ್ರುವ ಪ್ರದೇಶದವರೆಗಿನ ವಾಯುಗುಣಗಳನ್ನು ಈ ಪರ್ವತಗಳಲ್ಲಿ ಕಾಣಬಹುದು.

# ವಾಯುಗುಣಕ್ಕೆ ಅನುಗುಣವಾಗಿ ವಿವಿಧ ಪ್ರಕಾರದ ಸಸ್ಯವರ್ಗಗಳು ಇಲ್ಲಿ ಕಂಡುಬರುವವು.

# ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೇ - ಸಾಲ್, ಬೈರಾ, ಟೂನ್, ಸಿಲ್ವರ್, ಸ್ಟ್ರೂಸ್, ಲಾರೆಲ್ ಮುಂತಾದ ಎಲೆ ಮೊನಚಾದ ಅರಣ್ಯಗಳು ಪ್ರಧಾನವಾಗಿ ಬೆಳೆದಿರುತ್ತವೆ.

ತೌಲನಿಕ ಸಾಹಿತ್ಯ ಅದ್ಯಯನ

🌺 ತೌಲನಿಕ ಸಾಹಿತ್ಯ ಅಧ್ಯಯನ 🌺

1)  ಠಾಗೂರರ ಗೀತಾಂಂಜಲಿ ಎಂಬ ಕೃತಿಯಿಂದ ಪ್ರಭಾವ ಪಡೆದ ಮುಕ್ತ ಛಂದಸ್ಸಿನ ಕೃತಿಗಳು ಯಾವವು ?                       
👉(1) ಬೇಂದ್ರೆಯವರ -       ಕರುಳಿನ ವಚನಗಳು
👉(2) ರಂ.ರಾ.ದಿವಾಕರರ -  ಅಂತರಾತ್ಮವಿದೆ.
👉(3) ಗೋಕಾಕರ - ಸಮುದ್ರಗೀತೆಗಳು

