ಚೆನ್ನೈ: ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಮೋಘ ಲಯದಲ್ಲಿದ್ದು, ಭಾರತೀಯ ಪಿಚ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟರ್ಬನೇಟರ್ ಹರ್ಭಜನ್ ಸಿಂಗ್ ಅವರಿಗೆ ಸಡ್ಡು ಹೊಡೆದು ಎರಡನೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆರ್ ಅಶ್ವಿನ್ 23.5 ಓವರ್‌ಗಳನ್ನು ಎಸೆದು 43ಕ್ಕೆ 5 ವಿಕೆಟ್ ಪಡೆದರು. ಇದು ಇನಿಂಗ್ಸ್ ಒಂದರಲ್ಲಿ ಅಶ್ವಿನ್ ಐದು ವಿಕೆಟ್ ಪಡೆದ ಸಾಧನೆ ಮಾಡಿರುವುದು 29ನೇ ಬಾರಿ ಆಗಿದೆ.
ಇದೇ ವೇಳೆ ಅಶ್ವಿನ್ ಭಾರತೀಯ ಪಿಚ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅಶ್ವಿನ್ ಭಾರತೀಯ ಪಿಚ್‌ಗಳಲ್ಲಿ ಒಟ್ಟು 266* ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿ ಬಜ್ಜಿಗೆ ಸಡ್ಡು ಹೊಡೆದರು.
ಆಸೀಸ್ ವಿರುದ್ಧದ ಟಿ20 ಸರಣಿಗೆ 13 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಕಿವೀಸ್!
ಈ ಪಟ್ಟಿಯಲ್ಲಿ 265 ವಿಕೆಟ್‌ಗಳನ್ನು ಪಡೆದಿರುವ ಹರ್ಭಜನ್ ಸಿಂಗ್ ಈಗ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಅಶ್ವಿನ್ ದ್ವಿತೀಯ ಸ್ಥಾನಕ್ಕೇರಿದ್ದು, ಮಾಜಿ ದಿಗ್ಗಜ ಬೌಲರ್ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್ 24.88ರ ಸರಾಸರಿಯಲ್ಲಿ 350 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯೂ ಅನಿಲ್ ಕುಂಬ್ಳೆ ಅವರ ಹೆಸರಲ್ಲಿದೆ. ಈ ಪಟ್ಟಿಯಲ್ಲಿ ಜಂಬೋ ಖ್ಯಾತಿಯ ಭಾರತ ತಂಡದ ಮಾಜಿ ನಾಯಕ ಕುಂಬ್ಳೆ 619 ವಿಕೆಟ್‌ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಮಾಜಿ ಆಲ್‌ರೌಂಡರ್ ಕಪಿಲ್ ದೇವ್ 434 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಸ್ಪಿನ್ ಮೋಡಿ, ದ್ವಿತೀಯ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾಗೆ ಬೃಹತ್ ಮುನ್ನಡೆ!
ಹರ್ಭಜನ್ ಸಿಂಗ್ ಮೂರನೇ ಸ್ಥಾನದಲ್ಲಿದ್ದು 417 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 391* ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ 400 ವಿಕೆಟ್‌ಗಳ ಗಡಿ ದಾಟುವ ಸಾಧ್ಯತೆ ದಟ್ಟವಾಗಿದೆ
ಶುಕ್ರವಾರ, ಮೇ 21, 2021
ಚಿಪ್ಕೊ ಚಳುವಳಿಯ ನಾಯಕ ಸುಂದರಲಾಲ ಬಹುಗುಣ ಕೋವಿಡ್ ನಿಂದ ನಿಧನ
ಒಳನೋಟ : ಯಕ್ಷಗಾನ ಬೆಳೆದು ಬಂದ ಇತಿಹಾಸ
‘ಕನ್ನಡ ಸಾಹಿತ್ಯಾಭ್ಯಾಸವು ಸಾಮಾನ್ಯವಾಗಿ ಪರಿಚಯ- ವಿಮರ್ಶೆ- ಸಂಶೋಧನೆ ಮತ್ತು ದಾಖಲಾತಿ ಎಂಬ ನಾಲ್ಕು ಮುಖಗಳಲ್ಲಿ ನಡೆಯುತ್ತಿರುವುದು ಹೊಸಕಾಲದ ಪದ್ಧತಿ’ ಎಂದು ಈ ಕೃತಿಗೆ ಮುನ್ನುಡಿ ಬರೆದ ಡಾ.ಪಾದೇಕಲ್ಲು ವಿಷ್ಣುಭಟ್ಟರು ಅಭಿಪ್ರಾಯಪಟ್ಟಂತೆ ಕಬ್ಬಿನಾಲೆಯವರ ಈ ಕೃತಿಯೂ ಅದೇ ದಿಕ್ಕಿನಲ್ಲಿ ಸಾಗಿದೆ. ಅಷ್ಟೇ ಅಲ್ಲ, ಅದಕ್ಕೆ ಸಾಕಷ್ಟು ಅಧಿಕೃತತೆಯನ್ನೂ ಲೇಖಕರು ಒದಗಿಸಿದ್ದಾರೆ. ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ, ಪಡುವಲಪಾಯ-ಪ್ರಸಂಗ ಸಾಹಿತ್ಯ, ಮೂಡಲಪಾಯ -ಪ್ರಸಂಗ ಸಾಹಿತ್ಯ, ಯಕ್ಷಗಾನದಲ್ಲಿ ಪ್ರಯೋಗಶೀಲತೆ, ಮೌಖಿಕ ಸಾಹಿತ್ಯ, ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು- ಹೀಗೆ ಒಟ್ಟು ಏಳು ಅಧ್ಯಾಯಗಳಲ್ಲಿ ಸಾಗುವ ಈ ಕೃತಿ ಯಕ್ಷಗಾನದ ಒಟ್ಟು ಸ್ವರೂಪವನ್ನು ಒಂದೇ ತೆಕ್ಕೆಗೆ ಪರಿಚಯಿಸಿಬಿಡುತ್ತದೆ.
ಸನ್ನಿವೇಶಕ್ಕೆ ಅನುಗುಣವಾಗಿ ಆಯಾ ವಸ್ತು-ಪದಾರ್ಥಗಳ ಬಗ್ಗೆ, ಪ್ರಸಂಗಕೃತಿಗಳ ಬಗ್ಗೆ, ಪ್ರಯೋಗಶೀಲತೆಗಳ ಬಗ್ಗೆ, ಮೌಖಿಕ ಸಾಹಿತ್ಯದ ಬಗ್ಗೆ, ಕವಿಗಳ ಬಗ್ಗೆ ಹೊಸ ಬೆಳಕು ಚೆಲ್ಲುವ ಕಿರು ಪರಿಚಯ, ವಿಮರ್ಶೆ ಮಾಡಿರುವುದು ಆಯಾ ಕೃತಿಗಳಿಗೆ, ವ್ಯಕ್ತಿಗಳಿಗೆ, ಕಲಾವಿದರಿಗೆ ಸಿಕ್ಕ ಬಹುದೊಡ್ಡ ಮನ್ನಣೆ. ಅದನ್ನು ಕಬ್ಬಿನಾಲೆಯವರು ಬಹು ಸುಂದರವಾಗಿ, ಮನೋಜ್ಞವಾಗಿ ಒಂದು ಕುಸುರಿ ಕೆಲಸ ಎಂಬಂತೆ ಮಾಡಿದ್ದಾರೆ.
‘ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ’ದೊಂದಿಗೆ ಆರಂಭವಾಗುವ ಅವರ ಈ ಕೃತಿ ಯಕ್ಷಗಾನ ಹಾಡಿನ ಜಾಡು ಎಲ್ಲಿಂದ ಮೊದಲ್ಗೊಂಡಿತು? ಅದಕ್ಕೆ ಭಕ್ತಿಪಂಥ, ದಾಸಸಾಹಿತ್ಯಗಳ ಕೊಡುಗೆ ಏನು? ಅವು ಹೇಗೆ ಕೆಲಸ ಮಾಡಿವೆ? ವಿವಿಧ ಛಂದೋಬಂಧಗಳು ಹೇಗೆ ಹಾಸುಹೊಕ್ಕಾಗಿವೆ? ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಿದೆ.
ಯಕ್ಷಗಾನದ ಹಾಡಿನಲ್ಲಿ ಅಂದರೆ ಯಕ್ಷಗಾನ ಸಾಹಿತ್ಯದಲ್ಲಿ ಆರತಿಹಾಡು, ಸೋಬಾನೆ ಹಾಡುಗಳ ಚೆಲುವು, ಗಾದೆ
ಮಾತು, ಭಾಷಾಪ್ರಯೋಗದ ಸೌಂದರ್ಯ, ಭಾವಗೀತಾತ್ಮಕತೆ, ಮಾರ್ಗ-ದೇಸಿಗಳ ಸಮ್ಮಿಶ್ರ ಸೌಂದರ್ಯ, ಶಬ್ದಾಲಂಕಾರ, ಅರ್ಥಾಲಂಕಾರಗಳ ಬೆಡಗು, ರೂಪಕ-ಪ್ರಹೇಲಿಕೆಗಳ ಮೆರವಣಿಗೆ ಹೇಗೆ ಪ್ರಭಾವಿಸಿವೆ ಎಂಬುದನ್ನು ಚರ್ಚಿಸಲಾಗಿದೆ. ಎಲ್ಲವನ್ನೂ ಹೀರಿಕೊಂಡು ಅದು ಹೇಗೆ ಶ್ರೀಮಂತವಾಯಿತು ಮತ್ತು ಅವೆಲ್ಲವೂ ಯಕ್ಷಗಾನ ಸಾಹಿತ್ಯದಲ್ಲಿ ಹೇಗೆ ನಿಹಿತವಾಗಿದ್ದವು ಅನ್ನುವುದನ್ನು ಸಾಕ್ಷ್ಯಾಧಾರಗಳೊಂದಿಗೆ ತೌಲನಿಕವಾಗಿ ಓದುಗರ ಮುಂದಿಡಲಾಗಿದೆ.
ಹಾಗೆಯೇ ಪಡುವಲಪಾಯ ಯಕ್ಷಗಾನ ಪ್ರಸಂಗಸಾಹಿತ್ಯವನ್ನು ಎತ್ತಿಕೊಂಡ ಕಬ್ಬಿನಾಲೆಯವರು ಅವು ಯಾವ ಯಾವ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುತ್ತವೆ ಎಂದು ಹೇಳುತ್ತಾ ಅವುಗಳನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಜನಪದೀಯ, ಕಾಲ್ಪನಿಕ ಎಂದು ಐದು ವಿಧಗಳಾಗಿ ವಿಂಗಡಿಸುತ್ತಾರೆ. ರಾಮಾಯಣಾಧಾರಿತ ಪ್ರಸಂಗಗಳೇ 150ರಷ್ಟು ಇವೆ ಎಂದು ದಾಖಲಿಸುತ್ತಾರೆ.
ಇದೇ ರೀತಿ ಭಾರತ, ಭಾಗವತಗಳನ್ನಾಧರಿಸಿ ಬಂದ ಪ್ರಸಂಗಸಾಹಿತ್ಯದ ಬಗ್ಗೆ ಬೆಳಕು ಚೆಲ್ಲುತ್ತಾ ಕೃಷ್ಣಾರ್ಜುನ ಕಾಳಗ, ರಾಮಾಂಜನೇಯ, ದ್ರೌಪದೀ ಪ್ರತಾಪ, ಚಕ್ರಚಂಡಿಕಾ, ವೀರನಾರೀ ಅಪ್ರಮೇಯೀ, ಭಾನುಮತೀ ನೆತ್ತ ಮೊದಲಾದ ಪ್ರಸಂಗಗಳು ಪುರಾಣಗಳ ಯಾವುದೋ ಒಂದು ಎಳೆಯನ್ನು ಇಟ್ಟುಕೊಂಡು, ಅವು ಕವಿಯ ಪ್ರತಿಭೆಯಲ್ಲಿ ಹೇಗೆ ಕಲ್ಪನೆಯ ವಿಸ್ತಾರವನ್ನು ಪಡೆದುಕೊಂಡು, ಸಾಹಿತ್ಯಾತ್ಮಕವಾಗಿಯೂ ಮೌಲ್ಯವನ್ನು ಉಳಿಸಿಕೊಂಡು, ಜನಮಾನಸದಲ್ಲಿ ಪ್ರತಿಷ್ಠಾಪನೆಗೊಂಡಿವೆ ಮತ್ತು ಜನಪ್ರಿಯವಾಗಿವೆ ಅನ್ನುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಇನ್ನು ಜೈನಪುರಾಣ, ಬೌದ್ಧಧರ್ಮ, ಇತಿಹಾಸ, ಸಾಮಾಜಿಕ, ಜಾನಪದ ಪ್ರಸಂಗಗಳೊಂದಿಗೆ ಶಂಕರ, ರಾಮಾನುಜ, ಮಧ್ವ, ರಾಘವೇಂದ್ರ, ಕ್ರಿಸ್ತ ಮೊದಲಾದ ಮಹಾಪುರುಷರ ಕುರಿತಾಗಿ ಬಂದ ಪ್ರಸಂಗಗಳನ್ನು ಅವರು ಕಲೆಹಾಕಿದ್ದನ್ನು ನೋಡಿದರೆ ಯಕ್ಷಗಾನ ಸಾಹಿತ್ಯ ಚರಿತ್ರೆಯ ವಿರಾಟ್ ಸ್ವರೂಪ ಗೋಚರಿಸುತ್ತದೆ. ಜೊತೆಗೆ ವಿಸ್ಮಯವೂ ಆಗುತ್ತದೆ.
