ಬುಧವಾರ, ಫೆಬ್ರವರಿ 24, 2021

IND v/s ENG 3ನೇ ಟೆಸ್ಟ್ : ಇಂಗ್ಲೆಂಡ್ ಬ್ಯಾಟಿಂಗ್ , ಇಶಾಂತ್ ಮೊದಲ ವಿಕೇಟ್

IND v/s ENG 3ನೇ ಟೆಸ್ಟ್ : ಇಂಗ್ಲೆಂಡ್ ಬ್ಯಾಟಿಂಗ್ , ಇಶಾಂತ್ ಮೊದಲ ವಿಕೇಟ್


ಅಹಮದಾಬಾದ್: ಭಾರತದ ಮಧ್ಯಮವೇಗಿ ಇಶಾಂತ್ ಶರ್ಮಾ ಅವರಿಗೆ ಇಂದು ನೂರನೇ ಟೆಸ್ಟ್ ಆಡುತ್ತಿದ್ದು, ತಮ್ಮ ಎರಡನೇ ಓವರ್‌ನಲ್ಲಿ ಇಶಾಂತ್ ಆರಂಭಿಕ ಡಾಮ್‌ ಸಿಬ್ಲಿ (0) ವಿಕೆಟ್‌ ಪಡೆಯುವ ಮೂಲಕ ಮೊದಲ ವಿಕೆಟ್‌ ಖಾತೆ ತೆರೆದಿದ್ದಾರೆ. ಇಂಗ್ಲೆಂಡ್‌ 3 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 3 ರನ್‌ ಗಳಿಸಿತ್ತು.

ಗುಜರಾತ್‌ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್‌ ಆರಂಭವಾಗಿದೆ. ಟಾಸ್‌ ಗೆದ್ದಿರುವ ಇಂಗ್ಲೆಂಡ್‌ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿದೆ.

ತಮ್ಮ ಮೊದಲ ಓವರ್‌ನಲ್ಲೇ ಸ್ಪಿನ್ನರ್‌ ಅಕ್ಸರ್‌ ಪಟೇಲ್‌ ವಿಕೆಟ್‌ ಕಬಳಿಸಿದರು. ಜಾನಿ ಬೆಸ್ಟೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಶೂನ್ಯಕ್ಕೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದರಿಂದಾಗಿ ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿದೆ, ಆದರೆ ಬಿರುಸಿನ ಆಟ ಆಡುತ್ತಿರುವ ಜಾಕ್ ಕ್ರಾಲಿ ಈಗಾಗಲೇ ಐದು ಬೌಂಡರಿ ಸಿಡಿಸಿದ್ದಾರೆ.

ಜ್ಯಾಕ್ ಕ್ರಾಲಿ (23) ಮತ್ತು ನಾಯಕ ಜೋ ರೂಟ್ ಕಣದಲ್ಲಿದ್ದಾರೆ. 9 ಓವರ್‌ಗಳಲ್ಲಿ ಇಂಗ್ಲೆಂಡ್‌ ಎರಡು ವಿಕೆಟ್‌ ನಷ್ಟಕ್ಕೆ 30 ರನ್‌ ಗಳಿಸಿದೆ.

ವಿಶ್ವದ ಬೃಹತ್ ಕ್ರಿಕೆಟ್ ಮೈದಾನದಲ್ಲಿ ನಸುಗೆಂಪು ಚೆಂಡಿನ ಮೊದಲ ಹಗಲು–ರಾತ್ರಿ ಟೆಸ್ಟ್ ನಡೆಯುತ್ತಿದೆ. ಭಾರತದ ಪರ ವಾಷಿಂಗ್ಟನ್ ಸುಂದರ್ ಮತ್ತು ಜಸ್‌ಪ್ರೀತ್ ಬೂಮ್ರಾ 11ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ– ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ.

ಇಂಗ್ಲೆಂಡ್‌– ಜೋ ರೂಟ್ (ನಾಯಕ), ಜೇಮ್ಸ್‌ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೆಸ್ಟೊ, ಸ್ಟುವರ್ಟ್ ಬ್ರಾಡ್, ಜ್ಯಾಕ್ ಕ್ರಾಲಿ, ಬೆನ್ ಫೋಕ್ಸ್‌, ಜ್ಯಾಕ್ ಲೀಚ್, ಒಲಿ ಪೊಪ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್‌.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