2) "ಕದಿಯದ ಕವಿಯಿಲ್ಲ ಕದಿಯದ ವರ್ತಕನಿಲ್ಲ ಯಾರು ಬಚ್ಚಿಡಲು ಬಲ್ಲನೋ ಅವನು ಮಾತಿಗೆ ಸಿಕ್ಕದೆ ಬಾಳುತ್ತಾನೆ" ಎಂದು ಅನುಕರಣೆಯ ಕುರಿತು ಹೇಳಿದವರು ಯಾರು ?
👉 ರಾಜಶೇಖರ
3) ರಕ್ತಾಕ್ಷಿ ಇದು ಯಾರು ರಚಿಸಿದ ನಾಟಕವಾಗಿದೆ ?
👉 ಕುವೆಂಪು
4) ರಕ್ತಾಕ್ಷಿ ನಾಟಕವು ಯಾವ ನಾಟಕದಿಂದ ಪ್ರಭಾವಗೊಂಡಿದೆ ?
👉 ಶೇಕ್ಸಪೀಯರನ - ಹೆಮ್ಲೆಟ್ ನಾಟಕ.
5) ರಕ್ತಕ್ಷಿ ನಾಟಕದ ಕಥಾ ವಸ್ತು ಏನು ?
👉 ಚಂಚಲತೆ ಮತ್ತು ಸೇಡು
6) ಬಿರುಗಾಳಿ ನಾಟಕದ ಕತುೃ ಯಾರು ?
👉 ಕುವೆಂಪು
7) ಬಿರುಗಾಳಿ ನಾಟಕವು ಯಾವ ನಾಟಕದಿಂದ ಪ್ರಭಾವಗೊಂಡಿದೆ ?
👉 ಶೇಕ್ಸಪೀಯರನ ಟೆಂಪೆಸ್ಟ್ ನಾಟಕ
8) ಬಿರುಗಾಳಿ ನಾಟಕದಲ್ಲಿ ಯಾರ ಉದಾರ ಚರಿತ್ರೆಯನ್ನು ನೋಡಬಹುದು ?
👉 ಭೈರವನಾಯಕ
9) ಮೊಟ್ಟಮೊದಲ ದುರಂತ ನಾಟಕ ಯಾವುದು ?
👉 ಬಿ. ಎಂ. ಶ್ರೀ.ಯವರ ಅಶ್ವತ್ಥಾಮನ್ ನಾಟಕ (ರುದ್ರನಾಟಕ)
10) ಅಶ್ವತ್ಥಾಮನ್ ನಾಟಕವು ಯಾವ ನಾಟಕದಿಂದ ಪ್ರಭಾವ ಪಡೆದಿದೆ ?
👉 ಸೊಪೋಕ್ಲಿಸ್ ನ - ಏಜಕ್ಸ್
11) ಸ್ಪೀಕಿಂಗ್ ಆಪ್ ಶಿವಾ ಕೃತಿಯ ಕತುೃ ಯಾರು ?
👉 ಎ.ಕೆ. ರಾಮಾನುಜನ್
12) ಶರಣರ ನೂರೊಂದು ವಚನಗಳು ಇದು ಯಾರ ಕೃತಿ ?
👉 ಡಾ.ಪ್ರಭುಶಂಕರ
13) ಮಿತ್ರಾವಿಂದ ಗೋವಿಂದ (ಹಳೆಗನ್ನಡ ಕೃತಿ) ಇದು ಯಾವ ನಾಟಕದ ಭಾಷಾಂತರವಾಗಿದೆ ?
👉 ಶ್ರೀ .ಹರ್ಷನ ರತ್ನಾವಳಿ ನಾಟಕ
14) ಏಜಾಕ್ಸ ಅಥವಾ ಅಯಾಸ್ ರುದ್ರನಾಟಕದ ಕತುೃ ಯಾರು ?
👉 ಸೋಪೋಕ್ಲಿಸ್
15) ಮೀಡಿಯಾ ಎಂಬ ರುದ್ರನಾಟಕದ ಕತುೃ ಯಾರು ?
👉 ಯೂರಿಪಿಡೀಸ್
16) ಮ್ಯಾಕ್ಸಿಂ ಗಾರ್ಕಿಯವರ ಪ್ರಸಿದ್ಧ ಕಾದಂಬರಿ ?
👉 ತಾಯಿ
17) ಪಿ.ಲಂಕೇಶರಂದ ಕನ್ನಡಕ್ಕೇ ಅನುವಾದವಾಗಿರುವ ನಾಟಕ ಯಾವುದು ?
👉 ದೊರೆ ಇಡಿಪಸ್ (ಸೊಪೋಕ್ಲಿಸ್ ನ ನಾಟಕ)
18) ಕುಮಾರವ್ಯಾಸನು ಭಾರತ ಕಥಾಮಂಜರಿಯನ್ನು ಯಾವ ಷಟ್ಪದಿಯಲ್ಲಿ ರಚಿಸಿದ್ದಾನೆ ?
👉 ಭಾಮಿನಿ ಷಟ್ಪದಿ
19) ತೆಲಗು ಭಾಷೆಯಲ್ಲಿ ಬಸವ ಪುರಾಣವನ್ನು ಬರೆದವರು ಯಾರು ?
👉 ಪಾಲ್ಕುರಿಕೆ ಸೋಮನಾಥ
20) ಅರವಿಂದರ ಕೃತಿಗಳು ಯಾವವು ?
👉 (1) ಸಾವಿತ್ರಿ (ಮಹಾಕಾವ್ಯ)
(2) ಬಿಡಿ ಕವಿತೆಗಳು
(3) ಲೈಫ್ ಡಿವೈನ್ (ಆತ್ಮಗೀತೆ - ಉಚ್ಚ ಮಟ್ಟದ್ದು)
21) ಶಿಶುನಾಳ  ಶರೀಪರ ಮೊದಲ ಹಸರು ?
👉 ಮಹಮ್ಮದ ಶರೀಫ
22) ಮೀರಾಬಾಯಿಯ ಕೃತಿಗಳು ಯಾವವು ?
👉 (1) ಗೀತಗೋವಿಂದ
      (2) ರಾಗ ಗೋವಿಂದ
      (3) ರಾಗ ಸೋರಕೆಪದ
23) ಮಧುರಚೆನ್ನರ ಕೃತಿಗಳು ಯಾವವು ?
👉 (1) ಪೂರ್ವರಂಗ
      (2) ಕಾಳ ರಾತ್ರಿ
24) ಸೊಹ್ರಾಬ್ ರುಸ್ತುಂ ಫಿರ್ದೂಸಿ ಬರೆದ ಮಹಾಕಾವ್ಯ ಯಾವುದು ?
👉 ಷಹನಾಮ
25) ಲವಕುಶರ - ರಾಮರ ಪ್ರಸಂಗವನ್ನು ಚಿತ್ರಿಸುವ ಸಂಸ್ಕೃತ ನಾಟಕ ಯಾವುದು ?
👉 ಉತ್ತರ ರಾಮಾಯಣ (ಭವಭೂತಿಯ)