ಪಡುವಲಪಾಯ ಯಕ್ಷಗಾನದಲ್ಲಿ ‘ಕ್ಷೇತ್ರ ಮಹಾತ್ಮೆ’ಗಳಿಗೇ ಒಂದು ವಿಶೇಷ ಸ್ಥಾನವಿದೆ. ಬಹುಪಾಲು ಎಲ್ಲಾ ಕ್ಷೇತ್ರಗಳ ಮಹಾತ್ಮೆಯೂ ಬಯಲಾಟವಾಗಿ ಪ್ರದರ್ಶನಗೊಂಡಿದೆ. ಅದಕ್ಕೆ ಕಾರಣ ಎಲ್ಲಾ ಮೇಳಗಳೂ ಯಾವುದಾದರೊಂದು ದೇವಸ್ಥಾನದ ದೇವರ ಹೆಸರಲ್ಲಿ ಸಂಸ್ಥಾಪನೆಗೊಂಡು ತಿರುಗಾಟಕ್ಕೆ ಹೊರಡುತ್ತವೆ. ಅಂತಹ ಸಂದರ್ಭದಲ್ಲಿ ಆಯಾ ದೇವರ ಮಹಿಮೆಯನ್ನು ಪ್ರಚುರಪಡಿಸುವುದು, ಭಕ್ತಿಯಿಂದ ನಡೆದುಕೊಳ್ಳುವುದು ಕಲಾವಿದರಿಗೂ, ಮೇಳದ ಯಜಮಾನರಿಗೂ ಹೆಮ್ಮೆಯ ಸಂಗತಿ. ಆ ಕಾರಣಕ್ಕಾಗಿಯೇ ಅವು ಶ್ರದ್ಧಾ-ಭಕ್ತಿಯಿಂದ ಪ್ರದರ್ಶನಗೊಂಡಿವೆ.
ಇಡಗುಂಜಿ, ಕಟೀಲು, ಬಪ್ಪನಾಡು, ಧರ್ಮಸ್ಥಳ, ಮಧೂರು ಹೀಗೆ ಮೂವತ್ತಕ್ಕೂ ಹೆಚ್ಚು ಕ್ಷೇತ್ರ ಮಹಾತ್ಮೆಗಳನ್ನು ಗುರುತಿಸಿದ್ದಾರೆ ಕಬ್ಬಿನಾಲೆಯವರು. ಹೀಗೆ ಒಂದೆಡೆ ಕ್ಷೇತ್ರ ಮಹಾತ್ಮೆಗಳು, ಮತ್ತೊಂದೆಡೆ ಕಲಾವತಿ ಪರಿಣಯ, ಭಾಸವತಿ, ನಾಗಶ್ರೀ, ವಂಶವಲ್ಲರೀ, ಸಂಧ್ಯಾಸಾವೇರಿ ಮುಂತಾದ ಕಾಲ್ಪನಿಕ ಪ್ರಸಂಗಗಳು, ಜೊತೆಗೆ ಕೋಡ್ದಬ್ಬು ತನ್ನಿಮಾನಿಗ, ಅಮರಶಿಲ್ಪಿ ವೀರಕಲ್ಕುಡ, ಅಮರೇಂದ್ರಪದ ವಿಜಯ, ಕಾಯಕಲ್ಪ, ಶುಕ್ರಸಂಜೀವಿನೀ ಮೊದಲಾದ ಹೊಸ ಅಲೆಗಳ ಪ್ರಸಂಗಗಳು ಹೀಗೆ ಯಕ್ಷಗಾನ ಸಾಹಿತ್ಯ ಚರಿತ್ರೆಗೆ ಸಿಗದೇ ಇದ್ದ ಸಾಹಿತ್ಯವೇ ಇಲ್ಲ. ಲೇಖಕರು ಇವೆಲ್ಲವನ್ನೂ ಒಂದೆಡೆ ಸಂಕಲಿಸಿ ದಾಖಲಿಸಿದ್ದಾರೆ.
ಈ ಕೃತಿಯ ಮೂರನೆಯ ಅಧ್ಯಾಯದಲ್ಲಿ ‘ಮೂಡಲಪಾಯ -ಪ್ರಸಂಗ ಸಾಹಿತ್ಯ’ ಕುರಿತಾಗಿ ಬಂದಿದೆ. ಅದರ ಬೇರೆ ಬೇರೆ ಪ್ರಕಾರಗಳಾದ ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಘಟ್ಟದ ಕೋರೆ, ಶ್ರೀಕೃಷ್ಣ ಪಾರಿಜಾತಗಳನ್ನು ‘ಪಡುವಲಪಾಯ ಪ್ರಸಂಗ ಸಾಹಿತ್ಯ’ ಪರಿಚಯದ ದಾರಿಯಲ್ಲೇ ಮಾಡಿಕೊಟ್ಟಿದ್ದಾರೆ.
‘ಯಕ್ಷಗಾನದಲ್ಲಿ ಪ್ರಯೋಗಶೀಲತೆ’ ಎಂಬ ನಾಲ್ಕನೆಯ ಅಧ್ಯಾಯದಲ್ಲಿ ಮಾರಾವತಾರ, ಕಾರಂತರ ಬ್ಯಾಲೆ, ಅಷ್ಟಾವಧಾನ ಮತ್ತು ಕಾವ್ಯ-ಚಿತ್ರ-ಗಾನ-ನಾಟ್ಯ, ಏಕವ್ಯಕ್ತಿಪ್ರದರ್ಶನ, ಇತರ ಭಾಷೆಯಲ್ಲಿ ಯಕ್ಷಗಾನ, ವಿಶಿಷ್ಟ ಪ್ರಸಂಗಗಳು ಎಂಬ ಶೀರ್ಷಿಕೆಗಳಲ್ಲಿ ಅವೆಲ್ಲದರ ಐತಿಹಾಸಿಕ ಹಿನ್ನೆಲೆ, ಕವಿ-ಕಾವ್ಯ ಪರಿಚಯ, ಕೆಲವು ಕೃತಿಗಳ ಸ್ವಾರಸ್ಯಕರ ಘಟ್ಟ, ಪದ್ಯಗಳ ಚಮತ್ಕಾರ ಮುಂತಾದುವನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಅವುಗಳ ಮೇಲೆ ಪ್ರೀತ್ಯಾದರ, ಗೌರವ ಹುಟ್ಟುವಂತೆ ಮಾಡಿದ್ದಾರೆ.
ಐದನೆಯ ಅಧ್ಯಾಯದಲ್ಲಿ ಬಂದ ‘ಮೌಖಿಕ ಸಾಹಿತ್ಯ’ ಕುರಿತಾದ ವಿಶ್ಲೇಷಣೆ ‘ತಾಳಮದ್ದಳೆ’ಯ ವಿಶ್ಲೇಷಣೆ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಇಲ್ಲಿಯೂ ಕಬ್ಬಿನಾಲೆಯವರು ಅದರ ಉಗಮ, ವಿಕಾಸ ಎಂಬ ಸಂಶೋಧನೆಯ ನೆಲೆಯಲ್ಲಿ ಒಂದಿಷ್ಟು ಮಾತನಾಡುತ್ತಾ ತಾಳಮದ್ದಳೆಯ ಬೆಳವಣಿಗೆಯನ್ನು ನಾಲ್ಕು ಹಂತದಲ್ಲಿ ಗುರುತಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ಅಭಿಪ್ರಾಯವನ್ನು ಇಲ್ಲಿ ಕ್ರೋಡೀಕರಿಸಿದ್ದಾರೆ. ಜೊತೆಗೇನೇ ಸೇಡಿಯಾಪು, ಕಾರಂತ, ತಕ್ಕಂಜೆ, ತೋಳ್ಪಾಡಿ, ಉಚ್ಚಿಲ ಮೊದಲಾದವರ ಅಭಿಪ್ರಾಯವನ್ನು ಉಲ್ಲೇಖಿಸಿದ್ದು ಈ ಕೃತಿಗೆ ನಿಜಕ್ಕೂ ಘನತೆ, ಗಾಂಭೀರ್ಯವನ್ನು ತಂದುಕೊಟ್ಟಿದೆ.
ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು, ಉಪಸಂಹಾರ ಎಂಬ ಅಧ್ಯಾಯಗಳೊಂದಿಗೆ ಮುಕ್ತಾಯಗೊಳ್ಳುವ ಈ ಕೃತಿ ಯಕ್ಷಗಾನಪ್ರಪಂಚಕ್ಕೇ ಒಂದು ಅಮೂಲ್ಯ ಕೃತಿಯಾಗಿದೆ. ಕಬ್ಬಿನಾಲೆ ಅವರಿಗೆ ಹಾರ್ದಿಕ ಅಭಿನಂದನೆಗಳು.
ವೈರಾಣು ಬ್ಯಾಕ್ಟೀರಿಯಾ ಪ್ರತ್ಯೇಕಿಸುವ ತಂತ್ರಜ್ಞಾನ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರ್‍ಯಾಪಿಡ್ ಆಂಟಿಜನ್ ಮತ್ತು ಆರ್‌ಟಿಪಿಸಿಆರ್ ಕೊರೊನಾ ವೈರಾಣು ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತಿರುವ ಬೆನ್ನಲ್ಲೇ, ಬ್ಯಾಕ್ಟೀರಿಯಾ ಮತ್ತು ವೈರಾಣುವನ್ನು ನಿಖರವಾಗಿ ಪ್ರತ್ಯೇಕಿಸುವ ಅತ್ಯಾಧುನಿಕ ಅನುಕ್ರಮಣಿಕೆ (ಸೀಕ್ವೆನ್ಸಿಂಗ್) ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ರಕ್ತದಲ್ಲಿನ ಜೈವಿಕ ಕೋಶಗಳು ಅಭಿವ್ಯಕ್ತಪಡಿಸುವ ಎಂಆರ್‌ಎನ್‌ಎ ಅಥವಾ ಸಂದೇಶವಾಹಕ ಆರ್‌ಎನ್‌ಎ ಆಣ್ವಿಕ ಜೈವಿಕಗಳನ್ನು (ಮಾಲೆಕ್ಯುಲಾರ್ ಬಯೋಮಾರ್ಕರ್) ಈ ಹೊಸ ಅನುಕ್ರಮಣಿಕೆ ತಂತ್ರಜ್ಞಾನ ಬಳಸಿ ಮಾಪನ ಮಾಡಲಾಗುತ್ತದೆ. ಇದು ರೋಗ ಪತ್ತೆಯಲ್ಲಿ ಕ್ರಾಂತಿಕಾರವಾಗಬಲ್ಲದು ಎಂದು ವಿಶ್ಲೇಷಿಸಲಾಗಿದೆ.
ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ರೋಗ ಪತ್ತೆಗೆ ಕರಾರುವಾಕ್ಕಾದ ಈ ವಿಧಾನ ಅತಿ ಅಗತ್ಯ. ತಪ್ಪು ಗ್ರಹಿಕೆ ಮತ್ತು ತಪ್ಪು ವ್ಯಾಖ್ಯಾನಗಳಿಂದ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಆಳವಾದ ತಿಳಿವಳಿಕೆ ಇಲ್ಲದ ಎಷ್ಟೋ ವೈದ್ಯರು ತಮಗೆ ತೋಚಿದಂತೆ ಸಲಹೆ ನೀಡುತ್ತಿರುವ ಬಗ್ಗೆಯೂ ಅಧ್ಯಯನ ಆತಂಕ ವ್ಯಕ್ತಪಡಿಸಿದೆ.
ವೈರಾಣು ಮತ್ತು ಬ್ಯಾಕ್ಟೀರಿಯಾವನ್ನು ಪ್ರತ್ಯೇಕಿಸಿ ಖಚಿತಪಡಿಸಿಕೊಳ್ಳದೇ ವೈದ್ಯರು ಕಣ್ಣು ಮುಚ್ಚಿಕೊಂಡು ಎಲ್ಲ ಬಗೆಯ ಸೋಂಕಿಗೂ ಪ್ರತಿಜೈವಿಕಗಳನ್ನು (ಆ್ಯಂಟಿ ಬಯೊಟಿಕ್) ನೀಡುವುದು ವೈರಾಣು ರೂಪಾಂತರಗೊಳ್ಳಲು ಕಾರಣವಾಗುತ್ತಿದೆ ಎಂದು ಅಧ್ಯಯನ ಪ್ರತಿಪಾದಿಸಿದೆ.
ಬ್ಯಾಕ್ಟೀರಿಯಾದಿಂದ ಉಂಟಾದ ತೀವ್ರ ಸ್ವರೂಪದ ಸೋಂಕು ಮತ್ತು ವೈರಾಣುವಿನಿಂದ ಉಂಟಾದ ಸೋಂಕನ್ನು ಪ್ರತ್ಯೇಕಿಸಿ ಪತ್ತೆ ಮಾಡಲು ಹೊಸ ಬಯೋ ಮಾರ್ಕರ್‌ಗೆ ಶಕ್ಯವಾಗಿದೆ. ರಕ್ತದಲ್ಲಿ ವೈವಿಧ್ಯ ಸಂದೇಶ ವಾಹಕ ಆರ್‌ಎನ್‌ಎ (ಎಂಆರ್‌ಎನ್‌ಎ) ಸಿಕ್ಕಿದ್ದು, ಅವುಗಳ ವೈವಿಧ್ಯ ಮಟ್ಟದಿಂದಲೇ ಸೋಂಕು ವೈರಾಣುವಿದೇ ಅಥವಾ ಬ್ಯಾಕ್ಟೀರಿಯಾದ್ದೆ ಎಂಬುದನ್ನು ಗುರುತಿಸಬಲ್ಲದು.
ಕೋವಿಡ್ ಸಾಂಕ್ರಾಮಿಕದಿಂದ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಇದಕ್ಕೆ ಚಿಕಿತ್ಸೆ ನೀಡುವುದೂ ಸವಾಲು. ಸಾಕಷ್ಟು ಸಂದರ್ಭದಲ್ಲಿ ತಪ್ಪಾಗಿ ರೋಗ ಲಕ್ಷಣ ಪತ್ತೆ ಮಾಡಲಾಗುತ್ತಿದೆ. ಇದರ ಪರಿಣಾಮ ‘ಟ್ರಯಲ್ ಅಂಡ್ ಎರರ್’ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನಗತ್ಯವಾಗಿ ಪ್ರತಿಜೈವಿಕಗಳನ್ನು ಬಳಕೆ ಮಾಡಲಾಗುತ್ತಿದೆ.