ಭಾರತದ ಐತಿಹಾಸಿಕ ಶಾಸನಗಳು

🌸
🌷ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :🌷
•┈┈┈┈┈┈┈┈┈┈┈┈┈┈
👉ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ
👉 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ
👉ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ
👉 ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್
👉 ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
👉 ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ
👉ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್
👉ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್
👉ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
👉 ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ
👉ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ
👉 ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ
👉ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ
👉. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ
👉. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
👉 ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ
👉 ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ಕೊಪ್ಪಳ
👉. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
👉. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ
👉 ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ
👉 ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950ರಲ್ಲಿ
👉. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ
👉. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ
👉. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ
👉. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ
👉. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
👉 ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ
👉. ಧೃವ ••┈┈┈┈• ಜೆಟ್ಟಾಯಿ ಶಾಸನ
👉ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ
👉 ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ
👉. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ
👉ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
👉ರವಿ ಕೀರ್ತೀ ••┈┈┈┈• ಐಹೋಳೆ ಶಾಸನ
👉 ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
👉 ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)
👉 ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.
👉. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ
👉. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.
👉. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
👉. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ
👉 ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ
👉. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
👉 ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .
👉 ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .
👉. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
👉. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .
👉. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ
👉. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ
👉

ಭಾನುವಾರ, ಮಾರ್ಚ್ 26, 2017

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ ( ಕ್ರಿ.ಶ 1336 - 1648)

ಸ್ಥಾಪಕರು ಹಕ್ಕಬುಕ್ಕರು
ಸ್ಥಾಪನೆಯ ಕಾಲ ಕ್ರಿ.ಶ 1336
ರಾಜಧಾನಿ ಮೊದಲು ಆನೆಗುಂದಿ ನಂತರ ಹಂಪೆ
ಲಾಂಛನ ವರಾಹ
ನಾಣ್ಯಗಳು ವರಾಹ, ಗದ್ಯಾಣ, ಪೊನ್, ಪಗೋಡ
ಕೊನೆಯ ಅರಸ ಸದಾಶಿವರಾಯ (ಕ್ರಿ.ಶ 1542-65)

ಹಕ್ಕಬುಕ್ಕರು ಕ್ರಿ.ಶ 1336 ರಲ್ಲಿ ತುಂಗಭದ್ರಾ ನರಿಯ ದಕ್ಷಿಣ ದಡದ ಮೇಲೆ ಈ ರಾಜ್ಯವನ್ನು ಸ್ಥಾಪಿಸಿದನು. ಮುಂದೆ ಹಂಪೆಯು ಇವರ ರಾಜಧಾನಿಯಾಯಿತು.

ವಿಜಯನಗರ ಸಾಮ್ರಾಜ್ಯವನ್ನಾಳಿದ ನಾಲ್ಕು ಮನೆತನಗಳು:- ವಿಜಯನಗರ ಸಾಮ್ರಾಜ್ಯವನ್ನಾಳಿದ ನಾಲ್ಕು ಮನೆತನಗಳೆಂದರೇ

1) ಸಂಗಮ ವಂಶ (ಕ್ರಿ.ಶ 1336-1485)

ಮೊದಲ ಅರಸ - ಹರಿಹರ (ಕ್ರಿ.ಶ 1336-1356)

ಕೊನೆಯ ಅರಸ - ವಿರುಪಾಕ್ಷ (ಕ್ರಿ.ಶ 1485)

2) ಸಾಳುವ ವಂಶ (ಕ್ರಿ.ಶ 1485-1505)

ಪ್ರಥಮ ಅರಸ - ಸಾಳುವ ನರಸಿಂಹ (ಕ್ರಿ.ಶ 1485-91)

ಕೊನೆಯ ಅರಸ - ಎರೆಡನೆಯ ನರಸಿಂಹ (ಕ್ರಿ.ಶ 1491-1505)

3) ತುಳುವ ವಂಶ (ಕ್ರಿ.ಶ 1505-1565)

ಪ್ರಥಮ ಅರಸ - ವೀರನರಸಿಂಹ (ಕ್ರಿ.ಶ 1503-09)

ಕೊನೆಯ ಅರಸ - ಸದಾಶಿವರಾಯ (ಕ್ರಿ.ಶ 1542-70)

ಪ್ರಸಿದ್ಧ್ ಅರಸ - ಶ್ರೀ ಕೃಷ್ಣದೇವರಾಯ (ಕ್ರಿ.ಶ 1509-29)

4) ಅರವೀಡು ವಂಶ (ಕ್ರಿ.ಶ 1565-1646)#

ಪ್ರಥಮ ಅರಸ - ತಿರುಮಲರಾಯ (ಕ್ರಿ.ಶ 1565-72)

ಕೊನೆಯ ಅರಸ - ಮೂರನೇಯ ಶ್ರೀರಂಗರಾಯ (ಕ್ರಿ.ಶ 1642-46)


ವಿಜಯನಗರ ಸಾಮ್ರಾಜ್ಯದ ಶಾಸನಗಳು

ಶಾಸನಗಳು ಕಾಲದ ರಾಜರು
ಬಾಗೇಪಲ್ಲಿ ತಾಮ್ರಪತ್ರ ಶಾಸನ ಒಂದನೇ ಹರಿಹರ
ಬಿತ್ರಗುಂತ ತಾಮ್ರಪತ್ರ ಶಾಸನ ಎರಡನೇ ಸಂಗಮ
ಚನ್ನರಾಯಪಟ್ಟಣ ಶಾಸನ ಮೂರನೇ ಹರಿಹರ
ಶ್ರೀರಂಗ ತಾಮ್ರಪತ್ರ ಶಾಸನ ಎರಡನೆಯ ದೇವರಾಯ
ದೇವುಲಾಪಲ್ಲಿ ತಾಮ್ರ ಶಾಸನ ಇಮ್ಮಡಿ ನರಸಿಂಹ
ಸೊರೈಕ್ಕವುರ್ ತಾಮ್ರ ಶಾಸನ ವಿರೂಪಾಕ್ಷ