ಮಾನವ ದೇಹವು ಬ್ಯಾಕ್ಟೀರಿಯಾ ಸೋಂಕು ಮತ್ತು ವೈರಾಣುವಿನ ಸೋಂಕಿಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಸೋಂಕಿನ ವಿಧಕ್ಕೆ ಅನುಗುಣವಾಗಿ ರಕ್ತದಲ್ಲಿ ವಿಭಿನ್ನ ರೀತಿಯ ಆಣ್ವಿಕಗಳಾದ ಪ್ರೋಟಿನ್ ಮತ್ತು ಆರ್‌ಎನ್‌ಎಗಳನ್ನು ಉತ್ಪಾದನೆಯಾಗುತ್ತದೆ. ಪ್ರತಿಜೈವಿಕಗಳು ಬ್ಯಾಕ್ಟೀರಿಯಾ ಸೋಂಕಿಗೆ ಚಿಕಿತ್ಸೆ ನೀಡಬಲ್ಲವು. ಆದರೆ, ವೈರಾಣುವಿನ ಸೋಂಕಿಗೆ ಪರಿಣಾಮಕಾರಿ ಅಲ್ಲ. ಎಲ್ಲ ಬಗೆಯ ಸೋಂಕುಗಳಿಗೆ ಮನಬಂದಂತೆ ಪ್ರತಿ ಜೈವಿಕಗಳನ್ನು ಬಳಸುವುದರಿಂದ, ಬ್ಯಾಕ್ಟೀರಿಯಾಗಳ ತಳಿಗಳು ಹೆಚ್ಚಲು ಅಥವಾ ರೂಪಾಂತರಗೊಳ್ಳಲು ಕಾರಣವಾಗಿದ್ದು, ಇದರಿಂದ ಪ್ರತಿಜೈವಿಕದ ವಿರುದ್ಧ ಪ್ರತಿರೋಧಕಗಳನ್ನು ಬೆಳೆಸಿಕೊಂಡಿವೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕ ಸತ್ಯಭಾರತಿ ರವಿಚಂದ್ರನ್.
ಹಲವು ಸಂದರ್ಭಗಳಲ್ಲಿ ರೋಗವಿಧಾನವನ್ನು ಸರಿಯಾಗಿ ಪತ್ತೆ ಮಾಡಲು ಸಾಧ್ಯವಾಗದ ಕಾರಣ ಅಥವಾ ತಪ್ಪಾಗಿ ಅರ್ಥೈಸುವುದರಿಂದ ವೈರಾಣುವಿನ ಸೋಂಕಿಗೂ ಪ್ರತಿ ಜೈವಿಕಗಳನ್ನು ನೀಡಲಾಗುತ್ತಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಾಣುವಿನ ಸೋಂಕು ಪ್ರತ್ಯೇಕಿಸಿ ಪತ್ತೆ ಮಾಡುವ ವಿಧಾನ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ತ್ವರಿತಗತಿಯಲ್ಲಿ ನಿಖರವಾಗಿ ಪತ್ತೆ ಮಾಡಿದರೆ ಅರ್ಧ ಯುದ್ಧವನ್ನು ಗೆದ್ದಂತೆಯೇ ಎನ್ನುತ್ತಾರೆ ಅವರು.
ಈ ಅಧ್ಯಯನ ‘ಇ–ಬಯೋಮೆಡಿಕಲ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮತ್ತು ಎಂಎಸ್ ರಾಮಯ್ಯ ಆಸ್ಪತ್ರೆಯ ಸಂಶೋಧನಾ ಸಂಸ್ಥೆ ಕೋವಿಡ್ ರೋಗಿಗಳ ಆರ್‌ಟಿಪಿಸಿಆರ್ ರಕ್ತದ ಮಾದರಿಗಳನ್ನು ಬಳಸಿ ಈ ಅಧ್ಯಯನ ನಡೆಸಿದ್ದಾರೆ.
ಕ್ಯಾಪ್ಚಾ ಎಂದರೆನು ಇದನ್ನೇಕೆ ನಾವು ಬಳಸಬೇಕು? ಅದರ ಕುರಿತ ಮಾಹಿತಿ
ಕ್ಯಾಪ್ಚಾ ತುಂಬಿಸುವುದು ಕಷ್ಟದ ಕೆಲಸವಲ್ಲ. ಆದರೂ ಇದೊಂದು ದೊಡ್ಡ ಕಿರಿಕಿರಿ ಅಂತ ಭಾವಿಸಬೇಕಿಲ್ಲ. ವಿಶ್ವವ್ಯಾಪಿ ಜಾಲ (ವರ್ಲ್ಡ್ ವೈಡ್ ವೆಬ್) ಬಳಸುತ್ತಿರುವ ನಮಗೆ, ನಮ್ಮ ಖಾಸಗಿತನಕ್ಕೆ ಎಲ್ಲೆಡೆಯಿಂದಲೂ ಸೈಬರ್ ವಂಚಕರಿಂದ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಇವರು ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲರು ಅಥವಾ ನಿರುಪಯುಕ್ತ ವಿಷಯಗಳನ್ನು (ಸ್ಪ್ಯಾಮ್) ಕಳುಹಿಸುತ್ತಾ ವಿಘ್ನಸಂತೋಷಿಗಳಾಗಬಲ್ಲರು.
ಈ ಬಾಟ್ (Bot) ಎಂಬ ಸ್ವಯಂಚಾಲಿತ ಕೆಲಸ ಮಾಡಬಲ್ಲ ಅದರಲ್ಲಿಯೂ ತೊಂದರೆಯುಂಟು ಮಾಡಬಲ್ಲ, ಮಾನವನೇ ರೂಪಿಸಿದ ತಂತ್ರಾಂಶದಿಂದ ರಕ್ಷಣೆ ಪಡೆಯಲು ಇರುವುದೇ ಈ ಕ್ಯಾಪ್ಚಾ.
Captcha ಎಂದರೇನು?
Completely Automated Public Turing test to tell Computers and Humans Apart ಎಂಬುದರ ಹೃಸ್ವರೂಪ ಕ್ಯಾಪ್ಚಾ. ಎಂದರೆ, ಕಂಪ್ಯೂಟರ್‌ಗಳೇ (ಬಾಟ್) ಬೇರೆ, ಮನುಷ್ಯರೇ ಬೇರೆ ಎಂಬುದನ್ನು ಸ್ವಯಂಚಾಲಿತವಾಗಿ ಗುರುತಿಸುವ ಟ್ಯೂರಿಂಗ್ ಪರೀಕ್ಷಾ ವಿಧಾನವಿದು. ಆಧುನಿಕ ಕಂಪ್ಯೂಟಿಂಗ್ ಜಗತ್ತಿನ ಪಿತಾಮಹ ಅಲೆನ್ ಟ್ಯೂರಿಂಗ್ ಪರಿಕಲ್ಪನೆಯ ಪರೀಕ್ಷೆಯಿದು. ಹೀಗಾಗಿ ಅವರ ಹೆಸರು.
ಹೇಗೆ ಕೆಲಸ ಮಾಡುತ್ತದೆ?
ಈಗಾಗಲೇ ಅಕ್ಷರಗಳು, ಅಂಕಿಗಳನ್ನು ಗುರುತಿಸಿ ಓದಬಲ್ಲ ಒಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಆದರೆ, ಯಂತ್ರಗಳು ಗುರುತಿಸಲಾಗದಂತೆ ಮಾಡಿದರಷ್ಟೇ, ಬಾಟ್‌ಗಳ ಹಾವಳಿ, ಸ್ಪ್ಯಾಮ್ ಅಥವಾ ಸ್ವಯಂಚಾಲಿತ ಮಾಹಿತಿ ರವಾನೆಯಿಂದ ತಪ್ಪಿಸಬಹುದು. ಈ ಕಾರಣಕ್ಕೆ, ಯಂತ್ರಗಳು ಗುರುತಿಸಲಾಗದ, ಮನುಷ್ಯರಷ್ಟೇ ಗುರುತಿಸಬಲ್ಲ ಅಕ್ಷರ ತಂತ್ರಜ್ಞಾನವನ್ನು ರೂಪಿಸಲಾಯಿತು. ಇದು ಅಂಕಿಗಳ ಸಂಕಲನವಿರಬಹುದು, ವ್ಯವಕಲನವಿರಬಹುದು, ಅಂಕಿ-ಅಕ್ಷರಗಳ ಸಂಯೋಗವಿರಬಹುದು, ಚಿತ್ರಗಳನ್ನು ಗುರುತಿಸುವುದಿರಬಹುದು. ಇವೆಲ್ಲವೂ ಒಂದು ಬಾರಿಗೆ ಮಾತ್ರ ಬಳಕೆಯಾಗುವಂಥವು. ಮುಂದಿನ ಬಾರಿ ಏನಾದರೂ ವೆಬ್ ಫಾರ್ಮ್ ತುಂಬಿಸಬೇಕಿದ್ದರೆ, ಹೊಸದಾಗಿ ಬೇರೆಯೇ ಕ್ಯಾಪ್ಚಾ ಎದುರಿಸಬೇಕಾಗುತ್ತದೆ. ಈಗಿನ ಹೊಸ ವಿಧಾನದಲ್ಲಿ 'ನಾನು ರೋಬೋ ಅಲ್ಲ' ಅಂತ ಖಚಿತಪಡಿಸಲು ಚೆಕ್ ಬಾಕ್ಸ್ ಒಂದಕ್ಕೆ ಟಿಕ್ ಗುರುತು ಹಾಕುವ ಕ್ಯಾಪ್ಚಾ ಬಂದಿದೆ.
ಕ್ಯಾಪ್ಚಾದಿಂದೇನು ಲಾಭ?
ರೈಲು, ಬಸ್ಸು, ಸಿನಿಮಾ ಶೋ... ಹೀಗೆ ಆನ್‌ಲೈನ್‌ನಲ್ಲಿ ಯಾವುದೋ ಒಂದು ಟಿಕೆಟ್ ಬುಕ್ ಮಾಡಬೇಕಿರುತ್ತದೆ. ಅಥವಾ ಹೊಸ ಖಾತೆ ತೆರೆಯಬೇಕಾಗಿರುತ್ತದೆ. ಪೂರ್ವನಿರ್ದೇಶಿತ ಬಾಟ್‌ಗಳು ಕೇವಲ ಸೆಕೆಂಡುಗಳಲ್ಲಿ ನೂರಾರು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಇಲ್ಲವೇ ಖಾತೆಗಳನ್ನು ತೆರೆಯಬಹುದು. ಆನ್‌ಲೈನ್ ಪೋಲ್ ಅಥವಾ ಜನಾಭಿಪ್ರಾಯ ಗಣನೆಯಲ್ಲೂ ಅವು ಲೆಕ್ಕಾಚಾರವನ್ನೇ ಬುಡಮೇಲು ಮಾಡಬಲ್ಲವು. ಇದನ್ನು ತಡೆಯುವ ಮಾರ್ಗವೇ ಕ್ಯಾಪ್ಚಾ. ಮನುಷ್ಯನೇ ಆ ಒಂದು ಕ್ಯಾಪ್ಚಾವನ್ನು ಬಿಡಿಸಿದರಷ್ಟೇ ಮುಂದುವರಿಯಬಹುದು. ಹೀಗೆ, ಯಾವುದೇ ವೆಬ್ ಪುಟದಲ್ಲಿ ಸ್ವಯಂಚಾಲಿತವಾಗಿ ಕಾಮೆಂಟ್‌ಗಳು ದಾಖಲಾಗದಂತೆ, ಯಂತ್ರಮಾನವರ ಮೂಲಕ ನಮ್ಮ ಮಾಹಿತಿಯನ್ನು ಕದಿಯದಂತೆ ತಡೆಯುವಲ್ಲಿ ಈ ಕ್ಯಾಪ್ಚಾಗಳು ಯಶಸ್ವಿಯಾಗಿವೆ.
ಸುಲಭವಾಗಿ ಹೇಳುವುದಿದ್ದರೆ, ಆನ್‌ಲೈನ್ ಮತದಾನದಲ್ಲಿ ವಂಚನೆಯಾಗದಂತೆ, ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಹೈಜಾಕ್ ಮಾಡದಂತೆ ಅಥವಾ ಕಾರ್ಯಕ್ರಮದ ನೋಂದಣಿ ವ್ಯವಸ್ಥೆಯನ್ನು ಮಿತಿಗೊಳಿಸಲು ಹಾಗೂ ವೆಬ್ ತಾಣಗಳಲ್ಲಿ ಸ್ವಯಂಚಾಲಿತ ಕಾಮೆಂಟ್‌ಗಳು ದಾಖಲಾಗದಂತೆ, ಬಾಟ್‌ಗಳು ಮಾನವರ ಖಾತೆಗಳಿಗೆ ಲಾಗಿನ್ ಆಗದಂತೆ ತಡೆಯುವುದು ಈ ಕ್ಯಾಪ್ಚಾದ ಉದ್ದೇಶ.
ಹೀಗಿರುವಾಗ, ನಮ್ಮ ರಕ್ಷಣೆಗಾಗಿಯೇ ಇರುವ ಈ ಕ್ಯಾಪ್ಚಾಗಳ ಬಗ್ಗೆ ಅಸಹನೆ ಬೇಡ. ಅರ್ಥವಾಗದಿದ್ದರೆ, ಹೊಸ ಕ್ಯಾಪ್ಚಾ ಪಡೆಯುವ (ರಿಫ್ರೆಶ್ ಬಟನ್) ಆಯ್ಕೆಯೂ ಇರುತ್ತದೆ. ನಮ್ಮದೇ ಸುರಕ್ಷತೆಗಾಗಿ ಇರುವ ಕ್ಯಾಪ್ಚಾ ಬಗ್ಗೆ ತಾಳ್ಮೆಯಿಂದ ಮುಂದುವರಿಯುವುದು ವಿಹಿತ.
ಚಿಪ್ಕೊ ಚಳುವಳಿಯ ನೇತಾರ(ನಾಯಕ) ಸುಂದರಲಾಲ್ ಬಹುಗುಣ ಕೋವಿಡ್ ನಿಂದ ನಿಧನ
ನವದೆಹಲಿ: ಖ್ಯಾತ ಪರಿಸರವಾದಿ ಹಾಗೂ ‘ಚಿಪ್ಕೊ ಚಳವಳಿ’ ಪ್ರವರ್ತಕ ಸುಂದರಲಾಲ್ ಬಹುಗುಣ ಅವರು ಕೋವಿಡ್–19ನಿಂದಾಗಿ ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಕೋವಿಡ್–19 ದೃಢಪಟ್ಟಿದ್ದರಿಂದ ಅವರನ್ನು ಮೇ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಕಳೆದ ರಾತ್ರಿ ಅವರ ಆರೋಗ್ಯ ಬಿಗಡಾಯಿಸಿತು. ಆಮ್ಲಜನಕ ಮಟ್ಟ ಕುಸಿದ ಕಾರಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಚಿಕಿತ್ಸೆಗೆ ಸ್ಫಂದಿಸದೇ ಮಧ್ಯಾಹ್ನ 12.05ಕ್ಕೆ ಅವರು ಕೊನೆಯುಸಿರೆಳೆದರು’ ಎಂದು ಏಮ್ಸ್ ನಿರ್ದೇಶಕ ಡಾ.ರವಿಕಾಂತ್ ಹೇಳಿದರು.