ವಿಜಯನಗರ ಕಾಲದ ಸಾಹಿತ್ಯ

ಲೇಖಕರು ಕೃತಿಗಳು
ವಿದ್ಯಾರಣ್ಯರು ವೀರಭಾಷ್ಯ
ಲಕ್ಷ್ಮೀಶ ಜೈಮಿನಿ ಭಾರತ
ಕುಮಾರ ವಾಲ್ಮೀಕಿ ತೊರವೆ ರಾಮಾಯಣ
ಕುಮಾರವ್ಯಾಸ ಗದುಗಿನ ಭಾರತ
ಕನಕದಾಸರು ಮೋಹನ ತರಂಗಿಣಿ, ನಳ ಚರಿತೆ, ಹರಿಭಕ್ತಿ ಸಾರ, ರಾಮಧಾನ್ಯ ಚರಿತೆ
ಪುರಂದರ ದಾಸರು ಕೀರ್ತನೆಗಳು
ಚಾಮರಸ ಪ್ರಭುಲಿಂಗಲೀಲೆ
ಭೀಮಕವಿ ಬಸವ ಪುರಾಣ
ಕೃಷ್ಣದೇವರಾಯ ಅಮುಕ್ತಮೌಲ್ಯದ, ಜಾಂಬವತಿ ಕಲ್ಯಾಣ
ರತ್ನಾಕರವರ್ಣಿ ಭರತೇಶ ವೈಭವ
ಗಂಗಾದೇವಿ ಮಧುರಾವಿಜಯಂ
ಅಲ್ಲಾಸಾನಿ ಪೆದ್ದಣ್ಣ ಮನುಚರಿತಮು
ತೆನಾಲಿ ರಾಮಕೃಷ್ಣ ಉಭಟಾರಾಧ್ಯ ಚರಿತಂ