ಬೃಹತ್ ಅಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಆಗುತ್ತಿರುವುದನ್ನು ತಡೆಯಲೆಂದು 1973ರಲ್ಲಿ ಚಿಪ್ಕೊ ಚಳವಳಿ ಆರಂಭವಾಗಿತ್ತು. ಉತ್ತರ ಪ್ರದೇಶದಲ್ಲಿ ಈ ಚಳವಳಿಗೆ ಪರಿಸರವಾದಿ ಸುಂದರ್ ಲಾಲ್ ಬಹುಗುಣ ನಾಂದಿ ಹಾಡಿದ್ದರು.
ಕಬಡ್ಡಿ ಆಟಗಾರ್ತಿ ತೇಜಸ್ವಿನಿಬಾಯಿಗೆ ₹2 ಲಕ್ಷ ನೆರವು
ಬೆಂಗಳೂರು: ಕೋವಿಡ್‌ನಿಂದಾಗಿ ಪತಿಯನ್ನು ಕಳೆದುಕೊಂಡಿರುವ ಕಬಡ್ಡಿ ಆಟಗಾರ್ತಿ ಕರ್ನಾಟಕದ ತೇಜಸ್ವಿನಿ ಬಾಯಿ ಅವರ ನೆರವಿಗೆ ಕೇಂದ್ರ ಕ್ರೀಡಾ ಸಚಿವಾಲಯ ಧಾವಿಸಿದ್ದು, ₹ 2 ಲಕ್ಷ ಸಹಾಯ ಒದಗಿಸಿದೆ.
ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ತೇಜಸ್ವಿನಿ ಅವರ ಪತಿ ನವೀನ್ ಮೇ 11ರಂದು ಸೋಂಕಿನಿಂದ ಮೃತಪಟ್ಟಿದ್ದರು. ಮೇ 1ರಂದು ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಜಿ ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ನೆರವು ನೀಡುವ ಕಾರ್ಯಕ್ರಮದಡಿ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಸಹಭಾಗಿತ್ವದಲ್ಲಿ ಕ್ರೀಡಾ ಸಚಿವಾಲಯ ಈ ಧನಸಹಾಯ ಮಂಜೂರು ಮಾಡಿದೆ.
‘ನನ್ನ ಪತಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಆದರೆ ತಮ್ಮ ತಂದೆಯ ನಿಧನದಿಂದಾಗಿ ಅವರು ಎದೆಗುಂದಿದ್ದರು. ಇದೇ ಆತಂಕ ಹಾಗೂ ಒತ್ತಡ ಅವರ ಜೀವ ತೆಗೆದುಕೊಂಡಿತು‘ ಎಂದು ತೇಜಸ್ವಿನಿ ಹೇಳಿದ್ದಾಗಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ.
‘ನಾನು ನೆರವು ನಿರೀಕ್ಷಿಸಿರಲಿಲ್ಲ. ಆದರೆ ಕ್ರೀಡಾ ಸಚಿವಾಲಯ, ಸಾಯ್ ಹಾಗೂ ಐಒಎ ಈ ಕುರಿತು ಕ್ಷಿಪ್ರ ನಿರ್ಧಾರ ತೆಗೆದುಕೊಂಡಿವೆ. ಇಂತಹ ನೆರವು ಇದೇ ಮೊದಲ ಬಾರಿ ನಮಗೆ ಸಿಗುತ್ತಿದೆ. ನನಗೆ ಐದು ತಿಂಗಳ ಮಗುವಿದ್ದು, ಅದರ ಭವಿಷ್ಯಕ್ಕೆ ಈ ಹಣವನ್ನು ವಿನಿಯೋಗಿಸುವೆ‘ ಎಂದು ತೇಜಸ್ವಿನಿ ಹೇಳಿದ್ದಾರೆ.
ತೇಜಸ್ವಿನಿ ಅವರಿಗೆ 2011ರಲ್ಲಿ ಅರ್ಜುನ ಪುರಸ್ಕಾರ ಸಂದಿದೆ. 2010 ಹಾಗೂ 2014ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಭಾರತ ಕಬಡ್ಡಿ ತಂಡದಲ್ಲಿ ಅವರು ಇದ್ದರು.
"ದ್ರೋಣಾಚಾರ್ಯ" ಪುರಸ್ಕೃತ ಮೊದಲ ಬಾಕ್ಸಿಂಗ್ ಕೋಚ್ ಭಾರಧ್ವಾಜ್ ಇನ್ನಿಲ್ಲ
1985ರಲ್ಲಿ ಮೊದಲ ಬಾರಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಬಾಲಚಂದ್ರ ಭಾಸ್ಕರ್ ಭಾಗವತ್ (ಕುಸ್ತಿ), ಓ.ಎಂ.ನಂಬಿಯಾರ್ (ಅಥ್ಲೆಟಿಕ್ಸ್) ಜೊತೆಗೆ ಭಾರದ್ವಾಜ್ ಅವರಿಗೂ ಪುರಸ್ಕಾರ ಸಂದಿತ್ತು.
‘ಬಹಳ ದಿನಗಳಿಂದ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿಯ ಅಗಲಿಕೆ ಹಾಗೂ ವಯೋಸಹಜ ಕಾಯಿಲೆಗಳು ಅವರನ್ನು ಬಾಧಿಸಿದ್ದವು‘ ಎಂದು ಭಾರದ್ವಾಜ್ ಅವರ ಕುಟುಂಬದ ಆಪ್ತ ಟಿ.ಎಲ್.ಗುಪ್ತಾ ತಿಳಿಸಿದ್ದಾರೆ.
1968–1989ರ ಅವಧಿಯಲ್ಲಿ ಭಾರದ್ವಾಜ್ ಅವರು ರಾಷ್ಟ್ರೀಯ ತಂಡಕ್ಕೆ ತರಬೇತುದಾರರಾಗಿದ್ದರು. ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಹಲವು ಬಾಕ್ಸರ್‌ಗಳು ಏಷ್ಯನ್, ಕಾಮನ್‌ವೆಲ್ತ್ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಪಟಿಯಾಲದ ನ್ಯಾಷನಲ್ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಷನ್‌ನಲ್ಲಿ (ಎನ್‌ಐಸ್) ಬಾಕ್ಸಿಂಗ್ ಡಿಪ್ಲೊಮಾ ಕೋಚಿಂಗ್ ಕೋರ್ಸ್ ನಡೆಸಿಕೊಟ್ಟ ಮೊದಲಿಗರು ಭಾರದ್ವಾಜ್. ಎನ್‌ಐಎಸ್‌ನಿಂದ ನಿವೃತ್ತಿ ಪಡೆದ ಬಳಿಕ ವೀಕ್ಷಕ ವಿವರಣೆಕಾರಗಿ ಕಾರ್ಯನಿರ್ವಹಿಸಿದ್ದ ಅವರು, ದೆಹಲಿಯಲ್ಲಿ ಸ್ವಂತ ಜಿಮ್ ಕೇಂದ್ರವನ್ನು ಹೊಂದಿದ್ದರು.
2008ರಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೂ ಎರಡು ತಿಂಗಳ ಅವಧಿಗೆ ಬಾಕ್ಸಿಂಗ್‌ನ ಕೆಲವು ತಂತ್ರಗಳನ್ನು ಹೇಳಿಕೊಟ್ಟಿದ್ದರು.
ಇಸ್ರೇಲಿ ಪ್ಯಾಲೆಸ್ಟಿನಿಯನ್ ಸಂಘರ್ಷ ಇಸ್ರೇಲ್ ಹಮಾಸ್ 11 ದಿನಗಳ ಯುದ್ಧದ ನಂತರ ಕದನ ವಿರಾಮಕ್ಕೆ ಒಪ್ಪಿರುತ್ತವೆ.
ಭಾನುವಾರ, ಮೇ 16, 2021
‘ಟೌಕ್ಟೇ’ ಚಂಡಮಾರುತವು ಅರಬ್ಬೀ ಸಮುದ್ರದಲ್ಲಿ ಮೇ ತಿಂಗಳ 17 ನೇ ತಾರಿಖೀಗೆ ‘ಅತ್ಯಂತ ತೀವ್ರವಾದ ಚಂಡಮಾರುತ' ವಾಗಿ ಹೊರಹೊಮ್ಮಿತು.
Cyclone tauktae: sever cyclonic storm predict IMD, issues alert for 5 States
The Indian Meteorological Department issued a red alert on May 14, 2021, after informing about the low-pressure area over the Arabian Sea near Lakshadweep that led to a deep depression that intensified into a severe cyclonic storm ‘Tauktae’.
The IMD has issued a red alert stating that the cyclone ‘Tauktae’ is likely to intensify into a ‘very severe cyclonic storm’ by May 17 with wind speeds up to 160 mph.
Depression over Lakshadweep area intensified into a Deep Depression , about 50 km north-northwest of Amini Divi, 310 km west-southwest of Kannur (Kerala), To intensify into a Cyclonic Storm in 12 hrs .To move north-northwestwards and reach near Gujarat coast by 18th pic.twitter.com/EaOI1pXiih
Cyclone Tauktae is predicted to impact the coast of Kerala, Tamil Nadu, Karnataka, Maharashtra, Lakshadweep, Goa, and most likely to hit the coast of Gujarat by May 18 morning.
The Central Water Commission (CWC) on May 15, 2021, issued an ‘orange alert’ predicting a severe flood situation in Kerala and Tamil Nadu.
Rivers Achankovil, Manimala in Kerala, and Kodaiyar in Tamil Nadu were reported flowing in ‘severe condition on May 15 morning. Water levels of all three rivers to expected to reach ‘danger’ and highest flood levels, said CWC.
Kerala CM Pinarayi Vijayan said in a press briefing that as per the IMD, strong winds, heavy rains, and strong sea gusts are expected in Kerala till May 16. He also informed that all the precautionary measures have been put in place to deal with any calamity due to the cyclone. Nine teams of NDRF have also been deployed as a precaution, he further said.
Five districts of Kerala namely Alappuzha, Ernakulam, Kollam, Pathanamthitta, and Thiruvananthapuram have been put on red alert by the IMD in May 14.
Maharashtra CM Uddhav Thackeray during a meeting regarding Cyclone Tauktae directed District Administration, District Commissioners, and District Collectors to be on alert and well equipped in the coastal areas of Sindhudurg, Palghar, Ratnagiri, and Raigad.
Meanwhile, the National Disaster Response Force (NRDF) informed that it is geared up for emergency relief work and has deployed 53 teams for the five most vulnerable states of which 24 teams have been pre-deployed and 29 teams have been put on stand-by.
ಪುದುಚೇರಿಯು ಬಾರತ ದೇಶದ "ಹರ್ ಘರ್ ಜಲ್" ಯೋಜನೆಯನ್ನು ಸಂಪೂರ್ಣ ಹೊಂದಿದ ನಾಲ್ಕನೆ ಕೇಂದ್ರಾಡಳಿತ ರಾಜ್ಯವಾಗಿ ಹೊರಹೊಮ್ಮಿದೆ.
Puducherry becomes Fourth 'Had Char Jal' state/ union Territory
Puducherry has become ‘Har Ghar Jal’ Union Territory by ensuring that every rural home in the UT has tap water connection.
With this, the Union Territory has become the fourth state/ UT to provide assured tap water supply to every rural home under Union Government’s flagship programme Jal JeevanMission after Goa, Telangana and Andaman & Nicobar Islands.
•Puducherry has achieved the ‘Har Ghar Jal’ status much ahead of the target fixed. All 1.16 lakh rural households in the union territory have a tap water supply now.
•During the UT's annual action plan in April 2021, it had decided to utilize various funds available through the convergence of different programmes like MGNREGS, JJM, SBM (G), CSR Fund, Local Area Development Fund and 15th Finance Commission Grants to PRIs etc at the village level and prepare a Village Action Plan (VAP) for achieving long-term drinking water security.
•The union territory is now also planning to get NABL accreditation/ recognition for its water quality testing laboratories and is take up testing of all drinking water sources on a campaign mode.
•It is also planning to effectively treat and reuse greywater coming out of homes.
•It is also working towards achieving water source sustainability.
•The union territory, fortunately, has various rivers and tributaries with seven in Karaikal district, five in Puducherry district, two in Mahé district and one in Yanam district. However, none of the rivers originate within the territory.
•The Union Territory also has 84 irrigation tanks and over 500 ponds that are the lifeline for groundwater recharging systems, drinking water and agriculture.
•The UT has also been working on rejuvenating its local water bodies and de-silting ponds.
Puducherry’s achievement is another indicator of the success of the Jal Jeevan Mission. Besides the Union Territory, Punjab and the UTs of Dadra & Nagar Haveli and Daman & Diu have also crossed a milestone under the mission by assuring regular tap water supply in 75 percent of rural homes.
Now, around 26.31 lakh rural households out of total 34.73 lakh (76%) in Punjab have a tap water supply. The state aims to achieve 100% coverage of all rural households by 2022.
•The Jal Jeevan Mission is a flagship programme of the Union Government that aims to provide tap water connection to every rural household of the country by 2024.
•The mission is being implemented across India to provide safe tap water in adequate quantity of prescribed quality to every rural home despite challenges faced due to the COVID-19 pandemic.
•Goa had become the first ‘Har Ghar Jal’ state across India to provide tap water connections to every rural household in October 2020.
ಜೆರುಸಲೆಮ್ನಲ್ಲಿ ಇಸ್ರೇಲ್-ಪ್ಯಾಲೇಸ್ಟಿನಿಯನ್ ಜನಾಂಗೀಯ ಯುದ್ಧ ಘರ್ಷಣೆಗಳು: ನಿಮಗೆ ತಿಳಿದಿರಬೇಕಾದ ವಿಷಯಗಳು
Israel-Palestanian clashes in Jerusalem: Everything you must know
The clashes between the Israeli police and Palestinian protestors have been taking place on a daily basis in and around Jerusalem’s Old City, for weeks now. Jerusalem is home to major religious sites that are sacred to Jews, Muslims, and Christians and is also the epicenter of Middle East Conflict.
For 100 years, Jerusalem has been the place of violent confrontations between Arabs and Jews and has remained one of the most bitterly contested cities known.
However, the latest clashes in Jerusalem started a month ago with an Israeli move to stop some Palestinian gatherings at the beginning of the Muslim holy month of Ramadan, it is already a time of heightened religious sensitivities.
After the restrictions by Israel were eased, tensions over a plan of evicting dozens of Palestinians from an east Jerusalem neighborhood continue to fuel the confrontations between the two groups.
On May 10, 2021, stun grenades echoed all over the holy hilltop compound. Hundreds of Palestinians were hurt in the clashes between the stone-throwing protestors and Israeli Police firing tear gas and rubber bullets. Police amid the clash was also injured.
Even with strong global condemnation, the clashes and confrontation between Israel and Palestine have continued.
The people of Israel have viewed Jerusalem as its ‘unified, eternal’ capital. The country had captured east Jerusalem, which also includes the Old City, during the 1967 Mideast war, along with Gaza and West Bank.
On the other hand, the people of Palestine demand those territories for their future state, with East Jerusalem serving as an eventual capital. But Israeli government annexed the eastern part of Jerusalem in a move that is not recognized internationally.
The conflict has led to the path where the fate of east Jerusalem has become one of the thorniest issues in the peace process, leading to a halt more than a decade ago.
On May 10, 2021, Israelis were set to mark Jerusalem Day. It is a national holiday celebrating the annexation.
In the past years, thousands of Israelis- mainly the religious nationalists-have marched through the old city of Jerusalem, including the densely populated Muslim Quarter, in a display that has been considered provocative by many Palestinians.
The clashes on May 10, 2021, took place in and around the Al-Aqsa Mosque in the Old City of Jerusalem. The mosque is considered to be the third-holiest site in Islam and it sits on a sprawling plateau that is home to the iconic golden Dome of the Rock. Muslims refer to the Holy Hilltop Compound as the Noble Sanctuary.
For Jews, the walled plateau is also the holiest site. They refer to it as the temple mount as it was the location of biblical temples. In 70 A.D., the Romans destroyed the Second Temple, with only the Western Wall remaining.
The mosques by Muslims were built centuries later. Neighbouring Jordan has been serving as the custodian of the site, which is operated by an Islamic endowment called the Waqf.
The groups of the religious and nationalist Jews, in recent years, escorted by the police have been seen visiting the Holy Hilltop Compound in greater number. They have also been holding prayers in defiance of the rules that were established after 1967 by Jordan, Israel, and Muslim religious authorities.
These frequent visits and attempted prayers by Jews have been seen by the Palestinians as a provocation which often leads to more serious violence.
Some Israelis have stated that the site must be opened to all the worshippers. However, the Palestinians refuse and fear that Israelis will take over the site or partition it. The officials of Israel have said that they have no intention of changing the status quo.
Jews who are born in east Jerusalem are Israeli citizens, while the Palestinians from East Jerusalem are given a form of permanent residency which can be revoked by the authorities if they live outside the city for an extended period.
Jewish settlements have been built by Israel in east Jerusalem that is home to around 2,20,000 people. The settlements have severely limited the growth of Palestinian neighborhoods which leads to overcrowding as well as unauthorized construction of thousands of homes that are at risk of demolition.
The New York-based- Human Rights Watch and Israeli Rights Group B”Tselem pointed the discriminatory policies in east Jerusalem and argued that Israel is guilty of the crime of apartheid. Israel, on the other hand, has rejected those allegations stating that Jerusalem residents are treated equally.
The recent clashes in Jerusalem started at the start of Ramadan when the Israeli police placed barricades outside the Damascus Gate of the Old City of Jerusalem. It is a popular gathering place after the evening prayers during the holy month when Muslims fast from dawn to dusk.
The police later removed the barriers, but later the protests escalated over the threatened eviction of Palestinian families from the East Jerusalem neighborhood of Sheikh Jarrah.
The violence in Jerusalem and particularly in Al-Aqsa is often reflected across the region.
The Palestinian Militant Group Hamad, which rules Gaza, has called for a new uprising, same as the one triggered by an Israeli Politician’s visit to Al-Aqsa in 2000. The militants of Gaza have also fired rockets and balloons with devices attached to them in support of the Palestinian protestors.
The protests have been held in the occupied West Bank and in the Arab communities which are inside Israel.
Jordan as well as other Arab nations that have friendly relations with Israel have condemned its crackdown on the protests, while the archenemy of Israel Iran has encouraged the Palestinian protests.
The United States and European Union have also condemned the violence and have expressed concerns about the evictions
ಸೋಮವಾರ, ಮಾರ್ಚ್ 22, 2021
ಭಾರತದ ಸೇನಾ ಸಮರಾಭ್ಯಾಸಗಳು
ಬುಧವಾರ, ಫೆಬ್ರವರಿ 24, 2021
ಆಸ್ಟ್ರೇಲಿಯಾ ಓಪನ್: ಓಸಕಾ ಮುಡಿಗೆ ಚಾಂಪಿಯನ್ ಪಟ್ಟ
ಆಸ್ಟ್ರೇಲಿಯಾ ಓಪನ್: ಓಸಕಾ ಮುಡಿಗೆ ಚಾಂಪಿಯನ್ ಪಟ್ಟ
ಮೆಲ್ಬರ್ನ್: ಎದುರಾಳಿಯ ಬಲಶಾಲಿ ಹೊಡೆತಗಳಿಗೆ ಎದೆಗುಂದದೆ ನಿರಾಯಾಸದಿಂದ, ನಿರಾತಂಕವಾಗಿ ಆಡಿದ ಜಪಾನ್‌ನ 23ರ ಹರಯದ ಆಟಗಾರ್ತಿ ನವೊಮಿ ಒಸಾಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ರಾಡ್ ಲಾವೆರ್ ಅರೆನಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಜೆನಿಫರ್ ಬ್ರಾಡಿ ವಿರುದ್ಧ 6-4, 6-3ರಲ್ಲಿ ಗೆಲುವು ಸಾಧಿಸಿದರು.
ಸಾವಿರಾರು ಪ್ರೇಕ್ಷಕರ ನಡುವೆ ನಡೆದ ಹಣಾಹಣಿಯನ್ನು ಗೆಲ್ಲಲು ಮೂರನೇ ಶ್ರೇಯಾಂಕದ ಒಸಾಕ ಅವರಿಗೆ 77 ನಿಮಿಷಗಳು ಸಾಕಾದವು. ಈ ಮೂಲಕ ನಾಲ್ಕನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಂಡ ಅವರು ಆಡಿದ ಮೊದಲ ನಾಲ್ಕು ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲೂ ಗೆದ್ದ ಎರಡನೇ ಆಟಗಾರ್ತಿ ಎಂದೆನಿಸಿಕೊಂಡರು. ಈ ಸಾಧನೆ ಮಾಡಿದ ಒಟ್ಟಾರೆ ಮೂರನೇ ಟೆನಿಸ್ ಪಟು ಆಗಿದ್ದಾರೆ ಅವರು.
2018ರಲ್ಲಿ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ಮೂಲಕ ಮೊದಲ ಗ್ರ್ಯಾನ್‌ಸ್ಲಾಂ ಕಿರೀಟಕ್ಕೆ ಮುತ್ತಿಟ್ಟ ಒಸಾಕ 2020ರಲ್ಲಿ ಮತ್ತೆ ಅಮೆರಿಕ ಓಪನ್ ಸಾಮ್ರಾಜ್ಞಿಯಾದರು. 2019ರಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಕಿರೀಟವೂ ಅವರ ಮುಡಿಗೇರಿತ್ತು. ಮಹಿಳಾ ವಿಭಾಗದಲ್ಲಿ ಮೋನಿಕಾ ಸೆಲೆಸ್ ಮತ್ತು ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ ಆಡಿದ ಮೊದಲ ನಾಲ್ಕು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು.
ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದಿದ್ದ ಒಸಾಕ ಫೈನಲ್‌ನಲ್ಲಿ ಯಾವುದೇ ಉದ್ವೇಗವಿಲ್ಲದೆ ಆಡಿದರು. ಆದರೆ ಭರ್ಜರಿ ಹೊಡೆತಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದ 22ನೇ ಶ್ರೇಯಾಂಕದ ಬ್ರಾಡಿ ಕೆಲವೊಮ್ಮೆ ವಿಶಿಷ್ಟ ಹಾವ–ಭಾವದ ಮೂಲಕ ಸಂತಸ ವ್ಯಕ್ತಪಡಿಸಿದರು.
ಮೊದಲ ಗೇಮ್ ಒಸಾಕ ಗೆದ್ದರೂ ನಂತರ ಬ್ರಾಡಿ ತಿರುಗೇಟು ನೀಡಿದರು. ಆದರೆ ಎರಡು ಡಬಲ್ ಫಾಲ್ಟ್‌ಗಳನ್ನು ಎಸಗಿದ ಅವರು ನಾಲ್ಕನೇ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡರು. ಆದರೆ ಛಲ ಬಿಡದೆ ಆಡಿದ ಅವರು ಬ್ರೇಕ್ ಪಾಯಿಂಟ್ ಮೂಲಕ ಮತ್ತೆ ಆಧಿಪತ್ಯ ಸ್ಥಾಪಸಿ ಎದುರಾಳಿಗೆ ಆತಂಕ ಒಡ್ಡಿದರು. ಎದೆಗುಂದದ ಒಸಾಕ ಮೇಲೆ ಇದ್ಯಾವುದೂ ಪ್ರಭಾವ ಬೀರಲಿಲ್ಲ. ಮೊದಲ ಸೆಟ್ ಗೆಲ್ಲುವ ಮೂಲಕ ಮೆಲ್ಬರ್ನ್ ಪಾರ್ಕ್‌ನಲ್ಲಿ ಸತತ 20 ಸೆಟ್ ಗೆದ್ದ ಸಾಧನೆ ಮಾಡಿದರು.
ಎರಡನೇ ಸೆಟ್‌ನಲ್ಲಿ ಇನ್ನಷ್ಟು ಭರವಸೆಯಿಂದ ಕಣಕ್ಕೆ ಇಳಿದ ಒಸಾಕ ಏಸ್ ಸಿಡಿಸುವ ಮೂಲಕ 3–0 ಮುನ್ನಡೆ ಗಳಿಸಿದರು. ನಂತರ ಬ್ರಾಡಿ ಸ್ವಲ್ಪ ಪ್ರತಿರೋಧ ಒಡ್ಡಿದರೂ ಕೊನೆಯಲ್ಲಿ ಒಸಾಕಗೆ ಸುಲಭ ಜಯ ಒಲಿಯಿತು. ಫೈನಲ್‌ನಲ್ಲಿ ಸೋತರೂ ಬ್ರಾಡಿ ಅವರು ಡಬ್ಲ್ಗುಟಿಎ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 13ನೇ ಸ್ಥಾನಕ್ಕೇರಿದರು.
ನಾಲ್ಕರಲ್ಲಿ ನಾಲ್ಕು: ಒಸಾಕ ತುಳಿದ ಯಶಸ್ಸಿನ ಹಾದಿ
2018ರ ಅಮೆರಿಕ ಓಪನ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-4ರಲ್ಲಿ ಮಣಿಸಿ ಒಸಾಕ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದರು. ಆ ಪಂದ್ಯ ಅಹಿತಕರ ಘಟನೆಗೂ ಸಾಕ್ಷಿಯಾಗಿತ್ತು. ದುರ್ವರ್ತನೆಗೆ ದಂಡ ವಿಧಿಸಿದ ಚೇರ್ ಅಂಪೈರ್ ಕಾರ್ಲೋಸ್ ರಾಮೋಸ್ ಅವರನ್ನು ಸೆರೆನಾ ‘ಮೋಸಗಾರ’ ಎಂದು ಜರಿದಿದ್ದರು. ಒಸಾಕ ಅಮೆರಿಕ ಓಪನ್ ಟೂರ್ನಿಯ ಚಾಂಪಿಯನ್ ಆದ ಅತಿ ಕಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದರು. 2006ರಲ್ಲಿ ಪ್ರಶಸ್ತಿ ಗೆದ್ದ ಮರಿಯಾ ಶರಪೋವಾ ಅವರ ಹೆಸರಿನಲ್ಲಿ ಅಲ್ಲಿಯ ವರೆಗೆ ಈ ದಾಖಲೆ ಇತ್ತು.
2019ರಲ್ಲಿ ಮೆಲ್ಬರ್ನ್ ಪಾರ್ಕ್‌ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು 7-6 (7/2), 5-7, 6-4ರಲ್ಲಿ ಮಣಿಸಿ ಒಸಾಕ ಎರಡನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಮೂಲಕ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನಕ್ಕೇರಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಟೆನಿಸ್ ಪಟು ಎನಿಸಿದ್ದರು. ಎರಡು ತಾಸುಗಳ ಹಣಾಹಣಿಯಲ್ಲಿ ಎದುರಾಳಿಯ ಪ್ರಬಲ ಪೈಪೋಟಿ ಮೀರಿ ನಿಂತ ಒಸಾಕ ಸತತ ಎರಡು ಗ್ರ್ಯಾನ್‌ಸ್ಲಾಂ ಗೆದ್ದ ಅತಿ ಕಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದರು. ಮಾರ್ಟಿನಾ ಹಿಂಗಿಸ್ (1998ರಲ್ಲಿ) ಮತ್ತು ಕರೊಲಿನಾ ವೋಜ್ನಿಯಾಕಿ (2010ರಲ್ಲಿ) ಅವರನ್ನು ಒಸಾಕ ಹಿಂದಿಕ್ಕಿದ್ದರು.