ಪಿ,ಎಸ್,ಎಲ್,ವಿ, ಉಡಾವಣ ವಾಹನದ ಮೈಲಿಗಲ್ಲುಗಳು

☀ ಪಿ.ಎಸ್.ಎಲ್.ವಿ (PSLV) : (Polar Satellite Launch Vehicle)
━━━━━━━━━━━━━━━━━━━━━━━━━
●.ಸಾಮಾನ್ಯ ಅಧ್ಯಯನ
(General Studies)
ನಾವು ಯಾವುದಾದರೂ ವಸ್ತುಗಳನ್ನು / ಜನರನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಾಗಿಸಬೇಕಾದರೆ ವಾಹನಗಳು ಬೇಕಾಗುತ್ತದೆ. ಅದೇ ರೀತಿ ಕೃತಕ ಉಪಗ್ರಹಗಳನ್ನು ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಲು ರಾಕೆಟ್ ಉಡಾವಣಾ ವಾಹನಗಳನ್ನು ಬಳಸುತ್ತಾರೆ.
●.ಉಪಗ್ರಹಗಳನ್ನು ಉಡಾಯಿಸಲು ಎರಡು ರೀತಿಯ ಉಡಾವಣಾ ವಾಹನಗಳನ್ನು ಬಳಸುತ್ತದೆ,
■. ಧ್ರುವ (ಪೋಲಾರ್) ಉಪಗ್ರಹ ಉಡಾವಣಾ ವಾಹನಗಳು (ಪಿ.ಎಸ್.ಎಲ್.ವಿ) ಮತ್ತು
■. ಭೂಸ್ಥಿರ ಕಕ್ಷಾ (ಜಿಯೊಸ್ಟೇಶನರಿ) ಉಪಗ್ರಹ ಉಡಾವಣಾ ವಾಹನಗಳು (ಜಿ.ಎಸ್.ಎಲ್.ವಿ).
●.ಈ ಉಡಾವಣಾ ವಾಹನವೂ ಭಾರತದ 32 ಮತ್ತು ವಿದೇಶದ 35 ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಿದೆ. 1993ರ ಸೆಪ್ಟೆಂಬರ್ 20ರಂದು ಐ.ಆರ್.ಎಸ್.-1ಇ ಉಪಗ್ರಹವನ್ನು ಉಡಾವಣೆ ಮಾಡುವಾಗ ವಿಫಲಗೊಂಡಿದ್ದು ಬಿಟ್ಟರೆ ಇದುವರೆಗೂ ಪಿ.ಎಸ್.ಎಲ್.ವಿಯೂ ಸತತವಾಗಿ 27 ಬಾರಿ ಯಶಸ್ವಿ ಫಲಿತಾಂಶವನ್ನು ಕೊಟ್ಟಿದೆ.
●.ಈ ವಾಹನದಲ್ಲಿ ಉಡಾವಣೆಯಾದ ಪ್ರಮುಖ ಯೋಜನೆಗಳು ಚಂದ್ರಯಾನ-1 ಮತ್ತು ಮಂಗಳಯಾನ ಯೋಜನೆ.
●.ಉಡಾವಣಾ ವಾಹನದ ಸಾಮರ್ಥ್ಯ :
••┈┈┈┈┈┈┈┈┈┈┈┈┈┈┈┈┈┈┈••
ಈ ಉಡಾವಣಾ ವಾಹನವೂ 620 ಕಿ. ಮೀ. ಸೂರ್ಯ ಸಮಕಾಲಿಕ ಧ್ರುವಿಯ ಕಕ್ಷೆಯಲ್ಲಿ (ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್) 1600 ಕಿ. ಗ್ರಾಂ. ತೂಕದ ಉಪಗ್ರಹವನ್ನು ಮತ್ತು ಭೂ ಸಮಕಾಲಿಕ ವರ್ಗಾವಣೆ ಕಕ್ಷೆಯಲ್ಲಿ(ಜಿಯೋ ಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್) 1050 ಕಿ. ಗ್ರಾಂ. ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
●.ಉಡಾವಣಾ ವಾಹನದ ಉದ್ದ:
••┈┈┈┈┈┈┈┈┈┈┈┈┈┈••
ಈ ವಾಹನದ ಉದ್ದ 44.4 ಮೀ. ಮತ್ತು ಉಡಾವಣೆಯ ತೂಕ 295 ಟನ್ಗಳು.
●. ಉಡಾವಣಾ ಹಂತಗಳು :
••┈┈┈┈┈┈┈┈┈┈┈┈┈┈••
■. ಬಹುಹಂತೀಯವಾಗಿ ನಿರ್ವಿುಸಲಾಗಿರುವ ಈ ವಾಹನವೂ ಮೇಲೇರುತ್ತಾ ಒಂದೊಂದೇ ಹಂತ ಉರಿಯುತ್ತ ಕಳಚಿಬೀಳುತ್ತ ಹೋಗುತ್ತದೆ. ವ್ಯೋಮನೌಕೆಯ ರೀತಿ ಇವುಗಳನ್ನು ಮರುಬಳಕೆ ಮಾಡಲಾಗುವುದಿಲ್ಲ.
■. ಈ ವಾಹನವೂ ಸರತಿ ಪ್ರಕಾರವಾಗಿ ನಾಲ್ಕು ಹಂತಗಳ ಘನ ಮತ್ತು ದ್ರವನೋದನ (ಪ್ರಾಪಲ್ಷನ್) ವ್ಯವಸ್ಥೆಯನ್ನು ಹೊಂದಿದೆ.
■. ಮೊದಲ ಹಂತವೂ ಪ್ರಪಂಚದಲ್ಲೇ ದೊಡ್ಡದಾದ ಘನನೋದಕ (ಪ್ರಾಪೆಲಂಟ್) ಬೂಸ್ಟರ್ ವ್ಯವಸ್ಥೆಯನ್ನು ಹೊಂದಿದೆ. ಇದು 139 ಟನ್ ನೋದಕವನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದೆ.
●.ಪಿ.ಎಸ್.ಎಲ್.ವಿ. ಉಡಾವಣಾ ವಾಹನದ ಮೈಲಿಗಲ್ಲುಗಳು :
••┈┈┈┈┈┈┈┈┈┈┈┈┈
┈┈┈┈┈┈┈┈┈┈┈┈┈┈┈┈┈┈┈••