2020ರ ಅಮೆರಿಕ ಓಪನ್ ಟೂರ್ನಿಯಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿ ಮೂರನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಒಸಾಕ ತಮ್ಮದಾಗಿಸಿಕೊಂಡಿದ್ದರು. ಮೊದಲ ಸೆಟ್‌ನಲ್ಲಿ 1-6ರ ಸೋಲುಂಡಿದ್ದ ಅವರು ಎರಡನೇ ಸೆಟ್‌ನಲ್ಲಿ 0-2ರ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರ ಪುಟಿದೆದ್ದು 1-6, 6-3, 6-3ರಲ್ಲಿ ಫೈನಲ್ ಪಂದ್ಯ ಗೆದ್ದ ಅವರು ವರ್ಣಭೇದ ನೀತಿಯ ವಿರುದ್ಧ ಮಾಸ್ಕ್ ಧರಿಸಿ ಗಮನ ಸೆಳೆದಿದ್ದರು. ಬ್ಲ್ಯಾಕ್ ಲಿವ್ಸ್ ಮ್ಯಾಟರ್ ಅಭಿಯಾನದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಒಂಬತ್ತನೇ ಬಾರಿ ಕಿರೀಟ: ಆಸ್ಟ್ರೇಲಿಯಾ ಓಪನ್ ಗೆ ಜಾಕೊವಿಚ್ 'ರಾಜ'
ಒಂಬತ್ತನೇ ಬಾರಿ ಕಿರೀಟ: ಆಸ್ಟ್ರೇಲಿಯಾ ಓಪನ್ ಗೆ ಜಾಕೊವಿಚ್ 'ರಾಜ'
ಮೆಲ್ಬರ್ನ್: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. ಸರ್ಬಿಯಾದ ಈ ತಾರಾ ಆಟಗಾರ 7-5, 6-2, 6-2ರಿಂದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಮಣಿಸಿ ಒಂಬತ್ತನೇ ಬಾರಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ತಮ್ಮದೇ ದಾಖಲೆಯನ್ನು ಸುಧಾರಿಸಿಕೊಂಡರು.
ರಾಡ್ ಲೇವರ್ ಅರೆನಾದಲ್ಲಿ, ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್, ಒಟ್ಟು 18 ಗ್ರ್ಯಾನ್‌ಸ್ಲಾಮ್‌ಗಳ (ಒಂಬತ್ತು ಆಸ್ಟ್ರೇಲಿಯಾ ಓಪನ್, ಐದು ವಿಂಬಲ್ಡನ್, ಮೂರು ಬಾರಿ ಅಮೆರಿಕ ಓಪನ್, ಒಮ್ಮೆ ಫ್ರೆಂಚ್ ಓಪನ್) ಒಡೆಯರಾದರು. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ತಲಾ 20 ಬಾರಿ ಕಿರೀಟ ಧರಿಸಿದ್ದಾರೆ.
ಜೊಕೊವಿಚ್ ಸತತ ಮೂರನೇ ವರ್ಷ ಇಲ್ಲಿ ಚಾಂಪಿಯನ್ ಆದರು.
ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಜೊಕೊವಿಚ್ ತಮ್ಮ ಎಂದಿನ ಭರ್ಜರಿ ಸರ್ವ್, ರಿಟರ್ನ್‌ಗಳ ಮೂಲಕ ವಿಜೃಂಭಿಸಿದರು. ಬೇಸ್‌ಲೈನ್ ಹೊಡೆತಗಳಲ್ಲೂ ಅವರ ಪಾರಮ್ಯವಿತ್ತು. ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿದ ಡ್ಯಾನಿಲ್, ಬಳಿಕ ದಣಿದಂತೆ ಕಂಡುಬಂದರು. ಕೊನೆಯ ಎರಡು ಸೆಟ್‌ಗಳನ್ನು ಅವರು ಸುಲಭವಾಗಿ ಕೈಚೆಲ್ಲಿದರು.
33 ವರ್ಷದ ಜೊಕೊವಿಚ್, ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಹಾಗೂ ಫೈನಲ್ಸ್ ಪಂದ್ಯಗಳಲ್ಲಿ 18 ಬಾರಿ ಸೋಲು ಅನುಭವಿಸಿಲ್ಲ. ಕಳೆದ 10 ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಜೊಕೊವಿಚ್ ಅವರಿದ ಒಲಿದ ಆರನೇ ಪ್ರಶಸ್ತಿ ಇದು. ಈ ಗೆಲುವಿನೊಂದಿಗೆ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಮಾರ್ಚ್ 8ರವರೆಗೆ ಅಗ್ರಸ್ಥಾನದಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿದ್ದು, 311 ವಾರಗಳ ಕಾಲ ಈ ಸ್ಥಾನದಲ್ಲಿದ್ದು, ರೋಜರ್ ಫೆಡರರ್ ಅವರ ದಾಖಲೆಯನ್ನು ಅಳಿಸಿಹಾಕಲಿದ್ದಾರೆ.
ಮೆಡ್ವೆಡೆವ್ ಎರಡನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಫೈನಲ್ ಪ್ರವೇಶಿಸಿದ್ದರು. 2019ರ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು ನಡಾಲ್ ಅವರಿಗೆ ಮಣಿದಿದ್ದರು. ಈ ಪಂದ್ಯದಲ್ಲಿ ಸೋಲುವುದರೊಂದಿಗೆ ರಷ್ಯಾದ 25 ವರ್ಷದ ಆಟಗಾರನ 20 ಪಂದ್ಯಗಳ ಸತತ ಗೆಲುವಿನ ಸರಪಳಿಯೂ ತುಂಡರಿಸಿತು.
ಎರಡನೇ ಸೆಟ್‌ನಲ್ಲಿ ಸೋತ ಬಳಿಕ ಪಂದ್ಯ ಕೈಜಾರುತ್ತಿರುವುದನ್ನು ಅರಿತ ಮೆಡ್ವೆಡೆವ್ ಹತಾಶಗೊಂಡರು. ನೀಲಿ ಅಂಗಣದಲ್ಲಿ ತಮ್ಮ ಬಿಳಿ ಬಣ್ಣದ ರ‍್ಯಾಕೆಟ್ ಎಸೆದು, ಮುರಿದು ಹಾಕಿದರು.
ಇದೇ ಕ್ರೀಡಾಂಗಣದಲ್ಲಿ ಜೊಕೊವಿಚ್, ಸೆಮಿಫೈನಲ್ ಅಥವಾ ಫೈನಲ್ ಪಂದ್ಯಗಳಲ್ಲಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್‌ಗಳಾದ ಫೆಡರರ್, ನಡಾಲ್, ಆ್ಯಂಡಿ ಮರ್ರೆ, ಸ್ಟ್ಯಾನ್ ವಾವ್ರಿಂಕಾ, ಡೊಮಿನಿಕ್ ಥೀಮ್ ಅವರನ್ನು ಸೋಲಿಸಿದ ಶ್ರೇಯ ಹೊಂದಿದ್ದಾರೆ.
IND v/s ENG 3ನೇ ಟೆಸ್ಟ್ : ಇಂಗ್ಲೆಂಡ್ ಬ್ಯಾಟಿಂಗ್ , ಇಶಾಂತ್ ಮೊದಲ ವಿಕೇಟ್
IND v/s ENG 3ನೇ ಟೆಸ್ಟ್ : ಇಂಗ್ಲೆಂಡ್ ಬ್ಯಾಟಿಂಗ್ , ಇಶಾಂತ್ ಮೊದಲ ವಿಕೇಟ್
ಅಹಮದಾಬಾದ್: ಭಾರತದ ಮಧ್ಯಮವೇಗಿ ಇಶಾಂತ್ ಶರ್ಮಾ ಅವರಿಗೆ ಇಂದು ನೂರನೇ ಟೆಸ್ಟ್ ಆಡುತ್ತಿದ್ದು, ತಮ್ಮ ಎರಡನೇ ಓವರ್‌ನಲ್ಲಿ ಇಶಾಂತ್ ಆರಂಭಿಕ ಡಾಮ್ ಸಿಬ್ಲಿ (0) ವಿಕೆಟ್ ಪಡೆಯುವ ಮೂಲಕ ಮೊದಲ ವಿಕೆಟ್ ಖಾತೆ ತೆರೆದಿದ್ದಾರೆ. ಇಂಗ್ಲೆಂಡ್ 3 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 3 ರನ್ ಗಳಿಸಿತ್ತು.
ಗುಜರಾತ್‌ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಆರಂಭವಾಗಿದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿದೆ.
ತಮ್ಮ ಮೊದಲ ಓವರ್‌ನಲ್ಲೇ ಸ್ಪಿನ್ನರ್ ಅಕ್ಸರ್ ಪಟೇಲ್ ವಿಕೆಟ್ ಕಬಳಿಸಿದರು. ಜಾನಿ ಬೆಸ್ಟೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಶೂನ್ಯಕ್ಕೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದರಿಂದಾಗಿ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿದೆ, ಆದರೆ ಬಿರುಸಿನ ಆಟ ಆಡುತ್ತಿರುವ ಜಾಕ್ ಕ್ರಾಲಿ ಈಗಾಗಲೇ ಐದು ಬೌಂಡರಿ ಸಿಡಿಸಿದ್ದಾರೆ.
ಜ್ಯಾಕ್ ಕ್ರಾಲಿ (23) ಮತ್ತು ನಾಯಕ ಜೋ ರೂಟ್ ಕಣದಲ್ಲಿದ್ದಾರೆ. 9 ಓವರ್‌ಗಳಲ್ಲಿ ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.
ವಿಶ್ವದ ಬೃಹತ್ ಕ್ರಿಕೆಟ್ ಮೈದಾನದಲ್ಲಿ ನಸುಗೆಂಪು ಚೆಂಡಿನ ಮೊದಲ ಹಗಲು–ರಾತ್ರಿ ಟೆಸ್ಟ್ ನಡೆಯುತ್ತಿದೆ. ಭಾರತದ ಪರ ವಾಷಿಂಗ್ಟನ್ ಸುಂದರ್ ಮತ್ತು ಜಸ್‌ಪ್ರೀತ್ ಬೂಮ್ರಾ 11ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ– ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ.
ಇಂಗ್ಲೆಂಡ್– ಜೋ ರೂಟ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೆಸ್ಟೊ, ಸ್ಟುವರ್ಟ್ ಬ್ರಾಡ್, ಜ್ಯಾಕ್ ಕ್ರಾಲಿ, ಬೆನ್ ಫೋಕ್ಸ್, ಜ್ಯಾಕ್ ಲೀಚ್, ಒಲಿ ಪೊಪ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್.
ವಿಶ್ವದ ಅತಿ ದೊಡ್ಡ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಉದ್ಘಾಟನೆ
ವಿಶ್ವದ ಅತಿ ದೊಡ್ಡ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಉದ್ಘಾಟನೆ
Motera Stadium: ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ.
- TV9 Web Team
- Publish Date - 1:35 pm, Wed, 24 February 21
ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ. ಇದರ ನಂತರ 2ನೇ ಸ್ಥಾನವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಪಡೆದುಕೊಂಡಿದ್ದು, ಅದು ಸುಮಾರು 1 ಲಕ್ಷ ಜನ ಕೂರುವ ಆಸನಗಳ ಸಾಮರ್ಥ್ಯ ಹೊಂದಿದೆ. ಸದ್ಯ ಕೊವಿಡ್-19 ನಿಯಮಾವಳಿಗಳಿಂದಾಗಿ ಕ್ರೀಡಾಂಗಣದ ಸಾಮರ್ಥ್ಯವನ್ನು 50% ರಷ್ಟು ಮುಚ್ಚಲಾಗಿದ್ದರೂ, 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಡುವ ನಿರೀಕ್ಷೆಯಿದೆ.
The President of India Ram Nath Kovind, Home Minister @AmitShah, and MOS, Youth Affairs & Sports @KirenRijiju arrive at the Sardar Vallabhbhai Patel Cricket Stadium at Motera, Ahmedabad for performing the Bhumi Pujan.@rashtrapatibhvn #MoteraCricketStadium pic.twitter.com/IMcyswrn0OWatch Live: President Ram Nath Kovind inaugurates the world’s largest Sardar Vallabhbhai Patel Cricket Stadium at Motera in Ahmedabad, Gujarat.@rashtrapatibhvn https://t.co/wsBDnAv7mw
— Prasar Bharati News Services पी.बी.एन.एस. (@PBNS_India) February 24, 2021
— Prasar Bharati News Services पी.बी.एन.एस.
ಅಹಮದಾಬಾದ್ : ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ಇಲ್ಲಿಯ ನವೀಕೃತ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸಿದರು. ಇನ್ನು ಮುಂದೆ ಈ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಿಂದ ಕರೆಯಲಾಗುತ್ತದೆ.
ಅತ್ಯಾಧುನಿಕ ಸೌಲಭ್ಯವುಳ್ಳ ಈ ಕ್ರೀಡಾಂಗಣವು 1.32 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ್ದಾಗಿದೆ.
‘ಇದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿತ್ತು. ಕ್ರೀಡಾಂಗಣವನ್ನು ಇನ್ನು ಅವರ ಹೆಸರಿನಿಂದಲೇ ಕರೆಯಲು ನಿರ್ಧರಿಸಲಾಗಿದೆ‘ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಫುಟ್ಬಾಲ್, ಹಾಕಿ, ಬ್ಯಾಸ್ಕೆಟ್ಬಾಲ್, ಕಬಡ್ಡಿ, ಬಾಕ್ಸಿಂಗ್, ಲಾನ್ ಟೆನಿಸ್ ಮುಂತಾದ ವಿಭಾಗಗಳುಳ್ಳ ಸರ್ದಾರ್ ಪಟೇಲ್ ಹೆಸರಿನ ಕ್ರೀಡಾ ಸಂಕೀರ್ಣವನ್ನು ಇದೇ ವೇಳೆ ಕೋವಿಂದ್ ಲೋಕಾರ್ಪಣೆ ಮಾಡಿದರು.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇಲ್ಲಿ ನಡೆಯುತ್ತಿದೆ. ಮಾರ್ಚ್ 4ರಿಂದ ನಡೆಯುವ ನಾಲ್ಕನೇ ಪಂದ್ಯಕ್ಕೂ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
63 ಎಕರೆ ವಿಸ್ತಾರವುಳ್ಳ ಈ ಕ್ರೀಡಾಂಗಣವನ್ನು ಅಂದಾಜು ₹ 800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಅಂಗಣದ ಆಸನ ಸಾಮರ್ಥ್ಯ 90 ಸಾವಿರ ಆದರೆ ಈ ಕ್ರೀಡಾಂಗಣದ್ದು 1.32 ಲಕ್ಷ.
‘ಕ್ರೀಡಾಂಗಣದ ಒಟ್ಟು ವಿಸ್ತಾರವು 32 ಒಲಿಂಪಿಕ್ ಗಾತ್ರದ ಫುಟ್ಬಾಲ್ ಅಂಗಣಗಳಿಗೆ ಸಮನಾಗಿದೆ‘ ಎಂದು ಮಾಧ್ಯಮ ಮಾಹಿತಿ ವಿಭಾಗ ತಿಳಿಸಿದೆ.
ಮೆಲ್ಬರ್ನ್ ಕ್ರಿಕೆಟ್ ಅಂಗಣ ವಿನ್ಯಾಸಗೊಳಿಸಿರುವ ಆಸ್ಟ್ರೇಲಿಯಾದ ವಾಸ್ತುಶಿಲ್ಪಿ ಫರ್ಮ್ ಪಾಪ್ಯುಲಸ್ ಅವರ ಕೈಚಳಕವೇ ಅಹಮದಾಬಾದ್ನ ಈ ಕ್ರೀಡಾಂಗಣದ ನವೀಕರಣದಲ್ಲಿ ಅಡಗಿದೆ.
ಕೆಂಪು ಮತ್ತು ಕಪ್ಪು ಎರಡೂ ಮಣ್ಣಿನಿಂದ ಸಿದ್ಧಪಡಿಸಲಾಗಿರುವ 11 ಪಿಚ್ಗಳು ಈ ಅಂಗಣದಲ್ಲಿರುವುದು ವಿಶೇಷ.
ಕ್ರೀಡಾಂಗಣದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತಿತರರಿದ್ದರು.
ಭಾನುವಾರ, ಫೆಬ್ರವರಿ 14, 2021
ಹರ್ಭಜನ್ ದಾಖಲೆ ಮುರಿದ ಅಶ್ವಿನ್, ಮುಂದಿನ ಟಾರ್ಗೆಟ್ ಅನಿಲ್ ಕುಂಬ್ಳೆ!
ಹರ್ಭಜನ್ ದಾಖಲೆ ಮುರಿದ ಅಶ್ವಿನ್, ಮುಂದಿನ ಟಾರ್ಗೆಟ್ ಅನಿಲ್ ಕುಂಬ್ಳೆ!
ಜಿದರ್-ಉಲ್-ಹದೀದ್ ಸಮರಾಭ್ಯಾಸ(ಪಾಕಿಸ್ತಾನ-ಭಾರತ) ಇದು 2007 ರಿಂದೀಚೆಗೆ ಪ್ರತಿ ಎರೆಡು ವರ್ಷಗಳಿಗೊಮ್ಮೆ ಜರುಗುವುದು.
ಇಸ್ಲಾಮಾಬಾದ್: ‘ಪಾಕಿಸ್ತಾನಿ ಸೇನೆಯು ಸಿಂಧ್ ಪ್ರಾಂತ್ಯದ ಥಾರ್ ಮರುಭೂಮಿಯಲ್ಲಿ ಒಂದು ತಿಂಗಳ ಸಮರಾಭ್ಯಾಸವನ್ನು ಕೈಗೊಂಡಿದ್ದು, ಇದೇ 28ರಂದು ಅದು ಕೊನೆಗೊಳ್ಳಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಜನವರಿ 28 ರಿಂದ ‘ಜಿದರ್–ಉಲ್–ಹದೀದ್’ ಹೆಸರಿನ ಈ ಸಮರಾಭ್ಯಾಸ ಆರಂಭವಾಗಿದೆ. ಮರುಭೂಮಿಯ ಯುದ್ಧತಂತ್ರಗಳನ್ನು ಅಳವಡಿಸಿಕೊಳ್ಳುವುದು ಇದರ ಉದ್ದೇಶ’ ಎಂದು ತಿಳಿಸಲಾಗಿದೆ.
ಬಹುರಾಷ್ಟ್ರಗಳ ನೌಕಾಭ್ಯಾಸ: ಅರಬ್ಬೀ ಸಮುದ್ರದಲ್ಲಿ ಸುಮಾರು 45 ರಾಷ್ಟ್ರಗಳು ಪಾಲ್ಗೊಂಡಿರುವ ಹಾಗೂ ಪಾಕಿಸ್ತಾನ ಆತಿಥ್ಯ ವಹಿಸಿರುವ ಒಂದು ವಾರದ ನೌಕಾ ಸಮರಾಭ್ಯಾಸ ಶುಕ್ರವಾರದಿಂದ ಆರಂಭವಾಗಿದೆ. 2007ರಿಂದೀಚೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಇದನ್ನು ಸಂಘಟಿಸಲಾಗುತ್ತಿದೆ.
ಭಾನುವಾರ, ಫೆಬ್ರವರಿ 7, 2021
ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ರಫೆಲ್ ನಡಾಲ್
ಮೆಲ್ಬರ್ನ್: ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ಗೆ ಸೋಮವಾರ ಚಾಲನೆ ದೊರೆಯಲಿದ್ದು, ವಿಶ್ವ ಟೆನಿಸ್‌ನ ಪ್ರಮುಖ ಆಟಗಾರರಾದ ರಫೆಲ್ ನಡಾಲ್, ನೊವಾಕ್ ಜೊಕೊವಿಚ್ ಹಾಗೂ ಸೆರೆನಾ ವಿಲಿಯಮ್ಸ್ ಮೇಲೆ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ಈ ತಾರೆಗಳು ಇದ್ದಾರೆ.
ಸ್ಪೇನ್ ಆಟಗಾರ ನಡಾಲ್ ಅವರಿಗೆ ಇಲ್ಲಿ ಟ್ರೋಫಿ ಮುಡಿಗೇರಿಸಿಕೊಂಡರೆ, ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ನಡಾಲ್ ಇದುವರೆಗೆ ತಲಾ 20 ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಫೆಡರರ್, ಇಲ್ಲಿ ಕಣಕ್ಕಿಳಿಯುತ್ತಿಲ್ಲವಾದ್ದರಿಂದ, ಸ್ಪೇನ್ ಆಟಗಾರನಿಗೆ ಅವರ ದಾಖಲೆ ಮೀರುವ ಅವಕಾಶವಿದೆ.
ನಡಾಲ್ ಕೂಡ ಎರಡು ವಾರಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನಡೆದ ಎಟಿಪಿ ಟೂರ್ನಿಯಲ್ಲಿ ಆಡಿರಲಿಲ್ಲ. ಆದರೂ ಪರಿಸ್ಥಿತಿ ಸುಧಾರಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಮಂಗಳವಾರ ಮೊದಲ ಸುತ್ತಿನ ಪಂದ್ಯವಾಡುತ್ತಿರುವ ನಡಾಲ್ ಅವರಿಗೆ ಸರ್ಬಿಯಾದ ಲಾಸ್ಲೊ ಡಿಜೇರ್ ಸವಾಲು ಎದುರಾಗಿದೆ.
ಅಮೆರಿಕ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರಿಗೆ ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾನ್‌ಸ್ಲಾಮ್ ಟ್ರೋಫಿ ವಿಜಯದ ದಾಖಲೆ ಸರಿಗಟ್ಟಲು ಇನ್ನು ಒಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಅಗತ್ಯವಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಸೆರೆನಾ, ಜರ್ಮನಿಯ ಲಾರಾ ಸಿಜಮಂಡ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.
ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ (8) ಪ್ರಶಸ್ತಿ ಗೆದ್ದ ತಮ್ಮದೇ ದಾಖಲೆಯನ್ನು ಅಳಿಸಿಹಾಕುವ ಅವಕಾಶ ಇದೆ. ಅಲ್ಲದೆ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಅಗ್ರಸ್ಥಾನದಲ್ಲಿರುವ ಅವಕಾಶವಿದೆ.
ಸೋಮವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್, ಫ್ರಾನ್ಸ್‌ನ ಜೆರೆಮಿ ಚಾರ್ಡಿ ಎದುರು ಸೆಣಸಲಿದ್ದಾರೆ.
30 ಸಾವಿರ ಪ್ರೇಕ್ಷಕರಿಗೆ ಅವಕಾಶ: ಕೋವಿಡ್–19 ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ದಿನವೊಂದಕ್ಕೆ 30 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂದರೆ ಕ್ರೀಡಾಂಗಣಗಳ ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಲೈನ್ ಅಂಪೈರ್‌ಗಳಿರುವುದಿಲ್ಲ: ಟೂರ್ನಿಯ ಪ್ರತಿ ಪಂದ್ಯಗಳು ಲೈನ್ ಅಂಪೈರ್‌ಗಳ ಅನುಪಸ್ಥಿಯಲ್ಲಿ ನಡೆಯಲಿವೆ. ಇಲೆಕ್ಟ್ರಾನಿಕ್ ಪರದೆಯಲ್ಲಿ ತೀರ್ಪುಗಳನ್ನು ಭಿತ್ತರಿಸಲಾಗುತ್ತದೆ. ಹೋದ ವರ್ಷದ ಅಮೆರಿಕ ಓಪನ್ ಟೂರ್ನಿಯಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.
ಶುಕ್ರವಾರ, ಫೆಬ್ರವರಿ 5, 2021
ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?
ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?
ದೇಶದ ಹಣಕಾಸು ವ್ಯವಸ್ಥೆ ನಿರ್ಧರಿಸುವ ವಿತ್ತೀಯ ಕೊರತೆ ಮಾಹಿತಿ (ಪ್ರಾತಿನಿಧಿಕ ಚಿತ್ರ - iStock)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2021ಅನ್ನು ಫೆ.1ರಂದು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ನಿರ್ಮಲಾ ಅವರು ಮಂಡಿಸುತ್ತಿರುವ ಮೂರನೇ ಬಜೆಟ್ ಇದಾಗಿದೆ.
ವಿತ್ತೀಯ ಕೊರತೆ ಎಂದರೇನು?
ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ (Fiscal Deficit) ಎಂದರೆ, ಸರ್ಕಾರದ ಒಟ್ಟು ಖರ್ಚು ಹಾಗೂ ಅದರ ಆದಾಯದ ನಡುವೆ ಇರುವ ವ್ಯತ್ಯಾಸ. ಈ ಆದಾಯದಲ್ಲಿ ಸಾಲ ಪಡೆದ ಹಣ ಒಳಗೊಂಡಿರುವುದಿಲ್ಲ.
ವಿತ್ತೀಯ ಕೊರತೆ ಹೆಚ್ಚಾದರೆ ಏನಾಗುತ್ತದೆ?
ಸರ್ಕಾರವು ಹೆಚ್ಚು ಸಾಲ ಮಾಡಬೇಕಾಗುತ್ತದೆ ಅಥವಾ ಹೆಚ್ಚು ಹಣವನ್ನು ಟಂಕಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕೇಳಿಕೊಳ್ಳಬಹುದು. ಆದರೆ ಹಣವನ್ನು ಟಂಕಿಸುವುದು (ಮುದ್ರಿಸುವುದು) ಸಾಕಷ್ಟು ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ ಮತ್ತು ಬಡ್ಡಿ ದರಗಳ ಏರಿಕೆಗೆ ಕಾರಣವಾಗುತ್ತದೆ. ಹೀಗಾಗಿ, ಹಣವನ್ನು ಮುದ್ರಿಸಿ ವಿತ್ತೀಯ ಕೊರತೆ ತುಂಬಲು ಯಾವುದೇ ಸರ್ಕಾರವೂ ಪ್ರಯತ್ನಿಸುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ, ಸಾಲವನ್ನೇ ನೆಚ್ಚಿಕೊಳ್ಳುತ್ತದೆ.
ಸರ್ಕಾರ ಎಲ್ಲಿಂದ ಸಾಲ ಪಡೆಯತ್ತದೆ?
ಮಾರುಕಟ್ಟೆ, ಸಣ್ಣ ಉಳಿತಾಯ ನಿಧಿ, ರಾಜ್ಯ ಪಿಂಚಣಿ ನಿಧಿಗಳು, ಬಾಹ್ಯ ವಲಯ ಮತ್ತು ಕಿರು ಅವಧಿಯ ನಿಧಿಗಳಿಂದ ಸರ್ಕಾರ ಸಾಲ ಪಡೆಯುತ್ತದೆ. ಆದರೆ, ವಿತ್ತೀಯ ಆದಾಯ ಕೊರತೆಗೆ ಹಣಕಾಸು ಒದಗಿಸುವ ಪ್ರಧಾನ ಮೂಲವೆಂದರೆ ಮಾರುಕಟ್ಟೆಯಿಂದ ಪಡೆಯುವ ಸಾಲ.
ಸಾಲ ಪಡೆಯುವುದರಿಂದಲೂ ಪ್ರತಿಕೂಲ ಪರಿಣಾಮ ಆಗುವುದಿಲ್ಲವೇ?
ಹೌದು, ಆಗುತ್ತದೆ. ಸರ್ಕಾರ ಹೆಚ್ಚು ಸಾಲ ಪಡೆದಷ್ಟೂ ಖಾಸಗಿ ಉದ್ಯಮಗಳು ಮತ್ತು ಕಾರ್ಪೊರೇಟ್‌ಗಳಿಗೆ ಮಾರುಕಟ್ಟೆ ಪ್ರವೇಶಿಸುವ ಅವಕಾಶ ಕಡಿಮೆಯಾಗುತ್ತದೆ. ಅಲ್ಲದೆ, ಸರ್ಕಾರ ಹೆಚ್ಚು ಸಾಲ ಪಡೆದಲ್ಲಿ ಇತರ ಸಾಲಗಳ ಬಡ್ಡಿ ದರವೂ ಏರಿಕೆಯಾಗುತ್ತದೆ. ಇದರ ಜತೆಗೆ, ಅದು ಸರ್ಕಾರದ ಸಾಲ ಮರುಪಾವತಿಸಬೇಕಾದ ಹೊರೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯಲ್ಲಿ ಹೂಡಿಕೆ ಮಾಡಬೇಕಾದ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಇದು ಆರ್ಥಿಕತೆ ಕುಸಿತಕ್ಕೆ (ಹಿಂಜರಿಕೆಗೆ) ಕಾರಣವಾಗುತ್ತದೆ.
ವಿತ್ತೀಯ ಕೊರತೆಯ ಸಂಖ್ಯೆಯ ಮೇಲೆ ಹೆಚ್ಚು ಗಮನ ಯಾಕೆ?
ಅದು ದೇಶದ ಆರ್ಥಿಕತೆಯ ಒಟ್ಟಾರೆ ಸಾಮರ್ಥ್ಯವನ್ನು ಪ್ರಕಟಪಡಿಸುತ್ತದೆ. ಜಾಗತಿಕ ಹೂಡಿಕೆದಾರರೂ ಇದೇ ಸಂಖ್ಯೆಯನ್ನು ಅವಲಂಬಿಸಿರುತ್ತಾರೆ. ವಿತ್ತೀಯ ಕೊರತೆ ಹೆಚ್ಚಾಗಿದ್ದರೆ ಮಾರುಕಟ್ಟೆಯಲ್ಲಿ ತಮ್ಮ ಮೇಲೆ ಒತ್ತಡ ಹೆಚ್ಚಾಗಬಹುದು, ಜೊತೆಗೆ ಹೆಚ್ಚಿನ ಹಣದುಬ್ಬರ ಮತ್ತು ಹೆಚ್ಚಿನ ಬಡ್ಡಿದರವು ತಮ್ಮ ಲಾಭದ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಆತಂಕಕ್ಕೆ ಕಾರಣವಾಗುತ್ತದೆ.
ದೇಶವು ಎಷ್ಟರವರೆಗಿನ ವಿತ್ತೀಯ ಕೊರತೆಯನ್ನು ತಾಳಿಕೊಳ್ಳಬಲ್ಲುದು?
ವಿತ್ತೀಯ ಕೊರತೆಯು ಶೇ.3-4ರಿಂದ ಹೆಚ್ಚು ಇರುವಂತಿಲ್ಲ. ತೆರಿಗೆ ಆದಾಯವು ಸರ್ಕಾರದ ಖರ್ಚನ್ನು ಪೂರೈಸಲು ಸಾಕಷ್ಟಿಲ್ಲದಿರುವ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ, ವಿತ್ತೀಯ ತೆರಿಗೆಯು ಸ್ವಲ್ಪ ಹೆಚ್ಚಾಗಿದ್ದರೂ ಪರವಾಗಿಲ್ಲ.
ಭಾರತಕ್ಕೆ ಸಂಬಂಧಿಸಿದಂತೆ ವಿತ್ತೀಯ ಕೊರತೆ ಹೇಗಿದೆ?
ಭಾರತವು 2008-09ರವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3ಕ್ಕೆ ಇಳಿಸುವ ಗುರಿಯೊಂದಿಗೆ, 2003ರಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಗುರಿಯ ಪ್ರಕಾರ ಪ್ರತಿ ವರ್ಷ ಶೇ.0.3 ತಗ್ಗಿಸಬೇಕಿತ್ತು. ಆದರೆ ಇದು ಸಾಧ್ಯವಾಗಲಿಲ್ಲ ಮತ್ತು ಸರ್ಕಾರವು ವರ್ಷದಿಂದ ವರ್ಷಕ್ಕೆ ಈ ಗುರಿಯನ್ನೇ ಸಡಿಲಿಸುತ್ತಾ ಹೋಯಿತು. ಕಳೆದ ವರ್ಷ ಕೇಂದ್ರ ಸರ್ಕಾರವು FRBM ನಿಯಮಗಳಿಗೆ ತಿದ್ದುಪಡಿ ತಂದು, ವಿತ್ತೀಯ ಕೊರತೆಯನ್ನು ಶೇ.3ಕ್ಕೆ ಇಳಿಸುವ ಗುರಿಯ ಅವಧಿಯನ್ನು 2020-21ಕ್ಕೆ ವಿಸ್ತರಿಸಿತ್ತು.
ವಿತ್ತೀಯ ಕೊರತೆಯ ಗುರಿ ತಲುಪಲು ಭಾರತವು ಶ್ರಮಿಸಬೇಕೇ?
ಹೊಸ ಜಿಎಸ್‌ಟಿ ಜಾರಿಗೆ ಬಂದಿರುವುದರೊಂದಿಗೆ ಕೆಲವೊಂದು ಸಮಸ್ಯೆಗಳಿರುವುದರಿಂದ, ಸ್ವಲ್ಪ ಮಟ್ಟಿನ ಸಡಿಲಿಕೆಗೆ ಆರ್ಥಿಕ ತಜ್ಞರು ಒಪ್ಪುತ್ತಾರಾದರೂ, ರೇಟಿಂಗ್ ಏಜೆನ್ಸಿಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ದೇಶವು ಈ ಗುರಿಗೆ ಕಟ್ಟುನಿಟ್ಟಿನ ಬದ್ಧತೆ ತೋರಬೇಕಿದೆ ಎಂದು ಬಯಸುತ್ತಿದೆ.
ವರ್ಷಗಳಿಂದೀಚೆಗೆ ಈ ಗುರಿ ಹೇಗೆ ಬದಲಾಗಿದೆ?
2011-12ರಲ್ಲಿ ಶೇ.5.9ರಷ್ಟನ್ನು ತಲುಪಿದ್ದ ವಿತ್ತೀಯ ಕೊರತೆಯು 2017-18ಕ್ಕೆ ಶೇ.3.5ರವರೆಗೆ ಇಳಿದು ಸಮಾಧಾನಕರ ಬೆಳವಣಿಗೆ ಕಂಡಿತ್ತು. 2018-19ರಲ್ಲಿ ಶೇ.3.3 ತಲುಪುವ ಗುರಿ ಇರಿಸಲಾಗಿತ್ತು. ಜುಲೈ 2019ರ ಬಜೆಟ್ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಗುರಿಯನ್ನು ಶೇ.3.4ರಿಂದ ಶೇ.3.3ಕ್ಕೆ ಇಳಿಸಿರುವುದರೊಂದಿಗೆ, ಗುರಿ ಸಾಧಿಸಿ ಆರ್ಥಿಕತೆ ಸುಧಾರಿಸಲು ಸರ್ಕಾರಕ್ಕಿದ್ದ ಬದ್ಧತೆಯನ್ನು ಸ್ಪಷ್ಟಪಡಿಸಿದ್ದರು.
ದೇಶದ ಮೊದಲ ಕಾಗದ ರಹಿತ ಡಿಜಿಟಲ್ ಬಜೆಟ್: ನಿರ್ಮಲಾ ಸೀತಾರಾಮನ್
ದೇಶದ ಮೊದಲ ಕಾಗದ ರಹಿತ ಡಿಜಿಟಲ್ ಬಜೆಟ್: ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2021–22ನೇ ಹಣಕಾಸು ವರ್ಷದ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ದಶಕದ ಮೊದಲ ಬಜೆಟ್...
ಈ ದಶಕದ ಮೊದಲ ಬಜೆಟ್ ಕೂಡಾ ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ದೇಶದೊಳಗಿನ ಅಥವಾ ದೇಶದ ಪ್ರದೇಶಗಳ ಮೇಲೆ ಸಂಭವಿಸಿರಬಹುದಾದ ವಿಪತ್ತುಗಳ ದೃಷ್ಟಿಯಿಂದ ನೋಡಿದರೆ ಹಿಂದೆಂದೂ ಕಂಡಿರದಂತಹ ಪರಿಸ್ಥಿತಿಯಲ್ಲಿ ಈ ಬಾರಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಬಡ ಜನರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ಎಂಬುದನ್ನು ಒತ್ತಿ ಹೇಳಿದರು. ಕೋವಿಡ್-19 ಎದುರಿಸುವಲ್ಲಿ ಲಸಿಕೆ ಅಭಿವೃದ್ಧಿಪಡಿಸಿರುವುದನ್ನು ಉಲ್ಲೇಖಿಸಿದರು.
ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.
Union Budget 2021: ಬೆಂಗಳೂರು ಮೆಟ್ರೋ ಯೋಜನೆಗೆ ₹14,788 ಕೋಟಿ ಘೋಷಣೆ
Union Budget 2021: ಬೆಂಗಳೂರು ಮೆಟ್ರೋ ಯೋಜನೆಗೆ ₹14,788 ಕೋಟಿ ಘೋಷಣೆ
ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2021–22ನೇ ಹಣಕಾಸು ವರ್ಷದ ಬಜೆಟ್ ಮಂಡಿಸುತ್ತಿದ್ದಾರೆ.
ಬೆಂಗಳೂರು ಮೆಟ್ರೋ ವ್ಯಾಪ್ತಿಯನ್ನು ಮತ್ತಷ್ಟು 58.19 ಕಿ.ಮೀ. ದೂರ ವಿಸ್ತರಿಸಲು ಈ ಅನುದಾನ ಘೋಷಿಸಲಾಗಿದೆ.
ಕೇಂದ್ರ ಬಜೆಟ್ 2021 ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಈ ಮಹತ್ವದ ಘೋಷಣೆ ಮಾಡಿದರು.
ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.
Budget 2021: ದೇಶದ ಮೊದಲ ಡಿಜಿಟಲ್ ಜನಗಣತಿಗೆ ₹3,768 ಕೋಟಿ
Budget 2021: ದೇಶದ ಮೊದಲ ಡಿಜಿಟಲ್ ಜನಗಣತಿಗೆ ₹3,768 ಕೋಟಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಕೇಂದ್ರ ಬಜೆಟ್ ಮಂಡನೆ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಆರ್ಥಿಕ ಸಾಲಿನ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ.
ಸಂಸಸತ್ತಿನಲ್ಲಿ ಬಜೆಟ್ ಭಾಷಣದಲ್ಲಿ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ಕಾಗಿ 3,768 ಕೋಟಿ ರೂ.ಗಳನ್ನು ಮೀಸಲಿಡುತ್ತೇನೆ ಎಂದು ತಿಳಿಸಿದರು.
ಭಾರತ ಪ್ರಜಾಪ್ರಭುತ್ವದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದರು.
ಕೋವಿಡ್-19 ನಿಮಯಗಳು ಜಾರಿಯಲ್ಲಿರುವುದರಿಂದ ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.
Union Budget 2021: ಆದಾಯ ತೆರಿಗೆ ಮಿತಿ ಯಥಾಸ್ಥಿತಿ
Union Budget 2021: ಆದಾಯ ತೆರಿಗೆ ಮಿತಿ ಯಥಾಸ್ಥಿತಿ
ನಿರ್ಮಲಾ ಸೀತಾರಾಮನ್
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2020–21ನೇ ಸಾಲಿನ ಬಜೆಟ್‌ನಲ್ಲಿ, ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಈ ಸಲದ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂಬ ಮಧ್ಯಮ ವರ್ಗದ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ.
ಕಳೆದ ಹಣಕಾಸು ವರ್ಷದ ಆದಾಯ ತೆರಿಗೆ ಮಿತಿ ಪ್ರಕಾರ, ವರ್ಷಕ್ಕೆ ₹5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ.
75 ವರ್ಷ ಹಾಗೂ ಮೇಲ್ಪಟ್ಟ ಹಿರಿಯ ನಾಗರಿಕರು ಪಿಂಚಣಿ ಖಾತೆ ಮತ್ತು ಎಫ್‌ಡಿಯನ್ನು ಒಂದೇ ಬ್ಯಾಂಕ್ ಶಾಖೆಯಲ್ಲಿ ಹೊಂದಿರುವವರು ಏಪ್ರಿಲ್ 1 ರಿಂದ ಐಟಿ ರಿಟರ್ನ್ ಸಲ್ಲಿಸುವ ಅವಶ್ಯಕತೆ ಇಲ್ಲ. ಬ್ಯಾಂಕುಗಳೇ ಸಂಬಂಧಿಸಿದ ತೆರಿಗೆಯನ್ನು ಕಡಿತ ಮಾಡಲಿವೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
Budget 2021: ಮೂಲಸೌಕರ್ಯ, ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ: ನಿರ್ಮಲಾ ಸೀತಾರಾಮನ್
Budget 2021: ಮೂಲಸೌಕರ್ಯ, ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ: ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: 2021–22ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಸೋಮವಾರ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮೂಲಸೌಕರ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಲೈವ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ
ಕೇಂದ್ರ ಬಜೆಟ್ ಪ್ರಮುಖಾಂಶಗಳ ಮೇಲೆ ಮೆಲುಕು ಹಾಕಿದ ವಿತ್ತ ಸಚಿವೆ, ನಾವು ರಸ್ತೆ, ವಿದ್ಯುತ್ ಉತ್ಪಾದನೆ, ಸೇತುವೆ, ಬಂದರು ನಿರ್ಮಾಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವ್ಯಾಪಿಸಿರುವ ಮೂಲಸೌಕರ್ಯಗಳ ಮೇಲೆ ಹೆಚ್ಚು ಅನುದಾನ ನೀಡಿದ್ದೇವೆ ಎಂದು ತಿಳಿಸಿದರು.
ಎರಡನೇಯದಾಗಿ ನಾವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಕಳೆದ ವರ್ಷ ನಾವು ಎದುರಿಸಿದ ಸಮಸ್ಯೆಯಿಂದ ಈ ಕ್ಷೇತ್ರದಲ್ಲಿ ಆಗಾಧ ಸಾಮರ್ಥ್ಯವಿದೆ ಎಂಬುದನ್ನು ಮನಗಂಡಿದ್ದೇವೆ ಎಂದು ಹೇಳಿದರು.
ಅದೇ ಹೊತ್ತಿಗೆ ಕೃಷಿ ಮೂಲಸೌಕರ್ಯ ಸೆಸ್‌ನ ಹೆಚ್ಚಳದ ಹೊರತಾಗಿಯೂ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದಿಲ್ಲ. ಅಲ್ಲದೆ ಪೆಟ್ರೋಲ್-ಡೀಸೆಲ್‌ಗಾಗಿ ಗ್ರಾಹಕರು ಹೆಚ್ಚುವರಿ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಸರ್ಕಾರದ ಖರ್ಚು ಹಾಗೂ ಆದಾಯದ ಲೇವಾದೇವಿ ಈಗ ಹೆಚ್ಚು ಪಾರದರ್ಶಕವಾಗಿದೆ ಎಂದವರು ತಿಳಿಸಿದರು.