1 - ಉಪಗ್ರಹದ ಹೆಸರು - ಐ.ಆರ್.ಎಸ್.-1ಇ
■. ಉಡಾವಣಾ ದಿನಾಂಕ - 20-09-1993
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ1
2 -ಉಪಗ್ರಹದ ಹೆಸರು - ಐ.ಆರ್.ಎಸ್.-ಪಿ2
■. ಉಡಾವಣಾ ದಿನಾಂಕ - 15-10-1994
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ2
3 -ಉಪಗ್ರಹದ ಹೆಸರು - ಐ.ಆರ್.ಎಸ್.-ಪಿ3
■. ಉಡಾವಣಾ ದಿನಾಂಕ - 21-03-1996
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ3
4 -ಉಪಗ್ರಹದ ಹೆಸರು - ಐ.ಆರ್.ಎಸ್.-1ಡಿ
■. ಉಡಾವಣಾ ದಿನಾಂಕ - 29-09-1997
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ1
5 -ಉಪಗ್ರಹದ ಹೆಸರು - ಓಶನ್ಸ್ಯಾಟ್ (ಐ.ಆರ್.ಎಸ್-ಪಿ.4), ಕಿಟ್ಸ್ಯಾಟ್-3, ಡಿಎಲ್ಆರ್-ಟಬ್ಸ್ಯಾಟ್
■. ಉಡಾವಣಾ ದಿನಾಂಕ - 26-05-1999
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ2
6 -ಉಪಗ್ರಹದ ಹೆಸರು - ಟೆಕ್ನಾಲಜಿ ಎಕ್ಸ್ಪರಿಮೆಂಟ್ ಸ್ಯಾಟ್ಲೈಟ್ (ಟಿ.ಇ.ಎಸ್.)
■. ಉಡಾವಣಾ ದಿನಾಂಕ - 22-10-2001
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ3
7 -ಉಪಗ್ರಹದ ಹೆಸರು - ಕಲ್ಪನಾ-1 (ಮೆಟ್ಸ್ಯಾಟ್)
■. ಉಡಾವಣಾ ದಿನಾಂಕ - 12-09-2002
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ4
8 -ಉಪಗ್ರಹದ ಹೆಸರು - ರಿಸೋರ್ಸ್ಸ್ಯಾಟ್-1 (ಐ.ಆರ್.ಎಸ್.-ಪಿ6)
■. ಉಡಾವಣಾ ದಿನಾಂಕ - 17-10-2003
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ5
9 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-1, ಹ್ಯಾಮ್್ಯಾಟ್
■. ಉಡಾವಣಾ ದಿನಾಂಕ - 05-05-2005
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ6
10 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2, ಎಸ್.ಆರ್.ಇ.-1 ಇನ್ನೂ ಎರಡು ಇತರೆ ಉಪಗ್ರಹ
■. ಉಡಾವಣಾ ದಿನಾಂಕ - 10-01-2007
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ7
11 -ಉಪಗ್ರಹದ ಹೆಸರು - ಅಗಿಲೆ
■. ಉಡಾವಣಾ ದಿನಾಂಕ - 23-04-2007
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ8
12 -ಉಪಗ್ರಹದ ಹೆಸರು - ಟೆಕ್ಸಾರ್
■. ಉಡಾವಣಾ ದಿನಾಂಕ - 23-01-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ10
13 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2ಎ, ಐ.ಎಮ್ಎಸ್.-1 ಮತ್ತು ಎಂಟು ನ್ಯಾನೋ ಉಪಗ್ರಹ
■. ಉಡಾವಣಾ ದಿನಾಂಕ - 28-04-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ9
14 -ಉಪಗ್ರಹದ ಹೆಸರು - ಚಂದ್ರಯಾನ-1
■. ಉಡಾವಣಾ ದಿನಾಂಕ - 22-10-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ11
15 -ಉಪಗ್ರಹದ ಹೆಸರು - ರಿಸ್ಯಾಟ್-2, ಅನುಸ್ಯಾಟ್
■. ಉಡಾವಣಾ ದಿನಾಂಕ - 20-04-2009
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ12
16 -ಉಪಗ್ರಹದ ಹೆಸರು - ಓಶನ್ಸ್ಯಾಟ್-2 (ಐ.ಆರ್.ಎಸ್.-ಪಿ4) ಮತ್ತು ಆರು ನ್ಯಾನೋ ಉಪಗ್ರಹ
■. ಉಡಾವಣಾ ದಿನಾಂಕ - 23-09-2009
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ14
17 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2ಬಿ ಇನ್ನೂ ನಾಲ್ಕು ಇತರೆ ಉಪಗ್ರಹ
■. ಉಡಾವಣಾ ದಿನಾಂಕ - 12-07-2010
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ15
18 -ಉಪಗ್ರಹದ ಹೆಸರು - ರಿಸೋರ್ಸ್ಸ್ಯಾಟ್-2, ಯೂಥ್ಸ್ಯಾಟ್ ಮತ್ತು ಎಕ್ಸ್ಸ್ಯಾಟ್
■. ಉಡಾವಣಾ ದಿನಾಂಕ - 20-04-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ16
19 -ಉಪಗ್ರಹದ ಹೆಸರು - ಜಿಸ್ಯಾಟ್-12
■. ಉಡಾವಣಾ ದಿನಾಂಕ - 15-07-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ17
20 -ಉಪಗ್ರಹದ ಹೆಸರು - ಮೆಗಾ ಟ್ರೊಪಿಕ್ಯೂಸ್, ಎಸ್.ಆರ್.ಎಮ್್ಯಾಟ್, ಜುಗ್ನು
■. ಉಡಾವಣಾ ದಿನಾಂಕ - 12-10-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ18
21 -ಉಪಗ್ರಹದ ಹೆಸರು - ರಿಸ್ಯಾಟ್-1
■. ಉಡಾವಣಾ ದಿನಾಂಕ - 26-04-2012
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ19
22 -ಉಪಗ್ರಹದ ಹೆಸರು - ಸ್ಪಾಟ್-6 ಮತ್ತು ಪ್ರೋಯ್ಟರ್ಸ್
■. ಉಡಾವಣಾ ದಿನಾಂಕ - 09-09-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ21
23 -ಉಪಗ್ರಹದ ಹೆಸರು - ಸರಳ್ ಮತ್ತು ಆರು ವಾಣಿಜ್ಯೋದ್ದೇಶ ಉಪಗ್ರಹಗಳು
■. ಉಡಾವಣಾ ದಿನಾಂಕ - 25-02-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ20
24 -ಉಪಗ್ರಹದ ಹೆಸರು - ಐಆರ್ಎನ್ಎಸ್ಎಸ್
■. ಉಡಾವಣಾ ದಿನಾಂಕ - 01-07-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ22
25 -ಉಪಗ್ರಹದ ಹೆಸರು - ಮಾರ್ಸ್ ಆರ್ಬಿಟರ್ ಮಿಷನ್ ಸ್ಪೇಸ್ಕ್ರಾಫ್ಟ್
(ಮಂಗಳ ಕಕ್ಷೆಗಾಮಿ ಗಗನನೌಕೆ)
■. ಉಡಾವಣಾ ದಿನಾಂಕ - 05-11-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ25
26 -ಉಪಗ್ರಹದ ಹೆಸರು - ಐಆರ್ಎನ್ಎಸ್ಎಸ್ 1ಬಿ
■. ಉಡಾವಣಾ ದಿನಾಂಕ - 04-04-2014
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ24
27 -ಉಪಗ್ರಹದ ಹೆಸರು - ಐಆರ್ಎನ್ಎಸ್ಎಸ್ 1ಸಿ
■. ಉಡಾವಣಾ ದಿನಾಂಕ - 16-10-2014
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ26
28 -ಉಪಗ್ರಹದ ಹೆಸರು - ಐಆರ್ಎನ್ಎಸ್ಎಸ್ 1ಡಿ
■. ಉಡಾವಣಾ ದಿನಾಂಕ - 28-03-2015
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ27